Thursday, October 16, 2025
Google search engine
Home Blog Page 330

64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು ಇವರು
2019-20ನೇ ಸಾಲಿನ ರಾಜ್ಯೋತ್ಸವ ಪಟ್ಟಿ ಪ್ರಕಟವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 64 ಗಣ್ಯರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸಾಹಿತ್ಯ:
1. ಡಾ.ಮಂಜಪ್ಪಶೆಟ್ಟಿ ಮಸಗಲಿ
2. ಪ್ರೊ.ಜಿ.ರಾಜಶೇಖರಪ್ಪ
3. ಚಂದ್ರಕಾಂತ ಕರದಳ್ಳಿ
4 ಡಾ. ಸರಸ್ವತಿ ಚಿಮ್ಮಲಗಿ
ರಂಗಭೂಮಿ
5. ಪರಶುರಾಮ ಸಿದ್ದಿ
6. ಪಾಲ್ ಸುದರ್ಶನ್
7. ಹೂಲಿ ಶೇಖರ್
8. ಎನ್.ಶಿವಲಿಂಗಯ್ಯ
9. ಡಾ. ಎಚ್.ಕೆ.ರಾಮನಾಥ
10. ಭಾರ್ಗವಿ ನಾರಾಯಣ
ಸಂಗೀತ
11. ಛೋಟಿ ರೆಹಮತ್ ಖಾನ್
12. ನಾಗವಲ್ಲಿ ನಾಗರಾಜ್
13. ಡಾ.ಮುದ್ದುಮೋಹನ
14. ಶ್ರೀನಿವಾಸ ಉಡುಪ
ಜಾನಪದ
15 ನೀಲ್ ಗಾರರು ದೊಡ್ಡಗವಿಬಸಪ್ಪ, ಮಂಟೇಸ್ವಾಮಿ ಪರಂಪರೆ
16. ಹೊಳಬಸಯ್ಯ ದುಂಡಯ್ಯ ಸಂಬಳದ
17. ಭೀಮಸಿಂಗ್ ಸಕಾರಾಮ್ ರಾಥೋಡ್
18. ಉಸ್ಮಾನ್ ಸಾಬ್ ಖಾದರ್ ಸಾಬ್್
19. ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ
20. ಕೆ.ಆರ್. ಹೊಸಳಯ್ಯ
ಶಿಲ್ಪಕಲೆ
21. ವಿ.ಎ.ದೇಶಪಾಂಡೆ,
22. ಕೆ. ಜ್ಞಾನೇಶ್ವರ

ಚಿತ್ರಕಲೆ
23. ಯು. ರಮೇಶರಾವ್
24. ಮೋಹನ ಸಿತನೂರು
ಕ್ರೀಡೆ
25. ವಿಶ್ವನಾಥ್ ಭಾಸ್ಕರ್ ಗಾಣಿಗ
26. ಚೇನಂಡ ಎ. ಕುಟ್ಟಪ್ಪ
27. ನಂದಿತ ನಾಗನಗೌಡರ್
ಯೋಗ
28. ವನಿತಕ್ಕ
29. ಕು. ಖುಷಿ
ಯಕ್ಷಗಾನ
30. ಶ್ರೀಧರ ಭಂಡಾರಿ ಪುತ್ತೂರು
ಬಯಲಾಟ
31. ವೈ.ಮಲ್ಲಪ್ಪ ಗವಾಯಿ.
ಚನಲಚಿತ್ರ
32. ಶೈಲಶ್ರೀ
ಕಿರುತೆರೆ
33. ಜಯಕುಮಾರ ಕೊಡಗನೂರ
ಶಿಕ್ಷಣ
34. ಎಸ್.ಆರ್. ಗುಂಜಾಳ್
35. ಪ್ರೊ.ಟಿ.ಶಿವಣ್ಣ
36. ಡಾ. ಕೆ.ಚಿದಾನಂದಗೌಡ
37. ಡಾ.ಗುರುರಾಜ ಕರ್ಜಗಿ
ಸಂಕೀರ್ಣ
38. ಡಾ. ವಿಜಯ ಸಂಕೇಶ್ವರ
39. ಎಸ್.ಟಿ. ಶಾಂತ ಗಂಗಾಧರ್
40 ಡಾ. ಚನ್ನವೀರ ಶಿವಾಚಾರ್ಯರು
41. ಲೆಫ್ಟಿನೆಂಟ್ ಜನರಲ್ ಬಿ.ಎನ್. ಬಿ.ಎಂ. ಪ್ರಸಾದ್
42. ಡಾ. ನಾ. ಸೋಮೇಶ್ವರ್
43. ಕೆ. ಪ್ರಕಾಶ ಶೆಟ್ಟಿ ಅಧ್ಯಕ್ಷರು, ಎಂ.ಆರ್.ಜಿ. ಗ್ರೂಪ್
ಪತ್ರಿಕೋದ್ಯಮ
44. ಬಿ.ವಿ. ಮಲ್ಲಿಕಾರ್ಜುನಯ್ಯ
ಸಹಕಾರ
45. ರಮೇಶ ವೈದ್ಯ
ಸಮಾಜ ಸೇವೆ
46. ಎಸ್.ಜಿ. ಭಾರತಿ
47. ಕತ್ರಿಗೆ ಚನ್ನಪ್ಪ
ಕೃಷಿ
48. ಬಿ.ಕೆ.ದೇವರಾವ್
49. ವಿಶ್ವೇಶ್ವರ ಸಜ್ಜನ್
ಪರಿಸರ
50. ಸಾಲುಮರದ ವೀರಾಚಾರ್
51. ಶಿವಾಜಿ ಛತ್ರಪ್ಪ ಕಾಗಣಿಕರ್
ಸಂಘ-ಸಂಸ್ಥೆಗಳು
52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್
53. ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಹನಮಂತಪುರ
ವೈದ್ಯಕೀಯ
54. ಡಾ. ಹನುಮಂತರಾಯ ಪಂಡಿತ್
55. ಡಾ. ಆಂಜನಪ್ಪ
56. ಡಾ. ನಾಗರತ್ನ
57. ಡಾ. ಜಿ.ಟಿ.ಸುಭಾಷ್
58. ಡಾ. ಕೃಷ್ಣಪ್ರಸಾದ್
ನ್ಯಾಯಾಂಗ
59. ಕುಮಾರ್ ಎನ್.
ಹೊರನಾಢು
60. ಜಯವಂತ ಮನ್ನೋಳಿ
61. ಗಂಗಾಧರ ಬೇವಿನಕೊಪ್ಪ
62. ಬಿ.ಜಿ. ಮೋಹನದಾಸ್
ಗುಡಿ ಕೈಗಾರಿಕೆ
63. ನವರತ್ನ ಇಂದುಕುಮಾರ
ವಿಮರ್ಶೆ
64. ಕೆ.ವಿ.ಸುಬ್ರಮಣ್ಯಂ

ತುಮಕೂರಿನಲ್ಲಿ ಮಳೆ ಎಷ್ಟು ಆಯ್ತು ಗೊತ್ತಾ?

ಬಯಲುಸೀಮೆ ತುಮಕೂರಿನಲ್ಲಿ ವಾರ್ಷಿಕವಾಗಿ ಬೀಳುತ್ತಿದ್ದ ಮಳೆಗಿಂತಲೂ ಹೆಚ್ಚು ಬಿದ್ದಿದೆ.
ಜಿಲ್ಲೆ ವಾರ್ಷಿಕ ಮಳೆ ಪ್ರಮಾಣ 640 ಮಿ.ಮಿ. ಆದರೆ ಈ ವರ್ಷ ಈಗಾಗಲೇ 740 ಮಿ.ಮಿ. ಮಳೆಯಾಗಿದೆ. ಇನ್ಮೂ ಮಳೆಗಳು ಇರುವ ಕಾರಣ ಮತ್ತಷ್ಟು ನೀರು ಸಿಗಲಿದೆ. ಆದರೆ‌ ಇದು ಕಷ್ಟಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ರೈತರಾದ ಪದ್ಮರಾಜ್

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಹದಿನೈದು ವರ್ಷಗಳ ನಂತರ ಎಲ್ಲಾ ಕಡೆಯು ರಾಗಿ ಹೊಲಗಳು ಚೆನ್ನಾಗಿವೆ. ನಡುವೆ ಬಿತ್ತನೆ ಮಾಡಿರುವ ಅಕ್ಕಡಿ ಸಾಲಿನಲ್ಲಿರುವ ಸಾಸಿವೆ, ಜೋಳ, ಅವರೆ, ಅಲಸಂದೆ, ತೊಗರಿ, ನವಣೆ, ಹುಚ್ಚೇಳು, ಹುರುಳಿ ಬೆಳೆಗಳು ಇಳುವರಿಯ ನೀಡುವಲ್ಲಿ ಪೈಪೋಟಿ ನಡೆದಿದೆ, ಎಲ್ಲಾ ಖುಷಿಯ ನಡುವೆ ಬೆಲೆ ಕುಸಿಯುವ ಅತಂಕ ಕಾಣುತ್ತಿದೆ.

ಸಜ್ಜೆ ಕೊರಳೆ ಹೊಲಗಳು ಸಹ ಉತ್ತಮವಾದ ಇಳುವರಿ ನೀಡುತ್ತವೆ.
ರಾಗಿ ಹೊಲಗಳು 4 ಅಡಿಗೂ ಹೆಚ್ಚು ಬೆಳೆದಿದೆ.
ರಾಗಿ ಪೈರುಗಳಿಗಿಂತಲೂ ಹೆಚ್ಚು ಎತ್ತರವಾಗಿ ಬೇರೆ ಬೆಳೆಗಳು ಬೆಳದಿವೆ. ತೆನೆಗಳು ದಷ್ಟಪುಷ್ಟವಾಗಿ ಕಾಣುತ್ತಿವೆ. ವಾರ್ಷಿಕ ವಾಡಿಕೆ ಮಳೆ 630 ಮಿಮೀ. ಇದುವರೆಗೂ ಬಂದಿರುವ ಮಳೆ 760 ಮಿಮೀ. ಜುಲೈನಲ್ಲಿ ಮಾತ್ರ ಮಳೆ ಕೈಕೊಟ್ಟಿದರಿಂದ ಕುಂಟೆ ಹೊಡೆಯುವುದು, ಕಳೆ ಕೀಳುವುದು ಮಾಡಲು ಅಗಲಿಲ್ಲ. ಪ್ರತಿ ತಿಂಗಳು ವಾಡಿಕೆ ಮಳೆಗಿಂತಲೂ ಹೆಚ್ಚು ಅಗಿದೆ. ಹಿರಿಯ ರೈತರು ತಿಳಿಸಿದಂತೆ ಹದವಾಗಿ ಮಳೆಯಾಗಿದೆ.

ಹೊಲಗಳು ಸಿಕ್ಕಪಟ್ಟೆ ಬೆಳೆದಿರುವುದರಿಂದ ತೆನೆಯ ಭಾರ ಹೆಚ್ಚಾಗಿ ನೆಲಕ್ಕೆ ಬಾಗುವುದು ಪ್ರಾರಂಭವಾಗಿ ರೈತರುಗಳಿಗೆ ಅತಂಕ ತಂದಿದೆ.
ತೆನೆಗಳು ನೆಲಕ್ಕೆ ತಾಗಿದರೆ ಮೊಳಕೆ ಹೊಡೆದು ಬೆಳೆ ಹಾಳುಗುತ್ತದೆ. ಮೇವು ಸಹ ಗೆದ್ದಳು ಹತ್ತಿ ಹಾಳುಗುತ್ತದೆ. ಇದು ಅತ್ಯಂತ ಅಪಾಯ ಸ್ಥಿತಿ.
ಹದಿನೈದು ವರ್ಷಗಳ ನಂತರ ಈ ರೀತಿಯ ಬೆಳೆಗಳನ್ನು ನೋಡುತ್ತಿದ್ದೆವೆ ಎನ್ನುತ್ತಾರೆ.
ಮಳೆ ಎಲ್ಲಾ ಕಡೆಯು ಬೆಳೆಗೆ ಅನುಕೂಲ ವಾದ ರೀತಿ ಅಗಿದೆ. ಬೆಳೆಯ ಇಳುವರಿಯು ಸಹ ಒಂದೇ ಸಮ ಬರುತ್ತದೆ.

ಸದ್ಯದ ಮಟ್ಟಿಗೆ ರೈತನ ಮುಖದಲ್ಲಿ ಹೆಚ್ಚಿನ ಮಂದಹಾಸ ಮೂಡಿಸಿದೆ. ಹೆಚ್ಚಿನ ಇಳುವರಿಯಿಂದ ರಾಗಿ ಬೆಲೆಯು ಕುಸಿಯುವ ಹಂತ ತಲುಪಿದೆ.
ಬೆಲೆ ಕುಸಿತವಾದರೆ ರೈತನ ಸ್ಥಿತಿಯಲ್ಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ.

ಆರ್ ಸಿಇಪಿ ವಿರುದ್ಧ ಮಕ್ಕಳ ಆಕ್ರೋಶ

ಭಾರತ ಕೃಷಿ ಆಧಾರಿತ ದೇಶ, ಇಲ್ಲಿ ರೈತರೇ ದೇಶದ ಬೆನ್ನೆಲುಬು. ಇಂಥ ರೈತರು ಈಗ ಸಂಕಷ್ಟಕ್ಕೆ ಗುರಿಯಾಗಬೇಕಾಗಿ ಬಂದಿದೆ. ಏನಂದ್ರೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ರೈತರ ಬದುಕಿಗೆ ಧಕ್ಕೆಯಾಗುತ್ತದೆ ಎಂದು ಶಿರಾ ತಾಲೂಕಿನ ಹೊಂಬಾಳೆ ಯುವಜಆರ್ ಸಿಇಪಿ ಕೃಷಿ ಸರಕುಗಳನ ಸಂಘ ಆತಂಕ ವ್ಯಕ್ತಪಡಿಸಿದೆ.

ಸಿರಾ ತಾಲೂಕಿನ ಗುಳಿಗೇನಹಳ್ಳಿಯಲ್ಲಿ ಹೊಂಬಾಳೆ ಯುವಜನ ಸಂಘ ಆಯೋಜಿಸಿದ್ದ ಆರ್‌ಸಿಇಪಿ ಬೇಡ ನಿಲ್ಸಿ ಅಭಿಯಾನದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್‌ ಆರ್ ಸಿಇಪಿ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ, ಕೃಷಿ ಮತ್ತ ಹೈನುಗಾರಿಕೆ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದರು.

ಅನನ್ಯ ಯುವಜನ ಸಂಘದ ಅಧ್ಯಕ್ಷ ಕೆಂಪರಾಜು, ಆರ್‌ಸಿಇಪಿ ಒಪ್ಪಂದದಿಂದ ಅನೇಕ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ನೋಡುತ್ತಿವೆ, ವಿದೇಶಿ ನಿಗಮಗಳು ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನಮ್ಮ ಸ್ವಂತ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯಮಾಡಿದಲ್ಲಿ ಸರಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗಾಗಿ ಈ ಒಪ್ಪಂದವು ದೇಶಕ್ಕೆ ಮತ್ತು ರೈತರಿಗೆ ಮುಳುವಾಗಲಿದೆ. ಇದನ್ನು ವಿರೋಧಿಸಬೇಕು ಎಂದು ಹೇಳಿದರು.

ಅಭಿಯಾನದಲ್ಲಿ ಹೊಂಬಾಳೆ ಯುವಜನ ಸಂಘದ ಉಪಾಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೇಘ ರಾಮದಾಸ್‌, ಅನನ್ಯ ಯುವಜನ ಸಂಘದ ಸದಸ್ಯ ಶರೀಫ್‌, ನವಚಿಗುರು ಟೀನೇಜರ್ಸ್‌ ಕ್ಲಬ್‌ ಸದಸ್ಯರು, ನವವಿಕಾಸ ಟೀನೇಜರ್ಸ್‌ ಕ್ಲಬ್‌ ಸದಸ್ಯರು, ಅದರ್ಶ ಯುವತಿ ಮಂಡಳಿಯ ಸದಸ್ಯೆ ಸಹನ, ಮಾತೃಭೂಮಿ ಯುವಜನ ಸಂಘದ ಸದಸ್ಯ ನಾಗರಾಜು, ಭವ್ಯ ಮತ್ತು ಕ್ರಾಂತಿ ಮಕ್ಕಳ ಸಂಘದ ಸದಸ್ಯರು ಭಾಗವಹಿಸಿದ್ದರು.

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಮಾತಿಗೂ ಕೃತಿಗೂ ಸಂಬಂಧವಿರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜಾಗೃತಿ ಅರಿವು ಸಪ್ತಾಹ’ದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಪ್ರಾಮಾಣಿಕತೆ ಹಾಗೂ ಸಮಗ್ರತೆ ಇಲ್ಲದ ಬದುಕು ವ್ಯರ್ಥ. ಸ್ವಚ್ಛ ಪರಿಸರದ ಜತೆಗೆ ಸ್ವಚ್ಛ ಸಮಾಜದ ನಿರ್ಮಾಣವೂ ಆಗಬೇಕೆಂದರೆ ಭ್ರಷ್ಟಾಚಾರ ತೊಲಗಬೇಕು ಎಂದರು.

ಸಮಾಜದಲ್ಲಿ ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ. ಲಂಚ ಕೊಡುವುದು, ಪಡೆಯುವುದು ಎರಡೂ ತಪ್ಪು ಎಂಬ ಅರಿವು ಸಮಾಜದಲ್ಲಿ ಮೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಕೆಲಸವನ್ನು ಅನಗತ್ಯವಾಗಿ ಮುಂದೂಡುವುದೂ ಭ್ರಷ್ಟಾಚಾರದ ಒಂದು ಭಾಗ ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಜೆ. ಸುರೇಶ್, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ ಉಪಸ್ಥಿತರಿದ್ದರು.

ಹಸಿ ಸಗಣಿಗೂ ಕಾಲ ಬಂತು ಅನ್ನಿ

ಇಟ್ಟರೆ ಸಗಣಿಯಾದೆ
ತಟ್ಟಿದರೆ ಬೆರಣಿಯಾದೆ
ನೀನಾರಿಗಾದೆಯೋ ಎಲೆ ಮಾನವಈ ಪದ್ಯವನ್ನು ಎಲ್ಲರೂ ಕೇಳಿರಬಹುದು. ಹಾಡಿರಲುಬಹುದು. ಹಸುವಿನ ಹಾಲು, ಸಗಣಿಯ ಮಹತ್ವ ವಿವರಿಸಿರಲೂಬಹುದು. ಇದು ಸಾಮಾನ್ಯ. ದನ ಸಾಕಿದವರು ನಿತ್ಯವೂ ಸಗಣಿಯನ್ನು ತಿಪ್ಪೆಗೆ ಹಾಕಿ ವರ್ಷಕ್ಕೊಮ್ಮೆ ಮಾರಾಟ ಮಾಡಿಯೂ ಇದ್ದಾರೆ. ಆದರೆ ಹಸಿ ಸಗಣಿ ಮಾರಾಟ ಮಾಡಿದ್ದನ್ನು ಕೇಳಿದ್ದೀರಾ ನೋಡಿದ್ದೀರಾ?!

https://youtu.be/9jvxjVVhUDIಹೌದು, ಈಗ ಕಾಲ ಬದಲಾಗಿದೆ. ದನಗಳು ಸಾಕುವವರು ಅಪರೂಪವಾಗಿದ್ದಾರೆ. ಹೀಗಾಗಿ ದನದ ಸಗಣಿ ಸಿಗುವುದು ಮತ್ತೂ ದುಸ್ತರವಾಗಿದೆ. ನಗರಗಳು ಬೆಳೆದಿವೆ. ವಿಸ್ತಾರ ಪಡೆದುಕೊಳ್ಳುತ್ತಿವೆ. ನಗರೀಕರಣ ಹೆಚ್ಚಿದಂತೆ ಹಳ್ಳಿಗಳಿಂದ ವಲಸೆ ಹೋದವರು ಹಬ್ಬಗಳನ್ನು ಆಚರಿಸುವುದು ನಿಲ್ಲಿಸುತ್ತಾರೆಯೇ? ಖಂಡಿತವಾಗಿಯೂ ಇಲ್ಲ.ಹಬ್ಬಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ದೀಪಾವಳಿ. ಇದು ಹಳ್ಳಿಸೊಗಡಿನ ಹಬ್ಬ. ಕೃಷಿಕರ ಹಬ್ಬ. ಎಲ್ಲಾ ಬೆಳೆಗಳು ಫಸಲಿಗೆ ಬಂದು ನಿಂತಿರುವ ಸಂದರ್ಭ. ಹಾಗಾಗಿ ರಾಗಿತೆನೆ, ಸಜ್ಜೆತೆನೆ, ಗರಿಕೆ, ನವಣೆತೆನೆ, ಅಣ್ಣೆಸೊಪ್ಪು ತೆನೆ – ಹೀಗೆ ಎಲ್ಲಾ ಬೆಳೆಯ ತೆನೆಗಳನ್ನು ಇಟ್ಟು ಪೂಜಿಸಲಾಗುತ್ತದೆ.ದೀಪಾವಳಿಗೆ ದೀಪ ಹಚ್ಚಲು ಸಗಣಿ ಬೇಕೇಬೇಕು. ಪ್ರತಿಯೊಂದು ಉಂಡೆಗಳನ್ನು ಮಾಡಿ ಅದಕ್ಕೆ ಈ ತೆನೆಗಳನ್ನು ಸಿಕ್ಕಿಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಇದು ವಿಶೇಷವಲ್ಲ. ಹಸಿ ಸಗಣಿ ಮಾರುವುದು ವಿಶೇಷ.ದೀಪಾವಳಿಗೆ ದೀಪಹಚ್ಚಲು, ತೆನೆಗಳನ್ನು ಅದಕ್ಕೆ ಸಿಕ್ಕಿಸಲು ನಗರಗಳಲ್ಲಿ ಹಸಿ ಸಗಣಿ ಸಿಗುವುದು ಕಷ್ಟ. ಇದನ್ನೇ ವ್ಯಾಪಾರಸ್ಥರು ಮಾರಾಟದ ವಸ್ತುವನ್ನಾಗಿ ಮಾರಾಟ ಮಾಡುತ್ತಿದ್ದಾರೆ. ತುಮಕೂರು ನಗರದ ಸೋಮೇಶ್ವರ ಮುಖ್ಯರಸ್ತೆಯ ಸುನಿತಾ ಹೋಟೆಲ್ ಬಳಿ ಮಕ್ಕಳು ಹಸಿ ಸಗಣಿ ಇಟ್ಟುಕೊಂಡು ಮಾರುತ್ತಿದ್ದರು.ಒಂದು ಮಿದಿಕೆ ಸಗಣಿ ಬೆಲೆ 10 ರೂಪಾಯಿ. ಅದು ಹಸುವಿನ ಸಗಣಿ. ಹಸುಗಳು ಹಾಕಿದ್ದ ತೊಪ್ಪೆಗಳನ್ನು ತಂದು ಮಾರಾಟಕ್ಕೆ ಇಟ್ಟುಕೊಂಡಿದ್ದಿದು ಕಂಡುಬಂತು. ಎಷ್ಟು ಎಂದು ವಿಚಾರಿಸಿದಾಗ ಒಂದು ಹಿಡಿ 10 ರೂಪಾಯಿ ಎನ್ನುತ್ತಿದ್ದರು. ಹಬ್ಬಕ್ಕೆ ಸಗಣಿ ಬೇಕಲ್ಲ ಎಂದು ಗ್ರಾಹಕರು ಅರ್ಥಾತ್ ಭಕ್ತರು 10 ರೂಪಾಯಿ ಕೊಟ್ಟು ಖರೀದಿಯೂ ಮಾಡಿದರು. ಆ ಮಕ್ಕಳು ಹತ್ತು ರೂಪಾಯಿ ಸಿಕ್ಕಿತ್ತಲ್ಲ ಎಂಬುದಕ್ಕೆ ಅವರ ಮುಖದಲ್ಲಿನ ಮಂದಹಾಸವೇ ಹೇಳುತ್ತಿತ್ತು. ಅಂತೂ ಹಸಿ ಸಗಣಿಗೂ ಕಾಲ ಬಂತು ಅನ್ನಿ.

ಶಿರಾದಲ್ಲಿ ಡಿ.ಕೆ.ಶಿಗೆ ಅದ್ಧೂರಿ ಸ್ವಾಗತ

ತುಮಕೂರು:
ಕಳೆದ 55 ದಿನಗಳ ಹಿಂದೆ ಶಾಸಕ ಡಿ.ಕೆ.ಶಿವಕುಮಾರ್ ಇಡಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ  ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಜೈಲಿನಿಂದ  ಜಾಮೀನು ಪಡೆದು ಹೊರಬಂದಿರುವ ಡಿ.ಕೆ.ಶಿ ಭಾನುವಾರ ಸ್ವಾಮೀಜಿ ಭೇಟಿ ಮಾಡಲು ಬಂದರು..
ಶಿವಕುಮಾರ್‌ ಅವರು 7.50ರ ಹೊತ್ತಿಗೆ ಶಿರಾ ಪಟ್ಟಣಕ್ಕೆ ಬಂದರು. ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಅವರು ಶಿವಕುಮಾರ್‌ ಅವರನ್ನು ಸ್ವಾಗತಿಸಿದರು.
ಸಾವಿರಾರು ಜನ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು
ಶಿರಾ ಶಾಸಕ ಬಿ.ಸತ್ಯನಾರಾಯಣ, ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಶಿವಕುಮಾರ್‌ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ  ಉಬಯಕುಶಲೋಪರಿ ವಿಚಾರಿಸದರು.
ಡಿ.ಕೆ.ಶಿವಕುಮಾರ್‌ ಅವರನ್ನು ಬರಮಾಡಿಕೊಳ್ಳಲು ಅಭಿಮಾನಿಗಳು ನಗರದ ವೃತ್ತದಲ್ಲಿ ಸಂಜೆ 5 ಗಂಟೆಯಿಂದಲೂ ಕಾಯುತ್ತಿದ್ದರು.
ಡಿ.ಕೆ.ಶಿ. ಬಂಧನವಾದಾಗ ಒಕ್ಕಲಿಗ ಸಮುದಾಯ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿ ಬಂಧನದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಡಿ.ಕೆ.ಶಿ ಶೀರಾ ಪಟ್ಟಣಕ್ಕೆ ಬಂದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬಾವುಟಗಳ ಹಾರಾಟ ಜೋರಾಗಿತ್ತು. ೆರಡೂ ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಡಿ.ಕೆ.ಶಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಪಟ್ಟಣದ ತುಂಬಾ ರಾರಾಜಿಸುತ್ತಿದ್ದವು.
ಪಟ್ಟಣದಲ್ಲಿ ಅದ್ದೂರು ಮೆರವಣಿಗೆ ನಡೆದ ನಂತರ ಡಿ.ಕೆ.ಶಿವಕುಮಾರ್ ಹಾಗೂ ಮುಖಂಡರು ಪಟ್ಟಣನಾಯಕನಹಳ್ಳಿ ಗುರುಗುಂಡಬ್ರಹ್ಮೇಶ್ವರ ಮಠಕ್ಕೆ ಭೇಟಿ ನೀಡಿ ನಂಜವಾಧೂತ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕೆಲಕಾಲ ಸ್ವಾಮೀಜಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರು.

ಅಧಿಕಾರಿಗೆ ಬಕೇಟ್ ಹಿಡಿದವರೇ ಪಂಚಾಯಿತಿಯ ಬಾಸು

ತುಳಸೀತನಯ

ತುಮಕೂರು:
ಮೇಲಾಧಿಕಾರಿಗಳಿಗೆ ಹಿಂದೆ ಸುತ್ತಿಕೊಂಡು ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಕೊಂಡು `ಜೀ ಉಝೂರ್..!’ ಎಂದರೆ ಸಾಕು ಕೆಳ ಮಟ್ಟದ ನೌಕರ ಕೂಡ ಅಧಿಕಾರ ಹಿಡಿಯಬಹುದು. ಅದೇ ಅಧಿಕಾರಿಗೆ ಸ್ಪಂದಿಸದಿದ್ದರೆ ಮೇಲ್ಮಟ್ಟದ ಅಧಿಕಾರಿಯೂ ಸಣ್ಣದೊಂದು ಕೆಲಸಕ್ಕೆ ಸೀಮಿತವಾಗವಹುದು. ಇಂತಹದಕ್ಕೊಂದು ತಕ್ಕ ಉದಾಹರಣೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳದ್ದು.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಪಾಕಟಾಕ್ಷದಿಂದ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಕಚೇರಿಯಲ್ಲಿ ಗುಮಾಸ್ತರ ಕೆಲಸ. ಗ್ರಾ.ಪಂ.ಕಾರ್ಯದರ್ಶಿಗಳಿಗೆ ಒಂದಲ್ಲಾ ಅಂತ ಎರಡೆರಡು ಗ್ರಾಮ ಪಂಚಾಯಿತಿಗಳ ಪಿಡಿಓ ಉಸ್ತುವಾರಿ. ಈ ಬಗ್ಗೆ ತಾಲ್ಲೂಕಿನಾದ್ಯಂತ ಈಗ ಬಿಸಿ ಚರ್ಚೆ ನಡೆಯುತ್ತಿದೆ. ತಾಲ್ಲೂ ಪಂಚಾಯಿತಿ . ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್ ಅವರ ವಿರುದ್ಧ ಸಾಕಷ್ಟು ಅಪಸ್ವರಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗನರಸಯ್ಯ ಎಂಬುವರಿಗೆ ಚಿನ್ನಹಳ್ಳಿ ಮತ್ತು ತೋವಿನಕೆರೆ ಗ್ರಾಮ ಪಂಚಾಯಿತಿ ಸೇರಿ ಎರಡು ಕಡೆ ಪಿಡಿಓ ಹುದ್ದೆ ನೀಡಲಾಗಿದೆ. ಊರ್ಡಿಗೆರೆಯಿಂದ ಎರಡು ವರ್ಷದ ಹಿಂದೆ ಚಿನ್ನಹಳ್ಳಿ ಗ್ರಾಮಪಂಚಾಯಿತಿಗೆ ವರ್ಗವಾಗಿ ಬಂದ ಕುಮಾರಸ್ವಾಮಿ ಎಂಬುವರಿಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುಮಾಸ್ತರ ಕೆಲಸ ನೀಡಲಾಗಿದೆ. ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್-1 ಕಾರ್ಯದರ್ಶಿಗೆ ಪ್ರಭಾರ ಪಿಡಿಓ ಹುದ್ದೆ ನೀಡದೇ ಸುಮಾರು 30 ಕಿ.ಮೀ.ಗೂ ಹೆಚ್ಚು ದೂರದಿಂದ ಓಡಾಡುವ ಗ್ರಾಮ ಪಂಚಾಯಿತಿ ಕಾರ್ಯದಶರ್ಿಗೆ ಪಿಡಿಓ ಹುದ್ದೆಗೆ ನೇಮಿಸಲಾಗಿದೆ.
ಮಧುಗಿರಿಯಿಂದ ಕುರಂಕೋಟೆ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ವರ್ಗವಾಗಿ ಬಂದಿರುವ ಲಕ್ಷ್ಮಣ್ ಅವರನ್ನು ಪ್ರಭಾರ ಪಿಡಿಓ ಆಗಿ ನೇಮಿಸಲಾಗಿದೆ. ಆದರೆ ಈ ಸ್ಥಳಕ್ಕೆ ಕುಣಿಗಲ್ ನಿಂದ 90 ದಿನದ ಹಿಂದೆ ವರ್ಗವಾಗಿರುವ ಪಿಡಿಓ ನಾಗರಾಜು ಎಂಬುವರಿಗೆ ಇಲ್ಲಿಯವರೆಗೂ ಅಧಿಕಾರ ಅಸ್ತಾಂತರಿಸಿಲ್ಲ.
ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಹನುಮಂತರಾಜು ತನ್ನ ಮೂಲ ಮಾವತ್ತೂರು ಗ್ರಾಮ ಪಂಚಾಯಿತಿಗೆ ವಾಪಸ್ಸಾಗಲು ಕಳೆದ 6 ತಿಂಗಳ ಹಿಂದೆಯೇ ಸೂಚಿಸಲಾಗಿದೆ. ಆದರೇ ಹಾಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಕದರಯ್ಯ, ಹನುಮಂತರಾಜು ಎಂಬುವರಿಗೆ ಅಧಿಕಾರ ಅಸ್ತಾಂತರಿಸದೆ ದಿನ ಮುಂದೂಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕಳೆದ ಎರಡು ವರ್ಷದ ಹಿಂದೆ ಊರ್ಡಿಗೆರೆಯಿಂದ ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಆಗಿದೆ. ಪಂಚಾಯಿತಿ ಕಾರ್ಯದರ್ಶಿ, ಪಿಡಿಓ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈ ವರೆಗೆ ಅಧಿಕಾರ ಅಸ್ತಾಂತರಿಸಿಲ್ಲ. ತಾ.ಪಂ. ಇಓ ಸೂಚನೆಯಂತೆ ತಾಲ್ಲೂಕು ಪಂಚಾತಿ ಕಚೇರಿಯಲ್ಲೆ ಕೆಲಸ ಮಾಡುತ್ತಿದ್ದೇನೆ ಎಂದು ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಓ ವರ್ಗಾವಣೆಯಾಗಿ ಬಂದಿರುವ ಕುಮಾರಸ್ವಾಮಿ ತಿಳಿಸುತ್ತಾರೆ.
ಪಂಚಾಯಿತಿಗೆ ಬಿಡಿಓ ಆಗಿ ವರ್ಗಾವಣೆಯಾಗಿ ಬಂದು ಮೂರು ತಿಂಗಳಾಗಿದೆ. ಆದರೆ ಅಧಿಕಾರ ಮಾತ್ರ ಸಿಕ್ಕಿಲ್ಲ. ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ ಕೆಲಸ ಮಾಡಿಕೊಂಡು ಪಂಚಾಯಿತಿಗೆ ಓಡಾಡುತ್ತಿದ್ದೇನೆ ಎನ್ನುತ್ತಾರೆ ಕುರಂಕೋಟೆ ಗ್ರಾಮ ಪಂಚಾಯಿತಿಗೆ ವರ್ಗವಾಗಿ ಬಂದಿರುವ ನಾಗರಾಜು.
ಆದರೆ ಈ ಬಗ್ಗೆ ಕೊರಟಗೆರೆ ತಾಲ್ಲೂ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಶಿವಪ್ರಕಾಶ್ ಅವರನ್ನು ಪ್ರಶ್ನಿಸಿದರೆ `ಗ್ರಾಮ ಪಂಚಾಯಿತಿಗಳಿಗೆ ಪ್ರಭಾರ ಪಿಡಿಓ ನೇಮಿಸಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಗಮನಕ್ಕೆ ತರಲಾಗಿದೆ. ಖಾಯಂ ಪಿಡಿಓಗಳಿಗೆ ಅಧಿಕಾರ ಅಸ್ತಾಂತರಿಸುವಂತೆ ಕಾರ್ಯದರ್ಶಿಗಳಿಗೆ ಹೇಳಿದ್ದೇನೆ ಎಂದಷ್ಟೆ ಉತ್ತರ ನೀಡುತ್ತಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಯ ಪೈಕಿ 16 ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಖಾಯಂ ಪಿಡಿಓ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ತೋವಿನಕೆರೆ, ಬೂದಗವಿ, ಕುರಂಕೋಟೆ, ತುಂಬಾಡಿ, ವಡ್ಡಗೆರೆ, ಅರಸಾಪುರ, ಮಾವತ್ತೂರು, ಚಿನ್ನಹಳ್ಳಿ ಸೇರಿ 8 ಗ್ರಾಮ ಪಂಚಾಯಿತಿಗಳಲ್ಲಿ ಬೇರೆ ಪಂಚಾಯಿತಿಯ ಪಿಡಿಓ ಮತ್ತು ಕಾರ್ಯದರ್ಶಿಗಳನ್ನೆ ಪ್ರಭಾರ ಪಿಡಿಓಗಳಾಗಿ ನೇಮಕ ಮಾಡಲಾಗಿದೆ. ಆದರೆ ಖಾಯಂ ಪಿಡಿಓಗಳಾಗಿ ಸ್ಥಳ ನಿಯುಕ್ತಿಗೊಂಡು ಬಂದವರನ್ನು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಕಚೇರಿ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸಿಬ್ಬಂಧಿಕೊರತೆ:
ತಾಲ್ಲೂಕಿನ ಕುರಂಕೋಟೆ, ಬುಕ್ಕಾಪಟ್ಟಣ, ಕ್ಯಾಮೇನಹಳ್ಳಿ, ಹುಲೀಕುಂಟೆ, ಹಂಚಿಹಳ್ಳಿ, ತೀತಾ, ದೊಡ್ಡಸಾಗ್ಗೆರೆ, ಮಾವತ್ತೂರು, ನೀಲಗೊಂಡನಹಳ್ಳಿ, ವಜ್ಜನಕುರಿಕೆ, ಚಿನ್ನಹಳ್ಳಿ, ಕೋಳಾಲ, ಪಾತಗಾನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮತ್ತು ವಡ್ಡಗೆರೆ, ಅರಸಾಪುರ, ಕ್ಯಾಮೇನಹಳ್ಳಿ ಮತ್ತು ಪಾತಗಾನಹಳ್ಳಿ ಪಂಚಾಯಿತಿಗಳ ಕರ ವಸೂಲಿಗಾರರ ಹುದ್ದೆ ಬಹಳ ದಿನಗಳಿಂದ ಖಾಲಿ ಇವೆ.

ಪಾತಗಾನಹಳ್ಳಿ ಗ್ರಾಮ ಪಂಚಾಯಿಗೆ ಸ್ವಂತ ಕಟ್ಟಡ ಇಲ್ಲದೆ ಅಂಗನವಾಡಿ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ.

ಕಾಡುಸಿದ್ದೇಶ್ವರನ ಮೊರೆ ಹೊಕ್ಕ ಡಿ ಕೆ ಶಿ

ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಇಂದು ಪೂಜೆ ಸಲ್ಲಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದ ಶಿವಕುಮಾರ್ ಶನಿವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮೆರವಣಿಗೆಯ ಮೂಲಕ ಅವರನ್ನು ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು.

ಸಂಕಷ್ಟ ಎದುರಾದಾಗ ಮತ್ತು ಸಂಕಷ್ಟು ನಿವಾರಣೆಯಾದಾಗ ಶಿವಕುಮಾರ್ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಹಿಂದೆ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಮೊದಲು ಕಾಡಸಿದ್ದೇಶ್ವರ ಮಠಕ್ಕೆ ಬಂದು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ನಿನ್ನೆ ತಡವಾಗಿದ್ದರಿಂದ ಇಂದು ಭೇಟಿ ನೀಡಿದ್ದೇನೆ. ಅಜ್ಜಯ್ಯನ ಆಶೀರ್ವಾದ ಪಡೆದಿದ್ದೇನೆ. ನಾನು ನ್ಯಾಯದ ಪರವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದರು.

ತುಮಕೂರು ಎಸ್ಪಿ ಕೌರವನಾಗಿ ರಂಗಕ್ಕೆ ಬಂದಾಗ… ಹೀಗಿತ್ತು

2

ಪೊಲೀಸ್ ವರಿಷ್ಠರೊಬ್ಬರು ರಂಗದ ಮೇಲೆ ಅದೂ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಂದರೆ ಮೆಚ್ಚಲೇ ಬೇಕು. ಒಬ್ಬ ಅಧಿಕಾರಿ ಸಾಮಾನ್ಯರನ್ನು ತಲುಪುವುದು ಅಂದರೆ ಹೀಗೇನೆ. ಡಾ.ವಂಶಿಕೃಷ್ಣ ಆಯ್ಕೆ ಮಾಡಿಕೊಂಡಿದ್ದು ದುರ್ಯೋದನ ಪಾತ್ರವನ್ನು ಅದು ಒಂದು ಹಾಡು ಮಾತ್ರ. ಆ ಒಂದು ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಸಾಹಿತ್ಯ, ಸಂಗೀತ ರಂಗಭೂಮಿ –ಹೀಗೆ ಕೆಲವು ಕಲೆಗಳು ಜನರಿಗೆ ಅನಂದ ಉಂಟು ಮಾಡುವ ಶಕ್ತಿ ಇರುತ್ತದೆ. ಅದೇ ರೀತಿ ರಂಗಭೂಮಿಗೂ ಅಂತಹ ಶಕ್ತಿ ಇದೆ. ಬಾಲರಿಂದ ವೃದ್ಧವರೆಗೂ, ಅನಕ್ಷರನಿಂದ ಅಧಿಕಾರಿವರೆಗೂ ಎಲ್ಲರೂ ರಂಗಭೂಮಿ ಕಲೆಗೆ ಸೋಲದವರಿಲ್ಲ. ನಾಟಕ ಪ್ರೇಕ್ಷಕರನ್ನು ತಲ್ಲೀನರನ್ನಾಗಿಸುವಂತೆ ಮಾಡುತ್ತದೆ. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಜನರಿಗೆ ಇನ್ನಿಲ್ಲದ ಆಸಕ್ತಿ.

ಹೌದು, ನಾಟಕ ಎಲ್ಲರನ್ನು ವೇದಿಕೆ ಮೇಲೆ ಕುಣಿಯುವಂತೆ ಮಾಢುವ ವಿಶೇಷ ಶಕ್ತಿ ಇದೆ. ಹಳ್ಳಿಯ ಹೈದನೂ ರಂಗದ ಮೇಲೆ ನಿಂತು ಹಾಡುತ್ತಾನೆ. ಸರ್ಕಾರಿ ನೌಕರರು ನಟಿಸುತ್ತಾರೆ. ಹಾಗೆಯೇ ಪೊಲೀಸರು ಕೂಡ ನಾಟಕದಲ್ಲಿ ನಟಿಸುವುದು ಸಾಮಾನ್ಯ. ಆದರೆ ಒಬ್ಬ ಅಧಿಕಾರಿ ಅದೂ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠರು ನಾಟದಲ್ಲಿ ಅಭಿನಯಿಸುತ್ತಾರೆಂದರೆ ವಿಶೇಷವೇ. ಅಂದಹಾಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟ ಡಾ.ವಂಶಿ ಕೃಷ್ಣ ಅವರು ಇಂದು ರಂಗದ ಮೇಲೆ ಕಾಣಿಸಿಕೊಂಡು ಗಮನ ಸೆಳೆದರು.

ವಂಶಿಕೃಷ್ಣ ಅವರು ಮೂಲತಃ ಆಂಧ್ರದವರು. ತೆಲುಗು ಮತ್ತು ಇಂಗ್ಲೀಷ್ ಚೆನ್ನಾಗಿ ಮಾತನಾಢಬಲ್ಲರು. ಆದರೆ ಕನ್ನಡ ಅಷ್ಟೊಂದು ಸರಾಗವಾಗಿ ಹೇಳಲು ಬರುವುದಿಲ್ಲ. ಅಂತಾಧ್ಧರಲ್ಲೂ ಅವರ ಯಾವುದೇ ಬಿಂಕವನ್ನು ಇಟ್ಟುಕೊಳ್ಳದೆ ರಂಗದ ಮೇಲೆ ದುರ್ಯೋಧನನ ಪೋಷಾಕಿನಲ್ಲಿ ಕಾಣಿಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.

ಕೇವಲ ಜನರ ರಕ್ಷಣೆ ಮಾತ್ರವಲ್ಲ. ದುಷ್ಟರನ್ನು ಮಟ್ಟಹಾಕುವುದಲ್ಲ. ಪ್ರೇಕ್ಷಕರ, ನಾಟಕ ಪ್ರೇಮಿಗಳ ಹೃದಯವನ್ನೂ ಗೆಲ್ಲಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ದುರ್ಯೋಧನನ ಗತ್ತು, ಅವರಲ್ಲಿತ್ತು. ಮೊದಲೇ ಪೊಲೀಸ್ ಕಟ್ಟುಮಸ್ತಾದ ದೇಹ. ದುರ್ಯೋಧನನ ಪಾತ್ರಕ್ಕೆ ಮಾಡಿ ಹೇಳಿಸಿದಂತೆ ಇತ್ತು. ಅಂತೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ರಂಗದ ಮೇಲಿದ್ದ ಕೆಲವೇ ಕ್ಷಣವಾದರೂ ಪ್ರೇಕ್ಷಕರ ಹೃದಯದಲ್ಲಿ ನೆಲೆಸಿದರು ಎಂದೇ ಹೇಳಬೇಕು.

ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಬ್ಬವಾಗಿದ್ದು ಹೇಗೆ?

0

ಲೇಖಕರು

ಕೆ.ಜೆ.ಹರ್ಷಿತ

ನಾಡಿನ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ವ್ಯಾಪಾರಿಗಳು, ಉದ್ಯಮಿಗಳಿಗೆ ಹೊಸ ಲೆಕ್ಕದ ಪುಸ್ತಕ ಆರಂಭವಾಗುವ ದಿನ. ರೈತರ ಪಾಲಿನ ಕೊಯ್ಲು, ಜಾನುವಾರು ಹಬ್ಬ.

ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಹಿಂದೆ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆಗಳನ್ನು ಹಚ್ಚಿ ಮನೆ, ದೇಗುಲಗಳನ್ನು ದೀಪಗಳಿಂದ ಅಲಂಕರಿಸಿ, ಬಾಳೆಕಂದು, ಮಾವಿನ ತೋರಣ ಕಟ್ಟಿ ಮನೆಮಂದಿಯೆಲ್ಲ ಉತ್ಸಾಹದಿಂದ ಆಚರಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಅಲಂಕರಿಸಿ ಬೆಂಕಿಯ ಸುತ್ತಲೂ ಸುತ್ತಿಸಿ ಈಡಿನ ಹಬ್ಬವಾಗಿ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ದೀಪಗಳು ಕಡಿಮೆಯಾಗಿ ತರಹೇವಾರಿ ಪಟಾಕಿಗಳು ದೀಪಾವಳಿ ಹಬ್ಬವನ್ನು ತೆಕ್ಕೆಗೆ ತೆಗೆದುಕೊಂಡಿವೆ.

ಬಲಿ ರಾಜನ ಕಥೆ

ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ  ವಾಮನ ರೂಪದಲ್ಲಿದ್ದ ವಿಷ್ಣು ಬಲಿರಾಜನ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ.

ಹೀಗಾಗಿ ಮನೆಗಳಲ್ಲಿ ಬಲಿ ಪಾಡ್ಯಮಿಯಂದು  [2019, ಅಕ್ಟೋಬರ್ 29 ಮಂಗಳವಾರ]  ಹಸುವಿನ ಸಗಣಿಯಿಂದ ಬಲಿ ಕೋಟೆ ಹಾಕಿ ಅದನ್ನು ಜೋಳದ ತೆನೆ, ರಾಗಿ ತೆನೆ, ಸಜ್ಜೆ ತೆನೆ, ಉಚ್ಚೆಳ್ಳು ಹೂವು, ಕುಂಬಳ ಹೂವು ಇತ್ಯಾದಿಗಳಿಂದ ಅಲಂಕರಿಸಿ ಕೋಟೆಯ ಸುತ್ತಲೂ ದೀಪಗಳನ್ನಿಟ್ಟು ಕೋಟೆಯ ಮಧ್ಯಭಾಗಕ್ಕೆ ಹಾಲು ಎರೆದು ಪೂಜಿಸುವ ಪದ್ದತಿ ಇದೆ.