Thursday, February 26, 2026
Google search engine
Home Blog Page 268

Tumkuru: ತಲೆ ನೋವಾದ ಕರೋನಾ ನಿಗಾ ಪಟ್ಟಿ

Publicstory. in


Tumkuru: ಜಿಲ್ಲೆಗೆ ವಿದೇಶದವರಿಂದ ಬಂದವರ ಪಟ್ಟಿ ಹೆಸರಿನಲ್ಲಿ ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಪಟ್ಟಿ ನಕಲಿ ಎಂದು DHO ತಿಳಿಸಿದ್ದಾರೆ.

ಕರೋನಾ ಕೊವೀಡ್-19 ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿದೇಶಗಳಿಂದ ತುಮಕೂರು ಜಿಲ್ಲೆಗೆ ಆಗಮಿಸಿರುವವರ ಪಟ್ಟಿಯು ನಕಲಿಯಾಗಿದ್ದು, ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಡಿಹೆಚ್ಒ ಡಾ. ಚಂದ್ರಿಕಾ ಅವರು ಮನವಿ ಮಾಡಿದ್ದಾರೆ.

ಈಗಾಗಲೇ ಕರೊನಾ ಸಂಬಂಧ‌ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಮ್ ಗೆ ದೂರು ಸಹ ನೀಡಲಾಗಿದೆ.

ಈವರೆಗೂ ಜಿಲ್ಲೆಯಲ್ಲಿ ಯಾರಿಗೂ ಸೋಂಕು ತಗುಲಿಲ್ಲ.

ಶಿಕ್ಷಕನ ನಿರ್ಲಕ್ಷದಿಂದ ಬೆಂಕಿಗೆ ಬಿದ್ದ ವಿದ್ಯಾರ್ಥಿ

Tumkuru: ಶಾಲೆಯ ಮೈದಾನದಲ್ಲಿದ್ದ ಕಸಕ್ಕೆ ಬೆಂಕಿ ಇಟ್ಟು ನೋಡಿಕೊಳ್ಳದೆ ಶಿಕ್ಷಕನ ನಿರ್ಲಕ್ಷ್ಯ ಆಟವಾಡುತ್ತಿದ್ದ 2ನೇ ತರಗತಿ ವಿದ್ಯಾರ್ಥಿ ನಂದನ್ ಬೆಂಕಿಗೆ ಬಿದ್ದ ಪರಿಣಾಮ ಕೈ, ಕಾಲು ಸುಟ್ಟು ತೀವ್ರ ಗಾಯವಾಗಿದೆ.

ಕೊರಟಗೆರೆ ತಾಲೂಕಿನ ಯಾದಗೆರೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಮದ್ಯಾಹ್ನ ನಡೆದ ಘಟನೆ ನಡೆದಿದೆ.

ರಜೆ ಇದ್ದರೂ ಶಾಲೆಗೆ ಬಂದಿದ್ದ ಶಿಕ್ಷಕ ಕಸಕ್ಕೆ ಬೆಂಕಿ ಇಟ್ಟು ನಂದಿಸುವವರೆಗೆ ಇರದೆ ತೆರಳಿದ್ದೆ ಅನಾಹುತಕ್ಕೆ ಕಾರಣ ಎಂದು ಪೋಷಕರು ದೂರಿದ್ದಾರೆ‌.

ಮಂಗಳೂರು ವಕೀಲರ ಸಂಘಕ್ಕೆ ರನ್ನರ್ ಅಪ್ ಗೌರವ

Publicstory. in


ಮಂಗಳೂರು: ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಥ್ರೊ ಬಾಲ್ ಕ್ರೀಡಾಕೂಟದಲ್ಲಿ ಮಂಗಳೂರು ವಕೀಲರ ಸಂಘದ ತಂಡ ಗಮನಾರ್ಹ ಸಾಧನೆ ಮಾಡಿದೆ.

ವಕೀಲರ ಸಂಘದ ಪುರುಷರ ತಂಡವರು ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್ ಅಪ್ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿ ಒಂದು ಅಂಕಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು.

ತಂಡದ ಪ್ರತಿಭಾನ್ವಿತ ಕುಮಾರ್ ಪುತ್ರನ್ ಉತ್ತಮ ಹೊಡೆತಗಾರ ಪುರಸ್ಕಾರಕ್ಕೆ ಪಾತ್ರರಾದರು.

ಮಹಿಳಾ ತಂಡ ಕೂಡ ರನ್ನರ್ ಅಪ್ ಸಾಧನೆ ಮಡಿ ಗಮನ ಸೆಳೆಯಿತು. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿತು. ಕೇವಲ ಒಂದು ಅಂಕಗಳಿಂದ ಪರಾಭವಗೊಂಡು ಚಾಂಪಿಯನ್ ಪಟ್ಟದಿಂದ ವಂಚಿತವಾಗಿ ದ್ವಿತೀಯ ಸ್ಥಾನಿಯಾಯಿತು.

ಮಹಿಳಾ ತಂಡದ ನೆಸ್ಲಿನ ಪ್ರಿಯಾ ಡಿಸೋಜ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ವಾಲಿಬಾಲ್ ತಂಡದ ನಾಯಕತ್ವವನ್ನು ನವೀನ್ ಕುಮಾರ್ ಎಂ.ಜಿ. ವಹಿಸಿದ್ದು, ಕುಮಾರ ಪುತ್ರನ್, ಆಶಿಫ್, ಪ್ರಮೋದ್ ಕೆರ್ವಾಶೆ, ಮನೋಹರ್, ಶೀತಲ್ ಕುಮಾರ್ ಜೈನ್, ಯೋಗೀಶ್, ನಿಶಿತ್ ಲೋಬೋ, ಮಹಮ್ಮದ್ ಹ್ಯಾರಿಸ್ ಮೊದಲಾದವರು ತಂಡದ ಸದಸ್ಯರಾಗಿದ್ದರು.

ಮಹಿಳಾ ತಂಡದ ನಾಯಕತ್ವವನ್ನು ಜೀಟಾ ಪ್ರಿಯಾ ಮೊರಾಸ್ ವಹಿಸಿದ್ದರು. ತಂಡದಲ್ಲಿ ಸುರೇಖಾ ಎಂ.ಎಸ್., ಟೀನಾಶ್ರೀ ಶೆಟ್ಟಿ ನೆಸ್ಲಿನ ಪ್ರಿಯಾ ಡಿಸೋಜ, ರೇಷ್ಮಾ ಪ್ರಿಯಾ, ವಿಲ್ಮಾ, ಲೇಖನ ಪ್ರಮೋದ್, ವಿಶ್ಮಿತಾ ಶೆಟ್ಟಿ, ಉಷಾ, ಜಾಯ್ಲಿನ್ ಸುಪ್ರಿಯಾ, ದೀಕ್ಷಿತಾ ಮೊದಲಾದವರು ತಂಡದ ಸದಸ್ಯರಾಗಿದ್ದರು.

ದ್ವಿತೀಯ ಸ್ಥಾನಿಯಾಗಿ ಗೆದ್ದ ಪುರುಷ ಹಾಗೂ ಮಹಿಳಾ ತಂಡಕ್ಕೆ ಮಂಗಳೂರು ವಕೀಲರ ಸಂಘ ಅಭಿನಂದನೆ ಸಲ್ಲಿಸಿದೆ.

Corona; ಮತ್ತೊಂದು ವಾರ ರಜೆ, ಮುಂದುವರೆದ ನಿರ್ಬಂಧ, ದಿನದ ಬೆಳವಣಿಗೆ ಏನು….

0

ಬೆಂಗಳೂರು: ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ ವ್ಯಕ್ತಿ ಜತೆ ವಿಮಾನದಲ್ಲಿದ್ದ 199 ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲೆಯ 51 ಜನ ಪ್ರಯಾಣಿಕರು 51 ಜನರ ವಿಳಾಸ ಪತ್ತೆ ಮಾಡುತ್ತಿರುವ ಜಿಲ್ಲಾಡಳಿತ ಪ್ರತಿಯೊಬ್ಬರಿಗೆ ಕರೆ ಮಾಡಲು ತಂಡ ನಿಯೋಜನೆ ವಿಳಾಸ ಪತ್ತೆಯಾದವರ ಮನೆಗಳಿಗೆ ಭೇಟಿ ಎಲ್ಲರನ್ನು ಟ್ರ್ಯಾಕ್ ಮಾಡುತ್ತಿರುವ ಜಿಲ್ಲಾಡಳಿತ.ಮಾ.14ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನ. ಇನ್ನೊಂದು ವಾರ ಕರ್ನಾಟಕ ಬಂದ್. ಮುಂದುವರಿಕೆ ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ14ಕ್ಕೆ ಏರಿಕೆ. ಇದರಲ್ಲಿ 11 ಜನರು ವಿದೇಶಗಳಿಂದ ಬಂದವರು ಮೂವರಿಗೆ ಬೇರೆಯವರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆ. ಈವರೆಗೆ 1 ಲಕ್ಷ 17 ಸಾವಿರ 317 ಪ್ರಯಾಣಿಕರ ತಪಾಸಣೆ ನಿನ್ನೆ ಸಂಜೆವರೆಗೆ ಬೆಂಗಳೂರಿನಲ್ಲಿ 82,276 ಪ್ರಯಾಣಿಕರ ತಪಾಸಣೆ ಮಂಗಳೂರು, ಕಾರವಾರ ಬಂದರು, 5,533 ಪ್ರಯಾಣಿಕರ ತಪಾಸಣೆ ಇವರನ್ನು ಪ್ರತ್ಯೇಕವಾಗಿ ಇರಿಸಿ ನಿಗಾವಹಿಸುವುದು ಅಗತ್ಯ 20 ರಾಜ್ಯಗಳಲ್ಲಿ ಕರ್ನಾಟಕದ ಕ್ರಮವನ್ನೇ ಅನುಸರಿಸಲಾಗುತ್ತಿದೆ ವಿಧಾನಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ. ಮದುವೆ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಸಂತೆ, ಜಾತ್ರೆ, ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್ ಕೊರೊನಾ ಸೋಂಕು ತಡೆಗೆ 200 ಕೋಟಿ ರೂ. ಮೀಸಲು ಎಲ್ಲಾ ಜಿಲ್ಲೆಗಳಲ್ಲೂ ಡಿಸಿ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್ ರಚನೆ. ಐವರು ಸಚಿವರ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್. ರಚನೆ ನಗರ ಸ್ಥಳೀಯ, ಪಂ. ಚುನಾವಣೆ ಮುಂದೂಡಲು ಮನವಿ. ವಿಧಾನಸಭಾ ಕಲಾಪ ಮುಂದುವರಿಸಲು ಸಂಪುಟ ಸಭೆ ತೀರ್ಮಾನ. – ವಿದೇಶಗಳಿಂದ ಬರುವವರ ಮೇಲೆ ನಿಗಾ 15 ದಿನ ಕಡ್ಡಾಯವಾಗಿ ಪ್ರತ್ಯೇಕಿಸಿ ನಿಗಾ 15 ದಿನ ಯಾರ ಜೊತೆಯೂ ಸೇರುವಂತಿಲ್ಲ ವಿದೇಶದಿಂದ ಬಂದವರ ಬಲಗೈಗೆ ಸ್ಟ್ಯಾಂಪ್ ಹೊರದೇಶದಿಂದ ಬಂದವರು ಎಂದು ಗುರುತು ಸ್ಟ್ಯಾಂಪ್ ಹಾಕುವ ಮೂಲಕ ಗುರುತಿಸುತ್ತೇವೆ ವಿಧಾನಸಭೆಯಲ್ಲಿ ಡಾ.ಕೆ. ಸುಧಾಕರ್ ಹೇಳಿಕೆ

ಕರೊನಾ: ತುಮಕೂರಿನಲ್ಲಿ ಪೊಲೀಸರಿಗೆ ದೂರು

ತುಮಕೂರು: ನಗರದಲ್ಲಿ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂದು ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂಗೆ ದೂರು ನೀಡಲಾಗಿದೆ. ನಗರದ ಚಿಕ್ಕಪೇಟೆಯ ಇಬ್ಬರಿಗೆ ಕೊರೊನಾ ವೈರಸ್ ಹರಡಿದೆ ಎಂಬ ಸುದ್ದಿ ಸುಳ್ಳು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಸ್ಪಷ್ಟಪಡಿಸಿದ್ದಾರೆ.

ವದಂತಿ ಹರಡಿ ಜನರಲ್ಲಿ ಭಯ ಉಂಟು ಮಾಡುತ್ತಿದ್ದು ಯಾರು ಇಂತಹ ಸುದ್ದಿಯನ್ನು ಹರಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂಗೆ ದೂರು ದಾಖಲಿಸಲಾಗಿದೆ.

ತುಮಕೂರಿನಲ್ಲಿ ಇದುವರೆಗು ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ವೀರಭದ್ರಯ್ಯ ತಿಳಿಸಿದ್ದಾರೆ.

ತುಮಕೂರು ಗ್ರಾಮಾಂತರದಲ್ಲಿನ ತಬರನ ಹುಡುಕುತ್ತಾ…

ಗುಡಿಸಲು ನಿವಾಸಿಗಳ ಜತೆ ಬೆಳಗುಂಬ ವೆಂಕಟೇಶ್

Publicstory. in


ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ತೊಂಡಗೆರೆಯ ತಬರ ಈತ.

ಪೂರ್ಣಚಂದ್ರ ತೇಜಸ್ವಿ ಅವರ ಕಥನದಲ್ಲಿ ತಬರ ಹಾಗೂ ಶಿವರಾಮ ಕಾರಂತರು ಬರೆದಿರುವ ಚೋಮನ ದುಡಿಯಲ್ಲಿ ಬರುವ ಚೋಮನ ಮಿಶ್ರಣ ಈ ತೊಂಡೆಗೆರೆಯ ನರಸಿಂಹಮೂರ್ತಿ.

ಈತ ಹರಿದ ಗುಡಿಸಲಿನ ಮನುಷ್ಯ. ಯಾರೋ ಖಾಸಗಿ ವ್ಯಕ್ತಿಯಿಬ್ಬರ ಅಂಗೈ ಅಗಲದ ಜಾಗದಲ್ಲಿ ನಾಲ್ಕು ತೆಂಗಿನ ಗರಿಗಳನ್ನು ಹಾಕಿಕೊಂಡು ಇಪ್ಪತ್ತು ವರ್ಷಗಳಿಂದ ಬದುಕು ಸವೆಸುತ್ತಿದ್ದಾನೆ.

ಒಂಬತ್ತನೇ ತರಗತಿಯಲ್ಲಿ ಚೆನ್ನಾಗಿ ಓದುತ್ತಿರುವ ಈತನ ಮಗಳು, ಐದನೇ ತರಗತಿಯ ಮಗ ಇದೇ ಗುಡಿಸಲ್ಲೇ ಓದಬೇಕು. ಗರಿಸ, ಗಾಳಿ ತೂರಿ ಬರುವ, ಕಾಡುಪ್ರಾಣಿಗಳ ಭಯದಲ್ಲಿ ಕುಟುಂಬ ಬದುಕುತ್ತಿದೆ.

ನಿರ್ಗತಿಕನ್ನೊಬ್ಬನಿಗೆ ಕಳೆದ ಇಪ್ಪತ್ತು ವರ್ಷಗಳಿಂದ ಒಂದು ನಿವೇಶನ, ಆಶ್ರಯ ಮನೆ ಸಿಗಲಿಲ್ಲವೆಂದಾದರೇ ಇದರ ಹೊಣೆಯನ್ನು ಯಾರು ಹೊರಬೇಕು ಎಂದು ಕೆಲವರು ಕೇಳುತ್ತಿದ್ದಾರೆ.

ಇದು ನಿಡುವಳಲು ಗ್ರಾಮ ಪಂಚಾಯ್ತಿಗೆ ಸೇರಿದೆ. ತೊಂಡಗೆರೆ ಗ್ರಾಮದ ಕಥೆ. ಗ್ರಾಮ ಪಂಚಾಯ್ತಿಯ ಸುತ್ತುತ್ತಿದ್ದಾನೆ. ಈವರೆಗಿನ ಅಲ್ಲಿನ ಗ್ರಾಮ ಪಂಚಾಯ್ತಿ ಪಿಡಿಒ, ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು, ಸದಸ್ಯರುಗಳು ತಲೆ ತಗ್ಗಿಸುವಂತ ವಿಚಾರವೇ ಸರಿ ಎನ್ನುತ್ತಾರೆ ಇಲ್ಲಿನ ಕೆಲವು ಜನರು.

ಎರಡು-ಮೂರು ತೆಂಗಿನ ಗರಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿರುವ ನರಸಿಂಹಮೂರ್ತಿ ಅವರ ಗುಡಿಸಲು ಮುಂದೆ ನಿಂತರೆ ಎಂಥವರಿಗೂ ಕಣ್ಣೀರು ಬರುತ್ತದೆ ಎನ್ನುತ್ತಾರೆ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್.

ಈವರೆಗೂ ಯಾವ ನಾಯಕರು, ಅಧಿಕಾರಿಗಳ ಕಣ್ಣಿಗೂ ಬೀಳದ ಈ ನರಸಿಂಹ ಮೂರ್ತಿ ಎಂಬ ತಬರ ಈಗ ಬೆಳಗುಂಬ ವೆಂಕಟೇಶ್ ಅವರ ಕಣ್ಣಿಗೆ ಬಿದ್ದಿದ್ದಾರೆ. ಅವರಿಗೆ ಒಂದು ಮನೆ ಕಟ್ಟಿಕೊಡಲೇಬೇಕು ಎಂದು ಅವರೀಗ ದನಿ ಎತ್ತಿದ್ದಾರೆ.

ಸರ್ಕಾರ, ಅಧಿಕಾರಿಗಳು, ಶಾಸಕರು ಮುಂದಾಗದಿದ್ದರೆ ಸ್ನೇಹಿತರೇ ಸೇರಿಕೊಂಡು ಈ ಕುಟುಂಬಕ್ಕೆ ನೆಲೆ ಒದಗಿಸಲು ಸಿದ್ಧ. ಆದರೆ, ಅಧಿಕಾರಿಗಳ ಈ ಕರ್ತವ್ಯ ಹೀನತೆಯನ್ನು ಸಹಿಸಲು ಸಾಧ್ಯವೇ ಎಂಬುದು ಅವರ ಪ್ರಶ್ನೆ.

ನರಸಿಂಹಮೂರ್ತಿ ಮಗಳು ಈಗ ಒಂಬತ್ತನೇ ತರಗತಿ ಓದುತ್ತಿದ್ದಾಳೆ. ಈ ವರ್ಷದಿಂದ ಎಸ್ ಎಸ್ ಎಲ್ ಸಿ. ಮಗ ಐದನೇ ತರಗತಿ. ಈ ಇಬ್ಬರು ಮಕ್ಕಳ ಮನಸ್ಸು ಮುರುಟಿಕೊಂಡು ಹೋಗುವ ಮೊದಲು ಈ ಕುಟುಂಬಕ್ಕೆ ನೆರವಾಗಬೇಕಾಗಿದೆ ಎನ್ನುತ್ತಾರೆ ಅವರು.

ನರಸಿಂಹಮೂರ್ತಿ ಅವರ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರುತ್ತೇನೆ. ಊರಿನಲ್ಲಿ ಸಾಕಷ್ಟು ಸರ್ಕಾರಿ ಜಮೀನು ಇದೆ. ಕೂಡಲೇ ಈತನಿಗೆ ನಿವೇಶನ ನೀಡಿ ಮನೆ ಮಂಜೂರು ಮಾಡಿಕೊಡಲು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತರು, ದಾನಿಗಳು ಮುಂದೆ ಬಂದರೆ ಒಂದಿಷ್ಟು ನೆರವು ನೀಡಿ ಈತನಿಗೆ ಮನೆ ಕಟ್ಟಿ ಕೊಡಬಹುದು ಎನ್ನುತ್ತಾರೆ ವೆಂಕಟೇಶ್.

ಕೊರೋನಾ: ತುಮಕೂರಿನಲ್ಲಿ 83 ಮಂದಿಗೆ ಗೃಹಬಂಧ‌‌ನ-DC

Publicstory. in


ಚಿತ್ರ: Jp

ತುಮಕೂರು: ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಭಯಬೇಡ ಮುಂಜಾಗ್ರತೆ ಇರಲಿ ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ನಿಯಂತ್ರಣಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶದಿಂದ ಜಿಲ್ಲೆಗೆ 94 ಜನ ಪ್ರಯಾಣ ಬೆಳೆಸಿದ್ದು, ಅವರಲ್ಲಿ ಮನೆಯಲ್ಲಿರಿಸಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ಮರಳಿ ವಿದೇಶಕ್ಕೆ ಪ್ರಯಾಣ ಮಾಡಿರುವವರ ಸಂಖ್ಯೆ 3, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ ಸಂಖ್ಯೆ 8. ಇವರಲ್ಲಿ ಸೋಂಕು ಇಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗೆ 3 ಹಂತದ ತರಬೇತಿ ನೀಡಲಾಗಿದೆ.

ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ವಿದೇಶದಿಂದ ಪ್ರಯಾಣ ಬೆಳೆಸಿರುವವರ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ.

ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿಸಲ್ಲಿಸಬೇಕು ಎಂದು ತಿಳಿಸಿದರು.

ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಜನದಟ್ಟಣೆ ಸೇರುವ ಸಂತೆ, ಜಾತ್ರೆ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಬ್, ಕ್ಲಬ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಿ ಪದೇ ಪದೇ ಕಣ್ಣು, ಮೂಗು ಬಾಯಿಗಳನ್ನು ಮುಟ್ಟಿಕೊಳ್ಳಬಾರದು. ನೆಗಡಿ, ಕೆಮ್ಮು ಇರುವ ವ್ಯಕ್ತಿಗಳಿಂದ ದೂರ ಉಳಿಯುವುದು ಸೂಕ್ತ ಎಂದರು.

ಯಾವುದೇ ಒಬ್ಬ ವ್ಯಕ್ತಿ ಕೆಮ್ಮು, ಜ್ವರದಿಂದ ಬಳುತ್ತಿದ್ದರೆ, ಶಂಕಿತ ವ್ಯಕ್ತಿಯೆಂದು ಗುರುತಿಸಿ ಅವರ ರಕ್ತ ಮತ್ತು ಗಂಟಲು ಸ್ರಾವದ ಪರೀಕ್ಷೆಯ ನಂತರ ದೃಢಪಟ್ಟರೇ ಮಾತ್ರ ಸೋಂಕಿತ ವ್ಯಕ್ತಿಯೆಂದು ಪರಿಗಣಿಸಲಾಗುವುದು ಎಂದರು.

ಜೂಜುಕೋರರಿಗೆ ಕಡಕ್ ಎಚ್ಚರಿಕೆ

ಪಾವಗಡ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮಟ್ಕಾ, ಇಸ್ಪೀಟು, ಅಕ್ರಮ ಮದ್ಯ ಮಾರಾಟ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಡಿ.ವೈ.ಎಸ್.ಪಿ. ಎಂ. ಪ್ರವೀಣ್ ತಿಳಿಸಿದರು
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಟ್ಕಾ ಇಸ್ಪೀಟು ಮದ್ಯ ಮಾರಟ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಅದಕ್ಕೆ ಕಡಿವಾಣ ಹಾಕಲು ಪೋಲಿಸ್ ಇಲಾಖೆ ಸರ್ವ ಸನ್ನದ್ದವಾಗಿದೆ ಎಂದರು.

ಈಗಾಗಲೇ ಪಾವಗಡದಲ್ಲಿ 12 ಮಂದಿ, ಅರಸೀಕೆರೆ ವ್ಯಾಪ್ತಿಯಲ್ಲಿ 4, ವೈ.ಎನ್. ಹೊಸಕೋಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 9 ಮಂದಿ ವಿರುದ್ದ ಕೇಸ್ ದಾಖಲಿಸಲಾಗಿದೆ.  ಅಕ್ರಮ ಮದ್ಯ ಮಾರಟಗಾರರ ವಿರುದ್ದವೂ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ.

ಸರಗಳ್ಳತನದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ, ಜನಜಂಗುಳಿ ಇರುವ ಬಸ್ ನಿಲ್ದಾಣದಂತಹ ಪ್ರದೇಶದಲ್ಲಿ ಸಿ.ಸಿ. ಟಿ.ವಿ.ಯನ್ನು ಅಳವಡಿಸಲು ಸೂಚಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಪೋಲಿಸ್ ಚೌಕಿಯನ್ನು ಪ್ರಾರಂಭಿಸಲಾಗುವುದು.

ಒಟ್ಟಾರೆ ಅಕ್ರಮವಾಗಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೋಲಿಸ್ ಇಲಾಖೆ ಸರ್ವ ಸನ್ನದ್ದವಾಗಿದ್ದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು

ಪತ್ರಿಕಾಗೋಷ್ಟಿಯಲ್ಲಿ  ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್,  ಸಬ್ ಇನ್ ಸ್ಪೆಕ್ಟರ್ ನಾಗರಾಜು, ರಾಮಯ್ಯ, ರಾಮಕೃಷ್ಣಪ್ಪ ಮಂಗಳಗೌರಮ್ಮ ಹಾಜರಿದ್ದರು.

ಕೊರೋನಾ: ತುಮಕೂರಿನಲ್ಲಿ 37 ಮಂದಿ ವಿರುದ್ಧ ತೀವ್ರ ನಿಗಾ

Publicstory. in

Tumkuru: ವಿದೇಶದಿಂದ ತುಮಕೂರು ನಗರಕ್ಕೆ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿದೆ. ಕೊರೊನ ಸೋಂಕು ವ್ಯಾಪಕವಾಗಿ ಹರಡಿರುವ ದೇಶಗಳಿಂದ ನಗರಕ್ಕೆ ಬಂದಿರುವುದೇ ಇದಕ್ಕೆ ಕಾರಣ. ಕೊರೋನ ವೈರಸ್ ಪಾಸಿಟಿವ್ ಇರುವ ರೋಗಿಗಳು ಈವರೆಗೂ ಪತ್ತೆಯಾಗಿಲ್ಲ. ಆದರೂ ಅವರನ್ನು ಪ್ರತ್ಯೇಕ ಕೋಣೆಗಳಲ್ಲಿರುವಂತೆ ಎಚ್ಚರಿಕೆ ವಹಿಸಲಾಗಿದೆ ಮತ್ತು ಪರೀಕ್ಷೆ ನಡೆಸಲಾಗುತ್ತಿದೆ.

ಸೌದಿ ಅರೇಬಿಯಾ, ಬ್ಯಾಂಕಾಕ್, ವರ್ಜೇನಿಯಾ, ಅಮೆರಿಕಾ, ಇಂಡೋನೇಶಿಯಾದ ಬಾಲಿ, ಮಲೇಶಿಯಾ, ಒಮನ್, ಜರ್ಮನಿ, ದುಬೈ, ಮೆಕ್ಕಾ ಮದೀನಾ, ಚೀನಾ, ಇಟಲಿ, ಅಮೆರಿಕಾ ಸಂಯುಕ್ತ ಸಂಸ್ಥಾನ, ಕುವೈಟ್, ನೇಪಾಳ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ ತುಮಕೂರು ನಗರಕ್ಕೆ ಬಂದಿದ್ದಾರೆ.

ವಿದೇಶದಿಂದ ಬಂದಿರುವವರಲ್ಲಿ ದುಬೈ, ಸೌದಿ ಅರೇಬಿಯದಿಂದ ಬಂದಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ತುಮಕೂರಿನ ಮುಸ್ಲಿಂ ಬಾಹುಳ್ಯ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ.

ಆದರೆ ಈವರೆಗೂ ಇವರಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ.

ಸೌದಿಅರೇಬಿಯಾ-9, ದುಬೈ-6 ಅಮೆರಿಕಾ-4, ಇಂಡೋನೇಶಿಯಾ-3, ಇಟಲಿ-3, ಚೀನಾ, ನೇಪಾಳ್, ಮೆಕ್ಕ ಜರ್ಮನಿ ತಲಾ ಒಬ್ಬೊಬ್ಬರು ತುಮಕೂರಿಗೆ ಬಂದಿದ್ದಾರೆ. ಇವರೆಲ್ಲರೂ ಕ್ಯಾತ್ಸಂದ್ರ, ಸೋಮೇಶ್ವರಪುರಂ, ಕೆ.ಆರ್.ಬಡಾವಣೆ, ನಜರಾಬಾದ್, ಸದಾಶಿವನಗರ, ಚಿಕ್ಕಪೇಟೆ, ಸಪ್ತಗಿರಿ ಬಡಾವಣೆ, ಸಂತೇಪೇಟೆ, ಕುರಿ ಪಾಳ್ಯ- ಹೀಗೆ ಎಲ್ಲೆಡೆ ವಾಸವಿದ್ದು ಅವರ ಮೇಲೆ ನಿಗಾ ಇಡಲು ವೈದ್ಯರನ್ನು ನೇಮಕ ಮಾಡಲಾಗಿದೆ.

Publicstory. in ನೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ವಿದೇಶಗಳಿಂದ ಬಂದವರನ್ನು ಅವರ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ಇಡಲಾಗಿದೆ. ಕೊರೊನ ವೈರಸ್ ಹರಡಿರುವ ಯಾವುದೇ ಪ್ರಕರಣ ಇದುವರೆಗೆ ಪತ್ತೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಕೊರೋನ ರೋಗಿಗಳಿಗೆ ಪ್ರತ್ಯೇಕ ಕೊಠಡಿ ಸಜ್ಜುಗೊಳಿಸಿದ್ದು ಅವರನ್ನು ನೋಡಿಕೊಳ್ಳಲು 10 ಹಾಸಿಗೆಗಳನ್ನು ಇಡಲಾಗಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚು ಜನ ಸೇರುವ ಹೋಟೆಲ್ ಬಂದ್ ಮಾಡುವಂತೆ ಅದೇಶಿಸಿದ್ದರೂ ಎಲ್ಲಾ ಹೋಟೆಲ್‌ಗಳ ಬಾಗಿಲು ತೆಗೆದು ವ್ಯಾಪಾರ ನಡೆಸುತ್ತಿವೆ. ಸಭೆ ಸಮಾರಂಭಗಳು, ಸಿನಿಮಾ ಹಾಲ್‌ಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಅಂತರಸನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಮತ್ತು ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳ ಮೇಲೆ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ರಾತ್ರಿ ಬೀದಿಬದಿಯಲ್ಲಿ ತಿಂಡಿತಿನಿಸುಗಳನ್ನು ಮಾರುವವರಿಗೆ ಪಾಲಿಕೆಯ ಅದೇಶ ಕೂಲಿ ಹುಟ್ಟದಂತೆ ಮಾಡಿದೆ.

ಇಟಲಿ, ಚೀನ ಅಮೇರಿಕಾ ಮೊದಲಾದ ಕಡೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ತೀವ್ರ ಪ್ರಾಣ ಹಾನಿ ಮಾಡಿದೆ. ಆದರೆ ಭಾರತದಲ್ಲಿ ಮಾತ್ರ ಇದುವರೆಗೂ ಮೂವರು ಬಲಿಯಾಗಿದ್ದು 13ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.

ಕೊಬ್ಬರಿಗೆ ಕ್ವಿಂಟಲ್ ಗೆ 20 ಸಾವಿರ ಬೆಂಬಲ ಬೆಲೆ: SPM ಒತ್ತಾಯ

Publicstory. in


Tumkuru: ಕ್ರಿಂಟಾಲ್ ಕೊಬ್ಬರಿಗೆ 20 ಸಾವಿರ ವೈಜ್ಞಾನಿಕ ಖಾತ್ರಿ ಬೆಲೆಯನ್ನು ಕೊಡಬೇಕು ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ತುಮಕೂರು ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಅತಿಹೆಚ್ಚು ತೆಂಗು ಬೆಳೆಯುತ್ತಾರೆ. ಗುಬ್ಬಿ, ತುರುವೇಕೆರೆ, ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರದಲ್ಲಿ ಪ್ರದೇಶದಲ್ಲಿ ಹೆಚ್ಚಾಗಿ ತೆಂಗು ಬೆಳೆಯಲಾಗುತ್ತಿದೆ ಎಂದು ಹೇಳಿದರು.

ಲಕ್ಷಾಂತರ ರೂಪಾಯಿ ಸಾಲ ಮಾಡಿ ದಿನವಿಡೀ ಕಷ್ಟಪಟ್ಟು ದುಡಿಯುತ್ತಿದ್ದರೆ ಕೇವಲ ಕ್ವಿಂಟಾಲ್ ಕೊಬ್ಬರಿಗೆ 10 ಸಾವಿರ ರೂಪಾಯಿ ಸಿಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಡಾ.ಸ್ವಾಮಿನಾಥನ್ ವರದಿ ಪ್ರಕಾರ ಒಬ್ಬು ವೆಚ್ಚದ ಒಂದುವರೆ ಪಟ್ಟು ಲಾಭವನ್ನು ಸೇರಿಸಿ ರೈತರಿಗೆ ಬೆಂಬಲ ಬೆಲೆ ನೀಡಬೇಕು. ಆ ವರದಿಯಂತೆ ಬೆಂಬಲ ಬೆಲೆ ನೀಡಿದರೆ ಕನಿಷ್ಟ 30 ಸಾವಿರ ರೂಪಾಯಿ ಕ್ವಿಂಟಾಲ್ ಕೊಬ್ಬರಿಗೆ ಕೊಡಬೇಕು ಎಂದು ಆಗ್ರಹಿಸಿದರು.

2018ರಲ್ಲಿ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶ ಮಾಡಲಾಯಿತು. ಆ ಸಮಾವೇಶದಲ್ಲಿ ಹಲವು ಭರವಸೆಗಳನ್ನು ನೀಡಿದ್ದರು. ಇದುವರೆಗೂ ಆ ಭರವಸೆಗಳು ಈಡೇರಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಿಪಟೂರಿನ ಮುಖಂಡರಾದ ಶಶಿಧರ್, ಶ್ರೀಕಾಂತ್ ಕೆಳಹಟ್ಟಿ ಇತರರು ಇದ್ದರು.