Thursday, February 26, 2026
Google search engine
Home Blog Page 255

ತುಮಕೂರು: ಲಾಕ್ ಡೌನ್ ನಡುವೆ ಮಾರಾಟ-3 ಬಾರ್ ಗಳ ಲೈಸನ್ಸ್ ರದ್ದು

ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ


ತುಮಕೂರು: ಲಾಕ್ ಡೌನ್ ಇದ್ದರೂ ಮದ್ಯ ಮಾರಾಟ ಮಾಡಿರುವ ಆರೋಪದಲ್ಲಿ ಜಿಲ್ಲೆಯಲ್ಲಿ ಮೂರು ಬಾರ್ ಗಳ ಸನ್ನದ್ದು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲೆಯ ತುಮಕೂರು ತಾಲೂಕು ಮಲ್ಲಸಂದ್ರದಲ್ಲಿರುವ ಗಣೇಶ್ ಬಾರ್ ಅಂಡ್ ರೆಸ್ಟೋರೆಂಟ್, ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿಯಲ್ಲಿರುವ ಹನುಮನ್ ವೈನ್ಸ್,, ಕುಣಿಗಲ್ ತಾಲೂಕು ಉಜನಿ ಗ್ರಾಮದಲ್ಲಿರುವ ವೆಂಕಟೇಶ್ವರ ಬಾರ್ ಅಂಡ್ ರೆಸ್ಟೋರೆಂಟ್ ಸನ್ನದ್ದುಗಳ ಮಾಲೀಕರು ಸನ್ನದ್ದು ಷರತ್ತು ಉಲ್ಲಂಘಿಸಿ ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜಿಲ್ಲಾಧಿಕಾರಿ ಆದೇಶಿದ್ದಾರೆ.

ಆ ದಿನಗಳು…

0

ಮಮತಾ ಗೌಡ


ನಾವೆಲ್ಲರೂ ಕಳೆದು ಹೋದ ಕ್ಷಣಗಳನ್ನ ತುಂಬಾ ಮಿಸ್ ಮಾಡಕೋತಿವಿ. ಪ್ರತಿಯೊಬ್ಬರಿಗೂ ಈ ಅನುಭವ ಕನಿಷ್ಟ ಪಕ್ಷ ನೂರು ಬಾರಿ ಆಗರುತ್ತದೆ. ಆ ದಿನಗಳು ನಮ್ಮ ಕಣ್ಣಾಮುಂದೆ ಬಂದಾಗ ಒಮ್ಮೆ ನಮಗೆ ಖುಷಿ ಅನಿಸುತ್ತದೆ.

ನಮ್ಮ ಶಾಲೆ, ನನ್ನ ಅಜ್ಜನ ಮನೆ, ನಮ್ಮ ಊರು, ನಮ್ಮ ಸ್ನೇಹಿತರು, ನಮ್ಮೂರ ಜಾತ್ರೆ, ನಮ್ಮ ತೋಟ.. ಹೀಗೆ ಏನೇನು ನೆನಪಿಸುವುದೇ ಆ ದಿನಗಳು. ಆ ದಿನಗಳ ಬಗ್ಗೆ ನನ್ನ ನೆನಪಲ್ಲಿ ನೂರು ವಿಷಯಗಳಿವೆ ಮತ್ತೆ ನಿಮಗೆ?

ನಾವು ಚಿಕ್ಕವರಿದ್ದಾಗ ಅಜ್ಜಿ ಹೇಳೋ ಕಥೆಗಳು, ಅಜ್ಜನ ತುಂಟಾಟ, ಅಂಚಿನ ಮನೆ, ಬೆಳದಿಂಗಳ ಊಟ, ಬೇಸಿಗೆ ರಜೆ, ರಜೆಯಲ್ಲಿ ಕದ್ದು ತಿಂದ ಮಾವು, ಸೀಬೆ – ಹಾಗೇ ತೋಟದಲ್ಲಿ ಒಂದು ಮರಕ್ಕೆ ಹಗ್ಗ ಕಟ್ಟಿ ಉಯ್ಯಾಲೆ, ಸೈಕಲ್ ಕಲಿತ, ಮಾಜ- ಮಾಡಿ ಆಡಿದ ಕ್ಷಣಗಳನ್ನು ಮರೆಯಲು ಸಾಧ್ಯವೇ?

ಒಮ್ಮೆ ನೆನಪಿಸಿಕೊಳ್ಳಿ.. ಪ್ರಪಂಚ ಅತಿ ಸುಂದರ ಅನಿಸುತ್ತಿತ್ತು. ನನಗೆ ಸದಾ ನೆನಪಲ್ಲಿ ಉಳಿಯುವುದು ನಮ್ಮೂರ ಜಾತ್ರೆ . ನಿಮಗೆ?

ನನ್ನ ತಾತ ನಾನಾ ರೋಲ್ ಮಾಡೆಲ್ ಆಗಿದ್ದರು (ಇಂದು ಅವರಿಲ್ಲ), ಅವರು ಸದಾ ನನಗೆ ಸ್ಪೂರ್ತಿ ತುಂಬುವ ತಾಯಿಯಾಗಿದ್ದರು.

ನನಗೆ ನೆನಪಲ್ಲಿ ಉಳಿಯುವುದು ನನ್ನ ತಾತ ಬೆಂಗಳೂರು ಅಲ್ಲಿ ನೆಲಸಿದ್ದರು. ನಾವು ಊರಲ್ಲಿ ಇದ್ದೆವು. ಪ್ರತಿ ಬಾನುವಾರ ನಮ್ಮ ತಾತ ನಮ್ಮ ಊರಿಗೆ ಬರುತಿದ್ದರು. ಆ ದಿನಗಳಲ್ಲಿ ನಾನು ನನ್ನ ತಂಗಿಯರು ರಾಜಕುಮಾರಿಗಳಂತೆ ಬೆಳೆದಿದ್ದು ನನ್ನ ತಾತನ ಪರಿಶ್ರಮದಿಂದ.

ನಾನು ಸ್ವಲ್ಪ ಬುದ್ದಿ ಬರುವಷ್ಟರಲ್ಲಿ ನಾನು ನನ್ನ ತಾತನ ಮನೆಗೆ ಬಂದು ಬೆಂಗಳೂರು ಅಲ್ಲಿ ನನ್ನ ಶಾಲೆ, ಆವಾಗ ಇಷ್ಟೆಲ್ಲಾ ಬೆಂಗಳೂರು ದಟ್ಟಣೆ ಇರಲಿಲ್ಲ ನಾವು ಈಗಿನ ಮಹಾದೇವಪುರ ರಿಂಗ್ರೋಡ್ಗಳಲ್ಲಿ ಆಟ ಆಡಿದ್ದು ನನಗೆ ನೆನಪಿದೆ, ಇಂದು ಅದು ಬಹುತೇಕ ದಟ್ಟಣೆ ಟ್ರಾಫಿಕ್ ಜಾಮ್ಗಳಲ್ಲಿ ಒಂದು. ಪ್ರಪಂಚ ಅತಿ ಬೇಗನೆ ಬೆಳೆದು ನಿಂತಿದೆ- ದೊಡ್ಡ ದೊಡ್ಡ ಮಾಲ್, ರಿಂಗ್ ರೋಡ್, ದೊಡ್ಡ ದೊಡ್ಡ ಶಾಲೆಗಳು, ಕಂಪೆನಿ – ಇನ್ನೂ ಅನೇಕ. ಇಂದು ಮೊದಲಿನಂತೆ ಏನು ಇಲ್ಲ. ಬದಲಾವಣೆ ಪ್ರಕೃತಿ ನಿಯಮ ಎಂದು ಸುಮ್ಮನಿರಬೇಕಾಷ್ಟೆ.

1990 ರಲ್ಲಿನ ಎಲ್ಲಾ ಮಕ್ಕಳಿಗೂ ನನ್ನದೊಂದು ಛಾಲೆಂಜ್ ನೀವೆಲ್ಲ ನಿಮ್ಮ ಬಾಲ್ಯದ ದಿನಗಳನ್ನು ಒಮ್ಮೆ ನೆನಪಿಸುಕೊಳ್ಳಿ.. ಅದೆಷ್ಟು ಸುಂದರ ಆ ದಿನಗಳು ಕೇವಲ ಆಟ – ಪಾಠಗಲಿಗಷ್ಟೇ ಸೀಮಿತ ನಮ್ಮ ಜೀವನ. 10 ಗಂಟೆಗೆ ಶಾಲೆ,ನಂತರ ಆಟ – ಬೇಸಿಗೆ ರಜೆ, ಆಗಿನ ಹಬ್ಬಗಳು, ಮನೆ ತುಂಬಾ ಜನ ಸಂತೋಷ- ನೆಮ್ಮದಿಯ ಬದೂಕು. ಈಗೆಲ್ಲ ಬದಲಾಗಿ ಹೋಗಿವೆ. ಕೇವಲ 7 ಗಂಟೆಗೆ ನಮ್ಮ ಮಕ್ಕಳ ಶಾಲಾ ವಾಹನಗಳು ಮನೆ ಮುಂದೆ ಬಂದು ನಿಂತಿರುತ್ತವೆ.

ಈಗಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ವಿಚಿತ್ರವಾಗಿವೆ. ಅವರ ಕೋಚಿಂಗ್ ಕ್ಲಾಸ್ಗಳು, ಸ್ಟಡೀ ಅವರ್ಸ್, ಈಗೆ ಅವರನ್ನ ಬೂಸಿ ಮಾಡಿದ್ದೇವೆ. ಅವರಿಗೆ ನಮ್ಮ ಆಟಗಳೇ ಗೊತ್ತಿಲ್ಲ.

ಇತ್ತೀಚೆಗೆ ಕರೋನ ಎಫೆಕ್ಟ್ನಿಂದ ಎಲ್ಲರೂ ಮನೆಯಲ್ಲಿ ಕಾಲ ಕಳೆಯುತ್ತಿದೇವೇ, ಮನೆಯಲ್ಲೇ ಎಲ್ಲ ರೀತಿ ತಿಂಡಿಗಳನ್ನು ಕಲಿಯುತ್ತಿದೆವೆ – ಒಂದು ಬಾರಿ ನಮ್ಮ ಮಕ್ಕಳಿಗೆ ನಮ್ಮ ಆ ದಿನಗಳ ಬಗ್ಗೆ ಹೇಳಿ ಅವರಿಗೂ ಎನ್ ಅನಿಸುತ್ತದೆ ಕೇಳಿ.

ಮಕ್ಕಳ ಮನದಲ್ಲಿ ಏನಿದೆ ಎಂದು ಒಮ್ಮೆ ಕೇಳಿ. ಅವರು ನಿಮ್ಮ ಮಕ್ಕಳು ಅವರಿಗೆ ಏನು ಬೇಕು ಬೇಡ ಎಂದು ಒಮ್ಮೆ ಅರ್ಥ ಮಾಡಿಕೊಂಡು ಬದುಕಿ – ನಮ್ಮ ಮಕ್ಕಳ ದಿನಗಳು , ನಮ್ಮ ಆ ದಿನಗಳಂತೆ ಆಗಬೇಕು ಎಂಬುದು ನನ್ನ ಬಯಕೆ.

ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಯಲ್ಲಿ ಆದರ್ಶ ಭಾರತ

3

ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ‌ದಿನ.‌ ಈ ಪ್ರಯುಕ್ತ ಈ ವಿಶೇಷ ಬರಹವನ್ನು ಮಂಜುನಾಥ್ ಬರೆದಿದ್ದಾರೆ.


ಇಡೀ ವಿಶ್ವದಾದ್ಯಂತ ಅತೀ ಹೆಚ್ಚು ಪ್ರತಿಮೆಗಳನ್ನ ಹೊಂದಿರುವಂತಹ, ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಶೀಲ ವ್ಯಕ್ತಿಯಾಗಿ ಉಳಿದುಕೊಂಡ ಜಗತ್ತಿನ ಏಕಮಾತ್ರ ವ್ಯಕ್ತಿ, ಶಕ್ತಿ ಎಂದರೇ ಅದು ಡಾ. ಬಿ.ಆರ್. ಅಂಬೇಡ್ಕರ್.

ವಿಶ್ವದ ಜನ ಬಾಬಾ ಸಾಹೇಬರ ಜ್ಞಾನ, ಆದರ್ಶ ಜೀವನವನ್ನು ಅನುಸರಿಸಿ ಗೌರವಿಸಿದರು. ಆದರೆ,
ಭಾರತದಲ್ಲೊಂದಷ್ಟು ಭಿನ್ನ, ಯಾಕೆಂದರೆ ಇಲ್ಲಿಯವರೆಗೂ ಈ ದೇಶ ಬಾಬಾ ಸಾಹೇಬರನ್ನು ಅವರಲ್ಲಿದ್ದಂತ ಜ್ಞಾನ, ಆದರ್ಶ ಗುಣಗಳಿಂದ ನೋಡಲಿಲ್ಲ, ಬರೀ ಜಾತಿ ಎಂಬ ಪೊರೆ ಬಂದಿರುವ ಕಣ್ಣಿನಿಂದಲೇ ನೋಡಿದೆ. ನೈಜ ಬಾಬಾ ಸಾಹೇಬರ ಚಿಂತನೆಗಳನ್ನ ನೋಡಬೇಕಾದರೆ, ಅರ್ಥೈಸಿಕೊಳ್ಳಬೇಕಾದರೆ ಜಾತಿಯತೆಯ ಕಣ್ಣಿನ ಪೊರೆ ಕಳಚಿದಾಗಷ್ಟೇ ಸಾಧ್ಯ.

ಭಾರತದಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಬಲಗೈ ತೋರ್ಬೆರಳು ಮಾರ್ಗದರ್ಶಕರಾಗಿ, ಎಡಗೈನಲ್ಲಿ ಸಂವಿಧಾನ ಹಿಡಿದು ಕೊಂಡಿರುವ ಅಂಬೇಡ್ಕರ್ ಪ್ರತಿಮೆಗಳು ಕಾಣಸಿಗುತ್ತವೆ.. ಅದರಲ್ಲೂ ಎರಡು ಪ್ರಮುಖ ಜಾಗದಲ್ಲಿ ಇದ್ದೆ ಇರುತ್ತವೆ.

೧. ಶಾಸಕಾಂಗ ಭವನ/ ಸರ್ಕಾರಿ ಕಚೇ ಮುಂದೆ
೨. ಶೋಷಿತರ ಕೇರಿಗಳಲ್ಲಿ,

ಈ ಎರಡು ಪ್ರದೇಶದ ಭೌಗೋಳಿಕ ವಿವರ ಸಾರ್ವಜನಿಕ ವಲಯದಲ್ಲಿ ಅಂಬೇಡ್ಕರ್ ಬಗೆಗಿನ ಗ್ರಹಿತಗಳನ್ನ ಹೇಳುತ್ತವೆ.
ಮೊದಲನೇ ವರ್ಗದ ಪ್ರಕಾರ ಬಾಬಾ ಸಾಹೇಬರನ್ನ ಗೌರವಿಸಲು ಒಂದೇ ಒಂದು ಕಾರಣ ಸಂವಿಧಾನ ಕತೃು ಮತ್ತು ಇತಿಹಾಸ ಪುರುಷ.

ಎರಡನೇ ವರ್ಗದ ಜನರು ಗೌರವಿಸಲು ಹುಟ್ಟಿನಿಂದಲೇ ಅಸ್ಪೃಷ್ಯತೆ ಆಚರಿಸಬೇಕಾದ ಕೊಳಕನ್ನ ಕಿತ್ತೊಗೆದ, ಬಹುಜನ ವಿಮೋಚನಕಾರ, ಸಾಮಾಜಿಕ ಸಮಾನತೆಯನ್ನು ಶಾಸನಬದ್ಧಗೊಳಿಸಿದ ಮಹಾನ್ ಕ್ರಾಂತಿಕಾರಿ ಎಂಬ ವಿಷಯದಿಂದ. ಇವೆರಡರ ನಡುವಿನ ವರ್ಗದ ಜನರಿಗೆ ಬಾಬಾ ಸಾಹೇಬರ ಬಗ್ಗೆ ಸಂಪೂರ್ಷ ಅರಿವಿಲ್ಲದಂತಾಗಿರುವುದೇ ವಿಪರ್ಯಾಸ.

ಅಂಬೇಡ್ಕರ್ ಎಂದರೆ ಅಸ್ಪೃಶ್ಯರ ಏಳ್ಗೆಯ ಹರಿಕಾರ ಮಾತ್ರ ಆಗಿರಲಿಲ್ಲ. ಶತಶತಮಾನಗಳ ಸ್ವಾಭಾವಿಕ ಜಾತಿಯ ಅಸಮಾನತೆ, ಅದೇ ನೆಪದಲ್ಲಿ ಮನುಷ್ಯರನ್ನು ಪ್ರಾಣಿಗಳಂತೆ ಕಾಣುತ್ತಿದ್ದ ವ್ಯವಸ್ಥೆ, ಶ್ರೇಣಿಕೃತ ಅಸಮಾನತೆಗಳ ಆಚರಣೆಯನ್ನು ವಿರೋಧಿಸುತ್ತಲೇ ತಮ್ಮ ಅಪಾರವಾದ, ಸಂಶೋಧನಾತ್ಮಕ ಅಧ್ಯಯನದಿಂದ ಭವಿಷ್ಯ ಭಾರತದ ಕನಸು ಕಂಡು, ದೇಶದಲ್ಲಿ ಸಮಸಮಾಜಕ್ಕೆ ಸಾಮಾಜಿಕ ನ್ಯಾಯ ವಿಧಾನವೊಂದು ಪರಿಹಾರ ಎಂದು ಭಾವಿಸಿ. ದೇಶವನ್ನು ಸರಿಯಾದ ದಿಕ್ಕು ದಿಸೆಯಲ್ಲಿ ಸಾಗುವಂತೆ ನಿರ್ದೇಶಿಸಿದ ಮಹಾನ್ ಸಂತ.

ಸಾಮಾಜಿಕ ನ್ಯಾಯವನ್ನು ನಿರ್ವಚಿಸಿ ಅದರರ್ಥವನು ಎಳೆಎಳೆಯಾಗಿ ವಿಶ್ವಕ್ಕೆ ಅದರಲ್ಲೂ ಭಾರತದಂತಹ ಅಸಮಾನತೆಯ ಆಗರದ ವ್ಯವಸ್ಥೆಗೆ ತಿಳಿಸಿದ ಭಾರತದ ಶ್ರೇಷ್ಟ ಮೇಧಾವಿ ಮತ್ತು ಮಾರ್ಗದರ್ಶಕ.

ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ವಿಶ್ವವೇ ಒಪ್ಪಿತು. ಭಾರತ ಸರ್ಕಾರ ಕೂಡಾ ಬಾಬಾ ಸಾಹೇಬರ ಜನ್ಮಶತಮಾನೋತ್ಸವದ ಅಂಗವಾಗಿ 14-04-1990 ರಿಂದ 14-04-1991 ರವರೆಗೆ ಸಾಮಾಜಿಕ ನ್ಯಾಯದ ವರ್ಷವೆಂದೇ ಆಚರಿಸಿತು.

ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಸಾಮಾಜಿಕ ನ್ಯಾಯ ಬೇಕೆಂದು ಕೇಳುವುದು ಅವರ ಅಧಿಕಾರ ಮತ್ತು ಹಕ್ಕು. ಸರ್ಕಾರಗಳು ಕೂಡಾ ನೀಡುವುದು ತಮ್ಮ ಆದ್ಯ ಕರ್ತವ್ಯಗಳಾಗಬೇಕು. ಈ ನೆಲದ ಮಣ್ಣಲ್ಲಿ ನೆಲೆಗೊಂಡಿದ್ದ ಅಸಮಾನತೆಗಳ ದುರಾಚಾರಗಳನ್ನ ನಾಶಮಾಡಬೇಕೆಂಬ ಆಶಯದಿಂದ ಉಂಟಾದ “ಜಾಗೃತಿ” ಯೇ ಸಾಮಾಜಿಕ ನ್ಯಾಯ.

ಬಾಬಾ ಸಾಹೇಬರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ, ಜಾಗೃತಿ ಮೂಡಿಸಿದ ಕಾಲವನ್ನ, “ಸಾಮಾಜಿಕ ನ್ಯಾಯ ಶಕೆ” ಎಂದೇ‌ ಹೇಳುತ್ತಾರೆ. ಈ ಸಾಮಾಜಿಕ ನ್ಯಾಯ ಶಕೆಯನ್ನು “ಅಂಬೇಡ್ಕರ್ ಶಕೆ” ಎಂದೇ ಕರೆಯಬಹುದು.

ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆಗಳಿರದ ಸಮ ಸಮಾಜದ ನಿರ್ಮಾಣವೇ ನಮ್ಮಗಳ ಜವಾಬ್ದಾರಿಯಾಗಬೇಕು, ಜಾತಿ, ಕುಲ, ಪಂಥ, ಲಿಂಗಭೇದ, ಸಂಪನ್ನತೆ, ಸಾಮಾಜಿಕ ಅಂತಸ್ತು, ರಾಜಕೀಯ ಪ್ರಭಾವದಿಂದಲೂ ಅಸಮಾನತೆ ಸೃಷ್ಟಿಯಾಗಬಾರದೆಂದು ಅಭಿಪ್ರಾಯಪಟ್ಟವರು.

ಬಾಬಾ ಸಾಹೇಬರು ಆರ್ಥಿಕ, ಸಾಮಾಜಿಕ, ರಾಜಕೀಯ ಸಂಬಂಧವಾದ “ನ್ಯಾಯ” ಎಂಬುದು ಜೀವನಕ್ರಮಗಳಲ್ಲಿರುವ ಎಲ್ಲಾ ಕ್ಷೇತ್ರದಲ್ಲೂ ಅನುಸರಿಸಬೇಕಾದದ್ದು ನ್ಯಾಯ ಸಮ್ಮತವೆಂದು ಅಭಿಪ್ರಾಯಪಟ್ಟವರು.

ಮೊದಲು ಸಾಮಾಜಿಕ ನ್ಯಾಯ, ನಂತರ ಆರ್ಥಿಕ ನ್ಯಾಯ, ಕೊನೆಯದಾಗಿ ರಾಜಕೀಯ ನ್ಯಾಯಕ್ಕೆ ಪ್ರಧಾನ್ಯತೆ ನೀಡುತ್ತಿದ್ದರು.

ಬಾಬಾ ಸಾಹೇಬರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ ಎಂದರೇ ಸಾಮಾಜಿಕ ಸಮಾನತೆ, ಆರ್ಥಿಕ ನ್ಯಾಯ ಎಂದರೇ ಆರ್ಥಿಕ ಸಮಾನತೆ, ರಾಜಕೀಯ ನ್ಯಾಯ ಎಂದರೇ ರಾಜಕೀಯ ಸಮಾನತೆ.

ಅಸಮಾನತೆ & ತಾರತಮ್ಯ ಯಾವ ವಲಯದಲ್ಲಾಗಲಿ, ಯಾವ ರೂಪದಲ್ಲಿ ಅಸ್ತಿತ್ವ ಹೊಂದಿದ್ದರೂ ಅದು ಸಮ ಸಮಾಜದ ನೈತಿಕ ಸೂತ್ರಗಳಿಗೆ & ಮಾನವ ಗೌರವಗಳಿಗೆ ಧಕ್ಕೆ ತರುವಂತದ್ದು ಎಂದು ದೃಢವಾಗಿ ಪ್ರತಿಪಾದಿಸುತ್ತಿದ್ದರು.

ನೈತಿಕವಾದ ನ್ಯಾಯಬದ್ಧವಾದ ಸಮಾಜದ ಬುನಾದಿಯನ್ನ ಅಲುಗಾಡಿಸುವ ಜಾತಿ ಆಧಾರಿತ ಅಸಮಾನತೆಗಳು, ದುರದೃಷ್ಚವಶಾತ್ ಆದರ್ಶಯುತ ಸಾಮಾಜಿಕ ಸಂಬಂಧ ಗಳಾಗಿ ಏರ್ಪಟ್ಟಿದೆ.
ಇಂತಹ ಅನಚಾರದ ಸ್ಥಿತಿಗಳನ್ನ ಸವಾಲಾಗಿ ಎದುರಿಸುವುದಕ್ಕಾಗೇ ಒಂದು ಸದುದ್ದೇಷದಿಂದ ರೂಪಿಸಲಾಗಿರುವುದೇ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ.

ಸಾಮಾಜಿಕವಾಗಿ ಮೇಲ್ವರ್ಗದ ಜಾತಿಗಳು ಗೌರವಾರ್ಹತೆಗಳಿಂದಲೂ, ಕೆಳಜಾತಿ/ ತಳಸಮುದಾಯಗಳು ಅವಮಾನಕರ ಭಾವಕ್ಕೂ, ಗುರಿಯಾಗಿರುವುದು ಭಾರತೀಯ ಸಾಮಾಜಿಕ ಸ್ಥಿತಿ. ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವಿಧಾನಕ್ಕೆ, ಸಮಾನತೆ, ಸೌಭ್ರಾತೃತ್ವದಂತಹ ಭಾವನೆಗಳ ಬೆಳವಣೆಗೆಗೆ ಅವಕಾಶವೇ ಇಲ್ಲದಂತೇ ಮಾಡುತ್ತದೆ.

ಇನ್ನೂ ಆರ್ಥಿಕವಾಗಿ ಬಲಾಢ್ಯರಾದ ಈ ಸಮಾಜದಲ್ಲಿ ದೇಶದ ಪರವಾಗಿ ಮಾತಾಡುವುದು, ಸ್ವಾತಂತ್ರ್ಯಕ್ಕಾಗಿ ರಾಜಕೀಯ ಚಳುವಳಿ ರೂಪಿಸುತ್ತಿದ್ದರೂ ಆರ್ಥಿಕವಾಗಿ ಬಲಹೀನರನ್ನು ಸಂಕುಚಿತಭಾವದಿಂದ ನೋಡುವುದನ್ನ ಬಿಟ್ಟಿಲ್ಲ.

ಈ ಮೇಲ್ಕಂಡ ಕಾರಣದಿಂದಲೇ ದುಂಡುಮೇಜಿನ ಪರಿಷತ್ ನಲ್ಲಿ “ರಾಜಕೀಯ ಯಂತ್ರಾಂಗ” ಸಮಾಜದ ಮನೋಭಾವನೆಗಳನ್ನು ತೆಗೆದುಕೊಂಡು ಸಮಾಜದ ಜೊತೆ ನೇರವಾಗಿ ಸಂಬಂಧ ಹೊಂದಿರಬೇಕೆಂದು ತಾವು ಆಶಿಸಿದ ಹಾಗೇಯೆ “ರಾಜಕೀಯ ನ್ಯಾಯ” ಕುರಿತಾಗಿ ಒತ್ತಡ ತಂದರು.

ಬಾಬಾ ಸಾಹೇಬರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯತತ್ವ 3 ನ್ಯಾಯಗಳ ಸಮಗ್ರತೆಯಿಂದ ಕೂಡಿದೆ.
1. ಸ್ವಾತಂತ್ರ್ಯ
2. ಸಮಾನತೆ
3. ಭಾತೃತ್ವ

ಈ ಅಂಶಗಳ ಆಧಾರದ ಮೇಲೆ ರೂಪಿತವಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸಂಬಂಧ ನ್ಯಾಯಯುತವಾದದ್ದು.

ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಒಂದರ ಮೇಲೊಂದು ಅವಲಂಭಿತವಾದದ್ದು, ಇವುಗಳನ್ನು ಭಿನ್ನ ಅಂಶಗಳಾಗಿ ಕಾಣಬಾರದು. 3 ಅಂಶಗಳು ಒಟ್ಟಾಗಿ ಏರ್ಪಟ್ಟಿವೆ. ಒಟ್ಟಾಗಿಯೇ ಇರಲು ಬಿಡಬೇಕು. ಒಂದನ್ನೊಂದು ಬೇರ್ಪಡಿಸಲಾಗದು.

ಬೇರ್ಪಡಿಸುವ ದೃಷ್ಚಿಯಲ್ಲಿ ನೋಡಿದರೇ ಪ್ರಜಾಪ್ರಭುತ್ವಕ್ಕೆ ಸೋಲಾಗುವುದೆಂಬ ಖಚಿತ ಎಚ್ಚರಿಕೆ ನೀಡುತ್ತಾರೆ.

ಸಮಾನತೆ ಇಲ್ಲದ ಬಹು ಸಂಖ್ಯಾತರ ಸ್ವಾತಂತ್ರ್ಯ ಕೇವಲ ಕೆಲವೇ ಮಂದಿಗೆ ಆದ್ಯತೆ ನೀಡುತ್ತದೆ.

ಸ್ವಾತಂತ್ರ್ಯವಿಲ್ಲದ ಸಮಾನತೆ ಎಂಬುದು ವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ.
ಭಾತೃತ್ವ ಇಲ್ಲದ ಸ್ವಾತಂತ್ರ್ಯ & ಸಮಾನತೆಗಳು ಅರ್ಥಹೀನ ಮತ್ತು ಅಸಂಪೂರ್ಣವೆಂಬ ವಾದ ಮುಂದಿಡುತ್ತಾರೆ.

ಈ ಎಲ್ಲಾ ಕಾರಣಗಳಿಂದಲೇ ನಾವು ಕೇವಲ ರಾಜಕೀಯ ಸಮಾನತೆಯನ್ನು ಮಾತ್ರವೇ ಹೊಂದಿರಬಾರದು, ಸಾಮಾಜಿಕ, ಆರ್ಥಿಕ ಬುನಾದಿಗಳಿಲ್ಲದ ರಾಜಕೀಯ ಸಮಾನತೆ ಇರಲು ಸಾಧ್ಯವೇ ಇಲ್ಲಾ ಎಂಬುದೇ ಅವರ ದೃಢ ನಿರ್ಧಾರವಾಗಿತ್ತು.

ಹಾಗಾಗಿ ಬಾಬಾ ಸಾಹೇಬರು ಧರ್ಮ, ಸಮಾಜ & ಸರ್ಕಾರಗಳನ್ನ ಈ ಮೂರು ಮಾನದಂಡಗಳ ಮೇಲೆ ನಿರ್ಧರಿಸಿ, ಈ ಸೂತ್ರಗಳಿಂದಲೇ ಪರೀಕ್ಷಿಸಿದರು.
ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಗಳಿಗೆ ಬೆಂಬಲವಾಗಿ ನಿಲ್ಲದ ಆದರ್ಶ & ಸಿದ್ಧಾಂತವನ್ನು ತೀವ್ರವಾಗಿ ಖಂಡಿಸಿದರು.

ದೇಶದಲ್ಲಿ ಜಾತಿವ್ಯವಸ್ಥೆ ಯಿಂದಾಗಿರುವ ತಾರತಮ್ಯ & ಅಸಮಾನತೆಗಳನ್ನ ಪ್ರೊತ್ಸಾಹಿಸುವ / ಪೋಷಿಸುವ/ ಅನುಸರಿಸುವ ಯುಕ್ತವಲ್ಲದ ಸಿದ್ಧಾಂತಗಳೊಂದಿಗೆ ತನ್ನ ಸೂತ್ರಗಳನ್ನು ರಾಜಿಗೊಳಿಸಿಕೊಳ್ಳಲಿಲ್ಲ, ಭಾರತದೇಶದ ಶ್ರೇಣಿಕೃತ ಸ್ಥಿತಿಕಂಡು ಬಾಬಾ ಸಾಹೇಬರು ಹೀಗೇಳುತ್ತಾರೆ.

“ನಾನು ದೇಶದ ಲೋಪಗಳನ್ನು ಸರಿಪಡಿಸಲು ಸಿದ್ಧನಿದ್ದೇನೆ. ಕಾರಣ ಸಮಾಜ ಅಸಮಾನತೆಯಿಂದ ಕೂಡಿದೆ ಎಂದು ಭಾವಿಸಿದ್ದೇನೆ. ಯುಕ್ತವಲ್ಲದ ಆದರ್ಶಗಳನ್ನ ಪೋಷಿಸಿ ಪಾಲಿಸುವ ಸಮಾಜದಲ್ಲಿ ಜೀವಿಸುವುದಕ್ಕೆ ನಾನು ಸಿದ್ದನಿಲ್ಲ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಆಧಾರದ ಮೇಲಿರುವ ಸಮಾಜವೇ ನನ್ನ ಆದರ್ಶ ಸಮಾಜವಾಗಿರುತ್ತದೆ”.

ಒಂದು ಆದರ್ಶ ಸಮಾಜವೆಂಬುದು ಒಂದು ಪ್ರದೇಶದಲ್ಲಿ ಜಾಗೃತಿಯಿಂದ ಪಡೆಯಲಾದ ಬದಲಾವಣೆಯನ್ನು ಇತರ ಪ್ರದೇಶಗಳಿಗೂ ಕೂಡ ವಿಸ್ತರಿಸುವ ಮಾರ್ಗಗಳಿಂದ ಕೂಡಿರಬೇಕು. ತಾನು ಪಡೆದಂತಹ ಪ್ರಯೋಜನಗಳನ್ನು ನಿಷ್ಕಪಟವಾಗಿ, ಪಾರದರ್ಶಕವಾಗಿ ಎಲ್ಲರ ಪಾಲನ್ನು ಸಮವಾಗಿ ಹಂಚುವ ವಿಧವಾಗಿರಬೇಕು. ಒಂದು ಆದರ್ಶ ಸಮಾಜ ಈ ರೀತಿಯಲ ಅನೇಕ ಮಾರ್ಗಗಳನ್ನು ಹೊಂದಿರಬೇಕು.

ಈಗಾದಗಷ್ಟೇ ಆದರ್ಶ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಆದರ್ಶ ಸಮಾಜದಲ್ಲಿ “ಸಾಮಾಜಿಕ ಮನಸ್ಸಾಕ್ಷಿ” ಬಹುಮುಖ್ಯವಾದದ್ದು, ಇದಿಲ್ಲದೇ ಹೋದರೆ ಯಾವ ಆದರ್ಶ ಸಮಾಜ ಕೂಡಾ ಭೂಮಿ ಮೇಲಿರಲು ಸಾಧ್ಯವಿಲ್ಲ, ಸಾಮಾಜಿಕ ಮನಸ್ಸಾಕ್ಷಿ ಇಲ್ಲದಿದ್ದರೇ ಇತರೇ ಸಮಾಜಮಾರಕ ಶಕ್ತಿಗಳು ಪ್ರತಿಕೂಲವಾಗಿ ಕೆಲಸ ಮಾಡುತ್ತವೆ & ಸಮಾಜಕ್ಕೆ ಇವೇ ಮಾರಕವಾಗುತ್ತವೆ.

ಭೂಮಿಯ ಮೇಲಿರುವ ಅಕ್ರಮ/ ಸಮಾಜಘಾತುಕ/ ಅನೈತಿಕವಾದ ಆದರ್ಶಗಳಿಗೆ ಯಾವುದೇ ಕಾರಣಕ್ಕೂ ಸಾಮಾಜಿಕ ಮನಸ್ಸಾಕ್ಷಿ ಇರಲಾರದು & ಸಾಮಾಜಿಕ ಮನಸ್ಸಾಕ್ಷಿ ಗಷ್ಟೆ ಇಂತಹ ಅನಿಷ್ಟ ಆದರ್ಶಗಳನ್ನೆದುರಿಸಿ ನಿಲ್ಲುವ ಶಕ್ತಿ ಇರುತ್ತದೆ.

ಸಾಮಾಜಿಕ ಮನಸ್ಸಾಕ್ಷಿ ಯಾವಾಗಲೂ ಸಾಮಾಜಿಕನ್ಯಾಯ, ಶಾಂತಿ, ಪ್ರಗತಿಗಾಗಿ ಹೋರಾಡುತ್ತಲೇ ಇರುತ್ತದೆ. ಮಾನವ ಸಂಭಂಧಗಳಲ್ಲಿ ಸ್ವಾತಂತ್ರ್ಯ, ಸಮಾನತೆ ತರುವ ಅತ್ಯಂತ ತೀಕ್ಷ್ಣ ಮತ್ತು ಪ್ರಖರ ಆಯುಧಗಳಾಗಿ ನಿಲ್ಲುತ್ತವೆ.
ಆದರ್ಶ ಸಮಾಜವೆಂಬುದು ಪ್ರಧಾನವಾಗಿ ಅಭಿವೃದ್ಧಿ, ಪ್ರಜಾಪ್ರಭುತ್ವ ಕಲ್ಪನೆಯಿಂದಕೂಡಿದ್ದು ಆಡಳಿತಗಾರರು ಸಾಮಾನ್ಯರ ಮೇಲೆ ಹೇರುವ ಆಧಿಪತ್ಯವನ್ನು ತಿದ್ದಿ ತೀಡುವ ಶೋಷಣೆಮುಕ್ತ ಸಮಾಜ ನಿರ್ಮಿಸುವ ಕೆಲಸ ನಿರ್ವಹಿಸುವುದರಲ್ಲಿ ಸಂದೇಹವಿಲ್ಲಾ ಎಂದೇಳುತ್ತಾರೆ.

ಈ ಎಲ್ಲಾ ಚಿಂತನೆಗಳನ್ನ ತನ್ನ ಆಳವಾದ, ಸಂಶೋಧನಾತ್ಮಕ ಅಧ್ಯಯನದಿಂದ ಅಸಮಾನತೆಮುಕ್ತ ಭವಿಷ್ಯ ಭಾರತದ ನಿರ್ಮಾಣಕ್ಕೆ ಬಾಬಾ ಸಾಹೇಬರು ಅಡಿಗಲ್ಲಾಕಿದರು.

ಬಾಬಾ ಸಾಹೇಬರ ಸಾಮಾಜಿಕ ನ್ಯಾಯ ಕಪೋಲಕಲ್ಪಿತವಾದದ್ದಲ್ಲಾ. ಅದು ಸೈದ್ಧಾಂತಿಕವಾದದ್ದು, ನ್ಯಾಯಯುತವಾದದ್ದು, ಇಂತಹ ಮಾರ್ಗದರ್ಶನವನ್ನು/ ಚಿಂತನೆಗಳನ್ನು ಸರ್ಕಾರ ಜಾರಿಗೆ ತರಲು ಸಾಧ್ಯವಾಗುವ ವಿಧಾನ, ಸಮಾಜವೂ ಕೂಡಾ ಅನುಸರಿಸಲು ಸಾಧ್ಯವಾಗುವ ವಿಧಾನ ಏಕೆಂದರೇ ಬಾಬಾ ಸಾಹೇಬರು ತನ್ನ ಹುಟ್ಟಿನಿಂದಿಡಿದು, ಬಾಲ್ಯ, ಶಿಕ್ಷಣ, ಹೋರಾಟ ಅಂತಿಮವಾಗಿ ಬೌದ್ಧ ಧಮ್ಮ ಸ್ವೀಕರಿಸುವವರೆಗಿನ ಶ್ರೇಣಿಕೃತ ಸಮಾಜದ ವ್ಯವಸ್ಥೆ, ಅಸಮಾನತೆ, ತಾರತಮ್ಯಗಳಿಂದ ತಮ್ಮ ಜೀವಿತಾವಧಿಯುದ್ದಕ್ಕೂ ಹೋರಾಡಿದ ಅನುಭವದಿಂದ್ದಾಗಿದ್ದೆ.

ಬಾಬಾ ಸಾಹೇಬರ ಆದರ್ಶ ಚಿಂತನೆಗಳನ್ನ ಯುವಜನತೆ, ಸರ್ಕಾರ, ಸಮಾಜ ಅನುಸರಿಸುವುದರಿಂದ & ಅನುಷ್ಠಾನಗೊಳಿಸುವುದರಿಂದಷ್ಟೆ ಭಯಮುಕ್ತ, ಶೋಷಣೆಮುಕ್ತ, ಜಾತಿಮುಕ್ತ, ಕೋಮುಮುಕ್ತ, ತಾರತಮ್ಯಮುಕ್ತ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.

“ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೇ ರಾಜಕೀಯ ಪ್ರಭುತ್ವ ಅರ್ಥಹೀನ”.
ಎಂದು ಬಾಬಾ ಸಾಹೇಬರು ಯಾಕೆ ಹೇಳಿದರು..?
ಬಾಬಾ ಸಾಹೇಬರ ದೃಷ್ಟಿಯಲ್ಲಿ ಹೋರಾಟ ಎಂದರೇನು..?
ಹೋರಾಟ ಎಲ್ಲಿಗೆ ಬಂದು ನಿಂತಿದೆ. ಯಾವುದಕ್ಕಾಗಿ ಹೋರಾಡಬೇಕೆಂದು ಯುವಜನತೆ ಸಮಾಜ ತೀರ್ಮಾನಿಸಬೇಕಿದೆ..
ಸಾಮಾಜಿಕ ನ್ಯಾಯದಂತಹ ಒಂದು ಶ್ರೇಷ್ಟ ನ್ಯಾಯಯುತ ಸಮಾಜದ ಹುಟ್ಟಿಗೆ ಕಾರಣರಾದವರು ದೂರದೃಷ್ಟಿಯುಳ್ಳ, ಪ್ರಮಾಣಿಕತೆಯಿರುವ “ಶ್ರೇಷ್ಟ ಮಾರ್ಗಪ್ರವರ್ತಕ” ವಿಶ್ವ ಜ್ಞಾನಿ ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ರವರು..
ಜೈ ಭೀಮ್


ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಮಂಜುನಾಥ್, ಮನಸ್ಸು ಮಾಡಿದ್ದರೆ ಸರ್ಕಾರಿ ಕೆಲಸಕ್ಕೆ ಸೇರಬಹುದಾಗಿತ್ತು. ಪ್ರಜ್ಞಾಪೂರ್ವಕವಾಗಿಯೇ ಅದರಿಂದ ದೂರ ಉಳಿದ ಅವರು ಸಮಾಜ ಸುಧಾರಣೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಅಂಬೇಡ್ಮರ್ ಕುರಿತು ಆಳ ಅಧ್ಯಯನಕಾರರು ಆಗಿರುವ ಅವರು, ಅಂಬೇಡ್ಕರ್ ಬರಹಗಳನ್ನು ದಲಿತೇತರರು ಓದುವಂತೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕಾಗಿ ಅವರದೇ ಒಂದು ಬಳಗ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಪ್ರಭಾವ ಬೀರುತ್ತಿದೆ.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರೂ ಆಗಿರುವ ಅವರು ಅನೇಕ ವಿದ್ಯಾರ್ಥಿ ಪರ ಹೋರಾಟಗಾರರು ಹೌದು.

ಈ ದಿನದ ಕರೊನಾ: ರಾಷ್ಟ್ರವ್ಯಾಪಿ ಸುದ್ದಿಗಳು

Publicstory. in


ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು.
ದೇಶದ ಅರ್ಧಕ್ಕಿಂತ ಹೆಚ್ಚು ಪ್ರಕರಣ 3 ರಾಜ್ಯದಲ್ಲಿ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲೇ ಹೆಚ್ಚು.
ದೇಶಾದ್ಯಂತ 8,447 ಜನರಿಗೆ ಕೊರೊನಾ ಸೋಂಕು.
ಮಹಾರಾಷ್ಟ್ರ ಒಂದರಲ್ಲೇ 1,982 ಸೋಂಕಿತರು.
ದೆಹಲಿಯಲ್ಲಿ 1,154 ಜನರಿಗೆ ಸೋಂಕು
ತಮಿಳುನಾಡಿನಲ್ಲಿ 1,075 ಜನರಿಗೆ ಸೋಂಕು.
————————-

ಜಿಲ್ಲಾವಾರು ಮಾಹಿತಿ ತರಿಸಿಕೊಳ್ಳುತ್ತಿರುವ ಪಿಎಂಒ

ಡಿಸಿಗಳಿಂದ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ.
ಸೋಂಕು ಹರಡುವಿಕೆ ಪ್ರಮಾಣದ ಬಗ್ಗೆ ಮಾಹಿತಿ.
ಮಾಹಿತಿ ಆಧರಿಸಿ ವಲಯ ಗುರುತಿಸುತ್ತಿರುವ ಪಿಎಂಒ.
ಕೆಂಪು, ಹಳದಿ, ಹಸಿರು ವಲಯಗಳಾಗಿ ಗುರುತಿಸುವಿಕೆ.
ಈಗಾಗಲೇ ಬಹುತೇಕ ಜಿಲ್ಲೆಗಳ ಮಾಹಿತಿ ಸಂಗ್ರಹ.
ಇಂದು ಅಂತಿಮಗೊಳ್ಳಲಿರುವ ವಲಯ ಪತ್ತೆಹಚ್ಚುವಿಕೆ.
———————–

ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೊನಾಗೆ 308 ಜನರ ಸಾವು
ದೇಶದಲ್ಲಿ 9,152ಕ್ಕೇರಿದ ಸೋಂಕಿತರ ಸಂಖ್ಯೆ.
856 ಜನರು ಕೊರೊನಾದಿಂದ ಗುಣಮುಖ.
ಸದ್ಯ ಚಿಕಿತ್ಸೆ ಪಡೆಯುತ್ತಿರೋ 7,987 ಸೋಂಕಿತರು.
ಕಳೆದ 24 ಗಂಟೆಯಲ್ಲಿ ಕೊರೊನಾಗೆ 35 ಜನ ಸಾವು

———————

ಮಂಗಳೂರಲ್ಲಿ ಸೋಂಕಿತ ಮಹಿಳೆ ಡಿಸ್ಚಾರ್ಜ್

ಕೊರೊನಾದಿಂದ ಸಂಪೂರ್ಣ ಗುಣಮುಖ.
ಮಂಗಳೂರಿನಲ್ಲಿ ಒಟ್ಟು 7 ಮಂದಿ ಗುಣಮುಖ.
ಮಂಗಳೂರಲ್ಲಿ 12 ಕೇಸ್ ಪತ್ತೆಯಾಗಿತ್ತು.
12 ಸೋಂಕಿತರ ಪೈಕಿ 7 ಮಂದಿ ಗುಣಮುಖ
ಇನ್ನು ಐವರಿಗೆ ಮುಂದುವರಿದ ಚಿಕಿತ್ಸೆ.

ರಸ್ತೆ ಅಪಘಾತ : ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸಾವು

Publicstory.in


ತಿಪಟೂರು: ತಾಲ್ಲೂಕಿನ ಗಂಗನಘಟ್ಟ ಬಳಿಯಲ್ಲಿ ಘಟನೆ ಸಂಭವಿಸಿದ್ದು ಗಂಗನಘಟ್ಟದ
ಬಿಲ್ ಕಲೆಕ್ಟರ್ ದಯಾನಂದ್(35) ಮತ್ತಿಘಟ್ಟ ಗ್ರಾಮದ ವಾಸಿಯಾಗಿದ್ದು
ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ತಿಪಟೂರು _ ಚನ್ನರಾಯಪಟ್ಟಣ್ಣ ರಸ್ತೆ ಗಂಗನಘಟ್ಟ ವಡಗಲ್ಲು ರಂಗನಾಥಸ್ವಾಮಿ ದೇವಾಲಯದ ಮುಂಭಾಗ ಬೈಕ್ ಹಾಗೂ ಮಾರುತಿ ಕಾರು ನಡುವೆ ಅಪಘಾತ ಸಂಭವಿಸಿದೆ.

ಗ್ರಾಮ ಪಂಚಾಯಿತಿ ನೀರು ವಿತರಕ ರಾಮಯ್ಯ (45ವರ್ಷ ) ತೀವ್ರವಾಗಿ ಗಾಯಗೊಂಡಿದ್ದು, ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಕೆಲಸದ ನಡುವೆಯೂ ಅನಾಥರಿಗೆ ಅನ್ನದಾನಿಗಳಾದ ಬೆಳಗಾವಿ ಪೊಲೀಸರು…

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಇದೊಂದು ಮನಮಿಡಿಯುವ ಕಥೆ.

ಕೊರೊನಾ‌ ಕೆಲಸದ ಒತ್ತಡ. ಮನೆಯವರಿಗೂ ಭಯ, ಆತಂಕ. ಪ್ರತಿ‌ ದಿನವೂ ಕೆಲಸ,‌ ಕೆಲಸ.‌

ಬೆಳಗಾವಿ ಏರ್ಪೋರ್ಟ್ ಪೊಲೀಸ್ ಸಿಬ್ಬಂದಿ ಚಿತ್ರಣ.‌ಕರೊನಾ ಬಳಿಕ ರಾಜ್ಯದ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಮನೆ, ಮಕ್ಕಳನ್ನು ವಾರಗಟ್ಟಲೆ ಬಿಟ್ಟಿದ್ದಾರೆ.

ಸರ್ಕಾರ,‌ ಜಿಲ್ಲಾಧಿಕಾರಿ, ಇನ್ನಿತರ ಇಲಾಖೆಯ ಅಧಿಕಾರಿಗಳು,‌‌ ಸಿಬ್ಬಂದಿಗಳಿಗಿಂತಲೂ ಬಡ ಜನರು, ಅನಾಥರ ಸಂಕಷ್ಟವನ್ನು ಕಣ್ಣಾರೆ ಕಾಣುತ್ತಿರುವವರು ಸಹ ಪೊಲೀಸರು.

ಸಂಕಷ್ಟಗಳಿಗೆ ಮಿಡಿಯುವ ಮೂಲಕ‌ ಬೆಳಗಾವಿ ಏರ್ ಪೋರ್ಟ್ ಪೊಲೀಸ್ ಠಾಣೆಯ ಪೊಲೀಸರು ಹೊಸ ಮನ್ವಂಥರ ಸೃಷ್ಟಿಸಿದ್ದಾರೆ.

ಲಾಠಿ ಹಿಡಿದ ಕೈಗಳನ್ನಷ್ಟೇ ನೋಡಿದವರಿಗೆ ಅನ್ನ ಹಿಡಿದ ಕೈಗಳು ಬೆಳಗಾವಿಯಲ್ಲಿ ಕಾಣತೊಡಗಿದೆ.

ಕಡಿಮೆ ಸಂಬಳದ‌ ನಡುವೆಯೂ ಸಂಬಳದ ಹಣದಲ್ಲಿ ಈ ಪೊಲೀಸರು‌ ನೆರವಾಗಿದ್ದಾರೆ. ಮುಂದಿನ ಸಂಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಮಧ್ಯಮ ವರ್ಗದ ಜನರು ಒಂದೊಂದು ರೂಪಾಯಿಯನ್ನು ಜೋಪಾನ ಮಾಡಿಕೊಳ್ಳುತ್ತಿದ್ದರೆ ಇವರು ಮಾತ್ರ ಸಂಬಳದಲ್ಲಿ ಸಾಕಷ್ಟು ಹಣವನ್ನು ಅನಾಥರಿಗಾಗಿ ವ್ಯಯಿಸಿದ್ದಾರೆ.

ಪ್ರತಿ ದಿನ ಬಡವರ ಕಷ್ಟ ನೋಡುತ್ತಿದ್ದೇವೆ. ಒಂದೊಂದು ಒತ್ತಿನ ಕೂಳಿಗೂ ಕೆಲವರಿಗೆ ತೊಂದರೆಯಾಗಿದೆ. ಹೀಗಿದ್ದಾಗ ಅನಾಥರಿಗೆ,‌ ಅನಾಥರನ್ನು ನೋಡಿಕೊಳ್ಳುವ ಸಂಸ್ಥೆಗಳಿಗೆ ತೊಂದರೆ ಹೆಚ್ಚಿದೆ ಎಂದು ಅನಾಥರಿಗೆ ನೆರವಾಗಲು ನಿರ್ಧರಿಸಿದವು ಎನ್ನುತ್ತಾರೆ ಠಾಣೆಯ PSI ಈರಪ್ಪ ವಾಲಿ.

ಸಿಬ್ಬಂದಿಗಳೇ ಹಣ ಹಾಕಿಕೊಂಡು ಇನ್ನೂರು ಮಂದಿ ವೃದ್ಧರು, ಅನಾಥ ಮಕ್ಕಳು, ಕಿವುಡ ಮಕ್ಕಳ ಸಂಸ್ಥೆಗಳಿಗೆ‌ ನೆರವು ನೀಡಿದ್ದಾರೆ.

ಸ್ವಾಮಿ ವಿವೇಕಾನಂದ ಅನಾಥ ಮಕ್ಕಳ ಶಾಲೆ, ಸಮರ್ಥನ ಕುರುಡ ಮಕ್ಕಳ ಶಾಲೆ, ಜೀಸಸ್ ಕೇರ್ ಅನಾಥ ಶ್ರಮಕ್ಕೆ ಅಕ್ಕಿ, ಎಣ್ಣೆ, ಬೇಳೆ ಕಾಳು, ಮೊಟ್ಟೆ, ತರಕಾರಿ ಖರೀದಿಸಿ ಕೊಟ್ಟಿದ್ದಾರೆ. ಕೆಲವು ದಿನಗಳ ಮಟ್ಟಿಗೆ ಈ ಅನಾಥರ ಹೊಟ್ಟೆ ತುಂಬಲಿದೆ.

ಈರಪ್ಪ ವಾಲಿ ಅವರೊಂದಿಗೆ ಸಿಬ್ಬಂದಿಗಳಾದ ಅನಂತ ಕುಮಾರ್, ದಳವಾಯಿ ಇನ್ನೂ ಹಲವರು ಈ ನೆರವಿಗೆ ಕೈ ಜೋಡಿಸಿದ್ದಾರೆ.

ಈ ಪೊಲೀಸರ ಈ ದೊಡ್ಡ ನೆರವು ಕರ್ನಾಟಕದ ಮಟ್ಟಿಗೆ ಮೊದಲಾಗಿದೆ. ಪೊಲೀಸರ ಅಂತಃಕರಣ ಅನಾವರಣಗೊಂಡಿದೆ. ಪೊಲೀಸರು ಕಾನೂನು ಪಾಲಕರಷ್ಟೇ ಅಲ್ಲ ಅನ್ನ ಕೊಡುವ ದಾತರೂ ಆಗುತ್ತಾರೆ ಎಂಬಂತ್ತಿದೆ ಈ ಪೊಲೀಸರ ಕೆಲಸ.

ಕನ್ನಡ ಭಾಷೆ ಶೋಕಿಯಾಗದಿರಲಿ

1

ಮಮತಾ ಗೌಡ


ನಮ್ಮ ಭಾಷೆ ನಮ್ಮ ಹೆಮ್ಮೆ,

ನಮ್ಮ ಸಂಸ್ಕತಿ ನಮ್ಮ ಹೆಮ್ಮೆ,

ಹುಟ್ಟಿದರೆ ಕನ್ನಡ ನಾಡ ಲ್ಲೆ ಹುಟ್ಟಬೇಕು ,

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ,

ಕನ್ನಡ ಎಂದಾಕ್ಷಣ ನನಗೆ ನೆನಪಾಗೋ ಸಾಯುಗಳಿವು. ನಮ್ಮ ಸಂಸ್ಕೃತಿನೇ ಹಾಗೇ ಕನ್ನಡ ಎನ್ನುವ ಮೂರು ಅಕ್ಷರಗಳಲ್ಲಿ ಪ್ರೀತಿ, ಸಹನೆ, ಸೌಹಾರ್ದಯ ಎಲ್ಲವನ್ನು ತನ್ನಲ್ಲಿ ಅಡಗಿಸಿ ಕೊಂಡಿದೆ.


ಕಾರ್ಟೂನ್ ಕಾರ್ನರ್,: ಕೆ.ಎಂ. ಮುಸ್ತಾಫ, ರಿಪ್ಪನ್ ಪೇಟೆ


ಹರಿಶಿನ ಕುಂಕುಮ ಸಾರುವ ಕನ್ನಡ :

ಹೌದು ನಾವು, ಅಂದರೆ ಹೆಣ್ಣು ಮಕ್ಕಳು ದರಿಸುವ ಹರಿಶಿನ ಕುಂಕುಮದಲ್ಲಿ ಅಡಗಿದೆ ನಮ್ಮ ಸಂಸ್ಕೃತಿ, ನಾವು ಕನ್ನಡಿಗರು ಎಲ್ಲ ಭಾಷೆಗು ನಮ್ಮ ಕರ್ನಾಟಕ “ತವರು ಮನೆಯಾಗಿಬಿಟ್ಟಿದೆ” ಆದರೆ ಎಲ್ಲೋ ಒಂದು ಕಡೆ ನಮ್ಮ ಭಾಷೆ ತಬ್ಬಲಿಯಾಗದಿರಲಿ ಎನ್ನುವುದು ನನ್ನ ಆಸೆ. ನಮ್ಮ ಕನ್ನಡಕ್ಕೆ ವರುಷಗಳ ಇತಿಹಾಸವಿದೆ.

,ನದಿ ಮೂಲ, ಋಷಿ ಮೂಲ ಹಾಗೂ ಭಾಷೆ ಮೂಲ ಹುಡುಕಬಾರದಂತೆ ಆಗಾಗಿ ನಾನು ಹುಡುಕಲು ಹೋಗುವುದಿಲ್ಲ ಆದರೆ ಕನ್ನಡವನ್ನು ಕೆಳ ಮಟ್ಟದಲ್ಲಿ ನೋಡಿದರೆ, ಆಡಿದರೆ ಸಹಿಸುವುದಿಲ್ಲ.

ನಮ್ಮವರೇ ನನಗೆ ಕನ್ನಡ ಗೊತ್ತಿಲ್ಲ ಅಂದಾಗ ನನಗೆ ಬಹಳಷ್ಟು ನೋವಾಗುತ್ತದೆ. ಇಂದು ಅನ್ಯಭಾಷೆಗಳು ನಮ್ಮವರ ಮೇಲೆ ಮಂಕು ಬೂದಿ ಎರಚಿದ್ದರೆ ಎಂದು ನನಗೆ ಅನಿಸುತ್ತದೆ, ಈ ಮಧ್ಯೆ ಭಾಷೆ ಬಾವಾನೆಯಾಗಿ ಉಳಿದಿಲ್ಲ ಎಲ್ಲ ತಂದೆ -ತಾಯಿಯಾರಿಗೆ ತಮ್ಮ ಮಕ್ಕಳು ಇಂಗ್ಲಿಷನಲ್ಲೇ ಮಾತಾನಡಬೇಕು ಎನ್ನುವ ಆಸೆ, ಆಸೆಯಿರಲಿ ಆದರೆ ನಮ್ಮ ಕನ್ನಡವನ್ನು ಕಲಿಸಿ ಎನ್ನುವುದು ನನ್ನ ಆಸೆ.

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ – ಈ ಹಾಡು ಕೇಳಿದಾಗ ಮೈರೋಮಾಂಚನವಾಗುತ್ತದೆ. ಇದರಲ್ಲಿ ಬಾವನೆಗಳ ಭಂಡಾರವಿದೆ. ಇತ್ತೀಚೆಗೆ ನಾನು ಕೇರಳ ಪ್ರವಾಸದಲ್ಲಿ ಒಬ್ಬ ವಿದೇಶಿ ಮಹಿಳೆಯನ್ನು ಭೇಟಿಯಾದೆ.‌ ಆಕೆಯ ಹೆಸರು Esperanza ನನಗೆ ಕುತೂಹಲ ತಾಳಲಾರದೇ ನಾನೇ ಆಕೆಯನ್ನು ಯಾವ ದೇಶ ಎಂದು ಕೇಳಿದೆ ಆಕೆ Spain ಎಂದು ಉತ್ತರಿಸಿದರು. ಮಾತಿನ ನಡುವೆ ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ನನಗೆ ಕನ್ನಡದವರು ಎಂದರೇ ಬಹಳ ಎಷ್ಟ ಎಂದು ಅಂದಾಗ ನನಗೆ ಬಹಳ ಹೆಮ್ಮೆ ಎನಿಸಿತು. ಆಕೆ ತನ್ನ ಫೇಸ್ಬುಕ್ ಎಕೌಂಟ್ ಅನ್ನು ನನಗೆ ಕೊಟ್ಟು ನಾನು ಕರ್ನಾಟಕಕ್ಕೆ ಬಂದಾಗ ನಿಮ್ಮನ್ನು ಮತ್ತೊಮ್ಮೆ ಬೇಟೆಯಾಗುತ್ತೇನೆ ಎಂದು ಹೊರಟರು. ಆಗ ನನಗೆ ಅನಿಸಿದ್ದು ವಿದೇಶಿಗರಿಗೆ ನಮ್ಮ ಭಾಷೆ ಮೇಲೆ ಎಷ್ಟೊಂದು ಅಭಿಮಾನ ಇರುವಾಗ ನಮಗೆ ನಮ್ಮ ಭಾಷೆ ಮೇಲೆ ಇನ್ನೆಷ್ಟು ಅಭಿಮಾನ ಇರಬಾರದು ಅನಿಸಿತು. ಯಾರು ಬೇರೆ ದೇಶದವರು ನಮ್ಮ ಭಾಷೆಯನ್ನು ಇಷ್ಟೊಂದು ಪ್ರೀತಿಸಿಬೆಕಾದರೆ ಇನ್ನೂ ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ನಾವು ಈ ಭಾಷೆಯನ್ನು ತಿಳಿದೋ ತಿಳಿಯದೆನೋ ತಬ್ಬಲಿ ಭಾಷೆ ಮಾಡುತಿದ್ದಿವಿ ಅನ್ಸುತ್ತೆ.

ಶೋಕಿಗೋಸ್ಕರ

ಯಾರು ಬೇರೆ ದೇಶದವರು ನಮ್ಮ ಭಾಷೆಯನ್ನು ಇಷ್ಟೊಂದು ಪ್ರೀತಿಸಿಬೆಕಾದರೆ ಇನ್ನೂ ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ನಾವು ಈ ಭಾಷೆಯನ್ನು ತಿಳಿದೋ ತಿಳಿಯದೆನೋ ತಬ್ಬಲಿ ಭಾಷೆ ಮಾಡುತಿದ್ದಿವಿ ಅನ್ಸುತ್ತೆ.

ಶೋಕಿಗೋಸ್ಕರ, ಕೇವಲ ನವೆಂಬರ್ ೧ ನೇ ತಾರೀಖಿಗೆ ಕನ್ನಡಿಗಾರಗಬೇಡಿ, ತಾಯಿ ಭುವನೇಶ್ವರಿಯನ್ನು ತಬ್ಬಲಿ ಮಾಡಬೇಡಿ ನೆಲ,ಜಲ , ಭಾಷೆ, ಭಾವನೆಗಳಿಗೆ ಬೆಲೆ ಕೊಡಿ. ಸಾವಿರಾರು ಕವಿಗಳ ನಾಡನ್ನು, ಕಲಿಗಳ ಬಿಡನ್ನು ತಬ್ಬಲಿ ಮಾಡದಿರಿ. ಕರ್ನಾಟಕ ತೊರೆಯದಿರಿ ಕನ್ನಡ ಅಳಿಸದಿರಿ.

ನಾವು ಬಹು ಮುಖ್ಯವಾಗಿ ಪಾಲಿಸಬೇಕಾದ ಅ೦ಶಗಳು :

೧. ಮಾತೃ ಭಾಷೆಯನ್ನು ಮನೆಯಲ್ಲಿ ಆದಷ್ಟು ಬಳಸಿ, ಉಳಿಸಿ.

೨. ಮಕ್ಕಳಿಗೆ ಕನ್ನಡ ಕಥೆ ಹೇಳಿ ಅವರಿಗೆ ಇಂದಿನಿದಲೇ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿ.

೩. ಹೊರಗಡೆ ಹೋದಾಗ ಮೊದಲು ಕನ್ನಡದಲ್ಲಿ ವ್ಯವಹಾರಿಸಿ ಅವರಿಗೆ ಅರ್ಥವಾಗದೆ ಹೋದಾಗ ಇಂಗ್ಲೀಷ್ ಬಳಸಿ.

೪. ಕನ್ನಡಕ್ಕೆ ವರ್ಷಗಳ ಇತಿಹಾಸವಿದೆ ತಿಳಿದಿರಲಿ.

ಕನ್ನಡ ಶೋಕಿಯಾಗದೆ, ಕನ್ನಡಕ್ಕೆ ಮಹತ್ವ ನೀಡಿ, ಶಾಪ್ಗಳಲ್ಲಿ ಕನ್ನಡ ಬೋರ್ಡ್ಗಳಿರುವಂತೆ ನೋಡಿಕೊಳ್ಳಿ.

ಜೈ ಭುವನೇಶ್ವರಿ…..

ಆಗಸ್ಟ್ ವರೆಗೆ ಶಾಲಾ-ಕಾಲೇಜು ನಡೆಯೋದು ಡೌಟು

Publicstory.in


Tumkuru: ,ಈ ಸಾಲಿನ ಶೈಕ್ಷಣಿಕ ವರ್ಷ 2 ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನೂ ಮುಗಿದಿಲ್ಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯೇ ಮುಗಿದಿಲ್ಲ.‌ ಲಾಕ್ ಡೌನ್ ಮುಗಿಯದಿರುವ ಕಾರಣ ಎಸ್ ಎಸ್ ಎಲ್ಸಿ ಪರೀಕ್ಷೆ ಮುಗಿದು, ಫಲಿತಾಂಶ ನಿಧಾನವಾಗುವ ಕಾರಣ ಶೈಕ್ಷಣಿಕ ವೇಳಾಪಟ್ಟಿ ಏರುಪೇರಾಗುವ ಸಂಭವವೇ ಹೆಚ್ಚಿದೆ.

ಲಾಕ್ ಡೌನ್ ಮುಗಿದ ನಂತರವೇ ಪರೀಕ್ಷೆ
ಶಾಲೆ ತೆರೆದರೂ ಮಕ್ಕಳು ಬರೋದು ಡೌಟ್.
ಸಮವಸ್ತ್ರ, ಪಠ್ಯ ಸಿಗಲು ಮತ್ತಷ್ಟು ದಿನ ಬೇಕು. ಹಾಗಾಗಿ ಶೈಕ್ಷಣಿಕ ವರ್ಷ ಇಳಿಸಲು ಒತ್ತಾಯ. 8 ತಿಂಗಳಿಗೆ ಶೈಕ್ಷಣಿಕ ವರ್ಷ ಇಳಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಆಗ್ರಹಿಸಿದೆ.

ಅಜ್ಞಾತಿಗಳ ಆತ್ಮ ಚರಿತ್ರೆ

ಡಾ.ಶ್ವೇತಾರಾಣಿ ಎಚ್


ಕಾದಂಬರಿ ಭಾಗ-2

( ಇಲ್ಲಿಯವರಿಗೆ: ಕರಣಿಕರ ಮನೆಯಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕರಣಿಕರ ಮನೆಯಲ್ಲಿ ಏನೊ ನಡೆಯುತ್ತಿದೆ ಎಂದು ಹಲವಾರು ಮಂದಿ ಹಲವು ತರ ಮಾತನಾಡಿಕೊಂಡರು. ಕರಣಿಕರಾದರೊ ಮನೆಯಲ್ಲೂ ಮೌನ ವಹಿಸಿದ್ದರು. ).

ತೋಟವನ್ನು ಎರಡು ಮೂರು ಸುತ್ತು ಹಾಕಿಕೊಂಡು ಬಂದರೂ ಕರಣಿಕರಿಗೆ ಮನಸ್ಸು ಸಮಾಧಾನಗೊಳ್ಳಲಿಲ್ಲ. ಬೇಲಿಯ ಮೇಲೊಂದು ಹಾವುರಾಣಿ ನೋಡಿದರು. ಹಾವುರಾಣಿ ಕಂಡಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ಏನೋ ಮನಸ್ಸಿಗೆ ತೋಚಿದಂತಾಗಿ ಬಿರಬಿರನೇ ಮನೆಯ ಕಡೆಗೆ ಹೆಜ್ಜೆ ಹಾಕಿದರು.

ಹೊತ್ತು ಮುಳುಗಿದ ಕಾರಣ ಮನೆದೇವರು ನರಸಿಂಹಸ್ವಾಮಿ ದೇವರ ವಿಗ್ರಹದ ಮುಂದೆ ದೀಪ ಹಚ್ಚಿ ಊಟಕ್ಕೆ ಕುಳಿತರು. ಮನೆಯ ಎಲ್ಲ ಗಂಡಾಳುಗಳು ಊಟಕ್ಕೆ ಕುಳಿತಿದ್ದರು, ಎಲ್ಲರ ಮುಖವನ್ನೊಮ್ಮೆ ನೋಡಿದರು, ಕೆಲವರು ಏನೂ ಗೊತ್ತೇ ಇಲ್ಲದಂತೆ ಊಟ ಮಾಡುತ್ತಿದ್ದರೆ, ಬೊಮ್ಮೇಗೌಡನ ಕಣ್ಣಲ್ಲಿ ಮಾತ್ರ ರೋಷ ಉಕ್ಕುತ್ತಿರುವುದನ್ನು, ಅನ್ಯಮನಸ್ಕನಂತೆ ಊಟ ಮಾಡುತ್ತಿರುವುದನ್ನು ಕಂಡರು. ಬೇರೆಯವರು ತಮ್ಮಲ್ಲಿರುವ ರೋಷವನ್ನು ಕರಣಿಕರ ಮುಂದೆ ತೋರಗೊಡುತ್ತಿಲ್ಲ ಎಂಬುದನ್ನು ಅರಿಯದಷ್ಟು ಕರಣಿಕ ನರಸೇಗೌಡರು ದಡ್ಡರೇನು ಆಗಿರಲಿಲ್ಲ. ಆದರೆ, ಮನೆಯ ಹೆಂಗಸೆರೆದರು ಏನನ್ನು ಅವರು ಮಾತನಾಡುತ್ತಿರಲಿಲ್ಲ. ಹೆಂಗಸರ ಬಳಿ ಆಡಿದ ಮಾತು ಹೆಚ್ಚು ದಿನ ಗುಟ್ಟಾಗಿ ಉಳಿಯುವುದಿಲ್ಲ ಎಂಬುದು ಅವರ ಗಟ್ಟಿ ನಿಲುವಾಗಿತ್ತು. ಆದರೆ ಅಮ್ಮನ ವಿಷಯ ಬಂದಾಗ ಮಾತ್ರ ಅವರು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದರು. ಅಮ್ಮನ ಬಳಿ ಏನೇ ಹೇಳಿದರೂ ಗುಟ್ಟು ರಟ್ಟಾಗುವುದಿಲ್ಲ ಎಂಬುದು ಒಂದಾದರೆ, ತಪ್ಪಾದರೆ ತಿದ್ದುತ್ತಾಳೆ ಎಂಬ ನಂಬಿಕೆಯೂ ಕಾರಣವಾಗಿತ್ತು. ಅಪ್ಪ ಹೋದ ಮೇಲೆ ಎಲ್ಲವೂ ಅಮ್ಮನಲ್ಲಿ ಹೇಳಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ರಾತ್ರಿ ಅಮ್ಮನಿಗೆ ಹೇಳಿಯೇ ತೀರಬೇಕು ಎಂದು ಮನಸ್ಸಿನಲ್ಲೇ ಲೆಕ್ಕಹಾಕಿಕೊಂಡು ಊಟ ಮುಗಿಸಿ ಎದ್ದರು.

ಅಜ್ಞಾತಿಗಳ ಆತ್ಮಚರಿತ್ರೆ ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ

ಎರಡು-ಮೂರು ದಿನಗಳೇ ಕಳೆದಿರಬೇಕು. ಅದೇ ತೊಳಲಾಟದಲ್ಲಿದ್ದ ಕರಣಿಕರು ಒಂದು ಭಾರೀ ಉಪಾಯವನ್ನೇ ಮಾಡಿದರು. ಯಾರಿಗೂ ಅನುಮಾನ ಬಾರದಿರುವಂತೆ ಮುತುವರ್ಜಿ ವಹಿಸಿದ್ದರು. ಮನೆಯ ಕೆಲವರಿಗೂ ಅದರ ಗುಟ್ಟು ಬಿಟ್ಟುಕೊಡಲಿಲ್ಲ. ಹಿಂದಲ ಕೋಣೆಯಲ್ಲಿ ಒಂದಿಬ್ಬರು ಮನೆಯ ಗಂಡಾಳುಗಳನ್ನೇ ಕರೆದುಕೊಂಡು ಒಂದೇ ಸಮನೇ ಎರಡು ಮೂರು ದಿನ ಬಾಗಿಲು ಹಾಕಿಕೊಂಡು 20 ಆಳುದ್ದದ್ದ ಗುಂಡಿ ತೆಗೆದರು., ಮನೆ ಎಂದರೇ ಅದೇನು ಸುಮ್ಮನೇ ಮನೆಯೇ ಹಿಂದಲಕೋಣೆ ಎಂದರೆ 200 ಅಡಿ ಉದ್ದಕ್ಕೂ ಅಗಲಕ್ಕೂ ಇದ್ದ ಕೋಣೆ. ಬರೀ ಮಡಕೆ, ದೊಡ್ಡದೊಡ್ಡ ವಾಡೆಗಳನ್ನು ಜೋಡಿಸಿಟ್ಟದ್ದರು, ಮುನ್ನೂರಕ್ಕೂ ಹೆಚ್ಚಿದ್ದವು ವಾಡೆಗಳು, ನೂರಾರು ಮೂಟೆ ರಾಗಿ, ಭತ್ತವನ್ನು ತುಂಬಿ ತುಂಬಿ ಮಡಗಿದ್ದರು. 50 ಗಡಿಗೆಗಳ ಸಾಲಿನಲ್ಲಿ ಒಂದು ಸಾಲು ಪೂರಾ ತುಪ್ಪದ ಗಡಿಗೆಗಳೇ ಆಗಿದ್ದವು. ಕೆಲವು ದೊಡ್ಡ ಮಡಿಕೆಗಳ ತುಂಬಾ ಮೊಟ್ಟೆಗಳೇ ತುಂಬಿ ಇಡಲಾಗಿತ್ತು.

ಹಿಂದಲ ಮನೆ ಎಂದರೆ ಹೆಂಗಸರ ಕೋಣೆ ಎಂದೇ ಅರ್ಥ. ಅಲ್ಲಿ ಹೆಂಗಸರ ತಿಂಡಿ ತಿನುಸುಗಳದೇ ಸಾಮ್ರಾಜ್ಯ. ಆದರೆ ಈ ಹಿಂದಲಕೋಣೆಗೆ ಮಾತ್ರ ಎಲ್ಲ ಹೆಂಗಸರಿಗೂ ಪ್ರವೇಶ ಇರಲಿಲ್ಲ. ಕಿರಿದಾಗಿ ಇಟ್ಟಿದ್ದ ನಾಲ್ಕೈದು ಕಿಟಕಿಗಳಲ್ಲಿ ಬರುವ ಸಣ್ಣಬೆಳಕು ಬಿಟ್ಟರೆ ಸ್ವಲ್ಪ ಮಬ್ಬುಗತ್ತಲೆಯ ಸಾಮ್ರಾಜ್ಯ ಅದು. ಸಣ್ಣ ಕೂಸುಗಳು, ಮಕ್ಕಳು ಅತ್ತರೇ ಹಿಂದಲ ಮನೆಯ ದೆವ್ವ ಕರೆತ್ತೀವಿ ಎಂದು ಹೆದರಿಸಿ, ಹೆದರಿಸಿ ಸ್ವಲ್ಪ ದೊಡ್ಡವರು ಕೂಡ ಒಬ್ಬೊಬ್ಬರೇ ಆ ಮನೆಗೆ ಹೋಗಲು ಎದುರುತ್ತಿದ್ದರು.

ಕರಣಿಕರ ಅಮ್ಮ ಬಿಟ್ಟರೆ ಆ ಹಿಂದಲ ಕೋಣೆಗೆ ಒಬ್ಬೊಬ್ಬರೇ ಹೆಂಗಸರು ಹೋಗಿದ್ದನ್ನು ಯಾರೂ ಕಂಡಿರಲಿಲ್ಲ. ಇಬ್ಬಿಬ್ಬರು ಹೆಂಗಸರು ಜೋರಾಗಿ ಮಾತನಾಡಿಕೊಂಡು ಹೋಗಿ ಕರಣಿಕರ ಅಮ್ಮ ಹೇಳಿದ ವಸ್ತುವನ್ನು ಅಲ್ಲಿಂದ ತೆಗೆದುಕೊಂಡು ಬರುತ್ತಿದ್ದು ವಾಡಿಕೆಯಾಗಿಯೇ ಹೋಗಿಬಿಟ್ಟಿತ್ತು.

ಗುಂಡಿ ತೋಡಿದ ಕರಣಿಕರು ಮತ್ತೊಮ್ಮೆ ಪರಿಶೀಲಿಸಿಕೊಂಡು ಎಲ್ಲೂ ಕೂಡ ಅನುಮಾನ ಬಾರದಂತೆ ನೋಡಿಕೊಂಡು ಮನದಲ್ಲೇ ಮೀಸೆ ತಿರುವಿಕೊಂಡರು.

ಆ ಪಾಳೇಗಾರ ನಾಯಕನಿಗೆ ಬುದ್ಧಿ ಕಲಿಸಿಯೇ ತೀರಬೇಕು ಯಾರಿಗೂ ಅನುಮಾನ ಬರುವುದಿಲ್ಲ ಎಂದು ಮನದಲ್ಲೇ ಮಾತನಾಡಿಕೊಂಡು ಒಬ್ಬರೇ ಪಾಳೇಗಾರ ನಾಯಕನ ಅರಮನೆಯ ಕಡೆಗೆ ಹೊರಟರು.

ಪಾಳೇಗಾರ ಎಂದರೆ ರಾಜ, ಮಹಾರಾಜರ ಭವ್ಯತೆಯೇನು ಇರಲಿಲ್ಲ. ಎರಡೂರಿನ ಪಾಳೇಗಾರ. ಸೀದಾ ಮನೆಯೊಳಗೆ ಹೋದವರಿಗೆ ಪಾಳೇಗಾರ ಬಾಗಿಲಲ್ಲೇ ಸಿಗಬೇಕೇ? ನಸುನಕ್ಕುಕೊಂಡೇ ಪಾಳೇಗಾರ ಕರಣಿಕರನ್ನು ಮಾತನಾಡಿಸಿದ.

(ಮುಂದುವರೆಯುವುದು)

ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಬೇವಿನ ಮರಗಳ ಮುಂದೆ ಕಾಣುತ್ತಿರುವ ನೂರಾರು ಎಳನೀರ‌ ಬುರುಡೆಗಳು

Publicstory.in


ಚಿಕ್ಕನಾಯಕನಹಳ್ಳಿ; ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಎದುರು ನೂರಾರು ಬೇವಿ‌ನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.

ತಾಲೂಕಿನ ಯಾವುದೇ ಹಳ್ಳಿಗೆ ಹೋದರೂ ಊರ ಹೊರಗಿನ ಬೇವಿನ ಮರದ ಬುಡದಲ್ಲಿ ಬೇವಿನ ಸೊಪ್ಪು ಮುಡಿದಿರುವ ಎಳನೀರು ಬುರುಡೆಗಳು ಕಂಡುಬರುತ್ತಿವೆ. ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗ ಚಿಕ್ಕ ಮಗಳೂರು ಹಾಗೂ ಹಾಸನ ಜಿಲ್ಲೆಗಳ ಹಳ್ಳಿಗಳಲ್ಲೂ ಇಂಥವೇ ದೃಶ್ಯ ಕಣ್ಣಿಗೆ ರಾಚುತ್ತದೆ.


ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ಮಾರಿ ಮುನಿಸಿಕೊಂಡಿರುವ ಕಾರಣ ಕೋರೋನ ದಂತ ಮಾರಣಾಂತಿಕ ಕಾಯಿಲೆ ಬಂದಿದೆ. ಮಾರಿಗೆ ಶಾಂತಿ ಮಾಡಿ ಕರಗ ಪೂಜಿ ಊರಿನಿಂದ ಹೊರಗೆ ಕಳಿಸಿದರೆ ಊರಿಗೆ ಕೊರೋನ ಬರುವುದಿಲ್ಲ ಎಂಬುದು ಜನರ ನಂಬಿಕೆ. ಹೀಗಾಗಿ ಇಂಥ ಆಚರಣೆ ಮಾಡ ತೊಡಗಿದ್ದಾರೆ.

ಈ ಕುರಿತು 78 ವರ್ಷದ ವೃದ್ಧ ಗಂಗಣ್ಣ ಮಾತನಾಡಿ ಆಚರಣೆಗೆ ಅಜ್ಜಿ ಕಳಿಸುವುದು ಎನ್ನುತ್ತಾರೆ. ಮನುಷ್ಯನ ಉಪಟಳ ಹೆಚ್ಚಾದಾಗ ಭೂತಾಯಿ ಮಾರಿಯ ರೂಪ ತಾಳುತ್ತಾಳೆ. ಆಗ ಮಾರಣಾಂತಿಕ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆ ಹಿಂದೆ ಪ್ಲೇಗ್ ಕಾಲರಾ ಲೂ ಬಂದಾಗ ಹೀಗೆ ಮಾಡಿದ್ದೆವು ಎಂದು ಹಿನ್ನೆಲೆಯನ್ನು ಬಿಚ್ಚಿಡುತ್ತಾರೆ.

ಊರಿನವರು ಒಟ್ಟಾಗಿ ಒಂದು ದಿನವನ್ನು ಮಾರಿ ಕಳಿಸಲು ನಿಗದಿ ಮಾಡುತ್ತಿದ್ದಾರೆ ಅಂದು ಪ್ರತಿ ಮನೆಯಿಂದ.ಕರಗ ಕಳಿಸಲಾಗುತ್ತದೆ. ವಾರದ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ನಿಗದಿ ಮಾಡಲಾಗುತ್ತಿದೆ. ಮೌಡ್ಯ ಆಚರಣೆಯ ಹೆಸರಿನಲ್ಲಿ ಹಳ್ಳಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಹಾಗೂ ಲಾಕ್ ಡೌನ್ ನಿಯಮಗಳು ಪಾಲನೆಯಾಗುತ್ತಿಲ್ಲ.

ಇದನ್ನು ಯಾರು ಹರಡಿರುವುದು ಎಂಬುದು ತಿಳಿಯುತ್ತಿಲ್ಲ. ಇಡೀ ಊರಿಗೆ ಊರೇ ಸೇರಿಕೊಂಡು ಈ ಆಚರಣೆ ಮಾಡುತ್ತಿರುವುದು ಮಾತ್ರ ಆತಂಕ‌ ಉಂಟು ಮಾಡಿದೆ ಎನ್ನುತ್ತಾರೆ ಕೆಲವರು.