Tuesday, February 24, 2026
Google search engine
Home Blog Page 291

ತುಮಕೂರಿನಲ್ಲಿ ನನ್ನ ಮರ ಹುಡುಕಿಕೊಡಿ!

0

ಕೆ.ಇ.ಸಿದ್ದಯ್ಯ


ತುಮಕೂರು: ಹಸಿರು ಕನವರಿಕೆಯ ನಡುವೆಉಸಿರು ಬೆವರುತ್ತಿದೆಹಸಿರು ಇಲ್ಲ. ಹಸಿರು ಬೆಳೆಸಬೇಕು, ಉಳಿಸಬೇಕು. ಹಸಿರಲ್ಲದೆ ಜೀವ ನರಳುತ್ತಿವೆ. ದೂಳು ಅಡಗಲು ಹಸಿರು ಬೇಕು. ಶುದ್ಧಗಾಳಿಗೆ ಹಸಿರು ಬೇಕು. ನೆಮ್ಮದಿ ಸಿಗಲು ಹಸಿರು ಬೇಕು. ತಂಗಾಳಿ ಬೀಸಲು ಹಸಿರು ಬೇಕು. ಖಗ ಸಂಕುಲದ ಆಶ್ರಯಕ್ಕೆ ಹಸಿರು ಬೇಕು.ಉಸಿರಾಡಲು ಹಸಿರು ಬೇಕು.

ಆರೋಗ್ಯವಾಗಿರಲು ಹಸಿರು ಬೇಕು. ಕಾಯಿಲೆ ನಾಶಕ್ಕೆ ಹಸಿರು ಬೇಕು. ಹಸಿರುಜಲ ಹೆಚ್ಚಬೇಕು. ‘ಹಸಿರತ್ತಲ್, ಹಸಿರಿತ್ತಲ್, ಹಸಿರೆತ್ತಲ್, ಎಂದು ಕುವೆಂಪು ಬಣ್ಣಿಸುತ್ತಾರೆ. ಹಸಿರೇ ಎಲ್ಲೆಲ್ಲೂ ಇದ್ದರೆ ಅದು ಭವಿಷ್ಯದ ಪೀಳಿಗೆಯ ಉಸಿರಾಟಕ್ಕೆ ನಾಂದಿಯಾಘುತ್ತದೆ ಇಲ್ಲದಿದ್ದರೆ ಹೊಸ ಪೀಳಿಗೆ ಉಸಿರಾಟವೇ ನಿಂತು ಹೋಗುತ್ತದೆ. ಇದನ್ನು ಆದಷ್ಟು ಬೇಗ ಮನುಕುಲ ಅರ್ಥ ಮಾಡಿಕೊಂಡರೆ ಒಳ್ಳೆಯದು.

ನಗರಗಳು ಬೆಳೆಯುತ್ತಿವೆ.. ಬೆಳೆದಂತೆ ಕೊಳೆಯುತ್ತಿವೆ. ಕೊಳೆಯುವ ಕಾಲಕ್ಕೆ ನರಳುತ್ತಿವೆ. ಇಂತಹ ಪರಿಸ್ಥಿತಿ ತುಮಕೂರಿಗೂ ಬಂದಿದೆ. ತುಮಕೂರು ಈಗ ಹಿಂದಿನಂತಿಲ್ಲ. ಕಾಂಕ್ರೀಟ್ ಕಾಡಿನ ನಡುವೆ ಮರವೆಂಬುದು ಬೆರಳೆಣಿಕೆಯಾಗಿದೆ.

ಮರಗಳು ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ. ರಸ್ತೆಗಳು ವಿಸ್ತರಿಸಿಕೊಳ್ಳುತ್ತಿವೆ. ನಗರ ರಸ್ತೆಗಳಿಂದಲೇ ತುಂಬಿಹೋಗಿದೆ. ಟಾರು ಮೆತ್ತಿಕೊಂಡಿವೆ. ಮಣ್ಣಿನಿಂದ ಕೂಡಿವೆ. ಇದೇ ಕಾರಣಕ್ಕೆ ಮರಗಳು ಗರಗಸಕ್ಕೆ ಬಲಿಯಾಗಿವೆ. ಇದನ್ನು ಯಾರಿಗೆ ಹೇಳಬೇಕು. ಹೇಳಬೇಕಾದವರೇ ನರಳುತ್ತಿದ್ದಾರೆ. ಅವರೇ ಜನರ ಉಸಿರನ್ನೂ ಕಿತ್ತುಕೊಳ್ಳುತ್ತಿದ್ದಾರೆ.

ಜನರೋ ಯಾವುದಕ್ಕೂ ಕಿವಿಗೊಡುತ್ತಿಲ್ಲ. ಹೇಳುವುದೂ ಒಂದೇ ಬಿಡುವುದೂ ಒಂದೇ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರೆ ಏನು ಮಾಡುವುದು?

ಹಸಿರಿನ ಕೊರತೆಯನ್ನು ತುಮಕೂರು ಎದುರಿಸುತ್ತಿದೆ. ಹಸಿರು ತುಮಕೂರು ಉಸಿರಿಲ್ಲದಾಗಿದೆ. ಇದು ಕಾಗದ ದಲ್ಲಿ ಮೆರಗುಡುತ್ತಿದೆ. ನಗರದಲ್ಲಿ ಮಾತ್ರ ಹಸಿರೆಂಬುದು ಕೊನೆಯಾಗಿದೆ. ಬಿ.ಎಚ್.ರಸ್ತೆಯ ನಡುವೆ ಬೇವಿನ ಸಸಿಗಳನ್ನು ನೆಟ್ಟಿದ್ದಾರೆ. ಯಾವ ಕಾರಣಕ್ಕೆ ರಸ್ತೆ ನಡುವೆ ಇಟ್ಟರೋ ಗೊತ್ತಿಲ್ಲ. ಯಾರು ಹೇಳಿದರೋ ಹೀಗೆ ಮಾಡಿ ಎಂದು! ಬೇವಿನ ಮರಗಳು ನಾಳೆ ಬೆಳೆದು ದೊಡ್ಡವಾದರೆ ಹರಡಿಕೊಂಡರೆ ಕತ್ತರಿಸುವುದಿಲ್ಲವೇ? ರಸ್ತೆಯ ಬದಿಯಲ್ಲಿ ಹಾಕಿದ ಮರಗಳನ್ನೇ ಬಿಡುತ್ತಿಲ್ಲ. ವಿದ್ಯುತ್ ತಂತಿಗೆ ತಗಲುತ್ತವೆ ಎಂಬ ಕಾರಣಕ್ಕೆ ಕತ್ತರಿ ಬೀಳುತ್ತಿದೆ.

ರಸ್ತೆ ಅಗಲೀಕರಣಕ್ಕೆ ಮರಗಳಿಗೆ ಕತ್ತರಿ ಬೀಳುತ್ತದೆ. ‘ಹರ ಕೊಲ್ಲಲ್ ಪರ ಕಾಯ್ವನೇ’ ಎನ್ನುವಂತಹ ಪರಿಸ್ಥಿತಿ ಬಂದಿದೆ. ಅಂದರೆ ರಕ್ಷಣೆ ಮಾಡಬೇಕಾದವರೇ ಕೊಡಲಿ ಹಿಡಿದು ನಿಂತರೆ ಏನು ಮಾಡುವುದು?

ಮುಂದಿನ ದಿನಗಳಲ್ಲಿ ಹಸಿರು ಬೆಳೆಸದಿದ್ದರೆ, ಹಸಿರು ಉಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ದೆಹಲಿ ನಗರ ಶುದ್ದ ಗಾಳಿಯ ಕೊರತೆ ಅನುಭವಿಸುತ್ತಿದೆ. ಜನರು ಬೆಳಗ್ಗೆ ಮೂಗಿಗೆ ಬಟ್ಟೆ ಕಟ್ಟಿಕೊಂಡರೆ ಅದನ್ನು ಬಿಚ್ಚುವುದು ಊಟ ಮಾಡುವಾಗಲೇ ಎನ್ನುವಂತಹ ಸ್ಥಿತಿ ಇದೆ.

ತುಮಕೂರು ನಗರ ದೆಹಲಿಗಿಂತ ಭಿನ್ನವೇನೂ ಇಲ್ಲ. ಮರಗಳಿಲ್ಲದ ತುಮಕೂರು ಬೋಳಾಗಿ ಕಾಣುತ್ತಿದೆ. ಆಮ್ಲಜನಕದ ಕೊರತೆಗೆ ತುಮಕೂರು ಸಾಕ್ಷಿಯಾಗಿ ನಿಂತಿದೆ. ವಾಹನ ಸವಾರರು, ಅಂಗಡಿಯಲ್ಲಿ ಕುಳಿತವರು ಮೂಗಿಗೆ ಮಾಸ್ಕ್ ಧರಿಸುವುದು ಬದುಕಿನ ಭಾಗವಾಗಿಬಿಟ್ಟಿದೆ.

ಇಂತಹ ಪರಿಸ್ಥಿತಿಯನ್ನು ತಂದೊಡ್ಡಿದವರು ನಾಮ್ಮ ನಾಯಕರು. ನಮ್ಮನ್ನು ಆಳುವವರು. ಇವರಿಗೇನು ದಾಡಿ ಬಂತು. ಒಬ್ಬರಿಗೂ ಚಿಂತೆಯಿಲ್ಲ. ಹಾಳಾಗಿ ಹೋಗಲಿ ಬಿಡಿ ಎನ್ನುತ್ತವೆ ಹಿರಿಯ ಜೀವಗಳು.ದೂಳು ಹೆಚ್ಚಾಯ್ತು.

ನಗರದಲ್ಲಿದ್ದ ಮರಗಳೆಲ್ಲವೂ ಹೇಳಹೆಸರಿಲ್ಲದಂತಾದವು. ಹೀಗಾಗಿ ನೆರಳೇ ಇಲ್ಲದಂತೆ ಆಗುತ್ತಿದೆ. ಹಿಂದೆ ಇದ್ದ ಮರಗಳು ಈಗ  ಇಲ್ಲ. ಹಾಳಾದೋರು, ಊರೆಲ್ಲಾ ಹಾಳ್ ಮಾಡಿದ್ರು. ಮರಗಳನ್ನು ಕತ್ತರಿಸಿ ಹಾಕಿದರು. ಮರಗಳಿದ್ದರೆ ಒಂದಿಷ್ಟು ಒಳ್ಳೆಯ ಗಾಳಿ, ಆಮ್ಲಜನಕ ಸಿಗುತ್ತಿತ್ತು. ವಾಹನಗಳು ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಯ್ತು. ಬಿಸಿ ಏರುತ್ತಿದೆ. ಬಿಸಿಲು ಜಾಸ್ತಿ ಆಗುತ್ತಿದೆ.

ಅಬ್ಬಾ ಉಸಿರಾಡುವುದೇ ಕಷ್ಟ. ಮರಗಳನ್ನು ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಬೆಳೆಸ್ತಾರೆ. ರಸ್ತೆ ನಡುವೆ ನೆಟ್ಟರೆ ಏನು ಬಂತು. ಆ ಮರಗಳು ದೊಡ್ಡವಾಗುತ್ತಿದ್ದಂತೆ ಕಡಿಯಬೇಕಾಗುತ್ತದೆ. ಇದು ಪ಻ಲಿಕೆಯವರಿಗೆ, ಪರಿಸರ ಇಂಜಿಯರ್ ಗಳಿಗೆ ತಿಳಿದಿಲ್ಲವೇ? ಎನ್ನುತ್ತಾರೆ ನಾಗರಿಕರು.ಹಸಿರೆಂಬ ಉಸಿರನ್ನು ಕೊಲ್ಲುವ ಜನ ಹೆಚ್ಚಾಗುತ್ತಿದ್ದಾರೆ.

ನಾವೇ ಮಾಡಿಕೊಂಡ ತಪ್ಪಿಗೆ ನಾವೇ ಕಷ್ಟಅನುಭವಿಸಬೇಕು. ಇನ್ನು ಗರ್ಭದಲ್ಲಿರುವ ಶಿಶುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು. ಊಹಿಸಲೂ ಅಸಾಧ್ಯ. ಗರ್ಭದೊಳಗಿನ ಶಿಶುಗಳೂ ಕೂಡ ನಮ್ಮ ತಪ್ಪಿನ ಪರಿಣಾಮವನ್ನು ಎದುರಿಸಬೇಕಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದರೂ ಮಾನವ ಹಕ್ಕುಗಳ ಸಂಘಟನೆಗಳು ಈ ಕುರಿತು ಚಕಾರ ಎತ್ತುತ್ತಿಲ್ಲ.

ಹಸಿರು ಕಾಣೆಯಾಗುವ ಮುನ್ನ ಉಸಿರೆತ್ತುವುದು ಒಳ್ಳೆಯದು. ಇಲ್ಲಿದಿದ್ದರೆ ನಮ್ಮ ಗೋಳನ್ನು ಕೇಳುವವರೂ ಇಲ್ಲದಂತೆ ಆಗುತ್ತದೆ. ಕೊಡಲಿ ಹಿಡಿದು ನಿಂತವರು ಅದನ್ನು ಬಿಸುಟು ಹಸಿರ ಹಾಡಬೇಕು. ಇಲ್ಲದಿದ್ದರೆ ಜೀವಗಳು ಉಳಿಯಲಾರವು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

L I C ಏಜೆಂಟರ ಪ್ರತಿಭಟನೆ

ಪಾವಗಡ: ಪಾಲಸಿದಾರರು, ಏಜೆಂಟರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಭಾರತೀಯ ಜೀವ ವಿಮಾ ನಿಗಮ ಸಂಘದ ನೇತೃತ್ವದಲ್ಲಿ ಪಟ್ಟಣದ ಎಲ್.ಐ.ಸಿ ಕಚೇರಿ ಮುಂದೆ ಏಜೆಂಟರು ಪ್ರತಿಭಟನೆ ನಡೆಸಿದರು.
ಸಂಘಟನಾ ಕಾರ್ಯದರ್ಶಿ ಎ.ನಾಗಭೂಷಣ, ವಿಮಾ ಪ್ರತಿನಿಧಿಗಳ  ಗುಂಪು ವಿಮೆಯನ್ನು ಹೆಚ್ಚಿಸಬೇಕು. ಅನಾರೋಗ್ಯ ಹಾಗೂ ಅಪಘಾತಗಳ ಸಮಯದಲ್ಲಿ ಕ್ಲೈಂ ಪಡೆಯುವ ನೀತಿ0ುನ್ನು ಸರಳಗೊಳಿಸಿ ಎಲ್.ಐ.ಸಿ ಏಜೆಂಟರ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶಪ್ಪ, ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು. ಪೆಡಂಭೂತದಂತೆ ಬೆಳೆದಿರುವ ಜಿ.ಎಸ್.ಟಿ ಯನ್ನು ಕಡಿತಗೊಳಿಸಬೇಕು. ದೇಶದಾದ್ಯಂತ ಎಲ್.ಐ.ಸಿ ಏಜೆಂಟರು ಈಗಾಗಲೇ  ಧರಣಿ ನಡೆಸಲಾಗುತ್ತಿದೆ. ಸರ್ಕಾರ ಮತ್ತು ವಿಮಾ ಕಂಪನಿ ನಿರ್ಲಕ್ಷ ತೋರಿದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಭಾರತೀ0ು ಜೀವ ವಿಮಾ ಪ್ರತಿನಿಧಿಗಳ ಸಂಘದ ಉಪಾಧ್ಯಕ್ಷ ಕೆ.ಆರ್. ಹನುಮಂತರಾ0ು, ಖಜಾಂಜಿ ಬಾಲಕೃಷ್ಣ, ಕಾರ್ಯದರ್ಶಿ ಎಸ್.ಕೆ. ನಾಗರಾಜು, ಸದಸ್ಯ ನಾಗಬೂಷಣ್, ಇ.ಅಕ್ಕಲಪ್ಪ, ಡಿ.ರಾಜೇಂದ್ರ, ಶ್ರೀರಾಮಪ್ಪ, ಆರ್.ಸಂತೋಷ್ಕುಮಾರ್, ಗೋವಿಂದರಾಜು, ನೇಮಿರಾಜು, ಸುಬ್ಬರಾ0ುಪ್ಪ, ಹೆಚ್.ಕೃಷ್ಣಪ್ಪ, ನರಸಿಂಹರೆಡ್ಡಿ, ಮೈಲಾರಪ್ಪ, ಧರ್ಮಪಾಲ್, ಗೋಪಾಲಪ್ಪ, ಫಣಿರಾಜು, ಅಂಜಿನಪ್ಪ, ವೀರಾಂಜನೇ0ು, ಸಿದ್ದಗಂಗಮ್ಮ, ಸುಬ್ಬರಾ0ುಪ್ಪ ಉಪಸ್ಥಿತರಿದ್ದರು.

ಮಕ್ಕಳ ಭವಿಷ್ಯಕ್ಕೆ ಕ್ರೀಡೆ ಸಹಕಾರಿ

ಪಾವಗಡ :  ಆಸ್ಪತ್ರೆಗಳನ್ನು ಆರಂಭಿಸುವ ಬದಲಾಗಿ  ಶಾಲೆಯನ್ನು ತೆರೆದು ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ಆರ್.ಬಸವರಾಜು ತಿಳಿಸಿದರು.
 ಪಟ್ಟಣದ ಶೃಂಗೇರಿ ಶ್ರೀ ಸರಸ್ವತಿ ವಿದ್ಯಾಪೀಠ ಶಾಲೆಯಲ್ಲಿ ಆಯೋಜಿಸಿದ್ದ 20 ನೇ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
 ಕಲಿಕಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಇದು ಅವರ‌ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುವುದಲ್ಲದೆ ಕ್ರೀಯಾಶೀಲತೆ ಹಾಗೂ ಸೃಜನಾತ್ಮಕತೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 ಮೈಸ್ ಕಂಪ್ಯೂಟರ್ ನ ವ್ಯವಸ್ಥಾಪಕರಾದ ಜಿ.ಟಿ.ಗಿರೀಶ್ ಮಾತನಾಡಿ, ಮಕ್ಕಳ ‌ಮಾನಸಿಕ ಮತ್ತು ದೈಹಿಕ ಸದೃಡತೆಗಾಗಿ ಕ್ರೀಡೆಗಳು ಸಹಕಾರಿಯಾಗುತ್ತವೆ. ಇದರಲ್ಲಿ ಭಾಗವಹಿಸುವ ಎಲ್ಲಾ  ಮಕ್ಕಳಿಗೂ ಗೆಲುವು ಸಿಗದಿದ್ದರೂ ದೊರೆತ ಸೋಲನ್ನು ಮುಂದಿನ ಗೆಲುವಿಗೆ ಸೋಪಾನವನ್ನಾಗಿಸಿಕೊಳ್ಳೊಣ. ಪೋಷಕರು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಿಂದ ಮೊಬೈಲ್ ಚಟುವಟಿಕೆಗಳನ್ನು ಕಡಿಮೆ ಮಾಡಿ ನಿತ್ಯ ಕನಿಷ್ಟ ಒಂದು‌ ಗಂಟೆಯಾದರೂ ಆಟವಾಡುವಂತೆ ಪ್ರೇರೇಪಿಸಿ. ಇದು ಮಕ್ಕಳ ಮುಂದಿನ ಭವಿಷ್ಯಕ್ಕೆ ಆಧಾರಸ್ತಂಭವಾಗುತ್ತದೆ ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ಅತಿಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
 ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ‌ಮಂಡಳಿಯ ಮುಖ್ಯಸ್ಥರಾದ  ಶ್ರೀರಾಮ್, ಕಾರ್ಯದರ್ಶಿ ಪಿ.ಎಲ್.ಮಂಜುಳಾ, ಉಪನ್ಯಾಸಕರಾದ ಎ.ಎಸ್.ಜಗನ್ನಾಥ್, ಮುಖ್ಯ ಶಿಕ್ಷಕ ದಯಾನಂದ್ ಉಪಸ್ಥಿತರಿದ್ದರು.

8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ…

0

ಬೆಂಗಳೂರು:

ಈ ಬಾರಿ ರಾಜ್ಯಾದ್ಯಂತ ಒಟ್ಟು 2,879 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು. 

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿ, ಈಗಾಗಲೇ ನೀಡಲಾಗಿರುವ ಕರಡು ಪ್ರವೇಶ ಪತ್ರಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಇದುವರೆಗೆ ಮುಖ್ಯ ಶಿಕ್ಷಕರು ಒಟ್ಟು 1,01,208 ಅಭ್ಯರ್ಥಿಗಳ ವಿವರಗಳನ್ನು ಶಾಲಾ ಹಂತದಲ್ಲೇ ತಿದ್ದುಪಡಿ ಮಾಡಿದ್ದಾರೆ. ಅಂತಿಮ ಪ್ರವೇಶ ಪತ್ರಗಳನ್ನು ಫೆಬ್ರವರಿ 2ನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. 

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏ.19ರಿಂದ 34 ಶೈಕ್ಷಣಿಕ ಜಿಲ್ಲೆಗಳ ಒಟ್ಟು 228 ಮೌಲ್ಯಮಾನಪ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 79,670 ಮೌಲ್ಯಮಾಪಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಕೋರ್‌ ವಿಷಯಗಳಿಗೆ 15 ನಿಮಿಷ ಮತ್ತು ಪ್ರಥಮ ಹಾಗೂ ದ್ವಿತೀಯ ಭಾಷಾ ಪತ್ರಿಕೆಗಳಿಗೆ 30 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ಹಾಗಾಗಿ, ಮೌಲ್ಯಮಾಪಕರು ಸಹ ಮೌಲ್ಯಮಾಪನ ಕಾರ್ಯಕ್ಕೆ ಹೆಚ್ಚುವರಿ ಸಮಯ ಕೇಳಿದ್ದಾರೆ. ಈಗ ಪ್ರತಿನಿತ್ಯ ಮೌಲ್ಯಮಾಪನಕ್ಕೆ ನೀಡುತ್ತಿರುವ 20 ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೀಡಿದ ಮನವಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ವರ್ಷಾರಂಭದಲ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಚೇಂಜ್‌

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಲು ಫೆಬ್ರವರಿ 3ನೇ ವಾರದಿಂದ ಅವಕಾಶ ನೀಡಲಾಗುವುದು. ಆ ಮೂಲಕ ಈ ಬಾರಿ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು. 

‘2003ರಿಂದ 2019ರ ವರೆಗೆ ಉತ್ತೀರ್ಣರಾದ ಒಟ್ಟು 1,12,51,565 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್‌ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಜಿಲಾಕರ್‌ ಮೂಲಕ ತಮ್ಮ ಅಂಕಪಟ್ಟಿಗಳನ್ನು ಪಡೆದುಕೊಳ್ಳಬಹುದಾಗಿದೆ. ವಲಸೆ ಪ್ರಮಾಣ ಪತ್ರಗಳ ವಿತರಣಾ ವ್ಯವಸ್ಥೆಗೂ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. 

ಮಕ್ಕಳ ಹಡಿಲಿಲ್ಲವೆಂದು ಕುತ್ತಿಗೆಬಿಗಿದರು..

ತುಮಕೂರು:

ಮದುವೆಯಾಗಿ ಎರಡೂವರೆ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಜನತಾ ಕಾಲೋನಿಯಲ್ಲಿ ಕೈ ಹಿಡಿದ ಪತಿ ಸೇರಿದಂತೆ ಆತನ ಮನೆಯವರು ಸೇರಿ ಅಮಾಯಕ ಹೆಣ್ಣು ಮಗಳ ಕುತ್ತಿಗೆಯನ್ನ ವೈರಿನಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೊಳವನಹಳ್ಳಿ ಗ್ರಾಮದ ಸುಮಲತಾ(21) ಕೊಲೆಯಾದ ಮಹಿಳೆ.

ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೂಕಿನ ದಂಡಪಲ್ಲಿ ಗ್ರಾಮದಿಂದ ಸುಮಲತಾಳನ್ನು ಹೊಳವನಹಳ್ಳಿಯ ಶಿವಕುಮಾರ ಎಂಬುವರಿಗೆ ಎರಡೂವರೆ ವರ್ಷಗಳ ಹಿಂದೆ ಕೊಟ್ಟು ಮದುವೆ ಮಾಡಲಾಗಿತ್ತು.

ಮದುವೆಯಾಗಿ ಎರಡೂವರೆ ವರ್ಷಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಆಗಿಂದ್ಹಾಗೆ ಗಂಡ ಶಿವಕುಮಾರ ಸೇರಿದಂತೆ ಅವರ ಅಣ್ಣ, ಅತ್ತಿಗೆ ಹಾಗೂ ತಾಯಿ ಗಲಾಟೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದೇ ಕಾರಣಕ್ಕೆ ಜ. 19 ಭಾನುವಾರ ರಾತ್ರಿ ಸುಮಲತಾ ವಿರುದ್ಧ ಖ್ಯಾತೆ ತೆಗೆದ ಗಂಡ ಶಿವಕುಮಾರ ಹಾಗೂ ಅವರ ಅಣ್ಣ ರಮೇಶ, ಅತ್ತಿಗೆ ನಾಗಮಣಿ, ತಾಯಿ ಸರೋಜಮ್ಮ ಸುಮಲತಾ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಮನೆಯವರು ಆರೋಪಿಸಿದ್ದಾರೆ.

ಕೊಲೆ ಸಂಬಂಧ ಸುಮಲತಾ ತಂದೆ ಕುಮಾರ ಲಿಂಗಪ್ಪ ಅವರು ನೀಡಿದ ಕೊಲೆ ಆರೋಪದ ದೂರಿನ ಮೇರೆಗೆ ಗಂಡ ಶಿವಕುಮಾರ, ಆತನ ಅಣ್ಣ ರಮೇಶ ಅವರನ್ನು ಬಂಧಿಸಲಾಗಿದೆ. ಅತ್ತಿಗೆ ನಾಗಮಣಿ, ತಾಯಿ ಸರೋಜಮ್ಮ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಎಂ. ಪ್ರವೀಣ್, ಕೊರಟಗೆರೆ ಪೊಲೀಸ್ ಠಾಣೆ ಸಿಪಿಐ ಎಫ್.ಕೆ.ನದಾಫ್, ಪಿಎಸೈ ಬಿ.ಸಿ.ಮಂಜುನಾಥ ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳೆಯ ಮಧ್ಯದಲ್ಲಿ ಜೀವ ಸಮಾಧಿಯಾದ ರೈತ!

ಜಮೀನಿನಲ್ಲಿ ತಾನು ಬೆಳೆದ ಬೆಳೆಯಲ್ಲಿಯೇ ರೈತನೋರ್ವ ಜೀವಸಮಾಧಿಯಾಗಿರುವ ವಿಷಾದನೀಯ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಹೊಸಹಳ್ಳಿ ತಾಂಡದಲ್ಲಿ ಸೋಮವಾರ ನಡೆದಿದೆ.

   ಇದೇ ಗ್ರಾಮದ ರೈತ ಹೊಸರಾಂ ನಾಯ್ಕ(50)ಮೃತ ದುರ್ದೈವಿ. ಗ್ರಾಮದ ಬಳಿ 10 ಎಕರೆ ಜಮೀನು ಹೊಮದಿರುವ ಹೊಸರಾಂ ನಾಯ್ಕ ಹುರುಳಿ, ತೊಗರಿ ಇತ್ಯಾದಿಬೆಳೆಗಳನ್ನು ಬೆಳೆದಿದ್ದರು. ಕಟಾವು ಮಾಡಿದ ಬೆಳೆಯನ್ನು ಜಮೀನಿನಲ್ಲಿಯೇ ಬಣವೆ ಹಾಕಿದ್ದರು.

  ಬಣವೆಯ ಸುತ್ತಲ ಪ್ದೇಶದಲ್ಲಿ ಬೆಳೆದಿದ್ದ ಹುಲ್ಲನ್ನು ತುಂಡರಿಸಿ ಬೆಂಕಿ ಹಚ್ಚಿದ್ದಾರೆ. ಜೋರಾಗಿ ಬೀಸಿದ ಗಾಳಿಯಿಂದ ಬೆಂಕಿ ಬಣವೆಗೆ ವ್ಯಾಪಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಣ್ಣೆದುರಿನಲ್ಲಿಯೇ ಸುಟ್ಟು ಹೋಗುವುದನ್ನು ಸಹಿಸಲಾಗದೆ ಏಕಾಂಗಿಯಾಗಿ ಬೆಂಕಿ ನಂದಿಸಲು ರೈತ ಮುಂದಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿ ಬೆಂಕಿಯ ಕೆನ್ನಾಲಿಗೆಗೆ ಅವರು ಬಲಿಯಾಗಿದ್ದಾರೆ.

ಗ್ರಾಮದ ನೂರಾರು ಮಂದಿ ಜಮೀನಿನ ಬಳಿ ನೆರೆದಿದ್ದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

      ತಿರುಮಣಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

 

ಸ್ನಾಪ್ ಡೀಲ್ ಹೆಸರಲ್ಲಿ ಸಾವಿರಾರು ರೂಪಾಯಿ ದೋಖಾ..!

ತುಮಕೂರು

ಕೌನ್ ಬನೆಗಾ ಕರೋಡಪತಿ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ಮಾಸುವ ಮೊದಲೆ ಅಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ನ್ಯಾಪ್‌ ಡೀಲ್‌ ಕಂಪನಿಯಿಂದ 4.25 ಲಕ್ಷ ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿ ವಂಚನೆ ಮಾಡಿರುವ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದಿದೆ.

ಮಧುಮತಿ ಕುಂದಗೊಳ ಎಂಬುವವರಿಗೆ ಕರೆ ಮಾಡಿರುವ ಖದೀಮ ಸ್ನ್ಯಾಪ್ ಡೀಲ್ ಕಂಪನಿಯಿಂದ 4.25 ಲಕ್ಷ ಬಹುಮಾನ ಗೆದ್ದಿರುವುದಾಗಿ ನಂಬಿಸಿದ್ದಾರೆ. ಬಹಯಮಾನ ಪಡೆಯಲು ಮೊದಲು ನಮ್ಮ ಖಾತೆಗೆ 78 ಸಾವಿರ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಮಧುಮತಿಯವರಿ ಹಣ ವರ್ಗಾವಣೆ ಮಾಡಿದ್ದಾರೆ. ಆ ನಂತರ ಕರೆ ಮಾಡಿದ ವ್ಯಕ್ತಿ ಯಾವುದೇ ಪ್ರತಿಕ್ರಿಯೆ‌ ನೀಡದೆ ತನ್ನ ಮೊಬೈಲ್ ಸ್ವಿಚ್ ಮಾಡಿಕೊಂಡಿದ್ದಾನೆ.

ಎಷ್ಟೆ ಬಾರಿ ಕರೆ ಮಾಡಿದರೂ ಮೊಬೈಲ್ ರಿಂಗಣಿಸದ ಕಾರಣ ಇದು ಉದ್ದೇಶ ಪೂರ್ವಕವಾಗಿ ಕರೆ ಮಾಡಿ ಹಣ ಕಸಿದುಕೊಂಡು ಮೋಸ ಗೊಳಿಸಿರುವ ಅಂಶ ಗಮನಕ್ಕೆ ಬಂದಿದೆ.

ಕರೆ ಮಾಡಿದ್ದ ವ್ಯಕ್ತಿ, ಕಂಪನಿಯಿಂದ ಬಹುಮಾನ ಪಡೆಯಲು ಶುಲ್ಕ ಪಾವತಿಸಬೇಕು ಎಂದು ಮಧುಮತಿ ಅವರಿಗೆ ಹೇಳಿದ್ದರಿಂದ ಅದನ್ನು ನಂಬಿದ ಅವರು, ಫೋನ್‌ಪೇ ಮತ್ತು ಗೂಗಲ್‌ ಪೇ ಮೂಲಕ ಹಣ ಪಾವತಿ ಮಾಡಿದ್ದರು.

ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಒಕ್ಕಲಿಗರ ಸಂಘದ ಮೇಲೆ ಕಿಡಿಕಾರಿದ ರವಿಗೌಡ

ತುಮಕೂರು;ಜಿಲ್ಲೆಯಲ್ಲಿ ಮಿತಿಮೀರಿದ ಚಿರತೆಗಳ ಹಾವಳಿಯಿಂದಾಗಿ ಒಕ್ಕಲಿಗ ಸಮುದಾಯ ವಿಪರೀತ ಸಮಸ್ಯೆಯಲ್ಲಿ ಸಿಲುಕಿದೆ. ಚಿರತೆಗಳ ಹಾವಳಿ ತಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಒಕ್ಕಲಿಗರ ಸಂಘ ತುಟಿ‌ ಬಿಚ್ಚದೇ ಮೌನವಾಗಿದೆ ಎಂದು ಸಮುದಾಯದ ‌ಮುಖಂಡ‌ರಾದ ರವಿಗೌಡ ಕಿಡಿ ಕಾರಿದ್ದಾರೆ.

ಪ್ರಾಣಿಗಳ ಕಿರುಕುಳ ಎಲ್ಲರಿಗೂ ಸಮಸ್ಯೆ. ಆದರೆ ಜಿಲ್ಲೆಯಲ್ಲಿ ಚಿರತೆಗಳ ದಾಳಿಯಿಂದ ಒಕ್ಕಲಿಗ ಸಮುದಾಯದ ಮೂವರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಅದರೂ ಚಿರತೆಗಳನ್ನು ಹಿಡಿಯಲು ಜಿಲ್ಲಾಡಳಿತ, ಅರಣ್ಯ ಇಲಾಖೆ ತಾತ್ಸಾರ‌ ಮನೋಭಾವ ತೋರಿರುವುದು ಖಂಡನೀಯ. ಇದನ್ನು ಸಂಘ ಪ್ರಶ್ನಿಸಬೇಕಿತ್ತು ಎಂದು ಹೇಳಿದ್ದಾರೆ‌.

₹25 ಲಕ್ಷ ಪರಿಹಾರ ನೀಡಿ

ಇಂತ ದಾಳಿಗಳನ್ನು ಯಾರೂ ಜಾತಿ ದೃಷ್ಟಿಕೋನದಿಂದ ನೋಡಬಾರದು.‌ ಆದರೆ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಸಮುದಾಯ ಒಕ್ಕಲುತನ ಮಾಡುತ್ತಿರುವ ಪ್ರದೇಶಗಳಲ್ಲೇ‌ ಹೆಚ್ಚಿದೆ. ಇದರಿಂದಾಗಿ ತೋಟ ತುಡಿಕೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಇದು ಅವರ ಆದಾಯ ಮೂಲವನ್ನೇ ಕಸಿಯುತ್ತಿದೆ.‌ಇದು ಪರೋಕ್ಷವಾಗಿ ಸಮಾಜದ ಜನರು ಆರ್ಥಿಕವಾಗಿ ಹಿನ್ನಡೆ ಅನುಭವಿಸಲು ಕಾರಣವಾಗಲಿದೆ. ಈ ಹಿನ್ನೆಲೆಯಲ್ಲೂ ಸಂಘ ನೋಡಬೇಕಾಗಿದೆ.‌ಇದನ್ನು ಬೇರೆ ಸಮುದಾಯದವರು ಅಪಾರ್ಥ ಮಾಡಿಕೊಳ್ಳಬಾರದು ಎಂದು ವಿವರಿಸಿದ್ದಾರೆ.

ಚಿರತೆ ಹಾವಳಿಯಿಂದಾಗಿ ಸಮುದಾಯದ ಜನರಿಗೆ ಆಗುತ್ತಿರುವ ಬಗ್ಗೆ ಒಕ್ಕಲಿಗರ ಸಂಘದ ಬೋರೇಗೌಡ, ದೇವಣ್ಣ ಇಬ್ಬರ ಗಮನಕ್ಕೂ ತಂದಿದ್ದೇನೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ್ದೇನೆ. ಸಮಾಜ ಎಂದರೆ ಒಬ್ಬ ವ್ಯಕ್ತಿಗೂ ತೊಂದರೆಯಾಗದಂತೆ ತಡೆಯಬೇಕು.ಈ ಕೆಲಸವನ್ನು ಸಂಘಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚಿರತೆ ದಾಳಿಯಿಂದ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹ 25 ಲಕ್ಷ ಪರಿಹಾರ ನೀಡಬೇಕು. ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾನ್ ಸ್ಟೆಬಲ್ ನಿಂದನೆ : ಗ್ರಾಮಸ್ಥರು ಮಾಡಿದ್ದೇನು?

Public Story ವೈ.ಎನ್.ಹೊಸಕೋಟೆ:‌ ಹೋಬಳಿಯ ಓಬಳಾಪುರದಲ್ಲಿ ಭಾನುವಾರದಂದು ಗ್ರಾಮಸ್ಥರನ್ನು ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿದ ಗ್ರಾಮ ಠಾಣೆಯ ಗುಪ್ತ  ಮಾಹಿತಿ ಕಾನ್‌ ಸ್ಟೆಬಲ್   ವಿರುದ್ಧ ಗ್ರಾಮದ ಮಹಿಳೆಯರು ಪೋಲೀಸ್ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಕಾನ್‌ ಸ್ಟೆಬಲ್‌   ಗ್ರಾಮಸ್ಥರೊಂದಿಗೆ  ಅಸಭ್ಯವಾಗಿ ಮಾತನಾಡಿದ್ದಾರೆ. ನೀವೇನಾದರು ಮುಂದುವರೆಸಿದರೆ   ಬೂಟಿನಲ್ಲಿ ಹೊಡೆಯುತ್ತೇನೆ ಎಂದು ನಿಂದಿಸಿದ್ದಾರೆ.

    ಅವರ ಮಾತಿನಿಂದ ರೊಜ್ಜಿಗೆದ್ದ ಜನತೆ ಗ್ರಾಮದ ಎಲ್ಲರೂ ಅಡ್ಡ ಬರುತ್ತಾರೆ ಅವರನ್ನೆಲ್ಲಾ ಬೂಟಿನಲ್ಲಿ ಹೊಡೆಯುತ್ತೀಯ ಎಂದು ಕೇಳಿದ್ದಕ್ಕೆ ಗ್ರಾಮದ ಎಲ್ಲರನ್ನೂ ಬೂಟಿನಲ್ಲಿ ಒದೆಯುತ್ತೇನೆ ಎಂದು ದರ್ಪದಿಂದ ಮಾತನಾಡಿ ಜನರನ್ನು ಮತ್ತಷ್ಟು ಕೆರಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ  ಗ್ರಾಮಸ್ಥರು ಎಲ್ಲರನ್ನೂ ಬೂಟಿನಿಂದ ಹೊದ್ದು ಇಲ್ಲಿಂದ ಹೋಗಬೇಕು ಎಂದು ಪೋಲೀಸ್ ವಾಹನಕ್ಕೆ ಅಡ್ಡ ಹಾಕಿ ಧರಣಿ ಕುಳಿತಿದ್ದಾರೆ.

ಓಬಳಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ವಿಗ್ರಹ ಪ್ರತಿಷ್ಠಾಪನೆಯ ಸ್ಥಳದಲ್ಲಿ ಗ್ರಾಮದ ಯುವಕರು ಕೆಲಸ ಮಾಡುತ್ತಿದ್ದ ವೇಳೆ ಅದೇ ಗ್ರಾಮದ ಮತ್ತೊಂದು ಕೋಮಿನವರು ಈ ಸ್ಥಳವು ತಮಗೆ ಸೇರಿದ್ದು ಇಲ್ಲಿ ಯಾವುದೇ ರೀತಿಯ ಕಾಮಗಾರಿ ಮಾಡಬಾರದು ಎಂದು ತಡೆದಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

     ಸ್ಥಳಕ್ಕೆ ಬೇಟಿ ನೀಡಿದ ವೃತ್ತನಿರೀಕ್ಷಕ ಪೇದೆಯ ವರ್ತನೆಗೆ  ಕ್ಷಮೆ ಕೋರಿದ ನಂತರ ಜನತೆಯು ಅತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಡಿವೈಎಸ್ಪಿ ಪ್ರವೀಣ್‌  ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದರು.    ಸ್ಥಳದ ವಿಚಾರವಾಗಿ ಚರ್ಚಿಸಿ ತೀರ್ಮಾನ  ತೆಗೆದುಕೊಳ್ಳುವ ಭರವಸೆ ನೀಡಿದರು. 

ಕಾನ್ ಸ್ಟೆಬಲ್  ಗ್ರಾಮಸ್ಥರನ್ನು ನಿಂದಿಸಿರುವ ವಿಡಿಯೊ ವಾ‍ಟ್ಸ್ ಅಪ್ ನಲ್ಲಿ ವೈರಲ್ ಆಗಿದೆ.

ಚಿರತೆ ಹಾವಳಿಯಿಂದಾಗಿ ಕುರುಡಾದ ಅರಣ್ಯ ಇಲಾಖೆ ಕಣ್ಣು!

0

ವಿಶೇಷ ವರದಿ: M.N. ಚಿನ್ಮಯಿ


ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳ ಹಾವಳಿಯಿಂದಾಗಿ ಅರಣ್ಯ ಇಲಾಖೆಯ ಕಣ್ಣು ಕುರುಡಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮನುಷ್ಯರ ಮೇಲೆ ಈ ಕಾಡುಪ್ರಾಣಿಗಳು ದಾಳಿ ಮಾಡಿದಾಗ, ಸಾವಿಗೀಡಾದಾಗ, ಇಲ್ಲ ಯಾರಾದರೂ ಹಲ್ಲೆಗೀಡಾದಾಗ ಮಾತ್ರ ಲಘುಬಗೆಯ ಚಟುವಟಿಕೆ, ವಿಶೇಷ ಆಸಕ್ತಿ ತಾಳುವ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಉಳಿದಂತೆ ಜನರಿಗೆ ಆಗುತ್ತಿರುವ ತೊಂದರೆ, ಸಮಸ್ಯೆ, ಆರ್ಥಿಕ ನಷ್ಟಕ್ಕೆ ಮೌನತಾಳುತ್ತಾರೆ. ಆಯಾ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳೇ ಇಲ್ಲವೇನೋ ಎಂಬಂತೆ ಕುರುಡಾಗಿ ವರ್ತಿಸತೊಡಗಿದ್ದಾರೆ.

ಹೆಬ್ಬೂರಿನಲ್ಲಿ ಮಗುವೊಂದನ್ನು ಚಿರತೆ ರಕ್ತ ಹೀರಿ ಕೊಂದ ಬಳಿಕ ಆ ಭಾಗದಲ್ಲಿ ಚಿರತೆ ಹಿಡಿಯು ಅರಣ್ಯ ಇಲಾಖೆ ಹಿರಿ-ಕಿರಿಯ ಅಧಿಕಾರಿಗಳು ಓಡಾಡುತ್ತಿದ್ದಾರೆ. ಇದೇ ರೀತಿಯ ಸಮಸ್ಯೆ ಊರ್ಡಿಗೆರೆ ಹೋಬಳಿ, ದೇವರಾಯನದುರ್ಗ ಸುತ್ತಮುತ್ತಲವೂ ಇದೆ. ಇಲ್ಲಿಯ ಜನರು ತಿಂಗಳುಗಳಿಂದಲೇ ಅರಣ್ಯ ಇಲಾಖೆಗೆ ಚಿರತೆ ಹಾವಳಿ ಬಗ್ಗೆ ಹೇಳುತ್ತಿದ್ದರೂ ಅವರುಗಳು ಕಣ್ಣು ಅಷ್ಟೇ ಅಲ್ಲ ಕಿವಿಯೂ ಕಿವುಡಾಗಿದೆ ಎಂಬಂತೆ ವರ್ತಿಸ ತೊಡಗಿದ್ದಾರೆ.

ಚಿರತೆಗೆ ಬಲಿಯಾಗಿರುವ ಕುರಿ

ತುಮಕೂರು ಜಿಲ್ಲಾದ್ಯಂತ ಇತ್ತೀಚಿಗೆ ಕಾಡು ಮೃಗಗಳ ಹಾವಳಿ ಹೆಚ್ಚಾಗಿ ಭಯ ಭೀತಿಯಲ್ಲಿ ಬದುಕುವಂತಾಗಿದೆ. ಜಿಲ್ಲೆಯ ಹೆಬ್ಬೂರು ಹಾಗೂ ಊರ್ಡಿಗೆರೆ ಹೋಬಳಿಯಲ್ಲಿ ಚಿರತೆಯ ಹಾವಳಿ ಇದ್ರೆ, ದೇವರಾಯನದುರ್ಗ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರಡಿ ಹಾವಳಿ ಇದೆ. ಇನ್ನು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಕಾಡು ಹಂದಿಗಳ ಉಪಟಳ ಹೇಳತೀರವಾಗಿದೆ.


ಚಿರತೆ ಹಿಡಿಯಲು ಇವರಿಗೇನು ಕಷ್ಟ?

ಉಪಟಳ ನೀಡುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳನ್ನು ಹಿಡಿದು ಸಾಗಿಸಲು ಅರಣ್ಯ ಇಲಾಖೆಗೆ ಏನು ಕಷ್ಟವಾಗಿದೆ ಎನ್ನುವುದು ಜನರಿಗೆ ತಿಳಿಸಬೇಕು. ಈ ಸಮಸ್ಯೆ ಹೀಗೆ ಮುಂದುವರೆದರೆ ಹಳ್ಳಿಗಳಲ್ಲಿ ಜನರು ಬದುಕುವುದೇ ಕಷ್ಟವಾಗುತ್ತಿದೆ. ಅಲ್ಲದೇ ಕೋಳಿ, ಮಾಂಸದ ತಾಜ್ಯವನ್ನು ಸರಿಯಾದ ನಿರ್ವಹಣೆ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ತೋವಿನಕೆರೆಯ ಪದ್ಮರಾಜ್.


ಈಚೆಗೆ ಹೆಬ್ಬೂರು ಬಳಿ ಮಗುವನ್ನು ತಿಂದು ಹಾಕಿದ್ದು, ಒಟ್ಟು ಮೂರು ಜೀವಗಳನ್ನು ಬಲಿ ತೆಗೆದುಕೊಂಡಿದೆ. , ಇನ್ನೂ ಊರ್ಡಿಗೆರೆ ಹೋಬಳಿಯ ಅನೇಕ ಕಡೆಗಳಲ್ಲಿ ಹಲವಾರು ರೈತರ ಜೀವವೋಪಾಯದ ಕುರಿ, ಮೇಕೆಗಳು ಚಿರತೆಯ ನಿತ್ಯ ಆಹಾರವಾಗಿದೆ. ರೈತಾಪಿ ವರ್ಗ ತಮ್ಮ ಜಮೀನುಗಳಲ್ಲಿ ಒಂಟಿ ಯಾಗಿ ಕೆಲಸ ಮಾಡುವುದು ದುಸ್ತರವಾಗಿದೆ.

ಹೀಗಿದೆ ನೋಡಿ ನಮ್ಮ ಅರಣ್ಯ

ಕಾಡು ಹಂದಿಗಳು ಜಮೀನಿನಲ್ಲಿ ಬೆಳೆದ ಉತ್ಪನ್ನ ಗಳನ್ನ ನಾಶಮಾಡಿದರೆ, ಹಂದಿ ಕಾಯಲು ಮುಗ್ಧ ರೈತರು ರಾತ್ರಿ ಹೊತ್ತು ಚಳಿ ಗಾಳಿ ಲೆಕ್ಕಿಸದೆ ಕಾದು ಕಾದು ಸುಣ್ಣವಾಗಿದ್ದಾರೆ. ಇನ್ನು ಈ ಕಾಡು ಹಂದಿಗಳ ಬೇಟೆಗೆ ಬೇಟೆಗಾರರು ರೈತರ ಜಮೀನುಗಳಲ್ಲಿ ಅನಧಿಕೃತ ಮದ್ದು. ಗುಂಡು ಗಳನ್ನು ಇಟ್ಟು ರೈತರಿಗೆ ನಿತ್ಯ ಉಪದ್ರವ ನೀಡುತ್ತಿದ್ದಾರೆ.

ರಾಷ್ಟ್ರ ಪಕ್ಷಿ ನವಿಲುಗಳು ಯಥೇಚ್ಛವಾಗಿ ಇದ್ದು ಅವುಗಳ ಮಾರಣ ಹೋಮ ನಡೆಯುತ್ತಿದೆ. ಈ ಎಲ್ಲಾ ಕಾನೂನು ಬಾಹಿರ ಚಟುವಟಿಗೆಕೆಗಳಿಗೆ ಪ್ರತ್ಯಕ್ಷ, ಪರೋಕ್ಷ ವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರಣ ಎಂದು ಜನ ಶಪಿಸುತ್ತಿದ್ದಾರೆ.

ತುರುವೇಕೆರೆ ತಾಲ್ಲೂಕಿನಲ್ಲಿ ಚಿರತೆ ಹಾವಳಿ ತಡೆಯಲು ಜಿಲ್ಲಾಡಳಿತ ಏನೇನು ಮಾಡುತ್ತಿಲ್ಲ ಎಂದು ಅಲ್ಲಿನ ಶಾಸಕ ಮಸಾಲ ಜಯರಾಮ್ ಅವರು ಆರೋಪಿಸಿದ್ದಾರೆ. ಶಾಸಕರ ಮಾತಿಗೆ ಮನ್ನಣೆ ಕೊಡದ ಇಲಾಖೆ ಇನ್ನೂ ನಮ್ಮ ಜನಸಾಮಾನ್ಯರ ಮಾತಿಗೆ ಬೆಲೆ ಕೊಡಲಿದೆಯೇ ಎನ್ನುತ್ತಾರೆ ಜನರು.


ದೇವರಾಯನದುರ್ಗ ಕಾಡಿನಲ್ಲಿ ನೀಲಗಿರಿ ಏಕೆ ತೆಗೆಯುತ್ತಿಲ್ಲ?

ದೇವರಾಯನದುರ್ಗ ಮೀಸಲು ಅರಣ್ಯ ಹಾಗೂ ಸರಹದ್ದಿನಲ್ಲಿ ಕಾಡಿ ವಿಪರೀತ ನಾಶವಾಗುತ್ತಿರುವುದೇ ಚಿರತೆ ಹಾವಳಿಗೆ ಕಾರಣ ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ.

ಈ ಅರಣ್ಯದಲ್ಲಿ ನೀಲಗಿರಿ ಮರಗಳನ್ನು ತೆಗೆಯುವಂತೆ ಆದೇಶ ಇದ್ದರೂ ನೀಲಗಿರಿ ತೆಗೆದು ಬೇರೆ ಕಾಡು ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ. ಅರಣ್ಯದಲ್ಲಿ ಪ್ರತಿ ವರ್ಷ ಎಷ್ಟು ಗಿಡಗಳನ್ನು, ಯಾವ ಗಿಡಗಳನ್ನು ನಡೆಯುತ್ತಿದೆ ಎಂಬುದರ ಲೆಕ್ಕ ಕೊಡಬೇಕು. ಪ್ರತಿ ಮರವನ್ನುಗಣತಿ ಮಾಡಿ ಬಯೋ ಜಿಯೋ ಮಾಡಿಸಬೇಕು. ಪ್ರತಿವರ್ಷ ಎಷ್ಟು ಮರಗಳನ್ನು ಕದ್ದು ಸಾಗಿಸಲಾಗಿದೆ ಎಂಬುದರ ವಿವರವನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಅವರು.


ವರದಿಗಾರರು ತುಮಕೂರಿನಲ್ಲಿ ವಕೀಲರು