Friday, February 20, 2026
Google search engine
Home Blog Page 273

ಸಂಪಿಗೆಯಲ್ಲಿ ಚನ್ನಕೇಶವ ಸ್ವಾಮಿ ನೂತನ ದೇವಾಲಯ ಉದ್ಘಾಟನೆ

Thuruvekere: ತಾಲ್ಲೂಕಿನ ಸಂಪಿಗೆ ಗ್ರಾಮದ ಚಂಪಕಾಪುರಿ ಚನ್ನಕೇಶವ ಸ್ವಾಮಿಯ ನೂತನ ದೇವಾಲಯ, ಅಷ್ಟಬಂಧನ ಪ್ರತಿಷ್ಠಾಪನಾ, ವಿಮಾನಗೋಪುರ ಮುಖಮಂಟಪ ಹಾಗು ಚನ್ನಕೇಶವ ಸ್ವಾಮಿಯ ಸ್ಥಿರಬಿಂಬ ಮಹಾಕುಂಭ ಅಭಿಷೇಕ ಮಹೋತ್ಸವವು ಮಾರ್ಚ್.6 ರಿಂದ 8 ರವರೆಗೆ ನಡೆಯಲಿದೆ ಎಂದು ಚಂಪಕಾಪುರಿ ಗ್ರಾಮ ವಿಕಾಸ್ ಸೇವಾ ಟ್ರಸ್ಟ್ ಅಧ್ಯಕ್ಷ ತಿಳಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಕಾರ್ಯಕ್ರಮದ ರೂಪುರೇಷಗಳನ್ನು ಕುರಿತು ಮಾತನಾಡಿದರು.

ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಮಾ.6ರರ ಶುಕ್ರವಾರ ಸಂಜೆ ಗ್ರಾಮಪ್ರದಕ್ಷೆ, ಗೋಪೂಜೆ, ಮಹಾಗಣಪತಿ ಪೂಜೆ, ರಕ್ಷಾ ಬಂಧನ ಸೇರಿದಂತೆ ವಿವಿಧ ಹೋಮಗಳು ನಡೆಯಲಿವೆ.

ಸಂಜೆ 6 ಗಂಟೆಗೆ ಸ್ವದೇಶಿ ಜಾಗೃತಿಯ ಮಹತ್ವ ಕುರಿತ ಭಾಷಣ ಕೆ.ಜಗದೀಶ್ ಅವರಿಂದ ಅದೇ ರಾತ್ರಿ 7 ಗಂಟೆಗೆ ಬೆಂಗಳೂರಿನ ಪುತ್ಥಳಿ ಕಲಾರಂಗದ ಡಾ.ದತ್ತಾತ್ರೇಯ ಅರಳೀಕಟ್ಟೆ ಇವರಿಂದ ಸೂತ್ರಸಲಾಕಿ ಗೊಂಬೆಯಾಟ ‘ಕುಮಾರ ಸಂಭವ’ ಪ್ರಸಂಗವನ್ನು ಪ್ರಸ್ತುತಪಡಿಸಲಿದ್ದಾರೆ.
ಮಾರ್ಚ್.7ರ ಶನಿವಾರ ಬೆಳಗ್ಗೆ 8 ಗಂಟೆಯಿಂದ ದ್ವಾರಾರಾಧನೆ, ಉಪಕುಂಬಾರಾಧನೆ, ಪ್ರಾಣಹೋಮ, ವಾಸ್ತು ಪೂಜೆ, ಅಗ್ನಿ ಪ್ರತಿಷ್ಠೆ, ಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

ಸಂಜೆ 4 ಗಂಟೆಗೆ ಗೋದೂಳಿ ಲಗ್ನದಲ್ಲಿ ಕಳಶಾರೋಹಣ. 6 ಗಂಟೆಗೆ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ಅವರಿಂದ ಸಾವಯವ ಕೃಷಿ ಜಲ ಮತ್ತು ಪರಿಸರ ಸಂರಕ್ಷಣೆ ಕುರಿತ ಭಾಷಣ. ಅದೇ ರಾತ್ರಿ 7 ಗಂಟೆಗೆ ಸಾಯಿಕಲಾ ಪ್ರತಿಷ್ಠಾನದ ಶಿವಮೊಗ್ಗ ತಂಡದವರಿಂದ ಯಕ್ಷಗಾನ ಬಯಲಾಟ ಪ್ರಸಂಗ ಕದಂಬ ಕೌಶಿಕೆ ನಡೆಯಲಿದೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮೇಲುಕೋಟೆಯ ಯದುಗಿರಿ ಯತಿರಾಜ ರಾಮಾನುಜಜೀಯರ್ ಅವರ ದಿವ್ಯಸಾನ್ನಿಧ್ಯದಲ್ಲಿ ಪ್ರಾಣ ಪ್ರತಿಷ್ಠೆ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಮಧ್ಯಾಹ್ನ 12ಕ್ಕೆ ಹಿರಿಯ ಆಗಮಿಕರು, ವೇದ ಪಂಡಿತರಿಗೆ ಸನ್ಮಾನ. ಟಿ.ಎ.ಪಿ.ಶೆಣೈ ಅವರಿಂದ ಹಿಂದು ಧಾರ್ಮಿಕ ಮೌಲ್ಯಗಳು ಕುರಿತ ಭಾಷಣ. ಸಂಜೆ 6 ಗಂಟೆಗೆ ಮಧುಸೂಧನ್ ಅವರಿಂದ ನಿತ್ಯ ಜೀವನದಲ್ಲಿ ದೇಶೀ ಗೋವಿನ ಮಹತ್ವ ಮತ್ತು ಆಥರ್ಿಕತೆ ಕುರಿತ ಭಾಷಣ. ರಾತ್ರಿ 7.ಕ್ಕೆ ಮೈಸೂರು ರಾಮಚಂದ್ರಚಾರ್ ತಂಡದವರಿಂದ ದಾಸರ ಪದಗಳು ಗಾಯನ ನಡೆಯಲಿದೆ.

ಮೂರು ದಿನಗಳ ಕಾಲ ಬರುವ ಭಕ್ತಾಧಿಗಳಿಗೆ ನಿರಂತರ ಅನ್ನಸಂತರ್ಪಣೆ ಕಾರ್ಯ ಏರ್ಪಡಿಸಲಾಗಿದೆ.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಶಾಸಕ ಮಸಾಲಜಯರಾಮ್, ತಹಶೀಲ್ದಾರ್ ಆರ್.ನಯೀಂಉನ್ನೀಸಾ, ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ ಇರಲಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಟ್ರಸ್ಟ ನ ಎಸ್.ಎನ್.ಯೋಗೀಶ್, ಎಸ್.ಎ.ನಾಗರಾಜು, ಬಸವರಾಜು, ಎಸ್.ಎನ್,ನಾಗರಾಜು, ಸತೀಶ್ಬಾಬು, ಶ್ರೀನಿವಾಸ್, ಸಂಪಿಗೆ ಶೀಧರ್ ಪಾಲ್ಗೊಂಡಿದ್ದರು.

ಉಪ್ಪಿನಂಗಡಿ: ಆರೋಪಿ ಪೊಲೀಸ್ ವಶಕ್ಕೆ

Uppinagadi: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿಂತೆ ಕೌಕ್ರಾಡಿ ಗ್ರಾಮದ ಮೂಡಬೈಲು ಬರಮೇಲು ಮನೆ ನಿವಾಸಿ ವಿನಯ (25) ಎಂಬ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಆತನಿಂದ ಕಳವುಗೈಯಲಾದ ಬೈಕನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಪೇಟೆಯಲ್ಲಿ ಸತೀಶ್ ಗೌಡ ಎಂಬವರು ಫೆ.28ರಂದು ಬೈಕ್ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದು, ಫೆ.29ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವಾಗಿತ್ತು. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಕಳವುಗೈಯಲಾದ ಬೈಕ್ ಸಮೇತ 34ನೇ ನೆಕ್ಕಿಲಾಡಿ ಜಂಕ್ಷನ್‍ನಲ್ಲಿ ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ವಿರುದ್ಧ ಮುಗಿಬಿದ್ದ ಸೊಗಡು ಶಿವಣ್ಣ

Tumkuru: ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರನ್ನು ಆಯುಕ್ತರು ನಿಯಂತ್ರಿಸುತ್ತಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲವು ಆರ್.ಟಿ.ಐ ಕಾರ್ಯಕರ್ತರು ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.

ತುಮಕೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವ್ಯಾಪಕ ಅವ್ಯವಹಾರವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಸ್ಮಾರ್ಟ್ ಸಿಟಿಯಲ್ಲಿ 45 ಇಂಜಿನಿಯರ್ ಗಳು ಕೆಲಸ ನಿರ್ವಹಿಸುತ್ತಿದ್ದು ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಅವಧಿಯ ಶಾಸಕರು 35 ಸಾವಿರ ಖಾತೆಗಳನ್ನು ಮಾಡಿಸಿದ್ದಾರೆ. ಅವರೆಲ್ಲರೂ ತಮ್ಮ ಹಿಂಬಾಲಕರೇ ಆಗಿದ್ದಾರೆ. ಬಸವೇಶ್ವರ ರಸ್ತೆಯಲ್ಲಿರುವ ಹೋಟೆಲ್ ಮಾಲಿಕರು ತೆರಿಗೆ ಕಟ್ಟಿಲ್ಲ. ಅದರ ಬಗ್ಗೆಯೂ ಗಮನಹರಿಸಬೇಕು ಎಂದು ವಿವರಿಸಿದರು.

ನೀರು ಪೂರೈಕೆ ವಿಭಾಗದಲ್ಲಿ 9 ಮಂದಿ, ಪಿಡಬ್ಲ್ಯೂಡಿ ವಿಭಾಗದಲ್ಲಿ 8 ಸೇರಿದಂತೆ 45 ಎಂಜಿನಿಯರ್ ಗಳು ತುಮಕೂರು ನಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.

ತುರ್ತುಪರಿಸ್ಥಿತಿ ಮತ್ತು ಜೆಪಿ ಚಳವಳಿ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು. ಸಿದ್ದರಾಮಯ್ಯ ಅಂಡ್ ಕಂಪನಿ ದ್ರೋಶದ್ರೋಹಿಗಳು. ನಾವು ದೇಶಭಕ್ತರು ಎಂದು ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ವೈ.ಎನ್.ಹೊಸಕೋಟೆ ಶಾಲೆಗೆ ಬೇಕಿದೆ ಕಾಯಕಲ್ಪ… ಇಲ್ಲಿ ಓದಿದವರು ಅಗಣಿತ, ಶಾಲೆಗಿಲ್ಲ ಕಟ್ಟಡದ ರೇಖಾಗಣಿತ !

0

Public story.in


ವೈ.ಎನ್.ಹೊಸಕೋಟೆ : ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಶತಮಾನದ ಕಾಲದಿಂದ ಅಕ್ಷರ ಬೀಜವನ್ನು ಬಿತ್ತುತ್ತ ಶಿಕ್ಷಣ ಕ್ರಾಂತಿಯನ್ನುಂಟು ಮಾಡಿರುವ ಶಾಲೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ 1913 ಕ್ಕಿಂತ ಮುಂಚೆಯೇ ಪ್ರಾರಂಭಗೊಂಡು ಇಂದಿನವರೆಗೂ ನಿರಂತರವಾಗಿ ಶಿಕ್ಷಣ ನೀಡುತ್ತಿದೆ.

ಸುಮಾರು 25-30 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದ್ದ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿದ್ದಾರೆ.
ಶಾಲೆಯಿಂದ ಹೊರಹೊಮ್ಮಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ವೈದ್ಯ, ನ್ಯಾಯಾದೀಶ, ಇಂಜಿನಿಯರ್ ಇತ್ಯಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಲ್ಲಿ ಅಕ್ಷರ ಜ್ಞಾನ ಪಡೆದ ಹಲವರು ಸಾಹಿತಿಗಳು, ಲೇಖಕರಾಗಿದ್ದಾರೆ. ಕೆ.ಎ.ಎಸ್ ನಂತಹ ಉನ್ನತ ಆಡಳಿತಾಧಿಕಾರ ಪಡೆದಿದ್ದಾರೆ. ವಿವಿಧ ಇಲಾಖೆಗಳಲ್ಲಿ ಮೇಲ್ದರ್ಜೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಗುರ್ತಿಸಿಕೊಂಡಿದ್ದಾರೆ. ಪ್ರಾಧ್ಯಾಪಕರು, ಶಿಕ್ಷಕರು ಸೇರಿದಂತೆ ಸಿ ಮತ್ತು ಡಿ ದರ್ಜೆ ಸರ್ಕಾರಿ ಮತ್ತು ಖಾಸಗಿ ನೌಕರರ ಗಣ ಅಸಂಖ್ಯಾತವಾಗಿದೆ.

ಈ ಭಾಗದ ರಾಜಕಾರಣಿಗಳ ತವರು ಶಾಲೆಯೂ ಹೌದು. ಇದೇ ಶಾಲೆಯಲ್ಲಿ ಓದಿದ ವೆಂಕಟರಮಣಪ್ಪ ಶಾಸಕರಾಗಿ, ಮಂತ್ರಿಗಳಾಗಿ, ವೆಂಕಟಸ್ವಾಮಿ ವಿಜ್ಞಾನಿಯಾಗಿ, ಜಿ.ಎ.ಮಂಜುನಾಥ ನ್ಯಾಯಾದೀಶರಾಗಿ ಬೆಳೆದಿದ್ದಾರೆ.

ರಂಗಭೂಮಿ, ನಾಟಕ, ಚಿತ್ರಕಲೆ, ಶಿಲ್ಪಕಲಾ ಕಲಾವಿದರಿಗೆ, ಸಾಹಿತಿಗಳಿಗೆ, ಆಡಳಿತಗಾರರಿಗೆ, ಕ್ರೀಡಾಪಟುಗಳಿಗೆ ಪ್ರೇರಕ ಸ್ಥಳವಾಗಿವಾಗಿದೆ.
ಖೋಖೋ, ಕಬ್ಬಡ್ಡಿ, ಓಟಾಟಗಳ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿದ್ದಾರೆ.

ಶಾಲಾ ಕ್ರೀಡಾಕೂಟಗಳಲ್ಲಿ ವಾಲೀಬಾಲ್ ಎಂದರೆ ವೈ.ಎನ್.ಹೊಸಕೋಟೆ ಎಂದು ಗುರ್ತಿಸುವ ಮಟ್ಟಕ್ಕೆ ಮೂಲ ಕಾರಣವಾದ ಶಾಲೆಯಾಗಿದೆ. ಗ್ರಾಮದ ಹಲವು ಮೊದಲುಗಳು ಮತ್ತು ಹೆಮ್ಮೆಗಳಿಗೆ ಆಕರ ಸ್ಥಳ.

ಇಂತಹ ಸರ್ಕಾರಿ ಬಾಲಕರ ಶಾಲೆ ಇಂದು ಶತಮಾನೋತ್ಸವ ಸಂಭ್ರಮಚಾರಣೆಯನ್ನೂ ಕಾಣದೆ ಸೊರಗುತ್ತಿರುವುದು ನೋವಿನ ಸಂಗತಿ. ಜ್ಞಾನದ ಬೆಳಕನ್ನು ನೀಡಿದ ತಮ್ಮ ತವರು ಶಾಲೆಯ ಬಗ್ಗೆ ಯಾವೊಬ್ಬ ಮುಖಂಡರಾಗಲೀ, ಅಧಿಕಾರಿಗಳಾಗಲೀ ಅಥವಾ ಹಳೆಯ ವಿದ್ಯಾರ್ಥಿಗಳಾಗಲಿ ಕಾಳಜಿ ವಹಿಸುತ್ತಿಲ್ಲ.

ಪ್ರಸ್ತುತ ಸರ್ಕಾರ ನೀಡಿರುವ ಎಲ್ಲಾ ರೀತಿಯ ಸೌಲಭ್ಯಗಳ ನಡುವೆಯೂ ದಾಖಲಾತಿ ಸಮಸ್ಯೆ ಅನುಭವಿಸುತ್ತಿದೆ. ಹಾಗಾಗಿ ಉತ್ಸಾಹದ ದಿನಗಳ ಬದಲಿಗೆ ಆತಂಕದ ದಿನಗಳು ಮೂಡುತ್ತಿವೆ.

ವಿದ್ಯಾರ್ಥಿಗಳ ಕೊರತೆ, ಮಾಧ್ಯಮದ ಕೊರತೆ, ಆಧುನಿಕ ಬೋಧನೋಪಕರಣ, ಪ್ರಯೋಗಾಲಯ, ಕ್ರೀಡೋಪಕರಣ, ಕಂಪ್ಯೂಟರ್ ಅಧಾರಿತ ಶಿಕ್ಷಣ ಕೊರತೆ, ಪೋಷಕರು, ಸಮುದಾಯ ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದ ಕೊರತೆ ಕಾಡುತ್ತಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ 3 ಹೆಂಚಿನ ಮೇಲ್ಚಾವಣಿಯ ಕೊಠಡಿಗಳು ಇಂದು ಶಿಥಿಲಾವಸ್ಥೆಯನ್ನು ತಲುಪಿವೆ. ನಂತರದ ದಿನಮಾನಗಳಲ್ಲಿ ನಿರ್ಮಾಣವಾಗಿರುವ ಒಂದೆರಡು ಆರ್.ಸಿ.ಸಿ ಕೊಠಡಿಗಳು ಸೋರುತ್ತಿವೆ. ಶಾಲೆಯ ಹಿಂಭಾಗ ವರ್ಕ್ ಶಾಪ್ ಗಳಿಂದ ಆವೃತವಾಗಿದ್ದು, ಕೊಠಡಿಗಳಿಗೆ ಗಾಳಿಬೆಳಕು ಇಲ್ಲದೆ ಶಬ್ದ ಮಾಲಿನ್ಯಕ್ಕೆ ಗುರಿಯಾಗಿವೆ.

ಪೋಷಕರಲ್ಲಿನ ಇಂಗ್ಲೀಷ್ ವ್ಯಾಮೋಹ, ವಸತಿಶಾಲೆಗಳ ದಾಖಲಾತಿ, ಸರ್ಕಾರದ ಶೈಕ್ಷಣಿಕ ನೀತಿಯಿಂದಾಗಿ ವೈಭವದಿಂದ ಮೆರೆದ ಸರ್ಕಾರಿ ಶಾಲೆ ಇಂದು ಹೆಸರಿಗಷ್ಟೇ ಸೀಮಿತವಾಗುತ್ತಿದೆ.
ಅಕ್ಷರಾಮೃತವನ್ನು ನೀಡುತ್ತಾ ಶತಮಾನ ಸವೆದ ತವರು ಶಾಲೆಯಮ್ಮನ ಹಾರೈಕೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಪುತ್ರನ ಕರ್ತವ್ಯ ಎನಿಸುತ್ತದೆ.

ಬನ್ನಿ ಎಲ್ಲರೂ ಕೈಜೋಡಿಸಿ ಶತಮಾನೋತ್ಸವವನ್ನು ಆ಼ಚರಿಸಿ ಸಮುದಾಯದ ಶಾಲೆಯ ಪುನಶ್ಚೇತನ ಮತ್ತು ಪ್ರಗತಿಗೆ ಶ್ರಮಿಸೋಣ.

34 ಕೇಂದ್ರಗಳಲ್ಲಿ ಪಿಯು ಪರೀಕ್ಷೆ

Tumkuru: ತುಮಕೂರು ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 4ರಿಂದ 2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ.

ತುಮಕೂರು ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಕುಣಿಗಲ್ ತಾಲ್ಲೂಕುಗಳ 24 ಪರೀಕ್ಷಾ ಕೇಂದ್ರಗಳನ್ನು ತೆರೆಲಾಗಿದೆ.

ಮಧುಗಿರಿ ವ್ಯಾಪ್ತಿಯಲ್ಲಿ ಬರುವ ಮಧುಗಿರಿ, ಶಿರಾ, ಪಾವಗಡ ಹಾಗೂ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 10 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.

2020ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಥಮವಾಗಿ (ಫ್ರೆಶರ್ಸ್)-23492, ಪುನರಾವರ್ತಿತ (ರಿಪೀಟರ್ಸ್)-3387, ಖಾಸಗಿ ವಿದ್ಯಾರ್ಥಿಗಳು-581, ಕಲಾ ವಿಭಾಗ-7350, ವಾಣಿಜ್ಯ-11348, ವಿಜ್ಞಾನ-8762, ಆ ಪೈಕಿ ಬಾಲಕರು-12638, ಬಾಲಕಿಯರು-14822 ಸೇರಿ ಜಿಲ್ಲೆಯಲ್ಲಿ ಒಟ್ಟು 27460 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿದ್ದಾರೆ.

ಮಾರ್ಚ್ 4ರಂದು ಬುಧವಾರ ಇತಿಹಾಸ, ಫಿಜಿಕ್ಸ್, ಬೇಸಿಕ್ ಮ್ಯಾಥ್ಸ್ ವಿಷಯಗಳ ಪರೀಕ್ಷೆ ನಡೆಯಲಿವೆ. ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಲಲಿತಾ ಕುಮಾರಿ ತಿಳಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಧುಗಿರಿ : ಶ್ರೀ ರಾಘವೇಂದ್ರ ಹಾಸ್ಪಿಟಲ್ ಹಾಗೂ ಪ್ರಕ್ರಿಯೆ ಹಾಸ್ಪಿಟಲ್ ವತಿಯಿಂದ ಮಾರ್ಚ್ 8ರಂದು ಜುಪಿಟರ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಸಂಸ್ಥೆಯ ಕಾರ್ಯದರ್ಶೀ ಡಾ.ಜಿ.ಕೆ.ಜಯರಾಂ ತಿಳಿಸಿದರು.
ಪಟ್ಟಣದ ಜುಪಿಟರ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸ್ಥೆ ವತಿಯಿಂದ 13 ವರ್ಷಗಳಿಂದ ಪ್ರತಿ ತಿಂಗಳ ಮೂರನೇ ಗುರುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಿ, 15 ಸಾವಿರಕ್ಕೂ ಹೆಚ್ಚು ವೃದ್ದರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.
ದವಡೆ, ಕರುಳು, ಸ್ತನ ಹಾಗೂ ರಕ್ತದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲೇ ಗುಣವಾದರೆ ಕ್ಯಾನ್ಸರ್ ಖಾಯಿಲೆ ದೂರವಾಗುತ್ತದೆ. ಇಲ್ಲದಿದ್ದರೆ ಹಂತ ಹಂತವಾಗಿ ಮನುಷ್ಯನ ಜೀವಕ್ಕೆ ಆಪತ್ತು ತಂದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಉಚಿತ ತಪಾಸಣೆ ಶಿಬಿರದಲ್ಲಿ ನುರಿತ ಕ್ಯಾನ್ಸರ್ ತಜ್ಞರು ಬಾಗವಹಿಸಲಿದ್ದು, ಸಾರ್ವಜನಿಕರು ಶಿಬಿರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಕ್ರಿಯ ಆಸ್ಪತ್ರೆಯ ಡಾ. ಸಿ.ಜಿ.ಮಹೇಶ್ ಮಾತನಾಡಿ, ಗ್ರಾಮೀಣ ಭಾಗದ ರೋಗಿಗಳಿಗೂ ವೈಧ್ಯಕೀಯ ಸೇವೆ ಸಿಗಲೆಂಬ ಉದ್ದೇಶದಿಂದ ಡಾ.ಜಿ.ಕೆ.ಜಯರಾಂ ಅವರು ಈ ಶಿಬಿರವನ್ನು ಆಯೋಜಿಸಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಆಸ್ಪತ್ರೆಯ ಧ್ಯೇಯವಾಗಿದೆ ಎಂದರು.
ಮುಖಂಡ ಡಾ.ಎಂ.ಜಿ.ಶ್ರೀನಿವಾಸ್ ಮೂರ್ತಿ, ರೋಹಿತ್ ಹಾಗೂ ಪ್ರವೀಣ್ ಇದ್ದರು.
ಶಿಬಿರದಲ್ಲಿ ಮೂಳೆ ತಜ್ಞರು, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಶಸ್ತ್ರಚಿಕಿತ್ಸಾ ತಜ್ಞರು ಹೃದ್ರೋಗ ತಜ್ಞರು ಜನರಲ್ ಫಿಸಿಚಿಯನ್ ಹಾಗೂ ಕ್ಯಾನ್ಸರ್ ತಜ್ಞರು ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 991665933 ಹಾಗೂ 9663088820ಯನ್ನು ಸಂಪರ್ಕಿಸಬಹುದು.

ದೊಮ್ಮನಕುಪ್ಪೆ ಗ್ರಾಮಕ್ಕೆ ಬಂದ ತುಮಕೂರು ವಿಶ್ವ ವಿದ್ಯಾನಿಲಯ

0

Tumkuru: ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳಿದ್ದು ಪರಿಹಾರ ಕಂಡು ಕೊಳ್ಳುವಲ್ಲಿ ಜನರು ವಿಫಲಾರಾಗಿದ್ದಾರೆ. ಸಮುದಾಯ ಅಭಿವೃದ್ಧಿ ಕೇಂದ್ರಗಳು ಮತ್ತು ಸಮುದಾಯದ ಜನರ ಸಹಭಾಗಿತ್ವದ ಸಂಪನ್ಮೂಲ ಕ್ರೂಡೀಕರಣ ಮತ್ತು ಮೌಲ್ಯ ಮಾಪನ ಮುಖ್ಯವಾಗಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ವೈ.ಎನ್.ಸಿದ್ದಗೌಡ ತಿಳಿಸಿದರು.

ತುಮಕೂರು ವಿಶ್ವ ವಿದ್ಯಾನಿಲಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ, ಸಂಶೋಧನಾ ವಿಭಾಗ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರದ ವತಿಯಿಂದ ದೊಮ್ಮನಕುಪ್ಪೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಅಭಿವೃದ್ದಿ ಕೇಂದ್ರದಿಂದ ಗ್ರಾಮಗಳಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿಶ್ವವಿದ್ಯಾಲಯ ಮತ್ತು ನೂತನ ಕ್ಯಾಂಪಸ್‍ನ ಸುತ್ತ ಮುತ್ತ ಗ್ರಾಮೀಣ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟು ಅಭಿವೃದ್ಧಿಗೆ ಪೂರಕವಾಗಲಿ ಎಂದು ಆಶಿಸಿದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಜಿ. ಪರಶುರಾಮ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಜವಬ್ದಾರಿಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಸುಸ್ಥಿರ ಸಮಾಜ ಅಭಿವೃದ್ಧಿಪಡಿಸಲು ವಿಶೇಷ ಉಪನ್ಯಾಸ, ಉಚಿತ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗುವುದು. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಗಂಗಯ್ಯ, ದಾವಣಗೆರೆ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಲೋಕೇಶ್, ಶಿಕ್ಷಕ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯೆ ಭೈರಮ್ಮ ಮಾಕನಹಳ್ಳಿ ಮಠದ ಗಂಗಾಧರ ಸ್ವಾಮಿ ಉಪಸ್ಥಿತರಿದ್ದರು.

ಬೇಸಿಗೆಗೆ ಮುನ್ನವೇ ನೀರಿನ ಸಭೆ ನಡೆಸಿದ ಜಿಲ್ಲಾಧಿಕಾರಿ

ತುಮಕೂರು: ಬೇಸಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ಹೋಬಳಿಗಳ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲೂಕು ತಹಶೀಲ್ದಾರರೊಂದಿಗೆ ವಿಡೀಯೋ ಸಂವಾದ ನಡೆಸಿ ಸೂಚನೆ ನೀಡಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಬಹುತೇಕ ಜಲಮೂಲಗಳು ಬತ್ತಿಹೋಗಿವೆ. ಹೀಗಾಗಿ ಜನರಿಗೆ ಕುಡಿಯವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಬೇಸಿಗೆ ಸಮೀಪಿಸಿರುವುದರಿಂದ ಸಮಸ್ಯೆ ಇರುವ ಕಡೆ ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ 2019ರ ಅಕ್ಟೋಬರ್ ನಲ್ಲಿ ಜಿಲ್ಲೆಯ ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು ಹಾಗೂ ತುರುವೇಕೆರೆ ಸೇರಿದಂತೆ 7 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಸದರಿ ತಾಲ್ಲೂಕುಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ಮಾರ್ಗಸೂಚಿಯ ಪ್ರಕಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬರಪೀಡಿತ ತಾಲ್ಲೂಕುಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಟಾಸ್ಕ್‍ಪೋರ್ಸ್ ಸಮಿತಿ ಸಭೆ ನಡೆಸಬೇಕು. ನಂತರ ಸಭೆಯ ನಡಾವಳಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿ ಅನುಮೋದನೆ ಪಡೆದು ಸಿ.ಆರ್.ಎಫ್. ನಿಧಿಯಲ್ಲಿರುವ ಅನುದಾನವನ್ನು ಭರಿಸಿ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು.

ಉಳಿದ ಶಿರಾ, ಚಿ.ನಾ.ಹಳ್ಳಿ ಹಾಗೂ ತಿಪಟೂರು ಸೇರಿದಂತೆ 3 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳ 14ನೇ ಹಣಕಾಸು ಯೋಜನೆಯಡಿ ಭರಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಬೇಕೆಂದು ತಿಳಿಸಿದರು.

ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೋಬಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು, ನಿಯೋಜಿತ ಅಧಿಕಾರಿಗಳು ನಿಗಧಿಪಡಿಸಿರುವ ಹೋಬಳಿಗಳಿಗೆ ಭೇಟಿ ನೀಡಿ ಟ್ಯಾಂಕರ್ ಮೂಲಕ ನೀರನ್ನು ಒದಗಿಸುತ್ತಿರುವುದನ್ನು ದೃಢಪಡಿಸಿಕೊಳ್ಳಬೇಕು.

ನೋಡಲ್ ಅಧಿಕಾರಿಗಳು ತಮ್ಮ ದೂರವಾಣಿ ಸಂಖ್ಯೆಯನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ ಪ್ರತಿ ಶುಕ್ರವಾರ ಜಿಲ್ಲಾ ಪಂಚಾಯಿತಿಗೆ ವರದಿಯನ್ನು ನೀಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಸಭೆಯನ್ನು ಏರ್ಪಡಿಸಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಭಾವ ಉಂಟಾಗುವ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು ಎಂದರು.

ಪ್ರತಿದಿನ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿರುವ ಮಾಹಿತಿಯನ್ನು ಛಾಯಾಚಿತ್ರದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‍ಗಳಲ್ಲಿ ಇಂಧೀಕರಿಸಬೇಕು. ಜಿಲ್ಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಅವರು ಸೂಚಿಸಿದರು.

80 ಲಕ್ಷ ಬಾಡಿಗೆ ವಸೂಲಿ ಮಾಡಿದ ಪಾಲಿಕೆ ಆಯುಕ್ತ !

Tumukuru: ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ 80 ಲಕ್ಷ ರೂಪಾಯಿ ಬಾಡಿಗೆ ಮತ್ತು ತೆರಿಗೆ ಹಣವನ್ನು ಸಂಗ್ರಹಿಸಿದ್ದಾರೆ.

ಇಂದು ಬೆಳಗ್ಗೆ ತುಮಕೂರು ಖಾಸಗಿ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ದಾಳಿ ಮಾಡಿದ ಆಯುಕ್ತರು ಬಾಕಿ ಉಳಿಸಿಕೊಂಡಿದ್ದವರಿಂದ ಬಾಡಿಗೆ ವಸೂಲಿ ಮಾಡಿದರು.

ಇದೇ ವೇಳೆ ಕಂದಾಯ ಮತ್ತು ನೀರಿನ ತೆರಿಗೆಯನ್ನೂ ಕೂಡ ವಸೂಲಿ ಮಾಡಿದ್ದಾರೆ.

B.Ed: ಜಯಸುಧಾಗೆ Rank

Sira: ಪಟ್ಟನಾಯಕನಹಳ್ಳಿ‌ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಜಯಸುಧಾ‌ ಗೋಪಾಲ‌ಭಟ್ ರವರು ಸಿರಾ ನಗರದ ಅರ್. ಮುದ್ದರಂಗೇಗೌಡ ಕಾಲೇಜಿನಿಂದ ಬಿ.ಇಡಿ.‌ಪದವಿಯಲ್ಲಿ ತುಮಕೂರು‌ ವಿಶ್ವವಿದ್ಯಾನಿಲಯಕ್ಕೆ‌ 4 ನೇ Rank ಪಡೆದು ಕಾಲೇಜಿಗೆ ಹಾಗೂ ಇಲಾಖೆಗೆ ಕೀರ್ತಿ ತಂದಿದ್ದಾರೆ.

ಅವರ ಈ ಸಾಧನೆ‌ಗೆ ಕಾಲೇಜು ಪ್ರಾಂಶುಪಾಲರಾದ ವಿಜಯಲಕ್ಷ್ಮೀ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೀಗಲಹಳ್ಳಿ ವೀರೇಂದ್ರ, ಸತ್ಯಸಾಯಿ ಟ್ರಸ್ಟ್ ನ ಅಧ್ಯಕ್ಷ ಸತ್ಯನಾರಾಯಣ್, ಉಪನ್ಯಾಸಕರಾದ ಐ.ಎಂ. ಮೆಣಸಗಿ, ಆಯ್ತಾರ ಲಿಂಗಪ್ಪ, ಶ್ರೀನಿವಾಸ್, ರವಿರಾಜ್, ಎ.ಎಸ್.ಪೂಜಾರಿ, ಅನಂತರಾಜು, ನಾಗರಾಜು ಹಾಗೂ ಕಾಲೇಜು ಸಿಬ್ಬಂದಿ ಅಭಿನಂದಿಸಿದರು.