Friday, February 27, 2026
Google search engine
Home Blog Page 239

ಮೈದಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುರೇಶಗೌಡ ಬಿರುಸಿನ ಸಂಚಾರ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮೈದಾಳ ಗ್ರಾಮ‌ ಪಂಚಾಯಿತಿಯಲ್ಲಿ ಸೋಮವಾರ‌ ಮಾಜಿ ಶಾಸಕ ಬಿ.ಸುರೇಶಗೌಡ ಬಿರುಸಿನ ಸಂಚಾರ ನಡೆಸಿದರು.

ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಅವರು, ಲಾಕ್ ಡೌನ್ ತೆರವಿನ ಬಳಿಕ ಅತಿ ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಬ್ಬರು ಸರ್ಕಾರದ ಮಾರ್ಗದರ್ಶನ ಪಾಲಿಸಬೇಕು ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಸಮೀಪ ಕೊರೊನಾ ಪೀಡಿತ ವ್ಯಕ್ತಿಯ ಶವವನ್ನು ಯಾವುದೇ ಕ್ರಮ ತೆಗೆದುಕೊಳ್ಳದೇ ಸಾಮಾನ್ಯ ಶವದಂತೆ ಮುಚ್ಚಲಾಗಿದೆ. ವರದಿ ಬರುವ ಮುನ್ನವೇ ವೈದ್ಯರು ಶವ ನೀಡಿದ ಹಿಂದೆ ಯಾವ ರಾಜಕಾರಣಿ ಇದ್ದರು ಎಂಬುದು ಕ್ಷೇತ್ರದ ಜನರಿಗೆ ಗೊತ್ತಾಗಿದೆ. ನಾನೇನು ಹೇಳಬೇಕಾಗಿಲ್ಲ. ಯಾವುದೋ ಒಂದು ಸಮುದಾಯವನ್ನು ತೃಪ್ತಿ ಪಡಿಸಲು ಕ್ಷೇತ್ರದ ಜನರನ್ನು ಭಯದಲ್ಲಿ ಇರುವಂತೆ ಮಾಡಿದರು ಎಂದು ಕಿಡಿಕಾಡಿದರು.

ಬಡವರಿಗೆ ಸಹಾಯ ಮಾತ್ರ ಮಾಡುತ್ತಿಲ್ಲ. ಕೊರೊನಾದಿಂದ ರಕ್ಷಣೆ ಪಡೆಯುವ ಕುರಿತು ಜಾಗೃತಿ ಸಹ ಮೂಡಿಸುತ್ತಿದ್ದೇನೆ. ನನ್ನ ಜನರಿಗೆ ಏನಾದರೂ ಆದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗವಲ್ಲಿ ಅಥವಾ ಗ್ರಾಮಾಂತರ ಕ್ಷೇತ್ರದಲ್ಲಿ ಕೊರೊನಾ ಕಾಣಿಸಿಕೊಂಡರೆ ಅದರ ಹೊಣೆಯನ್ನು ಶವ ಕೊಟ್ಟವರೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗುಂಬ ಜಿಲ್ಲಾ ಪಂಚಾಯ್ತಿಯ ಮೈದಾಳ ಗ್ರಾಮ ಪಂಚಾಯ್ತಿಯ ಪಂಡಿತನಹಳ್ಳಿ ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯ್ತಿಯ ಬಂಡಿಹಳ್ಳಿ ಗ್ರಾಮದ ಪ್ರತಿ ಮನೆ ಮನೆಗೆ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್ ನ್ನು ವಿತರಣೆ ಮಾಡುವುದರ ಮೂಲಕ ಜನಗಳಿಗೆ ಮಹಾಮಾರಿ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ವೈ, ಹೆಚ್, ಹುಚ್ಚಯ್ಯ, ಬೆಳಗುಂಬ ಜಿಲ್ಲಾ ಪಂಚಾಯ್ತಿ ಸದಸ್ಯರಾದ ನರಸಿಂಹಮೂರ್ತಿ, ತಾ ಪಂ ಉಪಾಧ್ಯಕ್ಷರಾದ ಶಾಂತಕುಮಾರ್, ತಾ ಪಂ ಸದಸ್ಯರಾದ ಮಮತಾ ಕಾಂತರಾಜು, ರಮೇಶ್, ಮೈದಾಳ ಗ್ರಾಮ ಪಂ ಉಪಾಧ್ಯಕ್ಷರಾದ ಕಾಂತಾಣ್ಣ, ಗ್ರಾಮ ಪಂ ಸದಸ್ಯರಾದ ವಿರುಪಣ್ಣ, ಹನುಮಂತರಾಜು,ನೀಲಮ್ಮ, ನಾರಾಯಣಪ್ಪ, ಮುಖಂಡರಾದ ರಾಜೇಶ್, ಹರ್ಷ, ರಘು, ರಂಗನಾಥ್, ನವೀನ್, ರಂಗಸ್ವಾಮಿ, ಮಂಜುನಾಥ್, ಬೈರಾಪುರ ಉಮೇಶ್, ಯತೀಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಿರೀಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮದನ್, ಹಾಗೂ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು.

ನಿಸಾರ್ ಅಹಮದ್ ಅವರಿಗೆ ವಿದಾಯ ಹೇಳುತ್ತಾ…..ಮರತೇನೆಂದರ ಮರೆಯಲಿ ಹ್ಯಾಂಗ…?

ಜಿ ಎನ್ ಮೋಹನ್‌


ಏಕಾಂತಕ್ಕೆ ಲಾಲ್ ಭಾಗ್, ಲೋಕಾಂತಕ್ಕೆ ಗಾಂಧಿಬಜಾರು
-ಎಂದವರೇ ನನ್ನತ್ತ ನೋಡಿದ್ದು ಕೆ ಎಸ್ ನಿಸಾರ್ ಅಹ್ಮದ್…ಆಗ ನಾವಿಬ್ಬರೂ ಗಾಂಧಿಬಜಾರಿನ ಬೀದಿ ಬೀದಿ ಸುತ್ತಿ ಬ್ಯೂಗಲ್ ರಾಕ್ ನ ಎದುರಿಗಿದ್ದ ‘ಬೈಟು ಕಾಫಿ’ಯಲ್ಲಿ ಕಾಫಿ ಹೀರುತ್ತಿದ್ದೆವು.ಎಷ್ಟೋ ಕಾಲದ ನಂತರ ಗಾಂಧಿಬಜಾರಿನ ಮೂಲೆ ಮೂಲೆ ಸುತ್ತಿ ನಿಸಾರ್ ಥೇಟ್ ಪುಟ್ಟ ಮಗುವಿನಂತೆ ಸಂಭ್ರಮಿಸುತ್ತಿದ್ದರು.
ಅದರಿಂದಾಗಿಯೇ ಇರಬೇಕು ಕಾಫಿ ಒಂದಿಷ್ಟು ಹೆಚ್ಚೆ ಕಿಕ್ ಕೊಡುತ್ತಿತ್ತು.
‘ಮನಸು ಗಾಂಧಿಬಜಾರು’ ಆಗಿ ಹೋಗಿತ್ತು.‘ಮೋಹನ್ ನಿಮಗೆ ಗೊತ್ತಾ..?’ ಎಂದು ನಿಸಾರ್ ಕಣ್ಣುಗಳನ್ನು ಅರಳಿಸಿಕೊಂಡು ಕೇಳಿದರು.
ನನಗೆ ಗೊತ್ತಿತ್ತು ಅವರು ಇನ್ನೂ ಆ ಬಾಲ್ಯವೆಂಬ ಸೆಸೇಮಳ ಗುಹೆಯಿಂದ ಇನ್ನೂ ಆಚೆ ಬಂದಿಲ್ಲ ಎಂದು
‘ನಾನು ಹುಟ್ಟಿದ್ದು ಟಿಪ್ಪು ಹುಟ್ಟ್ಟಿದ ಸ್ಥಳದಿಂದ ಕೇವಲ ಅರ್ಧ ಫರ್ಲಾಂಗ್ ದೂರದಲ್ಲಿದೇವನಹಳ್ಳಿಯಲ್ಲಿ’ ಎಂದರು.’ನನ್ನ ತಂದೆಯವರ ಊರು ಕನಕಪುರದ ಕೊಕ್ಕರೆ ಹೊಸಹಳ್ಳಿ.
ಥೇಟ್ ಆ ಕೊಕ್ಕರೆಯಂತೆಯೇ ನಮ್ಮಪ್ಪ ಇನ್ನೂ ಓದುತ್ತಿರುವಾಗಲೇ ವಲಸೆ ಹೋಗಿಬಿಟ್ಟರು.
ಜಮೀನು ನೋಡಿಕೊಳ್ಳುತ್ತ ಇದ್ದುಬಿಡುವುದು ಅವರಿಗೆ ಬೇಕಿರಲಿಲ್ಲ.
ಅವರಿಗೆ ಶಿಕ್ಷಣ ಎಲ್ಲಕ್ಕಿಂತ ಅತಿ ದೊಡ್ಡದಾಗಿತ್ತು. infact ಅದೇ ಅವರ ದೇವರಾಗಿತ್ತು’ ಎಂದರು.’ನನ್ನ ನಾಲಿಗೆ ತಿದ್ದಿದ್ದು ನನ್ನಪ್ಪ ಗೊತ್ತಾ
ಅದೇ ಲಾಲ್ ಭಾಗ್ ನಲ್ಲಿ’ ಎಂದರು.ನಾವು ಮತ್ತೆ ಏಕಾಂತ ಮತ್ತು ಲೋಕಾಂತದ ಕಡೆಗೆ ಹೊರಳಿಕೊಂಡಿದ್ದೆವು.’ನಮ್ಮ ಮನೆ ಲಾಲ್ ಭಾಗ್ ನ ಪಕ್ಕದಲ್ಲೇ ಇತ್ತು. ಒಂದು ರಸ್ತೆ ದಾಟಿದರೆ ಸಾಕಿತ್ತು. ನನ್ನನ್ನು ಲಾಲ್ ಭಾಗ್ ಗೆ ಕರೆದುಕೊಂಡು ಬಂದು ಅಲ್ಲಿನ ಗಿಡ ಮರಗಳ ಮಧ್ಯೆ ಕನ್ನಡ ಪದಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಹೇಳಿಕೊಡುತ್ತಾ ಇದ್ದರು.ನಮ್ಮಪ್ಪ ಗುರುಕುಲದಲ್ಲಿ ಕಲಿತದ್ದು. ಅವರಿಗೆ ಸಂಸ್ಕೃತದ ಮೇಲೂ ಅಷ್ಟೇ ಹಿಡಿತ ಇತ್ತು. ಅಪ್ಪನೇ ನನ್ನ ಮೊದಲ ಪಾಠಶಾಲೆ, ಅಪ್ಪನೇ ನನ್ನ ಮೊದಲ ಗುರು’ ಎಂದರುತಕ್ಷಣ ನನ್ನ ನೆನಪಿಗೆ ಬಂದಿದ್ದು ಅವರ ಮನೆಯ ಹೆಸರು- ಹಮೀದಾ ಹೈದರ್.’ಅದು ನನ್ನ ಅಪ್ಪ ಅಮ್ಮನ ಹೆಸರು.
ನಂಬಿಕೆಗಳಲ್ಲಿ ಇಬ್ಬರೂ ಭಿನ್ನ ಧಿಕ್ಕಿನವರು
ಅಮ್ಮ ಹಮೀದಾಗೆ ದೇವರು, ಉಪವಾಸ, ಕುರಾನ್ ಮುಖ್ಯವಾಗಿ ಕಂಡಿತ್ತು
ಅಪ್ಪನಿಗೆ ಓದು, ಕನ್ನಡ..’ಅವರು ಇಷ್ಟು ಹೇಳುತ್ತಿರುವಾಗಲೇ ನಾನು ಒಳ್ಳೆ ಕೈನಲ್ಲಿ ಅವರ ಎಕ್ಸ್ ರೇ ಶೀಟ್ ಹಿಡಿದವನಂತೆ ‘ಸಾರ್ ನಿಮ್ಮ ಶ್ವಾಸಕೋಶ..’ ಎಂದೆತಕ್ಷಣ ಅವರಿಗೆ ನಾನು ಏನು ಹೇಳಲು ಬಾಯಿ ತೆರೆದಿದ್ದೇನೆ ಎನ್ನುವುದು ಗೊತ್ತಾಗಿ ಹೋಯಿತು.‘ಯಸ್, ಲಾಲ್ ಭಾಗ್ ಹಾಗೂ ಗಾಂಧಿಬಜಾರು ನನ್ನ ಎರಡು ಶ್ವಾಸಕೋಶಗಳು’ ಎಂದರು.’ಬಾಲ್ಯ ಲಾಲ್ ಭಾಗ್ ಆದರೆ, ಯೌವ್ವನ ಗಾಂಧಿಬಜಾರ್’ ಎಂದರು.
ನಾನು ಮುಖ ಅಷ್ಟು ಅಗಲ ಮಾಡಿಕೊಂಡದ್ದನ್ನು ನೋಡಿ ‘ಯಾಕೆ?’ ಎಂದರು.
‘ಇದು ಯಾಕೋ ಉಲ್ಟಾ ಆಗೋಯ್ತು ಸರ್’ ಅಂದೆ .
‘ಎಲ್ಲರಿಗೂ ಬಾಲ್ಯ ಗಾಂಧಿಬಜಾರಾದರೆ, ಯೌವ್ವನ ಲಾಲ್ ಭಾಗ್ ಆಗಿರುತ್ತೆ’ ಅಂದೆತಕ್ಷಣ ನಿಸಾರ್ ತಮ್ಮ ಎಂದಿನ ತುಂಬು ನಗೆ ನಕ್ಕು ನನ್ನ ಬೆನ್ನಿನ ಮೇಲೆ ಎರಡು ಬಾರಿಸಿದರು.ನಾನು ಇದೇ ಸರಿಯಾದ ಸಮಯ ಅಂತ ‘ಸಾರ್, ಹೇಳಿ ಯಾರು ಆ ಮನೋರಮಾ’ ಎಂದೆಹಾಗೆ ಕೇಳಲು ಕಾರಣವಿತ್ತು’ಮನೋರಮಾ ಮನೋರಮಾ
ಸಾಲದೇನೆ ನಿನ್ನ ಹೆಸರೇ
ಮಲಗೋಬಾದ ಗಮ ಗಮ’ಎನ್ನುವ ನಿಸಾರರ ಸಾಲುಗಳನ್ನು ನಾವು ನಮ್ಮ ಯೌವ್ವನಕ್ಕೆ ಪ್ರವೇಶಿಸಲು ಬೇಕಾದ ಐಡೆಂಟಿಟಿ ಕಾರ್ಡ್ ನಂತೆ ಸದಾ ಝಳಪಿಸುತ್ತಿದ್ದೆವು.
ಹಾಗಾಗಿಯೇ ನಮಗೆ ‘ಮನೋರಮಾ’ ಎಂದರೆ ನಿಸಾರರ ಸಿ ವಿ ರಾಮನ್, ಮಾಸ್ತಿ, ಹನುಮನಷ್ಟೇ ಇಂಪಾರ್ಟೆಂಟ್’ನೀವು ಈ ಪ್ರಶ್ನೆ ಕೇಳಲೂ ಬಾರದು, ನಾನು ಉತ್ತರ ಹೇಳಲೂ ಬಾರದು’ ಅಂದರು.
ನಿಸಾರರ ಮುಂಗೋಪದ ಪರಿಚಯ ಸುಮಾರು ಜನರಿಗಿದೆ.
ಹಾಗಾಗಿಯೇ ನಾನು ಸುಮ್ಮನಾಗಿಬಿಟ್ಟೆ.ಆದರೆ ನಿಸಾರ್ ಸುಮ್ಮನಾಗಲಿಲ್ಲ
ಅವರ ಮನದೊಳಗೆ ಜೋಗದ ಸಿರಿ ಬೆಳಕಿನಂತೆ ಬಲ್ಬುಗಳು ಹೊತ್ತಿಕೊಂಡಿದ್ದವು.’ನನ್ನದು ಬರೀ ಪ್ಲೆಟಾನಿಕ್ ಲವ್ ಕಣಪ್ಪ’ ಅಂತ ಮೊದಲೇ ನಿರೀಕ್ಷಣಾ ಜಾಮೀನು ತೆಗೆದುಕೊಂಡರು.’ನನ್ನ ಮನೋರಮಾಗೆ ಒಬ್ಬಳ ಮೂಗಾದರೆ ಇನ್ನೊಬ್ಬಳ ಕಣ್ಣು ಹುಬ್ಬು, ಮತ್ತೊಬ್ಬಳ ಅಂಗ ಸೌಷ್ಠವ್ಯ, ಇನ್ನೊಬ್ಬಳ ನಡೆನುಡಿ
ಹೀಗೆ ಮನೋರಮಾ ನನ್ನನ್ನು ಕಾಡಿದ ಎಲ್ಲಾ ಹೆಣ್ಣುಗಳ ಕೊಲಾಜ್’ ಎಂದು ಹುಸಿ ನಗು ನಕ್ಕರು.’ಒಂದಂತೂ ನಿಜ ನಾನು ಪ್ರೀತಿಯಿಂದ ನೋಡಿದ ಎಲ್ಲಾ ಹೆಣ್ಣುಗಳೂ ನನ್ನ ಕಾವ್ಯದಲ್ಲಿ ಬಂದು ಹೋಗಿದ್ದಾರೆ.
ಎಲ್ಲ ಮರೆತಿರುವಾಗ, ಮತ್ತದೇ ಬೇಸರ ಅದೇ ಸಂಜೆ, ನೀ ನುಡಿಯದಿರುವಾಗ…ಇದೆಲ್ಲಾ ಇನ್ನೇನು’ ಎಂದರು.ನಿಸಾರ್ ಹಾಗೂ ನನ್ನ ಗೆಳೆತನಕ್ಕೆ ಒಂದು ವಿಶಿಷ್ಟ ಸ್ಪರ್ಶವಿತ್ತು.
ಕಿ ರಂ ಕಟ್ಟಿದ ‘ಕಾವ್ಯ ಮಂಡಲ’ದಲ್ಲಿ ಮೊದಲ ಬಾರಿಗೆ ಅವರನ್ನು ಕಂಡಾಗ ನಮಗೆ ಅವರು ‘ನಿತ್ಯೋತ್ಸವ’ದ ನಿಸಾರರೂ ಅಲ್ಲ ‘ಸಂಜೆ ಐದರ ಮಳೆ’ಯ ನಿಸಾರರೂ ಅಲ್ಲಅವರು ನಮ್ಮೊಳಗೇ ಆಗ ಬೆಂಕಿ ಹೊತ್ತಿಸುತ್ತಿದ್ದ ಪ್ಯಾಬ್ಲೋ ನೆರೂಡಾನನ್ನು ಕನ್ನಡಕ್ಕೆ ಕೈ ಹಿಡಿಸಿ ನಡೆಸಿಕೊಂಡು ಬಂದ ‘ಬರೀ ಮರ್ಯಾದಸ್ಥರೇ’ ಯ ನಿಸಾರರು
ನಮ್ಮೊಳಗೆ ಕನಸು ಉಕ್ಕಿಸಿದ್ದ ಶೇಕ್ಸ್ ಪಿಯರ್ ನ ‘ಮಿಡ್ ಸಮ್ಮರ್ ನೈಟ್ ಡ್ರೀಮ್ಸ್’ ನ್ನು ಕನ್ನಡಕ್ಕೆ ತಂದ ನಿಸಾರರು.ಅವರು ‘ಗ್ಯಾಸ್ ಕಾಲೇಜಿ’ನಲ್ಲಿ ಪಾಠ ಮಾಡುವಾಗ ನಾವು ಪಕ್ಕದ ಸೆಂಟ್ರಲ್ ಕಾಲೇಜಿನ ಹಕ್ಕಿಗಳು
ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾವು ಅದೇ ಅಕಾಡೆಮಿ ಕವಿಗೋಷ್ಠಿಯಲ್ಲಿದ್ದವರು.
ಹೀಗೆ ನಂಟು ಬೆಳೆಯುತ್ತಾ ಹೋಯಿತು.ಅವರು ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ನಾನು ‘ಈಟಿವಿ’ ಸುದ್ದಿ ವಿಭಾಗದ ಮುಖ್ಯಸ್ಥ
ನಾನು ‘ನಿಸಾರ್ ಸಾರ್’ ಎನ್ನುವ ಕಾರ್ಯಕ್ರಮ ಸರಣಿ ರೂಪಿಸಿದೆ.
ನಮ್ಮ ನಂಟು ಬಿಡಿಸಲಾಗದಂತೆ ಬೆಸೆದುಕೊಂಡಿತು.’ನನಗೆ ಕಿಂದರಿ ಜೋಗಿ ಮತ್ತೆ ಗೋವಿನ ಹಾಡು ಸಿಕ್ಕಾಪಟ್ಟೆ ಕಾಡಿಸಿಬಿಡ್ತಪ್ಪಾ
ನಾನೇನಾದರೂ ಕವಿ ಆಗಿದ್ರೆ ಈ ಎರಡರ ಪಾಲು ದೊಡ್ಡದು.
ಇನ್ನೂ ಮಾಧ್ಯಮಿಕ ಶಾಲೆಯಲ್ಲಿದ್ದೆ. ಈ ಎರಡು ಹಾಡು ಕೇಳ್ತಾ ಕಣ್ಣೀರಿಡ್ತಾ ಕೂತಿರ್ತಿದ್ದೆ.ನಾನು ಕಿಡಿಯನ್ನು ಕೆಂಡ ಮಾಡಿಕೊಂಡೆ, ಕೆಂಡದ ಕಾವನ್ನು ಬೆಳಕು ಮಾಡಿಕೊಂಡೆ’ ಎಂದರುಶಾಲೆಯ ಗೋಡೆ ಪತ್ರಿಕೆ ‘ವನಸುಮ’ದಲ್ಲಿ ಒಂದಿಷ್ಟು ಜಾಗ ಖಾಲಿ ಬಿತ್ತು ಎನ್ನುವ ಕಾರಣಕ್ಕೆ ಜಲಪಾತವೇ ನೋಡದಿದ್ದ ನಿಸಾರ್ ಜಲಪಾತದ ಬಗ್ಗೆ ಕವನ ಬರೆದರು.
ಹೈದರ್ ಮಗ ನಿಸಾರ್ ಕವಿಯಾಗಿ ಮೊದಲ ಹೆಜ್ಜೆ ಊರಿಬಿಟ್ಟಿದ್ದ’ಸಾರ್, ನಿಮಗೆ ಗಣಿತ ಸಿಕ್ಕಾಪಟ್ಟೆ ಫೇವರೈಟ್’ ಎಂದೆ
ತಕ್ಷಣ ‘ಸುಮ್ನಿರೋ ಮಾರಾಯ ಕಾಲೆಳೀಬೇಡ’ ಎಂದರು.ಗಣಿತದಿಂದ ತಪ್ಪಿಸಿಕೊಳ್ಳಲು ಹೋಗಿ ನಿಸಾರ್ ಲ್ಯಾಂಡ್ ಆಗಿದ್ದು ಜಿಯಾಲಜಿಯಲ್ಲಿ.ಕಲಬುರ್ಗಿಯ ಮಂದಿಗಂತೂ ನಿಸಾರ್ ನಮ್ಮಲ್ಲೇ ಹುಟ್ಟಿದರೇನೋ ಎನ್ನುವಷ್ಟು ಅಭಿಮಾನ ಇರುವುದನ್ನು ನಾನು ಕಂಡಿದ್ದೆ
‘ಪ್ರಜಾವಾಣಿ’ಗಾಗಿ ನಾನು ಅಲ್ಲಿದ್ದ ದಿನಗಳಲ್ಲಿ ಇದಕ್ಕೆ ಕರಣ ಏನು ಅಂತ ಹುಡುಕುತ್ತಾ ಹೋದೆ.
ನಿಸಾರ್ ಅಸಿಸ್ಟೆಂಟ್ ಜಿಯಾಲಜಿಸ್ಟ್ ಎನ್ನುವ ಪದಕ ಎದೆಗೇರಿಸಿಕೊಂಡು ಮೊದಲು ಕಾಲಿಟ್ಟದ್ದು ಗುಲ್ಬರ್ಗಕ್ಕೆ.’ಶಹಾಬಾದ್ ಸಿಮೆಂಟ್ ಕಾರ್ಖಾನೆಯ ಬಗ್ಗೆ ವರದಿ ರೆಡಿ ಮಾಡುತ್ತ್ತಾ, ಅಲ್ಲಿ ಇಲ್ಲಿ ಬಾವಿ ತೋಡಿಸುತ್ತಾ ಸಾಕಾಗಿ ಹೋಯ್ತು ಮಾರಾಯ.
ಮನಸ್ಸಲ್ಲಿ ಕಿಂದರಿ ಜೋಗಿ. ಕಣ್ಣ ಮುಂದೆ ಸಿಮೆಂಟ್ ದೂಳು. ಸಾಕಾಗಿ ಹೋಯ್ತು. ರಾಜೀನಾಮೆ ಕೊಟ್ಟು ಸೆಂಟ್ರಲ್ ಕಾಲೇಜಿನಲ್ಲಿ ಎಂ ಎಸ್ ಸಿ ಗೆ ಸೇರಿದೆ’ ಎಂದರು.ಅಂಕಿ ಸಂಖ್ಯೆ ಎಂದರೆ ಮಾರುದೂರ ಎಂದರೂ ನಿಸಾರರಿಗೆ ತಮ್ಮ ಬದುಕನ್ನು ಬದಲಾಯಿಸಿದ ಅಂಕಿ ಸಂಖ್ಯೆಗಳ ಬಗ್ಗೆ ಇನ್ನಿಲ್ಲದ ಪ್ರೀತಿ.
೧೯೫೯, ಅಕ್ಟೊಬರ್ ನಾನು ಕುವೆಂಪು ಸ್ಪರ್ಶಕ್ಕೆ ಸಿಕ್ಕಿ ಹೋದೆ ಎನ್ನುತ್ತಾ ನೆನಪಿನ ದೋಣಿ ಹತ್ತಿಯೇಬಿಟ್ಟರು.ಬೆಂಗಳೂರು ಆಕಾಶವಾಣಿಯಲ್ಲಿ ಕವಿಗೋಷ್ಠಿ ಇತ್ತು.
ಅದು ಯುದ್ಧದ ಸಮಯ ನಾನು ಸಮರ ಗೀತೆ ಓದಿದೆ.
ಅಷ್ಟೇ, ಪಕ್ಕದ ಸೋಫಾದಲ್ಲಿದ್ದ ಕುವೆಂಪು ಕರೆದರು.
ನನಗೋ ಕಿಂದರಿ ಜೋಗಿಯ ಕೈ ಮುಟ್ಟುವ ತವಕ
ನನ್ನ ಬದುಕಿಗೆ ಇನ್ನಿಲ್ಲದ ತಿರುವು ದಕ್ಕಿ ಹೋಯ್ತು’ಮೂರು ದಿನದಲ್ಲಿ ‘ಕೆ ಎಸ್ ನಿಸಾರ್ ಅಹಮದ್ ಕೇರಾಫ್ ಸ್ಟೇಷನ್ ಡೈರೆಕ್ಟರ್, ಆಕಾಶವಾಣಿ’ ಎನ್ನುವ ಹೆಸರಿಗೆ ಒಂದು ಪತ್ರ ಬಂತು ಮೈಸೂರಿನ ದಸರಾ ಕವಿಗೋಷ್ಟಿಗೆ ಆಹ್ವಾನ. ಅಲ್ಲಿ ಹೋದರೆ ‘ಕುವೆಂಪು ಹೇಳಿದ ಹುಡುಗ ಇವನೇ’ ಎನ್ನುತ್ತಾ ಎಲ್ಲರೂ ನನ್ನನ್ನು ನೋಡುತ್ತಿದ್ದರು. ವಾಪಾಸ್ ಬರಬೇಕೆನ್ನುವಾಗ ಮೈಸೂರು ಯೂನಿವರ್ಸಿಟಿ ರಿಜಿಸ್ಟ್ರಾರ್ ಕರೆದವರೇ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ರಷ್ಯಾಗೆ ಹೋಗುತ್ತಿದ್ದಾರೆ ತಾತ್ಕಾಲಿಕವಾಗಿ ನಿಮ್ಮನ್ನು ಆಯ್ಕೆ ಮಾಡುವಂತೆ ಕುವೆಂಪು ಹೇಳಿದ್ದಾರೆ ಎಂದರು’ ಎಂದು ಕಣ್ಣು ಅರಳಿಸಿದರು.ಆಸಕ್ತಿ ಇದ್ದದ್ದು ‘ನಿತ್ಯೋತ್ಸವ’ದ ಬಗ್ಗೆ, ‘ಕುರಿಗಳು ಸಾರ್ ಕುರಿಗಳು’ ಬಗ್ಗೆ
ನಿಸಾರ್ ನನ್ನನ್ನು ನಿಂತಲ್ಲಿಯೇ ಕೈಬಿಟ್ಟು ಶಿವಮೊಗ್ಗಕ್ಕೆ ಹೋಗಿಬಿಟ್ಟರು. ನೇರ ತುಂಗಾ ನದಿಯ ಬಳಿಗೆ.’೧೯೬೭ರಲ್ಲಿ ಸಹ್ಯಾದ್ರಿ ಕಾಲೇಜಿಗೆ ಬಂದೆ.
ಪ್ರತೀ ದಿನ ತುಂಗಾ ನದಿ ದಾಟಿಯೇ ಕಾಲೇಜಿಗೆ ಹೋಗಬೇಕು’.’ಇಡೀ ಜಿಲ್ಲೆಯಲ್ಲಿ ಯಾವುದೇ ಪ್ರೋಗ್ರಾಮ್ ನಡೆದರೂ ನಾವೇ ಒಂದಷ್ಟು ಜನ ಗೆಸ್ಟ್ ಗಳು
ನಾನು ಕೋಣಂದೂರು, ರಿಪ್ಪನ್ ಪೇಟೆ, ತೀರ್ಥಹಳ್ಳಿ ಸುತ್ತಿದೆ. ಎಂತಹ ನಿಸರ್ಗ ವೈಭವ
ಇದು ನನಗೆ ಮೋಡಿ ಮಾಡಿಬಿಟ್ಟಿತ್ತು’.’ಒಂದಷ್ಟು ದಿನ ರಜೆಗೆ ಅಂತ ಬೆಂಗಳೂರಿಗೆ ಬಂದಿದ್ದೆ.
ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಪದ್ಮ ಚರಣ್ ಗದರಿಸಿದರು. ಅಲ್ಲಯ್ಯ ನವೆಂಬರ್ ಬರ್ತಾ ಇದೆ. ನಿನಗೆ ಒಂದು ಕವಿತೆ ಬರೆದುಕೊಡು ಅಂತ ಹೇಳಿ ತಿಂಗಳಾಯ್ತು ಅಂತ.
ನನಗೆ ಮರೆತು ಹೋಗಿತ್ತು. ನಾಳೆ ಬೆಳಗ್ಗೆ ನನಗೆ ಕವಿತೆ ಬೇಕೇ ಬೇಕು ಅಂದ್ರು. ನಾನು ಆ ರಾತ್ರಿ ಮನೆಯ ಟೆರೇಸ್ ನಲ್ಲಿ ಶತಪಥ ತಿರುಗ್ತಾ ಇದ್ದೆ. ಆಗ ಆ ತುಂಗಾ ನನ್ನೆದುರು ಹಾದುಹೋಯಿತು.
‘ಜೋಗದ ಸಿರಿ ಬೆಳಕಿನಲ್ಲಿ’ ಎನ್ನುವ ಸಾಲು ಮೂಡಿತು. ಆಮೇಲಿನದ್ದು ಎಲ್ಲರಿಗೂ ಗೊತ್ತು’ ಎಂದರು.’ಆಕಾಶವಾಣಿಗೆ ಕವಿತೆ ಬೇಕು ಅಂದರೆ ಸಾಕು ನನ್ನನ್ನು ಹುಡುಕುತ್ತಿದ್ದರು.
ಆಗ ಚೀನಾ ನಮ್ಮ ಮೇಲೆ ಆಕ್ರಮಣ ನಡೆಸಿತ್ತು. ಎಲ್ಲೆಲ್ಲೂ ಸಮರದ್ದೇ ಮಾತು
ಚೀನೀಯರು ನೋಡ ನೋಡುತ್ತಲೇ ನಮ್ಮತ್ತ ನುಗ್ಗುತ್ತಾ ಇದ್ದರು.
ನಮ್ಮ ನೇತಾರರು ಮಾತ್ರ ಹಿಮಾಲಯದಲ್ಲಿ ಒಂದು ಹುಲ್ಲೂ ಸಹಾ ಬೆಳೆಯೋದಿಲ್ಲ, ಅಲ್ಲಿಗೆ ಬಂದು ಏನು ಮಾಡ್ತಾರೆ ಅನ್ನುವ ಮನೋಭಾವದಲ್ಲಿದ್ದರು.
ಒಂದು ದಿನ ಟಾಟಾ ಇನ್ಸ್ಟಿಟ್ಯೂಟ್ ಮುಂದೆ ಹೋಗ್ತಾ ಇದ್ದೆ.
ದೊಡ್ಡ ಕುರಿ ಹಿಂಡು ಸಾಗುತ್ತಿತ್ತು. ಹಿಂದೆ ಕುರಿ ಕಾಯುವವ
‘ಕುರಿಗಳು ಸಾರ್ ಕುರಿಗಳು’ ಅಂತ ಹೊಳೀತು ಅಷ್ಟೇ ‘ಒಂದು ದಿನ ಜಿ ಎಸ್ ಎಸ್ ಮತ್ತೆ ನಾನು ಎಲ್ಲಿಗೋ ಹೋಗ್ತಿದ್ವಿ
‘ಏನಯ್ಯಾ ಮೈಸೂರು ಅನಂತಸ್ವಾಮಿ ಕುರಿಗಳಿಗೆ ರಾಗ ಹಾಕಿದ್ದಾನೆ ಏನೋ ಮಜಾ ಕೊಡುತ್ತೆ ಫಾರಿನ್ ಸ್ಟೈಲ್ ನಲ್ಲಿ ಹಾಕಿದ್ದಾನೆ’ ಅಂದರು.
ನಾನು ಇನ್ನೂ ಕೇಳಿರಲೇ ಇಲ್ಲ.ಈ ಮೈಸೂರು ಅನಂತಸ್ವಾಮಿ ನನಗೆ ಸಿಕ್ಕಿದ್ದೇ ಅ ನ ಸುಬ್ಬರಾಯರ ಕಲಾಮಂದಿರದಲ್ಲಿ
ಎಲ್ ಆರ್ ಡಿ ಇ ಗೆ ಕೆಲಸಕ್ಕೆ ಇಂಟರ್ವ್ಯೂಗೆ ಬಂದಿದ್ದ
ಅಗಲ ಹಣೆ, ತೆಳ್ಳಗಿನ ಮೈ. ಆದರೆ ಹೆಸರು ಮಾತ್ರ ‘ದೊರೆ”ಬೇಡ ದೊರೆ, ಬಿಟ್ಬಿಡು’ ಅಂತ ನಾನು ಕೈಮುಗಿಯುವ ಸ್ಟೇಜ್ ಗೆ ಒಂದು ಸಲ ನನ್ನ ತಂದುಬಿಟ್ಟ’ ಎಂದವರೇ
ತಮ್ಮ ‘ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ’ ಎನ್ನುವ ಹಾಡಿನ ಲೋಕಕ್ಕೆ ಹೊರಳಿಕೊಂಡರು.ಹಾಡು ಬರಿ ಅಂದ. ಸರಿಬಿಡು ಅಂದೆ.
ಹಾರ್ಮೋನಿಯಂ ತಗೊಂಡವನೇ ಯಾವುದೋ ರಾಗ ನುಡಿಸಿದ. ‘ಈ ರಾಗಕ್ಕೆ ಬರಿ’ ಅಂದ
ನಾನು ಬೆಚ್ಚಿಬಿದ್ದೆ. ‘ನಾನು ಕವಿತೆ ಬರೆಯೋನಪ್ಪಾ ರಾಗಕ್ಕೆ ಬರೆಯೋದಿಲ್ಲ ಅಂತ ಪಟ್ಟು ಹಿಡಿದೆ.
ಅವನೋ ನನಗಿಂತ ಜಗಮೊಂಡ. ‘ಹಿಂದೋಳ’ ರಾಗ ಇದು ನೀನು ಬರೀಲೇಬೇಕು ಅಂತ ಹಠಕ್ಕೆ ಬಿದ್ದ.
ಆ ದೊರೆಗಾಗಿ ನಾನು ವ್ರತ ಮುರಿದೆ. ಬೆಣ್ಣೆ ಕದ್ದ ಹೊರಬಂತು’ ಅಂದರು.ಅದು ಎಷ್ಟು ಫೇಮಸ್ ಆಗೋಯ್ತು ಅಂದ್ರೆ ಮತ್ತೆ ಇನ್ನೊಂದು ಸಲ ಅವನ ಮುಂದೆ ಕೈಮುಗಿದು ನಿಂತು ‘ಆ ಹಾಡನ್ನ ಇನ್ನು ಹಾಡಬೇಡಪ್ಪಾ’ ಅಂದೆ.
ಅವನಿಗೆ ಆಶ್ಚರ್ಯ ಆಗೋಯ್ತು. ತನ್ನ ಕವಿತೆಯನ್ನೇ ಹಾಡಬೇಡಿ ಅನ್ನೋ ಕವೀನೂ ಇದ್ದಾರಾ ಅಂತ
‘ಈ ಹಾಡು ಫೇಮಸ್ ಮಾಡಿ ನನ್ನ ಬೇರೆ ಕವಿತೆಗಳನ್ನ ಕೇಳೋರೇ ಗತಿ ಇಲ್ಲದ ಹಾಗೆ ಆಗ್ತಾರಪ್ಪ’ ಅನಂತ ಭಿನ್ನವಿಸಿಕೊಂಡೆ ಎಂದು ನಾಟಕೀಯವಾಗಿ ಕೈ ಮುಗಿದು ತೋರಿಸಿದರು.ಅಷ್ಟರಲ್ಲಿ ಬೈಟು ಕಾಫಿ ಮತ್ತೆ ನಮ್ಮ ಕೈಗೆ ಬಂದಿತ್ತು.
ಅಣ್ಣಾವ್ರ ಜೊತೆಗಿನ ನಂಟು, ‘ನಾನೆಂಬ ಪರಕೀಯ’ ಬರೆದಾಗ ‘ಕರ್ಮವೀರ’ದಲ್ಲಿ ಆದ ದೊಡ್ಡ ಚರ್ಚೆ,
ಮಾಸ್ತಿ ನೆನಪು, ಸಾಹಿತ್ಯ ರಾಜಕೀಯ ಇನ್ನೂ ಏನೇನೋ ಕಾಫಿಯ ನಡುವೆ ಬಂದು ಹೋಯ್ತುನನಗೆ ಅದೇ ಗಾಂಧೀ ಬಜಾರಿನ ಬೀದಿಯಲ್ಲಿ ಅಡ್ಡಾಡುತ್ತಲೇ ಅವರ ಕವಿತೆ ಕೇಳಬೇಕು ಎನ್ನುವ ಹುಕಿ ಬಂತು
ನನ್ನ ಮೊಬೈಲ್ ಆನ್ ಮಾಡಿದೆ.‘ಥೂ ನಿನ್ನ.. ನಾನೇ ಇಲ್ಲಿರುವಾಗ ಮೊಬೈಲ್ ನಲ್ಲಿ ಇರೋ ನನ್ನ ಕವಿತಾ ವಾಚನ ಕೇಳ್ತೀಯಾ’ ಎಂದು ಗದರಿಕೊಂಡವರೇ
ಜನ ಬೆನ್ನಿಗೆ ಬಿದ್ದು ಕೈಕುಲುಕುತ್ತಿದ್ದರೂ ಜಗ್ಗದೆ ನನ್ನ ಬೆನ್ನ ಬೆನ್ನ ಮೇಲೆ ಕೈ ಹಾಕಿ
‘ಸಿ ವಿ ರಾಮನ್ ಸತ್ತ ಸುದ್ದಿ’ ಓದುತ್ತ ಹೋದರು.ನನ್ನ ಭುಜದ ಮೇಲಿನ ಅವರ ಸ್ಪರ್ಶದ ಬಿಸಿ ಇನ್ನೂ ಆರಿಲ್ಲ.ಆಗಲೇ ಸಿ ವಿ ರಾಮನ್ ಸತ್ತ ಸುದ್ದಿ ನನ್ನ ಕಿವಿಗೆ ತುಂಬಿದ್ದ ಆ ನಿಸಾರರೂ ಇಲ್ಲವಾದ ಸುದ್ದಿ…ಮರತೇನೆಂದರೆ ಮರೆಯಲಿ ಹ್ಯಾಂಗ…?

ಬಿಲ್ಡರಗಳ ಹಿತಕ್ಕಾಗಿ ಕಾಮಿ೯ಕರನ್ನು ಬಲಿ ಕೊಡುತ್ತಿರುವ ರಾಜ್ಯ ಸಕಾ೯ರ ಸಿಪಿಐ(ಎಂ) ಖಂಡನೆ

Publicstory. in


ಬೆಂಗಳೂರು; ರಾಜ್ಯ ಸಕಾ೯ರವು ಲಾಕ್ಡೌನ್ ಆರಂಭದಿಂದಲೂ ದೊಡ್ಡ ಬಿಲ್ಡರಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾಮಿ೯ಕರನ್ನು ಬಲಿಕೊಡುತ್ತಿದೆ. ರಾಜ್ಯ ಸಕಾ೯ರದ ಈ ಯತ್ನಗಳು ಕಾಮಿ೯ಕರ ಜೀವಕ್ಕೆ ಕಂಟಕ ವಾಗಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ರಾಜ್ಯ ಸಕಾ೯ರವು ಈ ಕಾರಣಕ್ಕಾಗಿಯೇ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ತಡವಾಗಿ ರೈಲು ವ್ಯವಸ್ಥೆ ಮಾಡಿದೆ.ಅದನ್ನು ಸಹಾ ಗುಪ್ತವಾಗಿ ನಗರದಿಂದ ದೂರದ ಚಿಕ್ಕಬಾಣಾವರ ಮತ್ತು ಮಾಲೂರು ರೈಲು ನಿಲ್ದಾಣದಿಂದ ಮಾಡಿದೆ.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಬಾರದ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ಸೇವಾ ಸಿಂಧು ಆಪ್ ಮೂಲಕವೇ ಊರಿಗೆ ಹೋಗಲು ಅಜಿ೯ ಸಲ್ಲಿಸಲು ಕಡ್ಡಾಯಗೊಳಿಸಿದೆ. ಸ್ಥಳೀಯ ಪೋಲಿಸರಿಗೂ ರೈಲುಗಳು ಹೊರಡುವ ಮಾಹಿತಿ ನೀಡದೆ ಅವರನ್ನು ಕತ್ತಲಲ್ಲಿ ಇಟ್ಟು ತಮಗೆ ಬೇಕಾದ ಬಿಲ್ಡರಗಳ ಹಿತಕ್ಕಾಗಿ ಅವರ ಕಾಮಿ೯ಕರನ್ನು ಮಾತ್ರ ರೈಲಿನಲ್ಲಿ ಗುಪ್ತವಾಗಿ ಕಳುಹಿಸಲು ಮುಂದಾಗಿದೆ.

ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹಿಂತಿರುಗಿ ಹೋಗದಂತೆ ತಡೆಯಲು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಸಾವಿರಾರು ಯುವ ವಲಸೆ ಕಾಮಿ೯ಕರು ಬೆಂಗಳೂರಿನ ಹೊರವಲಯದಿಂದ ನೆಡೆದು ಬಂದು ನೆನ್ನೆ ಮಧ್ಯಾಹ್ನದಿಂದಲೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ.

ಅವರ ನೆರೆವಿಗೆ ರಾಜ್ಯ ಸಕಾ೯ರವು ಇಲ್ಲ ಕೇಂದ್ರದ ರೈಲ್ವೆ ಇಲಾಖೆಯು ಇಲ್ಲವಾಗಿದೆ. ವಾಪಸ್ಸು ಕೆಲಸದ ಸ್ಥಳಕ್ಕೆ ಹಿಂತಿರುಗಿ ಹೋಗಲು ಅವರಿಗೆ ಸ್ಥಳೀಯ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಹೇಳುತ್ತಿದ್ದಾರೆ.

ಇಂತಹ ಹಲವು ಪ್ರಕರಣಗಳಿವೆ ಒಟ್ಟಾರೆ ರಾಜ್ಯ ಸಕಾ೯ರವು ಬಿಲ್ಡರಗಳ ಹಿತಕಾಯಲು ವಲಸೆ ಕಾಮಿ೯ಕರನ್ನು ಬಲಿ ಕೊಡುತ್ತಿದೆ. ಮುಂದೊಂದು ದಿನ ಇತರೆ ರಾಜ್ಯಗಳ ದೃಷ್ಟಿಯಲ್ಲಿ ರಾಜ್ಯವು ಕೆಟ್ಟ ಆಡಳಿತದ ರಾಜ್ಯವೆಂಬ ಅಪಕೀತಿ೯ಗೆ ಬಿಜೆಪಿಯ ಬಿಲ್ಡರಗಳ ಪರ ಧೋರಣೆಯಿಂದಾಗಿ ಪಾತ್ರವಾಗಲಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ಕೆ. ಎನ್. ಉಮೇಶ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾಯ೯ದಶಿ೯ ಎನ್.ಪ್ರತಾಪ್ ಸಿಂಹ ಹೇಳಿದ್ದಾರೆ.

ತಿರುಮಣಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ

0

ಪಾವಗಡ ತಾಲ್ಲೂಕು ತಿರುಮಣಿ  ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್ ಹಾಗೂ ತಂಡ ಮಾಡಿದ ಕೆಲಸಕ್ಕೆ ತಾಲ್ಲೂಕಿನ ಜನತೆ ಫಿದಾ ಆಗಿದ್ದಾರೆ.

ದೇಶದಾದ್ಯಂತ ಕೊರೊನಾ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಹಿಡಿದು ಅನಗತ್ಯವಾಗಿ ಅಡ್ಡಾಡುತ್ತಿದ್ದವರ ಮೇಲೆ ಬ್ಯಾಟಿಂಗ್ ಮಾಡುತ್ತಿದ್ದ ವಿಡಿಯೊ ಗಳು ಸಾಮಾಜಿಕ ಜಾಲತಾಣಗಳಲ್ಲಿ  ಭಯ ಪಡುವಂತೆ ಮಾಡಿದ್ದವು. ಆದರೆ ರಕ್ಷಣೆಗಾಗಿ ಲಾಠಿ ಹಿಡಿದ ಕೈಗಳು ಹಸಿದವರಿಗೆ ತುತ್ತು ತಿನಿಸುತ್ತವೆ ಎಂಬುದನ್ನು ತಿರುಮಣಿ ಪೊಲೀಸರು ಸಾಬೀತುಪಡಿಸಿದ್ದಾರೆ.

ಕೆಲಸದ ಒತ್ತಡದ ನಡುವೆಯೂ ತಿರುಮಣಿ ಪೊಲೀಸರ ತಂಡ ಹಸಿದವರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ದವಸ, ಧಾನ್ಯ ವಿತರಿಸಿ ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಮಹತ್ ಕಾರ್ಯಕ್ಕೆ ಮುಂದಾಗಿದೆ.

ನಾಗಲಮಡಿಕೆ ಹೋಬಳಿಯ ಗ್ರಾಮಗಳ ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಪಡಿತರ, ಅಗತ್ಯ ಸಾಮಗ್ರಿಗಳನ್ನು  ವಿತರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಇಲ್ಲಿನ ಪೊಲೀಸ್ ಸಿಬ್ಬಂದಿ ಪಾತ್ರರಾಗಿದ್ದಾರೆ..

ನಾಗಲಮಡಿಕೆ ಹೋಬಳಿಯ ಬುಗಡೂರು, ಶ್ರೀರಂಗಪುರ, ರಾಪ್ಟೆ, ಶಾಂತಿವನ ಇತರೆ ಗ್ರಾಮಗಳ ಬಡ ಕುಟುಂಬಗಳನ್ನು ಗುರುತಿಸಿ ಗ್ರಾಮಗಳಿಗೆ ಹೋಗಿ ಪಡಿತರ ವಿತರಿಸಿದ್ದಾರೆ. ಯಾವುದೇ ಸಮಸ್ಯೆ ಇದ್ದಲ್ಲಿ ತಿರುಮಣಿ ಠಾಣೆಯನ್ನು ಸಂಪರ್ಕಿಸಿ ಸಹಾಯ ಸಹಕಾರ ಪಡೆಯುವಂತೆ ಜನತೆಯಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದಾರೆ.

ಗುಜರಾತ್ ಹಾಗೂ ಇತರೆಡೆಯಿಂದ ಕೆಲಸಕ್ಕಾಗಿ ರಾಪ್ಟೆ ಹಾಗೂ ಹೋಬಳಿಯ ಗ್ರಾಮಗಳಿಗೆ ಆಗಮಿಸಿ ಅನ್ನ ನೀರು ಇಲ್ಲದೆ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರ ಬಳಿಗೆ ಹೋಗಿ ಸಹಾಯ ಹಸ್ತ ಚಾಚಿದ್ದಾರೆ.

ಸಂಕಷ್ಟದಲ್ಲಿದ್ದ  ವಲಸೆ ಕಾರ್ಮಿಕರು, ಬಡ ಕುಟುಂಬಗಳಿಗೆ ಪೊಲೀಸರು ವೈಯಕ್ತಿಕವಾಗಿ ಸಹಾಯ ಮಾಡಿರುವ ಬಗ್ಗೆ ತಾಲ್ಲೂಕಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಬ್ ಇನ್ ಸ್ಪೆಕ್ಟರ್ ರಾಮಕೃಷ್ಣಪ್ಪ, ಗೋಕರ್ಣ, ಪುಂಢಲೀಕ ಲಮಾಣಿ, ಪ್ರವೀಣ್ ಭಜಂತ್ರಿ, ಮಹಂತೇಶ್, ನರಸಿಂಹಮೂರ್ತಿ, ದವಾಲ್ ಸಾಬ್, ನಾಗೇಂದ್ರ ಪ್ರಸಾದ್, ಮುತ್ತು ಸನ್ನದ್, ವೆಂಕಪ್ಪ, ಗಂಗಾಧರ್ ಜಿನಪುರ್ ಪಡಿತರ ವಿತರಣಾ ತಂಡದಲ್ಲಿದ್ದಾರೆ.

ಕೊರೊನಾ ನಿಯಮ ಪಾಲಿಸದಿದ್ದರೆ ದಂಡ

ಪಾವಗಡ: ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸರ್ಕಾರ ನಿಗದಿ ಪಡಿಸಿರುವ ಕಾನೂನುಗಳಲ್ಲಿ ಸಾರ್ವಜನಿಕರು ಪಾಲಿಸಬೇಕು ಇಲ್ಲವಾದಲ್ಲಿ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಭಾನುವಾರ  ಪುರಸಭೆ ಕಚೇರಿಯಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಮಾಸ್ಕ್ ಧರಿಸದಿದ್ದರೆ ಮೊದಲ ಬಾರಿ 50 ರೂ, ಎರಡನೇ ಬಾರಿ 100 ರೂ ದಂಡ ವಿಧಿಸಲಾಗುವುದು. ಅಂತರ ಕಾಯ್ದುಕೊಳ್ಳದಿದ್ದರೆ, ಗುಟ್ಕಾ, ತಂಬಾಕು ಮಾರಾಟ ಮಾಡಿದರೆ ಮೊದಲ ಸಲ 250ರೂ ಎರಡನೇ ಸಲ 500 ರೂ ದಂಡ ಹಾಕಲಾಗುವುದು. ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಮೊದಲ ಬಾರಿ 100 ಹಾಗೂ ಎರಡನೇ ಸಲ 200 ರೂ ದಂಡ. ಅಗತ್ಯವಿಲ್ಲದ ಅಂಗಡಿಗಳನ್ನು ತೆರೆದರೆ, ನಿಗದಿತ ಧರಕ್ಕಿಂತ ಹೆಚ್ಚಿನ ಧರಕ್ಕೆ ಸಾಮಗ್ರಿಗಳನ್ನು ಮಾರಾಟ ಮಾಡಿದರೆ ಮೊದಲನೆ ಸಲ 500 ರೂ, ಎರಡನೇ ಸಲ   1 ಸಾವಿರ ರೂ ದಂಡ ಹಾಕಲಾಗುವುದು ಎಂದರು.

ಪರಿಸರ ಅಭಿಯಂತರ ಮಹೇಶ್,  ಸಬ್ ಇನ್ ಸ್ಪೆಕ್ಟರ್ ನಾಗರಾಜು, ಆರೋಗ್ಯ ನಿರೀಕ್ಷಕ ಶಂಷುದ್ಧಾ ಉಪಸ್ಥಿತರಿದ್ದರು.

ನಿಮ್ಮ ಪ್ರೀತಿಗೆ.. ಅದರ ರೀತಿಗೆ..

ಜಿ ಎನ್ ಮೋಹನ್


‘ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?’ ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟದ್ದು ‘ಕನ್ನಡ ಒನ್ ಇಂಡಿಯಾ’.

ಅವರು ಹಾಗೆ ಕೇಳುವ ವೇಳೆಗೆ ನಾನೂ ಅದೇ ಪ್ರಶ್ನೆಯನ್ನು ನನ್ನ ಎದೂರು ಹರಡಿಕೊಂಡು ಒಂದು ವಾರವಾಗಿತ್ತು.

‘ಕ್ಯಾಸ್ಟ್ ಅವೇ’ ಸಿನೆಮಾದಲ್ಲಿಯಂತೆ ಆದಂತೆ ದಿಢೀರನೆ, ರಾತ್ರೋ ರಾತ್ರಿ ಜನರಿಲ್ಲದ ದ್ವೀಪಕ್ಕೆ ಎಸೆದುಬಿಡುವುದು ಎಂದರೆ ಏನು ಎಂದು ಗೊತ್ತಾಗಲು ಆರಂಭವಾಗಿತ್ತು.

ಇದು ಲಂಕೇಶರು ಹಿಂದೊಮ್ಮೆ ಹೇಳಿದಂತೆ ‘ಹಸಿರಿಲ್ಲದ ಉಸಿರಿಲ್ಲದ ಹೆಸರಿಲ್ಲದ ನರಕ’.

ಇದೆಲ್ಲಾ ಯೋಚಿಸುತ್ತಲೇ “ಇದ್ದಕ್ಕಿದ್ದಂತೆ ನಾನು ಒಂಟಿ ಎನಿಸಿದೆ. ಸದಾ ಜನರೊಟ್ಟಿಗೆ ಬೆರೆಯುವ, ಅವರ ಜೊತೆಗೆ ಇದ್ದು ಬದುಕು ಮಾಡುವ ನನಗೆ ರಾತ್ರೋರಾತ್ರಿ ಎರಗಿದ ಕೊರೊನಾ ಇನ್ನು ನಿನಗೆ ನೀನೇ ಎನ್ನುವ ಭಯಾನಕ ಸ್ಥಿತಿಯನ್ನು ಅರಿವು ಮಾಡಿಸುತ್ತಿದೆ. ಏಕಾಂತ ಮತ್ತು ಲೋಕಾಂತ ಎರಡರ ನಡುವಿನ ತಾಕಲಾಟದಲ್ಲಿ ನಾನಿದ್ದೇನೆ”. ಎಂದು ಉತ್ತರ ಕೊಟ್ಟು ಸುಮ್ಮನಾದೆ.

ಆದರೆ ನನಗೆ ಸವಾಲುಗಳನ್ನು ಎದುರು ಹಾಕಿಕೊಳ್ಳುವುದು ಸದಾ ಪ್ರೀತಿಯ ವಿಷಯ

ಹಾಗಾಗಿಯೇ ಬಲವಂತದ ಮಾಘ ಸ್ನಾನವಾಗಿದ್ದ ಏಕಾಂತವನ್ನು ಒಂದೇ ಏಟಿಗೆ ಚಿತ್ ಮಾಡಲು ಯೋಚಿಸಿದೆ.

ನನ್ನ ಅಮ್ಮ ನೆನಪಾದರು, ಸಫ್ಧರ್ ಹಶ್ಮಿ ನೆನಪಾದರು.

ಈ ಇಬ್ಬರೂ ತಮ್ಮದೇ ರೀತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರು. ತಮ್ಮದೇ ರೀತಿ ಗೆದ್ದವರೂ ಕೂಡಾ

ಆ ಸವಾಲು ಗೆದ್ದವರ ಕಥೆಗಳನ್ನು ಹೇಳಬೇಕೆನಿಸಿತು.

ಅರೆ! ಒಂದು ಮ್ಯಾಜಿಕ್ ಆಗಿಹೋಯಿತು

ಇದನ್ನು ಓದಿದವರ, ಕಾಮೆಂಟ್ ಮಾಡಿದವರ ಶೇರ್ ಮಾಡಿದವರ..
ಅಷ್ಟೇ ಅಲ್ಲ ಅದನ್ನು ಮರು ಪ್ರಕಟಿಸಿದ ವೆಬ್ ಸೈಟ್ ಗಳ ಸಂಖ್ಯೆ ನೋಡಿ ಗಾಬರಿ ಬಿದ್ದೆ.

ಫೇಸ್ ಬುಕ್ ನನ್ನ ಮುಂದಿಟ್ಟ ಅಂಕಿ ಅಂಶಗಳು ನನಗೇ ಆಶ್ಚರ್ಯ ಉಂಟು ಮಾಡಿತು.

ನನ್ನ ಏಕಾಂತ ಎದುರಿಸುವ ಪ್ರಶ್ನೆಗೂ ಉತ್ತರ ಸಿಕ್ಕಿಹೋಗಿತ್ತು.

ಹತಾಶೆಯ ಲಾಕ್ ಡೌನ್ ನಲ್ಲಿ ಎಲ್ಲರೂ ಬದುಕು ಕಟ್ಟಿಕೊಳ್ಳುವ ಮಾಡೆಲ್ ಗಳನು ಹುಡುಕುತ್ತಿದ್ದಾರೆ ಎಂದು

ಅಲ್ಲಿಂದ ನಾನು ಈ ಹಿಂದೆ ಮಾಡಿದ ಸಂದರ್ಶನಗಳು ನನಗೆ ಆದ ಅನುಭವಗಳು ಹೇಳಿಕೊಳ್ಳಲೇ ಬೇಕು ಎಂದು ನನ್ನೊಳಗೆ ತುಡಿಯುತ್ತಿದ್ದ ವಿಷಯಗಳು ಹೀಗೆ ಒಂದೊಂದನ್ನೇ ಹೊರಗಿಟ್ಟೆ.

ಪ್ರತೀ ದಿನ ಬರೆಯಬೇಕು ಎಂದೇನೂ ಅಂದುಕೊಂಡಿರಲಿಲ್ಲ.
ಆದರೆ ಬರಲು ಶುರುವಾದ ಪ್ರತಿಕ್ರಿಯೆಯ ರೀತಿ ನನ್ನನ್ನು ನಿಬ್ಬೆರಗಾಗಿಸಿತು. ಮೂಕವಾಗಿಸಿತು

ಬೆಳಕಿನ ದಾರಿ ಕಾಣಲು ತವಕಿಸುತ್ತಿರುವವರಿಗೆ ಇದು ಅಗತ್ಯ ಕೂಡಾ ಅನಿಸಿತು.
ಪ್ರತೀ ದಿನ ಬರೆಯಲು ಶುರು ಮಾಡಿದೆ.

‘ದೂರದಲಿ ಇದ್ದವರನು ಹತ್ತಿರಕೆ ತರಬೇಕು
ಎರಡು ದಂಡೆಗೂ ಉಂಟಲ್ಲ ಎರಡು ತೋಳು..’ ಎನ್ನುತ್ತಾರೆ ನನ್ನ ಪ್ರೀತಿಯ ಕವಿ ಸು ರಂ ಎಕ್ಕುಂಡಿ

ನನಗೆ ಗೊತ್ತಿಲ್ಲದ ಹಾಗೆ ಈ ಬರಹಗಳು ಎಷ್ಟೊಂದು ಜನರನ್ನು ನನ್ನ ಹತ್ತಿರಕ್ಕೆ ತಂದಿದೆ ಎಂದರೆ ಒಂದು ಹತಾಷೆಯ, ಡಿಪ್ರೆಶನ್ ಗೆ ಒಳಗು ಮಾಡಿಬಿಡಬಹುದಾಗಿದ್ದ ಒಂದು ಲಾಕ್ ಡೌನ್ ನನ್ನ ಮನಸಿಗೆ ನೂರು ರೆಕ್ಕೆ ಹಚ್ಚಿದೆ.

ಕಂಬಾರರು ಹೇಳ್ತಾರಲ್ಲಾ
‘ನೀ ಯಾರೋ ಏನೋ ಎಂತೋ ಅಂತೂ ಪೋಣಿಸಿತು ಕಾಣದ ತಂತು’ ಅಂತ..

ಹಾಗೆ, ಥೇಟ್ ಹಾಗೆ ಯಾರೋ ಏನೋ ಗೊತ್ತಿಲ್ಲದವರು ಈಗ ನಾನು ಪ್ರತಿ ದಿನ ಸಂವಾದಿಸಿಯುವ ಆಪ್ತರಾಗಿದ್ದಾರೆ.

ಈ ಬರಹಗಳನ್ನು ಓದಿ ಕಣ್ಣೀರಾದವರು ಇದ್ದಾರೆ
ನಿಟ್ಟುಸಿರಿಟ್ಟವರಿದ್ದಾರೆ.
ನನ್ನನ್ನು ತಿದ್ದಿದವರಿದ್ದಾರೆ
ಮಾಹಿತಿ ತಪ್ಪಾದಾಗ ಕಿವಿ ಹಿಂಡಿದವರಿದ್ದಾರೆ.
ಇಲ್ಲಿನ ಘಟನೆಗಳಂತೆಯೇ ನಡೆದ ಘಟನೆಗಳನ್ನು ನನ್ನ ಮುಂದೆ ಸುರಿದವರಿದ್ದಾರೆ.

ಈ ಮಧ್ಯೆ ಇಂತಹವರೂ ಇದ್ದಾರೆ
ಜೋಗಿಯಂತವರು.

ನಾನು ಬಿಲ್ ಕುಲ್ ಫೋನ್ ತೆಗೆಯುವ ಗಿರಾಕಿ ಅಲ್ಲ ಎಂದು ಗೊತ್ತಿದ್ದೂ ಆ ಬಗ್ಗೆ ಮುನಿಸಿಕೊಳ್ಳದೆ ನನಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ.

ಅಷ್ಟೇ ಅಲ್ಲ ಮನ ದುಗುಡದ ಕಾಲದಲ್ಲಿ ಎದ್ದು ನಿಲ್ಲುವುದು ಸುಲಭವಲ್ಲ ಎಂದು ವಿಸ್ಮಯಗೊಂಡಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದೆ
‘ನೀವು ಫೇಸ್ ಬುಕ್ ನಲ್ಲಿ ಬರೆಯುವ ಅದೇ ರೀತಿಯಲ್ಲಿ, ಅದೇ ವಿಷಯವನ್ನು ನಮಗೆ ಈ ಬಾರಿ ಬರೆದು ಕೊಡಲೇಬೇಕು’ ಎಂದು ನನ್ನಿಂದ ಬರೆಸಿದ್ದಾರೆ.

ನಾನು ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿಕೊಂಡ ಅರುಂಧತಿಯ ಬಗ್ಗೆ ಬರೆದಿದ್ದೇನೆ

ಇದನ್ನು ಪ್ರಕಟಿಸುತ್ತಾ ಜೋಗಿ ಪ್ರೀತಿಯಿಂದ ಈ ಇಂಟ್ರೋ ಬರೆದಿದ್ದಾರೆ.-

“ಏಪ್ರಿಲ್ ಕ್ರೂರ ಮಾಸ. ಅದು ನೆನಪುಗಳನ್ನು ಬಯಕೆಗಳನ್ನು ಬೆರೆಸುತ್ತದೆ ಅನ್ನುವ ಕವಿಯ ಮಾತು ಸುಳ್ಳಾಗಲಿಲ್ಲ.

ಅನೇಕರ ಪಾಲಿಗೆ ಏಪ್ರಿಲ್ ಝಳಕ್ಕಿಂತ ಬಿರುಸಾಗಿ ಕಾಡಿದ್ದು ಏಕಾಂತ.

ಇಂಥ ಹೊತ್ತಲ್ಲಿ ಹೇಗಾದರೂ ಮಾಡಿ ವರ್ತಮಾನದಲ್ಲೇ ಉಳಿಯಲು ಒಬ್ಬೊಬ್ಬರೂ ಒಂದೊಂದು ತರದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಜಿ ಎನ್ ಮೋಹನ್ ನೆನಪುಗಳನ್ನು ಬಗೆದು ದಾಖಲಿಸುವ ಕೈಂಕರ್ಯದಲ್ಲಿ ತೊಡಗಿಕೊಂಡರು.

ದಿನಕ್ಕೊಂದು ನೆನಪನ್ನು ದಾಖಲಿಸುತ್ತಾ ಹೋದರು.

ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಕೂಡ ಅದ್ಭುತವಾಗಿತ್ತು.

ಇಲ್ಲಿ ಮೋಹನ್ ತಾವು ಹಿಂದೆಂದೋ ಸಂದರ್ಶಿಸಿದ ಅರುಂಧತಿ ನಾಗ್ ಜೊತೆಗೆ ಕಳೆದ ಕ್ಷಣಗಳನ್ನು ಕಣ್ಮುಂದೆ ತಂದು ಕೊಟ್ಟಿದ್ದಾರೆ

ಅಂದಹಾಗೆ ಇದು ಸಂದರ್ಶನವಲ್ಲ, ಕಥನವೂ ಅಲ್ಲ, ಆಕಾಶದ ಒಂದು ತುಣುಕು..”

ಇದನ್ನು ಓದಿಕೊಂಡು ಒಂದು ಅಡಿ ಮೇಲೆ ಹೋದೆ.

ಅಷ್ಟರಲ್ಲಿ ಮಂಡ್ಯ ರಮೇಶ್ ವಾಯ್ಸ್ ಮೆಸೇಜ್ ಬಂತು

‘ಅಣ್ಣ, ಬರಹದಲ್ಲಿ ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಅನ್ನುವ ಸಾಲು ‘ತುಘಲಕ್’ ನಾಟಕದ್ದು ಅಂತ ಬರೆದಿದ್ದೀಯ. ಅದು ‘ಯಯಾತಿ’ ನಾಟಕದ್ದು ಸರಿ ಮಾಡು’ ಅಂತ.

ಹೇಳಿದ ವಿಷಯ ಇದೇ ಆದರೂ ದನಿ ಮಾತ್ರ ‘ಮುಚ್ಚಿಕೊಂಡು ಮೊದಲು ಸರಿ ಮಾಡು. ರಂಗಭೂಮಿಯಲ್ಲಿ ಇದ್ದೀಯಾ ಅಂತ ಬೇರೆ ಹೇಳ್ಕೊಂಡು ತಿರುಗ್ತಿದ್ದೀಯಾ’ ಅನ್ನುವಂತಿತ್ತು.

ನಾನು ಒಂದಡಿ ಮೇಲೆ ಹೋಗಿದ್ದವನು ಥಟ್ ಅಂತ ವಾಸ್ತವಕ್ಕೆ ಬಂದೆ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ವಾಸ್ತವದಲ್ಲಿ ಅಳುವ ಸರ್ಕಾರಕ್ಕೆ ಲಾಭಕರ..!!

1
ಶಂಕರ್ ಬರಕನಹಾಲು


ಪ್ರಜಾಪ್ರಭುತ್ವದ ಪರಿಕಲ್ಪನೆಯ ಅಡಿಯಲ್ಲಿ ಪ್ರತಿಯೊಬ್ಬರ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ಧಿ ಸರಕಾರದ ಕರ್ತವ್ಯ. ಪ್ರಜೆಗಳಿಗಾಗಿ ಸರಕಾರವೇ ಹೊರತು ಸರಕಾರಕ್ಕಾಗಿ ಪ್ರಜೆಗಳಲ್ಲ. ಜನರ ಅಭಿವೃದ್ಧಿ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕಾದ ಸರಕಾರಗಳು ತನ್ನದೇ ಪ್ರಜೆಗಳಿಗೆ ಮದ್ಯಪಾನ ಮಾಡಿಸಿ ರುಚಿ ತೋರಿಸಿ ಉಣಬಡಿಸಿದ ಅಳುವ ಸರ್ಕಾರಗಳು.ಆದಾಯ ತರುವ ಇಲಾಖೆಗಳಲ್ಲಿ ಅಬಕಾರಿಯೂ ಒಂದು.
ನಿಮ್ಹಾನ್ಸ್ ವರದಿಯ ಪ್ರಕಾರ ಭಾರತದಲ್ಲಿ ಮದ್ಯ ಮಾರಾಟದಿಂದ ಹೆಚ್ಚು ಅದಾಯ ಗಳಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.
ಆದಾಯಕ್ಕಿಂತ ತೊಂದರೆಗಳೇ ಹೆಚ್ಚು:
ಜನರ ಅಭಿವೃದ್ಧಿ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕಾದ ಸರಕಾರಗಳು ತನ್ನದೇ ಪ್ರಜೆಗಳಿಗೆ ಮದ್ಯಪಾನ ಮಾಡಿಸಿ ರುಚಿ ತೋರಿಸಿ ಉಣಬಡಿಸಿದ ಅಳುವ ಸರ್ಕಾರಗಳು.ಆದಾಯ ತರುವ ಇಲಾಖೆಗಳಲ್ಲಿ ಅಬಕಾರಿಯೂ ಒಂದು.
ನಿಮ್ಹಾನ್ಸ್ ವರದಿಯ ಪ್ರಕಾರ ಭಾರತದಲ್ಲಿ ಮದ್ಯ ಮಾರಾಟದಿಂದ ಹೆಚ್ಚು ಅದಾಯ ಗಳಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.
ಆದಾಯಕ್ಕಿಂತ ತೊಂದರೆಗಳೇ ಹೆಚ್ಚು:


ಮದ್ಯ ಮಾರಾಟದಿಂದ ಸರಕಾರಿ ವಾರ್ಷಿಕ ಉತ್ತಮ ಆದಾಯವಿದೆ ನಿಜ. ಆದರೆ ಮದ್ಯ ಮಾರಾಟದಿಂದ ಸರಕಾರಕ್ಕೆ, ಪ್ರಜೆಗಳಿಗೆ ಹಾಗೂ ಸಮಾಜಕ್ಕೆ ಉಂಟಾಗುತ್ತಿರುವ ಹಾನಿಯೇ ಅಧಿಕ ಎನ್ನುತ್ತಿದೆ ಸರಕಾರದ ಅಂಗಸಂಸ್ಥೆ ನಿಮ್ಹಾನ್ಸ್ ವರದಿ.

ಇನ್ನೂ ರಾಜ್ಯದಲ್ಲಿ ಶೇ.30 ರಷ್ಟು ವಯಸ್ಕ ಪುರುಷರು ಹಾಗೂ ಶೇ.5 ರಷ್ಟು ಮಹಿಳೆಯರು ದಿನನಿತ್ಯ ಮದ್ಯಪಾನದ ವ್ಯಸನಿಗಳಾಗಿದ್ದಾರೆ. ಅಂಕಿಅಂಶಗಳ ಪ್ರಕಾರ 15 ರಿಂದ 25 ವರ್ಷದೊಳಗಿನ ಶೇ.40 ರಷ್ಟು ಯುವಕರು ಇಂದು ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಕಳೆದ 20 ವರ್ಷದಲ್ಲಿ ರಾಜ್ಯದಲ್ಲಿ ಕುಡುಕರ ಸಂಖ್ಯೆ ಶೇ.55 ರಷ್ಟು ಏರಿಕೆಯಾಗುತ್ತಿವೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಾನ ಸಂಖ್ಯೆಯ ಕುಡುಕರನ್ನು ಹೊಂದಿರುವ ದೇಶ ಭಾರತ. ಈ ವಿಚಾರದಲ್ಲಿ ಕರ್ನಾಟಕವೂ ಹಿಂದುಳಿದಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ಕೂಲಿಕಾರರ ಒಂದು ದಿನದ ಕನಿಷ್ಟ ಕೂಲಿ 200ರೂ. ಅದರಲ್ಲಿ ದುಡಿತದ ಶೇ.70 ರಷ್ಟು ಭಾಗವನ್ನು ಆತ ಕುಡಿತಕ್ಕೆ ಮೀಸಲಿಡುತ್ತಿದ್ದಾನೆ ಎನ್ನುತ್ತಿವೆ ವರದಿಗಳು. ಉಳಿದ ಶೇ.30 ರಷ್ಟು ಹಣದಲ್ಲಿ ಮಹಿಳೆಯರು ಸಂಸಾರ ನಡೆಸಬೇಕಾದ ಪರಿಸ್ಥಿತಿ ಇದೆ.

ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲಾಗುತ್ತಿರುವ ಶೇ.75 ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು, ಶೇ.80 ರಷ್ಟು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಿಗೆ ಮದ್ಯಪಾನವೇ ಕಾರಣ ಎನ್ನುತ್ತಿವೆ ಸರಕಾರಿ ಪ್ರಾಯೋಜಿತ ವರದಿಗಳು.
ನಗರ ಪ್ರದೇಶಗಳಲ್ಲಿ ದಾಖಲಾಗುತ್ತಿರುವ ಅಪಘಾತ ಪ್ರಕರಣಗಳಲ್ಲಿ ಶೇ.60 ರಷ್ಟು ಪ್ರಕರಣಗಳು ಕುಡಿತದ ಕಾರಣದಿಂದಲೇ ಸಂಭವಿಸುತ್ತಿವೆ. ಅಲ್ಲದೆ ಕೊಲೆ- ಸುಲಿಗೆ, ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ವಿಕೃತ ಮನಸ್ಸಿನ ಅಪರಾಧ ಪ್ರಕರಣಗಳಿಗೆ ಬಹುತೇಕ ಕುಡಿತವೇ ಕಾರಣ.
ಮದ್ಯಪಾನ ಅನೇಕ ಕಾಯಿಲೆಗಳನ್ನು ಧಾರಾಳವಾಗಿ ಕರುಣಿಸುತ್ತದೆ. ಸಕ್ಕರೆ ಖಾಯಿಲೆ, ಯಕೃತ್ತಿನ ಖಾಯಿಲೆ, ಜಠರ ರೋಗ, ಅಜೀರ್ಣತೆ, ನರಮಂಡಲ ಹಾನಿ, ಲೈಂಗಿಕ ಶಕ್ತಿ ಕುಸಿತ, ಮರೆವಿನ ಖಾಯಿಲೆ, ನಿಶ್ಯಕ್ತಿ, ಮೆದುಳಿನ ಮೇಲೆ ಪರಿಣಾಮ, ಮನೋವ್ಯಾಧಿಗಳ ಜೊತೆಗೆ ಅನೇಕ ಕಾಯಿಲೆಗಳು ಕುಡುಕರನ್ನು ಆವರಿಸಿಕೊಳ್ಳುತ್ತವೆ.
ರಾಜ್ಯದ ಗ್ರಾಮೀಣ ಭಾಗದಲ್ಲಿ ಶೇ.52 ಕ್ಕೂ ಹೆಚ್ಚು ಜನ ಕುಡಿತದಿಂದಾಗಿ ಇಂತಹ ಖಾಯಿಲೆ ಒಳಗಾಗಿದ್ದಾರೆ. ಇಂತವರು ಚಿಕಿತ್ಸೆಗಾಗಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಹಣವಿಲ್ಲದೆ ಸಾವನ್ನು ಎದುರು ನೋಡುತ್ತಾ ಕುಳಿತಿರುವ ಜನರು ಮದರಿಯಾಗಲಿ,
ರಾಜ್ಯದ ಯುವ ಜನತೆ ಈ ಚಟದಿಂದ ಮುಕ್ತಿ ಹೊಂದಿ ತಮ್ಮ ಗುರಿಯತ್ತ ನಡೆಬೇಕು.
ಒಟ್ಟಿನಲ್ಲಿ ಕುಡಿತ ಎಂಬುದು ಗ್ರಾಮೀಣ ಭಾಗದ ಸಾಮಾಜಿಕ ಜೀವನವನ್ನು ಹೇಗೆ ಹರಿದು ಮುಕ್ಕಿದೆ ಎಂಬುದಕ್ಕೆ ಈ ಮೇಲಿನ ಅಂಕಿಅಂಶಗಳೇ ಸಾಕ್ಷಿ ನುಡಿಯುತ್ತವೆ.
ಅಂದರೆ, ಮದ್ಯ ಮಾರಾಟದಿಂದ ಆಗುತ್ತಿರುವ ಲಾಭಕ್ಕಿಂತ ನಷ್ಟವೇ ಅಧಿಕ ಎನ್ನುತ್ತಿವೆ ಅಂಕಿಅಂಶಗಳು. ಸಮಾಜದ ಶೇ.60 ಕ್ಕೂ ಹೆಚ್ಚು ಜನರ ಸವಾಂರ್ಗೀಣ ಬೆಳವಣಿಗೆಗೆ ಕುಡಿತದ ಚಟ ಅಡ್ಡಿಯಾಗಿದೆ. ಈ ಚಟದಿಂದಾಗಿ ಇಡೀ ರಾಜ್ಯವೇ ಇಂದು ತೀವ್ರ ನಿಗಾ ಘಟಕದಂತೆ ಭಾಸವಾಗುತ್ತಿದೆ.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ:8618194668

ಪಂಚಾಗ

ದಿನಾಂಕ : 3, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಭಾನುವಾರ
ಪಕ್ಷ : ಶುಕ್ಲಪಕ್ಷ
ತಿಥಿ : ದಶಮಿ
(ನಿನ್ನೆ ಬೆಳಿಗ್ಗೆ 11 ಗಂ॥ 33 ನಿ।। ರಿಂದ
ಇಂದು ಬೆಳಿಗ್ಗೆ 9 ಗಂ॥ 7 ನಿ।। ತನಕ)
ನಕ್ಷತ್ರ : ಪುಬ್ಬೆ
(ನಿನ್ನೆ ರಾತ್ರಿ 11 ಗಂ॥ 38 ನಿ।। ರಿಂದ
ಇಂದು ರಾತ್ರಿ 9 ಗಂ॥ 39 ನಿ।। ತನಕ)
ಯೋಗ : ಧ್ರುವ
ಕರಣ : ಗರಜೆ
ವರ್ಜ್ಯಂ : (ಇಂದು ಬೆಳಿಗ್ಗೆ 6 ಗಂ॥ 58 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 26 ನಿ।। ತನಕ)
ಅಮೃತಕಾಲ : (ಇಂದು ಸಂಜೆ 3 ಗಂ॥ 46 ನಿ।। ರಿಂದ ಇಂದು ಸಂಜೆ 5 ಗಂ॥ 14 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 53 ನಿ।। ರಿಂದ ಇಂದು ಸಂಜೆ 5 ಗಂ॥ 44 ನಿ।। ತನಕ)
ರಾಹುಕಾಲ : (ಇಂದು ಸಂಜೆ 5 ಗಂ॥ 0 ನಿ।। ರಿಂದ ಇಂದು ರಾತ್ರಿ 6 ಗಂ॥ 35 ನಿ।। ತನಕ)
ಗುಳಿಕ : (ಇಂದು ಸಂಜೆ 3 ಗಂ॥ 24 ನಿ।। ರಿಂದ ಇಂದು ಸಂಜೆ 4 ಗಂ॥ 59 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 47 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 49 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 36 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಸಿಂಹ

ಮೇಷ ರಾಶಿ : 3 May 2020
ಕೆಲಸ ಮತ್ತು ಮನೆಯಲ್ಲಿನ ಕೆಲವು ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸುತ್ತದೆ. ಆಲೋಚಿಸದೆ ನೀವು ಯಾರಿಗೂ ತಮ್ಮ ಹಣವನ್ನು ಕೊಡಬಾರದು, ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ದೊಡ್ಡ ತೊದರೆಗೊಳಗಾಗಬಹುದು. ಒತ್ತಡದ ಅವಧಿಯಿದ್ದರೂ ಕುಟುಂಬದ ಬೆಂಬಲ ನಿಮಗೆ ಸಹಾಯ ಮಾಡುತ್ತದೆ. ಇಂದು ಪ್ರಣಯದ ಯಾವುದೇ ಆಸೆಯಿಲ್ಲ ಈ ರಾಶಿಚಕ್ರದ ವೃದ್ಧರು ಇಂದು ತಮ್ಮ ಹಳೆಯ ಸ್ನೇಹಿತರನ್ನು ಉಚಿತ ಸಮಯದಲ್ಲಿ ಭೇಟಿಯಾಗಲು ಹೋಗಬಹುದು. ಅದೃಷ್ಟ ಸಂಖ್ಯೆ: 2

ವೃಷಭ ರಾಶಿ : 3 May 2020
ಆರೋಗ್ಯದ ಆರೈಕೆ ಮಾಡಿಕೊಳ್ಳಿ ಮತ್ತು ಎಲ್ಲವನ್ನೂ ಹೊಂದಿಸಿ. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಜವಾಬ್ದಾರಿ ತೆಗೆದುಕೊಂಡು ರಚನಾತ್ಮಕವಾಗಿ ಸಂಪರ್ಕಿಸಲು ಸಿದ್ಧವಾಗಿದ್ದೀರಿ. ಸ್ನೇಹ ಆಳವಾದ ಹಾಗೆ ಪ್ರಣಯ ನಿಮ್ಮೆಡೆ ಬರುತ್ತದೆ. ಸಮಯಕ್ಕಿಂತ ಹೆಚ್ಚು ಏನು ಇಲ್ಲ. ಆದ್ದರಿಂದ ನೀವು ಸಮಯವನ್ನು ಚೆನ್ನಾಗಿ ಬಳಸುತ್ತೀರಿ ಆದರೆ ಕೆಲವೊಮ್ಮೆ ನೀವು ಜೀವನವನ್ನು ಸುಲಭವಾಗಿ ಹೊಂದಿಕೊಳ್ಳುವ ಅಗತ್ಯವಿದೆ ಮತ್ತು ನಿಮ್ಮ ಮನೆ ಕುಟುಂಬದೊಂದಿಗೆ ಸಮಯವನ್ನು ಕಳೆಯುವ ಅಗತ್ಯವಿದೆ. ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ : 3 May 2020
ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ಒಬ್ಬ ಹತ್ತಿರದ ಸಂಬಂಧಿಗೆ ಹೆಚ್ಚು ಗಮನ ನೀಡಬೇಕಾಗಬಹುದಾದರೂ ಅವರು ಬೆಂಬಲ ಮತ್ತು ಆರೈಕೆ ನೀಡಬಹುದು. ಅನಗತ್ಯ ಅನುಮಾನ ಸಂಬಂಧಗಳನ್ನು ಹದಗೆಡಿಸುವ ಕೆಲಸ ಮಾಡುತ್ತದೆ. ನೀವು ಸಹ ನಿಮ್ಮ ಪ್ರೀತಿಪಾತ್ರರ ಮೇಲೆ ಅನುಮಾನ ಮಾಡಬಾರದು. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ : 3 May 2020
ನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಯಾರಿಂದಲೂ ಸಲಹೆಯನ್ನು ತೆಗದುಕೊಳ್ಳದೆ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಬಾರದು.ವೈವಾಹಿಕ ಜೀವನವನ್ನು ಉತ್ತಮವಾಗಿಸುವ ನಿಮ್ಮ ಪ್ರಯತ್ನಗಳು ಇವತ್ತು ನಿರೀಕ್ಷೆಗೂ ಮೀರಿ ಫಲ ನೀಡುತ್ತವೆ. ಇಂದು ವಿದೇಶದಲ್ಲಿ ವಾಸಿಸುತ್ತಿರುವ ಒಬ್ಬ ವ್ಯಕ್ತಯಿಂದ ನೀವು ಯಾವುದೇ ಕೆಟ್ಟ ಸುದ್ಧಿಯನ್ನು ಪಡೆಯಬಹುದು. ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ : 3 May 2020
ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳ ಪುನಶ್ಚೇತನಕ್ಕೆ ಒಳ್ಳೆಯ ದಿನ. ಇಂದು ನೀವು ನಿಮ್ಮ ಜೀವನದ ತೊಂದರೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ ಆದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ : 3 May 2020
ಭಾವನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ – ಆದ್ದರಿಂದ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೀರಿ ಮತ್ತು ಏನು ಹೇಳುತ್ತೀರಿ ಎನ್ನುವ ಬಗ್ಗೆ ಎಚ್ಚರದಿಂದಿರಿ. ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ.ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ, ಇಂದು ನೀವು ಆ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ ಕುಟುಂಬದ ಪರಿಸ್ಥಿತಿ ಇಂದು ನೀವು ಯೋಚಿಸುವ ಹಾಗೆ ಇರುವುದಿಲ್ಲ. ಇಂದು ಮನೆಯಲ್ಲಿ ಯಾವುದೇ ವಿಷಯದ ಬಗ್ಗೆ ಅಪಶ್ರುತಿ ಉಂಟಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿಯಲ್ಲಿ ನಿಮ್ಮನ್ನು ನಿಯಂತ್ರಿಸಿ. ಅದೃಷ್ಟ ಸಂಖ್ಯೆ: 8

ತುಲಾ ರಾಶಿ : 3 May 2020
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಡೈರಿ ಉದ್ಯಮಕ್ಕೆ ಸೇರಿರುವವರು ಇಂದು ಆರ್ಥಿಕ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಇಂದು ನೀವು ಹಚ್ಚು ಪ್ರಯತ್ನ ಮಾಡಬೇಕಾಗಿ ಬಂದರೂ ಕೂಡ ಮಕ್ಕಳ ಸಂಗದಲ್ಲಿ ನಿಮ್ಮ ಬಿಡುವಿನ ಸಮಯ ಕಳೆಯಲು ಪ್ರಯತ್ನಿಸಬೇಕು. ನೀವು ನಿಮ್ಮ ಪ್ರೀತಿಪಾತ್ರರನ್ನು ಅವಳ ಹಿಂದಿನ ಉದಾಸೀನತೆಯನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಮೌಲ್ಯಯುತವಾಗಿಸುತ್ತೀರ. ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ : 3 May 2020
ನಿಮ್ಮ ಆಸಕ್ತಿಗಳನ್ನು ಮುಂದುವರಿಸಲು ಅಥವಾ ನೀವು ತುಂಬ ಆನಂದಿಸುವ ಕೆಲಸಗಳನ್ನು ಮಾಡಲು ಹೆಚ್ಚು ಸಮಯ ಕಳೆಯಬೇಕು. ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ಇಂದು ಮನೆಯಲ್ಲಿ ನೀವು ಇತರರನ್ನು ಮುಜುಗರಪಡಿಸದೇ ನಿಮ್ಮ ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಯತ್ನಿಸಬೇಕು. ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ. ನೀವು ವಿವಾಹಿತರಾಗಿದ್ದರೆ ನಿಮಗೆ ಮಕ್ಕಳು ಸಹ ಇದ್ದರೆ ಇಂದು ನಿಮಗೆ ದೂರು ಮಾಡಬಹುದು. ಏಕೆಂದರೆ ನೀವು ಅವರಿಗೆ ಉಚಿತ ಸಮಯವನ್ನು ನೀಡುತ್ತಿಲ್ಲ. ಅದೃಷ್ಟ ಸಂಖ್ಯೆ: 4

ಧನು ರಾಶಿ : 3 May 2020
ಕುಡಿಯುವ ಮತ್ತು ತಿನ್ನುವಾಗ ಎಚ್ಚರದಿಂದಿರಿ. ಅಸಡ್ಡೆ ನಿಮಗೆ ಅನಾರೋಗ್ಯ ತರಬಹುದು. ಜೀವನ ಸಂಗಾತಿಯೊಂದಿಗೆ ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ದುಂದುಗಾರಿಕೆಯ ಮೇಲೆ ನಿಮ್ಮ ಸಂಗಾತಿ ನಿಮಗೆ ಮಾತುಗಳು ಹೇಳಬಹುದು. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ. ಅದೃಷ್ಟ ಸಂಖ್ಯೆ: 1

ಮಕರ ರಾಶಿ : 3 May 2020
ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರ ಅಗತ್ಯಗಳ ಮೇಲೆ ಗಮನ ಹರಿಸುವುದು ಇಂದು ನಿಮ್ಮ ಆದ್ಯತೆಯಾಗಿರಬೇಕು. ನೀವು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳಬಹುದು. आನಿಮಗೆ ನೀವು ಸಮಯವನ್ನು ನೀಡುವುದು ತಿಳಿದಿದೆ ಮತ್ತು ಇಂದು ನೀವು ಸಾಕಷ್ಟು ಉಚಿತ ಸಮಯವನ್ನು ಪಡೆಯುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 9

ಕುಂಭ ರಾಶಿ : 3 May 2020
ನಿಮ್ಮ ಚೈತನ್ಯವನ್ನು ಹೆಚ್ಚಿಸಲು ನಿಮ್ಮ ಮನಸ್ಸಿನಲ್ಲಿ ಒಂದು ಪ್ರಕಾಶಮಾನವಾದ ಸುಂದರವಾದ ಮತ್ತು ಅದ್ಭುತವಾದ ಚಿತ್ರವನ್ನು ಕಲ್ಪಿಸಿಕೊಳ್ಳಿ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ. ಒಂದು ಅಂಚೆಯ ಮೂಲಕ ಬಂದ ಪತ್ರ ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿ ತರುತ್ತದೆ. ಮೊಂಬತ್ತಿ ಬೆಳಕಿನಲ್ಲಿ ಪ್ರೀತಿಪಾತ್ರರ ಜೊತೆ ಆಹಾರ ಹಂಚಿಕೊಳ್ಳುವುದು. ನಿಮ್ಮ ಹಿಂದಿನ ದಿನಗಳಲ್ಲಿ ಕೆಲಸದ ಸ್ಥಳದಲ್ಲಿ ಅನೇಕ ಕೆಲಸಗಳು ಅಪೂರ್ಣವಾಗಿ ಬಿಟ್ಟಿದ್ದೀರಿ, ಅವುಗಳ ಪಾವತಿ ಇಂದು ನೀವು ಮಾಡಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 7

ಮೀನ ರಾಶಿ : 3 May 2020
ನೀವು ಒಂದು ದೀರ್ಘ ಪ್ರಯಾಣಕ್ಕೆ ಹೋಗಲು ಯೋಜನೆ ಹಾಕುತ್ತಿದ್ದ ಹಾಗೆ ನಿಮ್ಮ ಆರೋಗ್ಯ ಮತ್ತು ಇಂಧನ ಸಂರಕ್ಷಣೆಯ ಹವ್ಯಾಸ ನಿಮಗೆ ಅಪಾರವಾದ ಉಪಯೋಗವುಂಟುಮಾಡುತ್ತದೆ. ಬಿಡುವಿಲ್ಲದ ಕೆಲಸಗಳ ಹೊರತಾಗಿಯೂ ನೀವು ಆಯಾಸವನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ. ಇಂದಿನ ದಿನ, ನಿಮ್ಮ ಬಳಿ ಸಾಲವನ್ನು ಕೇಳುವ ಮತ್ತು ಅದನ್ನು ಹಿಂತಿರುಗಿಸದೆ ಇರುವಂತಹ ಸ್ನೇಹಿತರಿಂದ ನೀವು ನಿಮ್ಮನ್ನು ತಪ್ಪಿಸುವ ಅಗತ್ಯವಿದೆ. ಅದೃಷ್ಟ ಸಂಖ್ಯೆ: 5

ಉಚಿತ ರೈಲುಗಳ ವ್ಯವಸ್ಥೆ ಮಾಡಲು ಸಿಪಿಐ(ಎಂ) ಆಗ್ರಹ

Tumkuru: ತಮ್ಮ ಊರುಗಳಿಗೆ ಹಿಂತಿರುಗಿ ಹೋಗ ಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ಕೂಡಲೆ ಉಚಿತ ರೈಲುಗಳ ವ್ಯವಸ್ಥೆ ಮಾಡಿ ಅವರುಗಳನ್ನು ಸುರಕ್ಷಿತವಾಗಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡ ಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಸಕಾ೯ರವನ್ನು ಆಗ್ರಹಿಸಿವೆ.

ಊರಿಗೆ ಹಿಂತಿರುಗ ಬಯಸುವವರಿಗಾಗಿ ಕೂಡಲೇ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸ ಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಈಗಾಗಲೆ ಹಲವು ಕಡೆ ಕಾಮಿ೯ಕರು ತಮ್ಮ ಊರುಗಳಿಗೆ ಹೋಗಲು ಬಿಡುತ್ತಿಲ್ಲ ಎಂದು ಪ್ರತಿಭಟನೆ ಧ್ವನಿ ಎತ್ತಿದ್ಧಾರೆ. ಅವರನ್ನು ಕೆಲಸಕ್ಕೆಂದು ಕರೆತಂದ ಗುತ್ತಿಗೆದಾರರು ಪದಾರಿಯಾಗಿದ್ದಾರೆ. 40 ದಿನಗಳ ಲಾಕ್ಡೌನ್ ಅವಧಿಯಲ್ಲಿ ಪಡಬಾರದ ಪಡಿಪಾಟಲನ್ನು ಕಾಮಿ೯ಕರು ಪಟ್ಟಿದ್ದಾರೆ.

ಇದೀಗ ತಮ್ಮ ಊರುಗಳಿಗೆ ಹೋಗಲು ಅನುಮತಿ ಇದ್ದರೂ ಸಹಾ ರೈಲುಗಳ ವ್ಯವಸ್ಥೆ ಇಲ್ಲದ ಕಾರಣ ಹತಾಶರಾಗಿದ್ದಾರೆ. ಪ್ರತಿ ರಾಜ್ಯಕೆಂದು ನೇಮಕವಾಗಿರುವ ನೋಡಲ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಊರಿಗೆ ಹೋಗುವವರು ಯಾರನ್ನು ಸಂಪಕ೯ ಮಾಡಬೇಕು ಎಂಬ ಯಾವುದೆ ವಿವರವನ್ನು ಪೂಣ೯ವಾಗಿ ಕಾಮಿ೯ಕರಿಗೆ ರಾಜ್ಯ ಸಕಾ೯ರವು ನೀಡುತ್ತಿಲ್ಲ ಎಂದು ಸಿಪಿಐ(ಎಂ) ಖಂಡಿಸಿದೆ.

ರಾಜ್ಯದವರೆ ಆದ ಕೇಂದ್ರ ರೈಲ್ವೆ ಸಚಿವರು ನಾಪತ್ತೆ ಆಗಿದ್ದಾರೆ , ಬಿಜೆಪಿ ಸಚಿವರು, ಸಂಸದರು,ಶಾಸಕರು ಹಲವರು ಎಲ್ಲಿ ಅಡಗಿಕೊಂಡಿದ್ದಾರೆ. ಬಾಯಿ ಬಿಟ್ಟರೆ ಸಾಕು ಜನರ ನಡುವೆ ದ್ವೇಶ ಬಿತ್ತುವ ಮಾತುಗಳನ್ನು ಹಾಡುತ್ತಿದ್ದ ಹಲವು ಬಿಜೆಪಿ ನಾಯಕರು, ಜನರು ಪರದಾಡುತಿರುವಾಗ ಎಲ್ಲಿ ಹೋಗಿದ್ದಾರೆ ? ಎಂದು ಸಿಪಿಐ(ಎಂ) ಟೀಕಿಸಿದೆ.

ಸಂಕಷ್ಟದಲ್ಲಿ ಸಿಲುಕಿರುವ ಸಾಮಾನ್ಯ ರೈತರನ್ನು ಉಳಿಸುವರು ಯಾರು….

ರಂಗ‌ನಕೆರೆ ಮಹೇಶ್


ದೇಶದ ರೈತರನ್ನು ನೀರಾವರಿ ಆಶ್ರಿತ, ಕೊಳವೆ ಬಾವಿ ಆಶ್ರಿತ ಹಾಗೂ ಮಳೆಯಾಶ್ರಿತ ರೈತರು ಎಂದು ಹಲವು ವಿಧಗಳಾಗಿ ವಿಂಗಡಿಸಬಹುದು.

ದೇಶದ ಬಹುಪಾಲು ರೈತರು ಅಂದರೆ ಶೇ 75 ರಷ್ಟು ರೈತರು ಮಳೆಯಾಶ್ರಿತ ಗುಂಪಿಗೆ ಸೇರುತ್ತಾರೆ.

ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರಿನ ವೇಳೆ ಬರುವ ಮಳೆ ಆಧಾರದ ಮೇಲೆ ಇವರ ಕೃಷಿ ಅವಲಂಬಿತವಾಗಿರುತ್ತದೆ. ಇವರದು ಒಣ ಬೇಸಾಯ ಕ್ರಮವಾಗಿದ್ದು ಮಳೆ ಬಂದರೆ ಮಾತ್ರ ಇವರು ಬದುಕಬಲ್ಲರು ಮತ್ತು ಇವರು ನಂಬಿದ ದನಕರುಗಳು ಬದುಕಬಲ್ಲವು. ಮಳೆ ಬಾರದೆ ಹೋದರೆ ಇವರ ಜೀವನ ತುಂಬಾ ದುಸ್ತರವಾಗುತ್ತದೆ.

ಕಳೆದ ನಾಲ್ಕೈದು ವರ್ಷಗಳ ಮಳೆಯ ಪ್ರಮಾಣವನ್ನೇ ಗಮನಿಸಿದರೆ ಪ್ರತಿ ವರ್ಷವೂ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಅಲ್ಲಲ್ಲಿ ತುಂತುರು ಮಳೆ ಬರುತ್ತದೆ.

ಇದನ್ನು ನಂಬಿದ ರೈತ ದುಬಾರಿ ಬೆಲೆಗೆ ಬೀಜ, ಗೊಬ್ಬರ ತಂದು ಭೂಮಿಗೆ ಬಿತ್ತಿ ಕೈಸುಟ್ಟುಕೊಳ್ಳುತ್ತಾನೆ. ಒಮ್ಮೊಮ್ಮೆ ಬಿತ್ತಿದ ಬೀಜವೂ ಹಿಂದಿರುಗದ ಸ್ಥಿತಿ ಬಂದೊದಗುತ್ತದೆ.

ಆದರೂ ಸಾಮಾನ್ಯ ವರ್ಗದ ರೈತರು ಸುಮ್ಮನಾಗುವುದಿಲ್ಲ. ಮತ್ತೆ ಹಿಂಗಾರು ಬೀಜ ಬಿತ್ತಲು ಅಣಿಯಾಗುತ್ತಾನೆ. ಅಲ್ಲೂ ಸಹ ಅಪೇಕ್ಷಿತ ಮಳೆ ಬಾರದೆ ರೈತರ ಒಕ್ಕಲು ಮಕ್ಕಳ ಮಳೆಗಳೆನಿಸಿದ ಉತ್ತರೆಯಂತಹವೇ ಕೈಕೊಡುತ್ತವೆ.

ಆತನ ಮೂರು ತಿಂಗಳ ಗಂಜಿ ಮತ್ತು ದನಕರುಗಳಿಗೆ ಮೂರು ತಿಂಗಳ ಮೇವು ಸಿಗಬಹುದೇನೋ ಎಂಬ ಭರವಸೆ ಪ್ರತಿ ವರ್ಷ ಸುಳ್ಳಾಗುತ್ತದೆ. ಹಾಗೇನಾದರೂ ಯಾವುದೋ ಒಂದು ಮಳೆ ಸುಮಾರು ಮೂರು ತಿಂಗಳ ಬೆಳೆಗಾಗುವಷ್ಟು ಒಂದೇ ದಿನ ಬಂದು ಹೋಗುತ್ತದೆ.

ಮಳೆಯಾಧಾರಿತ ಪ್ರದೇಶದ ರೈತರು ಪಾರಾಂಪರಗತವಾಗಿ ಒಕ್ಕಲುತನವನ್ನೆ ಅವಲಂಬಿಸಿದ್ದಾರೆ. ಇವರದು ಏನಿದ್ದರೂ ದೇವರು ಎಷ್ಟು ಕೊಡುತ್ತಾನೋ ಅಷ್ಟೇ ಸಾಕು ಎಂಬ ಗಟ್ಟಿ ತೀರ್ಮಾನವನ್ನು ಮಾಡಿರುತ್ತಾರೆ.

ಆದರೆ ನಮ್ಮಲ್ಲಿನ ಕೆಲವು ಸ್ಥಿತಿವಂತ ರೈತರಿಗಿರುವಂತೆ ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಸಂಘಟನೆ, ಆಕಾಂಕ್ಷೆ, ಮುಂದುವರೆದ ಹೋರಾಟಗಳು ಇವರ ಕೈಲಾಗದು. ಆದರೆ ತಂಬಾಕು, ಕಬ್ಬು ಸೇರಿದಂತೆ ಇತರ ಬೆಳೆಗಳ ಹೋರಾಟಗಾರರು ಸಂಘಟಿತರಾಗಿ ಹೋರಾಟ ಮಾಡುತ್ತಾರೆ.

ಇನ್ನೂ ರಾಜ್ಯದ ಅಡಿಕೆ, ಕಾಫಿ ಬೆಳೆಗಾರರನ್ನೇ ನೋಡಿ ಅವರು ತಮಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ತಮ್ಮ ಹಕ್ಕು ಪಡೆದು ಕೊಂಡಿದ್ದಾರೆ. ಅದರಲ್ಲೂ ಕಾಫಿ ಮತ್ತು ಅಡಿಕೆ ಬೆಳೆಗಾರರು ಹೆಚ್ಚಾಗಿ ಜನಪ್ರತಿನಿಧಿಗಳಿರುವುದರಿಂದ ಇವರ ಹೋರಾಟಕ್ಕೆ ಬೇಗನೆ ಸ್ಪಂದನೆ ದೊರೆಯುತ್ತದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಅಡಿಕೆ, ಕಾಫಿ ಬೆಳೆಗಾರರಿಗೆ ಸರ್ಕಾರ ಸ್ಪಂದಿಸಿದ್ದು ತಪ್ಪೇನೂ ಅಲ್ಲ ಆದರೆ ಸಾಮಾನ್ಯ ರೈತ ವರ್ಗಕ್ಕೆ ಸರ್ಕಾರ ಮಾಡಿದ್ದೇನು ಎಂಬ ಪ್ರಶ್ನೆ ಮೂಡುತ್ತದೆ.

ಸಾಮಾನ್ಯ ರೈತ ವರ್ಗದವರಿಗೆ ಪ್ರತಿ ವರ್ಷ ಮಳೆ ಬಂದರಷ್ಟೆ ಜೀವನ ಉತ್ತಮವಾಗಿ ಸಾಗುತ್ತದೆ. ಒಂದು ವರ್ಷ ಮಳೆ ಕೈಕೊಟ್ಟರು ಸಾಕು ಇವರ ಜೀವನ ಕಷ್ಟಕರವಾಗುತ್ತದೆ. ಇನ್ನೂ ಇವರ ದನಕರುಗಳಿಗೂ ಮೇವಿಲ್ಲದೆ ಕಟುಕರಿಗೆ ಮಾರಾಟ ಮಾಡುವ ಸ್ಥಿತಿ ಬಂದೊದಗುತ್ತದೆ.

ಆದರೆ ಉಳಿದ ಕಾಫಿ, ಅಡಿಕೆ ಬೆಳೆಗಾರರು ಹಿಂದಿನ ವರ್ಷಗಳ ಹಣದಲ್ಲಿ ಹೇಗೋ ಜೀವನ ಸಾಗಿಸಿ ಬಿಡುತ್ತಾರೆ. ಇನ್ನೂ ಇವರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಇವರಿಗೆ ಸಲೀಸಾಗಿ ಸಾಲ ನೀಡುತ್ತವೆ.

ಆದರೆ ಸಾಮಾನ್ಯ ವರ್ಗದ ರೈತರಿಗೆ ಈ ಬ್ಯಾಂಕುಗಳು ಸಾಲ ನೀಡುವುದೇ ಇಲ್ಲ. ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು, ಭೂ ಅಭಿವೃದ್ಧಿ ಬ್ಯಾಂಕುಗಳು, ಗ್ರಾಮಗಳ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಲ್ಪಸ್ವಲ್ಪ ಸಾಲ ನೀಡುತ್ತವೆ. ಆದರೆ ಈ ಬ್ಯಾಂಕುಗಳು ನೀಡಿರುವ ಸಾಲ ನೀಡಿ ಮರುಪಾವತಿಯಾಗದೆ ರೋಗಗ್ರಸ್ಥವಾಗಿವೆ.

ಇನ್ನೂ ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋಗಬೇಕು. ಸಾಮಾನ್ಯ ರೈತ ವರ್ಗಗಳ ಭಾರಿ ಬೇಡಿಕೆಗಳನ್ನು ಈಡೇರಿಸಲು ಸಮರ್ಥವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸರ್ಕಾರ ಸಹ ಪ್ರತಿ ವರ್ಷ ವಿವಿಧ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತದೆ.

ಅವು ಎಷ್ಟರ ಮಟ್ಟಿಗೆ ಈ ರೈತರಿಗೆ ಲಭ್ಯವಾಗಿವೆ ಎಂಬುದನ್ನು ನೀವೇ ಮನಗಾಣಬೇಕು. ಇನ್ನೂ ಬೆಳೆ ವಿಮೆ ವಿಷಯದಲ್ಲಿ ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಗಳ ಹಗ್ಗ ಜಗ್ಗಾಟದಲ್ಲಿ ಗೋಜಲುಗಳಾಗಿ ಯೋಜನೆ ಹಳ್ಳ ಹಿಡಿಯುತ್ತದೆ.

ಪಾರಂಪರವಾದ ಒಕ್ಕಲುತನ ಹಲವು ಸಾಮಾನ್ಯ ವರ್ಗದ ರೈತರ ಅನುಭವದಂತೆ ನಿಜಕ್ಕೂ ನಷ್ಟದ ಬಾಬುತ್ತೆ. ಆಗಾದರೆ ಇವರ ಸಂಕಷ್ಟಕ್ಕೆ ಪರಿಹಾರವೇ ಇಲ್ಲವೇ..? ಬಹು ಸಂಖ್ಯೆಯಲ್ಲಿರುವ ಸಾಮಾನ್ಯ ವರ್ಗದ ರೈತರ ಕಷ್ಟಗಳ ಪರಿಹಾರ ಸರ್ಕಾರಕ್ಕೆ ಸ್ವಲ್ಪ ಕಷ್ಟವಾದರೂ ಇವರ ಬಗ್ಗೆ ಒಮ್ಮೆಯೂ ಮಾತನಾಡದಿರುವುದು ಮಾತ್ರ ದುರಂತವಾಗಿದೆ.