ದೊಡ್ಡ ಬಳ್ಳಾಪುರ ಹತ್ತಿರದ ಹೊಸಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಖಾಸಗಿ ಬಸ್ ಹಾಗೂ ಕೆ. ಎಸ್.ಆರ್.ಟಿ.ಸಿ ಬಸ್ ಓವರ್ ಟೇಕ್ ಮಾಡಲು ಹೊದ ಸಂದರ್ಭದಲ್ಲಿ ಬೈಕಿನಲ್ಲಿ ಹೀಗುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.
ಬಡಪಾಯಿ ಮಿತ್ರನನ್ನು ಒಂದು ಗಂಟೆ ಕಾಲ ಅರಣ್ಯ ಸಚಿವರನ್ನಾಗಿ ಮಾಡಿದ್ದ ಚನ್ನಿಗಪ್ಪ!
ಗರಗದೊಡ್ಡಿ ನಟರಾಜ್
ತುಮಕೂರು: ನೆನಪುಗಳು ಉಮ್ಮಳಿಸಿದಾಗ.. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದಾಗ ಮಾಜಿ ಶಾಸಕ ಸಿ.ಚೆನ್ನಿಗಪ್ಪ ಅವರ ನಿಧನದ ವಾರ್ತೆ ನೋಡಿದೆ.
ಬಹುಶಃ ನಾನು ನಂಬೋಕೆ ಆಗಲಿಲ್ಲ. ಯಾಕೆಂದರೆ ನಾನು ಒಬ್ಬ ಪತ್ರಕರ್ತನಾಗಿ ಸುಮಾರು 25 ವರ್ಷ ಅವರ ಒಡನಾಡಿಯಾಗಿದ್ದವನು.ಅವರ ಬದುಕಿನ ನರ ನಾಡಿಮಿಡಿತವನ್ನು ನಾನು ಬಲ್ಲೆ.
ರಾಜಕೀಯವನ್ನು ಹೊರತು ಪಡಿಸಿದರೆ ಇವರು ಮಹಾನ್ ಸಾಧಕರು. ಸಾಧಿತ ವ್ಯಕ್ತಿಗಳು ಸತ್ತರೆ ಅವರು ಇತಿಹಾಸದಲ್ಲಿ ಅಮರ ರಾಗುತ್ತಾರೆ. ಅಂತಹ ವ್ಯಕ್ತಿತ್ವ ಚೆನಿಗಪ್ಪ ಅವರದ್ದು. ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಂತೆ ವರ್ಣರಂಜಿತ ಬದುಕನ್ನು ನಡೆಸಿದ ಧೀರೋದ್ದಾತ..
ಆ ಮನುಷ್ಯ ಬದುಕನ್ನು ಕಟ್ಟಿ ಕೊಂಡ ಪರಿ, ರಾಜಕೀಯ ಜಂಜಾಟದಲ್ಲಿ ಹೋರಾಟದ ಪರಿಯನ್ನು ನೋಡಿದರೆ ಬಹುಶಃ ಇಂದಿನ ಯಾವ ರಾಜಕಾರಣಿಗಳು ಕೂಡ ಆ ರೀತಿಯ ಬದುಕನ್ನು ನಡೆಸಲು ಸಾಧ್ಯವೇ ಇಲ್ಲ.
ಸಾಮಾಜಿಕ ವ್ಯವಸ್ಥೆಯಲ್ಲಿ ಅವರ ಬದುಕನ್ನು ಗಮನಿಸಿದ್ರೆ ಅವರ ಮನೋಧರ್ಮವನ್ನು ಎಂತಾ ಶತ್ರುಗಳು ಕೂಡ ಹಾಡಿಹೋಗಳುತ್ತಿದ್ದರು. ಹಾಗೆಯೇ ಭಯದಿಂದ ಒಳಗೊಳಗೇ ಬೇಯುತ್ತಿದ್ದರು.
ನೋಂದವರು ಮನೆ ಬಾಗಿಲಿಗೆ ಹೋದರೆ ಅವರಿಗೆ ಮೊದಲು ಊಟದ ವ್ಯವಸ್ಥೆ. ಅನಂತರ ಸಮಸ್ಯೆ ಪರಿಹಾರ, ತದನಂತರ ಬಸ್ಸು ಚಾರ್ಜ್ ಗೆ ಹಣ ನೀಡುತ್ತಿದ್ದ ಧರ್ಮಿಷ್ಠ.. ನನ್ನ ಅವರ ಒಡನಾಟದಲ್ಲಿ ಬರೀ ತುಂಟಾಟಗಳೇ ಜಾಸ್ತಿ. ನನ್ನನ್ನು ಯಾವಾಗಲೂ ಜಂಗ್ಲಿ ಎಂದೇ ಕರೆಯುತ್ತಿದ್ದರು.
ಒಮ್ಮೆ ಅವರು ಅರಣ್ಯ ಸಚಿವರಾಗಿದ್ದಾಗ ನನ್ನ ಪಕ್ಕದೂರಿಗೆ ಸಸಿ ನೆಡಲು ಬಂದ್ದಿದ್ದರು.. ಊಟದ ವೇಳೆಗೆ ನಾನು ಜಂಗ್ಲಿ ಮನೆಗೆ ಹೋಗಬೇಕು ನಡಿ ರಲೇ..ಎಂದಿದ್ದಾರೆ. ಆಗ ಸೆಕ್ಯೂರಿಟಿ ಗಳು ಗೊತ್ತಾಗದೆ ತಬ್ಬಿಬ್ಬಿಬ್ಬು ಆಗಿದ್ದಾರೆ. ಅವರು ಸುಮ್ಮನೆ ನಿಂತಿದ್ದನ್ನು ನೋಡಿ ಎಲ್ಲರನ್ನು ಗದರಿಸಿ ಜಂಗ್ಲಿ ಯಾರು ಅಂತಾ ಗೊತ್ತಿಲ್ಲದ ಮೇಲೆ ನೀವ್ಯಾರೂ ಕೆಲಸಕ್ಕೆ ಲಾಯಕ್ ಅಲ್ಲ ಎಂದು ಅಬ್ಬರಿಸಿದ್ದಾರೆ. ಈ ಪರಿಯಾಗಿ ಅವರು ನನ್ನನ್ನು ಪ್ರೀತಿಸುತ್ತಿದ್ದರು..
ಇದೇ ಸಮಯದಲ್ಲಿ ಇನ್ನೊಂದು ಘಟನೆ ನಿಮ್ಮ ಮುಂದೆ ಹೇಳ್ತೇನೆ. ಒಮ್ಮೆ ವಿಧಾನಸೌಧಕ್ಕೆ ಹೋಗಿದ್ದೆ. ಅವರ ಭೇಟಿ ಸಮಯದಲ್ಲಿ ನೀವು ಸಚಿವರಾಗಿದ್ದೀರಿ, ಇದು ನನ್ನಂತ ಬಡಪಾಯಿಗೆ ಸಾಧ್ಯವೇ ಎಂದು ಕಿಚಾಯಿಸಿದೆ. ಆ ತಕ್ಷಣ ಅವರು ಒಂದು ಘಂಟೆ ಕಾಲ ನನ್ನನ್ನು ಸಚಿವರನ್ನಾಗಿ ಮಾಡಿ ಅರ್ಧ ಬೆಂಗಳೂರನ್ನು ಝೀರೋ ಟ್ರಾಫಿಕ್ ಮಾಡಿ ಸೆಕ್ಯೂರಿಟಿ ಯೊಂದಿಗೆ ಅವರ ಕಾರಿನಲ್ಲಿ ಒಬ್ಬನನ್ನೇ ಕೂರಿಸಿ ಓಡಾಡಿಸಿದ್ರು. ಆಗ ನನಗಾದ ಅನುಭವ ಅನಂತ.
ಇಂತ ನಿಸ್ವಾರ್ಥಮಯಿ ಗುಣ ಯಾರಿಗಿದೆ. ಮಾತೃಮಯಿ ಗುಣದ ಏಕೈಕ ನಾಯಕ ಅಂದ್ರೆ ನಮ್ಮ ಚೆನ್ನಿಗಪ್ಪ. ದೊಡ್ಡವರಲ್ಲಿ ದೊಡ್ಡವರಾಗಿ..ಚಿಕ್ಕವರಲ್ಲಿ ಚಿಕ್ಕವರಾಗಿ…ನೊಂದವರಲ್ಲಿ ನೊಂದಿತನಾಗಿ..ದೀನದಲಿತರ ರಲ್ಲಿ ದಮನಿ ತಾನಾಗಿ .. ಜೀವನ ಸಾಗಿಸಿದ ಅಭಿನವ ಬಸಣ್ಣ ಅಂದ್ರೆ ನಮ್ಮ ಚೆನ್ನಿಗಪ್ಪ.
ಅದರಲ್ಲೂ ನಮ್ಮ ತಾಲ್ಲೂಕಿನ ಜನತೆಗೆ ಸದಾ ಕರೆಯುವ ಕಾಮಧೇನು. ಬೇಡಿದ್ದನ್ನು ತಕ್ಷಣವೇ ತಥಾಸ್ತು ಎನ್ನುವ ದೇವಮಾನವ. ಸದಾ ಹಸನ್ಮುಖಿಯಾಗಿ ನೊಂದ ಜನರ ಆಶಾಕಿರಣ ವಾಗಿದ್ದ ಚೆನ್ನಿಗಪ್ಪ ಇಂದು ನನ್ನನ್ನು ಬಿಟ್ಟುಹೋಗಿದ್ದಾರೆ ಎಂದರೆ ನಂಬೋಕೆ ಸಾಧ್ಯ ಆಗ್ತಾಯಿಲ್ಲ.
ಲೇಖನ ಬರೆಯುತ್ತ ಕಣ್ಣಲ್ಲಿ ನೀರು ತುಂಬಿದೆ..ಆ ಧೀರೋದ್ದಾತನ ಗುಣಗಳ ನೆನಪುಗಳು ಉಮ್ಮಳಿಸಿ ಬರುತ್ತಿವೆ..ಮತ್ತೆ ಹುಟ್ಟಿ ಬಾ ಎಂದು ಎಲ್ಲರೂ ಹಾರಿಸೋಣವೇ…
ಲೇಖಕರು ಹಿರಿಯ ಪತ್ರಕರ್ತರು

ಹ್ಯಾಟ್ರಿಕ್ ರಾಜಕಾರಣಿ ಸಿ.ಚನ್ನಿಗಪ್ಪ ಇನ್ನು ನೆನಪು ಮಾತ್ರ..
ತುಮಕೂರು:
ಸಾಧಾರಣ ಪೊಲೀಸ್ ಹುದ್ದೆಯಲ್ಲಿದ್ದ ವ್ಯಕ್ತಿ ರಾಜಕೀಯ ಗೀಳಿನಿಂದ ವೃತ್ತಿಗೆ ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧೆಗಿಳಿದು ಮೂರು ಭಾರಿ ಶಾಸಕರಾಗಿ, ಸಚಿವರಾಗಿ ಆಯ್ಕೆಯಾಗಿ ಇಡೀ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಹ್ಯಾಟ್ರಿಕ್ ರಾಜಕಾರಣಿ ಸಿ. ಚನ್ನಿಗಪ್ಪ ಇನ್ನು ನೆನಪು ಮಾತ್ರ.
ದೀರ್ಘ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶಿವರಾತ್ರಿ ಹಬ್ಬದಂದೇ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಮೂರು ಬಾರಿ ಸ್ಪರ್ಧೆ ಮಾಡಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಚನ್ನಿಗಪ್ಪ ಅವರು ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ತಮ್ಮ ವಿಶಿಷ್ಟಿವಾದ ಮಾತಿನ ಶೈಲಿಯಿಂದಲೇ ಇಡೀ ರಾಜ್ಯದ ಗಮನ ಸೆಳೆದಿದ್ದ ಅವರು ಕೊರಟಗೆರೆ ಮನೆ ಮಗ ಎಂದೇ ಸದಾ ಹೇಳಿಕೊಳ್ಳುತ್ತಿದ್ದರು. ಅದರಂತೆ ಕೊರಟಗೆರೆ ಕ್ಷೇತ್ರದಿಂದ ಯಾರೇ ಅವರ ಮನೆಗೆ ಹೋದರೂ ಬರಿಗೈಯಿಂದ ಕಳುಹಿಸುತ್ತಿರಲಿಲ್ಲ ಎಂದು ಕ್ಷೇತ್ರದ ಅನೇಕರು ಇಂದಿಗೂ ಅಭಿಪ್ರಾಯ ಪಡುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ಮಜರೆ ಗ್ರಾಮ ದೊಡ್ಡಹುಚ್ಚಯ್ಯನಪಾಳ್ಯದ ಕೃಷಿಕರಾದ ಚಿನ್ನಮ್ಮ, ಚನ್ನರಾಯಪ್ಪ ಅವರ ಎರಡನೇ ಪುತ್ರರಾಗಿ ಸಿ. ಚನ್ನಿಗಪ್ಪ ಜನಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ ಬಿಎ, ಬಿಇಡಿ ಪದವಿಯನ್ನು ಮಾಡಿದರು.
ಆನಂತರ ಉದ್ಯೋಗ ಅರಸಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸಕ್ಕೆ ಸೇರಿಕೊಂಡು ಬಹಳ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು.
ನಂತರ ಪೊಲೀಸ್ ಪೇದೆ ಕೆಲಸಕ್ಕೆ ರಾಜಿನಾಮೆ ನೀಡಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದ ಅವರು ಕೆಲವೇ ವರ್ಷಗಳಲ್ಲಿ ದೊಡ್ಡ ಕೈಗಾರಿಕೋಧ್ಯಮಿಯಾಗಿ ಹೊರಹೊಮ್ಮಿದರು.

ದೊಡ್ಡಗೌಡರ ದತ್ತು ಪುತ್ರನಂತಿದ್ದ ಚನ್ನಿಗಪ್ಪ…
ವಕ್ಕಲಿಗ ಸಮುದಾಯಕ್ಕೆ ಸೇರಿದ ಅವರು ರಾಜಕೀಯದ ಹುಚ್ಚು ಹತ್ತಿಸಿಕೊಂಡು ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರೊಂದಿಗೆ ನಿಕಟ ಸಂಪರ್ಕ ಬೆಳಿಸಿಕೊಂಡರು.
ದೇವೇಗೌಡ ಕುಟುಂಬದೊಂದಿಗೆ ಕೆಲವೇ ದಿನಗಳಲ್ಲಿ ಆಪ್ತತತೆ ಬೆಳೆಸಿಕೊಂಡು ಮನೆ ಮಗನಂತೆ ಗುರುತಿಸಿಕೊಂಡರು.
ಆನಂತರದ ದಿನಗಳಲ್ಲಿ 1993ರಲ್ಲಿ ಮೊದಲ ಬಾರಿಗೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯದ ಪರೀಕ್ಷೆಗೆ ಮುನ್ನುಡಿ ಬರೆದರು.
ಮೊದಲ ಬಾರಿಗೆ ಜೆಡಿಎಸ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜಿ.ವೆಂಕಟಾಚಲಯ್ಯ ವಿರುದ್ಧ ಜಯ ಸಾಧಿಸಿ ಮೊದಲ ಭಾರಿಗೆ ಶಾಸಕರಾಗಿ ಆಯ್ಕೆಯಾದರು.
ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವುದರೊಂದಿಗೆ ಜಿಲ್ಲೆಯಾದ್ಯಂತ ಗುರುತಿಸಕೊಳ್ಳತೊಡಗಿದರು. 1998ರಲ್ಲಿ 2ನೇ ಬಾರಿಗೆ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ವೀರಭದ್ರಯ್ಯ ಅವರ ವಿರುದ್ಧ ಮತ್ತೆ ಶಾಸಕರಾಗಿ ಆಯ್ಕೆಯಾದರು.
ಹ್ಯಾಟ್ರಿಕ್ ಗೆಲುವು ಸಾಧಿಸಿ ಸಚಿವರಾದರು…
ಮೂರನೇ ಬಾರಿಗೆ 2003ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀಸೆ ರಂಗಸ್ವಾಮಿ ವಿರುದ್ಧ ಮೂರನೇ ಭಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ರೇಷ್ಮೆ ಖಾತೆ ಸಚಿವರಾಗಿ ಆಯ್ಕೆಯಾದರು.
ಆನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದು ಬಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅರಣ್ಯ, ಅಬಕಾರಿ, ಪರಿಸರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿಯೂ ಕೆಲಸ ನಿರ್ವಹಿಸಿದರು. ಇದೇ ವೇಳೆ ತಮ್ಮ ಹುಟ್ಟೂರಾದ ಬೈರನಾಯ್ಕನಹಳ್ಳಿ ಬಳಿ ಡಾ. ಶಿವಕುಮಾರ ಮಹಾಸ್ವಾಮಿ ಅವರ ಹೆಸರಿನಲ್ಲಿ ಡಿಪ್ಲೊಮಾ, ಇಂಜಿನಿಯರ್ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದರು.
2008ರಲ್ಲಿ ಕ್ಷೇತ್ರ ಮರು ವಿಂಗಡೆಯಾಗಿ ಕೊರಟಗೆರೆ ಮೀಸಲು ಕ್ಷೇತ್ರವಾಗಿ ಬದಲಾದಾಗ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ನರಸಿಂಹಸ್ವಾಮಿ ವಿರುದ್ಧ ಪರಾಭವಗೊಂಡರು. ಇದೇ ವೇಳೆ ಮಧುಗಿರಿ ಸಾಮಾನ್ಯ ಕ್ಷೇತ್ರದಲ್ಲಿ ಚನ್ನಿಗಪ್ಪ ಅವರ ಎರಡನೇ ಪುತ್ರ ಡಿ.ಸಿ.ಗೌರಿಶಂಕರ್ ಅವರು ಜೆಡಿಎಸ್ ನಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು.
ಈ ವೇಳೆ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಬಹುಮತ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ, ಜೆಡಿಎಸ್ ಸಮಿಶ್ರ ಸರ್ಕಾರ ಇದ್ದ ವೇಳೆ ಸಚಿವರಾಗಿದ್ದ ಸಿ.ಚನ್ನಿಗಪ್ಪ ಅವರು ಮಾಡಿದ್ದರು ಎನ್ನಲಾದ ರೂ. 150 ಕೋಟಿ ಅಕ್ರಮ ಗಣಿ ಹಗರಣ ಬೆನ್ನಿಗಂಟಿಕೊಂಡು ಹೊಗೆಯಾಡತೊಡಗಿತು.
ಈ ವೇಳೆ ಆಪರೇಷನ್ ಕಮಲಕ್ಕೆ ಬಲಿಯಾಗಿ ಚುನಾವಣೆ ನಡೆದ ಆರೇ ತಿಂಗಳಲ್ಲಿ ಮಗ ಶಾಸಕ ಗೌರಿಶಂಕರ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಯಾದಾಗ ಚನ್ನಿಗಪ್ಪ ಕೂಡ ಬಿಜೆಪಿ ಸೇರ್ಪಡೆಯಾದರು.

ಮಧುಗಿರಿಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಂಡು ಮತ್ತೆ ಜೆಡಿಎಸ್ ಸೇರಿದರು...
ಆ ನಂತರ ನಡೆದ ಉಪಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜೆಡಿಎಸ್ ನ ಅನಿತಾಕುಮಾರಸ್ವಾಮಿ ವಿರುದ್ಧ ಸೋಲುಂಡರು. 2013 ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಸೇರ್ಪಡೆಗೊಂಡ ಚನ್ನಿಗಪ್ಪ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮತ್ತೆ ಕಣಕ್ಕಿಳಿದು ಕಾಂಗ್ರೆಸ್ ನ ವೆಂಕಟರಾಮು ವಿರುದ್ಧ ಸೋಲುಂಡರು. ಇದೇ ವೇಳೆ ಜೆಡಿಎಸ್ ತುಮಕೂರು ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಜಯ ಸಾಧಿಸಿ ಶಾಸಕ, ಸಚಿವರಾದ ಚನ್ನಿಗಪ್ಪ ಪಟ್ಟಣ ಸೇರಿದಂತೆ 18 ಹಳ್ಳಿಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ ನಿರೀಕ್ಷಣಾ ಮಂದಿರ ಹಾಗೂ ಅನೇಕ ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಮೇಲ್ದರ್ಜೆಗೆ ಏರಿಸಿದರು.
ತಾಲ್ಲೂಕಿನ ಗಡಿಭಾಗದವಾದ ಬೊಮ್ಮಲದೇವಿಪುರ, ಐ.ಕೆ. ಕಾಲೋನಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗೊಡ್ರಹಳ್ಳಿಯ ಬಿಸಿಎಂ ವಿದ್ಯಾರ್ಥಿ ನಿಲಯ, ದಾಸರಹಳ್ಳಿ, ಕೋಡ್ಲಹಳ್ಳಿ ಕಟ್ಟೆಬಾರೆ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು ಕಟ್ಟಡ, ಸಮುದಾಯ ಭವನಗಳು ಅವರ ಆಡಳಿತಾವಧಿಯಲ್ಲಿ ನಿರ್ಮಾಣವಾದವು.
ತಾಲ್ಲೂಕಿನ ಬಹುಬೇಡಿಕೆಯಾಗಿದ್ದ ಹೇಮಾವತಿ ಕುಡಿಯುವ ನೀರು ಯೋಜನೆ ಚನ್ನಿಗಪ್ಪ ಅವರ ಕಾಲದಲ್ಲಿ ಆದ ಮಹತ್ತರ ಯೋಜನೆಯಾಗಿದೆ.
ಪತ್ನಿ ಸಿದ್ದಗಂಗಮ್ಮ, ಶಾಸಕ ಡಿ.ಸಿ.ಗೌರಿಶಂಕರ್, ಕೈಗಾರಿಕೋದ್ಯಮಿ ಡಿ.ಸಿ.ಅರುಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಡಾ. ಶಿವಕುಮಾರ ಮಹಾಸ್ವಾಮಿ ವಿದ್ಯಾಲಯದ ಕಾರ್ಯದರ್ಶಿ ಡಿ.ಸಿ.ವೇಣುಗೋಪಾಲ ಸೇರಿದಂತೆ ಮೂರು ಜನ ಗಂಡು ಮಕ್ಕಳು ಹಾಗೂ ನಾಗರತ್ನ ಓರ್ವ ಪುತ್ರಿ ಇದ್ದಾರೆ.
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿಯ ಪರಮ ಭಕ್ತ…
ಆಂಜನೇಯಸ್ವಾಮಿಯ ಪರಮ ಭಕ್ತರಾಗಿದ್ದ ಚನ್ನಿಗಪ್ಪ ರಥಸಪ್ತಮಿ ದಿನದಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಹಿನ್ನೆಯಲ್ಲಿ ತಾಲ್ಲೂಕಿನ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ರಥೋತ್ಸವದ ದಿನ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆಯನ್ನು ಪ್ರತೀ ವರ್ಷ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ತಾಲ್ಲೂಕಿನ ಯಾವುದೇ ಹಳ್ಳಿಯಿಂದ ಬಡಬಗ್ಗರು ಮದುವೆ, ಮುಂಜಿ ಎಂದು ಅವರ ಬಳಿ ಹೋದರೆ ಎಂದಿಗೂ ಯಾರನ್ನೂ ಬರಿಗೈಯಲ್ಲಿ ವಾಪಸ್ ಕಳಿಸಿಲ್ಲ. ಇಂದಿಗೂ ಕ್ಷೇತ್ರದ ಜನ ಯಾರೇ ಅವರ ಮನೆ ಹತ್ತಿರ ಹೋದರ ಊಟ, ತಿಂಡಿ ನೀಡದೆ ಕಳಿಸೋಲ್ಲ ಎಂದು ಕ್ಷೇತ್ರದ ಜನ ಅವರನ್ನು ಕೊಂಡಾಡುವರು.
ಮಾಜಿ ಸಚಿವ ಚನ್ನಿಗಪ್ಪ ಇನ್ನಿಲ್ಲ
Bengaluru: ಮಾಜಿ ಸಚಿವ ಸಿ. ಚನ್ನಿಗಪ್ಪ ನಿಧನರಾಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದರು.
ಮಾಜಿ ಸಚಿವ ಸಿ. ಚನ್ನಿಗಪ್ಪ ನಿಧನರಾಗಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕೆಲಸ ಮಾಡಿದ್ದರು.
ಮೀಸಲು ಕ್ಷೇತ್ರವಾಗುವ ಮೊದಲು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಮಹಾಶಿವರಾತ್ರಿ ದಿನವಾದ ಶುಕ್ರವಾರ ಬೆಳಗ್ಗೆ 8.20ಕ್ಕೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ಸಂಜೆ ನೆಲಮಂಗಲದ ಗೋವಿಂದರಾಜನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಸಿ.ಚನ್ನಿಗಪ್ಪ ಅವರು ಜಿಲ್ಲಾ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಸಿಪ್ಪೇಗೌಡರಿಗೆ ಶ್ರದ್ಧಾಂಜಲಿ
ತುಮಕೂರು: ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘದ ಮಾಜಿ ಅದ್ಯಕ್ಷರು,ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘದ ಅದ್ಯಕ್ಷರಾಗಿದ್ದ ಕೆ ಸಿಪ್ಪೆಗೌಡರಿಗೆ ಗುರುವಾರ ತುಮಕೂರು ಜಿಲ್ಲಾ ನೌಕರರ ಸಂಘದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ನರಸಿಂಹರಾಜು ಎನ್, ಪ್ರಧಾನ ಕಾರ್ಯದರ್ಶಿ ಜಗದೀಶ, ಉಪಾಧ್ಯಕ್ಷ ಹುಚ್ಚಪ್ಪ, ಇರ್ಫಾನ್ ಅಹ್ಮದ್,ಪದ್ಮರಾಜ್ ಡಿ, ಮತ್ತು ಲಕ್ಷ್ಮೀಪುತ್ರ ಹಾಜರಿದ್ದರು.
ವಿದ್ಯುತ್ ತಗುಲಿ ಕಾರ್ಮಿಕ ಸಾವು
Publicstory. in
Tumukuru: ಗ್ಯಾಸ್ ಪೈಪ್ ಲೈನ್ ಗಾಗಿ ಭೂಮಿ ಅಗೆಯಲು ಮುಂದಾಗುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ನಗರದಲ್ಲಿ ಗುರುವಾರ ನಡೆದಿದೆ.
ಬೆಳಗ್ಗೆ 11.30ರ ಸುಮಾರಿನಲ್ಲಿ ದೇವರಾಯಪಟ್ನದ ಶ್ರೀನಗರದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಪೈಪ್ ಲೈನ್ ಗೆ ಆಳವಾಗಿ ಗುಂಡಿ ತೆಗೆಯುವಂತೆ ಹೇಳಿ ಹೋಗಿದ್ದಾರೆ. ಕೂಲಿ ಕಾರ್ಮಿಕ ಮಂಜುನಾಥ್ ಹಾರೆ ತೆಗೆದುಕೊಂಡು ಭೂಮಿಗೆ ಹಾಕುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿದೆ.
ವಿದ್ಯುತ್ ಕಂಬದಿಂದ ನೆಲದಲ್ಲಿ ತ್ರಿಪೇಸ್ ಪೇಸ್ ವೈರ್ ಹಾಕಲಾಗಿತ್ತು. ಇದು ಗೊತ್ತಿಲ್ಲದ ಕೂಲಿ ಕಾರ್ಮಿಕ ಮಂಜುನಾಥ್ ಹಾರೆ ನೆಲದೊಳಕ್ಕೆ ಹಾಕುತ್ತಿದ್ದಂತೆಯೇ ನೆಲದಲ್ಲಿದ್ದ ವೈರ್ ನಿಂದ ವಿದ್ಯುತ್ ಹಾರೆಯ ಮೂಲಕ ಹರಿದು ಮಂಜುನಾಥ್ ಒದ್ದಾಡತೊಡಗಿದ್ದಾನೆ. ಕೂಡಲೇ ಆತನ ಮಾವ ಪಂಚೆ ಬಟ್ಟೆಯನ್ನು ಬಿಚ್ಚಿ ಬಿಡಿಸಲು ಪ್ರಯತ್ನಿಸಿದ್ದಾರೆ.
ಅವರಿಗೂ ವಿದ್ಯುತ್ ಸ್ವಲ್ಪ ಹರಿದಿದೆ. ಆದರೂ ಬಿಡದೆ ಅಳಿಯ ಮಂಜುನಾಥ್ ನನ್ನು ಬಿಡಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿಯೇ ಮೃತಪಟ್ಟಿದ್ದಾರೆ.
ಶ್ರೀನಗರದಲ್ಲೇ ಸುಮಾರು 100 ಕ್ಕೂ ಹೆಚ್ಚು ಮಂದಿ ಟೆಂಟ್ ಹಾಕಿಕೊಂಡು ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರು ಶಿರಾ ತಾಲೂಕು ಹುಯಿಲುದೊರೆಯವರು ಎಂದು ತಿಳಿದುಬಂದಿದೆ.
ಕೆಲಸ ಮಾಡಿಸುತ್ತಿದ್ದ ಇಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ. ಈ ಹಿನ್ನೆಲೆಯಲ್ಲಿ ದುರಂತಕ್ಕೆ ಕಾರಣರಾಗಿರುವ ಇಂಜಿನಿಯರ್ ಮತ್ತು ಗುತ್ತಿಗೆ ದಾರರನ್ನು ಬಂಧಿಸಬೇಕು. ಮೃತ ಮಂಜುನಾಥ್ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಸಿಐಟಿಯು ಮುಖಂಡ ಎನ್.ಕೆ.ಸುಬ್ರಮಣ್ಯ ಮತ್ತು ಪ್ರಗತಿಪರ ಸಂಘಟನೆಯ ಶ್ರೀಧರ್ ಒತ್ತಾಯಿಸಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದರೂ ರಾತ್ರಿ 8 ಗಂಟೆಯಾದರೂ ಪೊಲೀಸರು ಪ್ರಕರಣ ದಾಖಲಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಭುತ್ವದಿಂದ ಪ್ರಜಾಸತ್ತಾತ್ಮಕ ಮೌಲ್ಯದ ಮೇಲೆ ದಾಳಿ: ಆತಂಕ
Publicstory. in
Bengaluru: ಇಂದಿನ ಪ್ರಭುತ್ವ ಹೇರುತ್ತಿರುವ ನಿರ್ಬಂಧ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಚಿಂತಕಿ ಎನ್ ಗಾಯತ್ರಿ ಅಭಿಪ್ರಾಯಪಟ್ಟರು
ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ‘ಅವಧಿ ಲೈವ್’ ಕಾರ್ಯಕ್ರಮದಲ್ಲಿ ಎನ್ ಎಸ್ ಶಂಕರ್ ಅವರ ‘ಆಜಾದಿ ಕನ್ಹಯ್ಯ ದಲಿತ ದನಿ ಜಿಗ್ನೇಶ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಇಂದಿನ ದುರಿತ ಕಾಲದಲ್ಲಿ ಕನ್ಹಯ್ಯ ಹಾಗೂ ಜಿಗ್ನೇಶ್ ಭರವಸೆಯ ಕಿಡಿಗಳಾಗಿ ಹೊಮ್ಮಿದ್ದಾರೆ. ಅವರ ವಿಚಾರವಂತಿಕೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಭಾರತ ಕಮ್ಮ್ಯುನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಡಾ ಸಿದ್ಧನಗೌಡ ಪಾಟೀಲ್ ಅವರು ಮಾತನಾಡಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ತೀವ್ರವಾಗಿ ದಮನಿಸುತ್ತಿರುವ ಈ ಹೊತ್ತಿನಲ್ಲಿ ಕನ್ಹಯ್ಯ ಮತ್ತು ಜಿಗ್ನೇಶ್ ಹೋರಾಟವನ್ನು ಮುಂದಕ್ಕೊಯ್ಯುವ ರಿಲೇ ರೆಸ್ ನಲ್ಲಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ತೀವ್ರವಾದದ ಮೂರು ಧಾರೆಗಳಿದ್ದವು. ಈಗಿನ ತಲೆಮಾರಿನ ಹೋರಾಟಗಾರರು ಈ ಮೂರೂ ಧಾರೆಗಳನ್ನು ಒಗ್ಗೂಡಿಸಿ ಮುನ್ನಡೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಎನ್ ಎಸ್ ಶಂಕರ್, ‘ಅವಧಿ’ಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು
2nd PUC Exam: ಇಲ್ಲಿದೆ ಪರೀಕ್ಷಾ ವೇಳಾಪಟ್ಟಿ
Publicstory.in
2020ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ 2020ರ ಮಾರ್ಚ್ 4ರಿಂದ 23ರವರೆಗೆ ನಡೆಯಲಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.
ಮಾರ್ಚ್ 4ರಂದು ಬುಧವಾರ-ಇತಿಹಾಸ, ಫಿಜಿಕ್ಸ್, ಬೇಸಿಕ್ ಮ್ಯಾತ್ಸ್,
ಮಾರ್ಚ್ 5 ಗುರುವಾರ- ತಮಿಳ್, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್ ಮತ್ತು ಫ್ರೆಂಚ್ ಭಾಷೆ,
ಮಾರ್ಚ್ 6 ಶುಕ್ರವಾರ-ಕರ್ನಾಟಕ ಮ್ಯೂಸಿಕ್, ಹಿಂದೂಸ್ತಾನ್ ಮ್ಯೂಸಿಕ್, ಮಾರ್ಚ್-7 ಶನಿವಾರ-ಬಿಸಿನೆಸ್ ಸ್ಟಡೀಸ್, ಸೋಶಿಯಾಲಜಿ, ಕೆಮಿಸ್ಟ್ರೀ,
ಮಾರ್ಚ್ 9 ಸೋಮವಾರ-ಇನ್‍ಫಾರ್ಮೇಶನ್ ಟೆಕ್ನಾಲಜಿ, ರೀಟೇಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್,
ಮಾರ್ಚ್ 10 ಮಂಗಳವಾರ-ಉರ್ದು,
ಮಾರ್ಚ್ 11 ಬುಧವಾರ-ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮ್ಯಾಥಮೆಟಿಕ್ಸ್,
ಮಾರ್ಚ್ 12 ಗುರುವಾರ-ಜಿಯಾಗ್ರಫಿ,
ಮಾರ್ಚ್ 13 ಶುಕ್ರವಾರ-ಎಜುಕೇಶನ್,
ಮಾರ್ಚ್ 14 ಶನಿವಾರ-ಸೈಕಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್,
ಮಾರ್ಚ್ 16 ಸೋಮವಾರ-ಲಾಜಿಕ್, ಜಿಯಾಲಜಿ, ಹೋಂ ಸೈನ್ಸ್,
ಮಾರ್ಚ್ 17 ಮಂಗಳವಾರ- ಎಕನಾಮಿಕ್ಸ್, ಬಯಾಲಜಿ,
ಮಾರ್ಚ್ 18 ಬುಧವಾರ-ಹಿಂದಿ,
ಮಾರ್ಚ್ 19 ಗುರುವಾರ-ಕನ್ನಡ,
ಮಾರ್ಚ್ 20 ಶುಕ್ರವಾರ-ಸಂಸ್ಕತ,
ಮಾರ್ಚ್ 21 ಶನಿವಾರ ಪೊಲಿಟಿಕಲ್ ಸೈನ್ಸ್, ಸ್ಟಾಟಿಸ್ಟಿಕ್ಸ್,
ಮಾರ್ಚ್ 23 ಸೋಮವಾರ-ಇಂಗ್ಲೀಷ್ ಪರೀಕ್ಷೆ ನಡೆಯಲಿವೆ
ಡೋಲಕ್ ನುಡಿಸುತ್ತಿದ್ದ ಸೋ ಮು ಬಾಸ್ಕರಾಚಾರ್ ನೆನೆದ ಸಾಹಿತಿಗಳು
Publicstory. in
Tumukuru: ಬಂಡಾಯ ಸಾಹಿತಿ ಡಾ. ಸೋ.ಮು.ಭಾಸ್ಕರಚಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಒಡನಾಡಿಗಳು, ಸಹದ್ಯೋಗಿಗಳು ತುಮಕೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಬೆಳಗ್ಗೆಯೇ ವಾಟ್ಟಪ್, ಪೇಸ್ ಬುಕ್ ಗ್ರೂಪ್ ಗಳಲ್ಲಿ ಭಾಸ್ಕರಚಾರ್ ಸಾವಿನ ಸುದ್ದಿ ಹರಡಿತು. ಅಗಲಿದ ಸಾಹಿತಿಗೆ ಹಲವರು ಕಂಬನಿ ಮಿಡಿದಿದ್ದಾರೆ.

ಸಾಹಿತಿ ಎಲ್.ಎನ್. ಮುಕುಂದರಾಜ್ ತಮ್ಮ ಗುರುಗಳಾದ ಡಾ.ಸೋ.ಮು.ಭಾಸ್ಕರಾಚಾರ್ ಅಗಲಿದ್ದಾರೆ. ಅವರ ತರಗತಿಯಲ್ಲಿ ಪಾಠ ಮಾಡುತ್ತಿದ್ದ ರನ್ನನ ಗಧಾಯುದ್ದ ಈಗಲೂ ನನ್ನ ಕಿವಿಯಲ್ಲಿ ಜೀವಂತವಾಗಿದೆ ಎಂದು ಸ್ಮರಿಸಿಕೊಂಡಿದ್ದಾರೆ.
ಇಂದು ಮುಂಜಾನೆ ನಮ್ಮೆಲ್ಲರ ಆತ್ಮೀಯ ಒಡನಾಡಿಯಾಗಿದ್ದ ತುಮಕೂರಿನ ಸೋ ಮು ಭಾಸ್ಕರಾಚಾರ್ ನಿಧನರಾದ ಸುದ್ದಿಯನ್ನು ಮತ್ತೊಬ್ಬ ಆತ್ಮೀಯರಾದ ರೇವಣಸಿದ್ದಪ್ಪ ಅವರ ವಾಲ್ ನಲ್ಲಿ ನೋಡಿದೆ. ಅತ್ಯಂತ ಬೇಸರದ ವಿಷಯ. ನನ್ನ ತುಮಕೂರಿನ ಎಸ್ ವಿಜ್ಞಾನ ಚಳವಳಿಯಲ್ಲಿ ದುಡಿದಿರುವ ಈ.ಬಸವರಾಜು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಎಸ್.ಎಫ್.ಐ ದಿನಗಳಲ್ಲಿ ಅವರು ನಮ್ಮೊಂದಿಗಿದ್ದರು. ಎಲ್ಲೇ ಸಿಗಲಿ ಕಾಮ್ರೇಡ್ ಅನ್ನುತ್ತಿದ್ದರು. 1990 ರ ಭಾರತ ಜ್ಞಾನ ವಿಜ್ಞಾನ ಜಾಥಾದಲ್ಲಿ ಒಂದೂವರೆ ತಿಂಗಳು ಸತತ ಜೊತೆಗಿದ್ದರು. ಡೋಲಕ್ ನುಡಿಸುವುದು ಅವರ ಕೆಲಸವಾಗಿತ್ತು. ಅವರು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಚಿದಂಬರಯ್ಯನವರು ಹಾಗೂ ಇತರ ಸಂಗಾತಿಗಳು ಅಭಿನಂದಿಸಿ ಬಂದಿದ್ದೆವು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.
ವಿಜ್ಞಾನ ಚಳವಳಿಯಲ್ಲಿ ದುಡಿದಿರುವ ಈ.ಬಸವರಾಜು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಇಂದು ಮುಂಜಾನೆ ನಮ್ಮೆಲ್ಲರ ಆತ್ಮೀಯ ಒಡನಾಡಿಯಾಗಿದ್ದ ತುಮಕೂರಿನ ಸೋ ಮು ಭಾಸ್ಕರಾಚಾರ್ ನಿಧನರಾದ ಸುದ್ದಿಯನ್ನು ಮತ್ತೊಬ್ಬ ಆತ್ಮೀಯರಾದ ರೇವಣಸಿದ್ದಪ್ಪ ಅವರ ವಾಲ್ ನಲ್ಲಿ ನೋಡಿದೆ. ಅತ್ಯಂತ ಬೇಸರದ ವಿಷಯ ಎಂದಿದ್ದಾರೆ.
ಎಸ್.ಎಫ್.ಐ ದಿನಗಳಲ್ಲಿ ಅವರು ನಮ್ಮೊಂದಿಗಿದ್ದರು. ಎಲ್ಲೇ ಸಿಗಲಿ ಕಾಮ್ರೇಡ್ ಅನ್ನುತ್ತಿದ್ದರು. 1990 ರ ಭಾರತ ಜ್ಞಾನ ವಿಜ್ಞಾನ ಜಾಥಾದಲ್ಲಿ ಒಂದೂವರೆ ತಿಂಗಳು ಸತತ ಜೊತೆಗಿದ್ದರು. ಡೋಲಕ್ ನುಡಿಸುವುದು ಅವರ ಕೆಲಸವಾಗಿತ್ತು. ಅವರು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಚಿದಂಬರಯ್ಯನವರು ಹಾಗೂ ಇತರ ಸಂಗಾತಿಗಳು ಅಭಿನಂದಿಸಿ ಬಂದಿದ್ದೆವು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.
ತುಮಕೂರಿಗೆ ಬಂದ ಹೊಸತರಲ್ಲಿ ಪರಿಚಿತರಾದವರಲ್ಲಿ ಅವರೂ ಒಬ್ಬರು. ಸದಾ ಲವಲವಿಕೆಯ, ಹಸನ್ಮುಖದ ಭಾಸ್ಕಾರಾಚಾರ್ ವಿದ್ಯಾವಾಹಿನಿ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದರೂ ಅಷ್ಟೇ ಆಸಕ್ತಿಯಿಂದ ವಿಜ್ಞಾನವನ್ನು ಎದೆಗಪ್ಪಿಕೊಂಡವರು.
ಎಂಬತ್ತರ ದಶಕದಲ್ಲಿ ಸಾಹಿತಿಗಳ ಗುರುತಾಗಿದ್ದ ಬಗಲು ಚೀಲ ಅವರನ್ನೆಂದೂ ಬಿಟ್ಟಿರಲಿಲ್ಲ. ಸಾಹಿತ್ಯದ,ವಿಜ್ಞಾನದ ಕಾರ್ಯಕ್ರಮಗಳಿಗೆ ಅವರಿಗೆ ಆಮಂತ್ರಣ ಬೇಕಿರಲಿಲ್ಲ.ಅವರೊಬ್ಬ ಒಳ್ಳೆಯ ಕೇಳುಗ.ಇಷ್ಟವಾಗದ ಮಾತುಗಳನ್ನು ಆಡಿದರೂ ಜಗಳಾಡದ ಸಮಾಧಾನಿ.ಗುಂಪಿನಲ್ಲಿ ಗುರುತಿಸಿಕೊಳ್ಳದಿದ್ದರೂ ಪ್ರತಿಗಾಮಿಗಳ ಜೊತೆ ಸೇರಿದವರಲ್ಲ.
ಪುಸ್ತಕಗಳನ್ನು ಬರೆದೂ ಅವರು ಸಾಹಿತ್ಯದ ಪರಿಚಾರಕ;ವಿಜ್ಞಾನದ ಕಾರ್ಯಕ್ರಮಗಳಿಗೆ ಜೊತೆಯಾಗಿದ್ದರೂ ಅವರೊಬ್ಬ ಕುತೂಹಲಿ; ಸಾಹಿತ್ಯ ಪರಿಷತ್ತಿನಲ್ಲಿದ್ದೂ ಅವರೊಬ್ಬ ಸಕ್ರಿಯ ಸದಸ್ಯ.ಕ್ರಿಯಾಶೀಲತೆ ಇದ್ದರೂ ಅವರಿಗೆ ಪಡೆಯಬೇಕಾದ ಮಾನ್ಯತೆ ದೊರಕಲಿಲ್ಲ.
ತುಮಕೂರಿಗೆ ಬಂದಾಗ ನಗುಮುಖದಿಂದ ಮಾತಾಡಿಸುತ್ತಿದ್ದ, ಹೊಸದರ ಬಗ್ಗೆ ಸದಾ ತುಡಿಯುತ್ತಿದ್ದ ಭಾಸ್ಕರಾಚಾರ್ ಇನ್ನು ಮುಂದೆ ಕಾಣಿಸುವುದಿಲ್ಲ ಎನ್ನುವುದನ್ನು ಊಹಿಸಲಾರೆ ಎಂದು ಕವಿ ನಾಗರಾಜಶೆಟ್ಟಿ ಹೇಳಿದ್ದಾರೆ.
ಇದೇ ವೇಳೆ ಪ್ರಗತಿಪರ ಚಿಂತಕ ಕೆ.ದೊರೈರಾಜ್, ವಿಶ್ರಾಂತ ಪ್ರಾಂಶುಪಾಲ ಪ್ರೊ.ಜಿ.ಎಂ. ಶ್ರೀನಿವಾಸಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ ಸೇರಿದಂತೆ ಹಲವರು ಭೇಟಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಬಂಡಾಯಗಾರ ಸೋ ಮು ಭಾಸ್ಕರಾಚಾರ್ ಇನ್ನಿಲ್ಲ
Tumukuru: ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ, ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಕೆಲಸ ಮಾಡಿದ್ದ , ಡಾ. ಸೋ.ಮು.ಭಾಸ್ಕರಾಚಾರ್ ಬುಧವಾರ ರಾತ್ರಿ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಲವಾರು ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಜ್ಯದಲ್ಲಿ ಕನ್ನಡದ ನೆಲ, ಜಲಕ್ಕಾಗಿ ಕೂಡ ಹೋರಾಟ ನಡೆಸಿದ್ದರು.
ಭಾಸ್ಕರಾಚಾರ್ ಅವರು 1979ರಲ್ಲಿ ಕೆಜಿಐಡಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ನಂತರ ಸಿದ್ದಗಂಗಾ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ವಿದ್ಯಾವಾಹಿನಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಆನಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮೂರು ವರ್ಷ ಕೆಲಸ ನಿರ್ವಹಿಸಿ ಕನ್ನಡ ಚಟುವಟಿಕೆಗಳನ್ನು ಕೈಗೊಂಡಿದ್ದರು.
ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ್ದರು.
ವಿಶೇಷತೆ ಎಂದರೆ ಭಾಸ್ಕರಾಚಾರ್ ನಿವೃತ್ತಿಯಾಗುವ ಅಂಚಿನಲ್ಲಿ ಕನ್ನಡ ಸಾಹಿತ್ಯದಲ್ಲಿ ‘ತಾಯಿ’ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು. ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಬಿ.ಎಂ.ಪುಟ್ಟಯ್ಯ ಇವರಿಗೆ ಮಾರ್ಗದರ್ಶನ ನೀಡಿದ್ದರು.
Publicstory.in ಜೊತೆ ದೂರವಾಣಿಯಲ್ಲಿ ಮಾತನಾಡಿ ಸಾಹಿತಿ ಎನ್. ನಾಗಪ್ಪ, ಭಾಸ್ಕರಾಚಾರ್ ಉತ್ತಮ ವ್ಯಕ್ತಿತ್ವವುಳ್ಳವರಾಗಿದ್ದರು. ಒಳ್ಳೆಯ ಹಾಸ್ಯ ಪ್ರಜ್ಞೆ ಅವರಲ್ಲಿತ್ತು. ಜನಾನುರಾಗಿಯಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ನೀಡಿದ್ದರು. ಹೃದಯವಂತ ವ್ಯಕ್ತಿ. ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಭಾಸ್ಕರಾಚಾರ್ ಅವರು ಹೋರಾಟಗಾರ ಕೆ.ಆರ್.ನಾಯಕ್, ಪ್ರಬಂಧಕಾರ ಜಿ.ಎಚ್.ಸಣ್ಣಗುಡ್ಡಯ್ಯ ಅವರು ಸೇರಿದಂತೆ ಹಲವರ ಕುರಿತು ವ್ಯಕ್ತಿಚಿತ್ರಗಳು ಪುಸ್ತಕವನ್ನು ಬರೆದಿದ್ದಾರೆ. ಎರಡು ಕಾದಂಬರಿಗಳು, ಕವನ ಸಂಕಲನಗಳನ್ನು ಬರೆದಿದ್ದಾರೆ.
ಭಾಸ್ಕರಾಚಾರ್ ಇಬ್ಬರು ಮಕ್ಕಳು ಸೇರಿದಂತೆ ಹಲವು ಮಂದಿ ಅಭಿಮಾನಿಗಳು, ಸ್ನೇಹಿತರು, ಆತ್ಮೀಯರನ್ನು ಅಗಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
