ತುಮಕೂರು: ಜಿಲ್ಲೆಯ ಯುವಕರು ಮತ್ತು ವಿದ್ಯಾರ್ಥಿಗಳಿಗಾಗಿ ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ, ಸ್ವಾತಂತ್ರ್ಯ ಸಂಗ್ರಾಮದಂತಹ ಅನೇಕ ಮಜಲುಗಳನ್ನು ತಿಳಿಸುವ ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದ ಮಾರಾಟ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಬಾಪೂಜಿ ರವೀಂದ್ರ ಕಲಾನಿಕೇತನದಲ್ಲಿ ಆಗಸ್ಟ್ 15ರಿಂದ ಆಗಸ್ಟ್ 20ರವರೆಗೆ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಕುರಿತ ಪುಸ್ತಕಗಳ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಮೇಲು, ಕೀಳೆಂಬ ತಾರತಮ್ಯ ನಿವಾರಣೆಗೆ ಶ್ರಮಿಸಿ, ಕರಿಯರು ಬಿಳಿಯರಿಗೆ ಸನ್ಮಾರ್ಗ ಕಲ್ಪಿಸಿ, ಮಾನವೀಯ ಮೌಲ್ಯ ಎತ್ತಿ ಹಿಡಿದವರು ಮಹಾತ್ಮ ಗಾಂಧೀಜಿ. ಹಾಗಾಗಿ ಇವರ ಚರಿತ್ರೆಯನ್ನು ಪ್ರತಿಯೊಬ್ಬ ಯುವಕರು ಮತ್ತು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಈ ವೇಳೆ ಬಾಪೂಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಬಸವಯ್ಯ, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಕುಂಚಿಟಿಗ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಲಿಂಗಪ್ಪ, ಮುಖಂಡರಾದ ಸಂಜೀವ್‌ಕುಮಾರ್, ನಟರಾಜಶೆಟ್ಟಿ, ಪ್ರಕಾಶ್, ಆದಿಲ್‌ಖಾನ್, ಉಮಾಶಂಕರ್, ದಿಲೀಪ್ ಮುಂತಾದವರು ಭಾಗವಹಿಸಿದ್ದರು.
ತುಮಕೂರು: ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮ ಜಯಂತಿಯಲ್ಲಿ ಭಾಗವಹಿಸಿದ್ದ 10 ಲಕ್ಷ ಕ್ಕೂ ಹೆಚ್ಚು ಜನರನ್ನು ನೋಡಿರುವ ಬಿಜೆಪಿಗೆ ನಿದ್ದೆ ಬರುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಆಣತಿಯಂತೆ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಲಾಗುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಜರಂಗದಳ ಹಾಗು ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಅಪಮಾನಿಸಿರುವುದನ್ನು ಖಂಡಿಸಿ ಇಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ನಗರದ ಟೌನ್ಹಾಲ್ ವೃತ್ತದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಿರೋಧ ಪಕ್ಷದ ನಾಯಕ ಎಂಬುದು ಒಂದು ಸಾಂಮಿಧಾನಿಕ ಹುದ್ದೆ. ಇದರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದು ತರವಲ್ಲ. ಸಾರ್ವಕರ್ ಬಗ್ಗೆಯ ಸಿದ್ದರಾಮಯ್ಯ ಹೇಳಿಕೆ ಅರಗಿಸಿಕೊಳ್ಳಲು ಆಗದಿದ್ದರೆ ಸಾರ್ವಜನಿಕ ಚರ್ಚೆಗೆ ಬನ್ನಿ ಎಂದು ಬಿಜೆಪಿಯವರಿಗೆ ಬಹಿರಂಗ ಸವಾಲು ಹಾಕಿದರು.
ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಮಳೆ ಹಾನಿಯ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಬಜರಂಗದಳ, ಬಿಜೆಪಿ ಕಾರ್ಯಕರ್ತರು ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವುದು ಖಂಡನೀಯ. ಇದು ಸರ್ಕಾರ ಭದ್ರತಾ ಲೋಪ ಎಸಗಿರುವುದಕ್ಕೆ ಸ್ಪಷ್ಟವಾದ ಉದಾಹರಣೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಓಡಾಡುವಾಗ ಮೊಟ್ಟೆ ಎಸೆಯಲು ಬರುತ್ತದೆ. ಆದರೆ ಆ ರೀತಿಯ ಕೆಟ್ಟ ಕೆಲಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಕೈ ಹಾಕುವುದಿಲ್ಲ ಎಂದರು.
ಮೊಟ್ಟೆಯ ಬದಲು, ಕಲ್ಲು ಅಥವಾ ಬಾಂಬ್ ಎಸೆದಿದ್ದರೆ ಏನು ಗತಿ? ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಈ ವೇಳೆ ಒತ್ತಾಯಿಸಿದರು.
2008ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಐದು ವರ್ಷಗಳ ಅಧಿಕಾರವಧಿ ಯಲ್ಲಿ ಇಲ್ಲದ ಸಾರ್ವಕರ್, ಈಗ ಉದ್ಬವಿಸಲು ಕಾರಣ ಎನು? ಸೋಲಿನ ಭೀತಿಯಲ್ಲಿರುವ ಬಿಜೆಪಿ ಹೇಗಾದರೂ ಮಾಡಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಮತಗಳಿಸುವ ತಂತ್ರಗಾರಿಕೆಯ ಭಾಗವಾಗಿ ಸಾರ್ವಕರ್ ಫೋಟೋ ಬಳಕೆ ಮಾಡುತ್ತಿದೆ. ಅಲ್ಲದೆ ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಂದ ನಾಥೂರಾಮ್ ಗೂಡ್ಸೆ ಅವರ ಫೋಟೋ ಹಾಕಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ರಾಜ್ಯದಲ್ಲಿ ಕೋಮುದ್ವೇಷ ಹರಡಲು ಸರ್ಕಾರ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಆರ್.ರಾಜೇಂದ್ರ ಆರೋಪಿಸಿದರು.
ಪ್ರತಿಟನೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಕೆಂಪರಾಜು,ಚಂದ್ರಶೇಖರಗೌಡ, ಗುರುಪ್ರಸಾದ್,ಹೆಬ್ಬೂರು ಶ್ರೀನಿವಾಸ ಮೂರ್ತಿ, ಮೈಲಾರಪ್ಪ,ದಸಂಸದ ಪಿ.ಎನ್.ರಾಮಯ್ಯ, ಜಯಮೂರ್ತಿ,ರಾಜೇಶ್ ದೊಡ್ಡಮನೆ, ಎಂ.ವಿ.ರಾಘವೇಂದ್ರಸ್ವಾಮಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಸರ್ಕಾರ ಕೂಡಲೇ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅಪಮಾನ ಮಾಡಿರುವ ವ್ಯಕ್ತಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು ಹಾಗೂ ಇಂತಹ ಘಟನೆ ಮರುಕಳುಹಿಸದಂತೆ ಕಟ್ಟು ನಿಟ್ಟಿನ ಭ್ರದತೆ ನೀಡಬೇಕೆಂದು ಆಗ್ರಹಿಸಲಾಯಿತು.

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಭಾಗದ ಜನರ ಶಾಶ್ವತ ಕುಡಿಯುವ ನೀರಿಗಾಗಿ ಗ್ರಾಮದಿಂದ ತಿಪಟೂರಿನ ಉಪವಿಭಾಗ ಕಚೇರಿ ವರೆಗೆ ಕಾಂಗ್ರೆಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದು, ಸುಮಾರು ಹದಿನೈದು ಕಿಲೋ ಮೀಟರ್ ನಿರಂತರ ಪಾದಯಾತ್ರೆಯ ನಂತರ ಶಾಂತಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ತಿಪಟೂರು ತಾಲ್ಲೂಕಿನ ಶಾಸಕರು ಕೆರೆಗೆ ನೀರು ಹರಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಮತ ಕೇಳಲು ಬರುತ್ತಾರೆ. ಗೆದ್ದ ನಂತರ ಈ ಭಾಗದ ಜನರಿಗೆ ಯಾವುದೇ ರೀತಿಯ ಸವಲತ್ತನ್ನು ದೊರಕಿಸಿಕೊಡುವುದಿಲ್ಲ ಎಂದು ಆರೋಪಿಸಿದರು.
ನಾನು ಶಾಸಕನಾದರೆ ಯಾವುದೇ ರೀತಿಯ ಪೊಳ್ಳು ಭರವಸೆ ನೀಡದೆ ಖಂಡಿತವಾಗಿಯೂ ನನ್ನ ಮೊದಲ ಆದ್ಯತೆ ಈ ಭಾಗದ ಜನರಿಗೆ ನೀಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಜನರಿಗೆ ಶಾಶ್ವತ ನೀರಾವರಿಯ ಅನುಕೂಲ ಮಾಡಿಕೊಡುವಂತೆ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೊರಟಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ವೈ.ಎಚ್.ಹುಚ್ಚಯ್ಯ ಹಾಗೂ ಜೆಡಿಎಸ್ ನಿಂದ ಸುಧಾಕರ ಲಾಲ್ ಸ್ಪರ್ಧಿಸಿ ಸೋತಿದ್ದರು. ಕಾಂಗ್ರೆಸ್ ನಿಂದ ಡಾ.ಜಿ.ಪರಮೇಶ್ವರ್ ಗೆಲುವು ಸಾಧಿಸಿದ್ದರು.
ಈ ಹಿಂದೆ 2013ರ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ್ ಸೋಲುಂಡಿದ್ದರು. 2018ರಲ್ಲಿ ಶತಾಯ ಗತಾಯ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದು, ಮನೆ ಮನೆ ತಿರುಗಿ ಜನರ ವಿಶ್ವಾಸಗಳಿಸಲು ಪ್ರಯತ್ನಿಸುತ್ತಿದ್ದದ್ದು ಗೊತ್ತೇ ಇದೆ.
ಪತ್ರದಲ್ಲೇನಿದೆ?
ಆದರೆ, ಇತ್ತೀಚೆಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಹುಚ್ಚಯ್ಯ ಅವರು ಡಾ.ಜಿ.ಪರಮೇಶ್ವರ್ ಅವರಿಂದ ಹಣ ಪಡೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು ಎಂಬ ಪಿಸು ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸುಂತೆ ಸ್ವತಃ ಹುಚ್ಚಯ್ಯ ಅವರು ಪರಮೇಶ್ವರ್ ಗೆ ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ.
ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ರಂಗದಲ್ಲಿ ಸೇವೆ ಮಾಡುತ್ತಾ ನಿಷ್ಕಳಂಕ ಚಾರಿತ್ರ್ಯ ಕಾಪಾಡಿಕೊಂಡು ಬಂದಿದ್ದೇನೆ. 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ನಾನು ನಿಮ್ಮಿಂದ ಹಣ ಪಡೆದು ಸ್ಪರ್ಧೆಯಿಂದ ವಿಮುಖನಾಗಿದ್ದೇನೆ ಎಂದು ಕೊರಟಗೆರೆ ಕ್ಷೇತ್ರದಲ್ಲಿ ವ್ಯಾಪಕ ಅಪಪ್ರಚಾರವಾಗಿದೆ. ಇದರಿಂದ ನನ್ನ ರಾಜಕೀಯ ಜೀವನಕ್ಕೇ ಸಿಡಿಲು ಬಡಿದಂತಾಗಿದೆ. ನಾನು ನಿಮ್ಮಿಂದ ಹಣ ಪಡೆದಿದ್ದೇನೊ ಇಲ್ಲವೋ ಎಂಬುದನ್ನು ತಿಳಿಸಿ ಸ್ಪಷ್ಟನೆ ನೀಡಿ ಎಂದು ಹುಚ್ಚಯ್ಯ ಬರೆದಿರುವ ಪತ್ರ ತಾಲೂಕಿನಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ತುಮಕೂರು: ಸುರೇಶ್ ಗೌಡಂದು ಯಾವುದೋ ಹೈಕೋರ್ಟ್ ನಲ್ಲಿ ಕೇಸ್ ಇದ್ಯಂತಲ್ಲಪ್ಪ. ಆ ಕೇಸ್ ಜಡ್ಜ್‌ಮೆಂಟ್ ಬರೋವರೆಗೆ ನಿರ್ಧಾರ ಮಾಡಲ್ಲ ಅಂತ ಹೇಳಿದ್ದರು. ಇತ್ತೀಚೆಗೆ ಅವರು ನನಗೆ ಸಿಕ್ಕಿಲ್ಲ. ಬದಲಾದ ನಿಲುವೇನಾದರೂ ಇದೆಯೋ ಏನೋ.. ನನಗೆ ಗೊತ್ತಿಲ್ಲ ಎಂದು ಕಾಂಗ್ರಸ್ ಪಕ್ಷ ಸೇರ್ಪಡೆಯ ಕುರಿತು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದರು.
ನಗರದಲ್ಲಿ ನಿನ್ನೆ ಮಾಧುದ್ವಾಮಿಯವರ ಕುರಿತು ರಾಜಣ್ಣ ಆಡಿದ ಮಾತು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನಾನು ಕಾಂಗ್ರೆಸ್‌ಗೆ ಬರ್ತೀನಿ. ತಿಪಟೂರಿನಲ್ಲಿ ಸೀಟ್ ಕೊಡಿಸಿ ಎಂದು ಮಾಧುಸ್ವಾಮಿಯವರು ಮಂತ್ರಿ ಇದ್ದಾಗ ನನ್ನ ಹತ್ರನೇ ಹೇಳಿದ್ದರು. ಅವರು ಕಾಂಗ್ರೆಸ್ ಗೆ ಬಂದ್ರೆ ಸ್ವಾಗತಿಸುತ್ತೇವೆ ಎಂದು ಕೆ.ಎನ್ ರಾಜಣ್ಣ ಬಾಂಬ್ ಸಿಡಿಸಿದ್ದಾರೆ.
ತುರುವೇಕೆರೆ : ಭಾರತ್ ಜೋಡೋ ಪಾದಯಾತ್ರೆ ಹಿನ್ನಲೆಯಲ್ಲಿ ಪಾದಯಾತ್ರೆಯು ಸಾಗುವ ತುರುವೇಕೆರೆ ಮಾರ್ಗವನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೀಕ್ಷಣೆ ಮಾಡಿ ಮಂಡ್ಯದತ್ತ ಪ್ರಯಾಣ ಮುಂದುವರೆಸಿದರು.
ಬಾಣಸಂದ್ರದಲ್ಲಿ ಕಾಂಗ್ರೇಸ್ ಮುಖಂಡರು ನೀಡಿದ ಸ್ವಾಗತ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆಯು ತುಮಕೂರು, ಚಿತ್ರದುರ್ಗ ಹಾಗೂ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಸಾಗಲಿದೆ. ಪಾದಯಾತ್ರೆ ಸಾಗುವ ಸ್ಥಳ ವೀಕ್ಷಣೆ ಹಿನ್ನಲೆಯಲ್ಲಿ ಹಿರಿಯೂರು, ಚಳ್ಳಕೆರೆ ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆ ಮಾರ್ಗವಾಗಿ ಮಂಡ್ಯದತ್ತ ಪ್ರಯಾಣಿಸುತ್ತಿದ್ದೇನೆ. ಜೋಡೋ ಯಾತ್ರೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಹೈ ಕಮಾಂಡ್ ಸೂಚನೆಯಂತೆ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ಮಾರ್ಗ ಮಧ್ಯೆ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದ್ದು ಸಂತಸ ತಂದಿದೆ ಎಂದರು.
ತಾಲೂಕಿನ ಬಾಣಸಂದ್ರ ಪ್ರವೇಶಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಹಿರಿಯ ಮುಖಂಡ ಚೌದ್ರಿರಂಗಪ್ಪ, ವಿಧಾನ ಪರಿಷತ್ ಮಾಜಿಸದಸ್ಯ ಬೆಮೆಲ್ ಕಾಂತರಾಜ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ವಕೀಲರಾದ ರಾಜಣ್ಣ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ಗೌಡ , ಸುಬ್ರಹ್ಮಣ್ಯಶ್ರೀಕಂಠೇಗೌಡ,ಟಿ.ಎನ್.ಶಿವರಾಜ್, ಸ್ವರ್ಣಕುಮಾರ್ ಮತ್ತಿತರರು ಸ್ವಾಗತಿಸಿ, ಮುಂದಿನ ಪ್ರಯಾಣಕ್ಕೆ ಶುಭ ಕೋರಿದರು.
ಶಿರಾ: ಮಾನವನು ಜೀವನವನ್ನು ಹೇಗೆ ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ನೀಡಿರುವ ಸಂದೇಶ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಗವದ್ಗೀತೆಯಲ್ಲಿ ನಾವು ಮಾಡುವ ಕೆಲಸಗಳಲ್ಲಿ ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಿ. ಪಲಾಪೇಕ್ಷೆಗಳನ್ನು ದೇವರಿಗೆ ಬಿಡಿ. ಪ್ರಯತ್ನಗಳನ್ನು ಕಡಿಮೆ ಮಾಡಿ ಫಲವನ್ನು ಬೇಡಿದರೆ ಸಾಧ್ಯವಾಗುವುದಿಲ್ಲ ಎಂದು ಶ್ರೀಕೃಷ್ಣ ಪರಮಾತ್ಮನು ನುಡಿದಿದ್ದಾನೆ. ಜಗತ್ತಿನಲ್ಲಿ ಯುದ್ಧವನ್ನು ಗೆದ್ದವನಿಂದ ಒಂದು ಇತಿಹಾಸ ನಿರ್ಮಾಣವಾದರೆ, ಸೋತವನಿಂದಲೂ ಒಂದು ಇತಿಹಾಸ ನಿರ್ಮಾಣವಾಗುತ್ತದೆ. ಆದರೆ ಇದನ್ನು ಹೀಯಾಳಿಸುವವರಿಗೆ ಏನು ದೊರಕುವುದಿಲ್ಲ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮನಸ್ಸನ್ನು ಸ್ಥಿರವಾಗಿ ಶಾಂತಿಯುತವಾಗಿ ನಡೆಯಬೇಕು ಎಂದು ಶ್ರೀಕೃಷ್ಣನು ನುಡಿದಿದ್ದಾರೆ. ಆದ್ದರಿಂದ ನಾವೆಲ್ಲರೂ ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೆಚ್.ಮಾರುತೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತರೂರು ಬಸವರಾಜ್, ಮುಖಂಡರಾದ ಮುದಿಮಡು ಮಂಜುನಾಥ್, ಬಿಜೆಪಿ ಮಹಿಳಾ ಘಟಕದ ಕಾರ್ಯದರ್ಶಿ ಲತಾ ಕೃಷ್ಣ, ಬಿಜೆಪಿ ಯುವ ಘಟಕದ ಅಧ್ಯಕ್ಷ ಮದು ಯಾದವ್, ಗೌಡಪ್ಪ, ಈರಣ್ಣ, ರಾಜಣ್ಣ, ಮಂಜುನಾಥ್, ತಿಮ್ಮರಾಜ್, ಮೂಡಲಗಿರಿಯಪ್ಪ, ನಾಗಣ್ಣ, ರಾಮು, ನಾಗರಾಜ್, ಬಾಬು, ನರೇಂದ್ರ, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು.

ಶಿರಾ : ಶ್ರೀಕೃಷ್ಣನು ಧರ್ಮರಾಜ್ಯ ಸ್ಥಾಪನೆಗೆ ಕ್ರಿ.ಪೂ. 5000 ವರ್ಷಗಳ ಹಿಂದೆ ಜನಿಸಿದ್ದನು. ಶ್ರೀಕೃಷ್ಣನ ಮೂಲ ಉದ್ದೇಶ ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗಿತ್ತು. ಎಲ್ಲರೂ ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಮುನ್ನಡೆಸಬೇಕಾಗುತ್ತದೆ ಎಂದು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಹೇಳಿದರು.
ಅವರು ನಗರದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶ್ರೀಕೃಷ್ಣನ ವಂಶದಲ್ಲಿ ಜನಿಸಿರುವ ಯಾದವ ಸಮುದಾಯದವರು ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ. ಈ ಪ್ರಪಂಚಕ್ಕೆ ಪುಣ್ಯಕೋಟಿ ಕೊಟ್ಟ ಸಮಾಜ, ಯಾದವ ಸಮಾಜ. ಅಂದೇ ರಾಜನೀತಿ ಹೇಳಿಕೊಟ್ಟ ಜನಾಂಗ. ಯಾದವ ಸಮುದಾಯ ಮೂಡನಂಬಿಕೆ ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಮಾಜದಲ್ಲಿ ರಾಜಕೀಯ ಅಧಿಕಾರ ಹಿಡಿದರೆ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಯಾದವ ಸಮುದಾಯ ಹಿಂದುಳಿದ ಸಮುದಾಯ ನಾವು ಹಿಂಜರಿಯದೆ ನಮ್ಮ ಹಕ್ಕನ್ನು ಕೇಳಿ ಪಡೆಯಬೇಕು ಎಂದರು.
ಶಿರಾ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ಕೊಟ್ಟಂತೆ ಹಿಂದುಳಿದಿರುವ ಸಮಾಜವಾದ ಯಾದವ ಜನಾಂಗಕ್ಕೆ ಅಭಿವೃದ್ಧಿ ನಿಗಮ ಸ್ಥಾಪಸುವುದಾಗಿ ಹೇಳಿದ್ದರು. ಅದರಂತೆ ಶಿರಾದಲ್ಲಿಯೇ ಮುನ್ನಲೆಗೆ ಬಂದ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಶಿರಾ ತಾಲ್ಲೂಕಿನ ನನ್ನನ್ನು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಇಡೀ ಶಿರಾ ಕ್ಷೇತ್ರದ ನಮ್ಮ ಸಮುದಾಯಕ್ಕೆ ಜನತೆಗೆ ಸಲ್ಲುತ್ತದೆ. ಇದಕ್ಕೆ ಶ್ರಮಿಸಿದ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಶಾಸಕ.ಡಾ.ಸಿ.ಎಂ.ರಾಜೇಶ್ ಗೌಡ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಹಶೀಲ್ದಾರ್ ಮಮತಾ ಎಂ ಮಾತನಾಡಿ, ಶ್ರೀಕೃಷ್ಣನು ಬೋಧಿಸಿರುವ ರಾಜನೀತಿ ಇಂದಿಗೂ ಎಲ್ಲಾ ಅಧಿಕಾರಿ ವರ್ಗದವರಿಗೂ, ಜನಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ. ಶ್ರೀಕೃಷ್ಣನ ವ್ಯಕ್ತಿತ್ವ ದುಷ್ಟಶಿಕ್ಷಕ ಶಿಷ್ಟ ರಕ್ಷಣೆ ಮಾಡುವುದಾಗಿತ್ತು. ಶ್ರೀಕೃಷ್ಣ ಎಲ್ಲಾ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದನು. ನ್ಯಾಯವನ್ನು ನಿಷ್ಪಕ್ಷಪಾತವಾಗಿ ಪರಿಪಾಲನೆ ಮಾಡುವಂತೆ ಬೋಧನೆ ಮಾಡಿದ್ದಾನೆ. ತನ್ನ ಸಂಬಂಧಿಕರು ಎಷ್ಟೇ ನೋವು ಕೊಟ್ಟರೂ ಅದನ್ನು ಸಹಿಸಿಕೊಂಡು ಗೆದ್ದು ತೋರಿಸಿದ್ದಾನೆ. ಎಲ್ಲರೂ ಶ್ರೀಕೃಷ್ಣನ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯಾದವ ಮುಖಂಡರಾದ ಹುಳಿಗೆರೆ ಶ್ರೀರಂಗಪ್ಪ, ಎಮ್ಮೆರಹಳ್ಳಿ ಸಿದ್ದಪ್ಪ, ದೊಡ್ಡಗೂಳ ಪರಸಣ್ಣ, ಹಾರೋಗೆರೆ ಮಾರಣ್ಣ, ಗೌಡಗೆರೆ ಚಂದ್ರಶೇಖರ್, ಬಿಇಓ ಶಂಕರಪ್ಪ, ವಲಯ ಅರಣ್ಯಾಧಿಕಾರಿ ನವನೀತನ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಮುರುಳಿ, ಪಾಂಡಪ್ಪ ಇದ್ದರು.