Saturday, December 6, 2025
Google search engine
Home Blog Page 14

ಸೌಹಾರ್ದ ಪರಂಪರೆಯ ಅಪರೂಪದ ಮಾದರಿಗಳು…

0

ಚಿಕ್ಕನಾಯಕನಹಳ್ಳಿಯು ಅವಧೂತ, ಸೂಫಿ ಪಂಥದ ತವರೂರು ಎನ್ನಬಹುದು. ಇಲ್ಲಿಯ ಬಾಬಯ್ಯ ಸೌಹಾರ್ಧ, ಸೂಫಿ ಪರಂಪರೆಗೆ ನಾಡಿಗೆ ಅಗ್ರ ಪಂಕ್ತಿ ಹಾಕಿಕೊಟ್ಟವರು. ಈ ಸೌಹಾರ್ಧತೆ ಉಳಿಸಲು ಇಲ್ಲಿನ ಜನರು ಈಗಲೂ ಟೊಂಕಕಟ್ಟಿ ನಿಂತಿರುವುದನ್ನು ಸಂಚಲನ ಅವರು.

ಚಿಕ್ಕನಾಯಕನಹಳ್ಳಿ : ನಾಡಿನುದ್ದಕ್ಕೂ ಹಾಸುಹೊಕ್ಕಾಗಿರುವ ಹತ್ತಾರು ಬಗೆಯ ಸೌಹಾರ್ದ ಪರಂಪರೆಗಳು ಈಗಲೂ ರೂಢಿಯಲ್ಲಿರುವುದು ಕೆಲವು ವಿಶೇಷ ಸಂದರ್ಭಗಳಲ್ಲಿ ಕಾಣಸಿಗುತ್ತದೆ.

ಆದಿಯಿಂದಲೂ ವಿಶ್ವಬಂಧುತ್ವದ ಕಳಕಳಿಯಿರುವ ಭಾರತೀಯ ಸಮಾಜದ ಬಹುಮುಖ್ಯ ಆಶಯಗಳನ್ನೇ ಇಂಥ ಸೌಹಾರ್ದ ಪರಂಪರೆಗಳು ಪ್ರತಿಧ್ವನಿಸುತ್ತಿವೆ. ಇಂಥ ಆಶಯ‌ದ ಅಪರೂಪದ ಎರಡು ಎರಡು ಮಾದರಿಗಳು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿವೆ.

ಪಟ್ಟಣದ ಹಿರಿಯ ನಿವಾಸಿಗಳಾದ ಶ್ರೀ ‌ಸಿ ಎಸ್ ದೊಡ್ಡಯ್ಯನವರು ಮತ್ತು ದಿವಂಗತ ‌ಕೆ. ರಾಮಯ್ಯರ ಧರ್ಮಪತ್ನಿ ದುರ್ಗಮ್ಮಜ್ಜಿಯವರು ಊರಿನ ಸೌಹಾರ್ದ ಪರಂಪರೆಗೆ ಕಾಣ್ಕೆ ನೀಡುತ್ತಿರುವ ಶಾಂತಿಪ್ರಿಯರು.

ಶ್ರೀ ಸಿ ಎಸ್ ದೊಡ್ಡಯ್ಯ ::
ಪಟ್ಟಣದ ಕೆ‌ ಆರ್ ಮಾರುಕಟ್ಟೆ ಬಳಿ ವಾಸವಿರುವ ಶ್ರೀ ಸಿ ಎಸ್ ದೊಡ್ಡಯ್ಯನವರು ಮಾನವೀಯ ಹಿರಿತನದ ಅನುಭಾವಿ ಜೀವ. ಇವರು ಫ್ಲೋರ್’ಮಿಲ್ ನಡೆಸುತ್ತಾ, ಟೆಂಟು-ಶಾಮಿಯಾನ ಸೇವೆ ಒದಗಿಸುತ್ತಾ ಬಾಳಿ ಬದುಕಿದವರು. ಭಾವೈಕ್ಯತೆ-ಸೌಹಾರ್ದತೆಗೆ ಇವರು ಹೆಸರುವಾಸಿ.

ರಂಜ಼ಾನ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ನಮಾಜ಼್-ಪ್ರಾರ್ಥನೆ ಸಲ್ಲಿಸಲು ಈದ್ಗಾ ಮೈದಾನಕ್ಕೆ ಬರುವ ಮುಸಲ್ಮಾನ ಅಣ್ಣ-ತಮ್ಮಂದಿರಿಗಾಗಿ ಪ್ರತಿವರ್ಷವೂ ತಪ್ಪದಂತೆ ನೆಲಹಾಸು ಹಾಸಿಕೊಡುವ, ಜಮಖಾನ ಒದಗಿಸಿಕೊಡುವ, ಶಾಮಿಯಾನ ಕಟ್ಟಿಕೊಡುವ ಸೇವೆಗಳನ್ನು ಉಚಿತ ಸೇವಾರ್ಥರೂಪದಲ್ಲಿ ಮಾಡುತ್ತಾ ಬಂದಿದ್ದಾರೆ.

ಇಂಥ ಈ ಸೇವಾಕಾರ್ಯವನ್ನು ಇವರು ಕಳೆದ ಐವತ್ತು ವರ್ಷಗಳಿಂದಲೂ ನಿರಂತರವಾಗಿ ನಡೆಸುತ್ತಿದ್ದಾರೆ. ಜೊತೆಗೆ ನಮಾಜ಼್ ಮಾಡುವಾಗ ಕಲ್ಮಾ, ಸೂರಾ (ಅರೇಬಿಕ್ ಶ್ಲೋಕ-ಮಂತ್ರೋಚ್ಛಾರ) ಗಳನ್ನು ಪಠಿಸಲು ಮೌಲಾನಾಗಳಿಗೆ ಅಗತ್ಯಬರುವ ಮೈಕು, ಸ್ಪೀಕರ್ರುಗಳನ್ನು ಇವರು ಉಚಿತ ಸೇವಾರ್ಥವಾಗಿ ನಿರಂತರ ಒದಗಿಸುತ್ತಾ, ಹಿಂದೂ-ಮುಸ್ಲಿಮ್ ಶಾಂತಿ-ಸೌಹಾರ್ದತೆಯ ಭಾವೈಕ್ಯತೆಗೆ ಕಾಣ್ಕೆ ನೀಡುತ್ತಿದ್ದಾರೆ.

ದುರ್ಗಮ್ಮಜ್ಜಿ ::
ದಿವಂಗತ ಕೆ ರಾಮಯ್ಯನವರ ಧರ್ಮಪತ್ನಿಯಾದ ದುರ್ಗಮ್ಮಜ್ಜಿಗೀಗ ಅರವತ್ತು ದಾಟಿದ ವಯಸ್ಸು. ಆದರೆ, ತನ್ನ ಪತಿ ನಡೆಸಿಕೊಂಡು ಬಂದ ಸೌಹಾರ್ದ ಪರಂಪರೆಯ ಸೇವೆಯನ್ನು ಇಂದಿಗೂ ಚೂರೂತಪ್ಪದೆ ನಡೆಸುತ್ತಿದ್ದಾರೆ.

ಇವರು ಹಾಗೂ ಇವರ ಮಕ್ಕಳು ಸೇರಿ ಪ್ರತಿವರ್ಷದ ರಂಜ಼ಾನ್ ಹಾಗೂ ಬಕ್ರೀದ್ ‌ಹಬ್ಬಗಳಂದು ನಮಾಜ಼್ ಸಲ್ಲಿಸಲು ಈದ್ಗಾ ಮೈದಾನಕ್ಕೆ ಬರುವ ಮುಸ್ಲಿಮ್ ಬಾಂಧವರಿಗೆ ಕುಡಿಯುವ ನೀರು ಮತ್ತು ವಜ಼ೂ (ಕೈ-ಕಾಲು ಶುದ್ಧಿ) ಮಾಡಲು ಬೇಕಾದ ನೀರನ್ನು ಪೂರೈಸುವ ಉಚಿತ ಸೇವೆಯನ್ನು ಒದಗಿಸುತ್ತಾ ಬಂದಿದ್ದಾರೆ.

ಇವರ ಪತಿಯ ಮರಣಾನಂತರವೂ ಇದನ್ನು ಮುಂದುವರಿಸಿದ ದುರ್ಗಮ್ಮಜ್ಜಿ, ಇವರ ಮಗನಾದ ಪಂಪ್’ಹೌಸ್ ಗೋವಿಂದಣ್ಣನ ಸಹಕಾರದೊಂದಿಗೆ ಕಳೆದ ಐವತ್ತು ವರ್ಷಗಳಿಂದಲೂ ನಮಾಜ಼ಿಗಳಿಗೆ ನೀರು ಒದಗಿಸುವ ಈ ಸೇವೆಯನ್ನು ನಿರಂತರ ನಡೆಸುತ್ತಲೇ ಬಂದಿದ್ದಾರೆ. ಹೀಗೆ ತಮ್ಮ ಪತಿ ಹೇಳಿಟ್ಟುಹೋದ ಸೌಹಾರ್ದತೆಯ ಪರಂಪರೆಯನ್ನು ಮುಂದುವರೆಸುವುದರ ಮೂಲಕ ದುರ್ಗಮ್ಮಜ್ಜಿ ಮಾದರಿ ಮಹಿಳೆಯಾಗಿದ್ದಾರೆ.

ಕೋಮು, ಜಾತಿ, ಧರ್ಮಗಳ ಅಕಾರಣ ನಂಜಿಗೆ ನಿತ್ಯ ಬಲಿಯಾಗುತ್ತಿರುವ ಸಮಾಜದಲ್ಲಿ ಇಂಥ ಅಪರೂಪದ ಹಿರಿಯ ಜೀವಗಳು ಇನ್ನೂ ನಮ್ಮ ನಡುವೆ ನೆಲೆ ನಿಂತಿರುವುದು ಭಾರತೀಯ ಸೌಹಾರ್ದ ಪರಂಪರೆಯ ಜೀವ-ಕಾರುಣ್ಯದ ಹೆಗ್ಗರುತುಗಳಿದ್ದಂತೆ.

__

ಬೈಕ್ ಅಪಘಾತ ; ಸ್ಥಳದಲ್ಲೇ ಯುವಕನ ಸಾವು

0

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಹುಳಿಯಾರು-ಸೀಗೇಬಾಗಿ ಬಳಿ ಶನಿವಾರ ರಾತ್ರಿ 10.00’ಗಂಟೆಯ ಆಸುಪಾಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಚರಣ್ ರಾಜ್(23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಯುವಕ ಚರಣ್ ರಾಜ್ (23) ಹಂದನಕೆರೆ ಹೋಬಳಿಯ ಮಾದಾಪುರ ತಾಂಡ್ಯ, ಮತ್ತಿಘಟ್ಟ ಅಂಚೆ’ಯ ರಾಮಚಂದ್ರಪ್ಪ ಮತ್ತು ಲಕ್ಷ್ಮೀದೇವಿ’ಯವರ ಮಗ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣಗಳು ತಿಳುದುಬಂದಿಲ್ಲ. ತನಿಖೆ ಜಾರಿಯಲ್ಲಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಣೆಹಾರ್ ಅರಣ್ಯ: ಜೆಸಿಬಿ ತಡೆದ ಮಹಿಳೆಯರು

0

ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ದಸಂಸ ಪ್ರತಿಭಟನೆ ಮಾಡಿದ ಸುದೀರ್ಘ ವರದಿಯನ್ನು ಸಂಚಲನ ಅವರು ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ, ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ನೆಹರೂ ಸರ್ಕಲ್’ನಿಂದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ವರೆಗೆ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು.

ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28’ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ದಸಂಸ ಮುಖಂಡರು ತಾಲ್ಲೂಕು ಆಡಳಿತ ಸೌಧದ ತಲಬಾಗಿಲಲ್ಲಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ, ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

ಘಟನೆ ಹಿನ್ನೆಲೆ :
ಆಶ್ರಿಹಾಲ್ ಸರ್ವೆ ನಂಬರ್ 30’ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28’ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು 2 ರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿ’ಯಲ್ಲಿನ ಸರ್ವೆ ನಂಬರ್ 7 ರಲ್ಲಿ 1 ಒಂದೂವರೆ ಎಕರೆ, ಸರ್ವೆ ನಂಬರ್ 8 ರಲ್ಲಿ 2 ರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9 ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರ್ಯಾಂಟೆಡ್ ಜಮೀನಾಗಿದೆ.

ಈ ಸರ್ವೆ ನಂಬರುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರುಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರುಗಳಲ್ಲಿರುವ ರೆವೆನ್ಯೂ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಲ್ಯಾಂಡೇ ಆಗಿದೆ ಎಂಬುದು ರೈತರ ವಾದವಾಗಿದೆ.

ಈ ಭಾಗದ ರೈತರು 1970’ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978’ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರಲ್ಲಿ ಮಂಜೂರಾಗಿದೆ. ಇಲ್ಲಿ ಎಪ್ಪತ್ತರ ದಶಕದಿಂದಲೂ ನಾವು ಗೆಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಈಗ್ಗೆ ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್ – ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಭತ್ತರಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು. ಈಗ ಈ ಅಧಿಕಾರಿಗಳು ಕಳೆದ ಶನಿವಾರದಂದು ಹಿಟಾಚಿ-ಜೆಸಿಬಿಗಳನ್ನು ತಂದು ಹೆದರಿಸಿ, ನಮ್ಮನ್ನು ಇಲ್ಲಿಂದ ವಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶಗೊಂಡು ಹೇಳುತ್ತಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ಬಿಂಬಿಸುತ್ತಾ, ರೈತರ ಜಮೀನುಗಳಿಗೆ ಹಿಟಾಚಿ-ಜೆಸಿಬಿ ನುಗ್ಗಿಸುತ್ತಿದ್ದಾರೆ. ಬಡ ದಲಿತ ರೈತರ ಮೇಲಿನ ಈ ದೌರ್ಜನ್ನು ಅಕ್ಷಮ್ಯವಾದುದು ಎಂದು ದಸಂಸ ತಾಲ್ಲೂಕು ಸಂಚಾಲಕ ಆನಂದ್ ಹೇಳುತ್ತಾರೆ.

ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜೊತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ ಎಂದು ಅರಣ್ಯ ಅಧಿಕಾರಿಗಳ ಕ್ರಮವನ್ನು ರೈತ ಮಂಜು ಖಂಡಿಸಿದರು.

ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ ಎಂದು ಪ್ರಶ್ನಿಸಿದ ಬೇವಿನಹಳ್ಳಿ ಚನ್ನಬಸವಯ್ಯ, ಲೋಕಸಭಾ ಚುನಾವಣಾ ನೀತಿಸಂಹಿತೆಯ ಕಾಲಾವಧಿ ಮುಗಿದ ನಂತರ ಇದುವರೆಗೂ ತಾಲ್ಲೂಕಿನಲ್ಲಿ ಬಗರ್ ಹುಕುಂ ಕಮಿಟಿಯ ಒಂದೇ ಒಂದು ಸಭೆಯನ್ನೂ ಮಾಡದಿರುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷವೆಂದರೆ, ಆಶ್ರಿಹಾಲ್-ಜಾಣೆಹಾರ್ ಭಾಗದ ಹತ್ತಾರು ರೈತ ಮಹಿಳೆಯರೂ ಈ ಪ್ರತಿಭಟನೆಯಲ್ಲಿ ಸಮನಾಗಿ ಭಾಗಿಯಾಗಿದ್ದುದು.

ದೌರ್ಜನ್ಯ ನಡೆದಿಲ್ಲ, ಅರಣ್ಯ ಬಿಡುವುದಿಲ್ಲ


ರೈತ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವ ಕುಕೃತ್ಯವನ್ನು ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಎಸಗಿಲ್ಲ. ಯಾವುದೇ ರೈತ ಕಾರ್ಯಕರ್ತರಿಗೂ ಯಾವ ಬಗೆಯಲ್ಲೂ ಧಮ್ಕಿ ಹಾಕಿಲ್ಲ. ಅರಣ್ಯ ಸಂರಕ್ಷಣೆಗೆ ವಿರುದ್ಧವಾಗಿ ಕೆಲಸ ಮಾಡುವವರ ಬಗ್ಗೆ ಅಸಹನೆ ತೋರಿರಬಹುದು. ತಾಲ್ಲೂಕಿನ ಕಣಿವೆ ಸುತ್ತ ರಾತ್ರಿ ಹೊತ್ತಿನಲ್ಲಿ ಕೆಲವು ಕಡೆ ಮರ ಕಡಿಯುವ ಹಾಗೂ ನೆಲ ಉಳುವ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಹಿತಿಯಿತ್ತು. ಆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಅವರು, ಇಲಾಖೆಯ ಸುಪರ್ದಿಗೆ ಬರುವ ಅರಣ್ಯದ ಸುತ್ತ ಬೇಲಿ ಹಾಕುವಂತೆ ಸೂಚನೆ ನೀಡಿದರು. ಆ ರೀತಿಯಾಗಿ ನಾವು ನಮ್ಮ ಇಲಾಖೆಯ ಸತ್ತ ಬೇಲಿ ಹಾಕಿಕೊಳ್ಳುತ್ತಿದ್ದೇವೆ. ರೈತರ ಜಮೀನುಗಳಿಗೆ ಸಂಬಂಧಿಸಿದ ಜಾಗಕ್ಕೆ ನಮ್ಮ ಹಿಟಾಚಿಗಳು ನುಗ್ಗಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ. ಅರಣ್ಯ ಸಂರಕ್ಷಣಾ ಕಾಯ್ದೆ-ಕಾನೂನುಗಳ ಪ್ರಕಾರ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರ್ ಎಫ್ ಒ ಅರುಣ್ ಸ್ಪಷ್ಟಪಡಿಸುತ್ತಾರೆ.

__ ಸಂಚಲನ

ಜಾಣೆಹಾರ್ ಅರಣ್ಯ: ಜೆಸಿಬಿ ತಡೆದ ಮಹಿಳೆಯರು

0

ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ದಸಂಸ ಪ್ರತಿಭಟನೆ ಮಾಡಿದ ಸುದೀರ್ಘ ವರದಿಯನ್ನು ಸಂಚಲನ ಅವರು ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ, ದಲಿತ ಸಂಘಟನೆಗಳ ವತಿಯಿಂದ ಪಟ್ಟಣದ ನೆಹರೂ ಸರ್ಕಲ್’ನಿಂದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ವರೆಗೆ ಸೋಮವಾರ ಬೆಳಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು.

ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28’ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ರೈತರು ಮತ್ತು ದಸಂಸ ಮುಖಂಡರು ತಾಲ್ಲೂಕು ಆಡಳಿತ ಸೌಧದ ತಲಬಾಗಿಲಲ್ಲಿ ಪ್ರತಿಭಟನೆ ನಡೆಸಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದಲ್ಲಿ, ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

ಘಟನೆ ಹಿನ್ನೆಲೆ :
ಆಶ್ರಿಹಾಲ್ ಸರ್ವೆ ನಂಬರ್ 30’ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28’ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು 2 ರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿ’ಯಲ್ಲಿನ ಸರ್ವೆ ನಂಬರ್ 7 ರಲ್ಲಿ 1 ಒಂದೂವರೆ ಎಕರೆ, ಸರ್ವೆ ನಂಬರ್ 8 ರಲ್ಲಿ 2 ರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9 ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರ್ಯಾಂಟೆಡ್ ಜಮೀನಾಗಿದೆ.

ಈ ಸರ್ವೆ ನಂಬರುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರುಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರುಗಳಲ್ಲಿರುವ ರೆವೆನ್ಯೂ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಲ್ಯಾಂಡೇ ಆಗಿದೆ ಎಂಬುದು ರೈತರ ವಾದವಾಗಿದೆ.

ಈ ಭಾಗದ ರೈತರು 1970’ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978’ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರಲ್ಲಿ ಮಂಜೂರಾಗಿದೆ. ಇಲ್ಲಿ ಎಪ್ಪತ್ತರ ದಶಕದಿಂದಲೂ ನಾವು ಗೆಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಈಗ್ಗೆ ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್ – ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಭತ್ತರಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು. ಈಗ ಈ ಅಧಿಕಾರಿಗಳು ಕಳೆದ ಶನಿವಾರದಂದು ಹಿಟಾಚಿ-ಜೆಸಿಬಿಗಳನ್ನು ತಂದು ಹೆದರಿಸಿ, ನಮ್ಮನ್ನು ಇಲ್ಲಿಂದ ವಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶಗೊಂಡು ಹೇಳುತ್ತಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ಬಿಂಬಿಸುತ್ತಾ, ರೈತರ ಜಮೀನುಗಳಿಗೆ ಹಿಟಾಚಿ-ಜೆಸಿಬಿ ನುಗ್ಗಿಸುತ್ತಿದ್ದಾರೆ. ಬಡ ದಲಿತ ರೈತರ ಮೇಲಿನ ಈ ದೌರ್ಜನ್ನು ಅಕ್ಷಮ್ಯವಾದುದು ಎಂದು ದಸಂಸ ತಾಲ್ಲೂಕು ಸಂಚಾಲಕ ಆನಂದ್ ಹೇಳುತ್ತಾರೆ.

ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜೊತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ ಎಂದು ಅರಣ್ಯ ಅಧಿಕಾರಿಗಳ ಕ್ರಮವನ್ನು ರೈತ ಮಂಜು ಖಂಡಿಸಿದರು.

ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ ಎಂದು ಪ್ರಶ್ನಿಸಿದ ಬೇವಿನಹಳ್ಳಿ ಚನ್ನಬಸವಯ್ಯ, ಲೋಕಸಭಾ ಚುನಾವಣಾ ನೀತಿಸಂಹಿತೆಯ ಕಾಲಾವಧಿ ಮುಗಿದ ನಂತರ ಇದುವರೆಗೂ ತಾಲ್ಲೂಕಿನಲ್ಲಿ ಬಗರ್ ಹುಕುಂ ಕಮಿಟಿಯ ಒಂದೇ ಒಂದು ಸಭೆಯನ್ನೂ ಮಾಡದಿರುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷವೆಂದರೆ, ಆಶ್ರಿಹಾಲ್-ಜಾಣೆಹಾರ್ ಭಾಗದ ಹತ್ತಾರು ರೈತ ಮಹಿಳೆಯರೂ ಈ ಪ್ರತಿಭಟನೆಯಲ್ಲಿ ಸಮನಾಗಿ ಭಾಗಿಯಾಗಿದ್ದುದು.

ದೌರ್ಜನ್ಯ ನಡೆದಿಲ್ಲ, ಅರಣ್ಯ ಬಿಡುವುದಿಲ್ಲ


ರೈತ ಅಥವಾ ದಲಿತರ ಮೇಲೆ ದೌರ್ಜನ್ಯ ನಡೆಸುವ ಕುಕೃತ್ಯವನ್ನು ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಎಸಗಿಲ್ಲ. ಯಾವುದೇ ರೈತ ಕಾರ್ಯಕರ್ತರಿಗೂ ಯಾವ ಬಗೆಯಲ್ಲೂ ಧಮ್ಕಿ ಹಾಕಿಲ್ಲ. ಅರಣ್ಯ ಸಂರಕ್ಷಣೆಗೆ ವಿರುದ್ಧವಾಗಿ ಕೆಲಸ ಮಾಡುವವರ ಬಗ್ಗೆ ಅಸಹನೆ ತೋರಿರಬಹುದು. ತಾಲ್ಲೂಕಿನ ಕಣಿವೆ ಸುತ್ತ ರಾತ್ರಿ ಹೊತ್ತಿನಲ್ಲಿ ಕೆಲವು ಕಡೆ ಮರ ಕಡಿಯುವ ಹಾಗೂ ನೆಲ ಉಳುವ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಹಿತಿಯಿತ್ತು. ಆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಅವರು, ಇಲಾಖೆಯ ಸುಪರ್ದಿಗೆ ಬರುವ ಅರಣ್ಯದ ಸುತ್ತ ಬೇಲಿ ಹಾಕುವಂತೆ ಸೂಚನೆ ನೀಡಿದರು. ಆ ರೀತಿಯಾಗಿ ನಾವು ನಮ್ಮ ಇಲಾಖೆಯ ಸತ್ತ ಬೇಲಿ ಹಾಕಿಕೊಳ್ಳುತ್ತಿದ್ದೇವೆ. ರೈತರ ಜಮೀನುಗಳಿಗೆ ಸಂಬಂಧಿಸಿದ ಜಾಗಕ್ಕೆ ನಮ್ಮ ಹಿಟಾಚಿಗಳು ನುಗ್ಗಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ. ಅರಣ್ಯ ಸಂರಕ್ಷಣಾ ಕಾಯ್ದೆ-ಕಾನೂನುಗಳ ಪ್ರಕಾರ ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರ್ ಎಫ್ ಒ ಅರುಣ್ ಸ್ಪಷ್ಟಪಡಿಸುತ್ತಾರೆ.

__ ಸಂಚಲನ

ಡಿ.ಆರ್.ಬಸವರಾಜ್ ಇನ್ನಿಲ್ಲ

ತುರುವೇಕೆರೆ: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಮಾಜಿ ಉಪಾಧ್ಯಕ್ಷರಾದ ಡಿ.ಆರ್.ಬಸವರಾಜು(73) ಅವರು ಭಾನುವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ನಿವಾಸಿಯಾದ ಮೃತ ಡಿ.ಆರ್.ಬಸವರಾಜುರವರು ನಾಲ್ವರು ಗಂಡು ಮಕ್ಕಳು, ಪತ್ನಿ ಚಂದ್ರಮ್ಮ ಹಾಗು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮೃತ ಡಿ.ಆರ್.ಬಸವರಾಜುರವರು ತಾಲ್ಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಮುಖ್ಯವಾಗಿ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದು ಪಕ್ಷ ಕಟ್ಟಲು ಶ್ರಮಿಸಿ ಜಿಲ್ಲಾ ಹಾಗು ರಾಜ್ಯ ಮಟ್ಟದ ನಾಯಕರೊಂದಿಗೆ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದರು. ರಾಜಕೀಯದ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲೂ ಸಹ ಸಕ್ರಿಯವಾಗಿ ಪಾಲ್ಗೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದರು.

ದೊಂಬರನಹಳ್ಳಿ ಗ್ರಾಮದ ಹಾಲು ಉತ್ಪಾದರಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿ ಹಾಗು ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದವರು. ಮುಖ್ಯವಾಗಿ ದೊಂಬರನಹಳ್ಳಿ ಗ್ರಾಮದಲ್ಲಿ ಶ್ರೀ ಸೋಮೇಶ್ವರ ಪ್ರೌಢ ಶಾಲೆ ಸ್ಥಾಪನೆಗೆ ಶ್ರಮಿಸಿ ಅದರ ಶಾಲಾಭಿವೃದ್ಧಿ ಸಮಿತಿಯ ಕಾರ್ಯದಶರ್ಿಯಾಗಿಯೂ ಶಾಲೆಯ ಏಳಿಗೆಗೆ ದುಡಿದಿದ್ದರು.

ಮೃತ ಡಿ.ಆರ್.ಬಸವರಾಜುರವರಿಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಭಾನುವಾರ ತಡ ರಾತ್ರಿ ನಿಧನರಾಗಿದ್ದಾರೆ.

ಮೃತರ ಸ್ವ ಗ್ರಾಮವಾದ ದೊಂಬರನಹಳ್ಳಿಯಲ್ಲಿ ಸೋಮವಾರ 3 ಗಂಟೆಗೆ ಅಂತ್ಯಶವಸಂಸ್ಕಾರ ನೆರವೇರಿತೆಂದು ಕುಟುಂಬದವರು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ರೈತರ ಜಮೀನು ಕಬಳಿಕೆ : ಆಕ್ರೋಶ(ದಲಿತ-ಹಿಂದುಳಿದ ಬಡವರ ಸಾಗುವಳಿ ಭೂಮಿಗೂ ಸಂಚಕಾರ)

0

ವರದಿ : ಸಂಚಲನ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಆಶ್ರಿಹಾಲ್- ಜಾಣೆಹಾರ್ ಗ್ರಾಮದ ಸರ್ವೆ ನಂಬರ್ 30 ಮತ್ತು 28’ರಲ್ಲಿರುವ ರೈತರ ಜಮೀನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಜಾಣೆಹಾರ್ ರೈತರು, ತಮ್ಮ ಜಮೀನಿಗೆ ನುಗ್ಗಿದ್ದ ಜೆಸಿಬಿಗಳನ್ನು ತಡೆದು ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಶನಿವಾರದ ಬೆಳಗ್ಗೆ ಜಾಣೆಹಾರ್ ಗ್ರಾಮದ ಬಳಿ ರೈತರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ವಾದ-ವಾಗ್ವಾದಗಳು ನಡೆದವು. ಈ ಸಂದರ್ಭದಲ್ಲಿ, ಆರ್ ಎಫ್ಒ ಅರುಣ್ ಅಲ್ಲಿ ಸೇರಿದ್ದ ರೈತರ ಜೊತೆ ಮಾತುಕತೆ ನಡೆಸಿದರು. ಆಗ, ಅರಣ್ಯ ಇಲಾಖೆಯ ಬಳಿಯಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಸ್ತುತಪಡಿಸಿದ ನಂತರ ತಮ್ಮ ಕೆಲಸ ಮುಂದುವರೆಸಿ ಎಂದು ರೈತರು ಪಟ್ಟುಹಿಡಿದರು. ರೈತರ ಆಕ್ರೋಶಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಕೆಲಸ ಸ್ಥಗಿತಗೊಳಿಸಿ ಜೀಪ್ ಹತ್ತಿ ಸ್ಥಳದಿಂದ ಹೊರಟುಹೋದರು.

ಹಿನ್ನೆಲೆ :
ಆಶ್ರಿಹಾಲ್ ಸರ್ವೆ ನಂಬರ್ 30’ರಲ್ಲಿರುವ ಇನ್ನೂ ದುರಸ್ತಿಯಾಗದ ಉಳಿಕೆ 5 ಎಕರೆ ಹಾಗೂ ಸರ್ವೆ ನಂಬರ್ 28’ರಲ್ಲಿ ಇನ್ನೂ ದುರಸ್ತಿಯಾಗದ ಉಳಿಕೆ (ಎಕ್ಸ್ಟೆಂಟ್) ಜಮೀನು 2 ರಿಂದ ಎರಡೂವರೆ ಎಕರೆ ಮತ್ತು ಜಾಣೆಹಾರ್ ಗಡಿ’ಯಲ್ಲಿನ ಸರ್ವೆ ನಂಬರ್ 7 ರಲ್ಲಿ 1 ಒಂದೂವರೆ ಎಕರೆ, ಸರ್ವೆ ನಂಬರ್ 8 ರಲ್ಲಿ 2 ರಿಂದ ಎರಡೂವರೆ ಎಕರೆ ಹಾಗೂ ಸರ್ವೆ ನಂಬರ್ 9 ರಲ್ಲಿ ಮುಕ್ಕಾಲು ಎಕರೆಯಷ್ಟಿರುವ ಕಂದಾಯ ಭೂಮಿ ರೈತರಿಗೆ ಮಂಜೂರಾಗಿರುವ ಗ್ರಾಂಟೆಡ್ ಜಮೀನಾಗಿದೆ. ಈಯೆಲ್ಲ ಸರ್ವೆ ನಂಬರುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅವರ ಜಮೀನಿಗೆ ನಿರಂತರವಾಗಿ ಕಂದಾಯ ಪಾವತಿ ಮಾಡುತ್ತಾ ಬಂದಿದ್ದಾರೆ. ಸದರಿ, ಆಶ್ರಿಹಾಲ್ ಮತ್ತು ಜಾಣೆಹಾರ್ ಗಡಿ ಸರ್ವೆ ನಂಬರುಗಳಲ್ಲಿರುವ ಇದಿಷ್ಟೂ ಕಂದಾಯ ಜಮೀನು ಒಟ್ಟಾರೆ ಹತ್ತನ್ನೊಂದು ಎಕರೆಗಳಷ್ಟು ವಿಸ್ತೀರ್ಣದ್ದಾಗಿದೆ. ಈ ಸರ್ವೆ ನಂಬರುಗಳಲ್ಲಿರುವ ರೆವೆನ್ಯೂ ಜಮೀನು ರೈತರಿಗೆ ಮಂಜೂರಾಗಿರುವಂತಹ ಗ್ರಾಂಟೆಡ್ ಲ್ಯಾಂಡೇ ಆಗಿದೆ.

ಈ ಭಾಗದ ರೈತರು 1970’ರಿಂದಲೂ ಇಲ್ಲಿ ಈ ಜಮೀನಿನ ಸಾಗುವಳಿ ನಡೆಸುತ್ತಿದ್ದಾರೆ. ಇದಕ್ಕೆ ಪುರಾವೆಯಾಗಿ 1978’ರಲ್ಲೇ ಭಾಗ್ಯಮ್ಮD/O ಲಕ್ಷ್ಮಯ್ಯ ಎಂಬ ಜಾಣೆಹಾರ್ ಗ್ರಾಮದ ರೈತ ಮಹಿಳೆಗೆ 3 ಎಕರೆಗಳಿಗೂ ಹೆಚ್ಚಿನ ಜಮೀನು ಇದೇ ಜಾಣೆಹಾರ್ ಸರ್ವೆ ನಂಬರಲ್ಲಿ ಮಂಜೂರಾಗಿದೆ. ನಾವೆಲ್ಲಾ ಇಲ್ಲಿ ಎಪ್ಪತ್ತರ ದಶಕದಿಂದಲೂ ಗೆಯ್ಮೆ ಮಾಡುತ್ತಿದ್ದೇವೆ. ಇದು ನಮ್ಮ ಜಮೀನು. ಇದು ಆಗ ಸರ್ಕಾರಿ ಬೀಳು ಆಗಿದ್ದಿರಬಹುದು. ಆದರೆ, ಸುಮಾರು ಐವತ್ತು ವರ್ಷಗಳಿಗೂ ಮುಂಚಿನಿಂದ ಜಾಣೆಹಾರ್ – ಆಶ್ರಿಹಾಲ್ ಗ್ರಾಮದ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ರೈತರು ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇದು ಎಪ್ಪತ್ತು-ಎಂಭತ್ತರಲ್ಲೇ ರೈತರಿಗೆ ಮಂಜೂರಾಗಿರುವ ರೈತರ ಜಮೀನು.

ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಮೀರಿದ ಅಧಿಕಾರ ಪ್ರದರ್ಶಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿದ್ದ ಮರಗಳನ್ನು ಕಡಿದು, ಅದೇ ಮರಗಳ ಕೊರಡುಗಳನ್ನು ಕಂಬಗಳಂತೆ ಬಳಸಿ ಮದಲಿಂಗನ ಕಣಿವೆ ಸುತ್ತಮುತ್ತ ಇರುವ ಅರಣ್ಯಕ್ಕೆ ತಂತಿಬೇಲಿ ಹಾಕಿಕೊಳ್ಳುತ್ತಿರುವುದಾಗಿ ರೈತರ ಜಮೀನುಗಳಿಗೂ ಜೆಸಿಬಿ ನುಗ್ಗಿಸುತ್ತಿದ್ದಾರೆ. ಇದು ಅಕ್ಷಮ್ಯ.

ಈ ಹಿಂದೆ ಅಕೇಶಿಯಾ ಮರಗಳನ್ನು ಕಡಿಯಲು ಒಬ್ಬರಿಗೆ ಟೆಂಡರ್ ಕೊಡಲಾಗಿತ್ತು. ಮರಗಳನ್ನು ಕಡಿಯುವುದರ ಜೊತೆಗೆ ಅದರ ಬೊಡ್ಡೆಗಳನ್ನೂ ಬೇರುಮಟ್ಟದಿಂದ ಕೀಳಬೇಕಾದ ನಿಯಮವಿದ್ದರೂ, ಅದಕ್ಕಾಗುವ ಖರ್ಚುವೆಚ್ಚದ ಹಣ ಉಳಿಸುವ ದುರಾಸೆಯಿಂದ ಆ ಬೊಡ್ಡೆಗಳನ್ನು ಕೀಳದೆ ಹಾಗೇ ಬಿಟ್ಟುಹೋಗಿದ್ದರು. ಅವು ಕಾಲಾಂತರದಲ್ಲಿ ಮತ್ತೆ ಚಿಗುರಿ ಈಗ ಮರಗಳಾಗಿವೆ. ಅವುಗಳನ್ನು ಕಡಿದುಕೊಂಡು ಹೋಗುವ ನೆಪದಲ್ಲಿ ರೈತರ ಜಮೀನಿಗೆ ಬಂದು ಅರಣ್ಯ ಅಧಿಕಾರಿಗಳು ರೈತರ ಜಮೀನಿಗೂ ತಂತಿಬೇಲಿ ಹಾಕಿ ಕಬಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೈತರ ಬಳಿ ಇಲ್ಲಸಲ್ಲದ ದಾಖಲೆಗಳನ್ನು ಕೇಳುತ್ತಿರುವ ಅರಣ್ಯ ಅಧಿಕಾರಿಗಳು ತಮ್ಮ ಬಳಿ ಇರುವ ದಾಖಲೆ ಪ್ರಮಾಣಗಳನ್ನು ಯಾಕೆ ಸಾರ್ವಜನಿಕಗೊಳಿಸದೆ, ನಮ್ಮ ಅನಕ್ಷರಸ್ಥ ಬಡ ರೈತರ ಮೇಲೆ ಮಾತ್ರ ಜೋರು ಜಬರದಸ್ತಿ ತೋರುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅವರು ಹೀಗೆಲ್ಲ ವರ್ತಿಸಲು ಅವಕಾಶವಿಲ್ಲ. ಪ್ರಜಾಪ್ರಭುತ್ವದಲ್ಲಿ ದಬ್ಬಾಳಿಕೆ, ದೌರ್ಜನ್ಯಗಳಿಗೆ ಆಸ್ಪದವಿಲ್ಲ ಎಂಬುದನ್ನು ಈ ಅಧಿಕಾರಿಗಳಿಗೆ ಬಡವರು ಮತ್ತು ರೈತರು ತಿಳಿಸಿಕೊಡಬೇಕೇ ಎಂದು ರೈತರು ಪ್ರಶ್ನಿಸಿದರು.

ಮುಖ್ಯಾಂಶಗಳು :
ಚಿಕ್ಕನಾಯಕನಹಳ್ಳಿ ಉಪ–ವಲಯ ಅರಣ್ಯಾಧಿಕಾರಿ ಗೌರಿಶಂಕರ್ (ಡೆಪ್ಯುಟಿ ರೇಂಜ್ ಆಫಿಸರ್)’ರವರು ರೈತರನ್ನು ಸಂಘಟಿಸುತ್ತಿರುವ ರೈತ ಕಾರ್ಯಕರ್ತರಿಗೆ ಕರೆಮಾಡಿ ಧಮಕಿ ಹಾಕುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಇದೆಲ್ಲದರ ನಡುವೆ ತಿಪಟೂರು ವಿಭಾಗದ ಎಸಿಎಫ್ ಮಲ್ಲಿಕಾರ್ಜುನ್’ರವರು ಸೋಮವಾರ ಸ್ಥಳಕ್ಕೆ ಭೇಟಿ ಕೊಟ್ಟು ರೈತರು ಮತ್ತು ಅರಣ್ಯಾಧಿಕಾರಿಗಳ ನಡುವಿನ ತಕರಾರನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅರಣ್ಯ ಇಲಾಖೆ ಹಾಗೂ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನುಗಳಿಗೆ ಸಂಬಂಧಿಸಿದ ಸ್ಪಷ್ಟ ನಿರ್ದೇಶನಗಳಿವೆ. ಅರಣ್ಯ ಅಧಿಕಾರಿಗಳು ಅವನ್ನು ಅನೂಚಾನ ಪಾಲಿಸಬೇಕು. ಇಲ್ಲದಿದ್ದಲ್ಲಿ ಘನ ನ್ಯಾಯಾಲಯದ ಉಲ್ಲಂಘನೆಯಾದೀತು.

ನಾಡೋಜ ಕಮಲಾ ಹಂಪನಾ ಇನ್ನಿಲ್ಲ:ಕಲೇಸಂನಿಂದ ಶ್ರದ್ದಾಂಜಲಿ

ಹಿರಿಯ ಲೇಖಕಿ, ಸಂಶೋಧಕಿ ನಾಡೋಜ ಡಾ. ಕಮಲಾ ಹಂಪನಾ ನಮ್ಮನ್ನು ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಇದು ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಆದ ದೊಡ್ಡ ನಷ್ಟ. ಅವರು ಕೇವಲ ಲೇಖಕಿ ಮಾತ್ರವಲ್ಲ ಈ ನಾಡಿನ ಸಂಗತಿಗಳಿಗೆ ದನಿಕೊಟ್ಟು ಮಾತನಾಡಬಲ್ಲ ಹಲವು ಹಿರಿಯ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದರು.

ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಬೆರಳೆಣಿಕೆಯ ಲೇಖಕಿಯರಲ್ಲಿ ಒಬ್ಬರು. ಜೈನ ಸಾಹಿತ್ಯದ ಬಗ್ಗೆ ಅವರ ವಿದ್ವತ್ತು ಬಹಳ ದೊಡ್ಡದು.

ಲೇಖಕಿಯರ ಸಂಘದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ ಕಮಲಾ ಹಂಪನಾ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಯನ್ನೂ ಸಂಘದಲ್ಲಿ ಇಟ್ಟಿದ್ದರು. ಕಲೇಸಂನ ಸಲಹಾ ಸಮಿತಿಯಲ್ಲೂ ಇದ್ದರು.
ಅವರಿಗೆ ಕಲೇಸಂ ವತಿಯಿಂದ ಸಂತಾಪಗಳು.
ಅವರಿಗೆ ಗೌರವಪೂರ್ವಕ ನಮನಗಳು…

ಕರ್ನಾಟಕ ಲೇಖಕಿಯರ ಸಂಘ ಅಗಲಿದ ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರಿಗೆ ಸಂಘ ಈ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದೆ.

ಕಮಲಾ ಹಂಪನಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರು ಶೈಕ್ಷಣಿಕ ವಲಯದಲ್ಲಿ ಸಿ. ಆರ್. ಕಮಲಮ್ಮ ಅಥವಾ ಕಮಲಾ ಮೇಡಂ ಎಂದು ಪರಿಚಿತರು. ಅವರು ಕಥೆ, ಕಾವ್ಯ, ನಾಟಕ, ವಿಮರ್ಶೆ ಇವುಗಳ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

ಬೆಂಗಳೂರು ಜಿಲ್ಲೆಯ ದೇವನ ಹಳ್ಳಿಯಲ್ಲಿ ಅಕ್ಟೋಬರ್ 28, 1935ರಲ್ಲಿ ಜನಿಸಿದ ಕಮಲಾ ಹಂಪನಾ ಅವರಿಗೆ ಹುಟ್ಟಿನಿಂದಲೇ ಸುಸಂಸ್ಕೃತ, ಸಾಂಸ್ಕೃತಿಕ ಪರಿಸರ ದೊರೆಯಿತು. ಅಂದಿನ ದಿನಗಳಲ್ಲಿ ಮನೆಯಲ್ಲಿ ಶ್ರೀಮಂತಿಕೆಯ ಮತ್ತು ಮನೆತನದ ಸಾಂಸ್ಕೃತಿಕ ಪರಂಪರೆಗಳ ಅನುಕೂಲವಿದ್ದದ್ದರಿಂದ ಸಂಗೀತ ಪ್ರವಚನ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ಮನೆಯ ಆವರಣದಲ್ಲೇ ದೊರೆಯುವಂತಿತ್ತು. ಮುಂದೆ ತಂದೆಯ ಅಕಾಲಿಕ ಮರಣೋತ್ತರದಲ್ಲಿ ಉಂಟಾದ ಜೀವನ ಅಸ್ತವ್ಯಸ್ತತೆಯಲ್ಲಿ, ಅವರ ಬದುಕಿನಲ್ಲಿ ಅನಿರೀಕ್ಷಿತ ಬಡತನ ಮೂಡಿ ಬಂದು, ಬದುಕು ಮತ್ತು ಓದನ್ನು ಬಂಧುಗಳ ಕೃಪೆಯಲ್ಲಿ ನಡೆಸುವ ದೌರ್ಭಾಗ್ಯ ಒದಗಿತು. ಹೀಗಿದ್ದರೂ ಪ್ರತಿಭಾವಂತರಾಗಿದ್ದ ಅವರು ಶಾಲಾ ದಿನಗಳಿಂದಲೇ ನಿರರ್ಗಳವಾಗಿ ಮಾತನಾಡಬಲ್ಲ, ಭಾಷಣಗಳಿಂದ ಮೋಡಿ ಹಾಕಬಲ್ಲ ಸಾಮರ್ಥ್ಯ ರೂಢಿಸಿಕೊಂಡಿದ್ದರು.

ಬಿ.ಎ, ಆನರ್ಸ್ ಓದುವ ಸಮಯದಲ್ಲಿ ಅವರಿಗೆ ಗುರುಗಳಾಗಿದ್ದವರು ಪ್ರೊ. ತೀ.ನಂ.ಶ್ರೀ, ಡಿ. ಎಲ್. ನರಸಿಂಹಾಚಾರ್, ತ. ಸು. ಶಾಮರಾಯರು, ಕೆ. ವೆಂಕಟರಾಮಪ್ಪ, ಎಸ್. ವಿ. ಪರಮೇಶ್ವರ ಭಟ್ಟರು, ಡಾ. ಎಸ್. ಶ್ರೀಕಂಠಶಾಸ್ತ್ರಿ ಮುಂತಾದವರು. ಜೊತೆಗಾರರಾಗಿ, ಸಹಪಾಠಿಗಳಾಗಿದ್ದ, ಅ.ರಾ ಮಿತ್ರ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಎಚ್. ಜಿ. ಸಣ್ಣಗುಡ್ಡಯ್ಯ ಮೊದಲಾದವರು ಇಂದು ಸಾಹಿತ್ಯ ಲೋಕದಲ್ಲಿ ಹೆಸರಾದವರು ಎಂಬ ಹೆಮ್ಮೆಯ ಭಾವ ಅವರದು. ಕಾಲೇಜಿನ ದಿನಗಳಿಂದಲೇ ಸಹಪಾಠಿಗಳಾಗಿ ಪರಸ್ಪರ ಪರಿಚಯದೊಂದಿಗೆ ದಂಪತಿಗಳಾದವರು ಎಚ್. ಪಿ. ನಾಗರಾಜಯ್ಯ ಮತ್ತು ಕಮಲಾ. ಕಮಲಾ ಹಂಪನ ಅವರು 1959ರಿಂದ ಕನ್ನಡ ಅಧ್ಯಾಪಕರಾಗಿ ವೃತ್ತಿರಂಗ ಪ್ರವೇಶಿಸಿದರು. 18ನೆಯ ಶತಮಾನದ ಪರಮದೇವ ಕವಿಯ ‘ತುರಂಗ ಭಾರತ – ಒಂದು ಅಧ್ಯಯನ’ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದರು. ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೆ ಮೊದಲಿಗರು.

ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸರ್ಕಾರದ ಪುರಸ್ಕಾರವಾದ  ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿವೆ.

ಕಮಲಾ ಹಂಪನಾ ಅವರು ಪ್ರಕಟಿಸಿರುವ 50ಕ್ಕೂ ಹೆಚ್ಚು ಕೃತಿಗಳಲ್ಲಿ ‘ಸುಕುಮಾರ ಚರಿತ್ರೆಯ ಸಂಗ್ರಹ’, ‘ಭರತೇಶ ವೈಭವ’, ‘ಶ್ರೀ ಪಚ್ಚೆ’, ‘ಕೆ. ಎಸ್.ಧರಣೀಂದ್ರಯ್ಯನವರ ಸ್ಮೃತಿ ಗ್ರಂಥ’, ‘ಸಹಸ್ರಾಭಿಷೇಕ’, ‘ಚಾವುಂಡರಾಯ ಪುರಾಣ’, ‘ಡಾ. ಡಿ. ಎಲ್. ಎನ್. ಅವರ ಆಯ್ದ ಲೇಖನಗಳು’, ‘ಹಳೆಯ ಗದ್ಯ ಸಾಹಿತ್ಯ’, ‘ದಾನಚಿಂತಾಮಣಿ ಸ್ಮರಣ ಸಂಚಿಕೆ’ ಇವೆಲ್ಲವೂ ಸಂಪಾದಿತ ಕೃತಿಗಳಾಗಿವೆ. ‘ಆದರ್ಶ ಜೈನ ಮಹಿಳೆಯರು’ ಎಂಬ ಕೃತಿ, ಯಾರ ಗಮನಕ್ಕೋ ಬರದೆ ಅಜ್ಞಾತರಾಗಿ ಉಳಿದು ತಮ್ಮ ಶೌರ್ಯ, ಸಾಹಸ, ತ್ಯಾಗ, ಬಲಿದಾನ, ಪ್ರತಿಭೆ, ದಾನಗುಣ, ಇತ್ಯಾದಿಗಳಿಂದ ಆದರ್ಶಪ್ರಾಯರೆನಿಸಿಕೊಂಡ ಜೈನಮಹಿಳೆಯರಾದ ಕಾಳಲಾದೇವಿ, ಚಂಪಾದೇವಿ, ಅತ್ತಿಮಬ್ಬೆ ಮುಂತಾದವರನ್ನು ಪ್ರಾಕೃತ, ಸಂಸ್ಕೃತ, ಹಳಗನ್ನಡ ಕಾವ್ಯ, ಶಾಸನಗಳಿಂದ ಹೆಕ್ಕಿ ತೆಗೆದು ಅವರ ಉದಾತ್ತ ಚಿತ್ರಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ. ‘ಮಹಾವೀರರ ಜೀವನ ಸಂದೇಶ’ 24ನೆ ತೀರ್ಥಂಕರರಾದ ಮಹಾವೀರರ ಕುರಿತಾಗಿದೆ. ‘ಅನೇಕಾಂತಾವಾದ’ವು ಜೈನಧರ್ಮಕ್ಕೆ ಸಂಬಂಧಿಸಿದೆ. ‘ಮುಡಿ ಮಲ್ಲಿಗೆ’ ಮತ್ತು ‘ಆ ಮುಖ’ ವ್ಯಕ್ತಿ ಚಿತ್ರಗಳಾಗಿವೆ.

ಮಕ್ಕಳ ಸಾಹಿತ್ಯದ ಬಗ್ಗೆ ಹೇಳುವುದಾದರೆ, ಕಮಲಾ ಅವರು ರಮ್ಯ, ರೋಚಕ, ಸರಳ ಶೈಲಿಯ ಮೂಲಕ ಓದುಗರಿಗೆ ಪ್ರಿಯವೆನಿಸುವಂತೆ ಅಕ್ಕಮಹಾದೇವಿ, ವೀರವನಿತೆ ಓಬವ್ವ, ಹೆಳವನಕಟ್ಟೆ ಗಿರಿಯಮ್ಮ, ಡಾ.ಅಂಬೇಡ್ಕರ್, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಮುಳುಬಾಗಿಲು ಇತ್ಯಾದಿ ಸುಂದರವಾದ ಕಥೆಗಳನ್ನು ರಚಿಸಿದ್ದಾರೆ. ಬೀಜಾಕ್ಷರ ಮಾಲೆ, ಜಾತಿ ನಿರ್ಮೂಲನೆ, ಭಾರತದಲ್ಲಿ ಜಾತಿಗಳು ಇವರ ಅನುವಾದ ಕೃತಿಗಳಾಗಿವೆ. ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರಗಳು ಅವರ ಪ್ರಬುದ್ಧ ಚಿಂತನೆ, ಆಲೋಚನೆಗಳನ್ನು ಬಿಂಬಿಸುವ ವೈಚಾರಿಕ, ವಿಮರ್ಶಾತ್ಮಕ ಲೇಖನಗಳ ಸಂಗ್ರಹವಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗಿನ ಕನ್ನಡ ಕಾವ್ಯ ಕವಿಗಳ ಒಂದು ಸ್ಥೂಲ ಪರಿಚಯವನ್ನು ಸಹಾ ನೀಡಿದ್ದಾರೆ. ಇವರ ಸಮಸ್ತ ಕೃತಿಗಳಲ್ಲಿ ಬದುಕಿನ ವಿವಿಧ ಮುಖಗಳ ಎಲ್ಲ ರೀತಿಯ ಚಿತ್ರಣಗಳೂ ಸಿಗುತ್ತವೆ. ‘ಅಕ್ಷತೆ ಸುರಿದ ಕೈಲೇ ಸೀಮೆ ಎಣ್ಣೆ ಸುರಿವರಯ್ಯ, ಅರಿಸಿನ ಹಚ್ಚಿದ ಕೈಲೇ ಬೆಂಕಿ ಹಚ್ಚಿ ಸುಡುವರಯ್ಯ’ ಎಂಬ ಸಾಲುಗಳು ಹೆಣ್ಣಿನ ಸ್ಥಿತಿಗತಿಗಳ ಬಗೆಗಿನ ಅವರ ಕಾಳಜಿಗಳನ್ನು ಬಿಂಬಿಸುತ್ತವೆ.

ಆಧುನಿಕ ಕಾಲದ ಯಾಂತ್ರಿಕ ಬದುಕಿನ ಸೂಕ್ಷ್ಮ ವಿಡಂಬನೆಗೆ ಅವರ ಒಂದೆರಡು ಸಾಲುಗಳನ್ನು ಗಮನಿಸಬಹುದು.

ಆಕಾಶವಾಣಿಯ ಸಮಾಚಾರದ ಮೊರೆ
ದೂರವಾಣಿಯ ಟ್ರಿಣ್ ಟ್ರಿಣ್ ಕರೆ
ಕರೆಗಂಟೆಯ ಕುಕಿಲ ಕರೆ
ಮಕ್ಕಳ ಮಮತೆಯ ಕರೆ
ಇನಿಯನ ಇನಿದನಿಯ ಕರೆ
ಈ ವಿವಿಧ ಕರೆಗಳ ನಡುವೆ
ಎಂತು ಕೇಳುವೆ ನಾನು
ನನ್ನಂತರಂಗದ ಕರೆಯ ಕಮಲಾ ಪ್ರಿಯ.

ಇನ್ನು, ಎಂತಹ ಆತ್ಮೀಯ ಸಂಬಂಧಗಳೂ ಮಾರ್ದವತೆ ಕಳೆದುಕೊಂಡಾಗ ಶೂಲಗಳಾಗುವಾರೆಂಬುದು ಅವರ ಅನಿಸಿಕೆ. ಆದ್ದರಿಂದಲೇ

ಗಂಡನೊಂದು ಶೂಲ, ಮಗಳೊಂದು ದ್ವಿಶೂಲ
ಮಗನೊಂದು ತ್ರಿಶೂಲ, ಬಂಧುಗಳೋ ಬಹುಶೂಲಗಳಯ್ಯಾ
ಈ ಶೂಲಗಳಿಂದ ಪಾರುಗಾಣಿಸೋ
ಎನ್ನ ಕಮಲಾ ಪ್ರಿಯ

ಎಂಬ ಆರ್ಥ ಪ್ರಾರ್ಥನೆ ಸಲ್ಲಿಸುತ್ತಾರೆ. ಹೀಗೆ ಅವರ ವಚನಗಳರಾಶಿ ನೋಡಿದರೆ ಅವರು ಸ್ಪಂದಿಸದ ವಿಚಾರವಿಲ್ಲ ಎನಿಸುತ್ತದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಹಿರಿತನದವರೆಗೆ ಅವರಿಗೆ ಹಲವು ರೀತಿಯ ಪ್ರಶಸ್ತಿ – ಗೌರವಗಳು ದೊರೆತಿವೆ. ಅತ್ತಿಮಬ್ಬೆ ಪ್ರಶಸ್ತಿ ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳಲ್ಲೊಂದು.
ರನ್ನ ಕವಿಗೆ ಆಶ್ರಯಕೊಟ್ಟು ಪೋಷಿಸಿದ ಅತ್ತಿಮಬ್ಬೆಯ ಬಗ್ಗೆ ಬೆಳೆಸಿಕೊಂಡ ಅಗಾಧ ಪ್ರೀತಿ, ಗೌರವ, ಭಕ್ತಿ, ಶ್ರದ್ಧೆಗಳಿಂದ ಅತ್ತಿಮಬ್ಬೆಯ ಹೆಸರು ಎಲ್ಲೆಲ್ಲೂ ಕೇಳಿ ಬರುವಂತೆ ಶ್ರಮಿಸಿದ್ದಾರೆ. ದಲಿತ ಸಮಸ್ಯೆ, ಭಾಷಾ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಚಳುವಳಿಗಳಿಗೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ.

ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ.
ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ ಅವರು, ಬಂದು ಮಿತ್ರರು, ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.

ಕಡಿಮೆ ಖರ್ಚು ಲಾಭ ಹೆಚ್ಚು ; ಬೆಳೆವಿಮೆ ಪಾಲಿಸಿ: ಚಿ.ನಾ.ಹಳ್ಳಿ ಸಾಧನೆ…

0

ಬೆಳೆ ವಿಮೆ ಎಂದರೆ ಮೂಗು ಮುರಿಯುವವರಿಗೆ ಚಿ.ನಾ.ಹಳ್ಳಿಯ ಜನತೆ ಉತ್ತರ ನೀಡಿದ್ದಾರೆ. ಸಂಚಲನ ಅವರು ಕೃಷಿ ಇಲಾಖೆಯ ಮೇಲೆ ಬೆಳಕು ಚೆಲ್ಲಿದ ವರದಿ ಜಿಲ್ಲೆಯ ಕೃಷಿಕರಿಗಾಗಿ…

ಚಿಕ್ಕನಾಯಕನಹಳ್ಳಿ : ಬೆಳೆ ವಿಮೆ ಇದ್ದರೆ, ಅತೀವೃಷ್ಟಿ ಅಥವಾ ಅನಾವೃಷ್ಟಿ ತರಹದ ಯಾವುದೇ ಬಗೆಯಿಂದ ಬೆಳೆ ಹಾನಿಯಾದರೂ ರೈತರು ದುಗುಡ ಪಡಬೇಕಿಲ್ಲ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದರು.


ಕಡಿಮೆ ಖರ್ಚು ಲಾಭ ಹೆಚ್ಚು ಧ್ಯೇಯವಾಕ್ಯದಡಿ ರೈತರಿಗಾಗಿ ಬೆಳೆ ವಿಮೆ ಜಾರಿಯಲ್ಲಿದೆ. ರೈತರು ನಿರಾತಂಕವಾಗಿ ಇದರ ಲಾಭ ಪಡೆದುಕೊಳ್ಳಬೇಕು. ಈ 2023-24’ನೇ ಸಾಲಿನಲ್ಲಿ ನಮ್ಮ ರೈತರು ಬೆಳೆ ವಿಮೆಗೆ ಪಾವತಿಸಿದ ಕಂತಿನ ಮೊತ್ತ 48 ಲಕ್ಷ‌ ರೂಪಾಯಿಗಳಷ್ಟು. ಆದರೆ, ಮಳೆ ಅಭಾವ, ಬರ ಪರಿಸ್ಥಿತಿ ತರಹದ ನಾನಾ ಕಾರಣಗಳಿಂದ ರೈತರ ಬೆಳೆ ನಷ್ಟವಾಗಿತ್ತು. ಆಗ, ವಿಮಾ ಕಂಪನಿಗಳಿಂದ ರೈತರಿಗೆ ಸಿಕ್ಕ ವಿಮಾಹಣ 7 ಕೋಟಿ 23 ಲಕ್ಷ ರೂಪಾಯಿಗಳಷ್ಟು.



ಬೆಳೆ ನಷ್ಟ ಮತ್ತು ಬರ ಪರಿಸ್ಥಿತಿಯಿಂದಾಗಿ ಪರದಾಡುತ್ತಿದ್ದ ರೈತರಿಗೆ ಇದು ವರದಾನವಾಯಿತು. ಹಾಗಾಗಿ, ಈ ಬಾರಿಯೂ ರೈತರು ಮುನ್ನೆಚ್ಚರಿಕೆಯ ದೃಷ್ಟಿಯಿಂದ ತ್ವರಿತವಾಗಿ ಬೆಳೆ ವಿಮೆ ಮಾಡಿಸಿಕೊಳ್ಳುವುದು ಉಚಿತ. ರೈತರು ರೈತ ಸಂಪರ್ಕ ಕೇಂದ್ರದೊಂದಿಗೆ ಸತತ ಸಂಪರ್ಕವನ್ನು ಇಟ್ಟುಕೊಳ್ಳುವುದು ಅತ್ಯಗತ್ಯ. ಈ ವಿಚಾರದಲ್ಲಿ ಯಾರೂ ಯಾವುದೇ ಹಿಂಜರಿಕೆ ಇಟ್ಟುಕೊಳ್ಳಬಾರದು ಎಂದು ಅವರು ತಿಳಿಸಿದರು.


ಅಲ್ಪ ಮೊತ್ತದ ವಿಮಾ ವಂತಿಗೆಯನ್ನು ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳುವ ರೈತರ ಬೇಳೆಯೇನಾದರೂ ನಷ್ಟಕ್ಕೊಳಗಾದರೆ, ಆಗ ನಷ್ಟದ ಪ್ರಮಾಣಕ್ಕನುಗುಣವಾಗಿ ಸಿಗುವ ವಿಮಾ ಮೊತ್ತ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಲಿದೆ. ಬೆಳೆ ಹಾನಿ ಅಥವಾ ನಷ್ಟದ ಮಾಹಿತಿಯನ್ನು ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.

ಹೆಸರು(ಮಳೆಯಾಶ್ರಿತ) ಬೆಳೆಗೆ ವಿಮೆ ಮಾಡಿಸಿಕೊಳ್ಳಲು ಇದೇ ಜುಲೈ 1’ನೇ ತಾರೀಕು ಕಡೆ ದಿನ. ಹಾಗಾಗಿ ಹೆಸರು ಬೆಳೆಯುತ್ತಿರುವ ರೈತರು ಶೀಘ್ರವೇ ಬೆಳೆವಿಮೆ ಮಾಡಿಸಿಕೊಳ್ಳುವುದು ಸೂಕ್ತ.
ರಾಗಿ, ಸಾಮೆ, ಹುರುಳಿ, ತೊಗರಿ ಬೆಳೆಗಳಿಗೆ ಬೆಳೆವಿಮೆ ಮಾಡಿಸಿಕೊಳ್ಳಲು ಆಗಸ್ಟ್ 16’ರವರೆಗೆ ಕಾಲಾವಕಾಶವಿದೆ. ಆದರೆ, ರೈತರು ಕಾಲ ವಿಳಂಬ ಮಾಡದೆ ತಾವು ಬೆಳೆಯುವ ಬೆಳೆಗಳಿಗೆ ಬೇಗನೇ ಬೆಳೆವಿಮೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕಡೇ ಘಳಿಗೆಯಲ್ಲಿ ತಲೆದೋರುವ ತಾಂತ್ರಿಕ ದೋಷ, ಸರ್ವರ್ ಬ್ಯುಜ಼ಿ ಅಥವಾ ರೈತರ ಕೃಷಿ ಕಾರ್ಯಗಳ ಒತ್ತಡ ತರಹದ ಕಾರಣಗಳಿಂದಾಗಿ ಯಾವ ರೈತರೂ ಬೆಳೆವಿಮೆ ಲಾಭದಿಂದ ವಂಚಿತರಾಗಬಾರದು. ಇದರ ಮಹತ್ವವನ್ನು ರೈತ ಸಮಾಜಕ್ಕೆ ಮನವರಿಕೆ ಮಾಡಿಕೊಡಲು ಇಲಾಖೆಯ ವತಿಯಿಂದ ಅರಿವು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬಾಕ್ಸ್ ಐಟಮ್::

ಬೆಳೆ ವಿಮೆ ಪಾವತಿ ವಂತಿಗೆ :
ಹೆಸರು-ಮಳೆಯಾಶ್ರಿತ 269 ರೂ.
ತೊಗರಿ-ಮಳೆಯಾಶ್ರಿತ 388 ರೂ.
ಹುರುಳಿ-ಮಳೆಯಾಶ್ರಿತ 165 ರೂ.
ರಾಗಿ– ಮಳೆಯಾಶ್ರಿತ 344 ರೂ.
ಸಾಮೆ– ಮಳೆಯಾಶ್ರಿತ 228 ರೂ.
ಇದಿಷ್ಟೂ ತಾವು ಬೆಳೆಯುತ್ತಿರುವ ಬೆಳೆಯನುಸಾರ ರೈತರು ಪಾವತಿಸಬೇಕಾದ ವಿಮಾ ವಂತಿಗೆ.


ನಮ್ಮ ಬೆಳೆ ನಮ್ಮ ಹಕ್ಕು ::
ಈ ಹಿಂದೆ ಅಧಿಕಾರಿಗಳು ರೈತರ ಬೆಳೆ ಸಮೀಕ್ಷೆ ನಡೆಸಿ ವಿವರಗಳನ್ನು ನಮೂದಿಸಿಕೊಳ್ಳುತ್ತಿದ್ದರು. ಇನ್ನುಮುಂದೆ ರೈತರೇ‌ ಸ್ವತಃ ತಾವು ಬೆಳೆದ ಬೆಳೆಗಳ ಸಮೀಕ್ಷೆ ನಡೆಸಿ ಅದರ ವಿವರಗಳನ್ನು ಆ್ಯಪ್’ನಲ್ಲಿ ನಮೂದಿಸಿಕೊಳ್ಳಲು ಸರ್ಕಾರ ರೈತರಿಗೇ ಅವಕಾಶ ಮಾಡಿಕೊಟ್ಟಿದೆ. ಸದ್ಯದಲ್ಲೇ ಚಾಲ್ತಿಗೆ ಬರಲಿರುವ ಈ ಆ್ಯಪ್’ನ್ನು ರೈತರು ಬಳಸುವ ವಿಧಾನಗಳ ಸಮಗ್ರ ತರಬೇತಿಯನ್ನು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವುದು.
ತಾವು ಬೆಳೆದ ಬೆಳೆಗಳನ್ನು ತಾವೇ ಸಮೀಕ್ಷೆ ನಡೆಸುವ ಹಕ್ಕನ್ನು ಸರ್ಕಾರ ರೈತರಿಗೇ ನೀಡಿದೆ. ನಮ್ಮ ಬೆಳೆ-ನಮ್ಮ ಹಕ್ಕು ಯೋಜನೆಯ ಪ್ರಯೋಜನವನ್ನು ರೈತರು ಪಡೆದುಕೊಳ್ಳಲಿ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಆಶಯ ವ್ಯಕ್ತಪಡಿಸಿದರು.

ಗುಂಪು ಕರೆ ::
ರೈತರಿಗೆ ಸರ್ಕಾರ ಕೊಡಮಾಡುವ ಎಲ್ಲ ಸವಲತ್ತುಗಳು ಮತ್ತು ಆರ್ಥಿಕ ಸಹಾಯ-ಸೌಕರ್ಯಗಳನ್ನು ಚಾಚೂತಪ್ಪದೆ ಒದಗಿಸಿಕೊಡಬೇಕೆಂಬ ದೃಢ ನಂಬಿಕೆಯ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್’ರವರು, ರೈತರ ಗುಂಪು ಕರೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ವಾರದ ಒಂದು ದಿನ ರೈತರ ಗುಂಪು ಕರೆ ಕಾರ್ಯಕ್ರಮವನ್ನು ನಡೆಸಲು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳಿಗೆ ರಾಜ್ಯ ಕೃಷಿ ಸಂಯೋಜಕ ಅಧಿಕಾರಿಗಳು ಒಂದು ಸ್ಲಾಟ್’ನ್ನು ನೀಡಿದ್ದಾರೆ. ಇದರ ಪರಿಣಾಮವಾಗಿ ಏಕ ಕಾಲದಲ್ಲಿ 4500 ದಿಂದ 5000 ಮಂದಿ ರೈತರ ಜೊತೆಗೆ ಗುಂಪು ಸಂವಹನ ಕರೆಯ ಮೂಲಕ ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ತಲುಪಿಸಬಹುದು. ರೈತರು, ಪ್ರತಿನಿಧಿಗಳು, ಅಧಿಕಾರಿಗಳು ಚರ್ಚೆ-ಪರಾಮರ್ಶೆ ನಡೆಸಿ ರೈತರಿಗೆ ಕಾಲಾನುಕೂಲ ಉಪಯುಕ್ತ ಮಾಹಿತಿಯನ್ನು ತಿಳಿಸಬಹುದು.

ಗುಂಪು ಕರೆಯ ಮೋಡಿ…


ಗುಂಪು ಕರೆಯಲ್ಲಿ ಲಭ್ಯ ಮಾಹಿತಿಗಳು,
ಮಣ್ಣು ಮತ್ತು ನೀರಿನ ಪರೀಕ್ಷೆ, ಬಿತ್ತನೆ ಬೀಜ, ಬೀಜ ಮಾರಾಟ, ಗೊಬ್ಬರ, ಔಷಧ, ಯಂತ್ರೋಪಕರಣ ಲಭ್ಯತೆ, ಬೆಳೆ ಮಾಹಿತಿ, ಕೃಷಿ ತರಬೇತಿ, ಕೃಷಿ ಮೇಳಗಳ ಮಾಹಿತಿ, ಬ್ಯಾಂಕ್ ಖಾತೆ ಲಿಂಕ್, ಎಸ್ಎಂಎಸ್ ಸೇವಾ ಮಾಹಿತಿ, ರೈತರ ಆ್ಯಪ್, ಸರ್ಕಾರದ ಯೋಜನೆಗಳ ಮಾಹಿತಿ, ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಗಳ ಮಾಹಿತಿ, ಹವಾಮಾನ ಮಾಹಿತಿ, ಬೆಳೆವಿಮೆ, ಪಿಎಮ್ ಕಿಸಾನ್ ಮಾಹಿತಿ ತರಹದ ಹತ್ತು ಹಲವು ಮಾಹಿತಿಗಳು ಒಂದು ಗುಂಪು ಕರೆಯ ಮೂಲಕ ಸಾವಿರಾರು ರೈತರಿಗೆ ಲಭ್ಯವಾಗಲಿದೆ.

_________ವರದಿ: ಸಂಚಲನ

ರೈತರ ಜಮೀನು ಸರ್ಕಾರದ ಪಾಲು…!?

0

ಸಂಚಲನ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಬಾಣದ-ದೇವರಹಟ್ಟಿ ಮತ್ತು ಸೊಂಡೇನಹಳ್ಳಿ ಮಧ್ಯಭಾಗದ ಸರ್ವೆ ನಂಬರ್ 11/3’ರಲ್ಲಿ ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಕಂದಾಯ ಅಧಿಕಾರಿಗಳು ಪಹಣಿ ಬದಲು ಮಾಡಿ ರೈತರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದರಿ ಜಮೀನಿನಲ್ಲಿ ಸುಮಾರು ಅರವತ್ತು ಎಪ್ಪತ್ತು‌ ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ, ಪಹಣಿ ಬದಲು ಮಾಡಿಕೊಂಡಿದ್ದಾರೆ. ಇದು ರೈತರಿಗೆ ಮಾಡಿದ ಅನ್ಯಾಯ ಎಂದು ರೈತ ಪಾಂಡುಕುಮಾರ್ ಆರೋಪಿಸುತ್ತಾರೆ.

ಈ ಸರ್ವೆ ನಂಬರ್’ನಲ್ಲಿ ನಾಲ್ಕು ಮಂದಿ ರೈತರು ಅನುಭೋಗದಲ್ಲಿದ್ದು, ಕಳೆದ 75 ವರ್ಷಗಳಿಂದಲೂ ಅವರಿಗೆ ಜಮೀನನ್ನು ಖಾತೆ ಮಾಡಿಕೊಡದೆ ಅಧಿಕಾರಿಗಳು ಸತಾಯಿಸಿದ್ದಾರೆ. ಖಾತೆ ಮಾಡಿಕೊಡಲು ಕಾಲ ಕಾಲಕ್ಕೆ ಬಂದುಹೋದ ಅಧಿಕಾರಿಗಳು ಉದ್ದಕ್ಕೂ ಲಂಚದ ಬೇಡಿಕೆ ಇಡುತ್ತಲೇ ಬಂದಿದ್ದರು‌. ಬಡ ರೈತರು ಲಂಚ ನೀಡದಿದ್ದ ಕಾರಣ ಈ ಜಮೀನನ್ನು ಈಗ ಸರ್ಕಾರಿ ಆಶ್ರಯ ಯೋಜನೆಗೆ ಮಂಜೂರು ಮಾಡಿದ್ದೇವೆಂದು ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ರೈತ ಪಾಂಡುಕುಮಾರ್, ಶಶಿಧರ್ ಮತ್ತು ಬಾಣೇಶ್’ರವರು ಮಾಧ್ಯಮಗಳ ಎದುರು ತಮ್ಮ ನೋವನ್ನು ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಬಗರ್’ಹುಕುಂ ಕಮಿಟಿ ರಚನೆಯಾಗಿದ್ದು, ಇದುವರೆಗೂ ಯಾವುದೇ ಸಭೆ ನಡೆದಿಲ್ಲ. ಆದರೆ ಅಧಿಕಾರಿಗಳು ಸಭೆಯಲ್ಲಿ ನಿಮಗೆ ಮಂಜೂರಾಗುವಂತೆ ಶಿಫಾರಸ್ಸು ಮಾಡಿದ್ದೇವೆ ಎಂದು ರೈತರಿಗೆ ಸುಳ್ಳು ಹೇಳಿ ಈಗ ಈ ಜಮೀನನ್ನು ಆಶ್ರಯ ಯೋಜನೆಗೆ ಕಾಯ್ದಿರಿಸಿರುತ್ತಾರೆ. ಇದು ರೈತರಿಗೆ ಮಾಡಿದ ಮೋಸವೇ ಹೌದು. ಯಾಕೆಂದರೆ, ಇಲ್ಲಿನ ರೈತರೆಲ್ಲ ಕಾಲಂ 57’ರಲ್ಲಿ ಹಣ ಕಟ್ಟಿ, ಪ್ರಸಿದ್ಧಿ ಪಡೆದುಕೊಂಡಿದ್ದೆವು. ಆ ದಾಖಲೆಗಳನ್ನೂ ಸಹ ಈ ಕಂದಾಯಾಧಿಕಾರಿಗಳು ನಾಶಗೊಳಿಸಿ, ನಮ್ಮ ರೈತರ ಜಮೀನನ್ನು ಆಶ್ರಯ ಯೋಜನೆಗೆ ಮುಡಿಪು ಒಪ್ಪಿಸಿರದ್ದಾರೆ ಎಂದು ರೈತರು ತಮ್ಮ ಆಕ್ರೋಶಗೊಂಡರು.


ಮೂಲತಃ ಸರ್ಕಾರಿ ಬಂಜರು ಎಂದು ಪಹಣಿಯಿದ್ದ ಸದರಿ ಜಮೀನನ್ನು ಈಗ ಆಶ್ರಯ ಯೋಜನೆ ಎಂದು ಪಹಣಿ ಬದಲು ಮಾಡಲಾಗಿದೆ ಅಷ್ಟೆ. ಇದು ಸರ್ಕಾರಿ ಉದ್ದೇಶಕ್ಕಾಗಿ ಮತ್ತು ಸಾರ್ವಜನಿಕ ವಸತಿ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು. ಜಿಲ್ಲಾಧಿಕಾರಿಗಳ ಆದೇಶದನ್ವಯ ಅದೀಗ ಗೋಡೇಕೆರೆ ಗ್ರಾಮ ಪಂಚಾಯತಿ ಆಶ್ರಯ ಯೋಜನೆಯ ವಸತಿ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ ಜಮೀನು. ಪ್ರತಿಯೊಂದು ಗ್ರಾಮದಲ್ಲೂ ಸಮೀಪದಲ್ಲೇ ಇರುವ ಸರ್ಕಾರಿ ಬಂಜರು ಜಮೀನಿನ ಸರ್ವೆ ನಂಬರುಗಳನ್ನು ಶೋಧಿಸಿ, ಅವನ್ನೆಲ್ಲ ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶ್ರಯ ಯೋಜನೆ ವಸತಿ ನಿರ್ಮಾಣದ ಉದ್ದೇಶಕ್ಕಾಗಿ ಕಾಯ್ದಿರಿಸಲಾಯಿತು. ಇದು ಆಗ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ‘ರವರ ಆದೇಶದನ್ವಯ ಕಾಯ್ದಿರಿಸಲಾಗಿರುವುದು. ಇದರಲ್ಲಿ ರೈತರಿಗೆ ಅನ್ಯಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇಲ್ಲಿ ಯಾವ ಅಧಿಕಾರಿಯೂ ರೈತರ ಎದುರು ಲಂಚಕ್ಕೆ ಬೇಡಿಕೆ ಇಟ್ಟಿಲ್ಲ. ಇದು ಅಪ್ಪಟ ಸುಳ್ಳು. ಅದೇ ರೀತಿ,
ಅನುಭೋಗದಲ್ಲಿರುವವರು ಮಂಜೂರಾತಿಗೆ ಅರ್ಜಿ ಹಾಕಿ ಅವರ ಅರ್ಜಿಗಳು ತಿರಸ್ಕೃತವೂ ಆಗಿವೆ. ಅನುಭೋಗಸ್ಥರ ಕುಟುಂಬಗಳು ಐದಾರು ಎಕರೆಗಳಷ್ಟು ಜಮೀನು ಹೊಂದಿದ್ದು, ಈ ಸರ್ಕಾರಿ ಜಮೀನನ್ನೂ ಉಳುಮೆ ಮಾಡಿಟ್ಟುಕೊಂಡಿದ್ದರು. ಅವರ ಬಳಿ ಸೂಕ್ತ ದಾಖಲೆಗಳಿದ್ದಲ್ಲಿ ಅವರು ಜಮೀನಿನ ಅನುಭೋಗದಲ್ಲಿರುತ್ತಿದ್ದರು. ಆದರೆ ಈ ಜಮೀನು ಮೂಲತಃ ಸರ್ಕಾರಿ ಬಂಜರು. ಈಗದು ನೂರಾರು ಜನ ಬಡವರಿಗೆ, ವಸತಿ ವಂಚಿತರಿಗೆ ಆಶ್ರಯ ಯೋಜನೆಯ ವಸತಿಗಳನ್ನು ಒದಗಿಸಿಕೊಡಲಿದೆ.

__ನವೀನ್, ಕಂದಾಯಾಧಿಕಾರಿ, ಶೆಟ್ಟಿಕೆರೆ ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು

ಮುಖ್ಯಾಂಶಗಳು ::
*ಮೂಲತಃ ಅದು ಸರ್ಕಾರಿ ಬಂಜರು
*75 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದ ಜಾಗ
*ಸರ್ಕಾರಿ ಉದ್ದೇಶಕ್ಕಾಗಿ ಆಶ್ರಯ ಯೋಜನೆಗೆ ಪಹಣಿ ಮಾಡಲಾಗಿದೆ
*ಅಧಿಕಾರಿಗಳಿಂದ ರೈತರಿಗೆ ಅನ್ಯಾಯ ಆಗಿದೆ
*ಮೂಲತಃ ಅದು ಸರ್ಕಾರಿ ಬಂಜರು. ಈಗದು ಸರ್ಕಾರಿ ಉದ್ದೇಶದ ಆಶ್ರಯ ಯೋಜನೆ ವಸತಿ ಪ್ರದೇಶ.

ಹೇಮಾವತಿ ಹೋರಾಟ: ಶಾಸಕರ ಬಂಧನದ ಯತ್ನ ವಿಫಲ

ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಮೇ30ರಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಮನೆ ಮುಂದೆ ಧರಣಿ ನಡೆಸಲು ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಶಾಸಕ ಎಂ.ಟಿ ಕೃಷ್ಣಪ್ಪನವರನ್ನು ಬಂಧಿಸಲು ಬಂದು ವಿಫಲವಾದ ಘಟನೆ ಗುರುವಾರ ಜರುಗಿತು.

ಗೊಲ್ಲಹಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದಿನ ಧರಣಿ ನಡೆಸಲು ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಒಳಗೊಂಡಂತೆ ಹೇಮಾವತಿ ಲಿಂಕ್ ಕೆನಾಲ್ ಹೋರಾಟ ಸಮಿತಿ ಹಾಗು ಜಿಲ್ಲೆಯ ರೈತರು ಹಾಗು ರೈತ ಮುಖಂಡರು ನಿರ್ಧರಿಸಿದ್ದರು.

ದೇವರಿಗೆ ಪೂಜೆ ಸಲ್ಲಿಸಿ ಮನೆಯಿಂದ ಹೊರಟು ಯಡಿಯೂರಿನತ್ತ ಪ್ರಯಾಣ ಬೆಳೆಸಿದ ಶಾಸಕರ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಬಂಧಿಸಲು ಮುಂದಾದರು.

ನಾನು ತಮ್ಮ ಹಿತೈಷಿಗಳ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ಶಾಸಕರು ಪೊಲೀಸರ ಪ್ರಶ್ನೆಗೆ ಉತ್ತರಿಸಿ ಹೊರಟರು.

ಮಾಯಸಂದ್ರ ರಸ್ತೆಯ ಬೆಳ್ಳಿ ಪೆಟ್ರೋಲ್ ಬಂಕ್ ಮುಂಭಾಗ ಹೈಡ್ರಾಮಾ ನಡೆದು ಶಾಸಕರ ವಾಹನವನ್ನು ಪೊಲೀಸರು ಹಿಂಬಾಲಿಸಿದರು.

ಗೃಹ ಸಚಿವರ ನಿವಾಸದ ಮುಂದೆ ಹಮ್ಮಿಕೊಳ್ಳಲಾಗಿದ್ದ ಧರಣಿಯನ್ನು ಕೈಬಿಡುವಂತೆ ಕಿರಿಯ ಪೊಲೀಸ ಅಧಿಕಾರಿಗಳು ಮನವಿ ಮಾಡಿದರು.

ಹಾಗಾದರೆ ನನ್ನ ಕ್ಷೇತ್ರದ ಜನರಿಗೆ ಹೇಮಾವತಿ ನೀರು ಕೈತಪ್ಪಿದರೆ ಸುಮ್ಮನೆ ಕೂರಬೇಕೆ? ಅವರು ಸರ್ಕಾರದ ಭಾಗವಲ್ಲವೇ ಹಾಗಾಗಿ ನ್ಯಾಯಕ್ಕಾಗಿ ಸಚಿವರ ಮನೆ ಮುಂದೆ ಧರಣಿ ಮಾಡುವುದು ಅನಿವಾರ್ಯ ಎಂದು ಶಾಸಕರು ಪೊಲೀಸರಿಗೆ ಮರು ಪ್ರಶ್ನಿಸಿ ಹೊರಟರು.

ಶಾಸಕರನ್ನು ಪೊಲೀಸ್‌ ಅಧಿಕಾರಿಗಳ ವಾಹನಗಳು ಹಿಂಬಾಲಿಸಿ ಕೊಂಡು ಹೊರಟರು.

ಇದಕ್ಕೂ ಮುನ್ನಾ ಮದುವೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಧರಣಿಯ ಸ್ಥಳಕ್ಕೆ ಹೋಗುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.