Wednesday, February 25, 2026
Google search engine
Home Blog Page 271

ತಿಪ್ಪೂರು ಘಟನೆ: ಅಧಿಕಾರಿಗಳಿಗೆ ರೈತ ಸಂಘ ಛೀಮಾರಿ

ತುಮಕೂರು: ತಿಪ್ಪೂರು ಗ್ರಾಮದ ರೈತರೊಬ್ಬರಿಗೆ ಸೇರಿದ ತೆಂಗು ಮತ್ತು ಅಡಿಕೆ ಮರಗಳನ್ನು ಅಮಾನುಷವಾಗಿ ಕತ್ತರಿಸಿರುವ ಕ್ರಮವನ್ನು ಖಂಡಿಸಿ ನೊಂದ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡುವಂತೆ ಕುಪ್ಪೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಅಧಿಕಾರಿಗಳ ಕ್ರಮಕ್ಕೆ ಛೀಮಾರಿ ಹಾಕಿದವು.ಸಿದ್ದಮ್ಮ ಅವರಿಗೆ ಸೇರಿದ 50 ತೆಂಗು ಮತ್ತು 150ಕ್ಕೂ ಅಡಿಕೆ ಮರಗಳನ್ನು ಕತ್ತರಿಸಿ ಹಾಕಲು ಆದೇಶಿಸಿದ ತಹಶೀಲ್ದಾರ್ ಹಾಗೂ ಕಂದಾಯ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

.ತಿಪ್ಪೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ರೈತರು, ಸಿದ್ದಮ್ಮ ಅವರಿಗೆ ಆಗಿರುವ ನಷ್ಟವನ್ನು ಕೂಡಲೇ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ತಿಪ್ಪೂರಿನಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದಿತ್ತು. ರೈತರ ತೋಟಕ್ಕೆ ನುಗ್ಗಿ ಇಂತಹ ಕೃತ್ಯ ನಡೆಸಿರುವುದು ಸರಿಯಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

ತುಮಕೂರು: ತಾಲ್ಲೂಕಿನ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವಿಂದು ಸಾವಿರಾರು ಸಂಖ್ಯೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬ್ರಹ್ಮರಥೋತ್ಸವಕ್ಕೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಸದಸ್ಯ ಹುಚ್ಚಯ್ಯ, ತಹಶೀಲ್ದಾರ್ ಮೋಹನ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸವಿತಾ ಸೇರಿದಂತೆ ಮತ್ತಿತರ ಗಣ್ಯರು ಚಾಲನೆ ನೀಡಿದರು.

ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಗಣ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಮತ್ತು ಹೂವನ್ನು ಎಸೆಯುವುದು ಕಂಡುಬಂದಿತು. ಭಕ್ತರಿಗೆ ಅನ್ನದಾಸೋಹ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತವು ಜಾತ್ರೆಗೆ ಆಗಮಿಸುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು.

ಪತ್ರಕರ್ತ ದಯಾನಂದ ಕುಡುಪು ನಿಧನ

Publicstory.in


Mangalore: ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು (55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

‘ವಾರ್ತಾಭಾರತಿ’ ದೈನಿಕದಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಾರದ ಹಿಂದೆ ಅಸ್ವಸ್ಥರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೊಸದಿಗಂತ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.

ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿದ್ದ ಅವರು ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆ, ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ ಸೇರಿದಂತೆ , ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ತನ್ನ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದರು.

ಕೋಳಿಹಳ್ಳಿಯಲ್ಲಿ ಸಲಗದ ಆರ್ಭಟ: ವೃದ್ಧನಿಗೆ ಗಾಯ

Tumkuru: ಒಂಟಿ ಸಲಗವೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕು ಕೋಳಿಹಳ್ಳಿಯಲ್ಲಿ ಸಂಭವಿಸಿದೆ.

https://youtu.be/rP7KbUUNhPo

ಮೃತ ವ್ಯಕ್ತಿ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ. ಮಾರ್ಚ್ 9ರಂದು ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ತೋಟದ ಸಾಲಿನಲ್ಲಿರುವ ಮನೆಯ ಮುಂದೆ ಕೆಲಸ ಮಾಡುತ್ತಿದ್ದಾಗ ದಿಢೀರನೇ ನುಗ್ಗಿ ಕಾಲಿನಿಂದ ತುಳಿದು ಹಾಕಿದೆ.

ಕಳೆದ ಒಂದು ವಾರದಿಂದಲೇ ತುಮಕೂರು, ಗುಬ್ಬಿ ಮತ್ತು ತುರುವೇಕೆರೆ ತಾಲೂಕುಗಳಲ್ಲಿ ತಿರುಗುತ್ತಿರುವ ಒಂಟಿ ಸಲಗ ಭಯ ಬೀಳಿಸಿದೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಲಗದ ಚಲನವಲನದ ಕುರಿತು ನಿಗಾ ಇರಿಸಿದ್ದಾರೆ. ಒಂದು ಕಡೆ ಚಿರತೆ ಮನುಷ್ಯರ ರಕ್ತ ಹೀರಿ ಸಾಯುಸುತ್ತಿದ್ದರೆ ಮತ್ತೊಂದು ಕಡೆ ಒಂಟಿ ಸಲಗದ ಕಾಟ ಜೋರಾಗಿದೆ. ಕೂಡಲೇ ರೈತರ ನೆರವಿಗೆ ಬರಬೇಕೆಂದು ಅರಣ್ಯ ಇಲಾಕೆಯನ್ನು ಜನರು ಒತ್ತಾಯಿಸಿದ್ದಾರೆ.

ಕೊಬ್ಬರಿಗೆ ಬೆಂಬಲ ಬೆಲೆ: ಮಾಜಿ ಸಂಸದ ಎಸ್ ಪಿಎಂ ಧರಣಿ

ತುಮಕೂರು; ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 20 ಸಾವಿರ ನೀಡುವಂತೆ ಒತ್ತಾಯಿಸಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ನೇತೃತ್ವದಲ್ಲಿ ತುಮಕೂರಿನ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಸಾಂಕೇತಿಕ ಧರಣಿಯಲ್ಲಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಕೊಬ್ಬರಿ ಮತ್ತು ಅಡಿಕೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸರ್ಕಾರ ರಚಿಸಿರುವ ಸಮಿತಿಯ ತೆಂಗು ಬೆಳೆಯಲು 11 ಸಾವಿರ ರೂಪಾಯಿ ಖರ್ಚು ಬರುತ್ತಿದೆ ಎಂದು ಹೇಳುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಕೇವಲ 9-10 ಸಾವಿರ ಇದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯ ವಾಗಲಿದೆ ಎಂದು ತಿಳಿಸಿದರು.

ಕೊಬ್ಬರಿ ಉತ್ಪಾದನೆಗೆ ಹೆಚ್ಚು ಖರ್ಚು ತಗಲುತ್ತಿದೆ. ಕಡಿಮೆ ಬೆಲೆಗೆ ಮಾರಾಟವಾದರೆ ತೆಂಗು ಬೆಳೆಗಾರರು ಆರ್ಥಿಕ ದುಸ್ಥಿತಿ ಎದುರಿಸಬೇಕಾಗಿದೆ. ಹೀಗಾಗಿ ತೆಂಗು ಮತ್ತು ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗೆ ಬೆಳೆ ಕೊಯ್ಲಿಗೆ ಬರುವ ಮುನ್ನವೇ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ಆದರೆ ತೆಂಗು ಬೆಳಗೆ ಅಂತಹ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ತೆಂಗು ಬೆಳೆಯಲು ವೆಚ್ಚ ಮಾಡುವ ಒಂದೂವರೆ ಪಟ್ಟು ಹಣವನ್ನು ರೈತರಿಗೆ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರ ರೈತರ ಮನವಿಗೆ ಸ್ಪಂದಿಸದಿದ್ದರೆ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ರೈತರನ್ನು ಸಂಘಟಿಸಿ ಬೃಹತ್ ಹೋರಾಟ ರೂಪಿಸಲಾಗುವುದು. ಈ ಹೋರಾಟ ಯಾವುದೇ ಸರ್ಕಾರದ ವಿರುದ್ಧವೂ ಅಲ್ಲ. ನಾವು ರೈತರ ಪರವಾಗಿ ಹೋರಾಟ ಮಾಡುತ್ತೇವೆ. ತೆಂಗು ಮತ್ತು ಅಡಿಕೆಗೆ ವೈಜ್ಞಾನಿಕ ಬೆಂಬಲ ನೀಡಬೇಕು ಎಂದು ಹೇಳಿದರು.

ಪ್ರತಿಭಟನಾ ಧರಣಿಗೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಬೆಂಬಲಿಸಿ ಮಾತನಾಡಿ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಬಾಣಂತನ ಪಥ್ಯೆಯ ಶಿಕ್ಷೆಯಾಗಬಾರದು: ಸಚಿವ

Tumkuru: ತಾಯಂದಿರು ಸಮರ್ಥರಾಗಿರಲು ಪೌಷ್ಠಿಕಯುಕ್ತ ಉತ್ತಮ ಆಹಾರ ಸೇವಿಸಿಸಬೇಕು ಇದರಿಂದ ಮಕ್ಕಳಲ್ಲಿಯೂ ಸಬಲತೆ ಸಮರ್ಥತೆ ತಾನಾಗಿ ಬರುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ ವತಿಯಿಂದ ತುಮಕೂರಿನ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ ಇರುವ ಮೌಢ್ಯತೆಯಿಂದ ಹೆಣ್ಣುಮಕ್ಕಳು ತಾಯಿಯಾದಂತಹ ಸಂದರ್ಭದಲ್ಲಿ ಬಾಣಂತನ ಪತ್ಯೆಯು ಶಿಕ್ಷೆಯಾಗಿದೆ.

ಇದಕ್ಕೆ ಬದಲಾಗಿ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಯಿಗೆ ಆ ಸಮಯದಲ್ಲಿ ಅಗತ್ಯವಾದ ಶಕ್ತಿಯುತ ಆಹಾರ ನೀಡಿ ಸುಖಕಾಲವಾಗಿಸಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಶರೀರ ಆರೋಗ್ಯವಾಗಿ ಬಲವಾಗಿದ್ದರೆ ಮನಸ್ಸು ಮತ್ತು ಬುದ್ದಿ ಚನ್ನಾಗಿರುತ್ತದೆ. ಆದ್ದರಿಂದ ಮಕ್ಕಳು ಮತ್ತು ಮಹಿಳೆಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ, ಶಕ್ತಿಯುತ ಸಮಾಜ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಇದರಡಿ ಇಂದು ಜಿಲ್ಲೆಯಲ್ಲಿ ಪೋಷಣ್ ಅಭಿಯಾನ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಜನರಿಗೆ ಅನುಕೂಲಮಾಡಿಕೊಡಲಾಗಿದೆ ಎಂದರು.

ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಮಾದರಿಯಾಗಿಟ್ಟುಕೊಂಡು ಪ್ರತಿಯೊಬ್ಬ ಮಹಿಳೆಯು ಏನಾದರೂ ಸಾಧಿಸಿ ಸಾಧಕರ ಪಟ್ಟಿ ಸೇರಬೇಕು, ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡದೇ ಏನಾದರೂ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳುವುದು, ಇತರರಿಗೆ ನೆರವಾಗಿ ಸಹಾಯ ಮಾಡುವ ಮೂಲಕ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು.ಆದಾಯದ ಮೂಲವನ್ನು ಕಂಡುಕೊಂಡು ಸದೃಢರಾಗಬೇಕು ಎಂದು ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಮಹಿಳೆಯರ ಆರೋಗ್ಯ, ಪೌಷ್ಠಿಕತೆ ಹಾಗೂ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಇರುವ ಉಜ್ವಲ ಅನಿಲ ಯೋಜನೆಯಿಂದ ದೇಶದ ಸುಮಾರು 7-8 ಕೋಟಿ ಕುಟುಂಬಗಳಿಗೆ ಅನುಕೂಲವಾಗಿ ಹೆಣ್ಣುಮಕ್ಕಳು ಹೊಗೆಯಲ್ಲಿ ಅಡಿಗೆ ಮಡುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ ಅದರಲ್ಲೂ ಹೆಚ್ಚು ಕೆಲಸ ಮಾಡುವ ರೈತ ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಹಿಳೆಯರಿಗಾಗಿಯೇ ಪೋಷಣ್ ಅಭಿಯಾನ್ ಜಾರಿಯಾಗಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಹೆಸರು ಮಾಡಿದ ತಿಪಟೂರು ತಾಲ್ಲೂಕು ಈಚನೂರು ಗ್ರಾಮದ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರನ್ನು ಸನ್ಮಾನಿಸಲಾಯಿತು. ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮತ್ತು ಉದ್ಯೋಗಿನಿ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.

ಈತ ಬಿಕ್ಷೆ ಬೇಡಿ ಏನ್ ಕೆಲಸ ಮಾಡ್ತಿದ್ದಾರೆ ನೋಡಿ…

0

ಕೋಳಾಲ ಎಂ.ಎನ್.ಚಿನ್ಮಯ್


ಹೊರಗೆ ಸುಡುಬಿಸಿಲು, ಅಲ್ಲಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಕಾಡು, ಕಿಲೋಮೀಟರ್ ಗಳವರೆಗೂ ಕಾಣಸಿಗದ ನೀರು, ಎಲ್ಲಿಂದಲೋ ಹಿಡಿದು ತಂದು ಬಿಟ್ಟ ಕೋತಿಗಳು, ಅಲ್ಲೇ ಹುಟ್ಟಿ ಬೆಳೆದ ಕೋತಿಗಳು ಹಸಿವು ಮತ್ತು ನೀರು ಸಿಗದೇ ಪಿಳಿ ಪಿಳಿ ಕಣ್ಣು ಬಿಟ್ಟು ತಡವರಿಸುವ ಈ ಎಲ್ಲಾ ಚಿತ್ರಣ ಕಾಣಸಿಗುವುದು ತುಮಕೂರಿನ ದೇವರಾಯನದುರ್ಗದ ಅರಣ್ಯ ಪ್ರದೇಶದ ರಸ್ತೆಯಲ್ಲಿ.

ಹೌದು ಇಂತಹ ಪರಿಸ್ಥಿತಿ ಈ ಋತುಮಾನದಲ್ಲಿ ಮೂಕ ಪ್ರಾಣಿಗಳ ಪಾಲಿಗೆ ನರಕ ಸದೃಶ.
ಹೀಗೆ ನರಕ ಯಾತನೆ ಅನುಭವಿಸುವ ಈ ಕೋತಿಗಳ ಪಾಲಿಗೆ ಸ್ಪಂದನೆ ನೀಡಿದ್ದು, ತುಮಕೂರಿನ ದಿಬ್ಬೂರಿನ ಸಮೀಪದ ಹೊಸಹಳ್ಳಿಯ ನಟರಾಜ್ (ಚಿಟ್ಟೆ ) ಎಂಬುವವರು.
ಚಿಟ್ಟೆ ಎಂದೇ ಪರಿಚಿತರಾದ ನಟರಾಜು ಅವರಿಗೆ ಅದೇಕೆ ಈ ದೇವರಾಯನದುರ್ಗ ದ ಕೋತಿಗಳಿಗೆ ನೀರು ಆಹಾರ ನೀಡಬೇಕು ಅನ್ನಿಸಿತೋ, ಅದ್ಯಾವ ಸನ್ನಿವೇಶ ಇಂತಹ ಉತ್ತಮವಾದ ಕಾರ್ಯ ಮಾಡಬೇಕು ಎಂದು ಪ್ರಚೋದಿಸಿತೋ ಅದೇನೇ ಇರಲಿ ಇಂತಹ ಕಾರ್ಯಕ್ಕೆ ನಮ್ಮದೊಂದು ಶ್ಲಾಘನೆ ಇರಲಿ.

ವೃತ್ತಿಯಲ್ಲಿ ಬಹುಮುಖ ಪ್ರತಿಭೆ ಇವರು. ಆದರೂ
ಪ್ರತಿನಿತ್ಯ ತುಮಕೂರಿನ ತರಕಾರಿ ಮಾರುಕಟ್ಟೆ ಗೆ ಚೀಲ ತೆಗೆದುಕೊಂಡು ಹೋಗಿ ಆ ಕೋತಿಗಳ ಪರವಾಗಿ ಭಿಕ್ಷೆ ಬೇಡಿ ಕಡಿಮೆ ಬೆಲೆಯ ಸೌತೆ ಕಾಯಿ, ಬೀನ್ಸ್, ಕೋಸು ಇತ್ಯಾದಿ ಯನ್ನು ಕಾಡಿ ಬೇಡಿ ಪಡೆದು, ಗ್ರಾಹಕರಿಂದ ತಿರಸ್ಕರಿದ ತರಕಾರಿಗಳನ್ನು, ಹೆಚ್ಚು ಮಾಗಿದ ಬಾಳೆ ಹಣ್ಣು, ಹಂಪಲು ಗಳನ್ನು ಪಡೆದು, ತನ್ನ ಬೈಕ್ ನಲ್ಲಿ ತೆಗೆದು ಕೊಂಡು, ವಾಟರ್ ಕ್ಯಾನ್ ನಲ್ಲಿ ನೀರು ತುಂಬಿಸಿ ಕೊಂಡು ಹೊರಟು ದೇವರಾಯನ ದುರ್ಗದ ರಸ್ತೆಯಲ್ಲಿ ಹೊರಡುವ ನಟರಾಜ್ ಬಂದು ಸೇರುವುದು ನಾಮದ ಚಿಲುಮೆ ಭಾಗದ ರಸ್ತೆಯ ಅರಣ್ಯ ಪ್ರದೇಶಕ್ಕೆ.

ಅಲ್ಲಿ ಬಂದು ತಂದಂತಹ ಆ ತರಕಾರಿ, ಹಣ್ಣು ಹಂಪಲು ಗಳನ್ನು ಹಸಿವು, ದಣಿವು ಗಳಿಂದ ತತ್ತರಿಸಿದ ಮಂಗಗಳಿಗೆ ತನ್ನ ಕೈ ಯಾರ ನೀಡಿಕೊಂಡು ಮುಂದೆ ಮುಂದೆ ಹೋಗುವ ಈ ನಟರಾಜ್ ನೋಡುತ್ತಿದ್ದರೆ ಅವರ ಮುಖದಲ್ಲಿ ಏನೋ ಸಾಧಿಸಿದ ಸಾರ್ಥಕತೆ, ಸಮಾಧಾನ.

ಈ ಕಾರ್ಯ ಬೇಸಿಗೆ ಪ್ರಾರಂಭ ಆದಾಗಿನಿಂದ ಪ್ರಾರಂಭವಾಗಿ ಮುಂದುವರಿಯುತ್ತಿದೆ. ಈ ಸಮಾಜಮುಖಿ ಕಾರ್ಯಕ್ಕೆ ಈಗೀಗ ಹಲವಾರು ಗೆಳೆಯರು, ಹೃದಯವಂತರು ಕೈ ಜೋಡಿಸುತ್ತಿದ್ದಾರೆ. ಅವರಿಗೂ ಆ ದೇವರು ಒಳ್ಳೆಯದು ಮಾಡಲಿ.

ತುಮಕೂರಿನ ತರಕಾರಿ ಮಾರುಕಟ್ಟೆ ಯ ಹಲವು ಮಾಲೀಕರು, ಸಿಬ್ಬಂದಿ ಯ ಸಹಕಾರ ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಶ್ಲಾಘನೀಯ ಕಾರ್ಯದ ಯಾತ್ರೆ ಕೈ ಗೊಂಡ ನಟರಾಜು (ಚಿಟ್ಟೆ )ಅವರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡುವ ಮನಸ್ಸು ಮತ್ತು ಶಕ್ತಿಯನ್ನು ಆ ಭಗವಂತ ಕರುಣಿಸಲಿ.

ಇಂತಹ ಸಮಾಜ ಮುಖಿ ಕೆಲಸಕ್ಕೆ ಇನ್ನೂ ಹೆಚ್ಚಿನ ಸ್ನೇಹಿತರು ಕೈಜೋಡಿಸಲಿ. ಆ ಪ್ರಾಣಿ ಸಂಕುಲದ ತೃಪ್ತಿ ದಾಯಕ ಆಶೀರ್ವಾದ ನಟರಾಜ್ ಅವರನ್ನು ಕಾಪಾಡಲಿ.


ಲೇಖಕರು ತುಮಕೂರಿನಲ್ಲಿ ವಕೀಲರು

ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯವಿಲ್ಲ…

ತುಮಕೂರು :

ಕರ್ತವ್ಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ಸ್ ಹಾಜರಾತಿಯನ್ನು ಕಡ್ಡಾಯಗೊಳಿಸಿತ್ತು.

ಇದರಿಂದಾಗಿ ನೌಕರರು ಸರಿಯಾದ ಸಮಯಕ್ಕೆ ಕಚೇರಿ ಕೆಲಸಗಳಿಗೆ ಹಾಜರಾಗುತ್ತಿದ್ದರು. ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸರ್ಕಾರದ ಕ್ರಮ ಸಹಕಾರವಾಗಿತ್ತು.

ಆದರೆ ಈಗ ಸರ್ಕಾರಿ ನೌಕರರು ಹಾಜರಾತಿಗೆ ಬಯೋ ಮೆಟ್ರಿಕ್ಸ್ ಬಳಸುವುದು ಬೇಡಾ ಎಂದು ಆದೇಶಿಸಿದೆ. ದಿನನಿತ್ಯ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುವಂತೆ ಸೂಚಿಸಿದೆ.

ಸರ್ಕಾರ ಈ ಆದೇಶ ಹೊರಡಿಸಲು ಕಾರಣ ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ.

ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸರ್ಕಾರಿ ನೌಕರರು ನಿತ್ಯವೂ ಹಾಜರಾತಿಗೆ ಬಯೋಮೆಟ್ರಿಕ್ಸ್ ಬಳಕೆ ಮಾಡುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ.

ಹಾಗಾಗಿ ಕೇಂದ್ರ ಸರ್ಕಾರದ ಕುಂದು ಕೊರತೆ ಮತ್ತು ಪಿಂಚಣಿ ಸಚಿವಾಲಯ ಈ ಆದೇಶ ಹೊರಡಿಸಿದ್ದು, ಈ ಆದೇಶ ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ.

ಮೇ.13ಕ್ಕೆ ಸಾರಿಗೆ ಬಸ್ ರಸ್ತೆಗೆ‌ ಇಳಿಯಲ್ಲ. ಯಾಕೆ ಗೊತ್ತಾ..?

ತುಮಕೂರು

ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ‌ ಮಾಡದ‌ ಹಿನ್ನೆಲೆ‌ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮೇ 13 ರಿಂದ ಎಲ್ಲಾ ವಲಯಗಳ ಬಿಎಂಟಿಸಿ, ಕೆಎಸ್ಅರ್ ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನೌಕರರು ‌ಬಂದ್ ಗೆ ಕರೆ‌ ನೀಡಿದ್ದಾರೆ.

ಸರ್ಕಾರಕ್ಕೆ ತೊಂದರೆ ನೀಡದೆ ಶಾಂತಿಯುತ ಸತ್ಯಾಗ್ರಹದ ಮೂಲಕ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ.

ಹೀಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ಮೇ 13ರಂದು ಸಾರಿಗೆ ಬಂದ್ ಮಾಡಲು ಕರೆ ನೀಡಲಾಗಿದೆ. ಅಷ್ಟರಲ್ಲಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.

ರಮೇಶ್ ಬಾಬು ಜೆಡಿಎಸ್ ಗೆ ಗುಡ್ಬಾಯ್

ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿದ ಕಾರಣ ಬೇಸರಗೊಂಡು  ಪಕ್ಷಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಹಲವುದಿನಗಳಿಂದ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದ ರಮೇಶ್ ಬಾಬು ಶನಿವಾರ ಅಧಿಕೃತವಾಗಿ ಜೆಡಿಎಸ್ ವರಿಷ್ಟ ಎಷ್.ಡಿ.ದೇವೇಗೌಡ ಅವರಿಗೆ ರಾಜಿನಾಮೆ ನೀಡುವ ಮೂಲಕ ಪಕ್ಷ ತೊರೆದಿದ್ದಾರೆ. ತಮ್ಮ ಮುಂದಿನ ಹಾದಿ ಯಾವುದೆಂದು ಇನ್ನು ನಿರ್ಧರಿಸಿಲ್ಲ.


ಕೆಲವು ದಿನಗಳ ಹಿಂದೆ ಜೆಡಿಎಸ್ ಪಕ್ಷದ ಮತ್ತೊಬ್ಬ ಪರಿಷತ್ ಸದಸ್ಯ ಪುಟ್ಟಣ್ಣ ಜೆಡಿಎಸ್ ಪಕ್ಷದ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದರು. ನಂತರ ಬಿಜೆಪಿ ಪಕ್ಷ ಸೇರಿದ್ದರು.

ಕಳೆದ ಎರಡು ಮೂರು ದಶಕಗಳಿಂದ ರಮೇಶ್ ಬಾಬು ಜೆಡಿಎಸ್ ಪಕ್ಷದ ವಕ್ತಾರರಾಗಿ ಟಿವಿ ಚಾನೆಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರ ಜೊತೆಗೆ ಹೆಚ್ಚಾಗಿ ಒಡನಾಟ ಹೊಂದಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳು ಮತ್ತು ದೇವೇಗೌಡರಿಂದ ದೂರ ಉಳಿದಿದ್ದ ರಮೇಶ್ ಬಾಬು ಅವರು ಮುಂದಿನ ದಿನಗಳಲ್ಲಿ ಪದವೀಧರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.