Friday, February 27, 2026
Google search engine
Home Blog Page 240

ಗ್ರಾಮಾಂತರ ಕ್ಷೇತ್ರದ ಬಡವರಿಗೆ ಉಚಿತ ಔಷದ: ಶಾಸಕ ಗೌರಿ ಶಂಕರ್

Tumkuru: ಹಳ್ಳಿಗಳಲ್ಲಿ ಯಾರಿಗಾದರೂ ಔಷಧಿ ಕೊಳ್ಳದೆ ಆಗದಿದ್ದಲ್ಲಿ ಅಂತಹವರು ಸ್ಥಳೀಯ ನಮ್ಮ ಜೆಡಿಎಸ್ ಪಕ್ಷದ ಮುಖಂಡರ ಬಳಿ ಡಾಕ್ಟರ್ ನೀಡಿರುವಂತಹ ಚೀಟಿಯನ್ನು ತೆಗೆದುಕೊಂಡು ಹೋಗಿ ನೀಡಿದರೆ ಅಂಥವರಿಗೆ ಉಚಿತವಾಗಿ ಔಷಧಿ ತರಿಸಿಕೊಡುವುದಾಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ತಿಳಿಸಿದರು.

ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ಭಯ ಬೀಳುವುದು ಬೇಡ. ಔಷಧಿ ಕೊಡುವ ಕೆಲಸ ಮಾಡಲಾಗುವುದು ಎಂದರು.

ಗ್ರಾಮಾಂತರ ಕ್ಷೇತ್ರದ ಕುಟುಂಬಗಳಿಗೆ 10 ಕೆಜಿ ದಿನಸಿ ಪದಾರ್ಥಗಳ ಕಿಟ್ ಹಾಗೂ 5 ಕೆಜಿ ತರಕಾರಿ ಹಣ್ಣು ವಿತರಿಸಲಾಗಿದೆ. ಯಾರು ಕೂಡ ಉಪವಾಸದಿಂದ ಇರಬಾರದೆಂದು ನಿರ್ಧರಿಸಿ ಈ ಕೆಲಸ ಮಾಡಲಾಗುತ್ತಿದೆ ಎಂದರು.

ಸಾಲದ ಸಂಕಟ ಒಂಥರಾ ಹೊರ ಹೊಮ್ಮದ ಗಾಯ..!!

1

ಶಂಕರ್ ಬರಕನಹಾಲ್


ತಿನ್ನಲು ಅನ್ನವಿದೆ
ಕುಡಿಯಲು ನೀರಿದೆ
ಉಸಿರಾಡಲು ಗಾಳಿಯಿದೆ
ನನಗೆ ಅರಿವಿಲ್ಲದೆ
ನಾನೇ ಸಾಲ ಮಾಡಿಕೊಂಡಿದ್ದೇನೆ.

ಸೇವೆಯ ಹೆಸರಿನಲ್ಲಿ ವ್ಯಾಪರವಿದೆ
ಕಟ್ಟುವ ವಾರದ ಕಂತುಗಳಿಗೆ ಅವಕಾಶವಿದೆ
ಕುತೂಂಡು ಕರೆಗಿಸಿದ್ದಕ್ಕೆ ಸಾಕ್ಷಿಯಿದೆ
ದೇಹ ದಂಡಿಸದೇ ತೀರದ ಸಾಲಕ್ಕೆ ನನ್ನನ್ನೇ ನಾ ಅಡವಿಟಿದ್ದೇನೆ.

ಕಾರಣವಿದೆ ಕೊಟ್ಟ ಸಾಲಕ್ಕೆ
ಕಟ್ಟಬೇಕಾದ ಬಡ್ಡಿಗೆ
ದಿನ ದುಡಿಯುವ ಬೆವರಹನಿಗೆ
ನಾ ಕಟ್ಟುವ ಕಂತಿಗೆ.

ಶ್ರೀಮಂತರಿಗೆ ದುಡಿದು ಧೂಳಾಗಿ
ಗುನುಗುಡುವ ಮಾತುಗಳಿಗೆ
ದಿನಗೂಲಿ ಇಲ್ಲದೇ ಈ ಬದುಕ ಸಾಲಕ್ಕೆ
ಊರು ಬಿಡುವ ಪರಿಯಾಗಿದೆ

ತನ್ನ ಕಲಿಯುವ ಮನಸ್ಸು
ತನ್ನ ಸಾಲವ ಹೊತ್ತು
ತುತ್ತೂ ಕೂಳಿಗೆ
ನಮ್ಮೊದಿಗೆ ಹೊರಟಿದೆ
ಕಲಿಯುವ ವಯಸ್ಸಿನಲ್ಲಿ.

ನಾ ಮಾಡಿದ ಸಾಲ ತೀರಿಸಾಲಗದೇ
ನಾ ಮಂಡೇ ಬಿಟ್ಟಿರಿವೇ
ನನ್ನ ಸಾಲ ಮನ್ನಾ ಮಾಡು
ಸ್ವಾಮಿ ಮಂಜುನಾಥ.

ಕೊರೊ‌ನಾ ಶವ ಹಸ್ತಾಂತರ: ಹೊಣೆ ಯಾರು?

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಸಾವಿಗೀಡಾದ ಕೊರೊನಾ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ವೈದ್ಯರು ಪರೀಕ್ಷಾ ವರದಿ ಬರುವ ಮುನ್ನವೇ ಸಂಬಂಧಿಕರಿಗೆ ನೀಡಿದ ನಂತರ ಸಾರ್ವಜನಿಕವಾಗಿ ಈಗ ಕೇಳಿಬಂದಿರುವ ಹಲವು ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರ ನೀಡಬೇಕಾಗಿದೆ.

ಕೊರೊನೊ ಸೋಂಕಿತ ಹಾಗೂ ಸಂಶಯದ ವೇಳೆ ಸಾವಿಗೀಡಾದ ಪ್ರಕರಣಗಳಲ್ಲಿ ಶವ ವಿಲೇವಾರಿ ಬಗ್ಗೆ ಮಾನದಂಡಗಳನ್ನು ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ ನೀಡಿವೆ. ಈ ಮಾನದಂಡಗಳನ್ನು ಇಲ್ಲಿ ಏಕೆ ಪಾಲಿಸಲಿಲ್ಲ?

ಇಬ್ಬಿಬ್ಬರು ವೈದ್ಯರು ಸ್ಯಾಬ್ ಪರೀಕ್ಷೆ ನಡೆಸಿದ್ದು ಈ ಆವಾಂತರಗಳಿಗೆ ಕಾರಣ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ನನಗೂ, ಜಿಲ್ಲಾಸ್ಪತ್ರೆಗೂ ಸಂಬಂಧವೇ ಇಲ್ಲ. ಈ ಘಟನೆ ಹೇಗಾಯಿತು ಎಂಬುದಕ್ಕೆ ಅವರನ್ನೇ (ಜಿಲ್ಲಾ ಶಸ್ತ್ರಚಿಕಿತ್ಸಕರು) ಕೇಳಬೇಕು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಿದಿನ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಕೊರೊನಾ ರೋಗಿಗಳ ಮಾಹಿತಿ, ಸಾವಿನ ಕುರಿತು ಲೆಕ್ಕ ನೀಡುವುದು ಜಿಲ್ಲಾ ಆರೋಗ್ಯಾಧಿಕಾರಿ ಕೆಲಸ. ಹೀಗಿದ್ದರೆ ಇಷ್ಟು ದಿನ ಜಿಲ್ಲಾಸ್ಪತ್ರೆಯ ಮೇಲೆ ಇವರು ನಿಗಾವಹಿಸಿರಲಿಲ್ಲವೇ?

ಇದೇ ಅಧಿಕಾರಿ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡ ರಚಿಸಿರುವುದಾಗಿ ಹೇಳಿದ್ದಾರೆ. ಅಂದ ಪಕ್ಷದಲ್ಲಿ ತಂಡ ರಚಿಸಲು ಅಧಿಕಾರ ಇದೆಯೇ? ಈ ತಂಡದಲ್ಲಿ ಯಾರಿದ್ದಾರೆ ಎಂಬುದನ್ನು ಹೇಳಬೇಕಾಗಿದೆ.

ಇಬ್ಬಿಬ್ಬರು ವೈದ್ಯರು ರಕ್ತ, ಸ್ವ್ಯಾಬ್ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು, ಇದು ಒಬ್ಬರಿಗೊಬ್ಬರಿಗೆ ಗೊತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರೂ ಸಹ ಹೇಳಿಕೆ ನೀಡಿದ್ದಾರೆ. ಗಂಭೀರ ಸೋಂಕಿನ ಚಿಕಿತ್ಸೆ ನೀಡುವ ವಿಚಾರದಲ್ಲೂ ಒಬ್ಬ ತೀವ್ರ ಸೋಂಕಿನಿಂದ ಬಳಲುತ್ತಿದ್ದ ರೋಗಿಯ ಮಾಹಿತಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಇರಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರ ಏನು?

ಕಾರ್ಯಭಾರದ ಒತ್ತಡದ ಕಾರಣ ಜಿಲ್ಲಾ ಶಸ್ರ್ತ ಚಿಕಿತ್ಸಕರು ಯಾವಾಗಲೂ ಆಸ್ಪತ್ರೆಯಲ್ಲಿ ಕೂರಲು ಸಾಧ್ಯವಿಲ್ಲ. ಜಿಲ್ಲಾಸ್ಪತ್ರೆಯ ಹಾಗೂ ಹೋಗು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಸ್ಥಾನಿಕ ವೈದ್ಯಾಧಿಕಾರಿಯ ಕೆಲಸ ಏನು? ಇವರ ಗಮನಕ್ಕೂ ತಾರದೇ ಶವವನ್ನು ಕೊಡಲಾಯಿತೇ? ಪರೀಕ್ಷೆ ಎರಡು ಸಲ ನಡೆಸಿದ್ದು ಇವರಿಗೂ ಗೊತ್ತಿರಲಿಲ್ಲವೇ? ಇಡೀ ಆಸ್ಪತ್ರೆಯನ್ನೇ ಕೋವಿಡ್ ಎಂದು ಪರಿಗಣಿಸಲಾಗಿದೆ. ಹೀಗಿದ್ದು, ಒಬ್ಬ ಸಂಶಯಿತ ವ್ಯಕ್ತಿ, ಅದರಲ್ಲೂ ಆಸ್ಪತ್ರೆಯಲ್ಲೇ ಸಾವಿಗೀಡಾದ ವ್ಯಕ್ತಿಯ ಬಗ್ಗೆ ನಿಗಾ ವಹಿಸಿರಲಿಲ್ಲವೇ? ಶವವನ್ನು ಹೀಗೆ ತರಾತುರಿಯಲ್ಲಿ ಚಿಕಿತ್ಸೆ ನೀಡಿದ ಹಿಸ್ಟರಿ ನೋಡದೇ ಕೊಡಲು ಅನುಮತಿ ನೀಡಿದ್ದು ಹೇಗೆ? ಇಲ್ಲ, ಇವರ ಗಮನಕ್ಕೂ ಬಾರದೇ ಶವ ನೀಡಲಾಗಿತ್ತೇ?

ಏಕಾಗಿ ಈ ಅವಸರ ತೋರಿದರು ಎಂಬುದಕ್ಕೆ ಉತ್ತರ ದೊರಕಬೇಕಾಗಿದೆ.

ಈ ಸೋಂಕು ಚೈನ್ ಲಿಂಕ್ ತರಾ ಸಂಬಂಧ ಹೊಂದಿದೆ. ಶವ ನೀಡಿದ ತಪ್ಪಿಗೆ ಈಗ ಸ್ವ್ಯಾಬ್ ಪರೀಕ್ಷೆ ನಡೆಸಬೇಕಾದವರ, ಕ್ವಾರಂಟೈನ್ ಗೆ ಒಳಪಡಿಸುವರ ಖರ್ಚು ವೆಚ್ಚದಿಂದ ಸರ್ಕಾರದ ಖಜಾನೆಗೆ ಆಗುವ ನಷ್ಟ ಭರಿಸುವವರು ಯಾರು? ಆ ಭಾಗದ ನಾಲ್ಕೈದು ಊರುಗಳ ರೈತರ ಪಾಡು ಹೇಳ ತೀರದು. ಈ ಆರ್ಥಿಕ ನಷ್ಟಕ್ಕೆಲ್ಲ ಹೊಣೆ ಯಾರನ್ನು ಮಾಡಬೇಕು?

ಒಂದು ಸಣ್ಣ ತಪ್ಪು ಎಷ್ಟೆಲ್ಲ ನಷ್ಟಕ್ಕೆ ಕಾರಣವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಈ ಮೊದಲು ಸಾವಿಗೀಡಾದ ಕರೊನಾ ಸೋಂಕಿತರಲ್ಲದವರ ಶವವನ್ನು ನಾನು ಹೇಳಿದರೂ ಕೊಡಲಿಲ್ಲ ಎಂದು ಮಾಜಿ ಶಾಸಕರೊಬ್ಬರು ಹೇಳಿದ್ದಾರೆ. ಇದೂ ಕೂಡ ತಪ್ಪೇ. ವೈದ್ಯರ ಮೇಲೆ ಒತ್ತಡ ಹೇರುವುದನ್ನು ರಾಜಕಾರಣಿಗಳು ಬಿಡಬೇಕು. ನನಗೇ ಮಾಹಿತಿ ನೀಡಿಯೇ ಶವ ಕೊಡಬೇಕೆಂಬ ಹಾಲಿ ಶಾಸಕರ ಹೇಳಿಕೆಯೂ ತಪ್ಪೇ. ವೈದರಿಗೆ ಒತ್ತಡ ಇಲ್ಲದೇ ಕೆಲಸ ಮಾಡಲು ಅವಕಾಶ ಕೊಡಬೇಕು. ರಾಜಕಾರಣಿಗಳು ಹೇಳಿದರೆ ಮಾತ್ರ ಶವ ಬೇಗ ಸಿಗಲಿದೆ ಎಂಬ ಸಾರ್ವಜನಿಕ ಅಭಿಪ್ರಾಯ ತಪ್ಪಬೇಕು.

ಮಂಡ್ಯ ಪ್ರಕರಣದಲ್ಲೂ ಪ್ರಾಥಮಿಕ ಆಸ್ಪತ್ರೆಯ ವೈದ್ಯರೊಬ್ಬರು ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಆಂಬುಲೆನ್ಸ್ ನಲ್ಲಿ ಮುಂಬೈನಿಂದ ಬಂದ ಶವ ನೋಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಜನರು ಸಾಯುತ್ತಿದ್ದಾರೆ ಎಂದರೂ ಹಳ್ಳಿಗೆ ಬಂದು ನೋಡದ ವೈದ್ಯರು ಸತ್ತ ಶವ ನೋಡಲು ಹೋಗಿದ್ದಾರೆ ಎಂದರೆ ಇದರ ಹಿಂದಿರುವ ರಾಜಕೀಯ ಒತ್ತಡವನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಲ್ಲರು.

ಪ್ರಾಣವನ್ನೇ ಒತ್ತೆ ಇಟ್ಟು ಪರೀಕ್ಷೆ ನಡೆಸುವ, ರೋಗಿಗಳನ್ನು ನೋಡಿಕೊಳ್ಳುವ ವೈದ್ಯರು, ಸಿಬ್ಬಂದಿ ಅಧಿಕಾರಿಗಳು ಮಾಡುವ ತಪ್ಪುಗಳಿಂದಾಗಿ ಮಾ‌ನಸಿಕ ಹಿಂಸೆಗೆ ಸಿಕ್ಕುವಂತಾಗುತ್ತದೆ. ಹೀಗಾಗಿ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ. ಶವ ಕೊಡುವ ಮುನ್ನ ತುಸು ಯೋಚಿಸಿದ್ದರೆ ಇಷ್ಟೆಲ್ಲ ಅವಾಂತರ, ಮಾನಸಿಕ ಬೇಸರ, ಒತ್ತಡಗಳನ್ನು ತಡೆಯಬಹುದಿತ್ತು ಅಲ್ಲವೇ?

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮೇಲೆ ಜವಾಬ್ದಾರಿಯೂ ಹೆಚ್ಚಿದೆ ಅನ್ನುವುದನ್ನು ಮರೆಯಬಾರದು.ಇಷ್ಟೆಲ್ಲದರ ನಡುವೆಯೂ, ಜೀವವನ್ನೆ ಒತ್ತೆ ಇಟ್ಟು ನಮಗಾಗಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕರೊನಾ ವಾರಿಯರ್ಸ ಗಳಿಗೆ ಒಂದು ಚಪ್ಪಾಳೆ ತಟ್ಟೋಣವೇ?

ತುಮಕೂರಿನಲ್ಲಿ ಮತ್ತೇ ಇಬ್ಬರಿಗೆ ಕೊರೊನಾ ಸೋಂಕು

0

ತುಮಕೂರು: ತುಮಕೂರಿನಲ್ಲಿ ಶನಿವಾರ ಮತ್ತೇ ಇನ್ನಿಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ಈ ಇಬ್ಬರೂ ಈಗಾಗಲೇ ಸೋಂಕು ತಗುಲಿಸಿಕೊಂಡಿದ್ದ ನೆರಮನೆಯವರು. ಸೋಂಕಿತರ ಸಂಪರ್ಕಕ್ಕೆ ಬಂದಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಬ್ಬರು ಗಂಡ ಹೆಂಡತಿಯರಾಗಿದ್ದು, ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇವರೊಂದಿಗೆ ತುಮಕೂರಿನಲ್ಲಿ ಸೋಂಕಿತರ ಸಂಖ್ಯೆ 7ಕ್ಕೇರಿದಂತಾಗಿದೆ.

ವಯಸ್ಸಾದವರು, ಮಕ್ಕಳು ಮನೆಯವರು ಮನೆಯಿಂದ ಆಚೆ ಬಾರದಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ.

ಅಮ್ಮ ರಿಟೈರ್ ಆಗ್ತಾಳೆ..

ಜಿ ಎನ್ ಮೋಹನ್


ಅಮ್ಮ ರಿಟೈರ್ ಆಗ್ತಾಳೆ..
ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು

ಅಮ್ಮ.. ರಿಟೈರ್ ಆಗ್ತಾಳೆ..??

ಮತ್ತೆ ಮತ್ತೆ ಓದಿಕೊಂಡೆ

ಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ ನನಗೆ ಯಾವುದೋ ಮೂಲೆಯಲ್ಲಿ ಅಡಗಿಕೊಂಡಿದ್ದ ಈ ಪುಸ್ತಕ ಕಂಡಿತು.

ತಕ್ಷಣ ಯಾರೋ ನನ್ನ ಅಂಗಿ ಜಗ್ಗಿದಂತಾಯ್ತು. ಒಂದು ಕ್ಷಣ ಅಲ್ಲೇ ನಿಂತೆ

ಪುಸ್ತಕದ ಹೆಸರು ‘ಅಮ್ಮ ರಿಟೈರ್ ಆಗ್ತಾಳೆ’.

ಇದನ್ನು ಆಗಿನ ಕಾಲದ ಪತ್ರಕರ್ತೆ, ಖಾದ್ರಿ ಶಾಮಣ್ಣನವರ ಗರಡಿಯಲ್ಲಿ ಪಳಗಿದ್ದ, ಜಿ ನಾರಾಯಣರ ಜೊತೆ ಪತ್ರಿಕಾ ಅಕಾಡೆಮಿಯಲ್ಲೂ ಇದ್ದ ಸುಶೀಲಾ ಕೊಪ್ಪರ್ ಅನುವಾದಿಸಿದ್ದು

‘ಆಯೀ ರಿಟಾಯರ್ ಹೋತೆಯ’ ಎನ್ನುವ ಮರಾಠಿ ನಾಟಕದ ಅನುವಾದ ಅದು.

ಅಶೋಕ್ ಪಾಟೋಳೆ ಎಂದರೆ ಮರಾಠಿ ರಂಗಭೂಮಿಯಲ್ಲಿ ಒಂದು ಹೊಸ ರೀತಿಯ ಸಂವೇದನೆ ಬೆಸುಗೆ ಹಾಕಿದವರು.

ಅದಕ್ಕೂ ಹೆಚ್ಚಾಗಿ ಹೆಣ್ಣಿನ ಮನಸ್ಸನ್ನು ರಂಗಭೂಮಿಗೆ ತಂದವರು. ‘ಸದ್ದಿಲ್ಲದೇ ಮಲಗಿಕೊಳ್ಳಿ ಇನ್ನು’ ‘ಅಕ್ಕಿ ಆರಿಸ್ತಾ ಆರಿಸ್ತಾ’ ‘ಆಕೆಯ ಬಳಿ ಇದೆ ಅಂತ’ ‘ರಾಮ ನಿನ್ನ ಸೀತೆ ಮಹಾತಾಯಿ’ ಇವರ ನಾಟಕಗಳ ಹೆಸರು.

ಒಂದು ಕ್ಷಣ ನನ್ನ ಮನಸ್ಸು ಖಾಲಿ ಉಯ್ಯಾಲೆಯೊಂದು ತೂಗುತ್ತಿರುವುದನ್ನು ನೋಡುತ್ತಾ ನಿಂತಂತಾಯ್ತು.

ಹೌದಲ್ಲಾ.. ಅಮ್ಮನಿಗೂ ರಿಟೈರ್ಮೆಂಟ್ ಇದ್ದಿದ್ದರೆ..
ಅಥವಾ ಅಮ್ಮನೇ ರಿಟೈರ್ಮೆಂಟ್ ಘೋಷಿಸಿಬಿಟ್ಟರೆ..

ಅಶೋಕ್ ಪಾಟೋಳೆ ನಾಟಕದಲ್ಲಿ ಒಂದು ದಿನ ಅಮ್ಮ ಹೀಗೇ ರಿಟೈರ್ಮೆಂಟ್ ಘೋಷಿಸಿಬಿಡುತ್ತಾಳೆ.

ಆ ನಂತರ ಇಡೀ ಮನೆ ಅಷ್ಟೇ ಅಲ್ಲ, ಆ ಮನೆಯ ಹೊರಗಿನ ಮನೆಗಳೂ..,

ಅದಷ್ಟೇ ಅಲ್ಲ, ಆ ಮನೆಯ ಹೊರಗಿನ ಮನಗಳೂ ಅಸ್ವಸ್ಥವಾಗುತ್ತ ಹೋಗುತ್ತವೆ, ಮಂಕಾಗುತ್ತ ಹೋಗುತ್ತವೆ.

ಹಾಗಾದರೆ ಅಮ್ಮ ಇಷ್ಟು ದಿನ ಕೆಲಸ ಮಾಡುತ್ತಿದ್ದಾಳೆ, ಅದೂ ಬೆಟ್ಟದಷ್ಟು ಎಂದು ಯಾರೂ ಗಮನಿಸಿರಲಿಲ್ಲವಲ್ಲ..

ಮೊನ್ನೆ ಹೀಗೆ ಯಾರ ಜೊತೆಯೋ ಮಾತನಾಡುತ್ತಿದ್ದೆ
ಅವರು ಇಂದಿನ ಮಹಿಳೆ ಮಾಡುತ್ತಿರುವ ಅಗಾಧ ಕೆಲಸದ ಅಂಕಿ ಅಂಶ ನೀಡುತ್ತಾ ಮಹಿಳೆಯ ಶ್ರಮ ಹೇಗೆಲ್ಲಾ ಇದೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದರು

ನನಗೆ ತಕ್ಷಣ ನೆನಪಿಗೆ ಬಂದದ್ದು ಈ ‘ಅಮ್ಮ ರಿಟೈರ್ ಆಗ್ತಾಳೆ’ ಅನ್ನುವ ಪುಸ್ತಕ

‘ಸಾರ್ ಒಂದು ಕ್ಷಣ ಯೋಚಿಸಿ ನೋಡಿ

ನಮ್ಮ ಮನೆಯ ಅಮ್ಮ ರಿಟೈರ್ ಆಗಿಬಿಟ್ಟರೆ ಏನಾಗುತ್ತೆ ಅಂತ’ ಅಂದೆ

ಅವರು ತಕ್ಷಣ ನಿಟ್ಟುಸಿರಿಟ್ಟರು

ಹೌದಲ್ಲಾ, ನಾನೇಕೆ ಪೆಪ್ಸಿ ಇಂದಿರಾ ನೂಯಿ, ಎಸ್ ಬಿ ಐ ನ ಅರುಂಧತಿ ಭಟ್ಟಾಚಾರ್ಯ, ಐಸಿಐಸಿಐ ನ ಚಂದ್ರ ಕೊಚಾರ್ ಅವರ ಬಗ್ಗೆನೇ ಮಾತಾಡ್ತಿದ್ದೆ
ಅವರು ಮಾಡ್ತಿರೋದು ಮಾತ್ರ ಕೆಲಸ ಅಂದುಕೊಂಡೆ

ಅಮ್ಮ, ನಮ್ಮ ಮನೆಯ ಅಮ್ಮನೇ ಎಷ್ಟೊಂದು ದುಡೀತಿದ್ದಾಳಲ್ಲಾ
ಈ ಎಲ್ಲಾ ಶ್ರಮ ಹಣದಲ್ಲಿ ಲೆಕ್ಕ ಹಾಕಿದ್ರೆ ಅಮ್ಮ ಸಹಾ ನೂಯಿ, ಭಟ್ಟಾಚಾರ್ಯ, ಕೊಚಾರ್ ಗಿಂತ ಕಡಿಮೆ ಇಲ್ಲ ಆಲ್ವಾ ಅಂದರು

ನನ್ನ ಅಮ್ಮ ಈ ಹಿಂದೆ ಚಿಕ್ಕದಾಗಿ ಎಡವಿ ಬಿದ್ದ ಕಥೆ ನಿಮಗೆ ಹೇಳಬೇಕು.

ಎಡವಿ ಬಿದ್ದರು ಅಷ್ಟೇ. ಕಿರು ಬೆರಳಿಗೆ ಗಾಯ. ಒಂದಷ್ಟು ರಕ್ತ
ಅಮ್ಮನಿಗೆ ನಿಲ್ಲಲಾಗುತ್ತಿಲ್ಲ, ನಡೆಯಲಾಗುತ್ತಿಲ್ಲ

ಮನೆ ಎನ್ನುವ ಅಷ್ಟು ದಿನ ಅಚ್ಚುಕಟ್ಟಾದ ಮನೆ ಆ ಒಂದು ಕ್ಷಣಕ್ಕೇ ಬೋರಲು ಬಿದ್ದು ಬಿಟ್ಟಿತು.

ಆ ಕ್ಷಣದಿಂದ ನೋಡುತ್ತೇನೆ ನಾನು ಎಂದೂ ಗಮನಿಸಿರದ ಒಂದು ಜಿರಲೆಯೂ ಸಹಾ ನನ್ನತ್ತ ಕೆಕ್ಕರಿಸಿ ನೋಡುತ್ತಿದೆ, ಹೋಗಲಿ ಎಂದರೆ ಆ ಇರುವೆ.. ಕಣ್ಣಿಗೂ ಕಾಣದೆ ಓಡಾಡುತ್ತಿದ್ದ ಇರುವೆ ನನ್ನೆದುರು ನಿನ್ನ ಕಚ್ಚಿಯೇ ಸಿದ್ದ ಎಂದು ಬಾಯ್ತೆರೆದು ನಿಂತಿದೆ.

ಬೀದಿಯಲ್ಲಿ ಓಡಾಡುವ ಬೆಕ್ಕೂ, ಬಿಬಿಎಂಪಿಯ ತಲೆ ಇಲ್ಲದ ಕಾಮಗಾರಿಯಿಂದಾಗಿ ಚರಂಡಿ ಬಿಟ್ಟು ಮನೆಗಳಿಗೆ ನುಗ್ಗುತ್ತಿರುವ ಹೆಗ್ಗಣಗಳೂ..

ಅಷ್ಟೇ ಅಲ್ಲ ನನ್ನ ಅಂಗಿ ಚಡ್ಡಿ ಟೀ ಶರ್ಟ್ ಗಳಿಗೂ ಬಾಯಿ ಬಂದಿದೆ. ಒಂದು ಟಪ್ ಸದ್ದಿಗೆ ಅದು ಪೇಪರ್ ಎಂದು ಕರಾರುವಾಕ್ಕಾಗಿ ಗುರುತಿಸುತ್ತಿದ್ದ, ಹಾಲಿನವ ಎದುರು ನಿಂತು ಎರಡಾ ಮೂರಾ ಪ್ಯಾಕೆಟ್ ಎನ್ನುತ್ತಾನೆ ಮೊಸರು ಚಿಕ್ಕದಾ ದೊಡ್ಡದಾ ಎನ್ನುತ್ತಿದ್ದಾನೆ ನಾನು ಕಕ್ಕಾಬಿಕ್ಕಿ.

ಬೀದಿಯಲ್ಲಿ ದನಿ ಎತ್ತಿ ತರಕಾರಿಯವ ಇವತ್ತು ಬಟಾಣಿ ಇದೆ ಎಂದು ಕೂಗಿ ಕರೆಯುತ್ತಿದ್ದಾನೆ. ನಾನು ಹೊರಗೆ ತಲೆ ಇಟ್ಟು ಕೊಡಪ್ಪಾ ಎಂದರೆ ಕಿಸಕ್ಕನೆ ನಕ್ಕು ಬಟಾಣಿ ಕಾಳಾಗಿ ಬರಲ್ಲಾ ಸ್ವಾಮಿ ಎಂದು ಗೇಲಿ ಮಾಡುತ್ತಿದ್ದಾನೆ

ಕಾಂಪೌಂಡಿನ ಟ್ಯಾಂಕ್ ನಲ್ಲಿ ರಾತ್ರಿ ನೀರು ಬಿದ್ದ ಶಬ್ದವಾದರೆ ಮೋಟಾರ್ ಆನ್ ಮಾಡಲು ಅದು ಎಷ್ಟನೇ ನಂಬರ್ ನದ್ದು ಎನ್ನುವುದೂ ಗೊತ್ತಿಲ್ಲ.

ಸಕ್ಕರೆ ಹಾಗು ಉಪ್ಪಿನ ಡಬ್ಬಗಳು ಒಂದೇ ಆಗಿ ಗೋಚರಿಸುತ್ತಿದೆ.
ಸಾರಿಗೆ ಹಾಕುವ ಸೌಟುಗಳು ‘ಫೋನ್ ಎ ಫ್ರೆಂಡ್’ ಎಂದು ಗೇಲಿ ಮಾಡುತ್ತಿವೆ

ಅಡಿಗೆ ಮನೆಯ ಅಷ್ಟೂ ಡಬ್ಬಗಳೂ ಕೃಷ್ಣನನ್ನು ಬಂಧಿಸಲು ಸನ್ನದ್ಧರಾದಾಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿರುವ ನೂರಾರು ಕೃಷ್ಣರಂತೆ ನನ್ನ ಮುಂದೆ ಮಾಯಾಲೋಕ ಸೃಷ್ಟಿಸಿವೆ.

ಯಾವ ಡಬ್ಬದ ಮೇಲೂ ಹೆಸರಿಲ್ಲ ಆದರೆ ಅಮ್ಮ ಒಂದೇ ಬಾರಿಯೂ ಲೆಕ್ಕ ತಪ್ಪಿರಲಿಲ್ಲ.

ಇದ್ದ 12 ಬಲ್ಬ್ ಗಳ ಪೈಕಿ ಕೆಟ್ಟಿರುವ ಬಲ್ಬ್ ಮಹಡಿಯಲ್ಲಿದೆ ಎಂದೂ.. ನೀರಿನ ಬಿಲ್ ಇಂದು ಕಟ್ಟದಿದ್ದರೆ ನಾಳೆ ಅದಕ್ಕೆ 25 ರೂ ಬಡ್ಡಿ ಹೆಚ್ಚು ಕಟ್ಟಬೇಕಾಗಿ ಬರುತ್ತದೆ ಎಂದೂ.. ಇವತ್ತು ಕೊನೆ ಮನೆಯ ಮಗಳ ಎಸ್ ಎಸ್ ಎಲ್ ಸಿ ರಿಸಲ್ಟ್ ಇದೆ ವಿಚಾರಿಸಿಕೊಂಡು ಬಾ ಅಂತಲೂ.. ಹೇಗೆ ಹೇಗೆ ಸಾಧ್ಯವಾಯ್ತು ಇದೆಲ್ಲಾ

ಅಮ್ಮ ಒಂದು ಸಲ ಎಡವಿದ್ದಕ್ಕೇ ಮನೆ ಎಂಬ ಇಡೀ ಮನೆ ಎಡವಿದ್ದಷ್ಟೇ ಅಲ್ಲ, ಮುಗುಚಿಕೊಂಡು ನನ್ನ ತಲೆಯ ಮೇಲೆ ಬಿದ್ದು ಹೋಯ್ತು

‘ಯಾವಾಗ ಬಂದರೂ ನಮ್ಮ ಮನೆಯಲ್ಲಿ ನಾಲ್ಕು ಜನರಿಗಾಗುವಷ್ಟಾದರೂ ಊಟ ಇರುತ್ತದೆ ಗೊತ್ತಾ’ ಎಂದು ಸಿಕ್ಕ ಸಿಕ್ಕಲ್ಲಿ ಕೊಚ್ಚಿಕೊಳ್ಳುತ್ತಿದ್ದ ನಾನು ಮೂರು ದಿನ ಅನ್ನದ ಬಟ್ಟಲುಗಳನ್ನು ಖಾಲಿ ಇಟ್ಟು ಬೀದಿಯಲ್ಲಿರುವ ಹೋಟೆಲ್ ಗಳಿಗೆ ಪಾರ್ಸಲ್ ಕಟ್ಟಿಸಿ ತರಲು ಓಡುತ್ತಿದ್ದೆ.

..ಮನೆಯಲ್ಲಿ ಕುಳಿತೇ ತನ್ನ ಅಕ್ಕನ ಮಗನ ಕೋರ್ಟ್ ಕೇಸಿಗೆ ನೆರವಾಗುವ, ದೊಡ್ಡ ಮಗಳಿಗೆ ಬಾಡಿಗೆಯವರು ಸಿಕ್ಕರೇ ಎಂದು ಕಕ್ಕುಲಾತಿ ತೋರುವ, ಅಲಾಟ್ ಆದ ಸೈಟು ಕೈಗೆ ಸರಿಯಾಗಿ ಧಕ್ಕಿತೆ ಎಂದು ವಿಚಾರಿಸುವ, ಊರಲ್ಲಿ ಆದ ಮಳೆಗೆ ಏನೇನು ಬದಲಾವಣೆ ಆಗಬಹುದು ಎಂದು ಕರಾರುವಾಕ್ಕಾಗಿ ಹೇಳುವ,

ದಿನಸಿ ಅಂಗಡಿಯವನು ಡೆಲಿವರಿ ಕೊಟ್ಟ ಒಂದು ತಿಂಗಳ ಸಾಮಾನಿನಲ್ಲಿ ಎಷ್ಟು ಕಾಂಪ್ಲಿಮೆಂಟರಿ ಐಟಂ ಬಚ್ಚಿಟ್ಟುಕೊಂಡಿದ್ದಾನೆ ಎಂದು ಲೆಕ್ಕ ಹಾಕಿ ಅವನಿಗೆ ಫೋನ್ ತಿರುಗಿಸುವ..

ಹೌದಲ್ಲಾ
ಅಮ್ಮ ರಿಟೈರ್ ಆಗ್ತಾಳೆ ಅಂದ್ರೆ
ಅಂದ್ರೆ..

ಅಮ್ಮನ ಬಗ್ಗೆ ಎಲ್ಲರಿಗೂ ಜೀವ ಆದರೆ ಅದು ಎರೆಹುಳುವಿನ ರೀತಿಯ ಜೀವ. ಸದ್ದಿಲ್ಲದೇ ಮಣ್ಣನ್ನು ಉತ್ತುತ್ತಲೇ ಇರುತ್ತದೆ. ಗೊಬ್ಬರವಾಗುವಂತೆ, ಹಸಿರು ಉಕ್ಕಲು ಹಾದಿ ಕೊಡುವಂತೆ

ಆದರೆ ಎರೆಹುಳು ಕಣ್ಣಿಗೆ ಕಂಡರೆ ತಾನೇ..

ನಮಗೆ ರಾಸಾಯನಿಕದ ಹಮ್ಮು. ಒಂದು ಹೊಡೆತದಲ್ಲಿ ಹತ್ತು ಚಿಗುರಿಸುತ್ತೇವೆ ಎನ್ನುವ ಅಹಮ್ಮು
ಆದರೆ ಮಣ್ಣು ಮಾತ್ರವಲ್ಲ, ಜೊತೆಗೆ ನಾವು ಎರೆಹುಳುವನ್ನೂ ಕೊಂದಿದ್ದೇವೆ

ತಾಯನ್ನಲ್ಲ, ಮನೆಯನ್ನೂ

ಯಾಕೋ ಸುನಂದಾ ಬೆಳಗಾಂವಕರ ನೆನಪಾಗುತ್ತಿದ್ದಾರೆ

ತಾಯಿ, ತವರು ಬಗ್ಗೆ ಸುನಂದಾ ಬರೆಯುವ ರೀತಿ ಆ ಸದ್ದಿಲ್ಲದ ಎರೆಹುಳುಗಳಿಗೆ ಶ್ರದ್ಧೆಯಿಂದ ಕೊಡುವ ಗೌರವವೇ

ಆಕೆ ಹೇಳುತ್ತಾರೆ ‘ಅಮ್ಮ ಬಡಿಸೋ ಅಡುಗೆಯಲ್ಲಿ ಅಮ್ಮ ಅನ್ನೋದೇ ರುಚಿ..’ ಅಂತ

ಹೌದಲ್ಲಾ..

ಇರಲಿ,

ಒಂದು ವ್ಯತ್ಯಾಸ ಗಮನಿಸಿದ್ದೀರಾ..

ನೀವು ಗಂಡಸರಿಗೆ ಫೋನ್ ಮಾಡುವುದಕ್ಕೂ, ಹೆಂಗಸರಿಗೆ ಫೋನ್ ಮಾಡುವುದಕ್ಕೂ..

ಗಂಡಸರಿಗೆ ಫೋನ್ ಮಾಡಿದಾಗ ಎರಡನೆಯ ರಿಂಗ್ ಗೆ ‘ಹಲೋ’ ಅನ್ನುವ ದನಿ ಕೇಳುತ್ತದೆ

ಇನ್ನೇನು ಇವರು ಫೋನ್ ತೆಗೆಯುವುದಿಲ್ಲ ಎಂದು ನಿರ್ಧಾರ ಮಾಡಿ ಫೋನ್ ಕಟ್ ಮಾಡುವ ವೇಳೆಗೆ ಹೆಂಗಸರ ‘ಹಲೋ’ ಕೇಳುತ್ತದೆ

ವ್ಯತ್ಯಾಸ ಅಷ್ಟೇ

ಗಂಡಸು ಮೊಬೈಲ್ ಹಿಡಿದುಕೊಂಡೇ 24 ಗಂಟೆ ಕೂತಿದ್ದಾನೆ

ಹೆಂಗಸು ಇಡೀ ಮನೆ ಸುಧಾರಿಸುತ್ತಿದ್ದಾಳೆ

ನಾನು ಕೊನೆಯ ರಿಂಗ್ ವರೆಗೆ ಕಾಯುತ್ತೇನೆ

ಅದು ರಿಸೀವ್ ಆಗದಿದ್ದರೂ ಮತ್ತೆ ಫೋನ್ ಮಾಡುವ ತಾಳ್ಮೆಯಿದೆ

ಏಕೆಂದರೆ ಅವರು ರಿಟೈರ್ ಆಗದ ಕೆಲಸಗಳಲ್ಲಿದ್ದಾರೆ

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ

ದಿನಾಂಕ : 2, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಶನಿವಾರ
ಪಕ್ಷ : ಶುಕ್ಲಪಕ್ಷ
ತಿಥಿ : ನವಮಿ
(ನಿನ್ನೆ ಮಧ್ಯಾಹ್ನ 1 ಗಂ॥ 23 ನಿ।। ರಿಂದ
ಇಂದು ಬೆಳಿಗ್ಗೆ 11 ಗಂ॥ 32 ನಿ।। ತನಕ)
ನಕ್ಷತ್ರ : ಮಖೆ
(ಇಂದು ಪ್ರಾತಃಕಾಲ 1 ಗಂ॥ 3 ನಿ।। ರಿಂದ
ಇಂದು ರಾತ್ರಿ 11 ಗಂ॥ 37 ನಿ।। ತನಕ)
ಯೋಗ : ವೃದ್ಢಿ
ಕರಣ : ಕೌಲವ
ವರ್ಜ್ಯಂ : (ಇಂದು ಬೆಳಿಗ್ಗೆ 12 ಗಂ॥ 20 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 50 ನಿ।। ತನಕ)
ಅಮೃತಕಾಲ : (ನಿನ್ನೆ ರಾತ್ರಿ 11 ಗಂ॥ 29 ನಿ।। ರಿಂದ ಇಂದು ಪ್ರಾತಃಕಾಲ 1 ಗಂ॥ 1 ನಿ।। ತನಕ)(ಇಂದು ರಾತ್ರಿ 9 ಗಂ॥ 21 ನಿ।। ರಿಂದ ಇಂದು ರಾತ್ರಿ 10 ಗಂ॥ 51 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 7 ಗಂ॥ 31 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 22 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 9 ಗಂ॥ 0 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 35 ನಿ।। ತನಕ)
ಗುಳಿಕ : (ಇಂದು ಪ್ರಾತಃಕಾಲ 5 ಗಂ॥ 49 ನಿ।। ರಿಂದ ಇಂದು ಬೆಳಿಗ್ಗೆ 7 ಗಂ॥ 24 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 48 ನಿ।। ರಿಂದ ಇಂದು ಸಂಜೆ 3 ಗಂ॥ 23 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 49 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 36 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಸಿಂಹ

ಮೇಷ ರಾಶಿ : 2 May 2020
ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಬೇಕು. ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ಇಂದು ನಿಮಗೆ ಗೊತ್ತಿರುವವರ ಮೇಲೆ ನೀವು ಯಾವುದೇ ನಿರ್ಧಾರ ಹೇರಲು ಪ್ರಯತ್ನಿಸಿದಲ್ಲಿ ನೀವು ನಿಮ್ಮದೇ ಹಿತಾಸಕ್ತಿಗೆ ಧಕ್ಕೆ ತರುತ್ತೀರಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಪರಿಸ್ಥಿತಿಯನ್ನು ತಾಳ್ಮೆಯಿಂದ ನಿರ್ವಹಿಸುವುದೊಂದೇ ದಾರಿ. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ : 2 May 2020
ನಿಮ್ಮ ಭರವಸೆ ಒಂದು ಸಮೃದ್ಧ, ಸೂಕ್ಷ್ಮ ಪರಿಮಳಯುಕ್ತ ಮತ್ತು ಬೆರಗುಗೊಳಿಸುವ ಹೂವಿನ ಹಾಗೆ ಅರಳುತ್ತದೆ. ವಿವಾಹಿತರು ಇಂದು ತಮ್ಮ ಮಕ್ಕಳ ಅಧ್ಯಯನದ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಪ್ರಯತ್ನಗಳು ಹಾಗೂ ನಿಮ್ಮ ಕುಟುಂಬದ ಸದಸ್ಯರು ಒದಗಿಸಿದ ಬೆಂಬಲದ ಫಲವಾದ ಯಶಸ್ಸು ಮತ್ತು ಸಂತೋಷವನ್ನು ಆನಂದಿಸಲು ಈಗ ಒಂದು ಒಳ್ಳೆಯ ಸಮಯ. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ನಿಮ್ಮ ಸಂವಹನ ತಂತ್ರಗಳು ಮತ್ತು ಕೆಲಸದ ಕೌಶಲಗಳು ಪರಿಣಾಮಕಾರಿಯಾಗಿರುತ್ತವೆ. ಈ ದಿನ ನಿಜವಾಗಿಯೂ ಪ್ರೇಮಭರಿತವಾಗಿದೆ. ಅದೃಷ್ಟ ಸಂಖ್ಯೆ: 9

ಮಿಥುನ ರಾಶಿ : 2 May 2020
ವಿದೇಶದಲ್ಲಿ ವ್ಯಾಪಾರ ಮಾಡುವ ಈ ರಾಶಿಚಕ್ರದ ಜನರಿಗೆ ಇಂದು ಸಾಕಷ್ಟು ಹಣದ ಲಾಭವನ್ನು ಪಡೆಯಬಹುದು. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ನೀವು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳಬಹುದು. ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ನಿಮ್ಮ ಸಂಗಾತಿ ಇಂದು ನಿಜವಾಗಿಯೂ ವಿಶೇಷವಾದದ್ದೇನಾದರೂ ಮಾಡುತ್ತಾರೆ ನಿಮ್ಮ ಸಂಗಾತಿ ನಿಮಗಾಗಿ ಇಂದು ಮನೆಯಲ್ಲಿ ಯಾವುದೇ ಆಶ್ಚರ್ಯಕರ ಭಕ್ಷ್ಯವನ್ನು ಮಾಡಬಹುದು, ಇದು ನಿಮ್ಮ ದಿನದ ದಣಿವನ್ನು ನಿವಾರಿಸುತ್ತದೆ. ಅದೃಷ್ಟ ಸಂಖ್ಯೆ: 7

ಕರ್ಕ ರಾಶಿ : 2 May 2020
ನಿಮ್ಮ ಕಚೇರಿಯನ್ನು ಬೇಗನೆ ಬಿಡಲು ಮತ್ತು ನೀವು ನಿಜವಾಗಿಯೂ ಆನಂದಿಸುವದನ್ನು ಮಾಡಲು ಪ್ರಯತ್ನಿಸಿ. ನಿಮಗಾಗಿ ಹಣವನ್ನು ಉಳಿಸುವ ನಿಮ್ಮ ಬಯಕೆ ಇಂದು ಪೂರ್ಣಗೊಳ್ಳಬಹುದು. ಇಂದು ನೀವು ಸೂಕ್ತವಾಗಿ ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ನಿಮ್ಮ ಪ್ರೀತಿಯ ಸಂಬಂಧ ಮಾಂತ್ರಿಕ ತಿರುವು ಪಡೆಯುತ್ತಿದೆ; ಸುಮ್ಮನೇ ಅದನ್ನು ಅನುಭವಿಸಿ. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ-ಇವುಗಳನ್ನು ನೀವು ಯಾವಾಗಲೂ ಕೇಳಬಯಸಿರುತ್ತೀರಿ. ಅದೃಷ್ಟ ಸಂಖ್ಯೆ: 1

ಸಿಂಹ ರಾಶಿ : 2 May 2020
ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ವಿದೇಶದಲ್ಲಿ ಮಲಗಿರುವ ನಿಮ್ಮ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಅದು ನಿಮಗೆ ಲಾಭದಾಯಕವಾಗಲಿದೆ. ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಇಂದು ನಿಮ್ಮ ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ. ಮನೆಯ ಕೆಲಸಗಳನ್ನು ಮುಗುಸಿದ ಈ ರಾಶಿಚಕ್ರದ ಗೃಹಿಣಿಯರು ಇಂದು ಉಚಿತ ಸಮಯದಲ್ಲಿ ಟಿವಿ ಅಥವಾ ಮೊಬೈಲ್‌ನಲ್ಲಿ ಚಲನಚಿತ್ರವನ್ನು ವೀಕ್ಷಿಸಬಹುದು. ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ : 2 May 2020
ಹಿರಿಯರು ಉತ್ತಮ ಲಾಭ ಪಡೆಯಲು ತಮ್ಮ ಹೆಚ್ಚುವರಿ ಶಕ್ತಿಯನ್ನು ಸಕಾರಾತ್ಮಕ ಬಳಕೆಗೆ ವಿನಿಯೋಗಿಸಬೇಕು. ಉದ್ಯೋಗಕ್ಕೆ ಸಂಬಂಧಿಸಿರುವ ಜನರಿಗೆ ಇಂದು ಹಣದ ಬಹಳಷ್ಟು ಅಗತ್ಯವಿರುತ್ತದೆ ಆದರೆ ಹಿಂದಿನ ದಿನಗಳಲ್ಲಿ ಮಾಡಲಾಗಿರುವ ಅನಗತ್ಯ ಖರ್ಚುಗಳ ಕಾರಣದಿಂದಾಗಿ ಅವರ ಹತ್ತಿರ ಸಾಕಷ್ಟು ಹಣ ಇರುವುದಿಲ್ಲ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪ ಅವಳಿಗೆ ಕಿರಿಕಿರಿ ಮಾಡಬಹುದು. ಕೋಪ ಭುಗಿಲೇಳುವುದನ್ನು ತಪ್ಪಿಸಲು ಅವಳ ಅನುಮತಿ ತೆಗೆದುಕೊಳ್ಳಿ. ನೀವು ಸುಲಭವಾಗಿ ಸಮಸ್ಯೆಯನ್ನು ತಪ್ಪಿಸಬಹುದು. ಇಂದು ನಿಮ್ಮ ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ. ಅದೃಷ್ಟ ಸಂಖ್ಯೆ: 7

ತುಲಾ ರಾಶಿ : 2 May 2020
ಆರೋಗ್ಯ ಪರಿಪೂರ್ಣವಾಗಿರುತ್ತದೆ. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ಮನೆಯಿಂದ ಹೊರಗೆ ಹೋಗುವ ಮೂಲಕ, ಇಂದು ನೀವು ತೆರೆದ ಗಾಳಿಯಲ್ಲಿ ನಡೆಯಲು ಬಯಸುತ್ತೀರಿ. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ : 2 May 2020
ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ನಿಮ್ಮ ಹೆತ್ತವರ ಆರೋಗ್ಯದ ಬಗೆಗೆ ಹೆಚ್ಚುವರಿ ಗಮನ ಮತ್ತು ಎಚ್ಚರಿಕೆ ಅಗತ್ಯವಿದೆ. ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ. ಇಂದು ಯಾವುದೇ ಅನಗತ್ಯ ಕೆಲಸಕ್ಕಾಗಿ ನಿಮ್ಮ ಉಚಿತ ಸಮಯವನ್ನು ಹಾಳು ಮಾಡಬಹುದು. ಅದೃಷ್ಟ ಸಂಖ್ಯೆ: 2

ಧನು ರಾಶಿ : 2 May 2020
ನೀವು ಸಾಮಾನ್ಯವಾಗಿ ಇರುವುದಕ್ಕಿಂತ ಕಡಿಮೆ ಚೈತನ್ಯವನ್ನು ಇಂದು ಕಾಣುತ್ತೀರಿ -ನಿಮ್ಮ ಮೇಲೆ ನೀವೇ ಹೆಚ್ಚುವರಿ ಕೆಲಸಕ್ಕೆ ಒತ್ತಡ ಹೇರಬೇಡಿ – ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನಿಮ್ಮ ಕೆಲಸಗಳನ್ನು ಇನ್ನೊಂದು ದಿನಕ್ಕೆ ವರ್ಗಾಯಿಸಿ. ನಿಕಟ ಸಂಬಂಧಿಗಳ ಮನೆಗೆ ಹೋಗುವುದರಿಂದ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು. ನಿಮ್ಮ ನಡೆಯಲ್ಲಿ ಉದಾರ ಮನೋಭಾವ ಹೊಂದಿರಿ ಮತ್ತು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಉತ್ತಮವಾದ ಪ್ರೀತಿಯ ಕ್ಷಣಗಳನ್ನು ಕಳೆಯಿರಿ. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಾನೆ, ಆದ್ದರಿಂದ ಕೆಲವೊಮ್ಮೆ ನಿಮ್ಮ ಮೇಲೆ ಕೋಪವನ್ನು ಸಹ ತೋರಿಸಬಹುದು. ಅವರ ಕೋಪಕ್ಕೆ ಕೋಪಗೊಳ್ಳುವುದಕ್ಕಿಂತ ಅವರ ಮಾತುಗಳನ್ನು ನೀವು ಅರ್ಥಮಾಡಿಕೊಳ್ಳುವುದು ಉತ್ತಮ. ಅದೃಷ್ಟ ಸಂಖ್ಯೆ: 8

ಮಕರ ರಾಶಿ : 2 May 2020
ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ವಿದೇಶದಲ್ಲಿ ವ್ಯಾಪಾರ ಮಾಡುವ ಈ ರಾಶಿಚಕ್ರದ ಜನರಿಗೆ ಇಂದು ಸಾಕಷ್ಟು ಹಣದ ಲಾಭವನ್ನು ಪಡೆಯಬಹುದು. ಅನಿರೀಕ್ಷಿತ ಅತಿಥಿಗಳು ಸಂಜೆ ನಿಮ್ಮ ಮನೆಯಲ್ಲಿ ತುಂಬಿರುತ್ತಾರೆ. ಅದೃಷ್ಟ ಸಂಖ್ಯೆ: 8

ಕುಂಭ ರಾಶಿ : 2 May 2020
ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಆಶೀರ್ವಾದ ಮಾಡುತ್ತಾರೆ ಮತ್ತು ಮನಸ್ಸಿನ ಶಾಂತಿ ತರುತ್ತಾರೆ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಪ್ರೀತಿ – ಸಾಂಗತ್ಯ ಮತ್ತು ಬಂಧ ಏರಿಕೆಯಲ್ಲಿರುತ್ತವೆ. ನಾಳೆ ಬಹಳ ತಡವಾಗಬಹುದಾದ್ದರಿಂದ ಇಂದು ನಿಮ್ಮ ದೀರ್ಘಕಾಲದ ಜಗಳವನ್ನು ಪರಿಹರಿಸಿಕೊಳ್ಳಿ. ಪ್ರವಾಸದ ಅವಕಾಶಗಳನ್ನು ಪರಿಶೋಧಿಸಬೇಕು. ನೀವು ಇಂದು ಯಾವುದೇ ಕಾರಣವಿಲ್ಲದೇ ನಿಮ್ಮದೇ ಒತ್ತಡದಿಂದಾಗಿ ನಿಮ್ಮ ಸಂಗಾತಿಯ ಜತೆ ಜಗಳ ಮಾಡಬಹುದು. ಕೂದಲು ಅಂದಗೊಳಿಸುವಿಕೆ ಮತ್ತು ಮಸಾಜ್‌ನಂತಹ ಚಟುವಟಿಕೆಗಳು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಮತ್ತು ಇದರ ನಂತರ ಸಾಕಷ್ಟು ಉತ್ತಮವಾಗಿ ಸಹ ಅನುಭವಿಸುವಿರಿ. ಅದೃಷ್ಟ ಸಂಖ್ಯೆ: 6

ಮೀನ ರಾಶಿ : 2 May 2020
ನಿಮ್ಮ ಹೆಚ್ಚು ಆತ್ಮವಿಶ್ವಾಸವನ್ನು ಇಂದು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಒತ್ತಡದ ದಿನದ ಹೊರತಾಗಿಯೂ ನೀವು ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಪಾಲಕರು ಮತ್ತು ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸಲು ಅವರಿಗೆ ಸಾಧ್ಯವಾದದ್ದನ್ನೆಲ್ಲ ಮಾಡುತ್ತಾರೆ. ಇಂದಿನ ದಿನ ಪ್ರೀತಿಯ ಬಣ್ಣಗಳಲ್ಲಿ ಮುಳುಗಿರುತ್ತದೆ ಆದರೆ ರಾತ್ರಿಯ ಸಮಯದಲ್ಲಿ ಯಾವುದೊ ಹಳೆಯ ವಿಷ್ಯದ ಬಗ್ಗೆ ನೀವು ಜಗಳವಾಡಬಹುದು. ಅದೃಷ್ಟ ಸಂಖ್ಯೆ: 4

ತುಮಕೂರಿನಲ್ಲಿ ಜನರ ಬಾಗಿಲಿಗೆ ದೇವಸ್ಥಾನ ಬಂದಾಗ…

Publicstory.in


ತುಮಕೂರು: ಲಾಕ್ ಡೌನ್ ಆದ ಬಳಿಕ ಎಲ್ಲ ದೇವಸ್ಥಾನಗಳು, ಮಂದಿರಗಳು, ಚರ್ಚ್ ಗಳು ಬಾಗಿಲು ಹಾಕಲಾಗಿದೆ. ಆದರೆ ತುಮಕೂರಿನಲ್ಲೊಂದು ದೇವಸ್ಥಾನ ಲಾಕ್ ಡೌನ್ ಆದ ಬಳಿಕ ಜನರ ಬಳಿಗೆ ನಡೆದುಹೋಗುತ್ತಿದೆ.

ತುಮಕೂರಿನ ಬಟವಾಡಿಯಲ್ಲಿರುವ ವೆಂಟೇಶ್ವರ ದೇವಸ್ಥಾನವೇ ಜನರ ಬಾಗಿಲಿಗೆ ನಡೆದು ಹೋಗುತ್ತಿರುವ ದೇವಸ್ಥಾನ.

ಶಾಸಕ ಜ್ಯೋತಿಗಣೇಶ ಆಹಾರ ಧಾನ್ಯ ಹಂಚಿದರು.‌ ದೇವಸ್ಥಾನದ ಟ್ರಸ್ಟಿ ಡಿ.ಎಸ್.ಕುಮಾರ್, ಉದ್ಯಮಿ ಅರ್ಜುನ್ ಇದ್ದಾರೆ.

ದಶಕಗಳ ಹಿಂದಿನ ಮಾತು. ದಕ್ಷಿಣ ಕನ್ನಡ ಜಿಲ್ಲೆಯ ಇಡ್ಕಿದು ಗ್ರಾಮಕ್ಕೆ ಭೇಟಿ ನೀಡಿದ್ದೆ. ಅಲ್ಲೊಂದು ಈಶ್ವರ ದೇವಸ್ಥಾನವಿದೆ.

ಊರಿನವರು ಕುಡಿಯುವ ನೀರಿಗೆ ಸಮಸ್ಯೆ ಎಂದಾಗ ದೇವಸ್ಥಾನವೇ ಮುಂದೆ ಬಂದು 50 ಮನೆಗಳಿಗೆ ಪೈಪ್ ಲೈನ್ ಮೂಲಕ ಉಚಿತವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಇದಕ್ಕಾಗಿ ದೇವಸ್ಥಾನ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಜನರು ಕಷ್ಟದಲ್ಲಿದ್ದಾಗ ದೇವಸ್ಥಾನಗಳೇ ಜನರ ಬಳಿಗೆ ಹೋಗಬೇಕು. ಜೀವನ ಪೂರಾ ಜನರೇ ದೇವಸ್ಥಾನಗಳಿಗೆ ಬರುವಾಗ ದೇವಸ್ಥಾನಗಳು ಸಹ ಜನರ ಬಳಿಗೆ ನಡೆದುಹೋಗಬೇಕು.

ಬಡಜನರ ಸೇವೆಯೇ ನಿಜವಾದ ಈಶಸೇವೆ ಎನ್ನುವ ಮಾತಿದೆ.ಈ ಮಾತನ್ನು ಬಟವಾಡಿಯ ವೆಂಕಟೇಶ್ವರ ದೇವಸ್ಥಾನ ನಿಜ ಮಾಡಿದೆ.

ದೇವಸ್ಥಾನದ ಟ್ರಸ್ಟಿಗಳಾದ ಡಿ.ಎಸ್,ಕುಮಾರ್ ಅವರು ದೇವಸ್ಥಾನ ಮೂಲಕ ಲಾಕ್ ಡೌನ್ ಕಾಲದಲ್ಲಿ ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಗುಡಿಸಲು ವಾಸಿಗಳು, ಬೇರೆ ಬೇರೆ ರಾಜ್ಯಗಳಿಂದ ಬಂದು ಬಿಡಾರ ಹೂಡಿರುವ ದಿನಗೂಲಿ ಕಾರ್ಮಿಕರ ಟೆಂಟ್ ಗಳಿಗೆ ತೆರಳಿ ಊಟ, ದವಸ, ಧಾನ್ಯ ನೀಡಲಾಗುತ್ತಿದೆ.

ಬಡ ಜನರಿಗೆ ಮಾತ್ರವಲ್ಲ ಕರೊನಾ ಸೇನಾನಿಗಳಿಗೂ ನೆರವಿನ ಹಸ್ತಚಾಚಿದೆ. ಈಚೆಗೆ ಪೊಲೀಸರಿಗೆ 500 ಮಾಸ್ಕ್ ಗಳನ್ನು ವಿತರಿಸಲಾಗಿದೆ.

ತಿರುಪತಿವರೆಗೂ ಹೋಗಿ ವೆಂಕಟೇಶ್ವರನನ್ನು ನೋಡಲು ಸಾಧ್ಯವಾಗದವರಿಗೂ ತುಮಕೂರಿನಲ್ಲೇ ಆ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ದಶಕಗಳ ಕಾಲದಿಂದಲೂ ವೆಂಟಕೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈಗ ತುಮಕೂರಿನ ಪ್ರವಾಸಿ ಕ್ಷೇತ್ರಗಳ ಸಾಲಿಗೆ ವೆಂಟೇಶ್ವರ ದೇವಸ್ಥಾನವೂ ಸೇರಿಕೊಂಡಿದೆ.ಜನರ ಸಂಕಷ್ಟಕ್ಕೆ ದೇವಸ್ಥಾನ ಮಿಡಿಯುತ್ತಿರುವುದನ್ನು ಕಂಡು ದೇವಸ್ಥಾನದ ಭಕ್ತರಿಗೂ ಖುಷಿಯಾಗಿದೆ.

ದೇವರು ಮೆಚ್ಚುವ ಕೆಲಸ ಎಂಬ ಮಾತುಗಳು ಆಡುತ್ತಿದ್ದಾರೆ.ಲಾಕ್ ಡೌನ್ ಮುಗಿಯುವವರೆಗೂ ಸೇವೆ ಮುಂದುವರೆಯಲಿದೆ. ವಾಸ್ತವದಲ್ಲಿ ಜನರು ಒಂದು ತುತ್ತಿನ ಊಟಕ್ಕೂ ಕಷ್ಟದಲ್ಲಿದ್ದಾರೆ. ಗುಡಿಸಲಿನ ಮುಂದೆ ಹೋಗಿ ಸಹಾಯ ನೀಡಿದಾಗ ದೇವರೆ ಬಂದಂತೆ ಅವರು ಖುಷಿ ಪಡುತ್ತಾರೆ. ದೇವಸ್ಥಾನದ ಪ್ರಸಾದವಾದ ಕಾರಣ ಅವರ ಕಣ್ಣಲ್ಲಿ ಕಾಣುವ ಅಮಿತಾನಂದ ವಿವರಿಸಲು ಸಾಧ್ಯವಿಲ್ಲ. ನಿಜವಾದ ದೇವರ ಸೇವೆ ಅದೇ ಅಲ್ಲವೇ ಎನ್ನುತ್ತಾರೆ ಉದ್ಯಮಿ ಅರ್ಜುನ್.

ವಲಸೆ ಕಾಮಿ೯ಕರಿಗೆ ಉಚಿತ ಸಾರಿಗೆ ವ್ಯವಸ್ಥೆಗೆ ಸಿಪಿಐ(ಎಂ) ಒತ್ತಾಯ

ತುಮಕೂರು: ವಲಸೆ ಕಾಮಿ೯ಕರಿಗೆ ತಮ್ಮ ಊರುಗಳಿಗೆ ಹೋಗಲು ಅನುಮತಿಸಿ ಸಾರಿಗೆ ವ್ಯವಸ್ಥೆ ಮಾಡಿರುವುದಾಗಿ ಹೇಳಿದ ರಾಜ್ಯ ಸಕಾ೯ರವು ಸಾರಿಗೆ ಸಂಸ್ಥೆಯ ದರಗಳನ್ನು ಮೂರು ನಾಲ್ಕು ಪಟ್ಟು ಹೆಚ್ಚಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಉಚಿತ ಸಾರಿಗೆ ವ್ಯವಸ್ಥೆ ಮಾಡಲು ಒತ್ತಾಯಿಸಿವೆ.

ಸಾರಿಗೆ ಸಂಸ್ಥೆಗಳಿಗೆ ಸಕಾ೯ರ ವಲಸೆ ಕಾಮಿ೯ಕರ ಪ್ರಯಾಣ ವೆಚ್ಚ ಭರಿಸಬೇಕು, ಹೆದ್ದಾರಿ ಟೋಲ್ ವಿನಾಯಿತಿ ನೀಡಲು ಕೇಂದ್ರ ಸಕಾ೯ರವನ್ನು ಒತ್ತಾಯಿಸ ಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ದುಬಾರಿ ದರ ನಿಗದಿ ಮಾಡಿ ರಾಜ್ಯ ಸಕಾ೯ರವು ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾಮಿ೯ಕರನ್ನು ದೋಚುತ್ತಿದೆ. ಮೇ ದಿನದಂದು ಕಾಮಿ೯ಕರಿಗೆ ಶುಭಾಶಯ ಕೋರಿ ಅದೇ ದಿನ ಅವರನ್ನು ವಂಚಿಸಿದೆ.

ಕಾಮಿ೯ಕರು ದುಬಾರಿ ದರ ನೀಡಲಾರದೆ ಇರುವಲ್ಲೆ ಉಳಿದು ಬದುಕುಳಿಯಲು ತಮ್ಮಪ್ರಾಣವನ್ನು ಪಣಕ್ಕಿಟ್ಟು ಬಿಲ್ಡರಗಳ ಚಾಕರಿಗೆ ಸಿಗುವಂತಾಗಲಿ ಎಂಬುದು ಸಕಾ೯ರದ ದುರುದ್ದೇಶವಾಗಿದೆ.

ಬಿಲ್ಡರಗಳ ಲಾಭಿಗೆ ಮಣಿದು ಲಾಕ್ಡೌನ್ ಕಾಲಾವಧಿಯಲ್ಲಿ ಮೊದಲಿಗೆ ಕಟ್ಟಡ ನಿರ್ಮಾಣ ಕಾಯ೯ಕ್ಕೆ ಅನುಮತಿಸಿದ್ದ ರಾಜ್ಯ ಸಕಾ೯ರವು ಇದೀಗ ವಲಸೆ ಕಾಮಿ೯ಕರು ಅವರ ಊರುಗಳಿಗೆ ಹೋಗಲು ಒಲ್ಲದ ಮನಸ್ಸಿನಿಂದ ಅನುಮತಿಸಿದ್ದು ಹೋಗದಂತೆ ಮಾಡಲು ಹೂಡಿರುವ ಕುತಂತ್ರವೇ ದುಬಾರಿ ದರ ನಿಗದಿ ಹಿಂದಿರುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಅಂತರ ರಾಜ್ಯ ವಲಸೆ ಕಾಮಿ೯ಕರು ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗಲು ನೆರೆಯ ಕೇರಳ ಹಾಗು ತೆಲಂಗಾಣ ರಾಜ್ಯ ಸಕಾ೯ರಗಳು ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ಈಗಾಗಲೆ ಸಾವಿರಾರು ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿ ಕೊಟ್ಟಿವೆ.

ಅದರೆ ಕನಾ೯ಟಕದ ಬಿಜೆಪಿ ಸಕಾ೯ರವು ಅಂತಹ ಯಾವುದೆ ಕ್ರಮವಹಿಸದೆ ರಾಜ್ಯದ ಬಿಲ್ಡರಗಳ ಹಿತಾಸಕ್ತಿಗಾಗಿ ಶ್ರಮಿಸುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೂಡಲೇ ಅಂತರ ರಾಜ್ಯ ವಲಸಿಗರಿಗೆ ತಮ್ಮ ಊರುಗಳಿಗೆ ಹೋಗಲು ಉಚಿತ ರೈಲಿನ ವ್ಯವಸ್ಥೆ ಮಾಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ ಕೆ. ಎನ್. ಉಮೇಶ್ ಹಾಗೂ ಬೆಂಗಳೂರು ಉತ್ತರ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ‌ ಒತ್ತಾಯಿಸಿದ್ದಾರೆ.

0

htt

ಸಣ್ಣಗಾಗಲು ನ್ಯೂಟ್ರಿಷನ್ ಫುಡ್ ತೆಗೆದುಕೊಂಡ ಹೋಮ್ ಗಾರ್ಡ್ ಮಸಣಕ್ಕೆ…

ತುಮಕೂರು

ಇತ್ತೀಚೆಗೆ ಎಲ್ಲೆಲ್ಲೂ ನ್ಯೂಟ್ರಿಷನ್ ಪುಡ್ ಗಳದ್ದೆ ಹಾವಳಿ. ಕೆಲವರು‌ ಸಣ್ಣಗಾಗಲು, ಇನ್ನೂ ಕೆಲವರು ದಪ್ಪಗಾಗಲು ಹಾಗೂ ಇನ್ನೂ‌ ಕೆಲವರು ಬೇರೆ ಬೇರೆ ಕಾಯಿಲೆಗಳಿಗೆ ನ್ಯೂಟ್ರಿಷನ್ ಫುಡ್ ನ ಮೊರೆಹೋಗುತ್ತಿದ್ದಾರೆ.

ಇದೇ ರೀತಿ ನ್ಯೂಟ್ರಿಷನ್ ಫುಡ್ ತೆಗೆದುಕೊಂಡ ಹೋಮ್ ಗಾರ್ಡ್ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಮಸಣಕ್ಕೆ ಸೇರಿದ್ದಾರೆ.

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೃಹರಕ್ಷಕ ದಳದ ಘಟಕಾಧಿಕಾರಿ ಹನುಮಂತರಾಜು(36) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 

ಹನುಂತರಾಜು ಅನಾರೋಗ್ಯದಿಂದಾಗಿ ಏ.29ರ ಬುಧವಾರ ತಡರಾತ್ರಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 

ತಾಲ್ಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರಂಗಯ್ಯನ ಮಗನಾದ ಹನುಮಂತರಾಜು ಸಣ್ಣಗಾಗುವ ಕಾರಣದಿಂದಾಗಿ ಈಚೆಗೆ ಪಟ್ಟಣದಲ್ಲಿ ನ್ಯೂಟ್ರೀಷನ್ ಫುಡ್ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದರಿಂದಾಗಿ ಏ.29ರಂದು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆಗೆ ಸ್ಪಂಧಿಸಿದೆ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಸಾವಿಗೆ ನ್ಯೂಟ್ರಿಷನ್ ಫುಡ್ ತೆಗೆದುಕೊಂಡಿರುವುದೇ ಕಾರಣ  ಎಂದು ವೈದ್ಯರು ಹೇಳಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈಚೆಗೆ ಕೊವಿಡ್-19 ಕರ್ತವ್ಯದಲ್ಲಿದ್ದ ಹನುಮಂತರಾಜು ಉತ್ತಮ ಕೆಲಸ ನಿರ್ವಹಣೆ ಮಾಡುವ ಪ್ರಶಂಸೆಗೆ ಒಳಗಾಗಿದ್ದರು. 

ತುಮಕೂರು, ಮಧುಗಿರಿ, ಕೊರಟಗೆರೆ, ಕೋಳಾಲ ಮತ್ತು ಹೊಳವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮತ್ತು ಅಬಕಾರಿ ಇಲಾಖೆಯಲ್ಲಿ 18ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕರ್ತವ್ಯದಲ್ಲಿದ್ದ ಅವರ ಸಾವಿನ ಸುದ್ದಿ ತಿಳಿದ ಪೊಲೀಸ್ ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದರು.

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣೆ ಸಿಪಿಐ ಎಫ್.ಕೆ.ನದಾಫ್, ಪಿಎಸ್ಐ ಭೇಟಿ ನೀಡಿದ್ದರು. ಮೃತರಿಗೆ ಪತ್ನಿ ಹಾಗೂ 6 ವರ್ಷದ ಪುತ್ರಿ ಇದ್ದಾರೆ. 

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತರಾಜು ಅವರು ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ಚಿಕ್ಕ ಮಗು ಇರುವ ಅವರ ಕುಟುಂಬಕ್ಕೆ ಸರ್ಕಾರ ನೆರವಿನ ಹಸ್ತ ಚಾಚಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.