Thursday, February 26, 2026
Google search engine
Home Blog Page 259

ಕಡತ ವಿಲೇವಾರಿಗೆ ರಾಜ್ಯಕ್ಕೆ ಮಾದರಿಯಾದ ಚಿಕ್ಕಮಗಳೂರು ಎಸಿ

0

🖋 ಲಕ್ಷ್ಮೀಕಾಂತರಾಜು ಎಂ.ಜಿ


ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಚೇರಿಗಳಲ್ಲಿ ರೈತರ ವ್ಯಾಜ್ಯಗಳ ಕಡತಗಳು ಧೂಳು ಹಿಡಿಯುತ್ತಿರುವ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಯೋರ್ವರ ಸ್ವಯಂ ಆಸಕ್ತಿಯಿಂದ ಅವರ ಕಚೇರಿಯಲ್ಲಿನ ರೈತರ ಪ್ರಕರಣಗಳೆಲ್ಲಾ ಬಗೆ ಹರಿಯುತ್ತಿವೆ.


ಕಾರ್ಟೂನ್ ಕಾರ್ನರ್: ಮುಸ್ತಾಫ್ ಕೆ.ಎಂ. ರಿಪ್ಪನ್ ಪೇಟೆ


ಹೌದು. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ವಿಭಾಗದ ಉಪವಿಭಾಗಾಧಿಕಾರಿಯಾದ ಡಾ. ಎಚ್ ಎಲ್ ನಾಗರಾಜು ಅವರಿಗೆ ರಾಜ್ಯದಲ್ಲೇ ಅತಿ ಹೆಚ್ಚು ಪ್ರಕರಣಗಳ ಬಗೆಹರಿಸಿದ ಕೀರ್ತಿ ಸಲ್ಲುತ್ತದೆ.

ತಾವು ಕರ್ತವ್ಯ ನಿರ್ವಹಿಸಿದ ಕಡೆಯಲ್ಲೆಲ್ಲ ಸಾಮಾಜಿಕ ನ್ಯಾಯ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಕೆಲಸ ಮಾಡಿರುವ ಇವರು ಚಿಕ್ಕಮಗಳೂರು ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳ ಅವಧಿಯೊಳಗೆ ಅವರ ಕೆಲಸದ ವೇಗವನ್ನು ಉಪವಿಭಾಗಾಧಿಕಾರಿ ನ್ಯಾಯಾಲಯದ ಅಂಕಿ ಅಂಶಗಳೇ ದೃಢೀಕರಿಸುತ್ತವೆ.

ಡಾ. ಎಚ್‌.ಎಲ್ .ನಾಗರಾಜು ಅವರು ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 1628 ವ್ಯಾಜ್ಯ RA ಪ್ರಕರಣಗಳಲ್ಲಿ 423 ಪ್ರಕರಣಗಳನ್ನ ಬಗೆಹರಿಸಿ 45 ಪ್ರಕರಣಗಳನ್ನ ವಜಾಗೊಳಿಸುವ ಮೂಲಕ 468 ಪ್ರಕರಣಗಳಿಗೆ ಇತೀಶ್ರೀ ಹಾಡಿ ರೈತರ ಪ್ರಕರಣಗಳಿಗೆ ಮುಕ್ತಿ ನೀಡಿದ್ದಾರೆ.

ಇದರ ಜೊತೆಗೆ ಪಹಣಿ ತಿದ್ದುಪಡಿ ಪ್ರಕರಣಗಳಲ್ಲಿ 135 ಪ್ರಕರಣಗಳನ್ನ ಬಗೆಹರಿಸುವುದರ ಮೂಲಕ ಒಟ್ಟು 603 ಪ್ರಕರಣಗಳನ್ನ ಬಗೆ ಹರಿಸಿ ಹೆಚ್ಚು ಪ್ರಕರಣಗಳನ್ನ ವಿಚಾರಣೆ ನಡೆಸಿ ತೀರ್ಪು ನೀಡಿ ರಾಜ್ಯದ ಮೊದಲ ಸ್ಥಾನದಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯವರ ನ್ಯಾಯಾಲಯ ಮುಂಚೂಣಿಯಲ್ಲಿದೆ.

ಅರೆ ನ್ಯಾಯಿಕ ಮಂಡಳಿಗಳಾದ ತಹಸೀಲ್ದಾರ್ ,ಎಸಿ,ಡಿಸಿ ಕೋರ್ಟ್ ಗಳಲ್ಲಿ ವಿಚಾರಣೆ ಇದ್ದು ಪೀಠಾಸನಾಧಿಕಾರಿಗಳು ವಿಚಾರಣೆಗೆ ಸಿಗದೆ ರೈತರು ನ್ಯಾಯಾಲಯಗಳಿಗೆ ವರ್ಷಗಳ ಕಾಲ ಅಲೆದರೂ ಪ್ರಕರಗಳು ಮಾತ್ರ ಬಗೆ ಹರಿದಿರುವುದಿಲ್ಲ. ಇಂಥಹ ಸಂದರ್ಭದಲ್ಲಿ ಚಿಕ್ಕಮಗಳೂರು ವಿಭಾಗಾಧಿಕಾರಿಯವರು ಸ್ವಯಂ ಮುತುವರ್ಜಿಯ ಮೂಲಕ ರೈತರ ಭೂ ವಿವಾದ ಬಗೆಹರಿಸಿ ರೈತರುಗಳ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಚಿಕಮಗಳೂರು ಉಪ ವಿಭಾಗೀಯ ಕಚೇರಿಯಲ್ಲಿ ರೈತರ ಸಮಸ್ಯೆಗಳ‌ ಬಗೆಹರಿಸುತ್ತಿರುವ ಬಗ್ಗೆ ಅಲ್ಲಿನ ಅನೇಕ ರೈತರು ನನ್ನೊಂದಿಗೆ ಸಾಕಷ್ಟು ಸಲ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲಿನ ಮಾದರಿಯನ್ನು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿ ಕಚೇರಿಗಳಲ್ಲೂ ಜಾರಿಗೆ ತರಲು ಸರ್ಕಾರ ಆಸಕ್ತಿ ವಹಿಸಬೇಕು ಎನ್ನುತ್ತಾರೆ ಪ್ರಾಂತ ರೈತ ಸಂಘದ ತುಮಕೂರು ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ.

ಸದಾ ಜನರ ಸೇವೆಗೆ ಹೆಸರಾಗಿರುವ ಡಾ. ಎಚ್ ಎಲ್ ನಾಗರಾಜು ಅವರು ಅತ್ಯಂತ ಪ್ರಾಮಾಣಿಕ ಅಧಿಕಾರಿಯೆಂಬುದು ಅವರು ಈ ಹಿಂದೆ ಅವರು ಕೆಲಸ ನಿರ್ವಹಿಸಿದ ಕಡೆಯಲ್ಲಾ ರುಜುವಾತಾಗಿದೆ. ಇಂಥಹ ಪ್ರಾಮಾಣಿಕ ಅಧಿಕಾರಿಯನ್ನ ಸರ್ಕಾರ ಮತ್ತಷ್ಟು ಪ್ರೋತ್ಸಾಹಿಸಬೇಕಿದೆ.


ನಾನು ತಹಸೀಲ್ದಾರ್ ಹುದ್ದೆಯಿಂದಲೂ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಸಾರ್ವಜನಿಕರ ಹಾಗೂ ವಿಶೇಷವಾಗಿ ರೈತರ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದೇನೆ. ಸರ್ಕಾರಿ ಶಾಲೆಗಳನ್ನ ಉಳಿಸಲು ನನ್ನ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಇಷ್ಟಾದರೂ ಕೆಲಸ ಮಾಡುವ ಹುಮ್ಮಸ್ಸು ಮತ್ತಷ್ಟೂ ಹೆಚ್ವಿದೆ. ನನ್ನದು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕು. ನನ್ನ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಜನರಿಗೆ ಸೇವೆ ಮಾಡುವ ಅವಕಾಶವನ್ನ ಸರ್ಕಾರ ಮಾಡಿಕೊಟ್ಟರೆ ಇನ್ನೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವ ಆಸೆ ಇದೆ ಎನ್ನುತ್ತಾರೆ ನಾಗರಾಜ್

ತರಕಾರಿ ವಿತರಣೆ

ಕೊರೊನಾ ರೋಗ ಹರಡದಂತೆ ಮುನ್ನೆಚ್ಚರಿಕೆಯಿಂದ  ಪಾವಗಡದಲ್ಲಿ ಸೋಮವಾರ ಸಂತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ ಮೊಹಮದ್ ಇಮ್ರಾನ್   ಪಟ್ಟಣದ 800 ಕುಟುಂಬಗಳಿಗೆ ತರಕಾರಿ ವಿತರಿಸಿದರು.    ಮಾಜಿ ಪುರಸಭೆ ಅಧ್ಯಕ್ಷ ಮೊಹಮ್ಮದ್  ಫಜಲುಲ್ಲಾ,  ಪುರಸಭೆ ಸದಸ್ಯ ಮಣಿ, ಮಹಮ್ಮದ್ ಜಾವೀದ್ ,ಅರುಣ್ ಕುಮಾರ್,  ಶಿವಪ್ಪ , ರಂಗಸ್ವಾಮಿ,  ನಾಗೇಂದ್ರ ,ಕಾರ್ತಿಕ್ ತರಕಾರಿ ವಿತರಿಸುವ ಕೆಲಸದಲ್ಲಿ ಭಾಗವಹಿಸಿದ್ದರು.

ಬಡ ಕುಟುಂಬಗಳಿಗೆ ಪಡಿತರ, ತರಕಾರಿ ವಿತರಣೆ

ಪಾವಗಡದ ಆಪ್ ಬಂಡೆ ಬಡ ಕುಟುಂಬಗಳಿಗೆ ಸೋಮವಾರ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ವತಿಯಿಂದ ಪಡಿತರ, ತರಕಾರಿ, ಮಾಸ್ಕ್ ವಿತರಿಸಲಾಯಿತು. ರಾಜ್ಯ ಘಟಕದ ಅಧ್ಯಕ್ಷ ಟಿ.ಎನ್. ನವೀನ್ ರಾವ್,  ವೈದ್ಯ ಡಾ. ಮಂಜುನಾಥ್ ಉಪಸ್ಥಿತರಿದ್ದರು.

ವಿಶ್ವವಿಜೇತ

ದೇವರಹಳ್ಳಿ ಧನಂಜಯ


ಬಲಾಢ್ಯ ಬಾಹುಬಲಿ,
ಮಹಾವೀರನಾದದ್ದು,
ಬಲದಿಂದಲ್ಲ ತ್ಯಾಗದಿಂದ.

ತನ್ನೆಲ್ಲ ಶಕ್ತಿಯನ್ನು
ಶರಣಾಗತಿಯಾಗಿಸಿದ
ಮಹಾವೀರ ಸೋಲಿಲ್ಲದ ಸರದಾರ.


ಸುದ್ದಿ, ನಿಮ್ಮೂರಿನ ವರದಿ, ಬರಹಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ: 9844817737


ಅಂದು ಭರತನ ವಿರುದ್ಧ
ಹೋರಾಡಿ ಗೆದ್ದಿದ್ದರೆ
ಭರತಖಂಡಕ್ಕಷ್ಟೇ ರಾಜನಾಗುತ್ತಿದ್ದೆ

ಗೆಲ್ಲುವ ಕೊಲ್ಲುವ
ಭಯದ ಗುಲಾಮ ನಾಗುತಿದ್ದೆ.
ಆಯುಧಗಳ ಅಡಿಯಾಳಾಗುತ್ತಿದ್ದೆ.

ಹೊರಗಿನ ಗೆಲುವ ಸೋಲಾಗಿಸಿದೆ
ತನ್ನನ್ನು ತಾನು ಗೆಲ್ಲುವ
ಹೊಸ ಗೆಲುವಿಗೆ ನಾಂದಿಯಾದೆ.

ಶಾಂತಿ,ತ್ಯಾಗದ ಹೊಸ ಅಸ್ತ್ರವ
ಜಗತ್ತಿಗೆ ಪರಿಚಯಿಸಿದ
ಮಹಾವೀರ ವಿಶ್ವವಿಜೇತ

ಕ್ರೀಡೆ,ಕುತ್ತುಗಳನ್ನೂ ಯುದ್ಧೋನ್ಮಾದದಲ್ಲಿ
ನೋಡುವ ನಾವು ಕಲಿಯಬೇಕಿದೆ.
ನಿನ್ನಿಂದ ಶಾಂತಿಯ ಹೊಸ ಭಾಷೆ.

ಒಳಒಳಗೆ ಬೆಳೆಯಬೇಕಿದೆ.
ಸೃಷ್ಟಿಯ ಆಂತರ್ಯವ ಅರಿಯಬೇಕಿದೆ
ನಿರ್ವಾಣದ ಅರ್ಥ ತಿಳಿಯಬೇಕಿದೆ.

ಹಾಡಹಗಲೆ ಹತ್ಯೆ; ಕೊಲೆ ಮಾಡಿದವರೆ ಮೃತ ದೇಹವನ್ನು ಹೊತ್ತೊಯ್ದರು

ತುಮಕೂರು ಜಿಲ್ಲೆ ಪಾವಗಡ  ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ ಹಾಡಹಗಲು ಜನತೆ ನೋಡುತ್ತಿರುವಾಗಲೆ  ಪಡಿತರ ತರಲು ಗ್ರಾಮಕ್ಕೆ ಬಂದಿದ್ದ  ವ್ಯಕ್ತಿಯನ್ನು 6 ಜನರ ಗುಂಪು ಮಾರಕ  ಅಸ್ತ್ರಗಳಿಂದ ಸೋಮವಾರ ಕೊಲೆ ಮಾಡಿದೆ.
ತಾಲ್ಲೂಕಿನ ವಡ್ರೇವು ಗ್ರಾಮದ 40 ವರ್ಷ ವಯಸ್ಸಿನ ಗಂಗಾಧರ್ ಕೊಲೆಯಾದವರು.

ವಡ್ರೇವು ಗ್ರಾಮದ ವ್ಯಕ್ತಿ ಪಡಿತರ ಕೊಂಡೊಯ್ಯಲು ಬಿ.ಕೆ.ಹಳ್ಳಿ ಪಡಿತರ ವಿತರಣಾ ಕೇಂದ್ರಕ್ಕೆ ಬಂದಿದ್ದರು. ವಿತರಣಾ ಕೇಂದ್ರದ ಬಾಗಿಲು ತೆರೆಯದ ಕಾರಣ ವ್ಯಕ್ತಿ  ಮುಂಭಾಗ ಕುಳಿತಿದ್ದರು. 6 ಜನರ ತಂಡ ಏಕಾ ಏಕಿ ಹರಿತವಾದ ಆಯುಧದಿಂದ  ಗಂಗಾಧರ್   ಮೇಲೆ ಪ್ರಹಾರ ಮಾಡಲಾಗಿದೆ. ಹಲ್ಲೆಗೀಡಾದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನು ಕಂಡ ಗ್ರಾಮಸ್ಥರು 6 ಜನರ ಮೇಲೆ ಕೂಗಾಡಿದೆ. ಮೃತ ದೇಹವನ್ನು ಸ್ಥಳದಿಂದ ಕೊಂಡೊಯ್ಯವಂತೆ ಜನತೆ ಆಗ್ರಹಿಸಿದ್ದಾರೆ.  ಹತ್ಯೆ ಮಾಡಿದವರೆ ಮೃತದೇಹವನ್ನು ಕೊಂಡೊಯ್ದು ವಡ್ರೇವು ಗ್ರಾಮದ ಮೃತರ ಮನೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಪತಿ ಯನ್ನು ಏಕೆ ಹತ್ಯೆ ಮಾಡಿದೆ ಎಂದು ಪತ್ನಿ ಪ್ರಶ್ನಿಸಿದಾಗ ಅವಾಚ್ಯ ಶಬ್ಧಗಳಿಮದ ನಿಂದಿಸಿ ದೂರು ನಿಡಿದರೆ ನಿನ್ನನ್ನು ಹತ್ಯೆ ಮಾಡುತ್ತೇವೆ ಎಂದು ಹಂತಕರು ಹೆದರಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಮೃತರಿಗೆ 11 ವರ್ಷದ ಮಗಳು, 9 ವರ್ಷದ ಮಗ ಇದ್ದಾರೆ.

6 ಜನರು ಹತ್ಯೆಗೀಡಾದವರ ಸಮುದಾಯಕ್ಕೆ ಸೇರಿದವರಾಗಿದ್ದು, ಹಳೆಯ ವೈಷಮ್ಯ ಹತ್ಯೆಗೆ ಕಾರಣವಿರಬಹುದು ಎಂದು ಅನುಮಾನಿಸಲಾಗಿದೆ.

ತಿರುಮಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

 

ಇಲ್ಲಿವೆ ಈ ದಿನದ ನೀವು ಓದಲೇಬೇಕಾದ ಸುದ್ದಿಗಳು…

ವ್ಯಂಗ್ಯ ಚಿತ್ರಕತೆ: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ

ದೇಶಾದ್ಯಂತ ಕೊರೊನಾ ಮೃತರ ಸಂಖ್ಯೆ 101ಕ್ಕೆ ಏರಿಕೆ…

ದೇಶದಲ್ಲಿ ಒಂದೇ ದಿನ ಕೊರೊನಾಗೆ 5 ಬಲಿ.
ದೇಶದಲ್ಲಿ 3, 721ಕ್ಕೆ ಏರಿದ ಸೋಂಕಿತರ ಸಂಖ್ಯೆ.
ಉತ್ತರ ಪ್ರದೇಶ-235, ರಾಜಸ್ತಾನ- 201
ಆಂಧ್ರಪ್ರದೇಶದಲ್ಲಿ -226, ಕರ್ನಾಟಕ-144
ದೆಹಲಿ-445, ಕೇರಳ-306, ತೆಲಂಗಾಣ-272
ಮಹಾರಾಷ್ಟ್ರ -635, ತಮಿಳುನಾಡು-485.
ಇಂದು ಒಂದೇ ದಿನ 55 ಕೊರೊನಾ ಕೇಸ್.
ದೇಶದಲ್ಲಿ ಈವರೆಗೆ 290 ಮಂದಿ ಗುಣಮುಖ.


ರಾಜ್ಯದಲ್ಲಿ ಮತ್ತೆ 2 ಕೊರೊನಾ ಪಾಸಿಟಿವ್

ಇಂದು ಇಬ್ಬರಿಗೆ ಕೊರೊನಾ ಸೋಂಕು ದೃಢ.
ಬೆಂಗಳೂರಿನ ವೃದ್ಧ ದಂಪತಿಗೆ ಸೋಂಕು ಪತ್ತೆ
ಆಸ್ಪತ್ರೆಯಲ್ಲಿ ದಂಪತಿಗೆ ಕ್ವಾರಂಟೈನ್.
ಬೆಂಗಳೂರಲ್ಲಿ 57ಕ್ಕೇರಿದ ಸೋಂಕಿತರ ಸಂಖ್ಯೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆ.
ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್


ನಿಮ್ಮಂಥ ಪಾಪದವರಿಗೆ ಕೊರೊನಾ

ಬರುವುದಿಲ್ಲ: ಮಾಜಿ ಸಚಿವ ಖಾದರ್

ಶ್ರೀಮಂತರಿಗೇ ಈವರೆಗೆ ಕೊರೊನಾ ಬಂದಿರೋದು.
ವಿಮಾನ, ಹವಾನಿಯಂತ್ರಿತ ಕೊಠಡಿಗಳಲ್ಲಿ
ಇರುವವರಿಗೆ ಮಾತ್ರ ಕೊರೊನಾ ಸೋಂಕು ಬಂದಿದೆ.
ಹೆದರದಿರಿ, ಧೈರ್ಯದಿಂದ ಶುಚಿತ್ವ ಕೆಲಸದಲ್ಲಿ ಪಾಲ್ಗೊಳ್ಳಿ.
ಜಾಗೃತಿ ವಹಿಸಿಕೊಂಡು, ಮಾಸ್ಕ್ ಧರಿಸಿ ಕೆಲಸಕಾರ್ಯಗಳಲ್ಲಿ ಭಾಗಿಯಾಗಿ.
ಉಳ್ಳಾಲ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಧೈರ್ಯ ತುಂಬಿದ ಮಾಜಿ ಸಚಿವ ಯು.ಟಿ ಖಾದರ್


ಕ್ರೈಸ್ತರಿಗೆ ಮನೆಯಲ್ಲೇ ಪಾಮ್ ಸಂಡೆ ಸಂಭ್ರಮ

ಜಿಲ್ಲೆಯಾದ್ಯಂತ ಲಾಕ್ ಡೌನ್ ಹಿನ್ನೆಲೆ.
ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು.
ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ
ಚರ್ಚ್‍ಗಳ ಧರ್ಮಗುರುಗಳಿಂದ ಏಕಾಂಗಿಯಾಗಿ ಬಲಿಪೂಜೆ.
ಧರ್ಮಾಧ್ಯಕ್ಷರಿಂದ ತಮ್ಮ ನಿವಾಸದಲ್ಲೆ ಪಾಮ್ ಸಂಡೆ ಪ್ರಾರ್ಥನೆ.
ಪ್ರಥಮ ಬಾರಿಗೆ ಮೆರವಣಿಗೆ ಇಲ್ಲದೆ ನಡೆದ ಪಾಮ್ ಸಂಡೆ.
ಪಾಮ್ ಸಂಡೆಯಿಂದ ಬರುವ
ಈಸ್ಟರ್ ಸಂಡೆಯ ತನಕ ಕ್ರೈಸ್ತರಿಗೆ ಪವಿತ್ರ ವಾರ.
ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.
ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಸೂಚನೆ
ಇಂದು 3 ಗಂಟೆಗೆ ತಮ್ಮ ಮನೆಗಳಲ್ಲಿ ಜಪಸರ ಪ್ರಾರ್ಥನೆ ನೆರವೇರಿಸಿ
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಸೂಚನೆ.
ಕೊರೊನಾ ವೈರಸ್ ಮಾರಿಯಿಂದ ಹೊರಬರಲು ಈ ಪ್ರಾರ್ಥನೆ.
ರಾತ್ರಿ 9 ಗಂಟೆಗೆ ಮೊಂಬತ್ತಿ ಹಚ್ಚಿ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ.
ಮೊಂಬತ್ತಿ ಹಿಡಿದು ಗುಂಪುಗಳಲ್ಲಿ ಸೇರದಂತೆ ಸೂಚನೆ.
ವೀಡಿಯೋ ಸಂದೇಶದ ಮೂಲಕ ಬಿಷಪ್ ಜೆರಾಲ್ಡ್ ಸೂಚನೆ.


ದೀಪ ಹಚ್ಚಿ ಕೊರೋನಾ ಹೋರಾಟ ಅರ್ಥಪೂರ್ಣವಾಗಿಸಿ

ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಮನವಿ.
ದೀಪವೆಂಬುದು ರೋಗ ಪರಿಹಾರಕ ದಿವ್ಯ ವಸ್ತು
ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬ ತತ್ವ ದೀಪದಲ್ಲಿದೆ.
ಜಗತ್ತಿನಲ್ಲಿ ಕೊರೊನಾ ಕಾಯಿಲೆಯಿಂದ ಕತ್ತಲು ಆವರಿಸಿದೆ.
ಕತ್ತಲು ಓಡಿಸಲು ಇದು ಸಾಂಕೇತಿಕ ಆಚರಣೆ
ಅಗ್ನಿಯಿಂದ ಬೆಳಗುವ ಬೆಳಕು ದೇವತೆಗಳಿಗೆ ಪ್ರಿಯ. ಒಂಬತ್ತು ಕುಜನ ಸಂಖ್ಯೆ, ಕುಜ ಅಗ್ನಿತತ್ವದ ಅಧಿದೇವತೆ.
ಕುಜನ ಪ್ರತಿನಿಧಿ ಅಗ್ನಿಯ ಮೂಲಕ ಕೊರೋನಾವನ್ನು ಓಡಿಸಬೇಕು.
ಭಕ್ತರಲ್ಲಿ ದೀಪ ಹೊತ್ತಿಸಲು ಮನವಿ ಮಾಡಿದ ಸ್ವಾಮೀಜಿ.


ಸರ್ವರೂ ಜಾತಿ-ಧರ್ಮ ಮರೆತು ದೀಪ ಬೆಳಗಲು ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿಕೆ.
ಕೊರೋನಾ ವಿರುದ್ದ ಹೋರಾಟದಲ್ಲಿ ನಮ್ಮ ಪ್ರಜ್ಞೆ,
ಏಕತೆ ಮತ್ತು ಸಂಘಟನೆಯನ್ನ ತೋರಿದ್ದೇವೆ
ಪ್ರಧಾನಿಯವರ ಹೊಸ ಕರೆಯಂತೆ ಮನೆಯಲ್ಲಿ ನಾಳೆ ದೀಪ ಹಚ್ಚಬೇಕಿದೆ.
ಮನೆಯ ದೀಪ ಆರಿಸಿ ದೀಪ ಬೆಳಗಿ ಆ ದೀಪದ ಜೊತೆ ಐಕ್ಯವಾಗಬೇಕು ಅಂದಿದ್ದಾರೆ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ ಅನ್ನೋ ಮಾತಿದೆ.
ಯಾವ ಜಾತಿ, ಮತ, ಸಂಪ್ರದಾಯವಿದ್ದರೂ ಅವನ ಮನೆಯ ಜ್ಯೋತಿ ಒಂದೇ ಆಗಿರುತ್ತದೆ.
ಹೀಗಾಗಿ ನಮ್ಮ ಅಂತಸ್ತು, ಪ್ರಾದೇಶಿಕ ವಿಚಾರಗಳನ್ನ ಮರೆತು.
ನಮ್ಮ ಮನೆಯಲ್ಲಿ ಜ್ಯೋತಿ ಹಚ್ಚಬೇಕು
ಪ್ರಧಾನಿಯವರ ಮಾತಿನಂತೆ ನಾವೆಲ್ಲರೂ ರಾತ್ರಿ ಸಣ್ಣ ಜ್ಯೋತಿ ಹಚ್ಚಬೇಕಿದೆ.
ಆ ಜ್ಯೋತಿ ನಮ್ಮ ಮನೆ, ಮನೆಯ ಸದಸ್ಯರ ಮನಸ್ಸಿಗೆ ಬೆಳಕನ್ನ ಕೊಡುತ್ತೆ.
ಎಲ್ಲರೂ ದಯವಿಟ್ಟು ಇದನ್ನ ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ.
ನಾಳೆ ದೀಪ ಹಚ್ಚಿ ಮನಸ್ಸಿನ ಕತ್ತಲೆ ಓಡಿಸಿ, ರಾಕ್ಷಸ ಕೊರೋನಾ ಕೂಡ ಓಡಿಸಿ.
ನಾವು ಕೂಡ ಧರ್ಮಸ್ಥಳ ಕ್ಷೇತ್ರದಲ್ಲಿ ನಾಳೆ ಜ್ಯೋತಿ ಬೆಳಗುತ್ತೇವೆ.
ಇದರಿಂದ ಈ ನಾಡಿಗೆ ಶುಭವಾಗಲಿ ಅಂತ ಹಾರೈಸ್ತೇವೆ.


ಏ.14ರ ಬಳಿಕ ಎಸ್‍ಎಸ್‍ಎಲ್‍ಸಿ

ಪರೀಕ್ಷೆ ಹೊಸ ವೇಳಾಪಟ್ಟಿ

ವಿದ್ಯಾರ್ಥಿಗಳಿಗೆ ಮತ್ತೆ ಚೈತನ್ಯ ತುಂಬಬೇಕು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ.
ಪರೀಕ್ಷೆ ಎದುರಿಸಲು ಉತ್ಸಾಹ ಮೂಡಿಸಬೇಕು.
ಪರಿಸ್ಥಿತಿ ನೋಡಿಕೊಂಡು ವೇಳಾಪಟ್ಟಿ ಪ್ರಕಟ.
ವೇಳಾಪಟ್ಟಿ ಪ್ರಕಟಿಸಿದ ನಂತರ 1 ವಾರ ತರಗತಿ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ.


ದೇಶದಲ್ಲಿ ಸೋಂಕಿತರ ಸಂಖ್ಯೆ 3,374ಕ್ಕೆ ಏರಿಕೆ

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ.
ಕಳೆದ 24 ಗಂಟೆಯಲ್ಲಿ 11 ಮಂದಿ ಸಾವು.
ಕಳೆದ 24 ಗಂಟೆಯಲ್ಲಿ 472 ಕೇಸ್ ಪತ್ತೆ.
ದೇಶದಲ್ಲಿ ಈವರೆಗೆ 267 ಮಂದಿ ಗುಣಮುಖ.
ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ.


ರಾಜ್ಯದಲ್ಲಿ ಕೊರೊನಾ ಸೋಂಕಿತರ

ಸಂಖ್ಯೆ 151ಕ್ಕೆ ಏರಿಕೆಯ

ಬೆಳಗಾವಿಯಲ್ಲಿ ನಾಲ್ವರು ಸೋಂಕಿತರು.
ಬೆಂಗಳೂರು 2, ಬಳ್ಳಾರಿಯಲ್ಲಿ 1 ಕೇಸ್ ಪತ್ತೆ
ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್.
ಬೆಂಗಳೂರು-57, ಮೈಸೂರು-28, ಬೀದರ್-10
ಚಿಕ್ಕಬಳ್ಳಾಪುರ-7, ದಕ್ಷಿಣ ಕನ್ನಡ-12
ಉತ್ತರ ಕನ್ನಡ-8, ಕಲಬುರಗಿ-5
ದಾವಣಗೆರೆ-3, ಉಡುಪಿ-3, ಬಳ್ಳಾರಿ-6.


ಭಾರತದಲ್ಲಿ ದೀಪ ಹಚ್ಚುವ ಅಭಿಯಾನ

ಸಾರ್ಕ್ ದೇಶಗಳಿಂದಲೂ ಅಭಿಯಾನಕ್ಕೆ ಸಾಥ್

ಪ್ರಧಾನಿ ಮೋದಿ ಅಭಿಯಾನಕ್ಕೆ ಸಾರ್ಕ್ ಬೆಂಬಲ.
ಸಾರ್ಕ್, ಇತರ ದೇಶಗಳಿಂದಲೂ ಸಹಕಾರ.
ಭಾರತದ ಜೊತೆ ಇತರ ದೇಶಗಳಲ್ಲೂ ದೀಪ
ಬಾಂಗ್ಲಾದೇಶ, ಮಾಲ್ಡೀವ್ಸ್, ವಿಯೆಟ್ನಾಂ
ಜರ್ಮನಿ, ಅಫ್ಘಾನಿಸ್ತಾನ, ನೇಪಾಳ
ಜಪಾನ್, ಆಸ್ಟ್ರೇಲಿಯಾ, ಇಸ್ರೇಲ್, ಮೆಕ್ಸಿಕೋ
ಹಲವು ದೇಶಗಳು ದೀಪ ಅಬಿಯಾನಕ್ಕೆ ಸಾಥ್.


ಲಾಕ್ ಡೌನ್ ಕಟ್ಟುನಿಟ್ಟು ಪಾಲನೆಗೆ ಸಿಎಂ ಮನವಿ

ಕೊರೊನಾ ಕೇಸ್ ಜಾಸ್ತಿಯಾಗಿರುವುದಕ್ಕೆ ಕಳವಳ.
ಆದೇಶ ಪಾಲನೆಗೆ ಮನವಿ ಮಾಡಿರುವ ಸಿಎಂ.
ಬೀದರ್, ಮೈಸೂರು, ಬೆಂಗಳೂರು ನಗರ
ಮಂಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚಳ.
ದಿನೇದಿನೇ ಸೋಂಕು ಗಣನೀಯವಾಗಿ ಹೆಚ್ಚುತ್ತಿದೆ.
ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ಹಲವು ಕ್ರಮ.
ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಪಾಲಿಸಬೇಕು
ಏ.14ಕ್ಕೆ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ.
ಮುಂದೆ ವಿಸ್ತರಿಸಬೇಕೋ, ಬೇಡವೋ ತೀರ್ಮಾನ.
ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.
ಈ ಕುರಿತು ಸಲಹೆ ಸೂಚನೆ ಕೊಡುವಂತೆ ಮನವಿ
ಸಾರ್ವಜನಿಕರಿಗೆ ಮನವಿ ಮಾಡಿದ ಸಿಎಂ ಬಿಎಸ್‍ವೈ.

ಕಾಸರಗೋಡಿನಲ್ಲಿ ಶುಶ್ರೂಷೆ ಫಲ: ಕೋವಿಡ್-19 ಬಾಧಿತರಾದ ಮೂವರು ಗುಣಮುಖ

Publicstory. in


ಕಾಸರಗೋಡು; ಕೊರೋನಾ ಸೋಂಕಿನ ಕಪ್ಪು ಚುಕ್ಕೆಯಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಬಾಧಿತ ವ್ಯಕ್ತಿಗಳು ಸರಕಾರಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖರಾಗಿ ಶನಿವಾರ ಮನೆ ಸೇರಿದ್ದಾರೆ.

ಇದರಿಂದಾಗಿ ವೈದ್ಯ, ದಾದಿಯರ ಅಹೋರಾತ್ರಿ ದುಡಿತದ ಪರಿಶ್ರಮ, ಸರಕಾರದ, ಸ್ಥಳೀಯಾಡಳಿದ, ಪೋಲೀಸರ ಕಾನೂನು ಪಾಲನೆ, ಮನೆಯಲ್ಲಿ ಕುಳಿತವರ ಪ್ರಾಥನೆಗಳ ಪರಿಣಾಮದ ಫಲ ನೀಡಲಾರಂಭಿಸಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 56 ವರ್ಷ ಪ್ರಾಯದ, 31 ವರ್ಷದ, 27 ವರ್ಷದ ಮೂವರು ಪುರುಷರು ಈಗ ಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಕೊರೊನಾ ತಂದ ದುಷ್ಪರಿನಾಮದ ಭೀಕರತೆಯ ನಡುವೆ ಈ ಸಕಾರಾತ್ಮಕ ಬೆಳವಣಿಗೆ ತಂದ ಸಂತಸ ಎಷ್ಟಿದೆ ಎಂಬುದನ್ನು ಗಮನಿಸಬೇಕಿದ್ದರೆ ಒಮ್ಮೆ ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಗೆ ತೆರಳಬೇಕು. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯ ಮುಖದಲ್ಲಿ ಈಗ ಸಮಾಧಾನದ ಸಂತಸ ಕಂಡುಬರುತ್ತಿದೆ.

ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸತತ ಯತ್ನದ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಆಹೋರಾತ್ರೆಯ ದುಡಿಮೆ ಫಲ ನೀಡಿದೆ. ಕಳೆದ ಎರಡು ವಾರಗಳಿಂದ ಕೊರೊನಾ ಪ್ರತಿರೋಧ ರೂಪದಲ್ಲಿ ಇಲ್ಲಿ ನಡೆದು ಬರುತ್ತಿರುವ ಹೋರಾಟದ ಫಲವಿದು.

ಆಸ್ಪತ್ರೆಯ ಶುಚೀಕರಣ ಸಿಬ್ಬಂದಿಯಿಂದ ತೊಡಗಿ ವೈದ್ಯರವರೆಗೆ ಪ್ರತಿಯೊಬ್ಬರೂ ಇಲ್ಲಿ ಏಕಮನಸ್ಸಿನಿಂದ ದುಡಿಯುತ್ತಾರೆ. ಆಸ್ಪತ್ರೆಯ ಕನ್ಸೆಂಟ್ ಗಳಾದ ಡಾ.ಕುಂಜಿ ರಾಮನ್, ಡಾ. ಕೃಷ್ಣ ನಾಯಕ್, ಡಾ. ಜನಾರ್ಧನ ನಾಯಕ್ ನೇತೃತ್ವ ವಹಿಸುವ ಮೆಡಿಕಲ್ ತಂಡ ಚಿಕಿತ್ಸೆಗೆ ಇಲ್ಲಿ ನೇತೃತ್ವ ವಹಿಸುತ್ತಿದೆ.

ಜಗತ್ತಿನ ಹಲವು ದೇಶಗಳಲ್ಲಿ ತಲೆದೋರಿದ ಕೋವಿಡ್19 ತನ್ನ ಎರಡನೇ ಹಂತದ ಪ್ರಭಾವ ತೋರುತ್ತಿರುವ ವೇಳೆ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಕಾಸರಗೋಡು ಜಿಲ್ಲೆಗೂ ಪ್ರವೇಶ ಮಾಡಿತ್ತು.

ಪ್ರತಿದಿನ ರೋಗಬಾಧಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದರೂ, ಕೋವಿಡ್19 ರ ಪ್ರತಿರೋಧ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಡೆಸಿದ ಸಮರ್ಪಣ ಭಾವದ ದುಡಿಮೆ ಫಲ ನೀಡುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಅಭಿನಂದಿಸಿದ್ದಾರೆ.

ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ಪ್ರತಿರೋಧ ಚಟುವಟಿಕೆಗಳು ನಡೆಯುತ್ತಿವೆ. ಜಿಲ್ಲಾ ವ್ಯದ್ಯಾಧಿಕಾರಿ ಡಾ. ಎ.ವಿ ರಾಮದಾಸ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ಎ.ಟಿ ಮನೋಜ್, ಕಾಸರಗೋಡು ಜನರಲ್ ಆಸ್ಪತ್ರೆಯ ವರಿಷ್ಠಾದಿಕಾರಿ ಡಾ. ರಾಜಾರಾಮ್ ಮೊದಲಾದವರು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಮೊದಲ ಸಾಲಿನಲ್ಲಿದ್ದರು.

ಬಂದದಾರಿಗೆ ಸುಂಕವಿಲ್ಲದೆ ಹೋದ ನೆಂಟರು…

Publicstory.in


ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿಯ ಚನ್ನರಾಯನದುರ್ಗ ಗ್ರಾಮದ ಬಾಬು ಸಾಬ್ ಮನೆಗೆ ಬಂದಿದ್ದ ನೆಂಟರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ.

ಕೊರೊನಾ ವೈರಸ್ ಹರಡುವ ಹಿನ್ನೆಯಲ್ಲಿ ಕಳೆದ 15 ದಿನಗಳಿಂದ ರಾಜ್ಯ ವ್ಯಾಪ್ತಿ ಲಾಕ್ ಡೌನ್ ಹೇರಲಾಗಿದೆ. ಈ ಹಿನ್ನೆಯಲ್ಲಿ‌ ಜನ ಯಾರೂ ಹೊರಗೆ ಅನಗತ್ಯವಾಗಿ ಓಡಾಡದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.


ನಿಮ್ಮೂರಿನ ಸುದ್ದಿ, ಲೇಖನ, ಸಮಸ್ಯೆಗಳನ್ನು ಇಲ್ಲಿಗೆ  ವಾಟ್ಸಾಪ್ ಮಾಡಬಹುದು: 9844817737


ಆದರೂ ಇದನ್ನು ಲೆಕ್ಕಿಸದೇ ದೊಡ್ಡಬಳ್ಳಾಪುರ ಮೂಲದ ಸುಮಾರು 15 ಜನರು ಚನ್ನರಾಯನದುರ್ಗ ಗ್ರಾಮದ ನೆಂಟರ ಮನೆಗೆ ಬಂದಿದ್ದರು.

ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಯಲ್ಲಿ ಪಿಎಸ್ಐ ಎಚ್. ಮುತ್ತರಾಜು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. 15 ಜನ ಬಂದಿರುವುದು ಖಚಿತವಾದ ಹಿನ್ನೆಯಲ್ಲಿ ಬಂದ ಅಷ್ಟೂ ಜನರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೂಡಲೇ ಅವರ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಹಾರ ಹೆಣ ಭಾರ

ದೇವರಹಳ್ಳಿ ಧನಂಜಯ


ಇದು ನಿಜದ ಕಾಲ.
ಸಹಜ ನಿಜ
ಮರೆಮಾಚಲು, ಸುಳ್ಳು
ಬೊಬ್ಬೆ ಹಾಕುತಿಹ ಬೂ ರಿ ಕಾಲ.

ಸತ್ಯ ಸರಳ ದಾರ
ಹಸಿರು,ಕೇಸರಿ,ಬಿಳಿಯ ಬಣ್ಣಗಳ
ಹೂ ಹಾವಾಗಿಸಿ, ಪೋಣಿಸಲಾಗುತ್ತಿದೆ.
ದಾರ ಮರೆಮಾಚಲಾಗುತ್ತಿದೆ.
ದಾರ ಮರೆಮಾಚಿದ ಹಾರ ಹೆಣ ಭಾರ.

ದುಡ್ಡಿಗಾಗಿ ದೂರ ಹೋದವರು,
ಸಾವ ಉಡುಗೊರೆ ತಂದಿದ್ದಾರೆ.
ದೇಶಪ್ರೇಮದ ಹೊಸ ಭಾಷ್ಯ
ಸ್ಟೇ ಹಟ್ ಹೋಂ ಎಂದಿದ್ದಾರೆ.
ನಾಡು ನುಡಿ ಬೆವರ ಧ್ವೇಷಿಗಳು,
ದೇಶಪ್ರೇಮಿಗಳು ಆಗುತ್ತಿದ್ದಾರೆ.

ಸಾವ ತಂದ ಅರಾಮಿಗಳು
ಐಷಾರಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಡವರು ಬೀದಿ ಹೆಣವಾಗಿ ದ್ದಾರೆ.
ಮಾಧ್ಯಮಿಗಳು ಕೇಸರಿ ಬ್ರಶ್ ಹಿಡಿದು,
ಬಿದ್ದ ಹೆಣಗಳಿಗೆ ಹಸಿರು ಬಣ್ಣ ಬಳಿಯುತ್ತಿದ್ದಾರೆ.

ಕೀಲೆಣ್ಣೆ ಯನ್ನೂ ಕಿಲುಬು ಕಾಸಿಗೆ
ಮಾರಿರುವ ಯಜಮಾನ, ಚಕ್ರ ಕಳಚಿಟ್ಟು,
ಮಹಾಭಾರತ ಯುದ್ಧ ಘೋಷಿಸಿ,
ಅಂತರ ಕಾಯ್ದುಕೊಂಡಿದ್ದಾರೆ.
ಬಡವರು,ದುಡಿಯುವವರು ಬೀದಿಗೆ ಬಿದ್ದಿದ್ದಾರೆ.
ದೇಶ ಬದಲಾಗುತ್ತಿದೆ.

ಕತ್ತಲೊಳಗಿನ ಬೆಳಕು ಬೆಳಗಿಸಲಿ ಬದುಕು!

0

ತುರುವೇಕೆರೆ ಪ್ರಸಾದ್


ನಮ್ಮ ಪ್ರಧಾನಿ ಮೋದಿಯವರು ಕೊರೊನಾ ವಿರುದ್ಧ ಹೋರಾಟದ ಒಂದು ನೈತಿಕ ಸಂಕೇತವಾಗಿ ಇಂದು ರಾತ್ರಿ (ಭಾನುವಾರ) 9 ಗಂಟೆಗೆ ನಮ್ಮ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ, ಮೇಣದ ಬತ್ತಿಗಳನ್ನು ಹಚ್ಚುವಂತೆ ನಮಗೆಲ್ಲಾ ಕರೆ ಕೊಟ್ಟಿದ್ದಾರೆ. ನಮ್ಮ ಮನೆ,ಮನಸ್ಸುಗಳು ಕರೋನಾ ತಮಸ್ಸನ್ನು ಭೇಧಿಸಿ ಉಜ್ವಲ ಬೆಳಕಿನಿಂದ ಕಂಗೊಳಿಸಲಿ ಎಂದು ನಾವೆಲ್ಲಾ ಒಬ್ಬರಿಗೊಬ್ಬರು ಆಶಿಸಬೇಕಿದೆ.

ಧರ್ಮಾಂಧತೆಯ ಕತ್ತಲಿನಲ್ಲಿ ಮನುಕುಲವನ್ನೇ ನಾಸ ಮಾಡಲು ಹೊರಟಿರುವವರ ತಮದ ಅಂಧಕಾರವನ್ನು ತೊಡೆದು ಜ್ಞಾನದ ಪ್ರಖರ ದೀಪವನ್ನು ಹಚ್ಚಬೇಕಿದೆ. ಆ ಬೆಳಕಿನಲ್ಲಿ ನಾವು ಪರಸ್ಪರ ಒಬ್ಬರನ್ನೊಬ್ಬರು ಕಂಡುಕೊಳ್ಳಬೇಕು,

ನಮ್ಮೊಳಗಿನ ಅಜ್ಞಾನವನ್ನು ಓಡಿಸಿ ಜ್ಞಾನದ ಹಣತೆ ಹಚ್ಚಬೇಕು. ಹಾಗೆ ನಮ್ಮೊಳಗಿನ ಹಣತೆಯನ್ನು ಬೆಳಗುವಂತೆ ಹೊರಗಿನ ಅಂಧಕಾರವನ್ನು ತೊಡೆಯಲೂ ಸಾಲು ಸಾಲು ಹಣತೆಗಳನ್ನು ಹಚ್ಚುತ್ತಾ ಹೋಗಬೇಕು. ಆದರೆ ಜಿಎಸ್‍ಎಸ್ ಹೇಳುವಂತೆ ಜಗದ ಅಂಧಕಾರವನ್ನೇ ತೊಡೆದು ಬಿಡುತ್ತೇನೆಂಬ ಅಹಂಕಾರದಿಂದ ಬೀಗಬಾರದು.

ನಾವು ಹಚ್ಚುವ ಹಣತೆ ಮತ್ತೊಬ್ಬರ ದಾರಿ ದೀಪವಾಗಬೇಕು. ನಮ್ಮೊಳಗಿನ ಮತ್ತು ನಮ್ಮ ಹೊರಗಿನ ಎಲ್ಲಾ ಬದುಕು ನಿಚ್ಛಳವಾಗಿ ಕಾಣುವಷ್ಟು ಬೆಳಕು ಮಾತ್ರ ನಮಗೆ ಸಾಕು ಎಂಬುದರ ದ್ಯೋತಕವೇ ಈ ಹಣತೆ ಹಚ್ಚುವ ಪ್ರಕ್ರಿಯೆ!

ನಾವು ಈ ಆಧುನಿಕ ಬೆಳಕಿಗೆ ಎಷ್ಟೊಂದು ಹೊಂದಿಕೊಂಡು ಬಿಟ್ಟಿದ್ದೇವೆ ಎಂದು ಯೋಚಿಸಿದರೇ ಅಚ್ಚರಿ ಎನಿಸುತ್ತದೆ.ಆಧುನಿಕ ಬೆಳಕಿಲ್ಲದೆ ಬದುಕೇ ಇಲ್ಲ ಎನ್ನುವಂತಾಗಿದೆ. ಬೆಳಕಿಗೂ ಆಧುನಿಕತೆಗೂ ನೇರಾ ನೇರ ಸಂಬಂಧ ಕಲ್ಪಿಸಿರುವ ಮನುಷ್ಯ ಕತ್ತಲನ್ನು ಒಂದು ಘೋರ ಅನುಭವ ಎಂದು ಭ್ರಮಿಸಿಬಿಟ್ಟಿದ್ದಾನೆ.

ಮನೆಯಲ್ಲಿನ ಪ್ರತಿ ವಸ್ತುವು ಜೀವಂತವಾಗಿರಲು, ಚಲನಶೀಲತೆಯಿಂದಿರಲು ವಿದ್ಯುತ್ ಬೇಕೇ ಬೇಕು. ಮನೆಯ ಟಿವಿ, ಟೇಪ್‍ರೆಕಾರ್ಡರ್, ಡಿವಿಡಿ, ಮೊಬೈಲ್ಗಳು, ಎಲ್‍ಇಡಿ ಬಲ್ಬ್‍ಗಳು, ವೈಭವೋಪೇತ ಶಾಂಡಲಿಯರ್‍ಗಳು ಎಲ್ಲದಕ್ಕೂ ವಿದ್ಯುತ್ ಬೇಕು. ವಿದ್ಯುತ್‍ನಿಂದ ಇವೆಲ್ಲಾ ಝಗಮಗಿಸಬೇಕು.ಆ ಬೆಳಕಿನ ವೈಭೋಗವನ್ನು ಮನುಷ್ಯ ಕಣ್ತುಂಬಿಕೊಳ್ಳಬೇಕು.

ಬೆಳಕು ಇಂದು ಕೇವಲ ಬಳಕೆಯ ಮೌಲ್ಯವಾಗಿಯಷ್ಟೇ ಉಳಿದಿಲ್ಲ,.ಅದರ ಕೊಡು ಕೊಳ್ಳುವ ವಿನಿಮಯ ಮೌಲ್ಯವೂ ಭಾರೀ ದುಬಾರಿಯೇ! ಅದರ ಸಂಕೇತ ಮೌಲ್ಯವಂತೂ ಅದರಷ್ಟೇ ವೇಗ,ವ್ಯಾಪಕತೆಯಲ್ಲಿ ಬೆಳೆದಿದೆ. ಆಧುನಿಕ ಬೆಳಕು ಅಭಿವೃದ್ಧಿಯ, ವೈಭೋಗದ, ಸುಖದ ಸಂಕೇತ. ಯಾರ ಮನೆ ಮುಂದೆ ಎಷ್ಟು ಬೆಳಕಿದೆ, ಎಂತಹ ವೈವಿಧ್ಯದ ಲೇಸರ್ ಬಣ್ಣದ ಬೆಳಕಿನ ಬಿಂಬಗಳಿವೆ, ಎಂಬ ಆಧಾರದ ಮೇಲೇ ಅಂತಸ್ತು, ಪ್ರತಿಷ್ಠೆ ನಿರ್ಧಾರವಾಗುತ್ತದೆ.

ಕತ್ತಲೆ ವಿನಾಶದ, ಭೀತಿಯ, ಅರಾಜಕತೆಯ ಸಂಕೇತ ಎಂದು ನಿರೂಪಿಸಲ್ಪಟ್ಟಿದೆ. ಬೆಳಕಿಗೆ ಪ್ರತಿಫಲಿಸುವ ಶಕ್ತಿಯಿದೆ. ಅದರಿಂದ ವಸ್ತುವಿನ ಆಕಾರ ನಮ್ಮ ಕಣ್ಣಿನಲ್ಲಿ ರೂಪ ಪಡೆಯುತ್ತದೆ. ಬೆಳಕು ಕೇವಲ ದಾರಿ ತೋರಿಸುವ ದೀವಿಗೆಯಾಗಿ, ಜ್ಞಾನದ ಬೆಳಕಾಗಿ ಉಳಿದಿಲ್ಲ. ವಸ್ತುವಿನ ಆಕಾರ, ರೂಪವನ್ನು ಇಮ್ಮಿಡಿಸಿ, ವೈಭವೀಕರಿಸಿ ಅದನ್ನು ಸುಖದ ಲೋಲುಪತೆಗೆ ಸಮೀಕರಿಸಲು ನಾವು ಬೆಳಕನ್ನು ಉಪಯೋಗಿಸುವುದನ್ನು ಕಲಿತುಬಿಟ್ಟಿದ್ದೇವೆ.ಹಾಗಾಗಿ ಬೆಳಕಿಲ್ಲದ ಪ್ರಪಂಚ ನಮ್ಮ ಪಾಲಿಗೆ ಘೋರ ನರಕ! ಬೆಳಕಿನಿಂದ ನಮ್ಮನ್ನು ನಾವು ನೋಡಿಕೊಳ್ಳುವುದನ್ನು ಕಲಿತಿದ್ದೇವೆ.

.ನಮ್ಮನ್ನು ನಾವು ವೈಭವೀಕರಿಸಿಕೊಳ್ಳುವುದನ್ನೂ ಕಲಿತು ಅದಕ್ಕೆ ಸೌಂದರ್ಯ ಎಂದು ಹೆಸರಿಸಿದ್ದೇವೆ. ಕತ್ತಲೆಗಿಲ್ಲದ ಬೆತ್ತಲೆಯ ಹಂಗು ಬೆಳಕಿಗಿದೆ..ಅದಕ್ಕೇ ಬೆಳಕಿನಲ್ಲಿ ಸೌಂದರ್ಯದ ಶೋಧನೆ, ಉತ್ಖನನ ನಡೆಯುತ್ತದೆ..

ದೊಡ್ಡ ದೊಡ್ಡ ಬಂಗಲೆಗಳನ್ನು ಅಪಾರ್ಟ್‍ಮೆಂಟ್‍ಗಳನ್ನು ಕಟ್ಟಿಸಿಕೊಂಡು ರೂಮಿಗೊಂದು ಡಜನ್ ಪ್ರಜ್ವಲಿಸುವ ಆಧುನಿಕ ವಿದ್ಯುದ್ದೀಪಗಳನ್ನು ಹಾಕಿಕೊಂಡು ನಾವು ಜನರಿಂದ ದೂರ ದೂರ ಉಳಿದುಹೋಗಿದ್ದೇವೆ. ಸೋಶಿಯಲ್ ಡಿಸ್ಟೆಂನ್ಸಿಂಗ್‍ನೇ ಆಣಕಿಸುವ ಪರ್ಸನಲ್ ಡಿಸ್ಟೆಂನ್ಸಿಂಗ್ ನಮ್ಮದು! ಬರೀ ಬಂಗಲೆಗಳು, ಅಪಾರ್ಟ್‍ಮೆಂಟ್‍ಗಳು ಮಾತ್ರವೇ ಅಲ್ಲ.ಮನೆ ಮನೆಗಳಲ್ಲು ಆಧುನಿಕ ಬೆಳಕಿನಿಂದಾಗಿ ನಾವು ದೈಹಿಕವಾಗಿ, ಮಾನಸಿಕವಾಗಿ ದೂರವೇ ಉಳಿದಿದ್ದೇವೆ.

ವಿದ್ಯುತ್ ಹಾಗೂ ಬೆಳಕಿನಪರಿಕರಗಳೇ ನಮ್ಮ ಬಂಧು, ಬಳಗ, ಮಿತ್ರರು. ನಮ್ಮ ಲ್ಯಾಪ್‍ಟ್ಯಾಪ್, ನಮ್ಮ ಮೊಬೈಲ್, ನಮ್ಮ ಟಿವಿ. ನಮ್ಮ ತಲೆಯ ಮೇಲಿನ ಬಲ್ಬೇ ನಮ್ಮ ಪ್ರಪಂಚ. ಒಂದು ಮೊಬೈಲ್, ಪೋಲೀಸರ ವಾಕಿಟಾಕಿ ತರ ಯಾವ ಬೆಳಕು, ಬಣ್ಣವನ್ನೂ ಪ್ರದರ್ಶಿಸದಿದ್ದರೆ ಇಷ್ಟೊಂದು ಜನ ಮೊಬೈಲ್ ಕೊಳ್ಳುತ್ತಲೇ ಇರಲಿಲ್ಲ. ಅದಕ್ಕೇ ಕೇವಲ ಜ್ಞಾನ ಕೊಡುವ ಬೆಳಕು ಸಮ್ಮೋಹನ ಶಕ್ತಿಯ ರೂಪ ಪಡೆದಿದೆ.

ಆ ಬೆಳಕಿನ ಹಂಗಲ್ಲೆ ನಾವು ಒಂಟಿಯಾಗಿ ಉಳಿದು ಬಿಡುತ್ತೇವೆ. ನಮಗೆ ಇನ್ನೊಬ್ಬ ಮನುಷ್ಯನ ಹಂಗೇ ಬೇಕಿಲ್ಲ..ಹೀಗಾಗಿ ಆಧುನಿಕ ಬೆಳಕು ಐಕ್ಯತೆ, ಒಗ್ಗೂಡುವಿಕೆ, ಸಮುದಾಯ ತತ್ವದ ಬದಲು ಮನುಷ್ಯನಲ್ಲಿ ಭಿನ್ನತೆಯ, ಒಡೆದು ಆಳುವ, ಮತ್ತೊಬ್ಬನನ್ನು ಧಿಕ್ಕರಿಸುವ ಸ್ವಭಾವವನ್ನು ಹುಟ್ಟಿ ಹಾಕಿದೆ.

ಆಧುನಿಕತೆಯ ಪ್ರಖರ ಬೆಳಕು ಮನುಷ್ಯನ ಅಹಂ ಉದ್ದೀಪಿಸಿ, ಸ್ವತಂತ್ರ್ತನಾಗಿ ಸ್ವೇಚ್ಛಾಚಾರಿಯಾಗಿ, ಅಹಂಕಾರಿಯಾಗಿ,ಒಂಟಿಯಾಗಿ ಮಾಡಿದೆ. ಈ ಬೆಳಕು ಮನಸ್ಸಿನ ವಿಕಾರವನ್ನು ಬಿಟ್ಟು ಮಿಕ್ಕೆಲ್ಲಾ ಆಕರ್ಷಣೆಗಳನ್ನು, ಆಕಾರ, ಗುಣ ರೂಪಗಳನ್ನು ಅಳೆದೂ ಸುರಿದೂ ತನ್ನ ಸ್ವಾರ್ಥಕ್ಕೆ ತಕ್ಕಂತೆ ಸ್ವೀಕರಿಸುವಂತೆ ಮಾಡುತ್ತದೆ.

ಕತ್ತಲ ಈ ಎಲ್ಲಾ ಸೃಷ್ಟಿಯ ಪ್ರಕ್ರಿಯೆಗಳನ್ನು ಸುಂದರವಾಗಿ ಬೆಳಕು ಕೇವಲ ಪ್ರದರ್ಶಿಸುತ್ತದೆ. ಬೆಳಕಿನ ಹಂಗಿನ ಮನುಷ್ಯ ಕಣ್ಮುಚ್ಚಿದರೆ ಎಷ್ಟೇ ಪ್ರಖರ ಬೆಳಕಿದ್ದರೂ ಕತ್ತಲೆಯೇ! ಆದರೆ ಕತ್ತಲೆಯಲ್ಲೇ ಕುಳಿತ ಮನುಷ್ಯ ಕಣ್ಮುಚ್ಚಿ ಬೆಳಕಿನ ಚಿತ್ರಗಳನ್ನು ತನ್ನ ಮನಸೋ ಇಚ್ಚೆ ಕಾಣಬಹುದು..ದಿಗ್ ದಿಗಂತಗಳಾಚೆ ಅವನು ಮನಸ್ಸಿನ ಬೆಳಕು ಹರಿದಾಡುತ್ತದೆ..ಸೃಷ್ಟಿಯ ಸುಂದರ ಚಿತ್ರಗಳನ್ನು ಅನಾವರಣಗೊಳಿಸುತ್ತದೆ. ಅದೇ ಧ್ಯಾನ, ಅದೇ ಯೋಗ..!

.ನಮ್ಮದೇ ಆಧುನಿಕತೆಯ ಬೆಳಕಿನಲ್ಲಿ, ಬದುಕಿನ ಧಾವಂತದಲ್ಲಿ ಕತ್ತಲೆಯು ಅನಾವರಣಗೊಳಿಸುವ ಪ್ರಕೃತಿಯ ಎಷ್ಟೋ ಅಚ್ಛರಿಗಳು, ಸಹಜ ಬೆಳಕುಗಳು ನಮಗೆ ಗೊತ್ತೇ ಇಲ್ಲ. ಶುಭ್ರ ಆಕಾಶದ ತುಂಬಾ ಪಳಗುಟ್ಟುವ ನಕ್ಷತ್ರಗಳು, ಗ್ರಹಗಳು! ಹಾಲುಚೆಲ್ಲಿದಂತೆ ದಕ್ಷಿಣದಿಂದ ಉತ್ತರಕ್ಕೆ ಹಾದು ಹೋಗುವ ಕ್ಷೀರಪಥ! ಇವೆಲ್ಲಾ ಮಕ್ಕಳಿಗಿರಲಿ ಎಷ್ಟೋ ಜನ ದೊಡ್ಡವರಿಗೂ ಸೋಜಿಗ ಎನಿಸುವುದಿಲ್ಲ.

ವಿಜ್ಞಾನ ಪುಸ್ತಕದಲ್ಲಿ ಓದುವ ದೃವ ನಕ್ಷತ್ರ, ಸಪ್ತರ್ಷಿಮಂಡಲ, ಶನಿ, ಗುರು, ಶುಕ್ರ ಮುಂತಾದ ಪ್ರಮುಖ ಆಕಾಶಕಾಯಗಳನ್ನು ಸಹ ನಮ್ಮ ಮಕ್ಕಳು ಗುರುತಿಸಲಾರರು.

ಕುಂತಿ, ನಕುಲ, ದ್ರೌಪದಿ ಮೊದಲಾದ ಪುಂಜಗಳ ಹೆಸರಿನ ಹಿಂದಿನ ಗ್ರೀಕ್ ಪುರಾಣದ ದಂತ ಕತೆಗಳನ್ನು ನಮ್ಮ ಮಕ್ಕಳು ಕೇಳಿರಲಿಕ್ಕೂ ಸಾಧ್ಯವಿಲ್ಲ. ಹಲವು ಮಕ್ಕಳು ಜೀವಮಾನದಲ್ಲಿ ಒಮ್ಮೆಯೂ ಕತ್ತೆತ್ತಿ ಆಕಾಶದ ಕಡೆ ನೋಡಿರಲಿಕ್ಕಿಲ್ಲ. ಆಧುನಿಕತೆಯ ಪ್ರತೀಕವಾದ ಪ್ರಜ್ವಲಿಸುವ ಮಕ್ರ್ಯುರಿ, ಸೋಡಿಯಂ ಲ್ಯಾಂಪಿನ ದೀಪಗಳ ಪ್ರಭಾವಳಿಯ ಆಚೆ ಅವರಿಗೆಂದೂ ಕತ್ತೆತ್ತಿ ನೋಡುವ ಅಗತ್ಯ ಬಿದ್ದಿರಲಿಕ್ಕಿಲ್ಲ.

ಹಾಗೊಂದು ವೇಳೆ ನೋಡುವ ಪ್ರಯತ್ನ ಮಾಡಿದ್ದರೂ ಅವರಿಗೆ ಪಟ್ಟಣದ ಪ್ರಖರ ದೀಪಗಳ ನಡುವೆ ಏನೂ ಕಾಣುತ್ತಲೂ ಇರಲಿಲ್ಲ. ಸಿಂಹ, ವೃಷ್ಚಿಕ ಮೊದಲಾದ ರಾಶಿಗಳು ಕೇವಲ ಟಿವಿ ಜ್ಯೋತಿಷಿಗಳ ಬಾಯಲ್ಲಿ ಕೇಳಿ, ಅವಕ್ಕೆ ಹೆದರಿ ತಾಯತ ಕಟ್ಟಿಸಿಕೊಂಡು ಶಾಂತಿ ಮಾಡಿಸಿಕೊಂಡವರೇ ಹೊರತು ಇವು ರಾತ್ರಿಯ ಆಗಸದಲ್ಲಿ ಎಷ್ಟು ಆಕರ್ಷಕವಾಗಿ, ಅನ್ವರ್ಥವಾಗಿ ಕಾಣುತ್ತವೆ ಎಂದು ಹಿರಿಯರೇ ತಮ್ಮ ಜೀವಿತಾವಧಿಯಲ್ಲೊಮ್ಮೆ ನೋಡಿರಲಾರರು.

ತಮ್ಮ ಜನ್ಮ ನಕ್ಷತ್ರ, ರಾಶಿಯನ್ನೂ ಆಕಾಶದಲ್ಲಿ ಗುರುತಿಸಬಹುದು ಎಂಬ ಜ್ಞಾನವನ್ನೂ ಯಾವ ಬೆಳಕೂ ನೀಡಿಲ್ಲದಿರುವುದೇ ಒಂದು ದುರಂತ. ಈ ಆಧುನಿಕತೆಯ ಬೆಳಕಿನ ಪ್ರಖರತೆ ಪ್ರಭಾವಳಿಯೇ ಹಾಗೇ!ಅದು ಸುತ್ತೆಲ್ಲಾ ಬೆಳಕು ಹರಡಿ ಮನಸ್ಸಿನ, ಅರಿವಿನ ಕತ್ತಲೆಯನ್ನು ಹಾಗೇ ಉಳಿಸಿಬಿಡುತ್ತದೆ. ಅಲ್ಲಮ ಪ್ರಭುಗಳ ಒಂದು ವಚನ ಹೀಗಿದೆ:

‘ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕನಿಕ್ಕಿದವರಾರೋ?ಬೆಳಗೂ ಅದೇ, ಕತ್ತಲೆಯೂ ಅದೇ, ಇದೇನು ಚೋದ್ಯವೋ? ಒಂದಕ್ಕೊಂದಂಜದು! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದರು ಕಾಣ-ಗುಹೇಶ್ವರಾ’. ಬೆಳಕು ಕತ್ತಲೆಗೆ ಅಂಜುವುದಿಲ್ಲ, ಕತ್ತಲು ಬೆಳಕಿಗೆ ಅಂಜುವುದಿಲ್ಲ ಎಂಬುದು ಕಲ್ಪನೆಯೇ ಆದರೂ ನಿಜಕ್ಕೂ ಸತ್ಯ ಎನಿಸುತ್ತದೆ.

ಇಂತಹ ದ್ವಂದ್ವಗಳೇ ಬದುಕಲ್ಲಿ ಕುತೂಹಲನ್ನು ಉಳಿಸಿವೆ. ಆದರೆ ನಾವು ಇಂತಹ ದ್ವಂದ್ವಗಳಿಂದ ಆಚೆ ಹೋಗಿ ಬೆಳಕಿಗೇ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಕತ್ತಲೊಳಗಿನ ಬೆಳಕನ್ನೂ ಕುತೂಹಲದಿಂದ ನೋಡುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ.

ಈಗ ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ. ಅತಿಕಾಮಿಯಾದ ಮನುಷ್ಯ ತನ್ನ ಸ್ವಾತಂತ್ಯ್ರ, ಸ್ವೇಚ್ಛೆ ಕಳೆದುಕೊಂಡವನಂತೆ ಒದ್ದಾಡುತ್ತಿದ್ದಾನೆ. ತಾನೇ ಕಟ್ಟಿಕೊಂಡ ಮನೆಯೆಂಬ ತನ್ನ ಪ್ರೀತಿಯ ಗೂಡಿನಲ್ಲಿ ನೆಮ್ಮದಿಯಾಗಿರದೆ ರಾಪಾಡುತ್ತಿದ್ದಾನೆ. ಇಡೀ ಪ್ರಪಂಚವನ್ನೇ ಪರಿಶೋಧಿಸಿದ್ದ ಮನುಷ್ಯನಿಗೆ ಎಲ್ಲಾ ಅಂಗೈನಲ್ಲೇ ಸಿಗುವಂತಾಗಿತ್ತು.

ಈಗ ಎಷ್ಟು ತೊಳೆದರೂ ಪಾಪದ ಕರೆ ಅಳಿಸಲಾಗದೆ ಅಂಗೈನೇ ಪದೇ ಪದೇ ತೊಳೆದುಕೊಳ್ಳುತ್ತಾ ಕೂರುವಂತಾಗಿದೆ.
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ
ಫಲಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದೂ ಸದ್ದಿಲ್ಲ
ಹೊಲಿ ನಿನ್ನ ತುಟಿಗಳು ಮಂಕುತಿಮ್ಮ
ಎಂದು ಡಿವಿಜಿ ಹೇಳಿದಂತೆ ಮನುಷ್ಯ ಈ ಕರೋನ ಕೈ ಚಳಕದ ಎದುರು ಮಾತಿಲ್ಲದಂತೆ ತುಟಿ ಹೊಲೆದು ಕೂರಬೇಕಿದೆ.

ಹಾಗಂತ ಬದುಕೇನೂ ಇಲ್ಲಿಗೇ ಕೊನೆಯಾಗಿಲ್ಲ. ಈ ಸ್ಥಿತಿ ಶಾಶ್ವತವೂ, ನಿರಂತರವೂ ಅಲ್ಲ.ಕರೋನದಿಂದ ಮನುಷ್ಯನಿಗೆ ಬಿಡುವು ಸಿಕ್ಕಿದೆ. ಈ ಕರೋನ ರಜೆಯ ಸಂಭ್ರಮ ನಮ್ಮ ಧಾವಂತ ಬದುಕಿಗೆ ಸಿಕ್ಕ ಅಪೂರ್ವ, ಅಪರೂಪದ ಅನಿರ್ವಚನೀಯ ಚಂದ್ರಮ.ನಮ್ಮ ಸಂಬಂಧಗಳು ಕೇವಲ ಪ್ರತಿಷ್ಠೆಯ, ನಾಮಕಾವಸ್ಥೆಯ ಸಂಬಂಧಗಳಾಗಿದ್ದವು, ಹಲೋ, ಹಾಯ್ ಎಂದು ಪರಸ್ಪರ ಕೈ ಕೊಡುವುದಕ್ಕೇ ಮುಗಿದುಹೋಗುತ್ತಿದ್ದವು.

ಮನೆ ಎನ್ನುವುದು ಅಗತ್ಯಗಳನ್ನಷ್ಟೇ ಪೂರೈಸುವ ತಿಂದುಂಡು ಹಾಯ್, ಬಾಯ್ ಹೇಳಿ ಹೋಗುವ ತಂದುದಾಣ ಎನ್ನುವಂತಾಗಿತ್ತು. ನಾವು ಪರಕೀಯರಾಗೇ ಇದ್ದು, ಎದ್ದು ಹೋಗಿದ್ದೆವು. ಈಗ ನಮಗೆ ನಿಜ ಸಂಬಂಧಗಳು ಸಿಕ್ಕಿವೆ. ಅಮ್ಮನ ಕೈತುತ್ತ ಮಮತೆ, ಸಂಗಾತಿಯ ಕಣ್ಣ ಪ್ರೀತಿಗೆ ಅರ್ಥ ಸಿಕ್ಕಿದೆ. ತುಂಟ ಮಕ್ಕಳ ಹಾವ ಭಾವ,ಚೇಷ್ಟೆ, ಆಟೋಟಗಳ ಸವಿಯುವ ಬಾಲ್ಯದ ಮನಸ್ಥಿತಿ ಮರುಕಳಿಸುತ್ತಿದೆ.

ಎಲ್ಲ ನನ್ನವರೆಂಬ ಭಾವ ಹುಟ್ಟಿ, ಮನಸ್ಸುಗಳ ಅರಿತ ಬೆರೆತ ಧನ್ಯತೆ ಮೂಡುತ್ತಿದೆ.
ಈ ಲಾಕ್‍ಡೌನ್‍ನಿಂದ ಅಂತಹ ದೊಡ್ಡ ಅನರ್ಥವೇನೂ ಆಗಿಲ್ಲ. ಆಕಾಶವೇನೂ ಕಳಚಿ ತಲೆ ಮೇಲೆ ಬಿದ್ದಿಲ್ಲ. ಧಾವಂತ, ಕೊಳ್ಳುಬಾಕತನದಲ್ಲಿ ನಮ್ಮನ್ನೇ ಮರೆತು ಸುಷಪ್ತಿಯಲ್ಲಿದ್ದ ನಾವು ಮತ್ತೆ ಎಚ್ಚರಗೊಳ್ಳುತ್ತಿದ್ದೇವೆ. ಮಲಗಿದ ತೊಟ್ಟಿಲ ಮಗುವಿಗೆ ಅಮ್ಮ ಪರದೆ ಬಿಟ್ಟಂತೆ, ಆಮೆ ಚಿಪ್ಪೊಳಗೆ ಹುದುಗಿದಂತೆ ಸುಪ್ತಾವಸ್ಥೆ ತಲುಪಿದ್ದೇವೆ. ಭವ್ಯ ನೀಲಾಕಾಶದಲ್ಲಿ ಹೊಸ ಸೂರ್ಯನ ಉದಯಕ್ಕೆ, ನವ ಮನ್ವಂತರಕ್ಕೆ ಕಾದು ನಿಂತಿದ್ದೇವೆ. ನಿರಂತರ ದುಡಿದು ಬಳಲಿ ಬೆಂಡಾದ ಜೀವಗಳಿಗೆ ಇದು ದೇವರೇ ಕೊಟ್ಟ ವರ!

ಈಗಲಾದರೂ ಪಾಕವಾಗಿ ಪಕ್ವವಾಗಿ ಕ್ಯೂರ್ ಆಗಬೇಕಿದೆ ನಮ್ಮ ಬದುಕಿನ ಚಾದರ! ಒಂದಿಷ್ಟು ಟೊಂಗೆಗಳನ್ನು ಕಡಿಸಿಕೊಂಡರೂ ಮರ ಮತ್ತೆ ಚಿಗುರುತ್ತದೆ. ಕೋಶದಲ್ಲೇ ಕನಸು ಕಟ್ಟುವ ಕಂಬಳಿಹುಳ ಮತ್ತೆ ರೆಕ್ಕೆ ಬಿಚ್ಚಿ ಪಾತರಗಿತ್ತಿಯಾಗಿ ಹಾರುವ ಕನಸು ಕಾಣುತ್ತದೆ.ಅಂತೆಯೇ ಮತ್ತೆ ಈ ಹೆಪ್ಪಾದ ಹಾಲು ಕರಗಿ ಕ್ಷೀರಸಾಗರ ಮಥನವಾಗಬೇಕು. ಆ ಶಿವ ಗಂಟಲಲ್ಲೇ ಕರೋನ ಒತ್ತಿ ಹಿಡಿದು ಮತ್ತೆ ನೀಲಕಂಠನಾಗಬೇಕು. ನಾವು ಈ 21 ದಿನಗಳ ಅಗ್ನಿಪರೀಕ್ಷೆಯನ್ನು ಎದುರಿಸಬೇಕು. ಕನಿಷ್ಠ ಸೌಲಭ್ಯಗಳ ನಡುವೆಯೇ ನಮ್ಮ ಆಸೆ, ಬಯಕೆಗಳನ್ನು ಹತ್ತಿಕ್ಕಿ ಹೊರ ಬರದೆ ತಪಸ್ಸು ಮಾಡಬೇಕು.

ಓ ತಂದೆ! ಈ ಬಾನು, ಈ ಕಡಲು ಎಲ್ಲವೂ ನಿನದೇ! ಈ ವೈರಸ್ಸು,ಈ ಆಯಸ್ಸು ಎಲ್ಲವೂ ನಿನದೇ! ಸ್ವೀಕರಿಸು ನಮ್ಮೀ 21 ದಿನಗಳ ತಪಸ್ಸಿನ ಹವಿಸ್ಸು! ನೀ ಹರಸು ಅವಿರತ ಮನು ಕುಲದ ಶ್ರೇಯಸ್ಸು! ಎಂದು ದೀಪ ಹಚ್ಚಿ ಆ ದಯಾಮಯಿ ಭಗವಂತನನ್ನು ಪ್ರಾರ್ಥಿಸೋಣ.