Monday, March 16, 2026
Google search engine
Home Blog Page 104

ಹಲ್ಲೆ: ಬಿಜೆಪಿ ಕಾರ್ಯಕರ್ತರ ಮೇಲೆ ದೂರು ದಾಖಲು

Publicstory


ತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‍ಎಸ್‍ಯುಐ) ವಿದ್ಯಾರ್ಥಿಗಳನ್ನು ನ್ಯಾಯಾಲಯದ ಮುಂಭಾಗದಲ್ಲಿ ಹಲ್ಲೆ ಮಾಡಿದ ಬಿಜೆಪಿ ಕಾರ್ಯಕರ್ತರ ಮೇಲೆ ಕಡೆಗೂ ಜೂ.5ರ ಸೋಮವಾರ ರಾತ್ರಿ ದೂರು ದಾಖಲಾಗಿದೆ.

ದೂರಿನಲ್ಲಿ ಕೈಗಳಿಂದ ಹಲ್ಲೆ, ಪ್ರಾಣಬೆದರಿಕೆ, ಗಾಡಿ ಜಕಂ ಮಾಡಿರುವ ಬಗ್ಗೆ ಜಯಸಿಂಹ ಮಾದಿಹಳ್ಳಿ ಮತ್ತು ಇತರರು ಎಂದು ದೂರು ದಾಖಲಾಗಿದೆ.

ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿರುವ ಬಗ್ಗೆ ಜೂ.2 ರಂದೆ ನಗರಠಾಣೆಗೆ ದೂರು ನೀಡಿದರು ದಾಖಲಿಸಲು ನಿರಾಕರಿಸಿದ್ದ ಪೊಲೀಸರು ರಾಜ್ಯದಾದ್ಯಂತ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಜೂ.6 ರಾತ್ರಿ ದೂರು ದಾಖಲಿಸಿದ್ದಾರೆ. ಪೊಲೀಸರ ನಡೆಗೆ ವ್ಯಾಪಕ ಖಂಡನೇ ವ್ಯಕ್ತವಾಗಿದ್ದು ಆಡಳಿತ ಪಕ್ಷದ ಕೈಗೊಂಬೆ ಆಗಿದ್ದಾರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅನೇಕ ಮುಖಂಡರು ಆರೋಪಿಸಿದ್ದರು.

ಜೂ.1ರಂದು ಘಟನೆ ನಡೆದ ದಿನವೇ ಎನ್‍ಎಸ್‍ಯುಐನ 15 ಹಾಗೂ ಜೂ.2ರಂದು 7 ಒಟ್ಟು 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯ ಮುಂದೆ ಹಾಜರು ಪಡಿಸಿದ್ದು ಘನ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಇನ್ನೂ ಬಂಧಿತ ವಿದ್ಯಾರ್ಥಿಗಳಿಗೆ ಕಳೆದ 5-6 ದಿನಗಳಿಂದಲೂ ಜಾಮೀನಿಗಾಗಿ ತಿಪಟೂರಿನ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ಬಂಧಿತ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಶನಿವಾರಕ್ಕೆ ಜಾಮೀನು ತೀರಸ್ಕೃತಗೊಂಡಿದ್ದು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನಿಗಾಗಿ ಪುನಃ ಅರ್ಜಿ ಸಲ್ಲಿಸಲಾಗಿದೆ.

ಆಟೋ ಪಲ್ಟಿ ಇಬ್ಬರು ಸಾವು

Public story


ಪಾವಗಡ: ತಾಲ್ಲೂಕಿನ ನಲಿಗಾನಹಳ್ಳಿ ಬಳಿ ಸೋಮವಾರ ಆಟೋ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಬ್ಯಾಡನೂರು ದೊಡ್ಡಹಟ್ಟಿ ಗ್ರಾಮದ ಕೋಣನಕುರಿಕೆ ಬಂಡಪ್ಪ(60), ಈರಬಂಡಪ್ಪ(65) ಮೃತರು. ನಾಗಮ್ಮ ಎಂಬ ಮಹಿಳೆಗೆ ತೀವ್ರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.

ನಲಿಗಾನಹಳ್ಳಿ ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಆಟೋ ಗ್ರಾಮದ ಬಳಿಯ ಹಳ್ಳದ ಸಮೀಪ ಪಲ್ಟಿಯಾಗಿದೆ. ಗಾಯಾಳುಗಳನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಹುದ್ದೆ ಭರ್ತಿಗೆ ಅರ್ಜಿ

0

Tumkuru look kkoó

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಕರೆದಿದೆ. ಅರ್ಜಿಗಳನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್ ಸೈಟ್ “http://district.ecourt.gov.in/tumkuronlinerecruitment” ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್ ಲೈನ್ ನಲ್ಲಿ 30/05/2022ರಿಂದ 15/06/2022ರ ರಾತ್ರಿ 11.59 ರವರೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ; 51
ವೇತನ ಶ್ರೇಣಿ; 17000-400-18600-450-20400-500-22400-550-24600-600-27000-650-28950 ಮತ್ತು ಇತರೆ ಭತ್ಯೆಗಳು.
ಶೈಕ್ಷಣಿಕ ಅರ್ಹತೆ; SSLC ಉತ್ತೀರ್ಣತೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ವಯೋಮಿತಿ; ಕನಿಷ್ಠ ವಯೋಮಿತಿ- 18 ವರ್ಷ, ಗರಿಷ್ಠ ವಯೋಮಿತಿ(ಸಾಮಾನ್ಯ ವರ್ಗ)- 35, ಪ್ರವರ್ಗ 2ಎ, 2ಬಿ, 3ಎ, 3ಬಿ- 38 ವರ್ಷ, ಪ.ಜಾ/ಪ.ಪಂ/ಪ್ರವರ್ಗ -1- 40 ವರ್ಷ.
ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆ, ಮಾಜಿ ಸೈನಿಕರು ಹಾಗೂ ವಿಕಲಚೇತನರಿಗೆ ಕರ್ನಾಟಕ ಸಿವಿಲ್ ಸೇವೆಗಳು(ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲೆ ನೀಡಲಾಗಿರುವ ನ್ಯಾಯಾಲಯದ ವೆಬ್ ಸೈಟ್ ‌ನಲ್ಲಿ ಪರಿಶೀಲಿಸಿಕೊಳ್ಳಬಹುದು.

ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ

Publicstory


ಗುಬ್ಬಿ: ಕಸಬ ಹೋಬಳಿ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಚಿರತೆಯು ದಾಳಿ ಮಾಡಿ ಶಿವಣ್ಣ ಎಂಬುವರಿಗೆ ಸೇರಿದ 8 ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ. ರಾತ್ರಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿದ್ದ ವೇಳೆಯಲ್ಲಿ ಚಿರತೆಯು ದಾಳಿ ಮಾಡಿ ಮಾಡಿದೆ ಎಂದು ರೈತ ಶಿವಣ್ಣ ತಿಳಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಧಿಕಾರಿ ದುಗ್ಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ,ಚಿರತೆ ದಾಳಿಯಿಂದ ಸತ್ತಿರುವ ಕುರಿಗಳಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಚಿರತೆಯನ್ನು ಸೆರೆಯನ್ನು ಹಿಡಿಯಲು ಆಯಕಟ್ಟಿನ ಜಾಗದಲ್ಲಿ ಬೋನನ್ನು ಇಡುವ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಪರಿಸರ ದಿನದ ಪದ್ಯಗಳು*

0
ದೇವರಿಗೆ…

ದೇವರಿಗೆ
ವರುಷಕ್ಕೊಮ್ಮೆ
ರಥೋತ್ಸವ!
ಪರಿಸರ ಕಾಳಜಿಗೆ
ಒಮ್ಮೆ ವನಮಹೋತ್ಸವ
ಮನುಷ್ಯರಿಗೆ ಮಾತ್ರ
ದಿನಾ ನೂರೆಂಟು ಉತ್ಸವ!

*****

ಇಂದು ಭಾನುವಾರ

ನಮಗೂ ಗೊತ್ತು
ರಕ್ಷಿಸಬೇಕು
ಪರಿಸರ!
ನಾಳೆ ಪ್ರಾರಂಭಿಸುವೆವು
ಇಂದು ರಜಾ
ಭಾನುವಾರ!

*****

ಕಾರಣ ಅಲ್ಲ

ಭೂಮಿಯ

ಬಿಸಿಗೆ
ಬರೀ ಇಂಗಾಲ
ಕಾರಣ ಅಲ್ಲ!
ನಮ್ಮಿಬ್ಬರ
ಬಿಸಿಯುಸಿರೂ ಕಾರಣ
ಗೊತ್ತಾ ನಲ್ಲ?

******

ಮರ‌ತಬ್ಬಿ

ಆಗ ಅವನು
ಮರ ತಬ್ಬಿ
ನಡೆಸಿದ್ದ ಪರಿಸರ
ಚಳುವಳಿ!
ಈಗ ಮಡದಿಯ ತಬ್ಬಿ
ನೀಡಿದ್ದಾನೆ ಚಿನ್ನದಸರ
ಬಳುವಳಿ!

*****

ಕಾರಣ

ಎರಡು ಕಾರಣ
ಪರಿಸರ ನಾಶಕ್ಕೆ
ಒಂದು
ಕೈಗಾರಿಕೆಗಳ
ಹೊರಸೂಸುವಿಕೆ
ಮತ್ತೊಂದು
ಎಲ್ಲಂದರಲ್ಲಿ
ಮನುಷ್ಯರ
ಹೊರ “ಸೂಸು”ವಿಕೆ!


*~ತುರುವೇಕೆರೆ ಪ್ರಸಾದ್

ಯಾಕೆ ನನ್ನ ಹೆಸರಿನ ಜೊತೆ ನನ್ನ ಅಮ್ಮನ ಹೆಸರಿಲ್ಲ?: ಬೂಕರ್ ಪ್ರಶಸ್ತಿ ವಿಜೇತೆ

0

ಜಿ.ಎನ್.ಮೋಹನ್


…ಹಾಗಂತ ತನ್ನನ್ನು ತಾನೇ ಕೇಳಿಕೊಂಡಿದ್ದು ಈಗ ಜಗತ್ತಿನ ಎಲ್ಲರ ಗಮನ ಸೆಳೆದಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ.

750 ಪುಟಗಳ Tomb of Sand ಬಹುರೂಪಿ ಬುಕ್ ಹಬ್ ಗೆ ಬಂದಿಳಿದಾಗ ಅದು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಯಾವಾಗ ಬೂಕರ್ ಘೋಷಣೆಯಾಯಿತೋ ಕಪಾಟಿನ ಮಧ್ಯದಿಂದ ಅದನ್ನು ಹೊರಕ್ಕೆಳೆದುಕೊಂಡೆ.



ಅದೇ ಸಮಯದಲ್ಲಿ ಜಗತ್ತಿನ ನಾನಾ ಮಾಧ್ಯಮಗಳಲ್ಲಿ ಸಂದರ್ಶನಗಳು ಪ್ರಕಟವಾಗತೊಡಗಿತ್ತು. ಓದುತ್ತಾ ಇದ್ದವನಿಗೆ ಥಟ್ಟನೆ ಗಮನ ಸೆಳೆದದ್ದು ಈ ಸಾಲು.

ಅರೆ! ಎಂದುಕೊಂಡು ಓದುತ್ತಾ ಹೋದೆ.

ನಾನು ಕಾಲೇಜು ಮೆಟ್ಟಲು ಹತ್ತುವಾಗ ನನ್ನದೇ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡಬೇಕಿತ್ತು. ನನಗೆ ಬ್ಯಾಂಕ್ ನಲ್ಲಿ ನನ್ನದೂ ಒಂದು ಅಕೌಂಟ್ ಆರಂಭವಾಗುತ್ತಿದೆ ಎನ್ನುವುದೇ ಒಂದು ದೊಡ್ಡ ಸಂತಸವಾಗಿತ್ತು. ಅದಕ್ಕೆ ಸಹಿ ಹಾಕಲು ಗೀತಾಂಜಲಿ ಪಾಂಡೆ ಎನ್ನುವ ನನ್ನ ಹೆಸರನ್ನು ಬರೆದೆ.

ತಕ್ಷಣ ಅಲ್ಲಿಯೇ ಇದ್ದ ನನ್ನ ಅಪ್ಪ. ಪೂರ್ಣ ಹೆಸರು ಬರೆಯಬೇಡ ಗೀತಾಂಜಲಿ ಅಂತ ಹಾಕು ಸಾಕು. ಗಂಡನ ಮನೆಗೆ ಹೋದರೆ ನಿನ್ನ ಸರ್ ನೇಮ್ ಬದಲಾಗುತ್ತಲ್ಲ. ಮತ್ತೆ ಪಾಂಡೆ ಯಾಕೆ? ಎಂದರು.

ಆ ಸಂಭ್ರಮದ ಮಧ್ಯೆಯೂ ನಾನು ಒಂದು ಕ್ಷಣ ಯೋಚನೆಯಲ್ಲಿ ಕಳೆದುಹೋದೆ. ಒಂದು ನನ್ನ ಹೆಸರಿನಲ್ಲಿ ಅಪ್ಪನ ಸರ್ ನೇಮ್ ಇದೆ ಎನ್ನುವುದು, ಇನ್ನೊಂದು ನಾನು ನಂತರದಲ್ಲಿ ಗಂಡನ ಹೆಸರು ತಗುಲಿಸಿಕೊಳ್ಳಬೇಕಾಗುತ್ತದೆ ಎನ್ನುವುದು ನನ್ನನ್ನು ಯೋಚಿಸಲು ಹಚ್ಚಿತ್ತು.

ಆಗ ನನ್ನನ್ನು ಕಾಡಿದ್ದು ನನ್ನ ಅಮ್ಮ. ನನ್ನ ಬದುಕಿನಲ್ಲಿ ಆಕೆಯ ಪಾತ್ರ ಎಷ್ಟು ದೊಡ್ಡದಿದೆ. ಆಕೆ ನನನ್ನು ರೂಪಿಸಲು ತನ್ನನ್ನೇ ತೆತ್ತುಕೊಂಡಿದ್ದಾಳೆ ಆದರೆ ಆಕೆಯ ಹೆಸರೇ ಇಲ್ಲವಲ್ಲ ಅನಿಸಿತು. ತಕ್ಷಣ ನಾನು ನಿರ್ಧರಿಸಿದೆ. ಅಪ್ಪನ ಹೆಸರಾಗಲಿ ಗಂಡನ ಹೆಸರಾಗಲಿ ನನ್ನ ಹೆಸರಿನ ಜೊತೆ ಜೋಡಣೆಯಾಗುವುದಿಲ್ಲ ಎಂದು. ನನ್ನ ಹೆಸರಿನ ಜೊತೆಗೆ ನನ್ನ ಅಮ್ಮನ ಹೆಸರೇ ಸರ್ ನೇಮ್ ಆಗುತ್ತದೆ ಎಂದು ನಿರ್ಧರಿಸಿದೆ.

ನನ್ನ ಅಮ್ಮನ ಹೆಸರು ಶ್ರೀ ಕುಮಾರಿ. ಆ ಹೆಸರಿನ ಆರಂಭದ ‘ಶ್ರೀ’ ತೆಗೆದುಕೊಂಡು ಆಗಿಂದಾಗಲೇ ನನ್ನ ಹೆಸರಿಗೆ ಜೋಡಿಸಿಕೊಂಡೆ. ಹಾಗಾಗಿ ನನ್ನ ಕಣ್ಣೆದುರಿಗೇ ನನ್ನ ಹೆಸರಿನ ಜೊತೆ ಇದ್ದ ಪಾಂಡೆ ಕಳಚಿಕೊಂಡು ಬಿದ್ದಿತು. ನಾನು ಗೀತಾಂಜಲಿ ಪಾಂಡೆ ಬದಲು ‘ಗೀತಾಂಜಲಿ ಶ್ರೀ’ ಆದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಹೊಸ ಪಠ್ಯ: ಪಿಎಚ್.ಡಿ ವಿದ್ಯಾರ್ಥಿಗಳಿಂದಲೂ ವಿರೋಧ

0

Publicstory


ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಷ್ಟೇ ತರಾತುರಿಯಲ್ಲಿ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನೂ ಮಾಡಿದೆ. ಅದರಲ್ಲೂ ಸಮಾಜ ವಿಜ್ಞಾನ ಮತ್ತು ಭಾಷಾ ಪಠ್ಯಪುಸ್ತಕಗಳು ಈಗ ವಿವಾದದ ಕೇಂದ್ರ ಬಿಂದುವಾಗಿವೆ.

ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯು ಹತ್ತನೆಯ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದ ತಮ್ಮ ದಿಕ್ಸೂಚಿ ಬರೆಹದಲ್ಲಿ “ಭಾಷಾಪಠ್ಯವಿರುವುದು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ” ಎಂದು ಹೇಳಿದೆ.

ಯಾವುದೇ ಪಠ್ಯಪುಸ್ತಕದಲ್ಲಿ ಅಥವಾ ಯಾವುದೇ ಭಾರತೀಯನಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಆಶಯಗಳು ಒಂದು ಮೌಲ್ಯವಾಗಿ ಹುದುಗಿರಲೇಬೇಕು. ಅದು ಇದ್ದಲ್ಲಿ ಮಾತ್ರ ಆತ/ಆಕೆ ನಿಜವಾದ ಅರ್ಥದಲ್ಲಿ ಮನುಷ್ಯರಾಗುವುದಕ್ಕೆ ಸಾಧ್ಯ. ಭಾರತೀಯ ಸಂವಿಧಾನವೇ ಪ್ರತಿಪಾದಿಸಿರುವ ಈ ಪ್ರಧಾನ ಮೌಲ್ಯಗಳನ್ನು ಸದರಿ ಸಮಿತಿಯು ‘ತುರುಕುವುದು’ ಎಂದು ಹೇಳುತ್ತಿದೆ.

ಈ ಪದಪ್ರಯೋಗವೇ ಸದರಿ ಸಮಿತಿಯ ಎಲ್ಲ ಸದಸ್ಯರು ಸಂವಿಧಾನದ ಮೂಲಭೂತ ಆಶಯಗಳನ್ನೇ ವ್ಯಂಗ್ಯವಾಡಿದ್ದಾರೆ ಎಂಬುದನ್ನು ಹೇಳುವಂತಿದೆ. ಈ ಮಾತು ಭಾರತೀಯ ಸಂವಿಧಾನವನ್ನು ಖುಲ್ಲಂಖುಲ್ಲಾ ಅಪಮಾನ ಮಾಡಿದಂತಿದೆ.

ಸಂವಿಧಾನದ ಆಶಯಗಳ ಅನುಷ್ಠಾನದಿಂದಾಗಿಯೇ ಈ ದೇಶದ ಜನರ ಬದುಕಿಗೆ ಅರ್ಥಪೂರ್ಣತೆ ಪ್ರಾಪ್ತವಾಗಿದೆ ಎಂಬುದನ್ನು ಸಮಿತಿಯಲ್ಲಿನ ತಜ್ಞರು ಮರೆತಂತಿದೆ. ಮರುಪರಿಷ್ಕರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವ ರಾಜ್ಯ ಸರ್ಕಾರವೂ ಸಂವಿಧಾನದ ಮೂಲಭೂತ ಆಶಯಗಳನ್ನು ನಿರ್ಲಕ್ಷಿಸಿದೆಯೇ ಎಂಬ ಪ್ರಶ್ನೆಯನ್ನು ನಾವು ಈಗ ಕೇಳಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಿಎಚ್.ಡಿ ಸಂಶೋಧನಾರ್ಥಿಗಳ ಬಳಗವು ಸರ್ಕಾರದ ಮುಂದೆ ಈ ಕೆಳಗಿನಂತೆ ಹಕ್ಕೊತ್ತಾಯ ಮಾಡುತ್ತಿದೆ.

ಪಠ್ಯಪುಸ್ತಕ ಪ್ರಕರಣದಿಂದ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಸರ್ಕಾರವು ಪಠ್ಯ ಪುನರ್ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆಗಳನ್ನು ನಿಯಮಿತವಾಗಿ ನೋಡಿಕೊಳ್ಳುವ ಒಂದು ಸ್ವಾಯತ್ತ ಪ್ರಾಧಿಕಾರವನ್ನು ಸ್ಥಾಪಿಸಬೇಕು, ಈ ಪ್ರಾಧಿಕಾರದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾಗುವವರು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಆಗಿರಬೇಕು. ಈ ಸಮಿತಿಯನ್ನು ಆಯ್ಕೆ ಮಾಡುವಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆಯೂ ಪ್ರಧಾನ ಪಾತ್ರ ವಹಿಸಬೇಕು. ಕೊನೆಗೆ ಈ ಸ್ವಾಯತ್ತ ಪ್ರಾಧಿಕಾರದ ಸದಸ್ಯರು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮನಗಂಡು ಅದಕ್ಕನುಗುಣವಾಗಿ ಸಾಹಿತ್ಯ-ಭಾಷೆ-ಗಣಿತ-ವಿಜ್ಞಾನ-ಸಮಾಜವಿಜ್ಞಾನದ ಕ್ಷೇತ್ರಗಳಲ್ಲಿ ಕರ್ನಾಟಕದ ಶಾಲಾ ಪಠ್ಯಕ್ರಮವನ್ನು ಸಮಗ್ರವಾಗಿ ಪುನರ್ ನವೀಕರಿಸುವಂತಾಗಬೇಕು. ಹಾಗೆಯೇ ಇಂತಹ ಪಠ್ಯಕ್ರಮವನ್ನು ಮಕ್ಕಳಿಗೆ ದಾಟಿಸುವ ಶಾಲಾ ಶಿಕ್ಷಕರೂ ಸತತ ತರಬೇತಿಯನ್ನು ಪಡೆಯುವಂತೆ ಆಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೀತಿ-ನಿಯಮಗಳನ್ನು ರಚಿಸಬೇಕು ಎಂದು ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ.

ಈ ಪ್ರಕ್ರಿಯೆ ನಡೆದು ಪೂರ್ಣವಾಗುವವರೆಗೆ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯಕ್ರಮವನ್ನೇ ಊರ್ಜಿತದಲ್ಲಿರಿಸಿಕೊಳ್ಳಬೇಕು ಎಂದೂ ಒತ್ತಾಯಿಸುತ್ತಿದ್ದೇವೆ.


ರಂಗಸ್ವಾಮಿ ಹೆಚ್, ದೊಡ್ಡ ಹೊಸೂರು
ಪ್ರಭುಕುಮಾರ್ ಪಿ, ಮಂಡ್ಯ
ಗೋವಿಂದರಾಜು ಎಂ ಕಲ್ಲೂರು
ಶ್ರೀಧರ ಆರ್ ವಿ, ಪಾವಗಡ
ಅಮರ್ ಬಿ, ಕುಮಟಾ,
ಅರವಿಂದ ಇ, ಹರಿಯಬ್ಬೆ
ವರುಣ್ ರಾಜ್, ಕೋಲಾರ
ಖಲಿದಾ ಖಾನಂ, ತುಮಕೂರು
ಶಭಾನ, ಮೈಸೂರು
ಸುಶ್ಮಿತಾ ಎನ್, ಮೈಸೂರು
ಮಂಜುಳಾ ಜಿ ಎಚ್, ಹಂಪಿ
ಮುಸ್ತಾಫ ಕೆ ಹೆಚ್, ಮಂಗಳೂರು
ಶಶಾಂಕ್ ಎಸ್ ಆರ್, ಬೆಂಗಳೂರು
ಗಾದಿಲಿಂಗಪ್ಪ, ಬಳ್ಳಾರಿ
ವೈಶಾಖ್ ಸಿ, ಕೇರಳ
ಅಶೋಕ್ ಡೆಂಜ಼ಿಲ್ ಡಿಸೋಜ಼, ಮಂಗಳೂರು
ಧನುಷ್ ಹೆಚ್, ಬೆಂಗಳೂರು
ಬೀಬೀ ಆಯಿಶಾ, ಧಾರವಾಡ
ಸೀಮಾ ಕೆ, ಕನಕಪುರ
ಗಂಗಾಧರ ಬಾಣಸಂದ್ರ
ಮಲ್ಲಿಕಾರ್ಜುನ್, ಪಾವಗಡ
ಕೃಷ್ಣಮೂರ್ತಿ ಇ, ಶಿರಾ
ಮಮತಾ, ಮಾಕೇನಹಳ್ಳಿ
ಲಕ್ಷ್ಮೀ ಕೆ. ಎಸ್, ಮೈಸೂರು
ಕೃಷ್ಣ ತಳವಾರ, ಬೆಳಗಾವಿ
ಹಜ಼ರತ್ ಸಾಹೇಬ್ ನದಾಫ್, ರಾಮದುರ್ಗ,
ಮೋಹನ್ ಕುಮಾರ್ ಬಿ ಎಸ್, ಚಿತ್ರದುರ್ಗ
ಮೇಘರಾಜ್ ಒಡೆಯರ್ ಸಿ, ಗುಂಡ್ಲುಪೇಟೆ
ಶಿವಕುಮಾರ್, ಮೈಸೂರು
ಸತೀಶ್ ಬಿ ಎಂ, ಕುಣಿಗಲ್
ರಂಗಸ್ವಾಮಿ, ರಾಯಚೂರು
ಗುರು ಸಿದ್ದೇಶ ಮಾಗಣ್ಣವರ,
ನಂದೀಶ ಎಲ್, ಪಾವಗಡ
ಸುನಿಲ್ ಹೊಸಳ್ಳಿ, ಧಾರವಾಡ
ವಿಜಯಶ್ರೀ ಸಿ ಎಸ್, ಬೆಂಗಳೂರು

ಕವನ ಓದಿ: ಪುಗ್ಗೆ

0

ಪುಗ್ಗಿಯೋ, ಬಲೂನೋ
ಯಾವುದೋ ಒಂದು.

ಊದಿದರೆ
ಉಬ್ಬುವುದು
ಬಿಟ್ಟರೆ ಗಾಳಿಗೆ
ಹಾರಿ ಹೋಗುವುದು.

ಎರಡೂ ಕೈಗಳಿಗೆ
ನೇತಾಕಿಕೊಂಡ ಚೀಲ
ಬಲು ತೂಕ ..

ಹಾರಲಿ ಹೇಗೆ ನಾನು ?

ಉಸಿರ ಮಾರುವ ನನಗೆ
ಉಸಿರು ನಿಲಬಾರದೆ
ಸರಾಗ ?
ಹೆಸರಿಲ್ಲದವಳ ಉಸಿರು…

ಪುಟ್ಟ ಪೋರಿಗೆ
ಪುಗ್ಗೆ ಕೊಡಿಸಿ
ಅಳು ನಿಲ್ಲಿಸಿದ
ತಾಯಿ.

ಪುಗ್ಗೆಯ
ಗಾಳಿಯಲ್ಲಿದೆ
ನೂರಾರು
ಗುಟ್ಟುಗಳು, ನೋವುಗಳು

ಪುಗ್ಗೆಗೆ ಚುಚ್ಚಿದರೆ
ಪಿನ್ನು …
ಪುಗ್ಗೆ ಡಮಾರ್.

ಉಸಿರು
ನಿಲ್ಲುವವರೆಗೂ
ಪುಗ್ಗೆಗೆ ಗಾಳಿ

ಚರ್ಮ ಸುಕ್ಕು
ಕಣ್ಣು ಹೂವು

ಹಣ್ಣಾದ
ಶರೀರಕ್ಕೆ
ನಿಲಿಸ ಬಾರದೆ
ಹಸಿವು….

ಚುಚ್ಚ ಬಾರದೆ
ಪಿನ್ನು …
ಆ ಪೀಪಿ
ಊದುವವನು..

ಪೀಪಿ ನೀಡಿ ಅಳು ನಿಲ್ಲಿಸಿ
ಪೀಪಿ ಮಾರಿಸಿದವನು


ಡಾII ರಜನಿ

C.S.Pura: ವಿಶ್ವ ತಂಬಾಕು ದಿನಾಚರಣೆ

Publicstory


ಗುಬ್ಬಿ: ತಂಬಾಕು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಿಎಸ್ ಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಸರ್ಕಲ್, ಕಲ್ಲೂರು ಕ್ರಾಸ್, ಕೆಜಿ ಟೆಂಪಲ್ನಲ್ಲಿ ಸಿಎಸ್ ಪುರ ಪೊಲೀಸ್ ಠಾಣೆಯಿಂದ ವಿಶ್ವ ತಂಬಾಕು ದಿನಾಚರಣೆ ಪ್ರಯುಕ್ತ ಅರಿವು ಮೂಡಿಸು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಯುವಕರು ದಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಸ್ವಯಂ ಪ್ರೇರಿತರಾಗಿ ತಂಬಾಕು ತ್ಯಜಿಸುವ ಪ್ರಯತ್ನ ಮಾಡಿದರೆ ತಮ್ಮ ಆರೋಗ್ಯ ತಾವೇ ರಕ್ಷಣೆ ಮಾಡಿಕೊಳ್ಳಬಹುದು. ತಂಬಾಕು ಬಳಕೆಯಿಂದ ಹೃದಯದ ಸಮಸ್ಯೆಯ ಜೊತೆಗೆ ಕ್ಯಾನ್ಸರ್ ಬಂದು ವಿವಿಧ ಅಂಗಗಳ ಶಕ್ತಿಯು ಕ್ಷೀಣಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಪಾಪು, ಕೃಷ್ಣಮೂರ್ತಿ, ಎಎಸ್ಐ ಕುಮಾರಸ್ವಾಮಿ, ರಾಜು, ಭೀಮೇಶ್, ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಇದ್ದರು.

ಜುಂಜಪ್ಪನ ಗುಡ್ಡೆ ಬಳಿ ನಾಟಿ ದನಗಳ ಸಂವರ್ಧನಾ ಕೇಂದ್ರಕ್ಕೆಎಎಪಿ ಒತ್ತಾಯ

Publicstory


ಶಿರಾ:ತಾಲೂಕಿನ ಕಳುವರಹಳ್ಳಿ ಜುಂಜಪ್ಪನ ಗುಡ್ಡೆ ಬಳಿ ನಾಟಿ ದನಗಳ ಸಂರಕ್ಷಣೆ ಮತ್ತು ಸಂವರ್ಧನ ಕೇಂದ್ರ ಸ್ಥಾಪಿಸುವಂತೆ ಶಿರಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಂಭವನೀಯ ಅಭ್ಯರ್ಥಿ ಅಂಕಸಂದ್ರ ಪ್ರೇಮಕುಮಾರ್ ಒತ್ತಾಯಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ಸಭೆಯಲ್ಲಿ ಶಿರಾ ಸಂಭವನೀಯ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಅವರು ಸೋಮವಾರ ಜುಂಜಪ್ಪನ ಗುಡ್ಡೆಯಲ್ಲಿ ಪೂಜೆ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಜುಂಜಪ್ಪನ ಗುಡ್ಡೆಯಲ್ಲಿ ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಜೊತೆಗೂಡಿ ಪ್ರತಿವರ್ಷ ಶಿವೋತ್ಸವ ಅಯೋಜಿಸುತಿದ್ದನ್ನು ಸ್ಮರಿಸಿರುವ ಅವರು, ಜುಂಜಪ್ಪ ಪಶುಪಾಲನೆ ಮಾತ್ರವಲ್ಲದೆ ಜನಪದ, ಸಂಗೀತ, ಜೀವಸಂಕುಲದ ಪರ ಹೋರಾಟಗಾರರಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಸಾಂಸ್ಕೃತಿಕ ನಾಯಕ. ಆದರೆ ಈವರೆಗೆ ಬಂದು ಹೋದ ಸರ್ಕಾರಗಳು ಜುಂಜಪ್ಪನ ಬಗ್ಗೆ ಯಾವುದೇ ಗಮನಹರಿಸಲು ನಿರ್ಲಕ್ಷ್ಯ ತೋರಿವೆ ಎಂದು ದೂರಿದ್ದಾರೆ.

ಈಗ ಬಿಜೆಪಿ ಸರ್ಕಾರ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಒಂದು ಕೋಟಿ ರೂಪಾಯಿ ಹಣ ಏನೇನು ಸಾಲದು. ಆದರೂ ಈಗಾಗಲೇ ಸ್ಥಳೀಯರು ತಿಳಿಸಿರುವಂತೆ ಜುಂಜಪ್ಪನ ಗುಡ್ಡೆ ಮತ್ತು ಸುತ್ತಲಿನ ಪೌಳಿಗೆ ಯಾವುದೇ ಧಕ್ಕೆ ತರದಂತೆ ಅಭಿವೃದ್ಧಿ ಕಾರ್ಯ ನಡೆಸುವ ನೀಲನಕ್ಷೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.