Thursday, February 19, 2026
Google search engine
Home Blog Page 281

ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು

https://youtu.be/PVvlp-cBMcg:

Tumkur: ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.

ವಿದ್ಯಾರ್ಥಿಗಳಾದ ದರ್ಶನ್, ಶ್ರೀನಿವಾಸ್ ಮತ್ತು ನಂದನ್ ಸೇರಿ ಐವರು ವಿದ್ಯಾರ್ಥಿಗಳು ಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದರು

ಆವರ ಪೈಕಿ ಮೂರು ಮಂದಿ ವಿದ್ಯಾರ್ತಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ನೀರಿನಲ್ಲಿ ಮುಳುಗಿದ ವಿದ್ಯಾರ್ಥಿಗಳ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ಗುಬ್ಬಿ ಚಿದಂಬರ ಆಶ್ರಮದ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಮೃತರನ್ನು ದರ್ಶನ್, ಶ್ರೀನಿವಾಸ್ ಮತ್ತು ನಂದನ್ ಎಂದು ಗುರುತಿಸಲಾಗಿದೆ.

ನಾಟಕ: ಝೆನ್ ಟೀಂಗೆ ಪ್ರಶಂಸೆ

Tumkur: ತುಮಕೂರಿನಲ್ಲಿ ಸದಭಿರುಚಿ ನಾಟಕಗಳು ಪ್ರದರ್ಶನಗೊಳ್ಳುತ್ತಿದೆ ಎಂದು ಖ್ಯಾತ ಕಿರುತೆರೆ ನಟ ಹನುಮಂತಗೌಡ ಪ್ರಶಂಸಿಸಿದರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ `ಅಂತರಂಗ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ತುಮಕೂರಿನಲ್ಲಿ ನಾಟಕಗಳ ಮೂಲಕ ಸಾಂಸ್ಕøತಿಕ ವಾತಾವರಣ ನಿರ್ಮಾಣವಾಗುತ್ತಿದೆ ಇದು ಶ್ಲಾಘನೀಯ ಎಂದರು.

ಕೇರಳದ ವೆಂಕಟೇಶ್ವರನ್ ಅವರು ಪ್ರತಿಭಾನ್ವಿತ ನಿರ್ದೇಶಕ ಎಂದ ಬಣ್ಣಿಸಿದ ಅವರು ಸಂಕೇತವಾದಿ ನಾಟಕಗಳ ಮೂಲಕ ಗಮನಸೆಳೆಯುತ್ತಿರುವ ನಿರ್ದೇಶಕ ಎಂದರು.

ಪ್ರತಿ ಸಂಜೆ ತುಮಕೂರು ನಾಟಕ ಮತ್ತಿತರೆ ಸಾಂಸ್ಕತಿಕ ಕಾರ್ಯಕ್ರಮಗಳಿಂದ ಸದಾ ಚಲನಶೀಲವಾಗುತ್ತಿದ್ದು ಇದು ಶ್ಲಾಘನೀಯ ಎಂದರು. ತುಮಕೂರಿನಲ್ಲಿ ಹೊಸ ಅಲೆಯ ನಾಟಕಗಳು ಆಯೋಜನೆಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್.ವಿ ಪುಟ್ಟಕಾಮಣ್ಣ ಅವರು ನಾಟಕಗಳು ಜೀವಂತಿಕೆಯ ಸಂಗೀತ. ಎಲ್ಲಾ ಕಲೆಗಳಿಗೂ ರಂಗಭೂಮಿ ಸೇತುವೆ ಎಂದರು.

ಪ್ರಾಸ್ತಾವಿಕವಾಗಿ ಝೆನ್ ಟೀಮ್‍ನ ಉಗಮ ಶ್ರೀನಿವಾಸ್ ಮಾತನಾಡಿದರು. ರವಿ ನಿರೂಪಿಸಿದರು. ಬಳಿಕ ಅಂತರಂಗ ನಾಟಕ ಪ್ರದರ್ಶನಗೊಂಡಿತು.

ಜುಂಜಪ್ಪನ ಗುಡ್ಡೆಯಲ್ಲಿ ಶಿವೋತ್ಸವ

ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಿರಾ ತಾಲೂಕು ಗೌಡಗೆರೆ ಹೋಬಳಿಯ ಜುಂಜಪ್ಪನ ಗುಡ್ಡೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ನಾಯಕ ಜುಂಜಪ್ಪನ ಮೂಲನೆಲೆಯಲ್ಲಿ ಫೆ.21ರಂದು ಇರುಳಿಡೀ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.ಅಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಬುಡಕಟ್ಟು ಸಾಂಸ್ಕೃತಿಕ ವೀರ ಜುಂಜಪ್ಪನ ಕಥನ ಗಾಯನವಿದೆ.

ಕೆ.ರಂಗನಹಳ್ಳಿಯ ಜುಂಜಣ್ಣ ಕಥನ ಗಾಯನ ನಡೆಸಿಕೊಡುವರು. ಹಳಿಯಟ್ಟಿ ಕರಿಯಣ್ಣ, ಚಿತ್ತಪ್ಪ ಕುಂಬಾರಹಳ್ಳಿ ಗಣೆ ಊದುವರುರಾತ್ರಿ 8 ರಿಂದದ 9 ಗಂಟೆಯವರೆಗೆ ಜುಂಜಪ್ಪನ ಕುರಿತು ಸಾಹಿತಿ ಪ್ರೊ.ಮ.ಲ.ನ ಮೂರ್ತಿ ಮಾತನಾಡುವರು. ರತ್ನ ಸಕಲೇಶಪುರ ರಂಗಗೀತೆಗಳನ್ನು ಹಾಡುವರು. ಶಿವಮೊಗ್ಗದ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕೆ.ಪ್ರೇಮ ಬುಡಕಟ್ಟು ಮತ್ತು ಪಶುಪಾಲನೆ ಕುರಿತು ಮಾತನಾಡುವರು. ಗುರುಪುತ್ರಿಗೆ ಶಿವವಸ್ತ್ರ -ವಿಭೂತಿ ವಿತರಣೆ ಕಾರ್ಯಕ್ರಮವಿದೆ.

ರಂಘಸಂಘಟಕ ಅಂಕಸಂಸ್ರ ಪ್ರೇಮ್ ಕುಮಾರ್ ಅವರಿಗೆ ವಿತರಿಸಲಾಗುವುದು. ಅದೇ ರಾತ್ರಿ 9.30 ರಿಂದ 10.30ರವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ತಂಡ ಪ್ರಮೀಳಾರ್ಜುನ ವಿಜಯ ನಾಟಕ ಪ್ರದರ್ಶಿಸಲಿದೆ. ಮೂಲ ವಿಲಿಯಮ್ ಶೇಕ್ಸ್ ಪಿಯರ್ ನಾಟಕವನ್ನು ಶ್ರೀಕಂಠೇಗೌಡ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ನಾಟಕವನ್ನು ನವೀನ್ ಸಾಣೇಹಳ್ಳಿ ನಿರ್ದೇಶಿಸಿದ್ದಾರೆ.

ರಾತ್ರಿ 10.30 ರಿಂದ 11.30ರವರೆಗೆ ಕಾಡುಗೊಲ್ಲರ ಕೋಲಾಟ ಕಾರ್ಯಕ್ರಮವಿದೆ. ಇದರಲ್ಲಿ ಚಿಕ್ಕನಕೋಟೆ ಗೊಲ್ಲರಹಟ್ಟಿಯ ಸಿದ್ದಣ್ಣ ಮತ್ತು ಗಿರಿಯಪ್ಪ ತಂಡ ಕೋಲಾಟ ನಡೆಸಿಕೊಡಲಿದ್ದೆ. ಲಂಬಾಣಿ ಬುಡಕಟ್ಟು ನೃತ್ಯವು ಇದೆ.ರಾತ್ರಿ 11 ರಿಂದ 1 ಗಂಟೆಯವರೆಗೆ ಬುಡಕಟ್ಟು ಸಮುದಾಯದ ಮಹಿಳಾ ಸಾಧಕಿ ಬಿ.ಟಿ. ಲಲಿತಾ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಜನಶಕ್ತಿಯ ಕಾರ್ಯಕರ್ತೆ ಮಲ್ಲಿಗೆ ಅಭಿನಂದನಾ ನುಡಿ ನುಡಿಯುವರು. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿ.ಜಿ.ಲಕ್ಷ್ಮಿಪತಿ ಮಾತನಾಡುವರು.

ರಾತ್ರಿ 1 ರಿಂದ 3 ಗಂಟೆಯವರೆಗೆ ನಾಟಕಕಾರ ಹನುಮಂತ ಹಾಲಗೇರಿ ವಿರಚಿತ ಊರು ಸುಟ್ಟರೂ ಹನುಮಪ್ಪ ಹೊರಗೆ ನಾಟಕ ಪ್ರದರ್ಶನವಿದೆ. ಭಾಸ್ಕರ್ ನಿನಾಸಂ ನಿರ್ದೇಶಿಸಿದ್ದು, ಬೆಂಗಳೂರಿನ ವಿಶ್ವಪಥ ಕಲಾ ಸಂಗಮ ತಂಡ ನಾಟಕ ಪ್ರದರ್ಶಿಸಲಿದೆ.ಇದೇ ವೇಳೆ ರಾತ್ರಿ 3 ರಿಂದ 4 ರವರೆಗೆ ಹಾಡುಹಬ್ಬ ಹಮ್ಮಿಕೊಂಡಿದ್ದು ಕ್ರಾಂತಿಗೀತೆ, ಜನಪದ ಗೀತೆ, ರಂಗಗೀತೆ, ತತ್ವಪದಗಳನ್ನು ಶಿವಮೊಗ್ಗದ ರಂಗಬೆಳಕು ಸಂಘ ಪ್ರಸ್ತುತಪಡಿಸಲಿದೆ.

ಶಾಸಕ ರಾಮದಾಸ್ ಗೆ ಲಘು ಹೃದಯಾಘಾತ

ತುಮಕೂರು : 

ಕೆ.ಆರ್. ಕ್ಷೇತ್ರದ ಬಿಜೆಪಿ‌ ಶಾಸಕ ಹಾಗೂ ಮಾಜಿ ಸಚಿವ ರಾಮದಾಸ್ ಗೆ ಲಘು ಹೃದಯಾಘಾತವಾಗಿದ್ದು, ಮೈಸೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಘು ಹೃದಯಾಘಾತದ ಹಿನ್ನಲೆ ಶಾಸಕ ರಾಮದಾಸ್‌ ಗೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ರಾಮದಾಸ್ ಅವರಿಗೆ ಆ್ಯಂಜಿಯೊ ಪ್ಲಾಸ್ಟ್ ಚಿಕಿತ್ಸೆ ಮಾಡಲಾಗಿದೆ‌. ಮಧ್ಯರಾತ್ರಿ ವೇಳೆ ರಾಮದಾಸ್ ಹೃದಯಾಘಾತಕ್ಕೆ ತುತ್ತಾಗಿದ್ದರು. ತಕ್ಷಣ ಅವರನ್ನು ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಕ್ತನಾಳ ಹೆಪ್ಪುಗಟ್ಟಿದ್ದರಿಂದ ಹೃದಯಾಘಾತ ಸಂಭವಿಸಿದೆ ವೈದ್ಯರು ಹೇಳಿದ್ದಾರೆ. ಸದ್ಯ ಶಾಸಕ ರಾಮದಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Tumukuru ಜಿಲ್ಲಾಸ್ಪತ್ರೆಯಲ್ಲಿ ಕೊರೊನೋ ವೈರಸ್ ನಿಗಾ ಘಟಕ

Tumkur: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಫರ್ಹಾನ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೊರೊನೋ ವೈರಸ್ ನಿಗಾ ಘಟಕವನ್ನು ವೀಕ್ಷಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡಿರುವುದಕ್ಕೆ ಶ್ಲಾಘಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೊರೊನಾ ವೈರಸ್ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ಕೊಠಡಿಯಲ್ಲಿ ಉತ್ತಮ ವ್ಯವಸ್ಥೆ ಮಾಡಿದೆ. ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾಗಿದೆ. ಕೊರೋನಾ ವೈರಸ್ ನಮ್ಮ ದೇಶಕ್ಕೆ ಬರಬಾರದು ಎಂದರು.

ಪಾಲಿಕೆ ವತಿಯಿಂದ ಜಿಲ್ಲಾಸ್ಪತ್ರೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ದವಾಗಿದ್ದೇವೆ. ಈ ವಾರ್ಡಿನ ಪಾಲಿಕೆ ಸದಸ್ಯರೂ ಕೂಡ ಪ್ರತಿ ಎಂಟು ದಿನಗಳಿಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರು ಆಸ್ಪತ್ರೆಯ ಪ್ರತಿಯೊಂದು ವಾರ್ಡನ್ನು ತೋರಿಸಿದ್ದು ಚನ್ನಾಗಿಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಪ್ರಮುಖವಾಗಿ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಆರೋಗ್ಯವೇ ದೇಶದ ಸಂಪತ್ತು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಮಾತನಾಡಿ, ಮೇಯರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೊರೊನ ವೈರಸ್ ಬಾಧಿತರಿಗಾಗಿ ನಾಲ್ಕು ಹಾಸಿಗೆಗಳ ಕೊಠಡಿಯನ್ನು ಸಿದ್ದಮಾಡಿಟ್ಟುಕೊಳ್ಳಲಾಗಿದೆ. ಚಿಕಿತ್ಸೆಗೂ ಕ್ರಮ ಕೈಗೊಳ್ಳಲಾಗಿದೆ. ಔಷಧಿಗಳು ಸಂಗ್ರಹ ಇವೆ ಎಂದು ಸ್ಪಷ್ಟಪಡಿಸಿದರು.


ಚೀನಾದಿಂದ ಬಂದಿರುವ ಯಾರೇ ಆಗಲಿ ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಹೊರ ರಾಜ್ಯದಿಂದ ಬಂದವರನ್ನು ನಾವು ಗುರುತಿಸಲು ಸಾಧ್ಯವಿಲ್ಲ. ಆದರೆ ತುಮಕೂರಿನವರು ಯಾರೇ ಆಗಲಿ ಚೀನಾಕ್ಕೆ ಹೋಗಿ ಹಿಂತಿರುಗಿದ್ದರೆ ಅವರು ಆಸ್ಪತ್ರೆಗೆ ಬರಬೇಕು. ತಪಾಸಣೆ ಮಾಡಿಸಿಕೊಂಡು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.


ಶಿವಮೊಗ್ಗದಲ್ಲಿ ಅರಳಗುಪ್ಪೆ ಹುಡುಗರ‌ ಮೋಡಿ

ಶಿವಮೊಗ್ಗ: ಇಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ಯುವಜನಮೇಳ 2019-20ನೇ ಸಾಲಿನ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯಿಂದ ಭಾಗವಹಿಸಿದ್ದ ತಿಪಟೂರು ತಾಲ್ಲೂಕಿನ ಅರಳಗುಪ್ಪೆಯ ಸಿದ್ಧಿವಿನಾಯಕ ಹವ್ಯಾಸಿ ಕಲಾ ಸಂಘ ಮತ್ತು ಶ್ರೀ ಕಲ್ಲೇಶ್ವರ ಯುವಕ ಸಂಘದ ಯುವಕರು ವೀರಗಾಸೆ ಮತ್ತು ದೊಡ್ಡಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗದಗ ಜಿಲ್ಲೆಯಲ್ಲಿ 2020ರ ಫೆ. 14ರಿಂದ 16ರವರೆಗೆ ನಡೆಯುವ ರಾಜ್ಯಮಟ್ಟದ ಯುವಜನ ಮೇಳ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಅರಣ್ಯಕ್ಕೆ‌ ಕೆಮಿಕಲ್ ದ್ರವ

Sira: ಕಾರ್ಖಾನೆಯ ತ್ಯಾಜ್ಯ ಮತ್ತು ಕೆಮಿಕಲ್ ದ್ರವವನ್ನು ಅರಣ್ಯಕ್ಕೆ ತಂದು ಸುರಿಯುತ್ತಿರುವುದರಿಂದ ಜೀವವೈವಿಧ್ಯಕ್ಕೆ ಮತ್ತು ಕಾಡು ಪ್ರಾಣಿಗಳಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಬ್ಯಾಡರಹಳ್ಳಿ ಮತ್ತು ತಿಮ್ಮನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.

ಸಿರಾ ತಾಲೂಕು ಬ್ಯಾಡರಹಳ್ಳಿ ಮತ್ತು ತಿಮ್ಮನಹಳ್ಳಿಹಟ್ಟಿ ನಡುವೆ ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶದಲ್ಲಿ ಇಲ್ಲಿನ ಕಾರ್ಖಾನೆಯವರು ಕೆಮಿಕಲ್ ಯುಕ್ತ ತ್ಯಾಜ್ಯವನ್ನು ಸುರಿಯುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ.

ಕೆಮಿಕಲ್ ಕೆಟ್ಟ ವಾಸನೆ ಬರುತ್ತಿದ್ದು ಗ್ರಾಮಗಳಲ್ಲಿ ಇರಲು ಕಷ್ಟವಾಗುತ್ತಿದೆ. ಸಂಬಂಧಪಟ್ಟ ಕಾರ್ಖಾನೆಯವರಿಗೆ ಹೇಳಿದರೂ ಯಾರೂ ಕೇಳುತ್ತಿಲ್ಲ. ಕಾರ್ಖಾನೆಯ ತ್ಯಾಜ್ಯ ಮತ್ತು ಕೆಮಿಕಲ್ ಸುರಿದರೆ ಅದು ಭೂಮಿ ಆಳದೊಳಗಿನ ನೀರಿಗೆ ಸೇರಿ ವಿಷವಾಗುತ್ತದೆ. ಇಂತಹ ನೀರನ್ನು ಕುಡಿದರೆ ಜನರು ಮತ್ತು ಪ್ರಾಣಿಗಳಿಗೆ ಕಾಯಿಲೆಗಳು ಬರುತ್ತವೆ. ಆದರೆ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ದಿನೇದಿನೇ ತ್ಯಾಜ್ಯ ಮತ್ತು ಕೆಮಿಕಲ್ ಸುರಿಯುವ ಪ್ರಮಾಣ ಹೆಚ್ಚಾಗುತ್ತಿದ್ದು ದುರ್ವಾಸನೆ ಬರುತ್ತಿದೆ. ಕೆಮಿಕಲ್ ಪರಿಣಾಮ ಅರಣ್ಯದ ಗಿಡಮೆಗಳ ಮೇಲೆ ಬೀರುತ್ತಿದ್ದು ಗಿಡಗಳು ಒಣಗತೊಡಗಿವೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೋಡ ಬನ್ನಿ ಮಾಗೋಡು ರಂಗನಾಥನ…

0

ತುಮಕೂರು:

ಜಿಲ್ಲೆಯ ಸಿರಾ ತಾಲ್ಲೂಕಿನ ಕಸಬಾ ಹೋಬಳಿಯ ಮಾಗೋಡು ಕಂಬದ ರಂಗನ ಹೂವಿನ ರಥೋತ್ಸವ ರಾಜ್ಯದಲ್ಲೇ ಪ್ರಸಿದ್ದಿ.


ಮಾಗೋಡು ರಂಗನ ಮಹಿಮೆ ಬಲ್ಲಿರೇನು?
ಮಾಗೋಡು ಸಿರಾ ತಾಲ್ಲೂಕಿನ ಒಂದು ಪುಟ್ಟ ಗ್ರಾಮ. ಶೇಷವಾಗಿ ಇದೊಂದು ಬುಡಕಟ್ಟು ಗ್ರಾಮ. ಆದರೂ ಐತಿಹಾಸಿಕವಾಗಿ , ಆಧ್ಯಾತ್ಮಿಕ ವಾಗಿ ಮಾಗೋಡು ರಾಜ್ಯದ ಒಳಗೂ ಹೊರಗೂ ಪ್ರಸಿದ್ದಿ. ಈ ಪ್ರಸಿದ್ದಿ ಇಲ್ಲಿನ ಆದಿದೈವ ಶ್ರೀರಂಗನಾಥನ ಕಾರಣದಿಂದ. ಮಾಗೋಡು ಕಂಬದ ರಂಗನಾಥ ಎಂದರೆ ಅದೊಂದು ಇಷ್ಟಾರ್ಥದ, ಬೇಕಾದ ಅನುಕೂಲಗಳನ್ನೆಲ್ಲಾ ಅನುಗ್ರಹಿಸುವ ದೈವ.

ಈ ರಂಗನಾಥ ಕಂಬದಲ್ಲಿ ಒಡಮೂಡಿದ ಕಾರಣಗಳಿಂದ ಕಂಬದರಂಗ, ಕಂಬದಯ್ಯ,ಕಂಬದ ರಂಗಣ್ಣ, ಕಂಬದರಂಗನಾಥ ಎಂದೆಲ್ಲಾ ಕರೆದು ಆರಾಧಿಸುವುದು ಇಲ್ಲಿನ ವಾಡಿಕೆ. ಈ ದೈವಕ್ಕೆ

ಹೂವೇ ಸರ್ವಸ್ವ. ಲಾರಿಗಟ್ಟಲೆ ಹೂವಿನ ಹಾರವನ್ನು ಶ್ರೀ ರಂಗನಾಥನತೇರಿಗೆ ಹಾಕುವುದು ವಾಡಿಕೆ ಮಾತ್ರವಲ್ಲ, ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆಯ ರೂಪದಲ್ಲಿ ಹೂವನ್ನು ಅರ್ಪಿಸುವುದು ಸಂಪ್ರದಾಯ. ಕಂಬದ ರೂಪದಲ್ಲಿ ಹೊರಬಂದ ಶ್ರೀ ಹರಿಯು ವೈಕುಂಠದಿಂದ ದರೆಗಿಳಿದು ಬಂದು ಭಕ್ತರ ಕಷ್ಟ ಹೀಡೇರಿಸುತ್ತಾನೆಂದು ಭಕ್ತರು ಭಕ್ತಿಯಿಂದ ಹೂ ಅರ್ಪಿಸುವುದು ವಾಡಿಕೆಯಾಗಿದೆ

ಕಂಬದ ರಂಗನನ್ನು ಕುರಿತು ಒಂದು ರಾತ್ರಿ ಪೂರಾ ಹಾಡಬಲ್ಲ ಜ‌ನಪದ ಕಾವ್ಯವೊಂದು ಕಾಡುಗೊಲ್ಲರ ಪರಂಪರೆಯಲ್ಲಿ ಬಳಕೆಯಲ್ಲಿದೆ. ಗಾಣೆಯನ್ನು ಊದಿಕೊಂಡು ಕಂಬದ ರಂಗನ ಪುರಾಣವನ್ನು ಭಯಭಕ್ತಿಯಿಂದ ಹಾಡಲಾಗುತ್ತದೆ. ರಂಗನಾಥನ ಒಕ್ಕಲುಗಳು ರಂಗನಾಥನ ಕಥೆಸೂಚಿಸುವ ಸಂಪ್ರದಾಯವೂ ಇದೆ. ಈ ಕಾವ್ಯದ ಪ್ರಕಾರ ಶ್ರೀ ಹರಿಯೇ ರಂಗನಾಥ. ಹಲವು ಅವತಾರ, ಸ್ಥಿತ್ಯಂರತಗಳಲ್ಲಿ ರಂಗನಾಥ ಪಶ್ಚಿಮದಿಂದ ಮಾಗೋಡುಗೆ ಬಂದನೆಂದೂ, ಹಲವು ಪವಾಡಗಳ ಮೂಲಕ ಮಾಗೋಡಿನ ದಿಣ್ಣೆಯಲ್ಲಿ ನೆಲೆಸಿ, ನಂತರ ಕಾಡುಗೊಲ್ಲರ ಹಟ್ಟಿಗೆ ಸ್ಥಳಾಂತರಗೊಂಡಿದ್ದಾನೆ ಎಂದು ಕಥೆ ತಿಳಿಸುತ್ತದೆ.

ಮಾಗೋಡು ಕಂಬದ ರಂಗನಾಥನ ಮೂಲ ನೆಲೆ ಹಿರಿಯೂರು ತಾಲ್ಲೂಕಿನ ಬಬ್ಬೂರು. ಶ್ರೀ ಹರಿ ನಿದ್ರಾವಸ್ಥೆಯಲ್ಲಿ ಬಬ್ಬೂರಿನ ಚಿಟ್ಟಾಲದ ಮರದ ಮೇಲೆ ಸುಖನಿದ್ರೆ ಮಾಡುವಾಗ ಸಿಡಿಲು ಬಡಿಯುತ್ತದೆ. ಆಗ ಶ್ರೀ ಹರಿ ಉಕ್ಕಿನಪಾಳಿನ ರೂಪವಾಗಿ ಭೂಮಿಯನ್ನ ಸೇರುತ್ತಾನೆ. ಬಹಳ ವರ್ಷ ಕಾಲ ಭೂತಳದಲ್ಲಿದ್ದ ಶ್ರೀ ಹರಿ ಭೂಮಿಯಿಂದ ಹೊರಗೆ ಬರಲು ಸಂಕಲ್ಪಿಸುತ್ತಾನೆ.

ಈ ಜಮೀನಿನ ಒಡೆಯ ಬಬ್ಬೂರ ಗೌಡನ ಸೋದರರು, ಏಳು ಜೊತೆ ನೇಗಿಲು ಹೂಡಿ ಹೊಲ ಉಳುವಾಗ, ಮೂರು ಸುತ್ತಿಗೆ ಆ ಉಳುವ ಹೋರಿಗಳು, ಹೊಲ ಉಳುತ್ತಿದ್ದ ಏಳು ಜನ ಗೌಡನ ತಮ್ಮಂದಿರು #ಮೂರ್ಛೆ_ಹೋಗುತ್ತಾರೆ. ಬೇಸಾಯ ಮಾಡುತ್ತಿದ್ದ ತಮ್ಮ ಗಂಡಂದಿರಿಗೆ ಊಟ ತಂದ ಹೆಂಗಸರು ಮೂರ್ಛೆ ಹೋಗಿರುವ ಗಂಡಸರು ಮತ್ತು ಹೋರಿಗಳ ಸ್ಥಿತಿಯನ್ನು ಕಂಡು ಗಾಬರಿಯಾಗುತ್ತಾರೆ. ಅರಿವಾಗದೆ ಓಡೋಡಿ ಊರು ಸೇರುತ್ತಾರೆ.

ಹಿರಿಯ ಗೌಡನಿಗೆ ಸಂಗತಿ ತಿಳಿದು, ಊರ ಪ್ರಮುಖರೊಂದಿಗೆ ಆತನೂ ಧಾವಿಸಿ ಬರುತ್ತಾನೆ. ಪರಿಸ್ಥಿತಿ ಕಂಡ ಗೌಡ ಎದೆ ಬಡಿದುಕೊಂಡು ರೋಧಿಸುತ್ತಾನೆ. ಗ್ರಾಮಸ್ಥರು ಪರಿಸ್ಥಿತಿ ಕಂಡು ಕಂಗಾಲಾಗುತ್ತಾರೆ‌. ಒಮ್ಮೆಗೆ ಏಳು ಜನರೂ, ಹದಿನಾಲ್ಕು ಹೋರಿಗಳು ಮರಣ ಹೊಂದಿರುವುದು ಆಶ್ಚರ್ಯಕರವಾಗಿ ಕಂಡುಬರುತ್ತದೆ. ಇದೊಂದು ದೈವ ಪ್ರೇರಣೆ ಅಥವಾ ಪ್ರೇತ ಚೇಷ್ಟೆ ಇರಬೇಕೆಂದು ಭಾವಿಸುತ್ತಾರೆ.

ಆ ಜಮೀನುನಲ್ಲಿದ್ದ ಆಲದ ಮರದ ಕಡೆ ಗೌಡ ಕೈಮುಗಿದು ಆಕಾಶದೇವ, ಭೂಮಿತಾಯಿ ಕಾರಣವಿಲ್ಲದೆ ಅಣ್ಣತಮ್ಮಂದಿರು, ನನ್ನ ಬಸವಣ್ಣನ ರೂಪದ ಹೋರಿಗಳು ಸಾಯಲು ಕಾರಣವೇನಪ್ಪ? ನನ್ನಿಂದ ಅಪರಾಧವಾಗಿದ್ದರೆ ತಪ್ಪುಕಾಣಿದರೆ ಒಪ್ಪಿಸುತ್ತೇನೆ. ನನ್ನ ತಮ್ಮಂದಿರಿಗೆ ಜೀವಧಾನ ಮಾಡು ದೇವ ಎಂದು ಪ್ರಾರ್ಥಿಸುತ್ತಾನೆ. ಆಗ ಅದೇ ಆಲದ ಮರದಿಂದ ಅಶರೀರವಾಣಿಯೊಂದು ನುಡಿಯುತ್ತದೆ. ನಿನ್ನ ಈ ಎರೆ ಹೊಲದಲ್ಲಿ ಶ್ರೀ ಹರಿ ಬರಸಿಡಿಲಿಗೆ ಸಿಕ್ಕಿ ಉಕ್ಕಿನ ಪಾಳಾಗಿ ಭೂಮಿ ಸೇರಿದ್ದಾನೆ. ಈಗ ನಿನ್ನ ಹೋರಿಗಳಾದ ದೊಡ್ಡಬೆಳ್ಳಿ, ಚಿಕ್ಕಬೆಳ್ಳಿಯರ ಮುಂದಿನ ನೇಗಿಲ ಕುಳಕ್ಕೆ ಉಕ್ಕಿನ ಪಾಳು ಸಿಕ್ಕಿದೆ. ಈಗ ಸ್ವಾಮಿ ಭೂಮಿಯಿಂದ ಹೊರಗೆ ಬಂದು ಲೋಕೋದ್ದೋರಾ ಮಾಡಬೇಕಿದೆ. ಆದ್ದರಿಂದ ಭೂಮಿಯ ಒಳಗೆ ಸೇರಿರುವ ಉಕ್ಕಿನ ಪಾಳನ್ನು ತೆಗೆಸಿ ಅದರಿಂದ ಗರುಡುಗಂಬ ಮಾಡಿಸಿ,ಮಡಿದ ನಿನ್ನ ಸೋದರರೆಲ್ಲರನ್ನೂ ಶ್ರೀ ಹರಿಯು ಬದುಕಿಸುತ್ತಾನೆ ಎಂದು ನುಡಿಯುತ್ತದೆ.

ಗೌಡನ ಉದಾಸೀನತೆ, ತೊಳಲಾಟದ ನಡುವೆ ಒಬ್ಬ ವಿಕಾರ ರೂಪದ #ಕೊರವಂಜಿಯು ಅಲ್ಲಿಗೆ ಬಂದು, ಅಶರೀರವಾಣಿಯ ಹೇಳಿಕೆಯನ್ನ ಮುಂದುವರೆಸುವಂತ್ತೆ ಹೇಳಿ ಈ ನೆಲದಲ್ಲಿರುವ ಶ್ರೀ ಹರಿಯು ಹೊರಗೆ ಬರುವ ಅವತಾರ ಇದು. ಈಗ ನಿನ್ನ ಮನೆಯ ಒಂದು ಹಿಡಿ ಹೊನ್ನು ತೆಗೆದುಕೊಂಡು ಹೋಗಿ ಹಿರಿಯೂರು ಪೇಟೆಯಿಂದ ಒಂದು ಹಿಡಿ ಮಣ್ಣು ತರಬೇಕು. ತಂದ ಮಣ್ಣನ್ನು ಮಡಿದವರಿಗೆ ಮುಟ್ಟಿಸಬೇಕು. ಆಗ ಎಲ್ಲರೂ ಮೇಲೇಳುತ್ತಾರೆ. ಎಂದಾಗ ಗೌಡ ಆ ಕೆಲಸಕ್ಕೆ ಮುಂದಾಗುತ್ತಾನೆ.

ಆದರೆ ಹೊನ್ನಿಗೆ ಬದಲಾಗಿ ಮಣ್ಣು ಕೊಡುವುದು ಚೋದ್ಯವಾಗಿ ಎಲ್ಲರೂ ಹಿಂಜರಿಯುತ್ತಾರೆ. ಆದರೂ ಪರಿಶ್ರಮದಿಂದ ಮಣ್ಣನ್ನ ತಂದ ಗೌಡ ತಮ್ಮಂದಿರಿಗೆ ಮುಟ್ಟಿಸಿದಾಗ ಅವರೆಲ್ಲರೂ ಎದ್ದು ಕುಳಿತುಕೊಳ್ಳುತ್ತಾರೆ.

ನಂತರ ಕೊರವಂಜಿಯ ಹೇಳಿಕೆಯಂತೆ ಭೂಮಿಯಲ್ಲಿದ್ದ ಉಕ್ಕಿನ‌ ಪಾಳನ್ನು ಹೊರತೆಗೆದು ಗರುಡಗಂಬವನ್ನು ಮಾಡಿಕೊಡುವಂತೆ ಹಲವಾರು ಬಡಗಿಯರನ್ನು ಕೇಳಿಕೊಳ್ಳುತ್ತಾರೆ. ಒಬ್ಬರು ತಯಾರಿಸಿಕೊಡಲು ಮುಂದೆ ಬಾರದೆ ಇದ್ದಾಗ ಕೂನಿಕೆರೆ ಹನುಮಂತ ಎಂಬ ಬಡಗಿ ಗರುಡಗಂಬ ಮಾಡಿಕೊಡಲು ಒಪ್ಪುತ್ತಾನೆ. ಆದರೂ ಗೌಡರ ಮೇಲಿನ ಕೋಪದಿಂದ ಬಹಳಷ್ಟು ದಿನಗಳ ಕಾಲ ಗರುಡಗಂಬ ಮಾಡಲು ಸತಾಯಿಸಿ ಕೊನೆಗೆ ಕಂಬ ತಯಾರಿಸಿ ತನ್ನ ಮನೆಯ ಉಚ್ಛೆಗುಂಡಿಯ ಬದಿಗಿಡುತ್ತಾನೆ.

ಇದರಿಂದ ಕೆರಳಿದ ಶ್ರೀ ಹರಿ, ಬಡಗಿಯ ಮಡದಿ ಮಕ್ಕಳನ್ಮು ಸಾಯಿಸುವುದಲ್ಲದೆ ಅವನ ಕಣ್ಣು ಕಾಣದಂತೆ ಮಾಡುತ್ತಾನೆ. ಸತ್ತ ಮಡದಿ ಮಕ್ಕಳು ಕಪ್ಪೆಯಾಗಿ ಕೂಗಿ ಹರಿಯ ಕೃಪೆ ಎಂದು ಸಾರುತ್ತವೆ. ಈ ವೇಳೆಗೆ ಬಬ್ಬೂರ ಗೌಡನು ಬಂದು ಗರುಡಗಂಬ ಇಟ್ಟ ಸ್ಥಳವನ್ನು ಕಂಡು ಮರುಗುತ್ತಾನೆ. ಜೊತೆಗೆ ಗರುಡಗಂಬವನ್ನು ಶಾಸ್ತ್ರೋಕ್ತವಾಗಿ ಬಬ್ಬೂರ ಮುಂಭಾಗದ ಚಿಟ್ಟಾಲದಮರದ ಬುಡದಲ್ಲಿ ಪ್ರತಿಷ್ಠಾಪಿಸುತ್ತಾನೆ ಮಾತ್ರವಲ್ಲ ದುರಂಹಕಾರಿ ಬಡಗಿ ಹನುಮಂತನನ್ನು ಆಹುತಿ ಕೊಡುತ್ತಾನೆ. ಇದು ರಂಗನಾಥ ರೂಪುಗೊಂಡ ಮೊದಲಹಂತ.

ಸಾಮಾನ್ಯವಾಗಿ ನಮ್ಮ ಜನಪದ ದೈವಗಳೂ ಕೂಡ ವಿಶಿಷ್ಠ ಪರಂಪರೆಯಂತೆ ತನ್ನ ವಕ್ಕಲರನ್ನು ವೃದ್ದಿಸುವುದು. ಈ ಮೂಲಕ ತಮ್ಮ ಮಹಿಮೆ, ಮಹತ್ವ ಸಾರುವುದು ಕಂಡುಬರುತ್ತದೆ. ಅದರಂತೆಯೇ ಬಬ್ಬೂರಿನಲ್ಲಿ ಕಂಬದ ರೂಪ ಪಡೆದ ರಂಗನಾಥ, ಅಲ್ಲಿಂದ ಹೊರಡುವಾಗ ದಾಸರಚನ್ನಪ್ಪ ಎಂಬ ಕಾಡುಗೊಲ್ಲರ ಹುಡುಗನಲ್ಲಿ ಪ್ರವೇಶ ಪಡೆಯುವುದುಕೊಂಡು ತನ್ನ ಬೇಕು ಬೇಕಾದವುಗಳನ್ನೆಲ್ಲಾ ಪೂರೈಸಿಕೊಳ್ಳುತ್ತಾನೆ.

ಈ ದಾಸರಚನ್ನಪ್ಪ ಎಂಬ ಕಾಡಗೊಲ್ಲರ ಹುಡುಗನನ್ನು ರಂಗನಾಥನ ದೈವತ್ವದಲ್ಲಿ ಪಕ್ವವಾಗುತ್ತ, ಜಾಣನಾಗುತ್ತ ರಂಗನಾಥನ ಹಲವು ರೂಪ, ಪವಾಡಗಳನ್ನು ಈತನ ಮೂಲಕ‌ ಪ್ರಕಟಿಸುವುದು ಈ ಕಾವ್ಯದ ವಿಶೇಷ. ದಾಸರಚನ್ನಪ್ಪ ಘೂರಪಾತಮ್ಮ ಎಂಬ ಮಹಿಳೆಯನ್ನು ವಿವಾಹವಾಗುವುದು ಆಕೆಗೂ ಅನಾರೋಗ್ಯ ಹೋಗಿ ಪಕ್ವವಾಗುವುದು ರಂಗನಾಥನ ಕೃಪೆಯಿಂದಲೇ.

ಒಟ್ಟು ರಂಗನಾಥನ ಪವಾಡ ದಾಸರಚನ್ನಪ್ಪ – ಘೂರಪಾತಮ್ಮ ಇವರ ಮೂಲಕವಾಗುತ್ತದೆ ಮಾತ್ರವಲ್ಲ ಈ ಮೂಲಕ ಚಟುವಟಿಕೆಗಳಿಗೂ ಕಾಡುಗೊಲ್ಲರ ಸಂಪ್ರದಾಯ , ನಂಬಿಕೆ ಮತ್ತು ಆಚರಣೆಗೆ ಪೂರಕವಾಗಿ ನಡೆಯುವುದು ಮತ್ತೊಂದು ವಿಶೇಷ. ಹಾಗಾಗಿಯೇ ಆರಂಭಿಕ ಹಂತದಲ್ಲಿ ಈ ದೈವದ ಭಕ್ತರು ಕಾಡುಗೊಲ್ಲರು ಅಧಿಕ. ನಂತರ ವಿಶೇಷ ಪವಾಡ, ಕಷ್ಟಪರಿಹಾರಗಳ ಮೂಲಕ ಅನೇಕ ಮನೆತನಗಳು ವಿಸ್ತಾರವಾದ ಪ್ರಸಂಗವೂ ನಡೆಯುತ್ತದೆ.

ಪಶುಪಾಲಕರಾಗಿ ಪಶುಪತಿ ಶಿವನ ಆರಾಧಕರಾಗಿ ಸರ್ಪ, ಕಲ್ಲು (ಶಿವರೂಪ), ಮರ( ಕೊಳಲು) ಮುಂತಾದ ಆರಾಧನೆ – ಆಚರಣೆಯ ಮೂಲಕ ವಿಭೂತಿ ಧಾರಣೆ (ಸುಟ್ಟು ಭಸ್ಮ) ಕಾಡುಗೊಲ್ಲರು, ಜುಂಜಪ್ಪ, ಈರಣ್ಣ, ನಾಗಪ್ಪ, ಚಿತ್ತಪ್ಪ, ಉತ್ತಪ್ಪ, ವೀರನಾಗ ,ಕರಿಯಣ್ಣ, ಚಿಕ್ಕಣ್ಣ, ದೊಡ್ಡಪ್ಪ ಈ ಮುಂತಾದ ದ್ರಾವಿಡ ಸಂಸ್ಕೃತಿಯ, ಕಾಡುಗೊಲ್ಲರು ಶೈವ ಸಂಸ್ಕೃತಿಯ ಆರಾಧಕರು. ರಂಗನಾಥನ ಅವತಾರಗಳೊಂದಿಗೆ ತಳಕು ಹಾಕಿಕೊಂಡಂತೆ ಶೈವತನದೊಂದಿಗೆ ವೈಷ್ಣವ ರೂಪಕ್ಕೆ ನಾಮಧಾರಿಯಾಗಿ ಪರಿವರ್ತನೆ ಹೊಂದಿದ ಖಚಿತ, ಐತಿಹಾಸಿಕ ದಾಖಲೆ, ವಿವರಗಳು ಲಭ್ಯವಾಗುವುದು. ಮಾಗೋಡು ರಂಗನಾಥನ ಕಾವ್ಯದಿಂದಲೇ!

ಹಾಗಾಗಿ ಮಾಗೋಡು ರಂಗನ ಸಂಪ್ರದಾಯ ಹಲವು ಚಾರಿತ್ರಿಕ ಅಧ್ಯಯನದ ಮಾದರಿಯೂ ಆಗಿದೆ, ರಂಗನಾಥನಿಗೆ ಹರಕೆ ಹೂವಿನ ರೂಪದಲ್ಲಿ ಭಾವರೂಪ ಪಡೆದಿರುವುದು ಮತ್ತೊಂದು ವಿಶೇಷ. ರಂಗನಾಥನಿಗೆ ಪ್ರಿಯವಾದದ್ದು ಭಕ್ತರ ಅರ್ಪಣೆ, ಕನಕ, ಧನಧಾನ್ಯಗಳಿಗಿಂತ ಹೂವೇ ಹೆಚ್ಚು.! ಹಾಗಾಗಿ ಸಾಂಕೇತಿಕ ಆಚರಣೆಗಳು ಜನಪದರು ರೂಡಿಸಿಕೊಂಡ ಬಗೆಯನ್ನು ಈ ಕಥನ ಸ್ಪಷ್ಟವಾಗಿ ಪ್ರಕಟಿಸುತ್ತದೆ.

ರಂಗನಾಥನ ಕಥಾ ವಿವರಣೆಯ ಒಳಗೆ ಪೌರಾಣಿಕ ಆಶಯಗಳಂತೆಯೇ ಸಿರಾ, ಹಿರಿಯೂರು, ಮೇಲುಕುಂಟೆ, ಕಂಪನಿ ಸರ್ಕಾರ, ಜಮೀನು ಹಂಚಿಕೆ, ಮಾನ್ಯತೆ, ನೀರಾವರಿ ಈ ಎಲ್ಲಾ ವಿವರಗಳೂ ಬಂದು ಭೂಕೊಳ್ಳೆ, ಘಾತುಕತನ, ಪಶುಪಾಲನೆ, ಆ ಸಂಬಂದಿ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಮಾಡುತ್ತಾ ಹಿರಿಯೂರು ಭಾಗದಿಂದ ಸಿರಾದ ಮಾಗೋಡಿಗೆ ಬರಲು ಕಾರಣ. ಪ್ರೇರಣೆ ಈ ಎಲ್ಲಾ ಅಂಶಗಳನ್ನು ರಂಗನಾಥನ ಕಥೆ ವಿವರಿಸುತ್ತದೆ.

ಮಾಗೋಡು ರಂಗನಾಥ ಇಂದು ತನ್ನ ಜನಪ್ರಿಯತೆ, ಭಕ್ತರಪಾಲನೆ, ಸುಖ ಸಂಮೃದ್ದಿ ಸಂತಾನಪೀಡೆ ಪಿಶಾಚಿಗಳಿಂದ ಪಾರು ಮಾಡುವ ದೈವತ್ವದ ಸ್ವರೂಪ ಪಡೆದಿದೆ. ಆರಂಭಕ್ಕೆ ಕಾಡುಗೊಲ್ಲರ ಹುಲ್ಲುಗುಡಿಸಲಿನ ಕುಟೀರದಲ್ಲಿದ್ದ ಈ ದೇವಾಲಯ ಸಾಕಷ್ಟು ಅಭಿವೃದ್ಧಿ ಪಡೆಯುತಿದೆ ಭವ್ಯವಾದ ಸುಂದರ ದೇವಾಲಯದ ದ್ವಾರ ನಿರ್ಮಾಣವಾಗಿದೆ. ಯಾತ್ರಿನಿವಾಸ ಅನ್ನಛತ್ರಗಳು ನಿರ್ಮಾಣವಾಗಿವೆ. ಪ್ರತಿವರ್ಷ ಮಾಘ ಮಾಸ ತಿಂಗಳಲ್ಲಿ ಒಂದು ವಾರದ ಕಾಲ ಬೃಹತ್ ಜಾತ್ರೆ ನಡೆಯುತ್ತದೆ. ಜಲಧಿ, ಆ ನಂತರ ನಡೆಯುವ ಬೃಹತ್ ಹೂವಿನ ತೇರು ನಾಡಪ್ರಸಿದ್ದಿ. ಆರೇಳು ಲಕ್ಷ ಭಕ್ತರು ಹೂವಿನ ತೇರಿಗೆ ಸೇರುತ್ತಾರೆ‌. ಆಂದ್ರಪ್ರದೇಶ, ತಮಿಳುನಾಡಿನ ಮುಂತಾದ ಭಕ್ತರು ಅಧಿಕ ಸಂಖ್ಯೆಯಲ್ಲಿ ಇರುತ್ತಾರೆ.

ಕಾಡುಗೊಲ್ಲರ ಈ ಪುಟ್ಟ ಹಟ್ಟಿ ಮಾಗೋಡು ಜಾತ್ರಾ ದಿನಗಳಲ್ಲಿ ಜನಾಕರ್ಷಣೀಯ, ಜನಜಂಗುಳಿಯ,ಕೇಂದ್ರವಾಗಿಯೂ ಮೈದುಂಬಿಕೊಳ್ಳುತ್ತದೆ. ಸಿರಾ – ಮಧುಗಿರಿ ರಸ್ತೆಯಲ್ಲಿ ಸಿರಾದಿಂದ 8ಕಿಮೀ ಕ್ರಮಿಸಿ ಎಡಕ್ಕೆ ತಿರುಗಿದರೆ ಮಾಗೋಡು ಕಮಾನು ದೇವಾಲಯದತ್ತ ಆಹ್ವಾನಿಸುತ್ತದೆ. ಅಲ್ಲಿಂದ 2 km ಸಾಗಿದರೆ ದೇವಾಲಯ ಸಿಗುತ್ತದೆ. ಬಸ್ ಸೌಲಭ್ಯ ಆಟೋ ಸೌಲಭ್ಯವಿದೆ. ಪ್ರತಿ ದಿನ ಮತ್ತು ಪ್ರತಿ ಶನಿವಾರ ಅಮವಾಸ್ಯೆ ಮತ್ತು ಹುಣ್ಣುಮೆ ದಿನಗಳೊಂದು ಬೆಳಿಗ್ಗೆಯಿಂದ ಅರ್ಧರಾತ್ರಿಯತನಕ ಬಿಡುವಿಲ್ಲದೆ ಪೂಜಾಕಾರ್ಯವು ನಡೆಯುತ್ತದೆ.

ಯುವಕ, ಯುವತಿಯರಿಗೆ ಸುವರ್ಣ ಅವಕಾಶ

ತುಮಕೂರು:

ಜಿಲ್ಲೆಯ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಗ್ರಾಮೀಣ ಯುವ ನಿರುದ್ಯೋಗಿ ಯುವಕ – ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಕಂಪ್ಯೂಟರ್ ಟ್ಯಾಲಿ ಮತ್ತು ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯ ಕನ್ನಡ ಓದಲು ಹಾಗೂ ಬರೆಯಲು ಬರುವಂತಹ 18ರಿಂದ 40 ವಯೋಮಿತಿಯೊಳಗಿರುವ ಅರ್ಹ ಅಭ್ಯರ್ಥಿಗಳು ಫೆಬ್ರವರಿ 15ರೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಎಸ್ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ನಿರ್ಮಿತಿ ಕೇಂದ್ರದ ಹತ್ತಿರ, ತುಮಕೂರು ಹಾಗೂ ದೂ. ಸಂ.: 0816-2243386/9480653178/9738351048/6361048969 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಸ್ ಓಡಿಸಿದ ಶಾಸಕ

ತುರುವೇಕೆರೆ : ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಬಸ್ ನಿಲ್ಲಾಣದಲ್ಲಿ ಭಾನುವಾರ ನೂತನ ಬಸ್ ಗಳನ್ನು ಶಾಸಕ ಮಸಾಲಜಯರಾಮ್ ತಾವೇ ಚಾಲನೆ ಮಾಡುವ ಮೂಲಕ ಸಾರ್ವಜನಿಕರ ಸೇವೆಗೆ ಅರ್ಪಿಸಿದರು.

ತುರುವೇಕೆರೆ ಕೆಎಸ್ಆರ್ಟಿಸಿ ಘಟಕಕ್ಕೆ ಎರಡು ನೂತನ ಬಸ್ ಮಂಜೂರಾಗಿದ್ದವು. ಇಂದು ಆ ಬಸ್ ಗಳನ್ನು ಡಿಪೋ ಸಿಬ್ಬಂದಿ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಅದನ್ನು ಶಾಸಕರು ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಈ ವೇಳೆ ಶಾಸಕ ಮಸಾಲಜಯರಾಮ್ ಅವರು ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ನೂತನ ಬಸ್ ಏರಿ ತಾವೇ ಬಸ್ ಓಡಿಸುವ ಮೂಲಕ ಚಾಲನೆ ನೀಡಿದಾಗ ಅಲ್ಲಿ ನೆರೆದಿದ್ದ ಶಾಸಕರ ಬೆಂಬಲಿಗರು ಚಪ್ಪಾಳೆ ಹಾಕಿದರು.

ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರಮಂಜಣ್ಣ, ತಿಮ್ಮೇಗೌಡ, ಡಿಪೋ ವ್ಯವಸ್ಥಾಪಕರು ಹಾಗು ಬಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಸರ್ಕಾರಿ ಬಸ್ ಓಡಿಸುವ ಮೂಲಕ ಶಾಸಕರು ನಿಯಮ ಉಲ್ಲಂಘಿಸಿದ್ದಾರೆ ಎಂಬ ಟೀಕೆಯು ವ್ಯಕ್ತವಾಗಿದೆ.