Friday, February 27, 2026
Google search engine
Home Blog Page 249

ಜನರ ಸಮಸ್ಯೆ ಬಗೆಹರಿಸಲು ಸಿದ್ದತೆ: ಶಾಸಕ ವೆಂಕಟರವಣಪ್ಪ

ಪಾವಗಡ: ಪಟ್ಟಣದ ಜನತೆ ಕಷ್ಟಕ್ಕೆ ಸ್ಪಂದಿಸಿ ಶಾಸಕ ವೆಂಕಟರವಣಪ್ಪ ಪಡಿತರ ವಿತರಣೆ, ಆಹಾರ ವಿತರಣೆಗೆ ಚಾಲನೆ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನಿಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಾದ್ಯಮಗಳಲ್ಲಿ ಪಡಿತರ ವಿತರಿಸುವ ಪ್ರಮಾಣದ ಬಗ್ಗೆ ವ್ಯಾಪಕವಾಗಿ ಕಾಮೆಂಟ್ ಮಾಡಲಾಗುತ್ತಿದೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿ ಹೆಚ್ಚಿನ ಜನರಿಗೆ ಪಡಿತರ ಸಿಗಲಿ ಎಂಬ ಉದ್ದೇಶದಿಂದ 36 ಟನ್ ಅಕ್ಕಿ, 6.5 ಸಾವಿರ ಟನ್ ಬೇಳೆ, 6.5 ಸಾವಿರ ಟನ್ ಸಕ್ಕರೆ ವಿತರಿಸಲಾಗಿದೆ. ಇದು ಕೊನೆಯೂ ಅಲ್ಲ. ಇದರ ಜೊತೆಗೆ ನಿತ್ಯ 50 ಕೆ.ಜಿ ಪ್ರಮಾಣದ ಉಪಹಾರವನ್ನು ಪಟ್ಟಣದಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪಟ್ಟಣದ 6 ಸಾವಿರ ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣಕ್ಕೆ ಬರುವ ಗ್ರಾಮಸ್ಥರು ಹಾಗೂ ಪಟ್ಟಣದ ನಿರ್ಗತಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಲಾಕ್ ಡೌನ್ ಮುಗಿಯುವವರೆಗೆ ಉಪಹಾರ ವಿತರಣೆ ಮುಂದುವರೆಯಲಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ. ವೆಂಕಟೇಶ್ ಮಾತನಾಡಿ ಪಟ್ಟಣದ 23 ವಾರ್ಡ್ ಗಳ ಬಡ ಕುಟುಂಬಗಳನ್ನು ಗುರುತಿಸಿ ವಾರ್ಡ್ ಸದಸ್ಯರ ಮುಖಾಂತರ ಪಡಿತರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ತಾಲ್ಲೂಕು ಬರ ಪೀಡಿತ ಬಡ ಹಾಗೂ ದಲಿತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆಲಸ ಹರಸಿ ಬೆಂಗಳೂರು, ಇತರೆಡೆಗೆ ಹೋಗಿದ್ದ ಕೂಲಿ ಕಾರ್ಮಿಕರು ಮನೆ ಸೇರಿದ್ದಾರೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಾಲ್ಲೂಕಿಗೆ ವಿಶೇಷ ಪ್ಯಾಕೇಜ್ ತರುವತ್ತ ಶಾಸಕರು ಗಮನಹರಿಸಬೇಕು ಎಂಬುದು ಜನತೆಯ ಒತ್ತಾಯ.

ಪಡಿತರ ವಿತರಿಸಿರುವ ಪ್ರಮಾಣದ ಬಗ್ಗೆ ಪಟ್ಟಣದ ಜನತೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಷ್ಟದ ವೇಳೆಯಲ್ಲಿ ಸಾವಿರಾರು ಕುಟುಂಬಗಳಿಗೆ ಶಾಸಕರು, ಪುರಸಭೆ ಸದಸ್ಯರು 12 ರಿಂದ 15 ಲಕ್ಷ ಮೊತ್ತದ ದಿನಸಿ ವಿತರಿಸಿದ್ದಾರೆ. ಸಿಕ್ಕಷ್ಟು ಸಿಗಲಿ ಎಂಬ ಸಮಾಧಾನ ಬಡ ಜನರಲ್ಲಿದೆ.

ಶಾಸಕರು ವಿತರಿಸಿದ ಪಡಿತರಕ್ಕಿಂತ ನಿಮ್ಮೊಂದಿಗೆ ನಾನಿದ್ದೇನೆ ಸಮಸ್ಯೆ ಇದ್ದರೆ ತಿಳಿಸಿ ಬಗೆಹರಿಸುತ್ತೇನೆ ಎಂಬ ಅವರ ಆಶ್ವಾಸನೆ ತಾಲ್ಲೂಕಿನ ಜನತೆಯಲ್ಲಿ ಶಕ್ತಿ ತುಂಬಿದೆ. ಆತ್ಮ ವಿಶ್ವಾಸವನ್ನು ಇಮ್ಮುಡಿಗೊಳಿಸಿದೆ.

ಎ. ಶಂಕರರೆಡ್ಡಿ, ಗುರಪ್ಪ, ಸುದೇಶ್ ಬಾಬು. ವೆಂಕಟರವಣ. ರಾಜೇಶ್, ರವಿ. ಮಣಿ. ವೇಲು ಮುರಘನ್, ವಿಜಿ, ಕಿರಣ್, ಭಾಸ್ಕರ್, ಗಜೇಂದ್ರ, ಮಣಿ. ಇತರರು ಇದ್ದರು.

ತುಮಕೂರಿಗೆ ಹದಿನೈದು ದಿ‌ನದಲ್ಲಿ ಬರಲಿದೆ ಹೇಮಾವತಿ ನೀರು: ಸಿ.ಎಸ್.ಪುರ ಕೆರೆಗೆ ಹರಿಸಲು ಆಗ್ರಹ

Publicstory. in


Gubbi: ಮುಂದಿನ ತಿಂಗಳ ಮೊದಲ ವಾರದಲ್ಲಿ ತುಮಕೂರಿಗೆ ಹೇಮಾವತಿ ನೀರು ಹರಿಸಲಿದ್ದು, ಅದನ್ನು ನೇರವಾಗಿ ಸಿ.ಎಸ್. ಪುರ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಬೆಲೆ ಕಾವಲು ಸಮಿತಿ ಸಲಹೆಗಾರರೂ ಆದ ವಕೀಲ ಮಹೇಂದ್ರ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಸಿ.ಎಸ್. ಕೆರೆಗೆ ಕುಡಿಯುವ ನೀರಿನ ಹಂಚಿಕೆಯಾಗಿದೆ. ಕುಡಿಯುವ ನೀರಿಗಾಗಿ ಮೂವತ್ತು ಏಳು ಗ್ರಾಮಗಳು ಬರಲಿದ್ದು, ಈ ಎಲ್ಲ ಗ್ರಾಮಗಳಿಗೆ ನೀರಿನ ಕೊರತೆ ಎದುರಾಗಿದೆ. ಹೀಗಾಗಿ ಸಿ.ಎಸ್.ಪುರ ಕೆರೆಗೆ ನೀರು ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಶಾಸಕ ಮಸಾಲಾ ಜಯರಾಮ್ ಅವರನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಿ.ಎಸ್. ಪುರ ಕೆರೆಗೆ ಹಂಚಿಕೆಯಾದ ನೀರನ್ನು ಕಳೆದ ಹತ್ತು ವರ್ಷಗಳಿಂದಲೂ ಬಿಡುತ್ತಿಲ್ಲ. ಈ ವರ್ಷ ಕೂಡ ಹಂಚಿಕೆಯ ಪ್ರಮಾಣದಷ್ಟು ನೀರು ಬಿಟ್ಟಿಲ್ಲ . ಹೀಗಾಗಿ ಮುಂದಿನ ತಿಂಗಳಿಂದ ಬಿಡುವ ಹೇಮಾವತಿ ನೀರನ್ನು ಸಿಎಸ್ ಪುರ ಕೆರೆಗೆ ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಾಸಕರಾದ ಮಸಾಲಾ ಜಯರಾಂ ಅವರ ಶ್ರಮದಿಂದಾಗಿ ಸಿ.ಎಸ್. ಕೆರೆಗೆ ಸಲ್ಪ ನೀರು ತುಂಬಿಸಲು ಸಾಧ್ಯವಾಗಿದೆ. ಆದರೆ ನೀರಿನ ಹಂಚಿಕೆ ಸಂದರ್ಭದಲ್ಲಿ ಮೂಲವಾಗಿ ಹೇಮಾವತಿ ಜಲಾಶಯದಲ್ಲಿ ನೀರು‌ ಹರಿಸುವುದನ್ನು ನಿಲ್ಲಿಸಿದ ಕಾರಣ ಸಿ.ಎಸ್. ಕೆರೆಗೆ ಹರಿಯಬೇಕಾದ ನೀರು ಹರಿಯಲಿಲ್ಲ. ಹೀಗಾಗಿ ಹಂಚಿಕೆಯಾದಷ್ಟು ನೀರನ್ನು ಪಡೆಯಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ನೀರನ್ನು ಬಿಡುತ್ತಿರುವುದರಿಂದ ಉಳಿದ ನೀರನ್ನು ಸಿಎಸ್ ಪುರ ಕೆರೆಗೆ ಬಿಡಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಹೇಳಿದ್ದಾರೆ.

ಶಾಸಕರು ಹೇಮಾವತಿ ನೀರು ಪಡೆಯುವ ವಿಚಾರದಲ್ಲಿ ಮೊದಲಿಂದಲೂ ಮುತುವರ್ಜಿ ವಹಿಸುತ್ತಿರುವುದು ಸ್ವಾಗತಾರ್ಹ. ಅವರದೇ ಸರ್ಕಾರ ಇರುವ ಕಾರಣ ಹೆಚ್ಚುವರಿ ನೀರನ್ನು ಸಿಎಸ್ ಕೆರೆಗೆ ತರಲು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರೊಂದಿಗೆ ಶಾಸಕರು ಉತ್ತಮ ಒಡನಾಟ ಮತ್ತು ಸಂಬಂಧ ಹೊಂದಿದ್ದು, ಸಿಎಸ್ ಪುರ, ಮಾವಿನಹಳ್ಳಿ ಮತ್ತು ಕಲ್ಲೂರು ಕೆರೆಗಳಿಗೆ ಕೆರೆಗಳನ್ನು ತುಂಬಿಸಲು ಪ್ರಯತ್ನಿಸಬೇಕು ಎಂದು ಆಗ್ರಸಹಿಸಿದ್ದಾರೆ.

ಈ ಭಾಗದಲ್ಲಿ ಅಂತರ್ಜಲ ತುಂಬಾ ಕೆಳಗೆ ಹೋಗಿದೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ಶಾಸಕರು ನೀರನ್ನು ಬಿಡಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹೇಮಾವತಿ ನಾಲಾ ವಲಯದ ಆಧುನೀಕರಣದಿಂದ ಜಿಲ್ಲೆಗೆ ಅನುಕೂಲವಾಗಲಿದ್ದು, ಇದನ್ನು ಕೂಡ ಆದಷ್ಟು ಬೇಗ ಮುಗಿಸಲು ಒತ್ತಡ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಸಿಎಸ್ ಪುರ ಕೆರೆ ತುಂಬಿಸಲು ಕುಣಿಗಲ್ ಮುಖ್ಯ ನಾಲೆಗೆ ಎಕ್ಸ್ ಪ್ರೆಸ್ ನಾಲೆಯ ಕಾಮಗಾರಿ ಕೈಗೊಳ್ಳಬೇಕಾಗಿದೆ. ಆದರೆ ಇನ್ನೂ ಸಹ ಕಾಮಗಾರಿ ಆರಂಭಗೊಳ್ಳದೇ ಇರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಶಾಸಕರು ಕೂಡಲೇ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಬೇಕು. ಶಾಸಕರು ಈ ಹಿಂದೆ ಭರವಸೆ ನೀಡಿದಂತೆ ಸಿಎಸ್ ಪುರ ಕೆರೆಗೆ ನೀರು ತರಲು ಎಲ್ಲ ರೀತಿಯ ಪ್ರಯತ್ನ ಹಾಕಿರುವುದು ಸ್ವಾಗತಾರ್ಹ ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.

BJP ರಾಜಕೀಯ: CPM ಕೆಂಡಾಮಂಡಲ

ತುಮಕೂರು: ಕಾಮಿ೯ಕರ ಕಲ್ಯಾಣ ಮಂಡಳಿ ಹಣ ಬಳಸಿಕೊಂಡು ಮಾಡುತ್ತಿರುವ
ಆಹಾರ ವಿತರಣೆಯಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಿಪಿಐ(ಎಂ) ಕೆಂಡ ಕಾರಿದೆ.

ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ಕಟ್ಟಡ ಹಾಗು ವಲಸೆ ಕಾಮಿ೯ಕರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ದ ಆಹಾರವನ್ನು ವಿತರಿಸಲಾಗುತ್ತಿರುವುದು ಸ್ವಾಗತಾಹ೯ವಾಗಿದೆ.

ಆದರೆ ಆಹಾರ ವಿತರಣೆ ಮಾಡುವಾಗ ಇಂದಿನಿಂದ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ನಿದೇ೯ಶನಾಲಯದ ವತಿಯಿಂದ ನರೇಂದ್ರ ಮೋದಿ ಹಾಗು ಯಡಿಯೂರಪ್ಪ ರವರ ಫೋಟೋ ಇರುವ ಕರಪತ್ರ ವಿತರಿಸುವಂತೆ, ಅದನ್ನು ತೆಗೆದುಕೊಂಡು ಫೋಟೋ ತೆಗೆಸುಕೊಳ್ಳುವವರಿಗೆ ಊಟ ವಿತರಿಸುವ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಖಂಡಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕರಪತ್ರದಲ್ಲಿ ಸಿದ್ದ ಆಹಾರವನ್ನು ಕನಾ೯ಟಕ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ನೀಡಲಾಗುತ್ತಿದೆ ಎಂಬ ಒಂದೇ ಒಂದು ವಾಕ್ಯವನ್ನು ಸಹಾ ಸೇರ್ಪಡೆ ಮಾಡದೆ, ಇಡಿ ಆಹಾರವನ್ನು ರಾಜ್ಯ ಸಕಾ೯ರವೆ ನೀಡುತ್ತಿದೆ ಎಂಬಂತೆ ಬಿಂಬಿಸಲು ಮುಂದಾಗಿದೆ ಎಂದು ತಿಳಿಸಿದೆ.

ಇದುವರೆಗೆ ಕೇವಲ 1.5 ಯಿಂದ 2 ಲಕ್ಷ ಕಟ್ಟಡ ಕಾಮಿ೯ಕರ ಖಾತೆಗೆ 2000 ರೂಪಾಯಿ ಮಂಡಳಿಯ ಹಣ ಜಮಾ ಮಾಡಿ 16 ಲಕ್ಷ ಕಾಮಿ೯ಕರಿಗೆ ಜಮಾ ಮಾಡಿರುವುದಾಗಿ ಕರಪತ್ರದಲ್ಲಿ ಹೇಳಿಕೊಳ್ಳಲಾಗಿದೆ. ಆದರೆ ವಾಸ್ತವವಾಗಿ ಇದುವರೆಗೆ ಒಂದು ರೂಪಾಯನ್ನು ಸಹಾ ರಾಜ್ಯ ಸಕಾ೯ರವಾಗಲಿ ಅಥವಾ ಕೇಂದ್ರ ಸಕಾ೯ರವಾಗಲಿ ನೀಡದಿರುವಾಗ
ಇಂತಹ ಕರಪತ್ರವು ಬಿಜೆಪಿಯ ಬಂಡ ರಾಜಕೀಯದ ಪ್ರತೀಕವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಇಂತಹದೇ ರಾಜಕೀಯದ ಭಾಗವಾಗಿ ಮಂಡಳಿಯ ಹಣದಲ್ಲಿ ಖರೀದಿಸಿರುವ 60 ಸಾವಿರ ಒಣ ಅಹಾರ ಪೊಟ್ಟಣಗಳನ್ನು ಮುಖ್ಯ ಮಂತ್ರಿಯವರ ಆದೇಶದ ಮೇರೆಗೆ ಬಿಬಿಎಂಪಿ ಮೂಲಕವೇ ವಿತರಿಸಲು ನೀಡಿದ ಕಾರಣ ಬಿಜೆಪಿಯ ಶಾಸಕರು ಮತ್ತು ಕಾಪೋ೯ರೇಟರ್ಗಳು ತಮ್ಮ ಫೋಟೊ ಇರುವ ಸ್ಟಿಕ್ಕರ್ ಅಂಟಿಸಿ ಕಟ್ಟಡ ಕಾಮಿ೯ಕರಲ್ಲದವರಿಗೆ ಬಹುತೇಕ ವಿತರಿಸಿದ್ದಾರೆ.

ಇದುವರೆಗೆ 60 ಸಾವಿರ ಒಣ ಆಹಾರ ಪೊಟ್ಟಣಗಳನ್ನು ಯಾರಿಗೆ ವಿತರಿಸಿದ್ದಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಟ್ಟಡ ಕಾಮಿ೯ಕರ ಕಲ್ಯಾಣ ಮಂಡಳಿ ಹಣವನ್ನು ಬಿಜೆಪಿಯು ಮುಂಬರುವ ಬಿಬಿಎಂಪಿ ಚುನಾವಣೆಗಾಗಿ ದುಬ೯ಳಕೆ ಮಾಡಿಕೊಳ್ಳುತ್ತಿದೆ. ತನಗೆ ಮತ ನೀಡಿದವರಿಗೆ ವಿತರಿಸುವ ರಾಜಕೀಯದಲ್ಲಿ ನಿರತವಾಗಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾಮಿ೯ಕರಿಗೆ ಆಹಾರ ವಿತರಿಸುವಲ್ಲಿಯು ರಾಜಕೀಯ ಮಾಡುವ ಬಿಜೆಪಿಯ ಕ್ರಮವು ಅತ್ಯಂತ ನೀಚ ಕ್ರಮವಾಗಿದೆ ಎಂದಿದೆ ಸಿಪಿಐ (ಎಂ) ಖಂಡಿಸಿದೆ. ಕೂಡಲೇ ಇಂತಹ ರಾಜಕೀಯವನ್ನು ನಿಲ್ಲಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ಎನ್. ಉಮೇಶ್ ಒತ್ತಾಯಿಸಿದ್ದಾರೆ.

ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ‌ ಹಸಿವಿಗೆ ತತ್ತರ

Publicstory. in


ತುಮಕೂರು: ಲಾಕ್ ಡೌನ್ ನಂತರ‌ ಜಿಲ್ಲೆಯಾದ್ಯಂತ ಬಡವರು, ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಜಿ ಶಾಸಕರು, ಶಾಸಕರು, ವಿವಿಧ ಸಂಘ ಸಂಸ್ಥೆಗಳು ಮಾಡುತ್ತಾ ಜನರ‌ ಹಸಿವು ನೀಗಿಸುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕ್ಷೇತ್ರದಲ್ಲೆ ಅಲೆ‌ಮಾರಿಗಳು ಹಸಿವಿ‌ನಿಂದ ತತ್ತರಿಸುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ರಾಮ್ ಗೋಪಾಲ್ ಥಿಯೇಟರ್ ಹಿಂಭಾಗದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಕೆಲವು ಕುಟುಂಬಗಳು ವಾಸವಿದ್ದು, ಇದೀಗ ಕೊರೋನಾ ಕಾರಣದಿಂದ ಗೃಹಬಂಧನಕ್ಕೊಳಗಾಗಿ ಒಪ್ಪತ್ತಿನ ಊಟಕ್ಕೂ ತತ್ವಾರ ಪಡುವಂತಾಗಿದೆ.

ಸ್ವಂತ ಸೂರಿಲ್ಲದೇ ಗುಡಿಸಲು,ಜೋಪಡಿಯಲ್ಲಿ ವಾಸವಿರುವ ಇವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಕೆಲವೊಂದು ಸೌಲಭ್ಯದಿಂದ ವಂಚಿತರಾಗಿದ್ದು, ಇದೀಗ ಲಾಕ್ಡೌನ್ ಕಾರಣದಿಂದಾಗಿ ಒಪ್ಪೊತ್ತಿನ ಕೂಳಿಗೂ ಗತಿಯಿಲ್ಲದ ಪರಿಸ್ಥಿತಿ ಒದಗಿದೆ.

ಕೂದಲು, ಹೇರ್ಪಿನ್, ಸೂಜಿ ಹೀಗೆ ಸಣ್ಣಪುಟ್ಟ ವಸ್ತುಗಳನ್ನು ಹಳ್ಳಿಗಳಲ್ಲಿ ಸುತ್ತಿ ಮಾರಾಟ ಮಾಡುತ್ತಾ ಅದರ ವ್ಯಾಪಾರದಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಇವರಿಗೆ ತಿಂಗಳಿನಿಂದಲೂ ವ್ಯಾಪಾರವೂ ಇಲ್ಲ,ಅತ್ತ ಕೂಲಿ ನಾಲಿಯೂ ಇಲ್ಲದೇ ಸಂಕಷ್ಟ ಎದುರಾಗಿದೆ.

ಇದನ್ನು ಓದಿ

ಕರೋನಾ ಭೀತಿಯಿಂದಾಗಿ ಹಳ್ಳಿಗಳಲ್ಲಿ ಅವರನ್ನು ಬಿಟ್ಟುಕೊಳ್ಳುವುದಿಲ್ಲ. ಕೈಯಲ್ಲಿದ್ದ ಪುಡಿಗಾಸು ಖಾಲಿಯಾಗಿ ನಿತ್ಯಜೀವನ ಮಾಡುವುದು ದುರ್ಬರವಾಗಿ ಮನೆಮಂದಿ ಮಕ್ಕಳ ಹೊಟ್ಟೆ ಹೇಗೆ ತುಂಬಿಸಬೇಕು ಎಂಬ ಚಿಂತೆ ಕಾಡುತ್ತಿದೆ.

ಸರ್ಕಾರದಿಂದ ರೇಷನ್ ಕಾರ್ಡಿಗೆ ಕೊಟ್ಟಿದ್ದ ಅಕ್ಕಿ- ಗೋದಿ ಖಾಲಿಯಾಗಿದೆ. ಅಲೆಮಾರಿ ಸಂಘದ ಅಧ್ಯಕ್ಷ ರಾಜಪ್ಪ ದಾನಿಗಳ ನೆರವಿನಿಂದ ಕೊಡಿಸಿದ್ದ ಅಕ್ಕಿ-ಬೇಳೆ-ಎಣ್ಣೆ ಕೆಲವು ದಿನ ಹೊಟ್ಟೆ ತುಂಬಿಸಿದ್ದು ಇದೀಗ ಅದು ಸಹ ಖಾಲಿಯಾಗಿದೆ. ಲಾಕ್ಡೌನ್ ಮುಂದುವರಿಯುತ್ತಿರುವುದರಿಂದ ಮುಂದೇನು ಎನ್ನುವ ಚಿಂತೆ ಅಲೇಮಾರಿಗಳನ್ನು ಕಾಡುತ್ತಿದೆ.

ಇತ್ತೀಚೆಗಷ್ಟೇ ಚಿಕ್ಕನಾಯಕನಹಳ್ಳಿಯಲ್ಲಿ ಕೆಲವೊಂದು ಅಲೆಮಾರಿಗಳ ಗುಡಿಸಲುಗಳಿಗೆ ತಾಲೂಕು ನ್ಯಾಯಾಧೀಶರು, ವಕೀಲರು ಭೇಟಿ ನೀಡಿ ಆಹಾರ ಸಾಮಗ್ರಿ ವಿತರಣೆ ಮಾಡಿದ್ದರು. ಅದೇ ರೀತಿ ಈ ಭಾಗದಲ್ಲಿರುವ ಅಲೆಮಾರಿ ಕುಟುಂಬಗಳಿಗೆ ನೆರವು ನೀಡಲಿ ಎನ್ನುತ್ತಾರೆ ಹುಳಿಯಾರಿನ ಕೆಲವು ಜನರು.

ತಾಲ್ಲೋಕು ಆಡಳಿತ ಅಲೆಮಾರಿಗಳ ವಾಸ್ತವ ಚಿತ್ರಣ ಅರಿತು, ಸ್ಥಿತಿಗತಿ ಬಗ್ಗೆ ಗಮನಹರಿಸಿ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಿ. ಪಟ್ಟಣದಲ್ಲಿನ ದಾನಿಗಳು ಮುಂದೆ ಬಂದು ನಮ್ಮ ಕೈ ಹಿಡಿಯಲಿ ಅಲೆ‌ಮಾರಿಗಳು ಪಬ್ಲಿಕ್ ಸ್ಟೋರಿ.ಇನ್ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಚಂಪಾ ಎಂಬ ‘ಶಾಲ್ಮಲೆ’

ಜಿ ಎನ್ ಮೋಹನ್


ನಾನು ಚಂಪಾ ಮನೆಯ ಬಾಗಿಲು ತಟ್ಟಿದಾಗ ರಾತ್ರಿ 9 ಗಂಟೆ ದಾಟಿತ್ತು.

ಕೃಷಿ ಅಧಿಕಾರಿಯಾಗಿದ್ದ ಅಣ್ಣ ಇದ್ದ ನರಗುಂದದಿಂದ ಹೊರಟು ಕೆಂಪು ಮಣ್ಣಿನ ಧಾರವಾಡ ಸೇರಿಕೊಳ್ಳುವ ವೇಳೆಗೆ ಕತ್ತಲು ಕವಿದುಹೋಗಿತ್ತು.

ಬಾಗಿಲು ತೆಗೆದ ಚಂಪಾ ‘ನೇರಾ ಇಲ್ಲೇ ಬಂದ್ರೇನು?’ ಅಂದರು
‘ಹೌದು ಸರ್, ಯಾಕೆ ಕೇಳಿದ್ರಿ’ ಎಂದೆ
9 ಗಂಟೆ ದಾಟಿ ಬಂದದ್ದಕ್ಕೆ ಚಂಪಾ ಬಾಗಿಲು ತೆಗೆಯುವ ಮನಸ್ಸಿನಲ್ಲಿರಲಿಲ್ಲ ಅನಿಸಿತ್ತು.

ಅವರು ‘ಛೆ ಛೆ ಹಾಗಲ್ಲ, ಎದುರುಗಡೆ ಜೈಲ್ ಇದೆ, ಪಕ್ಕ ಪೊಲೀಸ್ ಸ್ಟೇಷನ್ ಇದೆ, ಮತ್ತೊಂದು ಮಗ್ಗುಲಿಗೆ ಜೂ, ಮತ್ತೆ ಆ ಕಡೆ ಇರೋದೇ ಹುಚ್ಚಾಸ್ಪತ್ರೆ ಎನ್ನುತ್ತಾ ತಮ್ಮ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸಿ ‘ದಾರಿ ತಪ್ಪಿದ್ದಿದ್ರೆ ಯಾವುದಾದರೂ ಒಂದರ ಪಾಲಾಗ್ತಿದ್ರಲ್ಲಾ ಅದಕ್ಕೆ ಕಾಳಜಿ ಮಾಡಿದೆ ಅಷ್ಟೇ’ ಎಂದರು,

ನಾನು ಅದೇ ತಾನೇ ಕಾಲೇಜು ಮೆಟ್ಟಿಲು ಹತ್ತಿದ್ದ ಸಮಯ
ಚಂಪಾ ಬರೆದ ನೆಲ್ಸನ್ ಮಂಡೇಲಾ ಕವಿತೆಗೆ ಫಿದಾ ಆಗಿ ಹೋಗಿದ್ದೆ. ಅದನ್ನು ಓದಿ ಮುಗಿಸುವ ವೇಳೆಗೆ ಅವರು ಜೈಲು ಅನುಭವ ಕಥನ ಕೈಗೆ ಸಿಕ್ಕಿತ್ತು
ಅದರ ಕೊನೆಯ ಪುಟ ತಿರುಗಿಸುವ ವೇಳೆಗೆ ಚಂಪಾ ಅವರದೇ ಭಾಷೆಯಲ್ಲಿ ಹೇಳಬೇಕೆಂದರೆ ಅವರು ‘ಪ್ರೇಕ್ಷಣೀಯ ವ್ಯಕ್ತಿತ್ವ’ ಆಗಿ ಹೋಗಿದ್ದರು.
ಹಾಗಾಗಿ ಒಮ್ಮೆ ಕೈಕುಲುಕುವ ಆಸೆಯಿಂದ ಅಲ್ಲಿದ್ದೆ.

ನನಗೆ ಚಂಪಾ ಕವಿತೆಗಳಿಗಿಂತ ಒಂದು ಕೈ ಹೆಚ್ಚಿಗೆ ಅವರ ನಾಟಕಗಳೇ ಇಷ್ಟ.
ಅಪ್ಪ, ಕೊಡೆಗಳು, ಟಿಂಗರ ಬುಡ್ಡಣ್ಣ, ಕುಂಟಾ ಕುಂಟಾ ಕುರುವತ್ತಿ, ಗೋಕರ್ಣದ ಗೌಡಶಾನಿ, ಜಗದಾಂಬೆಯ ಬೀದಿನಾಟಕ ಹೀಗೆ..

ಸರ್ ನಿಮ್ಮ ‘ಕೊಡೆಗಳು’ ಅಂದೆ..
ಅಷ್ಟಕ್ಕೇ ಚಂಪಾ ಬಿದ್ದೂ ಬಿದ್ದೂ ನಕ್ಕರು.
ನಾನು 9 ಗಂಟೆ ದಾಟಿ ಬಂದ ಅಪರಾಧಕ್ಕಾಗಿ ದೂಸರಾ ಮಾತನಾಡದೆ ಸುಮ್ಮನೆ ಕುಳಿತಿದ್ದೆ.
ಸಾವರಿಸಿಕೊಂಡು ಅವರು ‘ನಾನು ಬಿದ್ದೂ ಬಿದ್ದೂ ನಕ್ಕೆ ಅಲ್ಲ’ ಎಂದರು
‘ಹೌದು ಸಾರ್ ಉರುಳಾಡಿಕೊಂಡು ನಕ್ರಿ’ ಎನ್ನಬೇಕಿದ್ದವನು ಪಾಪದ ಹುಡುಗನಂತೆ ಕಣ್ಣು ಮಿಟುಕಿಸುತ್ತಾ ಕುಳಿತೆ

‘ಕೊಡೆಗಳು ಅಂದ್ರಲ್ಲಾ ಅದಕ್ಕೆ ನನಗೆ ನೆನಪಿಗೆ ಬಂತು
ಈ ಲಂಕೇಶ್ ಮತ್ತೆ ಟಿ ಎನ್ ಸೀತಾರಾಮ್ ಬೆಂಗಳೂರಲ್ಲಿ ನನ್ನ ಕೊಡೆಗಳು ನಾಟಕ ಮಾಡಿದ್ರು
ಅದರಲ್ಲಿ ಒಂದು ಸೀನ್ ನಲ್ಲಿ ನೆಲದ ಮೇಲೆ ಬಿದ್ದು ಹೊರಳಾಡಿಕೊಂಡು ನಗತಿದ್ರು.
ನನಗೆ ಕನ್ಫ್ಯೂಷನ್ ಆಯ್ತು ಯಾಕಪ್ಪಾ ಹೀಂಗ ಮಾಡಲಿಕ್ಕತ್ತಾರಲ್ಲಾ ಅಂತ
ಆಮೇಲೆ ಗೊತ್ತಾಯಿತು. ನಾನು ನಾಟಕದಲ್ಲಿ ‘ಬಿದ್ದೂ ಬಿದ್ದೂ ನಗುವರು’ ಅಂತ ಬರೆದಿದ್ದೆ
ಇಬ್ಬರೂ ಅಕ್ಷರಶ ನೆಲದ ಮೇಲೆ ಬಿದ್ದು ಉರುಳಾಡಿಕೊಂಡು ನಗತಿದ್ದರು’ ಅಂದರು.

ಹೀಗೂ ಉಂಟೇ ..! ಅಂತ ನಾನು ಅವರನ್ನು ನೋಡುತ್ತಾ ಕೂತೆ.

ಆ ವೇಳೆಗೇ ಚಂಪಾ ಖಡಕ್ ಮತ್ತು ಹರಿತ ಮಾತಿಗೆ ಹೆಸರಾಗಿದ್ದರು.
ಅಣ್ಣನ ಬೆನ್ನಿಗೆ ಬಿದ್ದೇ ನಾನು ನೂರೂರು ಸುತ್ತಿದ್ದೆ. ಅದರಲ್ಲಿ ಸವಣೂರು ಸಹಾ ಒಂದು
ಸವಣೂರು ಅಂದ್ರೆ ಖಾರಕ್ಕೆ ಹೆಸರುವಾಸಿ.
ಅದು ಹ್ಯಾಗೋ ಚಂಪಾ ಸವಣೂರಿನವರು ಎನ್ನುವುದನ್ನು ಪತ್ತೆ ಹಚ್ಚಿದ್ದೆ.
‘ಸಾರ್ ನೀವು ಸವಣೂರಿನವರಾಗಿದ್ದಕ್ಕೆ ಈ ಖಾರಾ ಜಾಸ್ತಿಯೇನು’ ಅಂತ ಧೈರ್ಯ ಮಾಡಿ ಕೇಳಿಯೇಬಿಟ್ಟೆ.
‘ನಾನು ಸವಣೂರು ವೀಳೆಯದೆಲೆ ಇದ್ದ ಹಾಗೆ. ಆ ವೀಳೇದೆಲೆ ಸಿಕ್ಕಾಪಟ್ಟೆ ಖಾರ ಇರುತ್ತೆ.
ಅದರ ಜೊತೆಗೆ ನಮ್ಮಪ್ಪನೇ ಸಿಕ್ಕಾಪಟ್ಟೆ ಜಗಳಗಂಟ. ಆ ಕಾಲಕ್ಕೇ ಮುರುಘಾಮಠದಲ್ಲಿ ಗಲಾಟೆ ಮಾಡಿದ ಅಂತ ನಮ್ಮಪ್ಪನ್ನ ಒದ್ದು ಹೊರಗೆ ಹಾಕಿದ್ರು. ಆ ಡಿ ಎನ್ ಎ ನನ್ನೊಳಗೂ ಬಂದುಬಿಟ್ಟಿದೆ’ ಎಂದು ನಗುತ್ತಾ ಹೇಳಿದರು.

ನನಗೆ ಚಂಪಾ ಇಷ್ಟ ಆಗೋದೇ ಇದಕ್ಕೆ. ವ್ಯಂಗ್ಯಕ್ಕೆ ಬೇರೆಯವರನ್ನ ಮಾತ್ರವಲ್ಲ ತಮ್ಮನೂ ಒಡ್ಡಿಕೊಳ್ಳುತ್ತಾರೆ ಅನ್ನೋದಕ್ಕೆ.

‘ವ್ಯಂಗ್ಯ ಕವನ ಬರೆದು ಸಾಕಾಯ್ತು ಅಂತ ನಾಟಕಕ್ಕೆ ಹೊರಳ್ಕೊಂಡೆ.
ಏನು ಗೊತ್ತಾ ಹೈದ್ರಾಬಾದ್ ನಲ್ಲಿದ್ದಾಗ ವಿಶ್ವನಾಥ ಮಿರ್ಲೆ ಗೋಡೆಗಳು ಅಂತ ನಾಟಕ ಬರೆದರು. ನಾನು ಓದಿ ಇನ್ಸ್ಪೈರ್ ಆದವನೇ
ಒಂದೇ ರಾತ್ರಿಯಲ್ಲಿ ಕೊಡೆಗಳು ಬರೆದುಬಿಟ್ಟೆ. ಆಮೇಲೆ ನೋಡು ನಾಟಕವೇ ಆಗಿಹೋಯ್ತು’.

ಈ ನಾಟಕ ಬರೆದದ್ದಕ್ಕಾಗಿಯೇ ರಾತ್ರೋರಾತ್ರಿ ಪೊಲೀಸರು ಬಂದು ‘ಇಲ್ಲೇ ವಾಕಿಂಗ್ ಹೋಗಿ ಬರೋಣ ಬನ್ನಿ ಸಾರ್’ ಅಂತ
ಕೈ ಹಿಡಿದು ನಡೆಸಿಕೊಂಡು ಎದುರುಗಡೆ ಇದ್ದ ಜೈಲಿಗೆ ಹಾಕಿದ್ರು.
‘ಜಗದಂಬೆಯ ಬೀದಿ ನಾಟಕ’ದಲ್ಲಿ ತುರ್ತುಪರಿಸ್ಥಿತಿ ತಂದಿಟ್ಟ ಇಂದಿರಾಗಾಂಧಿಯೆ ವಸ್ತು.
ಇಂದಿರಾಗಾಂಧಿಯನ್ನ ಜಗದಂಬೆ ಮಾಡಿ ಉಳಿದವರನ್ನ ಷಂಡರನ್ನಾಗಿಸಿ ನಾಟಕ ಬರೆದರು ಚಂಪಾ.
ಪರಿಣಾಮ ೨೬ ರಾತ್ರಿ ಜೈಲು.

‘ಅಲ್ಲಾ ಸರ್ ಜೈಲಲ್ಲಿ ನಿಮಗೆ ಏನಾದ್ರೂ..’ ನನ್ನ ಮಾತನ್ನು ಕತ್ತರಿಸಿ ‘ನೋಡಪ್ಪಾ ನಾನು ಒಂದು ಪದ್ಯ ಬರೆದಿದ್ದೇನೆ
ನನ್ನ ಮನೆಯ ಪಕ್ಕ ಪೊಲೀಸ್ ಸ್ಟೇಷನ್ ಇದೆ ಹಾಗಾಗಿ ನನಗೆ ಕಳ್ಳರ ಭಯವಿಲ್ಲ ಆದರೆ ಪೊಲೀಸರದ್ದೇ ಭಯ ಅಂತ. ಹಾಗೆ ಇದೂನೂ’ ಅಂತ ನಕ್ಕರು.

‘ಅದು ಸರಿ ಸರ್ ನಿಮ್ಮ ಕೆಲಸ ಹೋಗಿದ್ದಿದ್ರೆ’ ಅಂತ ಒಂದು ಕ್ವಶ್ಚನ್ ಮಾರ್ಕ್ ಅವರ ಮುಂದಿಟ್ಟೆ
ಅವರು ಒಂದಿಂಚೂ ಕನ್ಫ್ಯೂಸ್ ಆಗಲಿಲ್ಲ. ‘ನೀವು ತುಂಬಾ ಕಳಕೊಳ್ಳುತ್ತಿದ್ರಿ’ ಅಂದರು. ‘ಏನು’ ಎನ್ನುವಂತೆ ಮುಖ ನೋಡಿದೆ.
‘ನನ್ನ ಕೆಲಸ ಹೋಗಿದ್ದಿದ್ರೆ ನಾನು ರಾಜಕಾರಣಕ್ಕೆ ಬಂದು ಈ ವೇಳೆಗೆ ಮಂತ್ರಿಯಾಗಿ ನಿಮ್ಮೆದುರು ಕೂತಿರ್ತಿದ್ದೆ. ನೀವು ಆ ಭಾಗ್ಯ ಕಳಕೊಂಡ್ರಿ’ ಎಂದರು.

ಚಂಪಾಗೆ ಚಂಪಾನೇ ಸಾಟಿ ಅಂದುಕೊಂಡೆ

ಅಂದಿನಿಂದ ಇಂದಿನವರೆಗೆ ನಾನೂ, ಚಂಪಾ ಹಲವಾರು ಬಾರಿ ಮಾತಾಡಿದ್ದೇವೆ, ಹರಟೆ ಹೊಡೆದಿದ್ದೇವೆ.
ಮೊನ್ನೆ ಮೊನ್ನೆ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಚರಿಸಿದ್ದರು. ನಾನೂ ಒಬ್ಬ ಭಾಷಣಕಾರ.
ನಾನು ಒಂದು ಮಾತು ಹೇಳಿದೆ. ‘ಚಂಪಾ ಅಂದ್ರೆ ಅವರ ಬಾಯಿ ಮುಚ್ಚಿಸುವವರಿಲ್ಲ, ಚಂಪಾಗೆ ಪ್ರಶ್ನೆ ಮಾಡಿ ಉತ್ತರ ಪಡೆಯದೇ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
ಆದರೆ ಅದು ನನ್ನಿಂದ ಸಾಧ್ಯ’ ಎಂದೆ

ಸಭಾಂಗಣದಲ್ಲಿದ್ದವರೆಲ್ಲರಿಗೂ ಆಶ್ಚರ್ಯ. ‘ಏನಪ್ಪಾ’ ಅಂತ

ನಾನು ಚಂಪಾಗೆ ಕೇಳಿದೆ
ಸರ್ ನೀವು “ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ,
ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ’ ಅಂತ ಬರೆದಿದ್ದೀರಲ್ಲಾ
ಹೇಳಿ ಸಾರ್ ಯಾರು ಆ ಶಾಲ್ಮಲಾ” ಅಂದೆ

ಚಂಪಾ ಬಾಯಿಯೇ ಬಿಡಲಿಲ್ಲ. ನನ್ನ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ.
ಹುಸಿನಗು ಬೀರುತ್ತಾ ಎದುರು ನೋಡುತ್ತಿದ್ದರು

ನಾನೂ ಆ ಕಡೆ ನೋಡಿದೆ. ನೀಲಾ ಪಾಟೀಲರು ಮೊದಲ ಸಾಲಿನಲ್ಲಿಯೇ ಕುಳಿತಿದ್ದರು.
ಇನ್ನು ಈ ದಿನವಂತೂ ಉತ್ತರ ಸಿಗಲು ಸಾಧ್ಯವೇ ಇಲ್ಲ ಎಂದು ಸುಮ್ಮನಾದೆ.

ಬಿಜಾಪುರದ ಮುಧೋಳದಲ್ಲಿ ಸಾಹಿತ್ಯ ಸಮ್ಮೇಳನ.
ನನ್ನ ವಿಶೇಷ ಉಪನ್ಯಾಸ ಮುಗಿಸಿ ರೂಮಿಗೆ ಹಿಂದಿರುಗುತ್ತಿದ್ದೆ.
ಹಿಂದಿನಿಂದ ಯಾರೋ ಕರೆದರು. ನೋಡಿದರೆ ರವಿ ಬೆಳಗೆರೆ

ಭಾಷಣ ಚೆನ್ನಾಗಿತ್ತು ಅಂತ ತಿಳಿಸಲು ಕೂಗಿದ್ದ
ಅದೂ ಇದೂ ಮಾತನಾಡುತ್ತಾ ಬೀದಿಯಲ್ಲೇ ನಿಂತೆವು.

‘ಏನು ಗೊತ್ತಾ’ ಅಂತ ರವಿ ಕಿವಿಯ ಬಳಿ ಪಿಸುಗುಟ್ಟಿದ.
‘ಏನು’ ಅಂದೆ. ‘ಈ ಚಂಪಾ ಸಹವಾಸ ಅಲ್ಲಾ ಮಾರಾಯ’ ಎಂದ
‘ಏಕೆ’ ಎನ್ನುವಂತೆ ನೋಡಿದೆ.

“ಅಲ್ಲಾ ‘ಲೇಖಕರ ವಿಳಾಸಗಳು’ ಅಂತ ಪುಸ್ತಕ ಮಾಡ್ತೀನಿ ಅಂತ ಹೊರಟಿದ್ದಾರಲ್ಲಾ ಬುದ್ದಿ ಇದೆಯಾ ಯಾರು ಕೊಂಡ್ಕೊಳ್ತಾರೆ ಮಾರಾಯ ಅದನ್ನ. ಅದರ ಬದಲು ‘ಲೇಖಕರ ವಿಲಾಸಗಳು’ ಅಂತ ಮಾಡ್ಲಿ, ಸೂಪರ್ ಡೂಪರ್ ಸೇಲ್” ಅಂದ

ಮರುಕ್ಷಣ ನಾವಿಬ್ಬರು ಅದು ಬೀದಿ ಎನ್ನುವುದನ್ನೇ ಮರೆತು ಚಂಪಾ ಹೇಳಿದಂತೆಯೇ ಅಕ್ಷರಶಃ ‘ಬಿದ್ದೂ ಬಿದ್ದೂ’ ನಕ್ಕೆವು.

ದಿನ ಭವಿಷ್ಯ

ಪಂಚಾಂಗ:ದಿನಾಂಕ 22/ 4 /2020,  ಬುಧವಾರ , ಶ್ರೀ ಶಾರ್ವರಿ ನಾಮ ಸಂವತ್ಸರ ,ಚೈತ್ರ ಮಾಸ, ಉತ್ತರಾಯಣ, ವಸಂತಋತು, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ , ರೇವತಿ ನಕ್ಷತ್ರ ಹಾಗೂ ಅಶ್ವಿನಿ ನಕ್ಷತ್ರ, ಯೋಗ:-   ವಿಷ್ಕಂಭ ಮತ್ತು  ಪ್ರೀತಿ ಕರಣ:- ಚತುಷ್ಪಾದ ಮತ್ತು ನಾಗವ ,ಮಳೆ ನಕ್ಷತ್ರ:- ಅಶ್ವಿನಿ, ದಿಕ್ಕು ಶೂಲೆ:- ಉತ್ತರ, ಪರಿಹಾರ:- ಹಾಲು,ರಾಜಯೋಗ :-ಇಲ್ಲ.

ರಾಹುಕಾಲ:-12:19pm to 1:53pm, ಗುಳಿಕಕಾಲ:-10:46am to 12:19pm,ಯಮಗಂಡಕಾಲ:-07:40am to 09:13amಸೂರ್ಯೋದಯ:-6:07am,ಸೂರ್ಯ ಅಸ್ತ:-6:32pm.

ರಾಶಿ ಭವಿಷ್ಯ

ಮೇಷ ರಾಶಿ :

ಈ ದಿನ ಸಾಯಂಕಾಲದಿಂದ  ಸಮಸ್ಯೆಗಳು  ಒಂದೊಂದಾಗಿ ಪರಿಹಾರ ಆಗುತ್ತವೆ  ಆದರೂ ಅಲ್ಲಿಯವರೆಗೂ ಸಮಸ್ಯೆಗಳು  ಮುಂದುವರೆಯುತ್ತೇವೆ. ವಾಹನ, ಜಮೀನಿನ ಆರ್ಥಿಕ ಚಟುವಟಿಕೆಗಳು ನಷ್ಟವನ್ನು ತರುತ್ತವೆ, ಮಿತ್ರರಿಂದ ಇತರ ಸಹಾಯಕರಿಂದ ಈ ದಿನ ಸಾಯಂಕಾಲದವರೆಗೂ ಅಷ್ಟೇನೂ ಅನುಕೂಲವಾಗುವುದಿಲ್ಲ, ನೀವು ಮಾಡುತ್ತಿರುವ ವೃತ್ತಿಯಲ್ಲಿ ಸಮಸ್ಯೆ ಕಂಡುಬರುವ ಅವಕಾಶ ಇದೆ.

ವೃಷಭ ರಾಶಿ

ಸಮಸ್ಯೆಗೆ  ಸ್ವಲ್ಪ ಸ್ವಲ್ಪ ಮಿತ್ರರಿಂದ, ನೆರೆಹೊರೆಯವರಿಂದ  ಸಹಾಯ ಸಹಕಾರ ಪಡೆದಿದ್ದೀರಿ, ಸಂಪಾದನೆ ವಿಚಾರದಲ್ಲಿ ಲಾಭ ಸಿಗುತ್ತದೆ, ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ , ಆದರೆ ಸಾಯಂಕಾಲದಿಂದ ಅನಾರೋಗ್ಯ, ಭಯ, ಖರ್ಚು ತೊಂದರೆ ಹೆಚ್ಚಾಗಬಹುದು.

ಮಿಥುನ ರಾಶಿ

ಈ ದಿನ ನೀವು ಮಾಡುವ  ಕೆಲಸಗಳಲ್ಲಿ ಯಶಸ್ಸು ಕಾಣುವ ಸಮಯ, ಈ ದಿನ ಶ್ರಮ  ಸ್ವಲ್ಪ  ಲಾಭ ಆಗಬಹುದು,  ಕುಟುಂಬ, ವಾಹನ, ತಾಯಿ ವಿಷಯದಲ್ಲಿ ಸಾಯಂಕಾಲದಿಂದ  ತೊಂದರೆ ಕಾಣಬಹುದು.

ಕಟಕ ರಾಶಿ

ನಿಮಗೆ ಇದ್ದ  ಉಷ್ಣದ ಬಾದೆ  ಹಾಗೂ ಇತರೆ  ತೊಂದರೆ ಕಡಿಮೆಯಾಗಿ ಸಮಸ್ಯೆ ಪರಿಹಾರವಾಗುವ ಅವಕಾಶವಿದೆ ,ಈ ದಿನ ಬೆಳಿಗ್ಗೆ ಸ್ವಲ್ಪ ಕಷ್ಟವಾದರೂ ಸಾಯಂಕಾಲದಿಂದ ಪುನಃ ಚೇತರಿಸಿ ಕೊಳ್ಳುತ್ತೀರಿ. 

ಸಿಂಹ ರಾಶಿ

ಈ ದಿನ 25% ಫಲ ಪಡೆಯುವ ಅವಕಾಶ ಇದೆ, ಇನ್ನುಳಿದಂತೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತವೆ  , ಸಂತಾನದಿಂದ ಕಿರಿಕಿರಿ ಯಾಗಲಿ ಅಥವಾ ಅನಾರೋಗ್ಯ ವಾಗಲಿ , ಅಥವಾ  ಮಾನಸಿಕ ಕಿರಿಕಿರಿ ಇಲ್ಲವೇ ಭಯದಿಂದ ಉದ್ವೇಗಕ್ಕೆ ಒಳಗಾಗುವ ಎಲ್ಲಾ ಅವಕಾಶಗಳು ಗೋಚರವಾಗುತ್ತವೆ.

ಕನ್ಯಾ ರಾಶಿ

ಈ ದಿನ ದಿಂದ  ತಲೆ ಬಿಸಿ ಹೆಚ್ಚಾಗುವ  ಅವಕಾಶವಿದೆ , ಸಾಯಂಕಾಲದಿಂದ ತಾಯಿ ,ವಾಹನ, ಜಮೀನಿನ ಕಿರಿಕಿರಿ ನಿಮಗೆ ಅನಾರೋಗ್ಯ ಅಥವಾ ಅಸಮಾಧಾನ ಉಂಟು ಮಾಡುವ ಸಂಭವ ಇದೆ , ಅದೇ ರೀತಿ ವಾಹನದ ಅಪಘಾತ ಭಯವೂ ಇದೆ ,ವಿದ್ಯುತ್ ಆಗಾತ ವಾಗಲಿ ಅಥವಾ ಸರ್ಪದ ವಿಷ ಭಯವಾಗಲಿ ಕಾಡುವ ಸಂಭವ ಇದೆ ,ಎಚ್ಚರಿಕೆ ಅಗತ್ಯ.

ತುಲಾ ರಾಶಿ

ಈ ದಿನ  ಶುಭ ಫಲಗಳು ಬರುತ್ತವೆ, ಆಕಸ್ಮಿಕವಾಗಿ ಅನುಕೂಲಗಳು ಆಗಬಹುದು ,ಲಾಭ ಆಗಬಹುದು, ಆನಂದ ಸಿಗಬಹುದು, ನಿಮ್ಮ ನಿರೀಕ್ಷೆಯಷ್ಟು ಲಾಭ ಬರಬಹುದಾದ ಲಕ್ಷಣಗಳು ಇರುವುದರಿಂದ ಬೇಸರ ದೂರವಾಗುತ್ತದೆ, ಆದ್ದರಿಂದ ಮನೆಯವರೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶಗಳು ಇದೆ.

ವೃಶ್ಚಿಕ ರಾಶಿ 

ಈ ದಿನ  ಹಣದ ಸಮಸ್ಯೆ ಮನಸ್ಸಿಗೆ ಬೇಸರ ಕಾಡುವ ಅವಕಾಶವಿದೆ, ಅಂದುಕೊಂಡ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ಸಫಲವಾಗದೇ  ಊಟ ಹಾಗೂ ಮಾತಿನ ವಿಚಾರದಲ್ಲಿ ಲಯ ತಪ್ಪುತ್ತದೆ.

ಈ ದಿನ   ನಿಮಗೆ  ಯಾರಾದರೂ   ಬೇಸರ ಬರುವಂತೆ ಮಾತನಾಡುವ  ಅವಕಾಶವಿದೆ,  ಆದರೂ ಮಧ್ಯಾಹ್ನದವರೆಗೂ ಶುಭ  ಫಲಗಳನ್ನು  ಪಡೆಯುವ ಅವಕಾಶ ಇದೆ ,ಸಂಜೆ ಸ್ವಲ್ಪ ಶರೀರದ ಉಷ್ಣಾಂಶ  ಹೆಚ್ಚಾಗಬಹುದು. 

ಮಕರ ರಾಶಿ

ಈ ದಿನ ಕೆಲವು ವಿಷಯಗಳು ತಲೆ ಕೆಟ್ಟಂತೆ ಮಾಡುತ್ತವೆ ,ಎಲ್ಲಾ ಕಡೆ ಅಶಾಂತಿಯಾಗಲೀ, ಅವಮಾನವಾಗಲಿ ಆಗಬಹುದು, ರಾತ್ರಿಗೆ ನಿದ್ದೆ ಸಮಸ್ಯೆ ಉಂಟಾಗುವ ಅವಕಾಶ ಇದೆ.

ಕುಂಭ ರಾಶಿ

ಈ ದಿನ ನಿಮಗೆ ಬೇರೆಯವರ ,ಮಿತ್ರರ ಕುಟುಂಬಸ್ಥರ  ಸಹಾಯ   ದೊರೆಯುತ್ತದೆ ,ಸಾಡೆಸಾತಿ ಶನಿ, ತೊಂದರೆ ಕಡಿಮೆಯಾಗಿ ಶತ್ರು ಬಾದೆ, ರೋಗಬಾಧೆ ,ಸಾಲದ ಬಾದೆ ಬಗೆಹರಿಯುವ ಅವಕಾಶ ಇದೆ ,ಆಕಸ್ಮಿಕ ಅನುಕೂಲಗಳು ಆಗುತ್ತವೆ.

ಮೀನ ರಾಶಿ

ಈ ದಿನ  ಸ್ವಲ್ಪ ತಲೆನೋವು  ಕಾಡಬಹುದು  ,ಮಾಡುವ  ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಉಂಟಾಗಬಹುದು , ವಾಹನ  ,ಮನೆ  ಸಮಸ್ಯೆಗಳು   ಹೆಚ್ಚಾಗುವ ಅವಕಾಶ ಇದೆ. ಶಾಂತಿ:- ಈ ದಿನ “ತುಳಸಿ ಪೂಜೆ” ಮಾಡುವುದು ಹಾಗೂ ವಿಷ್ಣುವಿಗೆ ನಮಸ್ಕಾರ ಮಾಡಿಕೊಳ್ಳುವುದು ಉತ್ತಮ,” ಓಂ   ಬುದಾಯ ನಮಃ” ಅಥವಾ” ಓಂ ವಿಷ್ಣವೇ ನಮಃ “ಈ ಮಂತ್ರ ಗಳನ್ನು 108 ಬಾರಿ ಪಠಿಸುವುದು ಉತ್ತಮ.

ವರದಿಗಾರ ಅಪಘಾತದಲ್ಲಿ ಸಾವು

ತುಮಕೂರು:

ಕರ್ತವ್ಯನಿರತ ಪತ್ರಕರ್ತರೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಹನುಮಂತು ಮೃತ ವ್ಯಕ್ತಿ.

ರಾಮನಗರ ಜಿಲ್ಲಾ ಕಾರಾಗೃಹದ ಮುಂಭಾಗ ಇಂದು ಮಧ್ಯಾಹ್ನ ಅಪಘಾತ ನಡೆದಿದೆ. ಎಟಿಎಂ ಹಣ ಸಾಗಿಸುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ ಹನುಮಂತು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನ ಜಪ್ತಿ ಮಾಡಿ ಚಾಲಕನನ್ನು ಬಂಧಿಸಿದ್ದಾರೆ. ಅಪಘಾತದ ಸಂಬಂಧ ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತರು 2 ವರ್ಷದ ಮಗಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಇನ್ನು ಹನುಮಂತು ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಮುಂದಿನ ನಾಲ್ಕೈದು ದಿನಗಳಲ್ಲಿ ಬಾರೀ ಮಳೆ ಸಾಧ್ಯತೆ

ತುಮಕೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಾಳೆಯಿಂದ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ಹೀಗಿದೆ.


ಏಪ್ರಿಲ್ 22 ರಂದು ಮಳೆನಾಡು ಪ್ರದೇಶವನ್ನ ಹೊಂದಿರುವ ಜಿಲ್ಲೆಗಳಾದ.. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಿಂಚು ಗುಡುಗಿನೊಂದಿಗೆ ಬಿರುಗಾಳಿ ಸಹಿತ ಮಳೆಯಾಗಲಿದೆ.

ಇನ್ನು, ಕರಾವಳಿ ಕರ್ನಾಟಕ ಮತ್ತು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಸೇರಿದಂತೆ ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್ 23 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜೊತೆಗೆ ಉತ್ತರ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 24 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏಪ್ರಿಲ್ 25 ರಂದು ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಬೆಂಗಳೂರಿನ ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿರುಗಾಳಿ, ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮಿಂಚಿನೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 26 ರಂದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವೆಡೆ ಗಾಳಿಯೊಂದಿಗೆ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ ದಾವಣಗೆರೆ, ಕೋಲಾರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲೂ ಸಹ ಚದುರಿದಂತೆ ಮಿಂಚು-ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮನೆಗೆಂದು ಹೊರಟವರು‌ ಮಸಣಕ್ಕೆ

ತುಮಕೂರು:

ಈಗ ಪ್ರಪಂಚದಾದ್ಯಂತ ಎಲ್ಲಿ ನೋಡಿದ್ರು ಕೊರೊನಾ.

ಈ ಕೊರೊನಾ ವೈರಸ್ ದಿನೇ ದಿನೇ ದೊಡ್ಡ ಅವಾಂತರಗಳನ್ನು ಸೃಷ್ಠಿಸುತ್ತಿದೆ. ಕೂಲಿ ಕಾರ್ಮಿಕರು ಊಟವಿಲ್ಲದೆ ಸಾಯುತ್ತಿದ್ದಾರೆ. ತೆಲಂಗಾಣದಿಂದ ಬಿಜಾಪುರ ಜಿಲ್ಲೆಗೆ ಕಾಲ್ನಡಿಗೆಯಲ್ಲೇ 150 ಕಿ.ಮೀ ಪ್ರಯಾಣ ಮಾಡಿದ 12 ವರ್ಷದ ಬಾಲಕಿ ಮನೆ ತಲುಪುವ ಮುನ್ನವೇ ಸಾವಿನ ಕದ್ದ ತಟ್ಟಿದ್ದಾಳೆ. 

ತನ್ನ ಕುಟುಂಬಕ್ಕೆ ನೆರವಾಗಲು ಮೆಣಸಿನಕಾಯಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜಾಮ್ಲೋ ಮಡ್ಕಾಮ್ ಎಂಬಾಕೆ ತನ್ನ ಹಳ್ಳಿ ತಲುಪಲು  ಕೇವಲ ಒಂದು ಗಂಟೆಯಷ್ಟು ದೂರ ಕ್ರಮಿಸಬೇಕಿತ್ತು, ಅಷ್ಟರಲ್ಲೇ ಬಾಲಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ತೆಲಂಗಾಣದ ಗ್ರಾಮವೊಂದರ ಹೊಲದಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಇತರೆ 11 ಜನರೊಂದಿಗೆ  ಹೆದ್ದಾರಿಗಳನ್ನು ತಪ್ಪಿಸಿ ಕಾಡುಗಳಲ್ಲೇ ತನ್ನ ತಂಡದೊಂದಿಗೆ ಮೂರು ದಿನ ನಿರಂತರವಾಗಿ ಪ್ರಯಾಣ ಮಾಡಿದ್ದಳು.

ಸುದಿರ್ಘ ಕಾಲ್ನಡಿಗೆಯಿಂದ ಆಕೆಯ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಆಗ ಮನೆಯಿಂದ 14 ಕಿ.ಮೀ ದೂರದಲ್ಲಿದ್ದಳು. ಕೊನೆಗೆ ಆಕೆಯನ್ನು ಆಂಬ್ಯುಲೆನ್ಸ್ ನಲ್ಲಿ ಮನೆಗೆ ಕೊಂಡೊಯ್ಯಲಾಗಿದೆ. ಕಳೆದ ಎರಡು ತಿಂಗಳಿಂದ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದಳು. ಮೂರು ದಿನಗಳು ನಡೆದಿದ್ದಾಳೆ. ಇದರಿಂದಾಗಿ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಬಾಲಕಿಯ ತಂದೆ ಅಂಡೋರಾಂ ಮಡ್ಕಾಮ್ ತಿಳಿಸಿದ್ದಾರೆ.

ಬಾಲಕಿ ಮೂರು ದಿನಗಳ ಕಾಲ ಸರಿಯಾಗಿ ಆಹಾರ ಸೇವಿಸಿರಲಿಲ್ಲ ಎಂದು ತಂಡದಲ್ಲಿದ್ದವರು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಮೃತ ಬಾಲಕಿ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದೆ.

ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ದೂರ ಉಳಿದು ಉದ್ಯೋಗ ಮತ್ತು ಆಶ್ರಯವಿಲ್ಲದಿರುವ ಸಾವಿರಾರು ವಲಸೆ ಕಾರ್ಮಿಕರು ಹತಾಶೆಯಿಂದ ಕಾಲ್ನಡಿಗೆಯಲ್ಲಿಯೇ ಸುದೀರ್ಘ ಪ್ರಯಾಣ ಮಾಡೋ ಮೂಲಕ ಸಾವಿನ ದವಡೆ ಸೇರುತ್ತಿದ್ದಾರೆ. ಈ ಸಾವಿಗೆ ಹೊಣೆ ಯಾರು ಎಂಬುದನ್ನು ಈಗ ಪ್ರಶ್ನಿಸುವಂತಾಗಿದೆ.

ಎಟಿಎಂ ಸೇವಾ ಶುಲ್ಕ ಮನ್ನ…

ತುಮಕೂರು:

ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜೂನ್ 30ರವರೆಗೆ ಎಟಿಎಂ ಸೇವಾಶುಲ್ಕ ಮನ್ನಾ ಮಾಡಲಾಗುವುದು.

ಮೂರು ತಿಂಗಳವರೆಗೆ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣ ಪಡೆದುಕೊಂಡರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಕೆಲವು ಬ್ಯಾಂಕುಗಳು ಜೂನ್ 30ರವರೆಗೆ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸದಿರಲು ನಿರ್ಧರಿಸಿವೆ.

ಈಗಾಗಲೇ ಎಸ್.ಬಿ.ಐ. ಮೆಟ್ರೋ ನಗರಗಳಲ್ಲಿ ಮೂರು ಉಚಿತ ವಹಿವಾಟು ಮತ್ತು ಇತರೆಡೆ 5 ಉಚಿತ ವಹಿವಾಟುಗಳಿಗೆ ಅನುಮತಿ ನೀಡಿದೆ ಎಂದು ಹೇಳಲಾಗಿದೆ.