Thursday, February 26, 2026
Google search engine
Home Blog Page 262

ವಿನಯ್ ಬರೆದ ಕರೊನಾ ಕಥೆ

ವಿನಯ್ ಹೆಬ್ಬೂರು


ಅರೇ ಹಾಸಿಗೆ ಮೇಲೆ ನಾನು ಮಲಗಿದ್ದೇನೆ,ದೇಹವೆಲ್ಲ ಭಾರ ಅಂದರೆ ಅಂತಹ ಸಾಮಾನುಗಳನ್ನು ಹೇರಿದ್ದಾರೆ.ಮೂಗಿಗೂ ಎಂತದ್ದೂ ಪೈಪು..ತಿಳಿದವರಾರು ನನ್ನ ಹತ್ತಿರ ಸುಳಿಯುತ್ತಿಲ್ಲ.

.ಅನ್ಯ ಗ್ರಹ ಯಾತ್ರಿಗಳಂತಹ ವಸ್ತ್ರ
ತೊಟ್ಟ ಮೂರು ಮಂದಿ ನನ್ನ ಕಾಲಿನ ಬಳಿ ಕೂತಿದ್ದಾರೆ,ಅವರು ಯಾರು ಇಲ್ಲಿ ಎಕೆ ಕುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ… ಓಹ್‌ ಅವರು ಇನ್ನಾರೂ ಅಲ್ಲ ನನ್ನ ಅಪ್ಪ,ಅಮ್ಮ ಹಾಗೂ ಹೆಂಡತಿ.
ಅವರೇಕೆ ಅಳುತ್ತಿದ್ದಾರೆ..ಎಂದು ಕೇಳಬೇಕು ಎನಿಸುತ್ತಿದೆ.

ಆದರೆ ಮೂಗಿಗೆ ಅಳವಡಿಸಿರುವ ಯಾವುದೋ ವೈದ್ಯಕೀಯ ಸಾಧನದಿಂದ ಕೇಳಲು ಆಗುತ್ತಿಲ್ಲ.ನನ್ನ ಹಿಂಸೆ ಅವರಿಂದ ನೋಡಲಾಗುತ್ತಿಲ್ಲ.ಉಸಿರಾಡಲೂ ಕಷ್ಟ.
ಇದ್ದಕ್ಕಿದ್ದಂತೆ ಎನೋ ತೊಂದರೆಯಾಗುತ್ತಿದೆ ಉಸಿರಾಡಲೂ ಕಷ್ಟವಾಗುತ್ತಿದೆ.ವಿಪರೀತ ಬಾಯಾರಿಕೆ ಅದರೆ ಅದನ್ನು ಕೇಳಲು ಆಗುತ್ತಿಲ್ಲ.ನನ್ನ ಕಷ್ಟ ನೋಡಲಾಗದೆ ಡಾಕ್ಟರ್ ಅನ್ನು ಕರೆದಳು ನನ್ನಾಕೆ.ಅಪ್ಪ ಅಮ್ಮನ ಸಂಕಟ,ಗೋಳಾಟ.

ನನ್ನಾಕೆಯ ಮೂಕ ವೇದನೆ.ಡಾಕ್ಟರ್ ಅವರ ಬಳಿ ಎನೋ ಹೇಳುತ್ತಿದ್ದಾರೆ.ನನಗೋ ಕಣ್ಣೆಲ್ಲ ಮಂಜು,ಕಿವಿಯೂ ಅಸ್ಪಷ್ಟವಾಗುತ್ತಿದೆ.ಏನಾಗುತ್ತಿದೆ ನನಗೆ ತಿಳಿಯುತ್ತಿಲ್ಲ.ವಿಪರೀತ ವೇದನೆ..ಆ…ಆಆ…ಎನುವಷ್ಟರಲ್ಲಿ ಹಗುರವಾಧ ಭಾವನೆ.

ಯಾರೋ ಹೊಸ ವ್ಯಕ್ತಿ ನನ್ನನೂ ಕರೆದೊಯ್ಯಲು ಸಿದ್ದನಾಗಿದ್ದಾನೆ ,ಅವನು ಯಾರೋ,ಎಲ್ಲಿಗೆ ಕರೆದೊಯ್ಯುತ್ತಾನೂ ತಿಳಿಯದು.ಅವನನ್ನು ನೋಡಿದರೆ ಬಳಲಿದಂತಿದ್ದಾನೆ.ಅವನಲ್ಲಿ ವಿಚಾರಿಸಿದರೆ ಅವನಿಗೆ ತಿಳಿದಿರುವುದು ಇಷ್ಟೇ..ಅದೆಂತಹದ್ದೂ ರೋಗ ಬಂದಿದೆ..ಅದರಿಂದ
ಸಾಯುವವರ ಸಂಖ್ಯೆ ಹೆಚ್ಚಾಗಿದೆ ಅವರನ್ನು ಕರೆದುಕೊಂಡು ಕೋಗುವ ಕೆಲಸ ಮಾಡಿ ಮಾಡಿ ಸುಸ್ತಾಗಿದ್ದೇನೆ ಎಂದ……ಅಂದರೆ ನಾನು ಸತ್ತಿದ್ದೇನೆ….ಅಯ್ಯೋ ನಾನು ಸತ್ತಿದ್ದೇನೆ ಗೋಳಿಡಲು ಪ್ರಾರಂಭಿಸಿದೆ ಆಗ ಆವ್ಯಕ್ತಿ ಅಸಡ್ಡೆಯಿಂದ ‘ದಿನವೂ ಕೇಳಿ ಕೇಳಿ ಸಾಕಾಗುತ್ತಿದೆ,

ಮನೆಯಲ್ಲಿರು ಎಂದರೆ ಏಕೆ ಇಚೆ ಬರುವುದೇತಕ್ಕೆ ಸಾಯುವುದೇತ್ತಕ್ಕೆ ಎಂದ’.
.ದುಖಃ ಹೆಚ್ಚಾಗುತ್ತಿದೆ ಅವನು ಕೊನೆಗೆ ನನ್ನ ದುಖಃಕ್ಕೆ ಮರುಗಿ ಹೋಗಲಿ ಬಿಡು ದೇಹ ಬಿಟ್ಟ ಮೇಲೆ ಮತ್ತೆ ಹೋಗಲಾಗುತ್ತದೆಯೆ ಎಂದ.

ನಾನು ಅವನನ್ನು ಕಾಡಿ ಬೇಡಿ ನನ್ನ ದೇಹವನ್ನು ತೋರಿಸಿ,ಅಲ್ಲಿ ನನ್ನ ಹೆಂಡತಿ,ತಂದೆ ತಾಯಿ ಸಂಬಂಧಿಕರು ಮರುಗುತ್ತಿರುತ್ತಾರೆ ಕೊನೆಯದಾಗಿ ಅವರನ್ನೊಮ್ಮೆ ನೋಡಿ ಬರುತ್ತೇನೆ ಎಂದೆ.ನಕ್ಕ ಆತ ಸರಿ ನೋಡು ಎಂದ ಅಲ್ಲಿ ನೋಡಿದರೆ ನನ್ನ ದೇಹವನ್ನು ಮೂಟೆ ಕಟ್ಟಿದ್ದಾರೆ.ಅದರ ಹತ್ತಿರ ಯಾರೂ ಬರುತ್ತಿಲ್ಲ.

ನನ್ನ ಹೆಂಡತಿ,ಅಪ್ಪ ಅಮ್ಮ ಬಿಟ್ಟು ಇನ್ನಾರೂ ಇಲ್ಲ…….ಅಲ್ಲೆ ಇದ್ದ ಡಾಕ್ಟರ್‌ ಒಬ್ಬ ಇವನು ಕರೊನಾದಿಂದ ಸತ್ತ ರೋಗಿ ಅದಕ್ಕೆ ಸಂಬಂಧಿಕರು ಯಾರೂ ಬಂದಿಲ್ಲ.ರೋಗ ಹರಡುವ ಭಯ ಎಂದು ದಾದಿಯ ಬಳಿ ಹೇಳುತ್ತಿದ್ದ…ಕೇಳಿ ಬೇಸರವಾದರೂ ಮನೆಯಲ್ಲಿರದೇ ಮಾಡಿಕೊಂಡ ಸ್ವಯಂಕೃತ ಅಪರಾದಕ್ಕೆ ನೋವಾದರೂ.ಏನು ಮಾಡುವುದಕ್ಕಾಗದು..ಆ ಅಪರಿಚಿತ ವ್ಯಕ್ತಿಯ ಹಿಂಬಾಲಿಸುವುದೊಂದೆ ದಾರಿ……

ಲಾಕ್ ಡೌನ್: ತಿಪಟೂರಿನಲ್ಲಿ 140 ಕುಟುಂಬಕ್ಕೆ ದಿನಸಿ ವಿತರಣೆ

Publicstory. in


ತಿಪಟೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಏ.14 ರವರೆಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದ್ದು, ಇದರ ಹಿನ್ನೆಲೆಯಲ್ಲಿ ಎಷ್ಟೋ ನಗರದ, ಹಳ್ಳಿಯ ಜನರಿಗೆ ಮನೆಬಿಟ್ಟು ಆಚೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಈಡೇನಹಳ್ಳಿ ಗ್ರಾಮದ ಸ್ವಾಮಿ ಕೆ.ಆರ್. ಮತ್ತು ಕ್ಯಾಪ್ಜೆಮಿನಿ ಟೀಮ್, ಬೆಂಗಳೂರು ಇವರ ವತಿಯಿಂದ ತಿಪಟೂರು ತಾಲ್ಲೂಕಿನ ಈಡೇನಹಳ್ಳಿ, ಈಡೇನಹಳ್ಳಿ ಪಾಳ್ಯ, ಕಾಲೋನಿಗಳ 140 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಸಕ್ಕರೆ, ಅಡುಗೆಎಣ್ಣೆ, ಲೈಫ್ ಬಾಯ್ ಸೋಪು, ದಂತವರ್ಧಕ ಮತ್ತು ಇತರೆ ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಈಡೇನಹಳ್ಳಿ, ಈಡೇನಹಳ್ಳಿ ಪಾಳ್ಯ, ಕಾಲೋನಿ, ನವಗ್ರಾಮದ ಮುಖಂಡರು, ಹುಚ್ಚಗೊಂಡನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾದ ಜಗದಾಂಬ ಚಂದ್ರಶೇಖರ್, ಗಂಗಾಧರ್ ಉಪಸ್ಥಿತರಿದ್ದರು.

ತೊಂಡಗೆರೆಯ ತಬರನ ಮನೆಯಲ್ಲಿ ಸಂಭ್ರಮದ ನಗೆ…

ಕುಟುಂಬಕ್ಕೆ ನೆರವಾದ ಬೆಳಗುಂಬ ವೆಂಕಟೇಶ್ ಹಾಗೂ ಅವರ ಸಂಗಡಿಗರು

Publicstory.in


Tumkuru: ತುಮಕೂರು ತಾಲ್ಲೂಕಿನ ತೊಂಡಗೆರೆಯ ತಬರನ ಮನೆಯಲ್ಲಿ ಮಂಗಳವಾರ ಸಂಭ್ರಮದ ನಗೆ ಕಾಣಿಸಿತು.

ಈತನ ಹೆಸರು ತಬರ ಅಲ್ಲ. ನಿಜನಾಮ ನರಸಿಂಹಮೂರ್ತಿ. ಹೆಂಡತಿ, ಇಬ್ಬರು ಓದುವ ಮಕ್ಕಳೊಂದಿಗೆ ಈ ಗ್ರಾಮದಲ್ಲಿ ಇಪ್ಪತ್ತು ವರ್ಷಗಳಿಂದ ಮೂರು ನಾಲ್ಕು ಗರಿಗಳನ್ನು ಹಾಕಿಕೊಂಡು ಹರಿದ ಗುಡಿಸಲಿನಲ್ಲಿ ವಾಸವಿದ್ದಾನೆ.

ಮರದ ದಿಮ್ಮಿ ಹೊರುವ ಈತ ಕಳೆದ ಇಪ್ಪತ್ತು ವರ್ಷಗಳಿಂದಲೂ ಒಂದು ಮನೆಗಾಗಿ ಗ್ರಾಮ ಪಂಚಾಯತಿ ಕಂಬಗಳನ್ನು ಅಲೆದು ಅಲೆದು ಸುಸ್ತಾಗಿದ್ದಾನೆ. ಹೀಗಾಗಿ ಈ ನರಸಿಂಹಮೂರ್ತಿಯನ್ನು ಪಬ್ಲಿಕ್ ಸ್ಟೋರಿ.ಇನ್ ತಬರ ಎಂದು ಕರೆದಿದೆ.

ಈತನ ಕಷ್ಟವನ್ನು ಮೊದಲಿಗೆ ಬೆಳಕಿಗೆ ತಂದವರು ಜೆಡಿಎಸ್ ಮುಖಂಡರಾದ ಬೆಳಗುಂಬ ವೆಂಕಟೇಶ್. ಈತನಿಗೊಂದು ಸೂರು ಕಲ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ‌.

ಇದರ ನಡುವೆಯೇ ಕರೊನಾ , ಲಾಕ್ ಡೌನ್ ಆಯಿತು. ಈ ಕುಟುಂಬಕ್ಕೆ ಊಟ ಇಲ್ಲ ಎಂಬುದು ಬೆಳಗುಂಬ ವೆಂಕಟೇಶ್ ಅವರ ಗಮನಕ್ಕೆ ಬರುತ್ತಿದ್ದಂತೆ ಮಂಗಳವಾರ ನೆರವಿನ ಆಸರೆ ಇತ್ತರು.

ಕುಟುಂಬದ ಕಷ್ಟ ಗೊತ್ತಾಗುತ್ತಿದ್ದಂತೆ ನನ್ನದೇ ಬೈಕ್ ನಲ್ಲಿ 50 kg ಅಕ್ಕಿ, ಎಣ್ಣೆ, ಬೇಳೆ, ಸಾಬೂನು, ಮಾಸ್ಕ್ ಸೇರಿದಂತೆ ಒಂದೆರಡು ತಿ‌ಂಗಳಿಗೆ ಆಗುವಷ್ಟು ಸಾಮಾಗ್ರಿ ಕೊಟ್ಟಿದ್ದೇನೆ ಎಂದು ವೆಂಕಟೇಶ್ ಹೇಳಿದರು.

ಈ ಕುಟುಂಬಕ್ಕೆ ಮನೆ ಕಟ್ಟಿಕೊಡುವ ಭರವಸೆಯನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ. ಕರೊನಾ ಉಪಟಳ ಮುಗಿಯುತ್ತಿದ್ದಂತೆ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು. ಆತನ ಇಬ್ಬರ ಮಕ್ಕಳ ಓದಿಗೆ ಪ್ರೋತ್ಸಾಹ, ನೆರವು ನೀಡಲಾಗುವುದು ಎಂದು ಅವರು ತಿಳಿಸಿದರು.

ದೂರವಾಣಿ ಮೂಲಕ ಮಾತನಾಡಿದ ಶಾಸಕ ಬಿ.ಸಿ.ಗೌರಿಶಂಕರ್ ಅವರು, ಸ್ಥಳಕ್ಕೆ ಭೇಟಿ ನೀಡುತ್ತೇನೆ. ಕುಟುಂಬಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.

ಕುಟುಂಬಕ್ಕೆ ನೆರವು ನೀಡುವಾಗ ವೆಂಕಟೇಶ್ ಜತೆ ಪ್ರಸಾದ್ ಬೆಳಗೆರೆ, ರಾಜಣ್ಣ ನಿಡುವಳಲು, ಶ್ರೀನಿವಾಸ್ ದಾದಾಪೀರ್ , ರವಿ ತೊಂಡಗೆರೆ ಇದ್ದರು‌.

ತುರ್ತು ಆರೋಗ್ಯ ಸೇವೆಗೆ ನೆರವಾದ ಮಾಜಿ ಡಿಸಿಎಂ; ಕೊರಟಗೆರೆಗೆ ಬಂದಿದ್ದಾರೆ 10 ಸಾವಿರ ಜನರು

ತುಮಕೂರು: ಕೊರೊನಾ ತುರ್ತು ಸೇವೆಯಲ್ಲಿ ನಿರತರಾಗಿರುವ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ, ಪತ್ರಕರ್ತರು ಹಾಗೂ ತುರ್ತು ಸೇವೆಯಲ್ಲಿ ತೊಡಗಿರುವವರ ಇತರರಿಗೆ ನೀಡುವಂತೆ ವೈಯಕ್ತಿಕವಾಗಿ 10 ಲಕ್ಷ ಮೌಲ್ಯದ ಮಾಸ್ಕ್, ಸ್ಯಾನಿಟೈಸರ್ ನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ ಅವರು ತಹಶೀಲ್ದಾರ್ ಅವರಿಗೆ ಮಂಗಳವಾರ ನೀಡಿದರು.

ತಾಲ್ಲೂಕಿನಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನ ರೆಡ್ಡಿಕಟ್ಟೆ ಬಾರೆಯ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಕೊರೊನಾ ತುರ್ತು ಸೇವೆಗಾಗಿ ಕಟ್ಟಡವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಐಸಿಯು ವಾರ್ಡ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡ ರಚನೆ ಮಾಡಿ ಪ್ರತಿಯೊಂದು ಮನೆಯ ಸದಸ್ಯರ ಆರೋಗ್ಯ ತಪಾಸಣೆ ನಡೆಸಬೇಕು. ಕ್ಷೇತ್ರದಲ್ಲಿ ಯಾರಿಗೂ ಆಹಾರಕ್ಕೆ ಕೊರತೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕ್ಷೇತ್ರದ ಪ್ರತಿ ದಿನದ ಮಾಹಿತಿಯನ್ನು ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಕೊರೊನಾ ಶಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗೆ ಹೊಂದಿಕೊಂಡಂತಿರುವ ನಮ್ಮ ಕ್ಷೇತ್ರಕ್ಕೆ ಯಾರೂ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡದರು.

ತಾಲ್ಲೂಕನ್ನು ಸಂಪರ್ಕಿಸುವ ಗಡಿಯಲ್ಲಿ ಹಾಕಲಾಗಿರುವ ಚೆಕ್ ಪೋಸ್ಟ್ ಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಕ್ಷೇತ್ರದೊಳಗೆ ಯಾರೂ ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು.

ಬೆಂಗಳೂರಿನಿಂದ ತಾಲ್ಲೂಕಿಗೆ ಸುಮಾರು 10 ಸಾವಿರ ಜನ ಬಂದಿರುವ ಮಾಹಿತಿ ಇದೆ. ಅವರನ್ನು ವೈದ್ಯಕೀಯ ತಪಾಸಣೆ ನಡೆಸಿ ಯಾರೂ ಮನೆಯಿಂದ ಹೊರಬಾರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಪಪಂ. ಸಿಓ ಲಕ್ಷ್ಮಣಕುಮಾರ, ಸಿಪಿಐ ಎಫ್.ಕೆ.ನದಾಫ್, ಟಿಎಚ್ಓ ಡಾ. ವಿಜಯ್ ಕುಮಾರ್, ವೈದ್ಯಾಧಿಕಾರಿ ಡಾ. ಪ್ರಕಾಶ್, ಡಾ. ನಾಗಭೂಷಣ್, ಬೆಸ್ಕಾಂ ಎಇಇ ಮಲ್ಲಣ್ಣ, ಬಿಸಿಎಂ ಇಲಾಖೆಯ ಅನಂತರಾಮ್, ಎಇಇ ರಂಗಪ್ಪ, ಪಿಎಸೈಗಳಾದ ಎಚ್.ಮುತ್ತುರಾಜು, ನವೀನ್ ಇತರರು ಇದ್ದರು.

ಅಲೆಮಾರಿ ಜನರಿಗೆ ಕೈ ಚಾಚಿದ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ

ತುರುವೇಕೆರೆ: ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಟ್ಟಣದ ಬಸವೇಶ್ವರ ನಗರದ ಅಲೆಮಾರಿ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳನ್ನು ನೀಡಿ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು.

ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಸಿದ್ಧಲಿಂಗೇಗೌಡ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಹಲವಾರು ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಅಲೆಮಾರಿಗಳು ತಮ್ಮ ಜೀವನೋಪಾಯವನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದಾರೆ. ಅವರ ಸುರಕ್ಷತೆ ಮತ್ತು ಜೀವನ ಭದ್ರತೆಯನ್ನು ಕಾಪಾಡಬೇಕಾದ್ದು ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳ ಸಂರಕ್ಷಣೆಯೂ ಹೌದು. ಈ ನಿಟ್ಟಿನಲ್ಲಿ ನಾವು ಆಡಳಿತ ಮತ್ತು ಸರ್ಕಾರಗಳ ಜೊತೆ ಕೈ ಜೋಡಿಸಿದ್ದು ಆಹಾರ ಮತ್ತಿತರ ದಿನಬಳಕೆ ವಸ್ತುಗಳ ಅವಶ್ಯಕತೆ ಇರುವ ಜನರಿಗೆ ಅವನ್ನು ಪೂರೈಕೆ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ತುರುವೇಕೆರೆಯ ಆರಕ್ಷಕ ವೃತ್ತ ನಿರೀಕ್ಷಕ ಲೋಕೇಶ್ ಜನಗಳು ಅನವಶ್ಯಕವಾಗಿ ಮನೆ ಬಿಟ್ಟು ಬರಬಾರದು. ನಾವು ಜನರನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಜನರು ಅನಿವಾರ್ಯವಾಗಿ ಈಚೆ ಬರುವ ಪರಿಸ್ಥಿತಿ ಬಂದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಬಸವೇಶ್ವರ ನಗರ ಮತ್ತು ಸುತ್ತಮುತ್ತಲ ಕಾರ್ಮಿಕರಿಗೆ ತಿಂಡಿ , ಊಟ ಹಾಗೂ ಹಾಲಿನ ಪ್ಯಾಕೆಟ್ ವಿತರಿಸಲಾಯಿತು.

ವಿಶ್ವಮಾನವ ಹಕ್ಕುಗಳ ಸೇವಾಕೇಂದ್ರದ ಕಾರ್ಯದರ್ಶಿ ಎಂ.ಎಸ್.ದರ್ಶನ್ ಜಿಲ್ಲಾಡಳಿತ, ಹಾಗೂ ತಾಲ್ಲೂಕು ಆಡಳಿತ ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಕೂಲಿಕಾರ್ಮಿಕರಿಗೆ ಹಾಗೂ ಬಡವರಿಗೆ ಆಹಾರಪೂರೈಕೆಯ ಖಾತರಿ ನೀಡಬೇಕು ಎಂದು ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎ.ಸಿ.ಡಿ.ಪಿ.ಓ ಅರುಣ್ ಕುಮಾರ್ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ತಕ್ಷಣದಿಂದಲೇ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸೇವಾಕೇಂದ್ರದ ರಾಜ್ಯ ನಿರ್ದೇಶಕ ನಟೇಶ್, ಮಾಲತೇಶ್,ಮುನಿಯೂರಿನ ಸಾಗರ್, ಶಿವಕುಮಾರ್, ಕಿರಣ್, ದಯಾನಂದ, ಗಾಯತ್ರಿ ಅರಸ್ ಇತರರು ಪಾಲ್ಗೊಂಡಿದ್ದರು.

ಕಡುಬಡವರ ಮನೆ ಬಾಗಿಲಿಗೆ ಆಹಾರ ನೀಡಿದ ಶಾಸಕ ಜ್ಯೋತಿ ಗಣೇಶ್

0

ತುಮಕೂರು: ನಗರದ ಪ್ರತಿ ಮೂಲೆ, ಮೂಲೆಯಲ್ಲಿ ಯಾರು ನಿಜವಾಗಿಯೂ ಹಸಿವಿನಿಂದ ನರಳುತ್ತಿರುವ, ಅಂಥವರನ್ನು ಹುಡುಕಿ, ಹುಡುಕಿ ಆಹಾರ ನೀಡುವ C0VID-19 VOLUTEERS TUMAKURU ಈ ತಂಡ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶಕ್ತಿಪೀಠದ ಕುಂದರನಹಳ್ಳಿ ರಮೇಶ್ ಅವರು ನಿಮಗಿದು ಗೊತ್ತೇ ಕಾಲಂ ನಲ್ಲಿ ವರದಿ ಮಾಡಿದ್ದಾರೆ. ಅವರ ವರದಿ ಯಥಾವತ್ ಇಲ್ಲಿದೆ.

ಒಂದು ರಸ್ತೆಯ ಬದಿಯಲ್ಲಿ ಕುಳಿತಿರುವ ಒಂದು ಅಜ್ಜಿಗೂ ಸಹ ಬಿಡದೆ ದುರ್ಭಿನ್ ಹಾಕಿ ಹುಡುಕುವ ರೀತಿಯಲ್ಲಿ ಹುಡುಕುತ್ತಿದ್ದಾರೆ. ತುಮಕೂರು ನಗರದ ಎಲ್ಲಾ ಭಾಗದ ಆಸಕ್ತ ಚಿಂತಕರು ಈ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ತುಮಕೂರು ನಗರಾಡಳಿತ ಮಾಡಬೇಕಿತ್ತು. ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ ನಗರಾಡಳಿತ ಈ ರೀತಿ ಮಾಡಿದ ಉದಾಹರಣೆ ಕಾಣಲಿಲ್ಲ.

ಊಟ, ತಿಂಡಿ, ನೀರು ಮತ್ತು ಕಿಚನ್ ಪ್ಯಾಕೆಟ್‌ನ್ನು ವಿತರಿಸುತ್ತಿದ್ದಾರೆ. ಇಲ್ಲಿ ಪಕ್ಷ, ಜಾತಿ, ಯಾವುದೂ ಕಾಣಲಿಲ್ಲ, ಇಲ್ಲಿ ಮಾನವೀಯತೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಕೈಜೋಡಿಸಿರುವುದು ಈ ತಂಡಕ್ಕೆ ಆನೆ ಬಲ ಬಂದಿದೆ.

ಈ ತಂಡಕ್ಕೆ ನಗರದಲ್ಲಿ ಕಡುಬಡವರು ಯಾವ ಭಾಗದಲ್ಲಿದ್ದಾರೆ, ಯಾರು ಎಲ್ಲಿ ನಿರ್ಗತಿಕರಿದ್ದಾರೆ. ಅವರು ಯಾವ ರೀತಿ ವಾಸಮಾಡುತ್ತಿದ್ದಾರೆ ಎಂಬ ತಾಜಾ ಮಾಹಿತಿ ತಿಳಿಯಲಿದೆ. ಶಾಸಕರಿಗೂ ನೈಜತೆ ತಿಳಿಯಲಿದೆ. ಕೊರೊನಾ ಮಹಾಮಾರಿಯ ಧ್ವಂಸದ ತಕ್ಷಣ ಇವರಿಗೆಲ್ಲಾ ಸೂರು ನಿರ್ಮಿಸಲು ಪಟ್ಟಿಯನ್ನು ಸಹ ಮಾಡುತ್ತಿರುವ ಅಂಶ ನಿಜಕ್ಕೂ ಅತ್ಯಂತ ಸ್ವಾಗಾತಾರ್ಹ ವಿಚಾರ.

ರಾಜ್ಯದ ಎಲ್ಲಾ ಭಾಗದಲ್ಲಿಯೂ ಈ ತರಹವಾದ ನಿರ್ಧಿಷ್ಠವಾದ ಕೆಲಸ ನಡೆಯಬೇಕು, ಪ್ರಧಾನಿಯವರು ಕರೆ ನೀಡಿರುವ ಪ್ರಕಾರ ಇನ್ನೂ ಹದಿನಾಲ್ಕು ದಿವಸವಿದೆ. ನಂತರ ದೇವರಿಗೆ ಗೊತ್ತು.

ತುಮಕೂರಿನ ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜ್‌ರವರು ಜಿಲ್ಲಾಧಿಕಾರಿಗಳಿಗೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ, ತುಮಕೂರು ನಗರದ ಮತ್ತು ಜಿಲ್ಲೆಯ ಎಲ್ಲಾ ನಗರಗಳ ಪ್ರದೇಶದ ಪ್ರತಿಯೊಂದು ವಾರ್ಡ್‌ಗಳಿಗೂ ಮನೆ-ಮನೆ ಬಾಗಿಲಿಗೆ ತರಕಾರಿ, ಹಣ್ಣು ವಿತರಣೆ ಮಾಡಲು ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದ ಮಾಲನ್ನು ನೇರವಾಗಿ ಖರೀದಿಸಿ ಮಾರಾಟ ಮಾಡಲು ಸೂಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಯುವಕ ವೈದ್ಯರು, ಪೊಲೀಸರ ಕೈ ಹಿಡಿದ ಹಿಂದಿನ ಕಥೆಯೇನು ಗೊತ್ತಾ?

0

ಪೊಲೀಸರಿಗೆ ಮಾಸ್ಕ್ ವಿತರಿಸಿದ ಆರ್.ರಾಜೇಂದ್ರ

Publicstory. in


ಇವರಿಗೆಲ್ಲ ಊಟ ತಯಾರಿಸಲೆಂದೇ ಚೌಟ್ರಿ ಬಿಡಿಸಿಕೊಂಡಿದ್ದಾರೆ. ಪ್ರತಿ ದಿನ ಒಬ್ಬರು ಆಹಾರ ನಿರೀಕ್ಷಕರು ಬಂದು ಆಹಾರ ಪರೀಕ್ಷಿಸುತ್ತಾರೆ. ವೈದ್ಯರೊಬ್ಬರು ಅಡುಗೆ ಸಿಬ್ಬಂದಿ ಪರೀಕ್ಷೆ ಮಾಡಿದ ಬಳಿಕ ಆಹಾರ ಸಿದ್ಧತೆ ಆರಂಭಗೊಳ್ಳುತ್ತದೆ.


Tumkuru: ವೈದ್ಯರಿಗಾಗಿ ಎಲ್ಲರೂ ಮನೆಗಳ ಮೇಲೆ ನಿಂತು ಚಪ್ಪಾಳೆ ತಟ್ಟಿದವು. ಆದರೆ ಆಸ್ಪತ್ರೆಗಳಲ್ಲಿ ಏನಿದೆ, ಏನಿಲ್ಲ ಎಂಬ ಪ್ರಶ್ನೆಗಳನ್ನು ಮೌನವಾಗಿಸಿದೆವು.

ಕೆಲವು ಜನಪ್ರತಿನಿಧಿಗಳು ಮನೆಯಿಂದ ಈಚೆಯೇ ಬಂದಿಲ್ಲ. ಇನ್ನೂ ಕೆಲವು ಶಾಸಕರು ಮನೆಯಿಂದಲೇ ಸಭೆ ನಡೆಸುತ್ತಿದ್ದಾರೆ.

ಆದರೆ ಇಲ್ಲೊಬ್ಬ ಸಹಕಾರಿ ದುರೀಣ ಆಸ್ಪತ್ರೆಗಳ ಕಡೆ, ಪೊಲೀಸ್ ಠಾಣೆ, ರಸ್ತೆಯಲ್ಲಿರುವ ಅನಾಥರು, ರೂಂ ಗಳಲ್ಲಿ ಒಬ್ಬಂಟಿಯಾಗಿ ಉಳಿದಿರುವ ವಿದ್ಯಾ ರ್ಥಿಗಳು, ನಮಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರ ಕಡೆ ನೋಡುತ್ತಿದ್ದಾರೆ. ಇವರೆಗೆಲ್ಲ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ. ಅದರ ಹಿಂದಿನ ಕತೆಯೂ ಕುತೂಹಲವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗಾಗಿ ಹಾಗೂ ಸಿಬ್ಬಂದಿಗಾಗಿ ಅಡುಗೆ ಮಾಡುತ್ತಿದ್ದ ಸಿಬ್ಬಂದಿ ಕರೊನಾಗೆ ಹೆದರಿ ಕಾಲು ಕಿತ್ತಿದ್ದಾರೆ.ಈಗ ವೈದ್ಯರಿಗೆ, ಅಲ್ಲಿನ ಸಿಬ್ವಂದಿಗೆ ಊಟವೇ ಇಲ್ಲ. ಹಗಲಿರುಳು ನಮಗಾಗಿ ದುಡಿಯುತ್ತಿರುವ ಇವರಿಗೆ ಉಟಕ್ಕು ಪರದಾಡುವ ಸ್ಥಿತಿ.

ವಿಷಯ ತಿಳಿಯುತ್ತಿದ್ದಂತೆ, ಸಹಕಾರಿ ದುರೀಣರೂ ಆಗಿರುವ ಆರ್.ರಾಜೇಂದ್ರ ಅಭಿಮಾನಿಗಳ ಸಂಘ ಅವರಿಗೆ ಕೈ ಚಾಚಿದೆ.

ಬೀದಿ ಬದಿಯಲ್ಲಿ ಇರುವ, ಕಡು ಬಡವರಿಗೆ ಲಾಕ್ ಡೌನ್ ಸಮಯದಲ್ಲಿ ಊಟ, ನೀರು ನೀಡುವ ಕೆಲಸಕ್ಕೆ ಮುಂದಾದೆವು. ನಂತರ ಗೊತ್ತಾಯಿತು, ಜಿಲ್ಲಾಸ್ಪತ್ರೆ ಸಮಸ್ಯೆ. ಪೊಲೀಸರಿಗೆ ಊಟ ಯಾರು ನೀಡುತ್ತಾರೆ, ಹೋಟೆಲ್ ಗಳೇ ಇಲ್ಲದ ಮೇಲೆ ಊಟ ಎಲ್ಲಿ ತಿನ್ನುತ್ತಾರೆ? ಪೌರ ಕಾರ್ಮಿಕರ ಸಮಸ್ಯೆ ಏನು… ಹೀಗೆ ಕೆದಕುತ್ತಾ ಹೋಗುತ್ತಿದ್ದಂತೆ ಸಮಸ್ಯೆ ಅನಾವರಣವಾಯಿತು ಎನ್ನುತ್ತಾರೆ ಆರ್. ರಾಜೇಂದ್ರ.

ಪ್ರತಿ ದಿನ 1500 ಊಟ ಪೂರೈಕೆ ಮಾಡುತ್ತಿದ್ದೇವೆ. ತುಮಕೂರು ನಗರದ ಪೊಲೀಸರು, ಜಿಲ್ಲಾಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಎರಡು ಸಲ ಊಟ ನೀಡುತ್ತಿದ್ದೇವೆ. ಇದಕ್ಕಾಗಿ ಯಾರಿಂದಲೂ ಹಣ ಪಡೆದಿಲ್ಲ. ಅಭಿಮಾನಿ ಬಳಗದವರೇ ಎಲ್ಲವನ್ನು ಒದಗಿಸುತ್ತಿದ್ದಾರೆ ಎಂದು Publicstory. in. ಗೆ ಮಾಹಿತಿ ನೀಡಿದರು.

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಯಾರೂ ನೆರವಾಗುತ್ತಿಲ್ಲ. ಮನೆಗಳಲ್ಲಿ ಒಬ್ಬಂಟಿಯಾಗಿ ಸಿಲುಕಿಕೊಂಡಿರುವ ಹಲವು ಮಂದಿ ಸರ್ಕಾರಿ ನೌಕರರು ಊಟ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿ ಬಳಗದ ರಾಜೇಶ್ ದೊಡ್ಡಮನೆ.

R. ರಾಜೇಂದ್ರ ( ಸಂಗ್ರಹ ಚಿತ್ರ)

ಪ್ರತಿದಿನ ಅಡುಗೆ ತಯಾರಿ ನೋಡಲೆಂದೇ ರಾಜೇಂದ್ರಣ್ಣ ಬರುತ್ತಾರೆ. ಆಹಾರ ಪೂರೈಕೆಗಾಗಿಯೇ 5 ತಂಡಗಳನ್ನು ಮಾಡಿದ್ದೇವೆ. ಎಲ್ಲ ಕಡೆ, ಸಾಧ್ಯವಾದಷ್ಟು ಪೋನ್ ನಂಬರುಗಳನ್ನು ಪ್ರಚುರಪಡಿಸಿದ್ದೇವೆ. ಯಾರೇ ಕರೆ ಮಾಡಿದರೂ ಊಟ ನೀಡುತ್ತೇವೆ. ಲಕ್ಷ ಸಂಬಳ ಪಡೆಯುವವರು ಊಟ ಕೇಳಿ ಪಡೆಯುತ್ತಿದ್ದಾರೆ. ಎಲ್ಲ ಸಮಯದಲ್ಲೂ ಹಣ ಬಳಕೆಗೆ ಬರುವುದಿಲ್ಲ ಎಂಬ ಮಾತು ನಿಜವಾಗುತ್ತಿರುವುದನ್ನು ಕಾಣುತ್ತಿದ್ದೇನೆ ಎನ್ನುತ್ತಾರೆ ರಾಜೇಶ್.

ಪ್ರತಿ ದಿನ ಕರೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಾಗಲೇ ಗೃಹ ರಕ್ಷಕ ಸಿಬ್ಬಂದಿಗೆ ಮಾಸ್ಕ್ ನೀಡಿದ್ದೇವೆ. ನಾಳೆಯಿಂದ ಊಟದ ಜತೆಗೆ ಸ್ಯಾನಿಟೈಜರ್ ಸಹ ನೀಡಲಾಗುವುದು ಎನ್ನುತ್ತಾರೆ ರಾಜೇಂದ್ರ‌.

LockDown: ಇಲ್ನೋಡಿ ಹಳ್ಳಿಗರ ಶೈಲಿ..

1

Publicstory. in


ಶಿರಾ: ಕರೊನ ಸೋಂಕು ಹರಡದಂತೆ ದೇಶಾದ್ಯಂತ ಎಲ್ಲರೂ ಮನೆಯಲ್ಲೇ ಇದ್ದು ಕರೊ ಓಡಿಸಿ ಎಂದು ಪ್ರಧಾನ ಮಂತ್ರಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದು, ಕಾಲ‌ ಕಳೆಯುತ್ತಿದ್ದಾರೆ. ಕೆಲವರು ನಿದ್ದೆ‌ ಮಾಡಿದರೆ, ಇನ್ನೂ ಕೆಲವರು ಮನಸಿಗೆ ಖುಷಿ‌ ಕೊಡುವ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ.

ನಗರವಾಸಿಗಳು ಹೆಚ್ಚಾಗಿ ಮನೆಯಲ್ಲೇ ಟಿ.ವಿ. ಕಾರ್ಯಕ್ರಮಗಳ ವೀಕ್ಷಿಸುವುದು, ಮಕ್ಕಳೊಂದಿಗೆ ಆಟ ಆಡುವುದು, ಹೆಣ್ಣುಮಕ್ಕಳು ಬಗೆಬಗೆಯ ತಿಂಡಿ-ತಿನಿಸು ಸಿದ್ಧಪಡಿಸುವುದು, ರಂಗೋಲಿ ಬಿಡಿಸುವುದು, ಚಿತ್ರಕಲೆ, ಸಂಗೀತ, ನೃತ್ಯ, ಚೆಸ್, ಕೇರಂ ಸೇರಿದಂತೆ ತರಹೇವಾರಿ ಆಟಗಳಲ್ಲಿ ತಲ್ಲೀನರಾಗಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಈ 21 ದಿನಗಳ ಜೀವನ ಶೈಲಿ ನಗರವಾಸಿಗಳಿಗಿಂತ ಭಿನ್ನವಾಗಿಯೇ‌ ಇದೆ. ರೈತಾಪಿ ಜನರೇ ಹೆಚ್ಚಿರುವ ಈ ಪ್ರದೇಶದಲ್ಲಿ ಬಹುತೇಕರು ಕೃಷಿ ಚಟುವಟಿಕೆ, ಜಾನುವಾರುಗಳ ಪಾಲನೆ-ಪೋಷಣೆ, ಪ್ರೀತಿಯ ಪ್ರಾಣಿಗಳೊಂದಿಗೆ ಸಮಯ ಕಳೆಯುವುದು, ಪ್ರಾಣಿಗಳಿಗೆ ಮೇವು ಸಂಗ್ರಹಣೆ, ಕಟಾವಣೆ, ಕಾಳುಗಳ ಸಂಗ್ರಹಣೆ, ಮನೆಯ ಹಿತ್ತಲಲ್ಲಿ ತರಕಾರಿ, ಸೊಪ್ಪು ಬೆಳೆಯುವುದು, ಗಿಡಗಳ ನೆಟ್ಟು, ಪೋಷಿಸುವುದು, ದೈನಂದಿನ‌ ಚಟುವಟಿಕೆಗಳಾಗಿವೆ..

ಹಿರಿಯರಿರುವ ಕೆಲ ಮನೆಯಲ್ಲಿ ಮಕ್ಕಳಿಗೆ ಜಾನಪದ ಗೀತೆಗಳು, ಒಗಟುಗಳು, ಗಾದೆಗಳು, ಸೋಬಾನೆ ಪದ, ಲಾವಣಿ, ದೇವರ ಪದ ಹೇಳಿಕೊಡುವುದು, ಗ್ರಾಮೀಣ ಆಟಗಳಾದ ಚೌಕಾಬಾರ, ಅಳಗುಳಿಮಣೆ ಆಟ, ಉಪ್ಪುಪ್ಪು‌ಮನೆ ಮುಂತಾದ ಆಟಗಳನ್ನು ಆಡುವ ಮೂಲಕ ಗ್ರಾಮೀಣ ಸೊಗಡನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತಿದೆ.

ಇನ್ನೂ ಕೆಲವರು ತಮ್ಮ ಮೆನಯಲ್ಲಿದ್ದ ಹಳೇಕಾಲದ ಸಾಮಗ್ರಿಗಳಾದ ಜರಡಿ-ಮೊರ, ಲಾಟೀನು, ಸಂಗೀತ ಸಾಮಗ್ರಿ, ಉಡುಗೆ ಸಾಮಗ್ರಿ, ನಾಣ್ಯ, ಅಲಂಕಾರ ವಸ್ತುಗಳ ಮರುಬಳಕೆ, ಗಡಿಯಾರ, ಸೈಕಲ್ಲು-ಟಿ.ವಿ., ರೇಡಿಯೋ, ಟೇಪ್ ರೆಕಾರ್ಡರ್, ಡಿವಿಡಿ-ವಿಸಿಡಿ ಬಿಚ್ಚಿ ರಿಪೇರಿ ಮಾಡುವುದು ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.


ತುಮಕೂರು ಜಿಲ್ಲೆಗೆ ಹೊಂದಿಕೊಂಡಿರುವ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಎಂ.ತಿಪ್ಪೇಸ್ವಾಮಿ-ಶಾಂತಮ್ಮ ದಂಪತಿ

ಇನ್ನೂ ಒಂದು ಹೆಜ್ಜೆ ಮುಂದೆ‌ ಹೋಗಿ ಈ 21 ದಿನಗಳಲ್ಲಿ ಪ್ರತಿದಿನವೂ ಒಂದೊಂದು ವಿನೂತನ ಕರಕುಶಲ- ‌ಜೀವನೋಪಯೋಗಿ ಚಟುವಟಿಕೆ ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.


ಸ್ವತಃ ಚಿತ್ರಕಲಾ ಶಿಕ್ಷಕರಾಗಿರುವ ತಿಪ್ಪೇಸ್ವಾಮಿ, ಮಕ್ಕಳಿಗೆ ಚಿತ್ರಕಲೆ, ಜೇಡಿಮಣ್ಣಿನ ಆಕೃತಿ ರಚನೆ, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆ, ಸಂಗೀತ, ನೃತ್ಯ, ಮೇಕಪ್, ಆಯಿಲ್-ಮಸಾಜ್,
ಜಾದೂ, ಅನುಪಯುಕ್ತ ವಸ್ತುಗಳಿಂದ ಆಕೃತಿಗಳ ರಚನೆ, ಗಿಡಗಳ ಕುಂಡಗಳ ತಯಾರಿಕೆ ಮುಂತಾದ ಕಲೆಗಳನ್ನು ಮನೆಯ ಸದಸ್ಯರಿಗೆ ಹೇಳಿಕೊಡುತ್ತಿದ್ದಾರೆ.

ಚೌಕಾಬಾರ, ಅಳಗುಳಿಮಣೆ, ಚೆಸ್, ಕೇರಂ, ಹಾವು-ಏಣಿ‌ ಆಟ, ಉಪ್ಪಾರ ಪಟ್ಟೆ, ಬಸವಿನ ಕಟ್ಟೆ, ಸೇರಿದಂತೆ ಪ್ರತಿದಿನವೂ ಒಂದೊಂದು ಆಟಗಳ ಬಗ್ಗೆ ಹೇಳಿಕೊಡುತ್ತಿದ್ದಾರೆ.

ಇದರೊಂದಿಗೆ ಪ್ರತಿದಿನ ಯೋಗ, ಪ್ರಾಣಾಯಾಮ, ಧ್ಯಾನ, ಪ್ರಕೃತಿ ಚಿಕಿತ್ಸೆ, ಕಷಾಯ ಪುಡಿ‌‌ ತಯಾರಿಸುವುದು, ಸಿರಿಧಾನ್ಯಗಳಿಂದ ವಿವಿಧ ಬಗೆಯ ತಿಂಡಿ‌ ತಯಾರಿಕೆಯನ್ನು ಪ್ರತಿದಿನವೂ ಹೇಳಿಕೊಡುತ್ತಿದ್ದಾರೆ.

ಅವರ ಮನೆಯಲ್ಲಿ ಬಿಸಾಡಿದ್ದ ಲಾಟೀನು, ಒಣಕೆ, ರುಬ್ಬುವ ಗುಂಡು, ಬೀಸುವ ಕಲ್ಲು, ಕುಟ್ಟಣಿ, ಮರ-ಜರಡಿ, ಕೊಡಲಿ, ಬಾಳಸಿ, ನೆಲಗುದ್ದಲಿ, ಸಲಿಕೆ ಮುಂತಾದ ವಸ್ತುಗಳನ್ನು ಹೊರತೆಗೆದು ಅವುಗಳನ್ನು ಬಳಸುತ್ತಿದ್ದಾರೆ.

ಹತ್ತಿರದಲ್ಲೇ ಸಿಗುವ ಹಸುವಿನ ಸಗಣಿ ಸಂಗ್ರಹಿಸಿ ಅದರಿಂದ ಪ್ರತಿದಿನವೂ ಬೆರಣಿ ತಟ್ಟಿ ಅವುಗಳನ್ನು ಹೋಮ-ಅಗ್ನಿಹೋತ್ರಿಗೆ ಬಳಸುವುದು, ಮನೆಯ ಹಿತ್ತಲಲ್ಲಿ ಬೆಳೆದಿರುವ ಅಮೃತ ಬಳ್ಳಿ, ತುಳಸಿ-ಬೇವು, ಬಿಲ್ವಪತ್ರೆ, ಶುಂಠಿ, ಪುದಿನ ಕಷಾಯ ತಯಾರಿಸುವುದು, ಹತ್ತಿರದಲ್ಲಿ‌ ಸಿಗುವ ಸೌದೆ ಸಂಗ್ರಹಿಸಿ ಒಲೆಯಲ್ಲಿಯೇ ಸೌದೆ ಬಳಸಿ ಅಡುಗೆ ತಯಾರಿಸುವುದು ಮುಂತಾದ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕರೊನಾ; ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಭೆ


ಜಿಲ್ಲೆಯಲ್ಲಿ ಕರೊನಾ ಸಾವು ಸಂಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ. ಸಿದ್ಧತೆಗಳ ಬಗ್ಗೆ ಪರಿಶೀಲನೆ ಮಾಡಬೇಕು. ಅಧಿಕಾರಿಗಳು, ವೈದ್ಯರಿಗೆ ಸ್ಥೈರ್ಯ, ಅವರ ಕೆಲಸಕ್ಕೆ ಮುಂದಾಳತ್ವ ವಹಿಸಬೇಕು ಎಂದು ಪಬ್ಲಿಕ್ ಸ್ಟೋರಿ.ಇನ್ ವರದಿ ಪ್ರಕಟಿಸಿತ್ತು. ಇಂದು ಸಚಿವರು ಸಭೆ ನಡೆಸಿದ್ದಾರೆ. ಇದರೊಂದಿಗೆ ಕರೊನಾ ವಿರುದ್ಧ ಹೋರಾಟ ಮತ್ತೊಂದು ಮಜಲನ್ನು ಪಡೆದುಕೊಂಡಿದೆ.


Tumkuru: ಸರ್ಕಾರದ ಸೂಚನೆಯಂತೆ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಕಡ್ಡಾಯವಾಗಿ ತೆರೆಯವುದು ಮತ್ತು ಬಾಡಿಗೆ ಮನೆಯಲ್ಲಿರುವ ವೈದ್ಯರನ್ನು ಖಾಲಿ ಮಾಡುವವರ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಧುಗಿರಿ ಪಟ್ಟಣದಲ್ಲಿಂದು ತಾಲ್ಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.


ಈಗಾಗಲೇ ಕೋವಿಡ್-೧೯ ದೇಶದೆಲ್ಲೆಡೆ ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ೩ನೇ ಹಂತಕ್ಕೆ ಹೋಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ವೈದ್ಯರುಗಳು ತಮ್ಮ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳನ್ನು ತೆರೆದು ಸ್ಥಳೀಯರಿಗೆ ಅನುಕೂಲವಾಗುವಂತೆ ಸಹಕರಿಸಬೇಕು ಎಂದರು.
ಜಿಲ್ಲಾಸ್ಪತ್ರೆಯನ್ನು ಕೋವಿಡ್-೧೯ ಆಸ್ಪತ್ರೆಯನ್ನಾಗಿ ಪರಿರ್ವತಿಸಲಾಗಿದ್ದು, ಕೊರೋನಾ ಶಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರನ್ನು ಶ್ರೀದೇವಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆಂತಕಪಡುವ ಅಗತ್ಯವಿಲ್ಲ ಎಂದರು.
ಜಿಲ್ಲಾಸ್ಪತ್ರೆಗೆ ದೂರ ಇರುವ ತಾಲೂಕುಗಳಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ೭೦-೮೦ ವೆಂಟಿಲೇಟರ್‌ಗಳು ಲಭ್ಯವಿದ್ದು, ಅಗತ್ಯವಿರುವ ವೆಂಟಿಲೇಟರ್‌ಗಳನ್ನು ರಾಜ್ಯ ಸರ್ಕಾರವು ಖರೀದಿಸಲು ಮುಂದಾಗಿದೆ. ಇದರ ಜೊತೆಗೆ ಯಾವುದೇ ಕೊರತೆಯಾಗದಂತೆ ಮುನ್ನಚ್ಚರಿಕಾ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ವೈದ್ಯಕೀಯ ಸೇರಿದಂತೆ ಅಗತ್ಯ ವಸ್ತುಗಳ ಸರಕು ಸಾಗಾಟ ವಾಹನಗಳು ಓಡಾಡುತ್ತವೆ ಎಂದರು.
ಔಷಧಿ, ಕ್ಲಿನಿಕ್ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮಾತ್ರ ಆಯಾ ತಾಲೂಕು ತಹಶೀಲ್ದಾರ್ ಅನುಮತಿ ಪಡೆದು ಓಡಾಡಬಹುದು. ಅನುಮತಿ ನೀಡಿದ್ದಾರೆಂದು ದುರುಪಯೋಗ ಮಾಡಿಕೊಂಡರೆ ಶಿಸ್ತು ಕ್ರಮವಹಿಸಲಾಗುವುದು. ಅಲ್ಲದೇ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವುದಕ್ಕೂ ಮೊದಲು ಸೂಕ್ತ ಕಾರಣಗಳನ್ನು ನೀಡಿದ ನಂತರ ಪೆಟ್ರೋಲ್ ಹಾಕುವಂತೆ ತಿಳಿಸಬೇಕು. ಸರಕು, ಸಾಗಾಟ ವಾಹನಗಳಿಗೆ ಡೀಸೆಲ್ ಅವಶ್ಯಕತೆಯಿದ್ದು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ಅಂಗನವಾಡಿ ಮತ್ತು ಆಶಾ ಕಾರ್ಯಕತೆಯರನ್ನು ಬಳಸಿಕೊಂಡು ಪ್ರತಿ ಮನೆ-ಮನೆಗೆ ಭೇಟಿ ನೀಡಿ ಸಣ್ಣ ಪುಟ್ಟ ಖಾಯಿಲೆಗಳಿರುವವರ ವಿವರ ಹಾಗೂ ಕೆಮ್ಮು, ಜ್ವರ, ನೆಗಡಿ ಲಕ್ಷಣಗಳಿರುವವರ ಮಾಹಿತಿ ಪಡೆಯಬೇಕು. ಅಲ್ಲದೇ ಕೋವಿಡ್-೧೯ರ ಕರಪತ್ರಗಳನ್ನು ನೀಡಿ ಅರಿವಿನ ಮಾಹಿತಿ ನೀಡಬೇಕು. ಪ್ರತಿ ಗ್ರಾಮಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದರಲ್ಲದೇ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕ್ರಮವಹಿಸಬೇಕು ಎಂದು ಸಂಬAಧಿಸಿದವರಿಗೆ ಸೂಚಿಸಿದರು.

ಏಪ್ರಿಲ್ ೧೪ರವರೆಗೆ ಶಾಲಾ-ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ ತೆರೆಯುವಂತಿಲ್ಲ. ಅಲ್ಲದೇ ಮದುವೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತುಮಕೂರಿನಲ್ಲಿ ಮತ್ತೊಬ್ಬರಿಗೆ ಕರೊನಾ ಸೋಂಕು

Tumkuru: ಜಿಲ್ಲೆಯಲ್ಲಿ ಎರಡನೇ ಕರೊನಾ ಸೋಂಕು ದೃಢಪಟ್ಟಿದೆ.

ಕರೊನಾ ಸೋಂಕಿನಿಂದ‌ ಸಾವಿಗೀಡಾಗಿದ್ದ ಶಿರಾ ವ್ಯಕ್ತಿಯ ಹದಿಮೂರು ವರ್ಷದ ಮಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ ಇನ್ನೂ ಹಲವರ ಪರೀಕ್ಷಾ ವರದಿ ಬರಬೇಕಾಗಿದೆ.