Wednesday, February 25, 2026
Google search engine
Home Blog Page 283

ವೀರಶೈವ ಶಹರ ಘಟಕಕ್ಕೆM.F.Hiremath ನೇಮಕ

Publicstory.in


Dharawada : ಅಖಿಲ ಭಾರತ ವೀರಶೈವ ಮಹಾಸಭಾ ಶಹರ ಘಟಕದ ಅಧ್ಯಕ್ಷರಾಗಿ ಹಿರಿಯ ಸಮಾಜ ಸೇವಕ ಎಂ.ಎಫ್.ಹಿರೇಮಠ ನೇಮಕವಾಗಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರ ಸೂಚನೆಯಂತೆ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ಈ ನೇಮಕ ಮಾಡಿದ್ದಾರೆ.

ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಹಿರೇಮಠ ಅವರು ಉತ್ತಮ ಸ್ನೇಹಜೀವಿ ಹಾಗೂ ಸಮಾಜಮುಖಿ ಚಿಂತನೆಯವರು.

ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ

ಕಲಬುರ್ಗಿ: ಇಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ. ಎನ್ ಎಸ್ ಶಂಕರ್ ಅವರ ‘ಆಜಾದಿ ಕನ್ಹಯ್ಯ- ದಲಿತ ದನಿ ಜಿಗ್ನೇಶ್’ ಕೃತಿಯನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಬಿಡುಗಡೆ ಮಾಡಿದರು. ರಾಜಕುಮಾರ ಮಡಿವಾಳರ ಅವರ ‘ಫೇಸ್ ಬುಕ್ ಪುಸ್ತಕದಂಗಡಿ’ಯ ಅಂಗಳದಲ್ಲಿ ಕೃತಿ ಬಿಡುಗಡೆಯಾಯಿತು.

ಕೃಷ್ಣಮೃಗಕ್ಕೆ ಕಂಟಕವಾಗಲಿದೆಯೇ ಎತ್ತಿನಹೊಳೆ?

0

ಅಮೃತ್ ಮಹಲ್ ಕಾವಲ್ ನ ಎತ್ತಿನಹೊಳೆ ನಾಲಾ ಕಾಮಗಾರಿ ಬಳಿ ಗಾಯಗೊಂಡು ನರಳುತ್ತಿರುವ ಕೃಷ್ಣಮೃಗ

ವಿಶೇಷ ವರದಿ: ಶ್ರೀಕಾಂತ್ ಕೆಳಹಟ್ಟಿ


Tipturu: ಇಲ್ಲಿಗೆ ಸಮೀಪದ ಅಮೃತ್ ಮಹಲ್ ಕಾವಲ್ ನಲ್ಲಿ ವಿ.ವಿ.ಯ ಅನುಮತಿ ಇಲ್ಲದೇ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯು ಈ ಹುಲ್ಲುಗಾವಲಿನ ಜೀವ ವೈವಿಧ್ಯತೆಗೂ ಧಕ್ಕೆ ತರಲಿದೆ ಎಂಬ ಆತಂತ ಎದುರಾಗಿದೆ.

ಅತಿ ವಿಶೇಷ ಹುಲ್ಲುಗಾವಲುಗಳಲ್ಲಿ ಇದೂ ಒಂದು. ಇಲ್ಲಿ ಕೇವಲ ಅಮೃತ್ ಮಹಲ್ ಹಸುಗಳ ತಳಿ ಅಭಿವೃದ್ಧಿ ಮಾತ್ರ ನಡೆಯುತ್ತಿಲ್ಲ, ಜೀವ ವೈವಿಧ್ಯತೆಯ ಆಗರವೇ ಆಗಿದೆ.

ಚಿತ್ರ; ಸಂತೋಷ್ ಕೊನೇಹಳ್ಳಿ

ಇಲ್ಲಿನ ಜೀವ ವೈವಿಧ್ಯತೆ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿ ಗಮನ ಸೆಳೆಯಬೇಕಾಗಿದ್ದ ಹುಲ್ಲುಗಾವಲು ಈಗ ಎತ್ತಿನ ಹೊಳೆಯ ಅವೈಜ್ಞಾನಿಕ ಕಾಮಗಾರಿಗೆ ಸಿಲುಕಿ ಮತ್ತಷ್ಟು ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿಗೆ ತಲುಪಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಮಹಲ್ ಹುಲ್ಲುಗಾವಲು ಹಲವು ರೀತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. ಅಳಿವಿನಂಚಿನಲ್ಲಿರುವ ಜೀವಿಗಳು ಇಲ್ಲಿ ವಾಸಿಸುತ್ತಿವೆ. ಅವುಗಳ ಪೈಕಿ ಕೃಷ್ಣಮೃಗ ಸಂತತಿಯೂ ಒಂದು. ಹುಲಿಗೆ ಸಿಕ್ಕ ಮಾನ್ಯತೆ ಕೃಷ್ಣಮೃಗಗಳಿಗೂ ದೊರೆತಿದೆ. ಈ ಹಿನ್ನೆಲೆಯಲ್ಲಿ ಅಮೃತ ಮಹಲ್ ಹುಲ್ಲುಗಾವಲನ್ನು ಕೃಷ್ಣಮೃಗ ಸಂರಕ್ಷಣಾ ತಾಣ ಮಾಡಬೇಕೆಂಬ ಕೂಗು ಜೋರಾಗಿದೆ.

ಈಗಾಗಲೇ ತಿಪಟೂರು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ 10 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿಯನ್ನು ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಕೃಷ್ಣಮೃಗಗಳನ್ನು ಬೇಟೆಯಾಡದಂತೆ ಅರಣ್ಯ ಇಲಾಖೆ ಬೇಟೆ ನಿಗ್ರಹ ದಳವನ್ನೂ ನಿಯೋಜಿಸಿತು ಆದರೆ ರಾಜ್ಯ ಸರ್ಕಾರ ಮಾತ್ರ ಕೃಷ್ಣಮೃಗ ಸಂರಕ್ಷಣಾ ತಾಣ ಮಾಡುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯ ಪರಿಸರವಾದಿ ಗಳನ್ನು ಸಿಟ್ಟಿಗೇಳಿಸಿದೆ.

ಹುಲ್ಲುಗಾವಲಿನಲ್ಲಿರುವ ಪ್ರಾಣಿ ಪಕ್ಷಿಗಳು

ತಿಪಟೂರಿನ ಕೊನೇಹಳ್ಳಿ ಅಮೃತ್ ಮಹಲ್ ಹುಲ್ಲುಗಾವಲು ವನ್ಯಜೀವಿ ಹಾಗು ಜೀವವೈವಿದ್ಯ ತಾಣ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಶೆಡ್ಯೂಲ್ 1ರ ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಕೃಷ್ಣಮೃಗಗಳ ಕುರಿತು ದಾಖಲಾಗಿದೆ. ಅಂತಹ ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳು ಈ ಹುಲ್ಲುಗಾವಲಿನಲ್ಲಿ ಜೀವಿಸುತ್ತಿದ್ದು ಇವುಗಳ ಸಂರಕ್ಷಣೆ ಅರಣ್ಯ ಇಲಾಖೆಯ ಜವಾಬ್ದಾರಿ ಆಗಿದೆ.

ಆದರೆ ಎತ್ತಿನಹೊಳೆ ಮುಖ್ಯ ಕಾಲುವೆಯು ಈ ಹುಲ್ಲುಗಾವಲಿನಲ್ಲಿ ಹಾದುಹೋಗಲಿದೆ. ಕಾವಲನ್ನು ಎರಡು ಭಾಗವಾಗಿ ಸೀಳುವುದರಿಂದ ವನ್ಯಜೀವಿಗಳ ಓಡಾಟ ಮತ್ತು ಆಹಾರಕ್ಕೆ ತೊಂದರೆಯಾಗಲಿದೆ. ಇಡೀ ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ಮೇಯ್ದುಕೊಂಡು ಜೀವಿಸುತ್ತಿದ್ದ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಈ ನಾಲಾ ಕಾಮಗಾರಿ ಅಡ್ಡಿಯಾಗಲಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಆಗ ವನ್ಯಜೀವಿಗಳು ಅನಿವಾರ್ಯವಾಗಿ ರೈತರ ಹೊಲಗಳಿಗೆ ನುಗ್ಗಲು ಅವಕಾಶವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಅರಣ್ಯ ಇಲಾಖೆ ಹುಲ್ಲುಗಾವಲನ್ನು ವಿಭಜಿಸುವ ನಾಲೆಯ ಬಗ್ಗೆ ಮೌನವಹಿಸಬಾರದು ಎನ್ನುತ್ತಾರೆ ರೈತ ಸಂಘದ ದೇವರಾಜ್.

ಹುಲ್ಲುಗಾವಲು ಜೀವವೈವಿಧ್ಯತೆ ಸಂರಕ್ಷಣೆ ಹಾಗು ಅಧ್ಯಯನ ಕಾರ್ಯದಲ್ಲಿ ತೊಡಗಿರುವ ಮೈತ್ರೇಯ ಪರಿಸರ ಅಧ್ಯಯನ ಕೇಂದ್ರದ ತಂಡ ನಶಿಸುತ್ತಿರುವ ಹುಲ್ಲುಗಾವಲು ಪರಿಸರ ವ್ಯವಸ್ಥೆಗೆ ಕಳವಳ ವ್ಯಕ್ತಪಡಿಸಿದೆ.

ಹುಲ್ಲುಗಾವಲು ಪರಿಸರ ವ್ಯವಸ್ಥೆ ನಾಶವಾದರೆ ಕೃಷ್ಣಮೃಗ, ತೋಳ, ಕತ್ತೆ ಕಿರುಬ, ಗುಳ್ಳೆನರಿ, ನರಿ, ಗ್ರೇಟ್ ಇಂಡಿಯನ್ ಬಸ್ಟರ್ಡ್, ಶಾರ್ಟ್ ಟೊಡ್ ಸ್ನೇಕ್ ಈಗಲ್, ಕಲ್ಲು ಗೌಜುಗ, ಲ್ಯಾಪ್ ವಿಂಗ್, ಡವ್, ಲಾರ್ಕ್, ಬುಷ್ ಚಾಟ್, ಪ್ಯಾಡಿ ಫೀಲ್ಡ್ ಪಿಪಿಟ್, ಲಾರ್ಜ್ ಗ್ರೇ ಬ್ಯಾಬಲರ್, ಮುನಿಯ, ಸ್ಯಾಂಡ್ ಗ್ರೌಸ್, ಇಂಡಿಯನ್ ಕರ್ಸರ್, ಟಿಟ್ಟಿಬ, ಲೆಸ್ಸರ್ ಫ್ಲಾರಿಕಾನ್ ಜಾತಿಯ ಪಕ್ಷಿಸಂಕುಲ, ಉರಗಗಳು, ಸಸ್ತನಿಗಳು ಹಾಗೂ ಕೀಟಗಳು ಇತಿಹಾಸ ಪುಟ ಸೇರಲಿವೆ ಎಂದು ಆತಂಕ ವ್ಯಕ್ತಪಡಿಸಿದೆ.

ಎತ್ತಿನಹೊಳೆ ಕಾಮಗಾರಿ ಮಾಡುವುದರಿಂದ ಇಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ಧಕ್ಕೆಯಾಗಲಿದೆ. ಹೀಗಾಗಿ ಪ್ರಾಣಿಗಳಿಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕು. ನಾಲೆಗೆ ತಂತಿ ಬೇಲಿ ವ್ಯವಸ್ಥೆ ಮಾಡಬೇಕು. ಆಹಾರಕ್ಕಾಗಿ ಆ ಕಡೆಯಿಂದ ಈಕಡೆಗೆ ಓಡಾಡಲು ವನ್ಯಜೀವಿ ಕಾರಿಡಾರ್ ನಿರ್ಮಾಣವಾಗಬೇಕು ಎನ್ನುತ್ತಾರೆ.

ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲಿನ ಜೀವವೈವಿಧ್ಯದ ಮೌಲ್ಯಮಾಪನ ನಡೆಸಿರುವ ಮೈತ್ರಯ ಪರಿಸರ ಅಧ್ಯಯನ ಸಂಸ್ಥೆಯ ಸದಸ್ಯರು ಈ ಕಾಮಗಾರಿಯಿಂದ ಇಲ್ಲಿನ ಹುಲ್ಲುಗಾವಲು ಪರಿಸರ ವ್ಯವಸ್ಥೆಗೆ ಭಾರಿ ಧಕ್ಕೆ ಬರಲಿದೆ ಎಂದು ಮೈತ್ರಯ ಕಳವಳ ವ್ಯಕ್ತಪಡಿಸಿದ್ದಾರೆ.

ಹುಲ್ಲುಗಾವಲು ವೃದ್ಧಿಯಾಗಬೇಕು. ಜೀವವೈವಿಧ್ಯತೆ ಹೆಚ್ಚಾಗಬೇಕು. ಅಳಿವಿನಂಚಿನಲ್ಲಿರುವ ಕೃಷ್ಣಮೃಗಗಳನ್ನು ಸಂರಕ್ಷಣೆ ಮಾಡಬೇಕು. ಆ ಮೂಲಕ ವನ್ಯಜೀವಿ ಜೀವವೈವಿಧ್ಯವನ್ನು ಸಂರಕ್ಷಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಅಂತೂ ಇಂತೂ ಸಚಿವ ಸಂಪುಟ ಸೇರಿದ್ದಾಯಿತು…

ತುಮಕೂರು : ರಾಜ್ಯ ಸಚಿವ ಸಂಪುಟಕ್ಕೆ 10 ಜನ ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನೂತನ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 18 ಮಂದಿ ಸಚಿವರಿದ್ದ ರಾಜ್ಯ ಸರ್ಕಾರಕ್ಕೆ 10 ನೂತನ ಶಾಸಕರು ಸೇರ್ಪಡೆಯಾಗಿ ಸಚಿವರ ಸಂಖ್ಯಾಬಲ 28ಕ್ಕೆ ಏರಿಕೆಯಾಗಿದೆ.

ಯಾರಿಗೆ ಯಾವ ಖಾತೆ..?

10 ಜನ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಯಾರಿಗೆ ಯಾವ ಖಾತೆ ಎಂಬುದು ಈಗ ಪ್ರಶ್ನೆಯಾಗಿದೆ. ಶನಿವಾರದ ಒಳಗೆ ಖಾತೆ ಹಂಚಿಕೆ ಮಾಡುತ್ತೇನೆ ಸಾಧ್ಯವಾದರೆ ನಾಳೆ ಅಥವಾ ನಾಡಿದ್ದು ದೆಹಲಿಗೆ ತೆರಳಿ ಮಾತುಕತೆ ನಡೆಸಲಾಗುತ್ತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದರು.

ಮೊದಲ ಬಾರಿಗೆ ಸಂಪುಟ ದರ್ಜೆಗೆ ಏರಿದ ನೂತನ ಶಾಸಕರು

ರಾಜ್ಯ ಸಚಿವ ಸಂಪುಟಕ್ಕೆ ಎಸ್.ಟಿ.ಸೋಮಶೇಖರ್, ಕೆ.ಸುಧಾಕರ್, ಬೈರತಿ ಬಸವರಾಜು, ಶಿವರಾಮ ಹೆಬ್ಬರ್, ಬಿ.ಸಿ ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ. ಮೊದಲ ಬಾರಿಗೆ ಸಚಿವ ಸಂಪುಟ ದರ್ಜೆಗೆ ಆಯ್ಕೆಯಾಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಸಚಿವರಾದ ಶ್ರೀಮಂತ ಪಾಟೀಲ್ ಹಾಗು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿ.ಸಿ ಪಾಟೀಲ್ ಅವರು ಸಚಿವರಾಗುವ ಮೂಲಕ 37 ವರ್ಷಗಳ ಬಳಿಕ ಈ ಕ್ಷೇತ್ರಕ್ಕೆ ಸಚಿವ ಸ್ಥಾನ ಒಲಿದು ಬಂದಿದೆ.

ಮೂಲ ಬಿಜೆಪಿಗರಲ್ಲಿ ಭಿನ್ನಮತ ಸ್ಫೋಟ, ಸಂಪುಟ ವಿಸ್ತರಣೆಗೆ ಗೈರು..?

ಸಚಿವ ಸಂಪುಟ ದರ್ಜೆಗೆ ಮೂವರು ಮೂಲ ಬಿಜೆಪಿಗರಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಉಮೇಶ್ ಕತ್ತಿ, ಸಿ.ಪಿ ಯೋಗೇಶ್ವರ್, ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ, ಚಿತ್ರದುರ್ಗ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್, ಅರವಿಂದ್ ಲಿಂಬಾವಳಿ ಹೆಸರು ರೇಸ್‌ನಲ್ಲಿ ಇತ್ತು. ಆದರೆ ಸ್ವಪಕ್ಷದಲ್ಲೇ ಭಿನ್ನಮತ ಸ್ಫೋಟಗೊಂಡ ಹಿನ್ನೆಲೆ ಮೂಲ ಬಿಜೆಪಿಗರಿಗೆ ತಾತ್ಕಾಲಿಕವಾಗಿ ಸಚಿವ ಸ್ಥಾನ ಬೇಡ ಎಂದು ಹೈಕಮಾಂಡ್ ಸೂಚನೆ ನೀಡಿತ್ತು. ಅದರಂತೆ ಇಂದು ನಡೆದ ಪ್ರಮಾಣವಚನದಲ್ಲಿ 10 ಜನ ಅರ್ಹ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಹಾಗು ಸಿ.ಪಿ ಯೋಗೇಶ್ವರ್ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Tumkur:  ಕರೋನ ವೈರಸ್ ಪ್ರಕರಣ ದೃಢಪಟ್ಟಿಲ್ಲ- DHO ಸ್ಪಷ್ಟನೆ

Publicstory. in


ತುಮಕೂರು : ಜಿಲ್ಲೆಯಲ್ಲಿ ಈವರೆಗೂ ಯಾವುದೇ ನೋವಲ್ ಕರೋನಾ ವೈರಸ್ ಪ್ರಕರಣಗಳು ಧೃಢಪಟ್ಟಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಚೀನಾ ದೇಶದಿಂದ ಬಂದಿದ್ದ ಯುವಕನಿಗೆ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿದ್ದು, ಸದರಿ ರಕ್ತದ ಮಾದರಿಯ ಫಲಿತಾಂಶದಲ್ಲಿ ಕರೋನಾ ವೈರಸ್ ಕಂಡುಬಂದಿರುವುದಿಲ್ಲ ಎಂದು ಬೆಂಗಳೂರಿನ ಎನ್‌ಐವಿ ಧೃಢಪಡಿಸಿದೆ. ಈ ಯುವಕನು ಜಿಲ್ಲಾ ಆಸ್ಪತ್ರೆಯಲ್ಲಾಗಲೀ, ಖಾಸಗಿ ಆಸ್ಪತ್ರೆಗಳಲ್ಲಾಗಲೀ ದಾಖಾಲಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಬೇರೆ ಯಾವುದೇ ಹೊಸ ಶಂಕಿತ ಕರೋನಾ ವೈರಸ್ ರೋಗಿಗಳು ಇರುವುದಿಲ್ಲ ಹಾಗೂ ಯಾವುದೇ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಅನಾವಶ್ಯಕವಾಗಿ ಭಯ ಪಡುವ ಹಾಗೂ ಊಹಾಪೋಹಗಳಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.

ಕರೋನಾ ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ 5 ಕೊಠಡಿಗಳ ಹಾಸಿಗೆಗಳು ಹಾಗೂ 1 ವೆಂಟಿಲೇಟರ್ ಅನ್ನು ಮೀಸಲಿಟ್ಟು ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಜನ ಸಾಮಾನ್ಯರಿಗೆ ಮುಂಜಾಗೃತ ಕ್ರಮವಾಗಿ ತೆಗೆದು ಕೊಳ್ಳಬೇಕಾದ ಕ್ರಮಗಳ ಬಗ್ಗೆ ಐಇಸಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಿದ್ಧಗಂಗಾ ಮಠಕ್ಕೆ ಓಡೋಡಿ ಬಂದ ಸಚಿವೆ

Publicstory.in


Tumkur: ಕೇಂದ್ರ ಸರ್ಕಾರ ಸಬ್ಸೀಡಿ ಯೋಜನೆಯಡಿ ನೀಡುವ ಅಕ್ಕಿ ಮತ್ತು ಗೋದಿಯನ್ನು ನಿಲ್ಲಿಸಿರುವುದರಿಂದ ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಬುಧವಾರದಿಂದ ಹಿಂದಿನಂತೆಯೇ ರಾಜ್ಯ ಸರ್ಕಾರವೇ ಅಕ್ಕಿಗೋದಿಯನ್ನು ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಲಳ ಕಲ್ಯಾಣ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.

ಸಿದ್ದಗಂಗಾ ಮಠಕ್ಕೆ ಅಕ್ಕಿ, ಗೋದಿ ನಿಲ್ಲಿಸಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಇಂದು ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದರು.

ಕೇಂದ್ರ ಸರ್ಕಾರ ಸಬ್ಸೀಡಿ ಅಕ್ಕಿ ಮತ್ತು ಗೋದಿ ನಿಲ್ಲಿಸಿತು. ಹೀಗಾಗಿ ಸಿದ್ದಗಂಗಾ ಮಠಕ್ಕೆ ನೀಡುವುದರಲ್ಲಿ ವ್ಯತ್ಯಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ನನ್ನ ಮೇಲೆ ಗರಂ ವ್ಯಕ್ತಪಡಿಸಲಿಲ್ಲ. ಮಾಹಿತಿ ಕೇಳಿದರು. ವಿವರಿಸಿದೆ. ಹಾಗಾಗಿ ಸಣ್ಣ ವ್ಯತ್ಯಾಸವಾಗಿರುವುದು ಸತ್ಯ ಎಂದು ಹೇಳಿದರು.

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಸಂಘ-ಸಂಸ್ಥೆಗಳಿಂದ ಪತ್ರ ಬಂದಿದ್ದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟೆ. ರಾಜ್ಯ ಸರ್ಕಾರ ಅಕ್ಕಿ ಮಾತ್ರ ಕೊಡಬಹುದು ಎಂದು ಹೇಳಿದೆ. ಅದಕ್ಕೆ ಸಿಎಂ ಯಡಿಯೂರಪ್ಪನವರು ರಾಜ್ಯ ಸರ್ಕಾರವೇ ಅಕ್ಕಿ ಮತ್ತು ಗೋದಿಯನ್ನು ವಿತರಣೆ ಮಾಡುವುದನ್ನು ಮುಂದುವರಿಸಬೇಕು ಎಂದು ಹೇಳಿದರು.

360 ಮೆಟ್ರಿಕ್ ಟನ್ ಅಕ್ಕಿ ಬೇಕು


ಸಿದ್ದಗಂಗಾ ಮಠವೂ ಸೇರಿದಂತೆ 355 ಶಾಲೆಗಳಿಗೆ ಅಕ್ಕಿ ಮತ್ತು ಗೋದಿಯನ್ನು ಹಿಂದಿನಂತೆಯೇ ನೀಡಲಾಗುತ್ತಿದೆ. ಒಂದು ತಿಂಗಳಿಗೆ ಮಠಕ್ಕೆ 735 ಕ್ವಿಂಟಾಲ್ ಅಕ್ಕಿ ಮತ್ತು 365 ಕ್ವಿಂಟಾಲ್ ಗೋದಿಯನ್ನು ಉಚಿತವಾಗಿ ನೀಡಲಾಗುವುದು. 355 ಶಾಲೆಗಳಿಗೂ 360 ಮೆಟ್ರಿಕ್ ಟನ್ ಅಕ್ಕಿ ಮತ್ತು 160 ಮೆಟ್ರಿಕ್ ಟನ್ ಗೋದಿ ಬೇಕಾಗುತ್ತದೆ ಎಂದರು ಹೇಳಿದರು.

ಪಕ್ಷ ಸಂಘಟನೆ ಮಾಡಿದ್ದೇನೆ. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಮೂರು ವರ್ಷ ಕೆಲಸ ನಿರ್ವಹಿಸಿದ್ದೇನೆ. ತಳಮಟ್ಟದಿಂದ ಬೆಳೆದು ಬಂದಿದ್ದೇನೆ. ಸಂಪುಟದಲ್ಲಿ ನಾನೊಬ್ಬಳೇ ಮಹಿಳೆ. ನನ್ನನ್ನು ಸಂಪುಟದಲ್ಲಿ ಮುಂದುವರಿಸುತ್ತಾರೆ. ಯಾವುದೇ ಆತಂಕ ಇಲ್ಲ. ಮುಂದುವರಿಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರೋನಾ ಭೀತಿ; ವುಹಾನ್ ಗೆ ಭೇಟಿ ನೀಡಿದ್ದ ತುಮಕೂರಿನ ವೈದ್ಯ ವಿದ್ಯಾರ್ಥಿ ಪರೀಕ್ಷೆ

Tumkuru: ಚೀನಾದ ವುಹಾನ ಭೇಟಿ ನೀಡಿದ್ದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಅವರ ರಕ್ತ ಮತ್ತು ಕಫ ಮಾದರಿಗಳನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ.

ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ಕಂಡು ಬಂದಿಲ್ಲ. ಆದರೆ ಅವರು ವುಹಾನ್ ಗೆ ಹೋಗಿ ಬಂದಿದ್ದರಿಂದ ತಪಾಸಣೆ ಮಾಡಲಾಗಿದೆ. ರಕ್ತ, ಮತ್ತ ಕಫ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿರುವ ವೈರಾಲಜಿ ವಿಭಾಗಕ್ಕೆ ಕಳಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ವೈದ್ಯಕೀಯ ವಿದ್ಯಾರ್ಥಿ ಅಮಿತ್ ಚೀನಾದ ವುಹಾನ್ ಸಮೀಪದ ಪಟ್ಟಣಕ್ಕೆ ಹೋಗಿದ್ದರು. ಅಲ್ಲಿಂದ 10 ದಿನಗಳ ಹಿಂದೆ ತುಮಕೂರಿಗೆ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆ ನಡೆದಿದೆ ಎಂದು ತಿಳಿದುಬಂದಿದೆ.
ಅಮಿತ್ ಅವರಲ್ಲಿ ಕೊರೊನ ವೈರಸ್ ಇರುವುದು ಪತ್ತೆಯಾಗಿಲ್ಲ. ಅವರು ಮನೆಯಲ್ಲೇ ವಾಸವಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ವೀರಭದ್ರಯ್ಯ ಹೇಳಿದ್ದಾರೆ.

ಚೀನಾದಿಂದ ಹಿಂದಿರುಗಿದ ವಿದ್ಯಾರ್ಥಿಗೆ ಕೆಮ್ಮು ಕಾಣಿಸಿಕೊಂಡಿತ್ತು.

Tumkur city: ಇನ್ನೂ 24×7 ಕುಡಿಯುವ ನೀರು: ಶಾಸಕ ಜ್ಯೋತಿಗಣೇಶ್

Publicstory. in


Tumkur: ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ ಮುವತ್ತೇಳು ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜ್ಯೋತಿಗಣೇಶ್ ಇನ್ನುಳಿದ ಐದು ಹೆಡ್ ಟ್ಯಾಂಕ್ ಗಳು ನಿರ್ಮಾಣ ಹಂತದಲ್ಲಿವೆ. ಮತ್ತೆ ಎರಡು ಹೆಡ್ ಟ್ಯಾಂಕ್ ಗಳ ನಿರ್ಮಾಣಕ್ಕೆ ಜಾಗಕ್ಕಾಗಿ ಹುಡುಕಾಟ ಆರಂಭವಾಗಿದೆ ಎಂದು ತಿಳಿಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರ ಲೀಟರ್ ನೀರು ಬಳಕೆಗೆ 8 ರೂಪಾಯಿ ನಿಗದಿಯಾಗಬಹುದು. ನೀರು ಪೂರೈಕೆ ಮಾಡುವಾಗ ಜನರ ಬಳಕೆಗೆ, ಸೆಮಿ ಕಮರ್ಷಿಯಲ್ ಮತ್ತು ಕಮರ್ಷಿಯಲ್ ಎಂದು ಮೂರು ಪಟ್ಟು ತೆರಿಗೆ ವಿಧಿಸಬಹುದು ಎಂದರು.

ತುಮಕೂರು ನಗರಕ್ಕೆ ಬುಗುಡನಹಳ್ಳಿ ಕೆರೆಯಲ್ಲಿ ಸಂಗ್ರಹಿಸುವ ನೀರನ್ನು ಕುಡಿಯಲು ಅವಲಂಬಿಸಲಾಗುವುದು. ಹೆಬ್ಬಾಕ ಕೆರೆಯಲ್ಲಿನ ನೀರನ್ನು ಕೈಗಾರಿಕಾ ಉದ್ದೇಶಕ್ಕೆ ನೀಡುತ್ತೇವೆ ಎಂದು ವಿವರಿಸಿದರು.

ತುಮಕೂರು ಅಮಾನಿಕೆರೆಯಲ್ಲಿ ನಾಲ್ಕು ಕಂಪಾರ್ಟ್ ಮೆಂಟ್ ಮಾಡಿಕೊಂಡು ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟಿಸಿಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಲವು ಬಡಾವಣೆಗಳಲ್ಲಿ ಕೆಲಸಗಲು ನಡೆಯುತ್ತಿವೆ. ಕೆಲವು ಕಡೆ ಪೂರ್ಣಗೊಂಡಿವೆ ಎಂದು ಹೇಳಿದರು.

200 ಕೋಟಿ ರೂಪಾಯಿ ವೆಚ್ಚದಲ್ಲಿ 24×7 ನೀರು ಪೂರೈಕೆ ಯೋಜನೆ ಜಾರಿಯಾಗಲಿದೆ. ಆರ್.ಒ ಪ್ಲಾಂಟ್ ಖಾಲಿಯಾಗಿದ್ದು ಮತ್ತಷ್ಟು ತರಿಸಿಕೊಳ್ಳಲಾಗುವುದು ಎಂದರು.

ನಗರದಲ್ಲಿ ಆಸ್ತಿಯ ಭೌಗೋಳಿಕ ಸರ್ವೆಗೆ ಸರ್ಕಾರ ಒಪ್ಪಿಗೆ ನೀಡಿದ್ದು , ಎಲ್ಲರ ಆಸ್ತಿಯ ವಿಸ್ತೀರ್ಣ ನಿಖರವಾಗಿ ತಿಳಿಯಲಿದೆ. ಹೀಗಾಗಿ ಪಾಲಿಕೆಗೂ ಆದಾಯ ಬರಲಿದೆ ಎಂದರು.

ಅಂಗನವಾಡಿ ನಿರ್ಮಾಣಕ್ಕೆ 2 ಕೋಟಿ ರೂಪಾಯಿ ಮೀಸಲಿಟ್ಟಿದ್ದು ಅವು ಶಾಲೆಯ ಆವರಣದಲ್ಲಿಯೇ ಇರಲಿವೆ. ಸಂತೆಗೆ ಜಾಗ ಮಾಡಿಕೊಡಲಾಗುವುದು ಎಂದು ಹೇಳಿದರು.

ಆರು ತಿಂಗಳಲ್ಲಿ ಯೋಜನೆ ಸಕಾರವಾಗಲಿದೆ. ನಗರವಾಸಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಅಮೃತ್ ಮಹಲ್ ಕಾವಲ್ ನಲ್ಲಿ ಎತ್ತಿನ ಹೊಳೆ ಕಾಮಗಾರಿ ತಡೆಗೆ ವಿ.ವಿ.ಸೂಚನೆ

0

ಶ್ರೀಕಾಂತ್ ಕೆಳಹಟ್ಟಿ


Tipturu: ಇಲ್ಲಿನ ಕೊನೇಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲಿನಲ್ಲಿ ಯಾವುದೇ ಅನುಮತಿ ಪಡೆಯದೇ ಏಕಾಏಕಿ ನಾಲಾ ಕಾಮಗಾರಿ ಆರಂಭಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಅಮೃತ್ ಮಹಲ್ ಕಾವಲ್ ನಲ್ಲಿ ನಡೆದಿರುವ ಕಾಮಗಾರಿ

ಹಸಿರು ಪೀಠ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಲಾಗಿದೆ. ಕಾಮಗಾರಿ ಮುನ್ನ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಲಾಗಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಜಾಹೀರಾತು

ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಸಚಿವ ಮಾಧುಸ್ವಾಮಿ, ಶಾಸಕ ಬಿ.ಸಿ.ನಾಗೇಶ್, ಅವರುಗಳ ನೇತೃತ್ವದಲ್ಲಿ ಇಲ್ಲಿ ನಾಲಾ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಅರಣ್ಯ ವಯಲಗಳಿದ್ದು ಅಲ್ಲಿ ಕಾಮಗಾರಿ ಮಾಡಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅರಣ್ಯದಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಹಸಿರುಪೀಠ ಆದೇಶ ನೀಡಿದೆ. ಪರಿಸರ ಇಲಾಖೆಯು ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಗುತ್ತಿಗೆದಾರರು ಈ ಎಲ್ಲಾ ನಿಯಮಗಳನ್ನು ಗಾಳಿ ತೂರಿ ಕಾಮಗಾರಿ ನಡೆಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎನ್ನುತ್ತಾರೆ ಹೋರಾಟಗಾರರು.

ಕೇಂದ್ರದಲ್ಲಿರುವ ಅಮೃತ್ ಮಹಲ್ ತಳಿಗಳು

ಸಕಲೇಶಪುರದಿಂದ ಎತ್ತಿನಹೊಳೆ ನಾಲಾ ಕಾಮಗಾರಿ ಆರಂಭವಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಾಲೆ ನಿರ್ಮಾಣ ಕಾಮಗಾರಿ ನಿರಂತರವಾಗಿ ನಡೆಯುತ್ತಲೆ ಇದೆ. ತಾಲೂಕಿನ ಕೊನೆಹಳ್ಳಿ ಸಮೀಪದ ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ನಾಲೆ ಹಾದುಹೋಗುತ್ತಿದೆ. ಇಲ್ಲಿ ಕಾನೂನು ಉಲ್ಲಂಘಿಸಿ ನಾಲೆ ನಿರ್ಮಿಸುವ ಕೆಲಸ ನಡೆಯುತ್ತಿದೆ.

ಅಮೃತ್ ಮಹಲ್ ಕಾವಲ್ ನಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸೇರಿದ ದೇಶೀಯ ಅಮೃತ್ ಮಹಲ್ ತಳಿ ರಾಸುಗಳ ಅಭಿವೃದ್ಧಿಗೆ ಸಂಬಂಧಿಸಿದ ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರವಿದೆ.

ಕಾಮಗಾರಿ ನಿಲ್ಲಿಸುವಂತೆ ವಿ.ವಿ. ಬರೆದಿರುವ ಪತ್ರ

ಅಮೃತ್ ಮಹಲ್ ರಾಸುಗಳ ಮೇವಿಗಾಗಿ ಈ ಪ್ರದೇಶವನ್ನು ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಾಲಾ ಕಾಮಗಾರಿ ಆರಂಭಿಸುವ ಮೊದಲು ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿಯಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು.

ಆದರೆ ಗುತ್ತಿಗೆದಾರರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ವಿಶ್ವವಿದ್ಯಾಲಯದ ಷರತ್ತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕಾಮಗಾರಿ ಕೈಗೊಂಡಿದ್ದಾರೆ. ಕಾವಲು ಭೂಮಿಯನ್ನು ಪರಭಾರೆ ಮಾಡಬಾರದು ಹಾಗು ಯಾವುದೇ ಕಾಮಗಾರಿ ನಡೆಸಬಾರದು ಎಂದು ಹೈಕೋರ್ಟ್ ಆದೇಶಗಳನ್ನು ನೀಡಿದೆ. ಕೋರ್ಟ್ ಆದೇಶಗಳಿಗೂ ಗುತ್ತಿಗೆದಾರರು ಕಿಮ್ಮತ್ತು ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದ ಸುಮಾರು 82 ಎಕರೆಯಲ್ಲಿ ಸುಮಾರು 2 ಕಿಲೋ ಮೀಟರ್ ನಾಲೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಮುಖ್ಯವಾದ ಸಂಗತಿ ಎಂದರೆ ಎತ್ತಿನಹೊಳೆ ಯೋಜನೆಗೆ ತಿಪಟೂರು ತಾಲೂಕಿನಲ್ಲಿ ಹೆಚ್ಚು ಮಂದಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಸುಮಾರು 1103 ಎಕರೆ ಭೂಮಿಯಲ್ಲಿ 53 ಕಿಲೋ ಮೀಟರ್ ಉದ್ದದ ನಾಲೆ ಕಾಮಗಾರಿ ನಡೆಯಲಿದೆ. ಆದರೂ ರೈತರ ಭೂಮಿಗೆ ವೈಜ್ಞಾನಿಕ ಮತ್ತು ಮಾರುಕಟ್ಟೆ ಬೆಲೆಯನ್ನು ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.

ರಾಜ್ಯದ ಕೆಲವೇ ಹುಲ್ಲುಗಾವಲುಗಳ ಪೈಕಿ ತಿಪಟೂರು ಗಡಿಭಾಗದಲ್ಲಿರುವ ಕೊನೆಹಳ್ಳಿಯ ಅಮೃತ್ ಮಹಲ್ ಕಾವಲ್ ಕೂಡ ಒಂದು. ಇಂತಹ ಪ್ರದೇಶದಲ್ಲಿ ಅಮೃತ್ ಮಹಲ್ ರಾಸುಗಳ ಸಂತಾನೋತ್ಪತ್ತಿ ಕೇಂದ್ರವಿದ್ದು ನಾಲೆ ನಿರ್ಮಾಣದಿಂದ ಈ ಕೇಂದ್ರ ಮತ್ತು ಹುಲ್ಲುಗಾವಲಿಗೆ ಧಕ್ಕೆ ಆಗಲಿದೆ. ಕರ್ನಾಟಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರು ಎತ್ತಿನಹೊಳೆ ಯೋಜನೆಯ ಕಾರ್ಯಪಾಲಕ ಅಭಿಯಂತರರಿಗೆ ಪತ್ರವನ್ನು ಬರೆದಿದ್ದು ವಿಶ್ವವಿದ್ಯಾಲಯದ ಜೊತೆ ಒಪ್ಪಂದ ಮಾಡಿಕೊಂಡ ನಂತರವಷ್ಟೆ ಕಾಮಗಾರಿ ಕೈಗೊಳ್ಳಬೇಕೆಂದು ಗಂಭೀರವಾಗಿ ಸೂಚನೆ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ಎತ್ತಿನಹೊಳೆ ಅಭಿಯಂತರರು ಕಾಮಗಾರಿ ಮುಂದುವರಿಸಿದ್ದಾರೆ.

ನಮ್ಮ ಸೂಚನೆಯ ನಡುವೆಯೂ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಸಲು ವಿ.ವಿ. ಒಪ್ಪಿಗೆ ನೀಡಿಲ್ಲ. ಗುತ್ತಿಗೆದಾರರು ದಬ್ಬಾಳಿಕೆಯಿಂದ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ವಿ.ವಿ. ಕುಲಸಚಿವರಿಗೆ ಮಾಹಿತಿ ನೀಡಿದ್ದೇನೆ. ಬೀದರ್ ನಲ್ಲಿ ಕೃಷಿ ಮೇಳ ನಡೆಯಲಿದ್ದು, ಅದರ ಆಯೋಜನೆಯಲ್ಲಿ ಅವರು ನಿರತರಾಗಿದ್ದಾರೆ.ಮೇಳ ಮುಗಿದ ಕೂಡಲೇ ಈ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ರುದ್ರಸ್ವಾಮಿ publicstory. in ಗೆ ತಿಳಿದರು.

ಎತ್ತಿನಹೊಳೆಯಲ್ಲಿ ತಾಲ್ಲೂಕಿಗೆ ನೀರು ಹಂಚಿಕೆಯಾಗದ ಹೊರತು ತಾಲ್ಲೂಕಿನಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ. ರೈತರ ಭೂಮಿಯಾಗಲೀ, ಸರ್ಕಾರಿ ಭೂಮಿಯಾಗಲೀ ನೆಲದ ಕಾನೂನಿಗೆ ಗೌರವ ಕೊಟ್ಟು ಕೆಲಸ ಆರಂಭಿಸಬೇಕು ಎಂದು ತಿಪಟೂರು ಎತ್ತಿನಹೊಳೆ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ದೇವರಾಜ್ ತಿಮ್ಲಾಪುರ ತಿಳಿಸಿದರು.

ಮಹಿಳೆಯರು ಸ್ವಯಂ ರಕ್ಷಣೆ ಕೌಶಲ್ಯ ಬೆಳೆಸಿಕೊಳ್ಳಬೇಕು

Publicstory.in

ಪಾವಗಡ: ವಿದ್ಯಾರ್ಥಿನಿಯರು ಸ್ವ ರಕ್ಷಣಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು  ಸರ್ಕಲ್ ಇನ್ ಸ್ಪೆಕ್ಟರ್  ಡಿನಾಗರಾಜು  ತಿಳಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆ, ಕಲ್ಪತರು ಪಡೆ ಆಯೋಜಿಸಿದ್ದ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಂಡು ಸದಾ ಜಾಗೃತರಾಗಿರಬೇಕು. ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ನೆರೆ ಹೊರೆಯ ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜ್ಯನ್ಯವನ್ನು ತರಬೇತಿ ಪಡೆದವರು ತಡೆಯಬಹುದು ಎಂದರು.

ಮಹಿಳೆಯರ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ರಾಜ್ಯದಲ್ಲಿಯೇ ವಿನೂತನವಾದ ಕಲ್ಪತರು ಪಡೆ ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಕಲ್ಪತರು ಪಡೆ ತರಬೇತಿ ನೀಡುತ್ತಿದೆ. ಕಲ್ಪತರು ಪಡೆಯಿಂದ ವಿದ್ಯಾರ್ಥಿನಿಯರು ತರಬೇತಿ ಪಡೆದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲ್ಪತರು ಪಡೆ ತಂಡದ ಸದಸ್ಯೆ ಮಹದೇವಿ, ವಿದ್ಯಾರ್ಥಿನಿಯರು ಯಾರಾದರೂ ನಿಂದಿಸುವುದು, ಲೈಂಗಿಕ ಕಿರುಕುಳ ನೀಡುವ ಸೂಚನೆ ಸಿಕ್ಕ ಕೂಡಲೇ ಭಯ ಪಡದೆ ಅವರನ್ನು ಎದುರಿಸಬೇಕು. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸ್ವಯಂ ರಕ್ಷಣಾ ಕಲೆಗಳನ್ನು ಕಲಿತುಕೊಳ್ಳುವುದು  ಅತ್ಯವಶ್ಯಕ ಎಂದರು.

ಕಲ್ಪತರು ಪಡೆಯ ಚಿನ್ನಮ್ಮ, ಸಹಾಯಕ ಪ್ರಾಧ್ಯಾಪಕ ನಾಗರಾಜು ಮಾತನಾಡಿದರು.

ವಿದ್ಯಾರ್ಥಿನಿಯರಿಗೆ ಕಲ್ಪತರು ಪಡೆಯ ಸದಸ್ಯರು ತರಬೇತಿ ನೀಡಿದರು.

ಸಹಾಯಕ ಸಬ್ ಇನ್ ಸ್ಪೆಕ್ಟರ್  ನರಸಿಂಹಯ್ಯ,  ಪಟ್ಟಣ ಠಾಣೆ ಎಸ್.ಬಿಮಂಜುನಾಥ್, ಪ್ರಾಧ್ಯಾಪಕರಾದ ಮಧುಕುಮಾರ್, ಅನಂತರಾಜು, ಚಂದ್ರಶೇಖರರ್, ನಾಗಭೂಷಣ್ ಉಪಸ್ಥಿತರಿದ್ದರು.