Friday, February 27, 2026
Google search engine
Home Blog Page 243

ಬಡಗಿ ಕಾರ್ಮಿಕರಿಗೆ ಪಡಿತರ ವಿತರಣೆ

ಪಾವಗಡದಲ್ಲಿ ಬುಧವಾರ ಬಡಗಿ ಕಾರ್ಮಿಕರ ಸಂಘದ ವತಿಯಿಂದ 150 ಬಡಗಿ ಕಾರ್ಮಿಕರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.

ಸಬ್ ಇನ್ ಸ್ಪೆಕ್ಟರ್ ನಾಗರಾಜು ವಿತರಣಾ ಕಾರ್ಯದಲ್ಲಿ ಭಾಗವಹಿಸಿ, ವಿತರಣೆಗಾಗಿ 150 ಮಂದಿಯನ್ನು ದೂರ ನಿಲ್ಲಿಸಿ ಅಚ್ಚುಕಟ್ಟಾಗಿ ಸಂಘ ವ್ಯವಸ್ಥೆ ಮಾಡಿದೆ.

ಸಂಕಷ್ಠದಲ್ಲಿರುವ ಬಡಗಿ ಕಾರ್ಮಿಕರು ಬಡ ಕುಟುಂಬಗಳನ್ನು ಗುರುತಿಸಿ ಷಾಮಿಲ್ ಮಾಲೀಕರು, ಗ್ಲಾಸ್, ಗ್ಲಾಸ್ ಅಂಡ್ ಫ್ಲೇವುಡ್ ಮಾಲೀಕರ ಸಹಕಾರದೊಂದಿಗೆ ಪಡಿತರ ವಿತರಿಸುತ್ತಿರುವ ಉತ್ತಮ ಕೆಲಸ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮಣ್ಣಿನ ಮೇಲೊಂದು ಮರವಾಗಿ..

ಜಿ ಎನ್ ಮೋಹನ್


ಕುಹು ಕುಹೂ..

ಗಾಢ ನಿದ್ದೆಯಲ್ಲಿದ್ದೆ. ಆಗ ಕೇಳಿಸಿತು ಈ ಕೂಗು. ನಾನು ಕಣ್ಣುಜ್ಜಿಕೊಂಡೆ. ಕಾಂಕ್ರೀಟ್ ಕಾಡಿನಲ್ಲಿ ಕೋಗಿಲೆ ಬಂದು ಕೂಗುವುದುಂಟೇ..?? ಒಳ್ಳೆಯ ಕನಸೇ ಬಿದ್ದಿದೆ ಎಂದು ಮಗ್ಗುಲಾದೆ.

ಅರೆ! ಮತ್ತೆ ಕುಹು ಕುಹೂ.. ಏನಾದರಾಗಲಿ ನೋಡೇಬಿಡುವ ಎಂದು ಮೆಲ್ಲಗೆ ಕಿಟಕಿಯ ಪರದೆ ಸರಿಸಿದರೆ ಆ ಹಸಿರು ಎಲೆಗಳ ಮಧ್ಯೆ ಕಾಣಿಸೇಬಿಟ್ಟಿತು ಆ ಕೋಗಿಲೆ.

ಸಂಜೆ ಆಫೀಸಿನಿಂದ ಬಂದು ‘ಉಸ್ಸಪ್ಪಾ’ ಎಂದು ಮನೆ ಬಾಗಿಲು ಬಡಿಯಬೇಕು. ಯಾರೋ ನನ್ನನ್ನೇ ನೋಡುತ್ತಿದ್ದಾರೆ ಅನಿಸಿತು. ಯಾರಿರಬಹುದು? ಎಂದು ತಲೆ ಎತ್ತಿದರೆ ಅದೇ ಹಸಿರು ಎಲೆಗಳ ಮಧ್ಯೆ ಒಂದು ಪುಟ್ಟ ಗೂಬೆ. ಮನೆಯ ಗೇಟಿನ ಮೇಲೆ ಸರಿಯಾಗಿ ಹೆಂಗಳೆಯರ ಹಣೆಯ ಮೇಲೆ ಸರಿದಾಡುವ ಮುಂಗುರುಳಿನಂತೆ ಒಂದು ಕೊಂಬೆ ಆಡುತ್ತಿತ್ತು. ಅದೇ ಕೊಂಬೆಯಲ್ಲಿ ಈಗ ಗೂಬೆ ಮರಿ. ಅದು ನನ್ನನ್ನೂ ನಾನು ಅದನ್ನೂ ನೋಡುತ್ತಾ ಸಾಕಷ್ಟು ಹೊತ್ತಾಯಿತು. ಗೂಬೆ ಕೂಡಾ ಇಷ್ಟು ಮುದ್ದಾಗಿರುತ್ತದಾ ಎಂದು ಅದನ್ನೇ ಕಣ್ಣು ಬಾಯಿ ಬಿಟ್ಟುಕೊಂಡು ನೋಡಿದೆ.

ಇನ್ನೊಮ್ಮೆ ಮಹಡಿಯ ಮೇಲೆ ಅಡ್ಡಾಡುತ್ತಿದ್ದೆ. ನೋಡಿದರೆ ಒಂದು ಉನ್ಮಾದದ ಕೂಗು. ಅದೂ ಆ ಮರದಿಂದಲೇ. ಮರದ ರೆಂಬೆ ಕೊಂಬೆಗಳ ಕಡೆ ಕಣ್ಣಾಡಿಸಿದರೆ.. ಓಹ್! ಅಲ್ಲಿ ಅಳಿಲುಗಳ ಸುರತ

ಹೆಂಚಿನಾ ಮನೆ ಕಾಣೋ, ಕಂಚಿನ ಕದ ಕಾಣೋ

ನಿಂತಾಡೋವೆರಡು ಗಿಣಿ ಕಾಣೋ । ಅಣ್ಣಯ್ಯ

ಅದೇ ಕಾಣೋ ನನ್ನ ತವರುಮನೆ

ತವರನ್ನು ಬಿಟ್ಟುಕೊಡಲಾಗದೆ ಕಣ್ಣೀರು ತುಂಬಿಕೊಂಡು ಗಂಡನ ಲೋಕಕ್ಕೆ ಪ್ರವೇಶ ಪಡೆದ ಹೆಣ್ಣು ಮಕ್ಕಳಿಗೆ ಇದು ಎದೆಯೊಳಗಿನ ಹಾಡು. ತಮ್ಮ ಮನೆ ಹಾದು ಹೋಗುವವರಿಗೆಲ್ಲಾ ತಮ್ಮ ತವರ ಗುರುತು, ಅಲ್ಲಿರುವ ಮನೆಯ ಗುರುತನ್ನು ಹೇಳಿ ಅಲ್ಲಿಗೆ ಹೋಗಿ ಬನ್ನಿ ಎನ್ನುತ್ತಿದ್ದರು.

ಥೇಟ್ ಹೀಗೆಯೇ ಆಗಿ ಹೋಗಿತ್ತು. ಸರಿಸುಮಾರು ೨೫ ವರ್ಷಗಳ ಹಿಂದೆ. ಪುಟ್ಟ ಸಸಿಯೊಂದನ್ನು ಹಿಡಿದು ಬಂದಾಗ ಅವಳ ಕಣ್ಣಾಲಿಗಳು ತುಂಬಿತ್ತು. ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಲೇ ಆಕೆ ಮನೆಯ ಮುಂದೆ ಪುಟ್ಟ ಪಾತಿ ತೋಡಿ ಅಲ್ಲಿ ಆ ಸಸಿ ನೆಟ್ಟಳು. ಆಮೇಲೆ ಗಂಡನ ಜೊತೆ ಹೊರಟುಹೋದಳು. ಅವಳು ನನ್ನ ತಂಗಿ.

ಅದು ಕಣ್ಣುಬಿಟ್ಟಿತು. ಮೊದಲು ಎರಡು ಎಲೆ, ನಂತರ ಮತ್ತೆರಡು ಹೀಗೆ ಗುಣಾಕಾರ ಮಾಡುತ್ತಾ ಮಾಡುತ್ತಲೇ, ನಾವು ನೋಡನೋಡುತ್ತಿದ್ದಂತೆಯೇ ಅದು ಹೆಮ್ಮರವಾಗಿ ಬೆಳೆದು ಹೋಯ್ತು.

ಬಹುಷಃ ಈಗ ಅವಳು ಅಲ್ಲಿ ತನ್ನ ಮನೆ ಹಾದು ಹೋಗುವವರಿಗೆ ಹಾಗೇ ಹೇಳುತ್ತಿರಬಹುದು- ಒಂದು ಮಹಡಿಯ ಮನೆ, ನೆಲಕೆ ಇನ್ನೂ ಕೆಂಪು ಬಣ್ಣ, ಎಲ್ಲರಂತಹದ್ದೇ ಬಾಗಿಲು, ಮನೆಯ ಮುಂದೆ ಮಾತ್ರ ದೊಡ್ಡ ಮರ..

ಅಷ್ಟು ಸಾಕು ಗುರುತಿಗೆ.

ಲಂಬಾಣಿಗರ ಹಾಡುಗಳನ್ನೊಮ್ಮೆ ನೀವು ಕೇಳಬೇಕು. ಅಲ್ಲಿ ಮರ ಗಿಡ ಕಲ್ಲು ಮುಳ್ಳು ಎಲ್ಲವೂ ಹಾಡಾಗಿ ಹೊಮ್ಮಿಬಿಡುತ್ತದೆ. ಲಂಬಾಣಿಯರದ್ದು ನಿರಂತರ ಚಲಿಸುವುದೇ ಬದುಕು. ತವರಿನಿಂದ ಹೊರಟ ಹೆಣ್ಣು ಮತ್ತೆ ತನ್ನ ತವರಿನವರನ್ನು ಬದುಕಿನಲ್ಲಿ ಕಾಣುತ್ತಾಳೆ ಎನ್ನುವ ಖಾತರಿಯೇ ಇಲ್ಲ.

ಹಾಗಾಗಿ ಆಕೆ ಮದುವೆಯಾಗಿ ಗಂಡನ ಜೊತೆ ಹೆಜ್ಜೆ ಹೊರಗಿಟ್ಟಾಗ ಅಳುವಿನ ಅಲೆಯೇ ಎದ್ದೇಳುತ್ತದೆ. ಅದು ಅಡಗುವ ಅಲೆಯಲ್ಲ, ಉಬ್ಬರಿಸಿ , ಉಬ್ಬರಿಸಿ ಭೋರ್ಗರೆವ ಅಳು. ಆಗಲೇ ಆಕೆಗೆ ತಾನು ಹಾಲುಂಡ ತವರು, ಅಲ್ಲಿ ಹಬ್ಬಿದ ಬಳ್ಳಿ, ತಾನು ಎಡವಿದ ಕಲ್ಲೂ, ಕಾಲಿಗೆ ಹೊಕ್ಕ ಮುಳ್ಳು ಎಲ್ಲವೂ ತವರ ನೆನಪಾಗಿ ನಿಲ್ಲುತ್ತದೆ.

ಆಗಲೇ ಆಕೆ ಕಲ್ಲನ್ನೂ, ಮುಳ್ಳನ್ನೂ, ಗಿಳಿಯನ್ನೂ, ಎಲೆಯನ್ನೂ ಹೀಗೆ ಕಂಡ ಕಂಡದ್ದೆಲ್ಲಕ್ಕೂ ಹೆಸರಿಟ್ಟು ಅಳುತ್ತಾಳೆ. ಅವಳ ಹೃದಯ ಹಾರೈಸುತ್ತದೆ ‘ಹಬ್ಬಾಲಿ ಅವರ ರಸಬಳ್ಳಿ..’

ಆದರೆ ನಮಗೆ ಮಾತ್ರ ಅವಳು ಹೊರಟುಹೋದಳು ಎಂದು ಅನಿಸಲೇ ಇಲ್ಲ. ಯಾಕೆಂದರೆ ಅವಳು ನಮ್ಮ ಮನೆಯ ಮುಂದೆ ಸಸಿಯಾಗಿ ಇದ್ದೇ ಇದ್ದಳು. ಯಾವಾಗ ಅದು ಅವಳಾಗಿ ಹೋಯಿತೋ

ಮನೆಯವರೆಲ್ಲರೂ ಪ್ರತೀ ಅದರ ಅರೋಗ್ಯ ವಿಚಾರಿಸಿಕೊಂಡರು. ಅಕ್ಕ ಪಕ್ಕದ ಮನೆಯವರೂ ಬಂದು ಮಾತಾಡಿಸುತ್ತಿದ್ದಾರೇನೋ ಎನ್ನುವಂತೆ ಅದು ಎಲೆ ಅರಳಿಸುವುದನ್ನೂ ನೋಡುತ್ತಾ ನಿಂತರು. ಊರಲ್ಲಿಲ್ಲದಾಗ ಅವರೇ ನೀರೆರೆದರು. ರಸ್ತೆಯಲ್ಲಿ ಹಸು ಓಡಾಡುತ್ತದೆ ಎಂದು ಖುದ್ದು ಕಾರ್ಪೊರೇಟರ್ ಅಮ್ಮನೇ ಬಂದು ಅದಕ್ಕೆ ಬಿದಿರ ರಕ್ಷಣೆ ಕೊಡಿಸಿದರು.

ಗಿಡವಾಗಿರುವಾಗಲೇ ಅದನ್ನು ಬಗ್ಗಲು ಕುಗ್ಗಲು ಬಿಡಲಿಲ್ಲ. ಹಾಗಾಗಿ ಅದು ಮರವೇ ಆಯಿತು. ಅದು ಮನೆಯವರಿಗೂ ಬೀದಿಯವರಿಗೂ ಎಂದೂ ಮರ ಅನ್ನಿಸಲೇ ಇಲ್ಲ. ಅದು ಸಾಕ್ಷಾತ್ ಅವಳೇ ಎನ್ನುವಂತೆ ಅದರ ಜೊತೆ ಮಾತಿಗೆ ನಿಂತರು. ಪಕ್ಕಾ ಜಾನಪದ ಕಥೆಗಳ ‘ಚೆಲುವಿ’ಯಂತೆ. ಅವಳೇ ಮರವಾಗಿ ಹೋಗುವ ಮರವೇ ಜೀವ ತಳೆದು ಅವಳಾಗುವ ಅಚ್ಚರಿಯಂತೆ

ನಾನು ಕ್ಯೂಬಾಕ್ಕೆ ಹೋದಾಗ ಒಂದು ಪುಟ್ಟ ಅಚ್ಚರಿ. ಅಲ್ಲಿಯ ಮನೆ ತಲುಪಿಕೊಂಡವನೇ ಸೂಟ್ ಕೇಸ್ ತೆರೆದೆ. ಅರೆ! ಅಲ್ಲೊಂದು ಪುಟ್ಟ ಗೊಂಬೆ. ಒಂದು ಪೆನ್ಸಿಲ್, ಒಂದು ರಬ್ಬರ್. ಇದೇನಪ್ಪಾ ಎಂದು ನೋಡಿದರೆ ಆಗಿನ್ನೂ ಅಕ್ಷರ ಲೋಕಕ್ಕೆ ಕಾಲಿಟ್ಟಿದ್ದ ಮಗಳು ತನ್ನ ಪೆನ್ಸಿಲ್, ರಬ್ಬರ್ ಆನ್ನೇ ನನ್ನ ಸೂಟ್ ಕೇಸ್ ಒಳಗೆ ಸೇರಿಸಿದ್ದಳು- ತನ್ನ ನೆನಪಿಗಾಗಿ. ಆ ಪುಟ್ಟ ಗೊಂಬೆ, ಆ ರಬ್ಬರ್, ಆ ಪೆನ್ಸಿಲ್ ನಾನು ಹೋದ ದಿನದಿಂದ ಹಿಂದಿರುಗುವವರೆಗೂ ನನ್ನ ಹಾಸಿಗೆಯ ಮೇಲೇ ಇತ್ತು. ನಾನು ಅಷ್ಟು ದಿನ ಇದ್ದರೂ ಒಬ್ಬನೇ ಅನಿಸಲೇ ಇಲ್ಲ. ನಾನು ಅದರೊಂದಿಗೆ ಮಾತನಾಡುತ್ತಲೇ ಇದ್ದೆ.

ಆ ನಂತರ ನಮ್ಮ ಬದುಕಿನಲ್ಲಿ ನೂರೆಂಟು ಘಟನೆಗಳು ನಡೆದು ಹೋಗಿವೆ. ನಾನು ಇಲ್ಲಿ ಅವಳು ಮುಂಬೈನಲ್ಲಿ. ಆದರೆ ಈಗಲೂ ನಾನು ಯಾವುದೇ ಊರಿಗೆ ಬಟ್ಟೆ ಪ್ಯಾಕ್ ಮಾಡಿದೆ ಎಂದರೆ ಅದರೊಳಗೆ ಒಂದು ಪುಟ್ಟ ಗೊಂಬೆ, ಇಲ್ಲಾ ಮಗಳು ಹಸ್ತಾಕ್ಷರ ಹಾಕಿದ ಪುಸ್ತಕ, ಇಲ್ಲ ಅವಳು ಗೀಚಿದ ರೇಖೆಗಳು ಜೊತೆಯಾಗುತ್ತವೆ. ಅದು ನನ್ನೊಡನೆ ಮಾತನಾಡುತ್ತಲೇ ಇರುತ್ತದೆ.. ಈಗ ಈ ಮರ..

‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ..’ ಎನ್ನುವುದನ್ನು ಸುಳ್ಳು ಮಾಡಲೋ ಎಂಬಂತೆ ಈ ಮರ ನಮ್ಮ ಮನೆ ಅಂಗಳದಲ್ಲಿ ಅರಳಿದರೂ ಇಡೀ ರಸ್ತೆಯನ್ನೇ ಆವರಿಸಿ ಅಕ್ಕ ಪಕ್ಕದ ಎದೂರು ಹೀಗೆ ಎಲ್ಲಾ ಮನೆಗೂ ಮುತ್ತಿಡುತ್ತದೆ. ಇಡೀ ರಸ್ತೆಯಲ್ಲಿ ಒಂದು ದೊಡ್ಡ ಛತ್ರಿ ಹರಡಿಕೊಂಡಂತೆ. ಹಸಿರಿನ ಚಪ್ಪರ.

ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹುಟ್ಟಿ, ಅಲ್ಲಿಯೇ ಬೆಳೆದು, ಕಟ್ಟಡ ಅಲ್ಲದೆ ಬೇರೆ ಗೊತ್ತಿಲ್ಲದ ನನಗೆ ಬೆಂಗಳೂರು ಈಗ ಆಕಾಶ ನೋಡುವ ಅವಕಾಶವನ್ನೂ ಕಿತ್ತುಕೊಳ್ಳುತ್ತಿದೆ. ೪೫- ೫೦ ಹೀಗೆ ಎತ್ತರೆತ್ತರದ ಬಹುಮಹಡಿಗಳೇ ನಿಂತು ಅದರ ಸಂದಿಯಿಂದ ಒಂದಿಷ್ಟು ಆಗಸ ಹುಡುಕಿಕೊಳ್ಳುವ ಕಾಲ ಬಂದಿದೆ. ಇನ್ನು ರಾತ್ರಿ ಚುಕ್ಕಿಗಳನ್ನು ಆಯ್ದುಕೊಳ್ಳುವುದೋ .. ಸಾಧ್ಯವಿಲ್ಲದ ಮಾತು.

ಇಂತ ಸಮಯದಲ್ಲಿ ನನಗೆ ಋತುವಿನ ಫುಲಕವನ್ನು ಕೊಟ್ಟದ್ದು ಈ ಮರ. ವಸಂತ ಗ್ರೀಷ್ಮ ಶಿಶಿರ ಎಲ್ಲವನ್ನೂ ನಾನು ಖಚಿತವಾಗಿ ಹೇಳಬಲ್ಲೆ.. ನೆನಪಿಡಿ ಆ ಋತುಗಳು ಕೊಡುವ ಫುಲಕದ ಸಮೇತ.

ವಸಂತ ಪುಟ್ಟ ಮೊಗ್ಗಾಗಿ, ಹಸಿರು ಎಲೆಯಾಗಿ, ಬಿಳಿಯ ಹೂವಾಗಿ, ಕಡುಹಸಿರು ಕಾಯಾಗಿ ಹರಡಿನಿಲ್ಲುವ ಸಡಗರಕ್ಕೆ ಪದಗಳ ಹೊಂದಿಸುವುದೇ ಕಷ್ಟ. ವಸಂತವನ್ನು ಆ ಮರ ಸಂಭ್ರಮಿಸುವ ಪರಿ ನೋಡಬೇಕು. ‘ಘಲ್ಲು ಘಲ್ಲೆನುತಾ ಗೆಜ್ಜೆ ಘಲ್ಲು ತಾದಿನತ..’ ಎನ್ನುವ ಸಂಭ್ರಮ ಗೊತ್ತಾದದ್ದೇ ಇಲ್ಲಿ. ವಸಂತ ಬರುತ್ತಿದೆ ಎನ್ನುವುದನ್ನು ಒಂದು ಮಣ ಕಂಬಳಿ ಹುಳುಗಳೂ, ಕಣ್ಣಿಗೆ ಕಾಣದಷ್ಟು ಚಿಕ್ಕ ಸೊಳ್ಳೆಗಳೂ, ಹೊಂಗೆಯ ಕಂಪೂ ಸಾರಿಬಿಡುತ್ತದೆ.

ಆ ದಿನಗಳಲ್ಲಿ ಟಾರಿನ ರಸ್ತೆ ಮುಚ್ಚಿಹೋಗುವಂತೆ, ಇಲ್ಲ ಬಿಳಿ ಹಚ್ಚಡ ಹೊದಿಸಿ ಹೋಗಿದ್ದಾರೆ ಎನ್ನುವಂತೆ, ಅಥವಾ ‘ಮಡಿಕೇರಿ ಮೇಲ್ ಮಂಜು’ ಎನ್ನುವಂತೆ ಹೂಗಳು ಒಂದಿಷ್ಟಾದರೂ ನೆಲ ಕಾಣುವ ಅವಕಾಶ ಕೊಟ್ಟರೆ ಹೇಳಿ. ಇದನ್ನು ನೋಡಲೆಂದೇ ಆ ರಸ್ತೆ ಈ ರಸ್ತೆಯಿಂದೆಲ್ಲಾ ಜನ ಬರುತ್ತಾರೆ. ಕಸ ಗುಡಿಸಲು ಬರುವ ಕೆಲಸಗಾರಳಿಗೂ ಅದನ್ನು ಗುಡಿಸಿ ಹಾಕಲು ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಅವಳೂ ತನ್ನ ಗುತ್ತಿಗೆಯ ಇತರೆ ಎಲ್ಲಾ ರಸ್ತೆ ಮುಗಿಸಿ ಮಧ್ಯಾಹ್ನ ಮಾಡಿಯೇ ಬರುತ್ತಾಳೆ.

ಮಾಗಿ ಮಾಗಿಯ ಮಧ್ಯೆ ಮೌನವೇ ಸರದಾರ ಎನ್ನುವಂತೆ ಅಂತಹ ಹಾಡುಗಬ್ಬದ ಈ ಮರ ಮಾಗಿ ಬರುತ್ತಿದ್ದಂತೆ ತನ್ನ ಒಂದು ಎಲೆಯನ್ನೂ ಉಳಿಸಿಕೊಳ್ಳದೆ ಬೋಳಾಗಿ ಬಿಡುತ್ತದೆ.

ಅವಳು ಇಲ್ಲಿ ಮರವಾಗಿದ್ದಾಳೆ. ತವರು ಬಿಟ್ಟು ಹೋದ ತಂಗಿ ಇಲ್ಲಿ ಪ್ರತೀ ಋತುವಿಗೂ ತನ್ನ ಗುರುತು ಕಾಣುವಂತೆ ಮಾಡಿ ಹೋಗಿದ್ದಾಳೆ. ಒಂದು ಪುಟ್ಟ ಸಸಿ ಕೋಗಿಲೆಗೂ, ಅಳಿಲಿಗೂ, ಗೂಬೆ ಮರಕುಟಿಗಕ್ಕೂ ದಾರಿ ಮಾಡಿದೆ. ಬೆಳಗ್ಗೆ ಎಂಪಿ೩ ಹಾಡುಗಳಿಗೆ ಮೊರೆ ಹೋಗುವುದು ನಿಲ್ಲಿಸಿದ್ದೇನೆ. ಏಕೆಂದರೆ ಹಕ್ಕಿಯ ಕುಕಿಲು ಅನಾಯಾಸವಾಗಿ ಸಿಕ್ಕುತ್ತಿದೆ.

ಬೇಸಿಗೆ ಬಂದರೆ ಸಾಕು ದಾರಿಯಲ್ಲಿ ಹಾದು ಹೋಗುವ ರಂಗೋಲಿ ಹುಡುಗಿ, ನಿಂಬೆ ಹಣ್ಣು ಮಾರುವ ಆ ಹೆಂಗಸು, ಕತ್ತರಿ ಹರಿತ ಮಾಡಿಕೊಡುವ ಕಲಾಯಿ ಹುಡುಗ, ಕಡಲೆಪುರಿ ಹೊತ್ತು ತರುವ ಬೊಚ್ಚುಬಾಯಿಯ ಅಜ್ಜ, ಮನೆ ಮನೆ ಬಾಗಿಲು ತಟ್ಟುವ ಸೇಲ್ಸ್ ಗರ್ಲ್ ಗಳು, ವೋಟರ್ ಐ ಡಿ, ಜನಗಣತಿ, ಶಾಲೆಗೆ ಸೇರಿಸಿ ಹೀಗೆ ಗಣತಿಗೆ ಬರುವ ಮೇಷ್ಟ್ರುಗಳ ದಂಡು, ನನಗೆ ವೋಟ್ ಕೊಡಿ ಎಂದು ಮೈಗಿಯುವ ಅಭ್ಯರ್ಥಿಗಳು, ದಿನವಿಡೀ ಸುತ್ತಿ ಬಳಲಿದ ಉಬೆರ್, ಓಲಾ ಡ್ರೈವರ್ ಗಳು ಒಂದು ಪುಟ್ಟ ನಿದ್ದೆ ತೆಗೆಯಲು, ಆ ಕೊನೆಯ ಮನೆಯಲ್ಲಿ ಗಾರೆ ಕೆಲಸ ಮಾಡುತ್ತಿರುವವರ ಬುತ್ತಿ ಗಂಟು ಸಹಾ ಇಲ್ಲಿಯೇ ಬಿಚ್ಚಿಕೊಳ್ಳುತ್ತದೆ.

ಹೆಣ್ಣಾಗಿ ಹುಟ್ಟೋಕಿಂತ ಮಣ್ಣಾಗಿ ಹುಟ್ಟಿದರೆ

ಮಣ್ಣಿನ ಮೇಲೊಂದು ಮರವಾಗಿ / ಹುಟ್ಟಿದರೆ

ಪುಣ್ಯವಂತರಿಗೆ ನೆರಳಾದೆ

ನಮಗೋ ಇಲ್ಲಿ ಆಕೆ ಹೆಣ್ಣಾಗಿ ಹುಟ್ಟಿದ್ದರಿಂದಲೇ ಈ ಮಣ್ಣಲ್ಲಿ ಸಸಿ ನೆಡುವ ಹುಕಿ ಬಂತು ಅನಿಸುತ್ತದೆ.

ಆ ಮರವೂ ಸಹಾ ಎಕ್ಕುಂಡಿ ಹೇಳುವಂತೆ ‘ದೂರದಲಿ ಇದ್ದವರ ಹತ್ತಿರಕೆ ತರಬೇಕು, ಎರಡು ದಂಡೆಗೂ ಉಂಟಲ್ಲ ಎರಡು ತೋಳು’ ಎನ್ನುವಂತೆ ಎಲ್ಲರನ್ನೂ ಹುಡುಕಿ ಹುಡುಕಿ ತನ್ನಎಡೆಗೆ ತರುತ್ತಿದೆ. ಮರವೇ ಈಗ ಸೇತುವೆಯಾಗಿ ನಮ್ಮನ್ನೂ ಅವಳನ್ನೂ ಬಂಧಿಸಿದೆ.

ಆಗೋ ನೋಡಿ, ಆಗಲೇ ಆ ಮರದ ಕೆಳಗೆ ಒಂದು ಜೋಡಿ ನಿಂತಿದೆ. ಕಣ್ಣಲ್ಲಿ ಕಾಮನೆ. ಪಿಸು ಪಿಸು ಮಾತು ನಡೆಸುತ್ತಿದೆ.

ಹೌದಲ್ಲಾ.. ಮರದ ಮೇಲಲ್ಲ, ಮರದಡಿಯೂ ವಸಂತ..

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ

ದಿನಾಂಕ : 29, ಏಪ್ರಿಲ್ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಬುಧವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಷಷ್ಠಿ
(ನಿನ್ನೆ ಸಂಜೆ 3 ಗಂ॥ 5 ನಿ।। ರಿಂದ
ಇಂದು ಸಂಜೆ 3 ಗಂ॥ 8 ನಿ।। ತನಕ)
ನಕ್ಷತ್ರ : ಪುನರ್ವಸು
(ಇಂದು ಪ್ರಾತಃಕಾಲ 1 ಗಂ॥ 32 ನಿ।। ರಿಂದ
ಮರುದಿನ ಪ್ರಾತಃಕಾಲ 2 ಗಂ॥ 0 ನಿ।। ತನಕ)
ಯೋಗ : ಧೃತಿ
ಕರಣ : ತೈತಿಲ
ವರ್ಜ್ಯಂ : (ಇಂದು ಮಧ್ಯಾಹ್ನ 1 ಗಂ॥ 46 ನಿ।। ರಿಂದ ಇಂದು ಸಂಜೆ 3 ಗಂ॥ 23 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 11 ಗಂ॥ 33 ನಿ।। ರಿಂದ ಮರುದಿನ ಪ್ರಾತಃಕಾಲ 1 ಗಂ॥ 10 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 11 ಗಂ॥ 47 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 37 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 47 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 10 ಗಂ॥ 37 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 12 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 7 ಗಂ॥ 26 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 1 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 51 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 35 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಮಿಥುನ

ಮೇಷ ರಾಶಿ : 29 Apr 2020
ನೀವು ಬಹಳ ವಿಚಿತ್ರವಾದ ಪರಿಸ್ಥಿತಿಯಲ್ಲಿ ಸಿಲುಕಿದರೂ ಅದನ್ನು ಎದುರಿಸಲು ನಿಮ್ಮ ಇಚ್ಛಾಶಕ್ತಿ ಇಂದು ಸಹಾಯ ಮಾಡಬಹುದು. ಒಂದು ಅತ್ಯಂತ ಭಾವನಾತ್ಮಕ ನಿರ್ಧಾರ ಕೈಗೊಳ್ಳುವಾಗ ನೀವು ಸ್ತಿಮಿತ ಕಳೆದುಕೊಳ್ಳಬಾರದು. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಇತರರಿಗೆ ಪ್ರತಿಫಲಗಳು ತರುವ ನಿಮ್ಮ ಸಾಮರ್ಥ್ಯ ಪ್ರತಿಫಲ ತರುತ್ತದೆ. ಇಂದು ನಿಮ್ಮ ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ. ಅದೃಷ್ಟ ಸಂಖ್ಯೆ: 2

ವೃಷಭ ರಾಶಿ : 29 Apr 2020
ಕೆಲಸ ಮತ್ತು ಮನೆಯಲ್ಲಿನ ಕೆಲವು ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ಆರೋಗ್ಯ ಚೆನ್ನಾಗಿಲ್ಲದ ಒಬ್ಬ ಸಂಬಂಧಿಯನ್ನು ಭೇಟಿ ಮಾಡಿ. ನೀವು ಕೆಲವು ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರೇಮ ಜೀವನವನ್ನು ಉಜ್ವಲಗೊಳಿಸಬಹುದು. ಸುಂದರವಾದ್ದರಿಂದ ಈನಿಮ್ಮ ಸಂಗಾತಿಯು ಇಂದು ಆ ಆರಂಭಿಕ ಹಂತದ ಪ್ರೀತಿ ಮತ್ತು ಪ್ರಣಯದ ಗುಂಡಿಯನ್ನು ಒತ್ತುತ್ತಾಳೆ. ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ : 29 Apr 2020
ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು – ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ ಮತ್ತು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ ಹಾಗೂ ಫಲಿತಾಂಶಗಳಿಗೆ ಸಿದ್ಧವಾಗಿರಿ. ಹಣ ನಿಮಗೆ ಅಗತ್ಯವಾಗಿದೆ ಆದರೆ ನಿಮ್ಮ ಸಂಬಂಧಗಳನ್ನು ಹಾಳುಮಾಡುವಷ್ಟು ಹಣದ ಬಗ್ಗ್ಗೆ ಗಂಭೀರವಾಗಬೇಡಿ. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ನಿಮ್ಮನ್ನು ಅರ್ ನಿಮಗಾಗಿ ಸಾಮನಿಮ್ಮ ಸಂಗಾತಿ ಏನೋ ವಿಶೇಷವಾದದ್ದನ್ನು ಯೋಜಿಸಿರುವುದರಿಂದ ಜೀವನ ಇಂದು ನಿಜವಾಗಿಯೂ ಅದ್ಭುತವಾಗಿರುತ್ತದೆ. ಅದೃಷ್ಟ ಸಂಖ್ಯೆ: 9

ಕರ್ಕ ರಾಶಿ : 29 Apr 2020
ನಿಮ್ಮ ಮುಂಗೋಪ ನಿಮ್ಮನ್ನು ಇನ್ನೂ ಹೆಚ್ಚು ತೊಂದರೆಯಲ್ಲಿ ಸಿಲುಕಿಸಬಹುದು. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹೆಜ್ಜೆಯನ್ನು ಹಾಕುವ ಅಗತ್ಯವಿದೆ , ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು ನಿಮ್ಮ ಸಂಗಾತಿಯೊಡನೆ ಒಂದು ಉತ್ತಮ ತಿಳುವಳಿಕೆ ಮನೆಯಲ್ಲಿ ಸಂತೋಷ-ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಇಂದು ನಿಮ್ಮ ಹೃದಯ ಬಡಿತವು ನಿಮ್ಮ ಸಂಗಾತಿಯೊಡನೆ ಲಯದಲ್ಲಿ ಪ್ರೀತಿಯ ಸಂಗೀತವನ್ನು ನುಡಿಸುತ್ತದೆ. ನಿಮ್ಮ ಮೇಲಿನವರಿಗೆ ಇಂದು ನಿಮ್ಮ ಕೆಲಸದ ಗುಣಮಟ್ಟ ಒಳ್ಳೆಯ ಪ್ರಭಾವ ಬೀರಬಹುದು.ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ : 29 Apr 2020
ನೀವು ಹೇರಳ ಶಕ್ತಿಯನ್ನು ಹೊಂದಿರುತ್ತೀರಿ – ಆದರೆ ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುವಂತೆ ತೋರುತ್ತದೆ. ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ – ಮತ್ತು ಹಿಂದಿನ ದಿನಗಳ ಶ್ರಮ ಈಗ ಫಲ ನೀಡುತ್ತದೆ. ಸಂಜೆ ಸ್ನೇಹಿತರೊಡನೆ ಹೋಗಿ, ಇದು ತುಂಬ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಪ್ರೇಮಿ ಅಥವಾ ಪ್ರೇಮಿಕ ಇಂದು ತುಂಬಾ ಕೋಪದಲ್ಲಿ ಕಾಣಬಹುದು, ಇದರಿಂದಾಗಿಅವರ ಮನೆಯ ಪರಿಸ್ಥಿತಿ ಇರುತ್ತದೆ. ಅವರು ಕೋಪದಲ್ಲಿದ್ದರೆ , ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿ. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ.ಅದೃಷ್ಟ ಸಂಖ್ಯೆ 2.

ಕನ್ಯಾ ರಾಶಿ : 29 Apr 2020
ಗರ್ಭಿಣಿಯರಿಗೆ ಉತ್ತಮ ದಿನವಲ್ಲ. ನೀವು ನಡೆಯುವಾಗ ಹೆಚ್ಚು ಜಾಗರೂಕರಾಗಿರಬೇಕು. ಇಂದಿನ ದಿನ ಯಾರಿಗೂ ಸಾಲ ನೀಡಬೇಡಿ ಮತ್ತು ಕೊಡುವುದು ಅಗತ್ಯವಾಗಿದ್ದರೆ ಕೊಡುವವರಿಂದ ಅವರು ಯಾವಾಗ ಹಣವನ್ನು ಮರುಪಾವತಿ ಮಾಡುತ್ತಾರೆಂದು ಬರವಣಿಗೆಯಲ್ಲಿ ತೆಗೆದುಕೊಳ್ಳಿ ನೀವು ಕೆಲಸದ ಜಾಗದಲ್ಲಿ ಅತಿಯಾಗಿ ಶ್ರಮಪಡುವುದರಿಂದ ಕೌಟುಂಬಿಕ ಅಗತ್ಯಗಳು ಮತ್ತು ಅವಶ್ಯಕತೆಗಳು ನಿರ್ಲಕ್ಷಿಸಲ್ಪಡುತ್ತವೆ ನೀವು ಪ್ರೀತಿಯ ಮನೋಭಾವದಲ್ಲಿರುತ್ತೀರಿ ಮತ್ತು ಅದಕ್ಕೆ ಅವಕಾಶಗಳೂ ಸಾಕಷ್ಟಿರುತ್ತವೆ. ಈ ರಾಶಿಚಕ್ರದ ಉದ್ಯಮಿಗಳು ಇಂದು ವ್ಯಾಪಾರಕ್ಕೆ ಸಂಬಂಧಿಸಿದ ಅಪೇಕ್ಷಿಸದ ಪ್ರಯಾಣಕ್ಕೆ . ಈ ಪ್ರಯಾಣವು ನಿಮಗೆ ಮಾನಸಿಕ ಒತ್ತಡವನ್ನು ನೀಡಬಹುದು. ಅದೃಷ್ಟ ಸಂಖ್ಯೆ: 9

ತುಲಾ ರಾಶಿ : 29 Apr 2020
ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಎಲ್ಲಾದರೂ ಹೂಡಿಕೆ ಮಾಡಿರುವ ಜನರು, ಇಂದಿನ ದಿನ ಅವರಿಗೆ ಆರ್ಥಿಕ ನಷ್ಟ ಸಂಭವಿಸಬಹುದು ಈಗ ತಾನೇ ಪರಿಚಯವಾದವರ ಜೊತೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆ / ಪಾರಿತೋಷಕಗಳನ್ನು ಸ್ವೀಕರಿಸುವುದರಿಂದ ಇದು ರೋಮಾಂಚಕ ದಿನವಾಗಿರುತ್ತದೆ. ಕೆಲವರಿಗೆ ವೃತ್ತಿಪರ ಬೆಳವಣಿಗೆ. ಇಂದು ಮನೆಯ ಸದಸ್ಯರೊಂದಿಗೆ ಮಾತನಾಡುವ ಸಮಯದಲ್ಲಿ ನಿಮ್ಮ ಮುಖದಿಂದ ಮನೆಯ ಸದಸ್ಯರು ಕೋಪಗೊಳ್ಳುವಂತಹ ಯಾವುದೇ ಮಾತು ಬರಬಹುದು. ಇದರ ನಂತರ ಮನೆಯ ಸದಸ್ಯರನ್ನು ಮನವರಿಕೆ ಮಾಡಲು ನಿಮ್ಮ ಸಾಕಷ್ಟು ಸಮಯ ಹೋಗಬಹುದು.ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ :29 Apr 2020
ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಯಾರಿಂದಲೂ ಸಲಹೆಯನ್ನು ತೆಗದುಕೊಳ್ಳದೆ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬಾರದು. ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ನೀವು ಅವರ ಸಲುವಾಗಿ ಕಾಳಜಿ ವಹಿಸುತ್ತೀರೆಂದು ಅವರಿಗೆ ಅರ್ಥವಾಗಲಿ. ಅವರೊಂದಿಗೆ ನಿಮ್ಮ ಗುಣಮಟ್ಟದ ಸಮಯ ಕಳೆಯಿರಿ. ದೂರು ನೀಡಲು ಯಾವುದೇ ಅವಕಾಶ ನೀಡಬೇಡಿ. ಪ್ರೀತಿಯಲ್ಲಿ ನಿರಾಶೆಯಾಗಬಹುದಾದರೂ ಪ್ರೇಮಿಗಳು ಯಾವತ್ತೂ ಮುಖಸ್ತುತಿ ಮಾಡುವವರಾದ್ದರಿಂದ ನೀವು ಧೃತಿಗೆಡಬೇಡಿ. ವ್ಯಾಪಾರಕ್ಕೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ಸಕಾರಾತ್ಮಕವಾಗಿ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸಿ. ಅವರು ನಿಮ್ಮ ಪರವಾಗಿರುತ್ತವೆ. ಅದೃಷ್ಟ ಸಂಖ್ಯೆ: 4

ಧನು ರಾಶಿ :29 Apr 2020
ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ -ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಲುಕಿಕೊಂಡಿರಬಹುದು. ಇತರರಿಂದ ಸಹಾಯ ಪಡೆಯಿರಿ ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ನಿಮ್ಮ ಕುಟುಂಬ ನಿಮ್ಮ ಸಹಯಕ್ಕೆ ಬರುತ್ತದೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ. ನೀವು ಒಂದು ಅಭ್ಯಾಸವನ್ನು ಕರಗತ ಮಾಡಿಕೊಂಡವರನ್ನು ಗಮನಿಸುವುದರ ಮೂಲಕ ಕೆಲವು ಪಾಠಗಳನ್ನು ಕಲಿಯಬಹುದು. ಅದೃಷ್ಟ ಸಂಖ್ಯೆ: 1

ಮಕರ ರಾಶಿ : 29 Apr 2020
ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲೂ ಒಂದು ಒಳ್ಳೆಯ ದಿನ. ಕುಟುಂಬದ ಯಾವುದೇ ಸದಸ್ಯರ ಕಾಯಿಲೆ ಬೀಳುವ ಕಾರಣದಿಂದಾಗಿ ನೀವು ಆರ್ಥಿಕ ತೊಂದರೆಗೊಳಗಾಗಬಹುದು. ಆದಾಗ್ಯೂ ಈ ಸಮಯದಲ್ಲಿ ನೀವು ಹಣಕ್ಕಿಂತ ಹೆಚ್ಚಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ನಿಮ್ಮ ಹಿರಿಯರ ಸಲಹೆ ತೆಗೆದುಕೊಳ್ಳಿ ಇಲ್ಲವಾದರೆ ಅದು ಅವರಿಗೆ ಕೋಪ ಮತ್ತು ಅಸಮಾಧಾನವನ್ನು ತರಬಹುದು. ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ.ನಿಮ್ಮ ಸಂಗಾತಿಯ ಕಳಪೆ ಆರೋಗ್ಯ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಆದರೆ ನೀವು ಹೇಗಾದರೂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತೀರಿ. ಅದೃಷ್ಟ ಸಂಖ್ಯೆ: 1

ಕುಂಭ ರಾಶಿ : 29 Apr 2020
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನ ದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ನಿಮ್ಮ ಪ್ರೀತಿಪಾತ್ರರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡಬಹುದಾದ ಸಮಸ್ಯೆಗಳನ್ನು ಕೆದಕುವುದನ್ನು ತಪ್ಪಿಸುವುದು ಅತ್ಯುತ್ತಮ. ಅದೃಷ್ಟ ಸಂಖ್ಯೆ: 8

ಮೀನ ರಾಶಿ : 29 Apr 2020
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ಸಾಮಾಜಿಕ ಚಟುವಟಿಕೆಗಳು ಆನಂದಮಯವಾಗಿದ್ದರೂ ನೀವು ಇತರರೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಪ್ರಣಯ ಸಂತೋಷಕರವೂ ಮತ್ತು ಅದ್ಭುತವೂ ಆಗಬಹುದು. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತವೆ ಮತ್ತು ಒಳ್ಳೆಯ ಆದಾಯದ ಭರವಸೆ ಕಾಣಿಸುತ್ತದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವುದು ಸರಿಯಿಲ್ಲ. ಅವರ ವಿಶ್ವಾಸಾರ್ಹತೆ ತಿಳಿಯದೆ ಅವರಿಗೆ ತನ್ನ ಜೀವನದ ವಿಷಯಗಳನ್ನು ತಿಳಿಸಿ ತಮ್ಮ ಸಮಯವನ್ನು ಹಾಳುಮಾಡುತ್ತೀರಿ, ಇನ್ನೇನು ಇಲ್ಲ. ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಂಜೆಯನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ: 6

ಯಾರನ್ನು ದೂರುವುದು?

0

ಟಿ ಸತೀಶ್ ಜವರೇಗೌಡ


ಆರಿ‌ಹೋಗುವ ಗಳಿಗೆಗೆ
ಭೀತಿಗೊಂಡು ಬಿಕ್ಕಳಿಸುತ್ತ
ಮರಣ ಶಯ್ಯೆಯಲ್ಲಿ
ತಣ್ಣಗೆ ಮಲಗಿದೆ
ಬೆಳಕಿನ ಕಣ್ಣಾಗಿದ್ದ
ಮಣ್ಣಿನ ಹಣತೆ
ಯಾರನ್ನು ದೂರುವುದು?

ಬತ್ತಿ ತುಂಡವಿದೆ
ಹತ್ತಿ ಬೆಳೆಯುವ
ಹೊಲಗಳು ಬೀಳುಬಿದ್ದಿವೆ
ಎಣ್ಣೆ ತೀರಿದೆ
ಗಾಣಗಳು ಮೌನವಾಗಿವೆ
ರೈತರು ಶಹರಗಳಿಗೆ
ಗುಳೇ ಹೋಗಿದ್ದಾರೆ
ಯಾರನ್ನು ದೂರುವುದು?

ಇಂದೇಕೋ‌
ಕಾರ್ಮೋಡವು ದಟ್ಟೈಸಿದೆ
ಗಾಳಿ ಜೋರು ಬೀಸಿದೆ
ಬೆಳಕು ನಂದದಂತೆ
ಎಚ್ಚರಿಕೆಯಿಂದ ಕಾಯಬೇಕಿದೆ
ಕಣ್ಣೆವೆ ಮುಚ್ಚದೆ
ಯಾವುದಕ್ಕೂ ಬೆಚ್ಚದೆ
ದುಃಖವ ನುಂಗಲೇಬೇಕಿದೆ
ಯಾರನ್ನು ದೂರುವುದು?

ಕ್ಷಣ ಕ್ಷಣವೂ ತಿಣುಕಾಡುತ್ತ
ಉರಿಯುತ್ತಿರುವ ಹಣತೆ
ಕಂಪಿಸುವ ಕೈಗಳಿಂದ ಜಾರಿ
ಚೂರು ಚೂರಾದರೆ?
ಮತ್ತೊಂದು ತರುವುದು ಎಲ್ಲಿಂದ?
ತಿರುಗಣಿ ಮುರಿದಿದೆ
ವಯಸ್ಸಾದ ಪಾದಗಳು
ಅದಾಗಲೇ ಹಾಸಿಗೆ ಹಿಡಿದಿವೆ
ಯಾರನ್ನು ದೂರುವುದು?

ನಿದ್ರಾಹೀನ ವಯ್ಯಾರದ
ಭಾರೀ ಕರಿಹೆದ್ದಾರಿಗಳ
ಗಗನಚುಂಬಿ ಮಹಾನಗರಗಳ
ಶೃಂಗಾರದ ಖಯ್ಯಾಲಿಗೆ
ಖಾಲಿಯಾಗುತ್ತಿದೆ
ಹಸಿರೊದ್ದು ಲಕಲಕಿಸುತ್ತಿದ್ದ
ನೆಲದೊಡಲಿನ ಮೆದುಮಣ್ಣು
ಯಾರನ್ನು ದೂರುವುದು?

ಕತ್ತಲು‌ ಕವಿಯುತ್ತಿದೆ
ಆತಂಕ ಹಾಯುತ್ತಿದೆ
ಸಾಗುವ ದಾರಿ
ಬಲು ದೂರವಿದೆ
ಭಯಗ್ರಸ್ತ‌ ಮನಸ್ಸು
ಬೆಳಕನ್ನು ಧ್ಯಾನಿಸಿದೆ
ಏನು ಮಾಡುವುದು?
ಯಾರನ್ನು ದೂರುವುದು?


ಸತೀಶ್ ಜವರೇಗೌಡ ಅವರು ಮಂಡ್ಯ ಜಿಲ್ಲೆಯವರು. ಯುವ ಬರಹಗಾರರ ವೇದಿಕೆಯ ಮೂಲಕ ಸದಾ ಸಕ್ರಿಯರು. ಅಧ್ಯಾಪನ ಜೊತೆ ಜೊತೆಗೆ ಬರವಣೆಗೆಯಲ್ಲೂ ತೊಡಗಿದ್ದಾರೆ. ಸಮಾಜಮುಖಿ ಚಿಂತನೆಯ ಕವಿ.

ಕರ್ನಾಟಕ ವಿಚಾಕ ವೇದಿಕೆ ನೀಡುವ ರಾಜ್ಯೋತ್ಸವ ಸನ್ಮಾನ, ಡಾ ಕೆ ಕರೀಂಖಾನ್ ಸಾಹಿತ್ಯ ಪ್ರಶಸ್ತಿ, ಸದ್ಭಾವನ ಪ್ರಶಸ್ತಿ, ಬೆಳಕು ಮಾಣಿಕ್ಯ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೆ ಪಾತ್ರರು.

ಮಂಡ್ಯ ಜಿಲ್ಲೆಯ ಕವಿಕಾವ್ಯಸಮ್ಮೇಳನದ ಅಧ್ಯಕ್ಷತೆ, ದಸರಾ ಯುವ ಕವಿ ಗೋಷ್ಠಿಯ ನಿರ್ವಹಣೆಯ ಮೂಲಕ ಜನಮನ ಗೆದ್ದಿದ್ದಾರೆ.

ಸ್ಪಂದನ ಸಾಹಿತ್ಯಿಕ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಸಂಘಟಕರಾಗಿ ಮುಂಚೂಣಿಯಲ್ಲಿದ್ದಾರೆ.

ಪಾವಗಡ ಗಡಿ ಗ್ರಾಮಗಳ ಪರಿಶೀಲನೆ

ಪಾವಗಡ ತಾಲ್ಲೂಕಿನ ಗಡಿ ಗ್ರಾಮಗಳಾದ ದೊಮ್ಮತಮರಿ, ವಿರುಪಸಮುದ್ರ, ಗುಮ್ಮಘಟ್ಟ, ಚನ್ನಮ್ಮರೆಡ್ಡಿ ಹಳ್ಳಿ, ಅಕ್ಕಮ್ಮನಹಳ್ಳಿ, ಗೌಡೇಟಿ, ಟಿ.ಎನ್.ಪೇಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ  ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನಲ್ಲಿ ಯಾವುದೇ ಕೊರೊನಾ ಪ್ರಕರಣ ಇಲ್ಲವಾದರೂ ಆಂಧ್ರದ ಹಿಂದೂಪುರ, ಕಲ್ಯಾಣದುರ್ಗದಲ್ಲಿ ಕೊರೊನಾ ಸೋಂಕು ಇರುವುದರಿಂದ ಕಟ್ಟೆಚ್ಚರವಹಿಲಾಸಾಗಿದೆ. ಜಮೀನು, ಕಾಲು ದಾರಿಗಳಲ್ಲಿ  ಓಡಾಡದಂತೆ ಕಟ್ಟೆಚ್ಚರ ವಹಿಸಲಾಗುವುದು.  ಆಂಧ್ರ ಸೇರಿದಂತೆ ಇತರೆಡೆಯಿಂದ ಯಾರೊಬ್ಬರು ಬರದಂತೆ ನಿಯಂತ್ರಸಿಬೇಕು. ಇತರೆ ರಾಜ್ಯದಿಂದ ಯಾರದಾರೂ ಬಂದರೆ ಕೂಡಲೆ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು ಎಂದರು.

http://https://youtu.be/f9F1IKN1Fgo

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ ಮಾತನಾಡಿ. ಅನಗತ್ಯವಾಗಿ ಸಂಚರಿಸುವ ವಾಹನಗಳ ಬಗ್ಗೆ ಆಪ್ ನ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸುಖಾ ಸುಮ್ಮನೆ ಓಡಾಡುವವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ, ಡಿ ವೈ ಎಸ್ ಪಿ ಪ್ರವೀಣ್, ತಹಶೀಲ್ದಾರ್ ವರದರಾಜು, ಕಂದಾಯ ನಿರೀಕ್ಷಕ ಶಿವಾನಂದರೆಡ್ಡಿ, ರಾಜಗೋಪಾಲ್, ಗಿರೀಶ್ ಉಪಸ್ಥಿತರಿದ್ದರು

ಮಂಡ್ಯದ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಕುಂದಾಪುರ ನಂಟು

Publicstory. in


Tumkuru: ಮಂಡ್ಯದ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಕುಂದಾಪುರ ನಂಟು ದೃಢಪಟ್ಟಿದೆ.

ಪ್ರಯಾಣದ ಮಧ್ಯೆ ಕುಂದಾಪುರ ಪೆಟ್ರೋಲ್ ಬಂಕ್‍ನಲ್ಲಿ ಸ್ನಾನ. ಸೋಂಕಿತ ವಿಶ್ರಾಂತಿ ಪಡೆದಿದ್ದ ಪೆಟ್ರೋಲ್ ಬಂಕ್.
ಪೆಟ್ರೋಲ್ ಬಂಕ್ ಪತ್ತೆ ಹಚ್ಚಿದ ಪೆÇಲೀಸರು
ಕುಂದಾಪುರದ ತೆಕ್ಕಟ್ಟೆ ಪೆಟ್ರೋಲ್ ಬಂಕ್‍ನಲ್ಲಿ ವಿಶ್ರಾಂತಿ ಪಡೆದಿದ್ದ.

ಕುಂದಾಪುರದ ಸಂಪರ್ಕಿತರು ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಂಪೂರ್ಣ ಸೀಲ್
ಪ್ರಯಾಣ ಮಧ್ಯೆ ಕುಂದಾಪುರಕ್ಕೆ ಬಂದಿದ್ದ,
ತೆಕ್ಕಟ್ಟೆಯಲ್ಲಿ ಸ್ನಾನ,ತಿಂಡಿಗೆಂದು ಇಳಿದಿದ್ದ ಎಂದು ತಿಳಿದು ಬಂದಿದೆ.
ಸೋಂಕಿತ ವ್ಯಕ್ತಿ
ಟಿಫನ್ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು. ಪೆಟ್ರೋಲ್ ಬಂಕ್‍ನ್ನು ಸೀಲ್ ಮಾಡಿದ ಉಡುಪಿ ಜಿಲ್ಲಾಧಿಕಾರಿ
ಗಣೇಶ್ ಪೆಟ್ರೋಲಿಯಂನ ಸಿಬ್ಬಂದಿ ಕ್ವಾರಂಟೈನ್‍ಗೆ ಶಿಫ್ಟ್.
ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪೆಟ್ರೋಲ್ ಬಂಕ್ ಇದಾಗಿದೆ.

ದೇಶದಲ್ಲಿ ಮುಂದುವರಿದ ಕೊರೊನಾ ಅರ್ಭಟ


ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 934ಕ್ಕೇರಿಕೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,435ಕ್ಕೇರಿಕೆ.
ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ.
ಕಳೆದ 24 ಗಂಟೆಗಳಲ್ಲಿ 62 ಮಂದಿ ಮಹಾಮಾರಿಗೆ ಬಲಿ.
ಮಹಾರಾಷ್ಟ್ರ ಒಂದು ರಾಜ್ಯದಲ್ಲೇ 8,590 ಮಂದಿಗೆ ಸೋಂಕು.
ಈಗಾಗಲೇ 1,282 ಮಂದಿ ಗುಣಮುಖ
ಗುಜರಾತ್ ರಾಜ್ಯದಲ್ಲಿ 3,548 ಮಂದಿಯಲ್ಲಿ ಸೋಂಕು ಪತ್ತೆ.

162 ಮಂದಿ ಬಲಿ, 394 ಮಂದಿ ಆಸ್ಪತ್ರೆಯಿಂದ ಗುಣಮುಖ
ದೆಹಲಿಯಲ್ಲಿ 3,108 ಮಂದಿಯಲ್ಲಿ ಸೋಂಕು ಪತ್ತೆ.
54 ಮಂದಿ ಸೋಂಕಿತರು ಸಾವು, 877 ಮಂದಿ ಗುಣಮುಖ.
ದೇಶದಲ್ಲಿ ಈವರೆಗೆ 6,868 ಮಂದಿ ಸೋಂಕಿನಿಂದ ಗುಣಮುಖ.
ದೇಶದಲ್ಲಿ ಈವರೆಗೂ 21,632 ಸೊಂಕು, ಚಿಕಿತ್ಸೆ ಮುಂದುವರಿಕೆ.

ಮೀನಿಗಾಗಿ ಮುಗಿಬಿದ್ದರು, ಕರೊನಾ ಮರೆತರು…

https://youtu.be/rfvrYE8fOic

ತುಮಕೂರು ಜಿಲ್ಲೆ: ತುರುವೇಕೆರೆ ತಾಲ್ಲೂಕು, ಮಾಯಸಂದ್ರ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.

ಮಾಯಸಂದ್ರ ಗ್ರಾಮದ ಕೆರೆಯಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರೂ ಯಾರೂ ಸಹ ತಡೆ ಹಾಕಲಿಲ್ಲ.

ಸಾರ್ವಜನಿಕರು ಮೀನಿಗಾಗಿ ಕಿತ್ತಾಟ ನಡೆಸಿದರು.‌ ಜಾತ್ರೆಯಂತೆ ಜನ ಸೇರಿದ್ದರು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೆ, ಗುಂಪುಗುಂಪಾಗಿ ಕೆರೆಯಲ್ಲಿ ಮೀನು ಖರೀದಿಸಿದರು.

ಗ್ರಾಮದಲ್ಲಿ ತಾಲೂಕು ಆಡಳಿತ‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಬೆಳಿಗ್ಗೆಯಿಂದಲೇ ಶುರುವಾಗಿರುವ ಮೀನಿನ ವ್ಯಾಪಾರ ನಡೆಯುತ್ತಿದೆ. ಮೀನು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದು ತೆಗೆದುಕೊಂಡರು.

ಜನರಲ್ಲಿ ಕೋರನಾ ಮಹಾಮಾರಿ ಬಗ್ಗೆ ಮಾಯಸಂದ್ರ ಗ್ರಾಮದ ಜನತೆಯಲ್ಲಿ ಯಾರೂ ಅರಿವು ಮೂಡಿಸಿಲ್ಲವೇ ಎಂಬ ಅನುಮಾನ ಮೂಡುತ್ತಿದೆ.

‘ಆಗೋಲ್ಲ’ ಅನ್ನೋ ಶಬ್ದವೇ ನನಗೆ ಆಗೋದಿಲ್ಲ ಅಂದರು ವಿಜಯ ಸಂಕೇಶ್ವರ

ಜಿ ಎನ್ ಮೋಹನ್


‘ವಿಜಯ ಸಂಕೇಶ್ವರ’ ಅವರ ಹೆಸರೇನು?
ಅಂತಹ ಒಂದು ಪ್ರಶ್ನೆಯನ್ನು ನಾನೇದಾದರೂ ನಿಮ್ಮ ಮುಂದಿಟ್ಟರೆ ನೀವು ಗಹಗಹಿಸಿ ನಗುತ್ತೀರಿ ಗೊತ್ತು.

ಗಂಗಾವತಿ ಪ್ರಾಣೇಶ್ ಹಾಸ್ಯ ಕಾರ್ಯಕ್ರಮದಲ್ಲಿ ‘ಕಿತ್ತೂರು ಚನ್ನಮ್ಮನ ಊರಿನ ಹೆಸರೇನು?’ ಅಂತ ಪ್ರಶ್ನೆ ಕೇಳ್ತಾರಲ್ಲಾ
ಥೇಟ್ ಅದೇ ಸ್ಟೈಲ್ ನಲ್ಲಿದೆ ನನ್ನ ಪ್ರಶ್ನೆ ಕೂಡಾ ಅನ್ನೋದು ನೀವು ಆಗಲೇ ಬರೆದಿರುವ ತೀರ್ಮಾನ.

‘ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು’ ಅನ್ನೋದು ಪತ್ರಿಕೋದ್ಯಮದ ಒಂದು ರೂಲ್

ಹಾಗೆಯೇ ‘ವಿಜಯ ಸಂಕೇಶ್ವರ’ ಅನ್ನೋದು ಅವರ ಹೆಸರು ಅಂತ ನಮಗೆ ಗೊತ್ತಿದ್ದರೂ ‘ಅದು ಹೌದಾ’ ಅಂತ ನಾನು ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾದದ್ದು ಅವರ ಹೆಸರು ವಿಜಯ ಸಂಕೇಶ್ವರ ಅಲ್ಲ ‘ವಿಜಯ ತುಬಕಿ’

ಆಶರ್ಯ ಆದರೂ ನಿಜ!

ಬೆಳಗಾವಿ ಜಿಲ್ಲೆಯ ಜಮಖಂಡಿಯ ತುಬಕಿ ಊರಿನವರಾದ ವಿಜಯ ಸಂಕೇಶ್ವರ ಅವರ ಪೂರ್ವಜರಿಗೆಲ್ಲಾ ಇದ್ದ ಹೆಸರು ತುಬಕಿ ಎಂದೇ.

‘ಆದರೆ ನಮ್ಮ ತಂದೆ ಹುಟ್ಟಿ ಬೆಳೆದದ್ದು ಬೆಳಗಾವಿಯ ಗಡಿ ಊರು ಸಂಕೇಶ್ವರದಲ್ಲಿ. ಅಲ್ಲಿಂದ ಸುಮಾರು 90 ವರ್ಷಗಳ ಹಿಂದೆ ಗದಗಕ್ಕೆ ಬಂದು ಅಲ್ಲಿಯೇ ತಮ್ಮ ಬದುಕು ಕಂಡುಕೊಂಡರು.
ನಮ್ಮ ತಂದೆಯ ಹೆಸರಿನ ಜೊತೆಗೂ ಇದ್ದದ್ದು ತುಬಕಿಯೇ.
ಆದರೆ ನಾವು ಸಂಕೇಶ್ವರದ ಕಡೆಯಿಂದ ಬಂದವರು ಎನ್ನುವ ಕಾರಣಕ್ಕೆ ಗದಗಿನ ಮಂದಿ ನಮ್ಮ ಹೆಸರಿನ ಜೊತೆಗೆ ಸಂಕೇಶ್ವರ ಸೇರಿಸಿಬಿಟ್ಟರು.
ಅದೇ ಪರ್ಮನೆಂಟ್ ಆಯ್ತು ಎಂದು ವಿಜಯ ‘ತುಬಕಿ’ ಸಂಕೇಶ್ವರ ಅವರು ನಸುನಕ್ಕರು.

ಗದಗ ಎಂದರೆ ಮೊದಲು ನೆನಪಾಗುವುದೇ ಕುಮಾರವ್ಯಾಸ, ವೀರ ನಾರಾಯಣ ಗುಡಿ ಹಾಗೂ ಕರ್ಣಾಟ ಭಾರತ ಕಥಾಮಂಜರಿ.
ಆದರೆ ಪಟ್ಟಿ ಅಷ್ಟಕ್ಕೇ ನಿಲ್ಲುವುದಿಲ್ಲ
ಕರ್ನಾಟಕದ ಹಲವಾರು ಸುಶಿಕ್ಷಿತ ತಲೆಮಾರಿನ ಮನಸ್ಸಿನಲ್ಲಿ ಅಚ್ಚೊತ್ತಿರುವ ಇನ್ನೊಂದು ಪುಸ್ತಕ ‘ಡಿ ಕೆ ಭಾರದ್ವಾಜ್ ಡಿಕ್ಷನರಿ’

‘ಭಾರದ್ವಾಜ್ ಡಿಕ್ಷನರಿ ನನ್ನ ತಂದೆಯ ಕನಸು.
ಅವರಿಗೆ ಕನ್ನಡಕ್ಕೊಂದು ಪದಕೋಶ ಮಾಡಬೇಕು ಎನ್ನುವ ಕನಸಿತ್ತು.
1944ರಲ್ಲಿ ಆ ಕನಸು ನನಸು ಮಾಡಿಕೊಂಡರು. ನಾನು ಇನ್ನೂ ಹುಟ್ಟಿಯೇ ಇರಲಿಲ್ಲ. ಈಗಲೂ ಸಹಾ ಒಂದು ವರ್ಷದಲ್ಲಿ ಕನಿಷ್ಠ 4 ಲಕ್ಷ ಪ್ರತಿ ಖರ್ಚಾಗುತ್ತದೆ.
ನನಗೆ ಮರಾಠಿ ಪದಕೋಶ ಮಾಡಬೇಕು ಎನ್ನುವ ಉತ್ಸಾಹ ಬಂತು.
ನಾನೇ ಮರಾಠಿ ಕಲಿತು ಪಂಡಿತರ ಬೆನ್ನು ಬಿದ್ದು ಮರಾಠಿ ಡಿಕ್ಷನರಿ ಮಾಡಿದೆ.
ವಿಚಿತ್ರ ನೋಡಿ ಮಹಾರಾಷ್ಟ್ರದಲ್ಲಿ ಹುಟ್ಟಿದ ಅಪ್ಪ ಕನ್ನಡ ಡಿಕ್ಷನರಿ ಮಾಡಿದರು. ಕರ್ನಾಟಕದಲ್ಲಿ ಹುಟ್ಟಿದ ನಾನು ಮರಾಠಿ ಡಿಕ್ಷನರಿ ಮಾಡಿದೆ ಎಂದು ನಕ್ಕರು.

ಹೀಗೆ ಮಾತನಾಡುತ್ತಿದ್ದಾಗ ನನ್ನ ಕಣ್ಣು ಮೇಲಿಂದ ಮೇಲೆ ಅವರ ಮೂಗಿನತ್ತ ಹೋಗುತ್ತಿತ್ತು.
ಪ್ರತಿಯೊಬ್ಬರ ಚಲನ ವಲನವನ್ನೂ ಇನ್ನಿಲ್ಲದಷ್ಟು ಸೂಕ್ಷ್ಮದಿಂದ ಗಮನಿಸುವ ವಿಜಯ ಸಂಕೇಶ್ವರರಿಗೆ ಇದು ಗೊತ್ತಾಗಿ ಹೋಯಿತೇನೋ

‘ನನ್ನ ಮೂಗು ಇಂದಿರಾಗಾಂಧಿಯ ಮೂಗಿನ ಹಾಗಿತ್ತು.
ನನಗೆ 12 ವರ್ಷ ಇದ್ದಾಗ ಮೂಗಿನಲ್ಲಿ ಏನೋ ಹುಣ್ಣಾಯಿತು.
ಇಂಜೆಕ್ಷನ್ ಕೊಟ್ಟವರು ಸರಿಯಾಗಿ ಕೊಡದ ಕಾರಣ್ ಸೆಪ್ಟಿಕ್ ಆಯಿತು.
ಇಡೀ ಒಂದು ವರ್ಷ ನಾನು ನರಳುವಂತೆ ಮಾಡಿತು. ಆಮೇಲೆ ನೋಡಿದರೆ ಇಂದಿರಾಗಾಂಧಿಯವರ ಮೂಗಿನಂತಿದ್ದ ಮೂಗು ಹೀಗೆ ಆಗಿ ಹೋಗಿತ್ತು’ ಎಂದರು.

ಅವರು ವಿಷಾದದಿಂದ ಈ ಮಾತು ಹೇಳುತ್ತಿದ್ದಾರೇನೋ ಎಂದು ಅವರತ್ತ ನೋಡಿದೆ
ಅವರ ಮುಖದಲ್ಲಿ ಒಂದು ತುಂಟ ನಗು ಮೂಡಿತ್ತು. ಏನೋ ಹೇಳುವ ಉತ್ಸಾಹದಲ್ಲಿದ್ದರು. ನಾನೂ ಕಿವಿಯಾದೆ.

‘ಈ ಮೂಗು ನನಗೆ ತುಂಬಾ ಅಮೂಲ್ಯವಾದ ಗಿಫ್ಟ್ ಕೊಟ್ಟಿದೆ’ ಎಂದರು.
ನಾನು ಮುಖವನ್ನು ಕ್ವಶ್ಚನ್ ಮಾರ್ಕ್ ಆಗಿ ಬದಲಿಸಿಕೊಂಡೆ.

‘ನನ್ನ ಅಪ್ಪನಿಗೆ ನನ್ನ ಮೂಗಿನದ್ದೇ ಚಿಂತೆ ಆಗಿ ಹೋಗಿತ್ತು. ಇವನಿಗೆ ಹೇಗಪ್ಪಾ ಹೆಣ್ಣು ಕೇಳುವುದು ಅಂತ
ಆಗ ನನ್ನ ಮೂಗಿನ ಆಕಾರವನ್ನೇ ಲೆಕ್ಕಿಸದೆ ನನ್ನನ್ನು ಮದುವೆ ಆಗ್ತೀನಿ ಅಂತ ವಾಲೆಂಟರಿಯಾಗಿ ಮುಂದೆ ಬಂದದ್ದು ಈಕೆ’
ಎನ್ನುತ್ತಾ ಪಕ್ಕದಲ್ಲಿದ್ದ ತಮ್ಮ ಪತ್ನಿಯತ್ತ ಬೊಟ್ಟು ಮಾಡಿದರು
ಅವರ ಮುಖದಲ್ಲೂ ಒಂದು ಸಂಭ್ರಮವಿತ್ತು.

‘ನೀವು ಲಾರಿ ಹತ್ತಿ ಅದರ ಸ್ಟೀರಿಂಗ್ ಹಿಡಿದಾಗ ನಿಮಗೆ ಇನ್ನೂ 20 ವರ್ಷ’
ಅಂತ ನಾನು ನನ್ನ ಮಾತಿನ ಸ್ಟೀರಿಂಗ್ ಅನ್ನು ಇನ್ನೊಂದು ದಿಕ್ಕಿಗೆ ಹೊರಳಿಸಿದೆ.
‘ಹೌದು, ಆ ವೇಳೆಗೆ ಮುದ್ರಣ ಕ್ಷೇತ್ರದಲ್ಲಿದ್ದ ನಾವು ಡೈವರ್ಸಿಫೈ ಆಗಲೇಬೇಕು ಅಂತ ನನಗೆ ತೀವ್ರವಾಗಿ ಅನಿಸಿತ್ತು. ಬೇರೆ ಬ್ಯುಸಿನೆಸ್ ಮಾಡಲೇಬೇಕು ಎಂದು ನಿರ್ಧರಿಸಿದೆ’.

‘ಅದು ಸರಿ ಆದರೆ ಅದಕ್ಕೆ ಲಾರಿಯೇ ಯಾಕೆ ಆಗ್ಬೇಕಿತ್ತು’ ಅಂತ ನಾನು ಪ್ರಶ್ನೆಯನ್ನು ಮುಂದಿಟ್ಟೆ.

‘ನಾನು ತುಂಬಾ ಯೋಚಿಸಿಯೇ ಲಾರಿ ಬ್ಯುಸಿನೆಸ್ ಮಾಡುವ ಮನಸ್ಸು ಮಾಡಿದ್ದು.
ಲಾರಿ ಬೇರೆ ಬ್ಯುಸಿನೆಸ್ ಗಳಂತಲ್ಲ. ಅದು ಮೊದಲ ದಿನದಿಂದಲೇ ಆದಾಯ ತಂದುಕೊಡುತ್ತದೆ’ ಎಂದರು.

‘ನಾನು ಲಾರಿ ಬ್ಯುಸಿನೆಸ್ ಮಾಡುವ ಮೊದಲು ನನಗೆ ಸಾಲ ಹುಟ್ಟುವುದು ತುಂಬಾ ಸುಲಭವಿತ್ತು. ಆದರೆ ನಾನು ಲಾರಿ ಹತ್ತಿದ ಕೂಡಲೇ ನಮ್ಮ ಬಂಧು ಬಳಗಕ್ಕೆ ನನ್ನ ಮೇಲೆ ವಿಶ್ವಾಸ ಕಡಿಮೆಯಾಯಿತು. ಸಾಲವೇ ಹುಟ್ಟುತ್ತಿರಲಿಲ್ಲ’ ಎಂದರು.

ರಾತ್ರಿ ಡ್ರೈವರ್ ಬರುವ ವೇಳೆಗೆ ತಾವೇ ಲಾರಿ ಓಡಿಸಿಕೊಂಡು ನೂರಾರು ಕಿ ಮೀ ಹೋಗುತ್ತಿದ್ದ ವಿಜಯ ಸಂಕೇಶ್ವರ ಅವರನ್ನು ‘ಆದರೂ ಲಾರಿ ಕ್ಷೇತ್ರದಲ್ಲೇ ಸಕ್ಸಸ್ ಹೇಗೆ ಕಂಡುಕೊಂಡಿರಿ’ ಅಂದೆ.

‘ಅದು ಲಾರಿ ಇರಲಿ, ಬಸ್ ಇರಲಿ, ವಿಜಯ ಕರ್ನಾಟಕ ಇರಲಿ, ವಿಜಯ ವಾಣಿ ಇರಲಿ ಅದು ಕೇಳೋದು ಇನ್ವಾಲ್ವ್ಮೆಂಟ್ ಅನ್ನು ಮಾತ್ರ. ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೆ ಒಂದೇ ಕೀಲಿ ಕೈ- ಸಂಪೂರ್ಣ ತೊಡಗಿಸಿಕೊಳ್ಳುವಿಕೆ.

ಡಾ ರಾಜಕುಮಾರ್ ಕೃಷ್ಣದೇವರಾಯ ಆಗಿಬಿಡಲು ಹಾಕಿದ್ದು 100 ಪರ್ಸೆಂಟ್ ಇನ್ವಾಲ್ವ್ಮೆಂಟ್’ ಎಂದು ವಿವರಿಸುತ್ತಾ ಇದ್ದರು.

‘ಲಾರಿ ಟೈರ್ ನೋಡಿದ್ರೆ ಸಾಕು ಅದು ಮಾಡಿರೋ ಲಾಭ ಲೆಕ್ಕ ಮಾಡಿ ಹೇಳ್ತಾರೆ’ ಎನ್ನುವ ಮಾತು ಪತ್ರಿಕಾ ರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ಸು.
ಹಾಗಾಗಿ ನಾನು ಅವರಿಗೆ ಕೇಳಿಯೇ ಬಿಟ್ಟೆ ‘ಹೌದಾ!’ ಅಂತ.
‘ನಾನು ಕಣ್ಣಂಚಿನಲ್ಲಿಯೇ ಲಾರಿ ಜಾತಕ ಹೇಳಿಬಿಡುತ್ತಿದ್ದೆ. ಈಗ ಅದೆಲ್ಲಾ ಬೇಕಾಗಿಲ್ಲ ಈಗ ಕಂಪ್ಯೂಟರ್ ಗಳೇ ಕ್ಕ ಹಾಕಿ ನನ್ನ ಮುಂದಿಡುತ್ತೆ’ ಎಂದರು.

ಲಾರಿ ಇಟ್ಟಮೇಲೆ ಕಾರು ಮಾರಿ, ಸ್ಕೂಟರ್ ಮಾರಿ ಮತ್ತೆ ಸೈಕಲ್ ತುಳಿದ ‘ರಿವರ್ಸ್ ಗ್ರೋಥ್’ ದಾಖಲೆಯೂ ವಿಜಯ ಸಂಕೇಶ್ವರ ಅವರಿಗಿದೆ.

‘ಇವೆಲ್ಲವೂ ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಛಲದಿಂದ ಬೇರು ಬಿಡಲು ಕಾರಣವಾಯಿತು.

ನನ್ನ ಮದುವೆ ಸಮಯದಲ್ಲಿ ‘ಯಾವ ಕಾರಣಕ್ಕೂ ಇವನ ಕೈಗೆ ನಿನ್ನ ಒಡವೆ ಕೊಡಬೇಡ’ ಎನ್ನುವ ಕಿವಿ ಮಾತನ್ನು ನನ್ನ ತಂದೆ ನನ್ನ ಹೆಂಡತಿಗೆ ಹೇಳಿದ್ದರು.
ಅಷ್ಟು ಆತಂಕ ಇತ್ತು ನನ್ನ ಲಾರಿ ಪ್ರಯೋಗದ ಮೇಲೆ.

ಹಾಗೆ ಹೇಳುವಾಗ ಅವರ ಗೋಡೌನ್ ಗೆ ಬೆಂಕಿ ಬಿದ್ದ ಪ್ರಕರಣ ಅವರಿಗೆ ನೆನಪಿಗೆ ಬಂತು.

ದಾವಣಗೆರೆಯಲ್ಲಿದ್ದ ನಮ್ಮ ಗೋಡೌನ್ ಗೆ ಬೆಂಕಿ ಬಿತ್ತು. ಒಂದು ಕೋಟಿ ನಷ್ಟ.
ನಾನು ಸಾಲ ತೆಗೆದುಕೊಂಡಿದ್ದ ಸುಂದರಂ ಫೈನಾನ್ಸ್ ಕಂಪನಿಗೆ ನಾನೇ ನೋಟಿಸ್ ಕೊಟ್ಟೆ
ಮೂರು ತಿಂಗಳು ನಾನು್ ಕಂತು ಕಟ್ಟಲಾಗುವುದಿಲ್ಲ. ನೀವೂ ಕೇಳಬಾರದು. ನಿಮ್ಮಿಂದ ಒಂದು ನೋಟೀಸ್ ಕೂಡಾ ಬರಬಾರದು ಅಂತ
ಮಾರನೆಯ ದಿನ ನೋಡ್ತೇನೆ ನೋಟೀಸ್ ಬಿಡಿ, ಫೈನಾನ್ಸ್ ಕಂಪನಿಯ ಸಿಬ್ಬಂದಿಯೇ ನನ್ನ ಎದುರು ಹಾಜರ್.

ನಾನು ಪತ್ರ ಬರೆದರೂ ಹೀಗೆ ಧಮಕಿ ಹಾಕ್ತಾರಲ್ಲ ಅಂದುಕೊಂಡು ಬಾಯಿ ತೆರೆಯಬೇಕು ಆಗ ಆ ಸ್ಟಾಫ್ ನನ್ನ ಕೈಗೆ 10 ಲಕ್ಷ ಇಟ್ಟರು.
ನಿಮ್ಮ ರೀತಿ ಸಾಲ ಕೊಟ್ಟವರಿಗೇ ನೋಟಿಸ್ ಕೊಟ್ಟಿದ್ದು ಯಾರೂ ಇಲ್ಲ. ಆತ ಪ್ರಾಮಾಣಿಕ ಹೋಗಿ ಇನ್ನಷ್ಟು ದುಡ್ಡು ಕೊಟ್ಟು ಬನ್ನಿ ಅಂತ ಮ್ಯಾನೇಜರ್ ಕಳಿಸಿದ್ದಾರೆ ಅಂದರು.

ನನ್ನ ಮುಂದೆ ಪ್ರಾಮಾಣಿಕ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವುದು ನಿಚ್ಚಳವಾಗಿ ಹೋಯ್ತು ಎಂದರು.

ಹಾಗೆ ಅಂದುಕೊಂಡ ನಂತರ ವರ್ಷದಲ್ಲೇ ವಿ ಆರ್ ಎಲ್ ಬಸ್ ಗಳೂ, ವಿಜಯ ಕರ್ನಾಟಕ ಹೀಗೆ ಅನೇಕ ಪ್ರಯೋಗಗಳು ಯಶಸ್ಸಿನ ಹೈವೇಗಿಳಿದವು.

‘ನನ್ನೊಳಗೊಬ್ಬ ಹುಟ್ಟು ಸೈನಿಕನಿದ್ದಾನೆ. ಹಾಗಾಗಿ ನನಗೆ ಚಾಲೆಂಜ್ ಗಳತ್ತ ಮುನ್ನುಗ್ಗೋದು ಇಷ್ಟ’ ಎಂದರು ವಿಜಯ ಸಂಕೇಶ್ವರ.

ವಿ ಆರ್ ಎಲ್ ನ ಲಾರಿ, ಬಸ್ ಗಳಿಗೆ ಹಳದಿ ಬಣ್ಣ ತಂದಾಗ ಅವರ ಲಾರಿ ಡ್ರೈವರ್ ಒಬ್ಬ ‘ಈ ಬಣ್ಣ ಚೆನ್ನಾಗಿಲ್ಲ ನಾನು ಮಾರ್ಕೆಟ್ ಗೆ ತಗೊಂಡು ಹೋಗುವುದಿಲ್ಲ’ ಅಂದ.
ಒಂದು ಕ್ಷಣ ಅವನತ್ತ ನೋಡಿದ ಸಂಕೇಶ್ವರ್ ಅವನಿಂದ ಕೀ ತೆಗೆದುಕೊಂಡು ತಾವೇ ಮಾರ್ಕೆಟ್ ಗೆ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದರು.

ಇದನ್ನ ನೆನಪಿಸಿದೆ.
‘ಹೌದು ನನಗೆ ಆಗೋಲ್ಲ ಅನ್ನೋ ಶಬ್ದವೇ ಆಗಿ ಬರೋದಿಲ್ಲ’ ಎಂದರು.

‘ವಿಜಯ ಕರ್ನಾಟಕ’ ಆರಂಭಿಸಿದಾಗ ಇವರು ಲಾರಿ ಹತ್ತಿದಾಗ ಹೇಗೆ ಮನೆಯವರೆಲ್ಲಾ ಬೆಚ್ಚಿ ಬಿದ್ದಿದ್ದಾರೋ ಅಕ್ಷರಷಃ ಹಾಗೆಯೇ ಕರ್ನಾಟಕ ಬೆಚ್ಚಿಬಿದ್ದಿತ್ತು.

ನಾನು ‘ವಿಜಯಕರ್ನಾಟಕ’ದ 10 ಸೆಂಟರ್ ಆರಂಭಿಸ್ತೇನೆ ಅಂತ ಘೋಷಿಸಿದೆ. ವ್ಯವಹಾರಸ್ಥರು ನಕ್ಕರು.
ಹತ್ತು ಬಿಡು ಎರಡು ಸೆಂಟರ್ ಮಾಡೋದಕ್ಕೇ 10 ವರ್ಷ ಬೇಕು ಎಂದು ಕಾಮೆಂಟ್ ಮಾಡಿದರು.

‘ಆದರೆ ನಾನು ಕೇವಲ ಮೂರು ತಿಂಗಳಲ್ಲಿ ಹುಬ್ಬಳ್ಳಿ ಆವೃತ್ತಿ ಶುರು ಮಾಡಿದೆ. ಆಗ ನಮ್ಮ ಪ್ರಸಾರ ಕೇವಲ 6 ಸಾವಿರ ಇತ್ತು. ಇನ್ನು ಮೂರು ವರ್ಷದಲ್ಲಿ ನಮ್ಮ ಪತ್ರಿಕೆ ಪ್ರಸಾರ 5 ಲಕ್ಷ ಇರುತ್ತೆ ಅಂತ ಘೋಷಿಸಿದೆ’. ಎಲ್ಲರೂ ಮುಸಿ ಮುಸಿ ನಕ್ಕರು.

ಆದರೆ ಎರಡು ವರ್ಷ ತುಂಬುವುದರೊಳಗೆ ವಿಜಯ ಕರ್ನಾಟಕ ಪ್ರಸಾರ 5 ಲಕ್ಷ ದಾಟಿತ್ತು.

‘ಎರಡು ವರ್ಷದಲ್ಲೇ..’ ಎಂದು ನಾನು ಹೇಳುತ್ತಿದ್ದಂತೆಯೇ ವಿಜಯ ಸಂಕೇಶ್ವರ್
‘ಎರಡಲ್ಲ.. ಒಂದು ವರ್ಷ ಎಂಟು ತಿಂಗಳು’ ಎಂದು ನನ್ನನ್ನು ತಿದ್ದಿದರು.’

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ

ದಿನಾಂಕ : 28, ಏಪ್ರಿಲ್ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಮಂಗಳವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಪಂಚಮಿ
(ನಿನ್ನೆ ಮಧ್ಯಾಹ್ನ 2 ಗಂ॥ 28 ನಿ।। ರಿಂದ
ಇಂದು ಸಂಜೆ 3 ಗಂ॥ 4 ನಿ।। ತನಕ)
ನಕ್ಷತ್ರ : ಆರ್ದ್ರೆ
(ಇಂದು ಪ್ರಾತಃಕಾಲ 0 ಗಂ॥ 28 ನಿ।। ರಿಂದ
ಮರುದಿನ ಪ್ರಾತಃಕಾಲ 1 ಗಂ॥ 31 ನಿ।। ತನಕ)
ಯೋಗ : ಸುಕರ್ಮ
ಕರಣ : ಬಾಲವ
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 14 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 54 ನಿ।। ತನಕ)
ಅಮೃತಕಾಲ : (ಇಂದು ಸಂಜೆ 3 ಗಂ॥ 4 ನಿ।। ರಿಂದ ಇಂದು ಸಂಜೆ 4 ಗಂ॥ 44 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 23 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 13 ನಿ।। ತನಕ)(ಇಂದು ಬೆಳಿಗ್ಗೆ 10 ಗಂ॥ 21 ನಿ।। ರಿಂದ ಇಂದು ಬೆಳಿಗ್ಗೆ 11 ಗಂ॥ 11 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 23 ನಿ।। ರಿಂದ ಇಂದು ಸಂಜೆ 4 ಗಂ॥ 58 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 47 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 9 ಗಂ॥ 1 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 36 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 51 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 35 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಮಿಥುನ

ರಾಶಿ ಭವಿಷ್ಯ

ಮೇಷ ರಾಶಿ : 28 Apr 2020
ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ – ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಮಗುವಿನ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಮಂತ್ರಣ ಸಂತೋಷದ ಮೂಲವಾಗಬಹುದು. ಅವನು(ಳು) ನಿಮ್ಮ ನಿರೀಕ್ಷೆಗಳನ್ನು ಪೂರೈಸುವುದು ನಿಮ್ಮ ಕನಸನ್ನು ನನಸಾಗಿಸಬಹುದು. ನಿಮ್ಮ ಪ್ರಿಯತಮೆ ಇಡೀ ದಿನ ನಿಮಗಾಗಿ ಪರಿತಪಿಸುತ್ತಾಳೆ. ಒಂದು ಅಚ್ಚರಿಯನ್ನು ಯೋಜಿಸಿ ಮತ್ತು ಇದನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 9

ವೃಷಭ ರಾಶಿ : 28 Apr 2020
ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತನ್ನಿ. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ.ಪ್ರೇಮ ಧನಾತ್ಮಕ ಕಂಪನಗಳನ್ನು ತೋರಿಸುತ್ತದೆ ನೀವು ಕೆಲಸದಲ್ಲಿ ಇಂದು ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಈ ರಾಶಿಚಕ್ರದ ಜನರು ಇಂದು ಮಾದಕ ಸಿಗರೇಟ್ನಿಂದ ದೂರವಿರುವ ಅಗತ್ಯವಿದೆ ಏಕೆಂದರೆ ಇದರಿಂದ ನಿಮ್ಮ ಅಮೂಲ್ಯ ಸಮಯ ಹಾಳಾಗಬಹುದು ಇದು ನಿಮ್ಮ ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಲಿದೆ. ನೀವು ಪ್ರೀತಿಯ ನಿಜವಾದ ಭಾವಪರವಶತೆಯನ್ನು ಅನುಭವಿಸುತ್ತೀರಿ. ಅದೃಷ್ಟ ಸಂಖ್ಯೆ: 8

ಮಿಥುನ ರಾಶಿ : 28 Apr 2020
ಇಂದಿನ ದಿನ, ನಿಮ್ಮ ಬಳಿ ಸಾಲವನ್ನು ಕೇಳುವ ಮತ್ತು ಅದನ್ನು ಹಿಂತಿರುಗಿಸದೆ ಇರುವಂತಹ ಸ್ನೇಹಿತರಿಂದ ನೀವು ನಿಮ್ಮನ್ನು ತಪ್ಪಿಸುವ ಅಗತ್ಯವಿದೆ. ಕುಟುಂಬದ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡಿ. ನೀವು ಅವರ ಸಲುವಾಗಿ ಕಾಳಜಿ ತೆಗೆದುಕೊಳ್ಳುತ್ತೀರೆಂದು ಅವರಿಗೆ ಅರ್ಥವಾಗುವ ಹಾಗೆ ಅವರ ಸಂತೋಷವನ್ನು ಹಂಚಿಕೊಳ್ಳಿ. ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ಒಂದು ಕಠಿಣ ಸಮಯದ ನಂತರ, ಕೆಲಸದಲ್ಲಿ ಏನಾದರೂ ಸುಂದರವಾದ್ದರಿಂದ ಈ ದಿನ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಜೀವನದ ಪ್ರಕ್ಷುಬ್ಧತೆಯ ಮಧ್ಯೆ, ಇಂದು ನೀವು ನಿಮ್ಮ ಮಕ್ಕಳಿಗಾಗಿ ಸಮಯವನ್ನು ತೆಗೆದುಕೊಳ್ಳುತ್ತೀರ
ಅದೃಷ್ಟ ಸಂಖ್ಯೆ: 6

ಕರ್ಕ ರಾಶಿ : 28 Apr 2020
ಪ್ರಕೃತಿಯು ನಿಮ್ಮಲ್ಲಿ ಗಮನಾರ್ಹ ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನಿರಿಸಿದೆ – ಅದನ್ನು ಸಾಧ್ಯವಾದಷ್ಟೂ ಬಳಸಿಕೊಳ್ಳಿ. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತ ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ನೀವು ಬಾಕಿಯಿರುವ ಎಲ್ಲಾ ಕುಟುಂಬದ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ಒಂದು ಸ್ಥಳದಲ್ಲಿ ನಿಂತಾಗ ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು.
ಅದೃಷ್ಟ ಸಂಖ್ಯೆ: 1

ಸಿಂಹ ರಾಶಿ : 28 Apr 2020
ವಿಜಯೋತ್ಸವವು ನಿಮಗೆ ಪ್ರಚಂಡ ಸಂತೋಷವನ್ನು ನೀಡುತ್ತದೆ. ನಿಮ್ಮ ಸಂತೋಷವನ್ನು ಅನುಭವಿಸಲು ನೀವಿದನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು. ನೀವು ವಿಪರೀತವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಮ್ಮ ಹಣವು ನಿಮ್ಮ ಕೆಲಸಕ್ಕೆ ಬರುತ್ತದೆ, ಇಂದು ನೀವು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಕುಟುಂಬದಲ್ಲಿ ಕೆಲವು ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ನಿಮ್ಮ ಪ್ರೀತಿಯ ಸಂಗಾತಿ ಇಂದು ಏನಾದರೂ ಸುಂದರವಾದದ್ದನ್ನು ಮಾಡಿ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತಾರೆ. ಅದೃಷ್ಟ ಸಂಖ್ಯೆ: 8

ಕನ್ಯಾ ರಾಶಿ : 28 Apr 2020
ಗರ್ಭಿಣಿಯರಿಗೆ ವಿಶೇಷ ಕಾಳಜಿಯ ದಿನ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ಪ್ರಮುಖ ವ್ಯಾಪಾರ ಸಮಾಲೋಚನೆಯ ಬಗ್ಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ – ಇತರರು ನೀಡಿದ ಸಲಹೆಯನ್ನು ಕೇಳಿ. ವಿವಾಹಿತ ಜೋಡಿಗಳು ಒಟ್ಟಾಗಿ ವಾಸಿಸುತ್ತಾರೆ, ಆದರೆ ಅದು ಯಾವಾಗಲೂ ಪ್ರಣಯಭರಿತವಾಗಿರಲೇಬೇಕೆಂದಿಲ್ಲ. ಆದ್ದರಿಂದ ಇಂದು, ಇದು ನಿಜವಾಗಿಯೂ ಪ್ರಣಯಭರಿತವಾಗಿರುತ್ತದೆ. ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ : 28 Apr 2020
ನಿಮ್ಮ ವಿಚ್ಛಿದ್ರಕಾರಕ ಭಾವಗಳು ಮತ್ತು ಉದ್ವೇಗಗಳನ್ನು ಹತೋಟಿಯಲ್ಲಿರಿಸಿಕೊಳ್ಳಿ. ನಿಮ್ಮ ಸಾಂಪ್ರದಾಯಿಕ ಚಿಂತನೆ / ಹಳೆಯ ವಿಚಾರಗಳು ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸಬಹುದು – ಅಭಿವೃದ್ಧಿಯನ್ನು ನಿಲ್ಲಿಸಬಹುದು ಮತ್ತು ಮುಂದೆ ಹೋಗಲು ಅಡೆತಡೆಗಳನ್ನು ರಚಿಸಬಹುದು. ಇಂದು, ಒಂದು ಪಾರ್ಟಿಯಲ್ಲಿ ನೀವು ಆರ್ಥಿಕ ಭಾಗವನ್ನು ಬಲಪಡಿಸಲು ಪ್ರಮುಖ ಸಲಹೆಯನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು. ಹಣಕಾಸು, ಪ್ರೀತಿ, ಕುಟುಂಬದಿಂದ ದೂರ ಹೋಗಿ ಇಂದು ನೀವು ಆನಂದವನ್ನು ಹುಡುಕುತ್ತ ಯಾವುದೇ ಆಧ್ಯಾತ್ಮಿಕ ಗುರುವನ್ನು ಭೇಟಿ ಮಾಡಲು ಹೋಗಬಹುದು. ನಿಮ್ಮ ಸಂಗಾತಿಯ ಆರೋಗ್ಯ ಸ್ವಲ್ಪ ಬಿಗಡಾಯಿಸಬಹುದು. ಅದೃಷ್ಟ ಸಂಖ್ಯೆ: 2

ಧನು ರಾಶಿ : 28 Apr 2020
ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತನ್ನಿ. ನಿಮ್ಮ ಸಹೋದರ-ಸಹೋದರಿಯರಲ್ಲಿ ಒಬ್ಬರು ಇಂದು ನಿಮ್ಮಿಂದ ಹಣವನ್ನು ಎರವಲು ಪಡೆಯಬಹುದು, ನೀವು ಅವರಿಗೆ ಹಣವನ್ನು ಸಾಲವಾಗಿ ಕೊಡುತ್ತೀರಿ ಆದರೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಮಕ್ಕಳು ಅಧ್ಯಯನದಲ್ಲಿ ಅವರ ನಿರಾಸಕ್ತಿಯಿಂದಾಗಿ ಶಾಲೆಯಲ್ಲಿ ನಿರಾಸೆಯುಂಟುಮಾಡಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ನೀವು ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ನೀವು ಕೆಲಸ ಮಾಡುವ ವಿಧಾನವನ್ನು ನೋಡುವ ಅವಶ್ಯಕತೆಯಿದೆ. ಇಲ್ಲದಿದ್ದರೆ ನೀವು ಬಾಸ್ ದೃಷ್ಟಿಯಲ್ಲಿ ನಿಮ್ಮ ನಕಾರಾತ್ಮಕ ಚಿತ್ರಣವನ್ನು ಉಂಟುಮಾಬಹದು.
ಅದೃಷ್ಟ ಸಂಖ್ಯೆ: 8

ಮಕರ ರಾಶಿ : 28 Apr 2020
ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ನಿಮ್ಮ ಕಣ್ಣೀರನ್ನು ಒಬ್ಬ ವಿಶೇಷ ಸ್ನೇಹಿತ ಒರೆಸಬಹುದು. ವ್ಯವಹಾರದ ಜೊತೆ ಸಂತೋಷವನ್ನು ಬೆರೆಸಬೇಡಿ. ಶಾಪಿಂಗ್ ಮತ್ತು ಇತರ ಚಟುವಟಿಕೆಗಳು ನಿಮ್ಮನ್ನು ದಿನವಿಡೀ ಬಿಡುವಿಲ್ಲದಂತಿಡುತ್ತವೆ. ನಿಮ್ಮ ಸಂಗಾತಿ ಎಲ್ಲ ಜಗಳಗಳನ್ನು ಮರೆತು ನಿಮ್ಮನ್ನು ಪ್ರೀತಿಯಿಂದ ಆಲಂಗಿಸಲು ಬಂದಾಗ, ಜೀವನ ನಿಜವಾಗಿಯೂ ಅದ್ಭುತವಾಗಿರುತ್ತದೆ. ಅದೃಷ್ಟ ಸಂಖ್ಯೆ: 8

ಕುಂಭ ರಾಶಿ : 28 Apr 2020
ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ಇಂದಿನ ದಿನ ಯಾರಿಗೂ ಸಾಲ ನೀಡಬೇಡಿ ಮತ್ತು ಕೊಡುವುದು ಅಗತ್ಯವಾಗಿದ್ದರೆ ಕೊಡುವವರಿಂದ ಅವರು ಯಾವಾಗ ಹಣವನ್ನು ಮರುಪಾವತಿ ಮಾಡುತ್ತಾರೆಂದು ಬರವಣಿಗೆಯಲ್ಲಿ ತೆಗೆದುಕೊಳ್ಳಿ ನಿಮ್ಮ ಪಾಲುದಾರರು ನೀವು ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿದರೆ ಅವರ ತಾಳ್ಮೆ ಕಳೆದುಕೊಳ್ಳುತ್ತಾರೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ. ಇಂದು ನೀವು ಉಚಿತ ಸಮಯವನ್ನು ಹೊಂದಿರುತ್ತೀರಿ ಮತ್ತು ಈ ಸಮಯವನ್ನು ನೀವು ಧ್ಯಾನ ಯೋಗವನ್ನು ಮಾಡುವಲ್ಲಿ ಬಳಸಬಹುದು. ಅದೃಷ್ಟ ಸಂಖ್ಯೆ: 6

ಮೀನ ರಾಶಿ : 28 Apr 2020
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಇಂದು ನಿಮ್ಮ ಯಾವುದೇ ಚಲಿಸಬಲ್ಲ ಅಸ್ತಿಯನ್ನು ಕದಿಯಬಹುದು ಆದ್ದರಿಂದ ಸಾಧ್ಯವಾದಷ್ಟು ಅದರ ಬಗ್ಗೆ ಗಮನ ಹರಿಸಿ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಒಂದು ಹಠಾತ್ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ನೀವು ದಿನವನ್ನು ಅತ್ಯುತ್ತಮವಾಗಿಸಲು ನಿಮ್ಮ ಗುಪ್ತ ಗುಣಗಳನ್ನು ಬಳಸುತ್ತೀರಿ. ದಿನದಲ್ಲಿ ಒಂದು ಬಿಸಿಯೇರಿದ ವಾದದ ನಂತರ, ನೀವು ನಿಮ್ಮ ಸಂಗಾತಿಯ ಜೊತೆ ಒಂದು ಅದ್ಭುತವಾದ ಸಂಜೆಯನ್ನು ಕಳೆಯುತ್ತೀರಿ. ಅದೃಷ್ಟ ಸಂಖ್ಯೆ: 3