Friday, February 27, 2026
Google search engine
Home Blog Page 242

ತುಮಕೂರು: ಎಮ್ಮೆ ಮೇಲೆ‌ ಚಿರತೆ ದಾಳಿ

ತುಮಕೂರು: ಚಿರತೆಯೊಂದು ಮೇಯಲು ಹೋಗಿದ್ದ ಎಮ್ಮೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

https://youtu.be/z9LblZjMpIg

ಹೆಬ್ಬೂರು ಬಳಿಯ ಬಳ್ಳಗೆರೆ ಸಮೀಪದ ಶ್ರೀಕಂಠನ ಪಾಳ್ಯದಲ್ಲಿ ಘಟನೆ ನಡೆದಿದೆ.

ಹೆಬ್ಬೂರು ಹೋಬಳಿಯಲ್ಲಿ ನಾಲ್ಕೈದು ತಿಂಗಳಿನಿಂದಲೂ ಚಿರತೆಗಳ ಹಾವಳಿ ಹೆಚ್ಚಿದ್ದು, ಈಗಾಗಲೇ ಇಬ್ಬರು ಬಾಲಕರು ಬಲಿಯಾಗಿದ್ದಾರೆ.

ಈಚೆಗಷ್ಟೇ ಚಿರತೆಯೊಂದನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಈಗ ಸಾಕು ಪ್ರಾಣಿಯ ಮೇಲಿನ ದಾಳಿ ಈ ಭಾಗದ ಜನರನ್ನು ಆತಂಕಕ್ಕೆ ತಳ್ಳಿದೆ. ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಕೂಡಲೇ ಮುಂದಾಗಬೇಕು ಎಂದು ಬಳ್ಳಗೆರೆ ದಯಾನಂದ್ ಒತ್ತಾಯಿಸಿದ್ದಾರೆ.

ಹಾಳಾದೊವೆರಡು ಮೊಲೆ ಬಂದು..

ಜಿ ಎನ್ ಮೋಹನ್‌


ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ
ಕೈ ಗಕ್ಕನೆ ನಿಂತಿತು.

ಒಂದಷ್ಟು ಹೊತ್ತು ಅಷ್ಟೇ,
ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು.
ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು.
ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು
ಒಂದು ಹನಿ ಬೇಡ ಬೇಡವೆಂದರೂ ಅದೇ ಹಾಳೆಗಳ ಮೇಲೆ ಜಾರಿ ಬಿದ್ದೇ ಬಿಟ್ಟಿತು‘ಮತ್ತದೇ ಸಂಜೆ.. ಅದೇ ಏಕಾಂತ..’ ಅನಿಸಿಬಿಟ್ಟಾಗಲೆಲ್ಲಾ ನನ್ನ ಮನಸ್ಸು ತಡಕುವುದು ಪುಸ್ತಕಗಳನ್ನೇ
ಹಾಗೆ ಅಂದೂ ಸಹಾ ಕಪಾಟಿನಲ್ಲಿದ್ದ ಒಂದು ಪುಸ್ತಕವನ್ನು ಎಳೆದುಕೊಂಡಿತ್ತು.

ನಾಲಿಗೆ ಮತ್ತೆ ಮತ್ತೆ ಅದೇ ಹಲ್ಲಿಗೆ ಹೊರಳುವ ಹಾಗೆ ನಾನು ಕೈಗೆತ್ತಿಕೊಂಡಿದ್ದು
ಚಂದ್ರಶೇಖರ ಆಲೂರರ ‘ಆನು ಒಲಿದಂತೆ ಹಾಡುವೆ’
ನನ್ನ ಕಾಲಕ್ಕೆ ಜಾರಲು ಆ ಪುಸ್ತಕ ಒಂದು ನೆಪ ಅಷ್ಟೇಹಾಗೆ ಜಾರುತ್ತಿರುವಾಗಲೇ ಅದು ಕಣ್ಣಿಗೆ ಬಿತ್ತು-

‘ಸುಮಕೆ ಸೌರಭ ಬಂದ ಗಳಿಗೆ’ನನ್ನ ಮನಸ್ಸು ಓಡಿದ್ದು ಅಂಗೋಲಾದ ಕಡೆಗೆ
ದೂರದ ಆಫ್ರಿಕಾ ಖಂಡದ ಅಂಗೋಲಾ ದೇಶದ ಕಡೆಗೆಒಂದಷ್ಟು ದಿನದ ಹಿಂದೆ ಗೆಳೆಯ ಪ್ರಸಾದ್ ನಾಯ್ಕ್ ಫೋನ್ ಮಾಡಿದ್ದ.

ನಿಮ್ಮ ಮೇಲ್ ನೋಡಿ ಅಂತ
ನಾನು ಸುರತ್ಕಲ್ ನಿಂದ ಅಂಗೋಲಾಗೆ ಹಾರಿದ ಹುಡುಗ ಇನ್ನೇನು ಬರೆದಿರುತ್ತಾನೆ. ಎಂದುಕೊಂಡೇ ಕಂಪ್ಯೂಟರ್ ಆನ್ ಮಾಡಿದ್ದೆ ಮೊದಲ ಬಾರಿಗೆ ವಿದೇಶಕ್ಕೆ ಹೋದವರು ಬೆರಗುಗಣ್ಣು ಬಿಟ್ಟುಕೊಂಡು ಅಲ್ಲಿನ ಭರ್ಜರಿ ಕಟ್ಟಡವನ್ನೋ, ಪುಷ್ಕಳ ಊಟವನ್ನೋ ಇಲ್ಲವೇ ಪಬ್ ನಲ್ಲಿ ಬಿಯರ್ ಹೀರಿದ್ದನ್ನೋ ಬಣ್ಣಿಸಿರುತ್ತಾರೆ. ಹಾಗೆಂದು ಬಲವಾಗಿ ನಂಬಿಕೊಂಡೇ ಕ್ಲಿಕ್ ಮಾಡಿದ ನಾನು ಗರ ಹೊಡೆದು ಕುಳಿತುಬಿಟ್ಟೆ.

ಪ್ರಸಾದ್ ಒಂದು ಕಗ್ಗತ್ತಲ ಕಾಲವನ್ನು ಹಿಡಿದು ನನ್ನೆದುರು ನಿಂತಿದ್ದ. ಇನ್ನೂ ನಿನ್ನೆ ಮೊನ್ನೆ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಹುಡುಗಿಯನ್ನು ಹುಡುಕಿಕೊಂಡು ಯೌವ್ವನ ಹೆಜ್ಜೆಯಿಡುವಾಗ ಅದನ್ನು ನಾನು ‘ಸುಮಕೆ ಸೌರಭ ಬರುವ ಗಳಿಗೆ’ ಎಂದೇ ತಿಳಿದಿದ್ದೆನಾನೊಬ್ಬನೇ ಏಕೆ?.

ಆ ಪುಸ್ತಕವೂ ಹಾಗೇ ನಂಬಿತ್ತು.ಆದರೆ ಅಲ್ಲೊಂದು ಲೋಕವಿತ್ತು. ಯೌವನವೆನ್ನುವುದು ಸದ್ದು ಮಾಡದೆ, ಕಳ್ಳ ಹೆಜ್ಜೆ ಹಾಕುತ್ತ ಒಳಗೆ ಲಗ್ಗೆ ಹಾಕುತ್ತದೆ ಎನ್ನುವುದು ಒಂದು ಭಯಾನಕ ದುಸ್ವಪ್ನವಾಗಿದ್ದ ಲೋಕಅಂಗಳದಲ್ಲಿ ಆಡುವ ಮಗು ನಾನು ದೊಡ್ಡವಳಾಗಿಬಿಟ್ಟರೆ ಎಂದೇ ಬೆಚ್ಚಿ ಬೀಳುವ ಲೋಕನನಗೆ ಯೌವನ ಬೇಡ ಎಂದು ನಿದ್ರೆಯಲ್ಲಿ ದುಃಸ್ವಪ್ನ ಕಂಡು ಚೀರಿ ಎದ್ದು ಕುಳಿತುಕೊಳ್ಳುವವರ ಲೋಕಯೌವನ ಇನ್ನೇನು ನನ್ನನ್ನು ತಾಕುತ್ತದೆ ಎನ್ನುವ ಕಾರಣಕ್ಕೆ
ಇದ್ದ ಧೈರ್ಯವೆಲ್ಲಾ ಕುಸಿದು ಮನಶ್ಶಾಸ್ತ್ರಜ್ಞರನ್ನು ಹುಡುಕಿ ಹೋಗುತ್ತಿರುವವರ ಲೋಕಅಷ್ಟೇ ಅಲ್ಲ, ಯೌವನದ ಆಗಮನವನ್ನು ಧಿಕ್ಕರಿಸಿ ಸಾವಿಗೆ ಶರಣಾಗುತ್ತಿದ್ದವರ ಲೋಕಎದೆ ಗುಬ್ಬಿ ಮೂಡುತ್ತಿದೆ ಎಂದರೆ ಸಾಕು ಎಷ್ಟೋ ಮನೆಗಳಲ್ಲಿ ಬೆಂಕಿ ಒಲೆ ಸಿದ್ಧವಾಗುತ್ತಿತ್ತು.

ಕಲ್ಲು, ಬಟ್ಟಲು ಆ ಬೆಂಕಿಯಲ್ಲಿ ಕಾಯುತ್ತಿದ್ದವು.
ತೆಂಗಿನ ಚಿಪ್ಪಿನೊಳಗೆ ಕೆಂಡ ಸೇರುತ್ತಿದ್ದವು
ಹಾಗೆ ತಯಾರಾದ ಬೆಂಕಿಯನ್ನು ಕೈನಲ್ಲಿಟ್ಟುಕೊಂಡ ಅಮ್ಮಂದಿರು
ಮಕ್ಕಳನ್ನು ಹಿಡಿದುಕೊಂಡು ಇನ್ನು ಮೊಲೆ ಮೂಡುವುದೇ ಇಲ್ಲ.

ಎನ್ನುವಂತೆ ಅದನ್ನು ಸುಟ್ಟು ಹಾಕಿಬಿಡುತ್ತಿದ್ದರುಹಾಹಾಕಾರ, ನೋವು, ಅಳು ಯಾವುದೂ ಈ ಎದೆ ಸುಡುವಿಕೆಯನ್ನು ತಡೆಯುತ್ತಿರಲಿಲ್ಲಮೊಲೆ ಇಲ್ಲವಾಗಿಬಿಡಬೇಕು ಎನ್ನುವುದಷ್ಟೆ ಅಲ್ಲಿದ್ದ ಆತಂಕಅದನ್ನು ‘ಬ್ರೆಸ್ಟ್ ಐರನಿಂಗ್’ ಎನ್ನುತ್ತಾರೆ.

‘ಎದೆ ಇಸ್ತ್ರಿ’ಒಂದು ದಿನ ಹೀಗೆ ಮನಸ್ಸಿಗೆ ಏನು ಕವಿದುಕೊಂಡಿತ್ತೋ
ನಾನು ಹಾಗೂ ಎಸ್ ಕೆ ಕರೀಂ ಖಾನ್ ಕಡಲ ತಡಿಯಲ್ಲಿ ಹೆಜ್ಜೆ ಹಾಕುತ್ತಿದ್ದೆವು.

ಕತ್ತಲ ರಾತ್ರಿ,
ಎಲ್ಲೂ ಕಾಣದ ಚಂದ್ರಮನ ಬೆಳಕು ಮನಸ್ಸಿಗೆ ಇನ್ನಷ್ಟು ಕಳವಳ ತುಂಬಿತ್ತುಅವರು ಹೇಳಿ ಕೇಳಿ ‘ಜಾನಪದ ಜಂಗಮ’
ನನ್ನ ಮನಸ್ಸಿಗೆ ಕಳವಳಕ್ಕೆ ಮಾತು ಕೊಟ್ಟರೋ ಎನ್ನುವಂತೆ ದನಿ ಎತ್ತಿದರು‘ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ.

ಹಾಳಾದೋವೆರಡು ಮೊಲೆ ಬಂದು। ನನ್ನಪ್ಪ
ಕಂಡೋರ್ಗೆ ನನ್ನ ಕೊಡುತಾನೆ’ಅರೆ! ನಾನು ಎಂದೂ ಕೇಳದ ಸಾಲು ಅದು
ಆಗ ತಾನೇ ಯೌವನವನ್ನು ಕೈಗೆಟುಕಿಸಿಕೊಂಡಿದ್ದ,
‘ಕಾಮಾನ ಬಾಣ ಆತುರ ತರವೇನಾ’ ಎನ್ನುವ ಹುಮ್ಮಸ್ಸಿನಲ್ಲಿದ್ದವನನಗೆ ಕಂಡಿದ್ದೆಲ್ಲವೂ ಕಾಮನ ಬಾಣವೇ ಆಗಿ ಕಾಣುತ್ತಿತ್ತು
ಪ್ರತೀ ಮರದ ಹಿಂದೆಯೂ ಹೂ ಬಿಲ್ಲ ಹಿಡಿದ ಮನ್ಮಥರೇ.

ಯೌವನ ಎನ್ನುವುದು ನನಗೆ ಅಂತಹ ಕನಸು ಕೊಟ್ಟಿತ್ತುಆದರೆ.. ಆದರೆ ಇಲ್ಲಿ ಕಡಲ ಬೋರ್ಗರೆತವನ್ನೂ ಮೀರುವಂತೆ
ಈ ಅಜ್ಜ ಕರೀಂಖಾನ್ ಹಾಡುತ್ತಿರುವುದಾದರೂ ಏನು?ತನ್ನ ಬಾಳಿ ಬದುಕಿದ ಮನೆಯನ್ನ, ತನ್ನ ತವರನ್ನ, ತನ್ನ ಖುಷಿಯನ್ನ ಆಗಲಿ ಹೋಗಬೇಕಲ್ಲಾ ಎನ್ನುವ ಕಾರಣಕ್ಕೆ
ಮುಂದೆಲ್ಲಿ ಹೋಗುತ್ತೇನೋ, ಏನು ಕಾಣಬೇಕಿದೆಯೋ ಎನ್ನುವ ಕಾರಣಕ್ಕೋ
ಆಕೆ ಈ ಅಗಲಿಕೆಗೆ ಕಾರಣವಾಗಿ ಮೂಡಿರುವ ತನ್ನ ಮೊಲೆಯನ್ನೇ ದ್ವೇಷಿಸುತ್ತಿದ್ದಾಳೆ ಯಾವುದು ಸಂಭ್ರಮದ ಸೂಚಕ ಎಂದು ನಾನಂದುಕೊಂಡಿದ್ದೆನೋ ಅದನ್ನು ಆಕೆ
‘ಹಾಳಾದೋವೆರಡು’ ಎಂದು ಬಣ್ಣಿಸುತ್ತಿದ್ದಾಳೆ.

ಅಲ್ಲಿ ಆ ಅಂಗೋಲಾದ ಹುಡುಗ ಹೇಳುತ್ತಿರುವ ಕ್ಯಾಮೆರೂನ್ ನ ಕಥೆಯಲ್ಲಿ
ಮೊಲೆಗಳನ್ನೇ ಸುಟ್ಟು ಹಾಕುತ್ತಿದ್ದಾರೆತನ್ನ ಮನೆಯಲ್ಲಿರುವ ಹುಡುಗಿಗೆ ಮೊಲೆ ಬಂತು ಎಂದು ಗೊತ್ತಾದರೆ ಸಾಕು
ಎಲ್ಲಿ ಅವಳನ್ನು ಅತ್ಯಾಚಾರ ಮಾಡಿಬಿಡುತ್ತಾರೋ, ಎಲ್ಲಿ ಹೊತ್ತೊಯ್ದುಬಿಡುತ್ತಾರೋ
ಎಲ್ಲಿ ಅವಳನ್ನು ಕೊಂದುಬಿಡುತ್ತಾರೋ ಎನ್ನುವ ತಾಯಂದಿರ ಆತಂಕವೇ ಈ ಎಲ್ಲಕ್ಕೂ ಕಾರಣವಾಗಿ ಹೋಗಿತ್ತು.

ಎದೆ ಎನ್ನುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರುಚೀನಾದಲ್ಲಿ ಹೀಗೆ ಪಾದಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಓದಿ ಗೊತ್ತಿತ್ತು
ಪಾದಗಳು ಬೆಳೆಯದಂತೆ ಹಸುಗೂಸುಗಳಿಗೆ ಇನ್ನೂ ತೊಟ್ಟಿಲಲ್ಲಿರುವಾಗಲೇ
ಗಟ್ಟಿ ಬಟ್ಟೆ ಕಟ್ಟಲು ಶುರು ಮಾಡುತ್ತಾರೆ
ಇದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ
ಇನ್ನು ಮುಂದಕ್ಕೆ ಪಾದ ಬೆಳೆಯುವುದಿಲ್ಲ ಎಂದು ಗೊತ್ತಾಗುವವರೆಗೆಆದರೆ ಅಲ್ಲಿ ಅದು ಸೌಂದರ್ಯಕ್ಕಾಗಿ.
ಪುಟ್ಟ ಪಾದಗಳೇ ಸೌಂದರ್ಯ ಎಂದು ನಂಬಿರುವವರ ನಾಡು ಅದು
ಅಲ್ಲಿ ಅದು ಇನ್ನೂ ಚೆನ್ನಾಗಿ ಕಾಣಸಿಕೊಳ್ಳಲು ಮಾಡಿಕೊಂಡಿದ್ದ ದಾರಿಆದರೆ ಇಲ್ಲಿ ಸೌಂದರ್ಯವನ್ನೇ ಸುಟ್ಟುಕೊಳ್ಳುತ್ತಿದ್ದರು.

ಅದು ಅವರಿಗೆ ಆಯ್ಕೆಯಾಗಿರಲಿಲ್ಲ, ಆತಂಕದ ಕರಿಮೋಡವಾಗಿತ್ತುಅಲ್ಲಿಗೊಬ್ಬ ಬಂದ. ಗಿಲ್ಡಾಸ್ ಪಾರ್ ಎಂಬಾತ.
‘ಪ್ಲಾಸ್ಟಿಕ್ ಡ್ರೀಮ್’ ಎನ್ನುವ ತನ್ನ ಯೋಜನೆಗೆ ಫೋಟೋಗಳನ್ನು ಕ್ಲಿಕ್ಕಿಸಲುಆಗಲೇ ಆತ ಬೆಚ್ಚಿ ಬಿದ್ದದ್ದು.

ಕ್ಯಾಮೆರೂನ್ ನಲ್ಲಿದೆ ಎಂದುಕೊಂಡಿದ್ದ ಬ್ರೆಸ್ಟ್ ಐರನಿಂಗ್ ನೋಡಿದರೆ ಆಫ್ರಿಕಾದ ಬಹುತೇಕ ಎಲ್ಲಾ ದೇಶಗಳಲ್ಲೂ ಇತ್ತುಅಷ್ಟೇ ಅಲ್ಲ ನಿಧಾನವಾಗಿ ಇತರ ದೇಶಕ್ಕೂ ಹೆಜ್ಜೆ ಹಾಕಿತ್ತು

ಆಗ ಆತ ತನ್ನ ಯೋಜನೆಯನ್ನೇ ಬದಲಿಸಿದತಾಯಂದಿರ ಮನ ಒಲಿಸಿ ಈ ಕರಾಳ ಆಚರಣೆಯನ್ನು ಸಮಾಜದ ಎದುರು ಫೋಟೋಗಳ ಮೂಲಕ ತೆರೆದಿಡುತ್ತಾ ಹೋದ
ಗೊತ್ತಿಲ್ಲ ಎಷ್ಟು ಮಕ್ಕಳು ಬಚಾವಾಗಿದ್ದಾರೆ.

ಎಂದುಇದೆಲ್ಲಾ ಓದುತ್ತಿರುವಾಗಲೇ ನನ್ನಒಳಗೆ ಏನೋ ಒಂದು ನೆನಪು. ಕದಲಿದಂತಾಯ್ತುಮಸುಕು ಮಸುಕಾಗಿ ಮೂಡುತ್ತಿದ್ದ ಪದಗಳನ್ನು ಜೋಡಿಸುತ್ತಾ ಹೋದೆ‘ಮೈ ನೆರೆದ ಮಗಳೊಬ್ಲು ಮನೆಯಲ್ಲಿದ್ದಾಳಂದ್ರೆ
ಊರ ಒಡೆಯ ಸೀರೆ ಕುಬುಸ ತರತೀನಂದ
ಕಲ್ಲು ಮುಳ್ಳಿಗೆ ಹೇಳಲಾ ನನ ಗೋಳ
ನಾನೇ ಕಲ್ಲಾಗೋಗಲಾ..’ಹಳ್ಳಿ ಹಳ್ಳಿಗಳೊಳಗೆ ಅದೇ ಎದೆ ಗುಬ್ಬಿ ಮೂಡುತ್ತಿದ್ದ ತಕ್ಷಣ ಎರಗುತ್ತಿದ್ದ.
ಹದ್ದುಗಳ ಬಗ್ಗೆ ಕೆ ರಾಮಯ್ಯ ಬರೆದ ಕವಿತೆಯಿದು.
ಎಲ್ಲರ ಬಾಯಲ್ಲಿ ಹೋರಾಟದ ಹಾಡಾಗಿ ಚಿಮ್ಮಿತ್ತುಈಗ ಹೇಳಿ ‘ಸುಮಕೆ ಸೌರಭ ಬಂದ ಗಳಿಗೆ’ ಯಾವುದು??

ಕಾರ್ಮಿಕರಿಗೆ ಆಹಾರ ಕಿಟ್ ನಲ್ಲೂ ಪಕ್ಷಪಾತ: ಬಿಜೆಪಿ, ಸಿಪಿಎಂ ತಿಕ್ಕಾಟ

publicstory. in


Tumkuru:: ಕೋವಿಡ್ ಲಾಕ್ಡೌನ್ ಸಂತ್ರಸ್ತ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರು ಹಾಗು ಇತರೆ ಅಸಂಘಟಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿತರಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಕುರಿತು ಸಮಗ್ರ ತನಿಖೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಸಕಾ೯ರವನ್ನು ಒತ್ತಾಯಿಸಿವೆ.

ಹಲವೆಡೆ ಅಹ೯ ಕಟ್ಟಡ ಕಾಮಿ೯ಕರಿಗೆ, ವಲಸೆ ಕಾಮಿ೯ಕರಿಗೆ, ಮತ್ತಿತರೆ ಅಸಂಘಟಿತ ಕಾಮಿ೯ಕರಿಗೆ ಆಹಾರ ಕಿಟ್ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿಗಳ ಆದೇಶದಂತೆ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ಸಿದ್ಧ ಪಡಿಸಿದ್ದ 60 ಸಾವಿರ ಆಹಾರ ಕಿಟ್ ಗಳನ್ನು ಬಿಬಿಎಂಪಿಗೇ ಮಂಡಳಿ ನೀಡಿದೆ. ಅವುಗಳನ್ನು ಯಾರಿಗೆ ವಿತರಿಸಲಾಗಿದೆ ಎಂದು ಇದುವರೆಗೂ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ದೂರಿದೆ.

ಹಲವೆಡೆ ಸ್ಥಳೀಯ ಆಡಳಿತಾರೂಡ ಬಿಜೆಪಿಯ ಕಾಪೋ೯ರೇಟರ್ಗಳು ಆಹಾರ ಕಿಟ್ ಕೇಳುವ ಕಾಮಿ೯ಕರಿಂದ ಮತದಾರರ ಗುರುತಿನ ಚೀಟಿ ಕೇಳುತ್ತಿರುವ ದೂರುಗಳು ಬರುತ್ತಿವೆ. ವಲಸೆ ಕಾಮಿ೯ಕರು ತಮ್ಮದೇ ಮಂಡಳಿಯ ಹಣದಿಂದ ತಮಗೆ ಸಿಗಬೇಕಿದ್ದ ಆಹಾರ ಕಿಟ್ ಗಳು ತಮಗೆ ಸಿಗದೆ ವಂಚಿತರಾಗಿದ್ದಾರೆ. ಆದರೆ ಸ್ಥಳೀಯ ಬಿಜೆಪಿಯ ಕಾಪೋ೯ರೇಟರ್ಗಳು ಮಂಡಳಿಯ ನಿಧಿಯ ಆಹಾರ ಕಿಟ್ ಗಳನ್ನು ಕಟ್ಟಡ ಕಾಮಿ೯ಕರಲ್ಲದ ತಮಗೆ ಮತ ನೀಡಿದವರಿಗೆ ನೀಡುತ್ತಿರುವ ದೂರುಗಳು ಕೇಳಿಬರುತ್ತಿವೆ ಎಂದು ಆಪಾದಿಸಿದೆ.

ರಾಜ್ಯ ಹೈಕೋಟಿ೯ನ ಮಧ್ಯ ಪ್ರವೇಶದಿಂದಾಗಿ ಹಾಗು ಮಾಧ್ಯಮಗಳಲ್ಲಿ ಸುದ್ದಿಯಾದ ಬಿಜೆಪಿಯ ಶಾಸಕರು ತಮ್ಮ ಸ್ಟಿಕ್ಕರ್ಸ ಅಂಟಿಸಿ ಮಂಡಳಿಯ ಆಹಾರ ಕಿಟ್ ಗಳ ವಿತರಣೆ ಮಾಡಿದ ಕುರಿತು ಬಂದ ಟೀಕೆಗಳಿಂದಾಗಿ ಬಿಬಿಎಂಪಿ ಪೂವ೯ ವಲಯದಲ್ಲಿ ಮಾತ್ರ ಕೆಲವು ಕಾಮಿ೯ಕರಿಗೆ ವಿತರಿಸಲಾಗಿದೆ.

ಉಳಿದಂತೆ ಇತರೆಡೆಗಳಲ್ಲಿ ಅಹ೯ರಿಗೆ ಆಹಾರ ಕಿಟ್ಗಳು ತಲುಪಿಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ 1.39 ಲಕ್ಷ ಆಹಾರ ಕಿಟ್ ಗಳನ್ನು ವಿಕೋಪ ಪರಿಹಾರ ನಿಧಿಯ ಹಣದಿಂದ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಿ೯ಕ ಸಂಘಟನೆಗಳ ಪ್ರತಿನಿಧಿಗಳು ಮಂಡಳಿಯ ಸಿದ್ದ ಆಹಾರ ವಿತರಣೆ ಮಾಡುತ್ತಾ ಆಹಾರ ಕಿಟ್ ಗಳು ಸಿಗದ ಕಟ್ಟಡ ಕಾಮಿ೯ಕರ ಪಟ್ಟಿಯನ್ನು ಮಾಡುತ್ತಿದ್ದಾಗ ಯಡಿಯೂರು ವಾಡ್೯ನ ಮಾಜಿ ಕಾಪೋ೯ರೇಟರ್ ಒಬ್ಬರು ಕಾಮಿ೯ಕ ಸಂಘಟನೆಯ ಪ್ರತಿನಿಧಿಗೆ ಬೆದರಿಕೆ ಒಡ್ಡಿ ಪಟ್ಟಿಯನ್ನು ಹರಿದು ಹಾಕಿದ್ದಾರೆ.
ಪರಿಹಾರ ಕಾಯ೯ಕ್ಕೆ ತೊಡರಾಗುತ್ತಿದ್ದಾರೆ. ಇಂತಹ ಗುಂಡಾ ಪ್ರವೃತ್ತಿಯನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದು ಸಿಪಿಎಂ ಬೆಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದ್ದಾರೆ.

ಗುರು ಪುಷ್ಯ ಯೋಗ ನಿಮಗೆಷ್ಟು ಗೊತ್ತು..?

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಗುರು ಪುಷ್ಯ ಯೋಗ ವೈದಿಕ ಸಂಪ್ರದಾಯದ ಪ್ರಕಾರ ತಿಥಿ ನಕ್ಷತ್ರ ವಾರಗಳ ಕೆಲವು ಸಂಯೋಗಗಳನ್ನು ಶುಭವೆಂದು ಹೇಳಲಾಗುವುದು ಮತ್ತು ಈ ದಿನಗಳಲ್ಲಿ ಹೊಸ ಕಾರ್ಯಗಳನ್ನು ಆರಂಭಿಸಲು ಸೂಕ್ತವಾಗಿದೆ.

ಈ ಸಂಯೋಗಗಳು ಇರುವ ದಿನಗಳಂದು ಮಾಡಿದ ಕೆಲಸ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅದರಲ್ಲಿ ಈ ದಿನದ ವಿಶೇಷತೆ ಗುರು ಪುಷ್ಯ ಯೋಗವು ಗುರುವಾರ ಪುಷ್ಯ ನಕ್ಷತ್ರದಲ್ಲಿ ರೂಪಗೊಳ್ಳುತ್ತದೆ ಗುರು ಜ್ಞಾನದ ಸಂಕೇತವಾಗಿರುತ್ತದೆ ಮತ್ತು ಗುರು ಅತ್ಯಂತ ಶುಭ ಗ್ರಹವಾಗಿದ್ದು ಪುಷ್ಯ ನಕ್ಷತ್ರ ವನ್ನು ಮೃದು ಮತ್ತು ಶುಭವೆಂದು ಪರಿಗಣಿಸಲಾಗಿದೆ.

ಇದನ್ನು ಮಹಾನಕ್ಷತ್ರ ಎಂದು ಕರೆಯುತ್ತಾರೆ. ಇವೆರಡು ಸೇರಿದಾಗ ಉತ್ತಮ ಅವಧಿ ಉಂಟಾಗುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಕೆಲಸವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಗುರುಪುಷ್ಯ ಯೋಗವನ್ನು ಗುರುಪುಷ್ಯಮೃತ್ ಯೋಗವೆಂದು ಕರೆಯುತ್ತಾರೆ.

ಈ ದಿನದಂದು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಲು ಮತ್ತು ಆಶೀರ್ವಾದ ಪಡೆಯಲು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಾಚಕರು ಯೋಗದ ದಿನವನ್ನು ಸದುಪಯೋಗಪಡಿಸಿಕೊಳ್ಳಿ. ಸ್ನಾನಾದಿಗಳನ್ನು ಮುಗಿಸಿ ದೇವರ ಪೂಜೆ, ಮಂತ್ರ ಜಪ, ಗುರು ಆಶೀರ್ವಾದ ಹಿರಿಯರ ಆಶೀರ್ವಾದ ಉಪಯುಕ್ತ ವಸ್ತುಗಳ ಖರೀದಿ ಶುಭಕಾರ್ಯಗಳ ಪ್ರಾರಂಭ, ಗುರುಗಳ ಸ್ಮರಣೆ, ಧಾನ್ಯದಾನ ದೇವರ ದರ್ಶನ ಸಂಕಲ್ಪ ಎಲ್ಲವೂ ಅದ್ಭುತವಾದ ಫಲ ನೀಡುತ್ತವೆ.

ಹಾಗೂ ಶುಭಕಾರ್ಯಗಳನ್ನು ಕೈಗೊಳ್ಳಲು ತುಂಬಾ ಉಪಯುಕ್ತವಾಗಿದೆ. ಮತ್ತು ಈ ದಿನದ ವಿಶೇಷವೇನೆಂದರೆ ಕೈಗೊಂಡ ಕೆಲಸ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಎಲ್ಲರಿಗೂ ಧನ್ಯವಾದಗಳು ಶುಭಮಸ್ತು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ


ದಿನಾಂಕ : 30, ಏಪ್ರಿಲ್ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಗುರುವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಸಪ್ತಮಿ
(ನಿನ್ನೆ ಸಂಜೆ 3 ಗಂ॥ 9 ನಿ।। ರಿಂದ
ಇಂದು ಮಧ್ಯಾಹ್ನ 2 ಗಂ॥ 34 ನಿ।। ತನಕ)
ನಕ್ಷತ್ರ : ಪುಷ್ಯ
(ಇಂದು ಪ್ರಾತಃಕಾಲ 2 ಗಂ॥ 1 ನಿ।। ರಿಂದ
ಮರುದಿನ ಪ್ರಾತಃಕಾಲ 1 ಗಂ॥ 50 ನಿ।। ತನಕ)
ಯೋಗ : ಶೂಲ
ಕರಣ : ವಣಿಕ್
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 57 ನಿ।। ರಿಂದ ಇಂದು ಬೆಳಿಗ್ಗೆ 11 ಗಂ॥ 32 ನಿ।। ತನಕ)
ಅಮೃತಕಾಲ : (ನಿನ್ನೆ ರಾತ್ರಿ 11 ಗಂ॥ 33 ನಿ।। ರಿಂದ ಇಂದು ಪ್ರಾತಃಕಾಲ 1 ಗಂ॥ 10 ನಿ।। ತನಕ)(ಇಂದು ರಾತ್ರಿ 7 ಗಂ॥ 28 ನಿ।। ರಿಂದ ಇಂದು ರಾತ್ರಿ 9 ಗಂ॥ 3 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 10 ಗಂ॥ 5 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 56 ನಿ।। ತನಕ)(ಇಂದು ಸಂಜೆ 3 ಗಂ॥ 10 ನಿ।। ರಿಂದ ಇಂದು ಸಂಜೆ 4 ಗಂ॥ 1 ನಿ।। ತನಕ)
ರಾಹುಕಾಲ : (ಇಂದು ಮಧ್ಯಾಹ್ನ 1 ಗಂ॥ 48 ನಿ।। ರಿಂದ ಇಂದು ಸಂಜೆ 3 ಗಂ॥ 23 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 9 ಗಂ॥ 1 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 36 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 47 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 50 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 35 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಕಟಕ

ಮೇಷ ರಾಶಿ : 30 Apr 2020
ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ನೀವು ಅದನ್ನು ಮಾಡದಿದ್ದರೆ ಅವರ ಆರೋಗ್ಯವು ಹದಗೆಡಬಹುದು ಮತ್ತು ಅವರ ಆರೋಗ್ಯದ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆಳುತ್ತದೆ. ಈ ತಮಇದನ್ನು ಮಾಡುವುದರಿಂದ ನಿಮ್ಮ ನಡುವಿನ ಪ್ರೀತಿಯಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಸಂಗಾತಿಯು ಅವನ / ಅವಳ ಜೀವನದಲ್ಲಿ ನಿಮ್ಮ ಮೌಲ್ಯವನ್ನು ವಿವರಿಸುವ ಕೆಲವು ಸುಂದರ ಪದಗಳನ್ನು ಇಂದು ನಿಮಗೆ ನೆನಪಿಸುತ್ತಾರೆ. ಅದೃಷ್ಟ ಸಂಖ್ಯೆ: 5

ವೃಷಭ ರಾಶಿ : 30 Apr 2020
ಜೀವನದೆಡೆಗೆ ಉದಾರವಾದ ಮನೋಭಾವ ಹೊಂದಿ. ದೂರು ನೀಡುವುದು ಮತ್ತು ನಿಮ್ಮ ಜೀವನಮಟ್ಟದ ಬಗೆಗೆ ಅಸಮಾಧಾನ ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದು ಜೀವನದ ಸುಗಂಧವನ್ನು ಹಾಳುಮಾಡುವ ಹಾಗೂ ಒಂದು ಸಮೃದ್ಧ ಜೀವನವನ್ನು ನಡೆಸುವ ಬಯಕೆಯನ್ನು ಸಾಯಿಸುವ ನೀಚ ಚಿಂತನೆಯಾಗಿದೆ. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ನೀವು ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯದೇ ಹೋದರೆ ಮನೆಯಲ್ಲಿ ಸಮಸ್ಯೆಗಳನ್ನು ನಿರೀಕ್ಷಿಸಬಹುದು. ನಿಮ್ಮ ಮದುವೆ ಈ ದಿನ ಒಂದು ಅದ್ಭುತವಾದ ಹಂತವನ್ನು ನೋಡುತ್ತದೆ. ಅದೃಷ್ಟ ಸಂಖ್ಯೆ: 4

ಮಿಥುನ ರಾಶಿ : 30 Apr 2020
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನೀವು ನಿಮ್ಮ ತಂತ್ರಗಳನ್ನು ಅಳವಡಿಸಿದಲ್ಲಿ ಇಂದು ಸ್ವಲ್ಪ ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ನೀವು ಬಾಕಿಯಿರುವ ಎಲ್ಲಾ ಕುಟುಂಬದ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಮೇಲೆ ಭಾವನಾತ್ಮಕ ಬೆದರಿಕೆಯನ್ನು ಬಳಸಬಾರದು. ಅದೃಷ್ಟ ಸಂಖ್ಯೆ: 2

ಕರ್ಕ ರಾಶಿ : 30 Apr 2020
ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ರಾಜ್ಯದ ನೀವು ಬಯಸಿದ ಟಾನಿಕ್ ನೀಡುತ್ತದೆ ಮತ್ತು ನಿಮಗೆ ಆತ್ಮವಿಶ್ವಾಸ ತರುತ್ತದೆ. ಹಣ ನಿಮ್ಮ ಕೈಗಳ ಮೂಲಕ ಸುಲಭವಾಗಿ ಜಾರಿಹೋದರೂ – ನಿಮ್ಮ ಅದೃಷ್ಟದ ತಾರೆಗಳು ನಿಮಗೆ ಹಣಕಾಸು ಸುಲಭವಾಗಿ ದೊರಕುವಂತೆ ಮಾಡುತ್ತದೆ. ಕೆಲಸದ ಒತ್ತಡ ಕಡಿಮೆಯಿದ್ದು ನೀವು ಕುಟುಂಬದ ಸದಸ್ಯರ ಜೊತೆಗಿನ ಸಮಯವನ್ನು ಆನಂದಿಸುವ ಒಂದು ದಿನ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ.ಅದೃಷ್ಟ ಸಂಖ್ಯೆ: 6

ಸಿಂಹ ರಾಶಿ : 30 Apr 2020
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ ಆದರೆ ಇಂದು ನೀವು ಅಗತ್ಯವಿರುವವರಿಗೆ ಹಣವನ್ನು ಕೊಟ್ಟು ವಿಶ್ರಾಂತಿಯನ್ನು ಅನುಭವಿಸುವಿರಿ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ಅದೃಷ್ಟ ಮಾಡುವ ಸ್ವಯಂ ಸೇವೆಯ ಕೆಲಸ ನೀವು . ಇಂದು ಮೆನೆಕೆಲಸದವರು ಬರದಿರಬಹುದು ಹಾಗೂ ಇದು ನಿಮ್ಮ ಸಂಗಾತಿಯ ಜೊತೆ ಒತ್ತಡವನ್ನು ಉಂಟುಮಾಡಬಹುದು. ಅದೃಷ್ಟ ಸಂಖ್ಯೆ: 4

ಕನ್ಯಾ ರಾಶಿ : 30 Apr 2020
ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ರಾಜ್ಯದ ನೀವು ಬಯಸಿದ ಟಾನಿಕ್ ನೀಡುತ್ತದೆ ಮತ್ತು ನಿಮಗೆ ಆತ್ಮವಿಶ್ವಾಸ ತರುತ್ತದೆ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ. ಕೆಟ್ಟ ಸಮಯಗಳು ನಮಗೆ ಇನ್ನೂ ಹೆಚ್ಚನ್ನು ನೀಡುತ್ತವೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠ ಕಲಿಯಲು ಪ್ರಯತ್ನಿಸಿ. ಧಾರ್ಮಿಕ ಮತ್ತು ಶುದ್ಧ ಪ್ರೀತಿಯನ್ನು ಅನುಭವಿಸಿ. ಅದೃಷ್ಟ ಸಂಖ್ಯೆ: 2

ತುಲಾ ರಾಶಿ : 30 Apr 2020
ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ- ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ನೀವು ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಹೊಂದಿದ್ದರೂ ವಾಹನ ಚಾಲನೆ ಮಾಡುವಾಗ ಹೆಚ್ಚುವರಿ ಆರೈಕೆಯನ್ನು ಹೊಂದಿಕೊಳ್ಳಿ. ಪ್ರೀತಿಯ ಜೀವನವನ್ನು ಬಲವಾಗಿ ಇಟ್ಟುಕೊಳ್ಳಲು ಬಯಸುತ್ತಿದ್ದರೆ, ಯಾರೋ ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ತನ್ನ ಪ್ರೀತಿಪಾತ್ರರ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಬೇಡಿ. ಪ್ರಯಾಣ ನಿಮ್ಮ ವ್ಯಾಪಾರ ಸಂಪರ್ಕಗಳನ್ನು ಸುಧಾರಿಸುವ ಸಾಧ್ಯತೆಯಿದೆ.ಅದೃಷ್ಟ ಸಂಖ್ಯೆ: 5

ವೃಶ್ಚಿಕ ರಾಶಿ : 30 Apr 2020
ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ಅದೃಷ್ಟ ಸಂಖ್ಯೆ: 7

ಧನು ರಾಶಿ : 30 Apr 2020
ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಮಕ್ಕಳಿಗೆ ಅವರ ಮನೆಗೆಲಸ ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ. ನಿಮ್ಮ ಪ್ರೀತಿಪಾತ್ರರೊಡನೆ ನಿಮ್ಮ ವೈಯಕ್ತಿಕ ಭಾವನೆಗಳು / ರಹಸ್ಯಗಳನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ನಿಮ್ಮ ಸಂಗಾತಿಯ ಜೊತೆ ಗಂಭೀರವಾದ ವಾದವನ್ನು ಹೊಂದಿರಬಹುದು. ಅದೃಷ್ಟ ಸಂಖ್ಯೆ: 4


ಮಕರ ರಾಶಿ : 30 Apr 2020
ಇತರರ ವಿರುದ್ಧ ದ್ವೇಷ ಕಾರುವುದು ಮಾನಸಿಕ ಒತ್ತಡವನ್ನು ನೀಡುತ್ತದೆ. ಇವುಗಳು ಜೀವನವನ್ನು ವ್ಯರ್ಥಗೊಳಿಸುವುದರಿಂದ ಮತ್ತು ನಿಮ್ಮ ಸಾಮರ್ಥ್ಯವನ್ನು ಕೊಲ್ಲುವುದರಿಂದ ನೀವು ಈ ರೀತಿಯ ಆಲೋಚನೆಗಳನ್ನು ತಪ್ಪಿಸಬೇಕು. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ವಾದಗಳು ಮತ್ತು ಜಗಳಗಳು ಮತ್ತು ಇತರರ ಜೊತೆ ಅನಾವಶ್ಯಕವಾಗಿ ದೋಷ ಕಂಡುಹಿಡಿಯುವದನ್ನು ತಪ್ಪಿಸಿ. ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಅದೃಷ್ಟ ಸಂಖ್ಯೆ: 4

ಕುಂಭ ರಾಶಿ : 30 Apr 2020
ನಿಮ್ಮ ಬಗ್ಗೆ ನಿಮಗೇ ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಒಂದು ಅದ್ಭುತ ದಿನ. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ನಿಮ್ಮ ವಿಚಿತ್ರ ವರ್ತನೆಯ ಹೊರತಾಗಿಯೂ ಸಂಗಾತಿ ಸಹಕಾರಿಯಾಗಿರುತ್ತಾರೆ. ಪ್ರೀತಿ ದೇವರ ಪೂಜೆಗೆ ಪರ್ಯಾಯವಾಗಿದೆ; ಇದು ಅತ್ಯಂತ ಆಧ್ಯಾತ್ಮಿಕವೂ ಹಾಗೂ ಧಾರ್ಮಿಕವೂ ಆಗಿದೆ. ಇಂದು ನೀವು ಇದನ್ನು ತಿಳಿಯುತ್ತೀರಿ. ಕೆಲವರಿಗೆ ವೃತ್ತಿಪರ ಬೆಳವಣಿಗೆ. ಇಲ್ಲಿಯವರೆಗೆ ಕೆಲವು ಕೆಲಸಗಳಲ್ಲಿ ನಿರತರಾಗಿರುವವರು ತಮಗಾಗಿ ಸಮಯವನ್ನು ಕಂಡುಕೊಳ್ಳಬಹುದು ಆದರೆ ಯಾವುದೇ ಕೆಲಸ ಬರುವುದರಿಂದ ನೀವು ಮತ್ತೆ ನಿರತರಾಗಿರಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಇಂದು ಪರಿಸ್ಥಿತಿಗಳು ನಿಮ್ಮ ಪರವಾಗಿರಬಹುದು. ಅದೃಷ್ಟ ಸಂಖ್ಯೆ: 1

ಮೀನ ರಾಶಿ : 30 Apr 2020
ಕೆಲವು ಬಿಕ್ಕಟ್ಟುಗಳು ಮತ್ತು ಭಿನ್ನಾಭಿಪ್ರಾಯಗಳು ನಿಮಗೆ ಕಿರಿಕಿರಿ ಹಾಗೂ ಆತಂಕವನ್ನು ತರಬಹುದು. ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ. ಒಂದು ವೈವಾಹಿಕ ಸಂಬಂಧವನ್ನು ಹೊಂದಲು ಒಳ್ಳೆಯ ಸಮಯ. ನಾಳೆ ಬಹಳ ತಡವಾಗುವುದರಿಂದ ನೀವು ನಿಮ್ಮ ಪ್ರಿಯತಮೆಗೆ ನಿಮ್ಮ ಸಂದೇಶವನ್ನು ಕೂಡಲೇ ತಿಳಿಸಬೇಕು. ಜನರು ನಿಮ್ಮ ಕೆಲಸದಲ್ಲಿನ ಪ್ರಯತ್ನಗಳಿಗೆ ನಿಮ್ಮನ್ನು ಗುರುತಿಸುತ್ತಾರೆ. ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಇಂದು ನೀವು ಕಚೇರಿಯಿಂದ ಬೇಗನೆ ಹೋರಾಡುತ್ತಿರಿ ಆದರೆ ದಾರಿಯಲ್ಲಿ ವಿಪರೀತ ಜಾಮ್‌ನಿಂದಾಗಿ ಇದನ್ನು ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಇದು ಒಂದು ಅನುಕೂಲಕರವಾದ ದಿನ, ಕೆಲಸದಲ್ಲಿ ಇದನ್ನು ಸೂಕ್ತವಾಗಿ ಬಳಸಿಕೊಳ್ಳಿ. ಅದೃಷ್ಟ ಸಂಖ್ಯೆ: 8

ತುಮಕೂರಿನಲ್ಲಿ ಕೊರೊನಾ ವ್ಯಕ್ತಿ ಸಾವು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 54 ಮಂದಿ ಕ್ವಾರಂಟೈನ್ ಗೆ

ತುಮಕೂರು: ನಗರದ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯಲ್ಲಿ ಕೋವಿಡ್-19ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.

ಪಿ-535 ವ್ಯಕ್ತಿಯು ಅಸ್ತಮಾ, ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 25ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಚಿಕಿತ್ಸೆಗೊಳಪಡಿಸಿ, ಗಂಟಲು ಸ್ರಾವವನ್ನು ಕೋವಿಡ್-19 ಪರೀಕ್ಷೆಗೆ ಬೆಂಗಳೂರಿಗೆ ಕಳಹಿಸಲಾಗಿತ್ತು.

2 ಬಾರಿ ಪರೀಕ್ಷಿಸಿದಲ್ಲಿ ಸೋಂಕು ಇಂದು ದೃಢಪಟ್ಟಿದೆ ಅವರು ಏಪ್ರಿಲ್ 26ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ.

ಅವರ ಮನೆಯಲ್ಲಿದ್ದ 4 ಜನರನ್ನು ಪತ್ಯೇಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗಿದೆ.

ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 51 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಹೆಚ್‍ಬಿ ಕಾಲೋನಿಯನ್ನು ಸಂಪೂರ್ಣವಾಗಿ “ಕಂಟೈನ್ಮೆಂಟ್ ವಲಯ” ಹಾಗೂ 1 ಕಿ.ಮೀ ಪ್ರದೇಶವನ್ನು ಬಫರ್ ವಲಯವೆಂದು ಪರಿಗಣಿಸಿ ಸೀಲ್‍ಡೌನ್ ಮಾಡಲಾಗಿದೆ.

ಈ ಪ್ರದೇಶದಲ್ಲಿ ಮೆಡಿಕಲ್ ತುರ್ತು ಸೇವೆ ಹೊರತುಪಡಿಸಿ, ಅನಗತ್ಯವಾಗಿ ಓಡಾಡಲು ಅವಕಾಶವಿರುವುದಿಲ್ಲ. ಇಲ್ಲಿ ಹೊರಗೆ/ಒಳಗೆ ಹೋಗುವ ಪ್ರವೇಶ ಒಂದೇ ಕಡೆ ಮಾಡಲಾಗಿದ್ದು, ಇನ್ಸಿಡೆಂಟ್ ಕಮಾಂಡರನ್ನು ನೇಮಕ ಮಾಡಲಾಗುತ್ತದೆ.

ಅವರು ಜನರ ಚಲನವಲನಗಳನ್ನು ವೀಕ್ಷಿಸುತ್ತಿರುತ್ತಾರೆ ಎಂದರು. ಈ ಪ್ರದೇಶದಲ್ಲಿರುವ ಜನರು ಭಯಪಡದೇ ಧೈರ್ಯವಾಗಿರಬೇಕು. ಲಾಕ್‍ಡೌನ್ ಮುಗಿಯುವವರೆಗೂ ಮನೆಯಲ್ಲಿದ್ದು, ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ತುಮಕೂರಿನಲ್ಲಿ ಮತ್ತೊಂದು ಕರೊನಾ ಸಾವು: ಜಯಪುರ, ಹೌಸಿಂಗ್ ಬೋರ್ಡ್ ಸೀಲ್ ಡೌನ್

ತುಮಕೂರು: ನಾಲ್ಕು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ನ್ನು ಸೀಲ್ ಡೌನ್ ಮಾಡಲಾಗಿದೆ.

ಏಪ್ರಿಲ್ 26ರಂದು ವ್ಯಕ್ತಿ ಮೃತಪಟ್ಟಾಗ ಅಂದು ಸಂಬಂಧಿಕರಿಗೆ ಶವವನ್ನು ನೀಡಲಾಗಿತ್ತು. ನಾಗವಲ್ಲಿ ಸಮೀಪ ಜನರು, ಸಂಬಂಧಿಕರು‌ ಸೇರಿಕೊಂಡು ಅಂತ್ಯಕ್ರಿಯೆ‌ ನೆರವೇರಿಸಿದ್ದರು.

ಆದರೆ ಇಂದು ಜಿಲ್ಲಾಡಳಿತ ಏಪ್ರಿಲ್ 25ರಂದು ತೆಗೆದುಕೊಂಡಿದ್ದ ರಕ್ತ ಮಾದರಿ ತೆಗೆದುಕೊಂಡಿರುವ ವರದಿ ಬಂದಿದೆ. ಅದರಲ್ಲಿ ಮೃತ ವ್ಯಕ್ತಿಗೆ ಪಾಸಿಟೀವ್ ಇರುವುದು ಕಂಡುಬಂದಿದೆ ಎಂಬ ಕಾರಣ ನೀಡಿ ಸಾವಿಗೀಡಾಗಿದ್ದ ವ್ಯಕ್ತಿ ಇದ್ದ ಜಯಪುರ ಮತ್ತು ಹೌಸಿಂಗ್ ಬೋರ್ಡ್ ಅನ್ನು ಸೀಲ್ ಡೌನ್ ಮಾಡಲಾಗಿದೆ.

ಆದರೆ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಮೃತಪಟ್ಟ ವ್ಯಕ್ತಿಗೆ ಸೋಂಕಿರುವುದನ್ನು ದೃಢಪಡಿಸಿಲ್ಲ. ‌ಆದರೆ‌ ಸಂಜೆ ಜಿಲ್ಲಾಧಿಕಾರಿ ಸೋಂಕು ಇರುವುದು ಖಾತರಿಪಡಿಸಿದರು. ಜಯಪುರ ಮತ್ತು ಹೌಸಿಂಗ್ ಬೋರ್ಡ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಮೃತ ವ್ಯಕ್ತಿ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ನಲ್ಲಿಡಲಾಗಿದ್ದು ಜಯಪುರಕ್ಕೆ ಯಾರೂ ಒಳಹೋಗದಂತೆ ಮತ್ತು ಹೊರಬರದಂತೆ ಬ್ಯಾರಿಕೇಡ್, ಶೀಟ್ ಗಳನ್ನು ಅಳವಡಿಸಲಾಗಿದೆ.

ಮೃತ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಪೂನಾದಲ್ಲಿ ಮತ್ತೊಬ್ಬ ಬೆಂಗಳೂರಿನಲ್ಲಿದ್ದಾರೆ. ತಂದೆಯ ದಫನ್ ಗೆ ಬೆಂಗಳೂರಿನಲ್ಲಿದ್ದ ಪುತ್ರ ಮಾತ್ರ ಬಂದಿದ್ದರು. ಮೃತದೇಹ ದಫನ್ ಮಾಡಿ ಮೂರು ದಿನ ಕಳೆದ ನಂತರ ಕೊರೊನ ಪಾಸಿಟೀವ್ ಎಂದು ಹೇಳಿ ಜಯಪುರವನ್ನು ಸೀಲ್ ಡೌನ್ ಮಾಡಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

ಮೃತ ವ್ಯಕ್ತಿ ಮೊದಲು ನಗರದ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಗುಣಮುಖರಾಗದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ.

ತುಮಕೂರು ಒಂದೇ ದಿನ 17 ಮಿ.ಮೀ ಮಳೆ: ಕೊರಟಗೆರೆಯಲ್ಲಿ ದಾಖಲೆ

publicstory.in


ಮಳೆಯಿಂದ ತುಂಬಿರುವ ಹಳ್ಳಕೊಳ್ಳ

Tumkuru; ಜಿಲ್ಲಾದ್ಯಂತ ಕಳೆದ 24 ಗಂಟೆ(ಏಪ್ರಿಲ್ 28ರ ರಾತ್ರಿಯಿಂದ 29ರ ಬೆಳಗಿನವರೆಗೂ)ಗಳಲ್ಲಿ 17.73 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಏಪ್ರಿಲ್ 29ರಂದು ತಾಲೂಕುವಾರು ಮಳೆ ಬಿದ್ದ ವಿವರ ಇಂತಿದ್ದು, ಕಂಸಿನಲ್ಲಿ ಆಗಬೇಕಾಗಿದ್ದ ವಾಡಿಕೆ ಮಳೆ ವಿವರ ಮಿ.ಮೀ.ಗಳಲ್ಲಿ ನೀಡಲಾಗಿದೆ.

ತುಮಕೂರು ತಾಲೂಕು 33.1 ಮಿ.ಮೀ(ವಾಡಿಕೆ ಮಳೆ-2.9),

ಗುಬ್ಬಿ: 19ಮಿ.ಮೀ(1),
ಕೊರಟಗೆರೆ: 36ಮಿ.ಮೀ.(1),

ಕುಣಿಗಲ್: 22.5 ಮಿ.ಮೀ.(3.4),

ಮಧುಗಿರಿ: 29ಮಿ.ಮೀ.(0.4),

ಪಾವಗಡ: 23.8ಮಿ.ಮೀ(0.2),

ಶಿರಾ: 10.4ಮಿ.ಮೀ(0.7),

ತುರುವೇಕೆರೆ: 5.5ಮಿ.ಮೀ.(1.7),

ತಿಪಟೂರು: 0.1ಮಿ.ಮೀ.(1.7),
ಚಿಕ್ಕನಾಯಕನಹಳ್ಳಿ: 0.2 ಮಿ.ಮೀ(1).
ಮಾರ್ಚ್ ಮಾಹೆಯಿಂದ ಏಪ್ರಿಲ್ 29ರವರೆಗೆ ಪೂರ್ವ ಮುಂಗಾರಿನಲ್ಲಿ 54.52 ಮಿ.ಮೀ. ಮಳೆಯಾಗಿದೆ. 38ಮಿ.ಮೀ. ವಾಡಿಕೆ ಮಳೆ
ಜನವರಿ ಮಾಹೆಯಿಂದ ಏಪ್ರಿಲ್ 29ರವರೆಗೆ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 57.6 ಮಿ.ಮೀ.,
ಗುಬ್ಬಿ-51.8 ಮಿ.ಮೀ.,
ಕೊರಟಗೆರೆ-72.4 ಮಿ.ಮೀ.,
ಕುಣಿಗಲ್-72.8 ಮಿ.ಮೀ.
ಮಧುಗಿರಿ-57.2 ಮಿ.ಮೀ,
ಪಾವಗಡ-42.7 ಮಿ.ಮೀ.,
ಶಿರಾ-38.8 ಮಿ.ಮೀ.,
ತಿಪಟೂರು-55.1 ಮಿ.ಮೀ.,
ತುಮಕೂರು-77.2 ಮಿ.ಮೀ.,
ತುರುವೇಕೆರೆ ತಾಲೂಕಿನಲ್ಲಿ 39.3ಮಿ.ಮೀ.

ವೈ.ಎಚ್.ಹುಚ್ಚಯ್ಯ ಬಗ್ಗೆ‌ ಮಾಜಿ ಶಾಸಕ ಸುರೇಶಗೌಡರು ಹೇಳಿದ್ದೇನು?

publicstory. in


ತುಮಕೂರು: ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್ ಹುಚ್ಚಯ್ಯ ಅವರು ಜಿಲ್ಲೆ ಕಂಡ ಅಪರೂಪದ ರಾಜಕಾರಣಿ ವೈ.ಕೆ. ರಾಮಯ್ಯ ಅವರ ರಾಜಕಾರಣದಲ್ಲಿ ಪಳಗಿ ಬಂದವರು. ಜನರಿಗಾಗಿ ಜೈಲು ಕಂಡವರು ಎಂದು ಮಾಜಿ ಶಾಸಕ ಸುರೇಶಗೌಡ ಹೇಳಿದರು.

ತುಮಕೂರು ತಾಲ್ಲೂಕಿನ ಸೀತಕಲ್ಲು ಗ್ರಾಮದಲ್ಲಿ ಬುಧವಾರ ಬಡವರಿಗೆ ಉಚಿತ ಆಹಾರದ ಕಿಟ್ ಹಂಚುವಿಕೆ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .

ಹುಚ್ಚಯ್ಯ ಅವರು ಜಿಲ್ಲೆಯ ಪ್ರಮುಖ ದಲಿತ ರಾಜಕಾರಣಿಯಾಗಿದ್ದಾರೆ. ಅವರು ಹೋರಾಟದ ಕಳಕಳಿಯನ್ನು ಎಲ್ಲರೂ ಮೆಚ್ಚಬೇಕು. ಅವರು ಜಿಲ್ಲೆಯ ಜನ ಸಮುದಾಯದ ನಾಯಕ ಎಂದು ಬಣ್ಣಿಸಿದರು.

ಕರೋನಾ ಸಂಕಷ್ಟದಲ್ಲಿ ಬಡವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿ ಸಹಾಯಹಸ್ತವನ್ನು ಚಾಚಿದ್ದೇನೆ. ಇದರಿಂದ ಬೆಳೆ ಬೆಳೆದ ರೈತರಿಗೂ ಮತ್ತು ಕಷ್ಟ ಜನರಿಗೆ ಉಪಯೋಗವಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರದ ಪ್ರತಿ ಜನರಿಗೂ ಉಚಿತವಾಗಿ ಮಾಸ್ಕ್ ಹಂಚಲಾಗುತ್ತದೆ. ಈಗಾಗಲೇ ಬಹುತೇಕ ಗ್ರಾಮಗಳ ಜನರಿಗೆ ಮಾಸ್ಕ್ ಹಂಚಿದ್ದೇನೆ. ಇದರೊಂದಿಗೆ ಬೇಳೆ ಕಾಳು ಎಣ್ಣೆ ಅಡುಗೆ ಸಂಬಂಧಿಸಿದ ಸಾಮಗ್ರಿಗಳನ್ನು ಕೊಡಲಾಗುತ್ತಿದೆ ಎಂದು ಹೇಳಿದರು.

ಸೀತಕಲ್ಲು ಗ್ರಾಮ ಪಂಚಾಯತಿಯ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್ ಹಾಗೂ ಅಡುಗೆ ಎಣ್ಣೆ, ಉಪ್ಪು, ಬೇಳೆ, ಸಕ್ಕರೆ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಆಹಾರ ಪದಾರ್ಥಗಳು ಹೊಂದಿರುವ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷಸ‌ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಲಕ್ಷ್ಮೀಶ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೈ, ಹೆಚ್, ಹುಚ್ಚಯ್ಯ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೇಗೌಡರು, ತಾ ಪಂ ಅಧ್ಯಕ್ಷರಾದ ಗಂಗಾಂಜಿನಪ್ಪ, ತಾ ಪಂ ಉಪಾಧ್ಯಕ್ಷರಾದ, ಶಾಂತಕುಮಾರ್ ತಾ ಪಂ ಸದಸ್ಯರಾದ ರಾದಮ್ಮ,ತಾ ಪಂ ಸದಸ್ಯರಾದ (ಊರ್ಡಿಗೆರೆ )ರವಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಲಕ್ಷ್ಮೀದೇವಮ್ಮ, ಸದಸ್ಯರಾದ ಉಮಾದೇವಿ, ಮಾರುತಿ, ರಾಜಣ್ಣ,ಮುಖಂಡರಾದ ನಾಗರಾಜರಾವ್, ಸುಧೀರ್, ಮಾಜಿ A P M C ಅಧ್ಯಕ್ಷರಾದ ಓಂ ನಮೋ ನಾರಾಯಣ, ರಂಗನಾಥ್, ಸತೀಶ್, ಪರಮೇಶ್, ಮೂರ್ತಣ್ಣ, ಮಂಜುನಾಥ್, ಕರೆರಂಗಯ್ಯ ಮುಂತಾದವರು ಉಪಸ್ಥಿತರಿದ್ದರು.

ತಂಪೆರೆದ ಭರಣಿ

ಪಾವಗಡ ತಾಲ್ಲೂಕಿನಾದ್ಯಂತ ಭರಣಿ ಮಳೆ ಧರೆಯನ್ನು ತಂಪುಗೊಳಿಸಿದೆ. ನಾಗಲಮಡಿಕೆ, ಕಸಬಾ ಹೋಬಳಿಗಳಲ್ಲಿ ಉತ್ತಮ ಮಳೆಯಾಗಿದೆ. ನಿಡಗಲ್, ವೈ.ಎನ್.ಹೊಸಕೋಟೆ ಹೋಬಳಿಗಳಲ್ಲಿ ಸಾಧಾರಣ ಮಳೆಯಾಗಿದೆ.

ಕಸಬಾ ಹೋಬಳಿಯಲ್ಲಿ ರೈತರು ಬೆಳೆದಿದ್ದ ಕರಬೂಜಾ, ಕಲ್ಲಂಗಡಿ ಬೆಳೆಗಳು ನೀರಿನಿಂದ ತುಂಬಿ ಹಾನಿಗೀಡಾಗಿವೆ.

ಅರಳೀಕುಂಟೆ ಕೆರೆಗೆ ಅಲ್ಪ ಪ್ರಮಾಣದ ನೀರು ಬಂದಿದೆ.

https://youtu.be/p7fZfFql8Es