Friday, February 27, 2026
Google search engine
Home Blog Page 241

ಮೊಲ ಕೊಂದು ಟಿಕ್ ಟಾಕ್ ಮಾಡಿದವರು ಜೈಲಿಗೆ

Publicstory. in


ತುಮಕೂರು: ಮೊಲವನ್ನು ಕೊಂದು ಚರ್ಮ ಸುಲಿಯುವುದನ್ನು ವಿಡಿಯೊ ಮಾಡಿ ಟಿಕ್ ಟಾಕ್ ಗೆ ಹಾಕಿ ಶೋ ಕೊಟ್ಟಿದವರು ಈಗ ಕಂಬಿ ಎಣಿಸುವಂತಾಗಿದೆ.

https://youtu.be/KHUScugwdlo
ಕಾಡುಮೊಲವನ್ನು ಬೇಟಿಯಾಗಿ ಅದನ್ನು ಮನೆವೆ ತಂದು ಚರ್ಮ ಸುಲಿದು, ಮಾಂಸವಾಗಿ ಕತ್ತರಿಸುವುದನ್ನು ಈ ಇಬ್ಬರೂ ಸೇರಿ ವಿಡಿಯೊ ಮಾಡಿಸಿ ಟಿಕ್ ಟಾಕ್ ಗೆ ಅಪ್ ಲೋಡ್ ಮಾಡಿದ್ದನು.

ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಗಮನಿಸಿದ ತುಮಕೂರು ಉಪ ವಿಭಾಗದ ಉಪ ಅರಣ್ಯಾಧಿಕಾರಿಗಳಾದ ಎಸ್, ಸಿ,ಗಿರೀಶ್ ಅವರು ಆರೋಪಿಗಳನ್ನು ಬಂಧಿಸಲು ತಂಡ ರಚಿಸಿದ್ದರು.

ಉಪ ವಲಯ ಅರಣ್ಯಾಧಿಕಾರಿಗಳಾದ ಎಚ್,ನಾಗರಾಜ್, ಮೋಜಿಣಿದಾರರಾದ ನಂದೀಶ್, ನೆಹಜುಲ್ ತಸ್ಮಿಯಾ ಅವರ ತಂಡ ಕಾರ್ಯಾಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಾದ ಕರಿದುಗ್ಗನಹಳ್ಳಿಯ ವಿನಯ್, ಎಸ್,ಗೊಲ್ಲಹಳ್ಳಿಯ ಜೆ,ಪಿ. ವಿನಯ್ ಕುಮಾರ್ ಅವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತನಿಖೆ ಮುಂದುವರೆದಿದೆ.

ಮನುಕುಲ ಉಳುವಿಗೆ ಹೋರಾಟ ಅಗತ್ಯ – ಕೆ.ದೊರೈರಾಜ್

Publicstory.in


Tumkur: ಕೊರೊನಾ ಸಂದರ್ಭದಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಆತಾಶರಾಗದೆ ತಮ್ಬ ಬದುಕು ಹಾಗೂ ಮನುಕುಲದ ಉಳುವಿಗೆ ಜಾತಿ, ಮತ-ಧರ್ಮವನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಬೇಕು ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.

ತುಮಕೂರು ನಗರದ ಜನಚಳವಳಿ ಕೇಂದ್ರದಲ್ಲಿ ಸಿಐಟಿಯು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕಾರ್ಮಿಕರ ದಿನ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರು ಮತ್ತು ಕಾರ್ಮಿಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ದುಡಿಯವ ವರ್ಗದ ರಕ್ಷಣೆಯ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.
ವಿಶ್ವದಲ್ಲಿ ಕೊರೊನ ಕಾಯಿಲೆಯನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಚಿಂತೆ ಎಲ್ಲರನ್ನು ಕಾಡುತ್ತಿದೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಜಾತಿ, ಧರ್ಮ, ಜನಾಂಗ ನಿಂದನೆ ಹುಟ್ಟುಹಾಕುವ ಯತ್ನಗಳು ನಡೆಯುತ್ತಲೇ ಇವೆ. ಇಂತಹ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು. ಪ್ರಚೋದಿತರಾಗಬಾರದು. ಎಲ್ಲರ ಬದುಕನ್ನು ಉಳಿಸಲು ಸ್ವವಿಮರ್ಶೆ ಮಾಡಿಕೊಂಡು ಹೋರಾಟ ನಡೆಸಬೇಕಾಗಿದೆ ಎಂದರು.
ಕೊರೊನಾ ವಾರಿಯರ್ ಗಳಾಗಿ ದುಡಿಯುತ್ತಿರುವ ಪೌರಕಾರ್ಮಿಕರು ಕೆಲಸ ಮಾಡಿ ಮನೆಗೆ ತೆರಳುವ ಕೆಲಸದ ಸ್ಥಳದಲ್ಲೇ ಮುನ್ನ ಸ್ನಾನ ಮಾಡಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು. ತುಮಕೂರು ನಗರದಲ್ಲಿ ಸ್ನಾನಗೃಹಗಳಿದ್ದರೂ ಪೌರಕಾರ್ಮಿಕರ ಸ್ನಾನಕ್ಕೆ ಅವಕಾಶಕೊಡುತ್ತಿಲ್ಲ. ಆಯುಕ್ತರಿಗೆ ಮನವಿ ಕೊಟ್ಟು ಖುದ್ದಾಗಿ ಹೇಳಿದರೂ ಕಿವಿಗೊಡುತ್ತಿಲ್ಲ. ಪೌರಕಾರ್ಮಿಕರ ರಕ್ಷಣೆಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾದ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆಯೂ ಉದ್ಯೋಗ, ವೇತನ ಕಡಿತ ಮಾಡುವಂತಹ ಕೆಲಸ ನಡೆಯುತ್ತಿದೆ. ಇರುವ ಕೆಲಸವನ್ನು ಉಳಿಸಕೊಂಡು ಹೋಗಲು ಸಂಘಟಿತ ಹೋರಾಟವೊಂದೇ ಮಾರ್ಗ. ಸರ್ಕಾರದ ಬಳಿ ಅಸಂಘಟಿತ ವಲಯದಲ್ಲಿ ಕಾರ್ಮಿಕರು ಎಷ್ಟು ಮಂದಿ ಇದ್ದಾರೆಂಬ ವರದಿಯೇ ಇಲ್ಲ ಎಂದು ದೂರಿದರು.
ವಿಮಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಕಾರ್ಮಿಕರು ಕೆಲಸ ಮುಗಿದ ಮೇಲೆ ಕೈಕಾಲು ತೊಳೆಯಬೇಕು. ಸ್ಯಾನಿಟೈಜರ್ ಬಳಸುವುದಕ್ಕಿಂತ ಸೋಪಿನಿಂದ ಕೈತೊಳೆಯುವುದು ಉತ್ತಮ. ಕಣ್ಣ, ಮೂಗು ಮತ್ತು ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ಕಟ್ಟಡ ಕಾರ್ಮಿಕರು ತಮ್ಮ ದುಡಿಮೆಯ ಹಣವನ್ನು ಕಲ್ಯಾಣ ಮಂಡಳಿಯಲ್ಲಿ ಇಟ್ಟಿದ್ದಾರೆ. ಆ ಹಣದಲ್ಲೇ ಕಟ್ಟಡ ಕಾರ್ಮಿಕರಿಗೆ 2 ಸಾವಿರ ಹಾಕಿ ಇದು ಕೇಂದ್ರ ಸರ್ಕಾರದ್ದು ಎಂಬಂತೆ ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಂದರು. ಕೊರೊನ ವಿಷಯದಲ್ಲಿ ಒಂದು ಧರ್ಮವನ್ನು ಗುರಿ ಮಾಡುತ್ತಿರುವ ಯತ್ನಗಳು ನಡೆಯುತ್ತಿದ್ದು ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರನ್ನು12 ಗಂಟೆ ದುಡಿಸುವ ಯತ್ನಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧವಿದೆ. ನಾವು ಎಲ್ಲರಿಗೂ ಕೆಲಸ ಕೊಡಬೇಕು. 4-6 ಗಂಟೆ ಪಾಳಿಗಳನ್ನು ಮಾಢಬೇಕು.ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು. ಕಾರ್ಖಾನೆಗಳ ಮಾಲಿಕರು ಕಾರ್ಮಿಕರಿಗೆ 2 ತಿಂಗಳು ವೇತನ ನೀಡಿದರೂ ಅವರಿಗೆ ನಷ್ಟವಿಲ್ಲ. ಲಾಭದಲ್ಲಿ ಶೇ.10ರಷ್ಟು ವೆಚ್ಚ ಮಾಡಿದರೆ ಸಾಕು. ಇಷ್ಟನ್ನು ಮಾಡಲು ಮಾಲಿಕರು ಒಪ್ಪುತ್ತಿಲ್ಲ. ಇವರಿಗೆ ಕಾರ್ಮಿಕರ ಕುರಿತು ಕಾಳಜಿ ಇಲ್ಲವೆಂಬುದು ಇದರಿಂದ ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೆಂಡಿಂಗ್ ಕಮಿಟಿ ಸದಸ್ಯ ಟಿ.ಎಸ್.ರಾಜಶೇಖರ್, ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಖಜಾಂಚಿ ಎ.ಲೋಕೇಶ್, ಅಂಗನವಾಡಿಯ ಜಬೀನ ಮಾತನಾಡಿದರು. ಪೌರಕಾರ್ಮಿಕರ ಸಂಘದ ಸುರೇಂದ್ರ ಉಪಸ್ಥಿತರಿದ್ದರು. ರಂಗಧಾಮಯ್ಯ ವಂದಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರನ್ನು12 ಗಂಟೆ ದುಡಿಸುವ ಯತ್ನಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧವಿದೆ. ನಾವು ಎಲ್ಲರಿಗೂ ಕೆಲಸ ಕೊಡಬೇಕು. 4-6 ಗಂಟೆ ಪಾಳಿಗಳನ್ನು ಮಾಢಬೇಕು.ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು. ಕಾರ್ಖಾನೆಗಳ ಮಾಲಿಕರು ಕಾರ್ಮಿಕರಿಗೆ 2 ತಿಂಗಳು ವೇತನ ನೀಡಿದರೂ ಅವರಿಗೆ ನಷ್ಟವಿಲ್ಲ. ಲಾಭದಲ್ಲಿ ಶೇ.10ರಷ್ಟು ವೆಚ್ಚ ಮಾಡಿದರೆ ಸಾಕು. ಇಷ್ಟನ್ನು ಮಾಡಲು ಮಾಲಿಕರು ಒಪ್ಪುತ್ತಿಲ್ಲ. ಇವರಿಗೆ ಕಾರ್ಮಿಕರ ಕುರಿತು ಕಾಳಜಿ ಇಲ್ಲವೆಂಬುದು ಇದರಿಂದ ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೆಂಡಿಂಗ್ ಕಮಿಟಿ ಸದಸ್ಯ ಟಿ.ಎಸ್.ರಾಜಶೇಖರ್, ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಖಜಾಂಚಿ ಎ.ಲೋಕೇಶ್, ಅಂಗನವಾಡಿಯ ಜಬೀನ ಮಾತನಾಡಿದರು. ಪೌರಕಾರ್ಮಿಕರ ಸಂಘದ ಸುರೇಂದ್ರ ಉಪಸ್ಥಿತರಿದ್ದರು. ರಂಗಧಾಮಯ್ಯ ವಂದಿಸಿದರು.

ನಾಗವಲ್ಲಿಯಲ್ಲಿ ಕೊರೊನಾ ವ್ಯಕ್ತಿ ಶವ ಅಂತ್ಯಸಂಸ್ಕಾರ: ಮಾಜಿ ಶಾಸಕರ ನಡೆಗೆ ಟೀಕೆ

Publicstory.in


Tumkuru: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರು ಹಾಲಿ ಶಾಸಕ ಡಿ ಸಿ ಗೌರಿಶಂಕರ್ ವಿರುದ್ದ ಪದೇ ಪದೇ
ಆಧಾರ ರಹಿತ ಆರೋಪ ಮಾಡಿ ಅವರ ತೇಜೋವಧೆ ಮಾಡುತ್ತಿರುವುದು ತರವಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ(ದೀಪು) ಮಾಜಿ ಶಾಸಕರ ಆರೋಪವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಲಾಕ್ ಡೌನ್ ಆರಂಭವಾದಾಗಿನಿಂದ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಕ್ಷೇತ್ರ ಪ್ರವಾಸ ಮಾಡಿ ಜನರ ಕಷ್ಟ ಸುಖ ಆಲಿಸುತ್ತಿದ್ದಾರೆ,ಕೋಟ್ಯಾಂತರ ರೂ ಸ್ವಂತ ಹಣ ಖರ್ಚು ಮಾಡಿ ಆಹಾರದ ಕಿಟ್ ತಯಾರಿಸಿ ಹಂಚುತ್ತಿದ್ದಾರೆ,ಕರೋನ ವೈರಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ಆದರೆ ಮಾಜಿ ಶಾಸಕರು ಡಿ ಸಿ ಗೌರೀಶಂಕರ್ ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕರೋನದಿಂದ ಮೃತಪಟ್ಟಿರುವ ವ್ಯಕ್ತಿಯನ್ನು ಹೆಬ್ಬೂರು ಸಮೀಪವಿರುವ ನಾಗವಲ್ಲಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ, ಆದರೆ ಮಾಜಿ ಶಾಸಕರು ಹಿರೇಹಳ್ಳಿ ಭಾಗದಲ್ಲಿ ಆಹಾರದ ಕಿಟ್ ವಿತರಣೆ ಮಾಡುವ ವೇಳೆ ಶಾಸಕ ಡಿ ಸಿ ಗೌರೀಶಂಕರ್ ನಾಗವಲ್ಲಿಯಲ್ಲಿ ಕರೋನ ಪೀಡಿತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ,ಜನರ ಹಿತಕ್ಕಾಗಿಊಟ ನಿದ್ದೆ ತ್ಯಾಗ ಮಾಡಿ ದಾನಶೂರ ಕರ್ಣರಂತೆ ದುಡಿಯುವ ಶಾಸಕ ಡಿ ಸಿ ಗೌರೀಶಂಕರ್ ಕರೋನ ಪೀಡಿತ ವ್ಯಕ್ತಿಯನ್ನು ತಮ್ಮ ಕ್ಷೇತ್ರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ನೀಡುತ್ತಿರಲಿಲ್ಲ, ಜಿಲ್ಲಾಢಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಡಿರುವ ತಪ್ಪಿನಿಂದ ದೊಡ್ಡ ಪ್ರಮಾದವಾಗಿದೆ. ಗ್ರಾಮಾಂತರ ಶಾಸಕರ ವಿರುದ್ದ ಮಾತನಾಡಬೇಕಾದರೆ ಎಚ್ಚರ ಇರಬೇಕು ಎಂದು ದಯಾನಂದಗೌಡ ಎಚ್ಚರಿಸಿದ್ದಾರೆ

ಹೊರಟು ಹೋಗುವ ಬದುಕಿಗೊಂದು ವಿಶೇಷತೆ ಇರಲಿ

1

ಶಂಕರ್ ಬರಕನಹಾಲ್
8722904238


ಯಾರನ್ನೋ ಮೆಚ್ಚಿಸಲು
ಯಾರದೋ ಹೋಗಳಿಕೆಗೆ
ಇನ್ನೊಬ್ಬರ ಮರ್ಜಿಗೆ,
ಕರ್ತವ್ಯದತ್ತ ಕಾಲುಹಾಕಿದರೆ
ಒಪ್ಪುವುದೇ ನಮ್ಮ ಆತ್ಮ.

ನಾವು ನಾವಾಗಿಯೇ ಇರೋಣ
ಪರರ ಮೆಚ್ಚಿಸುವುದನ್ನು ಬಿಡೋಣ
ಚಿಂತೆಗಳಿಗೆ ಕಡಿವಾಣ ಹಾಕೋಣ
ಸುಂದರ ಬದುಕು ನೆಡೆಸೋಣ.

ಬದುಕೆಂಬ ಭವಿಷ್ಯದ ಭ್ರಮೆಗಳುನ್ನು ತಲೆಯಲ್ಲಿ ಹಾಕಿಕೊಂಡು ವಾಸ್ತವಿಕವ ಜಗತ್ತಿನಿಂದ ದೂರ ಇರುವುದು ನಮಗೆ ನಾವೇ ಮಾಡಿಕೊಂಡ ದ್ರೋಹವೇ ಸರಿ.

ಮನುಷ್ಯನ ಕೈಗೆಟುಕದ ಆಸೆಗಳು,
ಆ ಅಸೆಗಾಗಿ ಕಾಣುವ
ಸಾವಿರಾರು‌ ಕನಸುಗಳು,
ಬರೇ ಕನಸಾಗಿಯೇ ಉಳಿಯಿತಲ್ಲ ಎಂಬ ಅಸಹಾಯಕತೆ,
ಕೊನೆಗೆ ಇನ್ಯಾವುದರಲ್ಲೋ‌
ಆ ಕನಸನ್ನು ಸಂತೃಪ್ತಿ‌ ಮಾಡಿಕೊಳ್ಳಬೇಕಾದ ಪರಿಸ್ಥಿತಿ.

ಖುಷಿ-ದುಖಃ ಪ್ರತಿಯೊಂದನ್ನು ಆರ್ಥಿಕತೆಯ ಪರಿಮಿತಿಯೊಳಗೆ ಒಂಥರವಾದ ತೊಳಲಾಟದಲ್ಲೆ ಅನುಭವಿಸಬೇಕಾದ ಅದೃಷ್ಟ
ಇದೇ ಅಲ್ವಾವೇ ನಮ್ಮ ಜೀವನ
ಖುಷಿಯೋ ದುಃಖಯೋ ಈ ಕ್ಷಣವನ್ನಾದರೂ ಅನುಭವಿಸೋಣ.

ಆದರೇ ನಾವೆಲ್ಲರೂ ಯಾಂತ್ರಿರ
ಬದುಕಿಗೇ ಸೀಮಿತವಾಗಿದ್ದೇವೆ
ನಾವು ಪ್ರಾಣಿ ಪಕ್ಷಿಗಳನಂತೆ
ಬದುಕು ಕಟ್ಟಿ ಕೊಂಡಿದ್ದೇವೆ
ತ್ಯಾಗ ಮಾಡದ ಬದುಕು ಯಾವುದುನಮಗಿಲ್ಲ
ಹೆಸರೇ ಅಂತಿಮವಾಗುವಾಗ
ಹೊತ್ತುಕೊಂಡು ಹೋಗುದಕ್ಕೆ ಉಳಿದಿಲ್ಲಾ ನಮ್ಮ ಬಾಕಿ
ಹೊರಟು ಹೋಗುವ
ಬದುಕಿಗೊಂದು ವಿಶೇಷತೆ ಇರಲಿ.

ಅವರು ‘ಮದರ್’

ಜಿ ಎನ್ ಮೋಹನ್


‘ಮೋಹನ್..’

‘ಮೋಹನ್..

ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು’

ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆ

ಪುಟ್ಟ ಕೂಸು ಅದು. ತಿಂಗಳುಗಳ ಲೆಕ್ಕ. ಹಾಗಾಗಿ ಜನಜಂಗುಳಿಯ ಮಧ್ಯೆ ಉಸಿರು ಕಟ್ಟಿತೇನೋ ಒಂದಿಷ್ಟು ಭಿಕ್ಕಲು ಶುರು ಮಾಡಿದಳು

ಅವಳು ಹಾಗೆ ಮಾಡಿದ್ದೇ ತಡ ನಾನು ಒಂದಿಷ್ಟು ಸ್ವಚ್ಚಂದ ಗಾಳಿಗಾಗಿ
ಅವಳನ್ನು ಎತ್ತಿಕೊಂಡು ಹೊರ ಬಂದಿದ್ದೆ

ಆಗಲೇ ಕೂಗು ಕಿವಿಗೆ ಬಿದ್ದದ್ದು

ನಾನು ಎದ್ದೆನೋ ಬಿದ್ದೆನೋ ಎಂದು ಮಗುವನ್ನು ಎತ್ತಿಕೊಂಡು ದಾಪುಗಾಲು ಹಾಕುತ್ತ ಓಡಿ ಬಂದೆ

ಬಂದವನೇ ಅವರ ಎದುರು ನಿಂತೆ

ಅವರು ನನಗಾಗಿ ಎಂದು ಕೈನಲ್ಲಿ ಒಂದು ಕಾಣಿಕೆ ಹಿಡಿದು ನಿಂತಿದ್ದರು

ಕೊಡಲು ಕೈ ಚಾಚಿದರು
ಆದರೆ ನನ್ನ ಕೈನಲ್ಲಿ ಕೂಸು
ನಾನು ಮತ್ತೆ ತಬ್ಬಿಬ್ಬು..

ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಅವರು ಕೈ ಚಾಚಿದರು
ಅವರು ಹಾಗೆ ಕೈ ಚಾಚಿದವರೇ ಮಗುವನ್ನು ಸ್ಪರ್ಶಿಸಿದರು, ತಲೆ ನೇವರಿಸಿದರು
ನಂತರ ಮಗುವನ್ನು ತಮ್ಮ ತೋಳಿಗೆ ತೆಗೆದುಕೊಂಡರು
ನನ್ನ ಕೈನಲ್ಲಿದ್ದ ಹಸುಗೂಸು ಕಿನ್ನರಿ ಈಗ ಅವರ ಕೈನಲ್ಲಿ

ಅವರು.. ಅವರು.. ಮದರ್ ತೆರೇಸಾ
ಹೌದು ನೀವು ನಂಬಲೇಬೇಕು ಅವರು ಮದರ್ ತೆರೇಸಾ

ಮಂಗಳೂರಿನಲ್ಲಿದ್ದ ದಿನಗಳು ಅವು.
ಹಾಗೆ ಬಂದ ಮದರ್ ತೆರೇಸಾರನ್ನು ನಾವು ಪುಟ್ಟ ಮಕ್ಕಳಂತೆ ಹಿಂಬಾಲಿಸಿದ್ದೆವು

ವರದಿ ಮಾಡುವುದು ಒಂದು ಕಡೆಯಾದರೆ, ಜಿನುಗುವ ಕೀವನ್ನು ಒರೆಸಿದ, ಕಣ್ಣೇರು ತೊಡೆದ, ಹೇಲು ಉಚ್ಚೆ ಬಾಚಿದ,
ಮೈನಲ್ಲಿ ಕುಷ್ಠದ ಕಲೆಗಳು ಇಲ್ಲವೇ ಇಲ್ಲವೇನೋ ಎನ್ನುವಂತೆ ಮೈ ತೊಳೆದ ಆ ಕೈಗಳನ್ನೂ ನೋಡಬೇಕಿತ್ತು

ಹಾಗೆಯೇ ದೃಢವಾದ ಕಣ್ಣುಗಳನ್ನೂ, ಸದಾ ಒಂದು ಹೂ ನಗೆ ಚೆಲ್ಲಿಯೇ ಇರುತ್ತಿದ್ದ ಮುಖವನ್ನೂ..

ಹಾಗಾಗಿ ನಾವೆಂದೋ ‘ಕರುಣಾಳು ಬಾ ಬೆಳಕೇ..’ ಎಂದು ಕರೆದಿದ್ದಕ್ಕೆ ಬಂದೇ ಬಿಟ್ಟರೇನೋ ಎನ್ನುವಂತೆ
ನಮ್ಮ ಮೊರೆಯನ್ನು ಆಲಿಸಿದವರ ಬೆನ್ನು ಹತ್ತಿ ನಡೆದಿದ್ದವು

ನಾನು ಕೇಳಿದೆ-
ಅಮ್ಮ, ನಿಮ್ಮೊಳಗೆ ಆ ಕೀವು ಕಾಣದ, ಅಸಹ್ಯ ಪಡದ ಮನಸ್ಸು ಹುಟ್ಟಿದ್ದು ಯಾವಾಗ ?

ತೆರೇಸಾ ಮತ್ತೆ ಅದೇ ನಗು ನಗುತ್ತಾ ಹೇಳಿದರು-
ಒಂದು ಘಟನೆ ಹೇಳಿಬಿಡುತ್ತೇನೆ-

‘ಹೀಗೇ ಒಬ್ಬರು ಬಂದಿದ್ದರು.. ನಾನು ಮೈನ ಕೀವು ಒರೆಸುತ್ತಾ ನಿಂತಿದ್ದೆ
ಅವರಿಗೆ ಅದೆಷ್ಟು ಅಸಹ್ಯವಾಯಿತೋ ಗೊತ್ತಿಲ್ಲ
ಕೋಟಿ ಕೊಟ್ಟರೂ ನಾನು ಈ ಕೆಲಸ ಮಾಡುತ್ತಿರಲಿಲ್ಲ ಎಂದರು
ನಾನು ಹೇಳಿದೆ- ನಾನೂ ಅಷ್ಟೇ ಕೋಟಿ ಕೊಟ್ಟರೂ ಈ ಕೆಲಸ ಖಂಡಿತಾ ಮಾಡುತ್ತಿರಲಿಲ್ಲ
ಆದರೆ ಇದು ಈ ರೋಗಿಯ ಒಳಗೆ ಇರುವ ಜೀಸಸ್ ನ ಹುಡುಕುವ ನನ್ನ ಕೆಲಸವಷ್ಟೇ’ ಎಂದು

ತೆರೇಸಾಗೆ ಬದಲಾವಣೆಯ ದಾರಿಗಳು ನಮ್ಮಿಂದಲೇ ಆರಂಭವಾಗುತ್ತದೆ ಎಂದು ಗೊತ್ತಿತ್ತು

ಆ ದಿನಗಳು ರಾಜಕಾರಣ ತನ್ನ ಹೆಸರನ್ನು ತುಂಬಾ ಕೆಡಿಸಿಕೊಂಡಿದ್ದ ದಿನಗಳು
ಹಾಗಾಗಿ ನಾನು ರಾಜಕಾರಣಿಗಳ ಬಗ್ಗೆ ಕೇಳಿದೆ

ಅವರು ಒಂದೇ ಮಾತು ಹೇಳಿದರು-
ಕಾಲಿನ ಮೇಲೆ ನಡೆದಾಡುವವರೆಲ್ಲರೂ ಆತನೆದುರು ಮಂಡಿಯೂರಲೂ ಬೇಕು ಎಂದು ಗೊತ್ತಾಗುವ ಕಾಲ ದೂರವೇನಿಲ್ಲ

ಇನ್ನು ಇದ್ದ ಪ್ರಶ್ನೆ ಒಂದೇ-
ನೀವು ‘ಕನ್ವರ್ಟ್’ ಮಾಡುತ್ತೀರಿ.. ಅದಕ್ಕಾಗಿಯೇ ಈ ಸೇವೆಯ ಸೋಗು ಎನ್ನುತ್ತಾರೆ

ತೆರೇಸಾ ಥೇಟ್ ತಮ್ಮದೇ ಶೈಲಿಯಲ್ಲಿ ನಕ್ಕು ಹೇಳಿದರು-

‘ಹೌದು ನಾನು ಕನ್ವರ್ಟ್ ಮಾಡುತ್ತೇನೆ
ಒಬ್ಬ ಮನುಷ್ಯನನ್ನು ಇನ್ನೂ ಉತ್ತಮ ಮನುಷ್ಯನನ್ನಾಗಿ
ಒಬ್ಬ ಹಿಂದೂವನ್ನು ಇನ್ನೂ ಉತ್ತಮ ಹಿಂದೂ ಆಗಿ
ಒಬ್ಬ ಮುಸ್ಲಿಂ ನನ್ನ ಇನ್ನೂ ಉತ್ತಮ ಮುಸ್ಲಿಂನನ್ನಾಗಿ
ಒಬ್ಬ ಕ್ರಿಶ್ಚಿಯನ್ ನನ್ನ ಇನ್ನೂ ಉತ್ತಮ ಕ್ರಿಶ್ಚಿಯನ್ ಆಗಿ’ ಎಂದರು

ನನ್ನ ಬಳಿ ಮಾತಿರಲಿಲ್ಲ

ಈಗ ಅದೇ ತೆರೇಸಾ ನನ್ನ ಮಗುವನ್ನು ಎತ್ತಿ ಮಾತನಾಡಿಸುತ್ತಿದ್ದರು
ಹೆಸರು ಕೇಳಿದರು ‘ಕಿನ್ನರಿ’ ಎಂದೆ.
ಅರ್ಥ ಕೇಳಿದರು fairy ಎಂದೆ

ಒಂದು ಕ್ಷಣ ನಿಜಕ್ಕೂ ದೇವಲೋಕದ ಕಿನ್ನರಿಯನ್ನು ಕೈನಲ್ಲಿ ಹಿಡಿದಿದ್ದೇನೋ ಎನ್ನುವಂತೆ ನೋಡಿದರು

ನಂತರ ನನಗೊಂದು ಕಾಣಿಕೆ ಕೊಟ್ಟರು
ಒಂದು ಪೆನ್, ಒಂದು ಪೆನ್ ಸ್ಟಾಂಡ್
ಅದೊಂದು ಬರೆಯುವ ಅಕ್ಷಯ ಪಾತ್ರೆ

ಮದರ್ ತೆರೇಸಾ ಗೆ ‘ಸಂತ’ ಪದವಿ ನೀಡುವುದಕ್ಕೆ ಚರ್ಚೆ ಆರಂಭವಾದಾಗ
ಇಂತಿಷ್ಟು ಪವಾಡಗಳು ಮಾಡಿದ್ದರೆ ಮಾತ್ರ ಸಂತ ಪದವಿ ಎನ್ನುವ ನಿಯಮವಿದೆ

ಅವರಿಗೆ ಸಂತ ಪದವಿ ದಯಪಾಲಿಸಲು ಒಂದು ಪವಾಡದ ಕೊರತೆಯಿದೆ ಎಂದು
ವ್ಯಾಟಿಕನ್ ಮಂಡಳಿ ತೀರ್ಮಾನಿಸಿತ್ತು

ತಕ್ಷಣ ನಾನು ಅದೇ ಪೆನ್ ಎತ್ತಿಕೊಂಡೆ

ವ್ಯಾಟಿಕನ್ ಗೆ ಕಿನ್ನರಿಯ ಕಥೆ ಹೇಳಿದೆ
‘ಈ ಪವಾಡವನ್ನೂ ಸೇರಿಸಿಕೊಳ್ಳಿ
ಒಬ್ಬ ಮನುಷ್ಯನನ್ನು ಒಬ್ಬ ಮನುಷ್ಯನಂತೆ ನೋಡಿದ ಪವಾಡ
ಆಗ ಲೆಕ್ಕ ಸರಿಯಾಗುತ್ತದೆ
ಇನ್ನು ಮದರ್ ಗೆ ಸಂತ ಪದವಿ ನೀಡಬಹುದಲ್ಲಾ’ ಎಂದು

ಹಾಗೆ ಮನುಷ್ಯತ್ವದ ಪವಾಡ ಕಂಡವರ
ಅದೆಷ್ಟು ಪತ್ರಗಳು ಅವರನ್ನು ಮುಟ್ಟಿದ್ದವೋ ಮದರ್ ‘ಸಂತ’ರಾದರು

‘ನದಿಯಲ್ಲಿರುವ ಮೀನುಗಳನ್ನು,
ಹಸಿದವರ ತಟ್ಟೆಯಲ್ಲಿರುವ ಬ್ರೆಡ್ ಚೂರುಗಳನ್ನು
ಕ್ರಿಸ್ತ ದ್ವಿಗುಣಗೊಳಿಸಿದ’ ಎನ್ನುತ್ತದೆ ಬೈಬಲ್

ಮದರ್ ತೆರೇಸಾರಂತಹವರ ಸಂಖ್ಯೆಯನ್ನೂ ಬರೀ ದ್ವಿಗುಣವಲ್ಲ,
ನೂರು ಪಟ್ಟಾಗಿಸಲಿ

ಕೊರೊನಾ ಸೋಂಕಿತ ವ್ಯಕ್ತಿ ಶವ ಹಸ್ತಾಂತರಕ್ಕೆ ಒತ್ತಡ ಬಹಿರಂಗಕ್ಕೆ ಸುರೇಶಗೌಡ ಆಗ್ರಹ

ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ರಕ್ತ, ಗಂಟಲು ಮಾದರಿ ಪರೀಕ್ಷಾ ವರದಿ ಬರುವ ಮೊದಲೇ ಶವ‌ವನ್ನು ಕುಟುಂಬಕ್ಕೆ ತರಾತುರಿಯಲ್ಲಿ ಹಸ್ತಾಂತರಿಸಿದ ಹಿಂದೆ ಪ್ರಬಲ ಒತ್ತಡ ಇರಬೇಕು. ಹಾಗೆ ಒತ್ತಡ ಹಾಕಿದವರ ಹೆಸರನ್ನು ಜಿಲ್ಲಾಡಳಿತ, ಜಿಲ್ಲಾ ವೈದ್ಯರು ಹೇಳಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದರು.

https://youtu.be/m49uA9FMu68

ಸೋಂಕಿತರು ಅಥವಾ ಅನುಮಾನ ಬಂದ ಸಂದರ್ಭಗಳಲ್ಲಿ ವರದಿ ಬರುವ ಮೊದಲು ಶವ ಕೊಡಬಾರದು. ಶವವನ್ನು ಜನರಿಗೆ ಅಂತ್ಯ ಸಂಸ್ಕಾರಕ್ಕೆ ಕೊಡುವಂತಿಲ್ಲ. ಆದರೆ, ತರಾತುರಿಯಲ್ಲಿ ಶವ ನೀಡಿರುವ ಹಿಂದೇ ಒತ್ತಡವೇ ಕಾರಣ ಇರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತೇನೆ. ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಹಿರೇಹಳ್ಳಿಯಲ್ಲಿ ಆಹಾರದ ಕಿಟ್, ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಈ ಘಟನೆಯಿಂದಾಗಿ ನಾಗವಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಭಯಗೊಂಡಿದ್ದಾರೆ. ಅಂತ್ಯಕ್ರಿಯೆ ನಡೆಸಿದ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ಡ್ ಡೌನ್ ಮಾಡಬೇಕು. ಸುತ್ತಮುತ್ತಲ ಗ್ರಾಮಗಳ ಜನರ ರಕ್ತ ಮಾದರಿಯನ್ನು ಪರೀಕ್ಷಿಸಬೇಕು ಎಂದು ಒತ್ತಾಯಿಸಿದರು.

ನನ್ನ ಮಗ ಸಹ ಹೊರದೇಶದಿಂದ ಬಂದಿದ್ದಾನೆ. ನಾನು, ನನ್ನ ಕುಟುಂಬ 21 ದಿನ ಮನೆ ಬಿಟ್ಟು ಹೊರಬರಲಿಲ್ಲ. ನಂತರ ಪರೀಕ್ಷೆಯಲ್ಲಿ ನೆಗಟಿವ್ ಬಂದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟೆ ಎಂದರು.

ನೆಮ್ಮದಿಯಾಗಿದ್ದ ಗ್ರಾಮಾಂತರಲ್ಲಿ ಜಿಲ್ಲಾಡಳಿತದ ಕಾರಣದಿಂದಾಗಿ ಭಯ ಆವರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಊರ್ಡಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮ ಪಂಚಾಯ್ತಿಯ ನಂದಿಹಳ್ಳಿ, ಚಿಕ್ಕಹಳ್ಳಿ, ಕೋಳಿಹಳ್ಳಿ, ಹಾಗೂ ಸಂಗಾಪುರ ಗೊಲ್ಲರಹಟ್ಟಿ ಗ್ರಾಮಗಳ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್, ಅಕ್ಕಿ, ಬೇಳೆ, ಗೋದಿಹಿಟ್ಟು, ಉಪ್ಪು, ಅಡುಗೆ ಎಣ್ಣೆ ಹಾಗೂ ರವೆ ಮುಂತಾದ ಆಹಾರ ಪದಾರ್ಥಗಳನ್ನು ಹೊಂದಿರುವ ಕಿಟ್ ನ್ನು ಬಿ, ಸುರೇಶ್ ಗೌಡರವರು ವಿತರಣೆ ಮಾಡಿದರು.

ಜನಗಳಿಗೆ ಮಹಾಮಾರಿ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮೀಶ್, ಜಿಲ್ಲಾ ಪಂಚಾಯಯ್ತಿ ಸದಸ್ಯರು ಗಳಾದ ವೈ, ಎಚ್, ಹುಚ್ಚಯ್ಯ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಊರುಕೆರೆ ಜಿಲ್ಲಾ ಪಂಚಾಯತ್ ಸದಸ್ಯರ ಯಜಮಾನರಾದ ಡಾ, ನಾಗರಾಜ್, ಗ್ರಾಮಾಂತರ ಬಿಜಿಪಿ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದೇಗೌಡರು,ಮಾಜಿ ಎಪಿಎಂಸಿ ಅಧ್ಯಕ್ಷರಾದ ಓಂ ನಮೋ ನಾರಾಯಣ, ಸುಧೀರಣ್ಣ, ತಾ ಪಂ ಅಧ್ಯಕ್ಷರಾದ ಗಂಗಾಂಜಿನಪ್ಪ, ತಾ ಪಂ ಉಪಾಧ್ಯಕ್ಷರಾದ ಶಾಂತಕುಮಾರ್, ತಾ ಪಂ ಸದಸ್ಯರಾದ ರಮೇಶ್,ಊರ್ಡಿಗೆರೆ ತಾ ಪಂ ಸದಸ್ಯರಾದ ರವಿಯಣ್ಣ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ರಾಮಮೂರ್ತಿ, ಗ್ರಾಮ ಪಂ ಉಪಾಧ್ಯಕ್ಷರು, ಸದಸ್ಯರುಗಳಾದ ಕುಂಭಯ್ಯ, ವಿರುಪಣ್ಣ, ಸಣ್ಣಯ್ಯ,ಪೆಮ್ಮನಹಳ್ಳಿ ರಂಗಸ್ವಾಮಿ ಸಿದ್ದಮ್ಮ ಮುಖಂಡರಾದ ಚಂದ್ರಣ್ಣ, ಮಂಜುನಾಥ್, ರವಿಯಣ್ಣ, ಹೊನ್ನದಾಸೇಗೌಡರು,ಕೋಳಿ ಹಳ್ಳಿ ಅಂದಾನಪ್ಪ, ಮುಡಿಲಿಗಿರಿಯಪ್ಪ, ಪಾಪಯ್ಯ, ಶಿವಕುಮಾರ್, ಜಯಣ್ಣ, ಹನುಮಂತರಾಜು, ದಯಾನಂದ, ರಾಜೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಿರೀಶ್, ಸದಸ್ಯರಾದ ಮದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

FORBES ಬಿಲಿಯನೇರ್ ಪಟ್ಟಿಯಲ್ಲಿ ಕನ್ನಡಿಗರು

0

ಕರ್ನಾಟಕ ರಾಜ್ಯದ 4 ಮಂದಿ ಭಾರತದ ನೂರು ಮಂದಿ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2020 ನೇ ಸಾಲಿನ ಭಾರತದ 100 ಮ೦ದಿ ಬಿಲಿಯಾಧಿಪತಿ ಶ್ರೀಮಂತರ ಪಟ್ಟಿಯನ್ನು FORBES ಪ್ರಕಟಿಸಿದೆ.  ರಾಜ್ಯದ ನಾಲ್ವರು ಸ್ಥಾನ ಪಡೆದಿರುವುದು ನಾಡಿನ ಜನತೆಯ ಹೆಮ್ಮಯ ಸಂಗತಿ.

ನಾಲ್ವರೂ ಸಹ ಹುಟ್ಟಿನಿಂದ ಶ್ರೀಮಂತರಲ್ಲ. ಸಮಾಜದಲ್ಲಿ   ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶ್ರಮ, ಪ್ರತಿಭೆಯಿಂದ ಶ್ರೀಮಂತರಾದವರು.

 ಎನ್. ಆರ್. ನಾರಾಯಣಮೂರ್ತಿ:-  ಇವರು 2.47 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ದಿನಾಂಕ 20.8.1946 ರಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಇವರು ಜನಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎ೦ಜಿನಿಯರಿಂಗ್ ಪದವಿ ಪಡೆದು,  ಕಾನ್ಪುರದ ಐಐಟಿಯಲ್ಲಿ ಎ೦ಜಿನಿಯರಿ೦ಗ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.     ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕರು. ಇವರ ಪತ್ನಿ ಶ್ರೀಮತಿ ಸುಧಾ ಮೂರ್ತಿಯವರು ಸ್ಥಾಪಿಸಿರುವ ಇನ್ಫೋಸಿಸ್ ಫೌಂಡೇಶನ್ ಸಾಮಾಜಿಕ ಹಾಗೂ ದಾನಧರ್ಮ ಕಾರ್ಯಗಳಲ್ಲಿ   ತೊಡಗಿಸಿಕೊಂಡಿದೆ.

ಸೇನಾಪತಿ ಗೋಪಾಲಕೃಷ್ಣ  (ಕ್ರಿಸ್ ಗೋಪಾಲಕೃಷ್ಣ):- ಇವರು 2.36 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ದಿನಾಂಕ 5.4.1955 ರಂದು ಕೇರಳ ರಾಜ್ಯದ ತಿರುವನಂತಪುರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕರು. ಆ್ಯಕ್ಸಿಲರ್  ವೆಂಚರ್ಸ್ ಎಂಬ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

ನಂದನ್ ನಿಲೇಕಣಿ :-  1.81 ಬಿಲಿಯನ್ ಸ೦ಪತ್ತು ಹೊಂದಿದ್ದಾರೆ.  ದಿನಾಂಕ 2.6.1955 ರಂದು ಬೆಂಗಳೂರಿನಲ್ಲಿ ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕರು. ಪ್ರಸ್ತುತ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಭಾರತ ಸರಕಾರದ ತಂತ್ರಜ್ಞಾನ ಸಮಿತಿಯ (TAGUP) ಅಧ್ಯಕ್ಷರಾಗಿ ಆಧಾರ್ ಕಾರ್ಡ್ ಗುರುತು ಚೀಟಿಯನ್ನು ಭಾರತೀಯ ಪ್ರಜೆಗಳಿಗೆ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಡಾ. ರಂಜನ್ ಪೈ : 1.58 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ಮಣಿಪಾಲದ ಡಾ. ರಾಮದಾಸ್ ಪೈ ಮತ್ತು ಸುಧಾ ದಂಪತಿಗಳ ಪುತ್ರನಾಗಿ ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಾರೆ. ವೈದ್ಯಕೀಯ ಪದವಿ ಪಡೆದಿರುವ ಇವರು ದೇಶ ವಿದೇಶಗಳಲ್ಲಿ ಆರು ಮೆಡಿಕಲ್ ಕಾಲೇಜು ಮತ್ತು ಹದಿನಾರು ಆಸ್ಪತ್ರೆಗಳನ್ನು ಹೊಂದಿರುವ ಮಣಿಪಾಲ್ ಎಜುಕೇಷನ್ ಅಂಡ್ ಮೆಡಿಕಲ್ ಗ್ರೂಪ್ (MEMG) ನ CEO & MD  ಆಗಿದ್ದಾರೆ.

ವಿದೇಶಗಳಾದ ಮಲೇಷ್ಯಾ; ಆಂಟಿಗುವಾ; ದುಬೈ; ನೇಪಾಳ ದೇಶಗಳಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸು ಗಳಿವೆ.  ತಮ್ಮ ಮಾಲಕತ್ವದ ಉಡುಪಿಯ ಟಿಎಂಎ ಪೈ ಆಸ್ಪತ್ರೆಯನ್ನು ಸರಕಾರದ ಕೋರಿಕೆಯ ಮೇರೆಗೆ ಕೋವಿಡ್‌ – 19  ನಿಯಂತ್ರಣಕ್ಕಾಗಿ   ನೀಡಿರುತ್ತಾರೆ.

ಫೋರ್ಬ್ಸ್ ತನ್ನ ಯಾದಿಯಿಂದ ಕೈಬಿಟ್ಟ ಬಿಲಿಯಾಧಿಪತಿಗಳಾಗಿದ್ದ ಕನ್ನಡಿಗರು

ಡಾ.ವಿಜಯ್ ಮಲ್ಯಾ   18.12.1955 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ  ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತ೦ದೆ ದಿ.ವಿಠ್ಠಲ್ ಮಲ್ಯಾರವರು ಖ್ಯಾತ ಉದ್ಯಮಿ ಗಳಾಗಿದ್ದು ಯುನೈಟೆಡ್ ಬ್ರೂವರೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಿಜಯ್ ಮಲ್ಯಾ  RCB ಕ್ರಿಕೆಟ್ ತಂಡದ ಮಾಲಕರಾಗಿದ್ದರು. ಕಿಂಗ್ ಫಿಷರ್ ಏರ್ಲೈನ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ತಮ್ಮ ವೈಭೋಗದ ಜೀವನಶೈಲಿ ಯಿಂದಾಗಿ  ಕುಖ್ಯಾತಿ ಪಡೆದಿರುತ್ತಾರೆ. ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದು ಭಾರತ ದೇಶದ ಬ್ಯಾಂಕುಗಳಿ೦ದ ಪಡೆದ ಸಾಲದ ಅಸಲು ಹಣವನ್ನು ಮರುಪಾವತಿ ಮಾಡುತ್ತೇನೆಂದು ಭಾರತದ ಸುಪ್ರೀಂ ಕೋರ್ಟ್ ಎದುರು ಒಪ್ಪಿಕೊಂಡಿದ್ದರೂ ಭಾರತೀಯ ಬ್ಯಾಂಕುಗಳು  ಅಸಲು ಹಾಗೂ ಬಡ್ಡಿ  ಸಂಪೂರ್ಣ ಪಾವತಿ ಮಾಡಬೇಕೆಂಬ  ಶತ೯ದೊ೦ದಿಗೆ ಇವರನ್ನು ಉದ್ದೇಶಪೂರ್ವಕ ಸುಸ್ತಿದಾರರೆಂದು ಘೋಷಿಸಿದ್ದಾರೆ.

ಡಾ.ಬಾವಗುತ್ತು ರಘುರಾಮ್ ಶೆಟ್ಟಿ (Dr. B.R.SHETY) :- ದಿನಾಂಕ 1.8.1942 ರ೦ದು ಉಡುಪಿ ಜಿಲ್ಲೆಯ ಕಾಪು ಎಂಬ ಉಾರಿನಲ್ಲಿ  ಬಂಟ ಸಮುದಾಯದಲ್ಲಿ ಎನಿಸಿದರು. ಮಾತೃ ಭಾಷೆ ತುಳು. ಉಡುಪಿ ನಗರಸಭಾ ಸದಸ್ಯರಾಗಿದ್ದ ಇವರು   1975 ರಲ್ಲಿ ಅಬುದಾಬಿಯಲ್ಲಿ  NMC ಎಂಬ ಆಸ್ಪತ್ರೆಯನ್ನು ಸ್ಥಾಪಿಸಿದರು. 2015 ರಲ್ಲಿ ನಿಯೋಫಾರ್ಮಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 2017 ರ ಬಳಿಕ ಇವರ ಒಡೆತನದ ವಿವಿಧ ಸಂಸ್ಥೆಗಳಲ್ಲಿ ಆರ್ಥಿಕ  ಅವ್ಯವಹಾರಗಳು ನಡೆದಿದ್ದು ಇವರು ಪ್ರಸ್ತುತ  ಎನ್ಎಂಸಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತಾರೆ.

ಸೂರ್ಯನೇ ದೇವರಾದಾಗ

2

ಶಂಕರ್ ಬರಕನಹಾಲ್


ನೀ ಎದ್ದು
ಸೂರ್ಯನಿಗೆ ಎಚ್ಚರಿಸು..!!

ನೀ ಉರಿ ಬಿಸಿಲಿಗೆದ್ದು
ನಿನ್ನ ತಾಳ್ಮೆಯ ಸ್ಥಿತಿ ಏನು..!!

ಮಣ್ಣಲ್ಲಿ ಅಸ್ಥಿರವಾಗುವ ನಿನಗೆ
ಬೇಕಿರುವುದು ಭೂ-ವಿಜ್ಞಾನ ಸಾರುವ ಜೀವಕೋಶಗಳಿಗೆ ಸತ್ವ ಇರುವ ಮಿನರಲ್, ವಿಟಮಿನ್,ಕ್ಯಾಲೋರಿ ಫುಡ್ ಗಳು…!!

ವ್ಯಾಪಾರಕ್ಕೆ ಬೆಳೆದ
ರಾಸಾಯನಿಕ ಗೊಬ್ಬರದ
ದವಸ ಧಾನ್ಯಗಳ ಮುಖ್ಯ ಅತಿಥಿಗಳೇ
ಬಿಪಿ ಶೂಗರ್ ಗಳು…!!

ನಿನ್ನ ಆರೋಗ್ಯ
ನಿನ್ನ ಕೈಯಲ್ಲಿ ಇರುವಾಗ
ಪರಿವೇ ಇಲ್ಲದೇ ಆಸ್ಪತ್ರೆಯ
ಆದಾಯ ನಿನಾದೇ..!!

ನಾವು ನಂಬಿದ ವೈದ್ಯರು ಕಾಪಾಡುವ ಕೈಗಳಾಗಬೇಕು ವಿನಃ
ಕಿತ್ತು ತಿನ್ನುವಂತ ರಾಕ್ಷಸರಾಗಬಾರದು..!!

ರೋಗಿಗಳ ಮನಸ್ಸಿಗೆ
ಧೈರ್ಯವೇ ಚಿಕಿತ್ಸೆಯಾಗಲಿ.

ತುಮಕೂರಿನಲ್ಲಿ ಮಹಿಳೆಗೆ ಕೊರೊನಾ ಸೋಂಕು

Publicstory.in


ತುಮಕೂರು: ತುಮಕೂರಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ತುಮಕೂರು ಕರೋನಾ ಭಯಭೀತಿಯ ಕೇಂದ್ರವಾಗಿ ನಿರ್ಮಾಣವಾಗುತ್ತಿದೆ.

ಈಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟಿದ ವ್ಯಕ್ತಿಯ ಮನೆಯ ಮಹಿಳೆ. ಈಕೆಗೆ 54 ,ವರ್ಷ ಎಂದು ಹೇಳಲಾಗಿದೆ.

ವರದಿ ಬರುವ ಮೊದಲೇ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕೆ ಕೊಡಲಾಗಿತ್ತು. ಈ ಬಗ್ಗೆ ವಾದ ವಿವಾದಗಳು ಚರ್ಚೆ ಯಲ್ಲಿರುವಾಗಲೇ ಈತನ ಸಂಪರ್ಕಕ್ಕೆ ಬಂದಿದ್ದ ಮಹಿಳೆಗೆ ಸೋಂಕು ದೃಢವಾಗಿರುವುದು ಶವ ಸಂಸ್ಕಾರಕ್ಕೆ ಹೋಗಿದ್ದವರಲ್ಲಿ ಆತಂಕ ಹೆಚ್ಚಿಸಿದೆ.

ವರದಿ ಬರುವ ಮುನ್ನವೇ ವ್ಯಕ್ತಿ ಶವವನ್ನು ಅಂತಿಮ ಸಂಸ್ಕಾರಕ್ಕೆ ಕೊಡಲಾಗಿತ್ತು. ಶವವನ್ನು ನಾಗವಲ್ಲಿ ಸಮೀಪದ ಕುಂಬಿ ರಾಯನ ಪಾಳ್ಯದಲ್ಲಿ ಅಂತಿಮ ಅಂತ್ಯಕ್ರಿಯೆ ನಡೆಸಲಾಗಿತ್ತು

ಮೃತನ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ಜನರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ವರದಿ ಬರುವ ಮೊದಲೇ ಶವವನ್ನು ಅಂತಿಮ ಸಂಸ್ಕಾರಕ್ಕೆ ಕೊಟ್ಟ ಜಿಲ್ಲಾಡಳಿತ ಕ್ರಮದ ವಿರುದ್ಧ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವ್ಯಕ್ತಿಯ ಶವ ಸಂಸ್ಕಾರಕ್ಕೆ ಹೋಗಿದ್ದವರ
ಎಲ್ಲರ ಪರೀಕ್ಷೆಯನ್ನು ಕೂಡಲೇ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಕೊರೊನಾ ಸುದ್ದಿ: ಜಿಲ್ಲಾಧಿಕಾರಿ ಕ್ವಾರಂಟೈನ್ ಗೆ

Publicstory. in


Mangalore: ಕಾಸರಗೋಡಿನ ಪತ್ರಕರ್ತನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ
ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ನಿಗಾ ಅವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ.
ಎ.19ರಂದು ವಾಹಿನಿ ಪತ್ರಕರ್ತ ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು.
ಜಿಲ್ಲಾಧಿಕಾರಿ ಅವರ ಗನ್‍ಮ್ಯಾನ್ ಸಹ ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.
ಇವರ ಗಂಟಲ ದ್ರವ ತಪಾಸಣೆಗೆ ರವಾನೆ
ವರದಿಗಾಗಿ ಕಾಯುತ್ತಿರುವ ಕಾಸರಗೋಡು ಜಿಲ್ಲಾಡಳಿತ.


ಖಾಸಗಿ ಶಾಲೆ ಶುಲ್ಕ ಹೆಚ್ಚಳಕ್ಕೆ ಬ್ರೇಕ್

ತುಮಕೂರು: ಖಾಸಗಿ ಶಾಲೆಗಳಿಗೆ ಸರ್ಕಾರ ಎಚ್ಚರಿಕೆ.
ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸುವಂತಿಲ್ಲ
ಸಾರ್ವಜನಿಕ ಶಿಕ್ಷಣ ಇಲಾಖೆ ಖಡಕ್ ಸೂಚನೆ ನೀಡಿದೆ.
ಶುಲ್ಕ ಹೆಚ್ಚಳ ಮಾಡದಂತೆ ಸುತ್ತೋಲೆ ಹೊರಡಿಸಿ
ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ


ಮೇ 4ರ ಬಳಿಕ ಮತ್ತಷ್ಟು ಅನ್‍ಲಾಕ್

ತುಮಕೂರು: ಸೋಮವಾರ ಬಳಿಕ ಮತ್ತಷ್ಟು ರಿಲೀಫ್ ಸಿಗಲಿದೆ.
ಕೇಂದ್ರ ಗೃಹ ಸಚಿವಾಲಯ ಟ್ವೀಟ್ ಮಾಡಿದೆ.
ಮೇ 3ರಕ್ಕೆ 2ನೇ ಹಂತ ಲಾಕ್ ಡೌನ್ ಅಂತ್ಯವಾಗಲಿದೆ.
ಮೇ 4ರಿಂದ ಹಲವು ವಲಯಗಳಿಗೆ ರಿಲೀಫ್ ನೀಡಲಾಗುವುದು.
ಸೋಂಕಿಲ್ಲದ ಜಿಲ್ಲೆಗಳಲ್ಲಿ ಮತ್ತಷ್ಟು ವಿನಾಯಿತಿ ನೀಡಲಾಗುವುದು.
ಮೇ 3ರ ಬಳಿಕ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗುವುದು ಎಂದು
ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.


ಒಂದೇ ದಿನ 390 ಮಂದಿಯಲ್ಲಿ ಕೊರೊನಾ ಗೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರವೂ ನಿಟ್ಟುಸಿರು ಬಿಟ್ಟ ಜನತೆ.
248 ಮಂದಿಯ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
12 ಮಂದಿಯ ಮೇಲೆ ನಿಗಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು.
1859 ಮಂದಿ ಫೀವರ್ ಕ್ಲೀನಿಕ್‍ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.


ದೇಶದಲ್ಲಿ ಸೋಂಕಿತರ ಸಂಖ್ಯೆ 33,062ಕ್ಕೇರಿಕೆ

ತುಮಕೂರು: ಕಳೆದ 24 ಗಂಟೆಯಲ್ಲಿ 1,702 ಜನರಿಗೆ ಸೋಂಕು.
ಈವರೆಗೂ ಕೊರೊನಾಗೆ 1,079 ಮಂದಿ ಬಲಿ.
24 ಗಂಟೆಯಲ್ಲಿ ಕೊರೊನಾಗೆ 71 ಮಂದಿ ಬಲಿ
ದೇಶದಲ್ಲಿ ಈವರೆಗೂ 8,437 ಮಂದಿ ಗುಣಮುಖ.
ನಿನ್ನೆ ಒಂದೇ ದಿನ 637 ಜನ ಗುಣಮುಖ ರಾಗಿದ್ದಾರೆ.