Monday, March 16, 2026
Google search engine
Home Blog Page 100

ಶಿರಾದಲ್ಲಿ ಇಂದು ‘ವೀ ದ ಪೀಪಲ್ ಆಫ್ ಇಂಡಿಯಾ’ ರಂಗ ಪ್ರದರ್ಶನ

Publicstory


ಶಿರಾ: ಸಿರಾಸೀಮೆ ಸಾಂಸ್ಕೃತಿಕ ವೇದಿಕೆವತಿಯಿಂದ ನಗರದಲ್ಲಿ ಜು.14ರಂದು ‘ವೀ ದ ಪೀಪಲ್ ಆಫ್ ಇಂಡಿಯಾ’ ನಾಟಕ ಆಯೋಜಿಸಲಾಗಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಸಂಜೆ 7ಗಂಟೆಗೆ ಪ್ರಾರಂಭವಾಗುವ ರಂಗಪ್ರದರ್ಶನದಲ್ಲಿ ಬೆಂಗಳೂರಿನ ‘ಜಂಗಮ ಕಲೆಕ್ಟಿವ್ ‘ಹಾಗೂ ಶಿವಮೊಗ್ಗದ ‘ಅಭಿನಯ ದರ್ಪಣ’ ತಂಡದ ನಟ-ನಟಿಯರು ಅಭಿನಯಿಸಲಿದ್ದಾರೆ.
ಭಾರತದ ಸಂವಿಧಾನ ಕುರಿತಾದ ಈ ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದಾರೆ. ಯುವ ರಂಗ ನಿರ್ದೇಶಕ ಲಕ್ಷ್ಮಣ ಕೆ. ಪಿ. ನಿರ್ದೇಶಿಸಿದ್ದಾರೆ.
ಸಂವಿಧಾನ ನಾಟಕವಾಗುವುದು ಸವಾಲಿನದಾದರೂ ಈ ರಂಗ ಪ್ರಯೋಗ ಸಂವಿಧಾನದ ಆಶಯಗಳನ್ನು ಕಲಾತ್ಮಕವಾಗಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸುತ್ತದೆ. ಆದ್ದರಿಂಗ ಶಿರಾ ಸುತ್ತಮುತ್ತಲಿನ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಗೋಮಾರದಳ್ಳಿ ಮಂಜುನಾಥ್ ಮನವಿ ಮಾಡಿದ್ದಾರೆ.

ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿ

Publicstory


ತುಮಕೂರು: ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ತಿಳಿಸಿದರು.

ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೃಷಿ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ನೆರವಾಗುವಂತೆ ಕೆನರಾ ಬ್ಯಾಂಕ್ ನ ಅರ್ಧ ಶಾಖೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತರು ಬ್ಯಾಂಕ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದಾಯಕ ಕೃಷಿ ಮಾಡಬಹುದಾಗಿದೆ. ಬೆಳೆ ಸಾಲ, ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯ ಗಳು ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ 27 ಶಾಖೆಗಳನ್ನು ಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವಂತೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಬೆಳವಣಿಗೆಯ ಜೊತೆ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದರು.

ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.1906ರಲ್ಲಿ ಆರಂಭವಾಗಿ ಪ್ರಸ್ತುತ ಗ್ರಾಹಕರ ವಿಶ್ವಾಸದಿಂದ ಮುನ್ನೆಡಿಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ 6800 ಕೋಟಿ ವ್ಯಾವಹಾರ ಇದೆ,3500ಕೋಟಿ ಸಾಲ ನೀಡಲಾಗಿದೆ. ಕೆನರಾ ಬ್ಯಾಂಕ್ ಸಂಸ್ಥಾಪಕರು ಎತ್ತಿನ ಗಾಡಿಯಲ್ಲಿ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ತೆರೆಸಿ ಬ್ಯಾಂಕ್ ಆರಂಭಿಸಿದ್ದರು ಎಂದು ಸ್ಮರಿಸಿದರು.

ಕೆಎಂಎಫ್ ನಿರ್ದೇಶಕ ರೇಣುಕಾ ಪ್ರಸಾದ್ ಮಾತನಾಡಿ, ಕೆನರಾ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಹತ್ತಿರದಲ್ಲೇ ಸೇವೆ ನೀಡುವ ಗ್ರಾಹಕರ ಹೆಚ್ಚು ಮೆಚ್ಚಿನ ಬ್ಯಾಂಕ್. ನಾವು ಪಡೆದ ಸಾಲನ್ನು ಮರುಪಾವತಿ ಮಾಡಿದರೆ ಇನ್ನು ಹೆಚ್ಚಿನ ಜನರಿಗೆ ಸಾಲ ಸೌಲಭ್ಯ ದೊರೆಯುತ್ತದೆ. ಕೆನರಾ ಬ್ಯಾಂಕ್ ಕೃಷಿ ಸಾಲ ರೈತರ ಆರ್ಥಿಕ ಬಲವರ್ಧನೆಗೆ ನೆರವಾಗಿದೆ ಎಂದರು.

ಅರೆಯೂರು ಕೆನಾರ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಆರ್ ಮಾತನಾಡಿ ಕೈಸಾಲ ಮಾಡುವುದನ್ನು ಬೀಡಿ, ಬ್ಯಾಂಕ್ ನಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ. ಸಾಲ ತೆಗೆದುಕೊಂಡು ಸರಿಯಾಗಿ ಕಟ್ಟಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ರೈತರಿಗೆ ಅನುಕೂಲವಾಗವಂತೆ ಕೃಷಿ ಸಾಲ ನೀಡಲಾಗುತ್ತಿದೆ. ಸಾಲ ಪಡೆದು ಕಟ್ಟದೆ ಇರುವವರಿಗೂ ಮರುಪಾವತಿ ಮಾಡುವಂತೆ ಮಾಹಿತಿ ನೀಡಿ. ಸಾಲ ಮರುಪಾವತಿಯಿಂದ ಆಗುವ ಪ್ರಯೋಜನ ಕುರಿತು ಮಾಹಿತಿ ನೀಡಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಕಟ್ಟೆಗೋಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀರಂಗಮ್ಮ , ಗ್ರಾಪಂ ಸದಸ್ಯರಾದ ಪ್ರಭುದೇವರು,ಕೆ.ಎಂ.ಕಿರಣ್, ಸಿದ್ದಲಿಂಗಮ್ಮ ಇನ್ನಿತರರು ಉಪಸ್ಥಿತರಿದ್ದರು.

ಜು.15ರಂದು ಉದ್ಯೋಗ ಮೇಳ

0

Publicstory


ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಾದರಿ ವೃತ್ತಿಕೇಂದ್ರ (ಒಅಅ) ತುಮಕೂರು ಹಾಗೂ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಇವರ ಸಹಯೋಗದೊಂದಿಗೆ ವಿಶ್ವಕೌಶಲ್ಯ ದಿನಾಚರಣೆ ಅಂಗವಾಗಿ ಜುಲೈ 15ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಸದರಿ ಉದ್ಯೋಗ ಮೇಳಕ್ಕೆ ಬೆಂಗಳೂರು ಮತ್ತು ತುಮಕೂರಿನ 20ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಯಾವುದೇ ಪದವಿ, ಐಟಿಐ, ಡಿಪ್ಲೊಮಾ ಎಲ್ಲಾ ಟ್ರೇಡ್ ಬಿ.ಇ. ಹಾಗೂ ಸ್ನಾತಕೋತ್ತರ ಪದವಿ ಪಾಸಾದ 18 ರಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಅರ್ಹ ಅಭ್ಯರ್ಥಿಗಳು ದಿನಾಂಕ: 15.07.2022ರಂದು ಬೆಳಿಗ್ಗೆ 10.30ಕ್ಕೆ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ & ಮ್ಯಾನೇಜ್‌ಮೆಂಟ್, ಟೌನ್ ಹಾಲ್ ಸರ್ಕಲ್ ಹತ್ತಿರ ತುಮಕೂರು ಇಲ್ಲಿ ತಮ್ಮ ಬಯೋಡೇಟಾ ಹಾಗೂ ಗುರುತಿನಚೀಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0816-2278488/ 8660962667ನ್ನು ಸಂಪರ್ಕಿಸಬಹುದಾಗಿದೆ.

ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು ಅನುದಾನಕ್ಕೆ ಅರ್ಜಿ

Publicstory


ತುಮಕೂರು: 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಯ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಕರ್ನಾಟಕದ ಮಾಜಿ ಸೈನಿಕರ ಮಕ್ಕಳಿಗೆ ‘ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು ಅನುದಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಒಂದು ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿ(ನಿ)ಗಳನ್ನು ಗುರುತಿಸಿ, ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯ ಒಬ್ಬೊಬ್ಬ ಅಭ್ಯರ್ಥಿಯನ್ನು ನಗದು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಅಡಕಗಳೊಂದಿಗೆ ಮೂರು ಪ್ರತಿಯಲ್ಲಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ವಾ.ಸಂ. 080-25588718ನ್ನು ಸಂಪರ್ಕಿಸಬೇಕೆAದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕವಿತೆ ಓದಿ: ನೆನೆಯುವುದೆಂದರೆ

0

ಜಡಿ ಮಳೆಯ
ನಂತರದ
ಬಿಸಿಲು ….

ಧೋ ಎಂದು ಸುರಿದ
ಮಳೆ ನೀರಾಗಿ…
ನದಿಯಾಗಿ ಸಮುದ್ರ
ಸೇರುತ್ತದೆ…

ಎಲ್ಲ ಕಷ್ಟಗಳೂ
ಒಂದು ದಿನ
ಹರಿಯುತ್ತವೆ….

ದುಃಖ
ದುಮ್ಮಾನಗಳು
ಸರಿಯುತ್ತವೆ….

ಕೋಪ
ತಾಪ, ಸೆಡವುಗಳು
ತಣ್ಣಗಾಗುತ್ತವೆ…

ಮೌನ
ಮುನಿಸು
ಮಾತಾಗುತ್ತದೆ…

ಮೋಹ , ಪ್ರೇಮ ,
ಪ್ರೀತಿ ..
ಹಣ್ಣಾಗುತ್ತದೆ…

ಎಲ್ಲ
ಹೊಸದೂ
ಹಳೆಯದಾಗುತ್ತದೆ…

ನೆನೆಯುವುದೆಂದರೆ
ಸುಮ್ಮನಲ್ಲ…
ತೋಯುವುದು…

ಮಳೆ ನಂತರದ
ಬಿಸಿಲಲ್ಲಿ
ಎಲ್ಲ ನಿಚ್ಚಳವಾಗುತ್ತದೆ..

ನಾನೇಕೆ
ಅದೇ ಮಳೆಗೆ
ಸಿಕ್ಕಿದೆ ಎಂದು…

ನೆನೆದ ಮೈ,
ತಲೆ
ಒಣಗಿ ..

ಮೊದಲಿಗಿಂತ
ಹಗುರ
ಎಂದು…

ರಜನಿ.


ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರಗಳಿವೆ. ನಾವು ಸಮಸ್ಯೆಯ ಸುಳಿಗೆ ಸಿಲುಕಿದಾಗ ಅಥವಾ ಸಮಸ್ಯೆ ನಮ್ಮತ್ತ ಬಂದಾಗ ನಾವು ಅವುಗಳನ್ನು ಯಾವ ರೀತಿ ಪರಿಗಣಿಸುತ್ತೇವೆ ಎಂಬುದರ ಆಧಾರದಲ್ಲಿ ಸಮಸ್ಯೆಯ ತೀವ್ರತೆ ಇರುತ್ತದೆ. ಕಷ್ಟಗಳು ಎಲ್ಲ ಕಡೆಯೂ ಇರುತ್ತವೆ. ಒಳ್ಳೆಯದನ್ನು ಸಾಧಿಸುವಾಗ ಇರುವ ಸವಾಲುಗಳು ನಮ್ಮನ್ನು ಉತ್ತಮದೆಡೆಗೆ ಸಾಗಿಸುತ್ತದೆ. ಕಷ್ಟಗಳಿಂದಲೇ ಜೀವನ ಹೊರತು; ಜೀವನವೇ ಕಷ್ಟಕರ ಅಲ್ಲ. ಕಷ್ಟಗಳ ನಂತರದ ಸುಖ.
ನೋವಿನ ನಂತರದ ನಲಿವು. ಜ್ವರ ಬಿಟ್ಟ ಶರೀರ.
ಜಗಳದ ನಂತರದ ಸ್ನೇಹ. ಪ್ರಕೃತಿಯ ಕೋಪದ ನಂತರ
ಜೀವನ, ದೇವರು, ನಶ್ವರದ ಅರಿವು ….. ಇವುಗಳನ್ನು
ಮಳೆ ನಂತರದ ಬಿಸಿಲಿಗೆ ಸಮೀಕರಿಸಿದ್ದಾರೆ ರಜನಿ.

ಶಿರಾ ವಿದ್ಯಾರ್ಥಿಗಳಿಗೆ ನೋಟ್ ಬುಕ್

Publicstory


ಶಿರಾ: ಗುರಿ ಮುಟ್ಟುವವರೆಗೂ ಕನಸುಗಳನ್ನು ತ್ಯಾಗ ಮಾಡದೆ ಮುನ್ನಡೆಯಿರಿ. ನೀವು ಇತರರಿಗೆ ಸ್ಪೂರ್ತಿಯಾಗಬೇಕು. ಸಮಾಜವನ್ನು ಕಟ್ಟುವ ಶಕ್ತಿಯಾಗಬೇಕು ಎಂದು ಯುವ ಬೆಂಗಳೂರು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸಾಗರ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸುಮಾರು 600 ವಿದ್ಯಾರ್ಥಿನಿಯರಿಗೆ ಮಂಗಳವಾರ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳು ಸಧೃಡವಾದರೆ ಭಾರತ ಸಧೃಡವಾದಂತೆ ಎಂಬ ಉದ್ದೇಶದಿಂದ ಮಾಗಡಿ, ಉತ್ತರ ಕರ್ನಾಟಕ, ದಾವಣಗೆರೆ, ಮಧುಗಿರಿ, ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಸುಮಾರು 250 ಶಾಲೆಗಳನ್ನು ದತ್ತು ಪಡೆದು ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಕಳೆದ 14 ವರ್ಷಗಳಿಂದ ಯುವ ಬೆಂಗಳೂರು ಟ್ರಸ್ಟ್ ಮಾಡುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳನ್ನು ಸಧೃಡ ಮಾಡುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಇಓ ಸಿದ್ದೇಶ್ವರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಸಫಲ ಫಲಿತಾಂಶ ಪಡೆದು ಶಾಲೆಗೆ ಹಾಗೂ ನಿಮ್ಮ ತಂದೆ ತಾಯಿಗಳಿಗೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಯಲುಸೀಮೆ ಪ್ರದೇಶವಾದ ಶಿರಾ ತಾಲೂಕಿನ ವಿದ್ಯಾರ್ಥಿಗಳಿಗೆ ಯುವ ಬೆಂಗಳೂರು ಟ್ರಸ್ಟ್ವತಿಯಿಂದ ನೋಟ್ ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಯುವ ಬೆಂಗಳೂರು ಟ್ರಸ್ಟ್ನ ಉಪಾಧ್ಯಕ್ಷ ಸುನಿಲ್.ಬಿ.ವಿ, ಪ್ರಭಾರಿ ಉಪ ಪ್ರಾಂಶುಪಾಲ ಪಿ.ಮಂಜಪ್ಪ, ಶಿಕ್ಷಕರುಗಳಾದ ವಿಜಯ್‌ಕುಮಾರ್, ಶಿವರಾಮ್.ಎಚ್, ಜಯಕುಂದ್ರಾಳ್, ರತ್ನಮ್ಮ, ಸುಜಾತ, ಅಂಬಿಕಾ, ಸವಿತ ಸೇರಿದಂತೆ ಹಲವರು ಹಾಜರಿದ್ದರು.

ದೊರೆ ಜಿಲ್ಲೆಯ ಚಳವಳಿಗಳ ಪ್ರತೀಕ

0

ತುಮಕೂರು: ಜಿಲ್ಲೆಯ ಚಳವಳಿಗಳ ಪ್ರತೀಕವಾಗಿ ದೊರೈರಾಜ್ ಅವರು ಇದ್ದಾರೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.

ತುಮಕೂರು‌ ನಾಗರಿಕ ವೇದಿಕೆ ಆಯೋಜಿಸಿದ್ದ ದೊರೈರಾಜ್, ಕೆ.ಎನ್.ಉಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಚಳವಳಿಗಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಸಮಾಜದಲ್ಲಿ ದನಿ ಎತ್ತುವುದೇ ಚಳವಳಿ. ಎಲ್ಲೇ ಅನ್ಯಾಯವಾದರು ದೊರೈರಾಜ್ ದನಿ ಎತ್ತಿದ್ದಾರೆ. ಸರ್ಕಾರಿ ಸೇವೆಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆ ನೂರಾರು ಜನರು ಮಾದರಿಯಾಗಿ ಅನುಸರಿಸುತ್ತಿದ್ದಾರೆ ಎಂದರು.

ಕೆ.ಎನ್.ಉಮೇಶ್, ದೊರೈರಾಜ್ ಅವರ ಅನುಭವ ದೊಡ್ಡದು ಎಂದರು.

ಕಾರ್ಯಕ್ರಮದಲ್ಲಿ ದೊರೈರಾಜ್, ಕೆ.ಎನ್.ಉಮೇಶ್, ಡಾ. ಡೊಮೆನಿಕ್, ಡಾ.ಎಸ್.ರಮೇಶ್ ಇತರರು ಇದ್ದರು.

ಎಂ ಎಸ್ಸಿ ಯಲ್ಲಿ ಚಿನ್ನದ ಪದಕ ಪಡೆದ ಸೌಮ್ಯ

Publicstory


ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಬೆಳಗುಲಿ ಗ್ರಾಮದ B. A. ಉದಯಕುಮಾರ್ ಜೈನ್ ಹಾಗೂ ಯಶೋಧ ಇವರ ಮಗಳಾದ ಬಿ.ಯು. ಸೌಮ್ಯ ಇವರು ಎಂ.ಎಸ್ಸಿ (Organic Chemistry) ಅಂತಿಮ ವರ್ಷದ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಹಾಗೂ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿತಂದಿದ್ದಾರೆ.


ತಾಲ್ಲೂಕಿನ ಅಭಿಮಾನ

ಸೌಮ್ಯ ಅವರ ಈ ಸಾಧನೆಯಿಂದ ತಾಲ್ಲೂಕು ಅಭಿಮಾನ‌ ಪಡುವಂತಾಗಿದೆ. ಅವರ ಈ ಸಾಧನೆ ತಾಲ್ಲೂಕಿನ ಇತರೆ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಚಿಕ್ಕನಾಯಕನಹಳ್ಳಿ ಅಭ್ಯರ್ಥಿ ಮಹಾವೀರ ಜೈನ್ ಹೇಳಿದ್ದಾರೆ.

ಇವರು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ತುಮಕೂರು ವಿಶ್ವವಿದ್ಯಾನಿಲಯದ Organic Chemistry ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ವ್ಯಾಸಂಗ ನಡೆಸಿದ್ದರು.

ಈಚೆಗೆ ನಡೆದ ತುಮಕೂರು ವಿಶ್ವವಿದ್ಯಾನಿಲಯದ 15 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹಾಗೂ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಸದಸ್ಯರಾದ ಪ್ರೊ.ಸುಷ್ಮಾ ಯಾದವ್ ಇವರು ಕುಮಾರಿ ಬಿ.ಯು. ಸೌಮ್ಯ ಳಿಗೆ ರ‌್ಯಾಂಕ್ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಪ್ರಧಾನ ಮಾಡಿದರು.

ಡಾ. ರಜನಿ ಕವಿತೆ: ಮಳೆ

0

ಒಂದೊಂದೇ
ಹನಿ ಟಪ್ ಟಪ್…
ಮನೆಯ ಮಾಡು
ತಗಡಿನ ಶೀಟು …..

ಟಿಪ್ ಟಿಪ್
ಮನೆಯೊಳಗಣ
ಈಜುಕೊಳ …..

ಟಪ್ ಟಪ್
ಕೆಲಸಕ್ಕೆ ಹೊರಟ ಕಾರ್ಮಿಕ
ಹಿಡಿದ ಛತ್ರಿ ಮೇಲೆ
ಟಿಫಿನ್ ಬಾಕ್ಸ್ ಮೇಲೆ ….

ಟಪ್ ಟಪ್
ರೈನ್ ಕೋಟ್
ಹಾಕಿದ ಶಾಲೆಗೆ ಹೊರಟ
ಮಗುವಿನ ತಲೆ ಮೇಲೆ….

ಟಪ್ ಟಪ್
ಜುರ್ರೆಂದು ಓಡುತ್ತಿರುವ
ಕಾರಿನ ಮೇಲೆ…

ಟಪ್ ಟಪ್
ತೊಳೆಯಲು ಅಂಗಳದಲ್ಲಿ
ಇಟ್ಟ ಪಾತ್ರೆ ಮೇಲೆ…

ಟಪ್ ಟಪ್
ಮರದ ಎಲೆ ಮೇಲೆ

ಟಪ್ ಟಪ್
ಮೇಲಕ್ಕೆ ಎತ್ತಿದ
ಮೊಗದ ಮೇಲೆ…
ತುಟಿ ಮೇಲೆ…


ರಜನಿ

ದೊರೈರಾಜ್, ಉಮೇಶ್ ಗೆ ಅಭಿನಂದನಾ ಸಮಾರಂಭ

0

Publicstory


ತುಮಕೂರು: ರಾಜ್ಯದ ಜನಚಳವಳಿಗೆ ವಿಶಿಷ್ಟ ಕೊಡುಗೆ ನೀಡಿರುವ ಕೆ. ದೊರೈರಾಜ್ ಹಾಗೂ ಕೆ.ಎನ್. ಉಮೇಶ್ ಅವರಿಗೆ ಇದೇ ಭಾನುವಾರ ಜುಲೈ 10ರಂದು ಸಂಜೆ 4 ಗಂಟೆಗೆ ನಗರದ ಐಎಂಎ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ತುಮಕೂರು ನಾಗರಿಕ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಾಗರಿಕ ಸಮಾಜದಲ್ಲಿ ಚಳವಳಿಯ ಸಾಧಕ ಬಾಧಕ ಕುರಿತ ಸಂವಾದವು ನಡೆಯಲಿದೆ.
ಚಳವಳಿಯ ತಮ್ಮ ಅನುಭವಗಳನ್ನು ಈ ಇಬ್ಬರು ಮುಖಂಡರು ಹಂಚಿಕೊಳ್ಳುವರು.
ಸಮಾರಂಭವನ್ನು ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿ.ವಿ. ಪರೀಕ್ಷಾಂಗ ಕುಲಪತಿ ಪೊ. ಡೊಮೆನಿಕ್ ವಹಿಸುವರು. ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.
ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ನಾಗರಿಕ ವೇದಿಕೆ ಮುಂದಾಳು ಎಸ್. ರಾಘವೇಂದ್ರ ತಿಳಿಸಿದ್ದಾರೆ.