Thursday, February 26, 2026
Google search engine
Home Blog Page 258

ತತ್ವಜ್ಞಾನ ಪ್ರದಾಯ

ದೇವರಹಳ್ಳಿ ಧನಂಜಯ


ನಾನು ಚಂದ ಸ್ವಚ್ಛಂದ.
ಸವಾಲುಗಳೆಂದರೆ ಆನಂದ.
ಕುತೂಹಲಕ್ಕೆ ಕಂದ.
ನಂಬಿದವರಿಗಾಗಿ ಪ್ರಾಣ;
ಪಣಕ್ಕೆ ಇಡಲು ಸದಾ ಸಿದ್ಧ.
ಅಘಾದ ಶಕ್ತಿಯನು ಕೆಡುಕಿಗೆ ಬಳಸದ;
ಛಾಯಾದೇವಿಯ ಕಂದ

ನನ್ನ ರಾಮ ಆರಾಮ
ಧರ್ಮದ ಹತ್ಯಾರು
ಝಳಪಿಸುವುದಿಲ್ಲ
ಉದ್ದುದ್ದ ನಾಮ ಹಾಕುವುದಿಲ್ಲ
ಒಳ್ಳೆಯದು ಮಾಡಹೋದಾಗ
ಕೈ ಮೀರಿದ ಕೆಡುಕಿಗೆ
ತಲೆ ಕೆಡಿಸಕೊಳ್ಳುವುದಿಲ್ಲ.


ಇಲ್ಲಿಗೆ ನಿಮ್ಮ ಬರಹ, ಸುದ್ದಿ ವಾಟ್ಸಾಪ್ ಮಾಡಿ; 9844817737


ಒಳಿತ ಒಕ್ಕುಳ ಬಳ್ಳಿ,
ಮರ ಮರವ ತಬ್ಬಿ;
ನೂರೆಂಟು ಕುಲ ಚರಿತೆಯಲ್ಲಿ,
ಕಾಡು ನಾಡೆಲ್ಲಾ ಹಬ್ಬಿ,
ರಾಮ ದಂಡಕಾರಣ್ಯ ಚರಿತ.
ಮುಗಿಲಗಲ ಬೆಳೆದಾಗಲೂ,
ನೆಲ ನೇಗಿಲಿಗೆ ಒಲಿದ ದಶರಥ ಸುತ.

ರಾಮ ಅಂತಃ ಶಕ್ತಿಗೆ ಹಿಡಿದ ಕನ್ನಡಿ.
ಒಳಿತಿನ ಎಚ್ಚರದ ಮುನ್ನುಡಿ.
ಸಮ ಚಿತ್ತದ ಚಿತ್ರಕೂಟ ಸಮಾಶ್ರಯ.
ನಾನಂತೂ ವಾನರ.
ವನಕೆ ವಾರಸುದಾರ.
ಇಬ್ಬರಿಗೂ ಹಸಿರೇ ಉಸಿರು
ಮೆತ್ತಬೇಡಿ ನಮಗೆ, ದ್ವೇಷ ಕಲಹದ ಕೇಸರಿ ಕೆಸರು.

ನಿಮ್ಮ ಭಗವದ್ ಉದ್ಘೋಷ,
ಮಂತ್ರ ತಂತ್ರ ಗುಡಿಗೋಪೂರ ಬೇಕಿಲ್ಲ.
ಹನುಮ ಊರ ಹೊರಗೆ, ರಾಮ ಹನುಮನ ಜತೆಗೆ.
ಬಿಟ್ಟುಬಿಡಿ ನಮ್ಮನ್ನು ನಮ್ಮ ಪಾಡಿಗೆ,ಕಾಡಿಗೆ.
ನಗು ನಂಜಾಗದಿರಲಿ, ಭರವಸೆ ಹುಸಿಯಾಗದಿರಲಿ,
ಕಾಣಿರಿ ಪರ ಗೌರವದಿ ರಾಮನ.
ಸ್ವ ಶಕ್ತಿ,ಮುಗ್ಧ ನಂಬಿಕೆಯಲಿ ಹನುಮನ.


ಆಂಜನೇಯನಿಗೆ ಪುರಾಣದಲ್ಲಿ 108 ಹೆಸರುಗಳಿವೆ. ಮಹಾವೀರಾಯ, ಹನುಮತೇ, ಮಾರುತಾತ್ಮಜಾಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದರಲ್ಲಿ ನನ್ನನ್ನು ಬಹಳವಾಗಿ ಕಾಡಿದ್ದು ‘ತತ್ವಜ್ಞಾನ ಪ್ರದಾಯ’ ಎಂಬುವ ಹನುಮನ ಹೆಸರು. ಹಾಗೆ ನೋಡಿದರೆ ಆಂಜನೇಯನ ಬದುಕು ಮತ್ತು ರಾಮನ ಜೊತೆಗಿನ ಹನುಮನ ಬಂಧ ಬದುಕಿನ ಸಹಜ ತತ್ವಜ್ಞಾನವನ್ನು ಹೇಳುತ್ತದೆ. ಹನುಮ ಜಯಂತಿಯ ಹಿನ್ನೆಲೆಯಲ್ಲಿ ಹನುಮಾನ್ ಹಾಗೂ ರಾಮನ ನಡುವಿನ ನಿಜ ತತ್ವವನ್ನು ಹಿಡಿಯುವ ಪ್ರಯತ್ನವನ್ನು ಈ ಕವಿತೆಯಲ್ಲಿ ಮಾಡಲಾಗಿದೆ.

ಕನ್ನಡ ಪತ್ರಿಕೆಗಳು ಮುಂದೇನು?

1

Publicstory. in


ಕೊರೊನಾ ಸೋಂಕಿನ ಕಾರಣ ಪತ್ರಿಕೆಗಳ ಪ್ರಸರಣ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದೇ ಮೊದಲ ಸಲ ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಸಹ ಜಾಹೀರಾತು ಇಲ್ಲದೇ ಪತ್ರಿಕೆ ಹೊರತರುವಂತಾಗಿದೆ. ಕೊರೊನಾ ಸೋಂಕು ಹರಡುವ ಮೊದಲೇ ಪತ್ರಿಕೆಗಳು ಸಿಬ್ಬಂದಿ ಕಡಿತ ಆರಂಭಿಸಿದ್ದವು. ಲಾಕ್ ಡೌನ್ ಮುಗಿದ ಬಳಿಕ ಕೆಲಸ ಕಳೆದುಕೊಳ್ಳುವ ಪತ್ರಕರ್ತರ ಸಂಖ್ಯೆ ಹೆಚ್ವಬಹುದೆಂಬ ಆತಂಕ ಹೆಚ್ಚಿದೆ. ಈ ಬಗ್ಗೆ ಪ್ರಜಾವಾಣಿಯಲ್ಲಿ ಮುಖ್ಯ ಉಪ ಸಂಪಾದಕರಾಗಿದ್ದ ಸುರೇಶ್ ಬೆಳಗಜೆ ಬರೆದಿದ್ದಾರೆ.


ಸುರೇಶ್ ಬೆಳಗಜೆ


ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾಗಿ ಎರಡು ಶತಮಾನಗಳತ್ತ ನಾವೀಗ ನಡೆಯುತ್ತಿದ್ದೇವೆ. ಈ ನಡಿಗೆ ಇಲ್ಲಿಗೇ ನಿಂತೀತೇ ಎಂಬ ಪ್ರಶ್ನೆ ಈಗೀಗ ಪತ್ರಕರ್ತರನ್ನೂ ಕಾಡಲಾರಂಭಿಸಿದೆ. ಕಾರಣ ನ್ಯೂಸ್ ಪ್ರಿಂಟ್ ದರ ಏರಿಕೆ…ಕಚ್ಚಾವಸ್ತುಗಳ ದರ ಹೆಚ್ಚಳ. ಮಾನವ ಸಂಪನ್ಮೂಲಕ್ಕೆ ಆಗುವ ವೆಚ್ಚ ಸರಿದೂಗಿಸಲು ಕಷ್ಟ ಆಗುತ್ತಿರುವುದು ಎಂಬ ಸಬೂಬು ಮಾಲೀಕ ವರ್ಗದ್ದು.


ನಿಮ್ಮ ಸುದ್ದಿ, ಬರಹಗಳನ್ನು ಇಲ್ಲಿಗೆ ಕಳುಹಿಸಿ: ವಾಟ್ಸಾಪ್: _9844817737


ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಸಂಸ್ಥೆಯಿಂದ ಕನ್ನಡ ಪತ್ರಿಕೋದ್ಯಮದ ಪ್ರಾರಂಭವಾಯಿತು. ಮಂಗಳೂರು ಸಮಾಚಾರ ವಾರಪತ್ರಿಕೆಯು 1843ರ ಜುಲೈ 1ರಂದು ಮೊದಲಿಗೆ ಪ್ರಕಟಗೊಂಡದ್ದು‌ ಈಗ ಚರಿತ್ರೆಯ ಭಾಗವಾಗಿದೆ. ಇದರ ಸಂಪಾದಕ ಹರ್ಮನ್ ಮೋಗ್ಲಿಂಗ್. ಎರಡನೇ ಶತಮಾನದತ್ತ ಸಾಗುತ್ತಿರುವ ಕನ್ನಡ ಪತ್ರಿಕೋದ್ಯಮಕ್ಕೆ ಈಗ ಸಂಕಷ್ಟದ ಕಾಲಘಟ್ಟ.‌‌

ಕನ್ನಡದ ಪ್ರಮುಖ ಪತ್ರಿಕೆಗಳನ್ನೇ ಗಮನಿಸಿದರೆ ಅವುಗಳ ದರದಲ್ಲಿ‌ ಗಮನಾರ್ಹ ವ್ಯತ್ಯಾಸ ಕಾಣುತ್ತದೆ. ಒಂದೆರಡು ಪತ್ರಿಕೆಗಳಿಗೆ ₹ 6. ಇನ್ನೊಂದು ₹5 ಮತ್ತೊಂದು ₹ 4. ₹ 4 ದರ ವಿಧಿಸುವ ಪತ್ರಿಕೆ ನಷ್ಟ ಕಾಣುತ್ತಿದೆಯೇ? ₹6 ದರ ಇಟ್ಟಿರುವ ಪತ್ರಿಕೆಗಳು ಲಾಭ ಪಡೆಯುತ್ತಿವೆಯೇ ಎಂಬ ಪ್ರಶ್ನೆಗಳಿಗೆ ಮಾಲೀಕರ್ಯಾರೂ ಉತ್ತರ ಕೊಡುವುದಿಲ್ಲ. ಆದರೆ, ಉದ್ಯೋಗ ರಂಗದಲ್ಲಿ‌ ಕಡಿತ- ಉದ್ಯೋಗಕ್ಕೆ ವಿದಾಯ ಹೇಳದಿದ್ದರೆ ದೂರದ ಊರಿಗೆ ವರ್ಗಾವಣೆ ಮಾಡುವ ಅಸ್ತ್ರಗಳನ್ನು ಸಂಸ್ಥೆಗಳು ವಿಭಾಗ ಮುಖ್ಯಸ್ಥರು- ಮಾನವ ಸಂಪನ್ಮೂಲ ವಿಭಾಗದ ಮೂಲಕ ಕೈಗೆತ್ತಿಕೊಳ್ಳುತ್ತಿವೆ.

ಪತ್ರಿಕಾ ಉದ್ಯೋಗ ಸೇಫ್ ಎಂಬ ಸ್ಥಿತಿ ಈಗಿಲ್ಲ.‌ ಗುತ್ತಿಗೆ ಪದ್ಧತಿ ಅಲ್ಲಿಗೂ ಪದಾರ್ಪಣೆ ಮಾಡಿದೆ. ವೇಜ್ ಬೋರ್ಡ್ ಬೇಡ; ನಾವು ಗುತ್ತಿಗೆ ಪದ್ಧತಿಗೆ ಸ್ವ ಇಚ್ಛೆಯಿಂದ ಬರೆಸಿಕೊಂಡು ಬಳಿಕ ಯಾವಾಗ ಬೇಕೋ ಆಗ ಮನೆಗೆ ಕಳುಹಿಸುವ ಚಾಲಾಕಿ ಸಿಇಒ, ಎಚ್ಚಾರ್ ಗಳು ಹೆಚ್ಚಾಗಿದ್ದಾರೆ ಎಂಬುದು ಹಿರಿಯ ಪತ್ರಕರ್ತರೊಬ್ಬರ ಅಭಿಮತ.

ಮುದ್ರಣ ಕ್ಷೇತ್ರದಲ್ಲಿ ಹೊಸತನ- ಆವಿಷ್ಕಾರ ನಡೆಯುತ್ತಾ ಸಾಗಿದೆ. ಪತ್ರಕರ್ತರ ಜತೆಗಿದ್ದ ಪ್ರೂಫ್ ರೀಡರ್ ಗಳ ಹುದ್ದೆ ಬೇಡ ಎಂಬ ನಿರ್ಧಾರ ಬಂತು. ಬಳಿಕ ಪತ್ರಕರ್ತ- ವರದಿಗಾರರ ಮೇಲಿನ ಹೊಣೆ- ಹೊರೆಯೂ ಹೆಚ್ಚಾಗಿದೆ. ಅದನ್ನೇ ನೆಪವಾಗಿಸಿ ‘ಗ್ರೇಡಿಂಗ್’, ಪರ್ಫಾರ್ಮಿಂಗ್- ನಾನ್ ಪರ್ಫಾರ್ಮಿಂಗ್ ಪತ್ರಕರ್ತರ ಪಟ್ಟಿ ತಯಾರಿಸಿ ಅಥವಾ ತಯಾರಿಸದೇ ಪತ್ರಕರ್ತ- ಪತ್ರಕರ್ತೇತರ ವರ್ಗವನ್ನು ಬೀದಿಗೆ ಕಳುಹಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.

ಒಂದೆಡೆ ಪತ್ರಿಕೆ ಕೊಂಡು ಓದುವ ಚಿಂತನೆ ಬೆಳೆಯುತ್ತಿಲ್ಲ. ಬಿಟ್ಟಿ ಆನ್ ಲೈನ್ ಓದುಗರೇನೋ ಇದ್ದಾರೆ. ಆದರೆ ಜಾಹೀರಾತು ಬರುತ್ತಿಲ್ಲ.‌.‌‌..ಇದು ಮಾಲೀಕರ ಚಿಂತೆ.

ಕೊರೊನಾ ಪಸರಿಸದಂತೆ ಗರಿಷ್ಠ ಯತ್ನ ಸಾಗಿದೆ…‌ಓದುಗರು ಚಿಂತಿತರಾಗಬೇಕಿಲ್ಲ ಎಂದು ಜಗಜ್ಜಾಹೀರು ಮಾಡಿದರೂ ಪತ್ರಿಕೆ ತಲುಪಿಸುವ ಏಜೆಂಟರು, ಪತ್ರಿಕೆ ಮನೆಗೆ ಒಯ್ಯುವ ಹುಡುಗರು ಮೊದಲಿನ‌ ಉತ್ಸಾಹ ತೋರುತ್ತಿಲ್ಲ ಎಂಬುದೂ ಅಷ್ಟೇ ಸತ್ಯ.

ಕೆಲವು ಬೃಹತ್ ನಗರಗಳು ಕೊರೊನಾ ಕಾರಣವನ್ನೇ ಮುಂದಿಟ್ಟು ಮುದ್ರಣ ನಿಲ್ಲಿಸಿವೆ. ಕನ್ನಡದ ಪ್ರಮುಖ ಪತ್ರಿಕೆಗಳೂ ಮುದ್ರಿಸುವ ಕಾಪಿಗಳ ಸಂಖ್ಯೆ, ಪುಟಗಳ ಸಂಖ್ಯೆಯಲ್ಲಿ ಕಡಿತ ಮಾಡಿವೆ..‌

‘ಕೊರೊನಾ’ ಎಂಬುದು ಪತ್ರಿಕಾ ಉದ್ಯಮಿಗಳಿಗೆ ಅಧ್ಯಯನದ ಕಾಲಘಟ್ಟ. ವೆಚ್ಚ ಕಡಿತ, ಸಿಬ್ಬಂದಿ ಕಡಿತ, ಮನೆಯಿಂದ ಕೆಲಸ ಇತ್ಯಾದಿ ಮಾಡುತ್ತಾ ಸುದ್ದಿಗಳ ರೀತಿಯಲ್ಲಿ ವ್ಯವಸ್ಥೆಯನ್ನು ಸಂಕ್ಷಿಪ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಅಷ್ಟ ಪುಟಾಧೀಶರಷ್ಟೇ ಸಾಕು….


ಹೌದು ಪತ್ರಿಕೆಗಳ ಪುಟ (ಪೇಜು) ಎಂಟಕ್ಕಿಳಿದಿದೆ. ಎಲ್ಲ ಸರಿಹೋದ ಮೇಲೆ ಇನ್ನೊಂದೆರಡು ಹೆಚ್ಚಾಗಬಹುದು. ಇಷ್ಟು ಪುಟ ಮಾಡಲು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕೇ? ಪುಟ ಮಾಡುವವರೇ ಭಾಷಾಂತರ ಮಾಡಿ ವಿಷಯವನ್ನು ಪುಟಕ್ಕಿಳಿಸಿ ವಿನ್ಯಾಸ ಮಾಡಬಹುದಲ್ಲವೇ? ಇವರಿಂದಲೇ ಬಿಡುವಿನ ವೇಳೆಯಲ್ಲಿ ಬೇರೆಲೇಖನ ಬರೆಸುವುದು ತಿದ್ದುವುದು ಮಾಡಬಹುದಲ್ಲವೇ? ಕಾಲೇಜು ಮೇಷ್ಟ್ರು ಗಳಿಗೊಂದಿಷ್ಟು ಪ್ರಾಜೆಕ್ಟ್ ಕೊಟ್ಟು ಪುರವಣಿ ರೂಪಿಸಬಹುದು, ಫ್ರೀಲಾನ್ಸರ್ ಗಳಿಂದ ಬರೆಸಬಹುದು…

ಹೀಗೆಯೂ ತರ್ಕ ಸಾಗಿದೆ


ಬೆಂಗಳೂರಿನಂಥ ಕೇಂದ್ರ ಸ್ಥಾನದಲ್ಲಿ ಐದಾರು ವರದಿಗಾರರು ಆಯ್ದ ಸುದ್ದಿಗಳನ್ನಷ್ಟೇ ಕೊಟ್ಟರೆ ಸಾಕು. ಕಸ ಕಡ್ಡಿಗೆ ಆಸ್ಪದ ಇಲ್ಲ. ಹೀಗಾದಾಗ ಇಲ್ಲೂ ಸಂಖ್ಯೆ ಕಡಿತ ಸಾಧ್ಯ ಎಂಬ ತರ್ಕವೂ ಮುಂದಿಡುತ್ತದೆ ಆಡಳಿತ.

ಏಕೆಂದರೆ ಗುಣಮಟ್ಟ, ವಿಷಯದ ಆಳ ಇತ್ಯಾದಿ ಬಗ್ಗೆ ದೊಡ್ಡ ಸಂಖ್ಯೆಯ ಓದುಗರು ಆಸಕ್ತಿಯೇ ವಹಿಸುವುದಿಲ್ಲ. ಇವರೆಲ್ಲಾ ಹೆಡ್ ಲೈನ್ ಓದುಗರಷ್ಟೇ. ಇವರನ್ನು ನಂಬಿಕೊಂಡು ಪತ್ರಿಕೆ ಮಾಡುವುದು ಕಷ್ಟ. ಮಾರುಕಟ್ಟೆ ವೃದ್ಧಿಯಂತೂ ದೂರದ‌ಮಾತು. ಹೊಸ ಪೀಳಿಗೆಯ ಕೈಗೆ ಸ್ಮಾರ್ಟ್ ಫೋನ್ ಬಂದ ಮೇಲೆ ಯಾವುದೇ ನಿರ್ದಿಷ್ಟ ಮಾಧ್ಯಮ ವೇದಿಕೆಗಳ ಮೇಲೆ ಅವರು ಕೇಂದ್ರೀಕೃತರಾಗಿಲ್ಲ. ಇನ್ನು 10 ವರ್ಷಗಳಲ್ಲಿ ಸಾಂಪ್ರದಾಯಿಕ ಓದುಗರ ತಲೆಮಾರು ಕಳಚಿಕೊಳ್ಳುತ್ತಾ ಸಾಗುತ್ತದೆ. ಆಗ ಪತ್ರಿಕೆಯ ಭೌತಿಕ ಸ್ವರೂಪ, ಆಕಾರ, ವಿಷಯವಸ್ತುವನ್ನು ಪೂರ್ಣ ಬದಲಾಗಲೇಬೇಕು. ಉದಾಃ ಸುಮಾರು 10 ವರ್ಷಗಳ ಹಿಂದೆ ಮಿಡ್ ಡೇ ಮತ್ತು ಮುಂಬೈ ಮಿರರ್ ದ ಸುದ್ದಿ ಸ್ವರೂಪ‌, ಪತ್ರಿಕೆಯ ಆಕಾರ ನೆನಪಿಸಿಕೊಳ್ಳಿ. ಹಾಗಿದ್ದರೂ ‘ಮಿಡ್ ಡೇ’ ಉಳಿಯಲಿಲ್ಲ.

ಹೊಸ ವ್ಯವಸ್ಥೆಗೆ ಈಗಿನ ಪತ್ರಿಕಾ ಉದ್ಯೋಗಿಗಳು ಹೇಗೆ ತೆರೆದುಕೊಳ್ಳುತ್ತಾರೆ ಎಂಬುದರ ಮೇಲೆ ಉದ್ಯೋಗದ ಭವಿಷ್ಯ ನಿಂತಿದೆ. ಆದರೆ ಬಹುತೇಕರು ಕ್ಷೇತ್ರದ ಮೇಲೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಹೊಟ್ಟೆಪಾಡಿಗಾಗಿ‌ ಮಾತ್ರ ಉದ್ಯೋಗಿಗಳಾಗಿದ್ದಾರೆ. ವ್ಯವಸ್ಥೆ ಹಾಗೆ‌ ಮಾಡಿಬಿಟ್ಟಿದೆ. ಕಾಲ ಮತ್ತು ಓದುಗರೂ ಇದಕ್ಕೆ ಕಾರಣ.

ಸದ್ಯ ಪತ್ರಕರ್ತರೂ ಸೇರಿ ಎಲ್ಲರನ್ನೂ ಕಾಡುವ ಪ್ರಶ್ನೆ ಒಂದೇ.‌‌….ಈ ಹೊಡೆತಗಳಿಂದ ಇನ್ನೆಷ್ಟು ಪತ್ರಕರ್ತರು- ಪತ್ರಕರ್ತೇತರರು ಬೀದಿಗೆ ಬರಬಹುದು? ಅವರಿಗೆ ಪರ್ಯಾಯ ಏನು? ಕನ್ನಡ ಪತ್ರಿಕಾ ಕ್ಷೇತ್ರ ಇನ್ನೆಷ್ಟು ವರ್ಷ ಸಾಗಬಹುದು?. ಸದ್ಯ ಇವು ಉತ್ತರ ಸಿಗದ ಪ್ರಶ್ನೆಗಳು. ಕಾಲವೇ ಇವುಗಳಿಗೆ ಉತ್ತರ ಕೊಡಬೇಕಿದೆ.

ಭ್ರಮಾ ಲೋಕ ಕಳಚಿ ಬಿದ್ದಿದೆ…!

0

ಚಿದು ಎ.ರಂಗಯ್ಯ


ಅಬ್ಬಾ…..! ಎಷ್ಟೊಂದು ಧಾವಂತವಿತ್ತು. ಹೆಂಡತಿ ತಿಂಡಿ ಕೊಡುವುದು ಐದು ನಿಮಿಷ ತಡವಾದರೆ ಸಹಿಸಲು ಆಗುತ್ತಿರಲಿಲ್ಲ. ಅರ್ಧ ಗಂಟೆ ಕರೆಂಟ್ ಹೋದರೆ ಲೈನ್ ಮೆನ್ ನಿಂದ ಹಿಡಿದು ಇಂಧನ ಸಚಿವರ ತನಕ ಎಲ್ಲರಿಗೂ ಹಿಡಿಶಾಪ ಹಾಕುತ್ತೇವೆ. ಎರಡು ನಿಮಿಷ ಟ್ರಾಫಿಕ್ ಸಿಗ್ನಲ್ ಕಾಯುವ ತಾಳ್ಮೆ ಇರಲಿಲ್ಲ.

ಕೆಲಸಕ್ಕೆ ತಡವಾಗುತ್ತದೆ ಎನ್ನುವ ಆತುರ. ತಾನು ಹೋಗದಿದ್ದರೆ ಕೆಲಸವಲ್ಲ ಪ್ರಪಂಚವೇ ನಿಂತು ಹೋಗುತ್ತದೇನೊ ಎನ್ನುವಷ್ಟು ಧಾವಂತ. ತನ್ನಿಂದಲೇ ಎಲ್ಲಾ ನಡೆಯುತ್ತಿದೆಯೇನೋ ಎನ್ನುವ ಭ್ರಮೆ.

ಒಂದು ದಿನ ಎಲ್ಲಿಗಾದರೂ ಹೋಗಬೇಕೆಂದರೆ ‘ಅಯ್ಯೋ ಸಾಧ್ಯವೇ ಇಲ್ಲ, ತುಂಬಾ ಮುಖ್ಯವಾದ ಕೆಲಸ ಇದೆ’ ಎನ್ನುವ ಉತ್ತರ.

ಯಾವುದಕ್ಕೂ ನಮ್ಮ ಬಳಿ ಸಮಯನೇ ಇರಲಿಲ್ಲ. ಶಾಲೆಯಲ್ಲಿ ಪೋಷಕ, ಶಿಕ್ಷಕರ ಸಭೆಗೆ ಬಯ್ದುಕೊಂಡೇ ಹೋಗುತ್ತೇವೆ. ಬಿಲ್ ಕಟ್ಟುವ ಸರದಿಯಲ್ಲಿ ಗೊಣಗಾಡುತ್ತ ನಿಲ್ಲುತ್ತೇವೆ. ಹತ್ತು ಸೆಕೆಂಡ್ ಮೊಬೈಲ್ ಹ್ಯಾಂಗ್ ಆಯಿತೆಂದರೆ ಸಾಕು ಅಬ್ಬಾ..! ಜಗತ್ತೇ ನಿಂತು ಹೋದಷ್ಟು ಅಸಹನೆ.ಎಲ್ಲಾದಕ್ಕೂ ತಡವಾಗುತ್ತದೆ ಎನ್ನುವ ವಿಚಿತ್ರ ಮನಸ್ಥಿತಿ.


ಆದರೆ ಏನಾಯಿತೀಗ? ಎಲ್ಲರೂ ಮನೆಯಲ್ಲಿ ಕುಳಿತಿದ್ದೇವೆ. ಜಗತ್ತು ಹಾಗೆಯೇ ಇದೆ. ಸೂರ್ಯ ಹುಟ್ಟಿ ಯಥಾಪ್ರಕಾರ ಮುಳುಗುತ್ತಿದ್ದಾನೆ. ಗಾಳಿ ಬೆಳಕು ಸ್ವಚ್ಛಂದವಾಗಿ ಹರಿಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ತೆಗೆಯೋದು ಅರ್ಧ ಗಂಟೆ ತಡವಾದರೆ ಇನ್ನೇನ್ ಮಹಾ ತೊಂದರೆ ಆಗಿಬಿಡುತ್ತೆ ಎಂದು ಭಾವಿಸಿದ ಅಂಗಡಿಗಳು, ಕಛೇರಿಗಳು ಬಾಗಿಲು ಹಾಕಿಕೊಂಡು ಕುಳಿತಿವೆ.

ಏನೂ ಆಗಲಿಲ್ಲ. ಸ್ವಲ್ಪ ಏರುಪೇರುಗಳಾಗಿವೆ. ಆದರೆ ಯೋಚಿಸಿ..! ನಾವು ಮಾಡುತ್ತಿದ್ದ ಧಾವಂತ, ಆತುರ, ತಡವಾದರೆ ಪ್ರಳಯವೇ ಆಗುತ್ತದೆ ಎನ್ನುವ ಅಸಹನೆ ನಿಜಕ್ಕೂ ಬೇಕಿತ್ತಾ? ನಮಗೇ ಗೊತ್ತಿಲ್ಲದೆ ನಾವು ಎಂಥ ಭ್ರಮಾತ್ಮಕ ಗೋಡೆ ಕಟ್ಟಿಕೊಂಡು ಬದುಕಿ ಬಿಟ್ಟೆವಲ್ಲ ಅಂತ ಈಗಲಾದರೂ ಅನ್ನಿಸಬಹುದಲ್ಲ.

ತಡವಾಗುತ್ತದೆ ಎನ್ನುವ ಆತುರದಲ್ಲಿ ತಿಂಡಿ ತಿನ್ನುವಾಗ ಹೆಂಡತಿಯೊಂದಿಗೆ ಸಮಾಧಾನದಿಂದ ಎರಡು ಮಾತಾಡುವ ಖುಷಿ ಕಳೆದುಕೊಂಡಿದ್ದೇವೆ. ಆ ಸಮಯದಲ್ಲೇ ಆ ದಿನದ ಕುರಿತಾಗಿ ಆಕೆ ಆಡಬೇಕಾಗಿದ್ದ ಎರಡು ಮಾತಿಗೆ ಕಿವಿಯಾಗದೆ ಆಕೆಯ ಇಡಿ ದಿನದ ಖುಷಿಯನ್ನು ಕೊಂದು ಹೊರಟು ಬಿಟ್ಟಿದ್ದೇವೆ.

ತಡವಾಗುತ್ತದೆ ಎನ್ನುವ ಕಾರಣ ಕೊಡದೆ ಶಾಲೆಗೆ ಹೊರಟ ಮಗುವಿನ ಶೂ ಲೇಸ್ ಕಟ್ಟದೆ ಆ ಮಗುವಿನ ಒಂದು ಸುಂದರ ನಗುವಿನ ಖುಷಿಯನ್ನು ಕಳೆದುಕೊಂಡಿದ್ದೇವೆ.

ಆರೋಗ್ಯ ವಿಚಾರಿಸುವುದಕ್ಕೆ ಫೋನ್ ಮಾಡಿದ್ದ ಅಪ್ಪ-ಅಮ್ಮನಿಗೆ “ಕೆಲಸ ಇದೆ ಆಮೇಲೆ ಮಾಡ್ತೀನಿ” ಎನ್ನುವ ಬದಲು ಎರಡು ನಿಮಿಷ ಆರಾಮವಾಗಿ ಮಾತಾಡದೆ ಹೆತ್ತವರಿಂದ ಸಿಗುವ ಖುಷಿಯನ್ನು ಕಳೆದುಕೊಂಡಿದ್ದೇವೆ.

ನಾವು ಏನೋ ಮಹಾ ಸಾಧನೆ ಮಾಡುತ್ತಿದ್ದೇವೆ. ಒಂದರ್ಧ ಗಂಟೆ ನಾನು ಆ ಕೆಲಸ ಮಾಡದಿದ್ದರೆ ದೊಡ್ಡ ತೊಂದರೆ ಆಗುತ್ತದೆ ಎನ್ನುವ ಧಾವಂತದ ಭ್ರಮೆಯಲ್ಲಿ ನಾವು ಕಳೆದುಕೊಂಡ ಸಣ್ಣಸಣ್ಣ ಅದ್ಭುತವಾದ ಖುಷಿಗಳೆಷ್ಟು ಅನ್ನುವುದು ನಮಗೆ ಅರ್ಥವಾಗಲೇ ಇಲ್ಲ.

ತಡವಾದರೆ ಏನೋ ಆಗಿಬಿಡುತ್ತದೆ ಎನ್ನುವ ನಾವೇ ಸೃಷ್ಟಿಸಿಕೊಂಡ ಭ್ರಮೆಯ ಜಗತ್ತು ಎಷ್ಟು ಖಾಲಿ, ಎಷ್ಟು ಅರ್ಥಹೀನ ಅಂತ ಅರ್ಥವಾಗುವ ಸಮಯ ಇದು. ದುಡಿಮೆಯೊಂದೇ ಸಮಯದ ಸದುಪಯೋಗ ಅಂದುಕೊಂಡ ನಮಗೆ ರಾಶಿ ದುಡ್ಡಿದ್ದರೂ ಖರ್ಚು ಮಾಡುವುದಕ್ಕೂ ಅವಕಾಶವಿಲ್ಲದಿದ್ದರೆ ಆ ದುಡ್ಡು ಕಾಗದವಲ್ಲದೆ ಮತ್ತೇನೂ ಅಲ್ಲ ಅನ್ನುವುದೂ ಅರ್ಥವಾಗಬೇಕು.

ದುಡ್ಡು ದುಡಿಯುವ ಭರದಲ್ಲಿ ದುಡ್ಡಿಗಿಂತ ಮೌಲ್ಯಯುತವಾದ ಅದೆಷ್ಟೋ ಮುಗ್ಧ ಖುಷಿಗಳನ್ನು ನಮ್ಮ ಧಾವಂತದ ಪ್ರಯಾಣದ ಚಕ್ರದಡಿಗೆ ಹಾಕಿ ಕೊಂದುಕೊಂಡೇ ಮುಂದೆ ಸಾಗಿದೆವು. ಯಾವುದೋ ಭ್ರಮೆಯ ಬೆನ್ನೇರಿ ಪ್ರಕೃತಿಯಿಂದ ದೂರಾದೆವು. ಸಹಜ ಬದುಕಿನಿಂದ ದೂರಾದೆವು, ಸಂಬಂಧಗಳಿಂದ ದೂರಾದೆವು. ಮೌಲ್ಯಗಳಿಂದ ದೂರಾದೆವು.

ಕರಗಬೇಕಿದ್ದ ಹೃದಯ ಕಲ್ಲಾಗಿ ಹೋಯಿತು. ತೇವಗೊಳ್ಳುತ್ತಿದ್ದ ಕಣ್ಣಂಚಿಗೆ ನೀರಿನ ಬರ ಬಂದು ಅದೆಷ್ಟು ಕಾಲವಾಯಿತೊ, ಮುಗ್ಧವಾಗಿ ಇರಲಿ, ಮುಕ್ತವಾಗಿಯೂ ನಗದ ನಮ್ಮ ಬದುಕಿಗೆ ನಾಗರಿಕತೆ ಎಂದು ಹೆಸರಿಟ್ಟುಕೊಂಡು ಜೀವಂತ ಶವಗಳಾಗಿ ಓಡಾಡುತ್ತಿದ್ದೇವೆ.

ಇದೆಲ್ಲದಕ್ಕೂ ಕಾರಣ, ಬದುಕಿನ ಧಾವಂತದ ಅರ್ಥ ಹೀನ ಓಟ. ಯಾಕೆ ಓಡುತ್ತಿದ್ದೇನೆ? ಯಾಕೆ ಅವಸರ ಪಡುತ್ತಿದ್ದೇನೆ? ಯಾಕೆ ಗಡಿಬಿಡಿ? ಯಾಕೆ ಕೋಪ? ಯಾಕೆ ಅಸಹನೆ? ಯಾಕೆ ಎಲ್ಲರ ಮೇಲೂ ಸಿಡಿಮಿಡಿ? ಎಂದು ಯೋಚನೆ ಮಾಡುವ ವ್ಯವಧಾನವೂ ಇಲ್ಲದಷ್ಟು ಧಾವಂತ.

ಆದರೆ ಈಗ ಅದೆಲ್ಲ ಎಲ್ಲಿಗೆ ಹೋಯಿತು? ನಾವು ಅದು ಮಾಡದಿದ್ದರೆ, ಇದು ಮಾಡದಿದ್ದರೆ, ಅಲ್ಲಿಗೆ ಹೋಗದಿದ್ದರೆ, ಇಲ್ಲಿಗೆ ಹೋಗದಿದ್ದರೆ ಜಗತ್ತು ನಿಂತೇ ಹೋಗುತ್ತದೆ ಎನ್ನುವ ಭ್ರಮೆಯಲ್ಲಿ ಅವಸರ ಮಾಡುತ್ತಿದ್ದೆವು.

ಆದರೆ ಈಗ ನಾವು ಎಲ್ಲಿಗೂ ಹೋಗದೆ, ಏನೂ ಮಾಡದೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೂ ತಯಾರಾಗಿದ್ದೇವೆ. ನಮ್ಮಿಂದಲೇ ಜಗತ್ತು ಎನ್ನುವ ಅಹಂಕಾರದ ಕಿರೀಟ ಎಷ್ಟು ಸಲೀಸಾಗಿ ಎಷ್ಟು ಅಚಾನಕ್ಕಾಗಿ ಕಳಚಿ ಬಿದ್ದಿದೆ ನೋಡಿ.

ಬೆಳಿಗ್ಗೆ ಎದ್ದಾಗಿನಿಂದ ನಾವು ತಯಾರಾಗುವ ರೀತಿ, ಮಾಡುವ ಯೋಚನೆ ಯೋಜನೆಗಳನ್ನು ನೋಡಿದರೆ ಸಾವಿರ ವರ್ಷ ಕಳೆದರೂ ನಮಗೆ ಸಾವೇ ಬರುವುದಿಲ್ಲ ಎನ್ನುವ ಹಾಗಿರುತ್ತಿತ್ತು.

ಆದರೆ ಒಂದು ಕಣ್ಣಿಗೆ ಕಾಣದ ಸೋಂಕು ಎಂಥ ಪಾಠ ಕಲಿಸಿ ಬಿಟ್ಟಿತಲ್ಲ? ಇಷ್ಟು ವರ್ಷ ಹೇಗೆ ಬದುಕಿದ್ದೇವೆ ಎನ್ನುವುದು ಅರ್ಥ ಮಾಡಿಕೊಳ್ಳಲು ಸಾವು ಬಂದು ಬಾಗಿಲು ಹಾಕಿಸಬೇಕಾಯಿತು.

ಇನ್ನಾದರೂ ಅರ್ಥ ಮಾಡಿಕೊಳ್ತೆವಾ..? ಬದುಕು‌ ಇಷ್ಟೆ ಅಂತಾ..? ಅಥವಾ ಮತ್ತದೆ‌ ಧಾವಂತಕ್ಕೆ ಬೀಳ್ತೇವಾ..? ಇದನ್ನ ನಮಗೆ ನಾವೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಷ್ಟೆ…

ಚಿಟ್ಟೆ ಮತ್ತು ಜೇನು

ದೇವರಹೊಸಹಳ್ಳಿ ಧನಂಜಯ


ಬಣ್ಣದ ಚಿಟ್ಟೆ
ಕೋಟಿ ಹೂ ಮುಟ್ಟಿದರು
ಜೇನ್ ಆಗಲಿಲ್ಲ

ದುಂಬಿಯ ಶ್ರಮ
ಜೇನು ಹುಟ್ಟಿ ಸೇರಿತು
ಸದ್ದು ಮಾಡದೆ

ಭ್ರಮೆ ಬಿತ್ತಿದ
ಪಾತರಗಿತ್ತಿ ಪಾತ್ರೆ
ತುಂಬಲೇ ಇಲ್ಲ


ನಿಮ್ಮೂರಿನ ಸುದ್ದಿ, ಲೇಖನ, ನಿಮ್ಮ ಬರಹಗಳನ್ನು ವಾಟ್ಸಾಪ್ ಮಾಡಿ: 9844817737


ಹಿತ್ಲವ್ರೆ ಹೂವು
ದುಂಬಿ ವರಿಸಿ ಜೇನು
ಕತ್ತಲೆ ನಿಧಿ

ಲೋಕದ ತುಂಬಾ
ಸಂಚಾರಿ ಚಿಟ್ಟೆ, ಮಟ್ಟೆ
ಮಣ್ಣು ಸೇರಿತ್ತು

ಜೇನ ಕೊಳ್ಳೆಯು
ಜೀವ ಪಲ್ಲವಯಾನ
ಪರಾಗ ರಾಗ

ತನ್ನ ಶ್ರಮವ
ತಾನೆ ಉಣ್ಣದ ಜೇನು
ಜಗದ ಗುರು.


ಈ ಕವಿತೆಯ ಪ್ರತೀ ಪ್ಯಾರವೂ ಒಂದೊಂದು ಹಾಯ್ಕುಗಳಾಗಿವೆ.
ಒಟ್ಟಾಗಿ ನೋಡಿದಾಗ ಸಮಗ್ರ ಕವಿತೆಯೂ ಆಗಿದೆ.
ಹಾಯ್ಕು ಎಂಬುದು ಜಪಾನಿನ ವಿಶಿಷ್ಟ ಕವಿತೆ ಕಟ್ಟುವ ಕ್ರಮ.
3 ಸಾಲುಗಳುಳ್ಳ 17 ಅಕ್ಷರದ ಕವಿತೆಗಳು ಮೊದಲ ಸಾಲಿನಲ್ಲಿ 5 ಎರಡನೇ ಸಾಲಿನಲ್ಲಿ 7 ಹಾಗೂ ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರುತ್ತವೆ ಒತ್ತಕ್ಷರಗಳು ಮತ್ತು ಅರ್ಕಾವತ್ತು ಗಳನ್ನು ಒಂದೇ ಅಕ್ಷರ ಎಂದು ಪರಿಗಣಿಸಲಾಗುತ್ತದೆ ಅರ್ಧ ಅಕ್ಷರಗಳನ್ನು ಪರಿಗಣಿಸಲಾಗುವುದಿಲ್ಲ-ಕವಿ

ಕೊಲೆ ಆರೋಪಿಗಳ ಪತ್ತೆಗೆ ನೆರವಾಯ್ತು ಲಾಕ್ ಡೌನ್

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ  ಬೆಳ್ಳಂಬೆಳಿಗ್ಗೆ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ತಿರುಮಣಿ ಪೊಲೀಸರು  ಬಂಧಿಸಿದ್ದಾರೆ.

ತಾಲ್ಲೂಕಿನ  ವಡ್ರೇವು ಗ್ರಾಮದ ಸತೀಶ್, ಓಬಣ್ಣ,  ಮಾರುತಿನವೀನ್  ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಎಷ್ಟು ಮಂದಿ ಹತ್ಯೆಯಲ್ಲಿ ಭಾಗವಹಿಸಿದ್ದರು. ಯಾರ ಪಾತ್ರ ಏನು ಎಂಬ ಬಗ್ಗೆ ತಿರುಮಣಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಡ್ರೇವು ಗ್ರಾಮದ ಗಂಗಾಧರ್ ಎಂಬುವರನ್ನು ಮಚ್ಚು, ಕಬ್ಬಿಣದ ರಾಡ್ ಇತ್ಯಾದಿ  ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು.

ಲಾಕ್ ಡೌನ್ ಇದ್ದುದರಿಂದ  ಆರೋಪಿಗಳು ನೆರೆಯ ಆಂಧ್ರಕ್ಕೆ ಹೋಗಿ ತಲೆಮರೆಸಿಕೊಳ್ಳಲು ಸಾಧ್ಯವಾಗಿಲ್ಲ. ಗಡಿಯಲ್ಲಿ ಕಟ್ಟು ನಿಟ್ಟಿನ ಪೊಲೀಸ್ ಸರ್ಪಗಾವಲು ಇರುವುದರಿಂದ ಗ್ರಾಮದ ಬಳಿಯೇ ಆರೋಪಿಗಳು ಬಿಡಾರ ಹೂಡಿದ್ದಾರೆ. ಗ್ರಾಮದ ಬಳಿಯ ತೋಟದ ಬಳಿ ಇದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಾವಗಡ: ಇಬ್ಬರು ಮಹಿಳೆಯರು ಐಸೊಲೇಶನ್ ವಾರ್ಡ್ ಗೆ ದಾಖಲು

Publicstory. in


ತುಮಕೂರು: ಆಂಧ್ರ ಪ್ರದೇಶದ ಹಿಂದೂಪುರದ ಕೊರೊನಾ ಸೋಂಕಿತ ವೈದ್ಯನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಇಬ್ಬರು ಶಂಕಿತರನ್ನು ಸೋಮವಾರ ರಾತ್ರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ.


ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ., ರಿಪ್ಪನ್ಪ ಪೇಟೆ


ಖಾಸಗಿ ಫಿಸಿಯೊ ಥೆರಪಿ ಕೇಂದ್ರದ ವೈದ್ಯರೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ತಾಲ್ಲೂಕಿನ ದೊಮ್ಮತಮರಿ ಗ್ರಾಮದ ಇಬ್ಬರು ಮಹಿಳೆಯರು ಕೋವಿಡ್ 19 ಸೋಂಕಿತ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್-16, ಮಾರ್ಚ್-21 ರಂದು ಮಹಿಳೆಯರು ಪ್ರತ್ಯೇಕವಾಗಿ ಸೋಂಕಿತ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.

ಮಾಹಿತಿ ಆಧರಿಸಿ ಅಧಿಕಾರಿಗಳ ತಂಡ ಇಬ್ಬರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸೊಲೇಷನ್ ವಾರ್ಡ್ ನಲ್ಲಿ ಇರಿಸಿದ್ದಾರೆ.
ಸಧ್ಯ ಇಬ್ಬರೂ ಆರೋಗ್ಯವಾಗಿದ್ದಾರೆ. ಕೊರೊನಾ ಲಕ್ಷಣಗಳು ಇಬ್ಬರಲ್ಲಿಯೂ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇವರಿಬ್ಬರೊಂದಿಗೆ ಸಂಪರ್ಕ ಹೊಂದಿದ್ದವರ ಸರ್ವೆ ಮಾಡಲಾಗುತ್ತಿದೆ.

ಮದುವೆ ಸಂಭ್ರಮದಲ್ಲಿದ್ದವರು‌ ಮಸಣಕ್ಕೆ….

Publicstory. in


ತುಮಕೂರು: ನಾದಿನಿಯ ಮದುವೆಯ ಸಂಭ್ರದಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಈಗ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದ ರವಿಕುಮಾರ್(24) ಮೃತ ದುರ್ಧೈವಿ.

ತನ್ನ ಹೆಂಡತಿಯ ತಂಗಿಯ ಮದುವೆಗೆ ಮನೆಯ ಸ್ವಚ್ಚತೆ ಮಾಡುವ ವೇಳೆ ವಿದ್ಯುತ್ ಸ್ಪರ್ಷವಾಗಿ ಅನಾಹುತ ಸಂಭವಿಸಿದೆ.

ಬೋಡಬಂಡೇನಹಳ್ಳಿ ಗ್ರಾಮದ ತನ್ನ ಮಾವ ಕಾಂತರಾಜು ಎಂಬುವರ ಮನೆಯ ಮೋಟರ್‌ನಿಂದ ಮನೆಯ ಹೆಂಚಿನ ಧೂಳು ತೊಳೆಯುವ ವೇಳೆ ರವಿಕುಮಾರ್ ಗೆ ವಿದ್ಯುತ್ ಸ್ಪರ್ಶವಾಗಿದೆ.

ವಿದ್ಯುತ್ ಸ್ಪರ್ಶದಿಂದ ನರಳುತ್ತಿದ್ದ ರವಿಕುಮಾರ್‌ ಅವರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ‌ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೊರಟಗೆರೆ ಪೊಲೀಸ್ ಠಾಣಾ ಪಿಎಸ್‌ಐ ಎಚ್.ಮುತ್ತುರಾಜು ಭೇಟಿ ನೀಡಿದ್ದರು.‌ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬ್ಬಬ್ಬಾ ಇವರ ಸಾಮಾಜಿಕ ಅಂತರ ಕಂಡು ಬೆರಗಾದರು…

ವರದಿ: ನಾಗರಾಜ್ ಸಿ.ಎಸ್.ಪುರ


C.S.Pura: ಗುಬ್ಬಿ ತಾಲ್ಲೂಕಿ‌ನ ಚಂದ್ರಶೇಖರ ಪುರ (ಸಿ.ಎಸ್.ಪುರ) ದಲ್ಲಿ ಸಾಮಾಜಿಕ ಅಂತರ ಕಂಡು ಎಲ್ಲರೂ ಬೆರಗಾಗುತ್ತಿದ್ದಾರೆ.

ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಸಾಮಾಜಿಕ ಅಂತರ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಸಂಸ್ಥಾಪನಾ ದಿನದಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಪಕ್ಷದ ಕಾರ್ಯಕರ್ತರಿಗೆ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಿದ್ದಾರೆ. ಕರೊನಾ ಯುದ್ಧದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.


ನಿಮ್ಮೂರಿನ ಸುದ್ದಿ, ಲೇಖನ, ಚಿತ್ರಗಳನ್ನು ವಾಟ್ಸಾಪ್ ಮಾಡಿ:_9844817737


ಆದರೆ ಸಿ.ಎಸ್.ಪುರದಲ್ಲಿ ಈ ಮಾತುಗಳಿಗೆ ಬೆಲೆಯೇ ಇಲ್ಲವಾಗಿದೆ. ಗ್ರಾಮ ಪಂಚಾಯತಿ ಮುಂಭಾಗವೇ ಇರುವ ಪ್ರಾಥಮಿಕ ಕೃಷಿ ಸಂಘದಲ್ಲಿ ನ್ಯಾಯಬೆಲೆ ಪಡಿತರ ವಿತರಣೆ ಸಮಯದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಇಡಲಾಯಿತು.

ಗುಂಪುಗೂಡಿ ಪಡಿತರಕ್ಕೆ ಮುಗಿಬಿದ್ದರು. ಇದನ್ನು ಕಂಡವರು ನೊಂದುಕೊಂಡರು.

ಇನ್ನೂ ಸರ್ಕಲ್ ನಲ್ಲಿ ಜನರು ಬೇಕಾಬಿಟ್ಟಿ ಇದ್ದರು. ಕೆಲಸ ಇಲ್ಲದವರು ಕಟ್ಟೆ ಕಲ್ಲುಗಳ ಮೇಲೆ ಕುಳಿತು ಹರಟೆ ಕೊಚ್ಚುತ್ತಿದ್ದರು.

ಇವರ ಆಟಗಳನ್ನು ಕಂಡವರು ಬೇಸರಿಸಿಕೊಂಡರು.‌ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವ ಪ್ರಜ್ಞಾವಂತರಿಗೆ ಕೆಲವು ಜನರ ಈ ನಡವಳಿಕೆ ಕಿರಿಕಿರಿ ತರುತ್ತಿದೆ.

ಈ ಬಗ್ಗೆ ಅಧಿಕಾರಿಗಳು, ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಅಬ್ಬಾ..! ಎಂತಾ ಕಾಲ ಬಂತಪ್ಪ..

ತುಳಸೀತನಯ

ಅಬ್ಬಾ ಎಂತಾ ಕಾಲ ಬಂತಪ್ಪ.. ಒಂದು ವೈರಾಣು ಇಡೀ‌ ಜಗತ್ತನ್ನೆ ನಿಬ್ಬೆರಗಾಗಿಸಿ‌ ಜನರನ್ನ ನಿಶ್ಚಲಗೊಳಿಸಿದೆ.


ಬಹುಶಃ ಪ್ರತಿಯೊಬ್ಬ ಮನುಷ್ಯನಿಗೂ ಈಗ ಜೀವ ಭಯ ಪ್ರಾರಂಭವಾಗಿದೆ. ದೇವರು, ಆಚರಣೆ ಭಯ, ಭಕ್ತಿ ಇವೆಲ್ಲವನ್ನೂ ಮರೆತು‌ ನಾನೇ ಎಲ್ಲ. ನನ್ನಿಂದಲೇ ಎಲ್ಲ ಎಂದು ಬೀಗುತ್ತಿದ್ದ ಹುಲು‌ಮಾನವನಿಗೆ ಪ್ರಕೃತಿ ಉತ್ತರ‌ ಕೊಡಲು ಹೊರಟಿದೆ.

ಈ ಹಿಂದೆ ಯಾವುದೇ ವೈಜ್ಞಾನಿಕತೆ ಇಲ್ಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗ ಇಡೀ ಊರೇ ಸ್ಮಶಾನವಾಗಿ ಮಾರ್ಪಡುತ್ತಿತ್ತು. ಇಂದು ಎಲ್ಲ ರೀತಿಯ ವೈಜ್ಞಾನಿಕ ಸವಲತ್ತುಗಳಿದ್ದರೂ ವೈರಾಣು ಹೆಸರು ಕೇಳಿಯೇ ಜನ ಬದುಕ್ಕಿದ್ದೂ ಊರೂರೇ ಸ್ಮಶಾನ ಮೌನವಾಗಿಸಿದೆ.


ಇಂದು ಪ್ರಾಣಿ, ಪಕ್ಷಿಗಳು ನಿಸ್ಸಂದೇಹ, ನಿರ್ಭಯವಾಗಿ ಓಡಾಡ್ತಿದಾವೆ,‌ ಹಾರಾಡ್ತಿದಾವೆ.
ಆದರೆ ಮನುಷ್ಯ ತಾನೇ ಮಾಡಿದ ಪಾಪದ(ಶಾಪದ) ಫಲದಿಂದ ತನಗೆ ತಾನೆ ಬಂಧಿಯಾಗಿದ್ದಾನೆ.


ದಿನ ಜನಜಂಗುಳಿ ಇರುತ್ತಿದ್ದ ರಸ್ತೆಗಳು ಹಾಳು ಹಾದಿಯಂತೆ ಕಾಣುತ್ತಿದೆ. ಶಬ್ಧ‌ಮಾಡುತ್ತ ಓಡಾಡುತ್ತಿದ್ದ ವಾಹನಗಳು ಬಾಯಿ ಮುಚ್ಚಿಕೊಂಡು ಮೌನ ವಹಿಸಿ ನಿಂತಿವೆ.

ಜನರಿಂದ ಕೂಡಿದ್ದ ಪಟ್ಟಣಗಳು ಪಾಳು ಬಿದ್ದ ಊರಿನಂತೆ ಕಾಣುತ್ತಿವೆ. ಜನರ ಓಡಾಟವಿಲ್ಲ. ಮನೆಯಿಂದ ಯಾರೂ ಹೊರಬರಲು ಸಿದ್ದರಿಲ್ಲ.‌ ಹೊರಗೆ ಏನಾಗುತ್ತಿದೆ ಎಂಬುದರ ಪರಿವೇ ಜನಕ್ಕಿಲ್ಲ.

ಇಂತ ಪರಿಸ್ಥಿತಿ ಬರಬಹುದು ಎಂದು ಯಾರೂ ನಿರೀಕ್ಷಿಸಿಯೂ ಇರಲಿಲ್ಲ. ಯಾವ ಪೊಲೀಸು, ಕಾನೂನು, ಕಟ್ಲೆ ಮಾಡಲಾಗದ ಸ್ವ-ಬಂಧನ ಇಂದು‌ ಕೊರೊನಾ ವೈರಾಣು ಮಾಡಿದೆ.

ಪ್ರಸಿದ್ಧ ಸೌತಡ್ಕ ಗಣಪತಿ ದೇವಾಲಯದ ಹರಕೆ ಘಂಟೆ ಮಾರಾಟ ಆರೋಪ: ತನಿಖೆಗೆ ಸಚಿವ ಕೋಟ ಪೂಜಾರಿ ಆದೇಶ

Publicstory. in


Mangalore: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಕೊಕ್ಕಡ ಶ್ರೀ ಸೌತಡ್ಕ ಗಣಪತಿ ದೇವಾಲಯದ ಹರಕೆ ಘಂಟೆ ಮಾರಾಟ ವಿಚಾರದಲ್ಲಿ ಸ್ಥಳೀಯ ಶಾಸಕ ಶ್ರೀ ಹರೀಶ್ ಪೂಂಜರವರ ದೂರಿನಂತೆ, ಇಡೀ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಿ, ದೇವಸ್ಥಾನದ ಕಾರ್ಯನಿರ್ವಹಣ ಅಧಿಕಾರಿ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು, ರಾಜ್ಯ ಧಾರ್ಮಿಕ ದತ್ತಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇಲಾಖೆಯ ಆಯುಕ್ತರಿಗೆ ನೀಡಿದ ಆದೇಶದಲ್ಲಿ ತಿಳಿಸಿದ್ದು, ಅಗತ್ಯವಿದ್ದಲ್ಲಿ ಕಾರ್ಯನಿರ್ವಹಣಾ ಅಧಿಕಾರಿಯವರನ್ನು ಅಮಾನತು ಮಾಡಿ, ಪಾರದರ್ಶಕ ತನಿಖೆ ಮಾಡಬೇಕೆಂದು ಸಚಿವರು ಸೂಚಿಸಿದ್ದಾರೆ.

ಈ ಮಧ್ಯೆ ದೇವಳದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ನೂತನ ಆಡಳಿತಾಧಿಕಾರಿಯಾಗಿ ಬೆಳ್ತಂಗಡಿ ತಹಶಿಲ್ದಾರ್ ಅವರನ್ನು ನೇಮಕ ಮಾಡುವಂತೆ ಸಚಿವ ಕೋಟ ಆದೇಶಿಸಿದ್ದು, ಮುಂದಿನ ಕ್ರಮ ಜರುಗಿಸಲಾಗುವುದೆಂದು ಆಯುಕ್ತರ ಕಚೇರಿಯ ಮೂಲಗಳು ತಿಳಿಸಿವೆ.