Friday, September 13, 2024
Google search engine
HomeಜನಮನFORBES ಬಿಲಿಯನೇರ್ ಪಟ್ಟಿಯಲ್ಲಿ ಕನ್ನಡಿಗರು

FORBES ಬಿಲಿಯನೇರ್ ಪಟ್ಟಿಯಲ್ಲಿ ಕನ್ನಡಿಗರು

ಕರ್ನಾಟಕ ರಾಜ್ಯದ 4 ಮಂದಿ ಭಾರತದ ನೂರು ಮಂದಿ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2020 ನೇ ಸಾಲಿನ ಭಾರತದ 100 ಮ೦ದಿ ಬಿಲಿಯಾಧಿಪತಿ ಶ್ರೀಮಂತರ ಪಟ್ಟಿಯನ್ನು FORBES ಪ್ರಕಟಿಸಿದೆ.  ರಾಜ್ಯದ ನಾಲ್ವರು ಸ್ಥಾನ ಪಡೆದಿರುವುದು ನಾಡಿನ ಜನತೆಯ ಹೆಮ್ಮಯ ಸಂಗತಿ.

ನಾಲ್ವರೂ ಸಹ ಹುಟ್ಟಿನಿಂದ ಶ್ರೀಮಂತರಲ್ಲ. ಸಮಾಜದಲ್ಲಿ   ಸಾಮಾನ್ಯ ಕುಟುಂಬದಲ್ಲಿ ಜನಿಸಿ ಶ್ರಮ, ಪ್ರತಿಭೆಯಿಂದ ಶ್ರೀಮಂತರಾದವರು.

 ಎನ್. ಆರ್. ನಾರಾಯಣಮೂರ್ತಿ:-  ಇವರು 2.47 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ದಿನಾಂಕ 20.8.1946 ರಲ್ಲಿ  ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಇವರು ಜನಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎ೦ಜಿನಿಯರಿಂಗ್ ಪದವಿ ಪಡೆದು,  ಕಾನ್ಪುರದ ಐಐಟಿಯಲ್ಲಿ ಎ೦ಜಿನಿಯರಿ೦ಗ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.     ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕರು. ಇವರ ಪತ್ನಿ ಶ್ರೀಮತಿ ಸುಧಾ ಮೂರ್ತಿಯವರು ಸ್ಥಾಪಿಸಿರುವ ಇನ್ಫೋಸಿಸ್ ಫೌಂಡೇಶನ್ ಸಾಮಾಜಿಕ ಹಾಗೂ ದಾನಧರ್ಮ ಕಾರ್ಯಗಳಲ್ಲಿ   ತೊಡಗಿಸಿಕೊಂಡಿದೆ.

ಸೇನಾಪತಿ ಗೋಪಾಲಕೃಷ್ಣ  (ಕ್ರಿಸ್ ಗೋಪಾಲಕೃಷ್ಣ):- ಇವರು 2.36 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ದಿನಾಂಕ 5.4.1955 ರಂದು ಕೇರಳ ರಾಜ್ಯದ ತಿರುವನಂತಪುರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪ್ರಸ್ತುತ ಬೆಂಗಳೂರಿನ ನಿವಾಸಿಯಾಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಸಹಸ್ಥಾಪಕರು. ಆ್ಯಕ್ಸಿಲರ್  ವೆಂಚರ್ಸ್ ಎಂಬ ಸಂಸ್ಥೆಯ ಸ್ಥಾಪಕರಾಗಿದ್ದಾರೆ.

ನಂದನ್ ನಿಲೇಕಣಿ :-  1.81 ಬಿಲಿಯನ್ ಸ೦ಪತ್ತು ಹೊಂದಿದ್ದಾರೆ.  ದಿನಾಂಕ 2.6.1955 ರಂದು ಬೆಂಗಳೂರಿನಲ್ಲಿ ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಐಐಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಇನ್ಫೋಸಿಸ್ ಸಂಸ್ಥೆಯ ಸಹ ಸ್ಥಾಪಕರು. ಪ್ರಸ್ತುತ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಭಾರತ ಸರಕಾರದ ತಂತ್ರಜ್ಞಾನ ಸಮಿತಿಯ (TAGUP) ಅಧ್ಯಕ್ಷರಾಗಿ ಆಧಾರ್ ಕಾರ್ಡ್ ಗುರುತು ಚೀಟಿಯನ್ನು ಭಾರತೀಯ ಪ್ರಜೆಗಳಿಗೆ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಡಾ. ರಂಜನ್ ಪೈ : 1.58 ಬಿಲಿಯನ್ ಸಂಪತ್ತು ಹೊಂದಿದ್ದಾರೆ. ಮಣಿಪಾಲದ ಡಾ. ರಾಮದಾಸ್ ಪೈ ಮತ್ತು ಸುಧಾ ದಂಪತಿಗಳ ಪುತ್ರನಾಗಿ ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದಾರೆ. ವೈದ್ಯಕೀಯ ಪದವಿ ಪಡೆದಿರುವ ಇವರು ದೇಶ ವಿದೇಶಗಳಲ್ಲಿ ಆರು ಮೆಡಿಕಲ್ ಕಾಲೇಜು ಮತ್ತು ಹದಿನಾರು ಆಸ್ಪತ್ರೆಗಳನ್ನು ಹೊಂದಿರುವ ಮಣಿಪಾಲ್ ಎಜುಕೇಷನ್ ಅಂಡ್ ಮೆಡಿಕಲ್ ಗ್ರೂಪ್ (MEMG) ನ CEO & MD  ಆಗಿದ್ದಾರೆ.

ವಿದೇಶಗಳಾದ ಮಲೇಷ್ಯಾ; ಆಂಟಿಗುವಾ; ದುಬೈ; ನೇಪಾಳ ದೇಶಗಳಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸು ಗಳಿವೆ.  ತಮ್ಮ ಮಾಲಕತ್ವದ ಉಡುಪಿಯ ಟಿಎಂಎ ಪೈ ಆಸ್ಪತ್ರೆಯನ್ನು ಸರಕಾರದ ಕೋರಿಕೆಯ ಮೇರೆಗೆ ಕೋವಿಡ್‌ – 19  ನಿಯಂತ್ರಣಕ್ಕಾಗಿ   ನೀಡಿರುತ್ತಾರೆ.

ಫೋರ್ಬ್ಸ್ ತನ್ನ ಯಾದಿಯಿಂದ ಕೈಬಿಟ್ಟ ಬಿಲಿಯಾಧಿಪತಿಗಳಾಗಿದ್ದ ಕನ್ನಡಿಗರು

ಡಾ.ವಿಜಯ್ ಮಲ್ಯಾ   18.12.1955 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ  ಕೊ೦ಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತ೦ದೆ ದಿ.ವಿಠ್ಠಲ್ ಮಲ್ಯಾರವರು ಖ್ಯಾತ ಉದ್ಯಮಿ ಗಳಾಗಿದ್ದು ಯುನೈಟೆಡ್ ಬ್ರೂವರೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಿಜಯ್ ಮಲ್ಯಾ  RCB ಕ್ರಿಕೆಟ್ ತಂಡದ ಮಾಲಕರಾಗಿದ್ದರು. ಕಿಂಗ್ ಫಿಷರ್ ಏರ್ಲೈನ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ತಮ್ಮ ವೈಭೋಗದ ಜೀವನಶೈಲಿ ಯಿಂದಾಗಿ  ಕುಖ್ಯಾತಿ ಪಡೆದಿರುತ್ತಾರೆ. ಪ್ರಸ್ತುತ ವಿದೇಶದಲ್ಲಿ ನೆಲೆಸಿದ್ದು ಭಾರತ ದೇಶದ ಬ್ಯಾಂಕುಗಳಿ೦ದ ಪಡೆದ ಸಾಲದ ಅಸಲು ಹಣವನ್ನು ಮರುಪಾವತಿ ಮಾಡುತ್ತೇನೆಂದು ಭಾರತದ ಸುಪ್ರೀಂ ಕೋರ್ಟ್ ಎದುರು ಒಪ್ಪಿಕೊಂಡಿದ್ದರೂ ಭಾರತೀಯ ಬ್ಯಾಂಕುಗಳು  ಅಸಲು ಹಾಗೂ ಬಡ್ಡಿ  ಸಂಪೂರ್ಣ ಪಾವತಿ ಮಾಡಬೇಕೆಂಬ  ಶತ೯ದೊ೦ದಿಗೆ ಇವರನ್ನು ಉದ್ದೇಶಪೂರ್ವಕ ಸುಸ್ತಿದಾರರೆಂದು ಘೋಷಿಸಿದ್ದಾರೆ.

ಡಾ.ಬಾವಗುತ್ತು ರಘುರಾಮ್ ಶೆಟ್ಟಿ (Dr. B.R.SHETY) :- ದಿನಾಂಕ 1.8.1942 ರ೦ದು ಉಡುಪಿ ಜಿಲ್ಲೆಯ ಕಾಪು ಎಂಬ ಉಾರಿನಲ್ಲಿ  ಬಂಟ ಸಮುದಾಯದಲ್ಲಿ ಎನಿಸಿದರು. ಮಾತೃ ಭಾಷೆ ತುಳು. ಉಡುಪಿ ನಗರಸಭಾ ಸದಸ್ಯರಾಗಿದ್ದ ಇವರು   1975 ರಲ್ಲಿ ಅಬುದಾಬಿಯಲ್ಲಿ  NMC ಎಂಬ ಆಸ್ಪತ್ರೆಯನ್ನು ಸ್ಥಾಪಿಸಿದರು. 2015 ರಲ್ಲಿ ನಿಯೋಫಾರ್ಮಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. 2017 ರ ಬಳಿಕ ಇವರ ಒಡೆತನದ ವಿವಿಧ ಸಂಸ್ಥೆಗಳಲ್ಲಿ ಆರ್ಥಿಕ  ಅವ್ಯವಹಾರಗಳು ನಡೆದಿದ್ದು ಇವರು ಪ್ರಸ್ತುತ  ಎನ್ಎಂಸಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?