Thursday, February 26, 2026
Google search engine
Home Blog Page 265

ತುಮಕೂರಿನಲ್ಲಿ ಇಬ್ಬರಿಗೆ ಕೊರೊನಾ: ಇದು Fake News- ಭಯ ಬೇಡ…

Publicstory. in


ತುಮಕೂರು: ತುಮಕೂರು ನಗರದ ಸದಾಶಿವ ನಗರದ ಕೃಷ್ಣ ಬೇಕರಿಯ ಹಿಂಭಾಗದ ಮನೆಯಲ್ಲಿ ನಿಗಾವಣೆಯಲ್ಲಿದ್ದ ಇಬ್ಬರಿಗೆ ಕರೊನಾ ದೃಢಪಟ್ಟಿದೆ ಎಂದು ಇಂಗ್ಲಿಷ್ ನಲ್ಲಿ ಬರೆದಿರುವ ಸುದ್ದಿ ಗುರುವಾರ ಯುಗಾದಿ ದಿನ ವಾಟ್ಸಾಪ್, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದರೆ ಈ ಸುದ್ದಿ ಸುಳ್ಳು. Fake news.

ಇಲ್ಲಿ ಯಾರಿಗೂ ಕೊರೊನಾ ದೃಢಪಟ್ಟಿಲ್ಲ. ಕಿಡಿಗೇಡಿಗಳು ಸುದ್ದಿ ಸೃಷ್ಟಿಸಿ ಹರಿ ಬಿಟ್ಟಿದ್ದಾರೆ.

ಸದಾಶಿವ ನಗರದ ಸುದ್ದಿ ಸುಳ್ಳು. ತುಮಕೂರು ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಪ್ರಕರಣವು ಕಾಣಿಸಿಕೊಂಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಚಂದ್ರಿಕಾ publicstory. in ಗೆ ಮಾಹಿತಿ ನೀಡಿದರು.

ಈ ಹಿಂದೆಯೂ ಇದೇ ರೀತಿಯ ಸುಳ್ಳು ಸುದ್ದಿ‌ ಹರಿ ಬಿಡಲಾಗಿತ್ತು. ಆಗ, ಜಿಲ್ಲಾ ಅರೋಗ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಇಂತಹ ಸುದ್ದಿಗಳನ್ನು ಯಾರೂ ಪಾರ್ವಡ್ ಮಾಡಬಾರದು. ಅಧಿಕೃತವಾಗಿ ಪತ್ರಿಕೆಗಳು ಅಥವಾ‌ ವಿಶ್ವಾಸಾರ್ಹ ವೆಬ್ ಮೀಡಿಯಾಗಳಲ್ಲಿ ಒಂದಿದ್ದನ್ನು ಮಾತ್ರ ನಂಬಬೇಕು.

ಈ ಸುದ್ದಿಯ ಜತೆಗೆ ಶ್ರೀರಾಮನಗರದಲ್ಲಿ ಕ್ವಾರಂಟೈನ್ ನ ಮನೆಯ ಮೇಲೆ ಜಿಲ್ಲಾಡಳಿತ ಹಾಕಿರುವ ಭಿತ್ತಿ ಪತ್ರವನ್ನು ಹರಿಯಬಿಡಲಾಗಿದೆ.

ಶ್ರೀರಾಮದ ಮನೆಯೊಂದರ ಮೇಲೆ ಅಂಟಿಸಿರುವ ಭಿತ್ತಿಪತ್ರಕ್ಕೂ ಸದಾಶಿವನಗರದ fake news ಗೂ ಸಂಬಂಧ ಇಲ್ಲವಾಗಿದೆ.

ಶ್ರೀರಾಮನಗರದ ಮನೆಯ ಚಿಕ್ಕ ಮಗುವೊಂದು ಅಮೆರಿಕದಿಂದ ಬಂದಿದ್ದ ಸಂಬಂಧಿಕರೊಂದಿಗೆ ಆಟ ವಾಡಿ ನಂತರ ಮನೆಗೆ ಬಂದಿತ್ತು. ಹೀಗಾಗಿ ಆ ಕುಟುಂಬವನ್ನು ನಿಗಾವಣೆಯಲ್ಲಿ ಇಡಲಾಗಿದೆ. ಈ ಮನೆಯವರಲ್ಲಿ ಯಾರಿಗೂ ಸೋಂಕು ಇನ್ನೂ ದೃಢಪಟ್ಟಿಲ್ಲ. ವಿದೇಶದಿಂದ ಬಂದಿರುವ, ಎಲ್ಲ ಶಂಕಿತ ಸೋಂಕಿತರಿರುವ ಮನೆಗಳ ಮೇಲೆ ಈ ರೀತಿಯ ಭಿತ್ತಿಪತ್ರ ಹಾಕಲಾಗುತ್ತಿದೆ. ಸ್ಥಳೀಯರು, ಅಕ್ಕ ಪಕ್ಕದ ಮನೆಯವರು ಎಚ್ಚರಿಕೆ ವಹಿಸಬೇಕು. ಇಂತಹ ವ್ಯಕ್ತಿಗಳೊಂದಿಗೆ ಮಾತನಾಡುವುದಾಗಲೀ, ಮುಟ್ಟುವುದಾಗಲೀ ಮಾಡಬಾರದು ಎಂದು ಈ ಮನೆಯ ನಿಗಾವಣೆ ಹೊಣೆ ಹೊತ್ತಿರುವ ಡಾ.ಮಹೇಶ್ ಪಬ್ಲಿಕ್ ಸ್ಟೋರಿ.ಇನ್ ಗೆ ಮಾಹಿತಿ ನೀಡಿದರು.

ಬಾಳಾ ತ್ರಾಸರೀ ಕೊರೊನಾ ಇಂದ ಬದುಕ ಬೇಕರೀ ಬ್ಯಾರೀ ಥರಾ…

0

ಡಾ.ರಜನಿ


ಮನೆ ತುಂಬ ದಿನಸಿ
ಬರಲ್ಲ ನಾನು ಹೂರಗೆ
ಟಿ‌ವಿ…ಯಪಿಎಸ್,ಟಾಯ್ಲೆಟ್,ಫೋನ್
ಎಲ್ಲ ಮನೆ ಯೊಳಗೆ…
..ಇಂಟರ್ನೆಟ್ ಬ್ಯಾಂಕಿಗ್ .ಬರದೆ ಇದ್ರೂ ನಡೆಯುತ್ತೆ….
ಆಚೆಗೆ

ಅಕ್ಕಿ ಇದೆ ಸ್ವಲ್ಪ
ಬ್ಯಾಳಿ ಇಲ್ಲ ತಳದಲ್ಲೀ
ಹಾಲಿಲ್ಲ ಮಗೀಗೇ

ಕರೆನ್ಸಿ ಹಾಕಿ ಸಬೇಕು
ಫೋನಿಗೆ
ಸಾವುಕಾರ ಬಟವಾಡಿ ಮಾಡಬೇಕು
ಮನೇಲಿ ಅವ್ವ
ಕಳಿಸಬೇಕು ರೂಕ್ಕ
ಕಂಡವರ ಕೈ ಅಲ್ಲಿ

ಮನೆಲೀ ಇರು ಅಂದರಾ
ಇರಲಿ ಎಲ್ಲಿ
ಮನೀ ಅದಾ ಊರಲ್ಲಿ
ಹೋಗಾಬೇಕಾ ನಾ ಅಲ್ಲೀಗೀ
ಇಲ್ಲೀರೋದು ಮನೀ ಅಲ್ರೀ
ಹೋಟೇಲೂಟ
ಪಾಕೀಟಾಲು
ದುಡಿಮೆ ರೀ
ರಸ್ತೆ ಬದಿ ಮಲಗು
ಶೆಡ್… ಅಡಿಗೆ ಮಾಡೋರು ಯಾರು
ಒಲೀ ಹಚ್ಚೀ
ಗೊತ್ತಿಲ್ಲ ರೀ
ರಸ್ತೆ ಬದೀ
ತಿಂದು ಗೊತ್ರಿ
ಸಂಡಾಸಿಗೋಗಿ ಕೈ ತೋಳಿಯೋದೇ
ಈಗ ಕಲ್ತಿವ್ರೀ
ಬಾಳಾ ತ್ರಾಸರೀ ಕೊರೊನಾ ಇಂದ
ಬದುಕ ಬೇಕರೀ ಬ್ಯಾರೀ ಥರಾ
ಕಲಿಲಕ್ಕಾ ಟೈಮ ಕೊಡವಲ್ದೀ

ಕೊರೊನಾ ‘ಕಾಲ’ದಲ್ಲಿ

ಆನಂದ ಎಸ್.ಎನ್.


ಎಲೈ ಮಾನವ, ಎಚ್ಚರದಿಂದಿರು
‘ನಾನು’ ಎಂದು ಬೀಗುವುದನು ಬಿಡು
ನಿನ್ನ ನಾಶಕ್ಕೆ ಕಣ್ಣಿಗೆ ಕಾಣದ
ಒಂದು ಕ್ರಿಮಿ ಸಾಕು; ಇದನು ತಿಳಿದು ಬದುಕು !

ವಿಶ್ವದ ಮಾನವನ ಜೀವನ ಬಿಕ್ಕಟ್ಟಿನಲ್ಲಿದೆ
ಬುದ್ಧಿವಂತಿಕೆ, ಬೆಳವಣಿಗೆ ಎಲ್ಲಾ ಕೈಕೊಟ್ಟಿದೆ
ಗಾಳಿ ನೀರು ಬೆಳಕು ಭೂಮಿ ಮಲಿನಗೊಂಡಿದೆ
ಯುದ್ಧದ ದೊಡ್ಡ ದೊಡ್ಡ ಅಸ್ತ್ರಶಸ್ತ್ರಗಳ ಶಕ್ತಿ ನಿಷ್ಕ್ರಿಯವಾಗಿದೆ
ಮಾನವನ ಜೀವ ಉಳಿಸಲು ಟ್ಯೂಬ್ ಗಳೊಳಗೆ ಶೋಧ ನಡೆದಿದೆ

ಈಗ ಸುಮ್ಮನಿರುವ ಕಾಲ ಬಂದಿದೆ
ಕ್ರಿಯೆಯಂತೆ ನಿಷ್ಕ್ರಿಯತೆಯೂ ಒಂದಿದೆ
ಒಬ್ಬರಿಂದ ಒಬ್ಬರಿಗೆ ಹರಡುವ ರೋಗದ ಮಧ್ಯೆ
ಒಬ್ಬರು ಹಿಂದೆ ಸರಿದು ಸುಮ್ಮನಿದ್ದರೆ
ಸರಪಳಿ ಕಳಚುವುದು; ಮಾನವಕುಲವೇ ಉಳಿಯುವುದು !

ಧೈರ್ಯವಂತ ಅವಿವೇಕಿಗಳಾಗಬೇಡಿ
ನಿರ್ಲಕ್ಷ್ಯದಿಂದ ಎಗ್ಗಿಲ್ಲದೆ ಎಲ್ಲೆಂದರಲ್ಲಿ ನುಗ್ಗಬೇಡಿ
ಭೀತಿಯಿಂದ ತಪ್ಪು ಕೆಲಸ ಮಾಡಬೇಡಿ
ಹೆಚ್ಚು ಕೆಲಸ, ಪ್ರಯಾಣಗಳನ್ನೆಲ್ಲಾ ಮುಂದೂಡಿ
‘ನಾವು ವಾಹಕಗಳು’ ಎಂಬುದನ್ನು ಮರೆಯಬೇಡಿ !

ಸ್ನೇಹ, ನಿಕಟತೆ ಸ್ವಲ್ಪ ಸಮಯ ತಪ್ಪಿಸಿ
ಇತರರಿಂದ ದೂರವಿರಲು ಮನಸುಹೃದಯ ಒಪ್ಪಿಸಿ
ಮುನ್ನೆಚ್ಚರಿಕೆ ಎಂದರೆ ಸರಿಯಾದ ಕೆಲಸ ಮಾಡುವುದು
ಅದೆಂದರೆ, ಎಲ್ಲರಿಂದ ದೂರ ಕಾಯ್ದುಕೊಳ್ಳುವುದು !

ಇದು ಅಂತರ್ಮುಖವಾಗಿ ತಿರುಗುವ ಸಮಯ
ಇದು ಜೀವನವನ್ನು ಹತ್ತಿರದಿಂದ ನೋಡುವ ಸಮಯ
ನಮ್ಮ ಅಸ್ತಿತ್ವದ ದುರ್ಬಲ ಸ್ವರೂಪವನ್ನು ಅರಿತುಕೊಳ್ಳುವ ಸಮಯ
ಬದುಕಿನ ‘ಬಿಜಿ’ಯಿಂದ ಬಿಡುಗಡೆಗೊಂಡು ಕಣ್ಣು ಮುಚ್ಚಿ
ಕುಳಿತುಕೊಳ್ಳುವ ಸಮಯ; ‘ಸತ್ಯದರ್ಶನ’ ಮಾಡಿಕೊಳ್ಳುವ ಸಮಯ !

ಕರೊನಾ: ಹಳ್ಳಿಗಳಿಗೆ ಬರಬೇಡಿ ಪ್ಲೀಸ್… ಗ್ರಾ.ಪಂ.ಅಧ್ಯಕ್ಷ್ಯೆ ಬರೆದ ಮನಕಲಕುವ ಪತ್ರದಲ್ಲಿ‌ ಏನಿದೆ…

0

ಪಬ್ಲಿಕ್ ಸ್ಟೋರಿ.ಇನ್


ತುಮಕೂರು: ಬೆಂಗಳೂರು ಸೇರಿದಂತೆ ಯಾವುದೇ ನಗರದಿಂದ ಜನರು ಹಳ್ಳಿಗಳಿಗೆ ಬರದಿರುವಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಮನ ಕಲಕುವ ಪತ್ರ ಬರೆದಿದ್ದಾರೆ.

ಕರೊನಾ ಕಾರಣ ಹಳ್ಳಿಗಳು ಸೇಫ್ ಎಂದು ಯಾರೂ ಭಾವಿಸವಾರದು. ಹಳ್ಳಿಗಳಿಗಿಂತ ನಗರಗಳೇ ಹೆಚ್ಚು ಸುರಕ್ಷಿತ ಎಂದು ಹೇಳಿದ್ದಾರೆ.


ಹಳ್ಳಿಯಲ್ಲಿ ವೈರಸ್ ಸೋಂಕು ಬಂದರೆ‌ ಅವರನ್ನು ಆಸ್ಪತ್ರೆಗೆ ತೋರಿಸಲು ನಗರಕ್ಕೆ ಹೋಗಬೇಕು. ಇಲ್ಲಿನ ಆ‌ಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ. ವೆಂಟಿಲೇಟರ್, ಏಸೊಲೇಷನ್ ವಾರ್ಡ್ ಇಲ್ಲ. ಅವರನ್ನು ಕರೆದುಕೊಂಡು‌ ಹೋಗಲು ವಾಹನಗಳು ಇರುವುದಿಲ್ಲ. ಹೆದರಿಕೆಗೆ ಬಾಡಿಗೆ ವಾಹನ ಸವಾರರು ಬರುವುದಿಲ್ಲ ( ಅವು ಸಹ ಊರಿಗೆ‌ ಒಂದು ಇರಬಹುದು, ಕೆಲವು ಕಡೆ ಇಲ್ಲದೆಯು ಇರಬಹುದು) ರೋಗಿಯನ್ನು ಮನೆಯಿಂದ ಕರೆದುಕೊಂಡು ಹೋಗಬೇಕಾದರೆ ಅನುಸರಿಸಬೇಕಾದ ಸುರಕ್ಷಾ ಸಾಧನಗಳು ಇಲ್ಲಿಲ್ಲ. ಹೀಗಾಗಿ ನಿಮ್ಮೊಂದಿಗೆ ಇನ್ನು ಕೆಲವರಿಗೂ ವೈರಸ್ ತಗುಲಿ ಹಳ್ಳಿಗಳಲ್ಲಿ ಮರಣ ಮೃದಂಗ ಆಗಲಿದೆ.


ಕರೊನಾ ತಡೆಗಟ್ಟಬೇಕಾದರೆ ಮನೆಯೊಳಗೆ ಇದ್ದರೆ ಸಾಕು. ಹಳ್ಳಿಗೆ ಬಂದರೂ ಮನೆಯೊಳಗೆ ಇರಬೇಕು. ಹಬ್ಬ, ಹರಿದಿನ, ದೇವಸ್ಥಾನಗಳಲ್ಲಿ ಪೂಜೆ ಯಾವೊಂದು ಹಳ್ಳಿಗಳಲ್ಲಿ ಇಲ್ಲವಾಗಿದೆ. ತೋಟ ತುಡಿಕೆಗಳಿಗೆ ದೈರ್ಯವಾಗಿ ನಮ್ಮ ಜನರು ಓಡಾಡಯತ್ತಿದ್ದಾರೆ. ಈಗ ಬೇಸಿಗೆ ಕಾರಣ ತೋಟಗಳಿಗೆ ನೀರು ಕೊಡುವುದು ಅನಿವಾರ್ಯ. ಒಂದು ವೇಳೆ ಕರೊನಾ ಹಳ್ಳಿಗೂ ಬಂದರೆ ಮನುಷ್ಯನ ಪ್ರಾಣ ಮಾತ್ರ ಹೋಗುವುದಿಲ್ಲ ಕುಟುಂಬದ ಬದುಕೇ ಸರ್ವನಾಶ ಆಗಲಿದೆ.

ಈಗಾಗಲೇ ಹಳ್ಳಿಗಳಿಂದ ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದವರು ಬಂದಿದ್ದಾರೆ. ಇದು ಹಳ್ಳಿಗಳಲ್ಲಿ ನಡುಕ ತಂದಿದೆ. ಮತ್ತೇ ನಗರಗಳಿಂದ ಬಂದರೆ ಮತ್ತಷ್ಟು ಕ್ರೌಡ್ ಆಗಲಿದೆ.

ಹಳ್ಳಿಗಳಲ್ಲಿ ಉಡಾಫೆ ಹೆಚ್ಚು. ಅದರಲ್ಲೂ ಬೆಂಗಳೂರಿನಿಂದ ಬಂದವರಲ್ಲಿ ಕೆಲವರು ಉಡಾಫೆಯ ಮಾತುಗಳನ್ನಾಡುತ್ತಾರೆ.‌ ಪಟ್ಟಣ ವಾಸಿಗಳ ತಿಂಡಿ ಆಸೆ ಪೂರೈಸಲು ಅಂಗಡಿ, ಬೇಕರಿಗಳ ಅವಲಂಬನೆ ಹೆಚ್ಚಲಿದೆ. ಇದರಿಂದ ಜನ ಸಂದಣಿ ನಿರ್ವಹಣೆ ಕಷ್ಟವಾಗಲಿದೆ.

ಕೊರೊನಾ: ಮನೆ, ಮನೆ ಮುಂದೆ ಸೂರ್ಯನಿಗೆ ಕೈ ಮುಗಿದು ದೀಪ ಹಚ್ಚಿದ ಹಳ್ಳಿ ಜನರು…

Publicstory.in


Tumkuru: ಕೊರೊನಾ ಹೋಗಲೆಂದು, ಜನರಿಗೆ ಆರೋಗ್ಯ ಸಿಗಲೆಂದು ಹಾಗೂ ಸಾವು- ನೋವು ಸಂಭವಿಸಬಾರದೆಂದು ಕೋರಿ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಮಂಗಳವಾರ ಸೂರ್ಯ ಉದಯಕ್ಕೆ ಸರಿಯಾಗಿ ಮನೆ ಸೂರ್ಯನಿಗೆ ಎದುರಾಗಿ ಮೂರು ಬಿಂದಿಗೆ ನೀರು ಸುರಿದುಕೊಂಡು ದೇವರಿಗೆ ದೀಪ ಹಚ್ಚಿದರು.

ಮನೆಯ ಗಂಡುಮಕ್ಕಳಿಗೆ, ಸಣ್ಣ ಹುಡುಗರಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದರು.

ತಿರುಪತಿಯ ದೇವರ ಸನ್ನಿಧಿಯ ದೀಪ ಆರಿದೆ ಎಂಬ ಸುದ್ದಿ ಸಹ ಹಬ್ಬಿದೆ. ಅದು ನಿಜವೊ, ಸುಳ್ಳೊ ಗೊತ್ತಿಲ್ಲ. ಸ್ನಾನ ಮಾಡಿ ದೀಪ ಹಚ್ಚುವಂತೆ ಹೇಳಿದರು. ನಾವಷ್ಟೇ ಅಲ್ಲ ನಮಗೆ ಗೊತ್ತಿರುವ ಎಲ್ಲ ಸಂಬಂಧಕರಿಗೂ ಹೇಳಿದ್ದೇವೆ. ಈ ಭಾಗದ ಎಲ್ಲ ಊರುಗಳಲ್ಲೂ ದೀಪ ಹಚ್ಚಿದ್ದೇವೆ ಎಂದು ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ಸಮೀಪದ ಕೊಡಿಗೇನಹಳ್ಳಿಯ ಲೋಕೇಶ್ ಹೇಳಿದರು.

ದೇವರಿಗೆ ಪೂಜೆ ಮಾಡುವುದರಿಂದ ನಷ್ಟವೇನು‌ ಇಲ್ಲ. ಬಹುತೇಕರು ಮಾಡಿದ್ದಾರೆ.ದೇಶ, ಜಗತ್ತನ್ನು ಕಾಡುತ್ತಿರುವ ಈ ಮಹಾಮಾರಿ ಹೋಗಲಾಡಿಸಲು ದೇವರ ಶಕ್ತಿಯೇ ಬೇಕಾಗಿದೆ.ಜನರು ದಯಮಾಡಿ ಮನೆಯಲ್ಲಿಯೇ ಇರಬೇಕು. ಆಚೆ ಬರಬಾರದು ಎಂದು ಸಿ.ಎಸ್. ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಹೇಳಿದರು.

ಆಂಧ್ರದಲ್ಲಿ ಕಟ್ಟೆಚ್ಚರ; ತಾಲ್ಲೂಕಿನಲ್ಲಿ ಕಾಟಾಚಾರ

ತುಮಕೂರು ಜಿಲ್ಲೆಯ ಆಂಧ್ರ ಗಡಿಗಳಲ್ಲಿ ಆಂಧ್ರ ಸರ್ಕಾರ ನರಪಿಳ್ಳೆಯನ್ನೂ ಆಂಧ್ರ ಪ್ರದೇಶದ ಒಳ ಬಿಡದಂತೆ ತಡೆಯುತ್ತಿದೆ. ಆದರೆ ತುಮಕೂರು ಜಿಲ್ಲೆ ಪಾವಗಡ ಸೇರಿದಂತೆ ಜಿಲ್ಲೆಯಾದ್ಯಂತ ಕಾಟಾಚರದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಾವಗಡ ಪಟ್ಟಣದ ಕುರಿ ಸಂತೆಗೆ ಸಾವಿರಾರು ಕುರಿಗಳೊಂದಿಗೆ ವ್ಯಾಪಾರಿಗಳು, ರೈತರು ಬಂದಿದ್ದರು. ಖಾಸಗಿ ಬಸ್ ಗಳಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣಿಸಿದರು. ಸಾಲದು ಎಂಬಂತೆ ಆಟೋಗಳಲ್ಲಿ ಕುರಿ ತುಂಬುವಂತೆ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪೊಲೀಸರೊಂದಿಗೆ ಅಂಗಡಿ ಮಳಿಗೆ ಮಾಲೀಕರು ಸೋಮವಾರ ಕಣ್ಣಾಮುಚ್ಚಾಲೆ ಆಟ ಆಡಿದರು. ಮಧ್ಯಾಹ್ನದವರೆಗೆ ಸಂತೆ ನಡೆಯಿತು. ತರಕಾರಿ ಇತ್ಯಾದಿಗಳನ್ನು ಯಾವುದೇ ಎಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಮಾರಾಟ ಮಾಡಲಾಯಿತು.

ಆಂಧ್ರ ಸರ್ಕಾರ ಗಡಿಯಲ್ಲಿ ಚೆಕ್ ಪೋಸ್ಟ್ ಆರಂಭಿಸಿದೆ

ಆಗ ಎಚ್ಚೆತ್ತವರಂತೆ ಬಂದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಲು ಹರಸಾಹಸ ಪಟ್ಟರು. ಒಂದು ಕಡೆಯಿಂದ ಮುಚ್ಚಿಸಿದರೆ ಮತ್ತೊಂದು ಕಡೆಯಿಂದ ಬಾಗಿಲು ತೆಗೆದು ವ್ಯಾಪಾರಿಗಳು ಮಾರಾಟ ಮಾಡಿದರು.

ಕೆಲವರು ಅರ್ಧ ಬಾಗಿಲು ತೆರೆದು ಮಾರಾಟ ಮಾಡಿದರೆ, ಮತ್ತೆ ಕೆಲವರು ಗ್ರಾಹಕರನ್ನು ಮಳಿಗೆ ಒಳ ಬಿಟ್ಟು ಹೊರಗಡೆಯಿಂದ ಯಾರೂ ಬಾರದಂತೆ ಬಾಗಿಲು ಹಾಕಿ ಕಾವಲು ಕುಳಿತಿದ್ದರು.

ಕೊರೊನಾ ಹೆಮ್ಮಾರಿಯಂತೆ ವ್ಯಾಪಿಸುತ್ತಿರುವ ಬಗ್ಗೆ ಸರ್ಕಾರ ನಿರ್ಬಂಧ ವಿಧಿಸಿದರೂ ಜನತೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ಹಾಗೂ ಜನತೆಯ ಆಟಾಟೋಪಗಳನ್ನು ನೋಡಿದ ಕೆಲವರು ಬೇಸರ ವ್ಯಕ್ತಪಡಿಸಿದರು.

ಕುರಿಸಂತೆಯಲ್ಲಿ ಹಣ ಕಳೆದುಕೊಂಡ ರೈತರು: ಏಕಾ ಏಕಿ ಪೊಲೀಸರು ಕುರಿ ಸಂತೆಯ ಮೇಲೆ ಧಾಳಿ ನಡೆಸಿದ್ದರಿಂದ ರೈತರು, ವ್ಯಾಪಾರಿಗಳು ದಿಕ್ಕಾಪಾಲಾಗಿ ಓಡಿದರು. ಇದರಿಂದ ಕೆಲವರು ಕುರಿ, ಹಣ ಕಳೆದುಕೊಂಡರು. ಲಾರಿಯಲ್ಲಿ ಹಾಗೂ ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡಿದ್ದವರು ರೈತರಿಗೆ ಹಣ ಕೊಡದೆ ಪರಾರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

ಆಂಧ್ರ ಸರ್ಕಾರ ಕಟ್ಟು ನಿಟ್ಟಾಗಿ ನಿರ್ಬಂಧ ವಿಧಿಸಿದ್ದರಿಂದ ತಾಲ್ಲೂಕಿಗೆ ಬರುವವರು, ತುಮಕೂರು, ಬೆಂಗಳೂರಿಗೆ ಹೋಗುವವರು ಸಾಕಷ್ಟು ಸಮಸ್ಯೆ ಎದುರಿಸಬೆಕಾಯಿತು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತೆ ಸುತ್ತಿ ಬಳಸಿ ಹೋಗುವ ಅನಿವಾರ್ಯತೆಗೆ ಜನತೆ ಸಿಲುಕಿದರು.

ಬ್ಯಾಂಕ್ ಸಿಬ್ಬಂದಿಯ ಹಿತಕ್ಕಾಗಿ ಬ್ಯಾಂಕ್ ಒಳಗೆ ಜನರ ನಿರ್ಬಂಧ?

ತುರುವೇಕೆರೆ:
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಇಲ್ಲಿನ ಎಸ್‍ಬಿಐ ಶಾಖೆಯಲ್ಲಿ ಗ್ರಾಹಕರ ಗುಂಪು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಗ್ರಾಹಕರು ಗಂಟೆಗಟ್ಟಲೆ ಸಾಲುಗಟ್ಟಿ ಬ್ಯಾಂಕಿನಾಚೆ ನಿಂತು ಸಂಯಮ ಮೆರೆದರು.
ಹೆಚ್ಚು ಜನರು ಒಂದೇ ಬಾರಿಗೆ ಗುಂಪಿನಲ್ಲಿ ಬ್ಯಾಂಕಿನೊಳಗೆ ವ್ಯವಹರಿಸುವುದನ್ನು ತಡೆಗಟ್ಟಲು ಒಬ್ಬೊಬ್ಬರೇ ಗ್ರಾಹಕರನ್ನು ಒಳಗೆ ಬಿಡಲಾಗುತ್ತಿತ್ತು. ಇದರಿಂದಾಗಿ ಗ್ರಾಹಕರು ಅದರಲ್ಲೂ ವಿಶೇಷವಾಗಿ ಸಂತೆ ಇಲ್ಲವೆಂಬುದನ್ನು ತಿಳಿಯದೆ ಪಟ್ಟಣಕ್ಕೆ ಬಂದ ಹಳ್ಳಿಗರು ಬ್ಯಾಂಕಿನ ಮುಂಭಾಗ ತಮ್ಮ ಸರದಿ ಕಾಯುತ್ತಾ ಸಾಲುಗಟ್ಟಿ ನಿಂತಿದ್ದರು. ಅವರಲ್ಲಿ ಕೆಲವರು ಕೊರೋನಾ ಭೀತಿಯಿಂದ ಮಾಸ್ಕ್ ಧರಿಸಿದ್ದರೆ ಮತ್ತೆ ಬಹಳಷ್ಟು ಜನ ಮಾಮೂಲಾಗೇ ಯಾವುದೇ ಅಳುಕು ಇಲ್ಲದೆ ನಿಂತಿದ್ದರು.ಗ್ರಾಹಕರು ಒಬ್ಬರಿಗೊಬ್ಬರು ದೂರ ಕಾಯ್ದುಕೊಳ್ಳದೆ ಒತ್ತಟ್ಟಿಗೇ ಸಾಲುಗಟ್ಟಿ ನಿಂತಿದ್ದರಿಂದ ಬ್ಯಾಂಕ್ ಒಳಗಿನ ಪ್ರವೇಶ ನಿರ್ಬಂಧ ಅಷ್ಟೇನೂ ಪ್ರಯೋಜನಕಾರಿ ಎನಿಸಲಿಲ್ಲ. ಗ್ರಾಹಕರಲ್ಲಿ ಬ್ಯಾಂಕ್ ಸಿಬ್ಬಂದಿ ಪರಸ್ಪರ ದೂರ ಕಾಯ್ದುಕೊಳ್ಳುವ ಜಾಗೃತಿ ಮೂಡಿಸಬೇಕಿತ್ತು ಎಂದು ಹಲವು ನಾಗರಿಕರು ಅಭಿಪ್ರಾಯಪಟ್ಟರು. ಪಾಸ್‍ಬುಕ್ ಎಂಟ್ರಿ, ಶಿಲ್ಕು ವಿಚಾರಣೆ, ಆಧಾರ್ ತಿದ್ದುಪಡಿ ಈ ಸೇವೆಗಳನ್ನು ಬ್ಯಾಂಕ್ ನಿರ್ಬಂಧಿಸಿದ್ದರಿಂದ ಇದರ ಅರಿವಿರದ ಹಲವು ಅನಕ್ಷರಸ್ಥರು ಬಹಳಷ್ಟು ಸಮಯ ಸಾಲಿನಲ್ಲಿ ನಿಂತು ನಂತರ ವಿಷಯ ತಿಳಿದು ನಿರಾಸೆಯಿಂದ ಹಿಂದಿರುಗಿದರು. ಬ್ಯಾಂಕಿನ ಸರ್ವರ್ ಸಹ ಬಹಳ ಹೊತ್ತು ಕೈ ಕೊಟ್ಟಿದ್ದರಿಂದ ಸಾಲಿನಲ್ಲಿ ನಿಂತ ಹಲವು ವ್ಯವಹಾರಸ್ಥರು ನಗದು ಜಮಾ ಮಾಡಲು ಹಾಗೂ ಹಣ ವರ್ಗಾವಣೆ ಮಾಡಲು ತೀವ್ರ ಸಮಸ್ಯೆ ಎದುರಿಸಬೇಕಾಯಿತು.

ಭಗತ್ ಸಿಂಗ್ ಸಮಾನತೆಯ ಆಶಯ ಈಡೇರಿಲ್ಲ: ಮುಜೀಬ್

Publicstory. in


Tumkuru: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಸಮಾನತೆಯನ್ನು ತರಲು ಹೋರಾಡಿದ ವೀರಸೇನಾನಿ ಭಗತ್ ಸಿಂಗ್ ಅವರ ತಮ್ಮ 23ನೇ ವರ್ಷಕ್ಕೆ ನೇಣಿಗೇರಿದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಸಂದರೂ ಭಗತ್ ಸಿಂಗ್ ಅವರ ಸಮಾನತೆಯ ಆಶಯ ಇನ್ನೂ ಕೈಗೂಡಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ. ಆರ್ಥಿಕ ಅಸಮಾನತೆ ಇನ್ನೂ ಆಳವಾಗಿ ಬೇರೂರುತ್ತಿರುವ ಸಂದರ್ಭದಲ್ಲಿ ಯುವಜನರು ಭಗತ್‍ಸಿಂಗ್ ಅವರ ಚಿಂತನೆಗಳತ್ತ ಗಮನಹರಿಸುವುದು ಅಗತ್ಯವೆಂದರು. ಪ್ರಭುತ್ವ ಕ್ರಾಂತಿಕಾರಿ ಹೋರಾಟಗಳು ಭಾರತದ ಸ್ವಾತಂತ್ರ್ಯ ಚಳವಳಿಗೆ ಕೊಟ್ಟ ಕೊಡುಗೆಯನ್ನು ಸರಿಯಾಗಿ ದಾಖಲಿಸಿಲ್ಲ ಎಂದು ಆರೋಪಿಸಿದರು.

ಅವರು ಮಾರ್ಚ್ 23ರಂದು ಜನಚಳಿ ಕೇಂದ್ರದಲ್ಲಿ ಸಿಐಟಿಯು ಸರಳವಾಗಿ ಆಚರಿಸಿದ ಹುತಾತ್ಮ ದಿನಾಚರಣೆಯಲ್ಲಿ ಮಾತನಾಢಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ತುಮಕೂರು ತಾಲೂಕು ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ 12ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳವಳಿಗೆ ಆಕರ್ಷಿತರಾದ ಭಗತ್ ಸಿಂಗ್ ತನ್ನ ಸಂಗಾತಿಗಳೊಡನೆ ಕ್ರಾಂತಿಕಾರಿ ಮಾರ್ಗ ಹಿಡಿದು ಬ್ರಿಟೀಷರ ವಿರುದ್ಧ ಕ್ರಾಂತಿಕಾರಿ ಹೋರಾಟಕ್ಕೆ ಇಳಿದ ಪರಿಣಾಮ ಇಂದಿಗೆ 89 ವರ್ಷಗಳ ಹಿಂದೆ ಭಗತ್‍ಸಿಂಗ್, ರಾಜ್‍ಗುರು ಮತ್ತು ಸುಖ್‍ದೇವರನ್ನು ನೇಣಿಗೇರಿಸಲಾಗಿದೆ ಎಂದು ಇತಿಹಾಸವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ರಫೀಕ್, ಲಕ್ಷ್ಮೀಕಾಂತ್ ಮೊದಲಾಧವರು ಹಾಜರಿದ್ದರು.

ಕೊರೊನಾ: ಕೋಟಿ ಹೆಜ್ಜೆ ಜಾಥಾ ವಾಪಸ್ ಪಡೆದ CPI

ತುಮಕೂರು: ನಿವೇಶನ ರಹಿತ ಮತ್ತು ವಸತಿ ರಹಿತ ಹೋರಾಟ ಸಮಿತಿಯ ಸೂರಿಗಾಗಿ ಕೋಟಿ ಹೆಜ್ಜೆಯ ಐತಿಹಾಸಿಕ ಕಾಲ್ನಡಿಗೆ ಜಾಥವನ್ನು ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮಾಜದ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಜಾಥದ ನೇತೃತ್ವ ವಹಿಸಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.

ಅವರು ತುಮಕೂರಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಾವುದೆ ಒಂದು ರಾಜಕೀಯ ಪಕ್ಷ ಈವರೆಗೆ ಇಂತಹ ಸುದೀರ್ಘ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಂಡ ಉದಾಹರಣೆ ಇಲ್ಲ ಆದರೆ ಸಿಪಿಐ ನೇತೃತ್ವದಲ್ಲಿ ಈ ಯಾತ್ರೆಯನ್ನು ಫೆಬ್ರವರಿ 2 ರಿಂದ ಹಮ್ಮಿಕೊಳ್ಳಲಾಗಿದ್ದು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಕಾಲೋನಿಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸಿದೆ.

ರಾಜ್ಯದಲ್ಲಿ ಸುಮಾರು 50 ಲಕ್ಷ ಕುಟುಂಬಗಳು ಅಂದರೆ ಅಂದಾಜು ಎರಡು ಕೋಟಿ ಜನ ನಿವೇಶನ ರಹಿತ ಹಾಗೂ ವಸತಿ ರಹಿತವಾಗಿವಾಗಿದ್ದಾರೆ ಎಂಬ ಮೆಲ್ನೋಟದ ಮಾಹಿತಿ ಇದೆ.

ಇವರ ಸಮಸ್ಯೆ ಬಗೆಹರಿಸುವುದು ರಾಜ್ಯ ಸರ್ಕಾರದ ಆಧ್ಯ ಕರ್ತವ್ಯವಾಗಿದ್ದು ಕಾಯೋನ್ಮಖವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಸೂರಿಗಾಗಿ ಸಮರ ಕೋಟಿ ಹೆಜ್ಜೆ ಐತಿಹಾಸಿಕ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಬೇಕಾಯಿತು.

ಜನರ ನಡುವೆ ಈ ಜಾಥವನ್ನು ತೆಗೆದುಕೊಂಡು ಹೋಗಿ ಜನತೆಗೆ ಪೂರಕವಾದ ಜಾಥವನ್ನಾಗಿ ಮಾರ್ಪಡಿಸಲು ಶ್ರಮವಹಿಸಲಾಗಿದೆ ಎಂದು ತಿಳಿಸಿದರು

ಕೊರೊನಾ: ಮನೆಯವರೂ ಕ್ವಾರಂಟೈನ್ ನಲ್ಲಿ ಇರಬೇಕು…

Tumkuru: ವಿದೇಶದಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳು ಮಾತ್ರವಲ್ಲದೇ ಅವರ ಮನೆಯವರು ಕ್ವಾರಂಟೈನ್ (ಏಕಾಂತ) ದಲ್ಲಿರಬೇಕು. ಕುಟುಂಬದವರೂ ಸಹ ಮನೆಯಿಂದ ಹೊರಗಡೆ ಓಡಾಡಬಾರದು. ಬೇರೆಯವರೊಂದಿಗೆ ಬೆರೆಯುವಂತಿಲ್ಲ.

ವಿದೇಶದಿಂದ ಬಂದವರನ್ನು ಎರಡು ಹಂತಗಳಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಒಟ್ಟು 28 ದಿನ ಅವರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತಿದೆ. ಕುಟುಂಬ ಸದಸ್ಯರು ಸಹ ಅವರೊಂದಿಗೆ ಸಂಪರ್ಕ ಬೆಳೆಸಬಾರದು. ಅವರ ಉಪಯೋಗಿಸಿದ ವಸ್ತುಗಳನ್ನು ಮುಟ್ಟಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ತಿಳಿಸಿದರು.

ವಿದೇಶದಿಂದ ಬಂದವರ ಮನೆಯವರು ಹೊರಗಡೆ ತಿರುಗಾಡುತ್ತಿದ್ದರೆ ಅಂತವರಿಗೆ ಬುದ್ದಿ ಹೇಳಬೇಕು. ಸಮೀಪದ ಆರೋಗ್ಯಾಧಿಕಾರಿಗಳಿಗೆ, ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಈವರೆಗೂ ಯಾರಿಗೂ ಸೋಂಕು ಕಂಡು ಬಂದಿಲ್ಲ. ಶಂಕಿತ ಹನ್ಬೆರಡು ಮಂದಿಯ ವರದಿಯೂ ಬಂದಿದ್ದು, ನೆಗಟಿವ್ ಬಂದಿದೆ. ಹೊಸದಾಗಿ ಭಾನುವಾರ ಯಾವ ಶಂಕಿತರು ಕಂಡುಬಂದಿಲ್ಲ ಎಂದರು.