Tuesday, May 5, 2026
Google search engine
Home Blog Page 105

ಯುಪಿಎಸ್ಸಿ ಪರೀಕ್ಷೆ: ತುಮಕೂರಿನ ಮೂವರು ಟಾಪರ್ಸ್

0

Publicstory


ಈ ಬಾರಿಯು ಯುಪಿ ಎಸ್ ಸಿ ( ಕೇಂದ್ರ ಲೋಕ ಸೇವಾ ಆಯೋಗದ) ಪರೀಕ್ಷೆಯಲ್ಲಿ ತುಮಕೂರು ಜಿಲ್ಲೆಯ ಮೂವರು ತೇರ್ಗಡೆಯಾಗಿದ್ದು, ಕೀರ್ತಿ ತಂದಿದ್ದಾರೆ.

ಈ ಮೂವರು ಶಿರಾ ತಾಲ್ಲೂಕಿನವರಾಗಿರುವುದು ವಿಶೇಷ.

ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿ ತಡಕಲ್ಲೂರು ಗ್ರಾಮದ ಮಹಾಲಿಂಗಪ್ಪ ವಿಶಾಲಾಕ್ಷ್ಮ್ಮ ದಂಪತಿ ಮಗಳಾದ ಅರಣ್ ಅವರು 308ನೇ ರ್ಯಾಂಕ್ ಪಡೆದಿದ್ದಾರೆ.


ಅಭಿನಂದನೆ

ಶಿರಾದ ಮೂವರು ವಿದ್ಯಾರ್ಥಿಗಳ ಈ ಸಾಧನೆ ಜಿಲ್ಲೆಗೆ ಮಾದರಿಯಾಗಿದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ಪ್ರೇರಣೆ ಸಿಗಲಿದೆ. ಜಿಲ್ಲೆಯ ಜನರ ಪರವಾಗಿ ಮೂವರನ್ನು ಅಭಿನಂದಿಸುವೆ ಎಂದು ಅಮ್ ಆದ್ಮಿ ಪಕ್ಷದ ಮುಖಂಡ, ವಕೀಲರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬೆಳಗುಳಿ ಬಿ.ಜೆ.ಮಹಾವೀರ್ ತಿಳಿಸಿದ್ದಾರೆ


ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿ ಈ ಸಾಧನೆ ಮಾಡಿದ್ದಾರೆ.

ಕಲ್ಪಶ್ರೀ ಅವರು 291 ನೇ ರಾಂಕ್ ಪಡೆದಿದ್ದಾರೆ.

ಕಲ್ಪಶ್ರೀ ತಮ್ಮ ಐದನೇ ಯತ್ನದಲ್ಲಿ ಈ ಸಾಧನೆ ಮರೆದಿದ್ದಾರೆ. ಇವರು ಗೌಡಗೆರೆ ಹೋಬಳಿಯಲ್ಲಿ ಕಂದಾಯ ನಿರೀಕ್ಷರಾಗಿದ್ದ ಕಾಂತಪ್ಪ ಅವರು ಮಗಳು. ಯರಗುಂಟೆ ಇವರು ಊರು.

ಯಂಜಲಗೆರೆ ಗ್ರಾಮದ ದಿವಂಗತ ಧರ್ಮೇಶ್ ಅವರ ಪುತ್ರ ಸಹ ಶ್ರೀಕಾಂತ್ ಸಹ ತೇರ್ಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಐಎಎಸ್, ಐಪಿಎಸ್ ಆಕಾಂಕ್ಷಿಗಳಿಗೆ ಇವರ ಸಾಧನೆ ಪ್ರೇರಣೆಯಾಗಿದೆ.

ಈ ಸಾಲಿನ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಅಂಗನವಾಡಿ ಕಾರ್ಯಕರ್ತೆಯೊಬ್ಬರ ಮಗ ದೀಪಕ್ ರಾಮಚಂದ್ರ ಶೇಟ್ ಉತ್ತೀರ್ಣರಾಗಿರುವುದು‌ ಬಡವರ ಮಕ್ಕಳ ಸಾಧನೆಗೆ ಇಂಬು ನೀಡಿದಂತಿದೆ.

ಕವನ :ರಿಮೋಟ್

0

ಟಿ. ವಿ ರಿಮೋಟ್ ಗಾಗಿ
ಎ.ಸಿ ರಿಮೋಟ್ ಗಾಗಿ
ಕಿತ್ತಾಡುವಾಗ

ಗೊತ್ತಾಗುತ್ತದೆ
ನಮ್ಮ ಬದುಕನ್ನು
ಯಾರು ಯಾರು
ಹೇಗೆ ನಿಯಂತ್ರಿಸುತ್ತಿದ್ದಾರೆ….

ಮತ್ತು ಹಾಗೇ ತಣ್ಣಗೆ
ತಾವು ಕುಳಿತಿದ್ದಾರೆ
ಎಂದು…

ಹಾಗೂ ರಿಮೋಟ್ ಗೆ
ಬ್ಯಾಟರಿ ಸೆಲ್
ಹಾಕುವವರು
ನಾವೇ
ಆಗಬೇಕೆಂದು…

ರಜನಿ

ಹೊಸ ಪಠ್ಯ ವಾಪಸ್ ಪಡೆಯಿರಿ: ದೊರೈರಾಜ್

ಪಬ್ಲಿಕ್ ಸ್ಟೋರಿ


ತುಮಕೂರು: ಸಿಬಿ ಎಸ್ ಸಿ ಮಂಡಳಿ ಅನುಮೋದನೆ ಮಾಡಿರುವ ಪಠ್ಯ ಕ್ರಮವನ್ನು ರಾಜ್ಯ ಸರ್ಕಾರ ಮುಂದುವರೆಸಲು ಏನು ಸಮಸ್ಯೆ ಎಂದು ಹಿರಿಯ ಶಿಕ್ಷಣ ತಜ್ಜ, ನಿವೃತ್ತ ಡಿಡಿಪಿ ಐ, ಕೆ. ದೊರೈರಾಜ್ ಕೇಳಿದರು.

ತುಮಕೂರಿನಲ್ಲಿ ಭಾನುವಾರ ಹೊಸ ಪಠ್ಯ ಪುಸ್ತಕ ವಿರೋಧಿಸಿ ನಡೆದ ಪೋಷಕರು, ಚಿಂತಕರ ಸಭೆಯಲ್ಲಿ ಮಾತನಾಡಿದರು.

ಹೊಸ ಪಠ್ಯ ಸಮಿತಿಯನ್ನು ಸರ್ಕಾರ ರದ್ದುಪಡಿಸಬೇಕು. ಹಳೆ ಪಠ್ಯವನ್ನು ಮುಂದುವರಿಸಬೇಕು. ಈ ಸಂಬಂಧ ಜನ ಸಮುದಾಯ ಹೋರಾಟಕ್ಕೆ ದುಮುಕಬೇಕು ಎಂದರು.

ಬರಗೂರು ರಾಮಚಂದ್ರಪ್ಪನವರು ನಮ್ಮ ಜಿಲ್ಲೆಯವರು. ಅವರು ಅಪರೂಪದ ಚಿಂತಕರು. ಅವರ ಚಿಂತನೆಗಳನ್ನು ಮುಲೆಗುಂಪು ಮಾಡಬೇಕು ಎಂಬುದೇ ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಇಡೀ ನಾಡಿಗೆ, ವಿಶ್ವಕ್ಕೆ ಸಂದೇಶ ಸಾರಿದ ಕುವೆಂಪು ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಅವರ ಪ್ರತಿಪಾದನೆ ಕರ್ನಾಕಟದ ಪರಂಪರೆಯಾಗಿದೆ. ಇದು ಜಗತ್ತಿಗೆ ಹೇಳಬಹುದಾದ ಪ್ರತಿಪಾದನೆಯಾಗಿದೆ. ಕುವೆಂಪು ಅವರನ್ನು ಟಾರ್ಗೆಟ್ ಮಾಡಲಾಗಯತ್ತಿದೆ. ಒಕ್ಕಲಿಗರು ಈಗ ಸ್ವಲ್ಪ ಎಚ್ಚೆತ್ತಿದ್ದಾರೆ. ಒಕ್ಕಲಿಗರ ಸ್ವಾಮೀಜಿವರಾದ ನಿರ್ಮಲಾನಂದ ನಾಥ ಸ್ಚಾಮೀಜಿ ದನಿ ತೆಗೆದಿದ್ದಾರೆ ಎಂದರು.

ಅದೆಂಥ ಸಾಹಿತ್ಯ ಪರಿಷತ್. ಕುವೆಂಪು ಅವರನ್ನು ಅನುಮಾನಿಸಿದರು ಉಸಿರೆತ್ತದ ಸಾಹಿತ್ಯ ಪರಿಷತ್ ಬಾಗಿಲು ಮುಚ್ಚಿಕೊಂಡು ಹೋಗಲಿ. ಕುವೆಂಪು ಸಾಹಿತ್ಯದ ವಿಮರ್ಶೆಗೆ ಸ್ವತಃ ಕುವೆಂಪು ಸ್ವಾಗತಿಸುತ್ತಿದ್ದರು. ನಾಡು ನುಡಿಯ ಅವಮಾ‌ನಿಸುವ ವ್ಯಕ್ತಿಗೆ ಸರ್ಕಾರ ಪಟ್ಟಕಟ್ಟಿದೆ. ಇಂತ ಸರ್ಕಾರವನ್ನು ನಾವು ಒಪ್ಪಿಕೊಳ್ಳಬೇಕೆ ಎಂದು ಪ್ರಸ್ನಿಸಿದರು.

ಮುಗ್ದ ಮಕ್ಕಳ ಜೊತೆ ಚೆಲ್ಲಾಟ ಬೇಡ. ಇಂಥ ಸರ್ಕಾರವನ್ನು ಬುದ್ದಿ ಕಲಿಸುವ ಶಕ್ತಿ ಜನರಿಗಿದೆ ಎಂದರು.

ವ್ಯಾಪಕವಾಗಿ ಜನರು ಚರ್ಚೆ ಮಾಡಬೇಕು. ತಾಯಿ ಅನ್ನುವುದು ಎಡ ನಾ ಬಲ ನಾ. ಭಾಷೆ ಅನ್ನೋದು ಎಡ ನಾ, ಬಲ ನಾ ಎಂದು ಕೇಳಬೇಕಾಗಿದೆ ಎಂದರು.

ವೈದಿಕಶಾಹಿಯನ್ನು ನಾವು ವಿರೋಧಿಸಲೇಬೇಕಾಗಿದೆ ಎಂದರು.

ಮೇ 31ರಂದು ನಡೆಯುವ ಪಠ್ಯ ಸಮಿತಿ ವಿರೋಧಿಸಿ ನಡೆಯುವ ಹೋರಾಟಕ್ಕೆ ಜಿಲ್ಲೆಯ ಜನರು ಹೆಚ್ಚಾಗಿ ಬೆಂಬಲಿಸಬೇಕು. ಜನ ಸಾಮಾನ್ಯರಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಕೆಲಸವನ್ನು ಸಂಘಟನೆಗಳು ಮಾಡಬೇಕು ಎಂದರು.

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ ಹೊಸ ಪಠ್ಯಕ್ಕೆ ಭಾರೀ ವಿರೋಧ

  • ಮುಖ್ಯಮಂತ್ರಿ ಮಧ್ಯ ಪ್ರವೇಶಕ್ಕೆ ಅಗ್ರಹ
  • ಹೊಸ ಸಮಿತಿ ಬರ್ಖಾಸ್ತುಗೊಳಿಸಿ
  • ಹಳೆ ಪಠ್ಯವನ್ನೇ ಮುಂದುವರಿಸಿ
  • ಶಿಕ್ಷಣ ಸಚಿವರ ರಾಜೀನಾಮೆಗೆ ಅಗ್ರಹ

ublicstory


Tumakuru: ಹೊಸ ಪಠ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗಿದ್ದು, ಭಾನುವಾರ ನಗರದಲ್ಲಿ ನಡೆದ ಪೋಷಕರು, ಚಿಂತಕರ ಸಭೆಯಲ್ಲಿ ಹೊಸ ಪಠ್ಯ ಪುಸ್ತಕ ವಾಪಸ್ ಪಡೆಯುವಂತೆ, ಹಳೆಯ ಪಠ್ಯ ಪುಸ್ತಕ ಮುಂದುವರಿಸುವಂತೆ ಒತ್ತಾಯಿಸಿದರು.

ಶಿಕ್ಷಣ ಸಚಿವರ ನಡೆ, ನುಡಿ ಬಗ್ಗೆ ಆಕ್ರೋಶ, ಸಿಟ್ಟು ವ್ಯಕ್ತಪಡಿಸಿದ ಅನೇಕರು ಮಕ್ಕಳ ಮುಗ್ದ ಮನಸ್ಸಿನ ಮೇಲೆ ಅಟ ಆಡುವ ಕೆಲಸವನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲ ಎಂ.ಎಚ್.ನಾಗರಾಜ್ ಮಾತನಾಡಿ, ಯಾವುದೇ ಕಾರಣಕ್ಕೂ ಹೊಸ ಪಠ್ಯ ಒಪ್ಪಲು ಸಾಧ್ಯವಿಲ್ಲ. ಕೂಡಲೇ ಹೊಸ ಪಠ್ಯ ಪುಸ್ತಕ ವಾಪಸ್ ಪಡೆಯಬೇಕು. ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಎಂದರು.

ಹಿರಿಯ ವಕೀಲ, ಚಿಂತಕ ಎಸ್. ರಮೇಶ್ ಮಾತನಾಡಿ, ಮುಖ್ಯಮಂತ್ರಿ ಮೌನವನ್ನು ಖಂಡಿಸಿದರು. ಸಿಬಿ ಎಸ್ ಸಿ ಮಂಡಳಿಯು ಅನುಮೋದಿಸಿದರುವ ಪಠ್ಯವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಹೊಸ ಪಠ್ಯ ಮಕ್ಕಳ ಮನಸ್ಸಿನ ಮೇಲೆ ಚೆಲ್ಲಾಟವಾಡುತ್ತಿದೆ. ಹೊಸ ಪಠ್ಯ ಸಂವಿಧಾನ ನಿಯಮಗಳನ್ನು ಗಾಳಿಗೆ ತೂರಿದೆ. ಸರ್ಕಾರ ತನ್ನ ಕಾರ್ಯಸೂಚಿಯನ್ನು ಜಾರಿ ಮಾಡಲು ಹೊರಟಿದೆ. ಇದನ್ನು ವಿರೋಧಿಸಬೇಕಾಗಿದೆ ಎಂದರು.

ಸರ್ಕಾರದ ನಡೆಯನ್ನು ಖಂಡಿಸಿ ಜನರು ಪತ್ರಚಳವಳಿ ನಡೆಸಬೇಕು ಎಂದರು.

ಸಮಿತಿ ರದ್ದು ಮಾಡಬೇಕು. ಹೊಸ ಪಠ್ಯ ಪುಸ್ತಕಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಕೋವಿಡ್ ನಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಪಠ್ಯ ಪುಸ್ತಕ ವಿವಾದ ಮಕ್ಕಳನ್ನು ಮತ್ತಷ್ಟು ಘಾಸಿಗೊಳಿಸುತ್ತಿದೆ ಎಂದರು.

ವಿದ್ಯಾರ್ಥಿ ಸಮೂಹ, ಹಿಂದುಳಿದ ವರ್ಗಗಳು ಬೀದಿಗೆ ಇಳಿದು ಹೋರಾಟ ಮಾಡಬೇಕು ಎಂದು ಕುಣಿಹಳ್ಳಿ ಮಂಜುನಾಥ್ ಹೇಳಿದರು.

ತುಮಕೂರಿನಲ್ಲಿ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಪೋಷಕರ ಸಭೆಯಲ್ಲಿ ಹೇಳಿದರು.

AAP ಪಕ್ಷದ ಮುಖಂಡ, ವಕೀಲರಾದ ಬಿ.ಜೆ.ಮಹಾವೀರ ಜೈನ್ ಮಾತನಾಡಿ, ಪಠ್ಯ ಸಮಿತಿ ಅಧ್ಯಕ್ಷನ ಶಿಕ್ಷಣದ ಬಗ್ಗೆಯೇ ಸರಿಯಾದ ಮಾಹಿತಿ ಶಿಕ್ಷಣ ಸಚಿವರಿಗಿಲ್ಲ. ಅವರೇ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಅರ್ ಎಸ್ ಎಸ್ ಎಸ್, ಬಜರಂಗದ ಕಾರ್ಯಸೂಚಿಯನ್ನು ಶಿಕ್ಷಣ ಪಠ್ಯದ ಮೂಲಕ ಜಾರಿ ಮಾಡಲು ಯತ್ನಿಸುತ್ತಿರುವ ಈ ಸರ್ಕಾರದ ಪ್ರಯತ್ನವನ್ನು ಎಲ್ಲರೂ ತಡೆಯಬೇಕು ಎಂದರು.

ಪೋಷಕರಾದ ಟಿ. ಓಬಯ್ಯ ಮಾತನಾಡಿ, ಮಕ್ಕಳ ಮನಸ್ಸಿನ ಮೇಲೆ ಈ ಸರ್ಕಾರ ದಾಳಿ ಮಾಡುತ್ತಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ಮಕ್ಕಳ ಮನಸ್ಸನ್ನು ಅರಿತು ಪಠ್ಯ ಕ್ರಮ ರೂಪಿಸಿದೆ. ಅದೇ ಪಠ್ಯವನ್ನು ಸರ್ಕಾರ ಮುಂದುವರಿಸಬೇಕು. ಹೊಸ ಪಠ್ಯವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ನಮ್ಮ ಸಂವಿಧಾನಕ್ಕೂ ಇವರು ಕೈ ಹಾಕುತ್ತಾರೆ. ಈಗಲೇ ಎಚ್ಚರಿಕೆಯಿಂದ ಇರಬೇಕು ಎಂದರು.

ಎಚ್.ಜಿ.ರಮೇಶ್ ಕುಣಿಗಲ್, ಕುವೆಂಪು ರಚಿತ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿ ಪಠ್ಯಪುಸ್ತಕ ರಚನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರವಲ್ಲ, ಮಾದ್ಯಮ ಕ್ಷೇತ್ರ ಸಹಿತ ಎಲ್ಲ ಕ್ಷೇತ್ರವನ್ನು ಕೆಡಿಸುವ ಹುನ್ನಾರ ನಡೆದಿದೆ. ಇಡೀ ರಾಜ್ಯದ ಜನರು ಹೋರಾಟಕ್ಕೆ ಸಿದ್ದರಾಗಬೇಕು ಎಂದರು.

ಎನ್.ನಾಗಪ್ಪ ಮಾತನಾಡಿ, ಪಠ್ಯ ಶಿಕ್ಷಣ ಸಮಿತಿ ಅಧ್ಯಕ್ಷ ಶಿಕ್ಷಣ ತಜ್ಜ ಅಲ್ಲ. ನಾನು ಸಹ ಶಿಕ್ಷಣ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಈಗ ರಚಿಸಿರುವ ಸಮಿತಿ ಒಂದು ಪಕ್ಚ, ಜಾತಿಗೆ ಸೀಮಿತವಾದಂತಿದೆ. ಸಾರಸಟ್ಟಾಗಿ ಹೊಸ ಪಠ್ಯ ಸಮಿತಿಯನ್ನು ಬರ್ಖಾಸ್ತು ಮಾಡಬೇಕು. ಪಠ್ಯ ಪುಸ್ತಕಗಳನ್ನು ತಿರಸ್ಕರಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ ಎನ್.ನಾಗಪ್ಪ ಹೇಳಿದರು.

ಬಾ.ಹ.ರಮಾಕುಮಾರಿ ಮಾತನಾಡಿ, ಹೊಸ ಪಠ್ಯ ಬೇಡ. ಸಮಿತಿಯನ್ನು ರದ್ದು ಮಾಡಬೇಕು. ಮಕ್ಕಳಿಗೆ ಉಪಯೋಗ ಅಗುವಂತಿರಬೇಕು ಎಂದರು.

ಕೊಳೆಗೇರಿ ಸಮಿತಿಯ ಎ.ನರಸಿಂಹಮೂರ್ತಿ, ಇನ್ನು ಮಕ್ಕಳಿಗೆ ಪಠ್ಯ ಪುಸ್ತಕ ಕೈ ಸೇರಿಲ್ಲ. ಸರ್ಕಾರ ಏನ್ ಮಾಡಲು ಹೊರಟಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದು ಇಡೀ ಮಕ್ಕಳ ಮನಸ್ಸನ್ನು ಕೆಡಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಪಠ್ಯ ಸಮಿತಿ ಅಧ್ಯಕ್ಷರಿಗೆ ಬರಹಗಳ ಗಂಧವೇ ಗೊತ್ತಾಗಿಲ್ಲ. ಸರ್ಕಾರ ಅಹಃಕಾರದಿಂದ ನಡೆದುಕೊಳ್ಳುತ್ತಿದೆ. ಕೂಡಲೇ ಹೊಸ ಪಠ್ಯಕ್ರಮ ರಚಿಸಬೇಕು ಎಂದರು.

ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಅವರು ಬ್ರಾಹ್ಮಣ್ಯದ ಪೌರೋಹಿತ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.

ಹಿರಿಯ ಶಿಕ್ಷಣ ತಜ್ಜ ಕೆ. ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಎಸ್.ರಾಘವೇಂದ್ರ ಹೋರಾಟದ ರೂಪುರೇಷೆ ಕುರಿತು ಮಾತನಾಡಿದರು.

ಎಚ್. ಗೋವಿಂದಯ್ಯ, ಕೊಳೆಗೇರಿ ಸಮಿತಿ ಎ.ನರಸಿಂಹಮೂರ್ತಿ, ನಟರಾಜಪ್ಪ, ಕನ್ನಡ ಪ್ರಾಧ್ಯಾಪಕ ಡಾ. ಓ.ನಾಗರಾಜ್, ಜವಾಹರ್, ಸ್ವಾಮಿ, ಪತ್ರಕರ್ತರಾದ ಎಂ.ವಿ.ವೆಂಕಟಾಚಲ, ಆಲದಗೆರೆ ನಾಗೇಂದ್ರ, ಕೆ.ಇ. ಸಿದ್ದಯ್ಯ, ವಕೀಲರಾದ ಕರಿಬಸವಯ್ಯ, ತಾಜುದ್ದೀನ್ ಇತರರು ಇದ್ದರು.

ಗೋಮಾಂಸ‌ ಮಾರಾಟ: ಬಂಧನ

Publicstory


ಕೊರಟಗೆರೆ: ಪಟ್ಟಣದ ಮಖಬುಲ್ ಸರ್ಕಲ್ ನ ಚಿಕ್ಕ ಮಸೀದಿ ಬಳಿ ಖಸಾಯಿ ತೆರೆದು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಪೊಲೀಸರು ದಾಳಿ ನಡೆಸಿ ಆರು ಜನ ಆರೋಪಿಗಳ ವಿರುದ್ಧ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಪಟ್ಟಣದ ಮಖಬಲ್ ಸರ್ಕಲ್ ಹತ್ತಿರ‌ ಇರುವ ಚಿಕ್ಕ ಮಸೀದಿ ಬಳಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಗೌಗ್ಯಾನ್ ಫೌಂಡೇಷನ್‌ ಸದಸ್ಯರು ನೀಡಿದ ದೂರಿನ ಮೇರೆಗೆ ಕೊರಟಗೆರೆ ಸಿಪಿಐ ಎಸ್.ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ಅಂಗಡಿ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆಸಿದರು.

ಗೋಮಾಂಸ ಮಾರಾಟ ಮಾಡುತ್ತಿದ್ದ ಮುಭಾರಕ್, ಫಕ್ರುದ್ದೀನ್ ಸಾಬ್, ಆಸಿಫ್, ಸಮಿ‌ಉಲ್ಲಾ, ನಿಸಾರ್ ಅಹಮದ್, ಉಸ್ಮಾನ್ ಎಂಬುವರನ್ನ ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 500 ಕೆಜಿ ಗೋಮಾಂಸ ಹಾಗೂ ಕಟಾವಿಗೆ ತಂದಿದ್ದ‌ 5 ಗೋವುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೂರು ಆಧರಿಸಿ ದಾಳಿ ನಡೆಸಿ 6 ಜನರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಎಂದು ಸಿಪಿಐ ಎಸ್.ಸಿದ್ದರಾಮೇಶ್ವರ ತಿಳಿಸಿದರು.

ದಾಳಿಯಲ್ಲಿ ಪಿಎಸ್ಐ ಮಂಜುಳ, ಪ್ರೊಬೆಷನರಿ ಪಿಎಸ್ಐ ರಾಜೇಶ, ಸಿಬ್ಬಂಧಿಗಳಾದ ರಂಗನಾಥ, ದಯಾನಂದ, ದೊಡ್ಡಲಿಂಗಯ್ಯ, ವಿಷ್ಣುಕದಂಬ, ರಾಜಶೇಖರ, ವೆಂಕಟೇಶ, ಶಿವಕುಮಾರ, ಮಲ್ಲೇಶ್, ಗಂಗಾಧರ್ ಕಾರ್ಯಾಚರಣೆ ನಡೆಸಿದರು.

ಭಾನುವಾರದ ಚುಟುಕು ಕವನಗಳು

ಡಾ. ರಜನಿ ಎಂ

ಪೋನಿ ಟೇಲ್


ನಿನ್ನ ಪೋನಿ ಟೇಲ್
ಹಾಗೆ ಹೀಗೆ
ತೂಗಾಡಿದ ಹಾಗೆ
ನನ್ನ ಹೃದಯ
ಹಾರಿ ಹಾರಿ ಕುಣಿಯುತ್ತಿತ್ತು.
ಈಗ ನಿನ್ನ
ಬಾಬ್ ಕಟ್ ನೋಡಿ
ನನ್ನ ಹೃದಯ
ಬಡಿಯುವುದು
ನಿಧಾನವಾಗಿದೆ.

ಕಣ್ಣು


ಅವಳ ಕಣ್ಣು
ಕಂದು ಅಥವಾ
ಕಡು ಕಪ್ಪು ?

ನೋಡ ಲೆಂದು
ಕಣ್ಣಲ್ಲಿ ಕಣ್ಣಿಟ್ಟು
ನೋಡಿದೆ…
ಬೆಕ್ಕಿನ ಹಾಗೆ
ಎಗರಿದಳು ….
ಅಟ್ಟಿಸಿಕೊಂಡು ಬಂದಳು …

ಇಲಿಯ ಹಾಗೆ ಓಡಿ ಹೋದೆ.

ಕೆನ್ನೆ ಗುಳಿ


ಆಕೆ ಗುಳಿ ಕೆನ್ನೆ
ಚೆಲುವೆ…
ಆದರೆ ಎಲ್ಲಿ ಹೋಯಿತು
ಕೆನ್ನೆ ಗುಳಿ ?

ಓಹ್…
ನಗಬೇಕು ಆಕೆ
ಕೆನ್ನೆ ಗುಳಿ ಬೀಳಲು ..

ನಕ್ಕಿಲ್ಲ ಆಕೆ
ಕೆನ್ನೆ ಗುಳಿ ಕಾಣಲು

ಚಂದ್ರಮ


ಬೆಳದಿಂಗಳ ರಾತ್ರಿ…
‘ಪ್ರಿಯೆ ನಿದ್ರಿಸಬೇಡ’..
ದಿಟ್ಟಿಸು ಆ ಪೂರ್ಣ ಚಂದರನನ್ನು …
ಎಷ್ಟು ಸುಂದರ…
ಮನಮೋಹಕ…

‘ಹೌದು’ ಪ್ರಿಯಾ
ನಾಳೆ ಮಧ್ಯಾಹ್ನದ
ತನಕ ನಿದ್ರಿಸುವುದು…
ಇನ್ನೂ ಸುಂದರ…

ಪೂರ್ಣ ಚಂದ್ರನ
ನೆನಪಲ್ಲಿ…

ಮುಂಗುರುಳು


ಇರಲಿ ಬಿಡು
ಸುರುಳಿ
ಸುರುಳಿ.

ನನ್ನ ನೆನಪಲ್ಲಿ
ನಾಚಿಕೆಯಲ್ಲಿ…

ಏಕೆ
ನೇರ ಮಾಡುವೆ.

ಕಾಲಿಗೆ ಬಿದ್ದು


ನನ್ನನ್ನು
ನಿನ್ನ ಕಾಲಿಗೆ
ಏಕೆ ಬೀಳಿಸುವೆ ?

ಕಂಡು ನಿನ್ನ
ಕೆರೆಯುವ ಹೆಬ್ಬೆರಳು…
ಸೋತು ಸುಣ್ಣವಾಗಿ
ಮಲಗುವೆ.

ಬಾಲಕನಿಗೆ ಚೂರಿ ಇರಿತ

0

ತುಮಕೂರು: ಬಾಲಕನ್ನೊಬ್ಬನಿಗೆ ಚೂರಿಯಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ.

ಚೂರಿ‌ ಇರಿತಕ್ಕೆ ಒಳಗಾದ ಬಾಲಕನನ್ನು ವಿನೋದ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

ಘಟನೆ ದಿಬ್ಬೂರಿನಲ್ಲಿ ನಡೆದಿದೆ. ಬಾಲಕನ ಸ್ನೇಹಿತ ಮಂಜುನಾಥ್ ಅವರನ್ನು ಮೂವರು ದುಷ್ಕರ್ಮಿಗಳು ಬಡಿಯುತ್ತಿದ್ದರು. ಇದನ್ನು ನೋಡಲು ಹೋದ ಬಾಲಕನಿಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

ಕಾನೂನು ಕ್ಷೇತ್ರದಲ್ಲಿ ಎರಡು ಸವಾಲುಗಳು: ಪ್ರೊ. ಕರಿಯಣ್ಣ

0

ಪಬ್ಲಿಕ್ ಸ್ಟೋರಿ


ತುಮಕೂರು: ಪ್ರಾಧ್ಯಾಪಕರು, ಉಪನ್ಯಾಸಕರು ಪ್ರತಿ ದಿನವೂ ಓದಬೇಕು. ಅಪ್ ಡೇಟ್ ಆಗುತ್ತಿರಬೇಕು ಎಂದು ಚಿತ್ರದುರ್ಗ ಸರಸ್ವತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕರಿಯಣ್ಣ ತಿಳಿಸಿದರು‌.

ತುಮಕೂರಿನಲ್ಲಿ ಈಚೆಗೆ ಅವರ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಮುಕ್ತವಿಶ್ವವಿದ್ಯಾಲಯದಿಂದ ಪೇಟೆಂಟ್ ವಿಷಯವಾಗಿ ಡಾಕ್ಟರೇಟ್ ಪದವಿ ಪಡೆದ ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನಡುವೆ ಸುಮಧುರ ಭಾವನೆಗಳಿರಬೇಕು. ಆದರೆ ಅವರಿಗೆ ಕಲಿಸುವ ವಿಚಾರದಲ್ಲಿ ಕಠಿಣವಾಗಿಯೇ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾನೂನು ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಹಾಗೆಯೇ ಸವಾಲುಗಳು ಸಹ ಇವೆ. ಅವಕಾಶಗಳನ್ನು ಬಳಸಿಕೊಳ್ಳುವ, ಸವಾಲುಗಳನ್ನು ಎದುರಿಸುವ ಎರಡೂ ಕಲೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು ಎಂದರು.

ಕಾಲೇಜಿನ ಸಿಬ್ಬಂದಿ, ಉಪನ್ಯಾಸಕರ ನಡುವೆ ಸೌಹಾರ್ದತೆ ಹೆಚ್ಚಾಗಿ ಇದ್ದಷ್ಟು ಕಾಲೇಜಿನ ವಾತಾವರಣ ಚೆನ್ನಾಗಿರಲಿದೆ.‌ಇದು ಬೋಧನೆಯ ಗುಣಮಟ್ಟದ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದರು.
ರಾಜ್ಯ ಕಾನೂನು ವಿ.ವಿ. ಅಕಡೆಮಿಕ್ ಕೌನ್ಸಿಲ್ ಸದಸ್ಯರಾದ ಎಸ್. ರಮೇಶ, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ, ಸುಫಿಯಾ ಕಾನೂನು ಕಾಲೇಜಿನ ಜಗದೀಶ್, ಗ್ರಂಥಾಧಿಕಾರಿ ಸುಬ್ಬು, ವಕೀಲರಾದ ಗೌರಿಶಂಕರ್ ಇತರರು ಇದ್ದರು.

ಪಿ.ಸಾಯಿನಾಥ್ ಬಿಡುಗಡೆಗೊಳಿಸಿದ ಕನ್ನಡದ ಪುಸ್ತಕ!

0

ಪಿ.ಸಾಯಿನಾಥ್ ಅವರೊಂದಿಗೆ ಸಿ.ಕೆ.ಮಹೇಂದ್ರ ಮತ್ತು ನಾನು.

ಡಾ.ಶ್ವೇತಾರಾಣಿ


Tumkuru: ಇಂದು ಬೆಳ್ಳಂಬೆಳಗೆ ಪಿ. ಸಾಯಿ‌ನಾಥ್ ಮನೆಗೆ ಬಂದಿದ್ದರು.

ಖ್ಯಾತ ಪತ್ರಕರ್ತರು ಆಗಿರುವ ಪಿ. ಸಾಯಿನಾಥ್ ಅವರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕ ಪತ್ರಿಕೋದ್ಯಮದ ಬೈಬಲ್ ಇದ್ದಂತೆ. ಬಹಳ ವರ್ಷ ಕಾಲ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದರು.

ಸಾಯಿನಾಥರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕವನ್ನು ಈ ಟಿ.ವಿಯ ಸಂಪಾದಕರೂ ಆಗಿದ್ದ ಈಗ ಅವಧಿಯ ಪ್ರಧಾನ ಸಂಪಾದಕರಾದ ಬಹುರೂಪಿ ಬುಕ್ ಹಬ್ ನ ಜಿ.ಎನ್. ಮೋಹನ್ ” ಬರ ಅಂದ್ರೆ ಎಲ್ಲರಿಗೂ ಇಷ್ಟ ” ಎಂಬ ಶಿರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಮ್ಮ ಮನೆಯಲ್ಲಿಯೇ ಫಿಲ್ಟರ್ ಕಾಫಿ ಜತೆಗೆ ಸಣ್ಣ ಸಮಾರಂಭವೂ ನಡೆದೇ ಹೋಯಿತು. ಮನೆಯಲ್ಲಿಯೇ ಇದ್ದ ನನ್ನ ಪುಸ್ತಕ ‘ಪ್ರೇಮಾ ಭಟ್ ಅವರ ಬದುಕು ಬರಹ’ ಪುಸ್ತಕವನ್ನು ಸಾಯಿನಾಥ್ ಬಿಡುಗಡೆಗೊಳಿಸಿಯೇ ಬಿಟ್ಟರು!.

ಪುಸ್ತಕದ ಮೇಲೆ ಅವರ ಚೆಂದನೆಯ‌ ಹಸ್ತಾಕ್ಷರ ಹಾಕಿದರು. ಇದಕ್ಕೆ ಸಾಕ್ಷಿಯಾಗಿ ಜಿ.ಎನ್.ಮೋಹನ್ ಸರ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಅಮ್ಮಾ ಸೌಭಾಗ್ಯಮ್ಮ ಇದ್ದರು.

ತುಮಕೂರಿನ ನ್ಯಾಯಾಲಯಗ ಳಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Publicstory


Tumkuru: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಕರೆದಿದೆ.

ಅರ್ಜಿಗಳನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವೆಬ್ ಸೈಟ್ “http://district.ecourt.gov.in/tumkuronlinerecruitment” ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್ ಲೈನ್ ನಲ್ಲಿ 30/05/2022ರಿಂದ 15/06/2022ರ ರಾತ್ರಿ 11.59 ರವರೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಸಂಖ್ಯೆ; 51
ವೇತನ ಶ್ರೇಣಿ; 17000-400-18600-450-20400-500-22400-550-24600-600-27000-650-28950 ಮತ್ತು ಇತರೆ ಭತ್ಯೆಗಳು.
ಶೈಕ್ಷಣಿಕ ಅರ್ಹತೆ; SSLC ಉತ್ತೀರ್ಣತೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ವಯೋಮಿತಿ; ಕನಿಷ್ಠ ವಯೋಮಿತಿ- 18 ವರ್ಷ, ಗರಿಷ್ಠ ವಯೋಮಿತಿ(ಸಾಮಾನ್ಯ ವರ್ಗ)- 35, ಪ್ರವರ್ಗ 2ಎ, 2ಬಿ, 3ಎ, 3ಬಿ- 38 ವರ್ಷ, ಪ.ಜಾ/ಪ.ಪಂ/ಪ್ರವರ್ಗ -1- 40 ವರ್ಷ.
ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆ, ಮಾಜಿ ಸೈನಿಕರು ಹಾಗೂ ವಿಕಲಚೇತನರಿಗೆ ಕರ್ನಾಟಕ ಸಿವಿಲ್ ಸೇವೆಗಳು(ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲೆ ನೀಡಲಾಗಿರುವ ನ್ಯಾಯಾಲಯದ ವೆಬ್ ಸೈಟ್ ‌ನಲ್ಲಿ ಪರಿಶೀಲಿಸಿಕೊಳ್ಳಬಹುದು.