Tuesday, February 24, 2026
Google search engine
Home Blog Page 301

ಮಂದರಗಿರಿಗೆ ಭಟ್ಟಾರಕರ ನೇಮಕ: ಯುಗಳ ಮುನಿಗಳ ನಿರ್ದೇಶನ

Publicstory.in


ತುಮಕೂರು: ಜೈನ ಯುಗಳ ಮುನಿಗಳ ನಡೆದ ಶ್ರೀ ಕಲ್ಪದ್ರುಮ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ನೆಡಯಿತು. ಸಮವ ಶರಣ ತೀರ್ಥಂಕರರ ಕಲ್ಪದ್ರುಮ ಆರಾಧನಾ ಮಹೋತ್ಸವವು ಜೈನ ಯುಗಳ ಮುನಿಗಳ ಸಾನ್ನಿಧ್ಯದಲ್ಲಿ ಬಹಳ ವೈಭವೋಪೈತವಾಗಿ ನಡೆಯಿತು.

ತುಮಕೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಿಂದ ದಿಗಂಬರ ಜೈನ ಶ್ರಾವಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ (ಡಿ.19ರಂದು) ಆರಂಭಗೊಂಡಿದ್ದ ಪೂಜೆಯು ಶುಕ್ರವಾರ (ಡಿ.27ರಂದು) ಒಟ್ಟು 9 ದಿನಗಳ ಕಾಲ ನಡೆಯಿತು.

ಈ ಮಹೋತ್ಸವಕ್ಕೆ ನಾಡಿನ ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳು ಸೇರಿ ಎಲ್ಲ ಭಟ್ಟಾರಕ ಶ್ರೀಗಳು ಮತ್ತು ತಮಿಳುನಾಡಿನ ಅರಹಂತಗಿರಿ ಭಟ್ಟಾರಕ ಶ್ರೀಗಳು, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಸಹೋದರರಾದ ಸುರೇಂದ್ರ ಕುಮಾರ್ ದಂಪತಿ ಸಹ ಭಾಗವಹಿಸಿದ್ದು ಭಕ್ತರ ಸಂಭ್ರಮ ಇಮ್ಮಡಿಸಿತು.

ಇದೇ ಮೊದಲ ಸಲ ತುಮಕೂರು ನಗರದಲ್ಲಿ ಇಷ್ಟು ದೊಡ್ಡ ಮಟ್ಟದ ಪೂಜಾ ಸಮಾರಂಭ ಆಯೋಜಿಸುವ ಮೂಲಕ ಎಲ್ಲ ಜೈನ ಬಾಂಧವರು ಸಂಭ್ರಮಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೇರೆ ಜಿಲ್ಲೆಗಳ ಭಕ್ತರು ಹಾಗೂ ಇನ್ನಿತರ ಸಮುದಾಯಗಳ ಭಕ್ತರು ಪೂಜೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಭಕ್ತಾಧಿಗಳಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಸಭೆ: ಪೂಜೆಯ ನಡುವೆಯೂ ಡಿ.21ರಂದು ನಡೆದ ವಿಶೇಷ ಧರ್ಮಸಭೆಯಲ್ಲಿ ಶ್ರವಣಬೆಳಗೊಳದ ಶ್ರೀ ಚಾರಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತಿಯಲ್ಲಿ ತುಮಕೂರು ಜೈನ ಸಮಾಜದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.

ಈ ಸಂದರ್ಭ ತುಮಕೂರಿನ ಮಂದರಗಿರಿ ಕ್ಷೇತ್ರದಲ್ಲಿ ಭಟ್ಟಾರಕ ಸ್ವಾಮೀಜಿಗಳನ್ನುನೇಮಕ ಮಾಡುವಂತೆ ಶ್ರವಣಬೆಳಗೊಳದ ಚಾರುಕೀರ್ತಿ ಶ್ರೀಗಳಿಗೆ ಯುಗಳ ಮುನಿಗಳು ನಿರ್ದೇಶನ ನೀಡಿದರು.

ಇದಕ್ಕೆ ಸಮ್ಮತಿ ಸೂಚಿಸಿದ ಚಾರುಕೀರ್ತಿ ಶ್ರೀಗಳು, ಮಂದರಗಿರಿಯಲ್ಲಿ ಭಟ್ಟಾರಕರು ನೇಮಕವಾದರೆ, ಶ್ರೀ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಮತ್ತು ಅಲ್ಲಿನ ಜಾಗವೂ ರಕ್ಷಣೆಯಾಗುತ್ತದೆ. ಭಕ್ತಾಧಿಗಳಿಗೂ ಊಟದ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬಹುದು ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ನೆರೆದಿದ್ದ ಎಲ್ಲ ಭಕ್ತರು ಚಪ್ಪಾಳೆ ಹಾಕುತ್ತಾ ಜೈಕಾರ ಕೂಗುತ್ತಾ ಸಮ್ಮತಿ ಸೂಚಿಸಿದರು. ಯುಗಳ ಶ್ರೀಗಳ ನಿರ್ದೇಶನಕ್ಕೆ ಮೆಚ್ಚುಗೆ ಸೂಚಿಸಿದರು.

ಒಂಭತ್ತು ದಿನಗಳ ಕಾಲ ನಡೆದ ಈ ಭವ್ಯ ಪೂಜಾ ವಿಧಿವಿಧಾನದಲ್ಲಿ ಜಿಲ್ಲೆಯ ಜೈನ ಮುಖಂಡರಾದ ಪಚ್ಚೇಶ್ ಜೈನ್, ಬಾಹುಬಲಿ ಬಾಬು, ಅಜಿತ್ ಜೈನ್, ಪದ್ಮನಾಭ, ಸುರೇಶ್, ಶೀತಲ್ ಜೈನ್, ಬಾಹುಬಲಿ, ಶ್ರುತ ಮಹಿಳಾ ಸಮಾಜದ ಸದಸ್ಯೆಯರಾದ ಶಾಂತಲಾ, ಶ್ಯಾಮಲಾ ಇತರರು ಭಾಗವಹಿಸಿದ್ದರು.

ಅಣೇಕಾರ್ ಜ್ಯೂಯಲರ್ಸ್ ನ ಮಾಲೀಕ ಪಚ್ಚೇಶ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ಓದುಗರ ಮನಮುಟ್ಟುತ್ತಿರುವ ಇ- ಪತ್ರಿಕೆಗಳು

0

ಲಕ್ಷ್ಮೀಕಾಂತರಾಜು ಎಂಜಿ


ಅದೊಂದು‌ ಕಾಲವಿತ್ತು. ಒಂದು ದಿನ ಪತ್ರಿಕೆ ಪ್ರತಿಯೊಂದನ್ನ ಹತ್ತಾರು ಮಂದಿ ಓದುತ್ತಿದ್ದರು.‌ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕ ಕೊಂಡ ಪತ್ರಿಕೆ ಇಡೀ ಬಸ್ಸಿ‌ನ ತುಂಬೆಲ್ಲಾ ಓಡಾಡುತ್ತಿತ್ತು. ಒಂದು ಚಹಾ ಅಂಗಡಿಯವ ತರಿಸುತ್ತಿದ್ದ ಪತ್ರಿಕೆಯೊಂದನ್ನ ಇಡೀ ಸಂಜೆವರೆಗೂ ಅದೆಷ್ಟು ಜನ ಓದುತ್ತಿದ್ದರು.ಅಂದರೆ, ಅಂದು ಪತ್ರಿಕೆ ಕುರಿತ ಆಸಕ್ತಿ ಓದುಗರ ಓದುವಿಕೆಯು ಗಮನ ಸೆಳೆಯುತ್ತಿತ್ತು.

ಆದರೀಗ,ಕಾಲ ಬದಲಾಗಿದೆ. ಎಲ್ಲವೂ ಅನ್ ಲೈನ್ ಮಯ. ಆನ್ ಲೈನ್ ಕ್ಷೇತ್ರ ಪತ್ರಿಕೋದ್ಯಮಕ್ಕೂ ಕಾಲಿಟ್ಟಿದೆ. ಬೆಳಗೆದ್ದು ಪತ್ರಿಕೆ ಹಂಚುವ ಹುಡುಗನ ಕಾಯುತ್ತಿದ್ದ ಮಂದಿ ಈಗ ಬೆಳಗಿನ ಜಾವಕ್ಕೆ ಸಿಗುವ ತಮ್ಮ ಪತ್ರಿಕೆಗಳನ್ನ ಅಂತರ್ಜಾಲದಲ್ಲೇ ಸಿಗುವ ಆನ್ ಲೈನ್ ನಲ್ಲಿಯೇ ಪತ್ರಿಕೆಗಳನ್ನ ಓದಿರುತ್ತಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಅ್ಯಪ್ ಗಳು ಬಂದ ಮೇಲಂತೂ ಸುದ್ದಿಯ ಪ್ರಸಾರದ ವೇಗವೇ ಬದಲಾಗಿದೆ. ಸುದ್ದಿಗಳು ಅತ್ಯಂತ ವೇಗದಲ್ಲಿ ಹರಡುವುದು ಸಾಮಾಜಿಕ ಜಾಲತಾಣಗಳಲ್ಲಿಯೇ . ಇಂದು ವಾಟ್ಸ್ ಅ್ಯಪ್ ಮತ್ತು ಫೇಸ್ ಬುಕ್ ಗಳಲ್ಲಿ ಬಂದ ಸುದ್ದಿಗಳು ನಾಳಿನ ಪತ್ರಿಕೆಯಲ್ಲಿದ್ದು ಅವೆಲ್ಲಾ ತಂಗಳು ಸುದ್ದಿಗಳಾಗಿ ಜನಾಕರ್ಷಣೆಯೇ ಹೊರಟು ಹೋಗಿದೆ

ಎಲ್ಲ ಪತ್ರಿಕೆಯವರೂ ಫೇಸ್ ಬುಕ್ನಲ್ಲಿ ಅಧಿಕೃತ ನ್ಯೂಸ್ ಪೇಜ್ ಹೊಂದಿದ್ದು ಅವರುಗಳೂ ಕೂಡ ತಾಜಾ ಸುದ್ದಿಯನ್ನೆ ಅಪ್ಲೋಡ್ ಮಾಡಿ ಅದೇ ಸುದ್ದಿ ನಾಳಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ‌.

ಆನ್ ಲೈನ್ ನ್ಯೂಸ್ ಪೇಜ್ ಗಳ ಕಾಲ ಶುರುವಾದಾಗಿನಿಂದ ಸುದ್ದಿ ಪತ್ರಿಕೆಯ ಸ್ವರೂಪವೇ ಬದಲಾಗಿದೆ.

ಆನ್ ಲೈನ್ ಪತ್ರಿಕೆಯಿಂದ ಅನುಕೂಲವೇನು?

ಇಂದು ಕೆಲ ಹಳ್ಳಿಗಳು ನ್ಯೂಸ್ ಪೇಪರ್ ಗಳನ್ನ ಕಂಡಿಲ್ಲ. ಕಾರಣ,ರಸ್ತೆ ಸಂಪರ್ಕ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದಿರುವುದು. ಆದರೆ,ಆನ್ ಲೈನ್ ಪತ್ರಿಕೆಗಳಿಂದ ಕುಗ್ರಾಮಗಳಲ್ಲೂ ಮೊಬೈಲ್ ಮೂಲಕ ಎಲ್ಲ ಪತ್ರಿಕೆ ಓದಬಹುದು. ಪತ್ರಿಕೆಗಳು ಓದುಗರನ್ನ ತಲುಪುವುದು ಸುಲಭ.

ಹಾಗೆ ನೋಡಿದರೆ ಸುದ್ದಿ ಪತ್ರಿಕೆಗಳನ್ನ ಪ್ರಕಟಿಸುವ ವೆಚ್ಚಕ್ಕಿಂತ ಮಾರಾಟ ದರ ಕಡಿಮೆ ಇದ್ದು ನಷ್ಟವೇ ಹೆಚ್ಚು. ವೆಬ್ ಸೈಟ್,ಆನ್ ಲೈನ್ ಪತ್ರಿಕೆಗಳಲ್ಲಿ ಈ ಸಮಸ್ಯೆ ಬರದು.

ಕೃತಿ,ಕಾದಂಬರಿಗಳನ್ನೇ ಓದುಗರು ಇಂದು ಪಿಡಿಎಫ್ ಮೂಲಕ ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಓದುತ್ತಿರುವಾಗ ಕಾಗದದ ಪತ್ರಿಕೆಗಳನ್ನು ಇನ್ನೆಲ್ಲಿ ಓದಿಯಾರು?

ಇವೆಲ್ಲಾ ಬೆಳವಣಿಗೆ ಅರಿತ ಪತ್ರಿಕೆಗಳೂ ಸಹ ತಮ್ಮ ಎಲ್ಲಾ ಆವೃತ್ತಿಗಳನ್ನ ಆನ್ ಲೈನ್ ಮೂಲಕ ಓದಲು ಇದೀಗ ಉಚಿತವಾಗಿ ನೀಡಿದ್ದು ಮುಂದಿನ ದಿನಗಳಲ್ಲಿ ಚಂದಾದಾರರಾಗಿ ಓದಬೇಕಿದ್ದು ಈಗಾಗಲೇ ಸಾಂಕೇತಿಕವಾಗಿ ಕಾಣ ಸಿಗುವ ಸುದ್ದಿ ಪತ್ರಿಕೆಗಳೆಲ್ಲವೂ ಸಂಪೂರ್ಣವಾಗಿ ಆನ್ ಲೈನ್ ನಲ್ಲಿಯೇ ಸಿಗಲಿದ್ದು ಕಾಗದದ ಪತ್ರಿಕೆಗಳು ಮುಂದಿನ ದಿನಗಳಲ್ಲಿ ಕಾಣೆಯಾಗುವುದರಲ್ಲಿ ಅನುಮಾನವಿಲ್ಲ.

ಬೀಜ ಮಸೂದೆ: ರೈತನಿಗೂ ಜೈಲು!?

0

ಮನೋಹರ್ ಪಟೇಲ್


ತುಮಕೂರು; ಹಿಂದಿನ ಕರಡಿನಲ್ಲಿ ಮಸೂದೆಯಲ್ಲಿ ರೈತರ ಅವಶ್ಯಕತೆಗಳಾದ ತಳಿ/ಪ್ರಭೇದಗಳ ಬೀಜ/ಕಸಿಗಳನ್ನು ಉಳಿಸಿಕೊಳ್ಳುವ, ಬಳಕೆಮಾಡುವ, ವಿನಿಮಯಮಾಡಿಕೊಳ್ಳುವ, ಹಂಚಿಕೊಳ್ಳುವ ಅಥವ ತನ್ನ ತೋಟ/ಜಮೀನಿನಲ್ಲಿ ಬೆಳೆದ ಬೀಜಗಳು ಮತ್ತು ಸಸ್ಯಗಳನ್ನು ಬ್ರಾಂಡಿಂಗ್ ಮಾಡದೆ ಮಾರುವ, ನಿಭಂಧನೆಗಳಿಂದ ವಿನಾಯಿತಿ ನೀಡುವ ಷರತ್ತು ಇತ್ತು.

ಆದರೆ ಪ್ರಸ್ತುತ ಕರಡಿನಲ್ಲಿ ಆ ನಿಯಮಗಳನ್ನು ಕರಡಿನಿಂದ ಅಳಿಸಿಲಾಗಿದ್ದು, ಬದಲಿಗೆ ಸರ್ಕಾರದ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಂಶೋದನೆ ಮತ್ತು ವಿಸ್ತರಣೆ ಸಂಸ್ಥೆಗಳಿಗೆ ಮಾತ್ರ ಈ ಕಾಯಿದೆಯಿಂದ ವಿನಾಯಿತಿಯನ್ನು ನೀಡಿದೆ.

ಕಳೆದ ಎರೆಡುವರೆ ದಶಕಗಳಲ್ಲಿ ವಿವಿಧ ಸರ್ಕಾರಗಳ ಬೀಜ ವ್ಯವಸ್ಥೆಯ ನವ ಉದಾರತೆಯ ಖಾಸಗಿಕರಣ ಕಾರಣದಿಂದ ನಮ್ಮ ದೇಶದ ಸಾರ್ವಜನಿಕವಾಗಿ ಬಿತ್ತನೆ ಬೀಜಗಳ ಸಂತಾನೋತ್ಪತ್ತಿ ಕಾರ್ಯಕ್ರಮಗಳು ಕುಸಿದಿ ಹೋಗಿವೆ, ನಮ್ಮ ಸಾರ್ವಜನಿಕ ಬೀಜ ನಿಗಮಗಳು ಸಂಪನ್ಮೂಲಗಳಿಲ್ಲದೆ ನರಳುತ್ತಿದ್ದು, ಬಹುರಾಷ್ಠ್ರೀಯ ಕಂಪನಿಗಳ ಬಲಾಡ್ಯ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರಗಳು ನಮ್ಮ ಸಾರ್ವಜನಿಕ ಸಂಶೋಧನೆ ಮತ್ತು ವಿಸ್ತರಣಾ ವ್ಯವಸ್ಥೆಗಳನ್ನು ಬೀಜ ಮಾರುಕಟ್ಟೆಯಿಂದ ಒಕ್ಕಲೆಬ್ಬಿಸುತ್ತಿವೆ.

2019 ರ ಬೀಜ ಕಾಯ್ದೆಯ ಆವೃತ್ತಿಯು ಖಾಸಗಿ ಕಂಪನಿಗಳಿಗೆ ಮುಕ್ತ ಹಸ್ತದಿಂದ ಸ್ವಾಗತ ಮಾಡುತ್ತ ಆ ಮೂಲಕ ಭಾರತದ ರೈತರ ಹಕ್ಕುಗಳು ಮತ್ತು ಬೀಜ ಸಾರ್ವಭೌಮತ್ವವನ್ನು ನಾಶಪಡಿಸಿದೆ.
ಈ ಕಾಯಿದೆಯ ಷರತ್ತು 11 ರಡಿಯಲ್ಲಿ ಯಾರೇ ಕೃಷಿ ಜಮೀನು ಹೊಂದಿರಿವವ ಈಗ “ರೈತ” ಎಂಬ ಹೊಸ ವ್ಯಾಖ್ಯಾಯನದಡಿಯಲ್ಲಿ , ಬೇಯರ್ ಕಂಪನಿಯು “ ರೈತ ” ಎಂದು ಅರ್ಹತೆ ಪಡೆಯಬಹುದು !! .

ಹಾಗೇ, 47 ನೇ ಷರತ್ತಿನಂತೆ ವಿಶ್ವದ ದೈತ್ಯ ಕಂಪನಿಗಳಾದ ಬೇಯರ್/ಮಾನ್ಸಾಂಟೋ ಮತ್ತು ಇತರೆ ಬಹುರಾಷ್ಠ್ರೀಯ ಕಂಪನಿಗಳು ಪ್ರಸ್ಥುತ ಹೊಸ ಕಾಯಿದೆಯಿಂದ ನಿಯಂತ್ರಣ ಮುಕ್ತಗೊಳಿಸಬಹುದಾಗಿರುತ್ತದೆ !!.

ಇದಕ್ಕಾಗಿಯೇ, ಈ ಕಾಯಿದೆ ಬಹುರಾಷ್ಠ್ರೀಯ ನಿಗಮಗಳ ಪಾಲಿಗೆ ಅನಿಯಂತ್ರಣ ಮಸೂದೆ, ಮತ್ತು ಭಾರತದ ಶ್ರೀಮಂತ ಕೃಷಿ ಜೀವವೈವಿಧ್ಯತೆ ಪರಂಪರೆಯನ್ನು ಉಳಿಸಿ, ಸಂರಕ್ಷಿಸಿ ಮತ್ತು ಬೆಳಸಿಕೊಂಡು ಬಂದ ನಿಜ ರೈತರ ಪಾಲಿಗೆ ಪೋಲಿಸ್ ರಾಜ್ ಮಸೂದೆ ಎಂದು ಹೇಳಬಹುದು.

ಈ ಕಾಯಿದೆಯನ್ನು ರೈತ ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಕನಿಷ್ಠ ಒಂದು ವರ್ಷ ಜೈಲು ಮತ್ತು ಐದು ಲಕ್ಷ ರೂಪಾಯಿಗಳವರೆಗೆ ಜುಲ್ಲ್ಮಾನ ಹಾಕಲಾಗುತ್ತದೆ !! ಇದು ಕೇವಲ ಭಾರತದ“ರೈತ” ನ ಭೂಮಿ, ಬಿತ್ತನೆ ಬೀಜಗಳ ಹಕ್ಕು ಮತ್ತು ಸಾರ್ವಭೌಮತ್ವವನ್ನು ಕಿತ್ತಿಕೊಳ್ಳುವ ಕುತಂತ್ರವಾಗಿದೆ.

(ಮುಂದುವರೆಯುವುದು: ಲೇಖನದ ಅಭಿಪ್ರಾಯ, ವಿಶ್ಲೇಷಣೆ ಲೇಖಕರದೇ ಹೊರತು ಪತ್ರಿಕೆಯದ್ದಲ್ಲ)

ಕಿಸಾನ್ ಸನ್ಮಾನ್ ಹಣ ಬಿಡುಗಡೆ ಮಾಡಲಿರುವ ನರೇಂದ್ರ ಮೋದಿ

ತುಮಕೂರು: ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಇದುವರೆಗೆ ಮೂರು ಕಂತುಗಳಲ್ಲಿ ರೈತರಿಗೆ ಹಣವನ್ನು ಬಿಡುಗಡೆ ಮಾಡಿದೆ. ಜನವರಿ 2ರಂದು ತುಮಕೂರಿನ ಸರ್ಕಾರಿ ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ನಾಲ್ಕನೆ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸುವರು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರೈತರ ಸಮಾವೇಶ ನಡೆಯುವ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ವಾರ್ಷಿಕ ಆರು ಸಾವಿರ ರೂಪಾಯಿ ನೀಡಿದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಿದೆ. ಇದರಿಂದ ಪ್ರತಿಯೊಬ್ಬ ರೈತರಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ದೊರೆಯಲಿದೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಧಾನಿ ಮೋದಿ ಪ್ರಶಸ್ತಿ ವಿತರಿಸುವರು. ದೇಶದ ಆರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿರುವ 42 ಮಂದಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಜನವರಿ 3ರಂದು ಜಿಕೆವಿಕೆ ಆವರಣದಲ್ಲಿ ಕೃಷಿ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ ಸಮಾವೇಶದಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೂಮೊದಲು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಲಿರುವ ಪ್ರಧಾನಿ ಸುಮಾರು ಒಂದೂವರೆ ಗಂಟೆ ಕಾಲ ಮಠದಲ್ಲಿ ಕಾಲ ಕಳೆಯಲಿದ್ದಾರೆ. ಇದೇ ವೇಳೆ ಧ್ಯಾನಮಂದಿರಲ್ಲಿ ಧ್ಯಾನ ಮಾಡುವರು ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವ ಸಂಬಂಧ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಲಿದ್ದಾರೆ. ಈಗ ನಾವು ಏನನ್ನೂ ಹೇಳಲು ಬರುವುದಿಲ್ಲ. ಆದರೆ ಶಿವಕುಮಾರ ಶ್ರೀಗಳು ಭಾರತ ರತ್ನ ಪ್ರಶಸ್ತಿಗಿಂತ ದೊಡ್ಡವರು. ಅವರ ಸೇವೆ ಪ್ರಶಸ್ತಿಗೂ ಮಿಗಿಲು. ಭಾರತರತ್ನ ಪ್ರಶಸ್ತಿ ಕುರಿತು ನಾವು ಏನನ್ನೂ ಕೇಳುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ತುಮಕೂರಿನಲ್ಲಿ ನಡೆಯಿತು ಗದಾಯುದ್ಧ

0

ತುಮಕೂರು: ವಿದ್ಯಾರ್ಥಿಗಳೇ ಪ್ರದರ್ಶಿಸಿದ ಯಕ್ಷಗಾನ ಏಕಾದಶಿ ದೇವಿ ಮಹಾತ್ಮೆ ಹಾಗೂ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಗದಾಯುದ್ಧ ತುಮಕೂರಿನ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾದವು.

ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಯಕ್ಷದೀವಿಗೆಯ ಸಹಕಾರದೊಂದಿಗೆ ಎಸ್.ಎಸ್.ಪುರಂನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಿದ ಒಂದು ದಿನದ ವಿಚಾರ ಸಂಕಿರಣದ ಅಂಗವಾಗಿ ಎರಡು ಯಕ್ಷಗಾನ ಪ್ರದರ್ಶನಗಳು ನಡೆದವು.

ಯಕ್ಷದೀವಿಗೆಯ ಅಧ್ಯಕ್ಷೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಅವರಿಂದ ತರಬೇತಿ ಪಡೆದ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಬಣ್ಣಹಚ್ಚಿ ಗೆಜ್ಜೆ ತೊಟ್ಟು ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಪ್ರದರ್ಶಿಸಿದರು.

ಮಾರುತಿ ವಿದ್ಯಾಕೇಂದ್ರ, ಬಿಷಪ್ ಸಾರ್ಜೆಂಟ್ ಶಾಲೆ, ಶ್ರೀ ಗುರುಕುಲ್, ಚೇತನ ವಿದ್ಯಾಮಂದಿರ, ವಿದ್ಯಾವಾಹಿನಿ ಕಾಲೇಜು, ಶ್ರೀಚೈತನ್ಯ ಟೆಕ್ನೋ ಸ್ಕೂಲ್, ಎಚ್‍ಎಂಎಸ್ ಐಟಿ, ತುಮಕೂರು ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಒತ್ತಡದಿಂದ ಹೊರಬನ್ನಿ: ಶಾಸಕ ಜ್ಯೋತಿ ಗಣೇಶ

ಶಾಸಕ ಜ್ಯೋತಿಗಣೇಶ್ ಅವರ ಆಟದ ಭಂಗಿ

Publicstory.in


ತುಮಕೂರು:ಸರ್ಕಾರಿ ನೌಕರರು ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕಗಳ ಸಹಯೋಗದಲ್ಲಿ ನಗರದ ಎಸ್.ಐ.ಟಿ ಕಾಲೇಜಿನ ಶಿವಕುಮಾರ ಸ್ವಾಮಿಗಳ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕಂತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರಲ್ಲಿ ಅತಿಯಾದ ಒತ್ತಡ ಇರುವುದರಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳುವಲ್ಲಿ ಅನುಕೂಲವಾಗುವುದು ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾಸಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಭಾಗವಹಿಸಲು ಹೇಗೆ ಉತ್ಸುಕರಾಗಿದ್ದೀರೋ.. ಅದೇ ರೀತಿ ಕಚೇರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡೆ, ಯೋಗ, ವಾಯ್ಯಾಮ, ಆಟೋಟಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿರಿ. ಕ್ರೀಡಾಕೂಟದಲ್ಲಿ ಗೆಲುವಿಗೆ ಮಹತ್ವ ಕೊಡದೆ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲೆಯ 10 ತಾಲೂಕುಗಳಿಂದ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ನರಸಿಂಹರಾಜು, ನಿರ್ದೇಶಕ ಎಚ್.ಕೆ ನರಸಿಂಹಮೂರ್ತಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಅಕ್ರಮ‌ ಮದ್ಯ ಮಾರಾಟ: ವಿದ್ಯಾರ್ಥಿಗಳ ರೋಷಾಗ್ನಿಗೆ ಬೆದರಿದ ಗ್ರಾಮ ಪಂಚಾಯ್ತಿ

ಲಕ್ಷ್ಮೀಕಾಂತರಾಜು ಎಂ.ಜಿ.


ಗುಬ್ಬಿ ತಾಲ್ಲೂಕು ಮಂಚಲದೊರೆ ಗ್ರಾಮ ಗ್ರಪಂಚಾಯತಿಯ ಕೇಂದ್ರ ಸ್ಥಾನ. ಊರು‌ ಹಾಗೂ ವ್ಯಾಪ್ತಿ‌ ದೊಡ್ಡದಿದ್ದರೂ ಇಲ್ಲಿ ಅಧಿಕೃತ ವೈನ್ ಶಾಪ್ ಇಲ್ಲ. ಹಾಗಂತ,ಇಲ್ಲಿ ಎಣ್ಣೆಗೆ ಬರವಿಲ್ಲ. ಅನಧಿಕೃತವಾಗಿ ಮಂಚಲದೊರೆ ಗ್ರಾಮವೊಂದರಲ್ಲೇ ಎಳೆಂಟು ಮಂದಿ ಮದ್ಯ ಮಾರಾಟಗಾರರು ಇದ್ದು ಸಮಯದ ಮಿತಿ ಇಲ್ಲದೇ ಮದ್ಯ ಜನರ ಕೈಗೆ ಸಿಗುತ್ತದೆ.

ಹೌದು. ಮಂಚಲದೊರೆ ಗ್ರಾಪಂ ವ್ಯಾಪ್ತಿಯ ಮಂಚಲದೊರೆ,ಜೋಗಿಹಳ್ಳಿ,ಕುಂಟರಾಮನಹಳ್ಳಿಗಳಲ್ಲಿ ಅಕ್ರಮ‌ ಮದ್ಯ ಮಾರಾಟಗಾರರು ಇರುವ ಕಾರಣ ಇಲ್ಲಿ ಎಗ್ಗಿಲ್ಲದೇ ಈ ದಂದೆ ನಡೆಯುತ್ತಿದೆ.

ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು

ಪಟ್ಟಣ ಹಾಗೂ ನಗರಗಳಲ್ಲಿ ಇರುವ ಅಧಿಕೃತ ಮದ್ಯದ ಅಂಗಡಿಗಳಲ್ಲಿ ಮದ್ಯ ಖರೀದಿಸಲು ನಿರ್ದಿಷ್ಟ ಸಮಯವಿದೆ. ಆದರೆ, ಈ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರು ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೂ ಕುಡಿಯುವ ಮಂದಿಗೆ ಎಣ್ಣೆ ಸಿಗುವಂತೆ ಮಾಡುವದರಿಂದ ಕುಡುಕರಿಗೆ ವರದಾನವಾಗಿ ಎಲ್ಲ‌ ಸಮಯದಲ್ಲೂ ಪಾನ ಮತ್ತರಾಗಿರುವುದು ಈ ಭಾಗದಲ್ಲಿ ಕಂಡುಬರುತ್ತಿದೆ ಎಂದು ಮಂಚಲದೊರೆ ಗ್ರಾಮಸ್ಥರು ಆರೋಪಿಸುತ್ತಾರೆ.

ಈ ಅಕ್ರಮ ಮದ್ಯ ಮಾರಾಟದ ಮಿತಿ ಮೀರಿದ ಪರಿಣಾಮ‌ ಇಂದು ಮಂಚಲದೊರೆ ಗ್ರಾಮ‌ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರುಗಳು ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡುವಂತಿಲ್ಲ. ಆ ರೀತಿ ಕಟ್ಟುನಿಟ್ಟಿನ‌ ಕ್ರಮ ವಹಿಸಬೇಕು ಎಂದು ಪ್ರತಿಭಟನಾ‌ ಸ್ಥಳಕ್ಕೆ ಬೇಟಿ ನೀಡಿದ ಆರಕ್ಷಕ‌ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ಹೇರಿದರು.

ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾ.ಪಂ ಬರೆದ ಪತ್ರ

ಮನವಿ ಸ್ವೀಕರಿಸಿದ ಅಧಿಕಾರಿಗಳು ಇನ್ನು ಮುಂದೆ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವಹಿಸಲಾಗುವದೆಂಬ ಭರವಸೆಯ ಮೇರೆ ಪ್ರತಿಭಟನಾ ನಿರತರು ಧರಣಿಯನ್ನ ಹಿಂತೆಗೆದರು.

ಮಂಚಲದೊರೆ ಹಾಗೂ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ‌ ಮದ್ಯ ಮಾರಾಟದಿಂದ ಜನರು ಕುಡಿತವನ್ನ ಹೆಚ್ಚಿಸಿ ತಮ್ಮ‌ ಸಂಪಾದನೆಯನ್ನೆಲ್ಲಾ ಕುಡಿತಕ್ಕೆ ಸುರಿಯತ್ತಿದ್ದಾರೆಂದು ಇಲ್ಲಿನ ಗ್ರಾಮಸ್ಥರುಗಳು ಆರೋಪಿಸುತ್ತಿದ್ದಾರೆ.

ಈ ಪ್ರತಿಭಟನೆ ಹಾಗೂ ಇಲ್ಲಿನ ಅಕ್ರಮ ಮದ್ಯದ ವಿಚಾರವನ್ನ ಅರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಖುತ್ತಾರಾ ಕಾದು ನೋಡಬೇಕು.


ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ‌ ಬೇಟಿ ನೀಡಿ ಮನವಿ ಆಲಿಸಿದ್ದು, ವಿಷಯವನ್ನ ಮೇಲಧಿಕಾರಿಗಳಿಗೆ ಮುಟ್ಟಿಸಿದ್ದು ನಮ್ಮ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುವುದು

ಶಂಕರೇಶ್,ಎಎಸ್ ಐ, ಚೇಳೂರು ಠಾಣೆ


ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ್ದು ಪ್ರತಿಭಟನಾ‌ನಿರತರಿಂದ ಮಾಹಿತಿ ಪಡೆದಿದ್ದು ಅಕ್ರಮ‌‌ ಮದ್ಯ ಮಾರಾಟಗಾರರು ಕಂಡುಬಂದರೆ ಕಠಿಣ ಕ್ರಮ ವಹಿಸಲಾಗುವುದು

ಲೋಕೇಶ್. ಅಬಕಾರಿ ನಿರೀಕ್ಷಕರು,ಗುಬ್ಬಿ


ಮಂಚಲದೊರೆ ಗ್ರಾಮ ಮತ್ತು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವರನ್ನ ಗ್ರಾಮಸ್ಥರು ಆರೋಪಿಸಿರವರಿಗೆ ಇಂದು ನೋಟೀಸ್ ನೀಡಿ ಸಂಬಂಧಿತ ಅಧಿಕಾರಿಗಳಿಗೂ ಸದರಿ ಪ್ರತಿಯನ್ನ ಕಳುಹಿಸಿದ್ದೇನೆ

ರಾಜೇಂದ್ರಪ್ರಸಾದ್ ಪಿಡಿಓ
ಮಂಚಲದೊರೆ ಗ್ರಾಪಂ

ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್

Publicstory. in


ತುಮಕೂರು: ಎಲ್ಲಾ ವಿಭಾಗದ ರೈತರು, ಕೃಷಿಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸುವ ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲಬೆಲೆ ಖಾತರಿಕಾಯ್ದೆ ಜಾರಿ, ಪ್ರವಾಹಪೀಡಿತ ಜನರಿಗೆ ಸೂಕ್ತಪರಿಹಾರ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್‍ಗೆ ರೈತ-ಕೃಷಿಕೂಲಿಕಾರರ ಸಂಘಟನೆಗಳು ಕರೆ ನೀಡಿವೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ ತಿಳಿಸಿದರು.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ದೇಶದಲ್ಲಿ ಕೃಷಿಬಿಕ್ಕಟ್ಟು ಹೆಚ್ಚಿದ್ದು ರೈತ ಸಮುದಾಯ ಸಂಕಷ್ಟ ಅನುಭವಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಜನರ ನೆರವಿಗೆ ಬರುತ್ತಿಲ್ಲ ಎಂದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಬಿಟ್ಟು ಬೇರೆ ವಿಷಯಗಳನ್ನು ಪ್ರಸ್ತಾಪಿಸುತ್ತ ಕಾಲ ಕಳೆಯುತ್ತಿದೆ. ಹೀಗಾಗಿ ರೈತ ಸಮಸ್ಯೆಗಳನ್ನು ನಿವಾರಿಸುವಂತೆ ಗಮನ ಸೆಳೆಯಲು ಬಂದ್ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಎಐಕೆಎಸ್‍ಸಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕೃಷಿಬಿಕ್ಕಟ್ಟು ತೀವ್ರವಾಗಿದೆ. ರೈತರು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೂ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಯಿತು. ಅಮೂಲ್ಯವಾದ ಮಳೆನೀರನ್ನು ಸಂಗ್ರಹಿಸಿಡುª ಕೆಲಸವನ್ನು ಯಾರೂ ಮಾಡಲಿಲ್ಲ. ಸಣ್ಣನೀರಾವರಿ ಸಚಿವರು ಇದೇ ಜಿಲ್ಲೆಯವರು. ಅವರು ಹೇಮಾವತಿ ನೀರನ್ನು ಸಮರ್ಪಕವಾಗಿ ಕೆರೆಗಳಿಗೆ ತುಂಬಿಸುವಂತೆಹ ಕೆಲಸವನ್ನು ಮಾಡಲಿಲ್ಲ ಎಂದು ಆರೋಪಿಸಿದರು.

ಈ ಬಾರಿಯ ಮಳೆಯ ನೀರನ್ನು ಸಂಗ್ರಹಿಸಿದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಈಗ ಕೆರೆಯ ನೀರು ಬತ್ತಿಹೋಗಿದೆ. ಇದರಿಂದ ರೈತರು ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಆಜ್ಜಪ್ಪ, ಅಖಿಲ ಭಾರತ ಕಿಸಾನ್ ಸಭಾದ ಶಶಿಕಾಂತ್, ರೈತ ಮುಖಂಡ ಬಿ.ಉಮೇಶ್, ರೈತ ಸಂಘದ ರಂಗಹನುಮಯ್ಯ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಮೇಲೆ ಹಲ್ಲೆ – ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

Publicstory.in


ತುರುವೇಕೆರೆ: ತಾಲೂಕಿನ ಮಾವಿನಹಳ್ಳಿ ಅಂಗನವಾಡಿ ಕಾರ್ಯಕರ್ತೆ ಪದ್ಮ ಅವರ ಮೇಲೆ ಪ್ರಕಾಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಸೇರಿದಂತೆ ಗುಂಪೊಂದು ತೀವ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕಾರ್ಯಕರ್ತೆ ಪದ್ಮ ಅವರನ್ನು ಅವರ ತೋಟದ ಮನೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಪದ್ಮಾ ಅವರ ಕೈಬೆರಳು ಕತ್ತರಿಸಿ ಹೋಗಿವೆ. ತೀವ್ರ ಗಾಯಗೊಂಡಿರುವ ಪದ್ಮಾ ಅವರನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಪದ್ಮಾ ಅವರು ಮಾವಿನಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪಕ್ಕದ ಮಾಲೆ ಗ್ರಾಮದ ಪ್ರಕಾಶ್ ಮತ್ತು ಪತ್ನಿಯ ನಡುವೆ ನಡೆದ ಜಗಳದಲ್ಲಿ ಪದ್ಮಾ ಕೌನ್ಸಿಲಿಂಗ್ ನಡೆಸಿದ್ದರು. ಈ ಸಂಬಂಧ ಪ್ರಕಾಶ್ ಕೌನ್ಸಿಲಿಂಗ್‍ನಲ್ಲಿ ತನ್ನ ಪರ ನಿಲ್ಲಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಪದ್ಮಾ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಪ್ರಕಾಶ್ ಮಾತನ್ನು ಪದ್ಮಾ ಕೇಳಿರಲಿಲ್ಲ ಎನ್ನಲಾಗಿದೆ.

ಹೀಗಾಗಿ ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ಪದ್ಮಾ ವಾಸವಿದ್ದ ತೋಟದ ಮನೆಗೆ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ತನ್ನ ಗುಂಪನ್ನು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ತೋಟದಲ್ಲಿ ಅಟ್ಟಾಡಿಸಿಕೊಂಡು ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರೈಲ್ ಆಗಿದೆ. ಹೀಗಾಗಿ ಮಹಿಳೆಯರ ನೆರವಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆಕೋರರನ್ನು ರೌಡಿ ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಒತ್ತಾಯಿಸಿದೆ.

ಸಣ್ಣ ಗ್ರಾಮದ ಹುಡ್ಗನ ದೊಡ್ಡ ಸಾಧನೆ…

0

ಲಕ್ಷ್ಮೀಕಾಂತರಾಜು ಎಂಜಿ


ತನ್ನ ಶೈಕ್ಷಣಿಕ ಸಾಧನೆಯಿಂದ ಸಣ್ಣ ವಯಸ್ಸಿನಲ್ಲಿಯೇ ಭಾರತ ಸರ್ಕಾರದಿಂದ ಆಹ್ವಾನಿತರಾಗಿ ಭಾರತದ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ವೀಕ್ಷಕರಾಗಿ ತೆರಳುವ ಅವಕಾಶವನ್ನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಯಶಸ್ ಪಡೆದಿದ್ದಾನೆ.

ಹೌದು. ದೇಶದ ಅಪ್ರತಿಮ ನೂರು ಶೈಕ್ಷಣಿಕ ಹಾಗೂ ಇತರೆ ಸಾಧಕರನ್ನ ಗುರತಿಸಿ ಆಹ್ವಾನಿಸಿ ರುವ ಕಾರಣ ಜನವರಿ ಇಪ್ಪತ್ತಾರರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ದೆಹಲಿಗೆ ಯಶಸ್ ತೆರಳಲಿದ್ದಾನೆ.

ಈ ಅವಕಾಶದಿಂದ ಯಶಸ್ 2020 ರ ದೆಹಲಿಯ ಗಣರಾಜ್ಯೋತ್ಸವದ ಕಾರ್ಯಕ್ರಮದ ಪೇರೇಡ್ ನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಾಕ್ಸ್ ನಲ್ಲಿ ಕುಳಿತು ವೀಕ್ಷಿಸಲಿದ್ದಾನೆ

ಏನಿದು ಸಾಧನೆ?


ಕಳೆದ ಶೈಕ್ಷಣಿಕ ಸಾಲಿನ ಸಿಬಿಎಸ್ ಇ 10 ನೇಯ ತರಗತಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ವಿದ್ಯಾವಾರಿಧಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಯಶಸ್ ಹತ್ತನೇಯ ತರಗತಿ ಸಿಬಿಎಸ್ ಇ ಪರೀಕ್ಷೆಯಲ್ಲಿ 500 ಅಂಕಗಳಿಗೆ 498 ಅಂಕಗಳನ್ನ ಪಡೆಯುವ ಮೂಲಕ ದಕ್ಷಿಣ ವಲಯಕ್ಕೆ ಪ್ರಥಮ ಸ್ಥಾನ ಪಡೆದು ತನ್ನ ಪ್ರತಿಭೆ ಮೆರೆದಿದ್ದ. ಸಿಬಿಎಸ್ ಇ ದಕ್ಷಿಣ ವಲಯಕ್ಕೆ ತಮಿಳುನಾಡು,ಕರ್ನಾಟಕ‌,ಕೇರಳ ಹಾಗೂ ಆಂಧ್ರ ರಾಜ್ಯಗಳು ವ್ಯಾಪ್ತಿಗೆ ಬರಲಿದ್ದು ಈ ನಾಲ್ಕು ರಾಜ್ಯಗಳಿಗೆ ಪರೀಕ್ಷೆಯಲ್ಲಿ ಮೊದಲಿಗನಾಗಿದ್ದು ವಿಶೇಷವಾಗಿತ್ತು.

ಯಶಸ್ ನ ಈ ಶೈಕ್ಷಣಿಕ ಸಾಧೆಯನ್ನ ಗುರುತಿಸಿದ ಭಾರತ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ದೇಶದ ನೂರು ಸಾಧಕರಲ್ಲಿ ಯಶಸ್ ಕೂಡ ಒಬ್ಬನಾಗಿ ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದು ತುಮಕೂರು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ‌ ಗ್ರಾಮದ ಕುಂಚಿಟಿಗ ಸಮುದಾಯದ ದೇವರಾಜು ಶ್ರೀಮತಿ‌ ನೇತ್ರಾವತಿ ದಂಪತಿಯ ಪುತ್ರನಾದ ಯಶಸ್ ಗ್ರಾಮೀಣ ಪ್ರದೇಶದ ಶಾಲೆಯಲ್ಲಿಯೇ ಸಿಬಿಎಸ್ ಇ ವಿಭಾಗದಲದಲ್ಲಿ ಓದಿ ಯಾವುದೇ ಟ್ಯೂಷನ್ ಪಡೆದುಕೊಳ್ಳದೆ ಶಾಲೆ ಹಾಗೂ ಸ್ವ ಪರಿಶ್ರಮದಿಂದ ಓದಿ ಫಲಿತಾಂಶದಲ್ಲಿ ದಕ್ಷಿಣವಲಯಕ್ಕೆ ಮೊದಲಿಗನಾಗಿದ್ದು ಅಪ್ರತಿಮ ಸಾಧನೆಯೇ ಸರಿ


ತನ್ನ ಶೈಕ್ಷಣಿಕ ಸಾಧನೆಯಿಂದ ತಮ್ಮ‌ ಮಗ ದೇಶದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಹೋಗುತ್ತಿರುವುದು ತಮಗೆ ಅತ್ಯಂತ ಸಂತೋಷವಾಗಿದೆ

ನೇತ್ರಾವತಿ. ಯಶಸ್ ಅವರ ತಾಯಿ


ಕಳೆದ ಸಿಬಿಎಸ್ ಇ ಫಲಿತಾಂಶದಲ್ಲಿ‌ ದಕ್ಷಿಣ ವಲಯಕ್ಕೆ ಪ್ರಥಮ ಸ್ಥಾನ‌ ಪಡೆದು ತಮ್ಮ‌ ಶಾಲೆಗೆ ಹೆಸರು ತಂದುಕೊಟ್ಟಿದ್ದ ಯಶಸ್ ಮತ್ತೆ ಭಾರತ ಸರ್ಕಾರದ ಸಾಧಕರಾಗಿ ಗುರ್ತಿಸಿರುವುದು ನಮ್ಮ‌ ಶಾಲೆಗೆ ಹೆಮ್ಮೆಯ ವಿಷಯವಾಗಿದೆ.


ಕವಿತ, ಪ್ರಾಂಶುಪಾಲರು,ವಿದ್ಯಾವಾರಿಧಿ ಶಾಲೆ,ಹುಳಿಯಾರು.