Wednesday, February 25, 2026
Google search engine
Home Blog Page 279

Tumkur; ಒಂದು ಗಂಟೆ ಕಾಲ ಧಗಧಗನೇ ಉರಿದ ಬೆಂಕಿ

Tumukuru: ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ರೈಸ್ ಮಿಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಒಂದು ಗಂಟೆಗೂ ಹೆಚ್ಚು ಕಾಲ ದಗದಗನೆ ಹೊತ್ತಿ ಉರಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಲು ಕೋಡಿಹಳ್ಳಿ ಆಗ್ರಹ

Tumukuru: ತುಮಕೂರು ಜಿಲ್ಲೆಯ ಕೊಬ್ಬರಿಗೆ ಅದರಲ್ಲೂ ತಿನ್ನುವ ಕೊಬ್ಬರಿ ವಿಶ್ವದಲ್ಲೇ ಹೆಸರುವಾಸಿಯಾಗಿದ್ದು ಅದಕ್ಕೆ ಸೂಕ್ತ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಕಲ್ಪತರು ನಾಡಿನಲ್ಲಿ ಅತಿಹೆಚ್ಚು ತೆಂಗಿನ ಬೆಳೆ ಬೆಳೆಯಲಾಗುತ್ತಿದೆ. 1983ರಲ್ಲಿ ಇದ್ದ ಬೆಲೆಯೇ ಇಂದಿಗೂ ಇದೆ. ಬೆಲೆಯನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ ಎಂದು ಆರೋಪಿಸಿದರು.

ಕೊಬ್ಬರಿ ಹೆಚ್ಚಾಗಿ ಬೆಳೆದರೂ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಸಂಕಟ ಮತ್ತು ಕೊಬ್ಬರಿ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಸಚಿವರು, ಶಾಸಕರು ಕೂಡ ದನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊರ ದೇಶಗಳಿಂದ ಕೊಬ್ಬರಿ ಮತ್ತು ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಈಗ ಚೀನಾದಲ್ಲಿ ಕೊರೊನ ವೈರಸ್ ರೋಗ ಹರಡಿರುವುದರಿಂದ ಆಮದು ನಿಂತಿದೆ. ಇದರಿಂದ ದೇಶೀಯ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದೇ ವಾತಾವರಣ ಮುಂದುವರಿದರೆ ಒಳ್ಳೆಯದು. ಸರ್ಕಾರ ಈ ದಿಕ್ಕಿನಲ್ಲಿ ಯೋಚನೆ ಮಾಡಬೇಕು ಎಂದು ಆಗ್ರಹಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದು ವಿದೇಶಿ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ವಿದೇಶಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಈಗ ಅವಕಾಶ ಸಿಕ್ಕಿದೆ. ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

ಬಯಲಾಟದ ಭೀಮಣ್ಣನಲ್ಲಿ ಪ್ರಭುತ್ವದ ವಿರೋಧಿ ದನಿಗಳೇ ಹೆಚ್ಚು: ಬರಗೂರು

Publicstory. in


Tumukuru: ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸರ್ಕಾರ ಮಿನಿ ಥಿಯೇಟರ್ ಗಳನ್ನು ನಿರ್ಮಾಣ ಮಾಡಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.

ತುಮಕೂರಿನ ಬಾಲಭವನದಲ್ಲಿ ಸಮುದಾಯದತ್ತ ಸಿನಿಮಾ-ಚಿತ್ರಯಾತ್ರೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಲಾತ್ಮಕ ಚಿತ್ರಗಳನ್ನು ಜನರು ನೋಡಲು ಅನುಕೂಲವಾಗುವಂತೆ ಮಿನಿ ಚಿತ್ರಮಂದಿರಗಳನ್ನು ನಿರ್ಮಿಸಿದರೆ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಪ್ರಸಕ್ತ ಸನ್ನಿವೇಶದಲ್ಲಿ ಕವಿ, ಕಲಾವಿದನೊಬ್ಬ ಮಾತನಾಡುವುದೇ ಕಷ್ಟವಾಗಿದೆ. ಮಾತನಾಡುವಾಗ ತುಂಬಾ ಯೋಚಿಸಬೇಕಾದಂತಹ ಪರಿಸ್ಥಿತಿ ಇದೆ. ತನ್ನ ಅಭಿಪ್ರಾಯಗಳನ್ನು ಹೇಳಿದ್ದಕ್ಕಾಗಿಯೇ ದೇಶದ್ರೋಹದ ಪ್ರಕರಣಗಳನ್ನು ಎದುರಿಸಬೇಕಾಗಿದೆ. ಅಂಥಾದ್ದರಲ್ಲಿ ಬಯಲಾಟದ ಭೀಮಣ್ಣ ಸಿನಿಮಾದಲ್ಲೂ ಕೂಡ ಪ್ರಭುತ್ವದ ದನಿ ಹೆಚ್ಚಾಗಿದೆ. ಪ್ರಭುತ್ವವನ್ನು ಪ್ರಶ್ನಿಸುವ ಪಾತ್ರಗಳಿವೆ ಎಂದು ತಿಳಿಸಿದರು.

ಏಕವ್ಯಕ್ತಿ ಸಿನಿಮಾಗಳನ್ನು ಮಾಡಿದ ಜಗತ್ತಿ ಮೂವರು ನಿರ್ದೇಶಕರ ಪೈಕಿ ನಾನು ಸೇರಿದ್ದೇನೆ. ಏಕವ್ಯಕ್ತಿಯನ್ನಿಟ್ಟುಕೊಂಡು ಸಿನಿಮಾ ಮಾಡುವುದು ಸವಾಲಿನ ಕೆಲಸ. ಆ ಸಿನೆಮಾಕ್ಕೂ ಪ್ರಶಸ್ತಿ ಲಭಿಸಿತು ಎಂದು ಹೇಳಿದರು.

ವಿಶ್ರಾಂತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯ್, ಮೊದಲಾದವರು ಉಪಸ್ಥಿತರಿದ್ದರು.

ತುಮಕೂರಿನಲ್ಲೊಂದು ಕುದುರೆ ಸವಾರಿ ಮೋಡಿ!

Publicstory. in


ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಮಂಗಳೂರಿನ ಕಡಲ ತೀರಕ್ಕೆ ಹೋದರೆ ಅಲ್ಲಿ ಕುದುರೆ ಸವಾರಿ ಮಾಮೂಲಿ, ಸಮುದ್ರ ತಡದಲ್ಲಿ ಕುದುರೆ, ಒಂಟೆಗಳನ್ನು ಏರಿ ಒಂದು ಸುತ್ತು ಬಂದರೆ ಅದರ ಸುಖ, ಮಜವೇ ಬೇರೆ.

ತುಮಕೂರಿನಲ್ಲೊಂದು ಕುದುರೆ ಸವಾರಿಗೆ ಸ್ಥಳಗಳೇ ಇಲ್ಲ. ಮೈಸೂರಿನ ಕುಕ್ಕರಹಳ್ಳಿ ಕೆರೆ ನೋಡಿ ಬಂದವರೂ ನಮ್ಮೂರಲ್ಲೂ ಇಂಥದೊಂದು ಕೆರೆ ಇದ್ದರೆ ಎಂದು ಮನಸ್ಸಲ್ಲೇ ಮಂಡಿಗೆ ಮುರಿಯುತ್ತಾರೆ.

ಕುದುರೆ ನೋಡಿದರೂ ನಾವೂ ಒಮ್ಮೆ ಕುದುರೆ ಏರಿ ಬಂದರೆ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾರೆ. ತುಮಕೂರಿನ ಮುಸ್ಲಿಂ ಹುಡುಗರು ಅಂಥದೊಂದು ಅವಕಾಶವನ್ನು ತುಮಕೂರಿನ ಜನರಿಗೆ ಈ ಸಲ ಒದಗಿಸಿಕೊಟ್ಟಿದ್ದಾರೆ.

ಈ ಒಂದು ತಿಂಗಳ ಕುದುರೆ ಏರಿ ಸವಾರಿ ಹೋಗುವ ಕನಸನ್ನು ನನಸು ಮಾಡಿಕೊಳ್ಳಬೇಕೆಂಬುವವರು ಸೀದಾ ಸಿದ್ದಗಂಗೆಯ ಜಾತ್ರೆಗೇನೆ ಬರಬೇಕು. ಈ ಸಲ ಜಾತ್ರೆಯಲ್ಲಿ ಕುದುರೆ ಸವಾರಿಯ ಮೋಜು, ಖುಷಿಗೆ ಅವಕಾಶ ಮಾಡಿಕೊಡಲಾಗಿದೆ.

ಖಾದರ್ ಹೇಳುವ ಪ್ರಕಾರ, ಒಂದು ಸುತ್ತಿಗೆ 40 ರೂಪಾಯಿ., ದೊಡ್ಡವರಿಗಿಂತ ಮಕ್ಕಳೇ ಕುದುರೆ ಏರುವುದು ಹೆಚ್ಚು, ತಂದೆ ತಾಯಿಗಳು ಅವರಿಗಲ್ಲದಿದ್ದರೂ ಮಕ್ಕಳಿಗೆ ಖುಷಿ ತರಲೆಂದು ಕುದುರೆ ಸವಾರಿ ಮಾಡಿಸುತ್ತಾರೆ.

ಅಲಂಕಾರಿಕ ಕುದುರಿಗಳನ್ನು ನೋಡಿದರೆ ಒಮ್ಮೆ ಏರಿಯೇ ಬಿಡಬೇಕು ಎಂಬ ಮನಸ್ಸು ಎಲ್ಲರಿಗೂ ಒಂದೇ ಬರುತ್ತದೆ. ಅನಾದಿ ಕಾಲದಿಂದಲೂ ಸಾರಿಗೆ ವಾಹನವಾಗಿರುವ ಕುದುರೆ ಹಿಂದೆ ರಾಜ ಮಹಾರಾಜರು, ದಂಡನಾಯಕರ ಪ್ರೀತಿಗೆ ಪಾತ್ರವಾಗಿತ್ತು. ಈಗ ಕುದುರೆ ಸವಾರಿ ಬೆರಳಣಿಕೆಯ ಮಂದಿಗಷ್ಟೇ ಸೀಮಿತ. ಸುಮ್ಮನೇ ಒಮ್ಮೆ ಕುದುರೆ ಏರಿ ಬರೋಣ ಬನ್ನಿ ಸಿದ್ದಗಂಗೆಗೆ.

ತುಮಕೂರು ರೈತರ ಪರ ದನಿ ಎತ್ತಿದ ಜಗದೀಶ್ ಕೋಡಿಹಳ್ಳಿ

Publicstory. in


ತುಮಕೂರು: ತುಮಕೂರು ಜಿಲ್ಲೆಗೆ ಹೆಚ್ಚಿನ ಹಣಕಾಸು ಒದಗಿಸಬೇಕು. ನೀರಾವರಿ ಯೋಜನೆಗಳನ್ನು ಬೇಗನೇ ಮುಗಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ ದನಿಎತ್ತಿ ಮಾತನಾಡಿದರು.

ತುಮಕೂರು ಜಿಲ್ಲೆಯ ರೈತರ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಮುಂದಿನ ಅಯವ್ಯಯದಲ್ಲಿ ರೈತರ ಪರವಾಗಿ ಏನ್ನೆಲ್ಲ ಮಾಡಬೇಕು ಮತ್ತು ಏಕಾಗಿ ಮಾಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಾಗಿರುವ ಹೇಮಾವತಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಕಾಮಗಾರಿಗಳನ್ನು ತುರ್ತಾಗಿ ಮುಗಿಸುವಂತೆ ಹಾಗೂ ಕೂಡಲೇ ಅನುಷ್ಠಾನಗೊಳಿಸಲು ಬೇಕಾದ ಹಣವನ್ನು ಬಜೆಟ್ ನಲ್ಲಿ ಮೀಸಲಿಡಬೇಕು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಗ್ರಾಮಗಳಿಗೆ ವಾಟರ್ ಗ್ರಿಡ್ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸುವ ಪೈಲೆಟ್ ಪ್ರಾಜೆಕ್ಟ್ ಅನ್ನು ಸಿದ್ಧಪಡಿಸಿ ,ಸಮಗ್ರ ನೀರಾವರಿ ಯೋಜನೆಗೆ ಆದ್ಯತೆ ನೀಡಲು ಕ್ರಮವಹಿಸಬೇಕು ಎಂದು ಕೋರಿದ್ದಾರೆ.

ಯುವ ಪೀಳಿಗೆ ಕೃಷಿಯ ಬಗ್ಗೆ ನಿರಾಸಕ್ತಿತಾಳಲು ಸರ್ಕಾರದ ನೀತಿಗಳೇ ಕಾರಣ. ಕೃಷಿಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿಲ್ಲ. ಹೀಗಾಗಿ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಪ್ರಾದ್ಯಾನತೆ ನೀಡಬೇಕು. ತುಮಕೂರು ಜಿಲ್ಲೆಯಲ್ಲಿ ನೈಸರ್ಗಿಕ ಕೊಬ್ಬರಿ ಉತ್ಪಾದನೆ ಜಗತ್ತಿನಲ್ಲೇ ಮೊದಲಾಗಿದೆ. ಈ ಸಾಂಪ್ರದಾಯಿಕ ಪದ್ಧತಿಯನ್ನು ಕಾಪಾಡಲು ರೈತರು ಗೋದಾಮು ನಿರ್ಮಿಸಲು ಸಹಾಯಧನ ಪದ್ಧತಿ ಜಾರಿಗೆ ತರಬೇಕು. ಕೃಷಿ ಅನುವುಗಾರರಿಗೆ ವರ್ಷ ಪೂರಾ ಸಂಬಳ ನೀಡಬೇಕು. ರೈತರು ಮತ್ತು ಸರ್ಕಾರದ ಯೋಜನೆಗಳ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಇವರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ವಾಣಿಜ್ಯ ಬ್ಯಾಂಕ್ ಗಳು ರೈತರಿಗೆ ಕಿರುಕುಳ ನೀಡುತ್ತಿದ್ದು, ಈ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಬಡ್ಡಿಯನ್ನು ಸಹ ಮನ್ನಾ ಮಾಡಬೇಕು ಎಂದು ಹೇಳಿದ್ದಾರೆ. ಬೆಳೆ ಸಾಲ ಅಲ್ಲದೇ ಅಲ್ಪಾವಧಿ. ದೀರ್ಘಾವಧಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಬ್ಬಬ್ಬಾ! ಈ ಮಕ್ಕಳ ಆಹಾರ ಕಂಡ ಶಾಸಕರು ಹೇಳಿದ್ದೇನು?

Publicstory. in


Turuvekere; ಪಟ್ಟಣ ಸಮೀಪದ ಹಾವಾಳದಲ್ಲಿರುವ ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕು ಎಂ.ಎಸ್.ಪಿ.ಸಿ ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಶಾಸಕ ಮಸಾಲಜಯರಾಮ್ ಶನಿವಾರ ದಿಢೀರ್ ಭೇಟಿ ನೀಡಿ ಕಳಪೆ ಗುಣಮಟ್ಟದ ಆಹಾರ ಪಾಕೀಟು ತಯಾರು ಮಾಡುತ್ತಿರುವ ಬಗ್ಗೆಅಲ್ಲಿನ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕಿನ ಶಿಶು ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿತರಣೆಯಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿರುತ್ತದೆಂದು ಹಲವು ಬಾರಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಶಾಸಕರು ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಇಂದು ದಿಢೀರ್ ಭೇಟಿ ನೀಡಿದರು.

ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮತ್ತು ಪಾಕೀಟ್ ಮಾಡುವ ವಿಧಾನಗಳನ್ನು ಪರಿಶೀಲಿಸಿದಾಗ ಪೌಷ್ಠಿಕ ಆಹಾರ ಮಿಶ್ರಣಕ್ಕೆ ಬಳಸುತ್ತಿದ್ದ ಅಕ್ಕಿ, ಗೋಧಿ, ಹೆಸರು ಕಾಳು, ಕಡಲೆ ಇತ್ಯಾದಿಗಳಲ್ಲಿ ಕಪ್ಪು ಹುಳಗಳು ಚೀಲಗಳಲ್ಲಿ ಹಾಗು ನೆಲದಲ್ಲಿ ಹರಿದಾಡುತ್ತಿರುವುದನ್ನು ಕಂಡ ಶಾಸಕರು ಮೇಲ್ವಿಚಾರಕಿಯ ಮೇಲೆ ಗರಂ ಆದರು.
ಶಿಶು ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ನೆಲದಲ್ಲಿ ಮತ್ತು ಬೇಕಾಬಿಟ್ಟಿಗಾಗಿ ತಯಾರುಮಾಡುತ್ತಿರಾ ಇಂತಹ ಕಲುಷಿತ ಆಹಾರ ನೀಡಿದರೆ? ಇದನ್ನು ತಿಂದ ಮಕ್ಕಳ ಆರೋಗ್ಯ ಕೆಟ್ಟರೆ ಯಾರು ಜವಬ್ದಾರರು‌ ಎಂದು ಕಿಡಿಕಾರಿದರು.

ನಿಮ್ಮ ಮನೆ ಮಕ್ಕಳಿಗೂ ಹೀಗೆ ಕೊಡುತ್ತೀರೆಂದು ಪ್ರಶ್ನಿಸಿದರು. ಆಹಾರ ಪದಾರ್ಥಗಳನ್ನು ಸಂಸ್ಕರಿಸಲು ಬಳಸುವ ಯಂತ್ರಗಳೂ ಸಹ ಅವ್ಯವಸ್ಥೆಯಿಂದ ಕೂಡಿವೆ. ಇಲ್ಲಿನ ಸ್ಥಳವನ್ನಾದರೂ ಶುಚಿಯಾಗಿಟ್ಟುಕೊಳ್ಳಬೇಕಲ್ಲ ಯಾವುದೋ ಗೋಡನ್ ಇದ್ದಂತೆ ಇದೆಂದು ಸಿಬ್ಬಂದಿಯೊಬ್ಬರಿಗೆ ಕಾರವಾಗಿ ಪ್ರಶ್ನಿಸಿದರು.

ಪೌಷ್ಠಿಕ ಆಹಾರ ಪಾಕೀಟ್ ಮೇಲೆ ಯಾವ ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಎಷ್ಟು ಪ್ರಮಾಣದ ಸೇರಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಕಳಪೆ ಪಾಕೀಟ್ಗಳನ್ನು ಸಿದ್ದಪಡಿಸುತ್ತಿದ್ದೀರಾ ಈ ಬಗ್ಗೆ ಕಮಿಷನರ್ ಹಾಗು ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಚರ್ಚಿಸುವಂತೆ ಕ್ರಮಕೈಗೊಳ್ಳುವಂತೆ ಹಾಗು ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಅಂಜನ್ಕುಮಾರ್, ಚಿದಾನಂದ್ ಮುಖಂಡರುಗಳಾದ ವಿ.ಬಿ.ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ ಮತ್ತು ಇತರರು ಇದ್ದರು.

ಸಿಗರೇಟ್ ಸೇದಿ ಸುದ್ದಿಯಾದ ರಚಿತಾ ರಾಮ್

0

ಪಬ್ಲಿಕ್ ಸ್ಟೋರಿ : ರಚಿತಾ ರಾಮ್ ಸಿಗರೇಟ್ ಸೇದಿ, ಲಿಪ್ ಕಿಸ್ ಕೊಟ್ಟು ಸಖತ್ ಸುದ್ದಿಯಾಗಿದ್ದಾರೆ.

ಐ ಲವ್ ಯು ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ರಚಿತಾ ರಾಮ್ ಈಗ ಮತ್ತೆ ತಮ್ಮ ಹೊಸ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಮತ್ತೆ ಸುದ್ದಿಯಾಗಿದ್ದಾರೆ.

ರಚಿತಾ ತಮ್ಮ ಹೊಸ ಚಿತ್ರ `ಏಕ್ ಲವ್ ಯಾ’ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಚಿತಾ ಸಿಗರೇಟ್ ಸೇದಿ, ಹೀರೋಗೆ ಲಿಪ್ ಕಿಸ್ ಕೊಟ್ಟ ದೃಶ್ಯ ಸದ್ದು ಮಾಡುತ್ತಿದೆ.

ಟೀಸರ್ ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯದ ಮೂಲಕ ಆರಂಭವಾಗುತ್ತದೆ. ನಾಯಕ ರಾಣಾಗೆ ಲಿಪ್ ಕಿಸ್ ಮಾಡುವ ದೃಶ್ಯದೊಂದಿಗೆ ಟೀಸರ್ ಮುಗಿಯುತ್ತದೆ. ಟೀಸರ್ ನಲ್ಲಿ ರಾಣಾ ಆ್ಯಕ್ಷನ್ ಹಾಗೂ ರಚಿತಾ ಲುಕ್ ಎಲ್ಲರ ಗಮನ ಸೆಳೆದಿದೆ.

`ಏಕ್ ಲವ್ ಯಾ’ ಚಿತ್ರಕ್ಕೆ ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು.

ಈಗ ರಚಿತಾ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಪ್ರೇಮ್ , ಇದು ಏಕ್ ಲವ್ ಯಾ ಚಿತ್ರದ ಚಿತ್ರ. ಹೇಗೆ ಹೊರ ಬಂತು ಎಂಬುದು ನಮಗೂ ಗೊತ್ತಿಲ್ಲ. ಟೀಸರ್‍ನಲ್ಲಿ ಇನ್ನಷ್ಟು ಅಚ್ಚರಿಗಳು ಕಾದಿವೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

ಅಪಘಾತ: ಯುವತಿ ಸಾವು

Tumkur: ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಹಿಂಬದಿ ಸವಾರ ಯುವತಿಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲ್ಲೂಕಿನಲ್ಲಿ ಸಂಭವಿಸಿದೆ.

ಪುರವರ ಗ್ರಾಮದ ರಾಜಣ್ಣ ಎಂಬುವರ ಪುತ್ರಿ ಅರುಂಧತಿ (18) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪಟ್ಟಣದ ಬೆಂಕಿಪುರದ ಕಿಶೋರ್ (22) ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.

ಕಿಶೋರ್ ಮತ್ತು ಅರುಂಧತಿ ದ್ವಿಚಕ್ರವಾಹನದಲ್ಲಿ ಮಧುಗಿರಿಯಿಂದ ತೆರಳುತ್ತಿದ್ದಾಗ, ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.

ದ್ವಿಚಕ್ರ ವಾಹನ ಸವಾರ ಕಿಶೋರ್ ಗೆ ಹೆಚ್ಚಿನ ಚಿಕಿತ್ಸೆ ಗೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ತಿನ್ನುವವರಿಗೆ‌ ಇದು ಗೊತ್ತೇ ಇಲ್ಲ…!

0

ಮೀನು ಪ್ರೋಟೀನ್ ಹೊಂದಿರುವ ಆಹಾರವಾಗಿದೆ ಮೀನು ತಿನ್ನುವುದು ವ್ಯಕ್ತಿಯ ಹವ್ಯಾಸ ಕೆಲವರು ತಮ್ಮ ಹವ್ಯಾಸಕ್ಕಾಗಿ ಮೀನುಗಳನ್ನು ತಿನ್ನುತ್ತಾರೆ ಕೆಲವರು ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೀನುಗಳನ್ನು ಸೇವಿಸುತ್ತಾರೆ ಇಂದು ಮೀನು ತಿನ್ನಲು ಇಷ್ಟಪಡುವ ಜನರ ಬಗ್ಗೆ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.


ಹೃದಯ ರೋಗಿಗಳಿಗೆ ಮೀನು ತುಂಬಾ ಪ್ರಯೋಜನಕಾರಿ ಇದರಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯ ಮತ್ತು ಅದರ ಸ್ನಾಯುಗಳನ್ನು ಬಲಪಡಿಸುತ್ತವೆ ಮೀನುಗಳಲ್ಲಿ ಕೊಬ್ಬು ಕಡಿಮೆ, ಆದ್ದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ ಮೀನುಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.


ನಿಯಮಿತವಾಗಿ ಮೀನು ಸೇವಿಸುವ ಜನರಿಗೆ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಮೀನುಗಳಲ್ಲಿ ಕಂಡುಬರುತ್ತವೆ ಇದು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ ಇದನ್ನು ತಿನ್ನುವುದರಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ತಡೆಯುತ್ತದೆ ನೀವು ಮಾಂಸಾಹಾರಿ ತಿನ್ನುವುದನ್ನು ಇಷ್ಟಪಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮೀನುಗಳನ್ನು ಬಳಸುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಚೇತನ್ ಅವರಿಗೆ ಡಾಕ್ಟರೇಟ್ ಪದವಿ

Publicstory. in


Tumkuru: ಸಹಾಯಕ ಪ್ರಾಧ್ಯಾಪಕ ಕೆ.ಸಿ. ಚೇತನ್ ಅವರು ಬರೆದು ಸಲ್ಲಿಸಿದ ಡಿಸೈನ್ ಅಂಡ್ ಪರ್ಫಾಮೆನ್ಸ್ ಎವ್ಯಾಲ್ಯೂಯೇಶನ್ ಆಫ್ ರೌಟಿಂಗ್ ಮೆಕ್ಯಾನಿಸಮ್ಸ್ ಇನ್ ವೈಯರ್‍ಲೆಸ್ ಮೆಶ್ ನೆಟ್‍ವರ್ಕ್ಸ್ ಇನ್ ಡಿಫರೆಂಟ್ ನೆಟ್‍ವರ್ಕ್ಸ್ ಸಿನ್ಯಾರಿಯೋಸ್’ ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಕೆ.ಸಿ. ಚೇತನ್ ಅವರು ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರಿಗೆ ಬೆಂಗಳೂರಿನ ಎಸ್‍ಕೆಎಸ್‍ಜೆಟಿಐ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಟಿ.ಜಿ. ಬಸವರಾಜು ಮಾರ್ಗದರ್ಶನ ನೀಡಿದ್ದಾರೆ.