Publicstory/prajayoga
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಭಾಗದ ಜನರ ಶಾಶ್ವತ ಕುಡಿಯುವ ನೀರಿಗಾಗಿ ಗ್ರಾಮದಿಂದ ತಿಪಟೂರಿನ ಉಪವಿಭಾಗ ಕಚೇರಿ ವರೆಗೆ ಕಾಂಗ್ರೆಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಪಾದಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದು, ಸುಮಾರು ಹದಿನೈದು ಕಿಲೋ ಮೀಟರ್ ನಿರಂತರ ಪಾದಯಾತ್ರೆಯ ನಂತರ ಶಾಂತಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ತಿಪಟೂರು ತಾಲ್ಲೂಕಿನ ಶಾಸಕರು ಕೆರೆಗೆ ನೀರು ಹರಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಮತ ಕೇಳಲು ಬರುತ್ತಾರೆ. ಗೆದ್ದ ನಂತರ ಈ ಭಾಗದ ಜನರಿಗೆ ಯಾವುದೇ ರೀತಿಯ ಸವಲತ್ತನ್ನು ದೊರಕಿಸಿಕೊಡುವುದಿಲ್ಲ ಎಂದು ಆರೋಪಿಸಿದರು.
ನಾನು ಶಾಸಕನಾದರೆ ಯಾವುದೇ ರೀತಿಯ ಪೊಳ್ಳು ಭರವಸೆ ನೀಡದೆ ಖಂಡಿತವಾಗಿಯೂ ನನ್ನ ಮೊದಲ ಆದ್ಯತೆ ಈ ಭಾಗದ ಜನರಿಗೆ ನೀಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಜನರಿಗೆ ಶಾಶ್ವತ ನೀರಾವರಿಯ ಅನುಕೂಲ ಮಾಡಿಕೊಡುವಂತೆ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಾದಯಾತ್ರೆಯಲ್ಲಿ ರೈತ ಮುಖಂಡ ಚಂದ್ರೇಗೌಡ ಮತ್ತು ಸುದರ್ಶನ್ ಬಾಬು, ಹೇಮಂತ್ ಮಂಜುನಾಥ್ ಮತ್ತಿತರರು ಭಾಗಿಯಾಗಿದ್ದರು.