Monday, December 29, 2025
Google search engine
Home Blog Page 309

ಆಧಾರ್ ಕೆಂದ್ರಗಳನ್ನು ಆರಂಭಿಸಿ ಜನತೆಯ ಸಮಸ್ಯೆಗೆ ಸ್ಪಂದಿಸಿ;ಪುರಸಭೆ ಸದಸ್ಯ ಗೊರ್ತಿ ನಾಗರಾಜು

ಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸುವ ಮೂಲಕ  ಜನರ ಸಮಸ್ಯೆಗೆ  ಸ್ಪಂದಿಸಬೇಕು ಎಂದು ಪುರಸಭೆ ಸದಸ್ಯ ಗೊರ್ತಿ ನಾಗರಾಜು ತಿಳಿಸಿದರು.

ಪಾವಗಡದಲ್ಲಿ  ಗುರುವಾರ ರೋಟರಿ ಸಂಸ್ಥೆ. ಪುರಸಭೆ ಕಾರ್ಯಲಯ. ಎಂ ಎ ಜಿ ಫೌಂಡೇಷನ್. ಎಸ್ ಎಸ್ ಕೆ ಸಂಘ. ಹೆಲ್ಪ್ ಸೊಸೈಟಿ   ಸಹಯೋಗದಲ್ಲಿ ನಡೆದ ಹೊಸ ಆಧಾರ್ ಕಾರ್ಡ್ ನೊಂದಾವಣೆ ಮತ್ತು ತಿದ್ದುಪಡಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಿರಿಯರು, ಹಿರಿಯರು ಸೇರಿದಂತೆ  ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್  ಅವಶ್ಯಕತೆ ಇರುವುದರಿಂದ  ತಾಲ್ಲೂಕಿನಿಂದ ಬಹಳಷ್ಟು ಜನತೆ ಆಂಧ್ರ ಪ್ರದೇಶದ ಮಡಕಶಿರ, ಅಮರಾಪುರ, ರಾಮಗಿರಿ, ರೊದ್ದಂ, ಕಂಬದೂರ್, ಪೆನುಕೊಂಡ ಇತರೆಡೆ ಹೋಗಿ ಆಧಾರ್ ತಿದ್ದುಪಡಿ ಮತ್ತು ಹೊಸ ನೊಂದಾವಣೆ ಮಾಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿಯೇ  ಆಧಾರ್ ಕಾರ್ಡ್ ನೊಂದಾವಣೆ ಮತ್ತು ತಿದ್ದುಪಡಿ ಮಾಡಿಸುವ ಹತ್ತು ಕೇಂದ್ರಗಳನ್ನು ಆರಂಭಿಸಿದರೆ ಎರಡು ತಿಂಗಳ ಅವಧಿಯಲ್ಲಿ ಜನರ ಸಮಸ್ಯೆ  ಕಡಿಮೆ ಆಗುತ್ತೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ,  ಶಿಬಿರದಲ್ಲಿ ಹೆಸರು ತಿದ್ದುಪಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ  ಆಧಾರ್ ಕಾರ್ಡ್ ನೊಂದಾವಣೆ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪುರಸಭೆ ಸದಸ್ಯ ಸುದೇಶ್ ಬಾಬು,  ಆಧಾರ್ ಕಾರ್ಡ್  ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿ ಬೇಕಾಗಿದೆ.  ತಾಲ್ಲೂಕು ಕಚೇರಿಯಲ್ಲಿ ಕೇವಲ ಒಂದೇ ಕೌಂಟರ್ ಇರುವದರಿಂದ ಒಂದು ದಿನಕ್ಕೆ ಮೂವತ್ತು ಅಥವಾ ನಲವತ್ತು ಮಂದಿಯ ಆಧಾರ್ ಕಾರ್ಡ್ ತೆಗೆಯಲಾಗುತ್ತಿದೆ ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ತಿಳಿಸಿದರು.

ಮಧುಗಿರಿ ಅಂಚೆ ಉಪವಿಭಾಗದ ಅಂಚೆ ನಿರೀಕ್ಷಕ ಪಿ ಎಲ್. ನಾಗರಾಜ್,  ಸಹಾಯಕ ಅಧೀಕ್ಷಕ  ಚಂದ್ರನಾಯ್ಕ, ನಿವೃತ್ತ ಅಂಚೆ ವಿತರಕ ನಾಗರಾಜ ,  ಪೋಸ್ಟ್ ಮಾಸ್ಟರ್   ಪದ್ಮಾವತಮ್ಮ, ರೋಟರಿ ಸಂಸ್ಥೆ ಅಧ್ಯಕ್ಷ ನಂದೀಶ್ ಬಾಬು,  ಮಾಜಿ ಅಧ್ಯಕ್ಷ  ಪ್ರಭಾಕರ್, ಪುರಸಭೆ ಸದಸ್ಯ ಮೊಹಮ್ಮದ್ ಇಮ್ರಾನ್,  ಎಂ ಎಸ್. ವಿಶ್ವನಾಥ್,  ಎಸ್ ಎಸ್ ಕೆ ಸಂಘದ ಉಪಾಧ್ಯಕ್ಷ  ಶ್ರೀನಿವಾಸ್,  ಹೆಲ್ಪ್ ಸೊಸೈಟಿ ಅಧ್ಯಕ್ಷ  ಶಶಿಕಿರಣ್,  ಬ್ರೈಟ್ ಪ್ಯುಚರ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗುಪ್ತ ಉಪಸ್ಥಿತರಿದ್ದರು.

ಕಲಾವಿದ ಮೂಡ್ಲಗಿರಿಯಪ್ಪಗೆ ಬೆಳ್ಳಿ ಕಿರೀಟ

ತುಮಕೂರು:
ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದ ಹಿರಿಯ ಕಲಾವಿದ ಮೂಡ್ಲಗಿರಿಯಪ್ಪ ಅವರಿಗೆ ಸ್ಥಳೀಯ ಮಾರುತಿ ಕಲಾ ಸಂಘದ ವತಿಯಿಂದ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಯಿತು.

ಕೊರಟಗೆರೆಯ ಶಿವಗಂಗಾ ಕಲ್ಯಾಣಮಂಟಪದಲ್ಲಿ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ಬೆಳಿ ಕಿರೀಟ ನೀಡಿ ಗೌರವಿಸಿದರು. ನಾಟಕದಲ್ಲಿ ಅಭಿಮನ್ಯು ಪಾತ್ರವನ್ನು ಮೂಡ್ಲಗಿರಿಯಪ್ಪ ಅವರು ಅಭಿನಯಿಸಿ ಜನಮನ ಸೆಳೆದರು. ವಿದ್ಯುತ್ ಗುತ್ತಿಗೆದಾರರಾಗಿರುವ ಮೂಡ್ಲಗಿರಿಯಪ್ಪ ಹಲವು ವರ್ಷಗಳಿಂದ ವಿವಿಧ ಪೌರಾಣಿಕ ನಾಟಕದಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸುತ್ತಾ ಬಂದಿದ್ದಾರೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ ಕೂಡ ಲಭಿಸಿದೆ. ಹಿರಿಯ ಕಲಾವಿದರಾದ ಅವರನ್ನು ವಿದ್ಯುತ್ ಗುತ್ತಿಗೆ ದಾರರ ಸಂಘ, ಕನ್ನಡ ಮತ್ತು ಸಂಸ್ಕರತಿ ಇಲಾಖೆ, ಹಾಗೂ ಕೊರಟಗೆರೆ ತಾಲ್ಲೂಕಿನ ಮಾರುತಿ ಕಲಾ ಸಂಘ ಗುರುತಿಸಿ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅರಕೆರೆಶಂಕರ್, ಮೆಡಿಕಲ್ ಅಶ್ವತ್ಥ್, ಬೆಸ್ಕಂ ಇಲಾಖೆ ಎಇಇ ಮಲ್ಲಯ್ಯ, ಎಇ ಪ್ರಸನ್ನಕುಮಾರ್, ಪುಟ್ಟಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಣ್ಣ, ವಕೀಲ ಟಿ.ಕೃಷ್ಣಮೂರ್ತಿ, ಮುಖಂಡರಾದ ಮಂಜುನಾಥ, ಲಕ್ಷ್ಮಿನಾರಾಯಣ್, ಗಟ್ಲಹಳ್ಳಿ ಕುಮಾರ್, ಶಿವರಾಮು, ಮೈಲಾರಪ್ಪ, ಅಶ್ವತ್ಥನಾರಾಯಣರಾಜು, ಮಲ್ಲಯ್ಯ, ಶ್ರೀನಿವಾಸ್ ಇತರರು ಇದ್ದರು.

ನ್ಯಾಯಮೂರ್ತಿಗಳ ನೇಮಕ ಹೇಗೆ?

ಸುಪ್ರೀಂಕೋರ್ಟ್ ರಚನೆ ಮತ್ತು ಸ್ಥಾಪನೆಯ ಕುರಿತು ಸಂವಿಧಾನದ ವಿಧಿ 124 ಹೇಳಿದ್ದರೆ, ವಿಧಿ 124(1)ಪ್ರಕಾರ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳನ್ನು ಒಳಗೊಂಡಿದೆ.

ವಿಧಿ 124 (2)ರಂತೆ ಚೀಪ್ ಜೆಸ್ಟಿಸ್ ಆಫ್ ಇಂಡಿಯಾ ಮತ್ತು ಇತರೆ ನ್ಯಾಯಮೂರ್ತಿಗಳ ನೇಮಕದ ಬಗ್ಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ಅವು ಈ ಕೆಳಗಿನಂತಿವೆ.

1) ಸುಪ್ರೀಂಕೋರ್ಟ್ ನ ಪ್ರತಿಯೊಬ್ಬ ನ್ಯಾಯಮೂರ್ತಿಯನ್ನೂ ರಾಷ್ಟ್ರಪತಿಗಳು ನೇಮಕ ಮಾಡಬೇಕು. ಆ ನೇಮಕ ಪತ್ರ ರಾಷ್ಟ್ರಪತಿಗಳು ಪ್ರಮಾಣಿಕರಿಸಿ ಸಹಿ ಮಾಡಿರಬೇಕು ಮತ್ತು ಮುದ್ರೆ ಇರಬೇಕು.2) ರಾಷ್ಟ್ರಪತಿಗಳು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಗೆ ನೇಮಕಗೊಳ್ಳುವ ನ್ಯಾಯಮೂರ್ತಿಗಳೊಂದಿಗೆ ಅವಶ್ಯಕ ಉದ್ದೇಶಕ್ಕಾಗಿ ಮಾಲೋಚಿನೆ ನಡೆಸಬೇಕು.3) ನ್ಯಾಯಮೂರ್ತಿಗಳು 65 ವರ್ಷ ಕಾರ್ಯ ನಿರ್ವಹಿಸಬೇಕು.

ಸಂವಿಧಾನದ 124 (2) ವಿಧಿಯು ಮೊದಲು ಅವಕಾಶಗಳನ್ನು ಕಲ್ಪಿಸಿದೆ. ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಮೂರ್ತಿಗಳು ಮತ್ತು ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಹೊರತುಪಡಿಸಿ ಪ್ರತಿಯೊಬ್ಬ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಒಳಗೊಳ್ಳಬೇಕು.
124(3) ವಿಧಿಯಂತೆ ಸಿಐಜೆ ಮತ್ತು ಇತರೆ ನ್ಯಾಯಮೂರ್ತಿಗಳ ನೇಮಕಕ್ಕೆ ಕೆಲವೊಂದು ಮಾನದಂಡಗಳನ್ನು ಮತ್ತು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

1) ಭಾರತದ ಪ್ರಜೆಯಾಗಿಬೇಕು 2) ಕೆಳಗಿನವುಗಳಲ್ಲಿ ಯಾವುದಾದರೂ3) ಹೈಕೋರ್ಟ್ ನಲ್ಲಿ ಎರಡು ಅಥವಾ ಕೆಳ ನ್ಯಾಯಾಲದಲ್ಲಿ ಅನುಕ್ರಮವಾಗಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರಬೇಕು4) ಕನಿಷ್ಟ 10 ವರ್ಷ ಹೈಕೋರ್ಟ್ ನಲ್ಲಿ ವಕೀಲರಾಗಿ/ ಎರಡು ಅಥವಾ ಹೆಚ್ಚು ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿರಬೇಕು.5) ರಾಷ್ಟ್ರಪತಿ ಅಭಿಪ್ರಾಯದಲ್ಲಿ ನ್ಯಾಯಶಾಸ್ತ್ರಜ್ಞ ಅಗಿರಬೇಕು.

ಸಂವಿಧಾನದ 124 (6)ನೇ ವಿಧಿಯಂತೆ ಭಾರತ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ನ್ಯಾಯಮೂರ್ತಿಗಳು ನೇಮಕಗೊಳ್ಳಲು ರಾಷ್ಟ್ರಪತಿಯಿಂದ ಕಚೇರಿ ಪ್ರವೇಶಿಸಲು ನೇಮಕವಾಗಿರಬೇಕು ಅಥವಾ ರಾಷ್ಟ್ರಪತಿಯಿಂದ ಅಧಿಕಾರ ಪಡೆದ ಕೆಲವರು ನೇಮಕ ಮಾಡಬಹುದು.

ಸಂವಿಧಾನದ 3ನೇ ಪರಿಚ್ಛೇಧದಲ್ಲಿ ಉದ್ದೇಶಿಸಿರುವಂತೆ ನ್ಯಾಯಮೂರ್ತಿ ಪ್ರಮಾಣ ವಚನ/ಪ್ರತಿಜ್ಞ ವಿಧಿ ಸ್ವೀಕರಿಸಿರಬೇಕು.
ಸಿಐಜೆ ನೇಮಕಗೊಳ್ಳಲು ಹಲವು ಪ್ರಕ್ರಿಯೆಗಳಿವೆ.

ಇವುಗಳನ್ನಯ ನ್ಯಾಯಾಂಗ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 1) ಸುಪ್ರೀಂಕೋರ್ಟ್ ನಲ್ಲಿ ಸೇವಾಹಿರಿತನ ನ್ಯಾಯಮೂರ್ತಿಯಾಗಿರಬೇಕು. 2) 124 (2)ನೇ ವಿಧಿಯಂತೆ ಬೇರೆ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿ ಕಚೇರಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವಿರಬೇಕು. 3) ಸುಪ್ರೀಂಕೋರ್ಟ್ ನ ಸೇವಾಹಿರಿತನದ ಆಧಾರದ ಮೇಲೆ ಸಿಐಜೆ ನೇಮಕ ವಯಸ್ಸು ಪರಿಗಣಿಸುವುದಿಲ್ಲ.4) ಸುಪ್ರೀಂಕೋರ್ಟ್ ಗೆ ಸೇರಿದ ನಂತರ ಹಿರಿತನ ಬರುತ್ತದೆ. ನೇಮಕಗೊಂಡ ತಕ್ಷಣ ಯಾರು ಮೊದಲು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೋ ಅದು ಮುಖ್ಯವಾಗುತ್ತದೆ. 5) ಬಾರ್ ಅಸೋಸಿಯೇಷನ್ ನಿಂದ ಅನುಭವವಿರುವ ಹಿರಿಯ ಅನುಭವಿ ವಕೀಲರನ್ನು ನೇರವಾಗಿ ಸುಪ್ರೀಂ ಕೋರ್ಟ್ ಗೆ ನೇಮಕ ಮಾಡಬಹುದು.6) ನಿರ್ಗಮಿತ ಮುಖ್ಯನ್ಯಾಯಮೂರ್ತಿ ಮುಂದಿನ ಸಿಐಜೆಯನ್ನು ಶಿಫಾರಸು ಮಾಡಿ ಹೋಗಬೇಕು.
ಆದರೆ ಇತ್ತೀಚೆಗೆ ಕಾನೂನು, ನ್ಯಾಯ ಮತ್ತು ಕಂಪನಿ ಸಚಿವಾಲಯ ಮೊದಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನು ಸಂಪರ್ಕಿಸಿ ಪ್ರಧಾನಿ ಮೂಲಕ ರಾಷ್ಟ್ರಪತಿಗೆ ಶಿಫಾರಸು ಮಾಡಲಾಯಿತು.

ಎರಡನೇ ನ್ಯಾಯಮೂರ್ತಿ ಪ್ರಕರಣ (ಸು್ಪ್ರೀಂಕೋರ್ಟ್ ಅಡ್ವೋಕೇಟ್ ಆನ್ ರೆಕಾರ್ಡ್ ಅಸೋಸಿಯೇನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಎಐಆರ್-1994 ಎಸ್.ಸಿ.268)ದಲ್ಲಿ ಸೇವಾನುಭವ ಇರುವ ಹಿರಿಯ ನ್ಯಾಯಮೂರ್ತಿ ಮುಖ್ಯ ನ್ಯಾಯಮೂರ್ತಿಯಾಗಲು ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಹಾಗಾಗಿ 124 (2)ನೇ ವಿಧಿ ಪ್ರಕಾರ ಆತನನ್ನು ಸಂಪರ್ಕಿಸಲು ಅವಕಾಶವಿದೆ. ಮೋಸ್ಟ್ ಸೀನಿಯರ್ ಸಿಐಜೆ ಆಗಲು ಸಾಮರ್ಥ್ಯವಿಲ್ಲ ಎಂಬ ಅನುಮಾನ ಬಂದರೆ ಅವರನ್ನು ಕೈಬಿಡಬಹುದು.

ವೈಜ್ಞಾನಿಕ ಮನೋಭಾವದಿಂದ ಮೌಢ್ಯ ದೂರ

ಪಬ್ಲಿಕ್ ಸ್ಟೋರಿ

  ವೈ.ಎನ್.ಹೊಸಕೋಟೆ : ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿನ ಮೌಢ್ಯತೆಯನ್ನು ದೂರ ಮಾಡಲು ಸಾಧ್ಯ ಎಂದು ಮಧುಗಿರಿ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.

ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬುಧವಾರದಂದು ನಡೆದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯಲ್ಲಿನ ಕುತೂಹಲ ಅತನನ್ನು ವಿಜ್ಞಾನಿಯನ್ನಾಗಿ ಅಥವಾ ಸಂಶೋದಕನನ್ನಾಗಿ ಮಾಡುತ್ತದೆ. ಸಮಾಜದಲ್ಲಿನ ಕಂದಾಚಾರ, ಮೌಡ್ಯದ ಆಚರಣೆಗಳ ಸತ್ಯಾಸತ್ಯತೆಗಳನ್ನು ತಿಳಿಯಲು ವಿಜ್ಞಾನದ ಅರಿವು ಅತ್ಯಗತ್ಯ. ಸಾಮಾನ್ಯ ವಿದ್ಯಾರ್ಥಿಗಳಾಗಿದ್ದ ನ್ಯೂಟನ್ನಂತಹ ಅನೇಕರು ಕುತೂಹಲ ಮತ್ತು ನಿರಂತರ ಪರಿಶ್ರಮದಿಂದ ವಿಜ್ಞಾನಿಗಳಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ಕುತೂಹಲವಾಗಿ ಕಾಣಬೇಕು. ಕಾರ್ಯಕಾರಿಣಿ ಸಂಬಂಧವನ್ನು ಹುಡುಕುತ್ತಾ ಬೆಳೆಯಬೇಕು. ಆಗ ಸೀಮಿತ ದೃಷ್ಟಿಕೋನ ಬದಲಾಗಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತದೆ. ಈ ದಿಸೆಯಲ್ಲಿ ವಿಜ್ಞಾನ ಹಬ್ಬಗಳು ಪೂರಕವಾಗಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಅರ್ಥವಿಲ್ಲದ ಗೊಡ್ಡು ಸಂಪ್ರದಾಯಗಳಿಗೆ ಜನತೆ ಬಹುಬೇಗ ಸ್ಪಂದಿಸುತ್ತಾರೆ. ವೈಜ್ಞಾನಿಕ ತಿಳುವಳಿಕೆಯಿಂದ ಇಂತಹ ಮೂಡನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ.ವಿಜ್ಞಾನವು ವಾಸ್ಥವಿಕತೆಯ ಸತ್ಯತೆಯನ್ನು ತೆರೆದಿಡುತ್ತದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ ತಿಳಿಸಿದರು.

ವ್ಯಕ್ತಿಯು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರೆ ಧರ್ಮ, ಸಂಪ್ರದಾಯ ಮತ್ತು ನಂಬಿಕೆಗಳ ವಿಚಾರದಲ್ಲಿ ಮೋಸ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಾವಿತ್ರಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ವಿಶಾಲಮ್ಮ, ಸ್ಥಳೀಯ ಮುಖ್ಯಶಿಕ್ಷಕ ಐ.ಎ.ನಾರಾಯಣಪ್ಪ, ಮುಖಂಡ ಎನ್.ಅರ್.ಅಶ್ವಥ್ ಕುಮಾರ್, ಶಿಕ್ಷಕ ಚನ್ನಮಲ್ಲಿಕಾರ್ಜುನ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗ್ರಾಮದ ಪುರಬೀದಿಗಳಲ್ಲಿ ವಿಜ್ಞಾನ ಜಾಥಾ ನಡೆಸಿದರು. ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವೀರಗಾಸೆ, ಲಂಬಾಣಿ ನೃತ್ಯ, ಲೆಜೀಮ್ ಮತ್ತು ಡಂಬಲ್ಸ್ ನೃತ್ಯಗಳನ್ನು ಪ್ರದರ್ಶಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಮ್.ಮಹಬೂಬ್ ಸಾಬ್, ಶಾಲಾಸಮಿತಿಯ ಅಧ್ಯಕ್ಷ ಬಾಲಾಜಿ, ಸಂಪನ್ಮೂಲ ಶಿಕ್ಷಕರಾದ ಲತ, ಕರಿಯಾಲಪ್ಪ, ಶ್ರೀದೇವಮ್ಮ, ಹರ್ಷ, ಹನುಮಂತರಾಯಪ್ಪ, ಶಿಕ್ಷಕರಾದ ಫಕೃದ್ಧೀನ್, ಬಿ.ಆರ್.ಶ್ರೀನಿವಾಸ, ಹೆಚ್.ಕೆ.ಅಶ್ವಥನಾರಾಯಣ, ಮಾಲತಿ, ಬಿ.ಹೆಚ್.ಗೌಡ,  ಜಿ.ಅರ್.ಶ್ರೀನಿವಾಸ, ರಾಮಾಂಜಿನೇಯ, ರಾಮಲಿಂಗಪ್ಪ ಇದ್ದರು.

ಪಾದಯಾತ್ರೆ ತಾತ್ಕಾಲಿಕವಾಗಿ ಹಿಂಪಡೆದ ಅಂಗನವಾಡಿ ಕಾರ್ಯಕರ್ತೆಯರು

ಡಿಸೆಂಬರ್ 16 ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸಲಿರುವ ಹಿನ್ನೆಲೆಯಲ್ಲಿ ಅಂಗನವಾಡಿ ನೌಕರರ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಅಧ್ಯಕ್ಷೆ ಎಸ್.ವರಲಕ್ಷ್ಮೀ ತಿಳಿಸಿದ್ದಾರೆ.
ಅಂದು ಮಾತುಕತೆ ಫಲಪ್ರದವಾಗದಿದ್ದರೆ ಮತ್ತೆ ಅಂಗನವಾಡಿ ನೌಕರರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅಮಾನಿಕೆರೆ ಗಾಜಿನಮನೆಯ ಆವರಣದಲ್ಲಿ ಅಂಗನವಾಡಿ ನೌಕರರು ಕೈಗೊಂಡಿರುವ ಪಾದಯಾತ್ರೆ-ಧರಣಿ ಸ್ಥಳಕ್ಕೆ ಆಗಮಿಸಿ ಸರ್ಕಾರದ ಪರವಾಗಿ ಭರವಸೆ ನೀಡಿದ ನಂತರ ಪಾದಯಾತ್ರೆಯನ್ನು ಹಿಂಪಡೆಯಲಾಯಿತು.

ಜಿಲ್ಲಾ‌ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ನಾಗರಾಜ್ ಆಯ್ಕೆ

ತುಮಕೂರು: ಜಿಲ್ಲಾ ಸರ್ಕಾರಿ ನೌಕರರ ಸಂಘ ಕ್ಕೆ ಗೌರವ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಯ ಡಿ.ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.

ಜಿಲ್ಲಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಅವರಿಗೆ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರು ಆಯ್ಕೆ ಸಭೆಯಲ್ಲಿ ಹಾಜರಿದ್ದರು.

ನೂತನ ಗೌರವ ಅಧ್ಯಕ್ಷರಿಗೆ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ಅಭಿನಂದಿಸಿದ್ದಾರೆ.

ದಬ್ಬಾಳಿಕೆ, ದಮನಕಾರಿ ನೀತಿ ಸಲ್ಲದು – ಜನಪರ ಚಿಂತಕ ಕೆ.ದೊರೈರಾಜ್

ಕೆ.ಇ.ಸಿದ್ದಯ್ಯ


ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದ ರಾಜ್ಯ ಸರ್ಕಾರ ದಬ್ಬಾಳಿಕೆ, ದಮನಕಾರಿ ನೀತಿ ಅನುಸರಿಸುತ್ತಿರುವುದು ಬಿಡಬೇಕು ಎಂದು ಪಿಯುಜಿಎಲ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ದೊರೈರಾಜ್ ಹೇಳಿದ್ದಾರೆ.

ತುಮಕೂರಿನ ಅಮಾನಿಕೆರೆಯಲ್ಲಿ ಅಂಗನವಾಡಿ ನೌಕರರ ಸಂಘ ಸಿಐಟಿಉ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ನಡೆಸುತ್ತಿರುವ ಧರಣಿನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು 1975ರಿಂದ ಮಕ್ಕಳ ಪೋಷಣೆ ಮತ್ತು ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಬೇಡಿಕೆಗಳು ಸರಿಯಾಗಿವೆ. ಹಾಗಾಗಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಮಾತೃದೇವೋಭವ ಎನ್ನುವವರು ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದ್ದಾರೆ. ಅಂಗನವಾಡಿಗಳನ್ನ ರಾಜ್ಯ ಸರ್ಕಾರ ದಮನ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಅಂಗನವಾಡಿಗಳನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಬೇಕು. ಅಂಗನವಾಡಿಗಳನ್ನು ಮುಚ್ಚಿದರೆ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬೀಳುತ್ತದೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಪಾದಯಾತ್ರೆ ನಡೆಸಲು ಮುಂದಾಗಿದ್ದರೆ ಅದಕ್ಕೆ ಸರ್ಕಾರ ಅವಕಾಶ ನೀಡಿಲ್ಲ. ಇದು ಸಮರ್ಥನೀಯವಲ್ಲ. ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಇದುವರೆಗೆ ಅಂಗನವಾಡಿಗಳಲ್ಲಿ ಶಿಕ್ಷಣ ಪಡೆದಿರುವ ಪೋಷಕರೊಂದಿಗೆ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. ಪಿಯುಸಿಎಲ್ ಮತ್ತುಜನಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಬೆಂಬಲ ನೀಡುತ್ತದೆ. ಮುಂದೆಯೂ ಕೂಡ ನಿಮ್ಮೊಂದಿಗೆ ಇರಲಿದ್ದೇವೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಮಾದರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇಂತಹ ಹೋರಾಟಗಳನ್ನು ಹತ್ತಿಕ್ಕುವ ಮೂಲಕ ಬಡವರ ಮಕ್ಕಳ ಶಿಕ್ಷಣ ಹಕ್ಕನ್ನು ಮೊಟುಕುಗೊಳಿಸದಂತೆ ಆಗುತ್ತದೆ. ಮಹಿಳೆಯರ ಸಬಲೀಕರಣದ ಮಾತನಾಡುವ ಸರ್ಕಾರ ಈ ರೀತಿ ಹತ್ತಿಕ್ಕುವುದು ಸಹನೀಯವಲ್ಲ ಎಂದು ಕಿಡಿಕಾರಿದರು.

ನಿವೃತ್ತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ಸರ್ಕಾರ ಅಂಗನವಾಡಿ ತಾಯಂದಿರ ನೆರವಿಗೆ ಬರಬೇಕು. ಅಂಗನವಾಡಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಅವರು ಕೇಳುತ್ತಿರುವ ಬೇಡಿಕೆಗಳು ನ್ಯಾಯಯುತವಾಗಿವೆ. ಕೂಡಲೇ ಅಂಗನವಾಡಿ ನೌಕರರ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ರಾತ್ರಿಯೆಲ್ಲ ಇಲ್ಲೇ ಕಾಲಕಳೆದಿದ್ದಾರೆ. ಅವರ ನೋವು, ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅವರ ನೆರವಿಗೆ ಬರಬೇಕು. ಅಂಗನವಾಡಿ ತಾಯಂದಿರು ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ. ಪ್ರಾಮಾಣಿಕವಾಗಿ ದುಡಿಯುತ್ತ ಮಕ್ಕಳನ್ನು ತಿದ್ದುವ ತಾಯಂದಿರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ, ಎನ್.ಕೆ.ಸುಬ್ರಮಣ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ.ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಮೊದಲಾದವರು ಉಪಸ್ಥಿತರಿದ್ದರು

ಅಂಗನವಾಡಿ: ಸರ್ಕಾರ ಪ್ರತಿಷ್ಠೆಯಾಗಿ ನೋಡದಿರಲಿ…

ಕೆ.ಇ.ಸಿದ್ದಯ್ಯ


ತುಮಕೂರು: ಸುಮಾರು‌ ಐದು ತಿಂಗಳಿಂದ ಸಂಬಳ ಇಲ್ಲ. ಈ ಸರ್ಕಾರ ನಮಗೆ ಮೋಸ ಮಾಡುತ್ತಿದೆ.
ನಾವಂತೂ ಇಲ್ಲಿಂದ ಎದ್ದೇಳಲ್ಲ. ನಾವು ಬೆಂಗಳೂರಿಗೆ‌ ನಡೆದುಕೊಂಡು ಹೋದರೆ ಇವರಿಗೇನು.

ಅಮಾನಿಕೆರೆ ಆವರಣದಲ್ಲಿ ಕುಳಿತಿರುವ ಮಹಿಳೆಯರು

ವಿಜಯಪುರ ಜಿಲ್ಲೆಯಿಂದ ಬಂದಿರುವ ಅಂಗನವಾಡಿ ಮಹಿಳೆಯರ ಮಾತಿದು.
ನಾವು ದಿನಾಲು ಸಾಯುತ್ತಿದ್ದೇವೆ. ಹೀಗಾಗಿ ಊಟ ಇಲ್ಲದೇ ಇಲ್ಲೇ ಸಾಯೋಣ‌ ಬಿಡಿ ಎಂದಾಗ ಅವರ ಕಣ್ಣಾಲಿಗಳು ತುಂಬಿ ಬಂದವು.

ುಮಕೂರು ನಗರದ ಕೋರ್ಟ್ ಆವರಣ, ಅಮಾನಿಕೆರೆ ತುಂಬೆಲ್ಲ‌ ಕೆಂಪು ಸೀರೆ ತೊಟ್ಟ ಮಹಿಳೆಯರು ತುಂಬಿ‌ಹೋಗಿದ್ದಾರೆ. ಎರಡು ದಿನದಿಂದ ಸ್ನಾನ ಇಲ್ಲ, ಊಟ ಇಲ್ಲ. ಚಳಿಯಲ್ಲಿ ತತ್ತರಿಸುತ್ತಿದ್ದಾರೆ.
ಅವರ ಕಷ್ಟದ ಕೆಲವು ಚಿತ್ರಗಳು ಮೇಲಿನವು.

ಸರ್ಕಾರ‌‌ ಈಗಲಾದರೂ ಇವರ ಕಡೆ ನೋಡಬೇಕಾಗಿದೆ.

ಬೇಡಿಕೆ ಈಡೇರಿಸದೆ ಸರ್ಕಾರದ ನಿರ್ಲಕ್ಷ್ಯ; ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್

ತುಮಕೂರು:ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಕೇವಲ ಮನವಿಯನ್ನು ಪಡೆದು ಬೇಜವಾಬ್ದಾರಿಯನ್ನು ಮೆರೆದಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ವಾಗ್ದಾಳಿ ನಡೆಸಿದರು.

ತುಮಕೂರಿನ ಅಮಾನಿಕೆರೆಯ ಗಾಜಿನಮನೆಯ ಆವರಣದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿರುವ ಪಾದಯಾತ್ರೆಯ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಇದರಿಂದ ನಮ್ಮ ದನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರಿನ ಸ್ವಾತಂತ್ರ್ಯ ಚೌಕ ಮಂಗಳವಾರ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಬೇಕಾಗಿತ್ತು.

ತುಮಕೂರಿನ ಸ್ವಾತಂತ್ರ್ಯ ಚೌಕ ಐತಿಹಾಸಿಕ ಮಹತ್ವವನ್ನು ಹೊಂದಿದೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತ್ಯಾಗಬಲಿದಾನ ಮಾಡಿದ ಸ್ಥಳ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಭೂಮಿ. ಇಂತಹ ಹಿನ್ನೆಲೆಯನ್ನು ಹೊಂದಿರುವ ಸ್ವಾತಂತ್ರ್ಯ ಚೌಕದಿಂದ ಪಾದಯಾತ್ರೆ ಆರಂಭಗೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ಪೊಲೀಸರ ಮೂಲಕ ಪಾದಯಾತ್ರೆಗೆ ಅಡ್ಡಿಪಡಿಸಿತು ಎಂದು ಟೀಕಿಸಿದರು.

ಅಂಗನವಾಡಿ ತಾಯಂದಿರು ಇಂದು ನಂದಿಹಳ್ಳಿ ಸಮೀಪ ಇರುವ ಶರಣಲೋಕದಿಂದ ಮುಂದು ಹೊರಡಬೇಕಿತ್ತು. ಈ ವೇಳೆಗೆ ಡಾಬಸ್ ಪೇಟೆ ತಲುಪಬೇಕಿತ್ತು. ಅಲ್ಲಿ ಪಾದಯಾತ್ರೆ ನಡೆಸುತ್ತಿರುವ ನಮಗಾಗಿ ಎರಡು ಪ್ಯಾಕ್ಟರಿಯವರು ಒಂದು ಸಾವಿರ ಕೆಜಿ ಅಕ್ಕಿ ಸಂಗ್ರಹಿಸಿ ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ ಪಾದಯಾತ್ರೆ ಸಾಧ್ಯವಾಗದೆ ಚಳಿಗಾಳಿಯಲ್ಲಿ ಇಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಾವು ಬೆದರುವುದಿಲ್ಲ ಎಂದು ಹೇಳಿದರು.

ಅಂಗನವಾಡಿ ನೌಕರರ ಬೇಡಿಕೆಗಳು ಸಮರ್ಪಕವಾಗಿವೆ. ಆ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ಪಾದಯಾತ್ರೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಗಾಜಿನ ಮನೆಯಲ್ಲಿ ಮುಂದುವರೆದ ಧರಣಿ

ಶಾಲಾ ಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸುವಂತೆ ಒತ್ತಾಯಿಸಿ ಕೈಗೊಂಡಿದ್ದ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿರುವುದರಿಂದ ಅಂಗನವಾಡಿ ನೌಕರರು ತುಮಕೂರಿನ ಗಾಜಿನಮನೆಯಲ್ಲೇ ಧರಣಿ ಮುಂದುವರಿಸಿದ್ದಾರೆ.

ರಾಜ್ಯ ಸರ್ಕಾರ ಅಂಗನವಾಡಿ ನೌಕರರ ಸಂಘದ ನಿಯೋಗದ ಜೊತೆ ಮಾತುಕತೆ ನಡೆಸದೆ ಕೇವಲ ಮನವಿ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ವಿರುದ್ದ ಘೋಷಣೆಗಳು ಮೊಳಗುತ್ತಿವೆ.

ರಾತ್ರಿ ಇಡೀ ಗಾಜಿನಮನೆಯ ಆವರಣದಲ್ಲಿ ಅಂಗನವಾಡಿ ನೌಕರರು ಚಳಿಗಾಳಿ ಎನ್ನದೆ ನಿದ್ರಿಸಿದರು. ಇಂದು ಮುಂಜಾನೆಯೂ ಕೂಡ ರಾಜ್ಯದ ವಿವಿಧ ಭಾಗಗಳಿಂದ ಅಂಗನವಾಡಿ ನೌಕರರು ತುಮಕೂರಿಗೆ ಧಾವಿಸುತ್ತಿದ್ದುದು ಕಂಡು ಬಂತು.

ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪಾದಯಾತ್ರೆ-ಧರಣಿ ಕೈಬಿಡುವುದಿಲ್ಲ. ಏನೇ ಬರಲಿ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಒಕ್ಕೊರಲ ಘೋಷಣೆ ಕೂಗಿದರು.

ಇಂದು ಬೆಳಗ್ಗೆ ಹಳೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಂದರೆ ಅಮಾನಿಕೆರೆ ರಸ್ತೆಯಲ್ಲಿ ಅಂತನವಾಡಿ ತಾಯಂದಿರು ಗ್ಯಾಸ್ ಸಿಲೆಂಡರ್ ಗಳನ್ನು ಇಟ್ಟುಕೊಂಡು ಬೆಳಗಿನ ತಿಂಡಿ ತಯಾರಿಸಿ ತಿನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ದಾಬಸ್ ಪೇಟೆಯ ಸಂಘಟನೆಯೊಂದು ಎಲ್ಲಾ ಅಂಗನವಾಡಿ ನೌಕರರಿಗೆ ಹಾಲಿನ ವ್ಯವಸ್ಥೆ ಮಾಡಿತ್ತು.

ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಬಳಿ ಅಂಗನವಾಡಿ ನೌಕರರು ತಿಂಡಿ ತಯಾರಿಸಿಕೊಳ್ಳುತ್ತಿದ್ದರೆ ಪೊಲೀಸರು ಅಡ್ಡಿಪಡಿಸಿದರು. ವಾಹನಗಳನ್ನು ಬೇರೆಡೆ ನಿಲ್ಲಿಸುವಂತೆ ತಗಾದೆ ತೆಗೆದರು. ಆದರೆ ಅಂಗನವಾಡಿ ನೌಕರರು ಶಾಂತವಾಗಿಯೇ ತಿಂಡಿ ತಯಾರಿಕೆಯಲ್ಲಿ ತೊಡಗಿದ್ದರು.

ಪ್ರತಿಭಟನಾ ಧರಣಿ ಸ್ಥಳದಲ್ಲಿ ಇಬ್ಬರು ಅಂಗನವಾಡಿ ನೌಕರರ ಮೊಬೈಲ್ ಗಳು ಕಳೆದು ಹೋಗಿವೆ. ಧರಣಿ ನಡೆಯುತ್ತಿರುವ ಸ್ಥಳಕ್ಕೆ ಹೊರಗಿನಿಂದ ಕೆಲವರು ಬರುತ್ತಿದ್ದು ಅವರು ಈ ಕೈಚಳಕ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೊಬೈಲ್ ಗಳು ಮತ್ತು ಬೇರೆ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ ಪ್ರಕಟಿಸಲಾಗುತ್ತಿತ್ತು.