Thursday, May 7, 2026
Google search engine
Home Blog Page 110

ಮದುವೆ ಸಿದ್ಧತೆಯಲ್ಲಿದ್ದ ಹುಡುಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Publicstory


Pavagada: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೊದಲ ಬಿಕಾಂ ಓದುತ್ತಿದ್ದ ತೇಜ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಪಾವಗಡ ತಾಲೂಕಿನ ಪಲ್ಲವಳ್ಳಿ ಗ್ರಾಮದ ಇಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ.

ಪಾವಗಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ತೇಜಾಗೆ ಇದೇ 25 ರಂದು ಮದುವೆ ನಿಶ್ಚಯವಾಗಿತ್ತು.

ಅಪ್ಪ ಅಮ್ಮ ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದಾಗ ಈಕೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡುನೋಡುತ್ತಲೇ 2 ಲಕ್ಷ ಮೌಲ್ಯದ ಹಸುಗಳ ಸಾವು

0

ಪಬ್ಲಿಕ್ ಸ್ಟೋರಿ


ಗುಬ್ಬಿ: ಪಟ್ಟಣದಲ್ಲಿ 2ಲಕ್ಷ ಮೌಲ್ಯದ ವಸ್ತುಗಳು ನೋಡನೋಡುತ್ತಲೇ ಸಾವಿಗೀಡಾಗಿವೆ.

ಗಟ್ಟಿ ಲೇಔಟ್ ನಲ್ಲಿ ಘಟನೆ ನಡೆದಿದ್ದು ಹಸುಗಳು ರೈತ ಶಿವಣ್ಣ ಎಂಬುವರಿಗೆ ಸೇರಿದ್ದಾಗಿದೆ.

ಶಿವಣ್ಣ ಅವರು ನೋಡುನೋಡುತ್ತಲೇ ಹಳೆಯ ವಿದ್ಯುತ್ ತಂತಿ ಹಸುಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಹಸುಗಳು ಸಾವಿಗೀಡಾಗಿವೆ.

ವಿದ್ಯುತ್ ತಂತಿ ಗಮನಿಸಿ ಶಿವಣ್ಣ ಅವರು ದೂರ ಓಡಿ ಹೋಗಿದ್ದಾರೆ ಆದರೆ ಹಸುಗಳು ಮೇಲೆ ಬಿದ್ದ ಪರಿಣಾಮ 2ಹಸುಗಳು ಸ್ಥಳದಲ್ಲೇ ಹಸು ನೀಗಿವೆ.

ತಂತಿಗಳು ಹಳೆಯದಾಗಿವೆ ಎಂದು ಈಗಾಗಲೇ ಸಾಕಷ್ಟು ಸಲ ದೂರವಿಟ್ಟರು ಬೆಸ್ಕಾಂ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿದ್ದಾರೆ

ಗುಬ್ಬಿಯಲ್ಲಿ ರಾತ್ರೋ ರಾತ್ರಿ ಹೊತ್ತಿ ಉರಿದ ಗೌರಮ್ಮ ಹೋಟೆಲ್

Publicstory


ಗುಬ್ಬಿ; ಇಲ್ಲಿನ ಹೋಟೆಲೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಇಡೀ ಹೋಟೆಲ್ ಭಸ್ಮವಾಗಿದೆ.

ನಿನ್ನೆ ರಾತ್ರಿ ಮಳೆ ಗುಡುಗಿನಿಂದ ಕೂಡಿದ ವಾತಾವರಣವಿತ್ತು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ.

ಮಧ್ಯಾಹ್ನ ಅವಘಡ ಸಂಭವಿಸಿದ್ದರಿಂದ ಯಾರೂ ನೋಡಿಕೊಂಡಿರಲಿಲ್ಲ ಹೀಗಾಗಿ ತಕ್ಷಣವೇ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಹೀಗಾಗಿ ಇಡೀ ಹೋಟೆಲ್ ಬೆಂಕಿಯಿಂದ ಭಸ್ಮಗೊಂಡಿದೆ.

ಭಸ್ಮಗೊಂಡ ಹೋಟೆಲ್ ಅನ್ನು ಗೌರಮ್ಮ ಹೋಟೆಲ್ ಎಂದು ಹೇಳಲಾಗಿದೆ. ಈ ಹೋಟೆಲ್ ಮಂಜುನಾಥ ಎಂಬುವವರಿಗೆ ಸೇರಿದ್ದಾಗಿದೆ .
ಫ್ರಿಡ್ಜು ಪಾತ್ರೆ ಪಗಡೆ ಸೇರಿದಂತೆ ಹೋಟೆಲ್ ನಲ್ಲಿದ್ದ ಎಲ್ಲ ವಸ್ತುಗಳು ಭಸ್ಮ ಗೊಂಡಿವೆ ಒಟ್ಟಾರೆ ಹತ್ತು ಲಕ್ಷ ರೂ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಲುಷಿತ ನೀರು ಕುಡಿದ ಜನ: ಸಚಿವ ಮಾಧುಸ್ವಾಮಿ ಗ್ರಾಮಕ್ಕೆ ದೌಡು

Publicstory


ಚಿಕ್ಕನಾಯಕನಹಳ್ಳಿ: ಇಲ್ಲಿನ ಚಟ್ಟಸಂದ್ರದಲ್ಲಿ ಕಲುಷಿತ ನೀರು ಕುಡಿದ‌12 ಮಂದಿ ಬೇಧಿಯಿಂದ ಬಳಲಿದ್ದಾರೆ.
ಎಲ್ಲರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಗಂಭೀರ ಸ್ವರೂಪದ ಸಮಸ್ಯೆಗಳಾಗಿಲ್ಲ.

ಸರ್ಕಾರಿ ವೈದ್ಯರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು.
ಗ್ರಾಮದ ಬಾವಿ ನೀರನ್ನೆ ಕುಡಿಯುತ್ತಿದ್ದರು. ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಟಿಎಚ್ಒ ಡಾ. ನವೀನ್ ತಿಳಿಸಿದ್ದಾರೆ.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ತುಮಕೂರು; 169 ಪೊಕ್ಸೊ ಪ್ರಕರಣ ದಾಖಲು! ಏನಿದು ಪೊಕ್ಸೊ?

Public story.in


ತುಮಕೂರು; ,ಸಂಕಷ್ಟದಲ್ಲಿರುವ ಅಥವಾ ತೊಂದರೆಯಲ್ಲಿರುವ 18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.


169 ಪೊಕ್ಸೊ ಪ್ರಕರಣ ದಾಖಲು

ಏಪ್ರಿಲ್ 2022 ರವರೆಗೆ ಬಾಲನ್ಯಾಯ ಮಂಡಳಿಯಲ್ಲಿ 109 ಪ್ರಕರಣಗಳು ದಾಖಲಾಗಿದೆ. ಅವುಗಳಲ್ಲಿ 50 ಪ್ರಕರಣಗಳು ಇತ್ಯರ್ಥಗೊಂಡಿದ್ದು 59 ಪ್ರಕರಣಗಳು ಬಾಕಿ ಇರುವುದಾಗಿ ತಿಳಿಸಿದರು. ಇನ್ನೂ ಇದೇ ಅವಧಿಯಲ್ಲಿ ಪೋಕ್ಸೋ ಕಾಯಿದೆಯಡಿ 169 ಪ್ರಕರಣಗಳು ದಾಖಲಾಗಿದ್ದು ಇವುಗಳಲ್ಲಿ 28 ಪ್ರಕರಣಗಳು ಖುಲಾಸೆಗೊಂಡು 3 ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟಿಸಲಾಗಿ ಒಟ್ಟು 31 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರಲ್ಲದೇ 138 ಪ್ರಕರಣಗಳು ಬಾಕಿ ಇರುವ ಬಗ್ಗೆ ತಿಳಿಸಿದರು. ಶಿಕ್ಷೆಯಾದ 3 ಪ್ರಕರಣಗಳ ಪೈಕಿ 2 ಪ್ರಕರಣಗಳಿಗೆ ತಲಾ 6 ಲಕ್ಷ ರೂ.ಗಳನ್ನು ಮತ್ತು 1 ಪ್ರಕರಣಕ್ಕೆ 1 ಲಕ್ಷ.ರೂ.ಗಳನ್ನು ಪರಿಹಾರವನ್ನು ನೀಡಲಾಗಿದೆ ಎಂದು ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಬೀದಿ ಬದಿಯ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಯ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಾಲ್ಯ ವಿವಾಹ ಬಾಲಕಾಮರ್ಿಕ, ಚಿಂದಿ ಆಯುವ /ಭಿಕ್ಷಾಟನೆಯಲ್ಲಿ ತೊಡಗಿರುವ, ಶಾಲೆ ಬಿಟ್ಟ ಮಕ್ಕಳ, ವಸತಿ ಸೌಲಭ್ಯ ಪ್ರಕರಣಗಳ ಬಗ್ಗೆ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿದರೆ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯವಿರುವ ರಕ್ಷಣೆ ಮತ್ತು ಪೋಷಣೆಯನ್ನು ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


ಮಕ್ಕಳ ಮೇಲೂ ಅನೇಕ ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ದೌರ್ಜನ್ಯಗಳು ನಡೆಯುತ್ತವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ಹರಿಸುವ ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು, ಪೋಷಕರು, ಶಿಕ್ಷಕರು ಸೇರಿ ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕಾದ ಹಕ್ಕಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕ್ರಮಬದ್ಧವಾದ ಕಾರ್ಯವಿಧಾನಗಳನ್ನು ಅನುಸರಿಸಿ ಜಿಲ್ಲೆಯಲ್ಲಿನ ಬೀದಿ ಬದಿಯ ಮಕ್ಕಳನ್ನು ಗುರುತಿಸುವುದು ಹಾಗೂ ಪುನರ್ವಸತಿ ಕಲ್ಪಿಸುವಲ್ಲಿ ಇಲಾಖೆಗಳು ಕ್ರಮವಹಿಸಬೇಕು ಎಂದರಲ್ಲದೇ ಗುರುತಿಸಿದ ಮಕ್ಕಳ ವಿವರಗಳನ್ನು ಓಅಕಅಖ ಸಿದ್ದಪಡಿಸಿದ ಬಾಲ ಸ್ವರಾಜ್ ಪೋರ್ಟಲ್ ನಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಪೋಲಿಸ್ ,ಕಾರ್ಮಿಕ ಇಲಾಖೆ, ನಗರ ಸ್ಥಳಿಯ ಸಂಸ್ಥೆಗಳು, ಶಿಕ್ಷಣ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಆರೋಗ್ಯ ಇಲಾಖಾಧಿಕಾರಿಗಳು ಸಂಕಷ್ಟದಲ್ಲಿರುವ ಮಕ್ಕಳ ಗುರುತಿಸಿ ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕಲ್ಲದೇ ಮಕ್ಕಳೊಂದಿಗೆ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ರಕ್ಷಣೆ ಮಾಡಿ ಪುನರ್ವಸತಿ ಕಲ್ಪಿಸಬೇಕು ಎಂದ ಅವರು ಮಕ್ಕಳನ್ನು ವಸತಿಶಾಲೆ, ವಸತಿ ನಿಲಯಗಳಿಗೆ ದಾಖಲು ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡುತ್ತಾ ಸಮಗ್ರ ಮಕ್ಕಳ ರಕ್ಷಣಾ ಯೋಜನೆಗಳ ವಿಶೇಷ ಶಿಶುಪಾಲನಾ ಕಾರ್ಯಕ್ರಮದಡಿ ಎ???ವಿ ಭಾಧಿತ 278 ಮಕ್ಕಳಿಗೆ 31.99 ಲಕ್ಷ ರೂ.ಗಳ ಆಥರ್ಿಕ ನೆರವನ್ನು ನೀಡಲಾಗಿದೆ ಎಂದರಲ್ಲದೇ ಕೋವಿಡ್ ಮತ್ತು ಕೋವಿಡೇತರ ಭಾದಿತ ಮಕ್ಕಳ ವಿವರಗಳನ್ನು ಬಾಲಸ್ವರಾಜ್ ಪೋರ್ಟಲ್ ನಲ್ಲಿ ಅಳವಡಿಸಲಾಗಿದೆ ಎಂದ ಅವರು 115 ಮಕ್ಕಳನ್ನು ಪ್ರಾಯೋಜಿತ ಕಾರ್ಯಕ್ರಮದಡಿ ಆಥರ್ಿಕ ಸೌಲಭ್ಯ ನೀಡಲು ಗುರುತಿಸಲಾಗಿದೆಯಲ್ಲದೆ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಕೋವಿಡ್ ಸೋಂಕಿನಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥರಾಗಿರುವ 8 ಮಕ್ಕಳಿಗೆ ತಲಾ 3 ಲಕ್ಷಗಳಂತೆ ಆಥರ್ಿಕ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಮುಂದುವರಿದು ದತ್ತು ಕಾರ್ಯಕ್ರಮದ ಪ್ರಗತಿಯ ಮಾಹಿತಿ ನೀಡಿ ಏಪ್ರಿಲ್ 2021 ರಿಂದ ಈವರೆಗೂ ಸಂಸ್ಥೆಗೆ 37 ಮಕ್ಕಳು ದಾಖಲಾಗಿದ್ದು ಅವರಲ್ಲಿ 26 ಮಕ್ಕಳನ್ನು ದತ್ತು ನೀಡಲಾಗಿದೆ ಎಂದರಲ್ಲದೇ ಪ್ರಸ್ತುತ ದತ್ತು ಕೇಂದ್ರದಲ್ಲಿ 17 ಮಕ್ಕಳು ಇದ್ದು ಅವರಲ್ಲಿ 11 ಮಕ್ಕಳು ದತ್ತು ನೀಡಲು ಅರ್ಹರಿರುವ ಬಗ್ಗೆ ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ|| ರಾಘವೇಂದ್ರ ಶೆಟ್ಟಿಗಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ಶ್ರೀಧರ್, ಜಿಲ್ಲಾ ಆರ್ಸಿಹೆಚ್. ಅಧಿಕಾರಿ ಡಾ.ಕೇಶವ್ ರಾಜ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಮಾವು ಹಾಳಾಗುತ್ತಿದೆಯೇ? ಹೀಗೆ ಮಾಡಿ ನೋಡಿ….

Public story.in


ಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಬಿರುಸು ಮಳೆ ವರದಿಗಳು ದಾಖಲಾಗಿದ್ದು, ಕಟಾವಿಗೆ ಸಿದ್ಧವಾಗಿರುವ/ಬಲಿಯುತ್ತಿರುವ ಮಾವಿನ ಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿರುವುದು ವರದಿಯಾಗಿದ್ದು, ಮಾವು ಬೆಳೆಗಾರರು ತಮ್ಮ ಫಸಲನ್ನು ರಕ್ಷಿಸಲು ಈ ಕೆಳಕಂಡಂತೆ ಸೂಚನೆ ನೀಡಲಾಗಿದೆ.

ವಾತಾವರಣದಲ್ಲಿ ತೇವಾಂಶ ಅಧಿಕಕೊಂಡು ಹಣ್ಣಿನ ಊಜಿ ನೊಣಗಳ ಹಾವಳಿ ಸಹ ಹೆಚ್ಚುವ ಸಾಧ್ಯತೆ ಇದ್ದು, ಪ್ರಸಕ್ತ ಸನ್ನಿವೇಶದಲ್ಲಿ ಮಾವು ಬೆಳೆಗಾರರು ತಮ್ಮ ಫಸಲನ್ನು ರಕ್ಷಿಸಕೊಳ್ಳಲು ಅಗತ್ಯ ಕ್ರಮಗಳನ್ನು ಕ್ರಮಗಳನ್ನು ಅನುಸರಿಸಬಹುದಾಗಿದೆ.

ಮರದಲ್ಲಿ ಮಾವಿನ ಕಾಯಿಗಳು ಬಲಿತಿದ್ದರೆ ಅವುಗಳನ್ನು ತಡಮಾಡದೇ ಶೀಘ್ರವಾಗಿ ಕೊಯ್ಲು ಮಾಡುವುದು. ಹಣ್ಣಿನ ಊಜಿ ನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ 8-10 ಮೋಹಕ ಬಲೆಗಳನ್ನು ಕಟ್ಟುವುದು. ಹಣ್ಣಿನ ಊಜಿ ನೊಣಗಳನ್ನು ನಾಶಪಡಿಸಲು ಮರಗಳಿಗೆ ಕೀಟನಾಶಕವನ್ನು ಪ್ರತಿ ಲೀ. ನೀರಲ್ಲಿ 1.0 ಮಿ.ಲೀ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸುವುದು. 10 ದಿನಗಳ ನಂತರ (ಕೊಯ್ಲು ಮುಂಚಿತವಾಗಿ 10-15 ದಿನಗಳ ಮೊದಲು) ಈ ಕ್ರಮವನ್ನು ಪುನರಾವರ್ತಿಸುವುದು.

ತೋಟದಲ್ಲಿ ಈಗಾಗಲೇ ಹಣ್ಣಿನ ಊಜಿ ನೊಣಗಳ ಹಾವಳಿಗೆ ತುತ್ತಾಗಿ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡ ಮಾಡದೇ ಸಂಗ್ರಹಿಸಿ ಅವುಗಳನ್ನು 1 ಅಡಿ ಆಳದ ಗುಣಿ ತೋಡಿ ಹೂತು ಹಾಕಿ, ಮಣ್ಣು ಮುಚ್ಚುವುದರಿಂದ ಹಣ್ಣುಗಳ ಒಳಗೆ ಬೆಳೆಯುತ್ತಿರುವ ಊಜಿ ನೊಣದ ಕೋಶಗಳನ್ನು ನಾಶಪಡಿಸಲು ಸಾಧ್ಯವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸಲಹೆ ನೀಡಿದ್ದಾರೆ.

ಗುಬ್ಬಿಯಲ್ಲಿ ಭೀಕರ ಕೊಲೆ

ಗುಬ್ಬಿ: ತಾಲ್ಲೂಕಿನಲ್ಲಿ ಭೀಕರ ಕೊಲೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ತಾಲ್ಲೂಕಿನ ಕರಿಶೆಟ್ಟಿ ಹಟ್ಟಿ ಬಳಿ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ಚೌಕೇನಹಳ್ಳಿ ಗ್ರಾಮದ ಮೂಡ್ಲಯ್ಯ ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ತೋಟಕ್ಕೆ ಹೋಗಿ ಬರುವಾಗ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿ )ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಮವಾರ ಬೆಳಗಿನ ಜಾವ ಘಟನೆ ಬೆಳಕಿಗೆ ಬಂದಿದ್ದು ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.
ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ.

ಎಲ್ಲರಲ್ಲೂ ಇರುವ ಏನಿದು ಆರನೇ ಇಂದ್ರಿಯ ?

ಪುಲಿ ಮಂಜುನಾಥ ಜೋಗಿ


ಜಗತ್ತಿನ ಜೀವವಿರುವ
ಪ್ರತಿ ಪ್ರಾಣಿ,ಪಕ್ಷಿ,
ಕ್ರಿಮಿ,ಕೀಟ ಮನುಷ್ಯನಿಗೂ ಆರನೇ ಇಂದ್ರಿಯ ಅಥವಾ ‘ಅಂತರಾತ್ಮ’ ಇರುತ್ತದೆಯೇ?
ಅಂತರಾತ್ಮ ಹೇಳುವುದನ್ನೇ “ಮನಸಾಕ್ಷಿ” ಎನ್ನುತ್ತಾರ?

ಈ ಅಗೋಚರ ನಿಕ್ಷಿಪ್ತಶಕ್ತಿಯನ್ನ ಯಾಕೆ ಎಲ್ಲ ಗಮನಿಸುವುದಿಲ್ಲ? ಗಮನಿಸಿದರೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲವೇಕೇ?

ನೋಡಿ..,
ನಾವು ಕೆಲವು ಬಾರಿ ನಮಗೆ ತಿಳಿಯದಂತೆ ಆರನೇ ಇಂದ್ರಿಯದ ಅಂತರ್ವಾಣಿಯನ್ನ ಅನುಸರಣೆ ಮಾಡುತ್ತೇವೆ.ಹಾಗೆಯೇ ಒಂದೊಂದು ಬಾರಿ ಆತ್ಮದ ಎಚ್ಚರಿಕೆಯನ್ನು ನಿರ್ಲಕ್ಷ ಮಾಡಿ ಮುಂದಕ್ಕೆ ಹೋಗುತ್ತ ನಮ್ಮ ಸುಖ ಅಥವಾ ನೆಮ್ಮದಿಯನ್ನು ನಾವೇ ಹಾಳುಮಾಡಿ
ಕೊಳ್ಳುತ್ತೇವಲ್ಲವೇ?


ಕೆಲವೊಂದು ಸಮಯದಲ್ಲಿ ಬಂಧು, ಮಿತ್ರ ಅಥವಾ ಆತ್ಮೀಯರಲ್ಲಿ ಸಾಲ ಕೇಳಲಿಕ್ಕೆ ಅಥವಾ ನಾವು ಕೊಟ್ಟಿರುವ ಹಣ ಪಡೆಯಲಿಕ್ಕೆ ಹೋಗಬೇಕೆಂದು ಮನೆ ಹೊಸ್ತಿಲುದಾಟಿ ಹೊರ ಬಂದ ಕೂಡಲೇ ನಮಗೇನೋ ಸಂದೇಹ? ಅಥವಾ ಸಂದೇಶ? ನಮ್ಮ ಇಂದ್ರಿಯ ಅಥವಾ ಮನಸಾಕ್ಷಿಯಿಂದಲೇ ಬರುತ್ತದೆ.
ಹೋಗಬೇಕೋ? ಬೇಡವೋ?ಎಂದು ಮನಸ್ಸು ಗೊಂದಲದ ಗೂಡಾಗುತ್ತದೆ.ಇದೇ ಆರನೇ ಇಂದ್ರಿಯ ಅಥವಾ ‘ಅಂತರ್ವಾಣಿ’ ಯ ಸಂಕೇತ.

ಮನೋಸಾಕ್ಷಿ ಬೇಕು? ಬೇಡವೆಂದು ಹೇಳುತ್ತಿದ್ದರೂ ನಾವು ಲೆಕ್ಕಿಸದೇ ಮುಂದಕ್ಕೆ ನಡೆಯುತ್ತೇವೆ.ಬಂಧುಮಿತ್ರರ ಮನೆಗೆ ಹೋಗುವ ಸಮಯಕ್ಕೆ ಅವರು ಮನೆಯಲ್ಲಿರುವುದಿಲ್ಲ. ಅಥವಾ ನಾವು ಕೇಳಲಿಕ್ಕಾಗಲಾರದ ವಿಷಯವೇನೋ? ನಡೆಯುತ್ತಿರುತ್ತದೆ. ಅಥವಾ ಒಂದು ವಾರ ಕೇಳಿ ನಮ್ಮನ್ನ ವಾಪಸು ಕಳುಹಿಸುತ್ತಾರೆ.ಅಥವಾ ನಮ್ಮನ್ನೇ ಆ ಸಮಯ,ಸಂದರ್ಭದಲ್ಲಿ ಬಲಿಪಶುವಾಗಿಸಿ
ಬಿಡುತ್ತಾರೆ.

ಮನುಷ್ಯನಿಗೆ ಅಷ್ಟೇ ಅಲ್ಲ,ಪ್ರಾಣಿ,ಪಕ್ಷಿ, ಕ್ರಿಮಿ, ಕೀಟಗಳಂತೂ ಪ್ರಕೃತಿಯ ಎಲ್ಲ ಅನಿರೀಕ್ಷಿತ ಬದಲಾವಣೆ ಯ ಮುನ್ಸೂಚನೆಯನ್ನು ಅರ್ಧಗಂಟೆಗೆ ಮೊದಲೇ ಅರಿತು
ಜಾಗ್ರತೆಯಾಗಿ ಸ್ವಯಂರಕ್ಷಣೆ ಪಡೆದು ಮನುಷ್ಯರಿಗೂ ಎಚ್ಚರಿಕೆಯ ಸಂದೇಶ ಕೊಡುವುದೇ ಈ ಆರನೇ ಇಂದ್ರಿಯ ಅಥವಾ ಅಂತರ್ವಾಣಿ.

ಇಂತಹ ಆತ್ಮವು ಪ್ರತಿ ಜೀವಿಯೂ ಕಾರ್ಯ ಕಾಯಕಗಳ ಸಾಕ್ಷಿಪ್ರಜ್ಞೆ. ಮನುಷ್ಯ ಸರಿ/ತಪ್ಪು ಮಾಡುವಾಗ ಕುಟಿಲ ಮನಸ್ಸು ಎಷ್ಟೇ ಧೈರ್ಯದಿಂದ ಇದ್ದರೂ ಎದೆ ಢವ ಢವ ಎಂದು ಹೊಡೆದುಕೊಳ್ಳುವುದು, ಕೈ ನಡುಗುವುದು,ಮುಖ ಕಳೆಗುಂದುವುದು,ಮೈ ಬೆವರುವುದು, ಕಾಲುಗಳಲ್ಲಿ ನಿಶ್ಯಕ್ತಿ ಆವರಿಸುವುದು,ಮುಖದಲ್ಲಿ ಅವ್ಯಕ್ತ ನೋಟ ಪರರಿಗೆ ಗೋಚರಿಸುವುದು….,
ಹೀಗೆ ದೈಹಿಕ ಮಾನಸಿಕ ಕ್ರಿಯೆಗಳು ಭಯಗ್ರಸ್ಥ ಹಾಗೂ ಅಸ್ತವ್ಯಸ್ತವಾಗುವವು. ಈ ಎಲ್ಲಾ ಕ್ರಿಯೆಗಳ ಮೂಲಕ ಪ್ರತಿಪ್ರಾಣಿ ಪಕ್ಷಿ, ಕ್ರಿಮಿ, ಕೀಟವನ್ನು ಹಾಗೂ ಪ್ರತಿಯೊಬ್ಬ ಮನುಷ್ಯನನ್ನ ಎಚ್ಚರಿಸುತ್ತಿರುವುದೇ…, ಆತ್ಮ ಹಾಗೂ ಅಂತರಾತ್ಮ.

ಹಾಗೆಯೇ ನಾವು ಅರಿವಿದ್ದೋ,ಅಥವೊ ಅರಿವಿಲ್ಲದೋ? ಉದ್ದೇಶಪೂರ್ವಕವೊ?ಅಥವಾ ಬಲಹೀನತೆಯಿಂದಲ್ಲದಿದ್ದರೂ ಯಾವುದಾದರೂ ಸರಿ?ತಪ್ಪು ಕೆಲಸ ಮಾಡಲಿಕ್ಕೆ ಮನಸು ಮಾಡಿದಾಗ ನಮ್ಮಲ್ಲಿರುವ ಅಂತರ್ವಾಣಿ “ಬೇಡ, ಇದು ಸರಿ ಅಥವಾ ಸರಿಯಲ್ಲ” ಎಂದು ನಮಗೆ ಪ್ರಚೋದನೆ ನೀಡುತ್ತಲೇ ಇರುತ್ತದೆ. ಆದರೆ ನಾವು ಮನೋಸಾಕ್ಷಿಯನ್ನ ಧಿಕ್ಕರಿಸಿಬಿಡುತ್ತೇವೆ. ತದನಂತರ ಮಾಡಿದ್ದು, ತಪ್ಪೋ?ಸರಿಯೋ?ಎಂದು ಪಶ್ಚಾತ್ತಾಪ ಅಥವಾ ಸಂತಸಪಡುತ್ತೇವೆ.ಆಗ
ಆಸರೆಗಾಗಿ ಹುಡುಕುತ್ತ
ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣವೇ ಅಂತರ್ವಾಣಿ ಹಾಗೂ ಮನಸಾಕ್ಷಿಯ ಎಚ್ಚರಿಕೆಯನ್ನು ಧಿಕ್ಕರಿಸಿದ ಫಲಿತವಿದು.


ಕೆಲವೊಂದು ಸಮಯದಲ್ಲಿ ಆಲೋಚಿಸದೆ ಅವಸರದಿಂದ ಅಂತರಾತ್ಮವಾಣಿಯನ್ನ ಸಹ ಕೇಳದೆ ಒಳ್ಳೆ ಅಥವಾ ಕೆಟ್ಟ ಕೆಲಸಕ್ಕೆ ಹೋಗದೆ ಮುಂದಕ್ಕೆ ಹಾಕುತ್ತೇವೆ.ತದನಂತರ ಆ ಒಂದು ಕ್ಷಣದ ಸಾಧಕ, ಬಾಧಕಗಳಿಗೆ ನಾವೇ ಸಾಕ್ಷಿಭೂತರಾಗುತ್ತೇವೆ.

ಅದಕ್ಕಾಗಿ ಇದು ಸರಿ ಅಥವಾ ತಪ್ಪು ಎಂದು ಇನ್ನು ಮುಂದಾದರೂ ನಮ್ಮ ಅಂತರಾತ್ಮವನ್ನ ಗಮನಿಸುವ, ಅಂತರ್ವಾಣಿಯನ್ನೊಮ್ಮೆ ಪರೀಕ್ಷಿಸಿ ನೋಡಿ ಮುಂದಡಿ ಇಡ ಬೇಕು.ಪ್ರತಿ ಕೆಲಸಕ್ಕೆ ನಾವು
ಇನ್ನು ಮುಂದೆ ನಮಗೆ ನಾವೇ ಮಾರ್ಗದರ್ಶಿಯಂತೆ ಗುರುವಾಗಬೇಕು.
ಒಳ್ಳೆ ಕೆಟ್ಟದರ ಜಯಾಪಜಯವನ್ನ ಬದುಕಿನ ಹಾದಿಯಲ್ಲಿ ಬದುಕಿರುವವರೆಗೂ ಸೂಕ್ತಹಾದಿಯಲ್ಲಿ ಸಾಧಿಸುತ್ತ ಸಾಗುತ್ತಾ ಕನಿಷ್ಠ ನೆಮ್ಮದಿಯ ಜೀವನವನ್ನು ಕಳೆಯುವ !ಅಲ್ಲವೇ?


ಪುಲಿ. ಮಂಜುನಾಥಜೋಗಿ.
ರಾಜ್ಯಶಾಸ್ತ್ರ ಉಪನ್ಯಾಸಕರು.

ಮಳೆ: ಬಿದ್ದ ಮರ, ಸಿಡಿಲಿಗೆ 5 ಮೇಕೆ ಸಾವು

1

Publicstory


ತುಮಕೂರು; ಜಿಲ್ಲೆಯಾದ್ಯಂತ ಭಾನುವಾರ ಮಳೆಯಾಗಿದೆ. ತೋವಿನಕೆರೆ ಕೊರಟಗೆರೆ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಸಿ.ಎಸ್.ಜಿ.ಪಾಳ್ಯದಲ್ಲಿ ಸಿಡಿಲಿಗೆ 5 ಮೇಕೆಗಳು ಸಾವಿಗೀಡಾಗಿವೆ.
ಅಲ್ಲಲ್ಲಿ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.

ತೋವಿನಕೆರೆ ಆಸ್ಪತ್ರೆಯ ಅವರಣದಲ್ಲಿನ ಹಳೆಯ ಮರ ನೆಲಕ್ಕೆ ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ತೋವಿನಕೆರೆ ಸಿದ್ದರಬೆಟ್ಟ ರಸ್ತೆಯಲ್ಲಿ ಮರವೊಂದು ನೆಲಕ್ಕೆ ಅಪ್ಪಳಿಸಿದೆ. ಗುಬ್ಬಿಯಲ್ಲೂ ಉತ್ತಮ ಮಳೆಯಾಗಿದೆ. ತುಮಕೂರು‌ ನಗರದಲ್ಲಿ ಸಂಜೆ‌ ಮಳೆಯಾಯಿತು.

ಕದ್ದುಮುಚ್ಚಿ ಮದುವೆ ತಡೆದ ಅಧಿಕಾರಿಗಳ ತಂಡ

ಪಬ್ಲಿಕ್ ಸ್ಟೋರಿ


ತಿಪಟೂರು : ಬಾಲಕಿಯೊಬ್ಬಳಿಗೆ ಯಾರಿಗೂ ಹೇಳದೆ ಗೌಪ್ಯವಾಗಿ ವಿವಾಹ ನಡೆಸಲು ಮುಂದಾಗಿದ್ದ ಪ್ರಕರಣವನ್ನು ಶನಿವಾರ ಬೇಧಿಸುವಲ್ಲಿ ಮಕ್ಕಳ ರಕ್ಷಣಾ ಸಮಿತಿ ಯಶಸ್ವಿಯಾಗಿದೆ.

ಹೊನ್ನವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೇ.20ರಂದು ನಡೆಯಬೇಕಿದ್ದ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು‌ ನೀಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿವಾಹ ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಎಸ್.ನಂದಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಬಿ.ಎನ್.ಪ್ರೇಮಾ, ಹೊನ್ನವಳ್ಳಿ ಪಿಎಸ್‍ಐ ವೆಂಕಟೇಶ್, ಪಿಡಿಓ ಶಿವಲಿಂಗಯ್ಯ, ಗ್ರಾಮಲಿಕ್ಕಿಗರು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.