ತುಮಕೂರು ತಾಲ್ಲೂಕಿನ ಕಣಕುಪ್ಪೆ ಗ್ರಾಮದ ಪಂಚಾಯಿತಿ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು.ಅಂಗನವಾಡಿಯಲ್ಲಿ ಜರುಗುತ್ತಿದ್ದ ಬಾಲವಿಕಾಸ ಸಮಿತಿ ಸಭೆ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಅವರು, ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ, ಕುಡಿಯುವ ನೀರು, ವೈಯುಕ್ತಿಕ ಆರೋಗ್ಯ, ಶೌಚಾಲಯ ವ್ಯವಸ್ಥೆ ಕುರಿತಂತೆ ಸಮಿತಿಯ ಸದಸ್ಯರಾದ ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಕಣಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರೊಡನೆ ಚರ್ಚಿಸಿದರು. ನಂತರ ಮಕ್ಕಳ ತಾಯಂದಿರಿಗೆ ವಿತರಿಸುವ ಕೋಳಿ ಮೊಟ್ಟೆಯ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿದರು.ನಂತರ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಹಾಜರಾತಿ, ವಸತಿ ಸೌಕರ್ಯ, ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟ, ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ಶುಚಿತ್ವದ ಬಗ್ಗೆ ಪರಿಶೀಲಿಸಿದರು.
ಕಣಕುಪ್ಪೆ ಅಂಗನವಾಡಿ ಕೇಂದ್ರಕ್ಕೆ ಸಿಇಓ ಭೇಟಿ
ತುಮಕೂರು ತಾಲ್ಲೂಕಿನ ಕಣಕುಪ್ಪೆ ಗ್ರಾಮದ ಪಂಚಾಯಿತಿ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಭೇಟಿ ನೀಡಿ ಪರಿಶೀಲಿಸಿದರು.ಅಂಗನವಾಡಿಯಲ್ಲಿ ಜರುಗುತ್ತಿದ್ದ ಬಾಲವಿಕಾಸ ಸಮಿತಿ ಸಭೆ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಅವರು, ಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ, ಕುಡಿಯುವ ನೀರು, ವೈಯುಕ್ತಿಕ ಆರೋಗ್ಯ, ಶೌಚಾಲಯ ವ್ಯವಸ್ಥೆ ಕುರಿತಂತೆ ಸಮಿತಿಯ ಸದಸ್ಯರಾದ ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಕಣಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರೊಡನೆ ಚರ್ಚಿಸಿದರು. ನಂತರ ಮಕ್ಕಳ ತಾಯಂದಿರಿಗೆ ವಿತರಿಸುವ ಕೋಳಿ ಮೊಟ್ಟೆಯ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಪರಿಶೀಲಿಸಿದರು.ನಂತರ ಹೆಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಹಾಜರಾತಿ, ವಸತಿ ಸೌಕರ್ಯ, ವಿತರಿಸಲಾಗುತ್ತಿರುವ ಆಹಾರದ ಗುಣಮಟ್ಟ, ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ಶುಚಿತ್ವದ ಬಗ್ಗೆ ಪರಿಶೀಲಿಸಿದರು.
ಕೆಬಿ ಸಿದ್ದಯ್ಯಸಂತನೂ ಹೌದು,ಸಂಸಾರಿಯೂ ಹೌದು
ಕವಿ ಕೆ.ಬಿ.ಸಿದ್ದಯ್ಯ ಏಕಕಾಲಕ್ಕೆ ಕವಿಯೂ ಸಂತನೂ ಸಂಸಾರಿಯೂ ಮತ್ತು ರಾಜಕೀಯ ವ್ಯಕ್ತಿಯಾಗಿ ಕಾಣುತ್ತಿದ್ದರು. ಬಿಳಿಗಡ್ಡ ಮತ್ತು ಬಿಳಿ ಕೂದಲು ಕಂಡರೆ ಎಷ್ಟೇ ಜನರಿರಲಿ ಕೆ.ಬಿ ಅವರನ್ನು ಗುರುತಿಸಬಹುದಾಗಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಕೆ.ಬಿ.ಸಿದ್ದಯ್ಯ ಎಂದೂ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಸಿದ್ದರಾಮಯ್ಯ ಮನೆಗೆ ಬರುತ್ತಿದ್ದರು. ಅಲ್ಲಿ ನಾನು ಅವರನ್ನು ನೋಡಿದ್ದೆ. ಅವರ. ಬಿಳಿಯ ಗಡ್ಡ, ಬಿಳಿಯ ಕೂದಲ ಮತ್ತು ಇತ್ತೀಗೆ ಹಾಕಿಕೊಳ್ಳುತ್ತಿದ್ದ ಕಪ್ಪು ಕನ್ನಡ ಎಲ್ಲರ ನಡುವೆ ಅವರನ್ನು ಗುರುತಿಸುವಂತಹ ವ್ಯಕ್ತಿತ್ವವಾಗಿತ್ತು.

ಕವಿ ಕೆ.ಬಿ.ಸಿದ್ದಯ್ಯ ಸಂತನೋ, ಸಂಸಾರಿಯೋ ರಾಜಕಾರಣಿಯೋ ಏನೆಂದು ತಿಳಿಯುವ ಮೊದಲೇ ಅವರು ಹೋದರು. ಸಾಹಿತಿಗಳ ಸುತ್ತಮುತ್ತ ಒಂದು ಪ್ರಭಾವಳಿ ಇರುತ್ತದೆ. ಆದರೆ ದೇವನೂರು ಮಹಾದೇವ ಮತ್ತು ಕೆ.ಬಿ.ಸಿದ್ದಯ್ಯ ಅವರಲ್ಲಿ ಅಂತಹ ಯಾವುದೇ ಪ್ರಭಾವಳಿ ಇರಲಿಲ್ಲ ಎಂದು ಹೇಳಿದರು.
ಕೆ.ಬಿ. ಸಿದ್ದಯ್ಯ ಭಾಷಣದಲ್ಲಿ ಕಟುವಾಗಿ ಮಾತನಾಡುತ್ತಿದ್ದರೋ ಅವರ ಮನಸ್ಸಿನಲ್ಲಿ ಅಂತಹ ಯಾವುದೇ ಭಾವನೆ ಇರುತ್ತಿರಲಿಲ್ಲ. ಬೇರೆಯವರನ್ನು ಟೀಕೆ ಮಾಡಿ ಏಕೆ ತಮ್ಮ ಮೇಲೆ ಎಳೆದುಕೊಳ್ಳುತ್ತಿರಿ ಎಂದರೆ ಬಿಡೋ ಎನ್ನುತ್ತಿದ್ದರು. ಮೇಲ್ನೋಟಕ್ಕೆ ಕಟುವಾಗಿ ಟೀಕಿಸಿದರೂ ಅವರ ಒಳಗಡೆ ಅಂತಹ ಕಹಿ ಇರಲಿಲ್ಲ.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ ಕೆ.ಬಿ.ಸಿದ್ದಯ್ಯ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಅವರೊಂದು ಪುಷ್ಪಕವಿಮಾನವಿದ್ದಂತೆ. ಅದರಲ್ಲಿ ಯಾರೂ ಹತ್ತಲಿಲ್ಲ. ಅದು ಮೇಲಕ್ಕೂ ಹೋಗಲಿಲ್ಲ. ಪುಷ್ಪಕ ವಿಮಾನ ಹತ್ತಿದ್ದರೆ ಮೇಲಕ್ಕೆ ಹೋಗುತ್ತಿದ್ದರು ಎಂದು ಮೆಲುಕು ಹಾಕಿದರು. ದಲಿತರಲ್ಲಿ ಅಸ್ಪøಶ್ಯರಲ್ಲಿಯೂ ಅಸ್ಪøಶ್ಯತೆ, ಸ್ಪರ್ಶತೆ ಇದೆ. ಅಸ್ಪøಶ್ಯರಲ್ಲಿಯೇ ವಿವಾಹವಾಗಿ ಸಾಧನೆ ಮಾಡಿ ತೋರಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಪರ ಚಿಂತಕ ಕೆ.ದೊರೈರಾಜ್, ವಿಮರ್ಶಕ ನಟರಾಜ್ ಬೂದಾಳ್, ಕವಿ ಡಾ.ಜಿ.ವಿ.ಆನಂದಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಹೋರಾಟಗಾರಿ ಕುಂದೂರು ತಿಮ್ಮಯ್ಯ ಮೊದಲಾದವರು ಮಾತನಾಡಿದರು.
ಚರಕ ಆಸ್ಪತ್ರೆಯ ಡಾ. ಬಸವರಾಜು ಪ್ರಾಸ್ತಾವಿಕ ಮಾತನಾಡಿ ಕಬಿ ಅವರನ್ನು ಕಳೆದುಕೊಂಡಿದ್ದೇವೆ. ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಸಾಗಿಸಬೇಕಾಗಿದೆ ಎಂದರು.
ಉಪನ್ಯಾಸಕ ಕೊಟ್ಟಶಂಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ ವಂದಿಸಿದರು.
ಜನ ಮಾನಸ ಸೂರೆಗೊಂಡ ತುಮಕೂರಿನ ದುರ್ಯೋಧನ
ಕುರುಕ್ಷೇತ್ರ ನಾಟಕ ಎಂದರೆ ಕಲಾಭಿಮಾನಿಗಳಿಗೆ ಹಬ್ಬವೇ ಸರಿ. ಕುರುಕ್ಷೇತ್ರ ನಾಟಕ ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಂದು ಜನರ ಮನಸ್ಸನ್ನು ಸೂರೆಗೊಂಡಿತು.
ಅದರಲ್ಲೂ ದುರ್ಯೋಧನ ಪಾತ್ರಧಾರಿ ಧನಂಜಯ ವೇದಿಕೆಗೆ ಆಗಮಿಸಿದ ಕೂಡಲೇ ಕೇಕೆ, ಚಪ್ಪಾಳೆ, ಸೀಟಿ ಹೊಡೆಯುವುದರೊಂದಿಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಾಡು, ಕುಣಿತ ದುರ್ಯೋಧನನ ಹಾವ, ಭಾವಕ್ಕೆ ನೆರೆದಿದ್ದ ಕಾಲಾ ಪೋಷಕರು ಹರ್ಷೋದ್ಘಾರದೊಂದಿಗೆ ಪ್ರೋತ್ಸಾಹಿಸಿದರು.
ದುರ್ಯೋಧನಂಜಯನ ಕಲೆಗೆ ತಲೆದೂಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಧನಂಜಯ ಅವರ ಜೊತೆ ಭಾವಚಿತ್ರ ತೆಗೆಸಿಕೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡಿದರು.
ಸಂಪೂರ್ಣ ನಾಟಕ ತುಂಬಾ ಚೆನ್ನಾಗಿ ಮೂಡು ಬರುತ್ತಿದೆ ಎಂದು ನೆರೆದಿದ್ದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ನಿರ್ವಹಣೆ, ಬೆಳಕು, ಸಂಗೀತ, ಪಾತ್ರಧಾರಿಗಳ ಕಲಾ ಪ್ರದರ್ಶನ ಸಂಪೂರ್ಣ ನಾಟಕ ಜನರ ಮನಚ್ಚಿನಲ್ಲಿ ತನ್ನದೆ ಛಾಪು ಮೂಡಿಸಿದೆ.
ಹಕ್ಕಿಗಳಂತೆ ಹಾರಿದ ಮಕ್ಕಳ ಕಂಡಿರಾ!
ವಿಶ್ವ ಮಕ್ಕಳ ದಿನದ ಅಂಗವಾಗಿ ಗುರುವಾರ ತುಮಕೂರಿನ ಬಾಲಭವನದ ಆವರಣದಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು. ಅಲ್ಲಿ ಸೇರಿದ್ದ ಮಕ್ಕಳು ಹಕ್ಕಿಗಳಂತೆ ಹಾರಿದರು. ಹಾಡಿದರು. ಗೆಜ್ಜೆಯ ಕಟ್ಟಿ ಕುಣಿದರು.
ದಣಿವೇ ಇಲ್ಲದಂತೆ ಓಡಾಡಿದರು. ಅದು ಮಕ್ಕಳ ಕಾರ್ಯಕ್ರಮವಲ್ಲವೇ! ಆ ಕಾರ್ಯಕ್ರಮದ ಬಗ್ಗೆ ಆಹ್ವಾನಿತ ಗಣ್ಯರು ಏನು ಹೇಳಿದರು ನೋಡೋಣವೇ ? ಬನ್ನಿ ಹಾಗಾದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಮಾತುಗಳನ್ನು ಓದೋಣ.

ಮಕ್ಕಳ ಮನಸ್ಸಿಗೆ ನಿನ್ನಿಂದ ಮಾಡಲು ಸಾಧ್ಯ ಎಂಬ ಹುರುಪಿನ ಶಕ್ತಿ ತುಂಬಿ ಬೆನ್ನು ತಟ್ಟಬೇಕು. ಮಕ್ಕಳ ಮನಸ್ಸು ಬಲವಾಗಿ ಗುರಿಯ ದಾರಿಯ ಕಡೆಗೆ ನಡೆದು ಸಫಲತೆ ಕಾಣಲು ಸಾಧ್ಯವಾಗುತ್ತದೆ. ಮಕ್ಕಳ ಮುಗ್ದತೆ ದೈವತ್ವಕ್ಕೆ ಸಮಾನ. ಮಕ್ಕಳು ಬೆಳೆದಂತೆ ಮನಸ್ಸು ಪರಿವರ್ತನೆಯಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಯು ಮಕ್ಕಳನ್ನು ಸಂಕುಚಿತವಾಗಿ ಬೆಳೆಸದೇ ವಿಕಾಸದ ಹಾದಿಯಲ್ಲಿ ಬೆಳೆಸಬೇಕು.
ಪ್ರತಿ ಮಕ್ಕಳಲ್ಲೂ ಸಾಮಥ್ರ್ಯವಿರುತ್ತದೆ ಪೋಷಕರು ಅದನ್ನರಿತು ಮಕ್ಕಳ ಇಷ್ಟಕ್ಕೆ ಪೂರಕವಾಗಿ ಅವರ ಇತಿಮಿತಿ ಅರಿತು ಆಸರೆ ನೀಡುತ್ತಾ ಬೆಳೆಸಬೇಕು. ಹಾಗೆಯೇ ಅನುಕರಣೆ ಬದುಕಿನ ಶ್ರೇಷ್ಠ ವರ್ತನೆ, ಮಕ್ಕಳು ಅನುಕರಣೆಯನ್ನು ಹೆಚ್ಚು ಮಾಡುತ್ತವೆ ಇದನ್ನು ಪೋಷಕರು ಅರಿತು ಆ ಮಕ್ಕಳ ಮುಂದೆ ಸರಿಯಾಗಿ ವರ್ತಿಸಬೇಕು. ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಕೆ ಮಾಡಿ ಮನಸ್ಸನ್ನು ಘಾಸಿಗೊಳಿಸದೇ, ಮಕ್ಕಳಿಗಿರುವ ಸಾಮಥ್ರ್ಯಕ್ಕೆ ಶಕ್ತಿ ತುಂಬಬೇಕು.

ಅಂಗವಿಕಲ ಮಕ್ಕಳು ದೇವರ ಶಾಪಕ್ಕೀಡಾಗಿರುವ ಮಕ್ಕಳು. ಇಂತಹ ಮಕ್ಕಳ ಅಶಕ್ತತೆಯನ್ನು ಪದೇ ಪದೇ ಎತ್ತಿ ಹಿಡಿಯದು ಒಳ್ಳೆಯ ಬೆಳವಣಿಗೆಯಲ್ಲ, ಬದಲಾಗಿ ಅಂತಹ ಮಕ್ಕಳಿಗೆ ಹುರುಪು ತುಂಬಬೇಕು. ಬೆಲೆಕಟ್ಟಲಾಗದ ವಸ್ತು ಸಂತೋಷ. ಮಕ್ಕಳು ಸಂತೋಷವನ್ನು ಅನುಭವಿಸಬೇಕು. ಮಕ್ಕಳಿಗೆ ಬೇರೆಯವರ ಹಂಗಿಲ್ಲದೇ ಬದುಕುವುದನ್ನು ಕಲಿಸಿ ಕೊಡುವುದೇ ನಿಜವಾದ ಶಿಕ್ಷಣ ಮತ್ತು ಶಕ್ತಿ – ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರು
ಮಕ್ಕಳು ದೇಶದ ಭವಿಷ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಪೋಷಣೆಯ ಮೂಲಕ ಅಸಾಧ್ಯವಾದುದು ಯಾವುದು ಇಲ್ಲ ಎಂಬ ಮನಸ್ಥಿತಿ ಮಕ್ಕಳಲ್ಲಿ ಹುಟ್ಟುಹಾಕಿ ಉತ್ತಮ ಜೀವನ ರೂಪಿಸಬೇಕು. ಆಧುನಿಕ ಜಗತ್ತಿನಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಕಡೆಗೆ ಮಕ್ಕಳ ಗಮನ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದಕ್ಕೆ ಬದಲಾಗಿ ಮಕ್ಕಳಲ್ಲಿ ಶಿಸ್ತು, ಮನೆಯ ಹಿರಿಯರಿಗೆ, ತಂದೆತಾಯಿಗಳಿಗೆ ಗುರುಗಳಿಗೆ ಗೌರವ ನೀಡವಂತಹ ಮೌಲ್ಯಗಳನ್ನು ಕಲಿಸಬೇಕಾಗಿದೆ – ಡಾ. ರಾಕೇಶ್ ಕುಮಾರ್ ಜಿಲ್ಲಾಧಿಕಾರಿ.

ಮಕ್ಕಳ ದಿನಾಚರಣೆಯಲ್ಲಿ ಅಭಿವೃದ್ಧಿ ಸಾಮಾಜಿಕ ಸಂಸ್ಥೆ, ಸಂತ ಗ್ರಿಗೋರಿಯಸ್ ದಯಾಭವನ, ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ಬಾಪೂಜಿ ವಿದ್ಯಾಸಂಸ್ಥೆ, ಶ್ರೀ ವೀರಭದ್ರಸ್ವಾಮಿ ವಿದ್ಯಾಸಂಸ್ಥೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ರಂಗಾಪುರದ ಪರದೇಶಿ ಕೇಂದ್ರ ಸ್ವಾಮೀಜಿ ವಿದ್ಯಾಪೀಠ ಮಕ್ಕಳು ಬಂದಿದ್ದರು.
ಸುಮಾರು 600 ಕ್ಕೂ ಹೆಚ್ಚು ಮಕ್ಕಳು ಬ್ಲೋಯಿಂಗ್ ಗೇಮ್ಸ್, ಮನರಂಜನೆಗೆ ದೇಸಿ ಆಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಭಾಗವಹಿಸಿ ತಾವು ನಕ್ಕು ಇತರರನ್ನು ಖುಷಿಪಡಿಸಿದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ವೈಭವ
ಕರ್ನಾಟಕ ರಾಜ್ಯ ಹಾಗೂ ಕನ್ನಡ ಭಾಷೆ ವೈಭವಯುತ ಇತಿಹಾಸವನ್ನು ಹೊಂದಿದ್ದು ಇಂದಿನ ಕಾಲಮಾನದಲ್ಲಿ ನಮ್ಮ ನಾಡು ನುಡಿಗೆ ಅದೇ ವೈಭವವನ್ನು ತರಬೇಕಾಗಿದೆ. ಈ ಕಾರ್ಯಕ್ಕೆ ಕಾಯಕಲ್ಪ ದೊರೆಯಬೇಕಾದರೆ ನಾವು ಕೇವಲ ನವೆಂಬರ್ ಕನ್ನಡಿಗರಾಗಿದ್ದರೆ ಸಾಲದು, ನಂಬರ್ ಒನ್ ಕನ್ನಡಿಗರಾಗಬೇಕು ಎಂದು ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
ನಗರದ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣ ನಮ್ಮ ನಾಡಿನ ಇತಿಹಾಸದಲ್ಲಿ ಒಂದು ಅತ್ಯಂತ ಪ್ರಮುಖವಾದ ಘಟ್ಟ.
ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ನಮ್ಮ ರಾಜ್ಯವು ಮೈಸೂರು ರಾಜ್ಯವಾಗಿ ರೂಪುಗೊಳ್ಳುವ ಮತ್ತು ಕರ್ನಾಟಕ ಎಂದು ಮರುನಾಮಕರಣಗೊಳ್ಳುವ ಮೊದಲು ಕನ್ನಡ ಭಾಷೆಗಿದ್ದ ಸ್ಥಾನಮಾನವನ್ನು ಈಗಿನ ಪರಿಸ್ಥಿತಿಯೊಂದಿಗೆ ಹೋಲಿಸಿದರೆ ಕನ್ನಡ ಭಾಷೆಯ ಸ್ಥಾನಮಾನದಲ್ಲಿ ಗಣನೀಯ ಕುಸಿತವಾಗಿರುವುದು ವೇದ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಅನೇಕ ಕನ್ನಡಪರ ಹೋರಾಟಗಾರರು ತಮ್ಮ ತ್ಯಾಗ ಬಲಿದಾನದ ಮೂಲಕ ಕರ್ನಾಟಕದ ಅಸ್ಥಿತ್ವಕ್ಕೆ ಕೊಡುಗೆ ಸಲ್ಲಿಸಿದ್ದರೂ, ಇಂದಿಗೂ ಕನ್ನಡ ಮಾತೃಭಾಷೆಯಾಗಿ ಬಳಕೆಯಲ್ಲಿರುವ ಅನೇಕ ಪ್ರದೇಶಗಳು ಕರ್ನಾಟಕೇತರ ರಾಜ್ಯಗಳಿಗೆ ಸೇರಿರುವುದು ದುಃಖದ ಸಂಗತಿಯೆಂದರು.
ಕನ್ನಡ ನಮ್ಮ ಜೀವದ, ಜೀವನದ ಭಾಷೆ. ನಾವು ಯಾವುದೇ ಮಾಧ್ಯಮದಲ್ಲಿ ಓದಿದರೂ ನಮಗೆ ಅತ್ಯಂತ ಆಪ್ಯಾಯಮಾನವಾಗಿರುವುದು ಮಾತೃಭಾಷೆಯಾದ ಕನ್ನಡವೇ ಎಂದು ಹೇಳಿದರು. ಇಂದು ಕನ್ನಡ ಮತ್ತು ಆಂಗ್ಲ ಭಾಷೆಗಳನ್ನು ಪ್ರತ್ಯೇಕಿಸಿ ನೋಡುವ ಸ್ಥಿತಿಯೇ ಇಲ್ಲವಾಗಿದೆ.
ಪಕ್ಕದ ರಾಜ್ಯಗಳಲ್ಲಿನ ಭಾಷಾಭಿಮಾನ ನಮ್ಮಲ್ಲಿ ಕ್ಷೀಣಿಸಿರುವುದು ಖೇದಕರ. ನಮ್ಮ ಭಾಷೆಯನ್ನು ನಾವೇ ಬಳಸಿ ಬೆಳೆಸದಿದ್ದರೆ ಇನ್ಯಾರು ಬೆಳೆಸುತ್ತಾರೆ ಎಂದು ಪ್ರಶ್ನಿಸಿದರು. ಕರ್ನಾಟಕದ ವ್ಯಾಪಾರ, ಉದ್ದಿಮೆ, ಶಿಕ್ಷಣ ಹಾಗೂ ಇತರೆ ಕ್ಷೇತ್ರಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗಿದ್ದು ಅಲ್ಲೆಲ್ಲಾ ಕನ್ನಡ ಭಾಷೆಯನ್ನು ಮತ್ತೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಭಾಷೆಯು ಬಳಕೆಯಿಂದ ದೂರವಾದರೆ ಆ ಭಾಷೆಯು ನಶಿಸುತ್ತದೆ. ಈ ದುಸ್ಥಿತಿ ನಮ್ಮ ಕನ್ನಡಕ್ಕೆ ಬರುವುದು ಬೇಡ ಎಂದು ಕಳಕಳಿ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ ಬಿ. ಮರುಳಯ್ಯ ಮಾತನಾಡಿ ಕನ್ನಡ ಭಾಷೆಗೆ ಸಮಾರು 2500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು ವಿಶ್ವದ ಪ್ರಾಚೀನ ಭಾಷೆಗಳಲ್ಲೊಂದಾಗಿದೆ. ಇಡೀ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳು ಹೇಗೆ ರಾಷ್ಟ್ರೀಯ ಹಬ್ಬಗಳೋ ಹಾಗೆಯೇ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಒಂದು ನಾಡಹಬ್ಬವಾಗಿದೆ.
ಆದರೆ ಕರ್ನಾಟಕ ಏಕೀಕರಣ ಚಳುವಳಿಗಾಗಿ ದುಡಿದವರ ನೋವು ಸಂಕಟಗಳು ಇಂದಿನ ತಲೆಮಾರಿನವರಿಗೆ ತಿಳಿದಿಲ್ಲದಿರುವುದು ನೋವಿನ ಸಂಗತಿಯೆಂದರು. ಕರ್ನಾಟಕ ಏಕೀಕರಣಕ್ಕೆ ಜರ್ಮನಿಯ ಜಾರ್ಜ್ ಫರ್ಡಿನಾಂಡ್ ಕಿಟೆಲ್ ತಮ್ಮ ಕನ್ನಡ ನಿಘಂಟಿನ ಮೂಲಕ ಅಡಿಪಾಯ ಹಾಕಿದರು ಎಂದು ತಿಳಿಸಿದರು.
ಭಾರತದಲ್ಲಿಂದು ಸುಮಾರು 600ಕ್ಕೂ ಹೆಚ್ಚು ಭಾಷೆಗಳಿದ್ದು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಹೆಮ್ಮೆ ನಮ್ಮ ಕನ್ನಡ ಭಾಷೆಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕರ್ನಾಟಕ ಸರ್ಕಾರವು ಅನೇಕ ಸಂಘ-ಸಂಸ್ಥೆಗಳನ್ನು ಹುಟ್ಟುಹಾಕಿ ತನ್ಮೂಲಕ ಶ್ರಮಿಸುತ್ತಿದೆ. ಈ ಕಾರ್ಯ ಇನ್ನೂ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಬಸವರಾಜು ಬಿ.ವಿ. ಮಾತನಾಡಿ ಇಂದಿನ ಯುವಜನಾಂಗ ಕನ್ನಡ ನಾಡು-ನುಡಿಯ ಬಗ್ಗೆ ತಾತ್ಸಾರವನ್ನು ಬೆಳೆಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಕನ್ನಡ ನಾವು ಕನಸು ಕಾಣುವ ಭಾಷೆ. ನಾವು ಎಲ್ಲಿಯೇ ಇದ್ದರೂ ಮಾತೃಭೂಮಿ ಮತ್ತು ಮಾತೃಭಾಷೆಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ ಜಿ.ಟಿ., ಕನ್ನಡ ವಿಭಾಗದ ಮುಖ್ಯಸ್ಥ ವಾಸುದೇವ ಬಿ.ಎ., ಡಾ. ಶ್ವೇತಾರಾಣಿ ಹೆಚ್., ಉಪನ್ಯಾಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿಗಾರರು

ಶಶಿಕುಮಾರ್ ವೈ ಬಿ
ಸಹಕಾರ ಸಪ್ತಾಹ; ಹಲವು ಸಂದೇಶ ರವಾನಿಸಿದ ಕೆಎನ್ನಾರ್
ವರದಿ: ಕೆ.ಈ.ಸಿದ್ದಯ್ಯ
ತುಮಕೂರಿನಲ್ಲಿಂದು ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ-2019ರ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಹಲವು ಸಂದೇಶಗಳನ್ನು ರವಾನಿಸಿದೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಬೃಹತ್ ವೇದಿಕೆಯ ಮೂಲಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಾನೇನೂ ಕಡಿಮೆ ಇಲ್ಲ ಎಂಬ ಬಲಪ್ರದರ್ಶನ ತೋರಿಸಿದ್ದಾರೆ.

ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಮಂದಿ ಸಹಕಾರಿಗಳು, ರಾಜಣ್ಣನವರ ಅಭಿಮಾನಿಗಳು ಬಂದಿದ್ದರು. ವೇದಿಕೆಯ ಮುಂಭಾಗದಲ್ಲಿ ಹಾಕಿದ್ದ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಜೊತೆಗೆ ಬೃಹತ್ ಪೆಂಡಾಲ್ ಹಾಕಿದ್ದ ಹೊರಭಾಗದಲ್ಲಿ ನೂರಾರು ಮಂದಿ ಸೇರಿ ಎಲ್ಲರ ಭಾಷಣ ಆಲಿಸಿದರು. ಇಷ್ಟು ದೊಡ್ಡ ಮಟ್ಟದ ಸಮಾರಂಭವನ್ನು ಆಯೋಜಿಸಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೃಶ್ವರ್, ಟಿ.ಬಿ.ಜಯಚಂದ್ರ ಸೇರಿದಂತೆ ವಿರೋಧಿಗಳು ಹಾಗೂ ಜೆಡಿಎಸ್ ಶಾಸಕರಿಗೂ ತನ್ನ ಬಲವೇನು ಎಂಬುದನ್ನು ಪ್ರದರ್ಶಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಕೆ.ಎನ್.ರಾಜಣ್ಣ ಜೆಡಿಎಸ್ ತೊರೆದ ಮೇಲಂತೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟುವಾಗಿ ವಿರೋಧಿಸಿಕೊಂಡು ಬಂದವರು. ಹಿಂದುಳಿದ ವರ್ಗಗಳ ನಾಯಕ ಎಂಬ ಪಟ್ಟವೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಇದೇ ಕಾರಣಕ್ಕಾಗಿಯೇ ತನ್ನ ವಿರೋಧಿ ಜೆಡಿಎಸ್ ಶಾಸಕರನ್ನು ಆಮಂತ್ರಣ ಪತ್ರಿಕೆಯಲ್ಲೂ ಮುದ್ರಿಸದೆ ಸೇಡು ತೀರಿಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ.

ತುಮಕೂರು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆದಿದೆ. ಪ್ರೋಟೋ ಕಾಲ್ ಪ್ರಕಾರ ಪಕ್ಷಾತೀತವಾಗಿ ಎಲ್ಲಾ ಶಾಸಕರು ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಕೆ.ಎನ್.ರಾಜಣ್ಣ ತಿಲಾಂಜಲಿ ಇಟ್ಟಿರುವುದು ಕೆಲವರನ್ನು ಸಿಟ್ಟಿಗೇಳಿಸಿದೆ. ಆದರೂ ಕೆ.ಎನ್.ರಾಜಣ್ಣ ಅದಕ್ಕೆಲ್ಲ ಸೊಪ್ಪು ಹಾಕದೆ ದೊಡ್ಡ ಪಡೆಯನ್ನೇ ಎದುರು ಹಾಕಿಕೊಂಡಿದ್ದಾರೆ.
ಸಮಾರಂಭ ಆಯೋಜಿಸಿದ್ದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿದ್ದ ಎಲ್ಲಾ ಕಟೌಟ್ ಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವುದೇ ಶಾಸಕರು, ಸಂಸದರು ಮತ್ತು ಸಹಕಾರಿಗಳ ಪೋಟೋಗಳನ್ನು ಹಾಕಿರಲಿಲ್ಲ. ಕಾರ್ಯಕ್ರಮಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರನ್ನು ಆಹ್ವಾನಿಸಿ ವೇದಿಕೆಯಲ್ಲಿ ಕೂರಲು ಅವಕಾಶ ನೀಡಲಾಗಿದೆ. ಆದರೆ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸಿಲ್ಲ. ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ಆಹ್ವಾನವೂ ನೀಡಿಲ್ಲ.
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತುಮಕೂರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು. ಅವರೂ ಕೂಡ ಸಪ್ತಾಹ ಕಾರ್ಯಕ್ರಮಕ್ಕೆ ಹಾಜರಾಗದೆ ದೂರ ಉಳಿದಿದ್ದಾರೆ. ಕಿನಿಷ್ಠ ಅವರಾದರೂ ವೇದಿಕೆಯಲ್ಲಿ ಇರಬೇಕಾಗಿತ್ತು. ಅದೂ ಆಗಿಲ್ಲ. ಮೈದಾನದಲ್ಲಿ ಕಂಡು ಬಂದ ಕಟೌಟ್ ಗಳಲ್ಲಿ ಗಮನ ಸೆಳೆದದ್ದು ಎಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಟೌಟ್. ಅವರ ಪಕ್ಕದಲ್ಲಿ ಸಚಿವ ಬಸವರಾಜ ಬೊಮ್ಮಾಯಿ, ಕೆ.ಎನ್.ರಾಜಣ್ಣ, ಆರ್. ರಾಜೇಂದ್ರ ಅವರ ಕಟೌಟ್ ಗಳು. ಇನ್ನೂ ಬೇರೆ ಯಾವುದೇ ರಾಜಕೀಯ ಪಕ್ಷಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಪೋಟೋಗಳು ಕಂಡು ಬರಲಿಲ್ಲ.
ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಗೌರಿಶಂಕರ್ ಮತ್ತು ರಾಜಣ್ಣ ನಡುವೆ ಉತ್ತಮ ಬಾಂಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆ ಕಾರಣಕ್ಕಾಗಿಯೇ ಅವರ ಹೆಸರನ್ನು ಕೈಬಿಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೌರಿಶಂಕರ್ , ಸಣ್ಣ ಬುದ್ದಿ ತೋರಿಸುತ್ತದೆ ಎಂದಷ್ಟೇ ಹೇಳಿದ್ದಾರೆ. ಆಧರೆ ಇಡೀ ವೇದಿಕೆಯ ಮೇಲೆ ಬಿಜೆಪಿಯ ಮುಖಂಡರೇ ರಾರಾಜಿಸಿದ್ದಂತು ಸತ್ಯ. ಹೀಗಾಗಿ ಇಂದು ನಡೆದ ಸಮಾರಂಭ ಕೇವಲ ಬಿಜೆಪಿಯ ಸಮಾವೇಶದಂತೆ ಕಂಡು ಬಂತು. ಮಾಜಿ ಸಚಿವ ರಾಜಣ್ಣ ಆಪ್ತಮಿತ್ರ ಸೊಗಡು ಶಿವಣ್ಣ ಅವರಿಗೆಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ತುಮಕೂರು ನಗರದ ಮಾಜಿ ಶಾಸಕ ರಫೀಕ್ ಅಹಮದ್ ಅವರ ಹೆಸರನ್ನು ಕೈಬಿಡಲಾಗಿದೆ.
ತುಮಕೂರು ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಂದ ರಾಜಣ್ಣ ಅವರಿಗೆ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ಹೀಗಾಗಿ ರಾಜಣ್ಣ ಬೇರೆಯದೇ ದಾರಿ ಹಿಡಿದಿದ್ದಾರೆ ಎನ್ನುತ್ತವೆ ಆಪ್ತ ಮೂಲಗಳು. ನನ್ನ ಕೈಬಿಟ್ಟರೆ ನಾನು ಸುಮ್ಮನಂತೂ ಇರುವುದಿಲ್ಲ ಎಂಬುದನ್ನು ಕೆಎನ್ ರಾಜಣ್ಣ ಈ ಮೂಲಕ ಹೇಳಿದಂತಿದೆ.
ಯಶಸ್ವಿನಿ ಯೋಜನೆ ಮರುಜಾರಿ; ಯಡಿಯೂರಪ್ಪ
ತುಮಕೂರು; ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವ ಸಂಬಂಧ ಶೀಘ್ರವೇ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವವಸೆ ನೀಡಿದರು.

ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಪೆಕ್ಸ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ 66ನೇ ಅಖಿಲಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಯಶಸ್ವಿನಿ ಯೋಜನೆಯಿಂದ ಸುಮಾರು 25 ಲಕ್ಷ ರೈತರಿಗೆ ಅನುಕೂಲ ವಾಗಲಿದೆ. ಈ ವಿಷಯವನ್ನು ಮುಂದಿನ ಕ್ಯಾಬಿನೆಟ್ ಸಭೆಯ ಮುಂದೆ ತಂದು ಆದಷ್ಟು ಬೇಗ ಈ ಯೋಜನೆಯನ್ನುಜಾರಿಗೆ ತರುತ್ತೇನೆ ಎಂದು ಸಾವಿರಾಜು ಮಂದಿ ಸಭಿಕರ ಸಮ್ಮುಖದಲ್ಲಿ ಭರವಸೆಯಿತ್ತರು.
ತುಮಕೂರು ಹಾಲು ಒಕ್ಕೂಟದಲ್ಲಿ ಮೆಗಾ ಡೈರಿ ಆಗಬೇಕೆಂಬ ಬೇಡಿಕೆ ಬಂದಿದೆ. ಈ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇನೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಬೇಕು. ಅದಕ್ಕಾಗಿ ಮೂರು ಎಕರೆ ಜಾಗವನ್ನು ನೀಡುವುದಾಗಿ ಜೆ.ಸಿ.ಮಾಧುಸ್ವಾಮಿ ಅವರು ಒತ್ತಾಯಿಸಿದ್ದಾರೆ. ಈ ವಿಷಯವನ್ನು ಕ್ಯಾಬಿನೆಟ್ ನಲ್ಲಿ ತಂದು ಮಂಜೂರು ಮಾಡಿಸಿಕೊಡುತ್ತೇನೆ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಬಯಲುಸೀಮೆ ಪ್ರದೇಶವಾದ ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು. ನಮ್ಮ ಪ್ರಯತ್ನದ ಮೂಲಕ ರಾಜ್ಯದ ಇತರ ಕೆರೆಗಳಿಗೆ ನೀರು ತುಂಬಿಸುತ್ತೇವೆ. ಆದರೆ ನೀರಾವರಿಗೆ ನೀರನ್ನು ಕೊಡಲು ಸಾಧ್ಯವಿಲ್ಲ. ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಮುಖ್ಯಮಂತ್ರಿಗಳು ಪದೇ ಪದೇ ಯಡಿಯೂರು ಸಿದ್ದಲಿಂಗಸ್ವಾಮಿಯ ಸನ್ನಿಧಿಗೆ ಭೇಟಿ ನೀಡುತ್ತಿದ್ದರು. ನೀವು ಯಡಿಯೂರಿಗೆ ಬರುತ್ತೀರಿ. ಒಂದು ಸಮುದಾಯ ಭವನ ಕಟ್ಟಿಸಿಕೊಡಿ ಎಂದು ಕೇಳಿದೆ. ಕೂಡಲೇ ಅದಕ್ಕೆ ಒಪ್ಪಿ ಸ್ವಂತ ಹಣದಿಂದ ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಹಕಾರ ಸಚಿವರೂ ಆದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬಲಿಷ್ಟವಾಗಿ ಕಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಪ್ರಾಸ್ತಾವಿಕ ಮಾತನಾಡಿ ಸಹಕಾರಿ ಕ್ಷೇತ್ರ ಬೆಳೆದು ಬಂದ ಬಗೆಯನ್ನು ವಿವರಿಸಿದರು. ಮುಖ್ಯಮಂತ್ರಿಗಳು ಸಹಕಾರ ಕ್ಷೇತ್ರಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದರು.
ಇದೇ ವೇಳೆ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ತುಮಕೂರು ಹಾಲು ಒಕ್ಕೂಟದಿಂದ 1 ಕೋಟಿ ರೂಪಾಯಿ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಂಸದ ಸಿ.ಪಿ.ಮೂಡ್ಲಗಿರಿಯಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಮಸಾಲಾ ಜಯರಾಂ, ಬಿ.ಸಿ.ನಾಗೇಶ್, ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯಡಿಯೂರಪ್ಪ ನನ್ನ ಕೈ ಹಿಡಿದರು; ಕೆ.ಎನ್.ರಾಜಣ್ಣ
ತುಮಕೂರು; ತುಮಕೂರು ಡಿ.ಸಿ.ಸಿ.ಬ್ಯಾಂಕ್ ಸೂಪರ್ ಸೀಡ್ ಮಾಡಿದಾಗ ಯಡಿಯೂರಪ್ಪ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಅವರಿಂದ ನನ್ನ ಈ ಸ್ಥಾನ ಉಳಿದಿದೆ ಎಂದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರುನಗರದಲ್ಲಿ ಗುರುವಾರ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಅವರು, ಬೇರೆ ಮನೆ ಮುರುಕರು ನನ್ನನ್ನು ಸಹಕಾರಿ ಆಂದೋಲನದಿಂದ ತೆಗೆಯಲು ಪ್ರಯತ್ನಿಸಿದರು. ಆದರೆ ಯಶಸ್ವಿ ಆಗಲಿಲ್ಲ ಎಂದು ಯಾರ ಹೆಸರನ್ನು ಹೇಳದೆ ಟೀಕಿಸಿದರು.
ಅಕಾಲಿಕವಾಗಿ ಮೃತಪಟ್ಟ ರೈತರ ಒಂದು ಲಕ್ಷದ ವರೆಗಿನ ಸಾಲವನ್ನು ಡಿಸಿಸಿ ಬ್ಯಾಂಕ್ ಮನ್ನಾ ಮಾಡುತ್ತಿದೆ. ಇದನ್ನು ಎಲ್ಲ ಕಡೆಯು ಜಾರಿಗೆ ತರುವಂತೆ ಸಿಎಂ ಗೆ ಮನವಿ ಮಾಡಿದರು.
ತುಮಕೂರಿನಲ್ಲಿ 10 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯವಿರುವ ಮೆಗಾಡೇರಿ ಸ್ಥಾಪಿಸಬೇಕು. ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮತ್ತೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ಅಪಾರ ಸಂಖ್ಯೆಯಲ್ಲಿ ಸಹಕಾರಿ ಸೇರಿದ್ದರು.
ಅಂಬೇಡ್ಕರ್ ಗೆ ಅವಮಾನ; ತಿಪಟೂರಿನಲ್ಲಿ ಪ್ರತಿಭಟನೆ
ತಿಪಟೂರು ನಗರದ ಪೈಹೋಟೆಲ್ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಯವರು ಸರ್ಕಾರಿ ಶಾಲೆಯಲ್ಲಿ ನವಂಬರ್ 26ರಂದು ಸಂವಿಧಾನ ದಿನಾಚರಣೆ ಆಚರಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಕೈ ಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೆ ಸಂವಿಧಾನ ಬರೆದಿಲ್ಲ ಎಂಬುದ್ದಾಗಿ ನಮೂದಿಸಿ ಸಂವಿಧಾನಕ್ಕೆ ಹಾಗೂ ಅಂಬೇಡ್ಕರ್ ರವರಿಗೆ ಅವಹೇಳನ ಮಾಡಿರುವುದನ್ನ ಖಂಡಿಸಿ ದಲಿತ ಪರ ,ಪ್ರಗತಿ ಪರ ,ಅಹಿಂದ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ರವರು ಮಾತನಾಡಿ ಜಗತ್ತೆ ಅಂಬೇಡ್ಕರ್ ರವರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು ಅಂತರರಾಷ್ಠ್ರೀಯ ಮಟ್ಟದಲ್ಲಿ ಅಂಬೇಡ್ಕರ್ ವಾದ ಸದ್ದು ಮಾಡುತ್ತಿರುವಾಗ ರಾಜ್ಯದಲ್ಲಿರುವ ಮನುವಾದಿಗಳು ಅಂಬೇಡ್ಕರ್ ರವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದನ್ನು ಸಹಿಸಲು ಸಾದ್ಯವಿಲ್ಲವೆಂದ ಅವರು ಇಂತಹ ಕೃತ್ಯವನ್ನು ನಾಗರಿಕರು ಖಂಡಿಸಬೇಕು ಎಂದು ಕರೆ ನೀಡಿದರು.

ನಂತರ ಮಾತನಾಡಿದ ಚಿಂತಕ ತಿಪಟೂರು ಕೃಷ್ಣರವರು ಸರ್ಕಾರ ನೈಜ್ಯತೆಯನ್ನು ಮರೆಮಾಚಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದು ಜನರ ಹೋರಾಟದ ದಿಕ್ಕು ಬದಲಾಯಿಸಲು ಹೋರಟಿದೆ ಎಂದರು. ಸೌಹಾರದ್ ತಿಪಟೂರು ಸಂಘಟನೆಯ ಅಲ್ಲಾಬಕಾಶ್ ಎ ಮಾತನಾಡಿ ಟಿಪ್ಪುವಿನ ಬಗ್ಗೆ ಹಾಗೂ ಅಂಬೇಡ್ಕರ್ ರವರ ಬಗ್ಗೆ ಸರ್ಕಾರ ಅಪಪ್ರಚಾರ ಮಾಡುತ್ತಿದ್ದು ಇದನ್ನು ಅರಿಯ ಬೇಕಾಗಿದೆ ಶಿಕ್ಷನ ಇಲಾಖೆ ಹೋರಡಿಸಿರು ಆದೇಶವನ್ನು ಈ ಕೂಡಲೆ ರದ್ದು ಮಾಡ ಬೇಕು ಹಾಗೂ ಆಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಅಗ್ರಹಿಸಿದರು,

ಜಿಲ್ಲಾ ದಲಿತ ಮುಖಂಡ ರಾದ ಕುಂದೂರು ತಿಮ್ಮಯ್ಯ ಮಾತನಾಡಿ ದಲಿತ ವಿರೋದಿ ಸರ್ಕಾರದ ನೀತಿಗಳ ನಿಜ ಬಣ್ಣ ಅರಿಯಬೇಕಿದ್ದು ಸರ್ಕಾರದ ಅವಕಾಶವಾದಿತನವನ್ನು ಬಯಲು ಮಾಡಬೇಕಿದೆ ಎಂದರು, ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಜಗೂರು ಮಂಜುನಾಥ್, ರಂಗಸ್ವಾಮಿ, ಮಹದೇವಯ್ಯ, ಪೆದ್ದಿಹಳ್ಳಿ ನರಸಿಂಹಯ್ಯ, ನಾಗತಿಹಳ್ಳಿ ಕೃಷ್ಣಮೂರ್ತಿ, ಬಿಲಾಲ್ ಮಸೀದಿ ಮುತವಲ್ಲಿ ಷಫಿ ಉಲ್ಲಾ ಶರೀಪ್ , ರವರುಗಳು ಪ್ರತಿಭಟನಾ ಕಾರನ್ನ ಉದ್ದೇಶಿಸಿ ಮಾತನಾಡಿದರು,
ಪ್ರತಿಭಟನೆಯು ಪೈ ಹೋಟೆಲ್ ಬಳಿಯಿಂದ ಹೋರಟು ಅಂಬೇಡ್ಕರ್ ವೃತ್ತದ ಬಳಿ ಬಂದು ಲ್ಲಿ ಪ್ರತಿಕೃತಿಯನ್ನು ದಹಿಸಿ ಉಪವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಪುಲ್ಲ ,ಹಬಿಬುಲ್ಲಾ, ಸೈಯದ್ ಮಹಮೂದ್ ಮೋಹಿನ್ ಖಾನ್ ಇಮ್ರಾನ್ ರಹಮತ್ ಅಂಭೇಡ್ಕರ್ ಸೆನೆಯ ಜಿಲ್ಲಾ ಉಪಾಧ್ಯಕ್ಷ ಅನಂದ್ ಬೌದ್ದ ಮಹಾ ಸಭಾದ ಮೋಹನ್ , ರಘು ವಂಸಂತ್, ರಘು ಯಗಚಿಕಟ್ಟೆ ,ಬಾಬು, ಪ್ರಗತಿಪರ ಸಂಘಟನೆಯ ರೇಣುಕ್ ಪ್ರಸಾದ್, ತಾಸೀನ್ (ಮೈಸೂರಿ) ನಿ ನಾ ಸಂ ಸತ್ತೀಶ್, ಸೇರಿದಂತೆ ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು.
