ತುಮಕೂರು: ನಗರದ ಬಟವಾಡಿ ಮಹಾಲಕ್ಷ್ಮಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವೈಕುಂಠ ದರ್ಶನದ ಚಿತ್ರಾವಳಿಯ ಒಂದು ಝಲಕ್.








ತುಮಕೂರು: ನಗರದ ಬಟವಾಡಿ ಮಹಾಲಕ್ಷ್ಮಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವೈಕುಂಠ ದರ್ಶನದ ಚಿತ್ರಾವಳಿಯ ಒಂದು ಝಲಕ್.








ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲು 45 ದಿನಗಳ ವಿನಾಯಿತಿ ನೀಡಿತ್ತು. ಇದೀಗ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. ಯಾವುದೇ ಟೋಲ್ ಪ್ಲಾಜ್ಹಾಗಳಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಇಲ್ಲವೇ ಫಾಸ್ಟ್ ಟ್ಯಾಗ್ ಸ್ಕ್ಯಾನರ್ ಇಲ್ಲದೇ ಹೋದಲ್ಲಿ ಉಚಿತವಾಗಿ ಪ್ರವೇಶ ಪಡೆಯಬಹುದು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಕಟಣೆಯುನ್ನು ಹೊರಡಿಸಿದ್ದು, ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನವು ಟೋಲ್ ಪ್ಲಾಜ್ಹಾ ಮೂಲಕ ಸಂಚಾರ ಮಾಡುವಾಗ ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಕೆಟ್ಟಿದ್ದರೆ ಇಲ್ಲವೇ ಆ ಟೋಲ್‌ನಲ್ಲಿ ಸ್ಕ್ಯಾನರ್ ಇಲ್ಲದೇ ಹೋದಲ್ಲಿ ವಾಹನ ಸವಾರರು ಉಚಿತವಾಗಿ ಆ ಟೋಲ್ ಮೂಲಕ ಸಂಚಾರ ನಡೆಸಬಹುದಾಗಿದೆ.
Get Free Trip If Fastag Scanner Doesnt Work
ಹೀಗೆ ಉಚಿತವಾಗಿ ಟೋಲ್‌ಗಳಲ್ಲಿ ಸಂಚಾರ ನಡೆಸುವ ವಾಹನ ಸವಾರರು ಅಥವಾ ವಾಹನ ಮಾಲೀಕರಿಗೆ ಶೂನ್ಯ ವಹಿವಾಟು ರಶೀದಿಯನ್ನು ನೀಡಲಾಗುತ್ತದೆ. ಯಾವುದೇ ರೀತಿಯ ಶುಲ್ಕ ಪಡೆಯದೇ ಈ ರಶೀದಿ ಪಡೆಯಬಹುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ದೇಶಾದ್ಯಂತ ಫಾಸ್ಟ್‌ಟ್ಯಾಗ್ ಬಳಕೆದಾರರ ಪ್ರಮಾಣ ಹೆಚ್ಚಾಗತೊಡಗಿದ್ದು, ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಣ ಸಂಗ್ರಹದ ಪ್ರಮಾಣವು ದಿನಕ್ಕೆ 66 ಪರ್ಸೆಂಟ್ ಏರಿಕೆಯಾಗಿದೆ. ಇದಕ್ಕೆ ತದ್ವಿರುದ್ದವಾಗಿ ನಗದು ಶುಲ್ಕ ಸಂಗ್ರಹವು ಇಳಿಕೆ ಕಂಡಿದೆ. ನವೆಂಬರ್ 17ರಿಂದ 23ರ ಅವಧಿಯಲ್ಲಿ ದೇಶಾದ್ಯಂತ ಫಾಸ್ಟ್‌ಟ್ಯಾಗ್ ಮೂಲಕ 26.4 ಕೋಟಿ ರುಪಾಯಿ ಸಂಗ್ರಹವಾಗಿದೆ. ಡಿಸೆಂಬರ್ 15 ರಿಂದ 21ರ ಅವಧಿಯಲ್ಲಿ 44 ಕೋಟಿ ರುಪಾಯಿಗೆ ಏರಿಕೆಯಾಗಿದೆ.
ತುಳಸೀತನಯ
ಆತ್ಮೀಯರೇ., ದಯವಿಟ್ಟು ನಿಮ್ಮ ಅಮೂಲ್ಯವಾದ ಸಮಯವನ್ನು ಕ್ಷಣ ಕಾಲ ಈ ಕೆಳಕಂಡ ಸತ್ಯವನ್ನು ಓದಲು ಬಳಸಿ. ಓದಿದ ಮೇಲೆ ಬಹುಶಃ ಭಾವನಾ ಜೀವಿಗಳಿಗೆ ನಿಜ ಜೀವನ ಅಂದರೆ ಇದೆ ಎಂಬುದು ಅರ್ಥವಾಗದೇ ಇರಲಾರದು…
ಬೆಳಗ್ಗಿನ ಜಾವ,ಆಫೀಸಿಗೆ ಹೊರಡಬೇಕಾಗಿದೆ ನಾನು!
ದಿನಪತ್ರಿಕೆಯನ್ನು ಎತ್ತಿ ನೋಡುತ್ತಿರುವೆನು,ಪುಟದ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ನನ್ನ ಪಟ!
ಅಯ್ಯೋ…
ಏನಾಯಿತು ನನಗೆ?
ನಾನು ಸೌಖ್ಯವಾಗಿ ತಾನೆ ಇರುವೆನು?
ಒಂದು ನಿಮಿಷ ಯೋಚಿಸಿದೆನು!
ನಿನ್ನೆಯ ರಾತ್ರಿ ಮಲಗುವಾಗ ಎದೆಯಲ್ಲಿ ಕಠಿಣವಾದ ನೋವುಂಟಾಯಿತು,ತದನಂತರ ಏನು ತೋಚಲಿಲ್ಲಾ,ನನಗೆ ಗಾಢವಾದ ನಿದ್ರೆ ಎಂದು ಭಾವಿಸಿದೆನು!
ಕಾಫಿ ಬೇಕಲ್ಲಾ,ನನ್ನ ಮಡದಿ ಎಲ್ಲಿ?ಸಮಯ ಹತ್ತಾಯಿತು!
ಅದ್ಯಾರಲ್ಲಿ?ಮಂಚದಲಿ ಕಣ್ಣಮುಚ್ಚಿ ಆಯಾಸದಿಂದ?
ಅಯ್ಯೋ…ನಾನೇ,
ಆಗಾದರೇ ನಾನು ಸತ್ತುಹೋದೆನಾ?ಕಿರುಚಿದೆನು!
ನನ್ನ ಕೋಣೆಯ ಹೊರಗೆ ಗುಂಪುಗುಂಪಾಗಿ ಜನರ ಸಮೂಹ,ಸಂಬಂಧಿಕರು,ಸ್ನೇಹಿತ ವೃಂದದವರು ನೆರೆದಿದ್ದರು!
ಹೆಂಗಸರೆಲ್ಲಾ ಅಳುತ್ತಿದ್ದರು,ಗಂಡಸರೆಲ್ಲಾ ಮೌನಾಚರಣೆಯಿಂದ ಮೂಕವಾಗಿ ನಿಂತಿರುವರು!
ಬೀದಿ ಜನರೆಲ್ಲಾ ನನ್ನ ದೇಹವ ನೋಡಿ ಹೋಗುತ್ತಿರುವರು,ನನ್ನ ಹೆಂಡತಿಗೆ ಕೆಲವರು ಸಮಾಧಾನ ಪಡಿಸುತ್ತಿರುವರು,ನನ್ನ ಮಗನನ್ನು ಅಪ್ಪಿಕೊಂಡು ಅಳುತ್ತಿರುವರು!
ನಾನು ಸತ್ತಿಲ್ಲಾ,ಇಲ್ಲೇ ಇರುವೆನು ಎಂದು ಕಿರುಚಿದೆನು!
ಆದರೆ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲಾ,
ನನ್ನ ದೇಹ ಸನಿಹದಲ್ಲಿ ನಿಂತಿರುವುದು ಕೂಡ ಯಾರಿಗೂ ಕಾಣಿಸುತ್ತಿಲ್ಲಾ!
ಅಯ್ಯೋ ದೇವರೆ,!ಏನು ಮಾಡಲಿ ನಾನು?
ಹೇಗೆ ಅವರಿಗೆ ಕಾಣಲ್ಪಡುವೆನು ನಾನು?
ನಾನು ಮತ್ತೊಮ್ಮೆ ನನ್ನ ಕೋಣೆಗೆ ನಡೆದೆ,”ನಾನು ಸತ್ತು ಹೋದೆನಾ”?ನಾನು ನನ್ನೇ ಕೇಳಿದೆ,ಸಾವು ಹೀಗೆ ಇರುವುದಾ?
ನನ್ನ ಮಡದಿಯೂ,ಅಮ್ಮ,ಅಪ್ಪನೂ ಮತ್ತೊಂದು ಕೋಣೆಯಲ್ಲಿ ಅಳುತ್ತಿರುವರು,!ನನ್ನ ಮಗನಿಗೆ ಏನಾಯಿತೆಂದು ಕೂಡ ತಿಳಿಯಲಿಲ್ಲಾ,ಮನೆಯವರೆಲ್ಲಾ ಅಳುತ್ತಿರುವುದನ್ನು ಕಂಡು ಅವನೂ ಕೂಡ ಅಳುತ್ತಿರುವನು.!

ನಾನು ಅವನನ್ನು ತುಂಬಾ ಪ್ರೀತಿಸುವೆನು,ಅವನನ್ನು ಬಿಟ್ಟು ನಾ ಎಂದಿಗೂ ಇರಲಾರೆ,ನನ್ನ ಮಡದಿ ನನ್ನ ಮೇಲೆ ಅತಿಯಾದ ಪ್ರೀತಿಯೂ,ಸಹನೆಯೂ ಉಳ್ಳವಳು!ನಾನು ‘ತಲೆನೋವು’ ಎಂದರೆ ಸಾಕು ಅವಳು ಅತ್ತೇ ಬಿಡುವಳು!ಅವಳನ್ನು ಬಿಟ್ಟು ಬಂದೆನೆಂದು ಮನದಲ್ಲಿ ಕೂಡ ನೆನೆಯಲಾಗುತ್ತಿಲ್ಲಾ,!
ಅಮ್ಮಾ,ನಾನು ಒಂದು ಮಗುವಿಗೆ ಅಪ್ಪನಾಗಿದ್ದರೂ ಕೂಡ ನನ್ನನ್ನು ಮಗುವಾಗಿಯೇ ಕಾಣುತ್ತಿದ್ದವಳು ನನ್ನವ್ವ!
ಅಪ್ಪ ಗಂಭೀರವಾಗಿದ್ದರೂ ಕೂಡ,ಅವರಾಡೋ ಒಂದೊಂದು ಮಾತು ಸಹನೆಯಿಂದ ಕೂಡಿರುತ್ತಿದ್ದವು!
ಇದೋ,ಒಂದು ಮೂಲೆಯಲ್ಲಿ ನಿಂತು ಅಳುತ್ತಿರುವನು
ಅಯ್ಯೋ,…ನನ್ನ ಸ್ನೇಹಿತ! ಸೇಡನ್ನು ಮರೆತು ಬಂದಿರುವನೇ?ಕೆಲ ಕಾದಾಟಗಳು ನಮ್ಮನ್ನು ಒಂದಾಗಿರಲು ಬಿಡಲಿಲ್ಲಾ,ಇಬ್ಬರು ಮಾತನಾಡಿ ಎರಡು ವರ್ಷಕ್ಕಿಂತ ಮೇಲಾಯಿತು!ಅವನಲ್ಲಿ ಕ್ಷಮಾಪಣೆ ಕೇಳಲು ತೋಚಿತು,!
ಪಕ್ಕದಲ್ಲಿ ಹೋಗಿ ಅವನನ್ನು ಕರೆದೆನು,ಆದರೆ ನನ್ನ ಧ್ವನಿ ಅವನಿಗೆ ಕೇಳಿಸಲಿಲ್ಲಾ,ನನ್ನ ದೇಹವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವನು,!
ಹೌದು,ನಾನು ಸತ್ತು ಹೋದೆನೆ?,ಪಕ್ಕದಲ್ಲಿದ್ದ ದೇವರ ಪಟವ ನೋಡುತ್ತಾ…
ಓ ದೇವರೇ!,ನನಗೆ ಇನ್ನೂ ಕೆಲವು ದಿನಗಳು ಕೊಡಿ!ನಾನು ನನ್ನ ಮಡದಿ,ಹೆತ್ತವರು,ಸ್ನೇಹಿತರಲ್ಲಿ ಎಷ್ಟು ಪ್ರೀತಿ ಇಟ್ಟಿರುವೆನೆಂದು ತೋರಿಸಬೇಕು.
ನನ್ನ ಮಡದಿ ಇರುವ ಕೋಣೆಗೆ ನಡೆದೆ,ನೀ ಬಹಳ ಸುಂದರವಾಗಿರುವೆ ಎಂದು ಕಿರುಚಿದೆನು,ಅವಳಿಗೆ ನನ್ನ ಮಾತಗಳು ಕೇಳಿಸಲೇ ಇಲ್ಲಾ!ನಿಜ ಜೀವನದಲ್ಲಿ ನನ್ನ ಹೆಂಡತಿಯನ್ನು ಒಂದು ಸಲವೂ ಹಾಗೇ ಹೇಳೇ ಇರಲಿಲ್ಲಾ!
ದೇವರೇ!,ಎಂದು ಕಿರುಚಿದೆನು,ಜೋರಾಗಿ ಅತ್ತೆನು,ದಯವಿಟ್ಟು ಮತ್ತೊಂದು ಅವಕಾಶ,ನನ್ನ ಮಗನ ಅಪ್ಪಿಕೊಳ್ಳಲು,ನನ್ನ ತಾಯಿಯ ಮುಖದಲ್ಲಿ ಮತ್ತೆ ಸಂತೋಷವ ತರಲೂ,ನನ್ನ ಸ್ನೇಹಿತನಲ್ಲಿ ಕ್ಷಮೆಯ ಕೇಳಲು,ಈಗ ನಾನು ಅತ್ತೆನು!
ದಿಢೀರೆಂದು ನನ್ನ ದೇಹವ ಎಬ್ಬಿಸುವಂತೆ ಭಾಸವಾಯಿತು,ರೀ ಕಣ್ಣಾ ಬಿಡ್ರೀ,ನಿದ್ದೆಯಲ್ಲಿ ಏನದು ಗೊಣಗಲು?,ಕನಸ್ಸು ಏನಾದರೂ ಕಂಡೀರಾ?ಎಂದಳು ಹೆಂಡತಿ!
ಹೌದು…ಬರೀ ಕನಸ್ಸು…ನೆಮ್ಮದಿಯಾದೆ!!!
ನನ್ನ ಮಡದಿಯಲ್ಲಿ ನಾನು ಮಾತನಾಡುವುದನ್ನು ಈಗ ಕೇಳಬಹುದು,ನನ್ನೀ ಜೀವನದಲ್ಲಿ ಮರೆಯಲಾಗದ ಸಂಧರ್ಭ!
ಬೆವತಿದ್ದ ನನ್ನ ಮುಖವ,ಬಟ್ಟೆಯೊಂದನ್ನೆತ್ತಿ ಒರೆಸುತ್ತಿರುವಳು ನನ್ನವಳು!ಹಾಗೆಯೇ ಅವಳನ್ನು ಅಪ್ಪಿಕೊಂಡು ನೀನೆ ಈ ಪ್ರಪಂಚದಲ್ಲಿಯೇ ಸೌಂದರ್ಯವತಿ,ಎಂದೆನು ಮೊಟ್ಟ ಮೊದಲ ಬಾರಿಗೆ!
ಮೊದಲಿಗೆ ಅರಿವಾಗದೆ ಕಣ್ಣುಬಿಟ್ಟ ಅವಳು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಳು,ಅವಳ ಕಣ್ಣಂಚಿನಲ್ಲಿ ಕಂಬನಿ ಹೊರಬರುತ್ತಿತ್ತು,ಅರಿವಾಯಿತು ನನಗೆ ಆನಂದ ಕಣ್ಣೀರೆಂದು…!
ಈ ಎರಡನೇ ಅವಕಾಶ ಕೊಟ್ಟ ದೇವರಿಗೆ ಧನ್ಯವಾದಗಳು!
ಇನ್ನೂ ನಿಮಗೆ ಸಮಯವಿದೆ,ನಿಮ್ಮ ಈಗೋವನ್ನು ಕಿತ್ತು ಬಿಸಾಡಿ,ನಿಮ್ಮ ಅಂತರಾಳದಲ್ಲಿರುವ ಪ್ರೀತಿಯನ್ನೂ,ಸಹನೆಯನ್ನೂ ಇತರರಲ್ಲಿ ಹಂಚಿಕೊಳ್ಳಿ
ಯಾಕೆಂದರೆ ಪ್ರೀತಿ ಮತ್ತು ಸಹನೆಯನ್ನು ಹಂಚಿಕೊಳ್ಳಲು ನಿಮಗೆ ಎರಡನೇ ಅವಕಾಶ ಸಿಗದಿರಬಹುದು…!
ತುಳಸೀತನಯ
ವಾಚು, ಮೊಬೈಲ್ಗಳಲ್ಲಿ ರಾತ್ರಿ 12 ಗಂಟೆ ತೋರಿಸುವುದೇ ತಡ ಇಡೀ ಊರು ಪಟಾಕಿಗಳ ಸದ್ದಿನಿಂದ ಮೊಳಗಿತ್ತು.
ಅರೇ..? ಏನಿದು ಎನ್ನುವಷ್ಟರಲ್ಲಿ `ಹ್ಯಾಪಿ ನ್ಯೂ ಇಯಿರ್…!’ ಎಂದು ಕಿರುಚುತ್ತಿದ್ದ ಸದ್ದು ಒಮ್ಮೆಲೆ ಗಂಟೆ ಭಾರಿಸಿದಂತೆ ಧ್ವನಿಗೂಡಿತ್ತು. `ವಿಷ್ ಯೂ ಹ್ಯಾಪಿ ನ್ಯೂ ಇಯರ್’ ಎಂದು ವಿಚಿತ್ರ ಧ್ವನಿಯಲ್ಲಿ ಕಿರುಚಿದ ಸದ್ದು ಕೇಳಿದ ತಕ್ಷಣ ಆಗಷ್ಟೆ ನಿದ್ದೆಗೆ ಜಾರಿದ್ದವರು ದಡಬಡಾಯಿಸಿ ಮೇಲೆದ್ದು ಹೊರಗೆ ಓಡಿ ಬಂದರು.
ಯುವಕರ ಗುಂಪು ಬೈಕ್ಗಳಲ್ಲಿ ಜೋರಾಗಿ ಹಾರನ್ ಮಾಡಿಕೊಂಡು ಓಡಿಸುತ್ತಾ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮೈ ಮರೆತ್ತಿದ್ದರು.
ಮತ್ತೇರಿದ ಸಂಭ್ರಮದಲ್ಲಿದ್ದ ಯುವಕರನ್ನು ಕಂಡ ಹಿರಿಯರು ಅವರ ಅವತಾರ ಕಂಡು `ಅಯ್ಯೋ ಇವಕ್ಕೇನ್ ಬಂದಯ್ತೋ, ನಾಯ್ ಅರಚಿದ್ಹಂಗೆ ಅರುಚ್ತಾವೆ, ಕುಡ್ದಿರೋದು ಹೊಟ್ಟೆಗೆ ಇರಲ್ಲಾ ಅಂತದಾ..’ ಎಂದು ಗೊಣಗಾಡುತ್ತ ಮತ್ತೆ ನಿದ್ದಗೆ ತಲೆಹಾಕಿದರು.
ರಾತ್ರಿ ಒಂದು ಗಂಟೆ ವರೆಗೂ ಜನ ಇನ್ನೂ ಕ್ರಿಯಾಶೀಲರಾಗಿದ್ದರು. ಬೇಕರಿ, ಕೇಕ್ ಪಾರ್ಲರ್ಗಳು ರಾತ್ರಿಯಾದರೂ ಜನರಿಂದ ಕೂಡಿದ್ದವು.
ಒಂದು, ಎರಡು, ಐದು, ಹತ್ತು ಕೆಜಿ ಹೀಗೆ ಕೇಕ್ ಕೊಳ್ಳುವಲ್ಲಿ ಜನ ಬ್ಯುಸಿಯಾಗಿದ್ದರು. ಅದರಲ್ಲೂ ಯುವಕರ ದಂಡು ತಮಗೆ ಇಷ್ಟ ಬಂದ ರೀತಿಯಲ್ಲಿ ಕೇಕ್ ಡಿಸೈನ್ ಮಾಡಿಸಿ ಅದರ ಮೇಲೆ ಬಣ್ಣಬಣ್ಣದಲ್ಲಿ ಹೆಸರು ಬರೆಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯ ವೆನಿಸಿತ್ತು.
ಮನೆಯಲ್ಲಿನ ಸಣ್ಣ ಮಕ್ಕಳ ಕಾಟಕ್ಕೆ ತಾಳಲಾರದೆ ಬಹಳಷ್ಟು ಜನ ಕುಟುಂಬದ ಜೊತೆ ಆಚರಣೆ ಮಾಡಲು ಮಕ್ಕಳೊಂದಿಗೆ ಅಂಗಡಿಗೆ ಬಂದು ಕೇಕ್ ಮನೆಗೆ ತೆಗೆದುಕೊಂಡು ಹೋಗುತ್ತಿದ್ದದ್ದು ಕಂಡಿತು.
ಬಟ್ಟೆ ಅಂಗಡಿಗಳು ಎರಡು ದಿನ ಮುಂಚಿತವಾಗಿಯೇ ಬ್ಯುಸಿಯಾಗಿದ್ದವು.
ಬುಧವಾರ ಮುಂಜಾನೆ ಹೊಸ ವರ್ಷದ್ದೇ ರಂಗು. ದಾರಿಯಲ್ಲಿ ಯಾರು ಸಿಕ್ಕರೂ `ಹ್ಯಾಪಿ ನ್ಯೂ ಇಯರ್’ ಎಂಬ ಹಾರೈಕೆ ಕೇಳಿ ಬರುತ್ತಿತ್ತು. ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಂತೂ ಸಂಭ್ರಮವೋ ಸಂಭ್ರಮ.
ಸಮವಸ್ತ್ರ ತೊಡುವ ಬದಲು ಹೊಸ ಬಟ್ಟೆ ತೊಟ್ಟು ಮೆರೆದವರ ಸಂಖ್ಯೆಯೇ ಹೆಚ್ಚಾಗಿತ್ತು. ಕೇಕ್, ಸಿಹಿತಿಂಡಿ ಖರೀದಿಗೆ ಜನ ಜಾತ್ರೆ ಸೇರಿತ್ತು. ಕಾಲೇಜುಗಳಲ್ಲಿ ಯುವ ವಿದ್ಯಾರ್ಥಿ ಹಾಜರಿ ಕಡಿಮೆಯಾಗಿತ್ತು. ಹದಿ ಹರಯದ ಜೋಡಿಹಕ್ಕಿಗಳ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದವು. ವಿವಿಧ ಏಕಾಂತ ಸ್ಥಳಗಳಲ್ಲಿ ಬ್ಯುಸಿಯಾಗಿದ್ದರು.
`ಏನ್ ಸ್ವಾಮಿ ನ್ಯೂ ಇಯರ್ ಸೆಲಬರೇಷನ್ ಜೋರಾ..? ರಾಥ್ರಿ ಎಲ್ಲಿ ಪಾರ್ಟಿ ಮಾಡಿದ್ರಿ..? ಪಾರ್ಟಿ ಗುಂಗು ಇನ್ನೂ ಇಳಿದ್ಹಂಗೆ ಕಾಣ್ತಿಲ್ಲ. ಮುಖ ನೋಡುದ್ರೆ ರಾತ್ರಿ ಗುಂಡು, ತುಂಡು ಜೋರಾಗೆ ಇದ್ಹಂಗೆ ಕಾಣ್ತದೆ’ ಎಂಬ ಪ್ರಶ್ನೆಗೆ ಉತ್ತರವಾಗಿ ` ಇಲ್ಲಾ ಗುರು.. ಫ್ರೆಂಡ್ಸ್ ಯಾವೋನೋ ಮಿಕ್ಸ್ ಮಾಡಿ ಯಡವಟ್ಟಾಯ್ತು.. ತಲೆ ಇನ್ನೂ ದಿಂಬಿಡ್ಕಂಡದೆ. ರಾತ್ರಿ ಎರ್ಡು ಕಡೆ ಪಾರ್ಟಿ ಮನೆಗೆ ಇನ್ನೂ ಹೋಗಿಲ್ಲ’ ಎಂಬೆಲ್ಲಾ ಸಂಭಾಷಣೆಗಳು ಸಾಮಾನ್ಯವಾಗಿದ್ದವು.
ವಾಟ್ಸ್ ಆಫ್, ಫೇಸ್ ಬುಕ್, ಮೆಸೆಂಜರ್ ಗಳಲ್ಲಿ ಶುಭಾಶಯ ಮೆಸೇಜ್ ಗಳು ಎರಡು ದಿನ ಮುಂಚಿತವಾಗಿಯೇ ಹರಿದಾಡತೊಡಗಿದವು.
ಗ್ರೂಪ್ ಗಳಲ್ಲಿ ಬರುತ್ತಿದ್ದ ಮೆಸೇಜ್ ಗಳನ್ನು ನೋಡಿ ಕೆಲವರು `ಬಂದಿರುವ ಶುಭಾಶಯ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಒಬ್ಬ ಆಳನ್ನು ಇಟ್ಟುಕೊಳ್ಳಬೇಕು. ಇಲ್ವಾ ಮೂರು ದಿನ ಕೂತ್ಕಂಡ್ ಡಿಲೀಡ್ ಮಾಡುವಷ್ಟು ಮೊಬೈಲ್ ತುಂಬೋಗಿದೆ’ ಅಂತಾ ಮಾತನಾಡಿಕೊಂಡರು.
`ಇದೇನ್ ಹೊಸ ವರ್ಷ ಗುರು ನಮ್ಮ ಕಾಲದಲ್ಲಿ ಹೊಸ ವರ್ಷ ಇನ್ನೂ ತಿಂಗಳಿರುವಾಗಲೇ ತರ ತರದ ಗ್ರೀಟಿಂಗ್ ಹುಡುಕಿ ಅವುಗಳಲ್ಲಿ ಸ್ವ-ರಚಿತ ಕವನ ಬರೆದು ಪ್ರೀತಿ, ವಿಶ್ವಾಸ ತೋರಿಸ್ತಿದ್ವಿ ಈಗ ಮೊಬೈಲ್ ಬಂದು ` ಹ್ಯಾಪಿ ನ್ಯೂ ಇಯರ್ ಅಂತಾ’ ಒಂದೇ ಒಂದು ಮೆಸೇಜಲ್ಲೇ ಎಲ್ಲಾ ಮುಗಿಸಿ ಬಿಡ್ತಾರೆ. ಅದೂ ಸ್ವಂತದಂತೂ ಅಲ್ವೇ ಅಲ್ಲ ಫಾರ್ವರ್ಡ್ ಮೆಸೇಜ್’ ಭಾಂಧವ್ಯಗಳು ದೂರಾಗುತ್ತಿರುವ ಬಗ್ಗೆ ಕೆಲವರು ಬೇಸರಿಸಿಕೊಂಡರು.
ತುಳಸೀತನಯ
ಪ್ರತೀ ವರ್ಷ ಡಿಸೆಂಬರ್ ತಿಂಗಳ ಕೊನೆಯ ದಿನಗಳು ಮುಗಿಯುತ್ತ ಬರುತ್ತಿದ್ದ ಹಾಗೆ ಹೊಸ ವರ್ಷ ಬಂತು ಎಂಬ ಹುಮ್ಮಸ್ಸು, ಹೊಸ ಉತ್ಸಾಹ ಮೈಮನ ದುಂಬುತ್ತದೆ. ಪ್ರತಿ ಬಾರಿಯೂ ಹೊಸ ವರ್ಷ ಪ್ರಾರಂಭವಾಗುವ ದಿನಗಳಲ್ಲಿ ಹೊಸದೊಂದು ಏನಾದರೂ ಮಾಡಬೇಕೆಂಬ ತುಡಿತ ಪ್ರತಿಯೊಬ್ಬರಲ್ಲೂ ಹುಟ್ಟಿಕೊಳ್ಳುತ್ತದೆ.
ಗೋಡೆ ಮೇಲಿನ ದಿನಚರಿ(ಕ್ಯಾಲೆಂಡರ್) ಬದಲಾಗುವುದರ ಜೊತೆಗೆ ಒಂದಿಡೀ ವರ್ಷದ ಹಿನ್ನೋಟ, ಮುನ್ನೋಟಗಳ ಚೆಚ್ಚೆಗಳು ಆರಂಭವಾಗತೊಡಗುತ್ತವೆ.
ಮುಂದಿನ 365 ದಿನದಲ್ಲಿ ನಾವು ಸಾಧಿಸಬೇಕಾಗಿರುವುದು ಏನು ಎಂಬ ರೆಸೆಲ್ಯೂಷನ್ ಗಳ ಪಟ್ಟಿ ಯುವ ಜನರು ಓದುವ ಮೇಜಿಗೆ ಬರುತ್ತದೆ. ಹರೆಯ ಹುಕ್ಕುವ ಪಟ್ಟಿ ಇಣುಕಿ ನೋಡಿದರೆ ಏನೇನಿರುತ್ತದೆ ಎಂಬುದು ಕೆದಕಿದಾಗ ಇವೆಲ್ಲಾ ಅಂಶಗಳು ಪ್ರತಿಯೊಬ್ಬರಲ್ಲೂ ಇರಬಹುದು ಎನಿಸುತ್ತದೆ.
ನೀವು ಈ ವರ್ಷ ಏನೆಲ್ಲಾ ಮಾಡೇಕು, ಮಾಡಾರದೆಂಬ ಪಟ್ಟಿಯನ್ನು ಒಂದೊಮ್ಮೆ ಹೋಲಿಸಿ ನೋಡಿದರೆ ಇವೆಲ್ಲಾ ಕಾಣಬಹುದು.
1. ತೂಕ ಕಡಿಮೆ/ ಹೆಚ್ಚು ಮಾಡಿಕೊಳ್ಳುವ ಹಂಬಲ.
2. ಐಪಾಡ್ ಖರೀದಿಸಿ, ಒಳ್ಳೊಳ್ಳೆ ಹಾಡು ಕೇಳಬೇಕು.
3. ನಮ್ಮಲ್ಲಿನ ಡ್ರೆಸಿಂಗ್ ಬದಲಾವಣೆ ಮಾಡುವುದರ ಜೊತೆಗೆ ಸುಧಾರಿಸಬೇಕು.
4. ಜಾತಿ/ ಧರ್ಮಗಳನ್ನೂ ಮೀರಿ ಹೆಚ್ಚೆಚ್ಚು ಸ್ನೇಹಿತರನ್ನ ಸಂಪಾಧಿಸಬೇಕು.
5. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
6. ಸಿಗರೇಟ್, ಮಧ್ಯ ಸೇವನೆಯಂತಹ ದುಶ್ಚಟಗಳಿಂದ ದೂರ ಇರಬೇಕು.
7. ನಮ್ಮನ್ನು ಹೆಚ್ಚು ಗಮನಿಸುವವರನ್ನು ಗುರುತಿಸಬೇಕು. ಅವರ ಮನಸ್ಸಿಗೆ ಘಾಸಿಯಾಗದಂತೆ ವರ್ತಿಸಬೇಕು.
8. ಜನಪ್ರಿಯ ವ್ಯಕ್ತಿಯಾಗಬೇಕು.
9. ಜನರನ್ನು ಜಡ್ಜ್ ಮಾಡುವುದನ್ನು ಬಿಡಬೇಕು. ಗೆಳೆಯರನ್ನು ಅವರು ಇರುವಂತೆ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.
10. ನನ್ನ ಬಗ್ಗೆ ನಾನೇ ಕೀಳರಿಮೆ ಮಾಡಿಕೊಳ್ಳುವುದು, ಬೈದುಕೊಳ್ಳುವುದನ್ನು ಬಿಡಬೇಕು.
11. ಯೋಗ್ಯ ಗರ್ಲ್ ಫ್ರೆಂಡ್/ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಳ್ಳಬೇಕು.
12. ರಾತ್ರಿ ಹೊತ್ತು ಬೊಬೈಲ್ ಆಫ್ ಮಾಡಿ ನಿಶ್ಚಿಂತೆಯಾಗಿರುವುದು.
13. ಹಣ ಉಳಿಸಲು ಕೂಡಿಡುವುದನ್ನು ರೂಢಿಸಿಕೊಳ್ಳಬೇಕು.
14. ಬಾಲ್ಯದ ಸ್ನೇಹಿತರನ್ನು ಹುಡುಕಿ ಭೇಟಿಯಾಗುವುದು.
15. `ನಾಳೆ ಮಾಡೋಣ ಬಿಡು’ ಎಂಬ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬರುವುದು.
16. ಇಂಗ್ಲೀಷ್, ಹಿಂದಿ ಚೆನ್ನಾಗಿ ಓದಿ ಕರಗತ ಮಾಡುವುದು.
17. ಮೊಬೈಲ್ ಗಳಲ್ಲಿ ಗೇಮ್ ಆಡುವುದು ನಿಲ್ಲಿಸಿ ದೈಹಿಕ ಶ್ರಮದ ಆಟಗಳ ಕಡೆ ಗಮನ ಹರಿಸುವುದು.
18. ಅಪ್ಪ, ಅಮ್ಮನೊಂದಿಗೆ ಹೆಚ್ಚು ಸಮಯ ಕಳೆಯೋದು. ಅವರ ಭಾವನೆಗಳಿಗೆ ಬೆಲೆಕೊಟ್ಟು ಅದರಂತೆ ನಡೆದುಕೊಳ್ಳುವುದು.
19. ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ನಲ್ಲಿರುವ ಪ್ರತಿಯೊಂದನ್ನೂ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದು.
20. ಯೋಗಾ, ಜಿಮ್, ವಾಕಿಂಗ್ ಮಾಡುವುದನ್ನು ಆರಂಭಿಸಿ ಸೋಮಾರಿತನ ದೂರ ಇಡುವುದು.
21. ಮೂಗಿನಲ್ಲಿ ಬೆರಳಿಡುವುದನ್ನ, ಉಗುರು ಕಚ್ಚುವುದನ್ನ, ಸದಾ ಮೊಬೈಲ್ ನೋಡುವುದನ್ನು ಬಿಡುವುದು.
22. ಅಡುಗೆ ಕಲಿಯೋದು.
23. ಶೀಘ್ರ ಕೋಪಕ್ಕೆ ಕಡಿವಾಣ ಹಾಕಿ ಸಮಾಧಾನ ಚಿತ್ತತೆ ಬೆಳೆಸಿಕೊಳ್ಳುವುದು.
24. ಹೊಸಹೊಸ ಅವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಸದಾ ಕ್ರಿಯಾಶೀಲವಾಗಿರುವುದು.
25. ಹಳೇ ಗರ್ಲ್ ಫ್ರೆಂಡ್ಸ್/ ಬಾಯ್ ಫ್ರೆಂಡ್ಸ್ ಗಳ ನೆನಪಿನಿಂದ ದೂರ ಉಳಿಯುವುದು.
26. ತಿಂಗಳಿಗೆ ಒಂದು ದಿನವಾದರೂ ಮೊಬೈಲ್ ಬಳಸದೇ ಇರುವುದು.
27. ಈ ವರ್ಷದ ಪರೀಕ್ಷೆಗಳಲ್ಲಿ ಶಿಸ್ತು ಬದ್ಧವಾಗಿ ಓದಿ ಹೆಚ್ಚು ಅಂಕ ಪಡೆಯುವುದು.
28. ಪದವಿ ಮುಗಿದ ಮೇಲೆ ಕೆಲಸ ಹುಡುಕಿ ದುಡಿದು ಮನೆ ಕಡೆ ನೋಡಿಕೊಳ್ಳುವುದು.
ಹೀಗೆ ಹತ್ತು ಹಲವು ಆಲೋಚನೆಗಳು, ಯೋಜನೆಗಳನ್ನು ಪ್ರತಿಯೊಬ್ಬರು ಹೊಸ ವರ್ಷದ ಹೊಸ್ತಿಲಲ್ಲಿ ಹಾಕಿಕೊಳ್ಳುವುದು ಸಹಜ. ಆದರೆ ಅವುಗಳಲ್ಲಿ ಅದೆಷ್ಟು ಪರಿಪೂರ್ಣಗೊಳ್ಳುವವು ಎಂಬುದು ಮಾತ್ರ ಅವರವರ ಭಾವಕ್ಕೆ ಬಿಟ್ಟಿದ್ದು. ಇಂತಹ ಯೋಜನೆಗಳನ್ನು ರೂಪಿಸಿಕೊಳ್ಳುವುದರಲ್ಲಿ ಯಾರೂ ಹೊರತಾಗಿಲ್ಲ.
Publicstory. in
ತುಮಕೂರು: ನಗರದ ಬಟವಾಡಿಯಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವೈಕುಂಠ ದ್ವಾರಬಾಗಿಲ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಸಾದದ ತಯಾರಿ
ಹಲವು ವರ್ಷಗಳಿಂದಲೂ ಇಲ್ಲಿ ಈ ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ವೈಕುಂಠವೇ ಧರೆಗೆ ಇಳಿದು ಬಂದಿರುವಂಥ ದೃಶ್ಯ ವೈಭವ ಪುನರ್ ಸೃಷ್ಟಿಸಲಾಗಿದೆ. ದೇವಸ್ಥಾನದಲ್ಲಿ ಸಾಲಂಕೃತಗೊಂಡ ವೈಕುಂಠ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಾರೆ ಇಲ್ಲಿ ವೈಕುಂಠ ದರ್ಶನ ಪಡೆದಿರುವ ಭಕ್ತರು.

ಜಾಹೀರಾತು
ಪ್ರತಿ ವರ್ಷದಂತೆ ಈ ವರ್ಷವೂ ಮುಂಜಾನೆ ಆರು ಗಂಟೆಗೆ ದರ್ಶನ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ 4 ಗಂಟೆ ವೇಳೆಗಾಗಲೇ ಭಕ್ತರು ಸಾಲುಗಟ್ಟಿ ದರ್ಶನಕ್ಕೆ ಸಾಲುಗಟ್ಟಿ ನಿಲ್ಲುವುದರಿಂದ ಭಕ್ತರಿಗೆ ತೊಂದರೆಯಾಗದಂತೆ ದರ್ಶನ ಸಾಲಿನ ವ್ಯವಸ್ಥೆ ಮಾಡಲಾಗಿದೆ.

ಹೂವಿನ ಅಲಂಕಾರ
ವಿಶೇಷ ವ್ಯವಸ್ಥೆಯೂ ಇದ್ದು, ಅದಕ್ಕಾಗಿ ಹೆಚ್ಚಿನ ಹಣ ತೆತ್ತು ಆ ಸಾಲಿನಲ್ಲಿ ಹೋಗಬಹುದಾಗಿದೆ. ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈಗಾಗಲೇ ದೇವಸ್ಥಾನವನ್ನು ದೀಪಂಲಕಾರಗಳಿಂದ ಶೃಂಗರಿಸಲಾಗಿದೆ.

ಡಿ.ಎಸ್.ಕುಮಾರ್
ಸ್ವಾಮಿಗೆ ವಜ್ರ ಕಿರೀಟ, ವಜ್ರ ಶಂಖದ ವಿಶೇಷ ಅಲಂಕಾರ ಮತ್ತು ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ಅಮ್ಮನವರಿಗೆ, ಬಲಮುರಿ ಗಣೇಶ, ಉತ್ಸವ ಮೂರ್ತಿ,ಆಂಜನೇಯ ಸ್ವಾಮಿ ಹಾಗೂ ಸತ್ಯನಾರಾಯಣ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್.ಕುಮಾರ್ ತಿಳಿಸಿದ್ದಾರೆ.
ಭಕ್ತರು ನಂಬಿಕೆ ದಿನೇದಿನೇ ಹೆಚ್ಚುತ್ತಲೇ ಸಾಗಿದೆ. ಪ್ರತಿ ವರ್ಷ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸ್ವಾಮಿ ದರ್ಶನದಿಂದ ಭಕ್ತರು ಪುನೀತರಾಗುತ್ತಿದ್ದಾರೆ ಎಂದರು.
ಲಕ್ಷಕ್ಕೂ ಮೀರಿ ಭಕ್ತರು ಬರುವವರಿದ್ದು ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಭಾನುವಾರ ರಾತ್ರಿಯಿಂದಲೇ ಭಟ್ಟರು ಪ್ರಸಾದದ ಕೈಕಂರ್ಯದಲ್ಲಿ ತೊಡಗಿದ್ದರು. ದೇವಸ್ಥಾನದ ಅಲಂಕಾರಗಳಿಂದ ಕಂಗಗೊಳಿಸುತ್ತಿತ್ತು. ಹಬ್ಬದ ವಾತಾವರಣದಿಂದ ಕಳೆಗಟ್ಟಿತ್ತು.
ಮಧುಗಿರಿ : ಪೌರತ್ವ ಕಾಯ್ದೆ ಬೆಂಬಲಿಸಿ ರಾಷ್ಟ್ರೀಯ ನಾಗರಿಕ ವೇದಿಕೆಯಿಂದ ಜ.7 ರಂದು ತುಮಕೂರಿನಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ತುಮಕೂರಿನ ಜನ ಕಾಯ್ದೆ ಪರ ಇದ್ದೇವೆ ಎಂದು ಈ ಜಾಥದಲ್ಲಿ ತೋರಿಸಲಾಗುತ್ತದೆ ಹಾಗೂ ಕಾಯ್ದೆಯ ಸತ್ಯಾಸತ್ಯತೆಯ ಬಗ್ಗೆ ಅರವು ಮೂಡಿಸಲಾಗುವುದು.
ಈ ಜಾಥ ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಕಾಯ್ದೆಯಿಂದ ಯಾವುದೇ ಮುಸ್ಲಿಂ ಬಾಂಧವರಿಗೆ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಅವರು ಮುಸ್ಲಿಮರನ್ನು ಎತ್ತಿ ಕಟ್ಟಿ ದೇಶದಲ್ಲಿ ಹಿಂಸಾಚಾರ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ವರದಾಯಿನಿ ಸೇವಾ ಟ್ರಸ್ಟ್ ನ ಗಾಯತ್ರಿ ನಾರಾಯಣ್, ಪಂತಜಲಿ ಯೋಗ ಸಮಿತಿ ನರಸಿಂಹಮೂರ್ತಿ. ಪ್ರೇರಣಾ ಫೌಂಡೇಶನ್ ಅಧ್ಯಕ್ಷ ಎಸ್.ಆರ್.ರಮೇಶ್ ಮುಖಂಡರುಗಳಾದ ಸುರೇಶ್, ಆದಿಶೇಷ ಗುಪ್ತ, ಪಾಂಡುರಂಗ ರೆಡ್ಡಿ, ಲಕ್ಷ್ಮಿಪತಿ, ನಾಗೇಂದ್ರ, ಕಂಬದ ರಂಗಪ್ಪ, ರಾಜಣ್ಣ, ಬಸವರಾಜು, ನಾಗರಾಜು, ಪುಟ್ಟತಾಯಮ್ಮ, ನಾಗೇಶ್ ಹಾಗೂ ಮುಂತಾದವರು ಇದ್ದರು.
ಫೋಟೊ ಶೀರ್ಷಿಕೆ 04 ಮಧುಗಿರಿ 01 – ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.
ಭಾಸ್ಕರ್ ರೆಡ್ಡಿ
ಮಧುಗಿರಿ: ಶೈಕ್ಷಣಿಕ ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಜ.6 ರಂದು ಪಟ್ಟಣದ ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ಬೃಹತ್ ಶೈಕ್ಷಣಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಭಾಸ್ಕರ್ ರೆಡ್ಡಿ ತಿಳಿಸಿದರು.
ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಲಿದ್ದು, ಶಾಸಕ ಎಂ.ವಿ.ವೀರಭದ್ರಯ್ಯ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ 2018 – 19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಉಪನಿರ್ದೇಶಕ ಎಂ.ರೇವಣಸಿದ್ದಪ್ಪ, ಒಕ್ಕೂಟದ ಗೌರವಾಧ್ಯಕ್ಷ ಬಿ.ಕೆ.ಮುನಿಸ್ವಾಮಿ, ಬಿಇಓಗಳಾದ ರಂಗಪ್ಪ, ಆರ್.ಲಿಂಗಪ್ಪ, ಸಿದ್ದಲಿಂಗಯ್ಯ, ಸಿ.ನಟರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ವಿಶೇಷ ಉಪನ್ಯಾಸ ನೀಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಮುನಿಸ್ವಾಮಿ, ಕೋಟೆ ಚಂದ್ರಶೇಖರ್ ಇನ್ನಿತರರು ಇದ್ದರು.
ತುಮಕೂರು: ತುಮಕೂರಿನ ಬಟವಾಡಿ ಮಹಾಲಕ್ಷ್ಮೀ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿ
ವಿಜೃಂಭಣೆಯಿಂದ ನಡೆಯಲಿದೆ. ಇದಕ್ಕಾಗಿ ದೇವಸ್ಥಾನ ಸರ್ವಾಂಲಕೃತವಾಗಿ ಕಂಗೊಳಿಸುತ್ತಿದೆ.

ವೆಂಕಟೇಶ್ವರ ದೇವಸ್ಥಾನ ತುಮಕೂರು ನಗರದ ಹೆಮ್ಮೆ. ಯಾರೇ ತುಮಕೂರು ನಗರಕ್ಕೆ ಬರಲಿ ಒಮ್ಮೆ ವೆಂಕಟೇಶ್ವರ ದೇವಸ್ಥಾನಕ್ಕೆ ಬಾರದೇ ಹೋಗಲಾರರು. ಕಲ್ಲುಗಳಿಂದ ಕಟ್ಟಿರುವ ಈ ದೇವಸ್ಥಾನಕ್ಕೆ ತನ್ನದೇ ಆದ ಮಹತ್ವವಿದೆ. ವೆಂಕಟೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಮಹತ್ವವಿದೆ. ಯಾರೇ ನೋಡಿದರೂ ಇನ್ನೇನು ದೇವರು ಎದ್ದೇ ಬಂದು ಬಿಡುವನು ಎನ್ನುವಷ್ಠರ ಮಟ್ಟಿಗೆ ಭಕ್ತರು ಪುನೀತರಾಗುತ್ತಾರೆ.

ತಿರುಪತಿಗೆ ಹೋಗಲಾದವರು, ಸಮಯದ ಆಭಾವ ಇದ್ದರೂ ಚಿಕ್ಕ ತಿರುಪತಿಗೆ ಹೋಗಿ ಬರುವುದು ವಾಡಿಕೆ. ಈ ವಾಡಿಕೆಯನ್ನು ಮುರಿದು ಭಕ್ತರು ಈಗ ತುಮಕೂರಿನ ವೆಂಕಟೇಶ್ವರ ದೇವಸ್ಥಾನಕ್ಕೆ ಪುನೀತರಾಗಿ ಹೋಗಿ ಬರುವುದು ರೂಢಿಗತವಾಗುತ್ತಿದೆ.
ತಿರುಪತಿ ವೆಂಕಟೇಶ್ವರ ದೇವಸ್ಥಾನದ ತದ್ರೂಪದಂತೆ ಇಲ್ಲಿಯೂ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿಯ ಭಕ್ತರು.

ವೈಕುಂಠವೆಂದರೆ ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ವಿಷ್ಣು ವಾಸಿಸುವ ಸ್ಥಾನ. ವರ್ಷಪೂರ್ತಿ ವೈಕುಂಠ ದ್ವಾರವನ್ನು ಮುಚ್ಚಲಾಗಿರುತ್ತದೆ. ಏಕಾದಶಿಯಂದು ಮಾತ್ರ ತೆರೆಯಲಾಗುತ್ತದೆ ಎಂಬುದು ಭಕ್ತರ ನಂಬಿಕೆ. ವಿಷ್ಣು ನಾನಾ ಅವತಾರಿ. ವಿಷ್ಣುವಿನ ದರ್ಶನ ಮಾಡಿದರೆ ಸರ್ವಪಾಪಗಳು ನಿವಾರಣೆಯಾಗುವುದು ಎನ್ನಲಾಗುತ್ತದೆ. ವ್ಯಕ್ತಿ ಸತ್ತ ನಂತರ ಸ್ವರ್ಗಪ್ರಾಪ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಎಲ್ಲರೂ ಅಹಂಕಾರ ಬಿಟ್ಟು ವಿಷ್ಣುವನ್ನು ಪೂಜಿಸಬೇಕು.ಈ ದಿನ ಉಪವಾಸವನ್ನು ಮಾಡಿ ವಿಷ್ಣುವನ್ನು ಪೂಜಿಸಿದರೆ ಮೋಕ್ಷ ಸಿಗಲಿದೆ ಎಂದು ಹೇಳುತ್ತಾರೆ.
ರಾಕ್ಷಸರು, ದೇವತೆಗಳು ಸೇರಿ ಸಮುದ್ರ ಮಥನದ ಮಾಡಿದ ಅಮೃತವು ಉಕ್ಕಿ ಬಂತು. ಆ ದಿನವೇ ಏಕಾದಶಿ ಎನ್ನುವವರು ಇದ್ದಾರೆ. ಈ ದಿನ ಬಹಳ ಶುಭದಿನ. ಈ ದಿನ ಸಾವಿಗೀಡಾದವರು ನೇರವಾಗಿ ವೈಕುಂಠ ಸೇರುತ್ತಾರೆ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಕೊನೆಯ ಉಸಿರನ್ನು ಇಟ್ಟುಕೊಂಡು ಈ ದಿನಕ್ಕಾಗಿಯೇ ಕಾದು ಪ್ರಾಣ ತೃಜಿಸಿದರು ಎಂದು ಹೇಳಲಾಗುತ್ತದೆ..

ಪದ್ಮಪುರಾಣದ ಮುರನ ಉಪಟಳವನ್ನು ತಾಳಲಾರದೆ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ವಿಹಾಗೂ ಮುರಾಸುರನ ಮಧ್ಯೆ ಕಾಳಗ ನಡೆದು. ಮುರಾಸುರನ ವಧೆಗೆ ಆಯುಧ ತಯಾರಿಸಲು ವಿಷ್ಣುವು ಬದರಿಕಾಶ್ರಮದಲ್ಲಿನ ಹೈಮಾವತಿ ಎಂಬ ಗುಹೆಯಲ್ಲಿ ಬಂದು ಮಲಗುತ್ತಾನೆ. ನಿದ್ದೆಯಲ್ಲಿದ್ದಂತ ವಿಷ್ಣುವನ್ನು ಮುರಾಸುರನು ಕೊಲ್ಲಲು ಬಂದಾಗ ವಿಷ್ಣುವಿನ ದೇಹದಿಂದ ಹೊರ ಬಂದ ಸ್ತ್ರೀ ಶಕ್ತಿಯು ದೃಷ್ಟಿಯಿಂದಲೇ ಮುರಾಸುರನ್ನು ಸುಟ್ಟು ಹಾಕುತ್ತಾಳೆ. ಇದರಿಂದ ಸಂತೋಷಗೊಂಡ ವಿಷ್ಣುವು ಆ ಶಕ್ತಿಗೆ ಏಕಾದಶಿ ಎಂದು ಕರೆಯುತ್ತಾನೆ ಎಂಬ ನಂಬಿಕೆಯೂ ಇದೆ.
ಮುರನು ಅಕ್ಕಿಯಲ್ಲಿ ವಾಸಿಸುವುದರಿಂದ ಈ ದಿನ ಅಕ್ಕಿ ಹಾಗೂ ಧಾನ್ಯಗಳನ್ನು ತಿನ್ನಬಾರದು. ಏಕಾದಶಿಯ ಮರುದಿನ ಮುಕ್ಕೋಟಿ ದ್ವಾದಶಿಯನ್ನು ಆಚರಣೆ ಮಾಡಲಾಗುತ್ತದೆ ವಿಷ್ಣುವನ್ನು ಆರಾಧಿಸುವುದರಿಂದ ಸರ್ವಪಾಪಗಳೂ ಕಳೆಯುತ್ತವೆ ಎಂಬ ನಂಬಿಕೆ ಭಕ್ತರದ್ದು.
ಉಪವಾಸ ಮಾಡಿ, ಮರು ದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವ ಮೂಲಕ ಉಪವಾಸ ಕೈ ಬಿಡಿ.
ಉದ್ದಿನ ಬೇಳೆ, ಅಗಸೆ ಸೊಪ್ಪು, ನೆಲ್ಲಿಕಾಯಿ, ಮೊಸರು ಬೆರೆಸಿ ಮಾಡಿದಂತಹ ರಾಯತವನ್ನು ಸೇವಿಸಬೇಕು. ಒಂದು ಹೊತ್ತು ಮಾತ್ರ ಆಹಾರ ಸೇವಿಸಿ. ಮೌನವ್ರತವನ್ನೂ ಆಚರಿಸಬಹುದು. ವಿಷ್ಣುನಾಮ ಸ್ಮರಣೆ ಮಾಡಿ. ದೇವಸ್ಥಾನಗಳಲ್ಲಿ ನಿರ್ಮಿಸುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಹಲವಾರು ವರ್ಷಗಳಿಂದಲೂ ವೆಂಕಟೇಶ್ವರದ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತದೆ. ವಿಷ್ಣುವಿನ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ಮೂಲಕ ಯಾವುದೇ ಅನಾನೂಕೂಲ ಆಗದಂತೆ ನೋಡಿಕೊಳ್ಳಲಾಗುವುದು.
ಲಕ್ಷಕ್ಕೂ ಮೀರಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಗಣ್ಯರಿಗಾಗಿ ವಿಶೇಷ ವ್ಯವಸ್ಥೆ ಇದೆ. ಮುಂಜಾನೆಯಿಂದಲೇ ದರ್ಶನ ಆರಂಭವಾಗಲಿದೆ.
– ಡಿ.ಎಸ್.ಕುಮಾರ್, ಅಧ್ಯಕ್ಷರು, ದೇವಸ್ಥಾನದ
ಆಡಳಿತ ಮಂಡಳಿ