Friday, May 8, 2026
Google search engine
Home Blog Page 238

ಈಗ ನನಗೆ ತುಟಿ ನೋಡುವ ಅಭ್ಯಾಸ..

ಜಿ ಎನ್ ಮೋಹನ್


ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರು
ಅಕ್ಕಿ 25 ಕೆ ಜಿ
ರಾಗಿ 5 ಕೆ ಜಿ
ಗೋದಿ ಹಿಟ್ಟು 5 ಕೆ ಜಿ
ಎಲ್ಲಾ ದಾಟಿಕೊಂಡು..
ಧನಿಯ 1 ಕೆ ಜಿ
ಕಡಲೆಬೇಳೆ 1 ಕೆ ಜಿ
ಹೆಸರುಕಾಳು 1 ಕೆ ಜಿಎಲ್ಲಾ ಮುಗಿಸಿ ಅಮ್ಮ ‘ಒಣ ಮೆಣಸಿನಕಾಯಿ’ ಬರಿ ಅಂದರು
ಬರೆದೆ
ಗುಂಟೂರು ಮೆಣಸಿನಕಾಯಿ ಅರ್ಧ ಕೆ ಜಿ
ಬ್ಯಾಡಗಿ ಮೆಣಸಿನಕಾಯಿ ಅರ್ಧ ಕೆ ಜಿ
ಅಂತ ಡಿಕ್ಟೇಟ್ ಮಾಡಲು ಶುರು ಮಾಡಿದರುಪಟ್ಟಿ ಬರೆಯುತ್ತಾ ಇದ್ದ ನಾನು ‘ಎಲ್ಲಾ ದಿನಸಿಗೂ ಒಂದೇ ವೆರೈಟಿ, ಮೆಣಸಿನಕಾಯಿಗೇಕೆ ಎರಡು?’ ಎಂದೆ
ಅಮ್ಮ ‘ಗುಂಟೂರು ಮೆಣಸಿನಕಾಯಿ ಖಾರ ಕೊಡುತ್ತೆ
ಬ್ಯಾಡಗಿ ಮೆಣಸಿನಕಾಯಿ ಬಣ್ಣ ಕೊಡುತ್ತೆ’ ಅಂದರು
ಪಟ್ಟಿ ಬರೆಯುತ್ತಿದ್ದ ನನ್ನ ಕೈ ಅಲ್ಲಿಯೇ ನಿಂತಿತುನೆನಪುಗಳ ಸರಮಾಲೆಅದು ನಾನು ಮಂಗಳೂರಿನಲ್ಲಿದ್ದ ಕಾಲ
ಹೌದು, ಮಂಗಳೂರಿನಿಂದ ಹೊರಟು ನಾನು ಇಡೀ ಕರ್ನಾಟಕ ಸುತ್ತುತ್ತಾ ಹಾವೇರಿಗೆ ತಲುಪಿಕೊಂಡಿದ್ದೆ.ಚುನಾವಣೆ ಘೋಷಣೆಯಾಗಿತ್ತು. ಎಲ್ಲೆಡೆ ಯುದ್ಧೋನ್ಮಾದ .
ನಾನು ಪ್ರತೀ ಜಿಲ್ಲೆಗೂ ಹೋಗಿ ಅಲ್ಲಿನ ಉದ್ಯಮ, ರೈತರನ್ನು ಗಮನದಲ್ಲಿಟ್ಟುಕೊಂಡು ಅವರ ಬದುಕಿಗೆ ಚುನಾವಣೆ ಏನು ಮಾಡಿದೆ ಎಂಬುದಕ್ಕೆ ಉತ್ತರ ಹುಡುಕುತ್ತಿದ್ದೆಹಾಗೆ ಹಾವೇರಿಗೆ ಬಂದ ನಾನು ಮೊದಲು ಹೆಜ್ಜೆ ಇಟ್ಟಿದ್ದೆ – ಬ್ಯಾಡಗಿಗೆ
ಬ್ಯಾಡಗಿ ಎಂದರೆ ಸಾಕು ಮೆಣಸಿನಕಾಯಿ ಎಂದು ನಿದ್ದೆಯಲ್ಲಿ ಅಲುಗಾಡಿಸಿದರೂ ಸಹಾ ಹೇಳಬಹುದು
ಬ್ಯಾಡಗಿಗೂ ಮೆಣಸಿನಕಾಯಿಗೂ ಅಷ್ಟು ನಂಟುಇಡೀ ನನ್ನ ಟೀಮ್ ಬ್ಯಾಡಗಿಯ ದಿಕ್ಕಿನತ್ತ ಮುಖ ಮಾಡಿತು
ಅಲ್ಲಿಯವರೆಗೂ ನನಗೆ ಇದ್ದದ್ದು ಸಮುದ್ರದ ಕಲ್ಪನೆ ಮಾತ್ರ.
ಇನ್ನೂ ಮಾರು ದೂರ ಇರುವಾಗಲೇ ಸಮುದ್ರ ಬಿಚ್ಚಿಕೊಂಡು ಎಂತಹವರನ್ನೂ ಬೆರಗಾಗಿಸುತ್ತದೆ
‘ಓ ಸಮುದ್ರಾ..’ ಎಂದು ಎಷ್ಟು ಉದ್ಘಾರಗಳನ್ನು ನಾನು ಕೇಳಿಲ್ಲ!.ನನಗೂ ಈಗ ಹಾಗೇ ಆಗಿ ಹೋಯಿತು
ಬ್ಯಾಡಗಿಯ ಬರಡು ನೆಲದಲ್ಲಿ ಸಮುದ್ರ!
ಆದರೆ ಒಂದೇ ವ್ಯತ್ಯಾಸ.. ನಾನು ನೋಡುತ್ತಿದ್ದ ಸಮುದ್ರದ ಬಣ್ಣ ಮಾತ್ರ ಬೇರೆ
ಕೆಂಪು, ಎಲ್ಲೆಲ್ಲೂ ಕೆಂಪು
ಅದು ಮೆಣಸಿನಕಾಯಿಯ ಸಮುದ್ರ,ಹಾಗೆ ಇಡೀ ಊರಿಗೆ ಊರೇ ಕೆಂಪು ಬಣ್ಣ ಬಳಿದುಕೊಂಡದ್ದನ್ನು ನೋಡಿದ್ದು ನನ್ನ ಜೀವಮಾನದಲ್ಲಿ ಇದೇ ಮೊದಲು.
ಊರಿನ ಎಲ್ಲೆಡೆಯೂ ಮೆಣಸಿನಕಾಯಿಯನ್ನು ಒಣಗಿಹಾಕಿದ್ದರು
ನಾನು ಊರಿನ ಒಳಗೆ ಹೆಜ್ಜೆ ಇಡುತ್ತಾ ಹೋದಂತೆ ಊರಿಗೆ ಊರೇ ಮೆಣಸಿನಕಾಯಿಯನ್ನು ಮಾತ್ರವೇ ಉಸಿರಾಡುತ್ತಿದ್ದುದನ್ನು ಕಂಡೆಹೆಂಗಸರು ಆ ವಿಶಾಲ ಮೆಣಸಿನಕಾಯಿ ಸಮುದ್ರದಲ್ಲಿ ಚುಕ್ಕಿಗಳೇನೋ ಎಂಬಂತೆ ಕಾಣುತ್ತಿದ್ದರು
ಎರಡೂ ಕೈನಲ್ಲಿ ಪಟಪಟನೆ ತೊಟ್ಟು ಬಿಡಿಸುತ್ತಾ ಇದ್ದರು.
ಇನ್ನೊಂದೆಡೆ ಮೆಣಸಿನಕಾಯಿ ಹೊಲದಲ್ಲಿ ಮೆಣಸಿನಕಾಯಿ ಕೀಳುತ್ತಿದ್ದರು, ಇನ್ನೊಂದೆಡೆ ದಲಾಲಿಗಳ ಅಬ್ಬರ
ಮೆಣಸಿನಕಾಯಿ ಹೊತ್ತ ಟ್ರಾಕ್ಟರ್ ಗಳು, ಮೆಣಸಿನಕಾಯಿ ಮೂಟೆ ಹೊರುತ್ತಿದ್ದವರು..ಆ ಘಾಟಿನ ಲೋಕದಲ್ಲಿ ಉಸಿರುಬಿಡಲು ಕಷ್ಟಪಡುತ್ತಾ ನಾನು ಒಂದೊಂದೇ ಹೆಜ್ಜೆ ಇಡುತ್ತಿದ್ದೆ.
ಊರಲ್ಲಿ ಹತ್ತಾರು ರೀತಿಯ ಕೆಲಸ ಮಾಡುತ್ತಿದ್ದವರನ್ನು ಮಾತನಾಡಿಸುತ್ತಾ ಹೋದೆ
ಹೀಗೆ ಬಂದ ಮೆಣಸಿನಕಾಯಿ ಹಾಗೆ ಖಾಲಿ ಆಗುತ್ತಿತ್ತುಅರೆ! ಬ್ಯಾಡಗಿ ಎಂದರೆ ಎಂತ ಡಿಮ್ಯಾಂಡ್ ಎಂಬ ಕೋಡು ಮೂಡಿತು
‘ನಿಮ್ಮ ವಹಿವಾಟು ನೋಡಿದರೆ ಇಡೀ ದೇಶದ ಎಲ್ಲರೂ ಬ್ಯಾಡಗಿ ಮೆಣಸಿನಕಾಯಿಯನ್ನೇ ತಿನ್ನುತ್ತಿರಬೇಕು’ ಎಂದೆ
ನನ್ನ ಜೊತೆ ಮಾತನಾಡುತ್ತಿದ್ದವರು ನನ್ನ ನೋಡಿ ನಕ್ಕರುನಾನೋ ಒಂದು ಕ್ಷಣ ಏನೂ ಅರ್ಥ ಆಗದೆ ಅವರ ಮುಖವನ್ನೇ ನೋಡಿದೆ
ಅವರು ‘ಬ್ಯಾಡಗಿ ಮೆಣಸಿನಕಾಯಿ ತಿನ್ನೋದಕ್ಕೆ ಎಲ್ಲಿ ಉಳಿಯುತ್ತೆ ಸಾರ್..’ ಎಂದರು
‘ಅಂದರೆ..’ ಎಂದೆ
ಇದೆಲ್ಲಾ ಹೋಗೋದು ನೋಡಿ ಅಲ್ಲಿಗೆ.. ಎಂದು ಕೈ ಮಾಡಿದರು
ನಾನು ಆ ಕಡೆ ನೋಡಿದರೆ ದೂರದಲ್ಲಿ ಕಾರ್ಖಾನೆಯ ಚಿಮಣಿಗಳು ಕಾಣಿಸಿದವುಅರ್ಥವಾಗದೆ ಮತ್ತೆ ಅವರತ್ತ ನೋಡಿದೆ
ಅವರು ಅದು ಬಣ್ಣದ ಕಾರ್ಖಾನೆ ಸಾರ್
ಬ್ಯಾಡಗಿ ಮೆಣಸಿನಕಾಯಿ ಈಗ ತಿನ್ನೋಕಲ್ಲ ಬಣ್ಣಕ್ಕೆ ಬಳಸ್ತಾರೆ
ಬ್ಯಾಡಗಿ ಮೆಣಸಿನಕಾಯಿಯಿಂದ ತೆಗೆದ ಬಣ್ಣ ಇದೆಯಲ್ಲಾ ಅದು ಲಿಪ್ ಸ್ಟಿಕ್ ಗೆ ಫಸ್ಟ್ ಕ್ಲಾಸ್ ಅಂದರುಎಲ್ಲಿನ ಮೆಣಸಿನಕಾಯಿ ಎಲ್ಲಿಯ ಲಿಪ್ ಸ್ಟಿಕ್ ಎಂದು ನಾನು ಕಣ್ಣೂ ಬಾಯಿ ಬಿಟ್ಟೆ
ನಾನಂದುಕೊಂಡಂತೆ ಇಡೀ ದೇಶ ಬ್ಯಾಡಗಿ ಮೆಣಸಿನಕಾಯಿ ತಿನ್ನುತ್ತಿರಲಿಲ್ಲ, ಬದಲಿಗೆ ಇಡೀ ಜಗತ್ತೇ ಅದನ್ನು ತುಟಿಗೆ ಬಳಿದುಕೊಳ್ಳುತ್ತಿತ್ತುಅಲ್ಲಿಂದ ನನ್ನ ಪಯಣದ ದಿಕ್ಕೇ ಬದಲಾಯ್ತು
ನಾನು ಕಾಣುತ್ತಿದ್ದ ಚಿಮಣಿಗಳ ಕಡೆ ಹೊರಳಿದೆ
ಕಂಡ ಕಂಡವರ ಬೆನ್ನು ಬಿದ್ದೆ, ಕಾರ್ಖಾನೆಗಳ ಬಾಗಿಲು ಬಡಿದೆಬ್ಯಾಡಗಿ ಮೆಣಸಿನಕಾಯಿ ಘಾಟು ಕಡಿಮೆ, ಬಣ್ಣ ಜಾಸ್ತಿ
ಯಾವಾಗ ಇದು ಗೊತ್ತಾಯಿತೋ ಬಹುರಾಷ್ಟ್ರೀಯ ಕಂಪನಿಗಳಿಗೆ ಬ್ಯಾಡಗಿ ಎನ್ನುವುದು ಪ್ರಿಯವಾಗಿ ಹೋಯಿತುಮೊದಲು ಮೆಣಸಿನಕಾಯಿಯನ್ನೇ ತರಿಸಿಕೊಳ್ಳುತ್ತಿದ್ದರು ಅದು ಬ್ಯಾಡಗಿಯಿಂದ ಮುಂಬೈಗೆ ಹಾರಿ, ಅಲ್ಲಿ ಬಣ್ಣವಾಗಿ ಬದಲಾಗುತ್ತಿತ್ತು
ಆಮೇಲೆ ಈ ಕಷ್ಟ ಯಾಕೆ ಅಂತ ಬಹುರಾಷ್ಟ್ರೀಯ ಕಂಪನಿಗಳು ತಾವೇ ಬ್ಯಾಡಗಿ ಹೆದ್ದಾರಿಗೆ ಬಂದು ಮನೆ ಮಾಡಿದವುತೊಟ್ಟು ಬಿಡಿಸಿದ ಮೆಣಸಿನಕಾಯಿ ತಂಪಾಗಿಟ್ಟಷ್ಟೂ ಹೆಚ್ಚು ಬಣ್ಣ ಬಿಡುತ್ತದೆ
ಇದು ಗೊತ್ತಾದ ತಕ್ಷಣ ಕೋಲ್ಡ್ ಸ್ಟೋರೇಜ್ ಗಳು ಬ್ಯಾಡಗಿಗೆ ಎಂಟ್ರಿ ಕೊಟ್ಟವುಮೆಣಸಿನಕಾಯಿ ಹಿಂಡಿ ‘ಓಲಿಯೋರೆಸಿನ್’ ಎನ್ನುವ ಬಣ್ಣ ತೆಗೆಯುತ್ತಾರೆ
ಒಂದು ಟನ್ ಮೆಣಸಿನಕಾಯಿ ಹಿಂಡಿದರೆ 50 ಲೀಟರ್ ಬಣ್ಣ ಸಿದ್ಧಅಲ್ಲಿಂದ ನನ್ನ ದಿಕ್ಕು ಮತ್ತೆ ಬ್ಯಾಡಗಿಯತ್ತ
12 ಲಕ್ಷ ಟನ್ ಬ್ಯಾಡಗಿ ಮೆಣಸಿನಕಾಯಿ ಫಸಲು ಬಂದಿದೆ
ಬಹುರಾಷ್ಟ್ರೀಯ ಕಂಪನಿಗಳು ಎಲ್ಲೆಲ್ಲಿಂದಲೋ ಬಂದು ಬೀಡು ಬಿಟ್ಟಿವೆನಾನು ಆ ಕೆಂಪು ಸಮುದ್ರದೊಳಗೆ ಹೆಜ್ಜೆ ಹಾಕುತ್ತಾ ಅಲ್ಲಿ ಮೂಗು ಬಾಯಿ ಕಟ್ಟಿಕೊಂಡು
ಚಕಚಕನೆ ರೋಬೋಟ್ ಗಿಂದ ವೇಗವಾಗಿ ತೊಟ್ಟು ಮುರಿಯುತ್ತಿದ್ದ ಹೆಂಗಸಿನ ಬಳಿ ಕುಳಿತೆಬದುಕು ಹೇಗಿದೆ ತಾಯಿ ಎಂದೆ
ಅಷ್ಟೇ, ಆಕೆಯ ಕಣ್ಣಲ್ಲಿ ನೀರು ಸುರಿಯಲಾರಂಭಿಸಿತು
ಘಾಟಿನ ಕಾರಣಕ್ಕೆ ಅಸ್ತಮಾ, ಹಲವರಿಗೆ ಕ್ಯಾನ್ಸರ್
ಖಾರದಲ್ಲಿ ಕೈ ಆಡೀ ಆಡೀ ಕೈ ಸ್ಪರ್ಶ ಜ್ಞಾನವನ್ನೇ ಕಳೆದುಕೊಂಡಿದೆಹಾಗೆಯೇ ಜಗತ್ತಿನಾದ್ಯಂತ ಅದನ್ನು ತಿಂದರೂ, ಹಚ್ಚಿಕೊಂಡರೂ ಅವರ ಬದುಕಿಗೆ ಮಾತ್ರ ಬಣ್ಣ ಬಂದಿಲ್ಲ
ಕತ್ತಲು ಒಂದಿಂಚೂ ಜರುಗಿಲ್ಲಅಮೆರಿಕಾದ ‘ಸಿ ಎನ್ ಎನ್’ ಚಾನಲ್ ಗೆ ಈ ಕಥೆಯನ್ನು ಹೊತ್ತೊಯ್ದೆ
ತೆರೆಯ ಮೇಲೆ ಮೆಣಸಿನಕಾಯಿ ಕಥೆ ಬಿಚ್ಚುತ್ತಾ ಹೋದಂತೆ ಎಲ್ಲರೂ ನಿಟ್ಟುಸಿರಾದರು
ಜಗತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಅಮೆರಿಕಾದ ಕಂಪನಿಗಳಿಗೆ ಸಿ ಎನ್ ಎನ್ ಆದರೂ ಪಾಠ ಹೇಳಲಿ ಎನ್ನುವ ಆಸೆ ನನ್ನದುಈ ಮಧ್ಯೆ ಮಂಗಳೂರಿನ ಮನೆಯ ಬಾಗಿಲು ಬಡಿದ ಸದ್ದಾಯ್ತು
ತೆರೆದರೆ ಸಿದ್ಧಾರ್ಥ ವರದರಾಜನ್
‘ಹಿಂದೂ’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿರುವ ಸಿದ್ಧಾರ್ಥ್ ಆಗ ‘ಟೈಮ್ಸ್ ಆಫ್ ಇಂಡಿಯಾ’ದ ದೆಹಲಿ ಸ್ಥಾನಿಕ ಸಂಪಾದಕನನಗೋ ಅಚ್ಚರಿ
ಅವರು ಒಳಗೆ ಕಾಲಿಟ್ಟ ತಕ್ಷಣ ಮೆಣಸಿನಕಾಯಿ ಎಂದರು
ನನಗೆ ಅರ್ಥವಾಗಿ ಹೋಯ್ತುನನ್ನ ಬ್ಯಾಡಗಿ ವರದಿ ನೋಡಿದ್ದ ಸಿದ್ಧಾರ್ಥ್ ವರದರಾಜನ್ ಅವರು ದೆಹಲಿಯಿಂದ ಆ ಕಥೆಯ ಬೆನ್ನತ್ತಿ ಬಂದಿದ್ದರು
ವಿವರ ಕೊಟ್ಟ ತಕ್ಷಣ ಅವರೂ ಬ್ಯಾಡಗಿಯತ್ತ ಮುಖ ಮಾಡಿದರುಈಗ ನಾನು ಯಾರು ಲಿಪ್ ಸ್ಟಿಕ್ ಹಾಕಿದ್ದರೂ ಅವರ ತುಟಿ ನೋಡುತ್ತೇನೆ
ಅಲ್ಲಿ ಬಣ್ಣದ ಬದಲು ಕದಡಿ ಹೋಗುತ್ತಿರುವ ಬದುಕು ಕಾಣುತ್ತದೆ

ಜಂಗಮವಾಣಿ ಜಾಗದೊಳ್ ಮೂಕಪ್ರೇಕ್ಷಕ ನಾವಿಂದು

1

ಶಂಕರ್ ಬರಕನಹಾಲ್


ಜಾಗತಿಕ ಕರೊನಾ ಭಯದಲ್ಲಿ
ಬದುಕುಳಿಯುವ
ಯೋಚನೆಯ ಅಡಿಯಲ್ಲಿ
ಸಾಗಲಾರದೆ ಸಾಗುತಿದೆ
ನೀರಸ ಪಯಣ.

ಬಣ್ಣ ಬಣ್ಣದ ಜಗತ್ತಿನಲ್ಲಿ
ಕಪ್ಪು ಬಿಳುಪಿನ ಬದುಕಿನಲ್ಲಿ
ಗುರಿಗಳಿಗೆ ಗುರುಗಳಿಲ್ಲ
ಗುರುಗಳಿಗೂ ಮಾರ್ಗವಿಲ್ಲ
ಅರ್ಥವಾಗದ ಜಗತ್ತಿನಲ್ಲಿ
ಮೂಕಪ್ರೇಕ್ಷಕ ನಾವಿಂದು.

ಮನಸಿನ ಮಾತುಗಳಿಗೆ
ಬೆಲೆಗಳಿಲ್ಲ,ಅರ್ಥಗಳಿಲ್ಲ
ಜಂಗಮವಾಣಿ ಜಾಗದೊಳ್
ಜಂಗಮರು ನಾವಿಂದು
ಜಂಗಮವಾಣಿಯ ಅಡಿಯೊಳಗೇ.

ಯಾಂತ್ರಿಕ ಮನುಷ್ಯನಾ
ತಾಂತ್ರಿಕತೆಯ ಬದುಕಿನಲ್ಲಿ
ಖುಷಿಯಲ್ಲಿ ನಿರ್ಮಿಸಿದ ಆ ಮನೆಯೊಳಗೆ ಸುಖ ಶಾಂತಿಯೇ ಸಾಮಾಜಿಕ ಜಾಲತಾಣಗಳು.

EMI ನಲ್ಲಿ ತಂದ ಬರ್ಮೋಡ ಚಡ್ಡಿ,
ಅಪ್ಪ ಹಾಕಿಸಿದ ಪೆಟ್ರೋಲ್
ಖುಷಿಯಾಗಿ ಚಲಿಸಲೆಂದು ತಂದ
ವಾಹನಗಳಿಗೆ ಚಲಿಸುವ ಮಾರ್ಗವಿಲ್ಲ.

ಅಂತದ್ರಲ್ಲಿ ಇಂದಿನ ಯುವಪೀಳಿಗೆ
ತುಂಬಾ ಉತ್ಸಾಹದಿಂದ
ಸಾಮಾಜಿಕ ಜಾಲತಾಣದ
ಭ್ರಮೆಯಲ್ಲಿ ತೇಲುತ್ತಿರುವ ಮಹನೀಯರೇ ಅದು
ಅಮಲು ಪದಾರ್ಥವೋ ಅಥವಾ ಔಷಧಿಯೋ ಎಂದು
ಮೊದಲು ಯೋಚಿಸಿ.

ಕಸಾಪ ಸಂಸ್ಥಾಪನಾ ದಿನಾಚರಣೆ: ನೀರಾವರಿ ಆಂದೋಲನಕ್ಕೆ ಕರೆ

Publicstory.in


ಗುಬ್ಬಿ: ತಾಲ್ಲೂಕು ಕ.ಸಾ.ಪ. ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 106 ನೇ ಸಂಸ್ಥಾಪನೆ ದಿನಾಚರಣೆಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕವಿ ಕೆ ಎಸ್. ನಿಸ್ಸಾರ್ ಅಹಮ್ಮದ್ ರವರಿಗೂ ಶ್ರದ್ದಾಂಜಲಿ ಸಲ್ಲಿಸಲಾಯಿತು.

ತುಂಬಾ ಸರಳವಾಗಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾದ ಶಾಂತರಾಜು ವಹಿಸಿದ್ದರು.

ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಸಾಹಿತ್ಯ ಪರಿಷತ್ತು ಬೆಳೆದುಬಂದ ದಾರಿಯನ್ನು ಸ್ಮರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಡ ಭಾಷೆ ಮತ್ತು ಸಾಹಿತ್ಯ ಸಂರಕ್ಷಿಸಿ ಉತ್ತುಂಗಕ್ಕೇರಿಸುವ ಮಹತ್ವಕಾಂಕ್ಷೇ ಯನ್ನು ಹೊಂದಿ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿಸುವುದರ ಜೊತೆಗೆ ಅನೇಕ ನೀರಾವರಿ ಯೋಜನೆ ಗಳನ್ನು ಕೈಗೆತ್ತಿಕೊಂಡರು.ಇವರ ಆಲೋಚನೆಗಳಿಗೆ ಇಂಬಾಗಿ ನಿಂತವರು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ನವರು ಎಂದರು.

ಪರಿಷತ್ತಿನ ವತಿಯಿಂದ ಸಾಹಿತ್ಯದ ಕೆಲಸಗಳ ಜೊತೆ ಜಲಸಾಕ್ಷರತೆಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲು ಆಂದೋಲನವನ್ನು ಮಾಡೋಣ ಎಂದು ಕರೆಕೊಟ್ಟರು.

ನಿಸ್ಸಾರ್ ಅಹಮ್ಮದ್ ರವರ ಬಗ್ಗೆ ಮತನಾಡುತ್ತಾ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೂ ಮಾನವತಾವಾದಿ ಎಂದು ಸ್ಮರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶೇಷಪ್ಪ ಮಾತನಾಡುತ್ತಾ, 1915 ರಿಂದ ಇಂದಿನವರೆಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ರೀತಿಯನ್ನು ಸ್ಮರಿಸುತ್ರಾ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ಭಾಷೆ, ಸಾಹಿತ್ಯ, ನೆಲ,ಜಲ ಗಳ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಕೆ.ಎಸ್. ನಿಸ್ಸಾರ್ ಅಹಮ್ಮದ್ ರವರ ಬಗ್ಗೆ ಮಾತನಾಡುತ್ರ ಅವರಂತಹ ಶ್ರೇಷ್ಠ ಬರಹಗಾರ ರನ್ನು ಕಾಣಲು ಸಾಧ್ಯವಿಲ್ಲ, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಪರಿಣಿತಿಯನ್ನು ಹೊಂದಿದ್ದರು ಎಂದರು.
ತಾಲ್ಲೂಕು ಕ.ಸಾ.ಪ. ಕಾರ್ಯದರ್ಶಿ ಶ್ರೀಯುತ ಗಂಗಾದರಸ್ವಾಮಿ ಯವರು ಮಾತನಾಡುತ್ತಾ ನಾಲ್ವಡಿ ಕೃಷ್ಣರಾಜ ಒಡೆಯರ ಆಶಯಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯವನ್ನು ಎಲ್ಲರೂ ಜೊತೆಗೂಡಿ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ.ಸಾ.ಪ .ಪದಾಧಿಕಾರಿಗಳಾದ ರಾಜು, ಗುರುಪ್ರಸಾದ್, ಸಿ.ಆರ್.ಪಿ. ಜಗದೀಶ್ ಭಾಗವಹಿಸಿದ್ದರು

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ:8618194668

ಪಂಚಾಂಗ
ದಿನಾಂಕ : 6, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಬುಧವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಚತುರ್ದಶಿ
(ನಿನ್ನೆ ರಾತ್ರಿ 11 ಗಂ॥ 21 ನಿ।। ರಿಂದ
ಇಂದು ರಾತ್ರಿ 7 ಗಂ॥ 46 ನಿ।। ತನಕ)
ನಕ್ಷತ್ರ : ಚಿತ್ತೆ
(ನಿನ್ನೆ ಸಂಜೆ 4 ಗಂ॥ 39 ನಿ।। ರಿಂದ
ಇಂದು ಮಧ್ಯಾಹ್ನ 1 ಗಂ॥ 52 ನಿ।। ತನಕ)
ಯೋಗ : ಸಿದ್ಧಿ
ಕರಣ : ಗರಜೆ
ವರ್ಜ್ಯಂ : (ನಿನ್ನೆ ರಾತ್ರಿ 11 ಗಂ॥ 43 ನಿ।। ರಿಂದ ಇಂದು ಪ್ರಾತಃಕಾಲ 1 ಗಂ॥ 7 ನಿ।। ತನಕ)(ಇಂದು ರಾತ್ರಿ 6 ಗಂ॥ 50 ನಿ।। ರಿಂದ ಇಂದು ರಾತ್ರಿ 8 ಗಂ॥ 15 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 8 ಗಂ॥ 12 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 36 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 11 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 37 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 48 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 10 ಗಂ॥ 35 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।।
ತನಕ)
ಯಮಗಂಡ : (ಇಂದು ಬೆಳಿಗ್ಗೆ 7 ಗಂ॥ 23 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 59 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 47 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 37 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ತುಲಾ

ಮೇಷ ರಾಶಿ : 6 May 2020
ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳಾಗುವ ಮೊದಲೇ ನೀವು ಅವುಗಳನ್ನು ನಾಶಮಾಡಬೇಕು. ನೀವು ನಿಮಗೆ ಸಂಪೂರ್ಣ ಮಾನಸಿಕ ತೃಪ್ತಿ ನೀಡುವ ದಾನ ಮತ್ತು ಧರ್ಮಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಅವುಗಳನ್ನು ತೊಡೆದುಹಾಕಬಹುದು. ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನೀವು ಶಾಂತಿ ಕಾಪಾಡಲು ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಲು ನಿಮ್ಮ ಕೋಪವನ್ನು ಮೆಟ್ಟಿ ನಿಲ್ಲಬೇಕು ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ಅದೃಷ್ಟ ಸಂಖ್ಯೆ: 4

ವೃಷಭ ರಾಶಿ : 6 May 2020
ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ನಿಮ್ಮ ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ; ಇದು ಅತ್ಯಂತ ಆಧ್ಯಾತ್ಮಿಕವೂ ಹಾಗೂ ಧಾರ್ಮಿಕವೂ ಆಗಿದೆ. ಇಂದು ನೀವು ಇದನ್ನು ತಿಳಿಯುತ್ತೀರಿ. ಅದೃಷ್ಟ ಸಂಖ್ಯೆ: 3

ಮಿಥುನ ರಾಶಿ : 6 May 2020
ಇಂದು ಕೈಗೊಂಡ ಧರ್ಮಾರ್ಥ ಕಾರ್ಯವು ಮಾನಸಿಕ ಶಾಂತಿ ಮತ್ತು ಆರಾಮ ತರುತ್ತದೆ. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ನೀವು ಕಷ್ಟಕರವೆಂದು ತೋರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗಿರುವ ಸಂಪರ್ಕಗಳನ್ನು ಬಳಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 1

ಕರ್ಕ ರಾಶಿ : 6 May 2020
ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡುತ್ತದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ / ಪಾರಿತೋಷಕಗಳನ್ನು ಸ್ವೀಕರಿಸುವುದರಿಂದ ಇದು ರೋಮಾಂಚಕ ದಿನವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಜೊತೆ ಅತ್ಯಂತ ಕಡಿಮೆ ಹೊಂದಿಕೊಳ್ಳುವವರು ಇಂದು ನಿಮ್ಮ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಅದೃಷ್ಟ ಸಂಖ್ಯೆ: 5

ಸಿಂಹ ರಾಶಿ : 6 May 2020
ವಿಶೇಷವಾಗಿ ತಿರುವುಗಳಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಿ. ಬೇರೆಯವರ ಉದಾಸೀನತೆ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮ ಮಕ್ಕಳು ನಿಮ್ಮನ್ನು ಸಂತೋಷವಾಗಿರಿಸಲು ತಮಗೆ ಸಾಧ್ಯವಿರುವುದೆಲ್ಲವನ್ನೂ ಮಾಡುತ್ತಾರೆ. ಇಂದು ಪ್ರಣಯದ ಯಾವುದೇ ಆಸೆಯಿಲ್ಲ ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ಅದೃಷ್ಟ ಸಂಖ್ಯೆ: 3

ಕನ್ಯಾ ರಾಶಿ : 6 May 2020
ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ನೀವು ನಿಮ್ಮ ಮನೆಯ ಯಾವುದೇ ಸದಸ್ಯರಿಂದ ಹಣವನ್ನು ಸಾಲ ತೆಗೆದುಕೊಂಡಿದ್ದರೆ ಅದನ್ನು ಇಂದು ಮರುಪಾವತಿಸಿ ಇಲ್ಲದಿದ್ದರೆ ನಿಮ್ಮ ವಿರುದ್ಧವಾಗಿ ಕಾನೂನು ಪ್ರಕರಣ ಮಾಡಬಹುದು. ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಇದು ಮನೆಯಲ್ಲಿ ಆತಂಕದ ಕ್ಷಣಗಳು ತರುತ್ತದೆ. ಒಂದು ಉತ್ತಮ ಸಂವಹನ ಅಥವಾ ನಿಮ್ಮ ಪ್ರೀತಿಪಾತ್ರರಿಂದ ಅಥವಾ ಸಂಗಾತಿಯಿಂದ ಬರುವ ಸಂದೇಶ ಇಂದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅದೃಷ್ಟ ಸಂಖ್ಯೆ: 2

ತುಲಾ ರಾಶಿ : 6 May 2020
ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ಒಂದು ಅಂಚೆಯ ಮೂಲಕ ಬಂದ ಪತ್ರ ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿ ತರುತ್ತದೆ. ಕೆಲವರಿಗೆ ಹೊಸ ಪ್ರಣಯ ಖಂಡಿತವೆನಿಸುತ್ತದೆ – ನಿಮ್ಮ ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ. ಅದೃಷ್ಟ ಸಂಖ್ಯೆ: 4

ವೃಶ್ಚಿಕ ರಾಶಿ : 6 May 2020
ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ನಿಮ್ಮ ಪೋಷಕರಿಗೆ ಮಹತ್ವಾಕಾಂಕ್ಷೆಯನ್ನು ಬಹಿರಂಗಪಡಿಸಲು ಸರಿಯಾದ ಸಮಯ. ಅವರು ಸಂಪೂರ್ಣವಾಗಿ ನಿಮಗೆ ಬೆಂಬಲ ನೀಡುತ್ತಾರೆ. ನೀವು ಗಮನ ಹರಿಸಬೇಕು ಮತ್ತು ಇದನ್ನು ಸಾಧಿಸಲು ಶ್ರಮಪಡಬೇಕು. ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ. ಅದೃಷ್ಟ ಸಂಖ್ಯೆ: 6

ಧನು ರಾಶಿ : 6 May 2020
ನೀವು ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದಂತೆ ನಿಮ್ಮ ಆತಂಕ ಕಣ್ಮರೆಯಾಗುತ್ತದೆ. ಇದು ಧೈರ್ಯದ ಮೊದಲ ಸ್ಪರ್ಶದಲ್ಲಿ ಕುಸಿದುಹೋಗುವ ಸಾಬೂನಿನ ಗುಳ್ಳೆಯಷ್ಟೇ ಗಟ್ಟಿಯೆಂದು ನೀವು ಅರ್ಥ ಮಾಡಿಕೊಳ್ಳುತ್ತೀರಿ. ಈ ರಾಶಿಚಕ್ರದ ಕೆಲವು ಜನರಿಗೆ ಇಂದು ಮಕ್ಕಳ ಬದಿಯಿಂದ ಆರ್ಥಿಕ ಲಾಭವನ್ನು ಪಡೆಯುವ ಭರವಸೆ ಇದ. ಇಂದು ನೀವು ನಿಮ್ಮ ಮಕ್ಕಳ ಮೇಲೆ ಹೆಮ್ಮೆಯನ್ನು ಅನುಭವಿಸುವಿರಿ. ಇಂದು ನೀವು ಲಾಭ ಪಡೆಯುತ್ತೀರಿ – ಕುಟುಂಬದ ಸದಸ್ಯರು ಸಕಾರಾತ್ಮಕ ರೀತಿಯಲ್ಲಿ ನಿಮಗೆ ಪ್ರತಿಕ್ರಿಯಿಸುತ್ತಾರೆ. ಇಂದು ನಿಮ್ಮ ಯಾವುದೇ ಭರವಸೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಉದ್ಯಮಿಗಳಿಗೆ ಒಳ್ಳೆಯ ದಿನ. ಅದೃಷ್ಟ ಸಂಖ್ಯೆ: 3

ಮಕರ ರಾಶಿ : 6 May 2020
ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ ಮತ್ತು ನೀವು ಇದನ್ನು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಬಳಸಬೇಕು. ಇಂದು ನಿಮ್ಮ ಯಾವುದೇ ಚಲಿಸಬಲ್ಲ ಅಸ್ತಿಯನ್ನು ಕದಿಯಬಹುದು ಆದ್ದರಿಂದ ಸಾಧ್ಯವಾದಷ್ಟು ಅದರ ಬಗ್ಗೆ ಗಮನ ಹರಿಸಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ರಹಸ್ಯ ಪ್ರಣಯಗಳು ನಿಮ್ಮ ಖ್ಯಾತಿಯನ್ನು ನಾಶಮಾಡಬಹುದು. ನಿಮ್ಮ ಕೈಕೆಳಗಿನವರು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿರದಿದ್ದರಿಂದ ನಿಮಗೆ ಅಸಮಾಧಾನವಾಗಬಹುದು. ಅದೃಷ್ಟ ಸಂಖ್ಯೆ: 3

ಕುಂಭ ರಾಶಿ : 6 May 2020
ಖಂಡಿತವಾಗಿಯೂ ಆರೋಗ್ಯದ ಆರೈಕೆಯ ಅಗತ್ಯವಿದೆ. ನೀವು ವಿಪರೀತವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಮ್ಮ ಹಣವು ನಿಮ್ಮ ಕೆಲಸಕ್ಕೆ ಬರುತ್ತದೆ, ಇಂದು ನೀವು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ನಿಮಗೆ ಆಶ್ಚರ್ಯವಾಗುವ ಹಾಗೆ ನಿಮ್ಮ ಸಹೋದರ ನಿಮ್ಮನ್ನು ಪಾರು ಮಾಡುತ್ತಾರೆ. ನೀವು ಒಬ್ಬರೊಬ್ಬರನ್ನು ಸಂತೋಷವಾಗಿಡಲು ಒಟ್ಟೊಟ್ಟಿಗೆ ಕೆಲಸ ಮಾಡಬೇಕು. ಸಹಕಾರ ಜೀವನದ ಮುಖ್ಯ ಚಿಲುಮೆಯೆಂದು ನೆನಪಿಡಿ ನೀವು ಜನಪ್ರಿಯರಾಗಿರುತ್ತೀರಿ ಮತ್ತು ಸುಲಭವಾಗಿ ವಿರುದ್ಧ ಲಿಂಗದ ಸದಸ್ಯರ ಸೆಳೆಯುತ್ತೀರಿ. ಅದೃಷ್ಟ ಸಂಖ್ಯೆ: 9

ಮೀನ ರಾಶಿ : 6 May 2020
ಯಾರಾದರೂ ನಿಮಗೆ ಅಸಮಾಧಾನವುಂಟುಮಾಡಬಹುದಾದರೂ ಈ ಕಿರಿಕಿರಿಗಳು ನಿಮ್ಮನ್ನು ಆವರಿಸಲು ಬಿಡಬೇಡಿ. ಈ ಅನಾವಶ್ಯಕವಾದ ಚಿಂತೆಗಳು ಮತ್ತು ಉದ್ವೇಗಗಳು ದೇಹದ ಮೇಲೆ ಖಿನ್ನತೆಯ ಪರಿಣಾಮ ಬೀರಬಹುದು ಮತ್ತು ಚರ್ಮದ ಸಮಸ್ಯೆ ಉಂಟುಮಾಡಬಹುದು. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ನಿಮ್ಮ ಕಾರ್ಯಗಳು ದುರಾಶೆಯಿಂದಲ್ಲದೇ ಪ್ರೀತಿ ಮತ್ತು ಸಕಾರಾತ್ಮಕ ದೃಷ್ಟಿಯಿಂದ ನಡೆಯಬೇಕು. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಆರಾಮ- ಆನಂದ ಮತ್ತು ಭಾವಪರವಶತೆಯನ್ನು ನೀವು ಕಾಣುವುದರಿಂದ ನಿಮ್ಮ ಕೆಲಸ ಹಿಂದೆ ಬೀಳುತ್ತದೆ. ಅದೃಷ್ಟ ಸಂಖ್ಯೆ: 7

ಕ್ಷಮಿಸಿಬಿಡು ಪ್ರಭುವೇ

0

ದೇವರಹಳ್ಳಿ ಧನಂಜಯ


ಕ್ಷಮಿಸಿಬಿಡು ಪ್ರಭುವೇ
ದೀಪ ಎಂಬುದು ಮೌಢ್ಯ ಅಜ್ಞಾನ
ಅಂಧಕಾರ ತೊಲಗಿಸುವ ಬೆಳಕು
ಅಂದು ಕೊಂಡಿದ್ದಕ್ಕೆ.
ಬೆಳಗುವ ದೀಪವನ್ನು ಮೌಢ್ಯ ಬಿತ್ತನೆಗೆ
ಬಳಸಬಹುದು ಎಂಬುದನ್ನು ಊಹಿಸದೇ ಇದ್ದದ್ದಕ್ಕೆ

ಕ್ಷಮಿಸಿಬಿಡು ಪ್ರಭುವೇ
ಎಲ್ಲರ ಒಳಿತಿಗಾಗಿ
ಸರ್ವಶಕ್ತನಲ್ಲಿ ದಿನವೂ
ಪ್ರಾರ್ಥಿಸಿಕೊಂಡದ್ದಕ್ಕೆ.
ಸಹಬಾಳ್ವೆಯ
ಕನಸು ಕಂಡಿದ್ದಕ್ಕೆ
ಹೊಳೆವ ದೀಪದಲ್ಲಿ ಶ್ರಮಿಕರ
ಕನಸು ಬೆಳಗುವುದ ಕಂಡದ್ದಕ್ಕೆ

ಕ್ಷಮಿಸಿಬಿಡು ಪ್ರಭುವೇ
ದಿನವಿಡೀ ದುಡಿದು
ಗೂಡು ಸೇರುವ ಹಕ್ಕಿಗಳಂತೆ
ಮನೆಗೆ ಮರಳಿದ್ದಕ್ಕೆ
ಗೋಧೂಳಿಯಲ್ಲಿ
ನಿಮ್ಮ ಆಣತಿ ಇಲ್ಲದೆ
ಪ್ರತಿದಿನ ಹಣತೆ ಹಚ್ಚಿದ್ದಕ್ಕೆ.
ಹಣತೆ ಅಚ್ಚುವುದು ಸಂಸ್ಕಾರ
ಅಂದುಕೊಂಡಿದ್ದಕ್ಕೆ

ಕ್ಷಮಿಸಿಬಿಡು ಪ್ರಭುವೇ
ಆಯ್ಕೆಯ ಮೂಲಕವೇ
ನಿಮಗೆ ಶಕ್ತಿ ತುಂಬಿದ್ದೇವೆ
ಅಂದು ಕೊಂಡಿದ್ದಕ್ಕೆ
ನಿಮ್ಮ ಶಕ್ತಿ
ನಮ್ಮ ಒಳಿತಿಗೆ ಎಂದು
ನಂಬಿ ಕೊಂಡಿದ್ದಕ್ಕೆ
ಮೌಢದ ಬಟ್ಟೆಯಲ್ಲಿ
ಕಣ್ಣು ಕಟ್ಟಿಕೊಂಡಿರುವ
ಧೃತರಾಷ್ಟ್ರನಿಗೆ
ರಾಷ್ಟ್ರ ಒಪ್ಪಿಸಿದ್ದಕ್ಕೆ

ಕ್ಷಮಿಸಿಬಿಡು ಪ್ರ ಭುವೇ
ಕತ್ತಲಲ್ಲೂ ಕಾಣುವ
ಆಳ್ವಿಕೆಯ ಹುಳುಕುಗಳನ್ನು
ಬೆಳಕಲ್ಲು ಕಾಣದೆ ಹೋಗಿದ್ದಕ್ಕೆ
ಭ್ರಮೆಯ ಬೆಳಕಲ್ಲಿ
ಕತ್ತಲ ಸತ್ಯಗಳ ಮರೆಮಾಚು ತಿರುವ
ನಿಜ ಮುಖವ
ಅರಿಯದೇ ಕುರುಡಾಗಿದ್ದಕ್ಕೆ.

ಕ್ಷಮಿಸಿಬಿಡು ಪ್ರಭುವೇ
ದುಡಿಯುವವರ ಕಿಸೆಯಲ್ಲಿ
ನೀನಿಟ್ಟ ಅಜ್ಞಾತ ಕತ್ತರಿಯ
ನೋಡದೆ ಹೋಗಿದ್ದಕ್ಕೆ
ಭ್ರಮೆಯ ಬ್ರಹ್ಮ
ರಕ್ಷಣೆಗೆ ಬರಲಾರ ಎಂಬ
ಕಟು ಸತ್ಯ
ಅರಿಯದೆ ಹೋಗಿದ್ದಕ್ಕೆ

ದೇವರಹಳ್ಳಿ ಧನಂಜಯ

ಬಿಜೆಪಿ ವಿರುದ್ಧ ಸಿಪಿಎಂ‌ ಜಟಾಪಟಿಗೆ ಇಳಿದಿರುವುದು ಏಕೆ?

ತುಮಕೂರು: ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ಬಿಲ್ಡರಗಳ ಜೀತದಾಳುಗಳನ್ನಾಗಿಸಲು ರಾಜ್ಯ ಸಕಾ೯ರವು ಹೊರಟಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಗಂಭೀರ ಆರೋಪ ಮಾಡಿವೆ.

ವಲಸೆ ಕಾಮಿ೯ಕರನ್ನು ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗದಂತೆ ತಡೆಯ ಬೇಕೆಂಬ ಮುಖ್ಯ ಮಂತ್ರಿಗಳ ಆದೇಶದಂತೆ ಪೋಲಿಸ್ ಅಧಿಕಾರಿಗಳು, ಮತ್ತಿತರೆ ಅಧಿಕಾರಿಗಳು ತಮ್ಮ ರಾಜ್ಯಗಳಿಗೆ ಹೊರಟು ರೈಲುಗಳ ಸೇವೆಗಾಗಿ ಒತ್ತಾಯಿಸುತ್ತಿದ್ದವರನ್ನು ದೂರದ ಮಾದಾವರ ಬಳಿಯ ಬಿಐಇಸಿಯಲ್ಲಿ ಕೂಡಿಹಾಕಿ, ಮೊದಲಿಗೆ ಕಳುಹಿಸುವುದಾಗಿ ಹೇಳಿ, ಆನಂತರ ಸಚಿವರಾದ ಆರ್. ಅಶೋಕ್ ರವರು ಬಿಹಾರ ಮುಖ್ಯ ಮಂತ್ರಿಯವರು ಒಪ್ಪದ ಕಾರಣ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿ, ತದನಂತರ ರೈಲಿನ ವ್ಯವಸ್ಥೆ ಮಾಡಿ ತಮಗೆ ಬೇಕಾದ ಕಟ್ಟಡ ಕಾಮಿ೯ಕರಲ್ಲದವರನ್ನು ಕಳುಹಿಸಿ ಉಳಿದವರನ್ನು ಹೆದರಿಸಿ ಬೆದರಿಸಿ, ಕೆಲವರನ್ನು ಆಹಾರ ಪದಾರ್ಥಗಳ ಕಿಟ್ ನೀಡಿ ಕೆಲಸದ ಸ್ಥಳಗಳಿಗೆ ಬಸ್ಗಳಲ್ಲಿ ತುಂಬಿ ಕಳುಹಿಸಿದ್ದಾರೆ.

ನಾಳೆಯ ರೈಲನ್ನು ಹೊರತು ಪಡಿಸಿ ಉಳಿದೆಲ್ಲಾ ರೈಲುಗಳನ್ನು ರದ್ದುಪಡಿಸಲು ರೈಲ್ವೆ ಇಲಾಖೆಯನ್ನು ರಾಜ್ಯ ಸಕಾ೯ರವು ಕೋರಿದೆ. ಆ ಮೂಲಕ ಅಂತರ ರಾಜ್ಯ ವಲಸೆ ಕಾಮಿ೯ಕರಿಗಿದ್ದ ರೈಲುಗಳನ್ನು ಇಲ್ಲದಾಗಿಸಿ ವಂಚಿಸಿದೆ. ಬಿಲ್ಡರಗಳ ಹಿತವೇ ರಾಜ್ಯ ಬಿಜೆಪಿ ಸಕಾ೯ರಕ್ಕೆ ಪ್ರಧಾನವಾಗಿದೆ ಎಂಬುದನ್ನು ಸಾಬೀತು ಮಾಡಿದೆ.

ಲಾಕ್ಡೌನ್ ಆರಂಭವಾದೊಡನೆ ಅವರಿಗೆ ನೀಡಬೇಕಿದ್ದ ಕಾಮಿ೯ಕ ಕಲ್ಯಾಣ ಮಂಡಳಿಯ ಆಹಾರ ಪದಾರ್ಥಗಳ ಕಿಟ್ಗಳನ್ನು ಬಿಬಿಎಂಪಿ ಮೂಲಕ ವಿತರಣೆಗೆ ಆದೇಶ ನೀಡಿ ಮುಖ್ಯ ಮಂತ್ರಿಗಳು ಆಹಾರ ಕಿಟ್ಗಳನ್ನು ಕಟ್ಟಡ ಕಾಮಿ೯ಕರಲ್ಲದ ಬಿಜೆಪಿ ಮತದಾರರಿಗೆ ತಮ್ಮ ಶಾಸಕರು ಕಾಪೋ೯ರೇಟರ್ ಗಳ ಮೂಲಕ ವಿತರಿಸಿ ಮೊದಲಿಗೆ ವಲಸೆ ಕಾಮಿ೯ಕರನ್ನು ವಂಚಿಸಿದ್ದ ರಾಜ್ಯ ಸಕಾ೯ರವು ಅವರನ್ನು ಹತಾಶರನ್ನಾಗಿಸಿತ್ತು.

ಆನಂತರ ಕೆಲಸ, ಕೂಲಿಯಿಲ್ಲದೆ ಹಸಿದಿದ್ದ ಅವರಿಗೆ ಬಿಜೆಪಿ ಬೆಂಬಲಿತ ಅದಮ್ಯ ಚೇತನ, ರವಿ ಶಂಕರ್ ಆಶ್ರಮ ಮುಂತಾದವರಿಗೆ ಸಿದ್ಧ ಆಹಾರ ಗುತ್ತಿಗೆ ನೀಡಿ ಉಪ್ಪು ಹುಳಿ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ನೀಡಿ ಅವರನ್ನು ಮತ್ತಷ್ಟು ಹತಾಶರನ್ನಾಗಿಸಿತ್ತು. ಈ ಎಲ್ಲದರ ಪರಿಣಾಮವಾಗಿ ವಲಸೆ ಕಾಮಿ೯ಕರು ಬೇಸತ್ತು ಪೋಲಿಸರ ವಿರುಧ್ಧ ತಿರುಗಿ ಬಿದ್ದಿದ್ದರು. ಕನ್ನಡ ಇಂಗ್ಲಿಷ್ ಬಾರದ ಕಾಮಿ೯ಕರಿಗೆ ಸೇವಾ ಸಿಂಧು ಆಪ್ ಮೂಲಕವೇ ನೋಂದಾಯಿಸಲು ಹೇಳಿ ಅವರನ್ನು ವಂಚಿಸಿದ ಸಕಾ೯ರವು, ಇತರರ ಸಹಾಯ ಪಡೆದು ನೋಂದಾಯಿಸಲು ಮುಂದಾದಾಗ ಸವ೯ರ್ ಡೌನ್ ಮಾಡಿ ನೋಂದಾಯಿಸಿ ಕೊಳ್ಳಲು ಬಿಡದೆ ಇದೀಗ ರೈಲುಗಳನ್ನು ರದ್ದು ಪಡಿಸಿ ವಲಸೆ ಕಾಮಿ೯ಕರನ್ನು ಜೀತದಾಳುಗಳಂತೆ ನೆಡೆಸಿ ಕೊಳ್ಳುತ್ತಿದೆ ರಾಜ್ಯ ಸಕಾ೯ರ. ಮುಂದೆ ಕಾಮಿ೯ಕರಿಗೆ ಉಂಟಾಗುವ ಎಲ್ಲಾ ಅನಾಹುತಗಳಿಗೂ ರಾಜ್ಯ ಬಿಜೆಪಿ ಸಕಾ೯ರದ ದುರಾಡಳಿತವೇ ಕಾರಣವಾಗಿದೆ ಎಂದು ಸಮಿತಿಯ ಕಾರ್ಯದರ್ಶಿಗಳಾದ ಕೆ.ಎನ್.ಉಮೇಶ್, ಎನ್. ಪ್ರತಾಪ್ ಸಿಂಹ
ಹೇಳಿದ್ದಾರೆ.

ಕುಡಿದ ಅಮಲಲ್ಲಿ ಹಾವನ್ನೆ ಕಚ್ಚಿದ ಭೂಪ

ತುಮಕೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಹಾವನ್ನು ಕಚ್ಚಿ ಸಾಯಿಸಿರುವ ಘಟನೆ ನಡೆದಿದೆ.
https://youtu.be/OjroNT3qZZc

ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದೆ.

ಲಾಕ್ ಡೌನ್ ಸಡಿಲಿಸಿ‌ ಮದ್ಯ‌‌ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ ಹಿನ್ನೆಯಲ್ಲಿ ಪಾನಮತ್ತನಾದ ಯುವಕ ನಶೆಯಲ್ಲಿ ಹಾವನ್ನ ಕಚ್ಚಿ ಕಚ್ಚಿ ಸಾಯಿಸಿದ್ದಾನೆ.

ಕುಡಿದು ಗಾಡಿಯಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಹಾವನ್ನು ಗಾಡಿ ನಿಲ್ಲಿಸಿ ಹಿಡಿದು ಎತ್ತಿಕೊಂಡ ಯುವಕ ಮನಸೋ ಇಚ್ಚೆ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿದ್ದಾನೆ.

ಯುವಕ ಹಾವನ್ನ ಕಚ್ಚಿ ಸಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.

ಪಾವಗಡ; ರಂಜಾನ್ ಕಿಟ್ ವಿತರಣೆ

ಪಾವಗಡ: ಶಾಂತಿ, ಸೌಹಾರ್ಧಯುತವಾಗಿ ಮನೆಗಳಲ್ಲಿಯೇ ರಂಜಾನ್ ಆಚರಿಸಬೇಕು ಎಂದು ಪುರಸಭೆ ಸದಸ್ಯ ಎಂಎಜಿ ಇಮ್ರಾನ್ ಕರೆ ನೀಡಿದರು.

ಪಟ್ಟಣದ ಶಾದಿ ಮಹಲ್ ನಲ್ಲಿ ಮಂಗಳವಾರ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ದಾನಿಗಳ ಸಹಕಾರದೊಂದಿಗೆ ಜಾಮಿಯಾ ಮಸೀದಿಯಲ್ಲಿ 750 ಮಂದಿಗೆ ಪಡಿತರ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ, ಅಧಿಕಾರಿಗಳ ಸೂಚನೆಯನ್ನು ಪಾಲಿಸಬೆಕು ಎಂದು ಕರೆ ನೀಡಿದರು.

ಆರೋಗ್ಯ. ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿಯ ಶ್ರಮದಿಂದಾಗಿ ತಾಲ್ಲೂಕು ಕೊರೊನಾ ಮುಕ್ತವಾಗಿದೆ. ಜನತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ತಹಶೀಲ್ದಾರ್ ವರದರಾಜು, ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ, ಸಬ್ ಇನ್ಸ್ ಪೆಕ್ಟರ್ ನಾಗರಾಜು, ಜಾಮಿಯಾ ಮಸೀದಿ ಅಧ್ಯಕ್ಷ ಮೊಹಮದ್ ಫಜ್ಲುಲ್ಲಾ, ಮುಖಂಡ ಜಹೂರ್ ಅಹಮದ್, ಲತೀಫ್, ರಫೀಕ್, ಜಾವಿದ್, ನೌ ಜವಾನ್ ಕಮಿಟಿ ಅಧ್ಯಕ್ಷ ರಿಯಾಜ್, ಸಿಖಂದರ್, ಷಫಿ, ಮನ್ನು, ಆರ್ ಟಿ ಖಾನ್ ಇದ್ದರು.

ಮಗು ಮತ್ತು ರಂಗೋಲಿ

0

ದೇವರಹಳ್ಳಿ ಧನಂಜಯ


ಒಲೆಯ ಓಕ್ಕುಳಿಂದ
ಮೇಲೇಳುತ್ತಿರುವ ಹೊಗೆ
ವಠಾರಕ್ಕೆಲ್ಲಾ ಪಸರಿಸಿದೆ
ಅವ್ವ’ನ ಒಡಲ ಧಗೆ.

ಒಲೆ ಬಾಯಿಗೆ
ಮೈಯೊಡ್ಡಿರುವ
ಪುಳ್ಳೆ ಕನಸುಗಳು
ಉರಿವ ನಾಲಗೆ ಚಾಚುತ್ತಿವೆ

ಮಗನ ಮುಂಜಾನೆಯ ಸ್ವಪ್ನ
ಹೊಗೆ ಮೆತ್ತಿ ಮುಕ್ಕಿರಿದಿದೆ
ಸ್ವಪ್ನ ಭಂಗಕೆ ಕೇಡಾಗಿ
ಎದ್ದು ಅಳುತಿದೆ ಕೂಸು

ಉರಿದು ಬುದಿಯಾಗುವ ಮುನ್ನ
ಕನಸುಗಳ ಕಟ್ಟಿ ಹಾಕುವ ಹಠ ಅವ್ವನಿಗೆ
ಅರಳುತ್ತವೆ ಅಂಗಳದಿ ರಂಗವಲ್ಲಿ
ನಿತ್ರಾಣದ ನಾಳೆಗಳಿಗೆ ಕಸುವು ತುಂಬುತ

ಎದ್ದಾಸಿಗೆ ಮೇಲೆ ಅತ್ತು ಸುಸ್ತಾಗಿ
ಅವ್ವನರಸಿ ಅಂಗಳಕೆ ಬಂದ
ಪಿಸಿರುಗಣ್ಣಿನ ಅರಸ
ಮೂಡುವ ರಂಗೋಲಿ ಕಂಡು ಬೆರಗಾದ.

ಬೆರಳ ಓಣಿಗುಂಟ ಓಡಿವೆ
ಅಪೂರ್ಣ ಕನಸ ರೇಖೆಗಳು
ಕನಸ ಚುಂಗು ಹಿಡಿದು
ಜೀಕಿವೆ ಮಗನ ಸ್ವಪ್ನಗಳು

ಕೆನ್ನಾಲಿಗೆ ರವದಿ ಕುದಿವ ಕಾಫಿಗೆ
ಎಚ್ಚರಗೊಂಡ ಗಂಡ
ತೊಳೆಯದ ಬಾಯಿ ಚಪ್ಪರಿಸಿದ
ಈಗ ಬೆಳಗಾಯಿತು.

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್

ಜಿ ಎನ್ ಮೋಹನ್


‘ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..’ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರು

ಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ
ಖಂಡಿತಾ ಇಲ್ಲ.

ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲ

ನಾನು ಬೆಕ್ಕಸಬೆರಗಾಗಿ ಅವರ ಭಾವವನ್ನು ತನಿಖೆಗೆ ಒಳಪಡಿಸುತ್ತಾ ಇದ್ದದ್ದು ಅವರಿಗೆ ಗೊತ್ತಾಯಿತೇನೋ

ಇದು ಅಮ್ಮ ನನಗೆ ಕೊಟ್ಟ ಉಡುಗೊರೆ. ಅಮ್ಮ ಎನ್ನುವುದು ಆತ್ಮವಿಶ್ವಾಸ ಎಂದರು

ಅಮ್ಮ ಹಿಡಿದು ಹೊರಟ ಒಂದು ಲೋಟ ಹಾಗೂ ತಳ್ಳಿ ಬಂದ ಚಹಾ ಕಪ್ ಎರಡರ ನಡುವೆ ನಮ್ಮ ಮಾತು ತೂಗುತ್ತಿತ್ತು

”ಒಂದು ಲೋಟ, ಎರಡು ಸೀರೆ, ಐದು ರೂಪಾಯಿ ಹಿಡಿದುಕೊಂಡು ರಾಧಾಮೂರ್ತಿ ರಾವ್ ನಾಸಿಕ್ ನಿಂದ ಹೊರಟರು. ನಿಮ್ಮ ಬದುಕಿನ ಹಾದಿ ಬದಲಾಯಿತು ಅಲ್ಲವೇ..?” ಅನ್ನೋ ಪ್ರಶ್ನೆ ಮುಂದಿಟ್ಟಿದ್ದೆ

”ಆಕೆಯ ಹೆಸರು ಪ್ರೇಮಲತಾ ಸಾಠೆ. ಮದುವೆ ಆದಮೇಲೆ ರಾಧಾಮೂರ್ತಿ ರಾವ್” ಎಂದು ಅರುಂಧತಿ ತಿದ್ದಿದರು

ಈ ಎರಡು ಹೆಸರುಗಳ ನಡುವೆ ಒಂದು ದೊಡ್ಡ ಲೋಕವೇ ತೂಗುತ್ತಿತ್ತು
ನಾನು ಅರುಂಧತಿಯನ್ನು ಮಾತನಾಡಲು ಬಿಟ್ಟು ಬರೀ ಕಿವಿಯಾಗಿ ನಿಂತೆ

ಅರುಂಧತಿಯ ನೆನಪುಗಳ ಲೋಕಕ್ಕೆ ಕೈ ಇಟ್ಟಿದ್ದೆನೇನೋ
ಜೇನು ಗೂಡಿನಿಂದ ಎದ್ದ ನೊಣಗಳ ಹಿಂಡಿನಂತೆ ನೆನಪು ಹರಡಲಾರಂಭಿಸಿತು

”ಎಸ್ ಎಲ್ ಸಿ ಪಾಸಾದ ಮಾರ್ಕ್ಸ್ ಕಾರ್ಡ್, ಐದು ರೂಪಾಯಿ, ಎರಡು ಸೀರೆ, ಒಂದು ಲೋಟ ಹಿಡಿದು ಆಕೆ ಮನೆ ಬಿಟ್ಟು ಹೊರಡುವಾಗ ಅವಳ ಮದುವೆ ನಿಶ್ಚಯವಾಗಿತ್ತು

ಆದರೆ ಅಪ್ಪ ಶುರು ಮಾಡಿದ ಬೆಲ್ಲದ ಬ್ಯುಸಿನೆಸ್ ಪಾತಾಳ ಕಂಡಿತ್ತು
ರಾತ್ರೋರಾತ್ರಿ ಕಾರ್ಖಾನೆಗೆ ನುಗ್ಗಿದ ಯಾರೋ ಬೆಲ್ಲಕ್ಕೆ ನೀರು ಬೆರಸಿ ಹೋದರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಪ್ಪ ಪಾಪರ್ ಆಗಿದ್ದರು”

”ಮದುವೆಗೆ ವರದಕ್ಷಿಣೆ ತೆರಬೇಕಾಗಿತ್ತು. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರಿದ್ದರು
ರೈಲ್ವೆಯಲ್ಲಿ ಎಂಜಿನಿಯರ್ ಆಗಿದ್ದ ಅಪ್ಪ ಕೂಡಿಟ್ಟ ದುಡ್ಡೆಲ್ಲವೂ ಹೀಗೆ ಹೋಗಿಬಿಟ್ಟಿತ್ತು

ಅಮ್ಮ ಮದುವೆ ಬೇಡ ಎಂದಳು. ಅಜ್ಜಿಗೆ ಗುಮಾನಿ. ಇವಳು ಯಾರನ್ನೋ ಪ್ರೀತಿಸಿದ್ದಾಳೆ ಅಂತ. ಬಚ್ಚಲು ಮನೆಗೆ ಹೋಗಿ ಬರಲೂ ಕಾವಲು ಇಟ್ಟುಬಿಟ್ಟರು

ಆಗಲೇ ಅಮ್ಮ ಹೊರಟು ನಿಂತದ್ದು.

ಅಪ್ಪನ ಬಳಿ ಹೋದಳು.
ನಾನು ಕೆಲಸ ಹುಡುಕಿಕೊಂಡು ಹೊರಟಿದ್ದೇನೆ. ಯಾರಾದರೂ ನನ್ನನ್ನು ತಡೆದರೆ ಇನ್ನೆಂದೂ ವಾಪಸ್ ಬರುವುದಿಲ್ಲ, ತಡೆಯದಿದ್ದರೆ ಖಂಡಿತಾ ಬರುತ್ತೇನೆ ಎಂದವಳೇ ಹೊರಟೇ ಬಿಟ್ಟಳು”

”ಮುಂಬೈಗೆ ಹೋದವಳೇ ತನ್ನ ನೆಂಟರ ಮನೆ ಬಾಗಿಲು ತಟ್ಟಿದಳು
ಕಪ್ ನಲ್ಲಿ ಚಹಾ ಬಂತು. ಅಮ್ಮ ಇದ್ದ ಕಥೆಯೆಲ್ಲಾ ಹೇಳಿ ಕೆಲಸ ಹುಡುಕಲು ಬಂದಿದ್ದೇನೆ ಎಂದರು

ಆಗ ಆ ಮನೆಯವರು ನಿಂಗೆ ಇಲ್ಲಿ ಉಳಿಯಲು ಜಾಗ ಇಲ್ಲ ಎಂದರು

ಅಮ್ಮ ಚಹಾ ಕಪ್ ತಳ್ಳಿದವರೇ ಚಹಾ ಕುಡಿಯೋದಿಕ್ಕೆ ಅಂತ ಇನ್ನೊಂದು ಸಲ ಬರುತ್ತೇನೆ ಎಂದು ಹೊರಟುಬಿಟ್ಟರು”

ನಾನು ನಿಂತಿದ್ದದ್ದು ಶಂಕರ್ ನಾಗ್ ಹಾಗೂ ಅರುಂಧತಿ ಪ್ರೀತಿಯಿಂದ ಸೃಷ್ಟಿಸಿದ ಫಾರ್ಮ್ ಹೌಸ್ ನಲ್ಲಿ.

ಈ ಎಲ್ಲಾ ಮಾತನ್ನು ಆಡುತ್ತಾ ಆಡುತ್ತಲೇ ನಾನು ಅಲ್ಲಿದ್ದ ಕಟ್ಟೆಯ ಮೇಲೆ ಕೂರಲು ಹೋದೆ.

ಅರೆ! ಅದು ನಾಗರಕಟ್ಟೆ!

ಶಂಕರ್ ನಾಗ್ ರ ಊರು ನಾಗರಕಟ್ಟೆ. ಆ ಊರೇ ಎಲ್ಲಿ ಬಂದು ನೆಲೆಸಿದೆಯೇನೋ ಎನ್ನುವಂತೆ ಫಾರ್ಮ್ ಹೌಸ್ ನಾಗರಕಟ್ಟೆಯನ್ನು ಹೊತ್ತು ನಿಂತಿತ್ತು.

ತಕ್ಷಣ ನನ್ನ ಮಾತು ಶಂಕರ್ ಮತ್ತು ಅರುಂಧತಿ ಮದುವೆಯ ಕಡೆ ಹೊರಳಿತು.

‘ನಿಮ್ಮಿಬ್ಬರ ಮದುವೆಗೆ ಬಂದದ್ದು ಬೆರಳೆಣಿಕೆಯಷ್ಟು ಜನ’ ಎಂದೆ.

ಅರುಂಧತಿ ತಕ್ಷಣ ತಮ್ಮ ನೆನಪುಗಳ ಲೋಕಕ್ಕೆ ಜಾರಿಕೊಂಡರು.

ನಾವಿಬ್ಬರೂ ಒಟ್ಟಿಗೆ ಓಡಾಡಲು ಶುರು ಮಾಡಿದಾಗ ನನಗೆ ೧೭ ಅವನಿಗೆ ೧೯ ವರ್ಷ. ಆರು ವರ್ಷ ಓಡಾಡಿದ ನಂತರ ಒಂದು ದಿನ ಹೀಗೆಯೇ ಮಾತಾಡುತ್ತ ಕುಳಿತಿದ್ದಾಗ ಎಷ್ಟೊಂದು ವರ್ಷದಿಂದ ನಿನ್ನ ಜೊತೆ ಓಡಾಡಿದ್ದೇನೆ. ನಾವಿಬ್ಬರೂ ಯಾಕೆ ಮಾಡುವೆ ಮಾಡ್ಕೊಬಾರದು ಅಂದ.

ಇನ್ನೆರಡು ದಿನಕ್ಕೆ ಅವನ ಹುಟ್ಟಿದ ಹಬ್ಬ ಇತ್ತು. ಸರಿ ನಾಳಿದ್ದು ಮಾಡಿಕೊಳ್ಳೋಣ ಎಂದೆ. ಅವನು ಬೆಕ್ಕಸಬೆರಗಾದ ಟೈಮ್ ಇಲ್ವಲ್ಲ ಅಂತ.

ಹಾಗಾದ್ರೆ ಜುಲೈನಲ್ಲಿ ನನ್ನ ಬರ್ತ್ ಡೇ ಬರುತ್ತಲ್ಲಾ ಆಗ ಆಗೋಣ ಅಂತ ಬದಲಿ ದಿನಾಂಕ ಹೇಳಿದೆ. ಶಂಕರ್ ಒಂದು ನಿಮಿಷ ಯೋಚನೆ ಮಾಡಿದ. ಇವಳು ಮನಸ್ಸು ಬದಲಾಯಿಸಿಬಿಟ್ರೆ ಅಂತ ಬೇಡ ನಾಲಿದ್ದೆ ಆಗಿಬಿಡೋಣ ಅಂದ. ಮದುವೆ ಆಗಿ ಹೋಯಿತು.

ತಮಾಷೆ ಏನು ಗೊತ್ತಾ. ನಮ್ಮ ಅಪ್ಪ ಅಮ್ಮನಿಗೆ ಫೋನ್ ಮಾಡಿ ನಾಳಿದ್ದು ನಮ್ಮ ಮದುವೆ ಬಂದುಬಿಡಿ ಅಂತ ಕರೆದ್ವಿ ಅಂತ ಜೋರಾಗಿ ನಕ್ಕರು.

ಅನಂತ್ ನಾಗ್ ಅಂತೂ ಕೊನೆವರೆಗೂ ನಂಬಲಿಲ್ಲ.

ಶಂಕರ್ ನಾಗ್ ಕಥೆ ಇನ್ನೂ ವಿಚಿತ್ರ ಇತ್ತು. ಮದುವೆ ದಿನ ಪತ್ರಿಕೆಗೆ ಸಂದರ್ಶನ ಕೊಡ್ತಾ ಇದ್ದರು. ಇಂಟರ್ವ್ಯೂ ಮಧ್ಯೆ ಒಂದು ಬ್ರೇಕ್ ತಗೋಳ್ಳೋಣ. ಇಲ್ಲೇ ಆರ್ಯ ಸಮಾಜದಲ್ಲಿ ನನ್ನ ಮದುವೆ ಇದೆ. ಹೋಗಿ ಬಂದುಬಿಡ್ತೀನಿ. ಆಮೇಲೆ ಕಂಟಿನ್ಯೂ ಮಾಡೋಣ ಎಂದಿದ್ದ. ಸಂದರ್ಶನ ಮಾಡ್ತಿದ್ದವರು ಮೂರ್ಛೆ ಹೋಗೊದೊಂದು ಬಾಕಿ ಎಂದರು.

ನಾನು ಆರು- ಅರುಂಧತಿ ರಾವ್ ಹಾಗೂ ಅರುಂಧತಿ ನಾಗ್ ಈ ಮೂವರ ಜೊತೆಯೂ ಏಕ ಕಾಲದಲ್ಲಿ ಮಾತನಾಡುತ್ತಿದ್ದೆ.

ಹಾಗಾಗಿ ಅರುಂಧತಿ ಒಮ್ಮೆ ತಮ್ಮ ಬಾಲದಲ್ಲಿ ಕಳೆದು ಹೋಗುತ್ತಾ, ಇನ್ನೊಮ್ಮೆ ಮುಂಬೈ ನ ರಂಗಭೂಮಿಯಲ್ಲಿ ತಾನು, ಶಂಕರ್ ನಾಗ್ ಹೇಗೆ ಸ್ಪರ್ಧೆ ನಡೆಸುತ್ತಿದ್ದರು ಎಂದು ಹೇಳುತ್ತಾ ಮಗದೊಮ್ಮೆ ಶಂಕರ್ ಇಲ್ಲದೆ ಹೋದದ್ದರ ಬಗ್ಗೆ ನಿಟ್ಟುಸಿರಾಗುತ್ತಾ ಇದ್ದರು.

ನಮ್ಮ ಆರು ವರ್ಷಗಳ ಓಡಾಟ, ಒಡನಾಟ ನಮ್ಮಿಬ್ಬರನ್ನೂ ಅದ್ಭುತ ಗೆಳೆಯರನ್ನಾಗಿ ಮಾಡಿಬಿಟ್ಟಿತ್ತು. ಅವನಿಗೆ ಗಿರೀಶ್ ಕಾರ್ನಾಡರ ಸಿನೆಮಾಗೆ ಸಹಾಯಕ ನಿರ್ದೇಶಕ ಆಗಬೇಕು ಎನ್ನುವ ಆಸೆ ಇತ್ತು. ಹಾಗಾಗಿ ಅವರನ್ನು ಕೇಳಿದ. ಆದರೆ ಅವರು ನನ್ನ ಸಿನೆಮಾಗೆ ಹೀರೊ ಆಗು ಎಂದರು. ಇವನಿಗೆ ಶಾಕ್ ಆಗಿ ಹೋಯಿತು. ಮುಂಬೈನಲ್ಲಿದ್ದ ನನ್ನನ್ನ ಕರೆಸಿ ಅರು, ನೋಡು ಹೀಗೆ ಅಂದ ನಾನು ಆಗ ನೀನು ಆಕ್ಟಿಂಗ್ ಮಾಡ್ತಾನೇ ನಿರ್ದೇಶನ ಕಲೀಬಹುದಲ್ಲಾ ಅಂದೆ. ಒಪ್ಪಿಕೊಂಡ.

ಅವನು ‘ಒಂದಾನೊಂದು ಕಾಲದಲ್ಲಿ’ ಸಿನೆಮಾಗೆ ಹೆಜ್ಜೆ ಇಟ್ಟದ್ದು ಹೀಗೆ. ಅಮೇಲಿನದ್ದು ಎಲ್ಲರಿಗೂ ಗೊತ್ತಿರುವ ಕಥೆ.

ಆದರೆ ಎಲ್ಲರಿಗೂ ಗೊತ್ತಿಲ್ಲದಿರುವ ಕಥೆಯೂ ಅರುಂಧತಿಯವರ ಬಳಿ ಸಾಕಷ್ಟಿದೆ. ಅದು ಅವರು ಶಂಕರ್ ಇಲ್ಲವಾದ ನಂತರ ಬದುಕನ್ನು ಕಟ್ಟಿಕೊಂಡ ಬಗೆ.

ದಾವಣಗೆರೆ ಎಂದು ಏನೋ ಹೇಳಲು ಬಾಯಿ ತೆರೆದೆ.

I don’t wish to talk about it… All of a sudden I lost so much. It was a turning point in my life. I lost a very good friend, I lost a companion….

ಹೀಗೇನಾದರೂ ಆದಾಗ ಒಂದು ಕುಟುಂಬ
ದಿಕ್ಕಾಪಾಲಾಗಿ ಹೋಗುತ್ತದೆ. ಬಹುಶಃ ಇಷ್ಟೇ ನಾನುಪಡೆದುಕೊಂಡು ಬಂದದ್ದು ಅನ್ನಿಸುತ್ತೆ… ಆದರೆ ಅವನು ನನಗೆ ಮಾತ್ರ ಎಲ್ಲಾ ಆಗಿರಲಿಲ್ಲ ಅಂತ ಆಗ
ಗೊತ್ತಾಯ್ತು.

ಇವತ್ತಿಗೂ ಸಹ ಅವನ ನೆನಪನ್ನು ಎಷ್ಟು ಹಸಿರಾಗಿ ಉಳಿಸಿಕೊಂಡಿದ್ದಾರೆ ಜನ, ಅವನಿಗೆ ಕೊಡುತ್ತಿದ್ದ ಪ್ರೀತಿ ಗೌರವಗಳನ್ನು ನನಗೂ ಕೊಟ್ಟಿದ್ದಾರೆ… I would not get this in any othe rstate.

ನಾನು ಇಷ್ಟು ಧೈರ್ಯವಾಗಿಇಲ್ಲಿ ಒಬ್ಬಳೇ ಬದುಕು ಸಾಗಿಸಿದ್ದೆನೆ ಎಂದರೆ, It is the love from the people of the state that has made it possible ಎಂದು ಭಾವುಕರಾದರು.

ಪರಿಸ್ಥಿತಿ ತಿಳಿಯಾಗಿಸಲು ‘ನೀವು ಕನ್ನಡವನ್ನು ಎರಡು ಬಾರಿ ಕಲಿತಿರಿ’ ಎಂದೆ.

ಅದರ ಹಿಂದೆ ಕಥೆಯೊಂದಿತ್ತು. ಶಂಕರ್ ಬೆಂಗಳೂರಿಗೆ ಬಂದು ನೆಲಸಿದಾಗ ಅರುಂಧತಿ ಭಾಷೆ ಗೊತ್ತಿಲ್ಲದೇ ಬೀದಿ ಬೀದಿ ಸುತ್ತಿ, ಅಂಗಡಿಗಳಲ್ಲಿ, ಜನಸಂದಣಿಯಲ್ಲಿ ನಿಂತು ಕನ್ನಡದ ಪದಗಳನ್ನು ಹೆಕ್ಕಿದ್ದರು.

ಆ ನಂತರ ಅವರು ಮತ್ತೆ ಕನ್ನಡ ಕಲಿಯಬೇಕಾಗಿ ಬಂತು. ಅದು ಆ ಅಪಘಾತದ ನಂತರ. ಅವರ ಹಲ್ಲು ಮುರಿಯಿತು. ದವಡೆ ಕೂಡಲಿಲ್ಲ. ಆಗ ಕನ್ನಡವನ್ನು ಉಚ್ಚರಿಸಲು ಮತ್ತೆ ಕಲಿಯಬೇಕಾಯಿತು.

‘ಬರೀ ಕನ್ನಡವನ್ನು ಎರಡನೆಯ ಬಾರಿ ಕಲಿಯಲಿಲ್ಲ ನಾನು ಬದುಕುವುದನ್ನೂ ಎರಡನೆಯ ಬಾರಿಗೆ ಕಲಿತೆ’ ಎಂದು ಅರುಂಧತಿ ನನ್ನನ್ನು ತಿದ್ದಿದರು.

‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ ಎನ್ನುವುದು ‘ಯಯಾತಿ’ ನಾಟಕದ ಕಾಡುವ ಸಾಲುಗಳು.

ಅರುಂಧತಿಗೆ ಇನ್ನಿಲ್ಲದಷ್ಟು ಕನಸುಗಳಿದ್ದವು. ತಮಗಾಗಿಯೂ. ಶಂಕರ್ ಗಾಗಿಯೂ ಅದನ್ನು ಗಟ್ಟಿ ಮನಸ್ಸಿನಿಂದ ನನಸಾಗಿಸುತ್ತಾ ಬಂದರು.

‘ರಂಗ ಶಂಕರ’ ಅದರಲ್ಲೊಂದು.

ನಾನು ಅರುಂಧತಿಯತ್ತ ತಿರುಗಿದೆ. ನೂರೆಂಟು ರೀತಿಯ ಗಿಡ ಮರಗಳು, ಬಾತುಕೋಳಿಗಳು, ನಾಟಕದಲ್ಲಿ ಬಳಸಿದ ಕುದುರೆ ಗಾಡಿಗಳು, ಸಿನೆಮಾದ ಪ್ರಾಪ್ಸ್ ಗಳು ಎಲ್ಲವನ್ನೂ ಹೊತ್ತಿದ್ದ ಆ ಫಾರ್ಮ್ ಹೌಸ್ ನ ಅಂಗಳ ಹಸಿರನ್ನು ಮುಕ್ಕಳಿಸುತ್ತಿತ್ತು.

ಅರುಂಧತಿಯೂ ಥೇಟ್ ಹಾಗೆಯೇ ಕನಸುಗಳ ದಾರಿಯಲ್ಲಿಯೂ ನಡೆದಿದ್ದರು… ಬೆಳಕಿಲ್ಲದ ದಾರಿಯಲ್ಲಿ ನಡೆದೂ ಬೆಳಕನ್ನು ತಮ್ಮದಾಗಿಸಿಕೊಂಡಿದ್ದರು.