Thursday, February 26, 2026
Google search engine
Home Blog Page 264

ಲಾಕ್ ಡೌನ್: ಸಂಘ ಸಂಸ್ಥೆಗಳಿಂದ ಜನರ ಸೇವೆ

ಪಾವಗಡ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೆ ಈಡಾಗಿದ್ದಾರೆ. ಕೊರೊನಾ ಆತಂಕದ ನಡುವೆಯೂ ಸಂಘ ಸಂಸ್ಥೆಗಳು ಮಾಸ್ಕ್, ಆಹಾರ, ಡೆಟಾಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿವೆ.

313 ಅಲ್ ಮದದ್ ಸಂಘದ ವತಿಯಿಂದ ಪದಾಧಿಕಾರಿಗಳು ಗ್ರಾಮಗಳಿಂದ ಆಸ್ಪತ್ರೆಗೆ ಬಂದವರಿಗೆ, ಬಡ ಜನತೆಗೆ ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆ ತುರ್ತು ಪರಿಸ್ಥಿತಿಯಲ್ಲಿ ಪಟ್ಟಣದ ಆಸ್ಪತ್ರೆಗಳಿಗೆ ಬರುವವರಿಗೆ ಊಟ ಸಿಗುತ್ತಿಲ್ಲ. ಹೀಗಾಗಿ ಉಪವಾಸ ಇರಬೇಕಿದೆ. ಆದರೆ ಸಂಘದ ಪದಾಧಿಕಾರಿಗಳು ನಿತ್ಯ ತಮ್ಮ ಪದಾಧಿಕಾರಿಗಳಿಂದ ಸಂಪನ್ಮೂಲ ಸಂಗ್ರಹಿಸಿ ಮಧ್ಯಾಹ್ನದ ವೇಳೆ ವಾಹನಗಳಲ್ಲಿ ಆಸ್ಪತ್ರೆಗಳು, ಬಸ್ ನಿಲ್ದಾಣ ಇತರೆಡೆಗೆ ಹೋಗಿ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.

ಬೇಕರಿ, ಹೋಟೆಲ್ ಗಳಿಲ್ಲದೆ ಹಸಿವಿನಿಂದ ಪರದಾಡುತ್ತಿರುವ ಜನತೆಗೆ ಸಂಘದ ವತಿಯಿಂದ ಯುವ ಜನತೆ ಆಹಾರ ವಿತರಿಸುತ್ತಿರುವ ಬಗ್ಗೆ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಂತರ ಆರೋಗ್ಯ ಕೇಂದ್ರ ಹಾಗೂ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಕಳೆದ ವಾರದಿಂದ ಹಮಾಲಿ, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಆಸ್ಪತ್ರೆ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ, ಪೊಲೀಸ್ ರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸಾಬೂನು, ಮಾಸ್ಕ್, ಟವೆಲ್ ವಿತರಿಸಲಾಗುತ್ತಿದೆ.

ಈ ಬಗ್ಗೆ ಸ್ವಾಮಿ ಜಪಾನಂದ ಜಿ ಮಾತನಾಡಿ, ಎಲ್ಲ ನೌಕರ ವರ್ಗ, ಬಡ ಜನತೆಗೆ ಸಾಬೂಬು, ಮಾಸ್ಕ್ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ, ಬಡ ಜನತೆಗೆ ಆಹಾರ ವಿತರಿಸುವ ಯೋಜನೆ ಆರಂಭಿಸುವ ಚಿಂತನೆ ಇದೆ ಎಂದರು.

ಭಾರತೀಯ ವೈದ್ಯಕೀಯ ಸಂಘ ದ ವತಿಯಿಂದ ತಾಲ್ಲೂಕಿನಾದ್ಯಂತ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಪ್ ಸೊಸೈಟಿ ಪದಾಧಿಕಾರಿಗಳು, ಸನ್ ರೈಸ್ ಆಸ್ಪತ್ರೆ ವೈದ್ಯರು ಸಾರ್ವಜನಿಕರಿಗೆ, ರೋಗಿಗಳಿಗೆ ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ.

ಕರೊನಾ ಲಾಕ್ ಡೌನ್: ಉಚಿತ ಊಟ ಬೇಕಿದ್ದವರು ಇಲ್ಲಿಗೆ ಕರೆ ಮಾಡಿ…

ಆರ್.ರಾಜೇಂದ್ರ ( ಸಂಗ್ರಹ ಚಿತ್ರ)

ತುಮಕೂರು: ಕೊರೊನಾ ಲಾಕ್ ಡೌನ್ ನಿಂದ‌‌‌ ಊಟ ಇಲ್ಲದೇ‌ ತೀರಾ ಕಷ್ಟಕ್ಕೆ ಸಿಲುಕಿರುವರಿಗೆ ಅವರಿದ್ದಲ್ಲಿಗೆ‌ ಹೋಗಿ ಊಟ ನೀಡುವ ಕೆಲಸಕ್ಕೆ ಆರ್.ರಾಜೇಂದ್ರ ಅಭಿಮಾನಿ ಬಳಗ ಮುಂದಾಗಿದೆ.

ಸಹಕಾರಿ‌ ಧುರೀಣರಾದ ಆರ್. ರಾಜೇಂದ್ರ ಅವರು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮಗ.

ದಾರಿ ಹೋಕರಿಗೆ ಊಟ ನೀಡಿದ ಆರ್.ಆರ್. ಅಭಿಮಾನಿ‌ ಬಳಗದ ಸದಸ್ಯ.

ದಿನಸಿ ಸಾಮಾಗ್ರಿಗಳೊಂದಿಗೆ ಮುಖಂಡ ರಾಜೇಶ್ ದೊಡ್ಡಮನೆ

ಕೊರೊನ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿ, ಸಂಪೂರ್ಣ ರೈಲು ಮತ್ತು ಸಾರಿಗೆ ಸಂಚಾರ ಬಂದ್ ಮಾಡಿದ ಕಾರಣ ನೂರಾರು ಮಂದಿ ತಮ್ಮ ಊರುಗಳಿಗೆ ತೆರಳು ತೊಂದರೆ ಆಗಿದೆ.. ಹೋಟೆಲ್ ಗಳು ಬಂದ್ ಆಗಿರುವ ಕಾರಣ ನೂರಾರು ಮಂದಿ ಹಸಿವಿನಿಂದ ಬಳಲುತ್ತಿರುವ ವಿಷಯ ತಿಳಿದ ಕೊಡಲೇ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು #ಆರ್_ರಾಜೇಂದ್ರರವರು ಕೊಡಲೇ ಅಕ್ಕಿ ದವಸ ಧಾನ್ಯ ನೀಡಿ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಬಡವರಿಗೆ ಉಚಿತ ಅಕ್ಕಿ

ಊಟ ಅವಶ್ಯಕತೆ ಇದ್ದವರು 9844679147 ಗೆ ಕರೆ ಮಾಡಿ..
ಹಾಗೆಯೇ ಮಾಸ್ಕ್ ಮತ್ತಿತರ ವಸ್ತುಗಳನ್ನು ನೀಡ ಬಯಸುವವರು ಕರೆ ಮಾಡಬಹುದು ಎಂದು ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

ಕೊರೊನಾ: ತುಮಕೂರಿನಲ್ಲಿ ಮೊದಲ‌ ಸಾವು

ತುಮಕೂರು: ಕೊರೊ‌ನಾ ಸೋಂಕಿನಿಂದ ಶಿರಾ ಮೂಲದ ವ್ಯಕ್ತಿಯೊಬ್ಬರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ತುಮಕೂರಿನಲ್ಲಿ ಮೊದಲ ಸಾವಾಗಿದೆ.

,ಸೋಂಕು ತಗುಲಿದ 3ನೇ ದಿನಕ್ಕೆ ಮೃತಪಟ್ಟಿದ್ದಾರೆ.

ಈತ ತುಮಕೂರಿನಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ 13 ಜನರ ಜೊತೆಗೆ ಪ್ರಯಾಣ ಮಾಡಿದ್ದರು. ದೆಹಲಿಯ ಜಾಮೀಯಾ ಮಸೀದಿಯಲ್ಲಿ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದರು. ಮಾರ್ಚ್ 11ರಂದು ದೆಹಲಿಯಿಂದ ಬೆಂಗಳೂರಿನ ಯಶವಂತಪುರಕ್ಕೆ ಬಂದಿದ್ದರು. ಮೃತ ವ್ಯಕ್ತಿ 33 ಮಂದಿಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೊರೊನಾ: ಸಚಿವರು, ಶಾಸಕರಿಗೊಂದಿಷ್ಟು ಪ್ರಶ್ನೆಗಳು…

0

ಕೆ.ಇ.ಸಿದ್ದಯ್ಯ, ಮಹೇಂದ್ರ ಕೃಷ್ಣಮೂರ್ತಿ


ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ. ಶಿರಾ ಮೂಲದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಬೇಕಾಗಿದೆ. ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕೆಂಬ ಒತ್ತಾಯ ಜನಸಾಮಾನ್ಯರ ನಡುವೆ ಕೇಳಿ ಬರುತ್ತಿದೆ.

ತುಮಕೂರಿನಲ್ಲಿ 200ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇಟ್ಟಿದ್ದರೂ ಸಚಿವರು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಕೇವಲ ಅಧಿಕಾರಿಗಳು ಮಾತ್ರ ಸಭೆ ನಡೆಸುತ್ತಿದ್ದಾರೆಯೇ ಹೊರತು ಸಚಿವರು, ಸಂಸದರು, ಆಯಾ ಶಾಸಕರು ಸಭೆ ನಡೆಸಿದ ಬಗ್ಗೆ ಇಲ್ಲಿಯವರೆಗೂ ಬಹಿರಂಗವಾಗಿ ಎಲ್ಲಿಯೂ ವರದಿಯಾಗಿಲ್ಲ.

ಸಭೆಗಳಿಗೆ ಹಾಜರಾಗಿ ಅಧಿಕಾರಿಗಳಲ್ಲಿ ಉತ್ಸಾಹ ಮೂಡಿಸುವ ಕೆಲಸವನ್ನು ಜನಪ್ರತನಿಧಿಗಳು ಮಾಡುತ್ತಿಲ್ಲ ಎಂಬ ಮಾತುಗಳು ಅಧಿಕಾರಿಗಳ ಮಟ್ಟದಲ್ಲೇ ಕೇಳಿ ಬರುತ್ತಿವೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಂದ 63 ವೆಂಟಿಲೇಟರ್ ಗಳಿವೆ. ಅಗತ್ಯ ಬಿದ್ದರೆ ಈ ವೆಂಟಿಲೇಟರ್ ಬಳಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕರೊನಾ ಪೀಡಿತರಾಗಿಯೇ ಪ್ರತ್ಯೇಕವಾಗಿ ಎಷ್ಟು ವೆಂಟಿಲೇಟರ್, ICU ಲಭ್ಯವಿವೆ ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ.


ಈವರೆಗೂ ಜಿಲ್ಲೆಯಲ್ಲಿ ಸೋಂಕಿತರು ಕಂಡುಬಂದಿಲ್ಲ ಎಂದೇ ಹೇಳುತ್ತಿದ್ದ ಆರೋಗ್ಯ ಇಲಾಖೆ ಈಗ ಸರಿಯಾದ ಉತ್ತರ ಜನರಿಗೆ ತಿಳಿಸಬೇಕಾಗಿದೆ. ಒಂದು ವೇಳೆ ಹೆಚ್ಚು ಜನರಿಗೆ ಕಂಡು ಬಂದರೆ ಇಲ್ಲಿಯೇ ಚಿಕಿತ್ಸೆ ನೀಡುವಷ್ಟು ನಮ್ಮ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಸನ್ನದ್ಧವಾಗಿವೆಯೇ? ಇಲ್ಲವೇ, ಬೆಂಗಳೂರಿಗೆ ಕಳುಹಿಸಲಾಗುತ್ತದೆಯೇ ಎಂಬ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾಧಿಕಾರಿ ತುಟಿ ಬಿಚ್ಚಿಲ್ಲ. ಇಲ್ಲ, ಈ ಪ್ರಶ್ನೆಯೇ ಅವರ ಮುಂದೆ ಬಂದಿಲ್ಲವೇನೋ? ಈ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕಾಗಿದೆ.


ಮೊದಲ ಒಂದೆರಡು ದಿನಗಳನ್ನು ಬಿಟ್ಟರೆ ಜಿಲ್ಲಾಡಳಿತ ಒಂದು ರೀತಿಯಲ್ಲಿ ದಕ್ಷತೆಯಿಂದಲೇ ಕೆಲಸ ನಿರ್ವಹಿಸುತ್ತಿದೆ. ಸಾಮಾಜಿಕ ಅಂತರ ಕಾದು ಕೊಳ್ಳುವ ನಿಟ್ಟಿನಲ್ಲೂ ಸಮಾಧಾನದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಆದರೆ, ಇನ್ನೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂಬ ಮಾತುಗಳು ತುಮಕೂರು ನಗರ ಹೊರತುಪಡಿಸಿ ಬೇರೆಡೆ ಕೇಳಿಬರುತ್ತಿವೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಆರೋಗ್ಯ ಮತ್ತು ಖಾಸಗಿ ನರ್ಸಿಂಗ್ ಹೋಂಗಳ ವೈದ್ಯರೊಂದಿಗೆ ಮಾತುಕತೆ ನಡೆಸಿ ಅದನ್ನು ಸಾರ್ವಜನಿಕಗೊಳಿಸಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಅಯಾ ಶಾಸಕರು ಈ ಕೆಲಸವನ್ನು ಅಯಾ ಕ್ಷೇತ್ರಗಳಲ್ಲಿ ಮಾಡಬೇಕಾಗಿದೆ. ಉಸ್ತುವಾರಿ ಸಚಿವರನ್ನು ಕಂಡು ಆಯಾ ಕ್ಷೇತ್ರಗಳ ಸ್ಥಿತಿ ಗತಿ, ಸ್ಥಳೀಯ ಆರೋಗ್ಯ ಕ್ಷೇತ್ರ, ಆಸ್ಪತ್ರೆಗಳನ್ನು ಬಲಪಡಿಸುವ ಸಂಬಂಧ ಕೆಲಸ ಮಾಡಬೇಕಾಗಿದೆ.


ಜನರಲ್ಲಿ ಧೈರ್ಯ, ಸಾಮಾಜಿಕ ಅಂತರದ ತಿಳುವಳಿಕೆ, ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳಬೇಕಾದ ಎಚ್ಚರಿಕೆ ಬಗ್ಗೆ ತಿಳಿ ಹೇಳುವುದು, ಮನವಿ ಮಾಡುವುದು ಪ್ರಧಾನಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಅವರುಗಳ ಕೆಲಸವಷ್ಟೇ ಅಲ್ಲ ಎಂಬುದನ್ನು ಎಲ್ಲ ಜನಪ್ರತಿನಿಧಿಗಳು ಅರಿತುಕೊಳ್ಳಬೇಕು. ಶಾಸಕರುಗಳು ತೋರುವ, ಮಾಡುವ ಕೆಲಸಗಳು ಈ ಸಂದಿಗ್ದ ಸ್ಥಿತಿಯಲ್ಲಿ ಪ್ರಮುಖವಾಗಿದೆ. ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಸಚಿವರು ಜನರ ಗಮನಕ್ಕೆ ಬರುವಂತೆ ಕೆಲಸ ಮಾಡಬೇಕಾಗಿದೆ.


ಜಿಲ್ಲಾಸ್ಪತ್ರೆಯಲ್ಲಿ ಇರುವ ಎರಡು ವೆಂಟಿಲೇಟರ್ ಗಳು ಬೇರೆ ರೋಗಿಗಳನ್ನು ಇಡಲು ಅವಕಾಶವಿದೆ. ಬೇರೆ ಆಸ್ಪತ್ರೆಗಳಲ್ಲೂ ಸಾಮಾನ್ಯ ರೋಗಿಗಳು ಬಂದರೆ ಮಾತ್ರ ಇರಿಸಲು ವೆಂಟಿಲೇಟರ್ ಗಳು ಇವೆ. ವಿಶೇಷವಾಗಿ ಕೊರೊನ ರೋಗಿಗಳನ್ನು ವೆಂಟಿಲೇಟರ್ ಗಳ ಕೊರತೆ ಇದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳ ಸಭೆ ಕರೆದು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿ ಕ್ರಮಕೈಗೊಂಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿರುವ ಎಲ್ಲಾ 63 ವೆಂಟಿಲೇಟರ್ ಗಳು 61 ಕೂಡ ಖಾಸಗಿ ನರ್ಸಿಂಗ್ ಹೋಂಗಳಲ್ಲಿಯೇ ಇವೆ. ತುರ್ತು ಸಂದರ್ಭದಲ್ಲಿ ಅವಗಳನ್ನು ರೋಗಿಗಳಿಗಾಗಿ ಬಳಸಿಕೊಳ್ಳಲು ಮುಂದಾಗಬೇಕು. ಇದುವೆರೆಗೆ ಸಿದ್ದಗಂಗಾ ಆಸ್ಪತ್ರೆ ಮತ್ತು ಸಿದ್ದಾರ್ಥ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲವು ಹಾಸಿಗೆಗಳನ್ನು ಮಾತ್ರ ಕೊರೊನ ಸೋಂಕು ಪೀಡಿತರನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಸರಿಯಾದ ಕ್ರಮ. ಆದರೆ ವೆಂಟಿಲೇಟರ್ ಗಳ ಕೊರತೆ ಇದ್ದು, ಹೆಚ್ಚು ವೆಂಟಿಲೇಟರ್ ಗಳನ್ನು ಜಿಲ್ಲಾಸ್ಪತ್ರೆಗೆ ತರಿಸುವ ಸಂಬಂಧ ಚರ್ಚೆಗಳಾಗಬೇಕಾಗಿದೆ.

ಖಾಸಗಿ ನರ್ಸಿಂಗ್ ಹೋಂನಲ್ಲಿ ಕೊರೊನ ಸೋಂಕಿತರನ್ನು ಇಟ್ಟುಕೊಳ್ಳುವುದು ಅಪರೂಪ. ಯಾಕೆಂದರೆ ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡು ನರ್ಸಿಂಗ್ ಹೋಂಗಳು ಅಷ್ಟು ಸುಲಭವಾಗಿ ವೆಂಟಿಲೇಟರ್ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಜೊತೆಗೆ ನರ್ಸಿಂಗ್ ಹೋಂಗಳಲ್ಲಿ ಒಂದು ದಿನ ವೆಂಟಿಲೇಟರ್ ನಲ್ಲಿಡಲು 10 ರಿಂದ 20 ಸಾವಿರ ರೂಪಾಯಿ ನಿಗದಿ ಮಾಡುತ್ತಾರೆ. ಈ ಬಗ್ಗೆಯೂ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕಾಗಿದೆ.

ತುಮಕೂರು ಜಿಲ್ಲೆಯ ಮೂಲಕ 23 ಜಿಲ್ಲೆಗಳಿಗೆ ಜನರು ಪ್ರಯಾಣಿಸುತ್ತಾರೆ. ಇದು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಮಾತೂ ಇದೆ.. ಜೊತೆಗೆ ತುಮಕೂರು ನಗರದ ಬಹುತೇಕರು ಬೆಂಗಳೂರು ನಗರವನ್ನು ಕೆಲಸಕ್ಕಾಗಿ ಆಶ್ರಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಂಡು ಬಂದಿದ್ದು, ಅಲ್ಲಿನ ಸಂಪರ್ಕ ಹೊಂದಿರುವ ತುಮಕೂರು ನಗರದ ಜನತೆಗೂ ಕೊರೊನ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಿದ್ದ ಜನರು ತುಮಕೂರಿಗೆ ಆಗಮಿಸಿದ್ದಾರೆ ಮತ್ತು ವಿದೇಶಗಳಿಂದಲೂ ತುಮಕೂರಿಗೆ ಬಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಎಲ್ಲ ಶಾಸಕರು ಅಧಿಕಾರಿಗಳ ಸಭೆ ಕರೆದು ಸಮನ್ವಯತೆ ಸಾಧಿಸುವಂತಹ ಕೆಲಸ ಮಾಡಬೇಕಿತ್ತು. ಅಂತಹ ಕೆಲಸ ಇದುವರೆಗೂ ನಡೆದಿಲ್ಲ.

ಎಲ್ಲವನ್ನೂ ಅಧಿಕಾರಿಗಳೇ ನಿಭಾಯಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಸ್ಪತ್ರೆಗೆ 10 ಮಂದಿ ಶಂಕಿತ ಕೊರೊನ ವೈರಸ್ ಸೋಂಕಿತರು ದಾಖಲಾಗಿದ್ದು ಅವರ ರಕ್ತ ಮತ್ತು ಕಫಾ ಮಾಧರಿಗಳನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಇನ್ನು ವರದಿ ಬಂದಿಲ್ಲ ಎನ್ನುತ್ತಿದ್ದಾರೆ.


ಜಿಲ್ಲೆಯ ಸರ್ಕಾರಿ, ಖಾಸಗಿ ಆರೋಗ್ಯ ಜಾಲವನ್ನು ಗಟ್ಟಿಯಾಗಿ ಕಟ್ಟುವ ಬಗ್ಗೆ, ಯಾವುದೇ ಸ್ಥಿತಿಯಲ್ಲಿ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ನೀಡುವ ಬಲವನ್ನು ಗಳಿಸಿಕೊಳ್ಳುವ ಬಗ್ಗೆ ಕೆಲಸ ಮಾಡಲು ಎಲ್ಲರೂ ಪಣ ತೊಡಬೇಕಾಗಿದೆ.

ನಾಳೆ ಬೆಳಿಗ್ಗೆ ಯಿಂದ ತುಮಕೂರು ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು

Tumkuru: ಕೊರೊನ ನಿಗ್ರಹಿಸಲು ಜಿಲ್ಲಾದ್ಯಂತ ಲಾಕ್‍ಡೌನ್ ಹಾಗೂ ಕರ್ಪ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಖಾಸುಮ್ಮನೆ ತಿರುಗಾಡುವವರ ಚಲನ-ವಲನವನ್ನು ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೊನ ವಂಶಿಕೃಷ್ಣ ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಕರ್ಪ್ಯೂ ಜಾರಿಯಲ್ಲಿರುವುದರಿಂದ ಸರ್ಕಾರದ ಆದೇಶದನ್ವಯ ನಾಗರಿಕರು ಮನೆಯಿಂದ ಹೊರಗಡೆ ಅನಾವಶ್ಯಕವಾಗಿ ತಿರುಗಾಡಬಾರದು. ಅನಗತ್ಯವಾಗಿ ಹೊರಗಡೆ ಓಡಾಡುವರನ್ನು ತಡೆಯುವ/ಪ್ರಶ್ನಿಸುವ/ವಾಪಸ್ ಕಳುಹಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇರುತ್ತದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪಾಲಿಸದ ವ್ಯಕ್ತಿಗಳನ್ನು ಕಾನೂನಿನಡಿ ಬಂಧಿಸಬಹುದಾಗಿದೆ.

ದ್ರೋಣ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ದೃಶ್ಯಗಳನ್ನು ಕಂಟ್ರೋಲ್ ರೂಂನಲ್ಲಿ ಕುಳಿತು ಪರಿಶೀಲಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆದೇಶ ಪಾಲಿಸದ ವ್ಯಕ್ತಿಗಳ ವಿರುದ್ಧ ಸೆಕ್ಷನ್ 188, 270, 269 ಹಾಗೂ 271 ಐಪಿಸಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾರಗೃಹವಾಸ ವಿಧಿಸುವ ಅವಕಾಶವಿದೆ. ನಾಗರಿಕರು ಮನೆಯಲ್ಲಿಯೇ ಇರುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ತಿಳಿಹೇಳು ನಿನ್ನ ತಮ್ಮರಿಗೆ ಬಾಂಬ್ ಗಳು ಸಾಕು…

0

ಕೆ.ಎಸ್.ಲಕ್ಷ್ಮೀ


ಹಾಹಾಕಾರ ಎಲ್ಲಿ
ದೊಡ್ಡಣ್ಣನ ಅಮೇರಿಕಾದಲ್ಲಿ
ಯಾಕಾಗಿ ?
ಯಾಕಾಗಿ ?

ವೆಂಟಿಲೇಟರ್ ಗಳಿಗಾಗಿ
ಡಾಕ್ಟರ್ ಗಳಿಗಾಗಿ
ಔಷದಿಗಳಿಗಾಗಿ

ವಿಶ್ವವನ್ನೆಲ್ಲಾ ನಾಶಮಾಡುವ ಅಣುಬಾಂಬುಗಳು ಇವೆ
ದೊಡ್ಡಣ್ಣನಲ್ಲಿ.
ಯಾಕಾಗಿ ?
ಯಾಕಾಗಿ ?
ಜೀವ ಉಳಿಸುವ ಜೀವರಕ್ಷಗಳೇ ಇಲ್ಲದ ನಾಡಲ್ಲಿ

ನಿನ್ನ ಜನರನ್ನುಳಿಸಲೇ ನಿನ್ನ ಬಳಿ ವೈದ್ಯರಿಲ್ಲವಲ್ಲಾ
ಎಂಥಾ ಅಮನಾವೀಯ
ಹಾದಿಯಲ್ಲಿ ದೇಶಕಟ್ಟಿದೆ ನೀನು
ನಿನ್ನ ನಾಡಿಗೆ ನೀನೆ ವಿನಾಶಕಾರಿಯಾದೆಯಲ್ಲಾ
ವಿನಾಶಕಾರಿಯಾದೆಯಲ್ಲಾ.

ಅಗೋ ನೋಡು ಕ್ಯೂಬಾದೆಡೆ
ಜಗದ ನೋವಿಗೆ ಮಿಡಿವ ನಾಡಿನಿಂದ ಇಂದು ಇಟಲಿಯಡೆಗೆ
ವೈದ್ಯರ ನಡಿಗೆ

ಏನಿದ್ದರೇನು ದೊಡ್ಡಣ್ಣ
ಜಗವ ಬೆಸೆದಿರುವ
ಪ್ರೀತಿ, ಮಾನವೀಯ ಅಂತಃಕರಣದ ಮುಂದೆ
ನೀನು ದೊಡ್ಡಣ್ಣನು ಆಗಲಾರೆ
ಚಿಕ್ಕಣ್ಣನೂ ಆಗಲಾರೆ
ಬಂಧುವಂತೂ
ಆಗಲಾರೆ,ಆಗಲಾರೆ

ತಿಳಿಹೇಳು ನಿನ್ನ ತಮ್ಮರಿಗೆ
ಬಾಂಬ್ ಗಳು ಸಾಕು
ಬದುಕನ್ನುಳಿಸುವ ಜೀವರಕ್ಷಗಳು ಆದ್ಯತೆಯಾಗಬೇಕೆಂದು
ಹಸಿವಿನ ಸಂಕಟಗಳು
ನಿವಾರಣೆಯಾಗಲೇಬೇಕೆಂದು.

ಪ್ರೀತಿಯಿಂದ ನಾಡ ಕಟ್ಟೋಣವೆಂದು
ಬೆವರಿನ ಪಾಲ ಜನತೆಗೆ ಹಂಚೋಣವೆಂದು.


ಕವಯತ್ರಿ ಮಹಿಳಾ ಹೋರಾಟಗಾರರು ಹಾಗೂ ಬೆಂಗಳೂರು ವಿ.ವಿ. ಮಾಜಿ ಸೆನೆಟ್ ಸದಸ್ಯೆ

ಪ್ರಧಾನಿ ಮಾತಿಗೂ ಕಿವಿಗೊಡದ ಜನರು; ಇಲ್ಲಿಗೆ ಮುಗಿಬಿದ್ದದ್ದು ಏಕೆ…

Publicstory. in


Tumkuru: ಕರೊ‌ನಾ ವೈರಸ್ ದಿನದಿಂದ ದಿ‌ನ ತನ್ನ ಕಬಂಧ ಬಾಹು ಚಾಚುತ್ತಲೇ ಹೋದರು, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ನಟರು, ವೈದ್ಯರುಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೈಮುಗಿದು ಬೇಡುತ್ತಿದ್ದರೂ ಜಿಲ್ಲೆಯ ಹಳ್ಳಿ, ಪಟ್ಟಣಗಳಲ್ಲಿ ಜನರು ಕ್ಯಾರೆ ಎನ್ನುತ್ತಿಲ್ಲ.

ಜಿಲ್ಲೆಯ ಹಲವು ಗ್ರಾಮಗಳಲ್ಲಿ‌ನ ತೋಟಗಳು ವರ್ಷ ತೊಡಕಿನ ಹಬ್ಬದೂಟಕ್ಕಾಗಿ ತಾತ್ಕಾಲಿಕ ವಧಾಗಾರಗಳಾಗಿದ್ದವು. ಮಾಂಸಂಗಡಿಗಳು ಬಾಗಿಲು ಮುಚ್ಚಿಸಿದ್ದ ಕಾರಣ ಹಳ್ಳಿಗಳ ತೋಟಗಳಲ್ಲಿ ಮೇಕೆ, ಕುರಿಗಳನ್ನು ಕುಯ್ದು ಮಾರಾಟ ಮಾಡುತ್ತಿದ್ದದ್ದು ಬೆಳಿಗ್ಗೆ ಸಾಮಾನ್ಯವಾಗಿತ್ತು.

ಮಾಂಸ ಖರೀದಿಸಲು ಜಬಜಂಗುಲಿಯೇ ಕಂಡು ಬರುತ್ತಿತ್ತು. ಸಾಮಾಜಿಕ‌ ಅಂತರವೇನು ಎಂಬುದನ್ನೇ ಗೊತ್ತಿಲ್ಲದ ಅವಿವೇಕಿಗಳಂತೆ, ಎಂದೂ ಬಾಡನ್ನೇ ನೋಡದ ಅಸಂಸ್ಕೃತರಂತೆ ಕೆಲವು ಮಂದಿ ನೂಕು ನುಗ್ಗಲಿನ ಖರೀದಿಯಲ್ಲಿ ತೊಡಗಿದ್ದು ಹಳ್ಳಿಯೊಂದರಲ್ಲಿ ಕಂಡು ಬಂತು.

ಇದೇ ಹಳ್ಳಿಗಳಲ್ಲೇ ಕೆಲವರು ಸಾಮಾಜಿಕ ಅಂತರ ಕಾದುಕೊಂಡವರು ಇದ್ದಾರೆ. ಕೆಲವೇ ಮಂದಿ ಸಾಮಾಜಿಕ ಅಂತರ ಕಾಪಾಡಿಕೊಂಡು ಉಳಿದವರು ಕಾಪಾಡದಿದ್ದರೆ ಏನು ಪ್ರಯೋಜನ. ಪೊಲೀಸರು ಕಣ್ಗಾವಲು ವ್ಯವಸ್ಥೆ ಮಾಡುವುದೇ ಒಳ್ಳೆಯದು ಎಂದು ಒಂದಿಬ್ಬರು ಹೇಳಿದರು.

ನಗರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೆಚ್ಚು ಗಮನ ಕೊಡುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಳ್ಳಿಗಳಲ್ಲೂ ಜಾಗೃತಿ ಮೂಡಿಸುವ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಇದಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯರನ್ನು ಬಳಸಿಕೊಂಡು ಅವರ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಬೇಕಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಹೇಳಿದರು.

ಆ ಕಾಲ್೯ಗೆ ಎಷ್ಟು ಮಾಕ್ಸ್೯ ನೀಡೋಣ..?

0

K.N. ಉಮೇಶ್


ಆ ಪುಟ್ಟ
ದೇಶ ಕ್ಯೂಬಾ

ಈ ಪುಟ್ಟ
ರಾಜ್ಯ ಕೇರಳ

ಅಲ್ಲಿನ ಫಿಡೆಲ್
ಇಲ್ಲಿನ ಪಿಣರಾಯಿ

ಆತ ದೇವರ ಪ್ರತಿನಿಧಿಯ ನಾಡಿಗೆ
ವೈದ್ಯ ನಾರಾಯಣನ ಕಳುಹಿಸಿದ

ಈತ ದೇವರ ನಾಡಿನ
ಮನೆ ಮನೆಗೂ ಅನ್ನಬ್ರಹ್ಮನ ಕಳುಹಿಸಿದ

ಇವರಿಬ್ಬರ ಹಿಂದಿನ ಅಚಲ ಶಕ್ತಿಯೇ
ಲಂಡನ್ನಿನ ಬೀದಿಯಲ್ಲಿ
ಆ ಚಳಿಯಲಿ ಆ ಅಸಿವಲ್ಲಿ
ತನ್ನ ಮುಂದೆ ತನ್ನ ಮಗು
ಸಾಯುವುದನ್ನು ಕಂಡ
ಆ ಗಡ್ಡದಾರಿ ಮಾಕ್ಸ್೯…

ಪರೀಕ್ಷೆ ಬರೆದು
ತಮ್ಮ ಮಾಕ್ಸ್೯ ನೋಡಬೇಕಿದ್ದ
ಮಕ್ಕಳು ಕೊರೋನದಿಂದ
ಪರೀಕ್ಷೇನೆ ಬರೆಯದೇ
ಪಾಸಾಗಿ ಮನೆಯಲ್ಲಿರುವಾಗ

ಕೊರೋನದಿಂದ ಬಾದಿತ ಜನಕ್ಕೆ
ದೇವರ ಪ್ರತಿನಿಧಿಯ ನಾಡಿಗೆ
ದೇವರ ನಾಡಿಗೆ
ವಿಶ್ವಾಸದ ಸೆಲೆಯಾಗಿರುವ
ಫಿಡೆಲ್ ಪಿಣರಾಯಿ
ಹಿಂದಿನ ಆ ಕಾಲ್೯ಗೆ
ಎಷ್ಟು ಮಾಕ್ಸ್೯ ನೀಡೋಣ ಎಷ್ಟು ಮಾಕ್ಸ್೯ ನೀಡೋಣ..?

ಕೊರೋನಾ: ಹೂವು ಬೆಳೆಗಾರರು ತತ್ತರ…ಕೇಳುವವರಿಲ್ಲ ಹೂವು..

Publicstory. in


Tumkuru: ಕೊರೊನಾ ನಗರ ಜನರು, ದಿನಗೂಲಿ ನೌಕರರ ಬದುಕನ್ನು ಮಾತ್ರವೇ ಕಸಿದಿಲ್ಲ.ಜಿಲ್ಲೆಯ ಹೂವು ಬೆಳೆಗಾರರನ್ನು ಬೀದಿಗೆ ತಂದು ನಿಲ್ಲಿಸಿದೆ.

ಸರ್ಕಾರ, ಜಿಲ್ಲಾಡಳಿತ ಕೂಡಲೇ ಇವರ ಸಮಸ್ಯೆ ಬಗೆಹರಿಸಲು ಗಮನ ಹರಿಸಬೇಕಾಗಿದೆ.

ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಹೂವಿನ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ಧು ಕೊರೋನಾ ಹರಡದಂತೆ ತಡೆಯಲು ಸರ್ಕಾರಗಳು ಬಿಗಿಯಾದ ಕ್ರಮ ತೆಗೆದುಕೊಂಡಿರುವುದರಿಂದ ಸಾರಿಗೆ ಸೌಲಭ್ಯದ ಇಲ್ಲದೇ ಬೆಳೆಗಾರರು ತೀವ್ರ ನಷ್ಠ ಅನುಭವಿಸುತ್ತಿದ್ದಾರೆ.

ಹೂವನ್ನು ಕಿತ್ತು ಏನು ಮಾಡುವುದು ಎನ್ನುವ ಗೊಂದಲ ರೈತರಲ್ಲಿ ಮೂಡಿದೆ.
ಸೋಮವಾರ ತುಮಕೂರು ಮಾರುಕಟ್ಟೆ ಯಲ್ಲಿ ಒಂದು ಕೈ ಹೂವಿನ ಮಾಲೆ 1600-2000 ದವರೆಗೂ ಮಾರಾಟವಾಗಿತ್ತು. ಅನುಭವಿ ಬೆಳೆಗಾರ ರೈತರ ಅಭಿಪ್ರಾಯ ದಂತೆ ಮಂಗಳವಾರ 3000 ರೂ ಮುಟ್ಟುತ್ತಿತ್ತು. ಅದರೆ ಕೊರೋನಾ ನಮ್ಮಗಳ ಅಸೆಗೆ ಮಣ್ಣು ಎರಚಿತ್ತು.

ಮಂಗಳವಾರ ತುಮಕೂರು ಮಾರುಕಟ್ಟೆ ಗೆ ಹೂವು ತೆಗೆದುಕೊಂಡು ಹೋದಾಗ ಬಂದ್ ಅಗಿತ್ತು.
ಅದನ್ನು ವಾಪಸು ತಂದು ತೋವಿನಕೆರೆ ಬಸ್ ನಿಲ್ದಾಣದಲ್ಲಿ ಒಂದು ಮಾರ್ ಗೆ 25 ರೂ ನಂತೆ ಮಾರಾಟ ಮಾಡಿದೆವು.
ಬುಧವಾರ ತೋವಿನಕೆರೆ ಬಸ್ ನಿಲ್ದಾಣದ ಲ್ಲಿ ನೀನೇ ಅಳತೆ ಮಾಡಿಕೊಂಡು ನೀನೆ ಹಣ ಕೊಡು ಎನ್ನುವಂತೆ ಹೂವಿನ ರಾಶಿರಾಶಿಯೇ ಕಂಡುಬಂತು.

ಕೊರೊನಾ: ನೀವು ಓದಲೇ ಬೇಕಾದ ಒಂದಿಷ್ಟು ಸುದ್ದಿಗಳು

Publicstory. in


ಮಂಗಳೂರು ನಗರದಲ್ಲಿ ಜನರಿಂದ ದಿನವಸ್ತುಗಳ ಖರೀದಿ.
ಮಂಗಳೂರಲ್ಲಿ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಖರೀದಿಗೆ ಅವಕಾಶ.
12 ಗಂಟೆಯವರೆಗೆ ಅವಕಾಶ ಇದೆ ಎಂದಿದ್ದ ಕಮಿಷನರ್
ಲಾಠಿ ಹಿಡಿದು ಅಂಗಡಿ ಬಂದ್ ಮಾಡಿ ಎನ್ನುತ್ತಿರುವ ಅಧಿಕಾರಿಗಳು.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ಘಟನೆ.
ಮಂಗಳೂರು ಪಾಲಿಕೆ ಸಿಬ್ಬಂದಿ& ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ
ಅಂಗಡಿಗಳಲ್ಲಿ ಜನರ ರಶ್ ಕಂಡು ಬಂದ್ ಮಾಡಿಸಿದ ಅಧಿಕಾರಿಗಳು
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
12 ಗಂಟೆಯವರೆಗೆ ಅವಕಾಶ ಇದ್ದರೂ ಈಗಲೇ ಬಂದ್ ಮಾಡಿಸ್ತಿದ್ದಾರೆ
ನಾವು ತಿನ್ನಲು ಏನು ಮಾಡಬೇಕು..?
ಖರೀದಿಗೆ ಬಂದು ಗೊಂದಲಕ್ಕೀಡಾದ ಸಾರ್ವಜನಿಕರು.
ಮನೆಯಲ್ಲಿರುವವರು ಏನು ತಿನ್ನಬೇಕು..?
ಅಳಲು ತೋಡಿಕೊಂಡ ಸಾರ್ವಜನಿಕರು.

ಲಾಕ್ ಡೌನ್

ರಾಜ್ಯ ಲಾಕ್ ಡೌನ್ ಎರಡನೇ ದಿನ
ಎರಡನೇ ದಿನವೂ ಕುಂದಾಪುರ ಬಂದ್
ಮೆಡಿಕಲ್‍ಗಳಲ್ಲಿ ಸಾಲುನಿಂತ ಜನರು
ಅಗತ್ಯ ವಸ್ತುಗಳನ್ನು ಖರೀದಿಸಲು ವಿನಾಯಿತಿ.
——————–

ಕೊರೊನಾ ರೋಗಕ್ಕೆ ಚಹಾ ಮದ್ದು ವೀಡಿಯೋ ವೈರಲ್ ವಿಚಾರ

ಇದೀಗ ವೈರಲ್ ಮಾಡಿದ ಯುವಕನಿಂದ ಕ್ಷಮೆ ಯಾಚನೆ.
ಕಾಪು ಮಾರಿಗುಡಿಗೆ ತೆರಳಿ ಕ್ಷಮಾಪಣೆ ಕೇಳಿದ ಯುವಕ.
ಯುವಕ ಕ್ಷಮಾಪಣೆ ಕೇಳಿದ ವೀಡಿಯೋ ಕೂಡ ವೈರಲ್.
ಕಟೀಲು ಕಿನ್ನಿಗೋಳಿ ಮೂಲದ ಯುವಕನಿಂದ ಕೃತ್ಯ
ತನ್ನ ಕೃತ್ಯಕ್ಕೆ ವೀಡಿಯೋ ಮೂಲಕ ಕ್ಷಮಾಯಾಚನೆ ಮಾಡಿದ ಯುವಕ.
————————

ಹೆಜಮಾಡಿಯಲ್ಲಿ ತೀವ್ರ ತಪಾಸಣೆ

ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ
ಸಣ್ಣ ಪುಟ್ಟ ಕಾರಣ ಹೇಳಿ ಜನ ತಿರುಗಾಟ ನಡೆಸುತ್ತಿದ್ದಾರೆ.
ಬಿಸಿಲಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಜನಗಳ ಮನಸ್ಥಿತಿ ಬದಲಾಗದ ಹೊರತು ಸಮಸ್ಯೆ ನೀಗಿಸಲು ಅಸಾಧ್ಯ.
ಕರ್ತವ್ಯ ನಿರತ ವೈದ್ಯಕೀಯ ಅಧಿಕಾರಿಗಳ ಅಳಲು.
——————————

ಲಾಠಿ ರುಚಿ

ಸುಮ್ಮನೆ ರಸ್ತೆಗಿಳಿದವರಿಗೆ ಖಾಕಿ ಲಾಠಿ ರುಚಿ
ಕುಂದಾಪುರದಲ್ಲಿ ಸ್ವತಃ ಫೀಲ್ಡಿಗಿಳಿದ್ರು ಎಎಸ್ಪಿ
ಮೊದಲ ದಿನ ಎಚ್ಚರಿಕೆ, ಎರಡನೇ ದಿನ ಲಾಠಿ ಪ್ರಯೋಗ.
ಮಾತು ಕೇಳದವರಿಗೆ ಲಾಠಿ ಹಿಡಿದು ನಿಂತ ಪೆÇಲೀಸರ ತಂಡ
ಇನ್ನು ಮುಂದೆ ಸುಖಾಸುಮ್ಮನೆ ರಸ್ತೆಗಿಳಿದರೆ ದಂಡಂ ದಶಗುಣಂ.
———————————–

ಕೊರೊನಾ ಆತಂಕಕ್ಕೆ ಕರಾವಳಿಯಲ್ಲಿ ವ್ಯಕ್ತಿ ಬಲಿ

ಕೊರೋನಾ ಇದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ.
ಗೋಪಾಲಕೃಷ್ಣ ಮಡಿವಾಳ (56) ನೇಣಿಗೆ ಶರಣು
ಮನೆಯ ಹಿಂಭಾಗ ನೇಣು ಹಾಕಿಕೊಂಡ ವ್ಯಕ್ತಿ
ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ ಘಟನೆ.
ನರ್ನಾಡು ನಿವಾಸಿಯಾಗಿರುವ ಗೋಪಾಲಕೃಷ್ಣ
ಮೃತದೇಹ ಮಣಿಪಾಲ ಕೆಎಂಸಿಗೆ ರವಾನೆ.
ಕೆಎಸ್‍ಆರ್‍ಟಿಸಿ ಬಸ್‍ನ ಟ್ರೈನರ್ ಆಗಿರುವ ಗೋಪಾಲಕೃಷ್ಣ.
ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದ ವ್ಯಕ್ತಿ.
ಪೋಲಿಸರಿಗೆ ಕುಟುಂಬಸ್ಥರು ಮಾಹಿತಿ
ಜ್ವರ, ಶೀತದ ಲಕ್ಷಣ ಇರಲಿಲ್ಲ ಎಂದು ಹೇಳಿರುವ ಕುಟುಂಬ.
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು.
—————————-

ನಾಳೆಯಿಂದ ಮಂಗಳೂರಿನಲ್ಲಿ ಎಲ್ಲವೂ ಸಂಪೂರ್ಣ ಬಂದ್

ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ
ಇವತ್ತು ಅಗತ್ಯ ವಸ್ತು ಖರೀದಿಗೆ ಸಮಯ ಕೊಟ್ಟಿದ್ದಾರೆ,
ಆದ್ರೆ ನಾಳೆಯಿಂದ ಅದೂ ಇಲ್ಲ
ಈ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತಿದ್ದೇವೆ.
ಜನರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಾವೇ ಮನೆಗೆ ತಲುಪಿಸುತ್ತೇವೆ.
ಸರ್ಕಾರದ ಕಡೆಯಿಂದ ಹೇಗೆ ತಲುಪಿಸೋದು,
ಅಪಾರ್ಟ್‍ಮೆಂಟ್‍ಗಳಿಗೆ ಹೇಗೆ ತಲುಪಿಸೋದು ಅಂತ ಮಾತುಕತೆ ನಡೆಯುತ್ತಿದೆ
ಕೇರಳ ಭಾಗದಿಂದ ಮಂಗಳೂರಿಗೆ ಅಂಬ್ಯುಲೆನ್ಸ್ ಬರೋ ವಿಚಾರ.
ನಿನ್ನೆ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ.
ಆದ್ರೆ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ.
ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಕಾಗಲ್ಲ.
ಹೀಗಾಗಿ ಹೊರಗಿನ ಯಾವುದೇ ವಾಹನ,
ಅಂಬ್ಯುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ.
ಎಲ್ಲಾ ಅಂಬ್ಯುಲೆನ್ಸ್ ಗಳನ್ನ ತಲಪಾಡಿ ಗಡಿಯಲ್ಲಿ ನಿರ್ಭಂಧಿಸಲಾಗುತ್ತಿದೆ.
ಎಲ್ಲಾ ವಾಹನಗಳನ್ನು ಗಡಿಯಲ್ಲಿ ಬಂದ್ ಮಾಡಲಾಗಿದೆ.
—————————-

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಪತ್ತೆ

ಮಾ.18ರಂದು ದುಬೈನಿಂದ ಬಂದಿದ್ದ ವ್ಯಕ್ತಿ
34 ವರ್ಷದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿತ್ತು
ಮಾ.23ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು
ಪ್ರಾಥಮಿಕ ವರದಿಯಲ್ಲಿ ಕೊರೊನಾ ಪಾಸಿಟೀವ್ ಪತ್ತೆ.
ಉಡುಪಿ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಮಾಹಿತಿ.
—————-

ಅಗತ್ಯ ಬಿದ್ದರೆ ಎಸಿಯೂ ಲಾಠಿ ಹಿಡಿತಾರೆ

ಮಾತು ಕೇಳದ ವಾಹನ ಸವಾರರಿಗೆ ಎಸಿ ಖಡಕ್ ಎಚ್ಚರಿಕೆ.
ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ
ಗೊಂದಲ ಬೇಡ, ಸರ್ಕಾರದ ಆದೇಶ ಪಾಲಿಸಿ
ಮೋಜಿಗಾಗಿ ಸಾವನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಹಳೆಯ ಮೆಡಿಕಲ್ ಚೀಟಿಗಳನ್ನು ತೋರಿಸಿದರೆ ಸುಮ್ಮನಿರಲ್ಲ.
ಸರ್ಕಾರ ನೀಡಿರುವ ವಿನಾಯಿತಿ ದುರುಪಯೋಗಪಡಿಸಿಕೊಳ್ಳಬೇಡಿ
ಪ್ರಧಾನಿ ಮೋದಿಯವರು ಕೈಮುಗಿದು ಬೇಡಿಕೊಂಡಿದ್ದಾರೆ.
ಜಿಲ್ಲೆಯ ಜನರು ಸುಶಿಕ್ಷಿತರು, ಅಪಾಯವನ್ನು ಆಹ್ವಾನಿಸಬೇಡಿ.
——–

ಸಚಿವ ಅಸಮಾಧಾನ

ಕೊರೊನಾ ನಿರ್ವಹಣೆ ಜವಾಬ್ದಾರಿ ವಿಚಾರ
ಸಚಿವ ಡಾ. ಕೆ. ಸುಧಾಕರ್ ಅಸಮಾಧಾನ.
ಯಾರಿಗಾದರೂ ಒಬ್ಬರಿಗೆ ಜವಾಬ್ದಾರಿ ನೀಡಿ
ಒಬ್ಬ ಮಾನಿಟರ್ ಮಾಡುವ ಹಾಗಿರಬೇಕು.
ನನಗೆ ಬೆಂಗಳೂರು ಹೊಣೆ ನೀಡಿದ್ದಾರೆ.
ಜಿಲ್ಲೆಗಳ ಹೊಣೆ ಶ್ರೀರಾಮುಲುಗೆ ನೀಡಿದ್ದಾರೆ
ಇದು ಸರಿಯಾಗಲ್ಲ ಎಂದ ಡಾ.ಕೆ. ಸುಧಾಕರ್
———————–

ಭಾರತೀಯರಿಗೆ ಪಡಿತರ ಯೋಜನೆ

80 ಕೋಟಿ ಜನತೆಗೆ ಪಡಿತರ ಯೋಜನೆ
ಕಟ್ಟಡ ಕಾರ್ಮಿಕರಿಗೆ ಉಚಿತ ಊಟ.
2 ರೂಪಾಯಿಗೆ ಕೆಜಿ ಗೋಧಿ, 3 ರೂ.ಗೆ ಕೆಜಿ ಅಕ್ಕಿ
ಕೇಂದ್ರದಿಂದ 80 ಕೋಟಿ ಭಾರತೀಯರಿಗೆ ಹೊಸ ಯೋಜನೆ.
ಜಿಲ್ಲಾವಾರು ಹೆಲ್ಪ್‍ಲೈನ್ ತೆರೆಯಲಾಗುವುದು
ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ಸಂಬಳ
ಯಾರ ವೇತನವನ್ನು ಕಡಿತಗೊಳಿಸುವಂತಿಲ್ಲ
ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.
ಕೇಂದ್ರದಿಂದ ಕೊರೊನಾ ಹೆಲ್ಪ್ ಲೈನ್.
ಶೀಘ್ರವೇ ಕೊರೊನಾ ಬಗ್ಗೆ ಹೆಲ್ಪ್‍ಲೈನ್
ಜಿಲ್ಲಾವಾರು ಹೆಲ್ಪ್ ಲೈನ್‍ಗೆ ತೀರ್ಮಾನ.