Friday, March 13, 2026
Google search engine
Home Blog Page 59

ಫೆ 5: ಶಿವಣ್ಣ ತಿಮ್ಲಾಪುರ ಕೃತಿಗಳ ಬಿಡುಗಡೆ

ಸಾಹಿತಿ ಹಾಗೂ ಕನ್ನಡ ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ರಚಿಸಿರುವ ಅಹಿಂಸಾ ಮಾರ್ಗ ಹಾಗೂ ಮಾತಂಗಿ ಕುಲಕಥನ ಕೃತಿಗಳ ಬಿಡುಗಡೆ ಸಮಾರಂಭವನ್ನು ಫೆಬ್ರವರಿ 5ರಂದು ಬೆಳಗ್ಗೆ 10.30ಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪುಸ್ತಕಗಳನ್ನು ಬಿಡುಗಡೆ ಮಾಡುವರು. ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಡಾ.ಎಲ್.ಹನುಮಂತಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಕೃತಿಗಳನ್ನು ಕುರಿತು ಕವಿ ಡಾ.ಹುಲಿಕುಂಟೆ ಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ್ ಪುರಸ್ಕೃತ ಡಾ.ಎಚ್.ಲಕ್ಷ್ಮೀನಾರಾಯಣಸ್ವಾಮಿ ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು, ಸ್ಟೂಡೆಂಟ್ ಬುಕ್ ಕಂಪನಿ ಪ್ರಕಾಶಕ ಸದಾಶಿವ್ ಮಂಗಳೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಟಿ.ಆರ್. ಲೀಲಾವತಿ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಡಿ.ಶಿವನಂಜಯ್ಯ ಭಾಗವಹಿಸುವರು.

ತುಮಕೂರಲ್ಲಿ ವಲಸೆ ಹಕ್ಕಿಗಳ ವೀಕ್ಷಣೆ.

ದಿನಾಂಕ 5/02/2023 ಭಾನುವಾರ ಬೆಳಗ್ಗೆ 6.30 ರಿಂದ 8.30 ರವರೆಗೆ ತುಮಕೂರಿನ ಭೀಮಸಂದ್ರ ಮತ್ತು ಮೇಳೆಕೋಟೆ ಕೆರೆಯಲ್ಲಿ ವಿದೇಶಿ ಹಕ್ಕಿಗಳ ವೀಕ್ಷಣೆ ಏರ್ಪಡಿಸಲಾಗಿದೆ.

ದೇಶ ವಿದೇಶಗಳಿಂದ ನಾನಾ ಜಾತಿಯ ಹಕ್ಕಿಗಳು ಇಲ್ಲಿಗೆ ವಲಸೆ ಬಂದಿವೆ. ಅವುಗಳ ಬಗ್ಗೆ ವಿವರಣೆ ಕೂಡ ನೀಡುತ್ತಾರೆ.

ಆಸಕ್ತರು ಮೇಲ್ಕಂಡ ಮೊಬೈಲ್ ಸಂಖ್ಯೆ ಅಥವಾ ಲಿಂಕ್ ಬಳಸಿ ನೊಂದಾಹಿಸಿಕೊಳ್ಳಬಹುದು.

ಪಕ್ಷಿಗಳ ವೀಕ್ಷಣೆಗೆ ಬರುವ ಮುನ್ನ

ಹಸಿರು,ಕಂದು,ಕಾಫಿ ಬಣ್ಣದ ಬಟ್ಟೆ ಧರಿಸುವುದು ಕಡ್ಡಾಯ. ಟೋಪಿ ಮತ್ತು ಶೂ ಧರಿಸುವುದು ಉತ್ತಮ, ಕ್ಯಾಮರ ಮತ್ತು ಬೈನಾಕ್ಯುಲರ್ ತರಬಹುದು. ಕುಡಿಯಲ್ಉ ನೀರು ಮತ್ತು ಬಿಸ್ಕತ್ತು ತರಬಹುದು. ಕೆರೆಯ ಬಳಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.

ಹೋಟೆಲ್ ಉದ್ಯಮಿ ನರಸೇಗೌಡ ಇನ್ನಿಲ್ಲ

0

ಗುಬ್ಬಿ: ಹೋಟೆಲ್ ಉದ್ಯಮಿ ನರಸೇಗೌಡ (57) ಅವರು ಬುಧವಾರ ಅನಾರೋಗ್ಯದ ಕಾರಣ ನಿಧನರಾದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯದವರಾದ ಅವರು ಸಣ್ಣ ವಯಸ್ಸಿನಲ್ಲಿಯೇ ತೆರಳಿ ಅಲ್ಲಿ ಹೋಟೆಲ್ ಆರಂಭಿಸಿ ಹೆಸರುವಾಸಿಯಾಗಿದ್ದರು.

ಜನಾನುರಾಗಿ ಆಗಿದ್ದ ಅವರು ಉತ್ತಮ ಸ್ನೇಹ ವಲಯ ಹೊಂದಿದ್ದರು. ಹಲವು ಜನರಿಗೆ ಸಹಾಯಹಸ್ತ ಚಾಚಿದ್ದರು.

ಅವರ ನಿಧನಕ್ಕೆ ಬಿಜೆಪಿ ಮುಖಂಡರಾದ ರಾಮಕೃಷ್ಣ ಗೌಡ, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಮುಖಂಡರಾದ ಜಯರಾಮ್, ಗೌಡಣ್ಣ, ಪ್ರಕಾಶ್ ಇತರರು ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮೃತರ ಸ್ವಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಸಂಬಂಧಿ ದಯಾನಂದ ತಿಳಿಸಿದ್ದಾರೆ.

SFI ಸುಧೀಂದ್ರ ಇನ್ನಿಲ್ಲ

ತುಮಕೂರು: ಭಾರತ ವಿದ್ಯಾರ್ಥಿ ಫೆಡರೇಶನ್ (sfi) ಮಾಜಿ ನಾಯಕ, ಸಂಘಟಕ ಸುಧೀಂದ್ರ ಸೋಮವಾರ ನಿಧನರಾದರು.

ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಮ್ಯುನಿಸ್ಟ್ ಪಾರ್ಟಿ ಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದ ಅವರು ನಂತರ ಎಡ ಚಳವಳಿಯಲ್ಲಿ ಸಕ್ರಿಯವಾಗಿದ್ದರು.

ಸಮುದಾಯ, ರೈತ ಸಂಘಟನೆಯಲ್ಲೂ ಕೆಲ ಕಾಲ ದುಡಿದಿದ್ದರು. ಸಾವಯವ ಕೃಷಿಯನ್ನು ಬೆಂಬಲಿಸುವ ಸಲುವಾಗಿ ತುಮಕೂರಿನಲ್ಲಿ ಕೆಲ ಕಾಲ ಸಾವಯವ ಹೊಟೆಲ್ ನಡೆಸಿದ್ದರು. ಆದರೆ ಅದರಲ್ಲಿ ಅವರು ಯಶಸ್ಸು ಕಂಡಿರಲಿಲ್ಲ.

ಪತ್ನಿ, ಮಗಳು, ಮಗ ಇದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.

ಮೃತರ ನಿಧನಕ್ಕೆ ಸಿಪಿಎಂ ಮುಖಂಡರಾದ ಸಯ್ಯದ್ ಮಜೀಬ್, ಬಿ.ಉಮೇಶ್, ಸುಬ್ರಹ್ಮಣ್ಯ, ಸುಫಿಯಾ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್, ವಕೀಲರಾದ ಸಿ.ಕೆ.ಮಹೇಂದ್ರ, ಕಾರ್ಮಿಕ ಮುಖಂಡ ಟಿಮೆಕ್ ನರಸಿಂಹ ಮೂರ್ತಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಕೆರೆಯಲ್ಲಿ ಇಬ್ಬರ ಜೀವ ಉಳಿಸಿದ ಬಸ್ ಚಾಲಕ

ಶಿರಾ : ರಾಜ್ಯ ಸರ್ಕಾರಿ ಬಸ್​​ ನ ಚಾಲಕನೋರ್ವ ಕೆರೆಯಲ್ಲಿ ಬಸ್ ಚಾಲನೆ ಮಾಡುವಾಗ ರಸ್ತೆ ಪಕ್ಕದ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿ ಸಾಹಸ ಮೆರೆದಿರುವ ಘಟನೆ ಶಿರಾ ತಾಲೂಕು ಹಂದಿಕುಂಟೆ ಅಗ್ರಹಾರದಲ್ಲಿ ನಡೆದಿದೆ.

ಕೆಎಸ್ಆರ್ಟಿಸಿ ಶಿರಾ ಘಟಕದ ಬಸ್ ಚಾಲಕ ಮಂಜುನಾಥ್ ಶಿರಾದಿಂದ ನಾಗಪ್ಪನಹಳ್ಳಿ ಗೇಟ್ ಮಾರ್ಗವಾಗಿ ಬರುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ಬಸ್ ಚಾಲಕ ತಮ್ಮ ಜೀವದ ಹಂಗನ್ನು ತೊರೆದು ಕೆರೆಗೆ ಧುಮುಕಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.


ಶಿರಾ ತಾಲೂಕು ಕಾಮಗೊಂಡನಹಳ್ಳಿಯ ಇವರು,
ಭಾನುವಾರ ಮದ್ಯಾಹ್ನ ಬರಗೂರು ಕಡೆಗೆ ಹೋಗುವಾಗ ಇದ್ದಕಿದ್ದಹಾಗೆ ಮಹಿಳೆಯೊಬ್ಬಳು ಬಸ್ ಗೆ ಅಡ್ಡಲಾಗಿ ಬಂದು ಕೂಗಿಕೊಂಡು, ನನ್ನ ಮಕ್ಕಳಿಬ್ಬರು ಕೆರೆಯಲ್ಲಿ ಬಿದ್ದು ಮುಳುಗಿದ್ದಾರೆ ರಕ್ಷಿಸಿ ಎಂದು ಕೂಗಿಕೊಂಡಾಗ ತಕ್ಷಣವೇ ಮಂಜುನಾಥ್ ಬಸ್ ನಿಲ್ಲಿಸಿ ಮುಳುಗಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.


ಪಬ್ಲಿಕ್ ಸ್ಟೋರಿ ಯೊಂದಿಗೆ ಮಾತಾಡಿದ ಚಾಲಕ ಮಂಜುನಾಥ್, ತಾಯಿ ಕೂಗಿಕೊಂಡಾಗ ನನಗೆ ಮಕ್ಕಳನ್ನು ರಕ್ಷಿಸಬೇಕೆಂಬುದು ಬಿಟ್ಟು ಬೇರೆ ಏನು ಕಾಣಲಿಲ್ಲ. ಹಿಂದೆಮುಂದೆ ನೋಡದೆ ಕೆರೆಗೆ ಜಿಗಿದು ಮುಳುಗಿ ನೀರು ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಮಕ್ಕಳನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸೆ ಮಾಡಿ ಬದುಕಿಸಿದೆ. ಇನ್ನೊಂದು ನಿಮಿಷ ತಡವಾಗಿದ್ದರೂ ಇಬ್ಬರೂ ಬದುಕುತ್ತಿರಲಿಲ್ಲ ಎಂದರು.


ಇಂಥ ಅವಕಾಶ ಸಿಕ್ಕಿದ ನಾನೆ ಧನ್ಯ ಎಂದು ಹೆಮ್ಮೆಯಿಂದ ಹೇಳಿದ ಅವರು, ಸುಮಾರು 5 ವರ್ಷದಿಂದ ಇದೇ ಮಾರ್ಗದಲ್ಲಿ ಬಸ್ ಚಾಲಕನಾಗಿರುವ ನಾನು ಈ ಭಾಗದ ಪ್ರಯಾಣಿಕರು ತೋರುವ ಪ್ರೀತಿಗೆ ಋಣಿಯಾಗಿದ್ದೇನೆ.


ಎಷ್ಟೋ ಸಲ ಬಸ್ ಛಾರ್ಜು ಇಲ್ಲದ ಗ್ರಾಮೀಣ ಪ್ರಯಾಣಿಕರಿಗೆ ನಾನೇ ಸ್ವತಃ ಹಣ ನೀಡಿ ಕರೆದೊಯ್ದಿದ್ದೇನೆ ಎಂದು ನೆನಪಿಸಿಕೊಂಡರು.

ಕರ್ತವ್ಯದ ಸಮಯದಲ್ಲೂ ಸಮಯೋಚಿತ ಕಾರ್ಯದಿಂದ ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಚಾಲಕನ ಈ ಸಾಹಸಕ್ಕೆ ವ್ಯವಸ್ಥಾಪಕ ನಿರ್ದೇಶಕರು ಮನತುಂಬಿ ಹಾರೈಸಿ, ಇವರ ಮಾದರಿ ಕಾರ್ಯ ಅನನ್ಯವೆಂದು ಬಣ್ಣಿಸಿದ್ದಾರೆ.

ನಮ್ಮ ಸಿಬ್ಬಂದಿಗಳ ಈ ಕಾರ್ಯತತ್ಪರತೆ ಸಂಸ್ಥೆಗೆ ಹೆಮ್ಮೆ ಮತ್ತು ಗೌರವ ತಂದು ಕೊಟ್ಟಿದೆ. ಇಂತಹ ಸಿಬ್ಬಂದಿಗಳೇ ನಮ್ಮ ಆಸ್ತಿ ಎಂದು ವ್ಯವಸ್ಥಾಪಕ ನಿರ್ದೇಶಕ ಅಭಿನಂದಿಸಿದ್ದಾರೆ.

ಕುಸಿದು ಬಿದ್ದ ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಹರಿಹರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪನವರು ಕುಸಿದು ಬಿದ್ದ ಘಟನೆ ನಡೆದಿದೆ.

ಹರಿಹರದಲ್ಲಿ ನಡೆದ ಬಂಡಾಯ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರವಾಸಿ ಮಂದಿರಕ್ಕೆ ತೆರಳಿದರು. ಅಲ್ಲಿ ಏಕಾಏಕಿ ಕುಸಿದು ಬಿದ್ದರು.

ಸಂಘಟಕರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಅವರು ಚೇತರಿಸಿಕೊಂಡಿದ್ದಾರೆ.

ಬಿ.ಪಿ, ಷುಗರ್ ಇದೆ. ಯಾವೊತ್ತು ಹೀಗೆ ಆಗಿರಲಿಲ್ಲ. ಬೆಂಗಳೂರಿಗೆ ತೆರಳಿ ಆರೋಗ್ಯ ಸಂಪೂರ್ಣ ತೋರಿಸಿಕೊಳ್ಳುವುದಾಗಿ ಬರಗೂರು ತಿಳಿಸಿದ್ದಾರೆ.

ತುಮಕೂರು ವಿ.ವಿ. ತಂಡ ಹೆಸರು ತಂದು ಕೊಡಲಿ

ತುಮಕೂರು: ಇದೇ 27 ರಿಂದ 31ರವರೆಗೆ ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ನಡೆಯುವ 25 ವಿಶ್ವವಿದ್ಯಾಲಯಗಳ ದಕ್ಷಿಣ ಪೂರ್ವ ವಲಯದ ಐದು ದಿನಗಳ ಸಾಂಸ್ಕೃತಿಕ ಯುವ ಜನ ಉತ್ಸವಕ್ಕೆ ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ವಿ.ವಿ.ಯ ಸಂಸ್ಕೃತಿಕ ಘಟಕದ ಸಂಚಾಲಕರಾದ ಪ್ರೊ.ಬಿ ರಮೇಶ್ ನಿಶಾನೆ ತೋರಿಸುವುದರ ಮೂಲಕ ಶುಭ ಕೋರಿ ಮಾತನಾಡಿದ ಅವರು ತುಮಕೂರು ವಿಶ್ವವಿದ್ಯಾಲಯ ಘನತೆ ಮತ್ತಷ್ಟು ಹೆಚ್ಚಿಸುವಂತೆ ಆರೋಗ್ಯ ಪೂರ್ಣ ಸ್ಪರ್ದೆಯನ್ನು ಮಾಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಸಾಂಸ್ಕೃತಿಕ ಸಮಾರಂಭ ಗಳು ಮತ್ತು ಸ್ಪರ್ಧೆಗಳು ಬದುಕಿನ ದಿಕ್ಕನ್ನು ಬದಲಿಸಿ ಸಾದಕರನ್ನಾಗಿ ಮಾಡುತ್ತವೆ ಎಂದರು.

ಬಹಳ ಶ್ರದ್ಧೆಯಿಂದ ಸ್ಪರ್ಧಿಸಿ ಕೀರ್ತಿ ಗಳಿಸಬೇಕು. ವಿಶ್ವವಿದ್ಯಾಲಯ ಕುಲಪತಿಗಳ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು .

ಸಂಗೀತ ಕ್ಷೇತ್ರದ ಸ್ಪರ್ಧೆಗಳಲ್ಲಿ ಶಾಲಂಕೃಪ ಮತ್ತು ತಂಡ ಶಾಸ್ತ್ರೀಯ ಸಂಗೀತ – ಕೋಮಲ ,ಜನಪದ ನೃತ್ಯ – ಪೂಜಶ್ರೀ ಮತ್ತು ತಂಡ ,ಕಿರುನಾಟಕ- ಲಾವಣ್ಯ ಮತ್ತು ತಂಡ ,ಮೂಖಾಭಿನಯ- ಲೇಖನ ಮತ್ತು ತಂಡ , ಚರ್ಚಾಸ್ಪರ್ದೆ- ರಮ್ಯ , ರಸಪ್ರಶ್ನೆ-ಜಯಂತ್ ಮತ್ತು ತಂಡ, ಚಿತ್ರಕಲೆ-ಬಿಂದುಶ್ರೀ ಆರ್ ರಂಗೋಲಿ- ಅಮೃತವರ್ಷಿಣಿ ಛಾಯಾಚಿತ್ರ – ನಂದೀಶ್ ದೀಪಕ್ ಮುಂತಾದವರನ್ನು ವಿಶ್ವವಿದ್ಯಾಲಯ ವಿವಿದ ಕಾಲೇಜ್ ಗಳಿಂದ ಆಯ್ಕೆ ಮಾಡಿ ತರಬೇತಿ ನೀಡಿ ಸ್ಪರ್ಧೆಸಲು ಸಿದ್ದತೆ ಮಾಡಿ ಕಳುಹಿಸಿದೆ. ಇವರಿಗೆ ತುಮಕೂರು ವಿಶ್ವವಿದ್ಯಾಲಯ ಕುಲಪತಿಗಳು ,ಕುಲಸಚಿವರು , ಪ್ರಾಧ್ಯಾಪಕರು ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ಡಾ. ಸಚಿನ್ ಅರಾಧನಾ ,ಸಿದ್ದೇಶ್ ಸಿ ,ಅನಂತಾಲಕ್ಷ್ಮೀ ,ಮಹಾಲಕ್ಷ್ಮಿ ಡೈಸನ್ ಹಾಗೂ ರಾಜಣ್ಣ ಮುಂತಾವರು ಇದ್ದರು.

ತಮಕೂರು ಸಂಭ್ರಮದ ಗಣರಾಜ್ಯೋತ್ಸವ

ನಗರದ ಗೂಡ್ ಶೆಡ್ ಕಾಲೋನಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಮಸ್ಜಿದ್ ಎ ಮೀನಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಿದರು.

ಮುಸ್ಲಿಂ ಬಾಂಧವರಿಂದ ಮತ್ತು ಮಕ್ಕಳಿಂದ ೭೪ನೇ ಗಣರಾಜ್ಯೋತ್ಸವ ಆಚರಿಸಿ

ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡಲಾಯಿತು.

ಮಸೀದಿ ಅಧ್ಯಕ್ಷ ಸಯ್ಯದ್ ನೇತೃತ್ವದಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ

ಮದರಾಸ ಮಕ್ಕಳಿಂದ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಲಾಯಿತು.

ಧ್ವಜಾರೋಹಣಕ್ಕೂ ಮುನ್ನ ದೇವರ ಮಂಗಳಾರತಿ ಸ್ವೀಕರಿಸಿ ಭಾವೈಕ್ಯತೆ ಮೆರೆದ ಬಾಂಧವರು.

ಸಿಹಿ ತಿಂದು ಸಂಭ್ರಮಿಸಿದ ಮದರಸಾದ ಪುಟ್ಟ ಪುಟ್ಟ ಮಕ್ಕಳು.

ತುರುವೇಕೆರೆಯಲ್ಲಿ ಕಾಣಿಸಿಕೊಂಡ ಹಾಸ್ಯ ಸುನಾಮಿ!

ತುರುವೇಕೆರೆ, ಜ-೨೫
ಹಾಸ್ಯವೆಂದರೆ ನಕ್ಕು ಸುಮ್ಮನಾಗುವುದಲ್ಲ, ಅದೊಂದು ಸಂತೃಪ್ತ ಮನಸ್ಥಿತಿಯಾಗಿದ್ದು ಬದುಕನ್ನು ಹೆಚ್ಚು ಸಹನೀಯವಾಗಿಸುತ್ತದೆ ಎಂದು ಖ್ಯಾತ ಹಾಸ್ಯ ಸಾಹಿತಿ ಹಾಗೂ ನಗೆಗಾರ ಎಂ.ಎಸ್.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.


ಪಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.


ದೈನಂದಿನ ಬದುಕು ಹೆಚ್ಚು ಜಂಜಾಟಗಳಿಂದ ಕೂಡಿದ್ದು ಜನ ತೀವ್ರ ಒತ್ತಡದ ಪರಿಣಾಮ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಲೂ ಸಹಜವೇ ಆಗಿದೆ. ಮಾನಸಿಕ ಧೃಡತೆ, ಲವಲವಿಕೆ ಉಳಿಸಿಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದ ಸೋಲುಗಳನ್ನು ಸ್ವೀಕರಿಸಲು ಹಾಸ್ಯಪ್ರಜ್ಞೆ ದಿವ್ಯೌ಼ಷಧ ಎಂದ ಅವರು ಹಲವಾರು ನಗೆಪ್ರಸಂಗಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು.


ತುಮಕೂರು ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಮಾತನಾಡಿ ಪರಂಪರವಾಗಿ ಬಂದ ಜ್ಞಾನ ಅತ್ಯಂತ ಶ್ರೇಷ್ಠವಾದದ್ದು ಮತ್ತು ಶಾಶ್ವತವಾದದ್ದು. ಕೃತಕವಾದ ಬುದ್ದಿಮತ್ತೆ ಮತ್ತು ಮಾಹಿತಿ ಕ್ಷಣಿಕವಾದದ್ದು. ಹಾಗಾಗಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು


ಬರಹಗಾರ ತುರುವೇಕೆರೆ ಪ್ರಸಾದ್ ಮಾತನಾಡಿ ಶಿಕ್ಷಣ ಸ್ವಾರ್ಥ ಸಾಧನೆ ಮತ್ತು ಐಶರಾಮಿ ಬದುಕಿನ ಸೋಪಾನವಲ್ಲ, ಬದಲಿಗೆ ಅದು ಜೀವನದಲ್ಲಿ ಕೃತಕೃತ್ಯತೆಯ ಭಾವ ಮೂಡಿಸಬೇಕು. ವಿದ್ಯಾರ್ಥಿಗಳು ತಾವು ಪಡೆದದ್ದನ್ನು ಸಮಾಜಕ್ಕೆ ವಾಪಸ್ ಕೊಡುವ ಋಣಸಂದಾಯದ ಉತ್ತರದಾಯಿತ್ವ ಹೊಂದಬೇಕು ಎಂದರು.


ಸಮಾರಂಭದಲ್ಲಿ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಹಾಗೂ ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ. ಪ್ರಭಾಕರ್, ಉಪಾಧ್ಯಕ್ಷೆ ಶೀಲಾ, ಮಾಜಿ ಅಧ್ಯಕ್ಷ ಚಿದಾನಂದ್, ಉಪನ್ಯಾಸಕಿ ತಸ್ಲಿಮುನ್ನೀಸಾ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಿಜಗುಣ ಸ್ವಾಗತಿಸಿದರು, ವಿ.ಎನ್.ನಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಚಂದ್ರ ಮತ್ತು ಶಹನಾಜ್ ಬಾನು ನಿರೂಪಿಸಿದರು.

ಪೆಟ್ರೋಲ್ ಟ್ಯಾಂಕ್ ನಲ್ಲಿ ಇಬ್ಬರು ಸಾವು

0

ತಿಪಟೂರು: ಇಲ್ಲಿನ ಖಾಸಗಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಸಂಗ್ರಹಿಸಿ ಇಡುವ ಟ್ಯಾಂಕ್ ಕ್ಲೀನ್ ಮಾಡಲು ಹೋಗಿ ಇಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

ಮೃತರನ್ನು ವೇಲೂರಿನ ರವಿ, ಅರಸೀಕೆರೆಯ ನಾಗರಾಜ್ ಎಂದು ಗುರುತಿಸಲಾಗಿದೆ.

ಪೆಟ್ರೋಲ್ ಸಂಗ್ರಹದ ಟ್ಯಾಂಕ್ ಖಾಲಿಯಾದ ಕಾರಣ ಟ್ಯಾಂಕ್ ಒಳಗೆ ಇಳಿದ ಇಬ್ಬರು ಉಸಿರು ಗಟ್ಟಿ ಸಾವಿಗೀಡಾಗಿದ್ದಾರೆ.