Wednesday, May 6, 2026
Google search engine
Home Blog Page 106

ಪಠ್ಯ ಪುಸ್ತಕವೂ , ರಾಜ ಕಾರಣವೂ


ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷದ
ಆಟದ ವಸ್ತುಗಳಲ್ಲ.
ಅವರಲ್ಲಿ ವಸ್ತುನಿಷ್ಠವಾದ, ವೈಜ್ಞಾನಿಕವಾದ, ದೇಶ ಪ್ರೇಮದ ಚಿಂತನೆಗಳನ್ನು ಹಚ್ಚುವ ಕಿಚ್ಚು ಪಠ್ಯ ಪುಸ್ತಕಗಳಿಗೆ ಇರುತ್ತದೆ.
ಉತ್ಕೃಷ್ಟ ಸಾಹಿತಿಗಳಿಗೆ ಕನ್ನಡದಲ್ಲಿ ಬರವಿಲ್ಲ.
ಚರ್ಚೆಗೆ ಬಂದಿರುವ ಕವಿ, ಲೇಖಕರು ಬರೀ
ಬೆರಳೆಣಿಕೆಯಷ್ಟು. ಪಠ್ಯ ಪರಿಷ್ಕರಣ ಸಮಿತಿ ಪೋಷಕರು, ಸಾಹಿತಿಗಳು, ಶಿಕ್ಷಣ ತಜ್ಞರನ್ನು, ಚರಿತ್ರೆ ತಜ್ಞರು, ವಿಜ್ಞಾನಿಗಳನ್ನು, ಭಾಷಾ ತಜ್ಞರನ್ನು ಒಳಗೊಂಡಿರಬೇಕು.

ಇತಿಹಾಸವನ್ನು ಕೂಡ ಈಗ ಚರ್ಚಿಸುತ್ತಿರುವರು
ಅಷ್ಟೇ ಸೃಷ್ಠಿಸಿಲ್ಲ. ಮೈಸೂರು ಮಹಾರಾಜರು ಕೂಡ ಸೃಷ್ಟಿಸಿದ್ದಾರೆ. ಅದೇ ರೀತಿ ಬೆಳವಡಿ ಮಲ್ಲಮ್ಮ , ಕಿತ್ತೂರು ಚೆನ್ನಮ್ಮ, ಸಾವಿತ್ರಿ ಭಾಯಿ ಫುಲೆ , ಮಾಗಡಿ ಕೆಂಪೆಗೌಡ ಕೂಡ.

ಕಾರ್ಗಿಲ್ ಯುದ್ಧ ಈಗಿನ ಮಕ್ಕಳಿಗೆ ಚರಿತ್ರೆಯೇ ಹೌದು.
ಅದೇ ರೀತಿ ಯುಕ್ರೇನ್ ಯುದ್ಧ ಮತ್ತು ಇಸ್ರೇಲ್ ಕೂಡ.
ಎಷ್ಟು ವರ್ಷ ಹಿಂದಿನದನ್ನು ಕಲಿಸಬೇಕು? ನಿರ್ಧರಿಸುವವರು ಯಾರು ?
ಸಂವಿಧಾನ , ಸ್ತ್ರೀ ಹಕ್ಕುಗಳು, ಮಕ್ಕಳ ದೌರ್ಜನ್ಯ ವಿರೋಧಿ ಕಾಯಿದೆ ಗಳನ್ನು ಕೂಡ ಕಲಿಸಬೇಕು.
ನಮ್ಮ ದೇಶದಲ್ಲಿ ಸಂಚಾರ ಸುರಕ್ಷತೆ, ನಾಗರಿಕ ಹಕ್ಕುಗಳು , ಅರೆಸ್ಟ್ ಆದಾಗ ಏನು ಮಾಡಬೇಕು , ಅರೆಸ್ಟ್ ಆಗದೇ ಇರಲು ಹೇಗೆ ಬದುಕಬೇಕು ಎನ್ನುವುದು ಕೂಡ ಕಲಿಸಬೇಕು.
ಮೊಬೈಲ್ ಗೀಳು ಕೂಡ ಭಾಗವಾಗಿ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು.
ಯಾವುದೇ ವಿಷಯದ ಆಧಾರ ಯಾವುದು ಎಂದು ಪಠ್ಯದಲ್ಲಿ ಇರಬೇಕು. ಓದುವ ಉತ್ಸಾಹ ಮೂಡಿಸುವಂತಿರಬೇಕು.

ಶ್ರೀಲಂಕಾದ ಅರ್ಥಿಕ ಅವನತಿ ಕೂಡ ಪಾಠವಾಗಬೇಕು ಕೋವಿಡ್ ಕೇಡುಗಾಲ ಕೂಡ ದಾಖಲಾಗಬೇಕು,
ನರೇಂದ್ರ ಮೋದಿ, ಯೋಗಿ ಆದಿತ್ಯ ನಾಥ್, ಸದ್ಗುರು,
ನಿತಿಶ್ ಕುಮಾರ್ , ಮೇರಿ ಕೊಮ್, ಕಲ್ಪನಾ ಚಾವ್ಲಾ, ಲಂಕೇಶ್, ಸೂಕಿ, ಡಿ. ಆರ್ ನಾಗರಾಜ್ , ಹಲ್ದಾರ್ ನಾಗ್ ಕೂಡ ವಯಸ್ಸಿಗೆ ತಕ್ಕಂತ ಪಾಠದಲ್ಲಿ ಸೇರಬೇಕು.
ನಿರ್ಭಯಾ ಪ್ರಕರಣ ಕೂಡ ಸೇರಿಸಬೇಕು.

ಪ್ರಪಂಚವೇ ಭಾರತದತ್ತ ತಿರುಗಿ ನೋಡಿರುವಂತೆ ಆಗಿರುವ ಎಲ್ಲವೂ ಪಾಠ ಆಗಬೇಕು, ಕುತೂಹಲ ಮೂಡಬೇಕು , ಮುಂದಿನ ಓದಿಗೆ ದಿಕ್ಸೂಚಿ ಆಗಬೇಕು.

ಚರಿತ್ರೆ 100 ವರ್ಷ ಹಿಂದಿನದು ಆಗಬೇಕಿಲ್ಲ. 15 ವರ್ಷಗಳ ಹಿಂದಿನದು ಕೂಡ ಚರಿತ್ರೆಯೆ. ಕೂವಿಡ-19 ಕೂಡ ಚರಿತ್ರೆಯೆ.

ಯಾವುದೇ ಜಾತಿ, ಪಂಥ, ರಾಜಕೀಯ ಪಕ್ಷಗಳು
ಬೆಳೆಯುವ ಮಕ್ಕಳ ಬೌದ್ಧಿಕತೆಯನ್ನು ದಾಳ ಮಾಡಿಕೊಳ್ಳಬಾರದು.

ದಲಿತರಿಬ್ಬರ ಹತ್ಯೆ: ನ್ಯಾಯಕ್ಕಾಗಿ ಗುಬ್ಬಿಯಿಂದ ನಡೆದು ಬಂದ ಜನಸಮೂಹ

ವರದಿ: ಈ.ಶಿವಣ್ಣ

ತುಮಕೂರು: ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಅಮಾನವೀಯವಾಗಿ ನಡೆದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

ದಲಿತ ಯುವಕರ ಹತ್ಯೆ ಪ್ರಕರಣವನ್ನು ಪೊಲೀಸರು ಯಾರದೇ ಪ್ರಭಾವಕ್ಕೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇದೊಂದು ಅಮಾನವೀಯ ಘಟನೆ. ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಕ್ರಮವಹಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಕಾಲ್ನಡಿಗೆ ಜಾಥಾವನ್ನು ಉದ್ದೇಶಿಸಿ ಜನಪರ ಚಿಂತಕ ಕೆ.ದೊರೈರಾಜು ಮಾತನಾಡಿದರು.

ಪೆದ್ದನಹಳ್ಳಿಯಲ್ಲಿ ನಡೆದ ಮಾನವ ಹತ್ಯೆಯ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಇದುವರೆಗೂ ನಡೆದ ದಲಿತರ ಹತ್ಯೆ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಹತ್ಯೆ ನಡೆಸಿದವರಿಗೆ ಶಿಕ್ಷೆ ಆಗಿಲ್ಲ ಎಂದರು.


ಪೊಲೀಸರು ಸಮಗ್ರ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸರಿಯಾದ ದಿಕ್ಕಿನಲ್ಲಿ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ದೊರಯರಾಜ್ ಹೇಳಿದರು.

ಗುಂಪು ಕಟ್ಟಿಕೊಂಡು ಮಾನವ ಹತ್ಯೆ ಮಾಡುವುದು ತಪ್ಪು. ಇಂತಹ ಘಟನೆಗಳು ಮರುಕಳಿಸುವಂತೆ ಬಿಟ್ಟರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸದಂತೆ ಆಗುತ್ತದೆ. ಬಲಿಷ್ಠ ಜಾತಿಗಳು ಕಾನೂನು ಕೈಗೆತ್ತಿಕೊಂಡು ತಳಸ್ತರದ ಜನರ ಮೇಲೆ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಇದು ರಕ್ಷಣಾ ಇಲಾಖೆ ಇದೆಯೋ ಇಲ್ಲವೋ ಎಂಬಂತೆ ಆಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಹಾಗೂ ದಲಿತಪರ ಹೋರಾಟಗಾರ ಕೊಟ್ಟ ಶಂಕರ್ ಮಾತನಾಡಿ, ಪೆದ್ದನಹಳ್ಳಿ ದಲಿತ ಯುವಕರ ಜೋಡಿ ಕೊಲೆಯ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ದಲಿತರೆಂಬ ಕಾರಣಕ್ಕೆ ಸರ್ಕಾರದ ಯಾವೊಬ್ಬ ಸಚಿವರು, ಶಾಸಕರು ಪೆದ್ದನಹಳ್ಳಿಗೆ ಭೇಟಿ ನೀಡಿಲ್ಲ. ಇದು ದಲಿತರ ಬಗೆಗಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಸಂಘಪರಿವಾರಕ್ಕೆ ಸೇರಿದ ಹರ್ಷನ ಸಾವಿನ ಸಂದರ್ಭದಲ್ಲಿ ಬಿಜೆಪಿ ಸಚಿವರು ಮತ್ತು ಪಕ್ಷದ ಮುಖಂಡರು ಹರ್ಷನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಹರ್ಷನಿಗೆ ಸಿಕ್ಕ ಗೌರವ ಹತ್ಯೆಯಾದ ದಲಿತ ಯುವಕರಿಗೂ ಸಿಗಬೇಕು. ಆದರೆ ಸರ್ಕಾರ ಬಿಜೆಪಿ ಬೆಂಬಲಿಗರನ್ನು ಒಂದು ರೀತಿ ನಡೆಸಿಕೊಳ್ಳುತ್ತದೆ. ದಲಿತರನ್ನು ಮತ್ತೊಂದು ರೀತಿಯಲ್ಲಿ ನಡೆಸಿಕೊಳ್ಳುತ್ತದೆ. ಹತ್ಯೆಯಾದ ದಲಿತ ಯುವಕರ ಮನೆಗೆ ಸೌಜನ್ಯಕ್ಕಾದರೂ ಒಬ್ಬ ಸಚಿವ-ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೆಣ್ಣೂರು ಶ್ರೀನಿವಾಸ್, ಸೂಲಿಕುಂಟೆ ರಮೇಶ್ NK ಸುಬ್ರಹ್ಮಣ್ಯ B ಉಮೆಶ್ ಮೊದಲಾದವರು ಮಾತನಾಡಿದರು.

ಕ್ರಿಯಾಜನ್ ಅಗ್ರಿಬಯೋಟೆಕ್ ನಲ್ಲಿ ರೈತರಿಗೆ ಹೇಳಿದ್ದೇನು?

Publicstory


ಗುಬ್ಬಿ: ರೈತರು ಕೃಷಿ ಮಾಡುವಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಕಾಣಬಹುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಸ್.ರಮೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಕ್ರಿಯಾಜನ್ ಅಗ್ರಿ ಬಯೋಟೆಕ್ ಪ್ರೆöÊ.ಲಿ ವತಿಯಿಂದ ಏರ್ಪಡಿಸಿದ್ದ ರೈತ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರಗಳನ್ನು ಬಳಸುತ್ತಿದ್ದೇವೆ ಎಂದರು.

ಇದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮ ಉತ್ಪನ್ನ ಬೆಳೆಯಲು ಮುಂದಾಗಬೇಕು ಎಂದರು.

ಕಾರ್ಯಗಾರದಲ್ಲಿ ಕ್ರಿಯಾಜನ್ ಕಂಪನಿಯ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನಪ್ಪ ಜಿ.ಎನ್ ಮಾತನಾಡಿ, ಕ್ರಿಯಾಜನ್ ಕಂಪನಿಯು ರೈತರಿಗೆ ಸಾವಯವ ಉತ್ಪನ್ನಗಳನ್ನು ನೀಡುತ್ತಿದೆ. ರೈತರಿಗೆ ಎಲ್ಲಾ ಬೆಳೆಗಳಿಗೆ ಬೇಕಾಗುವ ಸಾವಯವ ಹರಳ ಮತ್ತು ದ್ರವರೂಪದ ಗೊಬ್ಬರಗಳು ದೊರೆಯುತ್ತವೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕ್ರಿಯಾಜನ್ ಕಂಪನಿವಯಿAದ ಲಕ್ಕಿಕೊಪಾನ್ ಡ್ರಾದಲ್ಲಿ ಆಯ್ಕೆಯಾದ ರೈತರಿಗೆ ನಾನಾ ಕೃಷಿ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಎಸ್.ವಿ. ಶ್ರೀನಾಥ್, ನಿರ್ದೇಶಕರಾದ ಎಸ್.ಟಿ.ಆಂಜಿನಪ್ಪ, ಕ್ರಿಯಾಜನ್ ಕಂಪನಿಯ ಬೆಸಾಯ ಶಾಸ್ತçಜ್ಞ ಸುನಿಲ್‌ಕುಮಾರ್ ಎಸ್.ಜಿ, ಮಾರುಕಟ್ಟೆ ವಿಸ್ತರಾಣಾಧಿಕಾರಿ ಕಿರಣ್.ಎಸ್.ಇ, ಮಾರಾಟ ಪ್ರತಿನಿದಿ ನರಸಿಂಹರಾಜು ಎಲ್.ಪಿ.ಶ್ರೀಧರ್ ಹಾಗೂ ರೈತರು ಉಪಸ್ಥಿತರಿದ್ದರು.

ಹೊತ್ತು ಊಟಕ್ಕೂ ಪರದಾಡುತ್ತಿದ್ದೆ: ಸಿದ್ದರಾಮಯ್ಯ

  • ಹರೀಶ್ ಕಮ್ಮನಕೋಟೆ

ತುಮಕೂರು: ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮಾಜಿ ಮುಖ್ಯಂಮತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಸಂಕಿರಣ- ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು, ಅಂಬೇಡ್ಕರ್, ವಾಲ್ಮೀಕಿ ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ಬಡ್ಡಿ ಸಮೇತ ಮನ್ನಾ ಹಾಗೂ ಜನತಾ ಮನೆಗಳ ಸಾಲವನ್ನೂ ಮನ್ನಾ ಮಾಡಿದ್ದೇನೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಒಳಗೊಂಡಂತೆ ನಾನು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ ಎಂದರು.

ನಾನು ಬಿಎಸ್ಸಿ ಓದುವಾಗ ಬಾಡಿಗೆ ಮನೆಮಾಡಿಕೊಂಡಿದ್ದೆ. ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಕಾಲೇಜು ಸಮಯದ ಕಷ್ಟದ ದಿನಗಳ ಅನುಭವ ನನಗಿದ್ದುದ್ದರಿಂದ, ಹಾಸ್ಟೆಲ್ ಸಿಗದೆ ಬಾಡಿಗೆ ರೂಂ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲೆಂದು ತಿಂಗಳಿಗೆ ಒಂದೂವರೆ ಸಾವಿರದಂತೆ ವರ್ಷಕ್ಕೆ ಹದಿನೈದು ಸಾವಿರ ದೊರಕಿಸಲು ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದೆ. ಶಿಕ್ಷಣವು ಹಣವಂತರಿಗೆ ಮಾತ್ರ ದಕ್ಕುವುದಲ್ಲ. ಅದು ಎಲ್ಲ ಸಮುದಾಯದ ಮಕ್ಕಳಿಗೆ ದೊರೆಯಬೇಕೆಂಬ ಉದ್ದೇಶದಿಂದ 1994ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಮುರಾರ್ಜಿ ದೇಸಾಯಿ ವಸತಿಶಾಲೆಗಳನ್ನು ನಿರ್ಮಾಣ ಮಾಡಲು ಹೋಬಳಿಗೊಂದರಂತೆ ಅನುದಾನ ಘೋಷಿಸಿದೆ. ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಎಷ್ಟು ಹೋಬಳಿಗಳಿವೆ ಅದಕ್ಕಿಂತಲೂ ಹೆಚ್ಚು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.

ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನ ಅವರ ಅನುಭವದ ಆಧಾರದ ಮೇಲೆ ನಿರ್ಮಿತವಾದಂತೆ ನಾನು ಜಾರಿಗೆ ತಂದ ಯೋಜನೆಗಳೂ ನನ್ನ ಅನುಭವದ ಮೇಲೆ ನಿರ್ಮಾಣವಾಗಿದೆ‌. ಸರ್ಕಾರಗಳು ಸಂವಿಧಾನದ ಆಶಯದಂತೆ ನಡೆಯಬೇಕು ಹಾಗೂ ಅನ್ಯಾಯಕ್ಕೊಳಗಾದವರು, ಶೋಷಿತರು, ವಂಚಿತರ ಪರವಾಗಿ ನಿಲ್ಲಬೇಕು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು ಎಂದರು.

#ಎಸ್ಸಿ ಎಸ್ಟಿ ಸಬಲೀಕರಣಕ್ಕೆ ಕಾನೂನು#

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಆರ್ಥಿಕವಾಗಿ ಸಬಲರಾಗದೇ ಹೋದರೆ ಮುಖ್ಯವಾಹಿನಿಗೆ ಬರುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರಿಗೆ ಕಾಂಟ್ರಾಕ್ಟ್ ಮೀಸಲಾತಿಯನ್ನು ತಂದೆವು. ಬಡ್ತಿ ನೀಡಲಿಕ್ಕಾಗಿಯೇ ಕಾನೂನನ್ನು ಮಾಡಿದೆ. ಇಂಥ ಯೋಜನೆಗಳು ದೇಶದಲ್ಲಿಯೇ‌ ಮೊದಲು ನಮ್ಮ ಸರ್ಕಾರದ ಅವಧಿಯಲ್ಲಿ ರೂಪಿತವಾದವು. ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಜನಾಂಗ 24.1ರಷ್ಟಿದೆ. ಜನಸಂಖ್ಯಾ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕೆಂದು ಎಸ್‌ಸಿಪಿ-ಟಿಎಸ್‌ಪಿಯ ಕಡ್ಡಾಯ ಕಾನೂನನ್ನು ಜಾರಿ ಮಾಡಲಾಯಿತು. ನಮ್ಮ ಕಾಲದಲ್ಲಿ ಬಜೆಟ್ ಗಾತ್ರ 2.2ಲಕ್ಷ ಕೋಟಿ ಇತ್ತು. ಆಗ ಎಸ್ಸಿಪಿ ಟಿಎಸ್ಪಿಗಾಗಿ 30 ಸಾವಿರ ಕೋಟಿಯಷ್ಟು ಮೀಸಲಿಟ್ಟಿದ್ದೆವು. ಈಗಿನ ಸರ್ಕಾರದ ಬಜೆಟ್ ಗಾತ್ರ 2,65,720 ಕೋಟಿ ಇದೆ. ಆದರೂ 28 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದಾರೆ. ಅಲ್ಲದೆ 7,885 ಕೋಟಿ ಹಣವನ್ನು ಡೈವರ್ಟ್ ಮಾಡಲಾಗಿದೆ ಎಂದು ತಿಳಿಸಿದರು.

#ಸಿದ್ದರಾಮಯ್ಯ ಬೇಸರ#

ಸಂವಿಧಾನದ ಆಶಯದಂತೆ ನಡೆದಕೊಂಡಿದ್ದೇನೆ. ಜನಪರ ನಿಲುವುಗಳನ್ನು ತಳೆದಿದ್ದೇನೆ ಆದರೂ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ವ್ಯವಸ್ಥೆ ಎಲ್ಲೀವರೆಗೆ ಇರುತ್ತದೆಯೋ ಅಲ್ಲಿವರೆಗೆ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಯಾರು ಜೈಲಿಗೆ ಹೋಗಿ ಬಂದಿರುತ್ತಾರೋ ಅವರೆಲ್ಲ ಜನಪ್ರಿಯರಾಗುತ್ತಿದ್ದಾರೆ. ಇಂದು ಸಾಧನೆಗಳ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿಲ್ಲ. ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಜಾತಿಯಿಂದ ಅಳೆಯಲಾಗುತ್ತಿದೆ. ಈ ವಿಚಾರಗಳು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿವೆ.
ನಾನು ಕುರುಬ ಎಂಬ ಕಾರಣಕ್ಕೆ ತನಗೆ ನೂರು ಕುರಿ ಲೆಕ್ಕಹಾಕಲು ಬರುವುದಿಲ್ಲ ಎಂದಿದ್ದರು ಎಂದು ಸಿದ್ದರಾಮಯ್ಯ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಈ ವೇಳೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಗ್ರಂಥ ಸಂಪಾದಕ ಕಾ ತಾ ಚಿಕ್ಕಣ್ಣ ಹಾಗೂ ಚಿಂತಕರಾದ ನಟರಾಜ ಭೂದಾಳು, ಮೋಹನ ಚಂದ್ರಗುತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾಧನ ಸೋಫಾನ’ ಗ್ರಂಥ ಬಿಡುಗಡೆ

ವರದಿ: ತುರುವೇಕೆರೆ ಪ್ರಸಾದ್


ತುರುವೇಕೆರೆ: ಅಧ್ಯಯನಶೀಲತೆ ಮತ್ತು ಅಧ್ಯಾಪನ ಪ್ರವೃತ್ತಿ ಕ್ಷೀಣಿಸುತ್ತಿದ್ದು ಯುವ ಜನಾಂಗ ಅಂಧಾನುಕರಣೆಯ ಬೆನ್ನುಹತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ಪಲ್ಲಟ ಉಂಟಾಗಿದ್ದು ವ್ಯಕ್ತಿ ಪರಿಪೂರ್ಣತೆ, ಬದುಕಿನ ಸಾರ್ಥಕತೆ ಮತ್ತು ಲೋಕಕಲ್ಯಾಣದ ಉದ್ದೇಶಗಳು ಮರೆಯಾಗುತ್ತಿವೆ ಎಂದು ಮತ್ತೂರು ಸಂಸ್ಕೃತಗ್ರಾಮದ ಶ್ರೀ ಜಾನಕೀರಾಮ ಆಶ್ರಮದ ಶ್ರೀ ಬೋಧಾನಂದೇಂದ್ರ ಸರಸ್ವತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗಾಯತ್ರೀ ಭವನದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಮತ್ತು ಪ್ರಣವಾನಂದತೀರ್ಥ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ವಿರಚಿತ ‘ಸಾಧನ ಸೋಫಾನ’ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಲೋಕದ ಪ್ರತಿಯೊಂದು ಘಟನೆಯೂ ಕಾರ್ಯಕಾರಣ ಸಂಬಂಧವನ್ನು ಹೊಂದಿರುತ್ತದೆ. ಯಾವುದೋ ಕಾಲಘಟ್ಟದಲ್ಲಿ ಒಂದು ಕೃತಿ ರಚನೆಯ ಪ್ರೇರಣೆಯಾಗುತ್ತದೆ.ಕರ್ಮ, ಚಿತ್ತಶುದ್ದಿ, ಮನಸ್ಸಿನ ಪರಿಪಕ್ವತೆಯ ಮೂಲಕ ಜ್ಞಾನವನ್ನು ಪಡೆಯಬೇಕು. ಸಾಧನ ಸೋಫಾನದಂತಹ ಕೃತಿಗಳು ನೇರವಾಗಿ ದಿವ್ಯ ಅನುಭವ ಪಡೆಯಬಹುದಾದ ತಾತ್ವಿಕ ವಿಚಾರಗಳನ್ನು ಹೊಂದಿರುವುದರಿಂದ ಅದು ಶ್ರೇಷ್ಠಕೃತಿಯೆನಿಸುತ್ತದೆ ಎಂದರು.
ತುಮಕೂರಿನ ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ ಶರ್ಮ ಕೃತಿ ಕುರಿತು ಮಾತನಾಡಿ ಶ್ರೀ ಪ್ರಣವಾನಂದ ತೀರ್ಥರ ಪೂರ್ವಾಶ್ರಮದ ಬದುಕಿನ ಚಿತ್ರಗಳ ಜೊತೆಗೆ ಸನ್ಯಾಸ ಸ್ವೀಕಾರದ ನಂತರದ ಆಧ್ಮಾತ್ಮ ಪಯಣ, ತೀರ್ಥಯಾತ್ರೆಯ ಅನುಭವಗಳು ಸಾಧನ ಸೋಫಾನ ಕೃತಿಯನ್ನು ಒಂದು ಅಮೂಲ್ಯ ಜೀವನಚರಿತ್ರೆಯಾಗಿಸಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಬ್ಬೂರುಕಮ್ಮೆ ಸೇವಾಸಮಿತಿಯ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ ಮಾತನಾಡಿ ಒಬ್ಬ ವ್ಯಕ್ತಿ ಚಿರಂತನವಾಗಿ ನೆನಪಿನಲ್ಲಿ ಉಳಿಯುವುದು ಕೃತಿಗಳ ಮೂಲಕ ಮಾತ್ರ. ಧರ್ಮದಲ್ಲಿ ತತ್ವ ಮುಖ್ಯವಲ್ಲ, ಅದರ ಪ್ರಯೋಗವೇ ಮುಖ್ಯ. ಪ್ರಣವಾನಂದ ತೀರ್ಥರು ಆಧ್ಯಾತ್ಮದ ಜೊತೆಗೆ ಸಾರ್ಥಕ ಜೀವನದ ಮೌಲ್ಯಗಳನ್ನು ದಾಖಲಿಸುವ ಮೂಲಕ ಜ್ಞಾನ ಸಂಹಿತೆಯನ್ನೇ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ನಾಗಮಂಗಲ ಸಂಸ್ಕೃತ ವಿದ್ವಾಂಸ ಭಾಸ್ಕರ ಭಟ್ ಮಾತನಾಡಿದರು. ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಟಿ.ಎನ್.ರವಿಶಂಕರ್,ಎಸ್.ಎಂ.ನಾಗರತ್ನಮ್ಮ ಇತರರು ಭಾಗವಹಿಸಿದ್ದರು. ಉಷಾ ಶ್ರೀನಿವಾಸ್ ಸ್ವಾಗತಿಸಿದರು.

ಟಿ.ವಿ.ರಂಗನಾಥ್ ವಂದಿಸಿದರು.ರಂಗನಾಥ್ ಕಟ್ಟಾಯ ನಿರೂಪಿಸಿದರು.

ಸಿದ್ದರಾಮಯ್ಯ ವಿಭಿನ್ನ ಮುಖ್ಯಮಂತ್ರಿ: ಜಾಫೆಟ್

ತುಮಕೂರು: ನಲವತ್ತು ವರ್ಷಗಳ ಸುಧೀರ್ಘ ರಾಜಕಾರಣದ ಅವಧಿಯಲ್ಲಿ ಹಿಂದಿನ ಮುಖ್ಯಮಂತ್ರಿ ಗಳಿಗೆ ಹೋಲಿಕೆ‌ ಮಾಡಿದರೆ ಸಿದ್ದರಾಮಯ್ಯ ಅವರು ವಿಭಿನ್ನ ಮುಖ್ಯಮಂತ್ರಿ ಎಂದು ಬೆಂಗಳೂರು ವಿ.ವಿ‌. ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್ ತಿಳಿಸಿದರು.

ತುಮಕೂರು ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅವರ ಆಡಳಿತ, ಚಿಂತನೆ, ಕಾರ್ಯಕ್ರಮಗಳನ್ನು ನೋಡಿದರೆ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಬಹುದು. ಅರಸು ಪರಂಪರೆಯನ್ನು ಅನುಸರಿಸುತ್ತಾ ಬಂದಿದ್ದರೂ ಸಿದ್ದರಾಮಯ್ಯ ರಾಜಕಾರಣ ಭಿನ್ನ ಎಂದರು.

ಅವರು ನಡೆದು ಬಂದ ದಾರಿ, ಓದು, ಸಾಮಾಜಿಕ ಹಿನ್ನೆಲೆ, ಸಿದ್ಧಾಂತ, ಒಡನಾಟ, ಅಂದಿನ ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಎರಡು ಪ್ರಬಲ ಜಾತಿಗಳು ಇಂದು ರಾಜ್ಯ ರಾಜಕಾರಣವನ್ನು‌ ನಿಯಂತ್ರಣ ಮಾಡುತ್ತಿವೆ. ಸಿದ್ದರಾಮಯ್ಯ ರ ರಾಜಕಾರಣವನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕರ್ನಾಟಕ ಪರಂಪರೆ ಸಾಂಸ್ಕೃತಿಕ ಪರಂಪರೆ ಬಹಳ ಪ್ರಗತಿಪರವಾದದ್ದು. ಸಿದ್ಧಾಂತದ ರಾಜಕಾರಣ ಬದ್ದತೆ ಮತ್ತು ಶುದ್ಧವಾದ ರಾಜಕಾರಣ ಎಂದು ವಿಶ್ಲೇಷಿದರು.

ದೇವರಾಜ ಅರಸು ಜಾತಿಗಳನ್ನು ಸಂಘಟಿಸಿ ರಾಜಕೀಯ ಮಾಡಿದರೆ. ಎರಡು ಪ್ರಬಲ ಜಾತಿಗಳನ್ನು ದೂರ ಇಡಬೇಕಾದರೆ ಜಾತಿ ರಾಜಕಾರಣ ಅನಿವಾರ್ಯ. ಆದರೆ ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡಿದವರಲ್ಲ ಎಂದು ತಿಳಿಸಿದರು.

ಯಾರು ಜಾತಿ ಕಾರಣಕ್ಕೆ ಹಿಂದುಳಿದಿದ್ದಾರೆ, ವಂಚಿತರಾಗಿದ್ದಾರೆ ಅವರ ಸಮಸ್ಯೆಗಳನ್ನು ಬಗೆಹರಿಸಲು‌ ಹೋರಾಡಿದ್ದಾರೆ. ಸಿದ್ದರಾಮಯ್ಯ ಪರಂಪರೆಯನ್ನು ಉಳಿಸಿಕೊಂಡು ಒಳ್ಳೆಯ ರಾಜಕಾರಣ ಮಾಡಿದವರು. ಅವರ ಲೋಕದೃಷ್ಠಿ, ಗಾಂಧೀಜಿ, ಲೋಹಿಯಾ, ಕುವೆಂಪು, ಅನಂತ ಮೂರ್ತಿ, ತೇಜಸ್ವಿ, ಲಂಕೇಶ್, ದೇವನೂರು‌ ಮಹಾದೇವ ಅವರ ಒಡನಾಟ‌ ಇಟ್ಟುಕೊಂಡಿದ್ದಂತವರು ಎಂದರು.

ಕಟ್ಟಕಡೆಯ ಮನುಷ್ಯರಿಗೂ ಅವರ ದೃಷ್ಠಿಯ ಕ್ರಮವಿದೆ. ಕುರುಬ ಎಸ್‌ಟಿ ಮೀಸಲಾತಿ ಕೇಳಿದಾಗ ಇತರ ಜಾತಿಗಳ ಪರವಾಗಿ ಸಿದ್ದರಾಮಯ್ಯ ನವರು ಮಾತನಾಡುತ್ತಾರೆ. ಕುರುಬ ಜಾತಿಗಿಂತಲೂ ಹಿಂದುಳಿದ ಜಾತಿಗಳಿದ್ದಾವೆ. ಅವರಿಗೆ ಪ್ರಾತಿನಿಧ್ಯ ದೊರೆಯಬೇಕು ಎಂದು ಹೇಳಿದ್ದರು. ಇದರಿಂದ ಅವರೆಂಥ ಜಾತ್ಯಾತೀತವಾದಿ ಎಂಬುದು‌ ನಮಗೆ ತಿಳಿಯುತ್ತದೆ ಎಂದರು.

ಮುಖ್ಯಂತ್ರಿಯಾಗಿರುವಾಗ
ರಾತ್ರಿ ಹತ್ತು ಹನ್ನೊಂದು ಗಂಟೆಯವರೆಗೆ ಇರುತ್ತಿದ್ದರು. ಬಜೆಟ್ ತಯಾರಿಸುವ ತಯಾರಿಗೆ ಶ್ರಮಹಿಸಿದ್ದರು.
ಬಹಳ ಗಂಭೀರವಾಗಿ ಬಡ್ಜೆಟ್ ಗಳನ್ನು‌ ನೋಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುಗುಣವಾಗಿ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದರು.

ಅಲೆ ಮಾರಿ ಮತ್ತು ಅಲೆಮಾರಿ ಜನಾಂಗ ಮತ್ತು ಮಹಿಳಾ ಕೃಷಿಕರನ್ನು ಪ್ರಸ್ತಾಪ ಮಾಡುತ್ತಾರೆ. ಶೇ೫೦ರಷ್ಟು ಮಹಿಳಾ ಕೃಷಿಕರು ಕರ್ನಾಟಕದಲ್ಲಿದ್ದಾರೆ. ಅವರನ್ನು ಗುರುತಿಸಿ ಬಜೆಟ್ ನಲ್ಲಿ ಪ್ರಸ್ತಾಪ ಮಾಡುತ್ತಾರೆ ಎಂದರು.

ಯಾರು ಇಲ್ಲೀವರಗೆ ಅಲಕ್ಷ್ಯಕ್ಕೆ ಒಳಗಾಗಿದ್ದಾರೆ ಅವರಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ.ಅವರ ಉಡುಗೆ ತೊಡುಗೆ ನೋಡಿದರೆ ನಗರ ವಿರೋಧಿ ಎನ್ನುವಂತಿರುತ್ತಾರೆ. ಸಮಾಜದಲ್ಲಿ ಇರುವ ದರ್ಬಲರಿಗೆ ಹೆಚ್ಚು ಒತ್ತು ನೀಡಿದ್ದಾರೆ‌ ಎಂದರು.

ಜಾತಿ ಸಮುದಾಯಗಳನ್ನು ಮೀರಿ ರಾಜಕಾರಣವನ್ನು ಮೀರಿ‌ಕೊಟ್ಟರೂ.. ಸಿದ್ದರಾಮಯ್ಯ ರನ್ನು‌ ಮಾಧ್ಯಮಗಳು ಸೇರಿದಂತೆ ಪಟ್ಟಭದ್ರರು ಒಂದು ಜಾತಿಗೆ ಮಾತ್ರ ಸೀಮಿತ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇವರಾಜ ಅರಸು ಅಧಿಕಾರ ಕಳೆಸುಕೊಂಡಾಗ ಆಟೋದಲ್ಲಿ ಹೋಗಿದ್ದನ್ನು ನಾನು ನೋಡಿದ್ದೇನೆ. ಇಂಥ ಸರಳ ವ್ಯಕ್ತಿಗಳ ನಡೆವೆ ನಾವಿದ್ದೇವೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.

ಸಿದ್ದರಾಮಯ್ಯ ಸಮೂಹದ ನಾಯಕ: ಬೂದಾಳ್

Publicstory


ತುಮಕೂರು: ಒಬ್ಬಸಾಮಾನ್ಯ ವಿವೇಕಿ ಮನುಷ್ಯನಿಗಿರಬೇಕಾದ ನಿಲುವು.
ಸಮೂಹದ ಜೊತೆ ನಿಂತು ಕೆಲಸ ಮಾಡುವ ವ್ಯಕ್ತಿ ಸಿದ್ದರಾಮಯ್ಯ ಎಂದು ಸಾಹಿತಿ ಬೂದಾಳ್ ನಟರಾಜ್ ಬಣ್ಣಿಸಿದರು.

ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ

ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕೀಯ ಸಂವಿಧಾನ ನಮ್ಮ ಬದುಕಿನ ಸಂವಿಧಾನವಾಗಿದೆಯೇ? ಅಲ್ಪಸ್ವಲ್ಪ. ಅಥವಾ
ಸಾಂಸ್ಕೃತಿಕ ಸಂವಿಧಾನವೋ ಬಲಶಾಲಿ ಎಂಬುದು ಎಲ್ಲ‌ಪಕ್ಷಗಳಿಗೂ ದ್ವಂದ್ವ. ಇವುಗಳಿಗೆ ಒಂದು ಸೈದ್ಧಾಂತಿಕ ಆಕರವನ್ನು ಕಟ್ಟಿಕೊಳ್ಳಲು ಆಗಿಲ್ಲ ಎಂದರು.

ಬಿಜೆಪಿಯೇತರ ನಿಲುವುಗಳನ್ನು ಸೇರಿಸಿಕೊಂಡು ನೋಡಿದರೆ..
ಧಾರ್ಮಿಕತೆ ನಿರ್ವಹಿಸುವಂತಹ ಸೈದ್ಧಾಂತಿಕ ನಿಲುಗಳನ್ನು ರೂಡಿಸಿಕೊಂಡಿದ್ದಾವ ಎಂಬ ಅನುಮಾನಗಳು ಕಾಡುತ್ತಿವೆ ಎಂದರು.

ಎಲ್ಲ ವಿಶ್ವ ವಿದ್ಯಾಲಯ ಗಳ ಸಿಂಡಿಕೇಟ್ ಇತ್ಯದಿ ವಿಸರ್ಜಿಸುವ ಕೆಲಸಕ್ಕೆ ಕೈ ಹಾಕಿದರು ಯಡಿಯೂರಪ್ಪ. ಅದು ಸ್ವತಃ ಅವರಿಗೂ ಗೊತ್ತಿಲ್ಲ. ಒಂದು ರಾಜ್ಯದದಲ್ಲಿ ಸರ್ಕಾರವನ್ನು ದಕ್ಕಿಸಿಕೊಳ್ಳುವುದಕ್ಕೆ ಯಾವ ಸಂವಿಧಾನವನ್ನು ಮೊದಲು ದಕ್ಕಿಸಿಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ನವರಿಗೆ ಇದು ತಿಳಿದಿಲ್ಲ ಎಂದು ವಿಶ್ಲೇಷಿಸಿದರು.

ಒಂದು ಸಾವಿರ ವರ್ಷದ, ಹತ್ತನೇ ಶತಮಾನದಿಂದ ಇರುವ ಸಾಹಿತ್ಯ ಮತ್ಯು ಕನ್ನಡದ ಬದುಕು‌ ಎಂದರೆ ಜೈನ ಮತ್ತು ಬ್ರಾಹ್ಮಣ, ವೈದಿಕ, ವೀರ ಶೈವರದೇ ಸಾಹಿತ್ಯ ಓದುತ್ತಾ ಬಂದಿದ್ದೇವೆ.. ಇನ್ನುಳಿದ ಇತರ ಜಾತಿ ಜನಾಂಗದವರು ಸಾಹಿತ್ಯ ಬರೆದೇ‌ ಇಲ್ಲವಾ?

ದುಷ್ಟ ಸಮೀಕರಣಗಳ‌ನಡುವೆ ನಟ್ಟ ನಡುವೆ‌ ನಿಂತಿದ್ದೇವೆ.
ಭಾರತ ಎಂದರೆ ವೈದಿಕ ಹಿಂದೂ ದೇಶ. ವೈದಿಕ ಹಿಂದೂ ಧರ್ಮ ಆಚರಣೆಗಳು. ಹಿಂದೂ ಧರ್ಮಕ್ಕೆ ಚದಯುತಿ ಬದರುವುದು‌ ಮಾಂಸ ತಿನ್ನುವ ಜನಾಂಗಗಳಿಂದ ಎಂಬುದಕ್ಕೆ ನಾವು ಒಪ್ಪಿಕೆ ಕೊಟ್ಟಿದ್ದೇವೆ. ಶೂದ್ರ ಹಿಂದೂ ಧರ್ಮ ಮತ್ತೊಂದು ಕವಲು ಎಂಬುದೊಂದು ಇದೆ ಎಂಬುದು ನಮಗೆ ತಿಳಿಯಲೇ ಇಲ್ಲ ಎಂದರು.

ಕೊರಚ, ಮಡಿವಾಳ, ಒಕ್ಕಲಿಗ ಇತ್ಯಾದಿ ಸಾಹಿತ್ಯದ ಪಟ್ಟಿಯನ್ನು ಒಳಗೆ ಬಿಟ್ಟಿಲ್ಲ. ಅತಿ ಹೆಚ್ಚು ಸಾಹಿಥ್ಯ ಬರೆಸಿರುವುದು ಇವರೇ.. ಆದರೆ ಇವರ ಸಾಹಿತ್ಯವನ್ನು ಹೊರಗಿರಿಸಲಾಗಿದೆ ಎಂದು ಆರೋಪಿಸಿದರು.

ಇವರನ್ನೆಲ್ಲ ಒಳಗೆ ಕರೆದದ್ದು ಸಿದ್ದರಾಮಯ್ಯ ನವರು. ನಾವು ಕೆಳ ಜಾತಿ ಎಂದು ಗುರುತಿಸುವ ಜನಾಂಗವನ್ನು ಮಾತ್ರ ಹೊರಗೆ ನಿಲ್ಲಿಸಿದ್ದಾರೆ ಎಂದುಕೊಂಡಿದ್ದೇವೆ. ಆದರೆ ಸಾಹಿತ್ಯವನ್ನೂ ಹೊರಗಡೆ ನಿಲ್ಲಿಸಲಾಗಿದೆ ಎಂದರು.

ಭಾರತ ಸಾವಿರಾರು ವರ್ಷಗಳ ವಸಾಹತು. ಸಾಂಸ್ಕೃತಿಕ ಸ್ವಾತಂತ್ರ್ಯ ಬಹಳ ದೂರದ ಮಾತು. ನಮ್ಮೆಲ್ಲರ ತಲೆಯ ಮೇಲೆ ವಾಮನ ಪಾದ ಇದೆ. ಅದನ್ನೇ ಸಂಭ್ರಮಿಸುತ್ತ.

ಆದರೆ ನಮ್ಮ‌ಕಾಲ ಕೆಳಗೆ ಮತ್ತೊಂದು ತಲೆ ಇದೆ. ಇದನ್ನು ಬಿಜೆಪಿಗೆ ನಿರ್ವಹಿಸುವುದು ಸುಲಭ ಎಂದು ಹೇಳಿದರು.

ರಾಜಕೀಯ ಸೈದ್ಧಾಂತಿಕ ನಿಲುವು ನಿರ್ಮಿಸುವುದಕ್ಕೆ. ಒಬ್ಬ‌ಮುಖ್ಯ ಮಂತ್ರಿಗೆ ಏನು ತಿಂದು ಬಂದಿದ್ದೀಯ ಎಂದು ಕೇಳುತ್ತಾರೆ. ರಾಜ್ಯದ ಮುಖ್ಯ ಮಂತ್ರಿಗೆ ಕೆಳುತ್ತಾರೆ ಆದರೆ. ಇನ್ನುಳಿದವರಿಗೆ.
ಈ ಸಾಂಸ್ಕೃತಿಕ ವಸಾಹತು ಅಪಾಯ ಎಂದು ವಿಶ್ಲೇಷಿದರು.

ಶೂದ್ರಧರ್ಮದ ಎಲ್ಲ ಲಕ್ಷಣಗಳನ್ನು ಅಪಹರಿಸುತ್ತಾರೆ. ಅವಮಾನ, ತನ್ನ ವಶಕ್ಕೆ ಅಪರಿಸಲಾಗಿದೆ. ಹೆಸರಿಡುವುದರಿಂದ. ಲೋಕದ ಪ್ರತಿನಿತ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಪಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರಿಗೂ ಸಾಂಸ್ಕೃತಿಕ ರಾಜಕಾರಣ ಆವರಿಸುತ್ತದೆ. ಕಚೇರಿ ಪೂಜೆ, ಬಾವುಟಗಳು..
ಬಟ್ಟೆ ಬಣ್ಣವು ಎಲ್ಲರ ಮೆದುಳನ್ನು ತನ್ನ ನಿಯಂತ್ರಣಕ್ಕೆ ತಗೆಸುಕೊಳ್ಳುತ್ತದೆ.
ಆದ್ದರಿಂದ ಬಾವುಟದ ಮೇಲೆ ನಮ್ಮ ದೇವರ ಚಿತ್ರ. ನಮ್ಮ ದೇವರುಗಳ ಚಿತ್ರವನ್ನು ಹಾಕಲಾಗಿದೆ. ಸಾಂಸ್ಕೃತಿಕ ಅವಹರಣ ಮಾಡಲಾಗಿದೆ ಎಂದು ವಿಶ್ಲೇಷಿದರು.

ಬಹುತ್ವ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಅಂಶಗಳ ಮೇಲೆ‌ ಪ್ರಜಾಪ್ರಭುತ್ವ ನಿಂತಿದೆ. ಅಂಬೇಡ್ಕರ್ ಅವರು ಎರಡು ಸಂವಿಧಾನಗಳನ್ನು ಕೊಟ್ಟಿದ್ದಾರೆ ಎಂದರು.

ಭಾರತೀಯರು ಬಹಳ ಸಂಮೃದ್ಧವಾಗಿ ಬಹುತ್ವದ ಮೂಲಕ ಬದುಕುತ್ತಿದ್ದಾರೆ. ಅದನ್ನು‌ ಮುಂದುವರಿಯಲು ಬಿಡುತ್ತಿಲ್ಲ ಎಂದು ತಿಳಿಸಿದರು.

ಭಾರತದ ಎಲ್ಲರ ಮೆದುಲಿಗೆ ಅನಸ್ಥೇಶಿಯ. ದಿನಾ ಹೊಸ ಸಂಗತಿಗಳು ಚರ್ಚೆಗೆ ಬರುತ್ತಿವೆ..
ನಮಗೆ ಮರೆವು ಸಹಜ ಅದನ್ನು ಎಚ್ಚರಿಸಿಕೊಳ್ಳಬಹುದು ಆದರೆ. ಉದ್ದೇಶ ಪೂರ್ವಕ ಅನಸ್ತೇಶಿಯವನ್ನು ಎಚ್ಚರಿಸಿಕೊಳ್ಳುವುದು ಕಷ್ಟ ಎಂದು ಹೇಳಿದರು.

ಅದಕ್ಕಾಗಿಯೇ ಸಿದ್ದರಾಮಯ್ಯ ನವರು ತಮ್ಮ ಊರಿನಲ್ಲಿ ನಿರ್ಮಾಣ ವಾಗುತ್ತಿರುವ ರಾಮದೇವರಿಗೆ ದೇಣಿಗೆ ಕೊಟ್ಟರು. ಅಯೋಧ್ಯೆಗಲ್ಲ ಎಂದು ವಿವರಿಸಿದರು.

ನಮಗೇ ನಮ್ಮದೇ ಅಸ್ಮಿತಿ ಮತ್ತು ಆಕರವಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ ಉತ್ತರದ ಧಾರ್ಮಿಕ ಯಜಮಾನಿಕೆಯನ್ನು ದಕ್ಷಿಣ ಸ ಮೇಲೆ ಹೇರಲಾಗಿದೆ.

ಯಾರು ಸಾಂಸ್ಕೃತಿಕ ರಾಜಕಾರಣ ವನ್ನು ನಿರ್ವಹಿಸುತ್ತಾರೆ ಅವರಿಗೇ ಅಧಿಕಾರ ನಿರ್ವಹಣೆ ಅಇಗುತ್ತದೆ. ಹಾಗಾಗಿ ಸಾಂಸ್ಕೃತಿಕ ಯಜಮಾನಿಕೆ ಯಾರದ್ದೋ ಅವರದ್ದು ಅಧಿಕಾರ‌ ಎಂದು ವಿಶ್ಲೇಷಿದರು.

ಯಾವುದೋ ಮಸೀದಿಯಲ್ಲಿ ಕಲ್ಲು ಸಿಕ್ಕರೆ ಇಲ್ಲಿನ ಉಡುಪಿ ಮಠ ಎಚ್ಚರವಾಗುತ್ತದೆ. ಇಡೀ ವಿಶ್ವದ ಎದುರಿಗೆ ಎರಡು ಅವಕಾಶಗಳಿದೆ. ಒಂದು ಫ್ಯಾಸಿಸ್ಟ್ ಮತ್ತು ಲಿಬರಲಿಸ್ಟ್. ಫ್ಯಾಸಿಸ್ಟರು ಮಾನ, ನಾಚಿಕೆ ಎಲ್ಲವನ್ನೂ ಬಿಟ್ಟಿದ್ದಾರೆ. ಅಂತ ಲಿಬರಿಸ್ಟರು ಬಹಳ ದೊಡ್ಡವರು. ಹನ್ನೆರಡನೆಯ ಶತಮಾನದ ಸಲ್ಲಿ ಚಳುವಳಿವಳಿ ಕಟ್ಟಿದರು ಎಂದರು.

ವಿಶ್ವವೆಲ್ಲ ಒಂದೇ ಧರ್ಮ, ಗ್ರಾಮ ಇತ್ಯಾದಿ ಗಳನ್ನು ಒಂದೇ ಎಂದು ಹೇಳಲಾಗುತ್ತಿದೆ.
ಒಂದೇ ದೈವದ ಕಲ್ಪನೆ ಇದ್ದರೂ ದೇವರು ಯಾರದ್ದು ಎಂದರೆ ನಂದು ಎಂದು ಮುಂದೆ ಬರುತ್ತಾರೆ.

ಒಂದು ಧಾರ್ಮಿಕ ಸಂವಿಧಾನವನ್ನು ನಿರ್ವಹಿಸದಿರುವ ಯಾವ ಪಕ್ಷಕ್ಕೂ ಉಳಿಗಾಲವಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ. ಧಾರ್ಮಿಕ ಸಂವಿಧಾನವನ್ನು ದಕ್ಕಿಸಿಕೊಂಡರೆ ರಾಜಕೀಯ ಸಂವಿಧಾನ ಉಳಿಯುತ್ತದೆ ಎಂದು‌ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.

ಕಿರಿಕ್ ಪಾರ್ಟಿಗಳೊಂದಿಗೆ ವ್ಯವಹರಿಸೋದ್ ಹೇಗೆ ?

0
  • ಪುಲಿ ಮಂಜುನಾಥಜೋಗಿ

ಹಿಂದೊಮ್ಮೆ ಬಹುಷಃ 1997-98 ರಲ್ಲಿ ನಾನು ಬೆಂಗಳೂರು ವಿಶ್ವ ವಿದ್ಯಾಲಯಲ್ಲಿ ರಾಜ್ಯಶಾಸ್ತ್ರ ಸ್ನಾತಕ್ಕೋತ್ತರ ಪದವಿಯನ್ನ ಓದುತ್ತಿರುವ ಸಂದರ್ಭದಲ್ಲಿ ಮೆಜೆಸ್ಟಿಕ್ನಿಂದ ಕೆಂಗೇರಿಯ ಬೆಂಗಳೂರು ಜ್ಞಾನ ಭಾರತೀ ವಿ.ವಿ.ಯ ಕಡೆ ಸಂಪೂರ್ಣ ಭರ್ತಿ ಆಗಿದ್ದ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ.ನನ್ನ ಪಕ್ಕದ ಸೀಟಿನಲ್ಲಿ ಕೈತುಂಬಾ ಬ್ಯಾಗುಗಳ ಸಮೇತ ಬಂದ ಮಹಿಳೆ ಕುಳಿತರು.

ಆಕೆಯ ಬ್ಯಾಗುಗಳ ಕಾರಣದಿಂದ ನನಗಲ್ಲಿ ಕುಳಿತುಕೊಳ್ಳಲು ಸ್ವಲ್ಪಕಷ್ಟವೇ ಆಯಿತು.ಆಗ ನನ್ನ ಅವಸ್ಥೆ ನೋಡಿದ ಸಹ ಪ್ರಯಾಣಿಕನೊಬ್ಬಾತ ಹತ್ತಿರ ಬಂದು:”ನೀವೇಕೆ ಸುಮ್ಮನೆ ಇದ್ದೀರೀ?ಆಕೆಗೆ ಬ್ಯಾಗು
ಗಳನ್ನ ಕೆಳಗಿಡಲು ಯಾಕೆ ಹೇಳುತ್ತಿಲ್ಲ?”ಅಂದ.

ಮುಗುಳ್ನಗುತ್ತಾ ಹೇಳಿದೆ:-
“ಇಷ್ಟು ಚಿಕ್ಕ ವಿಷಯಕ್ಕೆ ನಾನೇಕೆ ಪ್ರಾಧಾನ್ಯತೆ ಕೊಡಬೇಕು?ಆಕೆ ಜೊತೆ ಚರ್ಚಿಸಬೇಕು?ನಂತರ ಜಗಳ,ಆನಂತರ ಕೋಪ,
ಆಮೇಲೆ ದ್ವೇಷ?ವಿನಾ
ಕಾರಣ ಅಪರಿಚಿತರ ನಡುವೆ ಬೇಕೇ?ಕೊನೆಗೆ ತಾಳ್ಮೆ ಕಳೆದುಕೊಂಡು ನನ್ನ ಕೆಲ
ಕ್ಷಣದ ನೆಮ್ಮದಿಯನ್ನ ಏಕೆ ಹಾಳುಮಾಡಿಕೊಳ್ಳಲಿ?ನಾನು ಮುಂದಿನ ನನ್ನ ಸ್ಟಾಪಲ್ಲಿ ಇಳಿಯುತ್ತೇನೆ.

ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು “ಇನ್ನು ಸ್ವಲ್ಪ ಕಾಲ ಮಾತ್ರವಷ್ಟೇ!
ಅಲ್ಲವೇ?”ಅಂದು ಸುಮ್ಮನಾದೆ.

ಆತ್ಮೀಯರೇ…
ನಿಜವಾಗಿಯೂ ಜೀವನ
ದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಅಳವಡಿಸಿ
ಕೊಳ್ಳಲೇ ಬೇಕಾದ ಒಂದು ಸಂದೇಶವನ್ನೇ ಆ ದಿನ ನಾ ಹೇಳಿರುವುದೆಂಬುದು ಆ
ಮೇಲೆನಗೆ ಅರ್ಥವಾಗಿತ್ತು.

ನಮ್ಮ ಜೀವನದ ಪ್ರಯಾಣ ಕೂಡ ಅಪರಿಚಿತರೊಂದಿಗೆ ಕೆಲ ಕಾಲ ಮಾತ್ರ.ಅಂದರೆ ಈ ನಮ್ಮ ಜೀವನದ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರವಷ್ಟೇ.ಅಂದ
ಮೇಲೆ ವಿನಾಕಾರಣವಾಗಿ ಸಣ್ಣಪುಟ್ಟದಕ್ಕೆಲ್ಲಾ ಜಗಳ,
ವಾದ,ವಿವಾದ,ಕೋಪ,
ತಾಪ,ಅಸಹನೆ,ಸಂಘರ್ಷ,
ತಿಕ್ಕಾಟದವಶ್ಯಕತೆ ಇದೆಯ?

ನಮ್ಮೆಲ್ಲರ ಈ ಜಗದ ಮೇಲಿನ ಜೀವನ ಎಷ್ಟೊಂದು ನಶ್ವರ ಮತ್ತು ಎಷ್ಟು ಚಿಕ್ಕದ!ಲ್ಲವೇ?

ಹಾಗಾಗಿ.,ನಿಮ್ಮ ಮನವನ್ನು ಯಾರಾದರೂ,ಎಲ್ಲಾದರೂ,ಯಾವ ಸಂದರ್ಭದಲ್ಲೇ ಆದರೂ ನೋಯಿಸಿದ್ದಾರಾ?
ನಿಮ್ಮ ತಾಳ್ಮೆ ಸಹನೆಯನ್ನ ಕೆಡಿಸಿ ಕಂಗೆಡಿಸಿ ಕೋಪ ಬಂದವರನ್ನು ಕೊಲ್ಲುವಷ್ಟು ಕಾಟ ಕೊಟ್ಟು ಕಣ್ಣೆದುರಿಗೆ ಪದೇಪದೇ ಪ್ರತಿ ಕ್ಷಣ ಕಾಣಿಸ್ತಾ ಇದ್ದಾರಾ?
ಚಿಂತೆಯಿಲ್ಲ.ಅವರನ್ನು ಆ ಕ್ಷಣವೇ ಮರೆತು ಕ್ಷಮಿಸಿಬಿಟ್ಟು ಅವರಿಂದ ದೂರಾಗಿಬಿಡಿ.ಏಕೆಂದರೆ?
ಕೆಲವರೊಟ್ಟಿಗಿನ ಈ ಪ್ರಯಾಣ ಇನ್ನು ಸ್ವಲ್ಪ ಕಾಲ ಮಾತ್ರ.ನಿಮ್ಮನ್ನು ಯಾರಾದರೂ ಅವಮಾನಿಸಿದರೇ?ನಿಮಗೆ ಯಾರಾದರೂ ಮೋಸ,
ವಂಚನೆ,ಮಾಡಿದರೇ?ನಿಂದಿಸಿದರೇ?ಬೇಸರ ಮಾಡಿಕೊಳ್ಳದಿರಿ.ಈ ಒಟ್ಟಿಗಿನ ಜೀವನಯಾತ್ರೆ ಇನ್ನು ಸ್ವಲ್ಪ ಕಾಲ ಮಾತ್ರವಷ್ಟೇ.

ಹತ್ತಿರದ ಸ್ನೇಹಿತರು,ಬಂಧು
ಬಳಗ ಹಾಗು ಸಂಬಂಧಿಕ
ರಿಂದ ನೀವು ಧೂಷಣೆ,
ಆರೋಪ ಮಾಡಿ ನಿಂದಿಸಿ,
ನಿರ್ಲಕ್ಷಿಸಿ ಅವಮಾನಿಸಿ ಶಿಕ್ಷಿಸಲ್ಪಟ್ಟರೆ?ಚಿಂತಿಸಬೇಡಿ.
ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ಕಾಲ ಮಾತ್ರ ಎಂಬುದ ಮರೆಯದಿರಿ.

ಮನಸ್ಸಲ್ಲಿ ಪ್ರೀತಿ,ಸ್ನೇಹ,
ವಿಶ್ವಾಸ ನಂಬಿಕೆಯನ್ನು ಬೆಳೆಸಿಕೊಳ್ಳಿ.ಅವು ನಮಗೆಲ್ಲರಿಗೂ ಸಿಕ್ಕಿರುವ
ವಿಶೇಷ ಅಂಶಗಳಾಗಿವೆ.

ಶತ್ರುಗಳು,ದ್ವೇಷಿಸುವವರಿಗೋ ಸಿಗದವು,ಆದ್ದರಿಂದ ನಾವು ಇನ್ನುಳಿದ ಕಾಲ ಸಂತೋಷ,ಸ್ನೇಹ,
ಪರೋಪಕಾರದಿಂದಲೂ ಪರಸ್ಪರರನ್ನು ಕ್ಷಮಿಸುತ್ತಾ, ಸಹಿಸುತ್ತಾ ಮುಂದೆ ಸಾಗೋಣ.
ಕೊನೆಯದಾಗಿ…
ಹಿಂತಿರುಗಲಾಗದ,ಯಾವಾಗ,ಯಾರು,ಯಾವ,ಸ್ಟಾಪಲ್ಲಿ ಇಳಿಯುವರು!ಎಂದು ಯಾರೂ ಮುಂಚೆಯೇ ಹೇಳಲಾಗದ ಈ ಜೀವನ ಎಂಬ ಪ್ರಯಾಣವು…

“ಇನ್ನು ಸ್ವಲ್ಪ ಕಾಲ ಮಾತ್ರ”
ಎಂಬುದು ನೆನಪಿರಲಿ.



ಲೇಖಕರು ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು.

ಬಡವರ ಭವಿಷ್ಯದ ಜತೆ ಚೆಲ್ಲಾಟ ಆಡದಿರಲಿ ಸರ್ಕಾರ

ಚಂದ್ರು ಸಿ.ಜೆ, ಗೌಡನಕುಂಟೆ


ಇತ್ತೀಚಿಗೆ ನಡೆದ ಹಲವು ಪರೀಕ್ಷಾ ಹಗರಣಗಳು ಸ್ಪರ್ಧಾರ್ಥಿಗಳ ಆತ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದೆ.

ಲಕ್ಷಾಂತರ ಸ್ಪರ್ಧಾರ್ಥಿಗಳು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಊಟ, ನೀರು, ನಿದ್ದೆಯನ್ನೂ ತ್ಯಜಿಸಿ ಸಿದ್ಧತೆ ನಡೆಸಿಕೊಂಡು ಪರಿಕ್ಷೆಗಳನ್ನು ಬರೆದಿದ್ದರು.

ನಾಲ್ಕಾರು ವರ್ಷಗಳು ಶ್ರಮವಹಿಸಿ ಪಿಎಸ್ಐ ಹಾಗೂ ಉಪನ್ಯಾಸಕರ ಹುದ್ದೆಗೆ ಪರೀಕ್ಷೆ ಎದುರಿಸಿದ್ದರು. ಹಗರಣಗಳು ಬೆಳಕಿಗೆ ಬಂದಿದ್ದರಿಂದ ಪ್ರಾಮಾಣಿಕವಾಗಿ ಪಾಸಾದವರಿಗೆ ಅನ್ಯಾಯವಾಗಿದೆ.

ಬಡ ಕುಟುಂಬಗಳಿಂದ ಬಂದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದವರಿಗೆ ಯಾವುದೇ ಫಲ ಸಿಗದಂತಾಗಿದೆ.

ತಂದೆ ತಾಯಿಗಳ ಕಷ್ಟಗಳನ್ನು ನೆನೆದು ಅಭ್ಯರ್ಥಿಗಳು ಈಗ ಕಣ್ಣೀರು ಸುರಿಸುತ್ತಿದ್ದಾರೆ. ಈ ಸರ್ಕಾರದ ಆಡಳಿತ ವೈಫಲ್ಯದಿಂದ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡಲು ವಿದ್ಯಾರ್ಥಿಗಳು ಸ್ಥೈರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ದೂರದ ಊರುಗಳಿಂದ ಬೆಂಗಳೂರಿಗೆ ಬಂದು ತಮ್ಮ ಸಂಕಷ್ಟದ ಜೀವನದಲ್ಲಿಯೂ ಗ್ರಂಥಾಲಯಕ್ಕೆ ಹಣ ಕಟ್ಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದವರು ಎಷ್ಟೋ ಜನರಿದ್ದಾರೆ.

ತಯಾರಿಗೆ ಯಾವುದೇ ಕೊರತೆ ಆಗದಂತೆ ತಂದೆ-ತಾಯಿಗಳು ಕೂಲಿನಾಲಿ, ಸಾಲ ಮಾಡಿ ಬೇಕಷ್ಟು ಹಣವನ್ನು ಮಕ್ಕಳಿಗೆ ಕಳಿಸುತ್ತಿರುವ ಉದಾಹರಣೆಗಳು ಒಂದೆರಡಲ್ಲ.

ನನ್ನ ಮಗ ಸರ್ಕಾರಿ ಅಧಿಕಾರಿ ಆಗುತ್ತಾನೆ ಎಂಬ ಭರವಸೆಯಲ್ಲಿದ್ದಾಗ ಈ ರೀತಿ ಹಗರಣಗಳಿಂದ ಮಕ್ಕಳ ಭವಿಷ್ಯ ಮುಗ್ಗಾಗಿರುವ ವಿಚಾರ ಹೆತ್ತವರಿಗೆ ತಿಳಿದಾಗ ಸಂಕಟವನ್ನು ತರದೆ ಇರಲಾರದು.

ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಮನೆಯ ಸಂಸಾರವನ್ನೂ ತೂಗಿಸಿಕೊಂಡು ಕೆಲಸಕ್ಕೂ ಹೋಗಿ, ಉಳಿಕೆ ಅವಧಿಯಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿಕೊಂಡು ಪರೀಕ್ಷೆ ಬರೆದಿದ್ದರು. ಈಗ ಮತ್ತೊಮ್ಮೆ ಗ್ರಂಥಾಲಯಗಳಿಗೆ ಹಾಗೂ ಅಧ್ಯಯನ ಸಾಮಾಗ್ರಿಗಳಿಗೆ ಹಣ ವ್ಯಯಿಸುವ ಚಿಂತೆ ಕಾಡುತ್ತಿದೆ.

ಇತ್ತೀಚಿಗೆ ಬರೆದಿದ್ದ ಪರೀಕ್ಷಾರ್ಥಿಗಳು ಇದ್ದ ಕೊನೆಯ ಅವಕಾಶದಲ್ಲಿ ಉತ್ತೀರ್ಣರಾಗಿ ಉದ್ಯೋಗ ಖಾತರಿ ಪಡಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಪರೀಕ್ಷೆಗಳನ್ನು ಬರೆಯಬೇಕು.

ಅಲ್ಲದೆ, ಮುಂದೆ ಬರುವಂತಹ ಪರೀಕ್ಷೆಗಳನ್ನು ಬರೆಯಲು ತಮಗೆ ವಯಸ್ಸಿನ ಮಿತಿ ಮೀರುತ್ತಿದೆ ಎಂಬ ಆತಂಕವೂ ಅವರನ್ನು ಕಾಡುತ್ತಿದೆ.

ಸರ್ಕಾರವೇನೋ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಸ್ಪರ್ಧಾರ್ಥಿಗಳು ಪಾಡನ್ನುಯಾರು ಕೇಳುತ್ತಾರೆ? ತಮಗೆ ಒಂದು ದಿನ ಊಟವಿಲ್ಲದಿದ್ದರೂ ಪರೀಕ್ಷಾ ಸಿದ್ಧತೆಗೆ ಬೇಕಾದಂತಹ ಉಪಕರಣಗಳನ್ನು ಖರೀದಿಸುತ್ತಿದ್ದರು.

ನಾಲ್ಕೈದು ವರ್ಷಗಳಿಂದ ಮನೆ, ದುಡಿಮೆ ಎಲ್ಲವನ್ನೂ ಬಿಟ್ಟು, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವ್ಯಯಿಸಿದ ಸಮಯ ಮತ್ತು ಖರ್ಚು ವೆಚ್ಚದ ವಿಷಯ ಸರ್ಕಾರಕ್ಕೆ ತಿಳಿದಿದೆಯೇ? ಇವನ್ನೆಲ್ಲವನ್ನೂ ಯೋಚಿಸಿ ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳಬೇಕು. ಏಕೆಂದರೆ ಇದು ಯುವಜನರ ಭವಿಷ್ಯದ ಪ್ರಶ್ನೆ.

ಬಡವರ ಹೆಣ್ಣುಮಗಳಿಗೆ ಬಿಎಸ್ಸಿ ಪದವಿಯಲ್ಲಿ ಒಲಿದು ಬಂದ ಚಿನ್ನದ ಗರಿ

ಪಾವಗಡ ಪಟ್ಟಣದ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ಇಂದು ಅವರಿಗೆ ಹೆಲ್ಪ್ ಸೋಸೈಟಿ, ರೋಟರಿ ಸಂಸ್ಥೆ, ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇಂದು ಪಾವಗಡ ಪಟ್ಟಣದ ಬ್ರೈಟ್ ಫ್ಯೂಚರ್ ಸಭಾಂಗಣದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷರಾದ ಕಮಲ್ ಬಾಬು ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಉತ್ತಮವಾದಂತಹ ಗುರಿಯನ್ನು ಸಾಧಿಸುವಂತಾಗಬೇಕೆಂದು ಮತ್ತು ನೆರೆದಿದ್ದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕ ಮಾತುಗಳನ್ನಾಡಿದ್ದಾರೆ .

ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಶನಿಮಹಾತ್ಮ ಕಾರ್ಯನಿರ್ವಾಹಕ ಸಂಘದ ಅಧ್ಯಕ್ಷರಾದ ಕೆ ವಿ ಶ್ರೀನಿವಾಸ್ ಅವರು ಭಾಗವಹಿಸಿ ಮಾತನಾಡಿದರು ಪಾವಗಡ ತಾಲೂಕಿಗೆ ಚಿನ್ನದ ಪದಕವನ್ನು ತಂದುಕೊಟ್ಟಂತಹ ವನಜ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಎಸ್ ಎಸ್ ಕೆ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ನಮ್ಮ ಕಾಲೇಜಿನ ಸಿಬ್ಬಂದಿ ವನಜ ಅವರಿಗೆ ಅತ್ಯುತ್ತಮ ಸಹಕಾರ ನೀಡಿದ್ದರು ಜೊತೆಗೆ ಅವರಿಗೆ ಬೇಕಿಇರುವಂತಹ ಸೌಲಭ್ಯಗಳನ್ನು ಸಹ ಒದಗಿಸಿ ಕೊಟ್ಟಿದ್ದರು ಇದು ನಮ್ಮ ಕಾಲೇಜು ಹಾಗೂ ನಮ್ಮ ಪಾವಗಡದ ಪಾಲಿಕೆಗೂ ಒಂದು ರೀತಿಯಾದಂತಹ ಖುಷಿ ತಂದುಕೊಟ್ಟಿದೆ ಎಂದು ಅವರು ಇದೇ ವೇಳೆ ಕೊಂಡಾಡಿದರು

ಇನ್ನು ಇದೇ ವೇಳೆ ಮಾತನಾಡಿದ ರೋಟರಿ ಸಂಸ್ಥೆಯಅಧ್ಯಕ್ಷರು ಮತ್ತು ಬ್ರೈಟ್ ಫ್ಯೂಚರ್ ನ ವ್ಯವಸ್ಥಾಪಕರಾದ ಶ್ರೀಧರ್ ಗುಪ್ತಾ ಅವರು ನಕ್ಷತ್ರದಲ್ಲಿ ಹಲವು ನಕ್ಷತ್ರಗಳು ಇರುತ್ತವೆ ಅದರಲ್ಲಿ ಮಿನುಗುವ ನಕ್ಷತ್ರ ಮಾತ್ರ ಧ್ರುವತಾರೆ ಎಂದು ಅವರು ಬಣ್ಣಿಸಿದ್ದಾರೆ ಜೊತೆಗೆ ಅವರಿಗೆ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಉಚಿತವಾಗಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ .

ಇನ್ನು ಇವನು ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಧರ್ ಗುಪ್ತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಾರಪ್ಪ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಅನಿಲ್ ಕುಮಾರ್ ರೋಷ್ನಿ ಚಂದ್ರಕಲಾ ಶಿವಣ್ಣ ಸಂದ್ಯಾ ಹಾಗೂ ಇದೇ ವೇಳೆ ಬ್ರೈಟ್ ಫ್ಯೂಚರ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು .