Sunday, December 28, 2025
Google search engine
Home Blog Page 319

ತಿಪಟೂರು ಗಣೇಶೋತ್ಸವ; ಪಟಾಕಿ ಬಗ್ಗೆ ಎಚ್ಚರವಹಿಸಲು ಆಗ್ರಹ

ತಿಪಟೂರು; ತಿಪಟೂರಿನಲ್ಲಿ ಅದ್ಧೂರಿ ಗಣಪತಿ ಜಾತ್ರೆ ನ. 23 ಮತ್ತು 24 ರಂದು ನಡೆಯಲಿದ್ದು, ಜಾತ್ರೆಯಲ್ಲಿ ಪಟಾಕಿ ಸಿಡಿಸುವಾಗ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳ ಬೇಕೆಂದು ತಿಪಟೂರು ಕೆರೆ ಗುತ್ತಿಗೆದಾರರಾದ ಹೆಚ್ ಎಸ್ ದೇವರಾಜ್ ಅಗ್ರಹಿಸಿದ್ದಾರೆ.

ಕಳೆದ ಬಾರಿಯ ಜಾತ್ರೆಯಲ್ಲಿ ಸಮರ್ಪಕ ಮುಂಜಾಗೃತ ಕ್ರಮಗಳಿಲ್ಲದೆ ಅನಾಹುತವಾಗಿದ್ದು . ಈ ಬಾರಿ ಅಂತಹ ದುರಂತಗಳಿಗೆ ಅಸ್ಪದ ನೀಡಬಾರದು. ಪಟಾಕಿ ಸಿಡಿತದಿಂದ ಅನಾಹುತ ಸಂಭವಿಸಿದರೆ ಯಾರನ್ನು ಹೊಣೆ ಮಾಡುತ್ತೀದ್ದಿರಿ ಎಂದು ಸ್ಪಷ್ಟಪಡಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಕೋರಿದ್ದಾರೆ.

ಉತ್ಸವದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಗೆ ಕೆರೆ ಗುತ್ತಿಗೆದಾರರಾದ ನನಗೆ ಆಹ್ವಾನಿಸಿಲ್ಲ. ಸರ್ಕಾರ ಕೆರೆ ಗುತ್ತಿಗೆ ನೀಡುವಾಗ ಕೆರೆಯಲ್ಲಿ ಅಥವಾ ಕೆರೆ ಏರಿಯ ಮೇಲೆ ಪಟಾಕಿ ಹೊಡೆಯ ಬಾರದೆಂದು ನಿಂಬಂಧನೆ ವಿಧಿಸಿದೆ. ಶಾಂತಿ ಸಭೆಗೆ ಸಣ್ಣ ನೀರಾವರಿ ಇಲಾಖೆ , ಮೀನುಗಾರಿಕಾ ಇಲಾಖೆ ಮತ್ತು ಮೀನು ಗುತ್ತಿಗೆದಾರರನ್ನು ಕರೆಯದೆ ಏಕಾ ಏಕಿ ನಿರ್ಧಾರ ಮಾಡಲಾಗಿದೆ. ವಿಸರ್ಜನೆ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ. ಯಾರಿಂದ ಮುಚ್ಚಳಿಕೆ ಪಡೆದಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

ಗಣೇಶೋತ್ಸವ ಹಿನ್ನೆಲೆ ಯಲ್ಲಿ ಯಾವುದೇ ಅನಾಹುತ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಗರ್ಭಿಣಿಯರು ಹೀಗಿರಬೇಕು ಎನ್ನುತ್ತಾರೆ ಡಾ.ಆಶಾ ಬೆನಕಪ್ಪ

ತುಮಕೂರು; ಮಕ್ಕಳ ಉಳಿವು ಮತ್ತು ಬೆಳವಣಿಗೆಯಲ್ಲಿ ನವಜಾತ ಶಿಶುವಿನ ಆರೈಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ ಜಿಲ್ಲಾಮಟ್ಟದ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮ ಅಯೋಜಿಸಿದ್ದವು. ಕಾರ್ಯಕ್ರಮದಲ್ಲಿ ನಿವೃತ್ತ ಮಕ್ಕಳ ತಜ್ಞೆ ಡಾ. ಆಶಾ ಗರ್ಭಿಣಿಯರಿಗೆ ಸಲಹಗೆಳನ್ನು ನೀಡಿದರು.

ಗರ್ಭ ಧರಿಸಿದ ಹೆಣ್ಣುಮಕ್ಕಳು ಪೌಷ್ಠಿಕತೆ ಕಾಪಾಡಿಕೊಂಡು ಮಗುವಿನ ತೂಕ ಹೆಚ್ಚಿಸಿಕೊಳ್ಳಬೇಕು, ಮಗು ಹುಟ್ಟಿದ ನಂತರ ನವಜಾತ ಶಿಶುವಿನ ಆರೈಕೆಯ ಬಗ್ಗೆ ತಾಯಂದಿರಿಗೆ ವೈದ್ಯರು-ಶುಶ್ರೂಷಕಿಯರು ಅರಿವು ಮೂಡಿಸಬೇಕು. ಜಿಲ್ಲಾಸ್ಪತ್ರೆ ಉತ್ತಮ ಸೇವೆಗೆ ಹೆಸರಾಗಿದೆ. ಇಲ್ಲಿನ ತಾಯಂದಿರು ಹಾಗೂ ರೋಗಿಗಳು ವೈದ್ಯರು ಮತ್ತು ಆಸ್ಪತ್ರೆ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ.

ಎಲ್ಲಾ ವೈದ್ಯಕೀಯ ಸೌಲಭ್ಯವಿದ್ದರೂ ನವಜಾತ ಶಿಶುಗಳು ಹುಟ್ಟಿದ ಒಂದು ವರ್ಷದೊಳಗೆ ಸಾಯುವುದು ಇದೆ. ಅದರ ಪ್ರಮಾಣ ವರ್ಷಕ್ಕೆ ಶೇ.25ರಷ್ಟಿದೆ.

ಅಪಕ್ವತೆ ಮತ್ತು ಕಡಿಮೆತೂಕದ ಮಕ್ಕಳ ಜನನ, ಹುಟ್ಟಿದ ತಕ್ಷಣ ಅಳುವುದಿಲ್ಲದಿರುವುದು, ನಂಜಾಗುವುದು, ಐಇಎಂ ಕಾಯಿಲೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಇದಕ್ಕೆ ಒಳಸಂಬಂಧ. ರಕ್ತಸಂಬಂಧದಲ್ಲಿ ಮದುವೆಯಾಗುವುದು ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮಕೊಡುವುದು, ಸೂಕ್ತ ವಯಸ್ಸಿನಲ್ಲಿ ಗರ್ಭಧರಿಸದೇ ಇರುವುದು ಕಾರಣವಾಗಿದೆ.

ತಾಯಿ ಮತ್ತು ಮಗು ಇಬ್ಬರೂ ಅಪೌಷ್ಠಿಕತೆಗೆ ಗುರಿಯಾಗುತ್ತಿದ್ದಾರೆ ಅದಕ್ಕೆ ತಾಯಂದಿರು ಗರ್ಭಾವಸ್ಥೆಯಲ್ಲಿ ಉತ್ತಮ ಆಹಾರ ಸೇವಿಸಿ 12-15 ಕೆಜಿಯಷ್ಟು ತೂಕ ಹೆಚ್ಚಿಸಿಕೊಳ್ಳಬೇಕು ಈ ಬಗ್ಗೆ ಹೆಚ್ಚಿನ ಮಾಹಿತಿ ಕೊರತೆ ಇರುವುದರಿಂದ ಆಸ್ಪತ್ರೆಗಳಲ್ಲಿ ದಾದಿಯರು ಅರಿವು ಮೂಡಿಸಬೇಕು ಎಂದರು.

ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞೆ ಡಾ. ಮುಕ್ತಾಂಬ ಮಾತನಾಡಿ ನವಜಾತ ಶಿಶುವಿನ ಮೊದಲ ಒಂದು ತಿಂಗಳು ಉಷ್ಣತೆಯನ್ನು ಕಾಪಾಡಬೇಕು, ಮೊದಲ ಆರು ತಿಂಗಳು ಸ್ತನಪಾನ ಮಾಡಿಸಬೇಕು ನಂತರ ಪೂರಕ ಆಹಾರ ನೀಡಬೇಕು, ಬಾಣಂತಿ ತಾಯಿಯು ಸ್ವಚ್ಛತೆಯಿಂದ ಇರಬೇಕು.

ಸಚಿವ ಸ್ಥಾನದಿಂದ ಮಾಧುಸ್ವಾಮಿ ಕೈ ಬಿಡಲು ಆಗ್ರಹ: ಹುಳಿಯಾರು ಬಂದ್ ಯಶಸ್ವಿ

ಹುಳಿಯಾರು; ಈಶ್ವರಾನಂದಪುರಿ ಸ್ವಾಮಿಗಳ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕುರುಬ ಸಮುದಾಯ ಮತ್ತು ಇತರೆ ಸಂಘಟನೆಗಳ ಕರೆ ನೀಡಿದ್ದ ಹುಳಿಯಾರ್ ಬಂದ್ ಯಶಸ್ವಿಯಾಗಿದೆ.

ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ನೂರಾರು ಮಂದಿ ಕುರುಬರು ಕಾನೂನು ಸಚಿವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.

ಬಂದ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಬಸ್ ಸಂಚಾರ ಸ್ಥಬ್ದವಾಗಿತ್ತು. ಕನಕ ವೃತ್ತ ನಾಮಕರಣ ಮಾಡುವ ವಿಚಾರದಲ್ಲಿ ಎದ್ದ ವಿವಾದ ದ ಹಿನ್ನೆಲೆಯಲ್ಲಿ ಇಂದು ಬಂದ್ ನಡೆಸಿ ಮಾಧುಸ್ವಾಮಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕುರುಬ ಸಮುದಾಯದ ಸ್ವಾಮೀಜಿಗೆ ಅವಮಾನ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು. ಸಚಿವರು ಕ್ಷಮೆ ಕೇಳಬೇಕೆಂಬ ಕೂಗು ಬಲವಾಗಿ ಕೇಳಿಬಂತು.

ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ಸಚಿವರ ಉದ್ದಟತನವೇ ಪ್ರತಿಭಟನೆಗೆ ಕಾರಣ. ಶಾಂತಿ ಸಭೆ ಕರೆ ಗಲಭೆಯನ್ನು ಹುಟ್ಟುಹಾಕಿದ್ದಾರೆ. ಗುರುಗಳು ಮತ್ತು ಜನಪ್ರತಿನಿಧಿಗಳನ್ನು ತುಚ್ಛವಾಗಿ ಕಂಡ ಪರಿಣಾಮ ಸಚಿವರ ವಿರುದ್ಧ ಜನ ಬೀದಿಗೆ ಬಂದಿದ್ದಾರೆ. ಸಭೆಯಲ್ಲೇ ಎಲ್ಲರನ್ನು ಸಮಾಧಾನ ಮಾಡಿದ್ದರೆ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಇನ್ನು ಮುಂದಾದರೂ ಸಚಿವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಪಾಲಕರೇ ದುರ್ವತನೆಯಿಂದ ನಡೆದುಕೊಂಡರೆ ಸಾಮಾನ್ಯರು ಏನು ಮಾಡಬೇಕು. ಸಂವಿಧಾನದ ಹೆಸರರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಈಗ ತಾರತಮ್ಯ ಮಾಡುವುದು ಸರಿಯಲ್ಲ. ಸಮ್ಮ ಸಮುದಾಯದ ಸ್ವಾಮೀಜಿಗೆ ಅವಮಾನ ಮಾಡಿದ್ದು ನೋವಾಗಿದೆ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಬಸವಣ್ಣ ಮತ್ತು ಕನಕದಾಸರು ಅನಿಷ್ಠ ಜಾತಿಪದ್ದತಿ ವಿರುದ್ಧ ಪ್ರತಿಭಟನೆ ನಡೆಸಿದರು.

ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯದೆ ಜಾತಿಗೆ ಅಂಟಿಕೊಂಡು ಸಚಿವರು ಕೂತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಸ್ಥಾನವನ್ನು ಅರಿತು ಮಾತನಾಡಬೇಕು. ಸಾಮಾನ್ಯನಂತೆ ಮಾಡಿ ಸಮಾಜದಲ್ಲಿ ಪ್ರಚೋದನೆ ನೀಡಿದರೆ ಜನ ಸುಮ್ಮನೆ ಕೂರುವುದಿಲ್ಲ. ಇದನ್ನು ಮಾಧುಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕು. ಸಚಿವರ ಧೋರಣೆಯಿಂದಾಗಿ ಮುಖ್ಯಮಂತ್ರಿಗಳು ಕ್ಷೇಮೆ ಕೇಳಿದ್ದಾರೆ. ಅವರು ಕ್ಷಮೆ ಕೇಳುವ ಬದಲಿಗೆ ಸಚಿವರೇ ಕ್ಷಮೆ ಕೇಳಬೇಕು ಕುರುಬ ಸಮುದಾಯದ ಮುಖಂಡು ಆಗ್ರಹಿಸಿದರು

ಚುನಾವಣಾ ದೇಣಿಗೆ; ಸದನದಲ್ಲಿ ಕಾಂಗ್ರೆಸ್ ಗದ್ದಲ

ನವದೆಹಲಿ; ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಎಲೆಕ್ಟೋರಲ್ ಬಾಂಡ್ ದೊಡ್ಡ ಹಗರಣ ಎಂದು ಆರೋಪಿಸಿದರು.

ಸುಮಾರು ಹದಿನೈದು ನಿಮಿಷ ಸದನದ ಬಾವಿಯಲ್ಲೇ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ ನಂತರ ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಿಗೆ ಹೋಗಿ ಕುಳಿತರು.

ಚುನಾವಣಾ ದೇಣಿಗೆ ದೊಡ್ಡ ಹಗರಣವಾಗಿದೆ. ದೇಶವನ್ನು ಲೂಟಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಚನ್ ಚೌದರಿ ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಸದಸ್ಯರು ಬಾವಿಗೆ ಬಂದ ಪ್ರತಿಭಟಿಸಿ ಸದನದ ಗೌರವ ಕಳೆಯಬೇಡಿ. ಇದು ತಪ್ಪು. ಕ್ರೀಡಾಪಟುಗಳ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಬಾವಿಗೆ ಇಳಿದು ಸಭಾಧ್ಯಕ್ಷರೊಂದಿಗೆ ಮಾತನಾಡುವುದು ಸರಿಯಲ್ಲ ಎಂದು ಸ್ಪೀಕರ್ ತಿಳಿಸಿದರು.

ಸದನಕ್ಕೆ ಘನತೆ ಮತ್ತು ಗೌರವವಿದೆ. ಇದನ್ನು ಲೋಕಸಭಾ ಸದಸ್ಯರು ಕಾಪಾಡಬೇಕು. ನಾನು ಹೊಸ ಸದಸ್ಯ. ನೀವು ಹಿರಿಯರು ಇದ್ದೀರಿ. ನೀವು ಸದನದ ಬಾವಿಗೆ ಬರಬೇಡಿ ಎಂದು ಮನವಿ ಮಾಡಿದರು.

ಕಲಾಪ ಸುಸೂತ್ರವಾಗಿ ನಡೆಯಲು ಪ್ರತಿಪಕ್ಷಗಳು ಸಹಕರಿಸುತ್ತವೆ. ನಮಗೆ ಚರ್ಚೆ ಮಾಡಲು ಅವಕಾಶ ಕೊಡಿ. ಸ್ಪೀಕರ್ ನಮಗೆ ಸಹಕರಿಸಬೇಕು ಎಂದು ಕೇಳಿಕೊಂಡರು.

ಯಡಿಯೂರಪ್ಪ ಕುರುಬರ ಕ್ಷಮೆ ಯಾಚಿಸಿದ್ದು ಏಕೆ?

ಕುರುಬ ಸ್ವಾಮೀಜಿಯ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮುದಾಯದ ಕ್ಷಮೆ ಯಾಚಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಮುಖ್ಯಮಂತ್ರಿಗಳು ಚಿಕ್ಕನಾಯಕನಹಳ್ಳಿ ಹುಳಿಯಾರಿನಲ್ಲಿ ಹೊಸದುರ್ಗ ರಸ್ತೆಯಲ್ಲಿರುವ ವೃತ್ತ ಕನಕ ವೃತ್ತವೆಂದು ನಾಮಕರ ಮಾಡಲು ಎದ್ದಿರುವ ಗೊಂದಲ ಅನವಶ್ಯಕವಾಗಿದೆ. ವೃತ್ತಕ್ಕೆ ಕನಕರ ಹೆಸರಡಿಲು ಯಾರ ಅಭ್ಯಂತರವೂ ಇಲ್ಲ. ವಿರೋಧವೂ ಇಲ್ಲ. ಜೆ.ಸಿ. ಮಾಧುಸ್ವಾಮಿ ಕೂಡ ವಿರೋಧ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಈಶ್ವರಾನಂದಪುರ ಸ್ವಾಮಿಗಳಿಗೆ ಕರೆ ಮಾಡಿ ಮಾತನಾಡಿದ್ದೇನೆ. ಸ್ವಾಮಿಗಳು ಕೂಡ ಮಾಧುಸ್ವಾಮಿ ಅವರು ಏಕವಚನದಲ್ಲಿ ಸಂಬೋಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕುರುಬ ಸಮುದಾಯ ಚುನಾವಣೆ ಮುಗಿಯುವವರೆಗೂ ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದೇನೆ. ಇದನ್ನು ಕುರುಬ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಮತ್ತು ಕನಕ ವೃತ್ತದ ಕುರಿತು ಎದ್ದಿರುವ ವಿವಾದಕ್ಕೆ ತೆರೆ ಎಳೆದು ಶಾಂತಿ ಕಾಪಾಡಬೇಕು ಯಾವುದೇ ಬಂದ್ ಆಚರಿಸಕೂಡದು ಎಂದು ಮನವಿ ಮಾಡಿದ್ದಾರೆ.

ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ; ಖಂಡನೆ

0

ತುಮಕೂರು;ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಜೆಟ್ಟಿ ಅಗ್ರಹಾರ ನಾಗರಾಜು ತಿಳಿಸಿದ್ದಾರೆ .

ಬುಧವಾರ ಪ್ರಕಟಣೆ ನೀಡಿರುವ ಅವರು ಹಾಸ್ಟೆಲ್ ಶುಲ್ಕ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಶುಲ್ಕದ ಹೊರೆ ಹೇರುವ ಮೂಲಕ ಬಹುಸಂಖ್ಯಾತ ದಲಿತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ಹೊರಗಿಡುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಶುಲ್ಕ ಹೆಚ್ಚಳದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ .ಸಂಸತ್ತಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸಿರುವುದು ಅಮಾನವೀಯ ಸಂಗತಿ ಕಳೆದ ಕೆಲವು ದಿನಗಳ ಹಿಂದೆ ಪೊಲೀಸರ ಮೇಲೆ ವಕೀಲರು ನಡೆಸಿದ್ದು ದಾಳಿಯನ್ನು ವಿರೋಧಿಸಿ ವಕೀಲರ ಕ್ರೌರ್ಯವೆಂದು ಇದೇ ಪೊಲೀಸರು ಪ್ರತಿಭಟನೆ ನಡೆಸಿದ್ದರು .ಆದರೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅದೇ ಪೊಲೀಸರು ಕ್ರೌರ್ಯವಾಗಿದೆ .

ಬಲ ಪ್ರಯೋಗದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಸರಕಾರದ ಧೋರಣೆ ಸರಿಯಲ್ಲ .ಶಿಕ್ಷಣವನ್ನು ಖಾಸಗೀಕರಣ ಮತ್ತು ವ್ಯಾಪಾರೀಕರಣಗೊಳ್ಳುತ್ತಿರುವ ಸರ್ಕಾರದ ವ್ಯಾಪಾರಿ ನೀತಿ ವಿರುದ್ಧ ಮತ್ತು ಗುಣಮಟ್ಟದ ಉನ್ನತ ಶಿಕ್ಷಣ ಉಚಿತವಾಗಿ ಸಿಗಬೇಕೆಂಬ ಸದಾಶಯದ ಜೆಎನ್ ಯು ವಿದ್ಯಾರ್ಥಿಗಳ ಹೋರಾಟಕ್ಕೆ ದಲಿತ ಸಂರಕ್ಷಣಾ ಸಮಿತಿ ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ

ಎಸ್ಎಸ್ಎಲ್ಸಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ; ಎಚ್ಚೆತ್ತುಕೊಂಡ ಸಿಇಒ

ತುಮಕೂರು; ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲಾ ವಿಭಾಗದ ಎಸ್.ಎಸ್.ಎಲ್.ಸಿ. ತರಗತಿಗೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುಮಕೂರು ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಸಾಕಷ್ಟು ಸಭೆಗಳನ್ನು ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದ ಅವರು, ಇಂದು ಶಾಲೆಯ ತರಗತಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.

ಅಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ತುಮಕೂರು ಜಿಲ್ಲೆಗೆ ಉತ್ತಮ ಫಲಿತಾಂಶ ನೀಡುವಂತೆ ಕಿವಿಮಾತು ಹೇಳಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ತುಮಕೂರು ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವು ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ.

ಅಲ್ಲದೆ ಈ ಬಾರಿಯ ಎಸ್.ಎಸ್.ಎಲ್.ಸಿ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವುದನ್ನು ಮನಗಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪರೀಕ್ಷೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳನ್ನು ಗುರ್ತಿಸಿ, ಅವರಲ್ಲಿರುವ ಗೊಂದಲಗಳನ್ನು ಬಗೆಹರಿಸಿ ಮುಂದಿನ ವಾರ್ಷಿಕ ಪರೀಕ್ಷೆಗೆ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳೂ ಉತ್ತಮ ಅಂಕಗಳನ್ನು ತೆಗೆದು ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಶ್ರಮವಹಿಸುವಂತೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲೆಯ ಒಟ್ಟಾಗಿ ಅರ್ಧವಾರ್ಷಿಕ ಪರೀಕ್ಷೆಯ ಫಲಿತಾಂಶದಿಂದ ಬೇಸರಗೊಂಡಿದ್ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರತೀ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಅದರಲ್ಲೂ ಗಣಿತ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರನ್ನು ಅದೇ ಶಾಲೆಯ ಶಿಕ್ಷಕರು ಅಥವಾ ವಿಷಯ ಪರಿವೀಕ್ಷಕರು ದತ್ತು ಪಡೆದು ಅವರ ಶೈಕ್ಷಣಿಕ ಪ್ರಗತಿಗೆ ಮುಂದಾಗುವಂತೆ ತಿಳಿಸಿದರು.

ಶಿಕ್ಷಕರು ತರಗತಿಯ ಸಮಯದಲ್ಲಿ ಯಾವುದೇ ಸಭೆಗಳನ್ನು ನಡೆಸದೆ, ತರಗತಿಗಳು ಮುಗಿದ ನಂತರ ಸಭೆಗಳನ್ನು ನಡೆಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಆರ್.ಕಾಮಾಕ್ಷಿ, ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ ಹಾಜರಿದ್ದರು.

ಮಾಧುಸ್ವಾಮಿ ವಿರುದ್ಧ ಕುರುಬರ ಪ್ರತಿಭಟನೆ

ತುಮಕೂರು; ಕುರುಬ ಸಮುದಾಯದ ಸ್ವಾಮೀಜಿಯೊಬ್ಬರ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತುಚ್ಛವಾಗಿ ಮಾತನಾಡಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕುರುಬ ಸಮುದಾಯದ ವ್ಯಕ್ತಿಯೊಬ್ಬರು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೊಬೈಲ್ ಗೆ ಕರೆ ಮಾಡಿ ಮಾತನಾಡಿದಾಗ ತಾನು ಲಿಂಗಾಯತ ಸಮುದಾಯಕ್ಕೆ ಮಾತ್ರ ಸಚಿವ ಎಂದಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದರಿಂದ ಆಕ್ರೋಶಗೊಂಡಿರುವ ಕುರುಬ ಸಮುದಾಯದ ಸಂಘಟನೆಗಳು ಸಚಿವರು ಬಹಿರಂಗ ಕ್ಷಮೆ ಕೇಳಬೇಕು. ಸಂವಿಧಾನಬದ್ದವಾಗಿ ಯಾವ ಭೇದವೂ ಮಾಡುವುದಿಲ್ಲವೆಂದು ಪ್ರಮಾಣ ವಚನ ಸ್ವೀಕರಿಸಿರುವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಬೇಕೆಂದು ಹಾಲುಮತ ಮಹಾಸಭಾ ತುಮಕೂರು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದೆ.

ಕಾನೂನು ಸಚಿವರಾಗಿಯೂ ಹೀಗೆ ಸಾಮಾನ್ಯರಂತೆ ಮಾತನಾಡಿರುವುದು ಮತ್ತು ತಾನು ಲಿಂಗಾಯತರಿಗೆ ಮಾತ್ರ ಮಂತ್ರಿ ಎಂದು ಹೇಳಿರುವುದು ಸೂಕ್ತವಲ್ಲ. ಸಚಿವರು ಹೀಗೆ ವರ್ತಿಸುವ ಮೂಲಕ ತಾನು ತೆಗೆದುಕೊಂಡ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಟಿ.ಎಂ. ಗರುಡಯ್ಯ, ಟಿ.ಇ.ರಘುರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇನ್ನೊಂದೆಡೆ ಕುರುಬ ಸಮುದಾಯದ ಸ್ವಾಮೀಜಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜೆ.ಸಿ. ಮಾಧುಸ್ವಾಮಿ ಅವರನ್ನು ಕರೆಸಿಕೊಂಡು ಕಿವಿಮಾತು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಜೆ.ಸಿ. ಮಾಧುಸ್ವಾಮಿ ನಾನು ಯಾವ ಸ್ವಾಮೀಜಿ ಬಗ್ಗೆಯೂ ಹಗುರವಾಗಿ ಮಾತನಾಡಿಲ್ಲ ಎಂದು ಮಾಧ್ಯಮಗಳ ಮುಂದೆ ಗರಂ ಆಗಿಯೇ ಹೇಳಿ ಹೊರಟು ಹೋಗಿದ್ದಾರೆ.

ರಾಜಸ್ಥಾನ; ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ

ರಾಜಸ್ಥಾನ; ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ತಾನಗಳಲ್ಲಿ ಗೆಲುವು ಸಾದಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ.

ವಿಧಾನಸಭಾ ಚುನಾವಣೆಯ ಸೋಲಿನ ನಡುವೆ ಮತ್ತೆ ಹಿನ್ನಡೆ ಆಗಿರುವುದರಿಂದ ಪಕ್ಷ ಮುಜುಗರ ಅನುಭವಿಸುವಂತಾಗಿದೆ.

ಕಾಂಗ್ರೆಸ್ 961 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 737 ವಾರ್ಡ್ ಗಳಲ್ಲಿ ಜಯ ಗಳಿಸಿದೆ. 33 ಜಿಲ್ಲೆಗಳ 49 ನಗರ ಸ್ಥಳೀಯ ಸಂಸ್ಥೆಗಳಿಗೆ ಶನಿವಾರ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆದು ಕಾಂಗ್ರೆಸ್ 32 ನಗರ ಸಭೆಗಳನ್ನು ತನ್ನದನ್ನಾಗಿಸಿಕೊಂಡಿದೆ.

ಬಿಜೆಪಿ ಕೇವಲ ನಾಲ್ಕು ನಗರ ಸಭೆಗಳಲ್ಲಿ ಅಧಿಕಾರಕ್ಕೆ ಬರಲು ಶಕ್ತವಾಗಿದೆ. ಪಕ್ಷೇತರರು 370ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನತೆ ಸರ್ಕಾರದ ಪ್ರಗತಿ ನೋಡಿ ನಮಗೆ ಅಧಿಕಾರ ನೀಡಿದೆ. ಬಿಎಸ್ ಪಿ 16, ಸಿಪಿಎಂ 3 ಮತ್ತು ಎನ್.ಸಿಪಿ 2 ವಾರ್ಡ್ ಗಳಲ್ಲಿ ಗೆಲವು ಸಾಧಿಸಿವೆ ಎಂದು ಹೇಳಿದ್ದಾರೆ.

ಮೂರು ಮಹಾನಗರ ಪಾಲಿಕೆಗಳು, 28 ನಗರ ಪಾಲಿಕೆಗಳು ಮತ್ತು 18 ನಗರ ಪರಿಷತ್ ಗಳಿಗೆ ಮತದಾನ ನಡೆದು ಇಂದು ಫಲಿತಾಂಶ ಹೊರಬಿದ್ದಿದೆ.

ದಿಶಾ ಸಮಿತಿಯಲ್ಲಿ ನಡೆದಿದ್ದೇನು ಗೊತ್ತಾ?

ತುಮಕೂರು: ಬೆಂಗಳೂರಿನಲ್ಲಿ ಈಚೆಗೆ ನಡೆದ ಜಿಲ್ಲೆಯ ದಿಶಾ ಸಮಿತಿ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಾಲಿನಿ ರಜನೀಶ್ ಎಚ್ಚರಿಸಿದರು.‌

ಶಾಲಿನಿರಜನೀಶ್ ಅವರು ಬಹಳ ಹಿಂದೆಯೇ ಕುಂದರನಹಳ್ಳಿ ರಮೇಶ್ ಅವರಿಗೆ ಚರ್ಚೆ ನಡೆಸಲು ಸೂಚಿಸಿದ್ದರೂ ಇದೂವರೆಗೂ ಭೇಟಿ ಮಾಡದೇ ಇರುವ ಬಗ್ಗೆ ಸಭೆಯಲ್ಲಿ ರಮೇಶ್ ಕ್ಷಮೆ ಕೋರಿದರು.

26.03.2018 ರಂದು ಮಾಡಿಕೊಂಡಿರುವ ಎಂ.ಓ.ಯು ಬಗ್ಗೆ ವಿವರ ತಿಳಿಸಲಿಲ್ಲ ಇದು ದಿಶಾ ಸಮಿತಿ ಅಧ್ಯಕ್ಷರಿಗೆ ಮಾಹಿತಿ ಮುಚ್ಚಿಟ್ಟಂತೆ ಆಗಿದೆ. ಈ ಬಗ್ಗೆ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ರಾಕೇಶ್ ಕುಮಾರ್ ಅವರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡುವುದಾಗಿ ಕುಂದರನಹಳ್ಳಿ ರಮೇಶ್ ತಿಳಿಸಿದರು.

ಕುಂದರನಹಳ್ಳಿ ರಮೇಶ್ ಅವರು ಮಾತನಾಡಿ ಸಭೆಯಲ್ಲಿ ನಾನು ಅಷ್ಟೊಂದು ನಿಷ್ಠುರವಾಗಿ ಮಾತನಾಡಿದರು ದಿಶಾ ಸಮಿತಿಯಲ್ಲಿ ಹಾಜರಿದ್ದ ಟ್ರಸ್ಟ್ ನ ರಾಜಸೇವನ್‍ ಅವರನ್ನು ನೀವು ಸಭೆಯಲ್ಲಿ ಏಕೆ ತಿಳಿಸಲಿಲ್ಲ ಎಂದು ಪ್ರಶ್ನಿಸಿದರು

ಸಭೆಯಲ್ಲಿ ಮಾತನಾಡಿದ ಡಿ.ಎಸ್.ಸುರೇಶ್ ಸಿ.ಐ.ಟಿ ಗುಬ್ಬಿ ಅವರು ಎಲ್ಲಾ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಲು ಪ್ರಸ್ತುತ ಯಾವ ಕ್ರಮ ಅಗತ್ಯ ಎಂಬ ಬಗ್ಗೆ ತಿಳಿಸಲು ಟ್ರಸ್ಟಿನ ರಾಜಸೇವನ್ ಅವರನ್ನು ಕೇಳಿದಾಗ ಎಲ್ಲಾ ಇಲಾಖೆಗಳು ಡೇಟಾ ಅಫ್‍ಲೋಡ್ ಮಾಡಿದಲ್ಲಿ ಮುಂದಿನ ದಿಶಾ ಸಮಿತಿಗೆ ಸಂಸದರು ಮತ್ತು ಶಾಸಕರು ತಿಳಿಸಿದ ಎಲ್ಲಾ ವಿವರಗಳನ್ನು ಒಂದೇ ಕಡೆ ತರಲು ನಮ್ಮ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ತುಮಕೂರು ಸಂಸದರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷ ಜಿ.ಎಸ್.ಬಸವರಾಜ್ ಅವರು ಮತ್ತು ತುಮಕೂರು ನಗರ ವಿಧಾನಸಭಾ ಸದಸ್ಯರು ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಕೇಂದ್ರ(ಟಾಸ್ಕ್) ದ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್ ಅವರು ದಿನಾಂಕ:16.11.2019 ರಂದು ತುಮಕೂರು ಸ್ಮಾರ್ಟ್ ಸಿಟಿ ಯಲ್ಲಿ ನಡೆದ ದಿಶಾ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ತುಮಕೂರು ನಗರದಲ್ಲಿ ನಡೆಯುತ್ತಿರುವ ಎಲ್ಲಾ ಇಲಾಖೆಗಳ ಕಾಮಗಾರಿಗಳ ಎಲ್ಲಾ ವಿಧವಾದ ಮಾಹಿತಿಗಳು ಒಂದೇ ಕಡೇ ಲಭ್ಯವಾಗುವ