Sunday, December 28, 2025
Google search engine
Home Blog Page 322

ಇಂಗ್ಲಿಷ್ ನಲ್ಲಿ ಕತೆ ಬರೆದ ಕನ್ನಡದ ಪೋರ!

0

ತುಮಕೂರು; ಅವರ ಮನೆಯಲ್ಲಿನ ಮದುವೆ‌ ಆಮಂತ್ರಣದ ಹಿಂದಿನ ಚಿತ್ರ ನೋಡಿ ಖುಷಿಯಾಯಿತು.

ಪರಿಸರ, ಬೆಟ್ಟ, ಗುಡ್ಡದ ಚಿತ್ರ ತಕ್ಷಣಕ್ಕೆ ಕೈಯಲ್ಲಿ ಬಿಡಿಸಿದ ಚಿತ್ರದಂತೆ ಕಾಣಲಿಲ್ಲ. ಹೀಗೂ ಪತ್ರಿಕೆ ಹೊರ ತರಬಹುದೇ ಎನಿಸಿತು.

ತರಲೆಯ ಕೆಲಸ ಎಂದು ಗೊತ್ತೇ ಆಗಲಿಲ್ಲ. ಅಷ್ಟರಲ್ಲಿ ಕಾಫಿ ಹಿಡಿದುಕೊಂಡು ಈಚೆ ಬಂದ ಅವರ ಅಜ್ಜಿ ಅದು ನನ್ನ ಮೊಮ್ಮಗ ಬಿಡಿಸಿರುವುದು ಎಂದು ಬೀಗಿದರು.

ಅಷ್ಟೇ ಅಲ್ಲ, ನನ್ನ ಮೊಮ್ಮಗ ನನ್ನು ಯಾವಾಗಲೂ ಬೈತ್ತೀರಿ. ಅವನ ಲ ಟಾಲೆಂಟ್ ನೂ ನೋಡಿ ಎಂದರು.

ಮನೆಯಲ್ಲಿ ವಿಪರೀತ ಕೀಟಲೆಯ ಈ ಹುಡುಗನ ಹೆಸರು ಗೌತಮ ಕೃಷ್ಣ. ಆದರೆ ಶಾಲೆಯಲ್ಲಿ ಸೈಲೆಂಟ್. ಗಲಾಟೆ ಮಾಡಲ್ಲ ಎನ್ನುವುದು ಅವರ ಟೀಚರ್ ಗಳ ಕಂಪ್ಲೇಂಟ್.
ಚಿತ್ರದ ಜೊತೆಗೆ ಪರಿಸರದ ಕತೆ ಹೇಳುವ ಸಣ್ಣ ಕತೆಯನ್ನು ಬರೆದಿದ್ದ. ಬರವಣಿಗೆ ಖುಷಿ ತರಿಸಿತು.

ಅಂದಹಾಗೆ ಈತ ತುಮಕೂರು ಕೇಂದ್ರೀಯ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿ. ಇಂದು ಮಕ್ಕಳ ದಿನಾಚರಣೆ. ಮಗನಿಗೆ ಮಕ್ಕಳ ದಿನಾಚರಣೆ ಶುಭಾಶಯಗಳು.

ಸ್ನೇಹಿತರೊಟ್ಟಿಗೆ ಒಂದು ಝಲಕ್

ತುಮಕೂರಿನತ್ತ ಸಹಕಾರಿಗಳ‌‌‌‌ ಚಿತ್ತ

ತುಮಕೂರು: ನಗರದಲ್ಲಿ ಗುರುವಾರ (ನ.14) ನಡೆಯುವ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಸಹಕಾರಿಗಳು, ಸಹಕಾರಿ ಮುಖಂಡರು ತುಮಕೂರಿನತ್ತ ಮುಖ ಮಾಡಿದ್ದಾರೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ, ಅವರ ಪುತ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರ್.ರಾಜೇಂದ್ರ ಅವರ ಉತ್ಸಾಹ ಹಾಗೂ ಸಪ್ತಾಹದ ಹೊಣೆ ಹೊತ್ತ ಕಾರಣ ಸಮಾರಂಭಕ್ಕೆ ರಂಗು ಬಂದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ಘಾಟನೆಗೆ ಕರೆಸುವ ಹಿಂದೆ ರಾಜಣ್ಣ ಅವರ ಶ್ರಮ ಇದೆ. ಬಿಎಸ್ ವೈ ಅವರೇ ಕಾರ್ಯಕ್ರಮ ಉದ್ಘಾಟನೆ ಮಾಡಬೇಕು ಎಂದು ಅವರು ಸ್ವತಃ ಆಸಕ್ತಿ ವಹಿಸಿ ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲೂ ಸಮಾರಂಭ ಆಸಕ್ತಿ ಮೂಡಿಸಿದೆ.
ಸಹಕಾರ ಸಂಘಗಳು ಉತ್ತೇಜನ ನೀಡುವಲ್ಲಿ ಮುಖ್ಯಮಂತ್ರಿ ಏನಾದರೂ ಕೊಡುಗೆ ಘೋಷಿಸುತ್ತಾರೆಯೇ ಎಂಬ ಚಿತ್ತ ಸಹಕಾರಿಗಳಲ್ಲಿದೆ.

ಬುಧವಾರ ತಡರಾತ್ರಿಯಾದರೂ ನಿರ್ದೇಶಕ ಆರ್.ರಾಜೇಂದ್ರ ಸಮಾರಂಭ ನಡೆಯುವ ಕಾಲೇಜು ಮೈದಾನದಲ್ಲಿ ಇದ್ದರು. ಸಂಸದ ಜಿ.ಎಸ್.ಬಸವರಾಜ್ ಅವರೂ ಭೇಟಿ ನೀಡಿದ್ದರು. ಸಂಸದರಿಗೆ ರಾಜೇಂದ್ರ ಅವರು ಕಾರ್ಯಕ್ರಮದ ತಯಾರಿ,ಸಮಾರಂಭದ ವಿವರದ ಮಾಹಿತಿ ನೀಡಿದರು. ಮುಖಂಡ ರಾಜೇಶ್ ದೊಡ್ಮನೆ ಇತರರು ಇದ್ದ ರು.

ಅಖಿಲ ಭಾರತ ಸಹಕಾರ ಸಪ್ತಾಹ; ಸಿಎಂ ಉದ್ಘಾಟನೆ

0

ಅರವತ್ತಾರನೇ ಅಖಿಲ ಭಾರತ ಸಹಕಾರ ಸಹಕಾರ ಸಪ್ತಾಹ-2019 ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆಯಲಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.

ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 12 ಗಂಟೆಗೆ ಸಮಾರಂಭ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಸಪ್ತಾಹ-2019ರ ಸಮಾರಂಭವನ್ನು ಉದ್ಘಾಟಿಸಲಿದ್ದು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಮಾರಂಭದ ಆದ್ಯಕ್ಷತೆ ವಹಿಸುವರು.

ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

ಇವರ ಜೊತೆಗೆ ತುಮಕೂರು ಸಂಸದ ಜಿ.ಎಸ್.ಬಸವರಾಜು, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಚಿತ್ರದುರ್ಗದ ಸಂಸದ ಎ.ನಾರಾಯಣ ಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಗಮಿಸುವರು.
ಮಾಜಿ ಶಾಸಕ ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತಿಪಟೂರು ಶಾಸಕ ಬಿ.ಸಿ.ನಾಗೇಶ್, ತುರುವೇಕೆರೆ ಶಾಸಕ ಮಸಾಲೆ ಜಯರಾಂ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಕಾರ್ಯಕ್ರಮದ ಸಿದ್ದತೆಗಳನ್ನು ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ರಾಜಣ್ಣ ಮಾತುಕತೆ ನಡೆಸಿದರು. ಇದೇ ವೇಳೆ ಪೊಲೀಸರು ಕೂಡ ವ್ಯಾಪಕ ಬಂದೋಬಸ್ತ್ ಸಂಬಂಧ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.

ಸಹಕಾರ ಸಪ್ತಾಹ 2019ರ ಸಮಾರಂಭಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ನಗರದ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಗುಬ್ಬಿ, ಶಿರಾ, ಕುಣಿಗಲ್, ಕೊರಟಗೆರೆ ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಸಾರ್ವಜನಿಕರನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ಇಳಿಸಿ ನಂತರ ಶಂಕರಮಠ-ಎಸ್.ಎಸ್.ಸರ್ಕಲ್-ಕೋತಿತೋಪು ಮಾರ್ಗವಾಗಿ ಅಮಾನಿಕೆರೆ ಬಳಿಗೆ ಹೋಗಬೇಕು.

ಬೆಂಗಳೂರು ಮಾರ್ಗದಿಂದ ಆಗಮಿಸುವ ಬಸ್ಸುಗಳು ಸಾರ್ವಜನಿಕರನ್ನು ಶಂಕರಮಠದ ಬಳಿ ಇಳಿಸಿ ನಂತರ ಟೌನ್ಹಾಲ್-ಅಶೋಕ ರಸ್ತೆ-ಕೋಡಿ ಸರ್ಕಲ್ ಮೂಲಕ ಅಮಾನಿಕೆರೆ ಬಳಿ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ

`ತಂಗಡಿ’ ಮದುಮೇಹಕ್ಕೆ ರಾಮಬಾಣ

ತುಮಕೂರು:

ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಔಷಧೀಯ ಗುಣವನ್ನು ಹೊಂದಿರುವ ಸಸ್ಯಗಳು, ಗಿಡ, ಮರ ಬಳ್ಳಿಗಳು ಕಾಣ ಸಿಗುತ್ತವೆ. ಆದರೆ ಅವುಗಳು ಪಕ್ಕದಲ್ಲಿದ್ದರೂ ಅವುಗಳ ಮಹತ್ವ ಎಷ್ಟೋ ಜನರಿಗೆ ತಿಳಿದೇ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ(ಮಧುಮೇಹ) ಕಾಯಿಲೆ ಎಂಬುದು ಸಹಜವಾಗಿ ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆಯಾಗಿದೆ. ಒಮ್ಮೆ ಸಕ್ಕರೆ ಕಾಯಿಲೆ ದೇಹವನ್ನು ಆಕ್ರಮಿಸಿದರೆ ನಮ್ಮ ಜೀವನವೇ ಮುಗಿದು ಹೋಯಿತು ಎಂಬಂತೆ ಹಲವರು ತಮಗೆ ತಾವು ಅಂದುಕೊಂಡು ಅದೇ ಆಲೋಚನೆಯಲ್ಲೆ ಇನ್ನಷ್ಟು ಕಾಯಿಲೆಗಳನ್ನು ತಂದು ಕೊಳ್ಳುತ್ತಿರುವುದು ಕಾಣುತ್ತಿದ್ದೇವೆ. ನಮ್ಮ ದೈನಂದಿನ ಚಟುವಟಿಕೆ ಹಾಗೂ ಆಹಾರ ಕ್ರಮದಿಂದ ಉಂಟಾಗುವ ಕಾಯಿಲೆಗೆ ಎದರುವ ಅವಶ್ಯಕತೆಯಿಲ್ಲ. ಕೆಲವು ದಿನಚರಿಗಳನ್ನು ರೂಢಿಸಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು ಎಂದು ಅನೇಕ ತಜ್ಞರು ಅಭಿಪ್ರಾಯ ಪಡುತ್ತಾರೆ. ನವೆಂಬರ್ 14 ವಿಶ್ವ ಮಧುಮೇಹ ದಿನ ಎಂದು ಗುರುತಿಸಲಾಗಿದೆ. ಇಂತಹ ಸಂದರ್ಭಕ್ಕೆ ಅನುಗುಣವಾಗಿ ಮಧುಮೇಹ ಕಾಯಿಲೆಗೆ ಮನೆ ಮದ್ದನ್ನು ಖರ್ಚಿಲ್ಲದೆ ಮಾಡಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಎತ್ತೇಚವಾಗಿ ಈ ಗಿಡ ಬೆಳೆದುಕೊಂಡಿರುತ್ತದೆ. ಇದನ್ನು ಗ್ರಾಮ್ಯ ಭಾಷೆಯಲ್ಲಿ ತಂಗಡಿ ಗಿಡ ಎನ್ನುವರು. ಅನೇಕ ಔಷಧೀಯ ಗುಣ ಹೊಂದಿರುವ ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತವಾದುದು. ಜೀವಕ್ಕೆ ತಂಪು ಜುಟ್ಟಿಗೆ ಭದ್ರ ಎಂದು ಗ್ರಾಮೀಣ ಭಾಗದ ಜನರು ಇದನ್ನು ವ್ಯಾಖ್ಯಾನಿಸುವುದು ಹೌದು. ಈ ಗಿಡದ ಹೂವುಗಳಿಂದ ಮದು ಮೇಹ ಕಾಯಿಲೆ ನಿಯಂತ್ರಿಸಬಹುದಾಗಿದೆ. ಮಧು ಮೇಹ ಕಾಯಿಲೆಯಿಂದ ಬಳಲುತ್ತಿರುವವರು ಇದನ್ನು ಉಪಯೋಗಿಸಿ ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ.

ಇದನ್ನು ಹೇಗೆ ಉಪಯೋಗಿಸುವುದೆಂದರೆ ಹಳದಿ ಬಣ್ಣದ ಹೂವುಗಳಲ್ಲಿನ ದಳಗಳನ್ನು ಬಿಡಿಸಿ ಅವುಗಳನ್ನು ನೀರಿನಲ್ಲಿ ತೊಳೆದು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ 5 ಅಥವಾ 6 ದಳಗಳನ್ನು ಪ್ರತಿ ದಿನ ತಿನ್ನ ಬೇಕು. ಅಲ್ಲದೇ ಚಿಕ್ಕ ಮಕ್ಕಳಿಗೆ ಕೆಮ್ಮು, ನೆಗಡಿಯಾದರೆ ಹಾಲಿನಲ್ಲಿ ಈ ಹೂವಿನ ದಳವನ್ನು ಹಾಕಿ ಕುಡಿಸಿದರೆ ಮಕ್ಕಳ ಬಹಳ ದಿನಗಳ ಕೆಮ್ಮು ಹಾಗೂ ನೆಗಡಿ ಗುಣಮುಖವಾಗುತ್ತದೆ.  ಹಾಗೇ ಇದರ ಗಿಡದ ಚಕ್ಕೆಯನ್ನು ಅಡಕೆಯ ಬದಲಾಗಿ ಎಲೆಯೊಂದಿಗೆ ತಾಂಬೂಲದ ಜೊತೆಯಲ್ಲಿ ಜಗಿಯಲು ಈ ಹಿಂದೆ ಬಳಸುತ್ತಿದ್ದರು. ಈಗಲು ಕೆಲವರು ಅಡಿಕೆ ಬೇಯಿಸುವ ಸಂದರ್ಭದಲ್ಲಿ ತಂಗಡಿ ಚೆಕ್ಕೆ ಹಾಕಿ ಬೇಯಿಸುವುದು ಉಂಟು. ಹಾಗೂ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಕೈ, ಕಾಲು, ಕಣ್ಣು ಉರಿಯಲು ಪ್ರಾರಂಭವಾದಾಗ ಬೇಯಿಸಿದ ಹರಳೆಣ್ಣೆ ತಲಗೆ ಹಚ್ಚಿ ತಂಗಡಿ ಸೊಪ್ಪನ್ನು ತಲಗೆ ಕಟ್ಟಿಕೊಂಡರೆ ಸಾಕು ಇಡೀ ದೇಹದಲ್ಲಿನ ಉಷ್ಣಾಂಶ ಕಡಿಮೆಯಾಗಿ ಸಮತೋಲನವಾಗುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೆಲವರು ರೂಡಿಸಿಕೊಂಡು ಬಂದಿದ್ದಾರೆ. ಆದರೆ ಅನೇಕರಿಗೆ ತಂಗಡಿ ಗಿಡ, ಹೂವು, ಸೊಪ್ಪು ಹಾಗೂ ಚೆಕ್ಕೆಯ ಮಹತ್ವ ತಿಳಿದಿಲ್ಲ. ಇದನ್ನು ಯಾರು ಬೇಕಾದರು ಬಳಸಬಹುದಾಗಿದೆ.

ಗಂಗರ ತುಮಕೂರಿಗೆ‌ ತುಮಕೂರು‌‌ ಹೆಸರು ಬಂದಿದ್ದು ಹೇಗೆ ಗೊತ್ತಾ?

0

ವಿಶೇಷ ವರದಿ;
ಲಕ್ಷ್ಮೀಕಾಂತರಾಜು ಎಂಜಿ
9844777110

ಇದು ರಾಜ್ಯದ ಎರಡನೇಯ ಅತಿ ದೊಡ್ಡ ಜಿಲ್ಲೆ. ತೆಂಗಿಗೆ ಹೆಸರಾಗಿ ಕಲ್ಪತರು ನಾಡೆಂದು ಪ್ರಸಿದ್ಧವಾಗಿರುವ ಜಿಲ್ಲೆ. ಅದುವೇ ತುಮಕೂರು ಜಿಲ್ಲೆ.

ತುಮಕೂರು ಇಂದು ಶೈಕ್ಷಣಿಕ ನಗರವಾಗಿ ಬೆಳೆದಿದ್ದು ಜಿಲ್ಲೆಗೆ ಮಾತ್ರವೇ ಯೂನಿವರ್ಸಿಟಿಯೂ ಇದೆ. ತ್ರಿವಿಧ ದಾಸೋಹಿ ,ಅಕ್ಷರ ಸಂತ ಶ್ರೀ ಶಿವಕುಮಾರ ಸ್ವಾಮೀಜಿಯವರು ಸೇವೆಗೈದ ಕರ್ಮ ಭೂಮಿ ತುಮಕೂರು.

ಇಂಥಹ ವಿಶೇಷವುಳ್ಳ ತುಮಕೂರು ನಗರಕ್ಕೆ ತುಮಕೂರು ಎಂದು ಹೆಸರಾದರು ಬಂದದ್ದಾರು ಹೇಗೆ ಎಂದು ತಿಳಿಯೋಣ ಬನ್ನಿ

ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಈಗಿನ ಕರ್ನಾಟಕದ ಬಹುಪಾಲು ಭಾಗವನ್ನು ತಲಕಾಡಿನ ಗಂಗರು ಆಳುತ್ತಿದ್ದರು. ಈ ಸಮಯದಲ್ಲಿ ತುಮಕೂರಿನ ಉತ್ತರ ಭಾಗವು ನೊಳಂಭವಾಡಿ ಪ್ರಾಂತ್ಯಕ್ಕೆ ಸೇರಿತ್ತು.

ಪ್ರಸ್ತುತವಾಗಿ ಆಂಧ್ರಕ್ಕೆ ಸೇರಿರುವ ಹೇಮಾವತಿಯು ನೊಳಂಬವಾಡಿಯ ರಾಜಧಾನಿಯಾಗಿತ್ತು.ಇಂದಿನ ತುಮಕೂರಿನ ದಕ್ಷಿಣ ಭಾಗವು ಗಂಗವಾಡಿ ಪ್ರಾಂತ್ಯಕ್ಕೆ ಸೇರಿದ್ದು ನೊಳಂಬವಾಡಿ ಹಾಗೂ ಗಂಗವಾಡಿ ಪ್ರಾಂತ್ಯದ ನಡುವೆ ಒಂದು ಸಣ್ಣ ಸಂಸ್ಥಾನವಿತ್ತು. ಅದುವೇ ಕ್ರೀಡಾಪುರ. ( ಇಂದಿನ ಕೈದಾಳ)

ಈ ಕ್ರೀಡಾಪುರದ ಅರಸರು ಗಂಗವಾಡಿ ಪ್ರಾಂತ್ಯದ ಅರಸರಿಗೆ ಸಾಮಂತರಾಗಿದ್ದ ಕಾರಣ ನೊಳಂಬವಾಡಿಯ ಅರಸರಿಗೆ ಇದನ್ನು ಸಹಿಸಲಾಗದೆ ಗಂಗವಾಡಿಯ ಅರಸರ ಮೇಲೆ ಯುದ್ಧ ಸಾರುತ್ತಿದ್ದರು

ನೊಳಂಬವಾಡಿಯ ರಾಜರುಗಳು ಗಂಗವಾಡಿಯ ಸೈನ್ಯಕ್ಕೆ ಯಾವುದೇ ಮುನ್ಸೂಚನೆ ನೀಡದೆ ಯುದ್ಧ ನೀತಿಗಳನ್ನ ಕೈಬಿಟ್ಟು ಯಾವಾಗ ಅಂದ್ರೆ ಅವಾಗ ಯುದ್ಧಕ್ಕೆ ಬರುತ್ತಿದ್ದರು

ನೊಳಂಬವಾಡಿಯ ಅರಸರ ಈ ಅಧರ್ಮ ಯುದ್ಧ ನೀತಿಯಿಂದ ಬೇಸತ್ತ ಗಂಗವಾಡಿಯ ಅರಸರು ಮತ್ತು ಸೈನ್ಯ ಸದಾ ಯುದ್ಧಕ್ಕೆ ಸನ್ನದ್ಧರಾಗಬೇಕಿತ್ತು

ಯಾವಾಗ ಅಂದರೆ ಅವಾಗ ಯುದ್ಧಕ್ಕೆ ಬರುತ್ತಿದ್ದ ನೊಳಂಬವಾಡಿ ಸೈನ್ಯ ಗುರುತಿಸಿ ಗಂಗವಾಡಿ ಸೈನ್ಯಕ್ಕೆ ತಿಳಿಸಲು ಒಂದು ಎತ್ತರದ ಪ್ರದೇಶದಲ್ಲಿ ಕಾವಲುಗಾರನನ್ನ ನೇಮಿಸಿ ಸೈನ್ಯ ಕಂಡೊಡನೆ ಕಾವಲುಗಾರ ಟುಮಕಿ ಬಾರಿಸುತ್ತಿದ್ದ. ಈ ಟುಮಕಿ ಬಾರಿಸಿದನೆಂದರೆ ಗಂಗವಾಡಿಯ ಸೈನ್ಯ ಯುದ್ಧಕ್ಕೆ ಸನ್ನದ್ದರಾಗುತ್ತಿದ್ದರು. ಟುಮಕಿ ಅಂದರೆ ಒಂದು ರೀತಿಯ ವಾದ್ಯ ಸಾಧನ.

ಈ ಟುಮಕಿ ಬಾರಿಸುತ್ತಿದ್ದ ಸ್ಥಳ ಟುಂಕನಹಳ್ಳಿ ಎಂದಾಯಿತು. ನಂತರ ಬೆಳೆಯುತ್ತಾ ಟುಂಕೂರು,ತುಮಕೂರು ಆಗಿ ಇಂದು ಬೃಹತ್ ನಗರವಾಗಿ ಬೆಳೆದು ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಬೆಳೆದು ನಿಂತು ಬೆಂಗಳೂರಿನ ಭವಿಷ್ಯದ ಲೇ ಔಟ್ ಆಗಿದೆ.

ಇದೆಲ್ಲದರ ಜೊತೆಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿದ್ದು ಮುಂಬರುವ ದಿನಗಳಲ್ಲಿ ತುಮಕೂರು ಮತ್ತಷ್ಟು ಅಭಿವೃದ್ಧಿ ಹೊಂದಿ ಮೆರಗು ಪಡೆಯಲಿದೆ.

ಸ್ತನ ತೆರಿಗೆ ಗೊತ್ತಾ ನಿಮಗೆ?

ಕೇರಳದ ರಾಜರಾಗಿದ್ದ ನಂಬೂದರಿ ಬ್ರಾಹ್ಮಣರು, ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿಕ್ರೂರವಾದ ಅಮಾನವೀಯ ಕಾನೂನನ್ನು 17, 18,19 ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು.
ಇದು ಸ್ತನ ತೆರಿಗೆ ಎಂದು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು.

ಮೈಸೂರುಹುಲಿ ಟಿಪ್ಪುಸುಲ್ತಾನ್ ನು ಕೇರಳದ ಮಲಬಾರ್ ಪ್ರಾಂತ್ಯದ ಮೇಲೆ ಅನೇಕ ಬಾರಿ ದಾಳಿ ಮಾಡಿ, ಈ ನಂಬೂದರಿ ಬ್ರಾಹ್ಮಣರನ್ನು ಬಗ್ಗುಬಡಿದು, ಈ ಅಮಾನವೀಯ ಪದ್ಧತಿಯನ್ನು ತನ್ನ ಕಾಲದಲ್ಲಿ ನಿಷೇಧಿಸಿದನು.

ಟಿಪ್ಪುಸುಲ್ತಾನನ ಮರಣದ ನಂತರ ಮತ್ತೇ ಸ್ತನತೆರಿಗೆ ಪದ್ಧತಿಯು ಜಾರಿಗೆ ಬಂದಿತು.
ಕೆಳವರ್ಗದ ಈಳವ(ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಪೂರ್ತಿ ಮುಚ್ಚಿಕೊಂಡಿರುತ್ತಾಳೆ. ಇದಕ್ಕಾಗಿ , ನಂಬೂದರಿ ರಾಜರುಗಳು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸಿದಾಗ; ಆ ಮಹಾತಾಯಿ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯಲ್ಲಿಟ್ಟು ತೋರಿಸುತ್ತಾಳೆ. ಆದರೆ ಆಕೆ ಮಾತ್ರ ಅತಿಯಾದ ರಕ್ತಸ್ರಾವದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ.

ನಂಗೇಲಿ ಯ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನತೆರಿಗೆ ಪದ್ಧತಿಯನ್ನು 19 ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುತ್ತಾರೆ.

ಆ ಮಹಾತಾಯಿ ನಂಗೇಲಿಯು ಪ್ರಾಣ ಬಿಟ್ಟ ಸ್ಥಳದಲ್ಲಿ , ಅವಳ ವಿಗ್ರಹವನ್ನು ನಿಲ್ಲಿಸಿ, ಆರಾಧಿಸುತ್ತಾರೆ.

ಕೆಬಿಎಸ್ ಗೆ ತುಮಕೂರಿನಲ್ಲಿ ನುಡಿನಮನ ನ. 15ರಂದು

ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನವೆಂಬರ್ 15ರಂದು ಬೆಳಗ್ಗೆ 10.30ಕ್ಕೆ ಕೆ.ಬಿ.ಸಿದ್ದಯ್ಯನವರಿಗೆ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನಪರ ಚಿಂತಕೆ ಕೆ.ದೊರೈರಾಜ್ ತಿಳಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.ನುಡಿನಮನ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ದಿನೇಶ್, ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಕೋಟಗಾನಹಳ್ಳಿ ರಾಮಯ್ಯ, ಕೆ.ಟಿ.ಶಿವಪ್ರಸಾದ್, ನಟರಾಜ್ ಬೂದಾಳ್, ಜಿ.ವಿ.ಆನಂದಮೂರ್ತಿ, ಕೆ.ಪಿ.ನಟರಾಜ್, ಬಾ.ಹ.ರಮಾಕುಮಾರಿ, ಅನ್ನಪೂರ್ಣ ವೆಂಕಟನಂಜಪ್ಪ, ಕೆಂಚಮಾರಯ್ಯ, ಮಲ್ಲಿಕಾ ಬಸವರಾಜು ಮೊದಲಾದವರು ಭಾಗವಹಿಸುವರು ಎಂದು ಹೇಳಿದರು.

ಚರಕ ಆಸ್ಪತ್ರೆಯ ಡಾ. ಬಸವರಾಜು ಮಾತನಾಡಿ, ಕವಿ ಕೆ.ಬಿ. ಸಿದ್ದಯ್ಯ ಅವರದು ಬಹುಮುಖ ಪ್ರತಿಭೆ. ಜಂಗಮಶೀಲತೆಯ ವ್ಯಕ್ತತ್ವ, ಅವರು ಕೇವಲ ಕವಿ ಮಾತ್ರ ಆಗಿರಲಿಲ್ಲ. ಹೋರಾಟಗಾರ, ಚಿಂತಕ ಮತ್ತು ಚಲನಶೀಲ ವ್ಯಕ್ತಿತ್ವ ಹೊಂದಿದ್ದರು. ಸಮಾಜ ಸುಧಾನರಣೆಗೆ ಹಲವು ರೀತಿಯಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.ಕೆ.ಬಿ. ಸಮ ಸಮಾಜ ನಿರ್ಮಾಣಕ್ಕೆ ಬಹುಮುಖ್ಯವಾಗಿ ಶ್ರಮಿಸಿದರು. ಕಲೆ ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸದಾ ತುಡಿಯುತ್ತಿದ್ದರು. ಹೀಗಾಗಿ ಅವರ ತತ್ವ ಸಿದ್ಧಾಂತಗಳು ಯುವಜನತೆಗೆ ತಲುಪುವಂತಾಗಬೇಕು ಎಂದು ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ನರಸೀಯಪ್ಪ, ರಂಗಕರ್ಮಿ ಹೊನ್ನವಳ್ಳಿ ನಟರಾಜ್, ಯುವ ಮುಖಂಡ ವಿರೂಪಾಕ್ಷ ಡ್ಯಾಗೇರಹಳ್ಳಿ, ಉಪನ್ಯಾಸಕ ಕೊಟ್ಟ ಶಂಕರ್ ಉಪಸ್ಥಿತರಿದ್ದರು.

ಬಿಜೆಪಿಗೆ ಭಾರವಾದ ಬಚ್ಚೇಗೌಡ

ತುಮಕೂರು; ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿಂತೆ ಬಿಜೆಪಿಯ ಅತೃಪ್ತರನ್ನು ಸೆಳೆಯುವ ‘ಆಪರೇಷನ್‌ ಹಸ್ತವನ್ನು ಕಾಂಗ್ರೆಸ್ ಆರಂಭಿಸಿದೆ.

ಕಾಂಗ್ರೆಸ್- ಜೆಡಿ ಎಸ್ ನಡುವೆ ಮೈತ್ರಿ ಮುರಿದು ಬಿದ್ದ ಬಳಿಕ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಸಿದ್ದ ರಾಮಯ್ಯ ಅವರಿಗೆ ಬೇಕಾಗಿದೆ. ಹೀಗಾಗಿ ಬಿಜೆಪಿ ಒಡಕಿನ ಲಾಭ ಪಡೆಯಲು ಹೊರಟಿದ್ದಾರೆ.

ಕಾಗವಾಡದಲ್ಲಿ ಸ್ಪರ್ಧಿಸಿ ಶ್ರೀಮಂತ ಪಾಟೀಲ ಎದುರು ಸೋತಿದ್ದ ಮಾಜಿ ಶಾಸಕ ಭರಮಗೌಡ (ರಾಜು) ಕಾಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ. ಗೋಕಾಕದ ಬಿಜೆಪಿ ಪರಾಜಿತ ಅಭ್ಯರ್ಥಿ ಅಶೋಕ್ ಪೂಜಾರಿ ಅವರು ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಬೆಂಬಲಿಗರ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಹೊಸಕೋಟೆಯಲ್ಲಿ ಹಿಂದೆ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಶರತ್‌ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ.

ಉಪಚುನಾವಣೆಯಲ್ಲಿ ಬಹುತೇಕ ಎಲ್ಲ ಅನರ್ಹ ಶಾಸಕರಿಗೂ ಟಿಕೆಟ್‌ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಶರತ್ ಬಚ್ಚೇಗೌಡ ಅವರು ಸ್ಪರ್ಧಿಸುವುದಾಗಿ ಹೇಳಿರುವುದು ಎಂಬಿಟಿ ನಾಗರಾಜ್ ಗೆಲುವಿಗೆ ತೊಡರು ಆಗಲಿದೆ ಎನ್ನಲಾಗಿದೆ.

ಬಿಜೆಪಿ ಸ್ಥಳೀಯ ಮಟ್ಟದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿದ್ದು, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ನಾಮಪತ್ರ ಸಲ್ಲಿಕೆ ಆರಂಭ
ಬೆಂಗಳೂರು: ವಿಧಾನಸಭೆ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಸೋಮವಾರ ಆರಂಭವಾಗಿದ್ದು, ಒಟ್ಟು 7 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ 3, ಅಥಣಿ 2, ಕೆ.ಆರ್.ಪುರ, ವಿಜಯನಗರ ಕ್ಷೇತ್ರದಲ್ಲಿ *ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದ ಸಮಯದಲ್ಲಿ ನಾಮಪತ್ರ ಸಲ್ಲಿಕೆಯಾಗಿದ್ದು, ಆ ನಾಮಪತ್ರಗಳನ್ನು ಈ ಚುನಾವಣೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು. ಮತ್ತೊಮ್ಮೆ ಹೊಸ ದಾಗಿ ನಾಮಪತ್ರ ಸಲ್ಲಿಸುವ ಅಗತ್ಯ ಇಲ್ಲ.

ಸ್ಮಶಾನ ಭೂಮಿ; ಜಿಲ್ಲಾಧಿಕಾರಿ ಭರವಸೆ

ತುಮಕೂರು:ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದವರ ಸ್ಮಶಾನ ಭೂಮಿ ಗುರುತಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಇಂದು ನಡೆದ ಪರಿಶಿಷ್ಟರ ಕುಂದುಕೊರತೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಭರವಸೆ ನೀಡಿದರು.

ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ/ವರ್ಗದ ಜನಾಂದವರಿಗೆ ಸ್ಮಶಾನ ಭೂಮಿ ಒದಗಿಸುವುದು ಮೊದಲ ಆದ್ಯತೆ. ಸುಮಾರು 75 ಗ್ರಾಮಗಳಲ್ಲಿ ಸ್ಮಶಾನ ಭೂಮಿಗಳಿಲ್ಲ. ಭೂ-ಲಭ್ಯತೆ ಪಟ್ಟಿ ಆಧಾರದ ಮೇಲೆ ಭೂಮಿ ನೀಡಲಾಗುವುದು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗೀ ಜಮೀನನ್ನು ಖರೀದಿ ಮಾಡಿ ಜಾಗ ನೀಡಲಾಗುವುದು.

ಗೂಳೂರು, ಹೆಗ್ಗೆರೆ, ಹರಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಿಡುಗಡೆಯಾಗುವ ಅನುದಾನ ಪರಿಶಿಷ್ಟ ಜಾತಿ/ವರ್ಗಗಳ ಕಾಮಗಾರಿ ಯೋಜನೆಗೆ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಆರೋಪಕ್ಕೆ ತನಿಖೆ ನಡೆಸುವ ಭರವಸೆ ನೀಡಿದರು.

ಪಾವಗಡ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಆಯಾ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ್ಗಳು ಸ್ಥಳ ಹಾಗೂ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಮಧುಗಿರಿ ನಗರದಲ್ಲಿ ನಗರಸಭೆಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿಲ್ಲ.

ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಸಭೆಯಲ್ಲಿಯೇ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿ, ದಲಿತ ಸಮುದಾಯಕ್ಕೆಂದು ಮೀಸಲಿರುವ ಅಂಗಡಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಶಾನ ಅಭಿವೃದ್ಧಿಗಾಗಿ 200 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಸ್ಮಶಾನ ಅಭಿವೃದ್ಧಿಯಾಗದೇ ಇರುವ ಗ್ರಾಮಗಳಲ್ಲಿ ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ಸೂಚಿಸಿದರು.

ಗುಬ್ಬಿ ತಾಲೂಕಿನ ಸಿ.ಎಸ್ ಪುರ, ಕಲ್ಲೂರು ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವಕುಮಾರ್, ಕೆ.ಆರ್.ನಂದಿನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್ನಾಥ್ ಸೇರಿದಂತೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಹಾಜರಿದ್ದರು.

ಪಾಸ್ ಇದ್ರೂ ಹತ್ತಂಗಿಲ್ಲ ಬಸ್ಸು

ತುಮಕೂರು:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಸಾರಿಗೆ ಸಂಸ್ಥೆ 10 ಲಕ್ಷಕ್ಕೂ ಅಧಿಕ ಹಣ ಪಡೆದು ತುಮಕೂರು ಮತ್ತು ಕೊರಟಗೆರೆ ಡಿಪೋದಿಂದ 2 ಸಾವಿರಕ್ಕೂ ಹೆಚ್ಚು ಸರಕಾರಿ ಬಸ್ಪಾಸ್ ವಿತರಣೆ ಮಾಡಿದೆ. ಪ್ರತಿನಿತ್ಯ 87 ಬಸ್ಸುಗಳ ಸಂಚಾರದ ವ್ಯವಸ್ಥೆ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರಯೋಜವಿಲ್ಲದಂತಾಗಿ ಮಧುಗಿರಿ, ಕೊರಟಗೆರೆಯಿಂದ ತುಮಕೂರಿಗೆ ಓಡಾಡುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲಿ ಜೀವ ಕೈಲಿಡಿದುಕೊಂಡು ಓಡಾಡುವಂತಾಗಿದೆ.
ಕೊರಟಗೆರೆ ಮತ್ತು ತುಮಕೂರು ಘಟಕದಿಂದ ವಿದ್ಯಾಥರ್ಿಗಳಿಗೆ ನೀಡಿರುವ ಬಸ್ ಪಾಸಿನ ಅಂಕಿ ಅಂಶದ ಪ್ರಕಾರ ಸರ್ಕಾರಿ ಬಸ್ಸಿನ ನಿರ್ವಹಣೆ ಇಲ್ಲದಾಗಿದೆ. ಪಾವಗಡ ಮತ್ತು ಮಧುಗಿರಿ ಘಟಕದಿಂದ ಹೊರಡುವ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಬಾರದೇ ನೇರವಾಗಿ ತುಮಕೂರು ನಗರಕ್ಕೆ ಸಂಚಾರ ನಡೆಸುತ್ತಿವೆ. ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಬಹುತೇಕ ಶಾಲಾ-ಕಾಲೇಜು ಪ್ರಾರಂಭ ಆಗೋದು ಬೆಳಿಗ್ಗೆ 9 ರಿಂದ 10 ಗಂಟೆಗೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರಲು ಬೆಳಿಗ್ಗೆ 7 ಗಂಟೆಯಿಂದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಹೊರಡಬೇಕಿದೆ. ಈ ವೇಳೆಯಲ್ಲಿ ಸಾರಿಗೆ ಸಂಸ್ಥೆ ಬಸ್ಸಿನ ಅವಶ್ಯಕತೆ ವಿದ್ಯಾರ್ಥಿಗಳಿಗೆ ಹೆಚ್ಚಾಗಿದೆ. ಆದರೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಬರುವ 10 ಬಸ್ಸುಗಳಲ್ಲಿ 2ಸಾವಿರ ವಿದ್ಯಾಥರ್ಿಗಳು ಹೇಗೆ ತಾನೆ ಸಂಚಾರ ಮಾಡಬೇಕೆಂಬುದು ಸದ್ಯದ ಪ್ರಶ್ನೆಯಾಗಿದೆ. ಇತ್ತೀಚೆಗೆ ಖಾಸಗಿ ಬಸ್ ನಲ್ಲಿ ಹೆಚ್ಚು ಜನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವಾಗ ಕೊರಟಗೆರೆ ತಾಲ್ಲೂಕಿನ ಅಗ್ರಹಾರ ಬಳಿ ಅಪಘಾತಕ್ಕೀಡಾಗಿ ಸ್ಥಳದಲ್ಲೆ 5 ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಮಾರ್ಗ, ನಿಗದಿತ ಸಮಯ ಇತ್ಯಾಧಿ ಸೂಚನ ಫಲಕಗಳನ್ನು ಅಳವಡಿಸಿಲ್ಲ. ಕೆಲವೊಮ್ಮೆ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ಸುಗಳು ಬಾರದೇ ಹಾಗೇ ಹೋಗುತ್ತಿರುತ್ತವೆ. ಇಂತಹ ವೇಳೆ ಬಸ್ ನಿಲ್ದಾಣದಲ್ಲಿ ಕಾಯುವ ಪ್ರಯಾಣಿಕರು ತಮ್ಮ ಊರುಗಳು ತಲುಪಲು ಸಾಹಸ ಪಡಬೇಕಿದೆ.


ಸರ್ಕಾರಿ ಮತ್ತು ಖಾಸಗಿ ಬಸ್ಸಿನಲ್ಲಿ ಹಿರಿಯ ನಾಗರೀಕ, ಮಾಜಿ ಸೈನಿಕ, ಮಹಿಳೆ, ವಿಶೇಷ ಚೇತನರಿಗೆ ಪ್ರತ್ಯೇಕ ಸ್ಥಾನ ನಿಗದಿ ಮಾಡಲಾಗಿದೆ. ಆದೇಶಸಾರಿಗೆ ಕಚೇರಿಗೆ ಮಾತ್ರ ಸಿಮೀತವಾಗಿದೆ. ಸಾರಿಗೆ ಬಸ್ಸುಗಳ ಪರಿಶೀಲನೆ ನಡೆಸಬೇಕಾದ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿವರ್ಗ ತುತರ್ಾಗಿ ತುಮಕೂರು ಕಚೇರಿಯಿಂದ ಹೊರಗಡೆ ಬಂದು ಪರಿಶೀಲನೆ ನಡೆಸಬೇಕಾಗಿದೆ.
ಸಾರಿಗೆ ಬಸ್ ಸಂಚಾರದ ಕೊರತೆ ಇರುವ ಕಾರಣ ಶಾಲಾ-ಕಾಲೇಜು ವೇಳೆಯಲ್ಲಿ ನಿಯಮ ಉಲ್ಲಂಘಿಸಿ ಸಾಮರ್ಥ್ಯಕ್ಕೂ ಹೆಚ್ಚು ಜನರು ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಖಾಸಗಿ ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿದರೆ ದಂಡ ವಿದಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವ ಪೊಲೀಸ್ ಹಾಗೂ ಆರ್ಟಿಓ ಇಲಾಖೆ ಸಾರಿಗೆ ಇಲಾಖೆ ಬಸ್ಸುಗಳು ಪ್ರತಿನಿತ್ಯ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಕೊಂಡು ಕಣ್ಣ ಮುಂದೇ ಓಡಾಡುತ್ತಿದ್ದರೂ ಕಣ್ಮುಚ್ಚಿ ಕುಳಿತ್ತಿದ್ದಾರೆ. ಜೊತೆಗೆ ವಾಯುಮಾಲಿನ್ಯ ತಡೆಗಟ್ಟಲು ಹೆಚ್ಚು ಹೊಗೆ ಸೂಸುವ ಖಾಸಗಿ ವಾಹನ ಕಂಡಲ್ಲಿ, ವಾಹನ ಸುಸ್ಥಿಯಲಿಲ್ಲದಿದ್ದಲ್ಲಿ ಸ್ಥಳದಲ್ಲೆ ಮನಸೋ ಇಚ್ಚೆ ದಂಡ ಶುಲ್ಕ ವಿದಿಸುತ್ತಾರೆ. ಆದರೆ ಬಹಳಷ್ಟು ಸಾರಿಗೆ ಸಂಸ್ಥೆ ಬಸ್ಸುಗಳು ಹೆಚ್ಚು ಹೊಗೆ ಸೂಸುತ್ತಲೆ ಓಡಾಡುವುದರ ಜೊತೆಗೆ ಸಾರಿಗೆ ನಿಯಮಗಳ ಪ್ರಕಾರ ಹೆಡ್ ಲೈಟ್, ಇಂಡಿಕೇಟರ್, ಬ್ರೇಕ್ ಲೈಟ್ ಇದ್ಯಾವುದೇ ಇರುವುದಿಲ್ಲ ಆಗಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರೊಬ್ಬರು ಆರೋಪ ಮಾಡುತ್ತಾರೆ.

ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಇಲಾಖೆ:
ಆಟೋ, ಟೆಂಪೋ, ಕಾರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಾರಿಗೆ ನಿಯಮ ಸೀಮಿತವಾಗಿದೆ. ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರತಿನಿತ್ಯ 80 ರಿಂದ 90ಜನ ಪ್ರಯಾಣಿಕರನ್ನು ಕುರಿಗಳ ಹಾಗೇ ತುಂಬುತ್ತಾರೆ. ಬಡವರ ಮೇಲೆ ಮಾತ್ರ ಬ್ರಹ್ಮಾಸ್ತ್ರ ತೋರಿಸುವ ಸಾರಿಗೆ ಇಲಾಖೆ ಸರ್ಕಾರಿ ಒಡೆತನದ ಬಸ್ಸುಗಳ ಮೇಲೆ ಸಾಋಇಗೆ ನಿಯಮ ಪ್ರಕಾರ ಕಾನೂನು ರೀತ್ಯಾ ಕ್ರಮ ಜರುಗಿಸುವುದಿಲ್ಲ.

ಕೊರಟಗೆರೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸುಗಳ ಆಗಮನ ಮತ್ತು ನಿರ್ಗಮನದ ನಾಮಫಲಕದ ಜೊತೆ ಪಾಸಿನ ದರಪಟ್ಟಿ ಅಳವಡಿಸಲು ಸೂಚಿಸಲಾಗಿದೆ. ಇಲಾಖೆಯಿಂದ ಪಾಸ್ ಪಡೆದಿರುವ ವಿದ್ಯಾಥರ್ಿಗಳಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ನಿವರ್ಾಹಕರು ಕಡ್ಡಾಯವಾಗಿ ಅವಕಾಶ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದು ಕೊರಟಗೆರೆ ಬಸ್ ನಿಲ್ದಾಣ ನಿರ್ವಹಣೆಯ ಸಂತೋಷ್ ತಿಳಿಸುತ್ತಾರೆ.

ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಮಧುಗಿರಿ ಮತ್ತು ಕೊರಟಗೆರೆಗೆ ಹೆಚ್ಚುವರಿ ಬಸ್ಸುಗಳ ಪೂರೈಕೆಗೆ ಈಗಾಗಲೇ ಸೂಚಿಸಲಾಗಿದೆ. ಮಧುಗಿರಿ ಡಿಪೋ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಆಗಮಿಸದಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಇದ್ದರೂ ಮಾಹಿತಿ ನೀಡಿದರೆ ತಕ್ಷಣ ಬಗೆಹರಿಸುವುದಾಗಿ ತುಮಕೂರು ಸಾರಿಗೆ ಅಧಿಕಾರಿ ಪಕ್ರುದ್ದೀನ್ ತಿಳಿಸಿದರು.