Tuesday, February 24, 2026
Google search engine
Home Blog Page 304

ಸೂರ್ಯೋತ್ಸವ ಕಂಕಣ ಸೂರ್ಯ ಗ್ರಹಣ: ಕಾರ್ಯಾಗಾರ

ನಿಟ್ಟೂರು: ಮಕ್ಕಳಲ್ಲಿ ತುಂಬಿರುವ ಮೌಢ್ಯವನ್ನು ಹೋಗಲಾಡಿಸಲು ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಡಿಡಿಪಿಯ ಕಚೇರಿಯ ವಿಜ್ಞಾನ ಪರಿವೀಕ್ಷಕಿ ಪ್ರತಿಭಾ ಶಿಕ್ಷಕರಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುಬ್ಬಿ ತಾಲೂಕಿನ ನಿಟ್ಟೂರಿನ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸೂರ್ಯೋತ್ಸವ ಕಂಕಣ ಸೂರ್ಯ ಗ್ರಹ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಬೇಕು. ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿರುವ ಮೌಢ್ಯ ದೂರವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಕ ಕ್ಯಾಲೆಂಡರ್ ಶಿವಕುಮಾರ್ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕು ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಸಿವಿಎನ್ ಮೂರ್ತಿ ಮಾತನಾಡಿ ಮಕ್ಕಳಲ್ಲಿ ವೈಜ್ಞಾನಿಕ ತಿಳುವಳಿಕೆ ಮೂಡಿಸುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಮೌಢ್ಯದ ಕೂಪದಿಂದ ಹೊರಬರಲು ಅವಕಾಶವಾಗುತ್ತದೆ. ಶಿಕ್ಷಕರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಬಿಆರ್ ಸಿ ವಸಂತಕುಮಾರ್, ಮುಖ್ಯ ಶಿಕ್ಷಕಿ ಸುವರ್ಣಮ್ಮ, ಉಮೇಶ್, ಗಂಗರಾಜ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಚಾಲಕ ನಾಗೇಶ್ ಸ್ವಾಗತಿಸಿದರು. ಸಂಚಾಲಕ ಪರಮೇಶ್ವರಯ್ಯ ಕಾರ್ಯಕ್ರಮ ನಿರೂಪಿಸಿದರು.

ತುಮಕೂರಿಗೆ ಮೋದಿ: ಸ್ಥಳ ಪರಿಶೀಲನೆ

ಜನವರಿ 3ರಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ
ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜು ಬೊಮ್ಮಾಯಿ ಕಾರ್ಯಕ್ರಮದ ಸ್ಥಳ ಪರಿಶೀಲನೆ. ನಡೆಸಿದರು.

ತುಮಕೂರು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಬಂದ ಬಸವರಾಜು ಬೊಮ್ಮಾಯಿ ರಾಜ್ಯ ರೈತ ಸಮಾವೇಶ ಸ್ಥಳ ಪರಿಶೀಲನೆ ಮಾಡಿ ಸಮಾವೇಶದಲ್ಲಿ 2 ನೇ ಹಂತದ ರೈತ ಸಮ್ಮಾನ್ ಯೋಜನೆಗೆ ಚಾಲನೆ ನೀಡಲಾಗುವುದ ಎಂದರು.

ಜ.3ರಂದು ಸಿದ್ದಗಂಗಾ ಮಠಕ್ಕೆ ಭೇಟಿ ಮೋದಿ ಭೇಟಿ ನೀಡಲಿದ್ದಾರೆ. ಡಾ. ಶಿವಕುಮಾರಸ್ವಾಮಿ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಅರ್ಧ ಗಂಟೆ ಕಾಲ ಮಠದಲ್ಲಿ ಕಾಲ ಕಳೆಯಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕುರಿತು ಪರಿಶೀಲನೆ ನಡೆಸಲು ಬಂದಿದ್ದೇನೆ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.ತುಮಕೂರು ಪ್ರಗತಿಪರವಾದ ಜಿಲ್ಲೆಯಾಗಿರುವುದರಿಂದ ಇಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು..

ರಾಜ್ಯದಲ್ಲಿ ಶಾಂತಿಯುತ ಪರಿಸ್ಥಿತಿ ನಿರ್ಮಾಣವಾಗಿದೆ. ಸಭೆಯಲ್ಲಿ ಸಂತ್ರಸ್ತರಿಗೆ ಪರಿಹಾರ ತನಿಖೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರಲು ಸೈಬರ್ ಕ್ರೈಂ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸೈಬರ್ ಕ್ರೈಂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಪರ-ವಿರೋಧ ಚರ್ಚೆಯಲ್ಲಿ ಹದ್ದು ಮೀರುವವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ..ಕಾಯ್ದೆ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಅಭಿಯಾನ ಮಾಡುತ್ತೇವೆ..
ಕೇರಳದಿಂದ ಬಂದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಈ ಬಗ್ಗೆ ವಿಡಿಯೋಗಳು ಸಿಕ್ಕಿದೆ.ತನಿಖೆ ಸಂದರ್ಭದಲ್ಲಿ ಎಲ್ಲವನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಿಸಿದರು.

ಯುವ ಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು:ಸೂಪಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್.ರಮೇಶ್

ಯುವ ಜನತೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಸೂಪಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್.ರಮೇಶ್ ತಿಳಿಸಿದರು.

ಗುಬ್ಬಿಯಲ್ಲಿ ಭಾನುವಾರ ನಡೆದ ಮೀಡಿಯ ಬ್ಯಾಕ್ ಆಫೀಸ್ ವಾರ್ಷಿಕ ಕ್ರೀಡಾ ಕೂ‍ಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿಗೆ ಕುಟುಂಬ ಸಾಮಾಜಿಕ ಜವಬ್ಧಾರಿ ಇರಬೇಕು. ಕುಟುಂಬದ ಜವಬ್ಧಾರಿಯಿಂದ ಇಡೀ ಕುಟುಂಬ ಬೆಳೆಯುತ್ತದೆ. ಜವಬ್ಧಾರಿ ಮರೆತಲ್ಲಿ ಸಾಕಷ್ಟು ಅನಾಹುತಗಳಾಗುತ್ತವೆ.

ಕಂಪನಿ ಕಾರ್ಮಿಕರು ಪ್ರಾಮಾಣಿಕವಾಗಿ ದುಡಿಯಬೇಕು. ಮಾಲೀಕರು ದುಡಿಮೆಯನ್ನು ಗೌರವಿಸಬೇಕು. ಕಾರ್ಮಿಕರ ಬಗ್ಗೆ ಕಾಳಜಿ ಜವಬ್ಧಾರಿ ತೋರಬೇಕು ಎಂದರು.

ಬೆಂಗಳೂರಿನಿಂದ ಕೆಲಸ ಬಿಟ್ಟು ಮಣ್ಣಿನ ಋಣ ತೀರಿಸುವ ಸಲುವಾಗಿ ಗುಬ್ಬಿಯಲ್ಲಿ ಕಂಪನಿ ಆರಂಭಿಸಿರುವ ರಘು ಅವರ ಕಾರ್ಯ ಶ್ಲಾಘನೀಯ ಎಂದರು.

ತಹಶಿಲ್ದಾರ್ ಮಮತಾ ಮಾತನಾಡಿ ಮಾಡುವ ಕೆಲಸದ ಬಗ್ಗೆ ಗೌರವ ಇರಬೇಕು. ಜೀವನದ ಹಿನ್ನೆಲೆ ಮರೆಯಬಾರದು ಎಂದರು.
ನಿವೃತ್ತ ಪ್ರಾಂಶುಪಾಲ ನಾಗಪ್ಪ ಮಾತನಾಡಿ ದೇಶೀ ಕ್ರೀಡೆಗಳಿಗೆ ಒತ್ತು ನೀಡಬೇಕು . ಕಂಪನಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ವ್ಯವಸ್ಥಾಪಕನಿರ್ದೇಶಕ ರಘು ಮಾತನಾಡಿ ಕಂಪನಿ ಕೇವಲ 20 ಮಂದಿ ನೌಕರರಿಂದ ಆರಂಭವಾಗಿ ಇದೀಗ 450 ಮಂದಿಗೆ ಉದ್ಯೋಗ ಕೊಡಲಾಗಿದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ಕಂಪನಿ ವಿವಿಧ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಕಂಪನಿ ಶ್ರಮಿಸುತ್ತಿದೆ ಎಂದರು.

ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ 450 ಕುಟುಂಬಗಳ ಜೀವನಕ್ಕೆ ಆಧಾರವಾಗಿರುವ ರಘು ಅವರಿಗೆ ರಾಜ್ಯೊತ್ಸವ ಪ್ರಶಸ್ತಿ ಕೊಡಿಸಲಾಗುವುದು.ಕಂಪನಿ ಯಶಸ್ವಿಗಾಗಿ ಎಲ್ಲರು ಶ್ರಮಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಮೊಹಮದ್ ಸಾದಿಕ್ ಶಿವಕುಮಾರ್ ಉಪಸ್ಥಿತರಿದ್ದರು.

ತೂರು ಬಿಲ್ಲೆ ಜೂಜುಕೋರರ ಬಂಧನ

ಪಾವಗಡ: ತಾಲ್ಲೂಕಿನ ಕೊಡಮಡುಗು ಬಳಿಯ ಸುಂಕಾರ್ಲಕುಂಟೆ ರಸ್ತೆಯಲ್ಲಿ ತೂರು ಬಿಲ್ಲೆ ಜೂಜು ಆಡುತ್ತಿದ್ದ  14 ಮಂದಿಯನ್ನು ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ತಂಡ ಶುಕ್ರವಾರ ಬಂಧಿಸಿದೆ.

ಆರೋಪಿಗಳಿಂದ 51700 ರೂಪಾಯಿ ನಗದು, 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

  ಪ್ರಕರಣದ ತೂರುಬಿಲ್ಲೆ ಜೂಜಾಟದ ಪಣಕ್ಕೆ ಇಟ್ಟಿದ್ದ ಹಣ ಮತ್ತು ಆರೋಪಿಗಳನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಡಿ ವೈ ಎಸ್ ಪಿ ಎಂ.ಪ್ರವೀಣ್, ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ, ಸಿಬ್ಬಂದಿ  ಆರ್.ಜೆ.ಮಂಜುನಾಥ್, ರಾಮಕೃಷ್ಣ, ನಾಗಭೂಷಣರೆಡ್ಡಿ, ಭೋಗನರಸಿಂಹ ಅವರನ್ನು ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.

ದ್ವಿಚಕ್ರ ವಾಹನ ಕಳವು ಆರೋಪಿ ಬಂಧನ

ಪಾವಗಡ:  ದ್ವಿಚಕ್ರ ವಾಹನ ಕಳವು ಆರೋಪಿಯನ್ನು ಶುಕ್ರವಾರ ಅಪರಾಧ ಪತ್ತೆ ಧಳ ಬಂಧಿಸಿದೆ.

ತಾಲ್ಲೂಕಿನ ನಲ್ಲದೀಗಲಬಂಡೆ ಗ್ರಾಮದ ಲಕ್ಷ್ಮಿಕಾಂತನಾಯ್ಕ(22) ಬಂಧಿತ ಆರೋಪಿ. ಆರೋಪಿಯಿಂದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೆನುಗೊಂಡ ರಸ್ತೆಯಲ್ಲಿ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ಆರೋಪಿಯನ್ನು ಗಸ್ತಿನಲ್ಲಿದ್ದ ಪತ್ತೆ ಧಳದ ಸಿಬ್ಬಂದಿ ಪ್ರಶ್ನಿಸಿದ್ದಾರೆ.  ನಂತರ ಪೊಲೀಸ್ ಠಾಣೆಗೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ 5 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ ಜಿಲ್ಲಾ ಹೆಚ್ಚುವರಿ ಅಧೀಕ್ಷಕ ಟಿ.ಜಿ.ಉದೇಶ್, ಡಿವೈಎಸ್ ಪಿ ಎಂ.ಪ್ರವೀಣ್ ಅವರ ಮಾರ್ಗದರ್ಶನದಲ್ಲಿ, ತಿರುಮಣಿ ವೃತ್ತ ನಿರೀಕ್ಷಕ ಶ್ರೀಶೈಲಮೂರ್ತಿ ನೇತೃತ್ವದಲ್ಲಿ ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ, ಎ.ಎಸ್.ಐ ಕೆ.ಎಸ್.ರಾಮಚಂದ್ರ, ಸಿಬ್ಬಂದಿ ಸೋಮಶೇಖರ, ಕೇಶವರಾಜು, ಗೋಪಾಲಕೃಷ್ಣ, ಶ್ರೀನಿವಾಸ, ಗಂಗರಾಜು, ಜಗನ್ನಾಥ್   ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ.ವಂಶಿಕೃಷ್ಣ ಅವರು ಅಭಿನಂಧಿಸಿದ್ದಾರೆ.

ಅಕ್ಷರ ದಾಸೋಹ ನೌಕರರ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ

ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಮಹಿಳೆಯರು ಸೌಲಭ್ಯ, ಕನಿಷ್ಠಕೂಲಿ ಇಲ್ಲದೇ 18 ವರ್ಷಗಳಿಂದ ದುಡಿಯುತ್ತಾ ಬರುತ್ತಿದ್ದು ಅವರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನಹರಿಸಿಲ್ಲ. ವೇತನ ಹೆಚ್ಚಳ, ನಿವೃತ್ತಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 26, 2019ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ತಿಳಿಸಿದ್ದಾರೆ.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಯಾವುದೇ ಮಾಹಿತಿ ನೀಡದೇ ಏಕಾಏಕಿ ಇಸ್ಕಾನ್ ಅಕ್ಷಯ ಪಾತ್ರೆಗೆ ಬಿಸಿಯೂಟ ಯೋಜನೆ ವಹಿಸಲು ಮುಂದಾಗಿರುವುದು ಖಂಡನೀಯ.

ಸರ್ಕಾರದ ಈ ಕ್ರಮದಿಂದ ಬಡ ಮಹಿಳೆಯರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದು ಖಂಡನೀಯ ಎಂದರು.
ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ಹೆಚ್ಚಳ ಮಾಡಬೇಕು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಶಾಲೆಯಲ್ಲಿ ದಿನಕ್ಕೆ 6 ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದರೂ ಆದೇಶದಲ್ಲಿ ಕೇವಲ 4 ಗಂಟೆ ಎಂದು ನಮೂದಿಸಿರುವುದನ್ನು 6 ಗಂಟೆ ಎಂದೂ ನಮೂದಿಸಬೇಕು. ಅಡುಗೆ ಕೆಲಸದೊಟ್ಟಿಗೆ ಶಾಲೆಗಳಲ್ಲಿ ‘ಡಿ’ ಗ್ರೂಪ್ ನೌಕರರು ಇಲ್ಲದಿರುವುದರಿಂದ ಇವರಿಗೆ ‘ಡಿ’ ಗ್ರೂಪ್ ಕೆಲಸಗಳನ್ನು ಅಧಿಕೃತವಾಗಿ ವಹಿಸಬೇಕು ಎಂದು ಒತ್ತಾಯಿಸಿದರು.

ಸಂಘಟನಾ ಕಾರ್ಯದರ್ಶಿ ಕೆಂಚಮ್ಮ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈದೋಟ ಮಾಡಲು ಅವಕಾಶವಿದ್ದು ಇದಕ್ಕೆ ಅನುಮತಿ ನೀಡಬೇಕು. 2001-02 ದುಡಿಯುತ್ತಿರುವ ಮಹಿಳೆಯರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರಿಗೆ ನಿವೃತ್ತಿ ಸೌಲಭ್ಯ ನೀಡಬೇಕು. ಬಿಸಿಯೂಟ ನೌಕರರಿಂದ 100 ರೂ, ಸರ್ಕಾರ 100 ಕೊಟ್ಟು ಎಲ್‍ಐಸಿ ಯಲ್ಲಿ ಇಟ್ಟು ನಿವೃತ್ತಿಯಾದಾಗ ಕೂಡಿಟ್ಟ ಹಣ ಇಡಗಂಟು ಕೊಡಬೇಕು ಎಂದು ಆಗ್ರಹಿಸಿದರು.

ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿ ಮೇಲ್ವಿಚಾರಣೆ ಇರಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈಬಿಡುವ ಕ್ರಮ ನಿಲ್ಲಬೇಕು. ಅಡುಗೆ ಸಿಬ್ಬಂದಿ ಮೇಲೆ ಆರೋಪ ಹೊರಿಸಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಬೇಕು. ಬಿಸಿಯೂಟ ಯೋಜನೆ 12ನೇ ತರಗತಿವರೆಗೆ ವಿಸ್ತರಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಅಡುಗೆ ಗುಣಮಟ್ಟ, ಸ್ವಚ್ಚತೆ, ಅಡುಗೆ ಸಿಬ್ಬಂದಿ ಬದ್ದತೆಯನ್ನು ಹೆಚ್ಚಿಸಲು ಮತ್ತು ಹಾಗೆಯೇ ಸರ್ಕಾರದಿಂದ ತಂದಿರುವ ಸುಧಾರಣೆಗಳನ್ನು ಅಡುಗೆ ಸಿಬ್ಬಂದಿಗೆ ತಿಳಿಸುವುದು ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ತಿಂಗಳಿಗೊಮ್ಮೆ ಕ್ಷಸ್ಟರ್ ಮಟ್ಟದಲ್ಲಿ ಕನಿಷ್ಟ ಮುಖ್ಯ ಅಡುಗೆದಾರರಿಗೆ ಮಾಸಿಕ ಸಭೆ ನಡೆಸಬೇಕು ದಲಿತ ಮಹಿಳೆಯರಿಂದ ಅಡುಗೆ ಮಾಡಿಸಬೇಕು. ಅಡುಗೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಅಡುಗೆಯವರ ಕೈಯಲ್ಲೇ ಇರಬೇಕು. ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿಗಳಿಗೆ ಬೇಸಿಗೆ ಮತ್ತು ದಸರಾ ರಜಾ ನೀಡುವಂತೆ ಅಕ್ಷರ ದಾಸೋಹ ಸಿಬ್ಬಂದಿಗೂ ಭತ್ಯೆಯನ್ನು ನೀಡಬೇಕು. ಹೇರಿಗೆ ರಜಾ, ಹೇರಿಗೆ ಭತ್ಯೆ ನಿಡಬೇಕು. ರಾಷ್ಟ್ರೀಯ ಸ್ವಾಸ್ಥ ಭೀಮಾಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ಕೊರಟಗೆರೆ ತಾಲೂಕು ಆಧ್ಯಕ್ಷೆ ನಾಗರತ್ನ, ಪಾವಗಡ ತಾಲೂಕು ಅಧ್ಯಕ್ಷೆ ಸಿದ್ದಮ್ಮ, ಖಜಾಂಚಿ ಸುನೀತ ಉಪಸ್ಥಿತರಿದ್ದರು.

ಆರೋಗ್ಯ ತಪಾಸಣಾ ಶಿಬಿರ

ವೈ.ಎನ್.ಹೊಸಕೋಟೆ : ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಭಾರತೀಯ ವೈದ್ಯಕೀಯ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಮೂತ್ರಪಿಂಡ, ಕ್ಯಾನ್ಸರ್, ಲೈಂಗಿಕ ರೋಗಗಳ ತಪಾಸಣೆ, ಸ್ತ್ರೀ ರೋಗ ಖಾಯಿಲೆ, ಮಾನಸಿಕ ಕಾಯಿಲೆ, ಕ್ಷಯರೋಗ ತಪಾಸಣೆ ಇನ್ನಿತರೆ ಕಾಯಿಲೆಗಳ ಬಗ್ಗೆ ಸೂಕ್ತ ಆಪ್ತಸಮಾಲೋಚನೆ ಮತ್ತು ತಪಾಸಣೆ ನಡೆಸಲಾಯಿತು.

ಜಿಲ್ಲಾಪಂಚಾಯಿತಿ ಸದಸ್ಯೆ ಗೌರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಸಿ.ನಾಗರಾಜ, ಗ್ರಾಮಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಮಹಬೂಬ್ ಸಾಬ್, ವೈದ್ಯಾಧಿಕಾರಿ ಡಾ.ಕಿರಣ್, ಡಾ.ಲಿಂಗರಾಜು, ಪಿಡಿಓ ತಿಪ್ಪಯ್ಯ, ಗ್ರಾ.ಪಂ ಸದಸ್ಯ ತಿಪ್ಪೇಸ್ವಾಮಿ, ನಾಗರಾಜು, ಆಪ್ತಸಮಾಲೋಚಕ ಹರೀಶ್, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.

ಗಿಡಮರಗಳಿಂದ ಉತ್ತಮ ಆರೋಗ್ಯ

ವೈ.ಎನ್.ಹೊಸಕೋಟೆ : ತಾಲ್ಲೂಕಿನಲ್ಲಿ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಜನತೆಯ ಆರೋಗ್ಯವು ಬೆಳೆಯುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಮರಿದಾಸನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವನದರ್ಶನ ಪ್ರವಾಸಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ. ಇದಕ್ಕೆ ಮರಗಿಡಗಳ ಕಡಿಮೆ ಇರುವುದು ಒಂದು ಕಾರಣ. ಬೇರೆ ಬೇರೆ ಉದ್ದೇಶಕ್ಕಾಗಿ ಜನತೆ ಮರಗಿಡಗಳನ್ನು ಕಡಿದು ನಾಶ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಮಳೆಯ ಅಭಾವ ಕಡಿಮೆ ಇದೆ. ಇದನ್ನು ಅರಿತು ಮಕ್ಕಳು ಗಿಡಗಳ ಮಹತ್ವವನ್ನು ಅರಿಯಬೇಕು ಮತ್ತು ಸಾದ್ಯವಾದಷ್ಟು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.

ತಿಪಟೂರು ಅರಣ್ಯ ವಿಭಾಗದ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಮಕ್ಕಳಲ್ಲಿ ಗಿಡ-ಮರಗಳ ಅರಿವಿನ ಅವಶ್ಯಕತೆ ಇದೆ. ಅರಣ್ಯದ ಪ್ರಾಮುಖ್ಯತೆಯನ್ನು ಅರಿಯದಿದ್ದರೆ ಮುಂದಿನ ತಲೆಮಾರು ಅನಾರೋಗ್ಯ ಪೀಡಿತವಾಗಬೇಕಾಗುತದೆ. ಹಾಗಾಗಿ ಗಿಡಮರಗಳ ಮಹತ್ವವನ್ನು ಮನವರಿಕೆ ಮಾಡಲು ಅರಣ್ಯ ಇಲಾಖೆಯ ವತಿಯಿಂದ ವನದರ್ಶನ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಚಿತ್ರದುರ್ಗದ ಜೋಗಿಮಟ್ ಅರಣ್ಯ ಪ್ರದೇಶಕ್ಕೆ ವನದರ್ಶನಕ್ಕೆ ಕರೆದುಕೊಂಡು ಹೋಗಲಾಯಿತು.

ಗ್ರಾಮಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ತಾಲ್ಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಂ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಬಸವರಾಜು ಮತ್ತು ಶರತ್ ಕುಮಾರ್, ಮುಖಂಡ ಅಂಜಿನನಾಯಕ, ಪ್ರಾಂಶುಪಾಲರಾದ ಸೀತಾಲಕ್ಷ್ಮಿ, ಮುಖ್ಯಶಿಕ್ಷಕರಾದ ರಾಜಗೋಪಾಲ್ ಮತ್ತು ಹನುಮಂತರಾಯಪ್ಪ, ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.

4ನೇ ಶನಿವಾರದ ರಜೆ ರದ್ದತಿ ವಿರುದ್ಧ ವಕೀಲರ ಪ್ರತಿಭಟನೆ

ಪಾವಗಡ:
ರಾಜ್ಯ ಸರ್ಕಾರ ನ್ಯಾಯಾಲಯಗಳಿಗೆ ತಿಂಗಳ 4ನೇ ಶನಿವಾರದ ರಕೆಯನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಇಲ್ಲಿನ ವಕೀಲರು ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಮುಂಭಾದ ಸಮಾವೇಶಗೊಂಡ ವಕೀಲರು ಎಲ್ಲಾ ಇಲಾಖೆಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ರದ್ದು ಪಡಿಸಿಲ್ಲ. ಆದರೆ ನ್ಯಾಯಾಲಯದ ಸಿಬ್ಬಂಧಿಗೆ ಮಾತ್ರ 4ನೇ ಶನಿವಾರದ ರಜೆಯನ್ನು ರದ್ದು ಪಡಿಸಿದೆ. ಕೆಲವೊಮ್ಮೆ ತಾಲ್ಲೂಕು ಕಚೇರಿ ಸೇರಿದಂತೆ ಇತರೆ ಇಲಾಖೆಗಳು 4ನೇ ಶನಿವಾರ ರಜೆ ಇದ್ದಾಗ ವಕೀಲರ ಕಚೇರಿ ಕೆಲಸಗಳಿಗೆ ತೊಂದರೆ ಉಂಟಾಗಲಿದೆ. ಆದ ಕಾರಣದಿಂದಾಗಿ ಸರ್ಕಾರ ಇತರೆ ಇಲಾಖೆಗಳಿಗೆ ರಜೆ ನೀಡುವಂತೆ ನ್ಯಾಯಾಲಗಳಿಗೂ 4ನೇ ಶನಿವಾರದ ರಜೆಯನ್ನು ಈ ಹಿಂದಿನಂತೆ ಮುಂದುವರೆಸಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಐ.ಎಸ್. ಅಕ್ಕಲಪ್ಪ, ಉಪಾರ್ಧಯಕ್ಷ ಬಿ.ಎಂ.ರಾಜಶೇಖರ್, ಕಾರ್ಯದರ್ಶಿ ಪಿ.ರಮೇಶ, ವಕೀಲರಾದ ಶಶಿಕಿರಣ್, ಎಸ್.ಎಣ್.ಮುರಳೀಧರ್, ಎನ್.ರವೀಂದ್ರ, ಉಗ್ರಮೂರ್ತಿ, ಡಿ.ಪಾಂಡುರಂಗಪ್ಪ, ಆರ್.ರಂಗನಾಥಪ್ಪ, ರಘುನಂದನ್, ಆರ್.ಹನುಮಂತರಾಯ, ಸಿ.ಎಚ್.ಹನುಮಂತರಾಐ, ಪಿ.ವಿ.ಯಜುನಾರಾಯಣ, ಎನ್.ನಾಗೇಂದ್ರರೆಡ್ಡಿ ಇತರರು ಇದ್ದರು.

ಕೊರಟಗೆರೆಯಲ್ಲಿ ಲಂಗೂರ್ ಕೋತಿ ಅಪರೂಪದ ಅತಿಥಿ

ತುಮಕೂರು:
ಕೊರಟಗೆರೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ಲಂಗೂರ್ ಕೋತಿ ದಿಢೀರ್ ಪ್ರತ್ಯಕ್ಷವಾಯಿತು. ಅಪರೂಪದ ಅತಿಥಿಯನ್ನು ನೋಡಲು ಜನ ಮುಗಿಬಿದ್ದರು.
ಪಟ್ಟಣದಲ್ಲಿ ಇದುವರೆಗೂ ಮಾಮೂಲಿ ಕೋತಿಯನ್ನು ನೋಡಿದ್ದ ಜನ ಲಂಗೂರ್ ಕೋತಿ ಇದ್ದಕ್ಕಿದ್ದಹಾಗೆ ಪತ್ಯಕ್ಷವಾಗಿದ್ದನ್ನು ನೋಡಿ ಆಶ್ಚರ್ಯಚಕಿತರಾದರು. ಲಂಗೂರ್ ಕೋತಿ ಪಟ್ಟಣದ ಬಸ್ ನಿಲ್ದಾಣದಲ್ಲಿನ ತಳ್ಳುವ ಗಾಡಿಯಲ್ಲಿದ್ದ ಹಣ್ಣಿನ ಅಂಗಡಿಗಳಿಗೆ ಭೇಟಿ ನೀಡಿದ್ದೆಯೇನೋ ಎಂಬಂತೆ ಪ್ರತೀ ಹಣ್ಣಿನ ಗಾಡಿ ಮೇಲು ಕುಳಿತು ಹಣ್ಣನ್ನು ತಿನ್ನುತ್ತಿತ್ತು. ಕೋತಿಗಳು ಹಣ್ಣಿನಂಗಡಿಗೆ ಮುತ್ತಿಗೆ ಹಾಕಿದಾಗ ಸಹಜವಾಗಿಯೇ ವ್ಯಾಪಾರಿಗಳು ಕೋಲು ಹಿಡಿದು ಓಡಿಸುತ್ತಿದ್ದರು.  ಆದರೆ ಅಪರೂಪದ ಲಂಗೂರ್ ಕೋತಿ ಹಣ್ಣಿನಂಗಡಿಗೆ ಮುತ್ತಿಗೆ ಹಾಕಿ ತನಗೆ ಬೇಕಾದ ಹಣ್ಣು ತೆಗೆದುಕೊಂಡು ತಿಂದರೂ ಕೂಡ `ತಿನ್ನಲಿ ಬಿಡು’ ಎಂದು ದಾರಾಳತನದಲ್ಲಿ ಅಂಗಡಿ ಮಾಲೀಕರು ನಿಂತಿದ್ದರು. ಕೋತಿಯನ್ನು ನೋಡಲು ಮುಗಿಬಿದ್ದಿದ್ದ ಜನರನ್ನು ನೋಡಿ ಕೆಲವೊಮ್ಮೆ ಕೊಂಚ ಗಾಬರಿಯಾದಂತೆ ಕಂಡ ಲಂಗೂರ್ ಆನಂತರ ಜನರೊಂದಿಗೆ ಸಹಜವಾಗಿಯೇ ಒಗ್ಗಿಕೊಂಡಿತು. ಜನರು ಪ್ರೀತಿಯಿಂದ ಹಣ್ಣು ಇತರೆ ತಿನಿಸು ಕೊಟ್ಟರೆ ಅದನ್ನು ಭೀತಿಯಿಲ್ಲದೆ ಇಸುಕೊಂಡು ತಿನ್ನುತ್ತಿತ್ತು.  ಅಪರೂಪದ ಪ್ರಾಣಿ ಪಟ್ಟಣದಲ್ಲಿ ಕಂಡ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ತಮ್ಮ ಸ್ನೇಹಿತರಿಗೆ ಶೇರ್ ಮಾಡುತ್ತಿದ್ದರು. ಲಂಗೂರ್ ಬಸ್ ನಿಲ್ದಾಣದಲ್ಲಿದೆ ಎಂದು ತಿಳಿದ ಪಟ್ಟಣದ ವಿವಿಧ ಭಾಗದಲ್ಲಿದ್ದ ಕೆಲವರು ಅದನ್ನು ನೋಡಬೇಕೆಂಬ ಉತ್ಸುಕತೆಯಲ್ಲಿ ಓಡೋಡಿ ಬಂದು ಆಶ್ಚರ್ಯದಿಂದ ನೋಡುತ್ತಿದ್ದರು. ಪೋಟೋ, ಸೆಲ್ಫಿ, ವಿಡಿಯೋ ತೆಗೆದು ಖುಷಿ ಪಟ್ಟರು.  ನೋಡುಗರ ಗುಂಪು ಹೆಚ್ಚಾಗುತ್ತಿದ್ದಂತೆ ಲಂಗೂರ್ ಕೋತಿ ಜನರ ಗುಂಪಿನ ಮಧ್ಯದಲ್ಲಿ ಇದ್ದಕ್ಕಿದ್ದಹಾಗೆ ಮಾಯವಾಯಿತು. ಸಹಜವಾಗಿ ಲಂಗೂರ್ ಕೋತಿ ದಟ್ಟ ಅರಣ್ಯ ಪ್ರದೇಶ ಸೇರಿದಂತೆ ಶೀತವಲಯದಲ್ಲಿ ಕಂಡು ಬರುತ್ತವೆ.

ಕೊರಟಗೆರೆಯಲ್ಲಿ ಶುಕ್ರವಾರ ಸಂಜೆ ಇದ್ದಕ್ಕಿದಹಾಗೆ ಪತ್ರಕ್ಷವಾದ ಲಂಗೂರ್ ಕೋತಿ.