Tuesday, February 24, 2026
Google search engine
Home Blog Page 294

ಸಮಸ್ಯೆ ಎದುರಿಸುವ ಸ್ಥೈರ್ಯ ತುಂಬಿ

ಪಾವಗಡ: ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಮನೋಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ನಿವೃತ್ತ ನ್ಯಾಯಧೀಶ ವೇಣುಗೋಪಾಲ್ ತಿಳಿಸಿದರು.

ಪಟ್ಟಣದ ಶ್ರೀಶಾಲ ಇಂಟರ್ನ್ಯಾಷನಲ್ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಬರುವ ಕಠಿಣ ಪರಿಸ್ಥಿತಿಯನ್ನು ಸರಳ ಹಾಗೂ ಯೋಜನಾತ್ಮಕವಾಗಿ ನಿವಾರಿಸಿಕೊಳ್ಳುವ ಬುದ್ದಿಶಕ್ತಿಯನ್ನು ವಿದ್ಯಾರ್ಥಿಗಳು ಪಡೆಯುವಂತಾಗಬೇಕು. ಭವಿಷ್ಯದಲ್ಲಿ ಕಾಣುವ ಏರಿಳಿತ ಹಾಗೂ ವೈಪಲ್ಯಗಳನ್ನು ಮೆಟ್ಟಿ ನಿಲ್ಲುವಂತಹ ಆತ್ಮವಿಶ್ವಾಸ ಕೊಡುವಂತಹ ಶಿಕ್ಷಣ ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ. ಕೆಲವರು ಸಂಕಷ್ಟಗಳು, ವೈಪಲ್ಯಗಳು, ಎದುರಾದಾಗ ಅನವಶ್ಯಕ ಭಾವೋದ್ವೇಗಕ್ಕೆ ಒಳಗಾಗಿ ಇಲ್ಲದ ಸಮಸ್ಯೆಗಳಿಗೆ ಸಿಕ್ಕಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಸಿ ಅಮೂಲ್ಯವಾದ ಮನುಷ್ಯ ಜನ್ಮವನ್ನು ಹಾಳುಮಾಡಿಕೊಳ್ಳುತ್ತಾರೆ.

ಉನ್ನತ ಶಿಕ್ಷಣ, ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಕಾರಣಗಳಿಗೆ ಆತ್ಮಹತ್ಯೆಯಂತಹ ಹಾದಿ ಹಿಡಿದು ಪೋಷಕರನ್ನು ದು:ಖತಪ್ತರನ್ನಾಗಿಸಿದ್ದಾರೆ. ಅಧುನಿಕತೆಯ ಒತ್ತಡಕ್ಕೆ ಸಿಲುಕಿ ಮನುಷ್ಯ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಅಲೋಚನಾ ಸಾಮಾಥ್ರ್ಯ ನಶಿಸಿ ಹೋಗುತ್ತಿದೆ, ಪರಿಣಾಮವಾಗಿ ಹಲವು ಗಂಡಾಂತರಗಳಿಗೆ ಸಿಕ್ಕಿ ನರಳುತ್ತಿದ್ದಾನೆ. ಆದ್ದರಿಂದ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೋತೆಗೆ ಸಂದಿಗ್ದ ಪರಿಸ್ಥಿತಿಯನ್ನು ದೈರ್ಯವಾಗಿ ಎದುರಿಸುವ ಚಾಕಚಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು

ಸಂಸ್ಥೆಯ ಮುಖ್ಯಸ್ಥ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ ಬರದನಾಡು ಹಿಂದುಳಿದ ತಾಲ್ಲೂಕು, ಪಾವಗಡ ತಾಲ್ಲೂಕಿನ ಮಕ್ಕಳಿಗೆ ಅತಿ ಕಡಿಮೆ ಧರದಲ್ಲಿ ಉತ್ತಮ ಶಿಕ್ಷಣ ನೀಡಬೇಕೆಂಬ ಹೆಬ್ಬಯಕೆ ನನ್ನದಾಗಿತ್ತು, ಆ ಕನಸು ಈಗ ನೇರವೇರಿದೆ, ಕಳೆದ ಹಲವು ವರ್ಷಗಳಿಂದ ಉತ್ತಮ ಶೈಕ್ಷಣಿಕ ಸೇವೆ ನೀಡುತ್ತಿದ್ದೇವೆ ಇದೀಗ ಸಿ.ಬಿ.ಎಸ್ಸಿ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲು ಸಕರ್ಾರದ ಮಾನ್ಯತಾ ಪತ್ರ ಶಾಲೆಗೆ ಸಿಕ್ಕಿದೆ ಇದರಿಂದಾಗಿ ತಾಲ್ಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಇದು ಸಹಕಾರಿಯಾಗಿದೆ, ತಾಲ್ಲೂಕಿನಲ್ಲಿಯೇ ಇದೇ ಮೊದಲ ಬಾರೀಗೆ ನಮ್ಮ ಶಾಲೆಗೆ ಸಿ.ಬಿ.ಎಸ್.ಇ. ಪಠ್ಯಕ್ರಮದ ಪರವಾನಗಿ ಸಿಕ್ಕಿರುವುದು ನಮಗೆ ಅತ್ಯಂತ ಸಂತಸ ಮೂಡಿಸಿದೆ ಎಂದು ತಿಳಿಸಿದರು

ಶಾಲ ಮಕ್ಕಳಿಂದ  ನೃತ್ಯ, ನಾಟಕ, ಗೀತೆ ಗಾಯನ, ಮಿಮಿಕ್ರಿ, ವಿವಿಧ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು

ಕಾರ್ಯಕ್ರಮದಲ್ಲಿ ಬೆಂಗಳೂರು ಐ.ಆರ್.ಎಸ್.ಇ. ಕಂಪೆನಿಯ ಮೇನೆಜರ್ ಹರಿಬಾಬು, ಜಿ.ಪಂ. ಸದಸ್ಯ ಚೆನ್ನಮಲ್ಲಯ್ಯ, ಸಂಸ್ಥೆಯ ಮುಖ್ಯಸ್ಥ ರಾಮಾಂಜನೇಯಲು, ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ಮಾನಂ ವೆಂಕಟಸ್ವಾಮಿ, ಲಕ್ಷ್ಮೀನಾರಯಣಪ್ಪ, ನರಸಿಂಹರೆಡ್ಡಿ, ಮೈಲಪ್ಪ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಚೌಧರಿ, ವಕೀಲ ನಾಗೇಂದ್ರಪ್ಪ, ಗೋವಿಂದಪ್ಪ,ಕರಿಯಣ್ಣ, ಡಾ.ಶಶಿಕಿರಣ್, ಶಾರದರಾಮಾಂಜನೇಯಲು, ಲಕ್ಷ್ಮೀವೆಂಕಟರಾಮಯ್ಯ, ಆದಿಲಕ್ಷ್ಮೀ, ಹನುಮಂತರೆಡ್ಡಿ, ನಾಗೇಂದ್ರ ಇತರ ಮುಖಂಡರು ಹಾಜರಿದ್ದರು

 

 

ಭೂಸೇನಾ ನಿಗಮದ ನಿರ್ಲಕ್ಷ್ಯ: ಕೋಟ್ಯಂತರ ರೂಪಾಯಿ ವ್ಯರ್ಥ ಆರೋಪ

ಪಾವಗಡ:ಗ್ರಾಮ ವಿಕಾಸ ಯೋಜನೆಯಡಿ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿದ್ದಪಡಿಸಿರುವ ಕ್ರಿಯಾ ಯೋಜನೆಯಂತೆ ಭೂಸೇನಾ ನಿಗಮ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಕೆಲ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಂಜುನಾಥಚೌಧರಿ ಆರೋಪಿಸಿದರು.

ಗುಂಡ್ಲಹಳ್ಳಿ, ದಂಡಾಪಾಳ್ಯ ಗ್ರಾಮಕ್ಕೆ ಯೋಜನೆಯಡಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಗ್ರಾಮ ಪಂಚಾಯಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಭೂಸೇನಾ ನಿಗಮದ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ತೀರ್ಮಾನಿಸಿದ ಕೆಲ ಕಾಮಗಾರಿಗಳನ್ನು ಕೈಬಿಟ್ಟಿದ್ದಾರೆ. ಮತ್ತೆ ಈಗಾಗಲೇ ಬೇರೆ ಯೋಜನೆಯಡಿ ಆಗಿರುವ ಕಾಮಗಾರಿಗಳನ್ನು ಕೈ ಗೆತ್ತಿಕೊಂಡಿದ್ದಾರೆ ಎಂದು ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.

ಈಗಾಗಲೇ 44 ಲಕ್ಷ ಹಣವನ್ನು ಗ್ರಾಮ ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡಲಾಗಿದೆ. ಎರಡೂ ಗ್ರಾಮಗಳಲ್ಲಿ ಎಸ್.ಟಿ.ಪಿ. ಟಿ.ಎಸ್.ಪಿ ಯೋಜನೆಯಡಿ ಮುಕ್ತಾಯಗೊಳಿಸಿರುವ ಕಾಮಗಾರಿಗಳನ್ನು ಭೂಸೇನಾ ನಿಗಮದ ಕ್ರಿಯಾ ಯೋಜನೆಯಲ್ಲಿ ಮತ್ತೆ ತೋರಿಸಲಾಗಿದೆ. ಬೇರೆ ಯೋಜನೆಗಳಲ್ಲಿ ಆಗಿರುವ ಕಾಮಗಾರಿ ಹೊರತು ಪಡಿಸಿ ಹೊಸಕಾಮಗಾರಿಗಳನ್ನು ಸೇರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಜವಬ್ಧಾರಿ ಪ್ರದರ್ಶಿಸಲಾಗುತ್ತಿದೆ ಎಂದು ದೂರಿದರು.

ಕಾಮಗಾರಿಗಳು  ಕಳಪೆಯಿಂದ ಕೂಡಿವೆ. ಸಮರ್ಪಕ ಕ್ರಿಯಾ ಯೋಜನೆ ಸಿದ್ದಪಡಿಸುವವರೆಗೆ ಕೆಲಸಗಳನ್ನು ಸ್ಥಗಿತಗೊಳಿಸುವಂತೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೋಟ್ಯಾಂತರ ರೂಪಾಯಿ ಸರ್ಕಾರದ ಹಣ ವ್ಯರ್ಥವಾಗುತ್ತಿದೆ.  ಅಧಿಕಾರಿಗಳು ಶೀಘ್ರ ಗಮನಹರಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ರಮೇಶ್, ಹನುಮಂತರಾಯ ಉಪಸ್ಥಿತರಿದ್ದರು.

ತುಮಕುರು ವಾರ್ಡ್ ಸಮಿತಿ: ಶಾಸಕ, ಆಯುಕ್ತರಿಗೆ ಸವಾಲು

0

ವಿಶೇಷ ವರದಿ: ಇಮ್ರಾನ್ ಪಾಷಾ


ತುಮಕೂರು: ಇದೇ ಮೊದಲ ಸಲ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ನೇಮಕ ಮಾಡಲು ಆಯುಕ್ತರಾದ ಭೂಪಾಲನ್ ಆದೇಶಿಸಿರುವುದು ನಗರದ ಜನರಲ್ಲಿ ಕುತೂಹಲ ಮೂಡಿಸಿದೆ.

ಪಾಲಿಕೆ ಆಯುಕ್ತ ಭೂಪಾಲನ್

ದಕ್ಷ , ಪ್ರಾಮಾಣಿಕ ಅಧಿಕಾರಿಯಾದ ಭೂಪಾಲನ್ ಅವರು , ಪ್ರೆಸ್ ರಾಜಣ್ಣ, ಮಾಜಿ ಟೂಡಾ ಸದಸ್ಯರಾದ ಜಿ.ಕೆ.ಶ್ರೀನಿವಾಸ್, ರಂಗಕರ್ಮಿ ಡಮರುಗ ಉಮೇಶ್, ಹೋರಾಟಗಾರ ಇಮ್ರಾನ್ ಪಾಷ, ಪತ್ರಕರ್ತ ಮಂಜುನಾಥ ಗೌಡ, ಮುಖಂಡರಾದ ಶ್ರೀನಿಧಿ ರಾಜಣ್ಣ, ಸಾಗರ್ ದಯಾನಂದ್, ಗೌ.ತಿ.ರಂಗನಾಥ್ ಮೊದಲಾದವರು ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡ ಆಯುಕ್ತರ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಂವಿಧಾನದ 74 ನೇ ತಿದ್ದುಪಡಿ ಪ್ರಕಾರ, ಮಹಾನಗರ ಪಾಲಿಕೆ ವ್ಯಾಪ್ತಿಯ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಪ್ರತಿಯೊಂದು ವಾರ್ಡ್ನಲ್ಲೂ “ವಾರ್ಡ್ ಸಮಿತಿ”ಯನ್ನು ರಚಿಸುವುದು ಕಡ್ಡಾಯವಾಗಿದೆ. ಇದರ ಮುಂದುವರೆದ ಭಾಗವಾಗಿ ಆಯಾ ವಾರ್ಡ್ ಗಳಲ್ಲಿ “ಏರಿಯಾ ಸಭಾ”ವನ್ನೂ ರಚಿಸಬೇಕಾಗಿದೆ.

2011 ರ ಜನವರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊರಡಿಸಿದ ಕರ್ನಾಟಕ ಮಹಾನಗರಪಾಲಿಕೆಗಳ (ತಿದ್ದುಪಡಿ) ಕಾಯಿದೆ (ಸಮುದಾಯ ಭಾಗವಹಿಸುವಿಕೆ ಕಾಯಿದೆ) ಮತ್ತು ವಾರ್ಡ್ ಸಮಿತಿ ಮತ್ತು ಏರಿಯಾ ಸಭಾದ ನಿಯಮದಲ್ಲಿ ಈ ಬಗ್ಗೆ ಸ್ಪಷ್ಟ ವಿವರಣೆಗಳನ್ನು ನೀಡಲಾಗಿದೆ. ಇವುಗಳ ಅನುಷ್ಠಾನದಿಂದ ಪಾಲಿಕೆಯ ಆಡಳಿತದಲ್ಲಿ ಜನರ ಸಹಭಾಗಿತ್ವ ದೊರಕುವುದಲ್ಲದೆ, ಆಡಳಿತದ ಪ್ರತಿಯೊಂದು ಹಂತಗಳಲ್ಲೂ ಪಾರದರ್ಶಕತೆ ಮೂಡುತ್ತದೆ. ಇದೇ ನಿಜವಾದ ಪ್ರಜಾಪ್ರಭುತ್ವ ಹಾಗೂ ಆಡಳಿತ ವಿಕೇಂದ್ರೀಕರಣ ಎಂದು ಹೇಳಲಾಗಿದೆ.

11-09-2019 ರಿಂದ ನಾಲ್ಕು ದಿನಗಳ ಕಾಲ ಮೇಯರ್ ಶ್ರೀಮತಿ ಲಲಿತಾ ರವೀಶ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧಿನಿಯಮ 1976 ರ ಕಲಂ 13-ಎಚ್ ರಂತೆ ವಾರ್ಡ್ ಸಮಿತಿ ರಚಿಸುವ ಬಗ್ಗೆ ವಿಷಯ (ಸಂಖ್ಯೆ:14) ವನ್ನು ಮಂಡಿಸಲಾಗಿದೆ.

ಈ ಬಗ್ಗೆ ಸರ್ಕಾರದಿಂದ ಪತ್ರ ಬಂದಿರುವುದನ್ನು ಸಭೆಯ ಗಮನಕ್ಕೆ ತರಲಾಗಿದೆ. ಆದರೂ ಸಹ ಸಭೆಯಲ್ಲಿ “ಸದರಿ ವಿಷಯದ ಬಗ್ಗೆ ಚರ್ಚಿಸಿ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲೂ ವಾರ್ಡ್ ಸಮಿತಿ ರಚಿಸಲು ಸದಸ್ಯರು ಒಪ್ಪಿಗೆ ಸೂಚಿಸಿರುವುದಿಲ್ಲ” ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನವು ಸಂವಿಧಾನ ವಿರೋಧಿಯಾಗಿದೆ ಹಾಗೂ ಕಾನೂನು ವಿರೋಧಿಯಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಇತ್ತೀಚೆಗೆ ತುಮಕೂರಿನ ಸರಸ್ ಫೌಂಡೇಷನ್ ಮತ್ತು ಬೆಂಗಳೂರಿನ ಸಿವಿಕ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಾರ್ಡ್ ಸಮಿತಿ ರಚನೆ ಕುರಿತು ನಡೆದ ಕಾರ್ಯಾಗಾರದಲ್ಲಿ ಸಿವಿಕ್ ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಆರ್.ಟಿ.ಐ. ತಜ್ಞರಾದ ವೈ.ಜಿ.ಮುರಳೀಧರನ್ ಅವರು ಈ ಬಗ್ಗೆ ಒತ್ತು ನೀಡಿ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು ಎನ್ನುತ್ತಾರೆ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ.

ವಾರ್ಡ್ ಸಮಿತಿ ರಚಿಸಿದರೆ ಪಾಲಿಕೆ ಸದಸ್ಯರು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ವಾರ್ಡ್ ಸಮಿತಿಗೂ ಅಧಿಕಾರ ಸಿಗುವುದರಿಂದ ಪಾಲಿಕೆ ಸದಸ್ಯರು ಸಮಿತಿ ರಚನೆಗೆ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ.

ಶಾಸಕ ಜ್ಯೋತಿಗಣೇಶ್ ಸಮಿತಿ ರಚನೆ ನಿರ್ಧಾರದಿಂದ ಹಿಂದೆ ಸರಿಯಬಾರದು. ಈ ಸಮಿತಿಗಳಿಗೆ ಪಾಲಿಕೆ ಸದಸ್ಯರ ಸಂಬಂಧಿಗಳು, ಹಿಂಬಾಲಕ ರಿಗೆ ಅವಕಾಶ ಸಿಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ನಗರದ ಜನರು.

ವಾರ್ಡ್ ಸಮಿತಿ ರಚನೆ ಶಾಸಕರು, ಆಯುಕ್ತರು ಇಬ್ಬರಿಗೂ ಸವಾಲಾಗಿದೆ. ಪಕ್ಷಾತೀತ, ಜಾತ್ಯಾತೀತ ವಾಗಿ ಸಮಿತಿಗಳು ರಚನೆಯಾದರೆ ತುಮಕೂರು ನಗರದ ಅಭಿವೃದ್ಧಿ ಚಹರೆ ಬದಲಾಗುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು.

ಮಾನವ ಮಂಟಪ ಸಹಕಾರ ಸಂಘದ ವಾರ್ಷಿಕೋತ್ಸವ

Publicstory.in


ತುಮಕೂರು: ದೊಡ್ಡದೊಡ್ಡ ಬ್ಯಾಂಕ್ ಗಳು ಹಿಂದಿರುಗಿ ಬಾರದ ಸಾಲದ ಸುಳಿಯಲ್ಲಿ ಸಿಲುಕಿದ್ದು ಅವುಗಳ ಉಳಿವಿಗೆ ಸರ್ಕಾರ ಹೆಣಗುತ್ತಿದೆ. ಹಾಗಾಗಿ ಸಹಕಾರಿ ಸಂಘಗಳು ಉಳಿಯಬೇಕಾದರೆ ಬಡ್ಡಿಸಹಿತ ಸಾಲವನ್ನು ಎಲ್ಲರೂ ತೀರಿಸಬೇಕು ಎಂದು ಮಾನವ ಮಂಟಪ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ನಟರಾಜ್ ಹೇಳಿದರು.

ತುಮಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾನವ ಮಂಟಪ ಸಹಕಾರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಅವರು ನೀರವ್ ಮೋದಿ, ವಿಜಯ ಮಲ್ಯ ಅಂಥವರು ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕಿಗಳಿಗೆ ವಂಚಿಸಿ ಪರಾರಿಯಾಗಿದ್ದಾರೆ. ಹಿಂದಿರುಗಿ ಬಾರದ ಸಾಲ ಲಕ್ಷಾಂತರ ಕೋಟಿ ರೂಪಾಯಿ ಇದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಬ್ಯಾಂಕ್ ಗಳನ್ನ ಉಳಿಸಿಕೊಳ್ಳಬೇಕಾಗಿದೆ ಎಂದರು.

ಮಾನವ ಮಂಟಪ ಸಹಕಾರ ಸಂಘಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇದು ಹೊಸ ಸಹಕಾರ ಸಂಘವೇನೂ ಅಲ್ಲ. 19ನೇ ಶತಮಾನದ ಅಂತ್ಯದಲ್ಲಿ ಕುದ್ಮಲ್ ರಂಗರಾಯರು ದಲಿತರು, ಬಡವರ ಏಳ್ಗೆಗಾಗಿ ಗ್ರಾಮೀಣ ಸಹಕಾರ ಸಂಘವನ್ನು ರಚಿಸಿದ್ದರು. ದಲಿತರ ಉದ್ದಾರದ ಕನಸು ಕಂಡಿದ್ದರು. ಹೀಗಾಗಿ ಮಾನವ ಮಂಟಪ ಸಹಕಾರ ಸಂಘದ ಸದಸ್ಯರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ ಎಂದರು.

ಜಾತಿ ಸಹಕಾರ ಸಂಘಗಳು ಎಲ್ಲ ಕಡೆಯೂ ಸಿಗುತ್ತವೆ. ಆದರೆ ಜಾತ್ಯತೀತ ಪರಂಪರೆಯ ಸಂಘಗಳು ಕಡಿಮೆ. ನಮ್ಮ ಉದ್ದೇಶ ದಲಿತ ಮತ್ತು ಸಂತ್ರಸ್ತ ವರ್ಗಗಳು ಸಬಲರಾಗಬೇಕೆಂಬುದಾಗಿದೆ. ಈ ಸಂಘದಲ್ಲಿ ಎಲ್ಲಾ ಸಾಮಾಜಿಕ ಹಿನ್ನೆಲೆಯವರು ಇದ್ದು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಹಿಂದಿರುಗಿ ಬಾರದ ಸಾಲದ ಸುಳಿಗೆ ಇಂತಹ ಸಂಘಗಳು ಸಿಲುಕದಂತೆ ಎಚ್ಚರ ವಹಿಸಬೇಕು. ಸಾಲ ತೆಗೆದಕೊಂಡ ಮೇಲೆ ಅದನ್ನು ತೀರಿಸುವ ಜವಾಬ್ದಾರಿ ಸಾಲ ಪಡೆದವರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಇಂದಿರಾ ಕಾಲೇಜು ಪ್ರಾಂಶುಪಾಲೆ ರೀಟಾ ಶಿವಮೂರ್ತಿ ಮಾತನಾಡಿ, ಸಹಕಾರ ಎಂದರೆ ಒಟ್ಟಾಗಿ ದುಡಿಯುವುದು. ಎಲ್ಲರೂ ಸಾಲ ತೆಗೆದುಕೊಂಡಷ್ಟೇ ಖುಷಿಯಿಂದ ತೀರಿಸುವುದು ಮುಖ್ಯವಾಗುತ್ತದೆ. ದೊಡ್ಡವರು ಸಣ್ಣವರೆಂಬ ಹಮ್ಮುಬಿಮ್ಮು ಬಿಟ್ಟು ದುಡಿಯಬೇಕು ಎಂದು ಸಲಹೆ ನೀಡಿದರು.

ಇಂದು ಗಲ್ಲಿಗೊಂದು ಸಹಕಾರಿ ಸಂಘಗಳಿವೆ. ಆದರೆ ಇಂತಹ ಜಾತ್ಯತೀತ ಸಂಘವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸಂಘದ ಸದಸ್ಯರು ಜವಾಬ್ದಾರಿಯಿಂದ ಶ್ರಮವಹಿಸಿ ದುಡಿಯಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾನವ ಮಂಟಪ ಸಹಕಾರ ಸಂಘದ ಅಧ್ಯಕ್ಷೆ ಡಾ. ಅರುಂಧತಿ, ನಿರ್ದೇಶಕರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಉದ್ಯಮಿ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

ತುರುವೇಕೆರೆಯಲ್ಲಿ 60 ಚಿರತೆ: ಶಾಸಕ ಮಸಾಲ ಜಯರಾಂ

ತುಮಕೂರು: ತುರುವೇಕೆರೆ ತಾಲೂಕಿನಲ್ಲೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಸಾಲ ಜಯರಾಮ್ ಒತ್ತಾಯಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ಮೂವರನ್ನು ನರಭಕ್ಷಕ ಚಿರತೆಗಳು ಬಲಿತೆಗೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಚಿರತೆಗಳು ಮನುಷ್ಯರು ಮತ್ತು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಚಿರತೆಗಳು ತುರುವೇಕೆರೆ ತಾಲೂಕೊಂದರಲ್ಲೇ 50-60 ಇವೆ. ಈಗಾಗಲೇ ದನ, ಕುರಿ, ಮೇಕೆ, ನಾಯಿಗಳನ್ನು ತಿಂದುಹಾಕಿವೆ. ಚಿರತೆಗಳ ದಾಳಿ ನಿರಂತವಾಗಿ ನಡೆಯುತ್ತಲೇ ಇದೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಚಿರತೆಗಳ ದಾಳಿ ಸಂಬಂಧ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಚಿರತೆಗೆ ಬಲಿಯಾಗಲು ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಚಿರತೆಗಳ ದಾಳಿ ನಿಯಂತ್ರಣಕ್ಕೆ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೆನಪು ಬಿಚ್ಚಿಟ್ಟ ಹಿರೇಮಠರು… ಹೋರಾಟ ನಿಲ್ಲದಿರಲಿ

ತುಮಕೂರು: ತುರ್ತು ಪರಿಸ್ಥಿತಿ ವಿರೋಧಿಸಿ ಅಮೆರಿಕದಲ್ಲಿ ಇಂದಿರಾಗಾಂಧಿ ವಿರುದ್ಧ ಅಮೆರಿಕದಲ್ಲಿ ಪಾದಯಾತ್ರೆ ನಡೆಸಿದ್ದು, ಭೂ ಅವ್ಯವಹಾರಗಳ ವಿರುದ್ಧ ಹೋರಾಟ …. ಹೀಗೆ ಹತ್ತು ಹಲವು ಹೋರಾಟಗಳನ್ನು ನೆನಪಿಸಿಕೊಂಡರು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ.

ಸಿದ್ಧರಬೆಟ್ಟದಲ್ಲಿ ಆಯೋಜಿಸಿದ್ದ ನಾಯಕತ್ವ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತೀ ವ್ಶಕ್ತಿಯಲ್ಲಿರುವ ನಿಸ್ವಾರ್ಥ ದೃಢ ಸಂಕಲ್ಪದ ವ್ಶಕ್ತಿತ್ವವೇ ನಾಯಕ. ಎಂತಹ ಪರಿಸ್ಥಿತಿ ಬಂದರೂ ಎದೆಗುಂದದೇ ಸಮಾಜದ ಒಳಿತಿಗಾಗಿ ನಿಂತಾಗ ಸಿಗುವ ಆತ್ಮ ಸಂತೃಪ್ತಿಗೆ ಬೆಲೆಕಟ್ಟಲು ಸಾಧ್ಶವಿಲ್ಲ ಎಂದರು.

ಭಾರತ ಸರ್ಕಾರ ತಮ್ಮ ಪಾಸ್ ಪೋರ್ಟ್ ಅನ್ನು ಅಮಾನತ್ತು ಮಾಡಿದ್ದ ಸಂಧರ್ಭ ಹಾಗೂ ಪ್ರೆಸ್ಟೀಜ್ ಕಂಪೆನಿಯ ಭೂಅವ್ಶವಹಾರದ ಸಂಧರ್ಭದಲ್ಲಿ ತಾವು ಎದುರಿಸಿದ ಪರಿಸ್ಥಿತಿ ವಿವರಿಸಿದರು.

ಪ್ರತೀ ವ್ಶಕ್ತಿಯ ನಾಯಕನನ್ನು ಎಚ್ಚರಿಸಿ ಜಾಗೃತಗೊಳಿಸಿ ಸಂಚಲನ ಮೂಡಿಸಿ 75ರ ಹರೆಯಲ್ಲೂ ಇಡೀ ದಿನ ಶಿಬಿರಾರ್ಥಿಗಳೊಂದಿಗೆ ಕಳೆದರು.

ಉಡುಪಿಯ ಜಯಶ್ರೀ ಭಟ್, ಹಲವಾರು ಚಟುವಟಿಕೆಗಳ ಮೂಲಕ ಶಿಬಿರಾರ್ಥಿಗಳಲ್ಲಿ ಚೈತನ್ಶ ಮೂಡಿಸುತ್ತಾ ಅವರಲ್ಲಿರುವ ನಾಯಕತ್ವದ ಗುಣಗಳನ್ನು ಹೊರಗೆಳೆಯುವ ಪ್ರಯತ್ನ ಮುಂದುವರೆಸಿದರು.ಸಂಜೆ 6ಗಂಟೆಯಾದರೂ ತರಬೇತಿಯ ಚಟುವಟಿಕೆಗಳು ಮುಂದುವರೆದಿದ್ದು ನಾಳೆಯೂ ಸಹ ಜರುಗಲಿದೆ.

ಬೆಳಗಾಂˌ ಚಿತ್ರದುರ್ಗˌ ಮೈಸೂರುˌ ಬೆಂಗಳೂರು ಸೇರಿದಂತೆ ರಾಜ್ಶದ ವಿವಿಧ ಭಾಗಗಳ ವಕೀಲರುˌಸಾಫ್ಟವೇರ್ ತಂತ್ರಜ್ನರುˌ ರೈತ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರದ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ನಾಳೆ ಸಾಮಾಜಿಕ ಹೋರಾಟಗಾರರಾದ ರವಿಕೃಷ್ಣಾರೆಡ್ಡಿಯವರು ಸೇರಿದಂತೆ ಸಂಪನ್ಮೂಲ ವ್ಶಕ್ತಿಗಳಾಗಿ ಪಂಚಾಯತ್ ಪರಿಷತ್ ನ ಕಾಡಶೆಟ್ಟೀ ಹಳ್ಳಿಸತೀಶ್ ಸೇರಿದಂತೆ ಹಲವಾರು ಗಣ್ಶರು ಮತ್ತು ಇನ್ನಷ್ಟು ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ.

ನಾಳೆ ಬೆಳೆಗ್ಗೆ 6ಗಂಟೆಗೆ ಚಾರಣದೊಂದಿಗೆ ಆರಂಭವಾಗಿ ಸಂಜೆ 4.30ಗೆ ಸಮಾರೋಪಗೊಳ್ಳಲಿದೆ.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಫರ್ದಿಸುವ ಆಸಕ್ತರು ಬದಲಾವಣೆಗಾಗಿ ತುಮಕೂರು ಜಿಲ್ಲೆಯ ನಾಗರೀಕರು ಈ ಶಿಬಿರದ ಪ್ರಯೋಜನ ವನ್ನು ಪಡೆದು ಕೊಳ್ಳಬೇಕೆಂದು ಆಯೋಜಿಸಿರುವ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದರು. ವೇದಿಕೆಯ ಸದಸ್ಶರಾದ ಪ್ರಸನ್ನ ˌಜನನಿ ವತ್ಸಲˌ ಹಂದ್ರಾಳುನಾಗಭೂಷಣ್ ˌಮನೋಜ್ ಮುಂತಾದವರು ಭಾಗವಹಿಸಿದ್ದಾರೆ.
9066133377

ತುಮಕೂರು ಹಿರೇಗುಂಡಕಲ್ ನೊಂದಿಗೆ ಚಿ.ಮೂ ಸಂಬಂಧ

ತುಮಕೂರು: ಕನ್ನಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದ ಡಾ.ಚಿದಾನಂದಮೂರ್ತಿಯನ್ನು ಕಳೆದುಕೊಂಡಿರುವುದು ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು ಚಿದಾನಂದಮೂರ್ತಿ ಕನ್ನಡ ಸಾಹಿತ್ಯ, ನಾಡು-ನುಡಿಗೆ ಅಪಾರ ಕೊಡುಗೆಯನ್ನು ನೀಡಿದ್ದರು. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.

ಸಂಶೋಧನಾ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರು ಗಣನೀಯ ಕೆಲಸ ಮಾಡಿದ್ದಾರೆ. ಕನ್ನಡ ಶಾಸನಗಳ ಸಾಂಸ್ಕೃತಿಕ ಆಧ್ಯಯ ಎಂಬ ಸಂಶೋಧನ ಪ್ರಬಂಧವನ್ನು ಬರೆದು ಡಾಕ್ಟರೇಟ್ ಪಡೆದರು. ಕರ್ನಾಟಕದಲ್ಲಿ ಶಾಸನಗಳು ಎಲ್ಲೆಂದರಲ್ಲಿ ಬಿದ್ದುಹೋಗಿದ್ದವು. ಶಿಲಾಶಾಸನಗಳಿಗೆ ಎತ್ತು, ಎಮ್ಮೆ ಕಟ್ಟುತ್ತಿದ್ದರು. ಅವುಗಳಿಗೆ ಸಗಣಿ ಮೆತ್ತಿಕೊಂಡಿದ್ದವು. ಇಂತಹ ಶಾಸನಗಳನ್ನು ಪತ್ತೆ ಮಾಡಿ ಅವುಗಳ ಸಂರಕ್ಷಣೆಯ ಜೊತೆಗೆ ಆ ಶಾಸನಗಳಲ್ಲಿರುವುದನ್ನು ಕೃತಿಗೆ ಇಳಿಸಿದ ಕೆಲಸ ಮಾಡಿದ ಹಿರಿಯರು ಎಂದು ತಿಳಿಸಿದರು.

ತುಮಕೂರು ಜಿಲ್ಲೆಯಲ್ಲೂ ಅವರು ಕಾರ್ಯಕ್ಷೇತ್ರದಲ್ಲಿ ತೊಡಗಿದ್ದರು. ಹಿರೇಗುಂಡಕಲ್ ನಲ್ಲಿರುವ ಶಾಸನಗಳನ್ನು ಪತ್ತೆ ಮಾಡಿ ಅವುಗಳನ್ನು ಬೆಳಕಿಗೆ ತಂದರು. ವಿಮರ್ಶ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಸಣ್ಣಸಣ್ಣ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಕನ್ನಡ ನಾಡು, ಸಂಸ್ಕೃತಿಯನ್ನು ಉಣಬಡಿಸಿದ್ದಾರೆ. ಕನ್ನಡ ಉಳುವಿಗಾಗಿ ಆತ್ಮಹತ್ಯೆಗೂ ಮುಂದಾಗಿದ್ದರು ಎಂದರು.

ಗೋಕಾಕ್ ಚಳವಳಿಯ ನಂತರ ಕರ್ನಾಟಕದಲ್ಲಿ ಸಾಹಿತಿ ಕಲಾವಿದರ ಬಳಗವನ್ನು ಕಟ್ಟಿ ನಾಡುನುಡಿಗೆ ಶ್ರಮಿಸಿದರು. ಕನ್ನಡ-ಕನ್ನಡಿಗೆ-ಕರ್ನಾಟಕ ಕೃತಿಯಂತಹ ಹಲವು ಪುಸ್ತಕಗಳನ್ನು ಹೊರತಂದ ಕೀರ್ತಿ ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ. ಅವರು ಕನ್ನಡದ ನಿಜವಾದ ಆಸ್ತಿಯಾಗಿದ್ದರು. ಅವರಿಲ್ಲದೆ ದೊಡ್ಡದೊಂದು ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.

ತುಮಕೂರಿಗೆ ಬರಲಿದೆ ಹೈಟೆಕ್ ಬಸ್ ನಿಲ್ದಾಣ.

ತುಮಕೂರು:

ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.

ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್‌ ಮಾದರಿಯಲ್ಲಿ ತಲೆ ಎತ್ತಲಿರುವ ಬಸ್ ನಿಲ್ದಾಣವು ಹತ್ತು ಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ1, ಬಿ2, ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ.

ರಾಜ್ಯ ರಾಜಧಾನಿ ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಭಾಗದ ಬಸ್ಸುಗಳು ಹಾದುಹೋಗಲಿದ್ದು, ಪ್ರತಿನಿತ್ಯ 2,400 ಬಸ್ಸುಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ

ಬಹುಮಹಡಿ ಬಸ್ ಟರ್ಮಿನಲ್:
ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು. ವೈಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಬಸ್ ನಿಲ್ದಾಣದಲ್ಲಿ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‍ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ:
ಹೈಟೆಕ್ ಬಸ್ ಟಿರ್ಮಿನಲ್‍ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್ಸುಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್ಸುಗಳು ನಿಲ್ಲುವ ವ್ಯವಸ್ಥೆ ನಿಲ್ದಾಣದಲ್ಲಿ ಇರಲಿದೆ. ಪ್ರತಿನಿತ್ಯ ನಗರ ಸಾರಿಗೆಯ 1,200 ಟ್ರಿಪ್‍ಗಳನ್ನು ಈ ಬಸ್ಸುಗಳು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್ಸುಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್:
ಬೇಸ್ 1, ಬೇಸ್ 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ 1ನಲ್ಲಿ ಕಾರು ಪಾರ್ಕಿಂಗ್‍ಗಾಗಿ ವ್ಯವಸ್ತೆ ಮಾಡಲಾಗುತ್ತದೆ. 167 ನಾಲ್ಕು ಚಕ್ರದ ವಾಹನಗಳನ್ನು ಒಟ್ಟಿಗೆ ಇಲ್ಲಿ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‍ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.

ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್:
ಮೊದಲ ಅಂತಸ್ತು ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜೊತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಸೇರಿದಂತೆ ಶೌಚಾಗೃಹ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸಹ ಪ್ರಯಾಣಿಕರಿಗಾಗಿ ನಿರ್ಮಿಸಲಾಗುತ್ತದೆ.

ಅಂಗಡಿ-ಮಳಿಗೆಗಳು:
2 ಹಾಗೂ 3ನೇ ಅಂತಸ್ತಿನಲ್ಲಿ ಮಾಲ್‍ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ.

ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್ಆರ್‌ಟಿಸಿ ಬಸ್ ಡಿಪೋ-1ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ. 8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಅಶೋಕ ರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್ಸುಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.

ವಿಜಯ ಕರ್ನಾಟಕದಿಂದ ರೈತರಿಗೆ ಸನ್ಮಾನ; ಯಾರಾಗಬಹುದು ಸೂಪರ್ ಸ್ಟಾರ್ ರೈತ

Publicstory. in


ತುಮಕೂರು: ಕೃಷಿಯಲ್ಲಿ ಮಾದರಿ ಸಾಧಕರನ್ನು ಗುರುತಿಸಿ ಅನ್ನದಾತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ಆಯೋಜಿಸಿರುವ ‘ವಿಕ-ಸೂಪರ್ ಸ್ಟಾರ್ ರೈತ 2019’ ಎರಡನೇ ಆವೃತ್ತಿ ಕಾರ್ಯಕ್ರಮವು ಜ.13ರಂದು ತುಮಕೂರಿನಲ್ಲಿ ನಡೆಯಲಿದೆ.

ಬೇರಾವುದೇ ಕನ್ನಡ ಪತ್ರಿಕೆಗಳು ರೈತರನ್ನು ಸನ್ಮಾನಿಸುವ ಕೆಲಸ ಮಾಡದೇ ಇದ್ದಾಗಲೂ ವಿಜಯ ಕರ್ನಾಟಕ ರೈತರನ್ನು ಗುರುತಿಸುವ ಕೆಲಸ ಜನರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಅಂದು ಬೆಳಗ್ಗೆ 11 ಗಂಟೆಗೆ ತುಮಕೂರು ವಿಶ್ವ ವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಮಂದಿ ಸಾಧಕ ರೈತರಿಗೆ *ಸೂಪರ್ ಸ್ಟಾರ್ ರೈತ* ಪುರಸ್ಕಾರ ನೀಡಿ ಗೌರವಿಸಲಾಗುವುದು.

ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ. ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ವಿಶೇಷ ಪುರವಣಿ ಬಿಡುಗಡೆಗೊಳಿಸಲಿದ್ದಾರೆ.

ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ಮಂದಿ ರೈತರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ವಿಜಯ ಕರ್ನಾಟಕ ಕೋರಿದೆ.

ತುಮಕೂರು: ಈ ಗೌಪ್ಯತೆಯ ಗುಟ್ಟೇನು?

ಉಪ್ಪಾರಹಳ್ಳಿ ಸೇಕ್ರೆಡ್ ಹಾರ್ಟ್ ಶಾಲೆ ಪಕ್ಕದ ರಸ್ತೆ ಕಾಮಗಾರಿಯ ವಿವರಗಳೇ ಇಲ್ಲ

ಸಿಟಿಜನ್ ರಿಪೋರ್ಟ್: ಇಮ್ರಾನ್ ಪಾಷ


ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವಿಪರೀತ ಗೌಪ್ಯತೆ ಕಾಪಾಡಿಕೊಳ್ಳುತ್ತಿರುವ ಕಾರಣ ಈ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಕಾಮಗಾರಿಗಳು ಆರಂಭವಾಗುತ್ತಿದ್ದಂತೆ ಕಾಮಗಾರಿಗಳ ಟೆಂಡರ್ ಮೊತ್ತ, ಗುಣಮಟ್ಟದ ವಿವರ, ಕಾಮಗಾರಿ ಅವಧಿ, ನಿರ್ವಹಣೆ, ಉದ್ದ, ಅಗಲ ಮತ್ತಿತರದ ವಿವರಗಳ ನಾಮಫಲಕ ಹಾಕಬೇಕು. ಯಾವುದೇ ಕಾಮಗಾರಿ ನಡೆಸಬೇಕಾದರೂ ಪಾರದರ್ಶಕ ತೆಗೆ ಒತ್ತು ನೀಡಬೇಕು.

ಆದರೆ ತುಮಕೂರು ನಗರದಲ್ಲಿ ಕಾಮಗಾರಿಗಳ ಪಾರದರ್ಶಕ ತೆಗೆ ಒತ್ತುನೀಡಬೇಕು. ಪಾರದರ್ಶಕತೆ ಬೇಕಾದರೆ ಅದರ ಎಲ್ಲ ವಿವರಗಳು ಸಾರ್ವಜನಿಕರಿಗೆ ಗೊತ್ತಾಗಬೇಕು ಎನ್ನುತ್ತಾರೆ ನಾಗರಿಕರು.

ನಗರದಲ್ಲಿ ಕಾಮಗಾರಿಗಳು ಕಳಪೆಯಾಗಿವೆ ಹಾಗೂ ಬೇಕಾಬಿಟ್ಟಿ ನಡೆಸಲಾಗುತ್ತಿರುವುದರ ಹಿಂದೆ ಈ ಗೌಪ್ಯತೆಯೇ ಕಾರಣ ಎನ್ನುತ್ತಾರೆ ಕೆಲವು ಅಧಿಕಾರಿಗಳು.

ಗೌಪ್ಯತೆಯ ಗುಟ್ಟೇನು?
ತುಮಕೂರು ನಗರದ ಅನೇಕ ಬಡಾವಣೆಗಳಲ್ಲಿ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ ನಡೆಯುತ್ತಿರುವುದು ಸರಿಯಷ್ಟೇ.. ಆಶ್ಚರ್ಯದ ಸಂಗತಿಯೆಂದರೆ ಈ ರೀತಿ ಕಾಮಗಾರಿಗಳು ನಡೆಯುತ್ತಿರುವ ಯಾವ ಸ್ಥಳಗಳಲ್ಲೂ ಕಾಮಗಾರಿ ಬಗೆಗಿನ ನಾಮಫಲಕವನ್ನು ( ಬೋರ್ಡ್ ನ್ನು) ಹಾಕುತ್ತಿಲ್ಲ!!

ಕಾಮಗಾರಿಯ ಹೆಸರು, ಅನುದಾನದ ಹೆಸರು, ವೆಚ್ಚದ ವಿವರ, ಗುತ್ತಿಗೆದಾರರ ಹೆಸರು, ಯಾವ ಇಲಾಖೆ? ಮೊದಲಾದ ವಿವರಗಳು ಈ ನಾಮಫಲಕದಲ್ಲಿ ಇರಬೇಕು. ಪ್ರಸ್ತುತ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಬಿಟ್ಟು ಬೇರೆ ನಡೆಯುತ್ತಿರುವ ಕಾಮಗಾರಿಗಳಲ್ಲಿ ಈ ರೀತಿಯ ಬೋರ್ಡುಗಳನ್ನು ಹಾಕುತ್ತಿಲ್ಲ !!! ಏಕೆ ಎಂಬುದು ಅರ್ಥ ವಾಗುತ್ತಿಲ್ಲ!!!

ಇಷ್ಟು ಸಣ್ಣ ಕೆಲಸಕ್ಕೆ ಇಷ್ಟು ಲಕ್ಷ ಖರ್ಚು ಅಯಿತೆ ಎಂದು ಸಾಮಾನ್ಯ ಜನ ಗಾಬರಿ ಯಿಂದ ಹೃದಯ ಒಡೆದು ಹೋಗ ಬಹುದು ಎಂಬ ದೃಷ್ಟಿಯಿಂದ ಹಾಕುವುದಿಲ್ಲ. ತೆರಿಗೆ ಕಟ್ಟುವ ಪ್ರಜೆಗಳ ಮೇಲೆ ಅಷ್ಟು ಪ್ರೀತಿ ಎಂದು ವ್ಯಂಗ್ಯವಾಡಿದರು ವಿಜಯನಗರದ ವಿಜಯೇಂದ್ರ ಕೃಷ್ಣಮೂರ್ತಿ ಅವರು.