ಜಸ್ಟ್ ನ್ಯೂಸ್

ಮಹಿಳೆಯರು ಸ್ವಯಂ ರಕ್ಷಣೆ ಕೌಶಲ್ಯ ಬೆಳೆಸಿಕೊಳ್ಳಬೇಕು

Publicstory.in

ಪಾವಗಡ: ವಿದ್ಯಾರ್ಥಿನಿಯರು ಸ್ವ ರಕ್ಷಣಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು  ಸರ್ಕಲ್ ಇನ್ ಸ್ಪೆಕ್ಟರ್  ಡಿನಾಗರಾಜು  ತಿಳಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆ, ಕಲ್ಪತರು ಪಡೆ ಆಯೋಜಿಸಿದ್ದ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ರಕ್ಷಣಾ ಕಲೆಗಳನ್ನು ಕರಗತ ಮಾಡಿಕೊಂಡು ಸದಾ ಜಾಗೃತರಾಗಿರಬೇಕು. ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ನೆರೆ ಹೊರೆಯ ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜ್ಯನ್ಯವನ್ನು ತರಬೇತಿ ಪಡೆದವರು ತಡೆಯಬಹುದು ಎಂದರು.

ಮಹಿಳೆಯರ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ರಾಜ್ಯದಲ್ಲಿಯೇ ವಿನೂತನವಾದ ಕಲ್ಪತರು ಪಡೆ ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಕಲ್ಪತರು ಪಡೆ ತರಬೇತಿ ನೀಡುತ್ತಿದೆ. ಕಲ್ಪತರು ಪಡೆಯಿಂದ ವಿದ್ಯಾರ್ಥಿನಿಯರು ತರಬೇತಿ ಪಡೆದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲ್ಪತರು ಪಡೆ ತಂಡದ ಸದಸ್ಯೆ ಮಹದೇವಿ, ವಿದ್ಯಾರ್ಥಿನಿಯರು ಯಾರಾದರೂ ನಿಂದಿಸುವುದು, ಲೈಂಗಿಕ ಕಿರುಕುಳ ನೀಡುವ ಸೂಚನೆ ಸಿಕ್ಕ ಕೂಡಲೇ ಭಯ ಪಡದೆ ಅವರನ್ನು ಎದುರಿಸಬೇಕು. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸ್ವಯಂ ರಕ್ಷಣಾ ಕಲೆಗಳನ್ನು ಕಲಿತುಕೊಳ್ಳುವುದು  ಅತ್ಯವಶ್ಯಕ ಎಂದರು.

ಕಲ್ಪತರು ಪಡೆಯ ಚಿನ್ನಮ್ಮ, ಸಹಾಯಕ ಪ್ರಾಧ್ಯಾಪಕ ನಾಗರಾಜು ಮಾತನಾಡಿದರು.

ವಿದ್ಯಾರ್ಥಿನಿಯರಿಗೆ ಕಲ್ಪತರು ಪಡೆಯ ಸದಸ್ಯರು ತರಬೇತಿ ನೀಡಿದರು.

ಸಹಾಯಕ ಸಬ್ ಇನ್ ಸ್ಪೆಕ್ಟರ್  ನರಸಿಂಹಯ್ಯ,  ಪಟ್ಟಣ ಠಾಣೆ ಎಸ್.ಬಿಮಂಜುನಾಥ್, ಪ್ರಾಧ್ಯಾಪಕರಾದ ಮಧುಕುಮಾರ್, ಅನಂತರಾಜು, ಚಂದ್ರಶೇಖರರ್, ನಾಗಭೂಷಣ್ ಉಪಸ್ಥಿತರಿದ್ದರು.

Comment here