Friday, February 20, 2026
Google search engine
Home Blog Page 275

ನಿರ್ದೇಶಕರ ಆಯ್ಕೆ

ಮಧುಗಿರಿ: ಟೌನ್ ಪತ್ತಿನ ಹಾಗೂ ಗ್ರಾಹಕರ ಸಂಘಕ್ಕೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಸ್ಥಾನಕ್ಕೆ 32 ಮಂದಿ ನಾಮ ಪತ್ರ ಸಲ್ಲಿಸಿದ್ದರು. ಕೆಲವರು ನಾಮಪತ್ರ ವಾಪಸ್ಸು ಪಡೆದಿದ್ದರಿಂದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. 

ನಿರ್ದೇಶಕರಾಗಿ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ತಿಮ್ಮರಾಜು, ಎಂ.ಪಿ.ರಾಧೇಶ್ಯಾಮ್, ಎಂ.ರಂಗನಾಥ್ ಬಾಬು, ಎಂ.ವಿ.ರುದ್ರಾರಾಧ್ಯ, ಎಂ.ಶ್ರೀಧರ್, ಆರ್.ಸುರೇಶ್, ಸಿ.ಜಯಮ್ಮ, ಎಂ.ಜಿ.ರೇಖಾ, ಎಸ್.ಪದ್ಮನಾಭ ರಾಜು, ಎಂ.ಜಿ.ಸುದರ್ಶನ್ ಕುಮಾರ್  ಹಾಗೂ ಎಂ.ವೆಂಕಟಪತಿ ಆಯ್ಕೆಯಾದರು.

ಪುರಸಭಾ ಸದಸ್ಯ ಹಾಗೂ ನಿರ್ದೇಶಕ ಎಂ.ಆರ್.ಜಗನ್ನಾಥ್ ಮಾತನಾಡಿ, ಈ ಪತ್ತಿನ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದೆ. ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಿರ್ದೇಶಕ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಹಲವರು ನಾಮಪತ್ರವನ್ನು ವಾಪಸ್ಸು ಪಡೆದು ಸಹಕಾರ ನೀಡಿದ್ದಾರೆ. ಅವರಿಗೂ ಹಾಗೂ ಮತದಾರರಿಗೂ ಅಭಿನಂದನೆ ಸಲ್ಲಿಸಿದರು. 

LIC ಖಾಸಗೀಕರಣ ಮಾಡುತ್ತಿಲ್ಲ, ಷೇರು ಮಾರಾಟ ಅಷ್ಟೇ

ತುಮಕೂರು: ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಣಗೊಳಿಸುತ್ತಾರೆ ಎಂಬ ಸುಳ್ಳು ವದಂತಿ ಸಾರ್ವಜನಿಕರಲ್ಲಿ ಹರಿದಾಡುತ್ತಿದ್ದು ಇದು ತಪ್ಪು ಮಾಹಿತಿಯಾಗಿದೆ. ಎಲ್‍ಐಸಿ ಖಾಸಗೀಕರಣವಿಲ್ಲ ಎಂದು ಬೆಂಗಳೂರು ಭಾರತೀಯ ಜೀವ ವಿಮಾ ನಿಗಮದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಆಶೀಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿತ್ತ ಸಚಿವರು ಎಲ್‍ಐಸಿಯ 100ರಷ್ಟು ಷೇರುಗಳಲ್ಲಿ ಶೇ. 10ರಷ್ಟು ಷೇರುಗಳನ್ನು ಆಸಕ್ತರಿಗೆ ಮಾರಾಟ ಮಾಡುತ್ತದೆ ಎಂದು ಹೇಳಿದ್ದಾರಷ್ಟೇ. ಆದರೆ ಖಾಸಗೀಕರಣದ ಬಗ್ಗೆ ಸಚಿವರು ಮಾತನಾಡಿರುವುದಿಲ್ಲ ಎಂದರು.

ಭಾರತೀಯ ಜೀವ ವಿಮಾ ನಿಗಮ ಬೆಂಗಳೂರು ವಿಭಾಗ 1ರ ವ್ಯಾಪ್ತಿಯಲ್ಲಿ 20 ಶಾಖೆಗಳು ಮತ್ತು 10 ಉಪಶಾಖೆಯನ್ನು ಹೊಂದಿದ್ದು, ಪ್ರಸಕ್ತ ವರ್ಷದ ಈವರೆಗೂ 148703 ಪಾಲಿಸಿಗಳನ್ನು ಪೂರ್ಣಗೊಳಿಸಿ 518.10 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣವನ್ನು ಸಂಗ್ರಹಿಸಿರುತ್ತದೆ.

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಖೆಗಳಿಂದ 51878 ಪಾಲಿಸಿಗಳನ್ನು ಪೂರ್ಣಗೊಳಿಸಿ 72.44 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣವನ್ನು ಸಂಗ್ರಹಿಸಿರುತ್ತದೆ. ಕಳೆದ ವರ್ಷ ಭಾರತೀಯ ಜೀವ ವಿಮಾ ನಿಗಮ 53 ಸಾವಿರ ಕೋಟಿ ಲಾಭ ಗಳಿಸಿದ್ದು, ಅದರಲ್ಲಿ ಶೇ. 95ರಷ್ಟು ಲಾಭವನ್ನು ನಿಗಮದ ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ವಿತರಿಸಲಾಗಿದೆ.

ನಿಗಮವು ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಶೇ. 5ರಷ್ಟು ಅಂದರೆ 2600 ಕೋಟಿ ರೂ. ಲಾಭದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಚೆಕ್ ಮೂಲಕ ನೀಡಲಾಗಿದೆ ಎಂದು ಅವರು ಹೇಳಿದರು.

ನಿಗಮದಿಂದ ಸರ್ವೈವಲ್ ಬೆನಿಫಿಟ್ 79649 ಪಾಲಿಸಿಗಳ 349.80ಕೋಟಿ ರೂ. ಪಾಲಿಸಿದಾರರಿಗೆ ಸಂದಾಯ ಮಾಡಲಾಗಿದೆ, 66503 ಮೆಚ್ಯುರಿಟಿ ದಾವೆಯಲ್ಲಿ 718.30ಕೋಟಿ ಪಾಲಿಸಿದಾರರಿಗೆ ಸಂದಾಯ ಮಾಡಲಾಗಿದೆ. 5850 ಮರಣ ದಾವೆಯಲ್ಲಿ 106.14 ಕೋಟಿ ಪಾಲಿಸಿಯ ನಾಮಿನಿಗೆ ಹಣ ಸಂದಾಯ ಮಾಡಲಾಗಿದೆ ಎಂದರು.

ಭಾರತೀಯ ಜೀವ ವಿಮಾ ನಿಗಮವು 30 ಕೋಟಿಗೂ ಹೆಚ್ಚಿನ ಪಾಲಿಸಿದಾರರನ್ನು ಹೊಂದಿರುವ ಕೇಂದ್ರ ಸರ್ಕಾರ ಸ್ವಾಮ್ಯದ ಬಹುದೊಡ್ಡ ಸಂಸ್ಥೆಯಾಗಿದ್ದು, ಇದರಲ್ಲಿ 1179229 ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದು, 108684 ಉದ್ಯೋಗಿಗಳು ಕ್ಷಮತೆ ಹಾಗೂ ದಕ್ಷತೆಯಿಂದ ಪಾಲಿಸಿದಾರರ ಹಿತಾಸಕ್ತಿ ಹಾಗೂ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ನಿಗಮವು 311184,728 ಕೋಟಿಯಷ್ಟು ಮೌಲ್ಯದ ಸ್ವತ್ತನ್ನು ಹೊಂದಿದ್ದು, 2828320.12 ಕೋಟಿ ಮೊತ್ತದ ಲೈಫ್ ಫಂಡ್ ಹೊಂದಿರುವ ಸದೃಢ ಸಂಸ್ಥೆಯಾಗಿದೆ ಎಂದರು.

ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದಿಂದ ನೀಡುವ ಹಣದಲ್ಲಿ ಸಾಮಾಜಿಕ ಕಳಕಳಿ ದೃಷ್ಠಿಯಿಂದ ಕುಡಿಯುವ ನೀರು, ವಿದ್ಯುತ್, ರಸ್ತೆ, ರೈಲ್ವೆ ಹಾಗೂ ಗೃಹ ನಿರ್ಮಾಣದಂತಹ ಸಾರ್ವಜನಿಕ ಯೋಜನೆಗಳಲ್ಲಿ ಗರಿಷ್ಠ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಇದರಿಂದ ಸಾರ್ವಜನಿಕ ಹಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ರುಜುವಾತು ಮಾಡಿದೆ. ಕಳೆದ 63 ವರ್ಷಗಳಿಂದ ಜನರ ವಿಶ್ವಾಸ ಗಳಿಸಿರುವ ಭಾರತೀಯ ಜೀವ ವಿಮಾ ನಿಗಮವು ಭೂಮಿಯ ಮೇಲೆ ಜನರಿರುವವರೆಗೂ ಶಾಶ್ವತವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಖೋ ಖೋ ಆಟಗಾರ್ತಿ ಈಶ್ವರಮ್ಮ ಇನ್ನಿಲ್ಲ

Publicstory. in


ತುಮಕೂರು: ರಾಷ್ಟೀಯ ಮಟ್ಟದ ಖೋ ಖೋ ರಾಷ್ಟ್ರಮಟ್ಟದ ಆಟಗಾರ್ತಿ ಎಂ.ಡಿ.ಈಶ್ಬರಮ್ಮ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.

ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಮೃತರು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಕಲೇಶಪುರದ ಹಾಡ್ಯ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ. ಮೃತರು ತುಮಕೂರು ಉತ್ತರ ಜಿಲ್ಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಡಿ.ಅನಿಲ್ ಕುಮಾರ್ ಅವರ ಅಕ್ಕ.

ತುಮಕೂರು ವಿವಿ ಘಟಿಕೋತ್ಸವ: ಚಿನ್ನದ ಪದಕ ಮುಡಿಗೇರಿಸಿಕೊಂಡು ಸಂಭ್ರಮಿಸಿದರು…

ತುಮಕೂರು ತಾಲ್ಲೂಕಿನ ಬಳ್ಳಗೆರೆಯ ಬಿ.ಜಿ.ಗೀತಾಂಜಲಿ ಅವರು ಬಿಬಿಎಂ ಪದವಿಯಲ್ಲಿ ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ಇವರು ತುಮಕೂರು ಸಿದ್ಧಾರ್ಥ ಕಾಲೇಜಿನ ವಿದ್ಯಾರ್ಥಿನಿ. ಪ್ರಸ್ತುತ sit college student in MBA

Picture: Jp

Publicstory. in


Tumkuru: ದೇಶದ ಅಭಿವೃದ್ಧಿ ಮತ್ತು ಭವ್ಯ ಪರಂಪರೆ ಯುವ ಜನಾಂಗದ ಕೈಯಲ್ಲಿದ್ದು, ಇರುವ ಅಪರಿಮಿತ ಅವಕಾಶಗಳನ್ನು ಬಳಸಿಕೊಂಡು 21ನೇ ಶತಮಾನದ ಆರ್ಥಿಕತೆಯ ಉತ್ತುಂಗದ ದಾರಿಯಲ್ಲಿ ಸಾಗಬೇಕು ಎಂದು ವಿಶ್ವವಿದ್ಯಾಲಯಗಳ ಸಂಘ ಅಧ್ಯಕ್ಷ ಮಾಣಿಕ್ ರಾವ್ ಸಾಲುಂಖೆ ತಿಳಿಸಿದರು.

ಅವರು ಇಂದು ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದರು. ಅವಿಷ್ಕಾರ, ನಾವಿನ್ಯತೆ, ವಾಣಿಜ್ಯೋದ್ಯಮದ ಬಾಗಿಲುಗಳು ತೆರೆದು ನಿರುದ್ಯೋಗದಂತಹ ಸಮಸ್ಯೆಗಳನ್ನು ಹೋಗಲಾಡಿಸಬೇಕು ಎಂದರು.

ರಾಜ್ಯಪಾಲರು ವಾಜುಭಾಯಿ ವಾಲಾ 13ನೇ ಘಟಿಕೋತ್ಸವ ಸಮಾಭರಂದಲ್ಲಿ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣಪದಕ, ಪ್ರಮಾಣಪತ್ರ, ನಗದು ಬಹುಮಾನ ನೀಡಿದರು.

ಇದೇ ಸಂದರ್ಭದಲ್ಲಿ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಡಾ. ಸಿ.ಎನ್ ಮಂಚೇಗೌಡ ಅವರಿಗೆ ರಾಜ್ಯ ಪಾಲರು ಡಿ.ಲಿಟ್ ಪದವಿ ನೀಡಿದರು.

ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎನ್.ಸಿದ್ಧೇಗೌಡ ಪ್ರಾಸ್ತಾವಿಕ ನಾತನಾಡಿ ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆ, ವಿಶ್ವವಿದ್ಯಾನಿಲಯದ ಮಹತ್ವ, ಶೈಕ್ಷಣಿಕ ವಿವರ, ವಿಶ್ವವಿದ್ಯಾನಿಲಯದಲ್ಲಿರುವ ಕೋರ್ಸ್ಗಳು ಮತ್ತು ಅವುಗಳ ಸೌಲಭ್ಯಗಳು, ಆಡಳಿತ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿರಾದ ಪ್ರೊ. ಕೆ.ಜೆ.ಸುರೇಶ್, ಪ್ರೊ. ಗಂಗಾನಾಯ್ಕ್, ಜಿಲ್ಲಾಧಿಕಾರಿ ಡಾ. ರಾಕೇಶ್ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿಕೃಷ್ಣ ಉಪಸ್ಥಿತರಿದ್ದರು.

Tumkur V.V: ಘಟಿಕೋತ್ಸವಕ್ಕೆ ಕ್ಷಣಗಣನೆಯ ಚಿತ್ರಸಂತೆ

ತುಮಕೂರು: ಕರ್ನಾಟಕದ ಕುರಿಯನ್ ಎಂದೇ ಖ್ಯಾತಿ ಗಳಿಸಿರುವ ಮಂಚೇಗೌಡರಿಗೆ ತುಮಕೂರು ಗೌರವ ಡಾಕ್ಟರೇಟ್‌ ನೀಡುತ್ತಿರುವ ಈ ಘಟಿಕೋತ್ಸವ ಜಿಲ್ಲೆಯ ಜನರ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಸಮಾರಂಭ ಆರಂಭವಾಗಲಿದೆ.

ಕುಲಪತಿ ಡಾ‌. ಸಿದ್ದೇಗೌಡ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು ದೊಡ್ಡ ಸಂಖ್ಯೆಯಲ್ಲಿ ಪಿಎಚ್ ಡಿ ಪದವಿ ಪ್ರಧಾನ, ರಾಂಕ್ ಪಡೆದ ವಿದ್ಯಾರ್ಥಿಗಳಿಗೆಚಿನ್ನದ ಪದಕಗಳ ವಿತರಣೆ ನಡೆಯಲಿದೆ. ಘಟಿಕೋತ್ಸವ ನಡೆಯುವ ಶಿವಕುಮಾರ ಸ್ವಾಮೀಜಿ ಸಭಾಂಗಣ ಅಲಂಕೃತಗೊಂಡಿದೆ.

ಊರುಕೆರೆಯಲ್ಲಿ ರೌಡಿಗಳ ಆರ್ಭಟ

Tumukuru: ಪ್ರಶ್ನಿಸಿದನೆಂಬ ಕ್ಷುಲ್ಲಕ ಕಾರಣಕ್ಕೆ ರೌಡಿಗಳ ಗುಂಪೊಂದು ಮೂವರು ನಾಗರಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಹೊರವಲಯದ ಊರುಕೆರೆ ಗ್ರಾಮದಲ್ಲಿ ನಡೆದಿದೆ.

ಊರುಕೆರೆ ಗ್ರಾಮದಲ್ಲಿ ಕೃಷ್ಣಪ್ಪ ಕಾರು ಹಿಂದಕ್ಕೆ ತೆಗೆಯುತ್ತಿದ್ದಾಗ ರಾಜಣ್ಣನವರಿಗೆ ತಗುಲಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕೃಷ್ಣಪ್ಪ ಮತ್ತು ಆತನ ಬೆಂಬಲಿಗರು ಹಾಡಹಗಲೇ ಲಾಂಗು, ಮಚ್ಚುಗಳನ್ನು ಹಿಡಿದು ಊರಲ್ಲೆಲ್ಲ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ.

ಕೃಷ್ಣಪ್ಪ, ಮಂಜುನಾಥ್, ಜಗದೀಶ್, ಅಕ್ಷಯ್, ಪುರುಷೋತ್ತಮ್ ಮತ್ತು ರಘು ತಮ್ಮ ಕೈಗಳಲ್ಲಿ ಮಚ್ಚು ಲಾಂಗುಗಳನ್ನು ಹಿಡಿದು ರಾಜಣ್ಣನೂ ಸೇರಿ ಜೊತೆಯಲ್ಲಿದ್ದವರನ್ನು ಮನಬಂದಂತೆ ಲಾಂಗುಗಳಿಂದ ಕೊಚ್ಚಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಸುನಿಲ್, ಪುಟ್ಟನರಸಮ್ಮ, ರಂಗಣ್ಣ ತೀವ್ರ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಟ್ಟಹಾಸದಿಂದ ಇಡೀ ಗ್ರಾಮ ಭೀತಗೊಂಡಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಧಾನಿಯನ್ನು ಹೊಗಳಿದ ಟ್ರಂಪ್

ಪಬ್ಲಿಕ್ ಸ್ಟೋರಿ: ಪ್ರಧಾನ ಮಂತ್ರಿ ನರೇಂದ್ರಮೋದಿ ಶ್ರಮಜೀವಿ ಎಂದು  ಅಮೆರಿಕದ ಅಧ್ಯಕ್ಷ ಟ್ರಂಪ್  ಹೊಗಳಿದ್ದಾರೆ.

ಭಾರತ ಭೇಟಿಯಲ್ಲಿರುವ ಅವರು ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಮಾತನಾಡಿ, ‘ನರೇಂದ್ರ ಮೋದಿ ಅವರು ಕೇವಲ ಗುಜರಾತ್‌ ರಾಜ್ಯಕ್ಕಷ್ಟೇ ಸೀಮಿತರಲ್ಲ. ಅವರು ಶ್ರಮಜೀವಿ,  ಭಾರತವನ್ನು  ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ’ ಎಂದು ಹೊಗಳಿದ್ದಾರೆ.

ಭಾರತದ ಭೇಟಿಯಿಂದ ಸಂತೋಷವಾಗಿ ಈ ಭೇಟಿಯನ್ನು  ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ. ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿದ್ದಾರೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಎಲ್ಲರೂ ನಮ್ಮನ್ನು ಪ್ರೀತಿಸುವಂತೆ ಜೀವಿಸುವುದು ತುಂಬಾ ಕಷ್ಟ’ ಎಂದೂ ಟ್ರಂಪ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತದೊಂದಿಗೆ ಅಮೆರಿಕ ವಿಶೇಷ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಅಮೇರಿಕಾ ಅಧ್ಯಕ್ಷ ಹೇಳಿದ್ದಾರೆ.

FEB. 27ರಿಂದ ಇತಿಹಾಸ ಪ್ರಸಿದ್ಧ ಹಳ್ಳದ ಮಾರಿಕಾಂಬ ದೇವಿ ಪ್ರತಿಷ್ಠಾಪನೆ: ಗೌರಿಗದ್ದೆ ವಿನಯ್ ಗುರೂಜಿ ಆಗಮನ

Publicstory. in


ತುಮಕೂರು: ತುಮಕೂರು ತಾಲ್ಲೂಕಿನ ಚಿಕ್ಕದೊಡ್ಡವಾಡಿಯಲ್ಲಿರುವ ಹಳ್ಳದ ಮಾರಿಕಾಂಬ ದೇವಿ ಮತ್ತು ನಾಗದೇವತಾ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಫೆ. 27 ಮತ್ತು ಫೆ.28ರಂದು ಗ್ರಾಮದಲ್ಲಿ ನೂತನವಾಗಿ ಕಟ್ಟಿರುವ ದೇವಸ್ಥಾನದಲ್ಲಿ ನಡೆಯಲಿದೆ.

ಹಳ್ಳದ ಮಾರಿಕಾಂಬ ದೇವಿಯು ಇತಿಹಾಸ ಪ್ರಸಿದ್ಧವಾಗಿದ್ದು, ಗಂಗರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿದೆ ಎಂಬ ಇಲ್ಲಿನ ಜನರು ನಂಬುತ್ತಾರೆ. ಇದನ್ನು ಜೈನರು ಪೂಜಿಸಿಕೊಂಡು ಬರುತ್ತಿದ್ದರು. ಕಾಲಾನಂತರ ದೇವಸ್ಥಾನ ಬಿದ್ದುಹೋಗಿ ಬಯಲಿನಲ್ಲಿ ದೇವರ ಪೂಜೆ ನಡೆಯುತ್ತಿತ್ತು.

ಕೆಲ ವರ್ಷಗಳ ಹಿಂದೆ ಗ್ರಾಮದ ನಾಗರಾಜ್ ಎಂಬುವರು ಹೊಲ ಹೂಡುವಾಗ ಗುದ್ದಲಿ ತಾಗಿಸಿ ದೇವರ ಮೂರ್ತಿಗೆ ಪೆಟ್ಟು ಮಾಡಿದ್ದರು. ಇದಾದ ಮರು ದಿನದಿಂದಲೇ ಅವರಿಗೆ ಎರಡೂ ಕಣ್ಣುಗಳು ಕಾಣದಾದವು. ಆಸ್ಪತ್ರೆಯಲ್ಲಾ ಸುತ್ತಾಡಿದರೂ ಪ್ರಯೋಜನ ಇಲ್ಲವಾಗಿತ್ತು.

ಒಂದು ದಿನ ಏಕಾಏಕಿ ಅಮ್ಮನ ಕನಸಿನಲ್ಲಿ ದೇವರು ಬಂದು ದೇವಸ್ಥಾನ ಕಟ್ಟಿಸುವಂತೆ ಅಪ್ಪಣೆಯಾಯಿತು. ಅದಾದ ಬಳಿಕ ದೇವರಿಗೆ ಹರಕೆ ಕಟ್ಟಿದ 20 ದಿನಗಳಲ್ಲೇ ಅಣ್ಣನಿಗೆ ಕಣ್ಣು ಬಂದವು. ಈಗ ದೇವಸ್ಥಾನ ಕಟ್ಟಿಸಲಾಗಿದೆ ಎಂದು ನಾಗರಾಜ್ ಅವರ ಸಹೋದರ ಎಂ.ನಾರಾಯಣ್ ಹೇಳುತ್ತಾರೆ.

ಕಣ್ಣು ಕಳೆದುಕೊಂಡಿದ್ದ ನಾಗರಾಜ್

ಪ್ರಖ್ಯಾತ ಅವಧೂತರಾದ ಗೌರಿಗದ್ದೆಯ ವಿನಯ್ ಗುರೂಜಿ ಅವರು ದೇವಸ್ಥಾನದ ಪ್ರತಿಷ್ಠಾಪನೆಗೆ ಬರುತ್ತಿರುವುದು ಊರಿನ ಗ್ರಾಮಸ್ಥರಲ್ಲದೇ ಈ ಭಾಗದ ಜನರಲ್ಲಿ ಸಂಭ್ರಮ ತಂದಿದೆ.

ವಿನಯ್ ಗುರೂಜಿ ಅವರು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗ್ರಾಮದ ನಾಲ್ಕುಮಂದಿ ಕಡುಬಡವರನ್ನು ಸ್ವತಃ ಅವರೇ ಖರ್ಚಿನಲ್ಲೇ ಸನ್ಮಾನ ಮಾಡುವುದಾಗಿ ಹೇಳಿರುವುದು ಮತ್ತೂ ಖುಷಿ ತಂದಿದೆ ಎನ್ನುತ್ತಾರೆ ನಾರಾಯಣ್.

ಕಾರ್ಯಕ್ರಮದ ಮೊದಲ ದಿನ ಬೆಳಿಗ್ಗೆ 8ಕ್ಕೆ ಶಿಲ್ಪ ಪೂಜೆ, ಸಾಮೂಹಿಕ ಪೂಜೆ ಹಾಗೂ ಮಹಾಗಣಪತಿ ಹೋಮ ನಡೆಯಲಿದೆ. ಎರಡನೇ ದಿನ ಶುಕ್ರವಾರ ಬೆಳಿಗ್ಗೆ 8ಕ್ಕೆ ಬ್ರಹ್ಮಕಳಸ, ಚಂಡಿಕಾ ಹೋಮ, ನಾಗದೇವತಾ ಅಶ್ಲೇಷಾ ಬಲಿ ಹೋಮ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳ ನೇತೃತ್ವವನ್ನು ವಿನಯ್ ಗುರೂಜಿ ವಹಿಸುವರು.

ಕಾರ್ಯಕ್ರಮದ ನಂತರ ಭಕ್ತರಿಗೆ ಅನ್ನ ಪ್ರಸಾದ ನಡೆಯಲಿದೆ. ಭಕ್ತರು ವಿಶೇಷ ಪೂಜೆ ಸಲ್ಲಿಸಲು ಸಹ ಅವಕಾಶ ಕೊಡಲಾಗಿದೆ ಎಂದು ಎಂ,ನಾರಾಯಣ್ ತಿಳಿಸಿದರು. ಸಾಸಲುಗುಂಟೆ, ಹಾಲುಗೊಂಡನಹಳ್ಳಿ, ಹಿರೇದೊಡ್ಡವಾಡಿ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಟೋಲ್ ನಿರ್ಮಿಸಿದ್ರೆ‌ ಹೋರಾಟ ಮಾಡ್ತೀವಿ‌ ಉಷಾರ್…

ತುಮಕೂರು:


ಮಳವಳ್ಳಿ-ಪಾವಗಡ, ರಾಯದುರ್ಗ ರಾಜ್ಯ ಹೆದ್ದಾರಿಗೆ ಸುಂಕ ವಸೂಲಾತಿ ಕೇಂದ್ರ (ಟೋಲ್) ನಿರ್ಮಾಣ ಮಾಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ತುಮಕುರು-ಮಧುಗಿರಿ ರಸ್ತೆಯ ನಡುವೆ ಓಬಳಾಪುರ ಹಾಗೂ ಪೆಮ್ಮೇದೇವರಹಳ್ಳಿ ಬಳಿ ಎರಡು ಕಡೆಗಳಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಗುತ್ತಿಗೆ ನೀಡಿದೆ.

ಬರಗಾಲದಿಂದ ತತ್ತರಿಸುತ್ತಿರುವ ಈ ಭಾಗದ ಗ್ರಾಮೀಣ ಜನರ‌ ಬದುಕಿಗೆ ಟೋಲ್ ನಿರ್ಮಾಣ ಮತ್ತೊಂದು‌ ಬರೆಯಾಗಿದೆ. ಯಾವುದೇ ಮುನ್ಸೂಚನೆ ಹಾಗೂ ಸರ್ವೀಸ್ ರೋಡ್ ನಿರ್ಮಾಣ ಮಾಡದೇ ಏಕಾಏಕಿ ಟೋಲ್ ನಿರ್ಮಿಸುವ ಮೂಲಕ ಈ ಭಾಗದಲ್ಲಿ ದಿನ ನಿತ್ಯ ಓಡಾಡುವ ಜನರ ಆರ್ಥಿಕ ಬದುಕಿಗೆ ಕತ್ತರಿಯಾಕಲು ಸರ್ಕಾರ ಮುಂದಾಗಿದೆ.


ಟೋಲ್ ನಿರ್ಮಾಣ ರದ್ದು ಪಡಿಸದಿದ್ದರೆ ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕಿನಾದ್ಯಂತ ಕನ್ನಡ ಪರ ಸಂಘನಟೆಗಳು ಹಾಗೂ ಸಾರ್ವಜನಿಕರಿಂದ ಉಗ್ರ ಹೋರಾಟ ಹಾಗೂ ಬಂದ್ ಮಾಡುವುದಾಗಿ ಪ್ರತಿಭಟನಾ ನಿರತರು ಕಾರ್ಯಕರ್ತರು ಎಚ್ಚರಿಸಿದರು.


ಸಾರ್ವಜನಿಕರು ನ್ಯಾಯ ಕೇಳಲು ಹೋದರೆ ಅವರ ವಿರುದ್ಧವೇ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಟೋಲ್ ನಿರ್ಮಾಣದ ವಿರುದ್ಧ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಪೊಲೀಸ್ ಇಲಾಖೆಯ ಅನುಮತಿ ಕೋರಲು ಹೋದರೆ ಅನುಮತಿ ನೀಡುವುದಿಲ್ಲ ಎಂದು ಹೇಳಿ ಕಳಿಸುತ್ತಾರೆ.

ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಾವು ಖಂಡಿಸುವುದೇ ತಪ್ಪಾಗಿದೆ. ಹಾಗಾದರೆ ಜನಸಾಮಾನ್ಯರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಸರ್ಕಾರ ಟೋಲ್ ನಿರ್ಮಾಣ ಕೈಬಿಡದೇ ಇದ್ದರೆ ಉಗ್ರ ಹೋರಾಟದ ಹಾದಿ ಇಡಿಯಬೇಕಾಗುತ್ತದೆ ಎಂದು ಕಾರ್ಯಕರ್ತರು ಎಚ್ಚರಿಸಿದರು.

ಅನುದಾನ ಬಳಸಿಕೊಳ್ಳಿ

ತುಮಕೂರು: 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸೇರಿದಂತೆ ಜಿಲ್ಲೆಯಲ್ಲಿ 34 ಇಲಾಖೆಗಳ ಮೂಲಕ ಕೈಗೊಳ್ಳಲಿರುವ ಪ್ರಸ್ತಾಪಿತ ಕಾರ್ಯಕ್ರಮಗಳು/ ಯೋಜನೆಗಳಿಗೆ ಅಗತ್ಯವಿರುವ 395504.50 ಲಕ್ಷ ರೂ.ಗಳ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು.

ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ 2020-21ನೇ ಸಾಲಿನಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ/ ಯೋಜನೆಗಳು ಹಾಗೂ ಕೈಗೊಂಡಿರುವ ಯೋಜನೆಗಳ ಸಂಪೂರ್ಣ ಅನುಷ್ಟಾನಕ್ಕಾಗಿ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕ್ಷೇತ್ರ ನೀರು ನಿರ್ವಹಣೆಯ ಕಾರ್ಯಕ್ರಮದಡಿ ತುಂತುರು ನೀರಾವರಿ ಘಟಕಗಳ ವಿತರಣೆಗೆ 2019-20ನೇ ಸಾಲಿನಲ್ಲಿ 1044.87 ಲಕ್ಷ ರೂ. ಆಯವ್ಯಯ ನೀಡಿದ್ದು, 515.97 ಲಕ್ಷ ರೂ. ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ 1600 ಲಕ್ಷ ರೂ.ಗಳ ಅಗತ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಮ್ಮ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಅನುದಾನದ ಕುರಿತು ಸಭೆಯಲ್ಲಿ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತುಂತುರು ನೀರಾವರಿಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಈ ಬಗ್ಗೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕು.

ಇಲ್ಲದಿದ್ದಲ್ಲಿ ಅನುದಾನ ಸಂಪೂರ್ಣವಾಗಿ ಸದ್ಭಳಕೆಯಾಗುವುದಿಲ್ಲ. ಕಳೆದ ಬಾರಿ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡದೆ, 2020-21ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ಕೋರಿದರೆ, ಅದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಅವರು ತಿಳಿಸಿದರು.