ಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಪುರಸಭೆ ಸದಸ್ಯ ಗೊರ್ತಿ ನಾಗರಾಜು ತಿಳಿಸಿದರು.
ಪಾವಗಡದಲ್ಲಿ ಗುರುವಾರ ರೋಟರಿ ಸಂಸ್ಥೆ. ಪುರಸಭೆ ಕಾರ್ಯಲಯ. ಎಂ ಎ ಜಿ ಫೌಂಡೇಷನ್. ಎಸ್ ಎಸ್ ಕೆ ಸಂಘ. ಹೆಲ್ಪ್ ಸೊಸೈಟಿ ಸಹಯೋಗದಲ್ಲಿ ನಡೆದ ಹೊಸ ಆಧಾರ್ ಕಾರ್ಡ್ ನೊಂದಾವಣೆ ಮತ್ತು ತಿದ್ದುಪಡಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿರಿಯರು, ಹಿರಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅವಶ್ಯಕತೆ ಇರುವುದರಿಂದ ತಾಲ್ಲೂಕಿನಿಂದ ಬಹಳಷ್ಟು ಜನತೆ ಆಂಧ್ರ ಪ್ರದೇಶದ ಮಡಕಶಿರ, ಅಮರಾಪುರ, ರಾಮಗಿರಿ, ರೊದ್ದಂ, ಕಂಬದೂರ್, ಪೆನುಕೊಂಡ ಇತರೆಡೆ ಹೋಗಿ ಆಧಾರ್ ತಿದ್ದುಪಡಿ ಮತ್ತು ಹೊಸ ನೊಂದಾವಣೆ ಮಾಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿಯೇ ಆಧಾರ್ ಕಾರ್ಡ್ ನೊಂದಾವಣೆ ಮತ್ತು ತಿದ್ದುಪಡಿ ಮಾಡಿಸುವ ಹತ್ತು ಕೇಂದ್ರಗಳನ್ನು ಆರಂಭಿಸಿದರೆ ಎರಡು ತಿಂಗಳ ಅವಧಿಯಲ್ಲಿ ಜನರ ಸಮಸ್ಯೆ ಕಡಿಮೆ ಆಗುತ್ತೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ, ಶಿಬಿರದಲ್ಲಿ ಹೆಸರು ತಿದ್ದುಪಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಆಧಾರ್ ಕಾರ್ಡ್ ನೊಂದಾವಣೆ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯ ಸುದೇಶ್ ಬಾಬು, ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿ ಬೇಕಾಗಿದೆ. ತಾಲ್ಲೂಕು ಕಚೇರಿಯಲ್ಲಿ ಕೇವಲ ಒಂದೇ ಕೌಂಟರ್ ಇರುವದರಿಂದ ಒಂದು ದಿನಕ್ಕೆ ಮೂವತ್ತು ಅಥವಾ ನಲವತ್ತು ಮಂದಿಯ ಆಧಾರ್ ಕಾರ್ಡ್ ತೆಗೆಯಲಾಗುತ್ತಿದೆ ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ತಿಳಿಸಿದರು.
ಮಧುಗಿರಿ ಅಂಚೆ ಉಪವಿಭಾಗದ ಅಂಚೆ ನಿರೀಕ್ಷಕ ಪಿ ಎಲ್. ನಾಗರಾಜ್, ಸಹಾಯಕ ಅಧೀಕ್ಷಕ ಚಂದ್ರನಾಯ್ಕ, ನಿವೃತ್ತ ಅಂಚೆ ವಿತರಕ ನಾಗರಾಜ , ಪೋಸ್ಟ್ ಮಾಸ್ಟರ್ ಪದ್ಮಾವತಮ್ಮ, ರೋಟರಿ ಸಂಸ್ಥೆ ಅಧ್ಯಕ್ಷ ನಂದೀಶ್ ಬಾಬು, ಮಾಜಿ ಅಧ್ಯಕ್ಷ ಪ್ರಭಾಕರ್, ಪುರಸಭೆ ಸದಸ್ಯ ಮೊಹಮ್ಮದ್ ಇಮ್ರಾನ್, ಎಂ ಎಸ್. ವಿಶ್ವನಾಥ್, ಎಸ್ ಎಸ್ ಕೆ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಶಶಿಕಿರಣ್, ಬ್ರೈಟ್ ಪ್ಯುಚರ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗುಪ್ತ ಉಪಸ್ಥಿತರಿದ್ದರು.