Thursday, February 26, 2026
Google search engine
Home Blog Page 251

ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ಜನನಾಯಕ; ದೇವೇಗೌಡ

0

ಹೆತ್ತೇನಹಳ್ಳಿ ಮಂಜುನಾಥ್


ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ದಿನದಿಂದಲೂ ನಿರಂತರ ಸೇವೆಯಲ್ಲಿ ಗೌರಿಶಂಕರ್ ತನ್ನ ಕ್ಷೇತ್ರದ ಜನಗಳ ಸೇವೆಗೆ ನಿಂತಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ಯಪಡಿಸಿದರು.

ಇಲ್ಲಿ ಶಾಸಕ ಗೌರಿಶಂಕರ್ ಕ್ಷೇತ್ರದ ಜನರ ಮನೆ ಮನೆಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕರು ಸೇವೆಯ ನಡುವೆ ಸಾಮಾಜಿಕ ಕಳಕಳಿಯಿಂದ ಕಾರ್ಯಕ್ರಮದ ಜಾಗದಲ್ಲೂ ಸಾಮಾಜಿಕ ಅಂತರವನ್ನು ಎಚ್ಚರಿಕೆ ವಹಿಸಿ ಕಾಪಾಡಿಕೊಂಡಿರುವುದು ಸಂತೋಷ ತಂದಿದೆ ಎಂದರು.

ಇಂತಹ ಹತ್ತಾರು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಗೌರಿಶಂಕರ್ ರವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸತ್ತೇನೆ ಎಂದು ಹೇಳಿದರು.

ಪಬ್ಲಿಕ್ ಸ್ಟೋರಿ ಯೊಂದಿಗೆ ಮಾತಾಡಿದ ದೇವೇಗೌಡರು ಜನಗಳ ಕಷ್ಟಸುಖಗಳಿಗೆ, ಇಂತಹ ವಿಪತ್ತಿನ ಸಂಧರ್ಭದಲ್ಲಿ , ನೈಸರ್ಗಿಕ ವಿಕೋಪದಲ್ಲಿ ಚನ್ನಿಗಪ್ಪನವರ ಕುಟುಂಬ ಸದಾ ನಿಂತಿದೆ. ಈಗ ಅದನ್ನು ಗೌರಿಶಂಕರ್ ಮುಂದುವರಿಸಿಕೊಂಡು ಹೋಗುತ್ತಿರುವುದು ಅತ್ಯಂತ ಸಂತೋಷದ ವಿಷಯ ಹಾಗೂ ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ನಿಜವಾದ ಜನನಾಯಕ ಎಂದು ಹೇಳಿದರು.

ಇದನ್ನು ಓದಿ: https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/ ಸದ್ದಿಲ್ಲದೆ ನಡೆದಿದೆ ನೆರವಿನ ಕೆಲಸ

ಬೆಳಗುಂಬ ಹುಡುಗರ ಬಾವಿಯ ಕತೆ…..

Publicstory. in


ತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.

ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.

ಬೆಳಗುಂಬದ ಕಾಲನಿಯ ಜ‌ನರಿಗೆ ಈ ಎರಡು ಮಾತುಗಳು ಅಕ್ಷರಶಃ ಅನ್ವಯಿಸುತ್ತವೆ.

ದಶಕಗಳಿಂದ ಈ ಬಾವಿಯ ಕಡೆ ಯಾರೂ ತಿರುಗಿ ನೋಡಿರಲಿಲ್ಲ. ನೀರಿದ್ದರೂ ಬಾವಿ ಸುತ್ತ ಮರ, ಗಿಡಗಂಟೆ ಬೆಳೆದು ಹಾಳು ಸುರಿದಿತ್ತು. ಇತ್ತ ಬೆಳಗುಂಬ ಕಾಲನಿ ಜನರಿಗೆ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರು.

ಹೀಗಾಯಿತು ನೋಡಿ‌ ಬಾವಿ

ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ ಗಮನಕ್ಕೆ ಬರುತ್ತಿದ್ದಂತೆ ಬಾವಿ ಪುನರುಜ್ಜೀವನ ಮಾಡಿ ನೀರು ಕೊಡುವ ಕನಸು ಕಂಡರು.

ಇದನ್ನು ಓದಿ. https://publicstory.in/ಈ-ಬಾವಿಗೆ-ಸೋಮವಾರ ಸಿಗಲಿದೆಯೇ ಮುಕ್ತಿ

ಕರೊನಾ, ಲಾಕ್ ಡೌನ್ ನಡುವೆಯೂ ಸೋಮವಾರ ತಮ್ಮ ಸ್ನೇಹಿತರ ತಂಡದೊಂದಿಗೆ ಬಾವಿಯ ಸ್ವಚ್ಛತೆ ಕೈಗೊಂಡರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಕಟ್ಟಿಕೊಂಡ ಹುಡುಗರ ತಂಡ ಬಾವಿಯ ಸುತ್ತ ಬೆಳೆದಿದ್ದ ಗಿಡಗಂಟೆ, ಮರ ಗಿಡ ಕಡಿದು ಬಾವಿಯ ಅಂದ ಇಮ್ಮುಡಿಗೊಳಿಸಿದ್ದಾರೆ.

ಬಾವಿ ಸ್ವಚ್ಛಗೊಳಿಸಿದ ಯುವಕರ ತಂಡ

ಬಾವಿಯಲ್ಲಿ ಹೂಳು ತೆಗೆಯುವ ಕೆಲಸ ಇದ್ದು, ಈ ಕೆಲಸ ಮಾಡಲು ಜಿಲ್ಲಾಡಳಿತ, ಪೊಲೀಸರು ಅವಕಾಶ ನೀಡಬೇಕಾಗಿದೆ. ಬಾವಿಯ ಹೂಳು ತೆಗೆದ ಬಳಿಕ ಶಾಸಕ ಗೌರಿಶಂಕರ್ ಅವರ ನೆರವಿನಲ್ಲಿ ಬಾವಿಗೆ ಪಂಪು, ಮೋಟರ್ ಬಿಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೆಳಗುಂಬ ವೆಂಕಟೇಶ್ ಪಬ್ಲಿಕ್ ಸ್ಟೋರಿ. ಇ‌ನ್ ಗೆ ತಿಳಿಸಿದರು.

ಮೇ 3ರ ನಂತರ ಲಾಕ್ ಡೌನ್ ಮುಗಿದ ಬಳಿಕ ಉಳಿದ ಕೆಲಸ ಮಾಡಲಾಗುವುದು ಎಂದರು.

ಹೇಗಿದ್ದ ಬಾವಿ ಹೇಗಾಯಿತು ಗೊತ್ತಾ…!

ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.

Publicstory. in


ತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.

ಬೆಳಗುಂಬದ ಕಾಲನಿಯ ಜ‌ನರಿಗೆ ಈ ಎರಡು ಮಾತುಗಳು ಅಕ್ಷರಶಃ ಅನ್ವಯಿಸುತ್ತವೆ.

ದಶಕಗಳಿಂದ ಈ ಬಾವಿಯ ಕಡೆ ಯಾರೂ ತಿರುಗಿ ನೋಡಿರಲಿಲ್ಲ. ನೀರಿದ್ದರೂ ಬಾವಿ ಸುತ್ತ ಮರ, ಗಿಡಗಂಟೆ ಬೆಳೆದು ಹಾಳು ಸುರಿದಿತ್ತು. ಇತ್ತ ಬೆಳಗುಂಬ ಕಾಲನಿ ಜನರಿಗೆ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರು.

ಹೀಗಾಯಿತು ನೋಡಿ‌ ಬಾವಿ

ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ ಗಮನಕ್ಕೆ ಬರುತ್ತಿದ್ದಂತೆ ಬಾವಿ ಪುನರುಜ್ಜೀವನ ಮಾಡಿ ನೀರು ಕೊಡುವ ಕನಸು ಕಂಡರು.

ಇದನ್ನು ಓದಿ. https://publicstory.in/ಈ-ಬಾವಿಗೆ-ಸೋಮವಾರ ಸಿಗಲಿದೆಯೇ ಮುಕ್ತಿ

ಕರೊನಾ, ಲಾಕ್ ಡೌನ್ ನಡುವೆಯೂ ಸೋಮವಾರ ತಮ್ಮ ಸ್ನೇಹಿತರ ತಂಡದೊಂದಿಗೆ ಬಾವಿಯ ಸ್ವಚ್ಛತೆ ಕೈಗೊಂಡರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಕಟ್ಟಿಕೊಂಡ ಹುಡುಗರ ತಂಡ ಬಾವಿಯ ಸುತ್ತ ಬೆಳೆದಿದ್ದ ಗಿಡಗಂಟೆ, ಮರ ಗಿಡ ಕಡಿದು ಬಾವಿಯ ಅಂದ ಇಮ್ಮುಡಿಗೊಳಿಸಿದ್ದಾರೆ.

ಬಾವಿ ಸ್ವಚ್ಛಗೊಳಿಸಿದ ಯುವಕರ ತಂಡ

ಬಾವಿಯಲ್ಲಿ ಹೂಳು ತೆಗೆಯುವ ಕೆಲಸ ಇದ್ದು, ಈ ಕೆಲಸ ಮಾಡಲು ಜಿಲ್ಲಾಡಳಿತ, ಪೊಲೀಸರು ಅವಕಾಶ ನೀಡಬೇಕಾಗಿದೆ. ಬಾವಿಯ ಹೂಳು ತೆಗೆದ ಬಳಿಕ ಶಾಸಕ ಗೌರಿಶಂಕರ್ ಅವರ ನೆರವಿನಲ್ಲಿ ಬಾವಿಗೆ ಪಂಪು, ಮೋಟರ್ ಬಿಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೆಳಗುಂಬ ವೆಂಕಟೇಶ್ ಪಬ್ಲಿಕ್ ಸ್ಟೋರಿ. ಇ‌ನ್ ಗೆ ತಿಳಿಸಿದರು.

ಮೇ 3ರ ನಂತರ ಲಾಕ್ ಡೌನ್ ಮುಗಿದ ಬಳಿಕ ಉಳಿದ ಕೆಲಸ ಮಾಡಲಾಗುವುದು ಎಂದರು.

3500 ಕುಟುಂಬಕ್ಕೆ ಧೈರ್ಯ ತುಂಬಿದ ಮಾಜಿ ಶಾಸಕ ಸುರೇಶಗೌಡ

Publicstory. in


ತುಮಕೂರು: ಕರೊ‌ನಾ ಭಯದಿಂದ ತತ್ತರಿಸುತ್ತಿರುವ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಂದುವರೆಸಿರುವ ಮಾಜಿ ಶಾಸಕ ಸುರೇಶ ಗೌಡರು ಸೋಮವಾರ ಸಾವಿರಾರು ಕುಟಬಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದರು.

ಹೆಬ್ಬೂರು ಹೋಬಳಿ ಕಣಕುಪ್ಪೆ, ನಿಡವವಳು ಪಂಚಾಯಿತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸಭೆ ನಡೆಸಿ ರೋಗದ ವಿರುದ್ದ ಕೈಗೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಅರಿವು ಮೂಡಿಸಿದರು.

ಸುಮಾರು 3500 ಕುಟುಂಬಕ್ಕೆ ಒಂದೇ ದಿನ ಮಾಸ್ಕ್ ವಿತರಿಸಿದರು. ಅಷ್ಟೇ ಅಲ್ಲದೇ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಹದಿಮೂರು ಬಗೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.

ಕ್ಷೇತ್ರದಲ್ಲಿ ನೀರಿನ ಸಮಸ್ಯೆಯ ಅರಿವು ಇದೆ. ಈ ಸಲ ಹೇಮಾವತಿ ನೀರಿನಿಂದ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗದ ಕಾರಣ ಅಂತರ್ಜಲವೂ ಕಡಿಮೆಯಾಗಿದೆ. ಇದರ ನಡುವೆ ಕರೊ‌ನಾ ಕಷ್ಟ ತಂದಿದೆ. ಕ್ಷೇತ್ರದ ಜನರ ಕಷ್ಟದ ಅರಿವು ಇದೆ. ಹೀಗಾಗಿಯೇ ಲಾಕ್ ಡೌನ್ ಆದಾಗಿನಿಂದಲೂ ಜನರೊಟ್ಟಿಗೆ ನಿಂತಿದ್ದೇನೆ ಎಂದರು.

ಕಣಕುಪ್ಪೆಯಲ್ಲಿ ಮಾತನಾಡಿದ ಅವರು, ಮುಂದುವರಿದ ದೇಶಗಳಲ್ಲೇ ಕರೊನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಔಷಧಿ ಕೊರತೆ ಕಾಡುತ್ತಿದೆ. ಆದರೆ ದೇಶ, ರಾಜ್ಯದಲ್ಲಿ ರೋಗ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಅರೋಗ್ಯ, ಪ್ರತಿ ದಿನದ ಜೀವನ ನಿರ್ವಹಣೆಗೆ ಯಾರಿಗೆ ಏ‌ನೇ ತೊಂದರೆಯಾದರೂ ನನ್ನ ಗಮನಕ್ಕೆ ತಂದರೆ ಬಗೆಹರಿಸಿಕೊಡುತ್ತೇನೆ. ಇದಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರ ಪಡೆಯೂ ಇದೆ. ಯಾರೂ ಹೆದರಬೇಕಿಲ್ಲ ಎಂದು ಹೇಳಿದರು.

ಉಳ್ಳದವರಿಗೆ ನೆರವು ನೀಡಬೇಕು ಎಂದು ಸಲಹೆ ನೀಡಿದರು.

ನೆಲಮಂಗಲ: ಸರ್ಕಾರ ಮೀರಿಸಿದ‌ ಸಹಾಯ ಹಸ್ತ!

Publicstory. in


Nelamangala: ಲಾಕ್ ಡೌನ್ ಕಾರಣ ಪಡಿತರದ ಮೂಲಕ ಸರ್ಕಾರ ಕೊಡುವ ಹತ್ತು ಕೆಜಿ ಅಕ್ಕಿ ಏನೇನು ಸಾಲದು‌ ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದ ನೆಲಮಂಗಲದ ಸುತ್ತಮುತ್ತಲ ಗ್ರಾಮಗಳ ಕುಟುಂಬಗಳಿಗೆ ಸಹಾಯ ಹಸ್ತವೊಂದು ಚಾಚಿದೆ.

ಭವಾನಿಶಂಕರ್ ಗ್ರೂಪ್ ನ ಎಚ್ ಬಿ ಮಂಜುನಾಥ್ ಅವರೇ ಈ ಸಹಾಯ ಹಸ್ತ ಚಾಚಿರುವರು.

ತಾಲೂಕು ಹಂಚೀಪುರದಲ್ಲಿ ಮತ್ತು ಸುತ್ತಮುತ್ತ ಗ್ರಾಮಗಳಿಗೆ ಭವಾನಿಶಂಕರ್ ಗ್ರೂಪ್ ವತಿಯಿಂದ ಎರಡು ಸಾವಿರದ ಐನೂರು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಕೆಲಸ ಸದ್ದಿಲ್ಲದೆ ಸಾಗಿದೆ.ಸರ್ಕಾರ ಎರಡು ತಿಂಗಳಿಗೆ ಹತ್ತು ಕೆಜಿ ಅಕ್ಕಿ ನೀಡಿದರೆ, ಬಿಜೆಪಿ ಮುಖಂಡರಾದ ಎಚ್ ಬಿ ಮಂಜುನಾಥ್ ಸರ್ಕಾರದ ಅಕ್ಕಿ ಜತೆಗೆ 25 ಕೆಜಿ ಅಕ್ಕಿ ಜತೆಗೆ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ.

ಇದನ್ನು ಓದಿ: /ಒಂದೇ-ದಿನ-5-ಟನ್-ತರಕಾರಿ-3‌-ಟನ್- ಬಾಳೆಹಣ್ಣು ವಿತರಣೆ

ಯಂಟಗಾನಹಳ್ಳಿ, ಸೋಲದೇವನಹಳ್ಳಿ, ಹಂಚೀಪುರ ಕೃಷ್ಣಾನಗರ ಕರೇಕಲ್ ಪಾಳ್ಯದ ಸುತ್ತಮುತ್ತಲ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಸುಮಾರು ಅಂದರೆ ಎರಡು ಸಾವಿರದ ಐನೂರು ಕುಟುಂಬಗಳಿಗೆ ಆಹಾರ ಸಾಮಗ್ರಿ ಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಭೈರೇಗೌಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಅನ್ನದಾನಯ್ಯ ಗ್ರಾಪಂ ಸದಸ್ಯ ರಾಹುಲ್ ಗೌಡ, ವಿಜಯ್ ಕುಮಾರ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲಣ್ಣ ಇತರರು ಇದ್ದರು.

ಕಷ್ಟ ಕಾಲದಲ್ಲಿ ನೂರಾರು ಜನರಿಗೆ‌‌ ನೆರವಿನ ಹಸ್ತ ಚಾಚಿರುವ ಮಂಜುನಾಥ ಅವರ ಕ್ರಮಕ್ಕೆ ಈ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

‘ಕವಿತೆ’…ಯು ಆರ್ ಅಂಡರ್ ಅರೆಸ್ಟ್!!

ಜಿ ಎನ್ ಮೋಹನ್


ಅದು ಅಪ್ಪ- ಮಗನ ಕೃತಿ ಬಿಡುಗಡೆ ಸಮಾರಂಭ. ಅಪ್ಪ ಮಹಿಪಾಲ ರೆಡ್ಡಿ ಮುನ್ನೂರು ಹಾಗೂ ಮಗ ವಿಜಯಭಾಸ್ಕರ ರೆಡ್ಡಿ ಅವರ ಕೃತಿಗಳನ್ನು ಬಿಡುಗಡೆ ಮಾಡಲು ಕಲಬುರ್ಗಿಗೆ ಹೋಗಿದ್ದೆ.

ಕಾರ್ಯಕ್ರಮ ಮುಗಿದು ವಾಪಸ್ ಹೊರಟಾಗ ‘ನಮಸ್ಕಾರ ಸರ್’ ಎನ್ನುವ ದನಿ ಕೇಳಿತು. ತಿರುಗಿ ನೋಡಿದರೆ ರೇಣುಕಾ ಹೆಳವರ. ಪೊಲೀಸ್ ಸಮವಸ್ತ್ರದಲ್ಲಿದ್ದ ಕವಯತ್ರಿ. ಸುಮಾರು 15 ವರ್ಷಕ್ಕೂ ಹೆಚ್ಚು ಕಾಲದಿಂದ ಪೊಲೀಸ್ ಇಲಾಖೆಯಲ್ಲಿರುವ ರೇಣುಕಾ ಪೊಲೀಸ್ ಆಗಿ ಎಷ್ಟು ಪರಿಚಿತರೋ ಅಷ್ಟೇ ಕವಿಯಾಗಿಯೂ ಪಾಪ್ಯುಲರ್.

ಆಕೆಯ ಕೈ ಕುಲುಕುವಾಗ ನನಗೆ ಅದೇ ಕಲಬುರ್ಗಿಯಲ್ಲಿ ಅದೇ ರೀತಿ ಕೈ ಕುಲುಕಿದ ಮತ್ತೊಬ್ಬ ಪೊಲೀಸ್ ಅಧಿಕಾರಿ ನೆನಪಿಗೆ ಬಂದರು ಅವರು- ಡಿ ಸಿ ರಾಜಪ್ಪ.

ಪೊಲೀಸ್ ಗೂ ಪತ್ರಕರ್ತರಿಗೂ ಅಂತಹ ಒಳ್ಳೆಯ ನಂಟೇನೂ ಇರುವುದಿಲ್ಲ. ಎದುರಿಗೆ ನೋಡಿದಾಕ್ಷಣ ತೆಕ್ಕೆಗೆ ಬಿದ್ದರೂ ಬೆನ್ನ ಹಿಂದೆ ಹಾವು ಮುಂಗಸಿಯಾಟ ಶಾಶ್ವತವಾಗಿ ಜಾರಿಯಲ್ಲಿಟ್ಟಿರುತ್ತಾರೆ. ಅಂತಹದ್ದರ ನಡುವೆಯೂ ಒಂದು ರಾತ್ರಿ ಕಲಬುರ್ಗಿಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಡಿ ಸಿ ರಾಜಪ್ಪ ‘ಬನ್ನಿ ನಿಮಗೊಂದು ವಿಶೇಷ ಕೇಸ್ ಕಥೆ ಹೇಳ್ತೀನಿ’ ಎಂದು ಊರಾಚೆ ಇರುವ, ಕತ್ತೆತ್ತಿದರೆ ಆಕಾಶ ಕಾಣುತ್ತಿದ್ದ ಡಾಬಾದಲ್ಲಿ ಕೂರಿಸಿಕೊಂಡರು.

ನಾನು ಕುತೂಹಲದಿಂದ ಅವರ ಮುಖ ನೋಡಿದೆ. ‘ಏನ್ ಗೊತ್ತೇನ್ರೀ, ನಮ್ಮ ಪೊಲೀಸ್ ಒಬ್ಬ ಬಂದು ನನ್ನತ್ರ ಒಂದು ಕಂಪ್ಲೇಂಟ್ ಬರೆದುಕೊಟ್ಟಿದ್ದಾನೆ’ ಅಂದ್ರು.

‘ಅರೆ! ಪೊಲೀಸ್ ಕಂಪ್ಲೇಂಟ್ ಕೊಡ್ತಾನೆ ಅಂದ್ರೆ..’ ನನ್ನ ಪತ್ರಕರ್ತ ಕಿವಿ ಚುರುಕಾಯಿತು. ‘ಅದೇನು ಸಾರ್ ವಿಷಯ’ ಅಂದೆ. ‘ಥೋ.. ವಿಚಿತ್ರ ಕಣ್ರೀ ಒಂದು ಕಳ್ಳತನದ ಕಂಪ್ಲೇಂಟ್ ಅದು. ರಿಜಿಸ್ಟರ್ ಮಾಡಿಕೊಳ್ಳುವ ಹಾಗೂ ಇಲ್ಲಾ, ತನಿಖೆಗೆ ಕೈಗೆತ್ತಿಕೊಳ್ಳುವ ಹಾಗೂ ಇಲ್ಲ. ಹೋಗಲಿ ಅಂದ್ರೆ ಕಂಪ್ಲೇಂಟ್ ಸುಳ್ಳೂ ಅಲ್ಲ’ ಎನ್ನುತ್ತಾ ನನ್ನ ಮುಂದೆ ಒಗಟು ಹರಡತೊಡಗಿದ್ದರು.

ಆ ವೇಳೆಗಾಗಲೇ ಪೊಲೀಸ್ ಭಾಷೆಯನ್ನು ಬಿಡಿಸಿ ನನಗೆ ಸಾಕಷ್ಟು ಅನುಭವವಿತ್ತು. ಆದರೆ ಈ ಕೇಸ್ ಏನು ಎಂದು ತಲೆಕೆಳಗಾದರೂ ಅರ್ಥವಾಗಲಿಲ್ಲ.

ಆಗ ರಾಜಪ್ಪ ಅವರೇ ಬಾಯಿಬಿಟ್ಟರು. ‘ಆ ಪೊಲೀಸ್, ಆಗಸದಲ್ಲಿ ಚಂದ್ರನ ಕಳುವಾಗಿದೆ ಅಂತ ದೂರು ಕೊಟ್ಟಿದ್ದಾನೆ ಕಣ್ರೀ’ ಅಂದರು.
ನಾನು ‘ಹಾಂ’ ಎಂದು ಒಂದಿಷ್ಟು ಜಾಸ್ತಿಯೇ ಬಾಯಿ ಬಿಟ್ಟೆನೇನೋ.. ಅವರು ಗಂಭೀರವಾಗಿ ಸಮಸ್ಯೆ ಮುಂದಿಡುತ್ತಾ ಹೋದರು.

‘ಅವನು ಮಹಾಗಾಂವ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್. ಅವನಿಗೆ ನೈಟ್ ಡ್ಯೂಟಿ. ರಾತ್ರಿ ರೌಂಡ್ಸ್ ಮಾಡುವಾಗ ಆಕಾಶ ನೋಡಿದ್ದಾನೆ. ಚಂದ್ರ ಇಲ್ಲ. ಮತ್ತೆ 15 ದಿನ ಬಿಟ್ಟು ನೋಡಿದ್ದಾನೆ ಆಗಲೂ ಇಲ್ಲ. ಸರಿ ಬಂದವನೇ ನನ್ನೆದುರಿಗೆ ಕಂಪ್ಲೇಂಟ್ ಬರೆದುಕೊಟ್ಟಿದ್ದಾನೆ’ ಎಂದರು. ನಾನು ಇನ್ನೂ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ 30ನೆಯ ಪುಟದಲ್ಲಿಯೇ ಇದ್ದವಂತೆ ತುಂಬು ಗೊಂದಲದಲ್ಲಿದ್ದೆ.

ಆಗ ಡಿ ಸಿ ರಾಜಪ್ಪ ಅವರೇ ನಗುತ್ತಾ ಬಾಯ್ಬಿಟ್ಟರು- ‘ಊರಲ್ಲಿ ಕಳ್ಳತನ ಆಗದಂತೆ ನೋಡಿಕೊಳ್ಳಲು ಅವನಿಗೆ ಬೀಟ್ ಹಾಕಿದ್ದೆ. ಹುಣ್ಣಿಮೆಯಲ್ಲಿ ತುಂಬು ಚಂದ್ರ ಇರುವಾಗ ಎಲ್ಲಾದ್ರೂ ಕಳ್ಳತನ ಆಗುತ್ತಾ.. ಹಾಗಾಗಿ ಅಮಾವಾಸ್ಯೆ ದಿನವೇ ಇವನಿಗೆ ಡ್ಯೂಟಿ. ಅಮಾವಾಸ್ಯೆ ದಿನ ಚಂದ್ರ ಇಲ್ಲ ಅಂತ ಕಂಪ್ಲೇಂಟ್ ಕೊಡಬೇಕಾದ್ರೆ ಅವನು ಪೊಲೀಸ್ ಯೂನಿಫಾರ್ಮ್ ನಲ್ಲಿರೋ ಕವೀನೇ ಆಗಿರ್ಬೇಕು’ ಅಂದ್ರು.

‘ಅದು ಸರಿ ಕಂಪ್ಲೇಂಟ್ ಮೇಲೆ ಏನು ಕ್ರಮ ಕೈಗೊಂಡ್ರಿ’ ಅಂತ ಕೇಳಿದೆ. ‘ಕವಿಗಳ ಕಂಪ್ಲೇಂಟ್ ಬಗೆಹರಿಸೋದು ತುಂಬಾ ಸುಲಭ. ಆತನನ್ನು ಎದುರಿಗೆ ಕೂರಿಸಿಕೊಂಡು, ಡಿಪಾರ್ಟ್ಮೆಂಟ್ ನ ಎಲ್ಲಾ ಪೊಲೀಸರನ್ನೂ ಕರೆಸಿ, ಅವನ ಚಂದ್ರನ ಕಳ್ಳತನವಾಗಿದೆ ಅನ್ನೋ ಕವಿತೆ ಓದಿಸಿ, ಟೀ ಕೊಟ್ಟು ಕಳಿಸಿದೆ’ ಎಂದು ಜೋರಾಗಿ ನಕ್ಕರು.

ಡಿ ಸಿ ರಾಜಪ್ಪ ಅಲ್ಲಿಗೆ ಸುಮ್ಮನಾಗಿಬಿಡಬಹುದಿತ್ತು. ಆದರೆ ಅವರೊಳಗೂ ಒಬ್ಬ ಕವಿ ಇದ್ದನಲ್ಲ ಅವನು ಸುಮ್ಮನಿರಲು ಬಿಡಲಿಲ್ಲ.

ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲಕಿ ಪೊಲೀಸ್ ಸ್ಟೇಷನ್ ನಲ್ಲಿಯೇ ಮುಗುವಿಗೆ ಜನ್ಮ ನೀಡಿದ್ದು, ಆಟದ ಗೊಂಬೆ ಇರಬೇಕಾದ ಜಾಗದಲ್ಲಿ ನಿಜ ಕೂಸೇ ಇರುವುದು, ಸಾಗರದ ಸಮೀಪ ಕೋಮು ಗಲಭೆಯಲ್ಲಿ ಭಯ ಬಿದ್ದು ಓಡುತ್ತಿದ್ದ ತಾಯಿಯಕೈಯಿಂದ ಗದ್ದೆಯಲ್ಲಿ ಮಗು ಜಾರಿ ಹೋಗಿದ್ದು, ಹಿಂದೆ ಬರುತ್ತಿದ್ದ ತಂದೆ ಗೊತ್ತೇ ಆಗದೆ ಮಗುವನ್ನು ತುಳಿದು ಓಡಿದ್ದೂ.. ಹೀಗೆ ಎಷ್ಟೋ ಘಟನೆಗಳನ್ನು ಕವಿತೆಯಾಗಿಸುತ್ತಿದ್ದರು.

ಇದೆಲ್ಲಾ ಕೇಳಿ ನಾನು ಕಲಬುರ್ಗಿಯ ‘ಹತ್ತೂ ಸಮಸ್ತರನ್ನು’ ಒಟ್ಟುಗೂಡಿಸಿ ನನ್ನ ಮನೆಯಲ್ಲಿ ಚಹಾ, ಚುರಮುರಿ ಜೊತೆ ರಾಜಪ್ಪನವರ ಕವಿತೆ ಓದಿಸಿದೆ. ಪೊಲೀಸ್ ಸಮವಸ್ತ್ರ ಬದಿಗಿಟ್ಟು, ಲಾಠಿ ಇಲ್ಲದೆ ಬಂದಿದ್ದ ಅವರ ಸಂಕೋಚವನ್ನು ನೀವು ನೋಡಬೇಕಿತ್ತು. ರಾಜಪ್ಪನವರು ‘ಸಮವಸ್ತ್ರದೊಳಗೊಂದು ಸುತ್ತು’ ಬಂದುಬಿಟ್ಟರು.

ಅಲ್ಲಿಂದ ಅವರು ಸುಮ್ಮನೆ ಕೂರಲೇ ಇಲ್ಲ. ಗಲಭೆಗಳಲ್ಲಿ ಎಗ್ಗಿಲ್ಲದೆ ಲಾಠಿ ಬೀಸುವವರ, ಕೋಮು ಗಲಭೆಗಳಲ್ಲಿ ತಾವೂ ಏಟು ತಿಂದು ರಕ್ತ ಸುರಿಸುವವರ, ಪ್ರತೀ ದಿನ ಕೊಲೆ ಸುಲಿಗೆ ನೇಣು ಅತ್ಯಾಚಾರ ಕಾಣುವವರ ಒಳಗೂ ಆಡುವ ಕವಿತೆಯನ್ನು ಕಂಡರು.

ಅಲ್ಲಿಂದ ಶುರುವಾಯಿತು ಅವರ ‘ಸಮವಸ್ತ್ರದೊಳಗೊಂದು ಸುತ್ತು’ ಅಭಿಯಾನ. ರಾಜ್ಯದ ಎಲ್ಲೆಡೆ ಕವಿತೆ ಬರೆವ ಹುಚ್ಚಿದ್ದವರನ್ನೆಲ್ಲ ಹುಡುಕತೊಡಗಿದರು. ಇಡೀ ಇಲಾಖೆ ಮುಸಿ ಮುಸಿ ನಕ್ಕಿತು. ಆದರೆ ರಾಜಪ್ಪ ಸುಮ್ಮನೆ ಕೂರಲಿಲ್ಲ. ಅದರ ಫಲವೇ.. ಟ್ರಾಫಿಕ್, ರೈಲ್ವೆ, ವೈರ್ ಲೆಸ್, ಫಿಂಗರ್ ಪ್ರಿಂಟ್, ಕೆ ಎಸ್ ಆರ್ ಪಿ ಹೀಗೆ ಎಲ್ಲಾ ವಿಭಾಗದಿಂದಲೂ ನೂರಕ್ಕೂ ಹೆಚ್ಚು ಕವಿಗಳು ಕಂಡರು. ಪೊಲೀಸ್ ಕಾನ್ಸ್ಟೇಬಲ್ ಇಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಯವರೆಗೆ ಕವಿಗಳು ಸಿಕ್ಕರು.

ಫಲ, ರಾಜ್ಯಮಟ್ಟದ ಪೊಲೀಸ್ ಕವಿ ಸಮ್ಮೇಳನ. ಶಿವಮೊಗ್ಗ, ಬಳ್ಳಾರಿ, ಬೆಳಗಾವಿ ಹೀಗೆ ಮೂರು ಸುತ್ತು ರಾಜ್ಯ ಮಟ್ಟದ ಪೊಲೀಸ್ ಕವಿಗೋಷ್ಟಿಗಳಾಗಿವೆ. ಇದರ ಸಂಕಲನಗಳೂ ಬಂದಿವೆ.

ಹೌದಲ್ಲಾ, ಪಿ ಎಸ್ ರಾಮಾನುಜಂ, ಅಜಯ್ ಕುಮಾರ್ ಸಿಂಗ್, ವಿಜಯ ಸಾಸನೂರು, ಎಸ್ ಕೃಷ್ಣಮೂರ್ತಿ, ರವಿಕಾಂತೇಗೌಡ.. ಹೀಗೆ ಅಧಿಕಾರಿಗಳಲ್ಲೇ ಎಷ್ಟೊಂದು ಬರಹಗಾರರಿದ್ದರು ಎಂದು ನಾನು ಲೆಕ್ಕ ಹಾಕುತ್ತಾ ಕೂತೆ.

ಆಗಲೇ ರಾಜಪ್ಪ, ‘ಮೋಹನ್, ಕನ್ನಡದ ಮೊಟ್ಟಮೊದಲ ಸಾಮಾಜಿಕ ಕಾದಂಬರಿ ಯಾವುದು ಗೊತ್ತಾ?’ ಎಂದರು.

‘ಸಾರ್, ಅದು ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ ಅಲ್ವೇ’ ಎಂದೆ. ನೆನಪಿರಲಿ ಮೋಹನ್ ಅದನ್ನು ಬರೆದ ಗುಲ್ವಾಡಿ ವೆಂಕಟರಾಯರು ಒಬ್ಬ ಪೊಲೀಸ್. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ ಆಯಾಮ ದೊರೆತದ್ದೇ ಪೊಲೀಸರಿಂದ..’ ಎಂದರು.

ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೇನೆ..

ಕಿರೀಟ ಸುಂದರಿಯ ಕ್ರೂರ ನೋಟ…

0

ಮನು ಹಳೆಯೂರ್


ಕಿರೀಟ ಸುಂದರಿಯ
ಕ್ರೂರ ನೋಟಕ್ಕೆ
ಜಗವೆಲ್ಲಾ ಕಕ್ಕಾಬಿಕ್ಕಿ.

ಸಾರ್ಸ್ ನ ಇನ್ನೊಂದು
ರೂಪ, ಸಾರಿಸುತ್ತಿದೆ
ಜಗವನ್ನೆಲ್ಲ ಕರುಣೆಯಿಲ್ಲದೆ.


ನೀವು ಬರೆಯಿರಿ. ನಿಮ್ಮೂರಿನ ಸಾಧಕರ ಪರಿಚಯ ಮಾಡಿಕೊಡಿ: ವಾಟ್ಸಾಪ್ ನಂ. 9844817737


ಯಾರದೊ ನಾಲಿಗೆ
ಚಪಲಕ್ಕೆ, ಒಣಗುತ್ತಿದೆ
ನಮ್ಮ ಗಂಟಲು ಸೀನು ಕೆಮ್ಮಿಂದ.

ಹೆಮ್ಮಾರಿ ಬಂದು
ಕುಳಿತಿದ್ದಾಳೆ ಮನೆಯೊಳಗೆ
ಚಿಂತಿಸುವ ಪ್ರೌಢಿಮೆಯಿಂದ.

ಕೈ ಆಟ ಕಣ್ಣ ನೋಟದೆಡೆಗೆ
ಇರಲಿ ಎಚ್ಚರ, ಕೂಡದಿರೋಣ
ಹೆಚ್ಚು ಜನ ಬರದಿರಲಿ ಕರೋನ.


ವಿಜ್ಞಾನದ ಶಿಕ್ಷಕರಾಗಿರುವ ಮನು ಹಳೆಯೂರ್ ಉತ್ತಮ ಬರಹಗಾರರು ಹೌದು. ವರ್ತಮಾನದ ಜಗದ ತಲ್ಲಣಗಳಿಗೆ ಮುಖಾಮುಖಿಯಾಗುವ ಮೂಲಕ ಅವರ ಕವನಗಳು ಕೌರ್ಯದ ಭೀಕರತೆಯನ್ನು ತೆರೆದಿಡುತ್ತವೆ.

ಹೊನ್ನುಡಿಕೆಗೆ ದೇವೇಗೌಡರು

ಹೆತ್ತೇನಹಳ್ಳಿ ಮಂಜುನಾಥ


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮನೆ ಮನೆಗೆ ಆಹಾರ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲ‌ನೆ ನೀಡಲು ಸೋಮವಾರ (ಏ.20)‌ರಂದು ಹೊನ್ನುಡಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬರಲಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಗೌರಿಶಂಕರ್ ರವರು ಕ್ಷೇತ್ರದ 50000 ಕುಟುಂಬಗಳಿಗೆ ತಿಂಗಳಿಗಾಗುವ ಎಲ್ಲಾ ದಿನಸಿಯನ್ನು ನೀಡಲು ಮುಂದಾಗಿದ್ದಾರೆ. ಇದಕ್ಕೆ ಎಚ್.ಡಿ ದೇವೆಗೌಡರು ಚಾಲನೆ ನೀಡಲಿದ್ದಾರೆ.

ಅಕ್ಕಿ ಪ್ಯಾಕ್ ಮಾಡುತ್ತಿರುವ ಜೆಡಿಎಸ್ ಕಾರ್ಯಕರ್ತರು

ಕೊರೋನಾ ಶತಮಾನ ಕಂಡ ಅತ್ಯಂತ ಭೀಕರ ರೋಗ. ದೇಶದ ಆರ್ಥಿಕ ಕುಸಿತ, ಬರಗಾಲದ ಹಿನ್ನೆಲೆ, ಉದ್ಯೋಗದ ಕೊರತೆ ಜನರನ್ನ ಕಂಗಾಲಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಜವಬ್ದಾರಿಯುತ ನಾಗರಿಕನೂ ಕೂಡಾ ಮಾನವೀಯತೆ ಮೆರೆಯಬೇಕಾಗಿದೆ.

ಕರ್ನಾಟಕ ಲಾಕ್ ಡೌನ್ ಆದಾಗಿನಿಂದ ನನ್ನ ಕ್ಷೇತ್ರದ ಜನತೆ ಎಂತಹ ಪರಿಸ್ಥಿತಿ ಬಂದರೂ ಹಸಿವಿನಿಂದ, ಆರೋಗ್ಯದ ಸಮಸ್ಯೆಯಿಂದ ಬಳಲಬಾರದು. ಇದು ನನ್ನ ಜವಬ್ದಾರಿ ಮತ್ತು ಕರ್ತವ್ಯ ಎಂದು ಭಾವಿಸಿ ನಿರ್ವಹಿಸುತ್ತಿದ್ದೇನೆ ಎಂದು ಶಾಸಕ ಗೌರಿಶಂಕರ್ ತಿಳಿಸಿದರು.


ಸಾಮಾಜಿಕ ಅಂತರ ಕಾಪಾಡಿ. ಅನಗತ್ಯವಾಗಿ ಜನರು ಮನೆಯಿಂದ ಹೊರಬರಬಾರದು.‌ ಕರೊನಾ ತಡೆಗಟ್ಟಿ. ಇದು ಪಬ್ಲಿಕ್ ಸ್ಟೋರಿ ಕಾಳಜಿ


ಇಲ್ಲಿಯವರೆವಿಗೂ ರೈತರ ಬೆಳೆಗಳನ್ನ ಖರೀದಿಸಿ ಅಲ್ಲೇ ಹಂಚುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಮೊದಲ ದಿನದಿಂದಲೂ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ ಅನ್ನ ದಾಸೋಹವನ್ನು ಮಾಡಲಾಗುತ್ತಿದೆ. ಸೇವಾ ನಿರತ ಸರ್ಕಾರಿ ನೌಕರರಿಗೆ ಊಟ, ಮಾಸ್ಕ್, ಗ್ಲೌಸ್ ಮತ್ತು ಮತ್ತು ಸ್ಯಾನಿಟೈಸರ್ ನೀಡಲಾಗಿದೆ ಎಂದರು.

ಇನ್ನುಳಿದಂತೆ ನನ್ನ ಕ್ಷೇತ್ರದ ಜನಗಳಿಗೆ ಯಾವುದೇ ಸಮಸ್ಯೆ ಆಗದಂತೆ ದಿನಸಿ ಮತ್ತು ಮುಂಜಾಗೃತ ಕ್ರಮವಾಗಿ ಮಾಸ್ಕ್, ಹ್ಯಾಂಡ್ ವಾಷ್, ಮತ್ತು ಸ್ಯಾನಿಟೈಸರ್ ನೀಡಲಾಗಿದೆ ಎಂದು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಬಿಳಿಯ ಪಾರಿವಾಳ

0

ಮನು ಹಳೆಯೂರ್


ಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ಕೆಳಗೆ ಕಂಡೆ ಸಾವಿರ ಸಾವಿರ
ಹೂಗಳು ಕೆಲವು ಹಸಿರು
ಹಲವು ಕೇಸರಿ, ಅವುಗಳೆಡೆ
ಮೋಹಗೊಂಡೂ ಕೂರಲೊರಟೆಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ದೂರದಿಂದ ಚೆಂದ ಕಂಡ ಹೂಗಳು
ಬಳಲಿದಂತೆ ಕಾಣಲು ಚುಕ್ಕೆ ರೋಗದಿ
ಮಾತಿಗೆಳೆಯಲು ಸನಿಹದಿ ಪರಿವೆಯಿಲ್ಲ
ಅವುಗಳಿಗೆ, ಕೆಂಪು ಬಣ್ಣದ ಮೋಹ ಅವಕೆಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥ನನ್ನೆಡಗೂ ಎರಚಿದವು ಕೆಂಬಣ್ಣವ
ಮೇಲೆ ಮೇಲೆ ಹಾರಿದೆ ತಪ್ಪಿಸಿಕೊಳ್ಳಲು
ರೆಕ್ಕೆ ಪುಕ್ಕಗಳು ಅಂತೂ ಕೆಂಪಿನಿಂದ
ಕಪ್ಪಿಟ್ಟವು, ಬೇಕಾಗಿದೆ ನನಗೆ ಮೊದಲ ಬಿಳಿ.ಬಿಳಿಯ ಪಾರಿವಾಳ ನಾನು, ಹಾರುತ
ಸಾಗುತಿರುವೆ ಜಗವ ಸುತ್ತಲೆಂದು॥


ಮನು ಹಳೆಯೂರ್, ವಿಜ್ಞಾನ ಶಿಕ್ಷಕರು. ಸರ್ಕಾರಿ ಪ್ರೌಢಶಾಲೆ, ಬೋರನಕಣಿವೆ

ಈ ಬಾವಿಗೆ ಸೋಮವಾರ ಸಿಗಲಿದೆಯೇ ಮುಕ್ತಿ!

Publicstory. in


ತುಮಕೂರು: ಎಲ್ಲರೂ ಕೊರೊನಾ ಕಾರಣದಿಂದ ಮನೆಯೊಳಗೆ ಸೇರಿದ್ದಾರೆ. ಲಾಕ್ ಡೌನ್ ನಡುವೆಯೂ ತುಮಕೂರು ನಗರದ ಈ ಬಾವಿಗೆ ಸೋಮವಾರ ಮುಕ್ತಿ ಸಿಗಲಿದೆಯೇ ಎಂಬ ಕುತೂಹಲ ಗರಿಗೆದರಿದೆ.

ನೂರಾರು ಜನರ ಹಸಿವು, ಬಾಯಾರಿಕೆಯನ್ನು ಈ ಬಾವಿ ನೀಗಿಸಿದೆ. ಬಾವಿಯನ್ನು ಯಾರು ಕಟ್ಟಸಿದರು ಎಂಬುದು ಯಾರಿಗೂ ಗೊತ್ತಿಲ್ಲ. ಬೇಸಿಗೆಯಲ್ಲೂ ಬತ್ತದ ಬಾವಿ ಈಗ ಕುತೂಹಲದ ಕೇಂದ್ರಬಿಂದುವಾಗಿದೆ.


ಕಾರ್ಟೂನ್ ಕಾರ್ನರ್; ಮುಸ್ತಫಾ ಕೆ.ಎಂ. ರಿಪ್ಪನ್ ಪೇಟೆ


ಸುರಂಗದಂತೆ ಕಾಣುವ ಈ ಕಲ್ಲುಬಾವಿಯನ್ನು ನೋಡುವುದೇ ಒಂದು ಚೆಂದ. ಅಂದ ಹಾಗೆ ಈ ಭಾವಿ ತುಮಕೂರು ನಗರದ ಬೆಳಗುಂಬದಲ್ಲಿದೆ. ತನ್ನ ಒಡಲಲ್ಲಿ ನೀರು ಇಟ್ಟುಕೊಂಡಿದೆ. ಸಮುದ್ರದ ಜತೆ ನಂಟು ಉಪ್ಪಿಗೆ ಬಡತನ ಎಂಬ ಗಾದೆಯಂತೆ ಮನೆ ಬುಡದಲ್ಲೇ ಬಾವಿಇದ್ದರೂ ಈ ಬಡಾವಣೆಯ ಜನರು ಕುಡಿಯುವ ನೀರಿಗಾಗಿ ಹಾತೊರೆಯುತ್ತಿದ್ದಾರೆ.

ಬೆಳಗುಂಬ ವೆಂಕಟೇಶ್

ಕಾರಣ; ಬಾವಿ ಇದ್ದರೂ ಅದನ್ನು ಸ್ಚಚ್ಛ ಮಾಡಿ ನೀರು ಬಳಸಿಕೊಳ್ಳದ ಆಡಳಿತದ ಕುರುಡತನ.
ಈಗ ಈ ಬಾವಿ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಅವರ ಕಣ್ಣಿಗೆ ಬಿದ್ದಿದೆ.

ದಿನಾಲೂ ಒಬ್ಬರಲ್ಲ ಒಬ್ಬರು ನೀರಿನ ಸಮಸ್ಯೆ ಹೇಳುತ್ತಲೇ ಇರುತ್ತಾರೆ. ಈಚೆಗೆ ಈ ಭಾವಿ ನನ್ನನ್ನು ಸೆಳೆಯುತ್ತಲೇ ಇತ್ತು. ಹಲವು ನಗರಗಳಲ್ಲಿ ಈಚೆಗೆ ಹಳೆ ಬಾವಿಗಳನ್ನು ಸ್ಚಚ್ಛ ಮಾಡಿ ಕುಡಿಯುವ ನೀರು ಕೊಟ್ಟ ಬಗ್ಗೆ ಓದಿದ್ದೇನೆ. ಅದನ್ನು ಇಲ್ಲಿ ಏಕೆ ಜಾರಿಗೊಳಿಸಬಾರದು ಎಂದು ಹೊಳೆಯಿತು. ಹೀಗಾಗಿ ಸೋಮವಾರ (ಏ.20) ಬಾವಿ ಸ್ಚಚ್ಛತೆಗೆ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದರು.

ಹುಡುಗರೆಲ್ಲ ಸೇರಿಕೊಂಡು ಬಾವಿಯ ಹೂಳು, ಗಿಡಗಂಟೆ ತೆಗೆದು ಸರಿಪಡಿಸುತ್ತೇವೆ. ನಂತರ ಇದೇ ನೀರನ್ನು ಬಡಾವಣೆಗೆ ನೀಡಲು ಕಾರ್ಯಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಲಾಕ್ ಡೌನ್ ನಡುವೆ ಬಾವಿಗೆ ಕಾಯಕಲ್ಪ ಸಿಗುತ್ತಿರುವುದು ಈ ಬಡಾವಣೆಯ ಜನರಲ್ಲಿ ಸಂಭ್ರಮ ತರಿಸಿದೆ. ಬಾವಿಗೆ ಹೋಗಲು ಇದ್ದ ಕಿರಿದು ರಸ್ತೆಯ ಒತ್ತುವರಿಯು ಆಗಿದೆ. ಅದನ್ನು ಸಹ ಈ ತಂಡ ತೆರವುಗೊಳಿಸಲಿದೆ.

ಬಾಯಾರಿಕೆಯ ಹಸಿವು ನೀಗಿಸುವ ಕೆಲಸಕ್ಕಿಂತ ದೊಡ್ಡ ಧರ್ಮದ ಕೆಲಸ ಬೇರೇನಿದೆ ಎನ್ನುತ್ತಾರೆ ಇಲ್ಲಿನ ಜನರು.