Sunday, December 28, 2025
Google search engine
Home Blog Page 324

ಯುವ ಬರಹಗಾರರ ಕಾರ್ಯಗಾರ: ಬರಗೂರು ರಾಮಚಂದ್ರಪ್ಪ

ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ತುಮಕೂರು ನಗರದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಗಾರವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾರ್ಯಗಾರದ ರೂಪುರೇಷೆಗಳು ಮತ್ತು ನೋಂದಣಿ ಕಾರ್ಯ ನಡೆಯುತ್ತಿದ್ದು ಸಂದಿಗ್ದ ಪರಿಸ್ಥಿತಿಯಲ್ಲಿ ಯುವ ಬರಹಗಾರರಲ್ಲಿ ಸ್ಪಷ್ಟತೆ ಮೂಡಿಸಲು ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ.

ತುಮಕೂರಿನ ಕನ್ನಡಭವನದಲ್ಲಿ ಅಕ್ಟೋಬರ್ 9ರಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುವ ಬರಹಗಾರರ ಕಾರ್ಯಾಗಾರ ನಡೆಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆಗಳನ್ನು ನೀಡಿ ಕಾರ್ಯಾಗಾರ ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಸಭೆಯ ತೀರ್ಮಾನದಂತೆ ಕಾರ್ಯಾಗಾರದಲ್ಲಿ ಭಾಗವಹಿಸುವ ಯುವ ಬರಹಗಾರರು ಕನಿಷ್ಟ ಒಂದೆರಡು ಕೃತಿಗಳನ್ನು ಪ್ರಕಟಿಸಿರಬೇಕು. ನಲವತ್ತು ವಯಸ್ಸಿನ ಒಳಗಿರಬೇಕು. ಕಾರ್ಯಾಗಾರದಲ್ಲಿ 100 ಮಂದಿ ಯುವ ಬರಹಗಾರರು ಭಾಗವಹಿಸಬಹುದು ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.

ಕಾರ್ಯಾಗಾರಕ್ಕೆ ಬರುವ ಯುವ ಬರಹಗಾರರಿಗೆ ಊಟ ಮತ್ತು ವಸತಿಯನ್ನು ನೀಡಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕಡ್ಡಾಯ ವಾಗಿ ನೋಂದಣಿ ಮಾಡಿಸಲೇಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ರಾಜ್ಯದ ಹೊರ ಜಿಲ್ಲೆಗಳಿಂದ ಬರುವ ಬರಹಗಾರರು ಡಾ.ನಾಗಭೂಷಣ್ 9964852518 ಮತ್ತು ಡಾ.ಓ.ನಾಗರಾಜು 9448659646 ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಡಿಸೆಂಬರ್ 28 ಮತ್ತು 29ರಂದು ಎರಡು ದಿನಗಳು ತುಮಕೂರಿನ ಕನ್ನಡ ಭವನದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಸಭೆಯಲ್ಲಿ ಸಾಹಿತಿ ಎನ್.ನಾಗಪ್ಪ, ಭೂಮಿ ಬಳಗದ ಅಧ್ಯಕ್ಷ ಸೋಮಣ್ಣ, ಪ್ರಾಧ್ಯಾಪಕ ಕರಿಯಣ್ಣ, ಸಹಾಯಕ ಪ್ರಾಧ್ಯಪಕ ಡಾ.ನಾಗಭೂಷಣ ಬಗ್ಗನಡು, ಸಹ ಪ್ರಾಧ್ಯಾಪಕ ಡಾ.ಒ.ನಾಗರಾಜು, ಡಾ.ಶಿವನಂಜಯ್ಯ,ಪತ್ರಕರ್ತ ಇಂದ್ರಕುಮಾರ್, ಲೇಖಕಿ ಮರಿಯಂಬಿ, ಡಿವೈಎಫ್ಐ ಮುಖಂಡ ಎಸ್.ರಾಘವೇಂದ್ರ, ಸಮುದಾಯದ ಜಿಲ್ಲಾ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತುಮಕೂರು ವಿ.ವಿ. ಪರೀಕ್ಷೆ ಮುಂದೂಡಿಕೆ

ತುಮಕೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವು ಶನಿವಾರ ( ನ.9) ರಂದು ನಡೆದ ಬೇಕಾಗಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿದೆ.

ಬಿ.ಎ, ಬಿಕಾಂ, ಬಿಎಸ್ಸಿ, ಬಿಬಿಎಂ ಸೇರಿ ಇಂದು ನಡೆಯಬೇಕಾಗಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿ.ವಿ. ಕುಲಪತಿ ಡಾ. ಸಿದ್ದೇಗೌಡ ತಿಳಿಸಿದ್ದಾರೆ.

ನ.23 ರಂದು ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಿಗೂ ರಜೆ; ರಾಜ್ಯದ ಎಲ್ಲ ಶಾಲಾ ಕಾಲೇಜು ಗಳಿಗೂ ರಾಜ್ಯ ಸರ್ಕಾರ ರಜೆ ಘೋಷಿಸಿದೆ.

ತುಮಕೂರು, ತಿಪಟೂರು, ಶಿರಾ , ಕುಣಿಗಲ್ ಸೇರಿದಂತೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹಲವರ ಮೇಲೆ ಕಣ್ಗಾವಲು ಇಡಲಾಗಿದೆ.
ಎಂದಿನಂತೆ ಸಂಚಾರ ವ್ಯವಸ್ಥೆ ಇರಲಿದೆ. ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳಿಗೆ , ನ್ಯಾಯಾಲಯಗಳಿಗೆ ರಜೆ ಇರಲಿದೆ.

ತಿಪಟೂರಿನಲ್ಲಿ ನ.10ರಂದು ಟಿಪ್ಪು ಜಯಂತಿ

ನವಂಬರ್ 10 ರಂದು ತಿಪಟೂರು ನಗರದ ಗಾಂಧಿನಗರದ ಶಾಧಿ ಮಹಲ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪು ಸುಲ್ತಾನ್ ರಹಮತ್ ಅಲೈ ರವರ ಜಯಂತಿಯನ್ನು ಅಚರಿಸಲು ನಿರ್ದರಿಸಲಾಗಿದೆ ಎಂದು ಸೌಹಾರ್ದ ತಿಪಟೂರು ಕಾರ್ಯದರ್ಶಿ ಅಲ್ಲಾಬಕಾಶ್ ಎ ತಿಳಿಸಿದರು.

ನಗರದ ಗಾಂಧಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿ ಎನ್ ನಾಗರಾಜ್ ನೆರವೇರಿಸುವರು. ಹಾಜಿ ರಹಿಂ ಖಾನ್ ಹಿರಿಯ ಮುಸ್ಲಿಂ ಮುಖಂಡರು ದ್ವಜಾರೋಹಣ ಮಾಡಲಿದ್ದು ಈ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ ಷಡಕ್ಷರಿ ವಹಿಸುವರು.

ಮುಖ್ಯ ಅತಿಥಿಗಳಾಗಿ ಡಾ ಶ್ರೀಧರ್, ಸಿ.ಬಿ ಶಶಿದರ್ , ಕರ್ನಾಟಕ ರಾಜ್ಯ ರೈತ ಸಂಘದ ದೇವರಾಜ್ , ಸಾಹಿತಿ ಗಳಾದ ಮಾಕಳ್ಳಿ ಗಂಗಾದರ್, ಪ್ರಾಂತ ರೈತ ಸಂಘದ ಅರ್ ಎಸ್ ಚನ್ನಬಸವಣ್ಣ, ಹಸಿರು ಸೇನೆಯ ತಿಮ್ಲಾಪುರ ದೇವರಾಜ್ , ಕನ್ನಡ ರಕ್ಷಣಾ ವೇದಿಕೆಯ ವಿಜಯಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತದ ಘಟಕದ ಅಧ್ಯಕ್ಷರಾದ ಎಂ ಸೈಪುಲ್ಲಾ , ಸೇರಿದಂತೆ ಎಲ್ಲಾ ಮಸೀದಿಗಳ ಮುತವಲ್ಲಿಗಳು ನಗರದ ಎಲ್ಲಾ ನಗರ ಸಭಾ ಸದಸ್ಯರುಗಳು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಸಿ.ಬಿ ಶಶಿಧರ್ ರವರು ಟಿಪ್ಪು ಜಯಂತಿಯನ್ನು ತಿಪಟೂರಿನಲ್ಲಿ ಎಲ್ಲ ಜನಪರ ಸಂಘಟನೆಗಳು ಜಂಟಿಯಾಗಿ ಅಚರಿಸುತ್ತಿದ್ದು ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವೀಜೆತರಾದ ಕುಂದೂರು ತಿಮ್ಮಯ ದಲಿತ ಮುಖಂಡರು ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ರಂಗಸ್ವಾಮಿ ಸೇರಿದಂತೆ ಎಲ್ಲಾ ಸಮಾಜಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸ ಲಾಗುವುದು ಎಂದರು,

ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಗುವುದು ಎಂದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ ಸೈಪುಲ್ಲಾ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಸ್ಲೀಂ ಜಮಾಯತ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕರ್ನಾಟಕ ರಾಜ್ಯ ರೈತ ಸಂಘ, ಸಿ ಐ ಟಿ ಯು, ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್ , ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ, ಅಂಬೇಡ್ಕರ್ ಸೇನೆ, ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜನಸ್ಪಂದನ ಟ್ರಸ್ಟ್, ಸವಿತಾ ಸಮಾಜ, ಕರ್ನಾಟಕ ಪ್ರಾತ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಹಲವಾರು ಸಂಘಟನೆಗಳೂ ಸೇರಿ ಕಾರ್ಯಕ್ರಮ ನೆರವೇರಿಸುತ್ತಿವೆ.

ನಿಧನ ವಾರ್ತೆ

ಎಚ್.ಜಿ.ರಾಮಮೂರ್ತಿ
ಕೊರಟಗೆರೆ:
ಸಾಗ್ಗೆರೆ ಐನೋರು ಎಂದೇ ಪ್ರಖ್ಯಾತಿ ಹೊಂದಿದ್ದ ತಾಲ್ಲೂಕಿನ ಚಿಕ್ಕಸಾಗ್ಗೆರೆಯ ಎಚ್.ಜಿ.ರಾಮಮೂರ್ತಿ(57) ಅನಾರೋಗ್ಯದಿಂದ ಶುಕ್ರವಾರ ಬೆಳಗಿನಜಾವ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಮೂಲತಃ ತಾಲ್ಲೂಕಿನ ಹೊಳವನಹಳ್ಳಿಯವರಾದ ರಾಮಮೂರ್ತಿ ಅವರು ಚಿಕ್ಕಸಾಗ್ಗೆರೆಯಲ್ಲಿ ನೆಲೆಸಿದ್ದರು. ತಾಲ್ಲೂಕು ಸಮಾಜಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ 2013ರಿಂದ ಕೆಲಸ ನಿರ್ವಹಿಸುತ್ತಿದ್ದರು. ಈ ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದರು. ತಾಲ್ಲೂಕಿನ ಸುಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಲಕ್ಷದೀಪೋತ್ಸವವನ್ನು ಹನುಮಜಯಂತಿಯಂದು ಕಳೆದ ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಸ್ವಂತ ಖರ್ಚಿನಲ್ಲಿ ಪ್ರಾರಂಭಿಸಿದ್ದರು. ಹಾಗಾಗಿಯೇ ನಾಲ್ಕು ವರ್ಷದಿಂದ ಪ್ರತೀ ವರ್ಷ ಸ್ಥಳೀಯರೆ ಸಹಕಾರದೊಂದಿಗೆ ಇವರ ನೇತೃತ್ವದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗುತ್ತಿತ್ತು. ಜೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ಅವರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕು ಹಾಗೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರಲ್ಲಿ ಅಪಾರವಾದ ಪ್ರಖ್ಯಾತಿ ಪಡೆದಿದ್ದರು. ಜ್ಯೋತಿಷ್ಯದಲ್ಲಿ ಅಪಾರ ಜ್ಞಾನ ಹೊಂದಿದ್ದರೂ ಕೂಡ ಯಾವುದೇ ಬೂಟಾಟಿಕೆ ಮಾಡದೇ ಹಾಗೂ ಜನರಿಂದ ಯಾವುದೇ ರೀತಿಯ ಹಣಕ್ಕೆ ಆಸೆ ಪಡೆದೆ ಅನೇಕ ಜನಸಾಮಾನ್ಯರೂ ಸೇರಿದಂತೆ ಜನಪ್ರನಿಧಿಗಳ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದರು. ಸಮಸ್ಯೆಯಿಂದ ಬಳಲುವ ಸಾಕಷ್ಟು ಜನರು ರಾಮಮೂರ್ತಿ ಅವರ ಬಳಿ ಬಂದ ನಂತರ ಪರಿಹಾರ ಕಂಡುಕೊಂಡು ಉತ್ತಮ ಸ್ಥಿತಿ ತಲುಪಿರುವ ಬಹಳಷ್ಟು ಉದಾಹರಣೆ ಸಿಗುತ್ತವೆ. ಆ ಕಾರಣದಿಂದಾಗಿ ಮೃತರ ಅಂತಿಮ ದರ್ಶನಕ್ಕೆ ವಿವಿಧ ಕಡೆಗಳಿಂದ ಸಾವಿರಾರು ಜನ ಬಂದಿದ್ದರು. ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಸೇರಿದಂತೆ ಅನೇಕ ಗಣ್ಯರು ಹಾಗೂ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಚಿಕ್ಕಸಾಗ್ಗೆರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರು ಸುಮಾರು ಎಂಟು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಮೃತರ ಅಂತ್ಯಸಂಸ್ಕಾರ ಚಿಕ್ಕಸಾಗ್ಗೆರೆಯಲ್ಲಿ ನೆರವೇರಿತು. ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಟ್ರಾಕ್ಟರ್ ಚಾಲಕನಿಗೆ ಜೈಲು ಶಿಕ್ಷೆ

ಟ್ರಾಕ್ಟರ್ ಡಿಕ್ಕಿ ಹೊಡೆಸಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಟ್ರಾಕ್ಟರ್ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ  14 ತಿಂಗಳು ಜೈಲು ಶಿಕ್ಷೆ, 8 ಸಾವಿರ ರೂ ದಂಡ ವಿಧಿಸಿದೆ.

ಡಿಸೆಂಬರ್-17, 2013 ರಂದು  ಆರೋಪಿ ಮಲ್ಲಿಕಾರ್ಜುನ್ ತುಮಕೂರು ಜಿಲ್ಲೆಯ ಪಾವಗಡದ ಈಶ್ವರ ದೇಗುಲದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಬ್ರಮಣಿ ರವರಿಗೆ ಟ್ರಾಕ್ಟರ್ ಡಿಕ್ಕಿ ಹೊಡೆಸಿರುತ್ತಾರೆ. ತೀವ್ರವಾಗಿ ಗಾಯಗೊಂಡಿದ್ದ ಸುಬ್ರಮಣಿ  ಮೃತಪಟ್ಟಿದ್ದರು.

ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶ ಜಗದೀಶ  ಬಿಸೆರೋಟಿ ವಿಚಾರಣೆ ನಡೆಸಿ ತೀರ್ಪು ನಿಡಿದ್ದಾರೆಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ವಿ.ಮಂಜುನಾಥ್ ವಾದ ಮಂಡಿಸಿದ್ದಾರೆಪ್ರಕರಣದ ತನಿಖೆ ನಡೆಸಿದ ಸರ್ಕಲ್ ಇನ್ ಸ್ಪೆಕ್ಟರ್ ಭಾನುಪ್ರಸಾದ್  ಅಂತಿಮ ವರದಿ ಸಲ್ಲಿಸಿದ್ದರು.

ಕಳಪೆ ಬಿತ್ತನೆ ಶೇಂಗಾ ವಿತರಣೆ ಆರೋಪ

ಪಾವಗಡ: ಕಳಪೆ ಬಿತ್ತನೆ ಶೇಂಗಾ ವಿತರಿಸಿರುವವರ  ವಿರುದ್ಧ ಕ್ರಮ ಜರುಗಿಸಬೇಕು ಎಂದುತ್ತಾಯಿಸಿ ತಾಲ್ಲೂಕು ರೈತ ಸಂಘದೊಂದಿಗೆ ಚಿಕ್ಕಹಳ್ಳಿ ದಿನ್ನೆ ಗ್ರಾಮಸ್ಥರು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪಟ್ಟಣದ  ಮಾರುತಿ ಟ್ರೇಡಿಂಗ್ ಕಂಪನಿಯಿಂದ  ಸುಮಾರು 15 ಕ್ವಿಂಟಾಲ್ ನಷ್ಟು ಶೇಂಗಾ ಬೀಜ ಕೊಂಡು ಬಿತ್ತನೆ ಮಾಡಲಾಗಿದೆ. 20 ದಿನಗಳು ಕಳೆದರೂ ಈ ವರೆಗೆ ಮೊಳಕೆ ಬಂದಿಲ್ಲ. ಇದರಿಂದ ಸಾಕಷ್ಟು ನಷ್ಟವಾಗಿದೆ   ಎಂದು ಚಿಕ್ಕಹಳ್ಳಿ ದಿನ್ನೆ ರೈತರು ಆರೋಪಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ,   ಕೆಲ ಟ್ರೇಡರ್ಸ್ ಮಾಲೀಕರು  ಗುಜರಾತ್ ಸೇರಿದಂತೆ ವಿವಿದೆಡೆಗಳಿಂದ ಶೇಂಗಾ ಆಮದು ಮಾಡಿಕೊಂಡು, ನೀರು ಹಾಕಿ  ಹೆಚ್ಚಿನ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇವರಿಂದ  ಶೇಂಗಾ ಕೊಂಡು ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ದೂರಿದರು.

ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ನಷ್ಟ ಪರಿಹಾರ ಕೊಡಿಸಿಕೊಡಬೇಕು. ತಾಲ್ಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಎಣ್ಣೆಗಾಗಿ, ತಿನ್ನಲು ಶೇಂಗಾ ಮಾರಾಟ ಮಾಡಲಾಗುತ್ತಿದೆಬಿತ್ತನೆ ಉದ್ದೇಶಕ್ಕೆ ಶೇಂಗಾ ಮಾರಾಟ ಮಾಡಿಲ್ಲ ಎಂದು ಮಾರುತಿ ಟ್ರೇಡಿಂಗ್ ಕಂಪನಿ ಮಾಲೀಕ ಅನಿಲ್ ಕುಮಾರ್ ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದರು.

ತಾಲ್ಲೂಕು ರೈತ ಸಂಘದ ಪದಾಧಿಕಾರಿ  ಬಡಪ್ಪ, ಕೃಷ್ಣಾರೆಡ್ಡಿ, ರೈತ ಗೋವಿಂದಪ್ಪ, ಸತೀಶ್, ಶೇಖರ್, ಕೃಷ್ಣಪ್ಪ, ರಾಮು, ಅಂಜಿನಪ್ಪ, ರಾಮಪ್ಪ ಉಪಸ್ಥಿತರಿದ್ದರು.

ಎಲ್ಲರಿಗೂ 10 ಸಾವಿರ ಕನಿಷ್ಠ ಪಿಂಚಣಿಗೆ ಸಿಐಟಿಯು ಸಮ್ಮೇಳನದಲ್ಲಿ ನಿರ್ಣಯ

ತುಮಕೂರು: ತುಮಕೂರಿನಲ್ಲಿ ನಡೆದ ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಕಾರ್ಮಿಕರ ಸಾಗರವೇ ಹರಿದು ಬಂದಿತ್ತು. ಗಾಜಿನಮನೆ ತುಂಬಿ ಹೋಗಿ ಹೊರಗೂ ನಿಂತು ನಾಯಕರ ಭಾಷಣ ಆಲಿಸಿದರು.

ಭಾಷಣಕಾರೆಲ್ಲರೂ ಮಹಿಳೆಯ ಭಾಗವಹಿಸುವಿಕೆ ಶೇಕಡ 90ರಷ್ಟಿದೆ ಎಂದು ಶ್ಲಾಘಿಷಿದರು. ವೇದಿಕೆಯ ಮೇಲಿದ್ದ ಗಣ್ಯರು ಲಾಲ್ ಸಲಾಂ, ಐಕ್ಯತೆ ಚಿರಾಯುವಾಗಲಿ, ಹೋರಾಟ ಮುಂದುವರೆಸುತ್ತೇವೆ ಎಂಬ ಘೋಷಣೆ ಮೊಳಗಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿಶೇಷವಾಗಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಮಂದಿ ಅಂಗನವಾಡಿ, ಬಿಸಿಯೂಟ, ಸ್ಕೀಂ ನೌಕರರು, ಕೈಗಾರಿಕೆಗಳ ಸಂಘಟಿತ ಅಸಂಘಟಿತ ಕಾರ್ಮಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಮಾವೇಶಕ್ಕೆ ಬಂದಿದ್ದರು.

ವೇದಿಕೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು.ಮೊದಲನೆಯದು ಜನವರಿ 8ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಎಚ್.ಎಸ್.ಸುನಂದ ವಿಷಯ ಮಂಡಿಸಿದರು. ಕೆ.ಮಹಾಂತೇಶ್ ಅನುಮೋದಿಸಿದರು.

ಅದರಲ್ಲಿ ರಾಷ್ಟ್ರೀಯ ಕನಿಷ್ಟ ವೇತನ 21 ಸಾವಿರಕ್ಕೆ ನಿಗದಿ ಮಾಡಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ಕನಿಷ್ಟ ಪಿಂಚಣಿ ಜಾರಿಗೊಳಿಸಬೇಕು.ಗ್ರಾಮೀಣ ಮತ್ತು ನಗರದ ೆಲ್ಲಾ ಕುಟುಂಬಗಳನ್ನು ಒಳಗೊಂಡ ಸಮರ್ಪಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು. ಗ್ರಾಮೀಣ ಸಂಕಷ್ಟವನ್ನು ಕಡಿಮೆ ಮಾಡಲು ಸೂಕ್ತವಾದ ಸಂಗ್ರಹ ಸೌಲಭ್ಯಗಳೊಂದಿಗೆ ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು.ಕಾಯಂಗೊಳಿಸಬೇಕು. ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಬೇಕು. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಮತ್ತೊಂದು ವಿಷಯ ಅಯೋಧ್ಯ ಪ್ರಕರಣ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ದುಡಿಯುವ ಜನರ ಐಕ್ಯತೆ ಕಾಪಾಡಲು ಕರೆ ನೀಡಲಾಯಿತು. ಪ್ರಕಾಶ್ ಅವರ ವರದಿ ಮಂಡಿಸಿದರು. ಎನ್.ಕೆ.ಸುಬ್ರಮಣ್ಯ ಅನುಮೋದನೆ ನೀಡಿದರು.

ತುಮಕೂರಿನಲ್ಲಿ ಸಿಐಟಿಯು ಮೂಡಿಸಿದ ಕೆಂಪು ಮೆರವಣಿಗೆ

ತುಮಕೂರು:ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನದ ಭಾಗವಾಗಿ ಟೌನ್ ಹಾಲ್ ವೃತ್ತದಿಂದ ಗಾಜಿನಮನೆವರೆಗೆ ಸಾವಿರಾರು ಕಾರ್ಮಿಕರು ಬೃಹತ್ ಮೆರವಣಿಗೆ ಮಾಡಿದರು.

ಸ್ಕೀಮ್ ನೌಕರರು, ಕೈಗಾರಿಕಾ ಕಾರ್ಮಿಕರು, ಸಂಘಟಿತ, ಅಸಂಘಟಿತ ಕಾರ್ಯಕರ್ತರು, ಟೈಲರ್, ಹಮಾಲಿ, ಮನೆಗೆಲಸಗಾರರು ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಭಗತ್ ಸಿಂಗ್ ಅವರ ಕುರಿತ ನಾಟಕ ಗಮನ ಸೆಳೆಯಿತು.

ಗಾಜಿನ ಮನೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ವೇದಿಕೆಯಲ್ಲಿ ತಪನ್ ಸೇನ್, ಡಾ.ಹೇಮಲತ, ಎ.ಕೆ.ಪದ್ಮನಾಭನ್, ಎಸ್,ವರಲಕ್ಷ್ಮಿ, ಮೀನಾಕ್ಷಿ ಸುಂದರಂ ಕೆ.ದೊರೈರಾಜ್, ಸಯ್ಯದ್ ಮುಜೀಬ್ ಉಪಸ್ಥಿತರಿದ್ದರು

ನಟ ದುರ್ಯೋಧನನ ಒಂದು ಹೃದಯಸ್ಪರ್ಶಿ ಪತ್ರ

0

ಆತ್ಮೀಯರೇ ದಿನಾಂಕ 09-11-2019 ರ ಶನಿವಾರ ಬೆಳಗ್ಗೆ 10:00 ಗಂಟೆಗೆ ಸರಿಯಾಗಿ ಕನಕ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಸಂಗೊಳ್ಳಿ ರಾಯಣ್ಣ ಕಲಾ ಬಳಗ ಮತ್ತು ಕನಕ ಯುವಸೇನೆಯ ಸಹಕಾರದೊಂದಿಗೆ ಕುರುಕ್ಷೇತ್ರವೆಂಬ ಪೌರಾಣಿಕ ನಾಟಕ ಪ್ರದರ್ಶನವನ್ನು , ತುಮಕೂರು ನಗರದ ಮಧ್ಯೆ, ನಗರ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ನುರಿತ ಹಿರಿಯ ಕಲಾವಿದರೊಂದಿಗೆ ಹಾರ್ಮೊನಿಯಮ್ ಮಾಸ್ಟರ್ ಪ್ರವೀಣ್ ಎಸ್ (ಪಿಟೀಲು ಮತ್ತು ಕೀ ಬೋರ್ಡ್ ವಾದಕರು) ರವರ ಸಂಗೀತ ನಿರ್ದೇಶನದಲ್ಲಿ ನಾನು ಈ ಭಾರಿಯೂ ಛಲದಂಕಮಲ್ಲ (ಸುಯೋ)ದುರ್ಯೋಧನನ ಪಾತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದೇನೆ.

ಜೀವನದುದ್ದಕ್ಕೂ ಎಲ್ಲರಿಗೂ ತಾವು ಮಾಡುವ ಒಂದಲ್ಲ ಒಂದು ಕೆಲಸದಲ್ಲಿ ಅದರದೇ ಆದ ಧರ್ಮವಿರುತ್ತದೆ.ನಮಗೆ ನಿಮಗೆಲ್ಲ ನಾವು ಮಾಡುವ ವೃತ್ತಿಗೆ ವೃತ್ತಿ ಧರ್ಮವಿರುವ ಹಾಗೆ ಅದನ್ನು ನಾವು ನೀವು ಪಾಲಿಸುವ ಹಾಗೆ ,ರಾಜಾಳ್ವಿಕೆಯಲ್ಲಿ ಪ್ರತಿಯೊಬ್ಬ ರಾಜನಾದವನಿಗೂ ಅವನ ವೃತ್ತಿಗೆ ಸಂಬಂಧಪಟ್ಟಂತಹ ‘ರಾಜಧರ್ಮ’ವೆಂಬುದು ಇರುತ್ತದೆ.

ದುರ್ಯೋಧನನು ಕೂಡ ಮಹಾಭಾರತ ಕಥೆಯ ಅಂತ್ಯದವರೆಗೂ ರಾಜಧರ್ಮವನುಸರಿಸಿ ಆಳ್ವಿಕೆ ನೆಡೆಸಿ ತನ್ನ ವೃತ್ತಿಪರತೆಯನ್ನು ಮೆರೆದು ಜನಮಾನಸದಲ್ಲಿ ಅಜರಾಮರವಾಗಿರುವುದು ನಿಮಗೆಲ್ಲಾ ತಿಳಿದಿರುವ ವಿಚಾರ.

ಇಡೀ ಮಹಾಭಾರತದಲ್ಲಿ ಅವನು ಅನಿವಾರ್ಯ ಸಂದರ್ಭವೊಂದರಲ್ಲಿ ಮಾತ್ರ ಅಧರ್ಮದ ಹಾದಿ ತುಳಿದಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಸುಯೋಧನನಾಗಿದ್ದ ಅವನನ್ನು ದುರ್ಯೋಧನನಾಗಿ ಬಿಂಬಿಸಿರುವುದು ಕೂಡ ಸತ್ಯ. ಮೂಲ ಭಾರತದಲ್ಲಿ ಈ ರೀತಿಯ ಅತಿರೇಕದ ಬಿಂಬಿಸಿಲ್ಲದಿರುವುದು ಸ್ವತಃ ಅಧ್ಯಯನಕ್ಕಿಳಿದು ಮಹಾಭಾರತ ತಿಳಿದ ಪ್ರಾಜ್ಞರ ಜೊತೆ ಚರ್ಚೆಗೆ ಬಂದಾಗ ಅವನು ಸುಯೋಧನನೆ ಆಗಿದ್ದದ್ದು ಸ್ಪಷ್ಟ ಅರಿವಿಗೆ ಬಂತು.

ಮಹಾಭಾರತದ ನೀಲವರ್ಣದಾರಿ ಕೃಷ್ಣ ಪರಮಾತ್ಮನ ಸ್ವರೂಪದಲ್ಲಿ ಜಗತ್ತಿಗೆ ಶಾಂತಿ ಸಾರುವಲ್ಲಿ ಶಾಂತಿಯ ಪ್ರತೀಕವಾಗಿದ್ದಾನೆ. ಬರೀ ಯುದ್ಧವೇ ತುಂಬಿಕೊಂಡಿದ್ದ ಜಗತ್ತಿಗೆ ಕಥೆಯ ಮೂಲಕ ಶಾಂತಿ ಸಾರುವ ಪಾತ್ರವೊಂದರ ಅನಿವಾರ್ಯತೆ ಕೂಡ ಕಥೆಗಾರನಿಗೆ ಇತ್ತು. ಅದನ್ನು ಕೃಷ್ಣನ ಪಾತ್ರದ ಮಖೇನ ಪ್ರಸ್ತುತ ಪಡಿಸಿದರು.

ಆದರೆ ಇತ್ತೀಚೆಗೆ ಅವನನ್ನು ಶಾಂತಿ ದೂತನಾಗಿ ನೋಡುವ ದೃಷ್ಟಿ ಬಿಟ್ಟು ಸ್ರೀ ಲೋಲನಂತೆ ಬಿಂಬಿಸುತ್ತಿದ್ದಾರೆ. ನಿಜಕ್ಕೂ ಕೃಷ್ಣ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಆಕರ್ಷಿಸುವಂಥ ನೀಲವರ್ಣವುಳ್ಳ ಲಕ್ಷಣವಂತನಾಗಿದ್ದರಿಂದ ಅಷ್ಟು ಜನ ಸ್ರೀಯರು ಆಕರ್ಷಿತರಾಗುವ ಗುಣವಿತ್ತೆಂಬುದಕ್ಕೆ ಕವಿಗಳು ಹದಿನಾರು ಸಾವಿರವನ್ನು ಕವಿಶೈಲಿಯಲ್ಲಿ ಉತ್ಪ್ರೇಕ್ಷೆ ಯಾಗಿ ಬಳಸಿದ್ದರು ಅಷ್ಟೇ.ಅದನ್ನು ತಪ್ಪಾಗಿ ಅರ್ಥೈಸಿಕೊಂಡ ಕೇಲವೇ ಕೆಲವು ಅರ್ಧಂಬರ್ಧ ಕಥೆ ತಿಳಿದ ಕಲಾವಿದರ ವರ್ಗಗಳು ಅವನನ್ನು ಕೂಡ ಹೆಚ್ಚಿನ ಹೆಣ್ಣುಗಳ ಸಂಗ ಬಯಸುವಂತ ಆಧುನಿಕ ವ್ಯಕ್ತಿಗಳಿಗೆ ಹೋಲಿಸಿಕೊಂಡು ತಾನು ಆ ರೀತಿಯ ಕೃಷ್ಣನೆಂದು ಸ್ವಯಂ ತಿಳಿದು ಅವನಿಗೆ ಸ್ರೀ ಲೋಲ ಪಟ್ಟ ಕಟ್ಟಿ ಆ ಮಟ್ಟಕ್ಕೆ ಆ ಪಾತ್ರವನ್ನು ಇಳಿಸುತ್ತಿರುವುದು ಇತ್ತೀಚಿನ ಒಂದು ರೀತಿಯ ಕೆಟ್ಟ ಬೆಳವಣಿಗೆ.

ಇಂತಹ ಹತ್ತಾರು ಅಂಶಗಳನ್ನು ಅರಿತು ಅವುಗಳನ್ನು ಆಧಾರವಾಗಿಟ್ಟುಕೊಂಡು ಕುರುಕ್ಷೇತ್ರ ಯುದ್ಧ ಕೂಡ ಧರ್ಮ ಅಧರ್ಮದ ನಡುವೆ ನಡೆಯುವ ಯುದ್ಧವಲ್ಲ ಅದು ನಿಜವಾಗಿಯೂ ಧರ್ಮ ಮತ್ತು ರಾಜಧರ್ಮದ ನಡುವೆ ನಡೆಯುವ ಯುದ್ಧವೆಂಬುದನ್ನ ತೋರಿಸಲು ನನ್ನ ಪಾತ್ರದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಕ್ಷತ್ರಿಯರಾಗಿದ್ದರೂ ಕ್ಷತ್ರಿಯರಲ್ಲದವರಂತೆ ನೆಡೆದು ಕೊಂಡು ಧರ್ಮ ಧುರೀಣರೆಂಬ ಪಟ್ಟ ತಂದಿಟ್ಟುಕೊಂಡಿದ್ದ ಪಾಂಡವರು ಮಾತ್ರ ದುರ್ಯೋಧನನ ಕೋಪ ಮತ್ತು ಛಲಕ್ಕೆ ಗುರಿಯಾದರು.ಅವನ ಆಳ್ವಿಕೆಯಲ್ಲಿ ಪ್ರಜೆಗಳ ವಿರುದ್ಧವಾದ ಆಡಳಿತವಿರುವುದು ಎಲ್ಲಿಯೂ ಕೂಡ ದಾಖಲಾಗಿರುವ ಉದಾಹರಣೆಯಿಲ್ಲ.ಅವನದು ಪ್ರಜಾ ಹಿತದೃಷ್ಟಿಯಳ್ಳ ಪ್ರಜಾಕಲ್ಯಾಣ ರಾಜ್ಯವಾಗಿತ್ತು.

ಅದೇನೆ ಇರಲಿ ಒಟ್ಟಾರೆ ನಾಟಕವಾಗಲಿ ಸಿನಿಮಾವೇ ಆಗಲಿ ಕೊನೆಗೊಂದು ಸ್ಪಷ್ಟ ಸಂದೇಶ ಜನರಿಗೆ ತಲುಪಿಸುವಂತಿರಬೇಕು. ಮಹಾಭಾರತವೇ ಆಗಲಿ ರಾಮಾಯಣವೇ ಆಗಲಿ ಮತ್ತೊಂದು ಕಥೆಯಾಗಲಿ ಪ್ರಸ್ತುತ ಸಮಾಜದಲ್ಲಿರುವ ಸನ್ನಿವೇಶಗಳ ಪ್ರತೀಕವಾಗಿರುವುದು ಅಕ್ಷರಶಃ ಸತ್ಯ.

ಈ ನಾಟಕದಲ್ಲಿಯೂ ಸಹ ಕೃಷ್ಣನನ್ನು ನಮ್ಮ ನಿಮ್ಮ ಊರು ಕೇರಿಗಳಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಜಗಳ ತಂದಿಟ್ಟು ದಾಯಾದಿ ಮತ್ಸರ ಮತ್ತಷ್ಟು ಹೆಚ್ಚುವಂತೆ ಮಾಡಿ ತಮಾಷೆ ನೋಡುವವರ ಪ್ರತಿನಿಧಿಯನ್ನಾಗಷ್ಟೇ ಇಟ್ಟುಕೊಂಡು ಇವತ್ತಿನ ಸನ್ನಿವೇಶಕ್ಕೂ ಅನ್ವಯವಾಗುವಂತೆ ಹತ್ತು ಹಲವು ಸಂಭಾಷಣೆಯ ಮೂಲಕ ಇರುವ ಸನ್ನಿವೇಶಗಳನ್ನ ಬಳಸಿಕೊಂಡು ರಂಗು ಗೊಳಿಸಲು ಪ್ರಯತ್ನಿಸಿದ್ದೇನೆ.

ಇಲ್ಲಿ ನೋಡುಗರಿಗೆ ಕೃಷ್ಣನನ್ನು ಮೂದಲಿಸಿದಂತೆ ಕಂಡರೂ ನಾನು ಮೂದಲಿಸಿರುವುದು ಊರುಗಳಲ್ಲಿ ಜಗಳ ತಂದಿಕ್ಕುವ ಕಿಡಿಗೇಡಿಗಳನ್ನ ಎಂಬುದು ಸೂಕ್ಷ್ಮವಾಗಿ ಗಮನಿಸುವವರಿಗೆ ಮಾತ್ರ ತಿಳಿಯುತ್ತದೆ.

ಈ ಹಿಂದಿನ ಮೂರು ಪ್ರದರ್ಶನಗಳಿಗಿಂತ ಮತ್ತಷ್ಟು ಸುಧಾರಿತ ಅಭಿನಯ, ಅಭಿನಯಕ್ಕೆ ತಕ್ಕಂತಹ ಇನ್ನಷ್ಟು ಹೊಸ ಹೊಸ ಪಂಚಿಂಗ್ ಡೈಲಾಗ್ ಗಳನ್ನ ನಾನೇ ಸ್ವತಃ ಬರೆದಿದ್ದೇನೆ. ಹಾಡುಗಾರಿಕೆಯಲ್ಲಿ ತಾಳ ಮತ್ತು ಶೃತಿಯ ಜಾಡನ್ನ ಹಿಡಿದು ಈ ಭಾರಿ ನನ್ನ ಹಿರಿಯ ಹಾಗೂ ಪೂಜ್ಯ ಕಲಾವಿದರ ಸಹಕಾರದೊಂದಿಗೆ ಹಾಡುಗಾರಿಕೆಯಲ್ಲೂ ಪರವಾಗಿಲ್ಲ, ಇನ್ನೂ ಮುಂದಿನ ಅವಕಾಶಗಳಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬಲ್ಲನೆಂಬ ಭರವಸೆಯನ್ನಂತೂ ಖಂಡಿತ ಮೂಡಿಸಿದ್ದೇನೆ.

ಕಳೆದ ಭಾರಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ವಿಡಿಯೋ ಕ್ಲಿಪ್ ಗಳಿಗೆ ಅಭೂತಪೂರ್ವವಾದ ಬೆಂಬಲ ವ್ಯಕ್ತಪಡಿಸಿದ್ದೀರಿ. 1000 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಮೆಚ್ಚಿ ಮಾಡಿದ್ದೀರಿ. 1800 ಕ್ಕೂ ಹೆಚ್ಚು ಜನ ನನ್ನ ವಿಡಿಯೋ ಕ್ಲಿಪ್ ಗಳನ್ನು ಶೇರ್ ಮಾಡಿಟ್ಟು ಕೊಳ್ಳುವ ಮೂಲಕ ಹೆಚ್ಚು ಪ್ರಚಾರ ಆಗುವಂತೆ ಮಾಡಿದ್ದೀರಿ. ಈ ಫೇಸ್ ಬುಕ್ ನಿಂದ ನನ್ನ ಪಾತ್ರದ ಬಗ್ಗೆ ತೀವ್ರತರವಾದ ಅಭಿಮಾನವನ್ನು ಇಟ್ಟುಕೊಂಡು ಆಗಾಗ ಕರೆ ಮಾಡುವ ಒಂದಷ್ಟು ಜನರ ಅಭಿಮಾನಿ ವರ್ಗವೇ ಸೃಷ್ಟಿಯಾದದ್ದು ನನ್ನ ಹೆಗ್ಗಳಿಕೆ.

ಈ ಅಭೂತಪೂರ್ವ ಪ್ರೋತ್ಸಾಹದಿಂದ ನಾನು ಮತ್ತಷ್ಟು ಉತ್ಸುಕನಾಗಿ ಹೊಸ ಗೆಟಪ್ ನಲ್ಲಿ ಮತ್ತೊಮ್ಮೆ ದುರ್ಯೋಧನ ಅಲ್ಲ ಸುಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.ನನ್ನ ಬಗ್ಗೆ ವಿಶೇಷವಾದ ಅಭಿಮಾನ ತುಂಬಿಕೊಂಡಿರುವ ಹಿತೈಷಿಗಳೇ ಕರೆಯುವಂತೆ ‘ದುರ್ಯೋಧನಂಜಯ’ ಈ ಭಾರಿ ‘ಸುಯೋಧನಂಜಯ’ ನಾಗಿದ್ದೇನೆ.

ಅದು ಹೇಗಿರಬಹುದೆಂಬ ಕುತೂಹಲವಿದ್ದರೆ ನೀವೇ ಖುದ್ದಾಗಿ ಬನ್ನಿ, ವೀಕ್ಷಿಸಿ.. ಫೇಸ್ ಬುಕ್ ನಲ್ಲಿನ ಎಲ್ಲಾ ಫ್ರೆಂಡ್ಸ್ಗಳ ಮೊಬೈಲ್ ಸಂಖ್ಯೆ ಇಲ್ಲವಾದ್ದರಿಂದ ಖುದ್ದಾಗಿ ಕರೆ ಮಾಡಿ ಕರೆಯಲಾಗುತ್ತಿಲ್ಲ.ಇದನ್ನೇ ಆಹ್ವಾನ ಪತ್ರಿಕೆ ಯೆಂದು ತಿಳಿದು ಸಕಾಲಕ್ಕೆ ಆಗಮಿಸಿ ಪಾತ್ರದ ಯಶಸ್ವಿಗೆ ಮನ ತುಂಬಿ ಹಾರೈಸಿ ನನ್ನ ಮನಸ್ಸಂತೋಷ ಪಡಿಸಬೇಕಾಗಿ ತಮ್ಮಲ್ಲಿ ಪ್ರಾರ್ಥನೆ…

ಇಂತಿ ನಿಮ್ಮ ಸುಯೋಧನಂಜಯ

ಮಕ್ಕಳೆಂದರೆ ಪ್ರೀತಿ: ಯಶ್

ರಾಧಿಕಾ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂಬ ವಿಚಾರ ತಿಳಿದ ಯಶ್‌ ಅಭಿಮಾನಿಗಳು ಬುಧವಾರ ಆಸ್ಪತ್ರೆ ಮುಂದೆ ಜಮಾಯಿಸಿದ್ದರು.

ಯಶ್‌ ಮತ್ತು ರಾಧಿಕಾ ಮುದ್ಧಾದ ಗಂಡು ಮಗುವಿನ ಜೊತೆಗೆ ಪತ್ರಕರ್ತರ ಸಮ್ಮುಖದಲ್ಲಿ ಹಾಜರಾದರು. ಅವರೊಂದಿಗೆ ಪುತ್ರಿ ಐರಾ ಸಹ ಇದ್ದಳು. ಐರಾ ಯಶ್‌ ಅಭಿಮಾನಿಗಳತ್ತ ಕೈ ಬೀಸುತ್ತಾ  ಫ್ಲೈಯಿಂಗ್‌ ಕಿಸ್‌ ಬಿಸಾಕಿದ್ದು ಆಕರ್ಷಣೀಯವಾಗಿತ್ತು.

ಯಶ್‌ ಮಾದ್ಯಮದವರೊಂದಿಗೆ ಮಾತನಾಡುತ್ತಾ, ‘ನನಗೆ ಹೆಣ್ಣು ಮಗು ಎಂದರೆ ತುಂಬಾ ಇಷ್ಟ ಹಾಗೆಯೇ ರಾಧಿಕಾ ಗೆ ಗಂಡು ಮಗು ಎಂದರೆ ಆಸೆ. ಈಗ ನಮ್ಮಿಬ್ಬರ ಆಸೆಯೂ ಈಡೇರಿದೆ. ಸಧ್ಯ ಇದೀಗ ರಾಧಿಕಾ ಜೊತೆಗಿರುವ ಸಲುವಾಗಿ ಶೂಟಿಂಗ್ ನಿಂದ ವಿರಾಮ ಪಡೆದಿದ್ದೇನೆ. ಐರಾ ಜನಿಸಿದಾಗ ಕೆ.ಜಿ.ಎಫ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದೆ ಎಂದರು.

ರಾಧಿಕಾ ಪಂಡಿತ್ ಮಾತನಾಡಿ, ಮಕ್ಕಳು, ನನ್ನೊಂದಿಗೆ ಇಂತಹ ವೇಳೆಯಲ್ಲಿ ಯಶ್ ಇರುವುದು ಸಂತಸ ತಂದಿದೆ. ಮಕ್ಕಳು, ನನ್ನ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇದೆ.