Sunday, March 15, 2026
Google search engine
Home Blog Page 99

ನಿಧಿಗಾಗಿ ಆಂಜನೇಯನ ದೇವಸ್ಥಾನ ಅಗೆದ ಖದೀಮರು

0

Publicstory


ಪಾವಗಡ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೆರೆ ಬಳಿಯ ಆಂಜನೇಯಸ್ವಾಮಿ ದೇಗುಲದಲ್ಲಿ ಭಾನುವಾರ ಮಧ್ಯರಾತ್ರಿ ನಿಧಿಗಾಗಿ ಗುಂಡಿ ತೋಡುವಾಗ 5 ಮಂದಿಯನ್ನು ಥಳಿಸಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತರನ್ನು ಆಂಧ್ರದ ಒಂಟಿರೆಡ್ಡಿಪಲ್ಲಿ ಗ್ರಾಮದ ವೆಂಕಟರವಣಪ್ಪ, ಸಾಯಿ ಮುರುಳಿ, ಮುರುಳಿ, ನಾಗರಾಜು, ಚಿನ್ನಾರೆಡ್ಡಿ ಬಂಧಿತರು.

ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮೆಟಲ್ ಡಿಟೆಕ್ಟರ್, ಸಲಿಕೆ, ಗಡಾರಿ ಇತರೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಟಿಜನ್ ಜತೆಗೆ ನೆಟ್ ಜನ್ ಆಗಬೇಕು:ಜಿ.ಎನ್.ಮೋಹನ್

ತುಮಕೂರು: ಜನರು ಈಗ ಸಿಟಿಜನ್ ಜತೆಗೆ ನೆಟಿಜನ್ ಕೂಡ ಆಗಬೇಕಾಗಿದೆ ಎಂದು ಖ್ಯಾತ ಪತ್ರಕರ್ತ ಜಿ.ಎನ್.ಮೋಹನ್ ಹೇಳಿದರು.
ನಗರದ ಸಿದ್ದಾರ್ಥ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಲೇಖಕಿಯರ ಸಂಘ, ಅವಧಿ ಅಂತರ್ಜಾಲ ಪತ್ರಿಕೆಯು ಮಹಿಳಾ ಲೇಖಕಿಯರಿಗಾಗಿ ಆಯೋಜಿಸಿದ್ದ ಇಂಟರ್ ನೆಟ್ ಸುರಕ್ಷಿತ ಬಳಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ನೆಟ್ ಎಲ್ಲರಿಗೂ ಅಗತ್ಯ. ಆದರೆ ಸುರಕ್ಷತೆ ಕಡೆಗೆ ಹೆಚ್ಚಾಗಿ ಗಮನ ಕೊಡಬೇಕು ಎಂದರು.

ಅವಧಿ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದಾಗ ಅನೇಕರು ಹುಬ್ಬೇರಿಸಿದ್ದರು. ಹದಿನೈದು ವರ್ಷದಿಂದ ಅವಧಿ ನಡೆಯುತ್ತಿದೆ. ಮಾಧ್ಯಮ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಅಂತರ್ಜಾಲ ಪತ್ರಿಕೆ ಎಂಬ ಹೆಗ್ಗಳಿಕೆ ಪಡೆದಿದೆ ಎಂದರು.

ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಎರಡು ಇಂಡಿಯಾ ಇದೆ ಎನ್ನುತ್ತಾರೆ.‌ಒಂದು ಐಪಿಎಲ್, ಇನ್ನೊಂದು ಬಿಪಿಎಲ್ ಇಂಡಿಯಾ. ಎರಡೂ ಇಂಡಿಯಾಗಳಿಗೂ ಇಂಟರ್ ನೆಟ್ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕೋವಿಡ್ ಗೆ ಮಹಾಮಾರಿ ಹೆಮ್ಮಾರಿ ಎಂದು ಬಳಸಬೇಡಿ ಎಂದು ಕಾರ್ಯಾಗಾರ ಉದ್ಘಾಟಿಸಿದ ಶಾಂತಲಾ ಧರ್ಮರಾಜ್ ಅಭಿಪ್ರಾಯಪಟ್ಟರು.


ಅವಧಿ ಹಾಗೂ ಬಹುರೂಪಿ ಬುಕ್ ಹಬ್ ಸಂಸ್ಥಾಪಕಿ ಶ್ರೀಜಾ ವಿ.ಎನ್. , ಲೇಖಕ ಮಧು ವೈ.ಎನ್ ಅವರು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮಹತ್ವದ ವಿವರ ನೀಡಿದರು.

ಸಿದ್ಧಾರ್ಥ ಮಾಧ್ಯಮ ಅಕಾಡೆಮಿ ನಿರ್ದೇಶಕ ಬಿ.ಟಿ.ಮುದ್ದೇಶ್, ಪ್ರಾಂಶುಪಾಲ ರವಿ ಪ್ರಕಾಶ್, ಲೇಖಕಿಯರ ಸಂಘದ ಮಲ್ಲಿಕಾ ಬಸವರಾಜು, ಡಾ. ಅರುಂಧತಿ ಇತರರು ಇದ್ದರು.
ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್, ಲೇಖಕಿ ಇಂದಿರಾ ಸಿ.ಎ. , ರಾಣಿ ಚಂದ್ರಶೇಖರ್, ಮರಿಯಂ, ಡಾ. ಪ್ರಿಯಾಂಕ ಇತರರು ಇದ್ದರು.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ಇನ್ನಿಲ್ಲ

ಕೊರಟಗೆರೆ: ಇಲ್ಲಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಸನ್ನ ಕುಮಾರ್ ಶನಿವಾರ ನಿಧನರಾಗಿದ್ದಾರೆ.

ದೇವಸ್ಥಾನದ ನಿರ್ಮಾತೃರಾದ ಕಮಲಮ್ಮನವರಾದ ಏಕೈಕ ಪುತ್ರರಾಗಿದ್ದ ಇವರು ತಾಯಿಯ ನಿಧನಾ ನಂತರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿಸ್ಥೆ ಪಡೆಯುತ್ತಿದ್ದರು.

ಮೃತ ಪತ್ರಿಕಾ ವಿತರಕ ಹರೀಶ್ ಕುಟುಂಬಕ್ಕೆ ಜಿಲ್ಲಾ ವಿತರಕರ ಸಂಘದಿಂದ ಆರ್ಥಿಕ ನೆರವು

Publicstory


ಗುಬ್ಬಿ: ಮನೆ ಬಾಗಿಲಿಗೆ ಪತ್ರಿಕೆ ಹಂಚುವ ವಿತರಕರ ನೋವು ನಲಿವಿಗೆ ಸ್ಪಂದಿಸುವ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಈಚೆಗೆ ಮೃತ ಪಟ್ಟ ಗುಬ್ಬಿಯ ಹರೀಶ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.

ಅನಾರೋಗ್ಯದಿಂದ ಮೃತ ಪಟ್ಟ ಹರೀಶ್ ಕಳೆದ ಆರು ವರ್ಷದಿಂದ ಪತ್ರಿಕೆ ಹಂಚಿಕೊಂಡು ತನ್ನ ವಿಧ್ಯಾಭ್ಯಾಸ ನಡೆಸಿ ಉದ್ಯೋಗವನ್ನು ಮಾಡಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಇಂತಹ ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆ ಆರ್ಥಿಕ ನೆರವು ಮಾಡುವ ಕಾಯಕ ಸಂಘ ಮಾಡುತ್ತಿದೆ ಎಂದು ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ಚಲುವರಾಜು ತಿಳಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ್ ಮಾತನಾಡಿ ವಿತರಕರ ಸಂಘ ಮೊದಲು ಜಿಲ್ಲಾ ಮಟ್ಟದಲ್ಲಿ ಕೆಲಸ ಆರಂಭಿಸಿ ನಂತರ ರಾಜ್ಯ ವ್ಯಾಪಿ ಬೆಳೆಸಲು 22 ಜಿಲ್ಲೆಯಲ್ಲಿ ಸಂಚಾರ ಮಾಡಿದ್ದೇವೆ. ಒಳ್ಳೆಯ ಸ್ಪಂದನೆ ಬಂದ ಕಾರಣ ನಮ್ಮ ರಾಜ್ಯಾಧ್ಯಕ್ಷ ಶಂಭುಲಿಂಗಯ್ಯ ಮಾರ್ಗದರ್ಶನದಲ್ಲಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಂಡಿಸುತ್ತೇವೆ. ಪತ್ರಿಕಾ ವಿತರಕರ ಸಂಕಷ್ಟ ಆಲಿಸುವವರಿಲ್ಲದೆ ಅಸಂಘಟಿತರು ಎನ್ನುವ ಬಗ್ಗೆ ಅರಿತು ಈ ಸಂಘ ಚುರುಕಿನ ಕೆಲಸ ನಡೆದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ರಂಗಮುದ್ದಯ್ಯ, ನಿರ್ದೇಶಕ ಭೂತೇಶ್, ಖಜಾಂಚಿ ಆನಂದ್ ಇತರರು ಇದ್ದರು.

ಮಹಿಳಾ ಬರಹಗಳಿಗೆ ವಿಮರ್ಶೆಯ ನ್ಯಾಯ ಸಿಕ್ಕಿಲ್ಲ

‘ಬಹುರೂಪಿ’ ಕೃತಿ ಬಿಡುಗಡೆಯಲ್ಲಿ ಜೋಗಿ ಅಭಿಪ್ರಾಯ

ಬೆಂಗಳೂರು, ಜುಲೈ 17- ಮಹಿಳಾ ಬರಹಗಾರರನ್ನು ಸಮಕಾಲೀನ ವಿಮರ್ಶೆ ಕಡೆಗಣಿಸಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಮಧುರಾಣಿ ಎಚ್ ಎಸ್ ಅವರ ಕವನ ಸಂಕಲನ ‘ನೀಲಿ ಚುಕ್ಕಿಯ ನೆರಳು’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅವರು ಮಧುರಾಣಿ ಎಚ್ ಎಸ್ ಅವರ ‘ನೀಲಿ ಚುಕ್ಕಿಯ ನೆರಳು’ ಕೃತಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಬಹುರೂಪಿಯ ಜಿ ಎನ್ ಮೋಹನ್, ವಿಮರ್ಶಕಿ ಹೇಮಾ ಎಸ್ ಇದ್ದಾರೆ

ನಾವೆಲ್ಲರೂ ಓದುವ ಕಾಲಕ್ಕೆ ಮಹಿಳಾ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಬರೆಯುತ್ತಿದ್ದರು. ಆದರೆ ಕನ್ನಡ ವಿಮರ್ಶೆ ಅವರನ್ನು ಚರ್ಚಿಸುತ್ತಲೇ ಇರಲಿಲ್ಲ. ಈಗಲೂ ಸಹಾ ಮಹಿಳಾ ಬರಹಗಾರರ ಸಂಖ್ಯೆ ವಿಫುಲವಾಗಿದೆ. ಆದರೂ ವಿಮರ್ಶೆ ಅವರ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ ಎಂದರು. ಮಧುರಾಣಿ ಅವರ ಕವಿತೆಗಳಲ್ಲಿನ ಶಕ್ತಿ ಅಗಾಧವಾದದ್ದು ಎಂದರು.

ಕವಯತ್ರಿ, ಅನುವಾದಕಿ ಹೇಮಾ ಎಸ್ ಅವರು ಮಾತನಾಡಿ ಮಧುರಾಣಿ ಅವರ ಕವಿತೆಗಳ ಆತ್ಮವಿಶ್ವಾಸ ಬೆರಗು ಹುಟ್ಟಿಸುತ್ತದೆ. ಅವರ ಕವಿತೆಗಳುದ್ದಕ್ಕೂ ಅದು ಹರಡಿಕೊಂಡಿದೆ. ಅವರ ಕವಿತೆಗಳ ದನಿಯ ಪ್ರಭಾವ ಸಾಕಷ್ಟು ಕಾಲ ಕನ್ನಡ ಕವಿತೆಗಳ ಮೇಲಿರುತ್ತದೆ ಎಂದರು..

ಬರಹಗಾರ ಜಿ ಎನ್ ಮೋಹನ್ ಮಾತನಾಡಿ ಮಧುರಾಣಿ ಅವರ ಕವಿತೆಗಳು ದಿಟ್ಟ ದನಿಯನ್ನು ಹೊಂದಿವೆ. ಅವರ ಕವಿತೆಗಳಲ್ಲಿನ ಹೊಸತನ, ನುಡಿಗಟ್ಟುಗಳು ಬೆರಗು ಹುಟ್ಟಿಸುತ್ತವೆ. ಮಹಿಳಾ ಕಾವ್ಯ ಸಾಗುತ್ತಿರುವ ದಾರಿಗೆ ಈ ಕವನ ಸಂಕಲನ ಕನ್ನಡಿ ಹಿಡಿಯುತ್ತದೆ ಎಂದರು.

ಕೃತಿ: ನೀಲಿ ಚುಕ್ಕಿಯ ನೆರಳು
ಕವಿ: ಮಧುರಾಣಿ ಎಚ್ ಎಸ್
ಪ್ರಕಾಶನ: ಬಹುರೂಪಿ
ಬೆಲೆ: ರೂ 120

.

ಸಮಾಜದ ತಾಯ್ತನ ಕಾಪಾಡೋಣ: ಡಾ ವಿಜಯಾ

ಬಹುರೂಪಿಯ ಕೃತಿ ಬಿಡುಗಡೆಯಲ್ಲಿ ಅಮ್ಮನ ನೆನಪು

ಬೆಂಗಳೂರು, ಜುಲೈ 3- ‘ಪ್ರತಿಯೊಬ್ಬರೊಳಗೂ ತಾಯ್ತನವಿದ್ದರೆ ಅದು ಸಮಾಜವನ್ನು ಆರೋಗ್ಯವಾಗಿರಿಸಬಲ್ಲದು’ ಎಂದು ಖ್ಯಾತ ವಿಚಾರವಾದಿ ಡಾ ವಿಜಯಾ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ’ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ತಾಯ್ತನ ಎನ್ನುವುದು ಕಳೆದುಹೋಗುತ್ತಿರುವ ಕಾರಣಕ್ಕಾಗಿಯೇ ಸಮಾಜದಲ್ಲಿ ಬಿಕ್ಕಟ್ಟುಗಳು ಹೆಚ್ಚುತ್ತಿವೆ. ಒಂದು ತಾಯ್ತನದ ಗುಣ ಏನು ಎನ್ನುವುದನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಒಬ್ಬ ತಾಯಿ ತನ್ನನ್ನು ಕಷ್ಟಕ್ಕೆ ಒಡ್ಡಿಕೊಂಡೇ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡಲು ಮುಖ್ಯ ಕಾರಣಳಾಗುತ್ತಾಳೆ. ಅಂತಹ ತಾಯ್ತನವನ್ನು ಕಾಪಾಡೋಣ ಎಂದರು.

ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ಮಾತನಾಡಿ ರಂಗಭೂಮಿ ಎಲ್ಲರ ಹೃದಯಕ್ಕೆ ಹತ್ತಿರವಾಗುವುದೇ ಅದರ ತಾಯ್ತನದ ಗುಣದಿಂದ. ಹಾಗಾಗಿ ರಂಗಭೂಮಿ ಎಲ್ಲರಿಗೂ ಅತ್ಯಂತ ಇಷ್ಟವಾಗುತ್ತದೆ ಎಂದರು.

ಹಿರಿಯ ಪತ್ರಕರ್ತ, ಲೇಖಕ ಎ ಆರ್ ಮಣಿಕಾಂತ್ ಅವರು ಮಾತನಾಡಿ ನನ್ನ ತಾಯಿಯ ಅನುಭವ ಲೋಕವೇ ನನ್ನೊಳಗಿನ ಭಾವಕೋಶ ಹಾಗಾಗಿಯೇ ಬರವಣಿಗೆಯಲ್ಲಿ ನಾನು ಭಾವುಕನಾಗಲು ಸಾಧ್ಯವಾಯಿತು. ನನ್ನವ್ವನ ಬಯೋಗ್ರಫಿ ಎಲ್ಲರ ಅಮ್ಮನ ಬಯೋಗ್ರಾಫಿಯಾಗಿದೆ ಎಂದರು.

ಹಿರಿಯ ಪತ್ರಕರ್ತ, ಲೇಖಕ ಜಿ ಎನ್ ಮೋಹನ್ ಅವರು ಮಾತನಾಡಿ ತಾಯಂದಿರನ್ನು ಗೌರವಿಸುವ, ಪ್ರೀತಿಸುವ ಎಲ್ಲಾ ಮನಸ್ಸುಗಳಿಗಾಗಿ ಪ್ರತೀ ವರ್ಷ ತಾಯಿಯನ್ನು ಕುರಿತ ಒಂದು ಕೃತಿ ಬಹುರೂಪಿ ಪ್ರಕಟಿಸುತ್ತದೆ ಎಂದು ಘೋಷಿಸಿದರು. ಯಾವುದೇ ತಾಯಿ ಒಂದು ಬೆಲ್ಲ ಕಡೆದ ಕಲ್ಲಿನಂತೆ. ನೋವಿನಿಂದ ಗಟ್ಟಿಯಾದರೂ ಎಲ್ಲರಿಗೂ ಸಿಹಿ ಹಂಚುವಾಕೆ ಎಂದು ಬಣ್ಣಿಸಿದರು. ‘ಬಹುರೂಪಿ’ಯ ಸಂಸ್ಥಾಪಕಿ ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

ಬಡವರ ಬಳಕೆ ವಸ್ತುಗೆ ಬರೆ ಎಳೆದ ಬಿಜೆಪಿ:ಎಎಪಿ

Publicstory


ತುಮಕೂರು: ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಏರಿಕೆ ಮಾಡಿ ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಹುನ್ನಾರ ದೇಶದಲ್ಲಿ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಹೇಳಿದೆ.
ಬಡವರೇ ಹೆಚ್ಚಾಗಿ ಬಳಸುವ ಮಂಡಕ್ಕಿ,ಮೊಸರು, ಮಜ್ಜಿಗೆ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಏರಿಕೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಎಲ್.ವಿಶ್ವನಾಥ್ ತಿಳಿಸಿದ್ದಾರೆ.
ಇದೇ ವೇಳೆ ರೈತ ಮತ್ತು ಶಿಕ್ಷಣ ವಿರೋಧಿ ಧೋರಣೆ ಅನುಸರಿಸುವ ಬಿಜೆಪಿ ಸರ್ಕಾರ, ರೈತರು ಬಳಸುವ ಸಬ್ ಮರ್ಸಿಬಲ್ ಪಂಪು-ಮೋಟಾರುಗಳ ಮೇಲೆ ಇದ್ದ ಜಿಎಸ್ಟಿ ಯನ್ನು ಶೇ.12ರಿಂದ18ಕ್ಕೆ ಏರಿಕೆ ಮಾಡಿದೆ. ಮಕ್ಕಳು ಶಿಕ್ಷಣಕ್ಕಾಗಿ ಬಳಸುವ ಭೂಪಟಗಳು, ಗ್ಲೋಬುಗಳ ಮೇಲೆ ಈವರೆಗೆ ಜಿಎಸ್ಟಿ ಇರಲಿಲ್ಲ. ಇದೀಗ ಅವುಗಳಿಗೂ ಶೇ. 12ರಷ್ಟು ಜಿಎಸ್ಟಿ ವಿಧಿಸಿದೆ ಎಂದು ದೂರಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಏರಿಕೆ ಆಗಿರುವುದಕ್ಕೆ ಬಿಜೆಪಿಯ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿದರೆ ಆ ಪಕ್ಷಕ್ಕೆ ಮುಂದಿನ ಚುನಾವಣೆಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಏರಿಕೆಯಾಗಿರುವ ಜಿಎಸ್ಟಿ ವಾಪಸ್ ಪಡೆಯದಿದ್ದರೆ ಎಎಪಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಾ. ವಿಶ್ವನಾಥ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತರ್ಜಾಲ ಸುರಕ್ಷಿತ ಬಳಕೆ ಹೇಗೆ ?

ಅಂತರ್ಜಾಲ ಸುರಕ್ಷಿತ ಬಳಕೆ ಕುರಿತು ಮಹಿಳೆಯರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಲೇಖಕಿಯರ ಸಂಘ, ತುಮಕೂರು ಜಿಲ್ಲಾ ಶಾಖೆ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಎಸ್.ಎಸ್ .ಐ.ಟಿ, ಕ್ಯಾಂಪಸ್, ಬದುಕೂರು ಮತ್ತು ಅವಧಿ ಅಂತರ್ಜಾಲ ಪತ್ರಿಕೆ ಬೆಂಗಳೂರು ಇವರ ಸಹಯೋಗದಲ್ಲಿ * ಅಂತರ್ಜಾಲದ ಸುರಕ್ಷಿತ ಬಳಕೆ * ಮಹಿಳೆಯಾಗಿ ಒಂದು ದಿನವ ರ್ಯಾಗಾರವನ್ನು ದಿನಾಂಕ 23/07/2022 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಿಜಿ, ಸೆಮಿನಾರ್, ಹಾಲ್, ಎಸ್.ಎಸ್.ಐ.ಟಿ. ಕ್ಯಾಂಪಸ್, ತುಮಕೂರು ಇಲ್ಲಿ ಹಮ್ಮಿಕೊಂಡಿದ್ದಾರೆ.

ಸದರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು .ಎಂ.ಎಸ್. ರವಿಪ್ರಕಾರ, ಪ್ರಾಂಶುಪಾಲರು, ಎಸ್.ಎಸ್.ಐ.ಟಿ, ತುಮಕೂರು ರವರು ವಹಿಸಲಿದ್ದು, ಶಾಂತಲಾ ಧರ್ಮರಾಜ್, ಅಧ್ಯಕ್ಷರು, ಕರ್ನಾಟಕ ಪತ್ರಕರ್ತೆಯರ ಸಂಘ ಬೆಂಗಳೂರು ಮತ್ತು ಸಂಪಾದಕರು, ಕಸ್ತೂರಿಮಾಸ ಪತ್ರಿಕೆ ಅವರು ಉದ್ಘಾಟನೆಯನ್ನು ಮಾಡಲಿದ್ದಾರೆ, ‘ಅವಧಿ’ ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಜಿ ಎನ್‌ ಮೋಹನ್‌ರವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀಜಾ ವಿ. ಎನ್, ಸಂಸ್ಥಾಪಕರು ಅವಧಿ ಹಾಗೂ ಬಹುರೂಪಿ ರವರು ಅಂತರ್ಜಾಲದ ಬಳಕೆಯ ಸಾಧ್ಯತೆ ಸವಾಲು ಮತ್ತು ಸುರಕ್ಷತೆ ಬಗ್ಗೆ ತಿಳಿಸಿಕೊಡಲಿದ್ದಾರೆ. ‘ಡಾರ್ಕ್ ವೆಬ್’ ಪುಸ್ತಕದ ಖ್ಯಾತಿಯ ಲೇಖಕ ಮಧು ವೈಎನ್ ರವರು ಅಂತರ್ಜಾಲದಲ್ಲಿ ಸುರಕ್ಷಿತವಾಗಿ ಹಣಕಾಸಿನ ವ್ಯವಹಾರ ಮತ್ತು ವ್ಯಾಪಾರ ನಡೆಸುವ ಬಗ್ಗೆ ತಿಳಿಸಿಕೊಡಲಿದ್ದಾರೆ. ಆ ನಂತರ ಸಂವಾದ ಇರುತ್ತದೆ.

ದಯಮಾಡಿ ಸಂಘದ ಸದಸ್ಯರು ಮತ್ತು ಆಸಕ್ತ ಮಹಿಳೆಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಹಾಗೂ ನೋಂದಣಿಗಾಗಿ ಈ ಕೆಳಕಂಡ ಮೊಬೈಲ್ ಸಂಬರ್‌ಗಳು ಸಂಪರ್ಕಿಸುವಂತೆ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಕೋರಿರುತ್ತಾರೆ.

ಸಂಪರ್ಕ ಸಂಖ್ಯೆ 9448971779

9845999625

ಮುಖ್ಯಶಿಕ್ಷಕಿಗೆ ಚಪ್ಪಲಿ ತೋರಿಸಿದ ಶಿಕ್ಷಕ ಅಮಾನತು

Publicstory


ಮಧುಗಿರಿ: ಮದ್ಯಪಾನ ಮಾಡಿ ಮುಖ್ಯಶಿಕ್ಷಕಿಗೆ ಚಪ್ಪಲಿ ತೋರಿಸಿ ಅಸಭ್ಯವಾಗಿ ವರ್ತಿಸಿದ ತಾಲ್ಲೂಕಿನ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಫಣೀಂದ್ರನಾಥ್ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ರೇವಣ್ಣ ಸಿದ್ದಪ್ಪ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಮಾನತುಗೊಂಡ ಶಿಕ್ಷಕ ಈ ಹಿಂದೆ ಗೌರಮ್ಮ ಎಂಬುವವರು ಮುಖ್ಯಶಿಕ್ಷಕರಾಗಿ ಪ್ರಭಾರ ವಹಿಸಿಕೊಳ್ಳುವಂತೆ ಬಿ.ಇ.ಒ ಆದೇಶಿಸಿದ್ದರು. ಆಗ ಮುಖ್ಯ ಶಿಕ್ಷಕರ ಪ್ರಭಾರ ಹೊಂದಿದ್ದ ಫಣೀಂದ್ರನಾಥ್ ತಮ್ಮ ಸ್ಥಾನವನ್ನು ಬಿಟ್ಟುಕೊಡದೆ ಬಿ.ಇ.ಒ ಆದೇಶವನ್ನು ದಿಕ್ಕರಿಸಿ ಮನ ಬಂದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ನಿಂದಿಸಿದ್ದ, ಈತನ ವರ್ತನೆಯ ಬಗ್ಗೆ ಶಾಲೆಯ ಶಿಕ್ಷಕರು ನಮಗೆ ಭಯದ ವಾತಾವರಣವಿದ್ದು ರಕ್ಷಣೆ ನೀಡುವಂತೆ ಲಿಖಿತವಾಗಿ ದೂರು ನೀಡಿದ್ದರು.

ಶಾಲೆಗೆ ಸರಿಯಾದ ಸಮಯಕ್ಕೆ ಬಾರದೆ ಹಾಜರಾತಿ ಪುಸ್ತಕವನ್ನು ಕಸಿದುಕೊಂಡು ಸಹಿ ಹಾಕುವ ಪರಿಪಾಠ ರೂಢಿಸಿಕೊಂಡಿದ್ದನು. ಮಕ್ಕಳಿಗೆ ಕಲಿಕೆ ಮಾಡಲು ಗೊಂದಿಹಳ್ಳಿ ಗ್ರಾಮ ಭೇಟಿ, ಮನೆ ಮನೆ ಎಂದು ಚಲನವಲನ ಪುಸ್ತಕದಲ್ಲಿ ನಮೂದಿಸಿ ನಾಪತ್ತೆಯಾಗಿದ್ದ.

ವಿಜ್ಞಾನ ಶಿಕ್ಷಕನಾಗಿದ್ದ ಫಣೀಂದ್ರನಾಥ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಬೋಧಿಸಲು ನಿರಾಕರಿಸುತ್ತಿದ್ದ.
ಮುಖ್ಯಶಿಕ್ಷಕರಿಗೆ ಜಾತಿ ನಿಂದನೆ ಮಾಡಿ ಏಕ ವಚನದಲ್ಲಿ ಮಾತನಾಡಿ ಅನುಚಿತವಾಗಿ ವರ್ತಿಸುತ್ತಿದ್ದುದರ ಬಗ್ಗೆ ಬಿ.ಇ.ಒ ಗೆ ಇಡೀ ಶಾಲೆಯ ಶಿಕ್ಷಕರಲ್ಲದೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರುಗಳು , ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರೂ ಸಹ ದೂರು ನೀಡಿದ್ದರು. ಸಾಂದರ್ಭಿಕ ರಜೆ ಎಂದು ಹಾಜರಾತಿ ಪುಸ್ತಕದಲ್ಲಿ ಬರೆದಿದ್ದರೂ ಕೂಡ ದೌರ್ಜನ್ಯವೆಸಗಿ ಸಹಿ ಮಾಡಿದ್ದಾರೆ. ಪ್ರತಿದಿನ ತಡವಾಗಿ ಶಾಲೆಗೆ ಬರುವುದು. ಸಹಿಮಾಡಿ ಮನೆಗೆ ಹೋಗುವುದನ್ನೇ ಪ್ರತಿದಿನದ ಕಾಯಕ ಮಾಡಿಕೊಂಡಿದ್ದರು. ‌ಇದರಿಂದಾಗಿ ಶಾಲೆಯ ವಾತಾವರಣ ಶೈಕ್ಷಣಿಕ ವಾಗಿ ಹಾಳಾಗಿರುತ್ತದೆ. ಈತನ ವರ್ತನೆಯಿಂದ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪರಿಸ್ಥಿತಿ ತಲುಪಿರುತ್ತದೆ ಎಂದು ಇಲಾಖಾಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಎಲ್ಲಾ ಆರೋಪಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ತ್ರಿಸದಸ್ಯ ತಂಡದೊಂದಿಗೆ ಶಾಲೆಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದು ಮೇಲ್ಕಂಡ ಆರೋಪಗಳ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ.

ಗುರು

1

ಬರೇ ಪುಸ್ತಕವನ್ನು
ಮಸ್ತಕಕ್ಕೆ
ತುಂಬುವುದಲ್ಲಾ….

ತನ್ನ ಅನುಭವವೆಂಬ
ಮೂಸೆಯನ್ನು
ಹೊರ ಬಿಡುವವರು…

ವಿಷಯ ಮಾತ್ರವಲ್ಲದೆ
ಜೀವನ ದೃಷ್ಠಿ
ತೋರಿಸುವವರು…

ಮುಂದಿನ ದಾರಿ
ನಿಚ್ಚಳವಾಗಿಸಿ
ಹಚ್ಚಡ ಹೊದಿಸಿದವರು…

ದುರ್ಗಮ ಹಾದಿಯ
ಸುಗಮಗೊಳಿಸಿ
ಹೊಸದಾಗಿಸಿದವರು…

ಅದೇ ವಿಷಯಕ್ಕೆ
ಹೊಸ ಹೊಳಹು
ಕೊಟ್ಟವರು…

ವಿಷಯ
ಹೊಟ್ಟೆಪಾಡಿಗಿಟ್ಟು
ಭವ ಕಳಚಿದವರು…

ಅನಂತ ಏಕಾಂತದಲ್ಲಿ
ನೆನಪಿಗೆ ಬಂದು
ಎದೆ ತುಂಬಿದವರು…

ಶಿಷ್ಯ ಕೋಟಿ
ಹೊಗಳಿದಾಗ
ಕಣ್ಣಲ್ಲಿ ನೀರಿಳಿಸಿದವರು…

ಆ ದೇವನನ್ನೆ
ಮರೆಸಿ
ಗುರು ದೇವರಾದವರು…


ರಜನಿ


ಗುರು ಪೂರ್ಣಿಮೆ ಯಂದು ಅವರವರಿಗೆ ಅವರ
ಗುರು ನೆನಪಿಗೆ ಬಂದು ಎದೆ ತುಂಬಿ ಬರುತ್ತದೆ.
ಗಂಟಲು ಗದ್ಗದವಾಗುತ್ತದೆ. ಗುರು ಸಿಗದವರು ನಿಜವಾಗಲೂ ಅದೃಷ್ಟ ಹೀನರು. ಬರೇ ಹೊಟ್ಟೆ ಪಾಡು
ತೋರಿಸುವರು ಗುರು ಅಲ್ಲಾ. ಬೇರೆ ಆಯಾಮಕ್ಕೆ
ಕರೆದೊಯ್ಯಬೇಕು. ನನ್ನ ಗುರು ಎನ್ನಲು ಹೃದಯ ತಟ್ಟಿರಬೇಕು. ನನ್ನ ಪಟ್ಟ ಶಿಷ್ಯ ಅನ್ನಲು ಪುಣ್ಯ ಮಾಡಿರಬೇಕು.