Saturday, March 14, 2026
Google search engine
Home Blog Page 79

ಹುಲ್ಲೇಕೆರೆ: ಶ್ರೀನಿವಾಸ್ ಗೆ ಸನ್ಮಾನ

0

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆಯ ಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಶ್ರೀನಿವಾಸ ಅವರು ನೊಳಂಬ ಪ್ರೌಢ ಶಾಲೆ, ಶ್ರೀ ಬಸವೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ತಿಪಟೂರಿನ ಎಸ್್ನ.ವಿಪಿ ಶಾಲೆಗಳಲ್ಲಿ 39 ವರ್ಷ ಸೇವೆ ಸಲ್ಲಿಸಿ ಈಚೆಗೆ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.

ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗೆಗೆ ಪಾತ್ರರಾಗಿದ್ದರು.
ಇವರನ್ನು ಹಿರಿಯ ವಿದ್ಯಾರ್ಥಿಗಳು, ಶ್ರೀ ಸೋಮೇಶ್ವರ ಪ್ರೌಢ ಶಾಲೆ, ನೊಳಂಬ ಪ್ರೌಢ ಶಾಲೆಯ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ, ಸಹ ಕಾರ್ಯದರ್ಶಿ ಪ್ರಸನ್ನಕುಮಾರ್, ನಿರ್ದೇಶಕರಾದ ಗಂಗಾಮಣಿ, ಎನ್.ಸ್ವರ್ಣ ಲತಾ ಶ್ರೀನಿವಾಸ. ಪ್ರವೀಣ್ ಆರ್.ಸ್, ಡಾ.ರಾಜೇಂದ್ರ ಪ್ರಸಾದ್, ಮುಖ್ಯ ಶಿಕ್ಷಕ ಬಸವಯ್ಯ, ಮುರುಳಿ, ಸೋಮಶೇಖ್, ಶಾಂತರಾಜ್, ರಘು,` ಜಯಣ್ಣ, ಅಗ್ನಿ ಆಡಳಿತ ಮಂಡಳಿಯ ಸದಸ್ಯರು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಪತ್ರಕರ್ತರ ಕಥೆ ಹೇಳುವ ಆ ಪತ್ರಿಕೋದ್ಯಮ

ಸಿ.ಕೆ.ಮಹೇಂದ್ರ


ಅತಿ ಸುದೀರ್ಘ ಕಾಲ ಪತ್ರಕರ್ತರಾಗಿ ದುಡಿದಿರುವ ಹೆಸರಾಂತ ಪತ್ರಕರ್ತ ಜಿ,ಎನ್. ರಂಗನಾಥ ರಾವ್ ಅವರು ಬರೆದಿರುವ ಪುಸ್ತಕ “ಆ ಪತ್ರಿಕೋದ್ಯಮ”.

ಹೆಸರೇ ಹೇಳುವಂತೆ ಆ ಕಾಲದ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಈ ಕಾಲದ ಪತ್ರಿಕೋದ್ಯಮವನ್ನು ತುಲನೆಗೆ ಹಚ್ಚಿದೆ.

ಇದು ಆತ್ಮಕಥೆ ಅಲ್ಲ ಎಂದು ಲೇಖಕರು ಆರಂಭದಲ್ಲೇ ಷರಾ ಬರೆದಿರುವುದರಿಂದ ಇದು ರಂಗನಾಥ ರಾವ್ ಅವರ ಅನುಭವ ಕಥನ ಎನ್ನುವುದಕ್ಕಿಂತಲೂ ಕರ್ನಾಟಕದ ಪತ್ರಿಕೋದ್ಯಮ, ಪತ್ರಕರ್ತರ ಮುಚ್ಚು ಮರೆಯ ಅನುಭವದ ಪುಸ್ತಕವಾಗಿದೆ.

ಪತ್ರಕರ್ತರು ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇರುವರೆಲ್ಲರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಇರುವ ಎಲ್ಲರೂ ಓದಬಹುದಾದ ಪುಸ್ತಕ ಇದಾಗಿದೆ.

ಮೀಡಿಯಾ ಮಿರ್ಚಿ ಅಂಕಣ ಬರಹದ ಮೂಲಕ ಪತ್ರಿಕೋದ್ಯಮವನ್ನು ಒರೆಗೆ ಹಚ್ಚಿದ್ದ ಜಿ.ಎನ್.ಮೋಹನ್ ಅವರ ನೇತೃತ್ವದ ಬಹರೂಪಿಯಿಂದ ಪುಸ್ತಕ ಪ್ರಕಟಿಸಲಾಗಿದೆ. ಪುಸ್ತಕದಲ್ಲಿರುವ ಲೇಖನಗಳು ಅವಧಿ ಜಾಲತಾಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಬರಹಗಳ ಸಂಕಲನ ಎಂಬಂತೆ ಪುಸ್ತಕ ಕಾಣುವುದಿಲ್ಲ. ಪುಸ್ತಕವಾಗಿಯೇ ಬರೆಯಲಾಗಿದೆ ಎಂಬಂತೆ ಓದುತ್ತಾ ಓದಂತೆ ಭಾಸವಾಗುತ್ತದೆ.

ಜಿ.ಎನ್.ರಂಗನಾಥ ರಾವ್ ಹೆಸರಾಂತ ಪತ್ರಕರ್ತರು. ಬಹುತೇಕ ಅವರ ಪುಸ್ತಕಗಳಿಲ್ಲದ ಕಪಾಟು ಪತ್ರಕರ್ತರ ಮನೆಯಲ್ಲಿ ಇರಲಿಕ್ಕಿಲ್ಲ. ಸತ್ಯವನ್ನೇ ನಂಬುವಂತೆ ಹೇಳಿದ ತನ್ನ ತಂದೆಯ ಜಾಡು ಹಿಡಿದ ಹುಡುಗ ಏನ್ನೆಲ್ಲ ಮಾಡಬೇಕಾಯಿತು ಎಂಬುದು ಪುಸ್ತಕ ಓದುತ್ತಾ ಓದಂತೆ ಗೋಚರಿಸುತ್ತದೆ.

ಪತ್ರಕರ್ತನಾಗುವ ಕನಸನ್ನು ಎಂದಿಗೂ ಕಾಣದ ರಂಗನಾಥ್, ಲಂಚ ಪಡೆಯಬಾರದ ಕೆಲಸ ಹುಡುಕಲು ಹೋಗಿ, ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ನೀಡುತ್ತಾ ನೀಡುತ್ತಾ ಕೊನೆಗೂ ಹೊಟ್ಟೆಪಾಡಿಗಾಗಿ ಲಂಚ ಪಡೆಯದ ಕೆಲಸ ಎಂಬಂತೆ ಕಾಣುವ ಪತ್ರಿಕೋದ್ಯಮದ ಬಾಗಿಲು ತಟ್ಟಿದವರು.

ಲಂಚದ ಪ್ರಪಂಚ, ಮೋಸದ ಪ್ರಪಂಚ ನೋಡಿದ ಹುಡುಗ, ಅಪ್ಪನ ಅಣತಿಯಂತೆ ಸತ್ಯದ ದಾರಿಯಲ್ಲಿ ನೆಡೆಯಲು ಹೋಗಿ ಹಲವು ಕೆಲಸಗಳನ್ನು ಬಿಡಬೇಕಾಗುತ್ತದೆ, ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಿಕ್ಕ ಮೊದಲ ಕೆಲಸದಲ್ಲಿ ಸಿಕ್ಕ ಲಂಚದ ಹಣವನ್ನು ಅಪ್ಪನ ಕೈಗೆ ಇಟ್ಟಾಗ ಅವರು ಹೇಳಿದ ಸತ್ಯದ ದಾರಿಯಲ್ಲಿ ನಡೆಯಲು ಹೋಗಿ ಪತ್ರಿಕೆ ಸೇರಿಕೊಂಡರು. ಪತ್ರಿಕೋದ್ಯದಮ ಸತ್ಯ. ಅಸತ್ಯದ ಮುಖವನ್ನು, ಪತ್ರಕರ್ತರೊಳಗಿನ ದೊಂಬರಾಟ, ಹೊಟ್ಟೆಕಿಚ್ಚು, ರಾಜಕೀಯ, ಮಾಲೀಕರ ಮರ್ಜಿ, ಸಂಪಾದಕರ ಕಷ್ಟ ಹೀಗೆ ಎಲ್ಲವನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ರಂಗನಾಥ್ ರಾವ್ ಅವರು ತಾಯಿನಾಡಿನಲ್ಲಿ ವೃತ್ತಿ ಆರಂಭಿಸಿದವರು, ಸಂಯುಕ್ತ ಕರ್ನಾಟಕ, ಪ್ರಜಾವಾಣಿಯಲ್ಲಿ ವೃತ್ತಿ ಮಾಡಿದವರು, ಪ್ರಜಾವಾಣಿ, ಸುಧಾ, ಮಯೂರ, ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ದುಡಿದವರು. ಅವಧಿ ಮತ್ತು ವಾರ್ತಾ ಭಾರತಿ ಅಂಕಣಕಾರರಾಗಿದ್ದವರು. ಹೀಗಾಗಿ ಪುಸ್ತಕ ಪರ್ತಕರ್ತರು, ಪತ್ರಿಕೋದ್ಯಮದ ಒಳ. ಹೊರಮುಖವನ್ನು ಚೆನ್ನಾಗಿಯೇ ಅಭಿವ್ಯಕ್ತಿಸಿದೆ.

ಪತ್ರಕರ್ತನಾಗಿ ಅನುಭವ ಇರುವ ನನಗೆ, ಸಂಪಾದಕರು ಇಷ್ಟೊಂದು ಕಷ್ಟ ಅನುಭವಿಸಬಹುದೇ ಎಂಬುದು ಗೊತ್ತಿರಲಿಲ್ಲ. ಸಂಪಾದಕರು ಹೊಟ್ಟೆಯೊಳಗಿನ ಸಂಕಟಗಳನ್ನು ಪುಸ್ತಕ ತೆರೆದಿಟ್ಟಿದೆ.
ಪತ್ರಕರ್ತರ ವೃತ್ತಿಯೇ ಕಷ್ಟದ್ದು. ನಮ್ಮೆಲ್ಲರ, ಆಗಿನ ಪತ್ರಿಕೋದ್ಯಮ ಚೆನ್ನಾಗಿತ್ತು, ಪ್ರಾಮಾಣಿಕವಾಗಿತ್ತು ಎಂಬ ನಂಬಿಕೆಯನ್ನು ಪುಸ್ತಕ ಉಲ್ಟಾ ಪಲ್ಟಾ ಮಾಡುತ್ತದೆ. ಆ ಪತ್ರಿಕೋದ್ಯಮದಲ್ಲೂ ಭಕ್ಷೀಸು ಪಡೆಯುತ್ತಿದ್ದ, ರಾಜಕಾರಣಿಗಳ ಮರ್ಜಿ ಕಾಯುತ್ತಿದ್ದ, ಮಾಲೀಕರಿಗೆ, ಸಂಪಾದಕರಿಗೆ ಬಕೀಟು ಹಿಡಿಯುತ್ತಿದ್ದ ಪರ್ತಕರ್ತರ ಬಗ್ಗೆ ಪುಸ್ತಕ ಬೆಳಕು ಚೆಲ್ಲಿರುವುದರಿಂದ ಈ ಪತ್ರಿಕೋದ್ಯಮ ಸ್ವಲ್ಪ ಕೈ ಮುಂದು ನೀಡಿ ಎರವಲು ಪಡೆದುಕೊಂಡಿದೆ ಎನ್ನಿಸುತ್ತದೆ.

ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಆ ಕಾಲದ ಅನೇಕ ಪತ್ರಕರ್ತರ, ಪತ್ರಿಕೋದ್ಯಮದ ಅಪರೋಕ್ಷ ಜೀವನ ಚರಿತ್ರೆಯಂತೆಯೇ ಇರುವ ಪುಸ್ತಕವು ಪತ್ರಿಕೋದ್ಯಮವನ್ನು ಆಳವಾಗಿ ಪ್ರೀತಿಸುವವರು ಓದಿದರೆ ಅಲ್ಲಲ್ಲಿ ದುಂಖ ಉಮ್ಮಳಿಸಿ ಬಂದು ಕಣ್ಣೀರಾಗುವುದೇ ಹೆಚ್ಚು.

ಪುಸ್ತಕ ಬೇಕಿದ್ದವರು ಮೊಬೈಲ್ – 7019182729 ಸಂಪರ್ಕಿಸಬಹುದು ಅಥವಾ ಬೆಂಗಳೂರಿನ ಬಹುರೂಪಿ ಮಳಿಗೆಯಲ್ಲಿ ಖರೀದಿಸಬಹುದು.

ತಾಲೂಕು ಕಚೇರಿಯಲ್ಲಿ ಬಗೆದಷ್ಟೂ ಭೂ ಹಗರಣ: ಶಾಸಕ ಎಸ್‌ಆರ್ ಶ್ರೀನಿವಾಸ್

ಗುಬ್ಬಿ:  ತಾಲ್ಲೂಕು ಕಚೇರಿಯಲ್ಲಿ ಬಗೆದಷ್ಟು ಆಳವಾಗಿ ಬೇರೂರಿರುವ ಭೂ ಹಗರಣ  ಬೆಳಕಿಗೆ ಬರುತ್ತಿದೆ. 1999 ರ ಅವಧಿಯಲ್ಲಿದ್ದ ತಹಶಿಲ್ದಾರ್ ಮಂಜೂರು ಮಾಡುವ ಅಧಿಕಾರವನ್ನು ಪ್ಲಸ್ ಮಾಡಿಕೊಂಡ ಕೆಲವರು ದಂಧೆ ಮಾಡಿಕೊಂಡಿದ್ದು, ಈ ಎಲ್ಲವನ್ನೂ ಸೂಕ್ಷ್ಮವಾಗಿ ಲೋಪವಾಗದಂತೆ ಅವಲೋಕಿಸಿ ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಶಾಸಕ ಎಸ್‌ಆರ್ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ವಿನಾಯಕ ನಗರ ಬಡಾವಣೆಯಲ್ಲಿ 77.50 ಲಕ್ಷ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಹಗರಣದಲ್ಲಿನ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆ ಖಚಿತ. ಭೂ ಮಂಜೂರು ಕಮಿಟಿ ಇಲ್ಲದ 1999 ರಿಂದ 2001 ರವರೆಗಿನ ಮೂರು ವರ್ಷದ ಅವಧಿಯಲ್ಲಿ ತಹಶಿಲ್ದಾರ್ ಗೆ ಭೂಮಿ ನೀಡುವ ಅಧಿಕಾರವಿತ್ತು. ಈ ಅವಧಿಯ ಎಲ್ಲಾ ದಾಖಲೆ ತಿದ್ದಿ, ಬೇರೆಯವರ ಹೆಸರು ಸೇರಿಸಿ ಅವ್ಯವಹಾರ ಮಾಡಿದ್ದಾರೆ. ಬಗೆದಷ್ಟು ಆಳವಾಗಿರುವ ಹಗರಣದಲ್ಲಿ ಈಗಾಗಲೇ 400 ಕ್ಕೂ ಅಧಿಕ ಪ್ರಕರಣ ಬಯಲಿಗೆ ಬರುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಒಟ್ಟು 14 ಕೋಟಿ ರೂಗಳ ಪಟ್ಟಣ ಅಭಿವೃದ್ಧಿ ಅನುದಾನ ತಡವಾಗಿ ಬಂದಿದೆ. ಈ ಪೈಕಿ ಮೊದಲ ಪ್ಯಾಕೇಜ್ 6 ಕೋಟಿ ರೂಗಳ ಕೆಲಸಕ್ಕೆ ಚಾಲನೆ ದೊರಕುತ್ತಿದೆ. ಪ್ರಮುಖ ಎಂಜಿ ರಸ್ತೆ ಹಾಗೂ ರೈಲ್ವೇ ಅಂಡರ್ ಪಾಸ್ ರಸ್ತೆಗೆ ಆದ್ಯತೆ ನೀಡಿದ್ದು, ಒಟ್ಟು 3 ಕೋಟಿ ಮೀಸಲಿಡಲಾಗಿದೆ. ಈ ಜೊತೆಗೆ ಬಸ್ ಡಿಪೋ ನಿರ್ಮಾಣಕ್ಕೆ ಹಣ ಮೀಸಲಿದೆ. ಗುರುತಿಸಲಾದ ಭೂಮಿ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಕ್ರಿಯೆ ನಡೆಸಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಯುಜಿಡಿ ಒಳಚರಂಡಿ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ ಕೊನೆಯ ಹಂತದಲ್ಲಿ ಭೂಮಿ ನೀಡಬೇಕಾದ ರೈತರು ಕೋರ್ಟ್ ಮೆಟ್ಟಿಲೇರಿ ತಡವಾಗಿದೆ. ಒಟ್ಟು ಬಾಕಿ 75 ಲಕ್ಷ ರೂಗಳನ್ನು ಕಟ್ಟಲು ಸೂಚಿಸಿದ್ದ ಸಂಸ್ಥೆಗೆ 45 ಲಕ್ಷ ರೂ ಕಟ್ಟಲಾಗಿತ್ತು. ಬಾಕಿ 30 ಲಕ್ಷ ರೂ ಕಟ್ಟುವ ಸಮಯಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್ ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಶೋಕತ್ ಆಲಿ, ಮಂಗಳಮ್ಮ, ರಂಗಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ, ಗುತ್ತಿಗೆದಾರ ಮಂಜುನಾಥ್ ಇತರರು ಇದ್ದರು.

ದೊಡ್ಡ ಕಿರೀಟದ ವ್ಯಕ್ತಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರ ನಡವಳಿ ಅಗೌರವ ಸೂಚಿಸುವಂತಹದು. ಅವರ ಮನೆಯ ಕೆಲಸಕ್ಕೆ ಮನೆಯವರೇ ಕರೆದಿಲ್ಲ. ಗೈರು ಹಾಜರಾಗಿರುವುದು ಹಾಸ್ಯಾಸ್ಪದ ಎಂದು ಶಾಸಕ ಶ್ರೀನಿವಾಸ್ ಪ.ಪಂ ಅಧ್ಯಕ್ಷರ ಗೈರು ಹಾಜರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು. ಆದರೆ ಅಧ್ಯಕ್ಷರಾದವರು ನನ್ನನ್ನು ಆಹ್ವಾನಿಸಿಲ್ಲ ಎಂದು ಹೇಳಿ ಮುಖ್ಯಾಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗೈರು ಹಾಜರಾಗಿರುವುದು ಶೋಭೆಯಲ್ಲ ಎಂದು ಟೀಕಿಸಿದರು.

ಪತ್ರಕರ್ತರ ಕಥೆ ಹೇಳುವ ‘ಆ ಪತ್ರಿಕೋದ್ಯಮ’

ಸಿ.ಕೆ.ಮಹೇಂದ್ರ

ಅತಿ ಸುದೀರ್ಘ ಕಾಲ ಪತ್ರಕರ್ತರಾಗಿ ದುಡಿದಿರುವ ಹೆಸರಾಂತ ಪತ್ರಕರ್ತ ಜಿ,ಎನ್. ರಂಗನಾಥ ರಾವ್ ಅವರು ಬರೆದಿರುವ ಪುಸ್ತಕ “ಆ ಪತ್ರಿಕೋದ್ಯಮ”. ಹೆಸರೇ ಹೇಳುವಂತೆ ಆ ಕಾಲದ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಈ ಕಾಲದ ಪತ್ರಿಕೋದ್ಯಮ ತುಲನೆ ಮಾಡಲಿದೆ.


ಇದು ಆತ್ಮಕಥೆ ಅಲ್ಲ ಎಂದು ಲೇಖಕರು ಆರಂಭದಲ್ಲೇ ಷರಾ ಬರೆದಿರುವುದರಿಂದ ಇದು ರಂಗನಾಥ ರಾವ್ ಅವರ ಅನುಭವ ಕಥನ ಎನ್ನುವುದಕ್ಕಿಂತಲೂ ಕರ್ನಾಟಕದ ಪತ್ರಿಕೋದ್ಯಮದ ಮುಚ್ಚು ಮರೆಯ ಅನುಭವದ ಪುಸ್ತಕವಾಗಿದೆ.


ಪತ್ರಕರ್ತರು ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇರುವರೆಲ್ಲರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಇರುವ ಎಲ್ಲರೂ ಓದಬಹುದಾದ ಪುಸ್ತಕ ಇದಾಗಿದೆ.
ಮೀಡಿಯಾ ಮಿರ್ಚಿ ಅಂಕಣ ಬರಹದ ಮೂಲಕ ಪತ್ರಿಕೋದ್ಯಮವನ್ನು ಒರೆಗೆ ಹಚ್ಚಿದ್ದ ಜಿ.ಎನ್.ಮೋಹನ್ ಅವರ ನೇತೃತ್ವದ ಬಹರೂಪಿಯಿಂದ ಪುಸ್ತಕ ಪ್ರಕಟಿಸಲಾಗಿದೆ. ಪುಸ್ತಕದಲ್ಲಿರುವ ಲೇಖನಗಳು ಅವಧಿ ಜಾಲತಾಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಬರಹಗಳ ಸಂಕಲನ ಎಂಬಂತೆ ಪುಸ್ತಕ ಕಾಣುವುದಿಲ್ಲ. ಪುಸ್ತಕವಾಗಿಯೇ ಬರೆಯಲಾಗಿದೆ ಎಂಬಂತೆ ಓದುತ್ತಾ ಓದಂತೆ ಭಾಸವಾಗುತ್ತದೆ.
ಜಿ.ಎನ್.ರಂಗನಾಥ ರಾವ್ ಹೆಸರಾಂತ ಪತ್ರಕರ್ತರು. ಬಹುತೇಕ ಅವರ ಪುಸ್ತಕಗಳಿಲ್ಲದ ಕಪಾಟು ಪತ್ರಕರ್ತರ ಮನೆಯಲ್ಲಿ ಇರಲಿಕ್ಕಿಲ್ಲ.
ಸತ್ಯವನ್ನೇ ನಂಬುವಂತೆ ಹೇಳಿದ ತನ್ನ ತಂದೆಯ ಜಾಡು ಹಿಡಿದ ಹುಡುಗ ಏನ್ನೆಲ್ಲ ಮಾಡಬೇಕಾಯಿತು ಎಂಬುದು ಪುಸ್ತಕ ಓದುತ್ತಾ ಓದಂತೆ ಗೋಚರಿಸುತ್ತದೆ. ಪತ್ರಕರ್ತನಾಗುವ ಕನಸನ್ನು ಎಂದಿಗೂ ಕಾಣದ ರಂಗನಾಥ್, ಲಂಚ ಪಡೆಯಬಾರದ ಕೆಲಸ ಹುಡುಕಲು ಹೋಗಿ, ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ನೀಡುತ್ತಾ ನೀಡುತ್ತಾ ಕೊನೆಗೂ ಹೊಟ್ಟೆಪಾಡಿಗಾಗಿ ಲಂಚ ಪಡೆಯದ ಕೆಲಸ ಎಂಬಂತೆ ಕಾಣುವ ಪತ್ರಿಕೋದ್ಯಮದ ಬಾಗಿಲು ತಟ್ಟಿದವರು.
ಲಂಚದ ಪ್ರಪಂಚ, ಮೋಸದ ಪ್ರಪಂಚ ನೋಡಿದ ಹುಡುಗ, ಅಪ್ಪನ ಅಣತಿಯಂತೆ ಸತ್ಯದ ದಾರಿಯಲ್ಲಿ ನೆಡೆಯಲು ಹೋಗಿ ಹಲವು ಕೆಲಸಗಳನ್ನು ಬಿಡಬೇಕಾಗುತ್ತದೆ, ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಿಕ್ಕ ಮೊದಲ ಕೆಲಸದಲ್ಲಿ ಸಿಕ್ಕ ಲಂಚದ ಹಣವನ್ನು ಅಪ್ಪನ ಕೈಗೆ ಇಟ್ಟಾಗ ಅವರು ಹೇಳಿದ ಸತ್ಯದ ದಾರಿಯಲ್ಲಿ ನಡೆಯಲು ಹೋಗಿ ಪತ್ರಿಕೆ ಸೇರಿಕೊಂಡರು, ಪತ್ರಿಕೋದ್ಯದಮ ಸತ್ಯ. ಅಸತ್ಯದ ಮುಖವನ್ನು, ಪತ್ರಕರ್ತರೊಳಗಿನ ದೊಂಬರಾಟ, ಹೊಟ್ಟೆಕಿಚ್ಚು, ರಾಜಕೀಯ, ಮಾಲೀಕರ ಮರ್ಜಿ, ಸಂಪಾದಕರ ಕಷ್ಟ ಹೀಗೆ ಎಲ್ಲವನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
ರಂಗನಾಥ್ ರಾವ್ ಅವರು ತಾಯಿನಾಡಿನಲ್ಲಿ ವೃತ್ತಿ ಆರಂಭಿಸಿದವರು, ಸಂಯುಕ್ತ ಕರ್ನಾಟಕ, ಪ್ರಜಾವಾಣಿಯಲ್ಲಿ ವೃತ್ತಿ ಮಾಡಿದವರು, ಪ್ರಜಾವಾಣಿ, ಸುಧಾ, ಮಯೂರ, ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ದುಡಿದವರು. ಅವಧಿ ಮತ್ತು ವಾರ್ತಾ ಭಾರತಿ ಅಂಕಣಕಾರರಾಗಿದ್ದವರು. ಹೀಗಾಗಿ ಪುಸ್ತಕ ಪರ್ತಕರ್ತರು, ಪತ್ರಿಕೋದ್ಯಮದ ಒಳ. ಹೊರಮುಖವನ್ನು ಚೆನ್ನಾಗಿಯೇ ಅಭಿವ್ಯಕ್ತಿಸಿದೆ.
ಪತ್ರಕರ್ತನಾಗಿ ಅನುಭವ ಇರುವ ನನಗೆ, ಸಂಪಾದಕರು ಇಷ್ಟೊಂದು ಕಷ್ಟ ಅನುಭವಿಸಬಹುದೇ ಎಂಬುದು ಗೊತ್ತಿರಲಿಲ್ಲ. ಸಂಪಾದಕರು ಹೊಟ್ಟೆಯೊಳಗಿನ ಸಂಕಟಗಳನ್ನು ಪುಸ್ತಕ ತೆರೆದಿಟ್ಟಿದೆ.
ಪತ್ರಕರ್ತರ ವೃತ್ತಿಯೇ ಕಷ್ಟದ್ದು. ನಮ್ಮೆಲ್ಲರ, ಆಗಿನ ಪತ್ರಿಕೋದ್ಯಮ ಚೆನ್ನಾಗಿತ್ತು, ಪ್ರಾಮಾಣಿಕವಾಗಿತ್ತು ಎಂಬ ನಂಬಿಕೆಯನ್ನು ಪುಸ್ತಕ ಉಲ್ಟಾ ಪಲ್ಟಾ ಮಾಡುತ್ತದೆ. ಆ ಪತ್ರಿಕೋದ್ಯಮದಲ್ಲೂ ಭಕ್ಷೀಸು ಪಡೆಯುತ್ತಿದ್ದ, ರಾಜಕಾರಣಿಗಳ ಮರ್ಜಿ ಕಾಯುತ್ತಿದ್ದ, ಮಾಲೀಕರಿಗೆ, ಸಂಪಾದಕರಿಗೆ ಬಕೀಟು ಹಿಡಿಯುತ್ತಿದ್ದ ಪರ್ತಕರ್ತರ ಬಗ್ಗೆ ಪುಸ್ತಕ ಬೆಳಕು ಚೆಲ್ಲಿರುವುದರಿಂದ ಈ ಪತ್ರಿಕೋದ್ಯಮ ಸ್ವಲ್ಪ ಕೈ ಮುಂದು ನೀಡಿ ಎರವಲು ಪಡೆದುಕೊಂಡಿದೆ ಎನ್ನಿಸುತ್ತದೆ,
ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಆ ಕಾಲದ ಅನೇಕ ಪತ್ರಕರ್ತರ, ಪತ್ರಿಕೋದ್ಯಮದ ಅಪರೋಕ್ಷ ಜೀವನ ಚರಿತ್ರೆಯಂತೆಯೇ ಇರುವ ಪುಸ್ತಕವು ಪತ್ರಿಕೋದ್ಯಮವನ್ನು ಆಳವಾಗಿ ಪ್ರೀತಿಸುವವರು ಓದಿದರೆ ಅಲ್ಲಲ್ಲಿ ದುಂಖ ಉಮ್ಮಳಿಸಿ ಬಂದು ಕಣ್ಣೀರಾಗುವುದೇ ಹೆಚ್ಚು.
ಪುಸ್ತಕ ಬೇಕಿದ್ದವರು ಮೊಬೈಲ್ – 7019182729 ಸಂಪರ್ಕಿಸಬಹುದು ಅಥವಾ ಬೆಂಗಳೂರಿನ ಬಹುರೂಪಿ ಮಳಿಗೆಯಲ್ಲಿ ಖರೀದಿಸಬಹುದು.

ರಸ್ತೆ ಅಪಘಾತ; ಏಳು ಜನ ಪ್ರಯಾಣಿಕರಿಗೆ ಗಂಭೀರ ಗಾಯ            

Publicstory/prajayoga

ವರದಿ, ಎ.ಶ್ರೀನಿವಾಸಲು, ಪಾವಗಡ

ಪಾವಗಡ: ಲಗೇಜ್ ಆಟೋ ಮತ್ತು ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಲಗೇಜ್ ಆಟೋದಲ್ಲಿ ಇದ್ದ 7 ಜನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಉಪ್ಪಾರಳ್ಳಿ ಗೇಟ್ ಬಳಿ  ಇಂದು ನಡೆದಿದೆ.                        

ಕಾರು ಪಾವಗಡ ದಿಂದ ನಾಗಲಮಡಿಕೆ ಕಡೆ ಹೋಗುತ್ತಿರುವ ವೇಳೆ ಉಪ್ಪಾರಹಳ್ಳಿ ಕ್ರಾಸಿಂಗ್ ಬಳಿ ಎದುರಿಗೆ ಬರುತ್ತಿದ್ದ ಲಗೇಜ್ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ತಿರುಮಣಿಯ ಗ್ರಾಮದ ಪ್ರಿಯಾಂಕ, ವೃಷಾಂಕ, ಸುಬ್ರಮಣಿ, ನರಸಿಂಹಮೂರ್ತಿ, ರತ್ನಮ್ಮ, ಭಾಗ್ಯಮ್ಮ, ಸಂಧ್ಯಾ ವಾಣಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು,  ತೀವ್ರವಾಗಿ ಗಾಯಗೊಂಡ ಸುಬ್ರಮಣಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ.

ನರಸಿಂಹ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳಿಹಿಸಲಾಗಿದೆ. ಉಳಿದ ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ತಿಳಿದು ಬಂದಿದೆ. 

 ಸ್ಥಳಕ್ಕೆ ತಿರುಮಣಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜಣ್ಣ ಅವರು ಭೇಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಣಿಗಲ್ ಪಟ್ಟಣದಲ್ಲಿ ಚಿಂದಿ ಆಯುತ್ತಿದ್ದ ಮಕ್ಕಳು ಸೇರಿದಂತೆ ಮೂವರ ರಕ್ಷಣೆ

Publicstory/prajayoga

ಕುಣಿಗಲ್: ಪಟ್ಟಣದಲ್ಲಿ ಭಿಕ್ಷಾಟನೆ, ಚಿಂದಿ ಆಯುವ ಮೂರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಸಾರಿಗೆ ಬಸ್ ನಿಲ್ದಾಣ, ಸಂತೇ ಮೈದಾನ, ಆರ್.ಎಂ.ಸಿ ಯಾರ್ಡ್, ಘನ ತಾಜ್ಯ ವಿಲೇವಾರಿ ಘಟಕ ಹಾಗೂ ಪಟ್ಟಣದ ವಿವಿಧ ಕಡೆಗಳಲ್ಲಿ ಚಿಂದಿ ಆಯುತ್ತಿದ್ದ ಮಕ್ಕಳನ್ನು ಗಮನಿಸಿದ ಸ್ಥಳಿಯರು ಮಕ್ಕಳ ಸಹಾಯವಾಣಿಗ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ  ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು  ಜಂಟಿ ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕಿ, ಮಗು ಹಾಗೂ ಮಗುವಿನ ತಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆ ಯ ವೈದ್ಯರಿಂದ ತಪಾಸಣೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಸೂಕ್ತ ಪುನರ್ವಸತಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಅನುಷಾ ತಿಳಿಸಿದ್ದಾರೆ.

ಕಾರ್ಯಚರಣೆಯಲ್ಲಿ ಕುಣಿಗಲ್ ಪೋಲಿಸ್ ಠಾಣೆಯ ಪಿ.ಎಸ್.ಐ ಜಮಾಲ್ ಅಹಮದ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮೇಶ್, ತಾಲೂಕು ಕಾರ್ಮಿಕ ನಿರೀಕ್ಷಕರಾದ ಪುಟ್ಟರಾಜು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌತಮ್, ಜಿತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ತಿಮ್ಮರಾಜು ಸೆರಿದಂತೆ ಹಲವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದು : ಪ್ರೊ. ಹಿರಣ್ಣಯ್ಯ

Publicstory/prajayoga

ತಿಪಟೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಸೂತ್ರವಾಗಿ ಸಮಾಜ ನಡೆಯಲು ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹಿರಣ್ಣಯ್ಯ ತಿಳಿಸಿದರು.

ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಪೋಟೋಗಳ ಪಾತ್ರ ದೊಡ್ಡದಿದೆ ಎಂದರು.

ಇದರಲ್ಲಿ ಛಾಯಾಚಿತ್ರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.  ಛಾಯಾಚಿತ್ರ ಎಂಬುದು ಕೇವಲ ಒಂದು ಫೋಟೋ ಅಲ್ಲ ಅದು ಸಮಾಜದ ಹುಳುಕುಗಳನ್ನು, ವ್ಯವಸ್ಥೆಯನ್ನು, ಘೋಷಣೆಗಳನ್ನು, ರಾಜಕೀಯ ವ್ಯಕ್ತಿಗಳ ವರ್ಚಸ್ಸನ್ನು ಹಾಗೂ ವ್ಯವಸ್ಥೆಯ ಪರಿಯನ್ನು ವಿವರಿಸುತ್ತದೆ. ಛಾಯಾಚಿತ್ರ ಎಂಬುದು ಇಂದು ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಡಾ. ವೆಂಕಟಚಲಯ್ಯ ಮಾತನಾಡಿ, ನಾವು ಮೊದಲು ಒಂದು ನಮ್ಮ ಪೋಟೋ ತೆಗೆಸಲು ದೂರದ ಊರುಗಳಿಗೆ ಹೋಗಿ ಬರಬೇಕಾಗಿತ್ತು. ಇಂದು ಛಾಯಾಚಿತ್ರಗಳಲ್ಲಿ ಅತ್ಯಧಿಕ ತಂತ್ರಜ್ಞಾನಿದೆ. ಈ ಹಿಂದೆ ಒಂದು ವಿಭಾಗಕ್ಕೆ ಸೀಮಿತವಾದ ವಿದ್ಯಾರ್ಥಿಗಳು ಆಸಕ್ತಿದಾಯಕ ವಿಚಾರಗಳನ್ನು ಓದುವ ಅವಕಾಶವಿರಲಿಲ್ಲ. ಇಂದು ಎನ್‌ಇಪಿ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ. ಇದು ಸಂತೋಷದಾಯಕ, ಪತ್ರಿಕೋದ್ಯಮ ಇಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮನಃಶಾಸ್ತ್ರ ವಿಭಾಗದ ಜಗದೇವಪ್ಪ , ವಾಣಿಜ್ಯ ವಿಭಾಗದ ಮುಖ್ಯಸ್ಥರು ರಮೇಶ್, ಪತ್ರಿಕೋದ್ಯಮ ವಿಭಾಗದ ಶಂಕರಪ್ಪ (ಶಿರಾ), ದೇವರಾಜು ಸಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆ.26ಕ್ಕೆ ತಿಗಳ‌ರ ಜಾಗೃತಿ ಸಮಾವೇಶ : ಸುಬ್ಬಣ್ಣ

Publicstory/prajayoga

ತುಮಕೂರು: ರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 26 ರಂದು ತುಮಕೂರಿನ ಗಾಜಿನಮನೆಯಲ್ಲಿ ಗುರುವಂದನೆ ಹಾಗೂ ತಿಗಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ತಿಗಳ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ಬಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 4 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ಓರ್ವ ಶಾಸಕ, ಸಂಸದನಿಲ್ಲ. ನಮ್ಮನ್ನು ಕೇವಲ ಓಟ್‌ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿಗಣಿಸಿವೆ. 2 ಎ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಆದರೆ ತಿಗಳ ಅಭಿವೃದ್ಧಿ ನಿಗಮ ಇದುವರೆಗೂ ಸ್ಥಾಪನೆ ಮಾಡಿಲ್ಲ. ಅಲ್ಲದೆ 2 ಎ ನಲ್ಲಿರುವ ಸಮುದಾಯವನ್ನು ಪ್ರವರ್ಗ 1ರ ಜಾತಿ ಪಟ್ಟಿಗೆ ಸೇರಿಸಲು ಹಲವಾರು ಹೋರಾಟ ಮಾಡಿದರೂ ಈ ಸರಕಾರ ಕಿವಿಗೋಡುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 26 ರಂದು ರಾಜ್ಯದ ಎಲ್ಲಾ ತಿಗಳನ್ನು ಒಗ್ಗೂಡಿಸಿ, ಸಾಮಾವೇಶ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು, ನಗರ ಸಭಾ ಮಾಜಿ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಹೆಚ್.ಕೃಷ್ಣಪ್ಪ ಅರ್ಜುನ್, ಟಿ.ವಿ.ರಾಮಣ್ಣ,ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆ.26 ರಂದು ಆರ್‌ಪಿಐ ಕಾರ್ಯಕರ್ತರ ಬೃಹತ್ ಸಮಾವೇಶ

Publicstory/prajayoga

ತುಮಕೂರು: ಮುಂಬರುವ ಬಿಬಿಎಂಪಿ , ಜಿಪಂ, ತಾಪಂ ಹಾಗೂ 2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಆಗಸ್ಟ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ  ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆರ್‌ಪಿಐ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದು ಸುಮಾರು 1ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ತುಮಕೂರು ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.

ಆಗಸ್ಟ್ 26ರ ಶುಕ್ರವಾರ ನಡೆಯುವ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾದ ರಾಜ್ಯ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮದಾಸ್ ಆಠಾವಳೆ ಉದ್ಘಾಟಿಸುವರು. ಇವರ ಜೊತೆಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಚಿಕ್ಕಬಳ್ಳಾಪುರದ ಜಿ.ಸಿ.ವೆಂಕಟರಾಮ್ ಮತ್ತು  ಎಂ.ಮುನಿಸ್ವಾಮಿ ಅವರುಗಳು ಹಾಗೂ ಆರ್ಪಿಐನ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಅಧ್ಯಕ್ಷರುಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಆರ್ಪಿಐ ರಾಜ್ಯದಲ್ಲಿ ರಾಜಕೀಯ ಖಾತೆ ತೆರೆಯುವ ಉದ್ದೇಶ ಹೊಂದಿದ್ದು, ಇದರ ಭಾಗವಾಗಿ ಈ ಸಮಾವೇಶ ಮಹತ್ವ ಪಡೆದುಕೊಂಡಿದೆ ಎಂದು ಡಾ.ಎಂ.ವೆಂಕಟಸ್ವಾಮಿ ತಿಳಿಸ್ಲಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಯಿಪ್ರಕಾಶ್, ಹಾಸನ ಜಿಲ್ಲಾಧ್ಯಕ್ಷ ಸತೀಶ್, ತುಮಕೂರು ಜಿಲ್ಲಾಧ್ಯಕ್ಷ ನಟರಾಜು, ರಾಜಣ್ಣ ಯಲದಬಾಗಿ, ರಾಮಯ್ಯ ಎಂ ಮತ್ತಿತರರು ಉಪಸ್ಥಿತರಿದ್ದರು.

ರಾಜಾಸ್ಥಾನದಲ್ಲಿ ದಲಿತ ಬಾಲಕನ ಕೊಲೆ ; ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು

Publicstory/prajayoga

ತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕನು ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ ಕೊಂದಿರುವ ಘಟನೆಯನ್ನು ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್ ಹಾಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ ಮಾತನಾಡಿ, ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ, ಅಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು, ಸ್ಥಳೀಯ ಕಾರ್ಪೋರೇಟ್ಗಳು ಸಹ ರಾಜೀನಾಮೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರಾಗಲಿ ಕನಿಷ್ಠ ಖಂಡನೀಯ ಹೇಳಿಕೆ ನೀಡಿಲ್ಲ. ತಮ್ಮದೇ ಪಕ್ಷವಿರುವ ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮನುಷ್ಯನ ಅಸ್ಪೃಷ್ಯತೆ ಎಷ್ಟು ಅಡಗಿದೆ ಎಂಬುದು ತೋರಿಸುತ್ತದೆ. ಈಗಲಾದರೂ ಸದರಿ ಘಟನೆ ಕುರಿತು ಧ್ವನಿ ಎತ್ತಬೇಕಿದೆ.ಅಂಬೇಡ್ಕರ್ ಹಿಂದೆ ಚೌದರ್ ಕೆರೆಯ ನೀರು ಮುಟ್ಟಿದಾಗ ಅವರ ತಲೆಯನ್ನು ಒಡೆಯಲಾಗಿತ್ತು. ಇಂದಿಗೂ ಅದು ಮುಂದುವರೆದಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್,
ಪದಾಧಿಕಾರಿಗಳಾದ ನವೀನ್, ವರದರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಪ್ರತಾಪ್,ಮುಖಂಡರಾದ ಕೊಪ್ಪಲ್ ನಾಗರಾಜು, ಶಂಕರ್, ಅಂಜನಮೂರ್ತಿ,ಮನೋಹರಗೌಡ, ಶಬ್ಬೀರ್, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ರಾಜಣ್ಣ,ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ರಕ್ಷಿತ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.