Friday, February 27, 2026
Google search engine
Home Blog Page 244

ಮುಕ್ಕಾಲು ಎಕೆರೆಯಲ್ಲಿ ಏನ್ನೆಲ್ಲ‌ ಮಾಡಬಹುದು: ನೋಡಲು ದಂಜ್ಯಾನಾಯ್ಕರ ತೋಟಕ್ಕೆ ಬನ್ನಿ

2

ರಂಗನಕೆರೆ ಮಹೇಶ್


ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಯಾರಿಗೂ ಬೇಡವಾದ ಕೆಲಸ. ಕೃಷಿಯೆಂದರೆ ಧೂಳನ್ನು ತಲೆ ಮೇಲೆ ಸುರಿದು ಕೊಳ್ಳಬೇಕು.

ಕಷ್ಟಪಟ್ಟು ಬೆಳೆ ಬೆಳೆದರೆ ಬೆಲೆ ಸಮಸ್ಯೆ.ಇವೆಲ್ಲಾ ಕಂಡು ಇಂದಿನ ಯುವಕರು ಕೃಷಿಯಿಂದ ವಿಮುಕ್ತಿ ಪಡೆದು ಪಟ್ಟಣದತ್ತ ಹೋಗುತ್ತಿದ್ದಾರೆ.

ಇಂತಹ ಕೃಷಿಯ ಸಂಕಷ್ಟಗಳ ನಡುವೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೋಮನಹಳ್ಳಿ ಗ್ರಾಮದ ದಂಜ್ಯಾನಾಯ್ಕ ವಯಸ್ಸು 70 ದಾಟಿದ್ದರೂ ಕೃಷಿಯಲ್ಲಿ ಉತ್ತಮ ಭವಿಷ್ಯವಿದೆ ಎಂಬುದನ್ನು ತೋರಿಸಿ ಇಂದಿನ ಯುವಕರಿಗೆ ಮಾದರಿಯಾಗಿರುವುದರ ಜತೆ ಕೃಷಿ ಕಷ್ಟದ ಜೀವನವಲ್ಲ ಅದೊಂದು ಬದುಕುವ ಕಲೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಅದರಲ್ಲೇನಿದೆ ವಿಶೇಷ ಇದೆ ಬಿಡಿ ಎಂದು ಕೆಲವರು ಹೇಳಬಹುದು. ದಂಜ್ಯಾನಾಯ್ಕ ಹುಟ್ಟು ಕೃಷಿಕನಲ್ಲ. ಈತ ತಂದೆಯ ಐದಾರು ಮಂದಿ ಮಕ್ಕಳಲ್ಲಿ ಇವರು ಒಬ್ಬರು.ಬಹು ಮಂದಿ ಗ್ರಾಮೀಣ ಭಾಗದ ಜನರು ಕೆಲಸಕ್ಕೆ ಬೆಂಗಳೂರಿಗೆ ಹೋಗುವಂತೆ ಇವರೂ ಬದುಕು ಹರಸಿ ಬೆಂಗಳೂರು ನಗರಕ್ಕೆ ಹೋಗಿ ಕೃಷಿ ಬದುಕನ್ನು ಅರಿತು ಯಶಸ್ವಿ ರೈತನಾಗಿರುವುದು ಮಾತ್ರ ವಿಶೇಷ.

ನಗರದ ಹೊರವಲಯದಲ್ಲಿ ಕೃಷಿ ಭೂಮಿ ಹೊಂದಿರುವ ರೈತರ ಬಳಿ ಹಲವಾರು ವರ್ಷ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಮತ್ತೆ ಹಿಂದಿರುಗಿ ತನ್ನ ಗ್ರಾಮಕ್ಕೆ ಬಂದು ಕೃಷಿಯಲ್ಲೂ ವರಮಾನವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದಂಜ್ಯಾನಾಯ್ಕ ಅವರಿಗೆ ತಂದೆಯಿಂದ ಬಂದ ಮುಕ್ಕಾಲು ಎಕರೆ ಜಮೀನು ಇದೆ. ಮುಕ್ಕಾಲು ಎಕರೆ ಜಮೀನಿನಲ್ಲಿ ಕೃಷಿ ಮಾಡಿದರೆ ಜೀವನ ನಡೆಸಬಹುದು ಎಂಬುದನ್ನು ತೋರಿಸಿದ್ದಾರೆ.

ಈತನ ಕೃಷಿಯ ವಿಧಾನ ಹೇಗಿದೆಯೆಂದರೆ ಮುಕ್ಕಾಲು ಎಕೆರೆ ಜಮೀನಿನಲ್ಲಿ ಯಾವುದೇ ಸ್ಥಳವನ್ನು ವ್ಯರ್ಥ ಮಾಡಿಲ್ಲ.24 ತೆಂಗಿನ ಮರಗಳು, 200 ಅಡಿಕೆ ಗಿಡಗಳು(ಇನ್ನೂ ಫಸಲಿಗೆ ಬಂದಿಲ್ಲ), 100 ಬಾಳೆ ದೀರ್ಘಾವಧಿ ಲಾಭ ಪಡೆಯುವ ಬೆಳೆಗಳು ಇನ್ನೂ ತಕ್ಷಣವೇ ಹಣ ನೋಡಲು ತರಕಾರಿ ಸೊಪ್ಪು ಬೆಳೆಗಳನ್ನಾಗಿ ಮಾರ್ಪಡಿಸಿ ಕೊಂಡಿದ್ದಾರೆ.

ಕೃಷಿ ಕೆಲಸಕ್ಕೆ ತೊಡಗಿದರೆ ಹಗಲು ರಾತ್ರಿ ಯಾವುದನ್ನು ಲೆಕ್ಕಿಸುವುದಿಲ್ಲ.

ಗುದ್ದಲಿ ಹಿಡಿದು ನಿಂತರೆ ತೆಂಗಿನ ಮರಗಳಿಗೆ ಪಾತಿ, ಬದನೆ, ಟೊಮೊಟೂ, ಹುರುಳಿಕಾಯಿ, ಬೆಂಡೆ, ಮೆಣಸಿನಕಾಯಿ ಗಿಡಗಳ ನಾಟಿಯಿಂದ ಹಿಡಿದು ಗಿಡಕ್ಕೆ ಸಾಲು ಏರುವವರೆಗೆ ತನ್ನ ಅಗೆತದಿಂದಲೇ ನಡೆಯುತ್ತದೆ. ಬೇರೆ ಬೇರೆ ರೀತಿಯ ಸೊಪ್ಪು ಬೆಳೆಯಲು ವಿಭಾಗಗಳನ್ನಾಗಿ ತಾನು ಅಗೆತದಿಂದಲೇ ಮಾಡುತ್ತಾರೆ.

ಹನಿ ನೀರಾವರಿ ಅಳವಡಿಸಿಕೊಳ್ಳದೆ ಜಮೀನು ಪೂರಾ ನೀರು ಹಾಯಿಸುವ ಇವರು ಎಲ್ಲಾ ಬೆಳೆಗಳ ಮಧ್ಯೆ ತೆಂಗಿನ ಗರಿ ಸೇರಿದಂತೆ ಇತರ ತ್ಯಾಜ್ಯ ಹಾಕಿ ಭೂಮಿಯ ತೇವಾಂಶ ಕಾಪಾಡುತ್ತಾರೆ.

ಹೊಲದಲ್ಲಿ ಸೂರ್ಯನ ಬಿಸಿಲು ಹೆಚ್ಚು ಬೀಳದಂತೆ ಬದುಗಳಲ್ಲಿ ತೆಂಗು,ಬಾಳೆ, ಅಡಿಕೆ ಸೇರಿದಂತೆ ಇತರ ಕಾಡು ಜಾತಿಯ ಮರ ನೆಟ್ಟಿದ್ದಾರೆ.ಎಂತಹ ಕಡು ಬೇಸಿಗೆಯಲ್ಲಿ ತೋಟ ಹೊಕ್ಕರೆ ತಂಪು ನೀಡುತ್ತದೆ. ಹೊಲ ಪೂರಾ ಮುಚ್ಚಳಿಕೆ ಹಾಕಿರುವುದರಿಂದ ತೇವಾಂಶ ಬತ್ತಿ ಹೋಗದಂತೆ ನೋಡಿಕೊಳ್ಳುತ್ತಾರೆ.

ಬಹುಮುಖ್ಯವಾಗಿ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಮಾರಾಟ ಮಾಡುವುದಕ್ಕಿಂತ ಹೆಚ್ಚಾಗಿ ಸುತ್ತಮುತ್ತಲ ಗ್ರಾಮಗಳಲ್ಲಿಯೇ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭಗಳಿಸುವ ತಂತ್ರ ಇವರಿಗೆ ಫಲಿಸಿದೆ.ಕಳೆದ 25 ವರ್ಷಗಳ ಹಿಂದೆ ಕೆಲಸ ಹರಸಿ ಬೆಂಗಳೂರಿಗೆ ಹೋದಾಗ ಶಿಕ್ಷಣ ಪಡೆಯದ ನಾನು ರೈತರೊಬ್ಬರ ಜಮೀನಿನಲ್ಲಿ ಕೂಲಿಗಾಗಿ ಸೇರಿಕೊಂಡೆ.

ಬಹು ವರ್ಷಗಳ ಕಾಲ ಅವರ ಹೊಲದಲ್ಲಿ ಕೃಷಿ ಕೆಲಸ ಮಾಡಿದ ಪರಿಣಾಮ ಕೃಷಿಯ ಬದುಕು ಅರ್ಥವಾಯಿತು. ತರಕಾರಿ ಬೆಳೆಯುವುದು, ಮಾರಾಟ ಮಾಡುವುದನ್ನು ಕಲಿತದ್ದು ಈಗ ಪ್ರಯೋಜನಕ್ಕೆ ಬಂದಿದೆ.

ಭೂಮಿ ಎಂದೂ ಬಂಜೆಯಲ್ಲ ಕಷ್ಟಪಟ್ಟು ಭೂಮಿತಾಯಿಯ ಸೇವೆ ಮಾಡಿದರೆ ಫಲ ಸಿಕ್ಕೆ ಸಿಗುತ್ತದೆ ಎಂಬುದು ದಂಜ್ಯಾನಾಯ್ಕ ಅವರ ಮನದಾಳದ ಮಾತು.

ಇವರ ಬಗ್ಗೆ ಬರೆಯಲು ಕಾರಣ ಇಷ್ಟೆ…ನಮ್ಮಲ್ಲಿ 50 ವರ್ಷ ದಾಟಿದರೆ ಸಾಕು ಮುಗೀತು ಬಿಡಪ್ಪ ನನ್ನ ಜೀವನ ಎಂದು ಗೊಣಗುವ, ಕೃಷಿ ಜೀವನ ಕಷ್ಟ ಎನ್ನುವವರು ದಂಜ್ಯಾನಾಯ್ಕ ಅವರಿಂದ ಪಾಠ ಕಲಿಯಬಹುದು..

ಗ್ಯಾಸ್‌ ಟ್ಯಾಂಕರ್ ಪಲ್ಟಿ

ಪಾವಗಡ ತಾಲ್ಲೂಕು ದೊಮ್ಮತಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರಾರಾಯನಹಳ್ಳಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಆಗಿ ಗ್ಯಾಸ್ ಸೋರುತ್ತಿದೆ.

ಯಡೆಯೂರಿನಿಂದ ಅನಂತಪುರಕ್ಕೆ ಹೋಗುವಾಗ ಗ್ರಾಮದ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆಯ ಬದಿ ಪಲ್ಟಿಯಾಗಿ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುವುದು ಆರಂಭವಾಗಿದೆ.

ಕೂಡಲೇ ಪೊಲೀಸ್ ರು ಹಾಗೂ ಅಗ್ನಿಶಾಮಕ ಧಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದಾರೆ. ಸಮೀಪದ ಮನೆಗಳಲ್ಲಿ ಇದ್ದ ಜನರನ್ನು ಸ್ಥಳಾಂತರಿಸಿದರು.

ಕೆಲವೇ ಕ್ಷಣದಲ್ಲಿ ಅನಿಲ ಗ್ರಾಮವನ್ನು ವ್ಯಾಪಿಸಿತು. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು.

ಗ್ಯಾಸ್ ಟ್ಯಾಂಕರ್ ಪಲ್ಟಿ: 40‌‌ ಸಾವಿರ ಲೀಟರ್ ಗ್ಯಾಸ್ ನೆಲಕ್ಕೆ

Pavagada: ಅಡುಗೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸುಮಾರು 40 ಸಾವಿರ ಲೀಟರ್ ಗ್ಯಾಸ್ ಸೋರಿಕೆಯಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮುರರಾಯನಹಳ್ಳಿ ಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ಗೊತ್ತಿಲ್ಲದ ಜನರು ತೀವ್ರ ಆತಂಕಗೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಜನರಲ್ಲಿನ ಆತಂಕ ನಿವಾರಣೆಗೆ ಯತ್ನಿಸಿದರು. ಆದರೂ ಜನರು ಸ್ವಯಂಪ್ರೇರಿತರಾಗಿ ಗ್ರಾಮ ತೊರೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ..

ದೊಮ್ಮತ್ತಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮುರರಾಯನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆಯಿತು. ಪರಿಣಾಮ ಗ್ಯಾಸ್ ಟ್ಯಾಂಕರ್ ಮುಚ್ಚಳ ಬಿಚ್ಚಿಕೊಂಡು ನೀರಿನಂತೆ ಹರಿಯತೊಡಗಿತು. ಸುಮಾರು ನಾಲ್ಕು ಗಂಟೆ ಕಾಲ ನೀರು ಧುಮಿಕ್ಕುವಂತೆ ಹರಿಯಿತು. ಗ್ಯಾಸ್ ಸುತ್ತಲಿನ ಪರಿಸರದಲ್ಲಿ ಹರಡಿದ್ದರಿಂದ. ಜನರ ಕಣ್ಣು ಉರಿಯತೊಡಗಿವೆ. ಇದರಿಂದ ಮತ್ತಷ್ಟು ಭೀತಿಗೊಂಡಿದ್ದಾರೆ.

ಸ್ಥಳೀಯ ನಿವಾಸಿ ಈ.ಶಿವಣ್ಣ ಮಾತನಾಡಿ, ಅಗ್ನಿಶಾಮಕದಳದ ಸಿಬ್ಬಂದಿ ಬಂದಿದೆ. ಗ್ಯಾಸ್ ವ್ಯಾಪಿಸದಂತೆ ತಡೆಯುವ ಪ್ರಯತ್ನದಲ್ಲಿ ತೊಡಗಿದೆ. ಆದರೂ ಜನರು ಹೆದರಿಕೊಂಡಿದ್ದು ಒಬ್ಬೊಬ್ಬರೇ ಗ್ರಾಮ ತೊರೆಯುತ್ತಿದ್ದಾರೆ ಅಗ್ನಿಶಾಮಕ ದಳದ ಸಿಬ್ಬಂದಿ ಮನವರಿಕೆ ಮಾಡಿದರೂ ಒಂದು ವಾರದ ಮಟ್ಟಿಗೆ ಬೇರೆ ಕಡೆ ವಾಸ ಮಾಡಲು ತರೆಳುತ್ತಿದ್ದಾರೆ. ಮುಂದೆ ಏನಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ಗ್ರಾಮಸ್ಥರದ್ದು ಎಂದು ನಾನುಗೌರಿ.ಕಾಮ್ ಗೆ ದೂರವಾಣಿಯಲ್ಲಿ ತಿಳಿಸಿದರು.

ಅಪಾರ ಪ್ರಮಾಣದ ಗ್ಯಾಸ್ ಸೋರಿಕೆಯಾಗಿರುವುದರಿಂದ ಪರಿಸರಕ್ಕೆ ಏನಾದರೂ ಅಪಾಯವಾಗಬಹುದೇ? ಜನರಿಗೆ ತೊಂದರೆಯಾಗಬಹುದೇ ಎಂಬುದನ್ನು ಅಧ್ಯಯನ ಮಾಡಲು ಬೆಂಗಳೂರಿನಿಂದ ತಜ್ಞರ ತಂಡ ವೊಂದು ಬರುತ್ತಿದೆ. ಬಂದು ಸಂಫೂರ್ಣ ಮಾಹಿತಿ ಕಲೆಹಾಕಿ ಅಗತ್ಯ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ. ವೆಲ್ಟಿಂಗ್ ಮಾಡುವ ಗ್ಯಾಸ್ ಇರಬಹುದು ಎಂದು ಅಗ್ನಿಶಾಮಕ ದಳ ಹೇಳುತ್ತಿದ್ದರೆ, ತಹಶೀಲ್ದಾರ್ ವರದರಾಜು ‘ಅದು ಎಚ್.ಪಿ. ಗ್ಯಾಸ್. ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿದೆ. ಪರಿಸ್ಥಿತ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟೀಕರಣ ನೀಡಿದರು.

ಗ್ಯಾಸ್ ಸೋರಿಕೆಯು ಸುತ್ತಲ ಮೂರ್ನಾಲ್ಕು ಗ್ರಾಮಗಳಿಗೆ ಪರಿಣಾಮ ಬೀರಿದೆ. ಕೆಟ್ಟ ವಾಸನೆ ಬರುತ್ತಿದೆ. ಗ್ಯಾಸ್ ಸೋರಿಕೆ ಅಪಾಯದಿಂದ ಗ್ರಾಮದ ಒಬ್ಬೊಬ್ಬರೇ ತೊರೆದು ಬೇರೆ ಕಡೆ ಹೋಗುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಜನರಿಗೆ ಅಭಯ ನೀಡಬೇಕು. ಜನರಲ್ಲಿರುವ ಆತಂಕ ದೂರಮಾಡುವ ಕೆಲಸ ಮಾಡಬೇಕಾಗಿದೆ.

ಕೃಷ್ಣಪ್ಪ ನಿಧನಕ್ಕೆ ಸುರೇಶಗೌಡ ಸಂತಾಪ

ಸೋಮವಾರ ನಿಧ‌ನರಾದ ಜಿ.ಪಂ. ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಅವರ ಪಾರ್ಥಿವ ಶರೀರಕ್ಕೆ ಮಾಜಿ ಶಾಸಕ ಸುರೇಶಗೌಡ ಅಂತಿನ ನಮನ ಸಲ್ಲಿಸಿದರು

publicstory.in


ತುಮಕೂರು: ತಿಗಳ ಜನಾಂಗದ ಹಿರಿಯ ಮುಖಂಡರಾದ ಕೃಷ್ಣಪ್ಪ ಅವರ ನಿಧನಕ್ಕೆ ಮಾಜಿ ಶಾಸಕ ಬಿ.ಸುರೇಶಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು.

ಕೃಷ್ಣಪ್ಪ ಅವರು ಸಮುದಾಯದ ಹಿರಿಯ ಮುಖಂಡರಾಗಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಆವಿಸ್ಮರಣೀಯ ಎಂದು ಹೇಳಿದ್ದಾರೆ.

ಅವರೊಂದಿಗೆ ಇದ್ದ ಉತ್ತಮ ಒಡನಾಟವನ್ನು ನೆನಪಿಸಿಕೊಂಡಿರುವ ಅವರು, ಅವರು ಸಮಾಜದ ಎಲ್ಲ ಜನರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದರು ಎಂದು ಹೇಳಿದ್ದಾರೆ.

ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರಿಣಿಸಲಿ ಎಂದು ಹೇಳಿದ್ದಾರೆ.

ವೈದ್ಯರು, ನರ್ಸ್ ಗಳಿಗೆ ಸ್ಯಾ‌ನಿಟೈಸರ್, ಮಾಸ್ಕ್

publicstory. in


ಶಿರಾ: ಇಲ್ಲಿನ ರಾಮ್ ಮನೋಹರ್ ಲೋಹಿಯಾ ಸಮತಾ ವಿದ್ಯಾಲಯ ಟ್ರಸ್ಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಮಾಸ್ಕ್, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್‍ಗಳನ್ನು ನರ್ಸ್, ವೈದ್ಯರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರುಗಳಿಗೆ ವಿತರಿಸಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.

ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಮಾತನಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್‍ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಜಿಲ್ಲಾಡಳಿತದ ವಿತರಿಸಲಾಗುವುದು ನಿಮ್ಮ ಕಾರ್ಯವೈಖರಿ ಇಡೀ ದೇಶವೇ ನೋಡುತ್ತಿದೆ ಎಂದರು.

ಸ್ಯಾನಿಟೈಜರ್‍ಗಳನ್ನು ಹಸ್ತಾಂತರಿಸಿ ಮಾತನಾಡಿದ ಹೈಕೋರ್ಟಿನ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಲಾಕ್‍ಡೌನ್ ಆಗಿರುವುದರಿಂದ ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳ ಸಮಸ್ಯೆಯಾಗುತ್ತಿದೆ.ಮನೆ-ಮನೆಗೆ ಭೇಟಿ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ, ಕುಟುಂಬ ಸದಸ್ಯರಿಗೆ ತಪಾಸಣೆ ಮಾಡುತ್ತಿದ್ದಾರೆ.

ಅದಕ್ಕಾಗಿಯೇ ಅವರಿಗೆ ಅನುಕೂಲವಾಗುವಂತೆ ಹೆಡ್ ಶೀಲ್ಡ್ ಮಾಸ್ಕ್‍ಗಳನ್ನು ಸಹ ನೀಡಲಾಗಿದೆ.ಶಿರಾ ತಾಲೂಕಿನರುವ ನಮ್ಮ ಶಾಲೆಯಲ್ಲಿ 20 ಟೈಲರ್‍ಗಳಿಂದ ಸುಮಾರು 1 ಲಕ್ಷ ಮಾಸ್ಕ್ ತಯಾರಿಸಿ, ಕಳೆದ 3 ವಾರಗಳಿಂದ ಹಂಚುತ್ತಿದ್ದೇವೆ ಎಂದರು.

ಆಶಾ ಕಾರ್ಯಕರ್ತೆಯರಿಗೆ 75 ಲೀಟರ್ ಸ್ಯಾನಿಟೈಜರ್, 800 ಹ್ಯಾಂಡ್ ಗ್ಲೋಸ್, 2500 ಮಾಸ್ಕ್, 200 ಹೆಡ್ ಶೀಲ್ಡ್ ಮಾಸ್ಕ್ ಅಂಗನವಾಡಿ ಕಾರ್ಯಕರ್ತೆಯರಿಗೆ 25 ಲೀಟರ್ ಸ್ಯಾನಿಟೈಜರ್, 1500 ಹೋಂ ಗಾರ್ಡ್‍ಗಳಿಗೆ 20 ಲೀಟರ್ ಸ್ಯಾನಿಟೈಜರ್, 1500 ಮಾಸ್ಕ್, ಮಹಾನಗರ ಪಾಲಿಕೆಯ ಆವರಣದಲ್ಲಿ ಪೌರ ಕಾರ್ಮಿಕರಿಗೆ 25 ಲೀಟರ್ ಸ್ಯಾನಿಟೈಜರ್, 2000 ಮಾಸ್ಕ್, ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ 5 ಲೀಟರ್ ಸ್ಯಾನಿಟೈಜರ್, 1500 ಮಾಸ್ಕ್ ವಿತರಿಸಿದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಡಿಹೆಚ್‍ಓ ಡಾ. ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು.

ಲಾಕ್ ಡೌನ್ ನೋಡಿಕೊಳ್ಳಲು ಸುಬಾಹು ಕರೆ ತಂದ ತುಮಕೂರು ಪೊಲೀಸರು!

Publicstory. in


ತುಮಕೂರು: ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಸುಬಾಹು” ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದೆ.

ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ/ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ಚಾಲಕರು ಸಂಚರಿಸಿಸಬಹುದಾದ ಸ್ಥಳ ಹಾಗೂ ಉದ್ದೇಶಗಳನ್ನು ನಮೂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ತೆರೆದಿರುವ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ “ಸುಬಾಹು” ಆ್ಯಪ್ ಅನ್ನು ಅಳವಡಿಸಲಾಗಿದೆ. ತುಮಕೂರಿನ ಎಲ್ಲಾ ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಇದನ್ನು ಬಳಸಬಹುದಾಗಿದೆ.

ಪೊಲೀಸ್ ಸಿಬ್ಬಂದಿಯು ಈ ಆ್ಯಪ್ ಮೂಲಕ ವಾಹನಗಳ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ, ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬುದು ಅಪ್‍ಲೋಡ್ ಮಾಡಲಾಗುವುದು. ಈ ವಿವರಗಳನ್ನು ಜಿಲ್ಲೆಯ ಎಲ್ಲಾ ಚೆಕ್ ಪಾಯಿಂಟ್‍ಗಳಲ್ಲಿ ಎಲ್ಲಿ ಬೇಕಾದರೂ ಪರಿಶೀಲನೆ ಮಾಡಬಹುದು. ದಿನದಲ್ಲಿ ಎಷ್ಟು ವಾಹನಗಳು ಯಾವ ಕಾರಣಕ್ಕೆ ಸಂಚರಿಸಿವೆ ಎಂಬುದು ತಿಳಿಯುತ್ತದೆ.

ಇದರಿಂದ ಅನವಶ್ಯಕವಾಗಿ ಓಡಾಡುವ ವಾಹನ ಪ್ರಯಾಣಿಕರು ಹಾಗೂ ಚಾಲಕರನ್ನು ಸುಲಭವಾಗಿ ಪತ್ತೆ ಮಾಡಬಹುದು. ಯಾವುದಾದರೂ ವಾಹನಗಳು ವಿನಾ ಕಾರಣ ಅನಾವಶವ್ಯಕವಾಗಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಕೃತಿ ಪುರಷ

0

ದೇವರಹಳ್ಳಿ ಧನಂಜಯ


ಎನಗಿಂತಕಿರಿಯರಿಲ್ಲ
ಮೇಲು ಕೀಳಿನ ವ್ಯಸನ
ಸನಿಹ ಸುಳಿಯಲಿಲ್ಲ
ಎಲ್ಲರೂ ನನ್ನವರೆಂಬ ಹೃದಯ ನಿವೇದನೆ
ಎಲ್ಲರ ಒಳಿತಿಗಾಗಿ ತೆರೆದು ತೋಳಿನ
ಪ್ರಾರ್ಥನೆ
ಬೆಳೆದು ನಿಂತ ವೃಕ್ಷ ಸೂತ್ರ

ಎಲ್ಲರ ಅರಿವಲೂ ಇರುವೆ.
ನೀನಿಲ್ಲದ ಉಸಿರೇ ನಿಂತಂತೆ
ಎಲ್ಲೂ ಕಾಣದೆ ಇರುವೆ.
ಕಾಯ ದೇಗುಲದ ಕಾಯಕ ಪೂಜೆ
ನಿರಂತರ.
ಜಾತಿ ಮತಗಳ ಗುಡಿ ಗಡಿ ದಾಟಿದ
ಸರದಾರ.
ಉಳುವ ಜೋಡೆತ್ತಿನಲೂ ಉಳಿದಿರುವೆ

ತನ್ನ ಖುಷಿಗೆ ತಾನೆಂಬಂತೆ
ಹರಿಯುತಿರುವೆ
ಮನದ ಕೊಳೆಯ ತೊಳೆಯುತಿರುವೆ
ಮುಟ್ಟು ತಟ್ಟುಗಳ ಮೀರಿ
ಎಲ್ಲರಿಗೂ ಬೇಕಿರುವ
ಜೀವ ಜಲ ನೀನು.
ಬೆಳೆದು ಹಬ್ಬಲಿ ನಿನ್ನಿಂದ
ಹಳೆ ಬೇರು ಹೊಸ ಚಿಗುರು.

ನೀ ಮಣ್ಣು. ಈ ನೆಲದ ಕಣ್ಣು.
ಎದೆಯ ಹದಗೊಳಿಸಿ,
ಹೊಸ ಸೃಷ್ಠಿಗೆ ಒಕ್ಕಲು ಮಾಡಿರುವೆ.
ಮಾತು ಸೂತಕವಾಗದ
ಅನುಭವ ಜನ್ಯ ವಚನ ಜ್ಞಾನ.
ಜಗದಗಲ ಬಿತ್ತಿ ಬೆಳೆದಿದೆ.
ಎಲ್ಲರೊ ಳಗೂ ನೆಲೆಯಾಗುವ
ನೆಲದ ಕಣ್ಣ ತೆರೆದಿರುವೆ.

ಮುಗಿಲಗಳ ಬೆಳೆದಿರುವ ಗುರುವೇ
ನೀನು ಒಳ ಹೊರಗನು
ಒಂದು ಮಾಡಿದ ಬಯಲು
ಅಂತರಂಗ ಬಹಿರಂಗದ ಶುದ್ಧಿ
ಬೆವರ ದ್ವೇಷಿ ಆಚಾರ ಅನಾಚಾರ
ಮನುತನವ ಕಳಚಿ
ಮಾನವತೆ ಮೆರೆದ ಜಗದ್ಗುರು

ಎಲ್ಲರೂಳಗೂ ಬೆಳಗು ಪರಂಜ್ಯೋತಿ
ದೇಗುಲ ದೇಹದ ಎದೆಗೂ ಡಲ್ಲಿ
ಬೆಳಗುತ್ತಿರುವ ಕರುಣೆಯಮೂರ್ತಿ
ಸೃಷ್ಠಿ ಸೂತ್ರದ ಇಸ್ಟಲಿಂಗದಿ
ಪ್ರಕೃತಿಯ ಸರಳ ಪಾಠ
ಎಲ್ಲರೊಳೊಂದಾಗುವ ಬೆಚ್ಚಗಿನ
ಪ್ರೀತಿ ಹೇಳಿಕೊಟ್ಟ ಗುರುವೇ
ನಿನಗೆ ಶರಣು ಶರಣಾರ್ಥಿ

ತುಳಿತಕ್ಕೆ ಒಳಗಾದವರ ಮೇಲೆತ್ತಿದ ಸಂತ ಬಸವಣ್ಣ

2

ರಂಗನಕೆರೆ ಮಹೇಶ


ಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕೆ ಅಳಿಉಂಟು ಜಂಗಮಕ್ಕೆ ಅಳಿವಿಲ್ಲ.. ಇಂದು ಇನ್ನು ಬೇಕು, ಇನ್ನು ಬೇಕು ಎಂದು ಹಂಬಲಿಸುತ್ತಿರುವ ಮಾನವನ ಆಸೆಯ ಬದುಕನ್ನು ಆರ್ಥೈಸಿಕೊಳ್ಳಲು ಇದೊಂದು ವಚನ ಸಾಕು….

12 ನೆಯ ಶತಮಾನ ಅದೊಂದು ಪರ್ವಕಾಲ, ಶರಣ ಪರಂಪರೆಯ ಉತ್ತುಂಗ ಕಾಲಘಟ್ಟದಲ್ಲಿ ಮಹಾನ್ ಸಂತರು ಉದಯಿಸಿದರು.

ಶರಣರ ಮೂಲ ತತ್ವವೇ ಕಾಯಕವಾಗಿತ್ತು. ದುಡಿದು ತಿನ್ನುವುದು ಶರಣರ ಗುರಿಯಾಗಿತ್ತು. ಇಂತಹ ಶರಣರ ಸಂಗಮದಲ್ಲಿ ಮಹಾನ್ ಶಕ್ತಿಯೊಂದು ಉದಯಿಸಿತ್ತು.

ಆ ಶಕ್ತಿಯೇ ಬಸವೇಶ್ವರರು. ದೀನ-ದಲಿತ, ಹೆಣ್ಣು-ಗಂಡು, ಮೇಲು-ಕೀಳೆಂಬ ಅಂದಿನ ಸಮಾವನ್ನು ಸರಿ ದಾರಿಗೆ ತರಲು ಜನಿಸಿದ ಪುಣ್ಯಾತ್ಮ ಪುರುಷರೇ ಬಸವೇಶ್ವರರು.

ಮೇಲ್ವರ್ಗದಲ್ಲಿ ಜನಿಸಿ ಮನೆಯಲ್ಲಿ ತನ್ನ ಒಡಹುಟ್ಟಿದ ಸಹೋದರಿಗೆ, ಕೆಳ ವರ್ಗದ ಜನರಿಗೆ ನೀಡುತ್ತಿದ್ದ ಸ್ಥಾನಮಾನವನ್ನು ಧಿಕ್ಕರಿಸಿ ಮನೆಯಿಂದ ಹೊರಬಂದು ಅಂತಹವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಬಸವಣ್ಣ ಪಟ್ಟ ಕಷ್ಟ ನಾವೆಲ್ಲ ಓದಿ ತಿಳಿದಿದ್ದೇವೆ.

ಶರಣ ಪರಂಪರೆಯ ಬಸವಣ್ಣನವರ ನೇತೃತ್ವದಲ್ಲಿ ಶರಣರು ತಮ್ಮ ಜೀವನದ, ಬದುಕಿನ ಮೌಲ್ಯಗಳನ್ನು ಗುರುತಿಸಿಕೊಂಡರು.

ಕೇವಲ ಮೌಲ್ಯಗಳನ್ನು ಗುರುತಿಸಿಕೊಂಡು ಅವುಗಳನ್ನು ಪಠಿಸಲಿಕ್ಕೆ, ಹೇಳುವುದಕ್ಕೆ ಸೀಮಿತವಾಗಿರಿಸದೆ ಅವುಗಳನ್ನು ಕಾಯ, ವಾಚಾ, ಮನಸಾ ಬದುಕಿನಲ್ಲಿ ಅಳವಡಿಸಿಕೊಂಡವರು ಬಸವಣ್ಣನವರು.

ದಮನಿತರ ಬದುಕು ಹಸನಾಗಿಸಲು ಅವರುಗಳಿಗೆ ವಿದ್ಯೆಯೆಂಬ ಜ್ಯೋತಿ ಬೆಳಗಿಸಿ ಶೋಷಿತರು, ಸ್ತ್ರೀ ಯರಿಗೆ ಸಮಾನತೆಯ ಪಾಠ ಮಾಡಿದರು. ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವೇಶ್ವರರು ಅಂದೇ ಸಂಸತ್ತಿನ ರೂಪ ಕೊಟ್ಟು ಅದರಲ್ಲಿ ಎಲ್ಲಿರಿಗೂ ಸಮಾನ ಅವಕಾಶ ಕಲ್ಪಿಸಿದ್ದರು.

ದೇವರಲ್ಲಿ ಭಕ್ತಿ ಇರಬೇಕು ಆದರೆ ದೇವರ ಹೆಸರಿನಲ್ಲಿ ಮೂಡನಂಬಿಕೆಗಳಿಗೆ ಸ್ಥಾನವಿರಲಿಲ್ಲ. ಸ್ವರ್ಗ – ನರಕಗಳು ಬೇರೆಡೆ ಇಲ್ಲ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಪ್ರತಿಪಾದಿಸಿ, ಸಮಾಜದ ನವ ಕಲ್ಪನೆಗೊಂದು ಹೊಸ ಭಾಷ್ಯ ಬರೆದರು.

ಕಾಯಕ, ದಾಸೋಹ ತತ್ವಗಳನ್ನು ಮುಂದಿಟ್ಟು ಹುಟ್ಟಿನಿಂದ ಅಥವಾ ಅವರು ಮಾಡುವ ಕಾಯಕದಿಂದಾಗಲೀ ಯಾರೂ ಶ್ರೇಷ್ಟರಲ್ಲ, ಯಾರೂ ಕನಿಷ್ಠರೂ ಅಲ್ಲ. ಸತ್ಯ ಮತ್ತು ಕಾಯಕವೇ ಎಲ್ಲಕ್ಕಿಂತ ಶ್ರೇಷ್ಠ ಎಂದು ಜಗಕ್ಕೆ ಸಾರಿದರು.

ಜಗತ್ತಿನ ಸಮುದಾಯದವರಿಗೂ ಸಹ ಸಮಾನ ಸ್ಥಾನ ಮಾನ ನೀಡಿ ಜಗತ್ತಿಗೆ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಬಸವಣ್ಣ 800 ವರ್ಷಗಳ ಹಿಂದೆಯೇ ನಿರ್ಮಿಸಿದ್ದು ಈಗ ಇತಿಹಾಸ.

ಬುದ್ಧ ಹಾಕಿದ ಸಮಾನತೆಯ ಬೀಜವನ್ನು ಬಸವೇಶ್ವರರು ನೀರೆರದು ಸಾಕಿ ಹೆಮ್ಮರವನ್ನಾಗಿಸಿದರು. ಆ ಮರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಫಲವಾದ ಕಾರಣದಿಂದಲೇ ಇಂದು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಇಂದಿಗೂ ಒಂದೇ ಸಾಲಿನಲ್ಲಿ ನೋಡುತ್ತೇವೆ.

ಬಸವೇಶ್ವರರು ಎತ್ತಲ್ಲ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಎತ್ತಲು ಬಂದ ಮಹಾನ್ ಸಂತ. ಇಂದಿಗೂ ಕೆಲವರು ಬಸವನ ರೂಪದಲ್ಲಿ ಬಸವೇಶ್ವರರನ್ನು ಕಾಣುತ್ತಾರೆ. ಬಸವನಂತೆ ಬಸವೇಶ್ವರರು ಸಹ ಅನ್ಯರಿಗೆ ಕೆಡುಕನ್ನು ಬಯಸದೆ ಎಲ್ಲರನ್ನೂ ಒಂದೇ ಮಾರ್ಗದಲ್ಲಿ ನೋಡಿದವರು.

ಸ್ತ್ರೀಯರಿಗೆ ಸಮಾನತೆ, ಜಾತಿ ಪದ್ದತಿಯ ವಿರುದ್ಧ ದ್ವನಿ ಎತ್ತಿದ ಅಂತಹ ಮಹಾನ್ ಪುಣ್ಯ ಪುರುಷರ ಜನ್ಮ ದಿನ ಅಜಾರಾಮರವಾಗಿ ಉಳಿಯಲಿ……

ಡಂಕೆಲುನ್ನಾರು ಜಾಗ್ರತ

ಜಿ ಎನ್ ಮೋಹನ್


‘ಡಂಕೆಲುನ್ನಾರು ಜಾಗ್ರತ’ ಎಂದರು.

ವಾವ್! ಎಂಬ ಉದ್ಘಾರ ನನ್ನಿಂದ ತನ್ನಿಂದ ತಾನೇ ಬಂತು

ಇದಕ್ಕೆ ಕಾರಣವಿತ್ತು.

ಚಂಪಾ ಮಂಗಳೂರಿಗೆ ಬಂದಿದ್ದರು. ಆಗ ನಾನು ಮಂಗಳೂರಿನಲ್ಲಿ ‘ಪ್ರಜಾವಾಣಿ’ಯ ವರದಿಗಾರನಾಗಿದ್ದೆ.
ಚಂಪಾ ಹಾಗೂ ನಾನು ಸೋಮೇಶ್ವರದ ಕಡಲ ದಂಡೆಯಲ್ಲಿ ನಿಂತಿದ್ದೆವು.

ಕಡಲು ಗೊತ್ತಿಲ್ಲದ ಚಂಪಾ ಅಲೆಗಳ ಅಬ್ಬರಕ್ಕೆ ಬೆರಗಾಗಿ ನಿಂತಿದ್ದರು.
ಆ ಕಡಲೋ ಒಂದು ಕ್ಷಣ ರಮಿಸುವಂತೆ, ಇನ್ನೊಂದು ಕ್ಷಣ ರೋಧಿಸುವಂತೆ, ಅದೇ ಮರುಕ್ಷಣದಲ್ಲಿ ಅಬ್ಬರಿಸುತ್ತಾ ಇತ್ತು.
ಚಂಪಾಗೆ ಇದೆಲ್ಲಾ ವಿಸ್ಮಯ

ನಾನು ಅವರ ಕಣ್ಣುಗಳಲ್ಲಿದ್ದ ವಿಸ್ಮಯವನ್ನು ನೋಡುತ್ತಾ
‘ಸರ್ ಕಡಲ ದಂಡೆಗಳು ತುಂಬಾ ದಿನ ನಮ್ಮ ಬಳಿ ಉಳಿಯುವುದಿಲ್ಲ’ ಎಂದೆ
ಅವರು ಗಾಬರಿಯಿಂದ ‘ಯಾಕೆ’ ಎಂದರು.
ಎಲ್ಲಾ ಕಡಲ ದಂಡೆಗಳನ್ನೂ ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತೆ ಇಡುವ ಹುನ್ನಾರ ನಡೆಯುತ್ತಿದೆ ಎಂದೆ
ಅದೇಗೆ ಸಾಧ್ಯ ಎಂದರು.
ಮನಮೋಹನ್ ಸಿಂಗ್ ಸಾಹೇಬರು ಮೊನ್ನೆ ಮೊನ್ನೆ ತಾನೇ ಡಂಕೆಲ್ ಪ್ರಸ್ತಾವನೆಗೆ ಸಹಿ ಹಾಕಿ ಬಂದಿದ್ದಾರೆ.
ಇನ್ನು ಮೇಲೆ ಯಾವ ದೇಶ ಬೇಕಾದರೂ ಬಂದು ಇಲ್ಲಿ ಯಾವ ವ್ಯಾಪಾರ ಬೇಕಾದರೂ ಮಾಡಬಹುದಂತೆ
ಅದಕ್ಕೆ ನಮ್ಮ ದೇಶ ನಡೆಮುಡಿ ಹಾಸಿಕೊಡಬೇಕಂತೆ
ಈಗ ಅವರ ಕಣ್ಣು ಬೀಚ್ ಗಳ ಮೇಲೆ ಬಿದ್ದಿದೆ. ಇವು ಇನ್ನು ಕ್ಯಾಸಿನೋಗಳಾಗಿ, ಕುಡುಕರ ಕೇಂದ್ರವಾಗಿ ಹೋಗುವ ದಿನ ದೂರ ಇಲ್ಲ ಎಂದೆ

‘ಅದ್ಹೇಗೆ ಸಾಧ್ಯ ಇಲ್ಲಿ ಎಷ್ಟೊಂದು ಜನ ಮೀನುಗಾರರಿದ್ದಾರೆ ಇವರ ಕಥೆ ಎಲ್ಲಾ ಏನು’ ಎಂದರು.
ಮೀನುಗಾರರು ಬೀಚ್ ಗಳು ಅಷ್ಟೇ ಅಲ್ಲ ಸಾರ್, ಹಾಲು ಉತ್ಪಾದಿಸುವರು, ಕೊಡೆ ಮಾಡುವವರು, ಸೋಡಾ ತಯಾರಿಸುವವರು ಎಲ್ಲರಿಗೂ ಇದು ನೇಣಿನ ಹಗ್ಗವನ್ನು ತಯಾರು ಮಾಡಿದೆ ಎಂದೆ

ಆಗಲೇ ಚಂಪಾ ‘ಡಂಕೆಲುನ್ನಾರು ಜಾಗ್ರತ’ ಎಂದಿದ್ದು.
ದೊಂಗಲುನ್ನಾರು ಜಾಗ್ರತ ಎನ್ನುವುದು ಜನ ಮಾನಸವನ್ನು ಆಳಿದ ಸಿಕ್ಕಾಪಟ್ಟೆ ಫೇಮಸ್ ತೆಲುಗು ಸಿನೆಮಾ
ಚಂಪಾ ತಮ್ಮ ಎಂದಿನ ಶೈಲಿಯಲ್ಲಿ ಅದಕ್ಕೆ ಪಂಚ್ ನೀಡಿದ್ದರು.

ಆ ಕ್ಷಣವೇ ‘ಮೋಹನ್, ಈ ಬಗ್ಗೆ ನೀವು ಸಂಕ್ರಮಣಕ್ಕೆ ಒಂದು ವಿಶೇಷ ಸಂಚಿಕೆ ಯಾಕೆ ಸಂಪಾದಿಸಿ ಕೊಡಬಾರದು?’ ಎಂದರು.

ನಾನು ಸಾವರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯ್ತು.
ಏಕೆಂದರೆ ನಾನು ‘ಸಂಕ್ರಮಣ’ ಓದಿ ಬೆಳೆದವನು.
‘ಸಂಕ್ರಮಣ’ ಆ ವೇಳೆಗೆ ನೆಲ್ಸನ್ ಮಂಡೇಲಾ ಬಗ್ಗೆ, ಮಂಡಲ್ ವರದಿ ಬಗ್ಗೆ, ಲೋಹಿಯಾ ಬಗ್ಗೆ ವಿಶೇಷಾಂಕಗಳನ್ನು ರೂಪಿಸಿ ಕನ್ನಡದ ಮನಸ್ಸನ್ನು ಸಾಕಷ್ಟು ತಿದ್ದಿದ್ದವು.
ಅದನ್ನು ಓದಿಕೊಂಡು ಅಂಬೆಗಾಲಿಡುತ್ತಿದ್ದವನಿಗೆ ಸಂಕ್ರಮಣದ ಸಂಪಾದಕ ಆಗು ಎಂದರೆ..?
ತಕ್ಷಣ ‘ಒಲ್ರೀ ಸರ..’ ಅಂತ ಅವರದೇ ಧಾಟಿಯಲ್ಲಿ ತಲೆ ಅಲ್ಲಾಡಿಸಿದೆ.
ಚಂಪಾ ಚಂಪಾನೇ
ನಾವು ಕಡಲ ದಂಡೆಯಿಂದ ಕಾಲು ತೆಗೆಯುವ ವೇಳೆಗೆ ಅವರು ನನ್ನನ್ನು ಒಪ್ಪಿಸಿ ಮುಗಿದಿತ್ತು.

ನನಗೆ ಈ ಕೆಲಸ ಆಗುತ್ತದೋ ಇಲ್ಲವೋ ಮಾಡುವುದೋ ಬೇಡವೋ ಎನ್ನುವ ತೂಗುಯ್ಯಾಲೆಯಲ್ಲಿಯೇ ಇದ್ದೆ.’ನೀನಾಸಂ’ನ ಕೆ ವಿ ಸುಬ್ಬಣ್ಣ, ‘ಚರಕ’ದ ಪ್ರಸನ್ನ ಸೇರಿದಂತೆ ಹಲವು ಸಾಂಸ್ಕೃತಿಕ ಸಾಹಿತ್ಯ ಲೋಕದ ಗಣ್ಯರಿಗೆ, ಹೋರಾಟಗಾರರಿಗೆ ಸಾಹಿತ್ಯ- ಸಾಂಸ್ಕೃತಿಕ ಲೋಕದ ಮೇಲೆ ಡಂಕೆಲ್ ಪ್ರಸ್ತಾವನೆ ಮಾಡಬಹುದಾದ ಪರಿಣಾಮದ ಬಗ್ಗೆ ಬರೆಯುವಂತೆ ಪತ್ರ ಬರೆದೆ.ಬಹುತೇಕ ಎಲ್ಲರೂ ‘ಆ ಬಗ್ಗೆ ನಮಗೇನೂ ಗೊತ್ತಿಲ್ಲ, ನೀವು ತರುವ ವಿಶೇಷಾಂಕಕ್ಕೆ ಕಾಯುತ್ತೇವೆ’ ಎಂದು ಮರು ಪತ್ರ ಬರೆದರು.ನಿಜಕ್ಕೂ ಆಗ ನನಗೆ ಖಚಿತವಾಗಿ ಹೋಯಿತು. ಇಲ್ಲ ಈ ವಿಶೇಷಾಂಕ ತರಲೇಬೇಕು ಅಂತ

ಆ ವೇಳೆಗೆ ನನ್ನ ಮುಂದೆ ಇದ್ದದ್ದು ಭಾಸ್ಕರ್ ಚಂದಾವರ್ಕರ್ ಅವರು ‘ನೀನಾಸಂ ಮಾತುಕತೆ’ಗೆ ಬರೆದಿದ್ದ ‘ಆದೇಶ ಸಂಸ್ಕೃತಿ ಮತ್ತು ಸಂಗೀತ’ಹಾಗೂ ಪೋಲೆಂಡ್ ನ ಖ್ಯಾತ ಚಿತ್ರ ನಿರ್ದೇಶಕ ಕ್ರಿಸ್ಟೋಫರ್ ಝನೂಸಿ ಬರೆದ ಒಂದು ಲೇಖನ.

ಅಲ್ಲಿಂದ ಶುರುವಾಯ್ತು ಸವಾಲುಗಳ ಸರಮಾಲೆ ಮೊದಲಿಗೆ ಈ ‘ಡಂಕೆಲ್’ ಅಂದ್ರೆ ಏನು ‘ಗ್ಯಾಟ್’ ಅಂದ್ರೇನು ‘ಟ್ರಿಪ್ಸ್’ ಅಂದ್ರೇನು, ‘ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ರೈಟ್ಸ್’ ಅಂದ್ರೇನು ಅಂತ ನಾನೇ ಅರ್ಥ ಮಾಡಿಕೊಳ್ಳಬೇಕಿತ್ತು ನಾನು ಇದ್ದದ್ದು ಮಂಗಳೂರಿನಲ್ಲಿ. ಮೊಬೈಲ್ ಇಲ್ಲದ ಗೂಗಲ್ ಇಲ್ಲದ ಮೇಲ್ ಗಳಿಲ್ಲದ ಕಾಲ ಅದು.ಅಂತಹ ಸಮಯದಲ್ಲಿ ನನ್ನ ಎದುರು ಸವಾಲಿನ ಗುಡ್ಡವನ್ನು ನಾನೇ ಸೃಷ್ಟಿಸಿಕೊಂಡು ಕೂತೆ

ಆಗ ಮಂಗಳೂರಿನಲ್ಲಿಯೇ ಇದ್ದ ಕೆ ಫಣಿರಾಜ್ ಹಾಗೂ ನಾನು ಮತ್ತೆ ಮತ್ತೆ ಭೇಟಿಯಾಗಿ ನಮಗೆ ಗೊತ್ತಿದ್ದ ಅಷ್ಟು ಇಷ್ಟನ್ನು ಚರ್ಚೆ ಮಾಡಲು ಶುರು ಮಾಡಿದೆವು. ಅದು ಹಾಗಿರಬಹುದು ಇದು ಹೀಗಿರಬಹುದು ಎಂದು ಶುರುವಾದ ಚರ್ಚೆಯ ನಂತರ ಒಂದಿಷ್ಟು ಬೆಳಕಿನ ದಾರಿಗಳು ಗೋಚರವಾಗಲು ಶುರುವಾಯಿತು. ಆ ವೇಳೆಗೆ ಪ್ರೊ ಬಿ ಎ ವಿವೇಕ ರೈ ಅವರು ‘ಮುಂಗಾರು’ವಿನ ತಮ್ಮ ‘ಗಿಳಿಸೂವೆ’ ಅಂಕಣದಲ್ಲಿ ‘ಅಥೆನ್ಸಿನ ಅರ್ಥವಂತ ಮತ್ತು ಮನಮೋಹಕ ಬಜೆಟ್’ ಎನ್ನುವ ಲೇಖನ ಬರೆದರು.ಅದು ಇಡೀ ನನ್ನ ಕೆಲಸಕ್ಕೆ ಹೊಸದೇ ದಿಕ್ಕು ತೋರಿಸಿಬಿಟ್ಟಿತು. ಹೇಗೆ ಜಗತ್ತಿನ ಹುನ್ನಾರವನ್ನು ನಮ್ಮದೇ ಟೂಲ್ ಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಗೊತ್ತಾಯಿತು.

ಆಗ ಸಿಕ್ಕ ಸ್ಪಷ್ಟತೆಯಿಂದಾಗಿ ವಿ ಆರ್ ಕೃಷ್ಣ ಅಯ್ಯರ್, ಎಂ ಎನ್ ಶ್ರೀನಿವಾಸ್, ಎ ಜಿ ನೂರಾನಿ ಅವರ ಲೇಖನಗಳನ್ನು ಇದೇ ಬೆಳಕಿನಡಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಫಣಿರಾಜ್ ‘ಡಂಕೆಲ್ ಯಜಮಾನಿಕೆ ಹೇಗಿರಬಹುದು’ ಎನ್ನುವುದರ ಬಗ್ಗೆಯೂ, ನಾನು ಹೇಗೆ ‘ಈ ಡಂಕೆಲ್ ಪ್ರಸ್ತಾವನೆಗೆ ನೀಡುವ ಸಮ್ಮತಿ ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ’ ಎನ್ನುವುದನ್ನು ಅಧ್ಯಯನ ಮಾಡುವುದು ಎಂದು ಮಾತಾಡಿಕೊಂಡೆವು. ನೆನಪಿರಲಿ ನಾನು ಈ ಬಗ್ಗೆ ಆಲೋಚಿಸಿ ಲೇಖನ ಕೊಡುವಂತೆ ಮನವಿ ಮಾಡಿದ ಸುಮಾರು 50 ಮುಖ್ಯರ ಪೈಕಿ ಲೇಖನ ಕಳಿಸಿಕೊಟ್ಟದ್ದು ಚಿಂತಕ ಕೆ ಕೇಶವ ಶರ್ಮರು ಮಾತ್ರ.

ಮಾತಾಡಿಕೊಂಡಂತೆಯೇ ಈ ಎಲ್ಲವನ್ನೂ ಒಂದು ಚೌಕಟ್ಟಿನಲ್ಲಿಟ್ಟು ‘ಡಂಕೆಲ್: ಸಾಂಸ್ಕೃತಿಕ ಪಿಡುಗು’ ಎನ್ನುವ ‘ಸಂಕ್ರಮಣ’ ವಿಶೇಷ ಸಂಚಿಕೆಯನ್ನು ಸಂಪಾದಿಸಿಯೇಬಿಟ್ಟೆ. ಆ ವೇಳೆಗೆ ಕೃಷಿ ಲೋಕದ ಮೇಲೆ ಮಾತ್ರ ಈ ಡಂಕೆಲ್ ಪರಿಣಾಮ ಬೀರುತ್ತದೆ. ಅಲ್ಪ ಸ್ವಲ್ಪ ವೈದ್ಯ ಕ್ಷೇತ್ರದ ಮೇಲೆ ಎನ್ನುವುದು ಮಾತ್ರ ಚರ್ಚೆಯಾಗುತ್ತಿತ್ತು. ಅದನ್ನು ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೂ ವಿಸ್ತರಿಸಿದ್ದು ನನಗೆ ನೆಮ್ಮದಿ ಕೊಟ್ಟ ವಿಷಯ.

ಚಂಪಾ ತಮ್ಮ ವಿಶೇಷ ಸಂಪಾದಕೀಯದೊಂದಿಗೆ ವಿಶೇಷ ಸಂಚಿಕೆ ನನ್ನ ಕೈಗಿತ್ತರು. ಸ್ವಲ್ಪ ದಿನ ಕಳೆದು ಅದನ್ನೇ ಪುಸ್ತಕವಾಗಿಯೂ ಹೊರತಂದರು.

ನಾನು ಉಸ್ಸಪ್ಪಾ ಎಂದು ಕೈತೊಳೆದು ಕೂತೆ.

ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ.

‘ನವಕರ್ನಾಟಕ’ದ ರಾಜಾರಾಮ್ ಅವರಿಂದ ಫೋನ್.
‘ಮೋಹನ್, ಡಂಕೆಲ್ ವಿಶೇಷಾಂಕ ನೋಡಿದೆ. ಅದರಲ್ಲಿ ನೀವು ಸ್ಯಾಟಲೈಟ್ ಟಿವಿ ಬಗ್ಗೆ ಬರ್ದಿದ್ದೀರಲ್ಲ. ಓದಿ ಗಾಬರಿಯಾಯಿತು.
ಅದನ್ನೇ ವಿಸ್ತರಿಸಿ ಒಂದು ಪುಸ್ತಕ ಬರೆದು ಕೊಡುತ್ತೀರಾ??’ ಎಂದರು.

ಮತ್ತೆ ಒಂದು ತಿಂಗಳು ನನ್ನ ಅಧ್ಯಯನ ವ್ರತ ಶುರುವಾಯಿತು.
ಸ್ಯಾಟಲೈಟ್ ಟಿ ವಿಯ ಪ್ರವೇಶವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ವಿ ಆರ್ ಕೃಷ್ಣ ಅಯ್ಯರ್ ಅವರು ‘ಆಕಾಶ ಮಾರ್ಗದ ದಾಳಿ’ ಎಂದು ಬಣ್ಣಿಸಿದ್ದರು.
ಇದೇ ಎಳೆಯನ್ನು ಹಿಡಿದುಕೊಂಡು ನಾನು ಸ್ಯಾಟಲೈಟ್ ಚಾನಲ್ ಗಳು ಮಾಡಬಹುದಾದ ಆಕ್ರಮಣವನ್ನೂ,
ಸಂಸ್ಕೃತಿ ತಿರುಚುವಿಕೆಯನ್ನೂ, ಸುದ್ದಿಯನ್ನು ಮನರಂಜನೆಯಾಗಿ ಪರಿವರ್ತಿಸಬಹುದಾಗಿರುವುದನ್ನೂ,
ಆಕಾಶವಾಣಿ, ಹಾಲಿವುಡ್, ಇಂಟರ್ ನೆಟ್ ಜಗತ್ತಿನ ಮೇಲೆ ಮಾಡಬಹುದಾದ ದಾಳಿಯ ಬಗ್ಗೆ ಬರೆದು ರಾಜಾರಾಮ್ ಅವರಿಗೆ ದಾಟಿಸಿದೆ.

ರಾಜಾರಾಮ್ ಅವರು ‘ನವಕರ್ನಾಟಕ’ದಿಂದ ಎಷ್ಟು ಮುತುವರ್ಜಿಯಿಂದ, ಎಷ್ಟು ಚೆನ್ನಾಗಿ ಈ ಪುಸ್ತಕ ತಂದರೆಂದರೆ ನಾನು ಥ್ರಿಲ್ ಆಗಿ ಹೋದೆ.
ಪುಸ್ತಕಕ್ಕೆ ಗುಜ್ಜಾರ್ ಬರೆದ ಚಿತ್ರಗಳಂತೂ ತನ್ನದೇ ರೀತಿಯಲ್ಲಿ ಚಾನಲ್ ಗಳ ಪ್ರವೇಶದ ಭೀಕರತೆಯನ್ನು ವಿವರಿಸಿತ್ತು.

ನಾನು ಇನ್ನೂ ಆ ಥ್ರಿಲ್ ನಿಂದ ಹೊರಬಂದಿರಲಿಲ್ಲ. ಅಷ್ಟರಲ್ಲಿ ಮತ್ತೆ ರಾಜಾರಾಮ್ ಕರೆ.
‘ನೀವು ಟಿ ವಿ ಬಗ್ಗೆ ಬರೆದುಕೊಟ್ಟಿರಿ, ಆದರೆ ಡಂಕೆಲ್ ಪ್ರಸ್ತಾವನೆ ಪತ್ರಿಕಾ ರಂಗದ ಮೇಲೆ ಬೀರುವ ಪರಿಣಾಮ ಯಾಕೆ ಬರೆಯಬಾರದು?’ ಅಂತ
ನಾನು ಸಾಕಷ್ಟು ಹಿಂದೆ ಮುಂದೆ ನೋಡಿ ಕಾಲ ತಳ್ಳಿ ಅವರು ಆ ಯೋಜನೆ ಕೈಬಿಡಲಿ ಎನ್ನುವ ಎಲ್ಲಾ ಹುನ್ನಾರ ಮಾಡಿದೆ.

ರಾಜಾರಾಮ್ ರಾಜಾರಾಮೇ. ಪಟ್ಟು ಒಂದಿಷ್ಟೂ ಸಡಿಲವಾಗಲಿಲ್ಲ.
ಹಾಗೆ ಬಂದ ಕೃತಿ ‘ಪತ್ರಿಕಾರಂಗಕ್ಕೆ ಲಗ್ಗೆ’.
ಇದಕ್ಕೆ ಆಗ ‘ದಿ ವೀಕ್’ನಲ್ಲಿ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಬರೆದ ಚಿತ್ರಗಳನ್ನು ನೀವು ನೋಡಬೇಕು

ಇಲ್ಲಿಗೆ ಕಥೆ ಮುಗಿಯಿತು ಎನ್ನುವ ವೇಳೆಗೆ ನಾನು ತುಂಬು ಗೌರವದಿಂದ ನೋಡುವ ಜಿ ರಾಮಕೃಷ್ಣ ಅವರು ಪತ್ರ ಬರೆದರು.

ಸ್ವಾತಂತ್ರ್ಯ ಬಂದ 50 ವರ್ಷದಲ್ಲಿ ಮಾಧ್ಯಮದ ಮೇಲಾಗಿರುವ ಬದಲಾವಣೆಯನ್ನು ದಾಖಲಿಸುತ್ತೀರಾ ಎಂದು
ಅವರಿಗೆ ‘ನೋ’ ಹೇಳುವ ತಾಖತ್ತು ನನ್ನ ಬಳಿ ಎಂದೂ ಇರಲಿಲ್ಲ.

ಹಾಗಾಗಿ ಹೊರಬಂದದ್ದೇ ‘ಮಾಧ್ಯಮ ಮತ್ತು ಸ್ವಾತಂತ್ರ್ಯ’ ಕೃತಿ.

ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಆಗಲೀ, ಬರಲಿರುವ ‘ಚಿಕ್ ಚಿಕ್ ಸಂಗತಿ’ ಆಗಲೀ,
ಒಂದು ಕೊರೋನಾ, ಒಂದು ಚಪ್ಪಲಿ, ಒಂದು ಟೂತ್ ಪೇಸ್ಟ್, ಒಂದು ಬ್ಯೂಟಿ ಕಂಟೆಸ್ಟ್, ಒಂದು ಬಾರ್ಬಿ ಡಾಲ್..
ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಈ ಜಾಗತೀಕರಣದ ಅಧ್ಯಯನ ನನಗೆ ಸಾಧ್ಯ ಮಾಡಿಕೊಟ್ಟಿದೆ.

ಕಡಲ ತಡಿಯಿಂದ ನನ್ನನ್ನು ಜಾಗತೀಕರಣದ ದಿಗಂತದವರೆಗೆ ಕೈಹಿಡಿದು ನಡೆಸಿಕೊಂಡು ಬಂದ ಎಲ್ಲರಿಗೂ ಶರಣು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ


ದಿನಾಂಕ : 27, ಏಪ್ರಿಲ್ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಸೋಮವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಚೌತಿ
(ನಿನ್ನೆ ಮಧ್ಯಾಹ್ನ 1 ಗಂ॥ 21 ನಿ।। ರಿಂದ
ಇಂದು ಮಧ್ಯಾಹ್ನ 2 ಗಂ॥ 27 ನಿ।। ತನಕ)
ನಕ್ಷತ್ರ : ಮೃಗಶಿರ
(ನಿನ್ನೆ ರಾತ್ರಿ 10 ಗಂ॥ 55 ನಿ।। ರಿಂದ
ಮರುದಿನ ಪ್ರಾತಃಕಾಲ 0 ಗಂ॥ 27 ನಿ।। ತನಕ)
ಯೋಗ : ಅತಿಗಂಡ
ಕರಣ : ಭದ್ರೆ
ವರ್ಜ್ಯಂ : (ಇಂದು ಪ್ರಾತಃಕಾಲ 4 ಗಂ॥ 52 ನಿ।। ರಿಂದ ಇಂದು ಬೆಳಿಗ್ಗೆ 6 ಗಂ॥ 34 ನಿ।। ತನಕ)
ಅಮೃತಕಾಲ : (ಇಂದು ಸಂಜೆ 3 ಗಂ॥ 5 ನಿ।। ರಿಂದ ಇಂದು ಸಂಜೆ 4 ಗಂ॥ 47 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 28 ನಿ।। ತನಕ)(ಇಂದು ಸಂಜೆ 3 ಗಂ॥ 11 ನಿ।। ರಿಂದ ಇಂದು ಸಂಜೆ 4 ಗಂ॥ 1 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 7 ಗಂ॥ 27 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 2 ನಿ।। ತನಕ)
ಗುಳಿಕ : (ಇಂದು ಮಧ್ಯಾಹ್ನ 1 ಗಂ॥ 48 ನಿ।। ರಿಂದ ಇಂದು ಸಂಜೆ 3 ಗಂ॥ 23 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 10 ಗಂ॥ 38 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 13 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 52 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 35 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ವೃಷಭ

ಮೇಷ ರಾಶಿ : 27 Apr 2020
ನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ನಿಮ್ಮ ವೈವಾಹಿಕ ಸಂತೋಷಗಳಿಗೆ ನೀವು ಒಂದು ಅದ್ಭುತವಾದ ಅಚ್ಚರಿಯನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ: 7

ವೃಷಭ ರಾಶಿ : 27 Apr 2020
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಮನೆಯ ಅಗತ್ಯಗಳನ್ನು ನೋಡುತ್ತಾ, ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು, ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿವೆ. ಒಬ್ಬ ಅಪರಿಚಿತರು ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಸಿಡುಕಿಗೆ ಕಾರಣವಾಗಬಹುದು. ಅದೃಷ್ಟ ಸಂಖ್ಯೆ: 6

ಮಿಥುನ ರಾಶಿ : 27 Apr 2020
ನಿಮ್ಮ ಸಂಜೆ ವಿಭಿನ್ನ ಪ್ರತಿಕ್ರಿಯೆಗಳಿಂದ ಗುರುತಿಸಲ್ಪಡುತ್ತದೆ ಹಾಗೂ ಇದು ನಿಮ್ಮನ್ನು ಉದ್ವಿಗ್ನವಾಗಿರಿಸಬಹುದು. ಆದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ – ನಿಮ್ಮ ಸಂತೋಷ ನಿಮಗೆ ನಿರಾಸೆಗಿಂತ ಹೆಚ್ಚು ಆನಂದ ನೀಡುತ್ತದೆ. ಅನಿರೀಕ್ಷಿತ ಬಿಲ್‌ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು. ನಿಮ್ಮ ನಿರಂತರ ಶ್ರಮ ಇಂದು ನಿಜವಾಗಿಯೂ ಚೆನ್ನಾಗಿ ಫಲ ನೀಡುತ್ತದೆ.
ಅದೃಷ್ಟ ಸಂಖ್ಯೆ: 4

ಕರ್ಕ ರಾಶಿ : 27 Apr 2020
ನಿಮ್ಮ ಕಚೇರಿಯನ್ನು ಬೇಗನೆ ಬಿಡಲು ಮತ್ತು ನೀವು ನಿಜವಾಗಿಯೂ ಆನಂದಿಸುವದನ್ನು ಮಾಡಲು ಪ್ರಯತ್ನಿಸಿ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಇಂದು ಪರಿಹರಿಸಬಹುದು ಮತ್ತು ನೀವು ಹಣದಿಂದ ಲಾಭ ಪಡೆಯಬಹುದು. ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ಇಂದು ನೀವು ಎಂತಹ ಒಳ್ಳೆಯ ಕೆಲಸ ಮಾಡಿದ್ದೀರೆಂದು ತೋರಿಸಲು ನಿಮ್ಮ ಪ್ರೀತಿ ಅರಳುತ್ತದೆ. ಕಾರ್ಯಸ್ಥಾನಗಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ – ವಿಶೇಷವಾಗಿ ನೀವು ವಿಷಯಗಳನ್ನು ಸಭ್ಯತೆಯಿಂದ ನಿರ್ವಹಿಸದಿದ್ದಲ್ಲಿ. ಸಂಜೆಯ ವೇಳೆಯಲ್ಲಿ ನೀವು ನಿಮ್ಮ ಆಪ್ತರೊಬ್ಬರ ಮನೆಯಲ್ಲಿ ಸಮಯವನ್ನು ಕಳೆಯಲು ಹೋಗಬಹುದು.
ಅದೃಷ್ಟ ಸಂಖ್ಯೆ: 7

ಸಿಂಹ ರಾಶಿ : 27 Apr 2020
ಧ್ಯಾನ ಮತ್ತು ಯೋಗವನ್ನು ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳಿಗಾಗಿ ಆಚರಿಸಬೇಕು. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ಒಂದು ಸ್ಥಳದಲ್ಲಿ ನಿಂತಾಗ ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು. ಇದು ನೀವು ಪ್ರಣಯಭರಿತ ಪ್ರವಾಸಕ್ಕೆ ಹೋಗುವ ದಿನ. ಪ್ರದರ್ಶಿಸಿದಲ್ಲಿ ಇಂದು ಈ ರಾಶಿ ಅಮೂಲ್ಯ ಸಮಯವನ್ನು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾತನಾಡಿ, ಇಲ್ಲದಿದ್ದರೆ ವಿಷಯ ಇನ್ನೂ ಉಲ್ಬಣಗೊಳ್ಳಬಹುದು. ಅದೃಷ್ಟ ಸಂಖ್ಯೆ: 6

ಕನ್ಯಾ ರಾಶಿ : 27 Apr 2020
ನಿಮ್ಮ ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಸುತ್ತಲಿನವರನ್ನು ಆಕರ್ಷಿಸಬಹುದು. ಬಯಸದೆ ಇರುವ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು , ಅವರು ಬರುವುದರಿಂದಾಗಿ ನೀವು ಬರುವ ತಿಂಗಳಿಗೆ ಮುಂದೂಡಲಾಯಿಸಿರುವ ಮನೆಯ ಆ ವಸ್ತುಗಳ ಮೇಲು ಖರ್ಚು ಮಾಡಬಹುದು . ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ಕೆಲವು ಸ್ಟೇಟಸ್‌ಗಳನ ಸುಂದರ ಅಚ್ಚರಿಯನ್ನ ಹೊಸ ತಂತ ಮತ್ತುಸಮಯದ ಚಕ್ರ ತುಂಬಾ ವೇಗವಾಗಿ ಓಡುತ್ತದೆ ಆದ್ದರಿಂದ ಇಂದಿನಿಂದಲೇ ನಿಮ್ಮ ಅಮೂಲ್ಯ ಸಮಯವನ್ನು ಬಳಸಲು ಕಲಿಯಿರಿ ಇತ್ತೀಚಿನ ದಿನಗಳಲ್ಲಿ ಜೀವನ ನಿಜವಾಗಿಯೂ ಕಠಿಣವಾಗಿದೆ, ಆದರೆ ಇಂದು ನೀವು ನಿಮ್ಮ ಸಂಗಾತಿಯ ಸ್ವರ್ಗದಲ್ಲಿರುತ್ತೀರಿ. ಅದೃಷ್ಟ ಸಂಖ್ಯೆ: 4

ತುಲಾ ರಾಶಿ : 27 Apr 2020
ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡುತ್ತದೆ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಹಾಗೂ ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಪಾರ್ಟಿಗೆ ಹೋಗಿ. ಇದು ನಿಮ್ಮ ಒತ್ತಡ ನಿವಾರಿಸುವುದಲ್ಲದೇ ಆದರೆ ನಿಮ್ಮ ಹಿಂಜಿರಿಕೆಯನ್ನೂ ತೆಗೆದುಹಾಕುತ್ತದೆ. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ಕಾಣುತ್ತದೆ. ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ : 27 Apr 2020
ತುಂಬಾ ಪ್ರಯಾಣ ನಿಮಗೆ ದಣಿವಾಗಿಸುತ್ತದೆ ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತ ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಕುಟುಂಬ ಅಥವಾ ಹತ್ತಿರದ ಸ್ನೇಹಿತರ ಜೊತೆ ಇದನ್ನು ಒಂದು ಅತ್ಯುತ್ತಮ ದಿನವಾಗಿಸಿ. ನಿಮ್ಮ ಕಣ್ಣೀರನ್ನು ಒಬ್ಬ ವಿಶೇಷ ಸ್ನೇಹಿತ ಒರೆಸಬಹುದು. ಸಹೋದ್ಯೋಗಿಗಳು ನಿಮ್ಮ ಕೆ ನಿಮ್ಮ ಕೆಲಸದಿಂದ ಸಂತೋಷ ವ್ಯಾಪಾರದಲನಿಮ್ಮ ವೈವಾಹಿಕ ಜೀವನ ಇಂದು ಮೋಜು, ಸಂತೋಷ, ಮತ್ತು ಆನಂದದ ಬಗೆಗಾಗಿರುತ್ತದೆ. ಅದೃಷ್ಟ ಸಂಖ್ಯೆ: 8

ಧನು ರಾಶಿ : 27 Apr 2020
ನಿಮ್ಮ ಪ್ರಚಂಡ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಆದರೆ ಪ್ರಸ್ತುತ ಚೇತನವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರಿ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಇತರರಿಗೆ ನಿಮ್ಮ ಸಮಯ ನೀಡಲು ಒಳ್ಳೆಯ ದಿನ. ಮಾತನಾಡಬಹುದು. ಅಂತಹ ನಿರ್ಧಾರವನ್ನು ತೆಗೆದುಕೊಳ್ಈ ರಾಶಿಚಕ್ರದ ಜನರು ಇಂದು ಮಾದಕ ಸಿಗರೇಟ್ನಿಂದ ದೂರವಿರುವ ಅಗತ್ಯವಿದೆ ಏಕೆಂದರೆ ಇದರಿಂದ ನಿಮ್ಮ ಅಮೂಲ್ಯ ಸಮಯ ಹಾಳಾಗಬಹುದು ನಿಮ್ಮ ಪ್ರಚೋದಕ ವೈವಾಹಿಕ ಜೀವನದಲ್ಲಿ ಇಂದು ಒಂದು ಸುಂದರ ಬದಲಾವಣೆಯನ್ನು ನೀವು ಅನುಭವಿಸುತ್ತೀರಿ. ಅದೃಷ್ಟ ಸಂಖ್ಯೆ: 5

ಮಕರ ರಾಶಿ: 27 Apr 2020
ಅಶಕ್ತ ದೇಹ ಮನಸ್ಸನ್ನು ದುರ್ಬಲಗೊಳಿಸುವುದರಿಂದ ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮಲ್ಲಿ ಸಾಮರ್ಥ್ಯದ ಕೊರತೆಯಿರದೇ ಇಚ್ಛಾಶಕ್ತಿಯ ಕೊರತೆಯಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ಇಂದು ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಇತರರಿಗೆ ನಿಮ್ಮ ಸಮಯ ನೀಡಲು ಒಳ್ಳೆಯ ದಿನ. ನೀವು ಸಂತೋಷ ನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ಅದೃಷ್ಟ ಸಂಖ್ಯೆ: 5

ಕುಂಭ ರಾಶಿ : 27 Apr 2020
ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ನೀವು ವಿಪರೀತವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ನಿಮ್ಮ ಹಣವು ನಿಮ್ಮ ಕೆಲಸಕ್ಕೆ ಬರುತ್ತದೆ, ಇಂದು ನೀವು ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ಧಾರ್ಮಿಕ ಮತ್ತು ಶುದ್ಧ ಪ್ರೀತಿಯನ್ನು ಅನುಭವಿಸಿ. ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಒಂದು ಹಠಾತ್ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ.
ಅದೃಷ್ಟ ಸಂಖ್ಯೆ: 3

ಮೀನ ರಾಶಿ : 27 Apr 2020
ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಇವತ್ತು ನೀವು ಪಡೆಯುವ ಉಚಿತ ಸಮಯದ ಪ್ರಯೋಜನ ಪಡೆದುಕೊಳ್ಳಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರೀತಿಯ ಕ್ಷಣಗಳನ್ನು ಕಳೆಯಿರಿ. ಭಾವಪರವಶತೆಯನ್ನು ಅ ವೃತ್ತಿಯಲ್ಲಿ ರಾಶಿಚಕ್ರದ ಜನರು ಇಂದು ತಮ್ಮ ಸಹೋದರ-ಸಹೋದರಿಯರೊಂದಿಗೆ ಮನೆಯಲ್ಲಿ ಯಾವುದೇ ಚಲನ ಚಿತ್ರ ಅಥವಾ ಮ್ಯಾಚ್ ನೋಡಬಹುದು. ಇದನ್ನು ಮಾಡುವುದರಿಂದ ನಿಮ್ಮ ನಡುವಿನ ಪ್ರೀತಿಯಲ್ಲಿ ಹೆಚ್ಚಳವಾಗುತ್ತದೆ. ಇಂದು, ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿ ಮತ್ತು ಸಂವೇದನೆಗಳ ಜಗತ್ತಿನಲ್ಲಿ ಕೊಂಡೊಯ್ಯಬಹುದು. ಅದೃಷ್ಟ ಸಂಖ್ಯೆ: 1