Saturday, March 14, 2026
Google search engine
Home Blog Page 75

ಡಿಪ್ಲೊಮಾ ಕೋರ್ಸ್‌ಗೆ ಸೇರಬೇಕಾ?

ತುಮಕೂರು: 2022-23ನೇ ಸಾಲಿನ ಸರ್ಕಾರಿ ಪಾಲಿಟೆಕ್ನಿಕ್ ತುಮಕೂರು ಸಂಸ್ಥೆಯಲ್ಲಿ  ಡಿಪ್ಲೊಮಾ ಪ್ರವೇಶಾತಿಗೆ (ಲ್ಯಾಟರಲ್ ಎಂಟ್ರಿ ಯೋಜನೆಯಡಿ) ಅರ್ಜಿ ಆಹ್ವಾನಿಸಲಾಗಿದೆ.

ಎರಡನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೊಮಾ ಕೋರ್ಸುಗಳ ಪ್ರವೇಶಾತಿಗೆ 2 ವರ್ಷಗಳ ಐಟಿಐ/ದ್ವಿತೀಯ ಪಿಯುಸಿ (ವಿಜ್ಞಾನ/ತಾಂತ್ರಿಕ) ವಿಷಯಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಆಗಸ್ಟ್ 22, 2022ರಿಂದ ಆಗಸ್ಟ್ 30 ವರೆಗೆ ಸಂಜೆ 5.30ರೊಳಗೆ ಸರ್ಕಾರಿ ಪಾಲಿಟೆಕ್ನಿಕ್ ತುಮಕೂರು ಇಲ್ಲಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.  0816-2278441ನ್ನು ಸಂಪರ್ಕಿಬಹುದೆAದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಬ್ಇನ್ಸ್ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Publicstory/prajayoga

ತುಮಕೂರು: ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಸಬ್ ಇನ್ಸ್ಪೆಕ್ಟರ್ ಮತ್ತು ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯಿಂಗ್ ಮತ್ತು ಕಾಂಟ್ರ‍್ಯಾಕ್ಟ್) ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ವೆಬ್‌ಸೈಟ್ https://ssc.nic.in.ssckkr.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಏನು?

ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಎನ್ಸಿಸಿ ಪ್ರಮಾಣಪತ್ರ ಹೊಂದಿರುವವರಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು. ಜನವರಿ 1, 2022ಕ್ಕೆ ಅನ್ವಯವಾಗುವಂತೆ 20 ರಿಂದ 25 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಕೆಗೆ ಆಗಸ್ಟ್ 30 ಕೊನೆಯ ದಿನವಾಗಿದೆ.

ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಪದವಿ ಅಥವಾ ಡಿಪ್ಲೊಮಾ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್)  ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣ ಹಾಗೂ ಅನುಭವ ಹೊಂದಿರಬೇಕು. ಜನವರಿ 1, 2022ಕ್ಕೆ ಅನ್ವಯವಾಗುವಂತೆ 30 ವರ್ಷದೊಳಗಿನವರಾಗಿರಬೇಕು. ಸೆಪ್ಟೆಂಬರ್ 2 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ: 080-2550250, 9843862020  ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಂಸ ತಿನ್ನುವವರ ಓಟು ಬೇಡವೆನ್ನಲಿ : ಬೈರತಿ ಸುರೇಶ್

Publicstory/prajayoga

ಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನವರು ಆಗಲಿ ಅಥವಾ ಇನ್ಯಾರೆ ಆಗಿರಲಿ ಏನನ್ನು ತಿನ್ನಬೇಕು.? ಏನನ್ನು ತಿನ್ನಬಾರದು ಎಂದು ಅವರು ನಿರ್ಧರಿಸಬೇಕೆ? ನಮ್ಮ ಆಹಾರ, ನಮ್ಮ ಹಕ್ಕು. ಇದನ್ನು ಕೇಳಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರ್ಯಾರು.? ಊಟ ತನ್ನಿಚ್ಛೆ., ನೋಟ ಪರರಿಚ್ಛೆ ಅಲ್ಲವೇ.? ಎಂದು ಹೆಬ್ಬಾಳ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ನವರು ಮಾಂಸ ತಿಂದು ದೇವಾಲಯಕ್ಕೆ ಹೋದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ. ಶಿವ ಕಣ್ಣಪ್ಪನಿಗೆ ಒಲಿಯಲಿಲ್ಲವೆ.? ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ-ಶುದ್ಧಿ, ಇದೇ ಬಹಿರಂಗ-ಶುದ್ಧಿ,ಇದೇ ಕೂಡಲಸಂಗಮನೊಲಿಸುವ ಪರಿ! ಎಂದಿದ್ದಾರೆ ಬಸವಣ್ಣ. ಭಕ್ತಿ ಶುದ್ಧವಾಗಿರಬೇಕು.

ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಸಕಲೇಶಪುರದಲ್ಲಿ‌‌ ಮದುವೆಯ ದಿನವೇ ಮಾಂಸಹಾರ ಮಾಡುತ್ತಾರೆ. ಅದು ಅವರ ಆಹಾರ ಪದ್ದತಿ. ಇನ್ನು ಮಲೆನಾಡಿನ ಕೆಲವು ಕಡೆ ಎಲ್ಲಾ ಹಬ್ಬಗಳಿಗೂ ಮಾಂಸಹಾರ ಮಾಡುತ್ತಾರೆ. ಸಿ.ಟಿ.ರವಿ ಮತ್ತು ಪ್ರತಾಪ ಸಿಂಹ ಮಲೆನಾಡಿನವರು. ಗಣೇಶನ ಹಬ್ಬದ ದಿವಸ ಅವರ ಭಾಗದಲ್ಲಿ ಮಾಂಸಹಾರ ಮಾಡುವುದನ್ನು ಅವರು ನಿರಾಕರಿಸುತ್ತಾರೆಯೇ.?

ಸಿದ್ದರಾಮಯ್ಯರನ್ನು ಕಂಡರೆ ಬಿಜೆಪಿಗೆ ನವರಂಧ್ರಗಳಲ್ಲೂ ನಡುಕ ಶುರುವಾಗಿದೆ. ಹಾಗಾಗಿ ಅವರು ಏನು ತಿನ್ನುತ್ತಾರೆ, ಏನು ಉಡುತ್ತಾರೆ ಎಂದು ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ. ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು‌ ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು ಅವರು ಹೇಳಲಿ. ಹೀಗೆ ಹೇಳುವ ತಾಕತ್ತಿದೆಯೇ.? ಎಂದು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

Publicstory/prajayoga

ಗುಬ್ಬಿ: ಪಟ್ಟಣದ ಐತಿಹಾಸಿಕ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಛಲವಾದಿ ಕಾಯಕ ನಡೆಸುತ್ತಿದ್ದ ಕೆಂಚ ಮಾರಯ್ಯ ಅವರ ನಿವೃತ್ತಿ ಹಿನ್ನಲೆ ಜಿ.ಡಿ.ಯೋಗೀಶ್ ಅವರನ್ನು ನೇಮಕ ಮಾಡಿ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.

ಈ ವೇಳೆ ಜಿ.ಡಿ.ಯೋಗೀಶ್ ಮಾತನಾಡಿ, ದೇವಾಲಯದ ಗಂಧ ಬಟ್ಟಲು ಹೊತ್ತು ಧಾರ್ಮಿಕ ಸೇವೆ ನಡೆಸುವ ಶ್ರೇಷ್ಠ ಕಾಯಕವನ್ನು ಅಚ್ಚುಕಟ್ಟಾಗಿ ನಡೆಸಿ ಹದಿನೆಂಟು ಕೋಮಿನ ಭಕ್ತರು ಹಾಗೂ ದೇವಾಲಯದ ವಿಧಿ ವಿಧಾನಗಳಂತೆ ನಡೆದುಕೊಳ್ಳುವುದಾಗಿ ದೀಕ್ಷೆ ಪಡೆದು ಮಾತನಾಡಿದರು.

ಈ ಸಂದರ್ಭದಲ್ಲಿ ದೀಕ್ಷಾ ಕಾರ್ಯವನ್ನು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ, ಪಪಂ ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ಪ್ರಕಾಶ್, ಮುಖಂಡರಾದ ಕುಮಾರಯ್ಯ, ಸೋಮಶೇಖರಪ್ಪ, ವಿಜಯಕುಮಾರ್, ಅರ್ಚಕರಾದ ರಾಜು, ರುದ್ರೇಶ್, ನಾರಾಯಣ್ ಇತರರು ನಡೆಸಿಕೊಟ್ಟರು.

ವಿಕಲಚೇತನ ಅಭ್ಯರ್ಥಿಗಳಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

Publicstory/prajayoga

ತುಮಕೂರು: ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ  ವಿವಿಧ ೮ ಯೋಜನೆಗಳಿಗೆ ಸುವಿಧ ತಂತ್ರಾಂಶದಡಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ್ ಯೋಜನೆ, ಪುನರ್ವಸತಿ ಕಾರ್ಯಕರ್ತರ ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ ಹಾಗೂ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹ ಅಭ್ಯರ್ಥಿಗಳು URL:https://suvidha.karnataka.gov ಜಾಲತಾಣದ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಹಾಗೂ ಅರ್ಜಿ ಸಲ್ಲಿಸಿರುವ ಸ್ವೀಕೃತಿಯೊಂದಿಗೆ ಹಾರ್ಡ್ ಪ್ರತಿಯನ್ನು ದ್ವಿಪ್ರತಿಯಲ್ಲಿ ಆಯಾ ತಾಲ್ಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶಿ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲ್ಯೂ) ರವರಿಗೆ ಸೆಪ್ಟೆಂಬರ್ 20 ರೊಳಗಾಗಿ ಸಲ್ಲಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಬರೆದಂತೆ ಓದಬಹುದಾದ  ವೈಶಿಷ್ಟ್ಯ ಭಾಷೆ:  ಚಕ್ರವರ್ತಿ ಸೂಲಿಬೆಲೆ

ತುರುವೇಕೆರೆ :ಕನ್ನಡವೆಂಬುದು ವ್ಶೆಜ್ಞಾನಿಕವಾದ ಭಾಷೆ. ಬರೆದಂತೆ ಓದಬಹುದಾದ ವೈಶಿಷ್ಟ್ಯತೆ ಇರುವ ಭಾಷೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ  ತಿಳಿಸಿದರು.

ಪಟ್ಟಣದ ಸತ್ಯಗಣಪತಿ ಆಸ್ಥಾನನ ಮಂಟಪದಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಟಾನ ಹಾಗೂ ತುರುವೇಕೆರೆ ತೇರು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ  ಸ್ವರಾಜ್ಯಕ್ಕೆ  ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿ  ಮಾತನಾಡಿದರು.

ಲಂಕೆಯಿಂದ ಸೀತೆಯನ್ನು ಕರೆತರುವ ಸಾಹಸ ಮಾಡಿದ ಆಂಜನೇಯ ಕರ್ನಾಟಕದಲ್ಲಿ ಹುಟ್ಟಿದವರು, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕೀರ್ತಿ ಮೈಸೂರು ಅರಸರಿಗೆ ಸಲ್ಲುತ್ತದೆ. ಶಾಲಿವಾಹನ ಶಖ ಪುರುಷ ಹುಟ್ಟಿದ್ದು ತುರುವೇಕೆರೆ ತಾಲೂಕಿನ ತಂಡಗದಲ್ಲಿ ಎಂಬ ವಿಚಾರ ಪ್ರತಿ ಕನ್ನಡಿಗನು ಹೆಮ್ಮೆ ಪಡುವಂಥದ್ದು. ಶಾಲಿವಾಹನ ಹುಟ್ಟಿದ ನಾಡಿನಲ್ಲಿ ಕನ್ನಡ ತೇರಿನ ಸಂಚಾರಕ್ಕೆ ಚಾಲನೆ ದೊರತಿರುವುದು ಸಂತಸದ ವಿಚಾರ ಎಂದರು.

ಬದರಿಕಾಶ್ರಮ  ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಬೋದಾಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಮಾತೃ ಬಾಷೆಯ ಪ್ರೇಮ ಕಡಿಮೆಯಾಗುತ್ತಿದೆ. ಇಂಗ್ಲೀಷ್ ಬಾಷೆ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾತೃ ಬಾಷೆಯಲ್ಲಿ ನಮ್ಮ ಸಂಸ್ಕೃತಿ ಅಡಕಗೊಂಡಿದೆ ಎಂಬುದು ನಾಡಿನೆಲ್ಲರ ಅರಿವಿಗೆ ಬರುವಂತಾಗಲಿ ಎಂದರು.

ಈ ವೇಳೆ ಶಾಸಕ ಮಸಾಲಜಯರಾಮ್, ಯುವ ಬ್ರೀಗೇಡ್ ಸಂಚಾಲಕ ಧರ್ಮಣ್ಣ, ತುರುವೇಕೆರೆ ತೇರು ಸಮಿತಿಯ  ಪ್ರೋ. ಗಂಗಾಧರದೇವರಮನೆ, ತಾಲೂಕು ಯುವ ಬ್ರೀಗೇಡ್ ಅಶ್ವಿನ್, ಸಹ ಸಂಚಾಲಕ ಸುರೇಶ್ ಆಚಾರ್ಯ ಇದ್ದರು.

ಚುಂಚಾದ್ರಿ ರೈತಸಂತೆ ಉದ್ಘಾಟನೆಗೆ ಕೇಂದ್ರಸಚಿವೆ ಶೋಭಾಕರಂದ್ಲಾಜೆ

Publicstory/prajayoga

ತುರುವೇಕೆರೆ: ಆಗಸ್ಟ್ 25 ರಂದು  ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ನಲ್ಲಿ  ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಟಾನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಚುಂಚಾದ್ರಿ ರೈತ ಸಂತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಮಂತ್ರಿಗಳು ಆಗಮಿಸಲಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

ಚುಂಚಾದ್ರಿ ರೈತ ಸಂತೆ  ಉದ್ಘಾಟನೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾಕರದ್ಲಾಂಜೆ ಹಾಗೂ ರಾಜ್ಯದ ಮಂತ್ರಿಗಳು ಆಗಮಿಸುತ್ತಿರುವ  ಹಿನ್ನಲೆಯಲ್ಲಿ  ಕಾರ್ಯಕರ್ತರ ಪೂರ್ವಭಾವಿಯನ್ನುದ್ದೇಶಿಸಿ ಮಾತನಾಡಿದ ಅವರು,  ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ದರ ಲಭಿಸಬೇಕು  ಹಾಗೂ  ಮಧ್ಯವರ್ತಿ ಮುಕ್ತ ವ್ಯವಸ್ಥೆಯನ್ನು ಜಾರಿಯಾಗಬೇಕೆಂಬ ನಿಟ್ಟಿನಲ್ಲಿ  ಆಗಸ್ಟ್ 25 ರಂದು ಆದಿಚುಂಚನಗಿರಿ ಮಠವು  ಚುಂಚಾದ್ರಿ ರೈತ ಸಂತೆಯನ್ನು ಆರಂಭಿಸಲುದ್ದೇಶಿದೆ. ಅದೇ ದಿನ ಟಿ.ಬಿ. ಕ್ರಾಸ್‌ನಲ್ಲಿ ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಪುನರ್ ಪ್ರತಿಷ್ಠಾಪನೆ ಹಾಗೂ  ಆದಿಚುಂಚನಗಿರಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಗಡಿಭಾಗದಲ್ಲಿರುವ ಜೋಡಗಟ್ಟೆಯಿಂದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಹಾಗೂ ಮಂತ್ರಿ ಮಹೋದಯರನ್ನು  ತಾಲೂಕಿನ ಯುವಕರು ಬೈಕ್ ರ‍್ಯಾಲಿ ಮೂಲಕ ಸ್ವಾಗತಿಸಲಿದ್ದಾರೆ. ಟಿ.ಬಿ.ಕ್ರಾಸ್‌ನಲ್ಲಿ ಪ್ರತಿಷ್ಟಾಪಿಸಲಾಗಿರುವ ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಪುನರ್ ಪ್ರತಿಷ್ಟಾಪನೆಯನ್ನು  ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನೆರವೇರಿಸಲಿದ್ದಾರೆ, ಆನಂತರ ಚುಂಚಾದ್ರಿ ರೈತ ಸಂತೆಗೆ ಚಾಲನೆ ಹಾಗೂ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವೇಳೆ ರಾಜ್ಯದ ಮಂತ್ರಿಗಳಾದ ಗೋಪಾಲಯ್ಯ, ಮುನಿರತ್ನ, ಸೋಮಶೇಖರ್ ರವರು ಹಾಗೂ  ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರುಗಳು, ರೈತಾಪಿಗಳು, ಶ್ರೀ ಮಠದ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ತಾಲೂಕು ಬಿ.ಜೆ.ಪಿ.ಘಟಕದ ಅಧ್ಯಕ್ಷ ಮೃತ್ಯುಂಜಯ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ, ವಿ.ಬಿ.ಸುರೇಶ್, ಅರಳೀಕೆರೆಶಿವಯ್ಯ,ವಿಪುಲ್ ಜೈನ್,ಕಾಳಂಜೀಹಳ್ಳಿಸೋಮಶೇಖರ್ ಮತ್ತಿತರಿದ್ದರು.

ಜನಪದ ಸಾಹಿತ್ಯವು ಸಂಬಂಧ ಗಟ್ಟಿಗೊಳಿಸುತ್ತದೆ : ಪ್ರೊ ಎನ್.ಆರ್ ಚಂದ್ರೇಗೌಡ

Publicstory/prajayoga

ತುಮಕೂರು: ಮನುಷ್ಯರ ನಡುವಿನ ಸಂಬಂಧವನ್ನು ಜಾನಪದ ಸಾಹಿತ್ಯ ಗಟ್ಟಿಗೊಳಿಸುತ್ತದೆ. ಆದರೆ, ಜನಪದ ಮೌಖಿಕ ಸಾಹಿತ್ಯ ಮತ್ತು ಪ್ರದರ್ಶನ ಕಲೆಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ಮೈಸೂರು ಕ.ರಾ.ಮು.ವಿ.ವಿಯ ಪ್ರೊ.ಎನ್. ಆರ್ ಚಂದ್ರೇಗೌಡ ಅಭಿಪ್ರಾಯಪಟ್ಟರು.

Sponsored

ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ  ಕುಮಾರವ್ಯಾಸ ಅಧ್ಯಯನ ಪೀಠದ ವತಿಯಿಂದ ನಡೆದ ಜನಪದ ಯಕ್ಷಗಾನದಲ್ಲಿ ರತಿ ಕಲ್ಯಾಣ ಚಿತ್ರಣದ ಕುರಿತು ವಿಚಾರ ಸಂಕಿರಣ  ಹಾಗೂ ಯಕ್ಷದೀವಿಗೆಯಿಂದ ಹಟ್ಟಿಯಂಗಡಿ ನಾರಾಯಣ ರಚಿತ ರತಿ ಕಲ್ಯಾಣ ಯಕ್ಷಗಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಸಾಹಿತ್ಯದ ತಿರುಳು, ಅರ್ಥ, ಭಾವ, ಮೌಲ್ಯ ಎಂದೂ ನಾಶವಾಗುವುದಿಲ್ಲ ಮತ್ತು ಯಾವಾಗಲೂ ಪ್ರಸ್ತುತವಾದವು. ಜನಪದ ಸಾಹಿತ್ಯದ ಪ್ರಕಾರ, ಗೀತೆ, ಲಾವಣಿ ಹಾಗೂ ಒಗಟುಗಳು  ಮಹಾಕಾವ್ಯದ ಸ್ವರೂಪಗಳಾಗಿವೆ. ಜನಪದ ಸಾಹಿತ್ಯಕ್ಕೆ ಗ್ರಂಥರೂಪ ನೀಡಿದವರು ಪಾಶ್ಚತ್ಯ ವಿದ್ವಾಂಸರು ಎಂದರು.

ತುಮಕೂರು ವಿವಿ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಕುಮಾರವ್ಯಾಸನ  ಕಾವ್ಯವು ಚಂದ. ಯಕ್ಷಗಾನದಲ್ಲಿ ನೃತ್ಯ ಮತ್ತು ವೇಷಭೂಷಣ, ಹಾಡುಗಾರಿಕೆಯೂ ಒಂದು ಕಲೆ. ಭರತ ಮುನಿಯ ನಾಟ್ಯಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ಯಕ್ಷಗಾನ, ಬಯಲಾಟದ ಇನ್ನೊಂದು ರೂಪವೇ ತಾಳಮದ್ದಳೆ. ಇಲ್ಲಿ ನಾವು ಹಲವು ರೂಪಗಳನ್ನು ಕಾಣಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ.ಎಂ.ಗಂಗಾಧರಯ್ಯ, ಸಿಂಡಿಕೇಟ್  ಸದಸ್ಯೆ ಭಾಗ್ಯಲಕ್ಷೀ ಹಿರೇಂದ್ರ ಷಾ, ಡಾ.ಡಿವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಹನುಮಾನಾಯ್ಕ ಹಾಗು ಹೇಮಲತ ಹಾಜರಿದ್ದರು.

ಉತ್ಸವಗಳು ಸಂಬಂಧ ಗಟ್ಟಿಗೊಳಿಸುತ್ತವೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಶಿರಾ: ಧಾರ್ಮಿಕ ನಂಬಿಕೆ ಮತ್ತು ಆಚಾರ ವಿಚಾರಗಳು ಭಕ್ತಿಯ ಮೆರಗು ಹೆಚ್ಚಿಸುತ್ತವೆ. ಇಂತಹ ಉತ್ಸವಗಳು ಗ್ರಾಮಗಳಲ್ಲಿ ಜನರ ಸ್ನೇಹ ಸಂಬಂಧ ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ತಡಕಲೂರು ದಿಬ್ಬದ ಹಟ್ಟಿ ಗೊಲ್ಲರಹಟ್ಟಿಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀ ಕೃಷ್ಣ ಉತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಗವಾನ್ ಶ್ರೀ ಕೃಷ್ಣ, ನಾರಾಯಣನ 8ನೇ ಅವತಾರವಾಗಿ ಜನಿಸಿ ಜಗತ್ತಿನ ರಕ್ಷಕನಾಗಿ ಮನುಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಸನ್ಮಾರ್ಗದ ರೀತಿಯನ್ನು ಈ ಜಗತ್ತಿಗೆ ಭಗವದ್ಗೀತೆ ಮೂಲಕ ತಿಳಿಸಿದ್ದಾರೆ ಎಂದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರಕಾಶ್ ಗೌಡ್ರು,ಗ್ರಾಮ ಪಂಚಾಯಿತಿ ಸದಸ್ಯ ರವಿ, ಶಿವಣ್ಣ, ಬಸವರಾಜಣ್ಣ,ಶಿವಕುಮಾರ್,ಹಾಡ್ವೇðರ್ ಮಂಜುನಾಥ್, ರಾಜು ಹಾಗೂ ಅನೇಕ ಮುಖಂಡರು ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು.

ರಸ್ತೆ ಕಾಮಗಾರಿಗೆ ಭೂಮಿ ಪೂಜೆ: ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಶಿರಾ: ತಾಲ್ಲೂಕಿನ ಎಲ್ಲಾ ವರ್ಗದವರಿಗೂ ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಬಸವ ಇಂದಿರಾ ವಸತಿ ಯೋಜನೆಯಡಿ ಒಂದು ಸಾವಿರ ಮನೆಗಳನ್ನು ಶಿರಾ ಕ್ಷೇತ್ರಕ್ಕೆ ಮಂಜೂರು ಮಾಡಬೇಕೆಂದು ಸರಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಮನೆಗಳು ಮಂಜೂರಾಗಲಿವೆ ಎಂದು ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ ಹೇಳಿದರು.

ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ 60 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಜನರ ಬಹು ನಿರೀಕ್ಷಿತ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಬೇಕೆಂಬ ನಮ್ಮ ಸರಕಾರದ ಭರವಸೆ ಈಡೇರಿಸಿದ್ದು, ಮುಂದಿನ ಗುರಿ ಅಪ್ಪರ ಭದ್ರ ಮತ್ತು ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸುವ ಮೂಲಕ ೨೦೨೩ರ ಅಂತ್ಯಕ್ಕೆ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.

ಈ ವೇಳೆ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ಮಲ್ಲಿಕಾರ್ಜುನ್, ಮಾಜಿ ಗ್ರಾಮ ಅಧ್ಯಕ್ಷ ಗಂಗಾಧರ್, ಬಿಜೆಪಿ ಮುಖಂಡ ಜಗದೀಶ್, ಯಾದ ಲಡಕು ತಿಪ್ಪೇಸ್ವಾಮಿ, ಅಭಿಯಂತರ ನಾಗೇಂದ್ರಪ್ಪ ,ಪಿಡಿಒ ತಿಪ್ಪೇಸ್ವಾಮಿ ,ದೊಡ್ಡಿರಪ್ಪ, ಕಾಂತರಾಜು, ದೊಡ್ಮನೆ ತಿಪ್ಪೇಸ್ವಾಮಿ, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಈರಣ್ಣ, ನಾಗರಾಜು, ಶ್ರೀಧರ್, ಉಮೇಶ್, ರಂಗನಾಥ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.