Thursday, May 7, 2026
Google search engine
Home Blog Page 111

ತಾಯಂದಿರ ದಿನ

0

ಅಮ್ಮಂದಿರು ಸಾಯುವುದಿಲ್ಲ. ಪ್ರತಿ ದಿನ
ನೆನಪಾಗುತ್ತಾರೆ ಅವರ ಜೀವನೋತ್ಸಾಹದ
ಬದುಕಿನಿಂದ. ಅವರ ಬದುಕಿನ ಹೋರಾಟದಿಂದ,
ತಿನ್ನಿಸಿದ ಕೈ ತುತ್ತಿನಿಂದ, ಕಲಾತ್ಮಕತೆಯಿಂದ,
ಕಕ್ಕುಲತೆ ಇಂದ. ಯಾಂತ್ರಿಕ ಬದುಕು ಸರಳ ಸಂತೋಷದ ಅಮ್ಮಂದಿರನ್ನು ಕಿತ್ತುಕೊಂಡಿದೆ ಅನಿಸುತ್ತಿದೆ. ಹಾಗಾಗದಿರಲಿ.

ಪ್ರತಿ ಮಗುವಿಗೂ ಅಮ್ಮನ ಭಾಗ್ಯ ದೊರಕಲಿ
ಎಂಬ ಮಾರ್ಮಿಕ ಬೇಡಿಕೆಯನ್ನು ದೇವರಿಗೆ
ಮೊರೆಯಿಟ್ಟಿದ್ದಾರೆ ಮಕ್ಕಳ ತಜ್ಞೆ, ಕವಯಿತ್ರಿ
ಡಾ. ರಜನಿ ಎಂ


ತಾಯಿಗೆ ದಿನವೆಂಬುದಿಲ್ಲ…
ಮಗು ನಗುತ್ತಾ ಇದ್ದ ದಿನವೇ
ತಾಯಂದಿರ ದಿನ.

ಅಮ್ಮಾ


ನೀನು ಸತ್ತು
ಹೋಗಿದ್ದೀಯಾ
ಎಂದು ನನಗೆ ಗೊತ್ತೆ ಇಲ್ಲಾ…

ನಿನ್ನೆ ಮೊನ್ನೆ ನಡೆದ
ಘಟನೆಗಳ ನೆನಪಲ್ಲಿ
ನಿನ್ನನ್ನು ಸೇರಿಸಿಯೇ
ನನ್ನ ಮೆದುಳು ಲೆಕ್ಕಾಚಾರ
ಹಾಕಿದೆ…

ಅರೇ


ಏನಾದರೂ
ತಪ್ಪು ಮಾಡುವಾಗ
ನೀನು ಬೈಯ್ಯುತ್ತಿಯಾ ….

ಎಂದು
ಅನಿಸುತ್ತಿರುತ್ತದೆ.

ಒಬ್ಬಟ್ಟು


ಅಂಚಿಗೆ ಕಣಕ
ಮೆತ್ತದಂತೆ
ನಿನ್ನಂತೆ
ಯಾರೂ
ಒಬ್ಬಟ್ಟು ಮಾಡಿಲ್ಲ.

ರಂಗೋಲಿ


ನಿನ್ನ
ಎರಡೆಳೆ
ನಕ್ಷತ್ರ ರಂಗೋಲಿ
ನಿನಗಿದ್ದ ಕೆಲಸದ
ಒತ್ತಡದ ಸಂಕೇತ.

ಭಯ


ನಿನ್ನ
ಸಿಂಡರಿಸಿದ
ಮುಖ ನೋಡುವ
ಭಯ…

ನನಗೆ ಬೇರೆ
ಯಾವುದಕ್ಕೂ ಇಲ್ಲ.

ಮೆಣಸಿನ ಸಾರು


ಯಾವ ಮಾತ್ರೆಗೂ
ಜ್ವರ ಬಿಡಿಸುವ
ಶಕ್ತಿ
ನಿನ್ನ ಮೆಣಸಿನ
ಸಾರಿನಷ್ಟು ಇಲ್ಲ.

ಶರಶಯ್ಯೆ


ಡಯಾಲಿಸಿಸ್
ಮಾಡುವಾಗ
ನಿನ್ನ ಸ್ಥಿತ ಪ್ರಜ್ಞೆ
ಆ ಶರಶಯ್ಯೆಯ
ಭೀಷ್ಮ.

ಸಡ್ಡು


ಸವಾಲುಗಳಿಗೆ
ಸಡ್ಡು
ಹೊಡೆಯುವುದನ್ನು
ಕಲಿಸಿದ್ದು
ನೀನೆ.

ಕ್ಲಿಯೋಪಾತ್ರ


ನೀನು ಹೊಲಿಸಿದ್ಧ ಕೆಂಪು
‘ಕ್ಲಿಯೋಪಾತ್ರ’ ಬಟ್ಟೆಯಫ್ರಾಕು …
ಇಟ್ಟ ಕಣ್ಣು ಕಪ್ಪು..
ಹೃದಯದ ಡಾಲರ್
ಸರ…

ಹೇಳುತ್ತದೆ…

ಓ ದೇವರೆ
ಅಮ್ಮ ಇಲ್ಲದ
ಮಕ್ಕಳು
ಎಷ್ಟು
ನತದೃಷ್ಟ ರೆಂದು…

ಅಮ್ಮ


ಇಲ್ಲದವರಿಗೆ
ಯಾರಾದರೂ
ಅಮ್ಮ
ಸಿಗಲಿ🙏

ಡಾ. ರಜನಿ
ಅಮ್ಮನ ನೆನಪಲ್ಲಿ ….

ತಾಯಂದಿರ ದಿನ: ಭಾವುಕ‌ ಕವನಗಳು

0
ಅಮ್ಮಂದಿರು ಸಾಯುವುದಿಲ್ಲ. ಪ್ರತಿ ದಿನ
ನೆನಪಾಗುತ್ತಾರೆ ಅವರ ಜೀವನೋತ್ಸಾಹದ
ಬದುಕಿನಿಂದ. ಅವರ ಬದುಕಿನ ಹೋರಾಟದಿಂದ,
ತಿನ್ನಿಸಿದ ಕೈ ತುತ್ತಿನಿಂದ, ಕಲಾತ್ಮಕತೆಯಿಂದ,
ಕಕ್ಕುಲತೆ ಇಂದ. ಯಾಂತ್ರಿಕ ಬದುಕು ಸರಳ ಸಂತೋಷದ ಅಮ್ಮಂದಿರನ್ನು ಕಿತ್ತುಕೊಂಡಿದೆ ಅನಿಸುತ್ತಿದೆ. ಹಾಗಾಗದಿರಲಿ.
ಪ್ರತಿ ಮಗುವಿಗೂ ಅಮ್ಮನ ಭಾಗ್ಯ ದೊರಕಲಿ
ಎಂಬ ಮಾರ್ಮಿಕ ಬೇಡಿಕೆಯನ್ನು ದೇವರಿಗೆ
ಮೊರೆಯಿಟ್ಟಿದ್ದಾರೆ ಮಕ್ಕಳ ತಜ್ಞೆ, ಕವಯಿತ್ರಿ
ಡಾII ರಜನಿ.

ತಾಯಂದಿರ ದಿನ
*************

ತಾಯಿಗೆ ದಿನವೆಂಬುದಿಲ್ಲ…
ಮಗು ನಗುತ್ತಾ ಇದ್ದ ದಿನವೇ
ತಾಯಂದಿರ ದಿನ.

ಅಮ್ಮಾ
*****

ನೀನು ಸತ್ತು
ಹೋಗಿದ್ದೀಯಾ
ಎಂದು ನನಗೆ ಗೊತ್ತೆ ಇಲ್ಲಾ…

ನಿನ್ನೆ ಮೊನ್ನೆ ನಡೆದ
ಘಟನೆಗಳ ನೆನಪಲ್ಲಿ
ನಿನ್ನನ್ನು ಸೇರಿಸಿಯೇ
ನನ್ನ ಮೆದುಳು ಲೆಕ್ಕಾಚಾರ
ಹಾಕಿದೆ…

ಅರೇ
****
ಏನಾದರೂ
ತಪ್ಪು ಮಾಡುವಾಗ
ನೀನು ಬೈಯ್ಯುತ್ತಿಯಾ ….

ಎಂದು
ಅನಿಸುತ್ತಿರುತ್ತದೆ.

ಒಬ್ಬಟ್ಟು
*******
ಅಂಚಿಗೆ ಕಣಕ
ಮೆತ್ತದಂತೆ
ನಿನ್ನಂತೆ
ಯಾರೂ
ಒಬ್ಬಟ್ಟು ಮಾಡಿಲ್ಲ.

ರಂಗೋಲಿ
********

ನಿನ್ನ
ಎರಡೆಳೆ
ನಕ್ಷತ್ರ ರಂಗೋಲಿ
ನಿನಗಿದ್ದ ಕೆಲಸದ
ಒತ್ತಡದ ಸಂಕೇತ.

ಭಯ
*****
ನಿನ್ನ
ಸಿಂಡರಿಸಿದ
ಮುಖ ನೋಡುವ
ಭಯ…

ನನಗೆ ಬೇರೆ
ಯಾವುದಕ್ಕೂ ಇಲ್ಲ.

ಮೆಣಸಿನ ಸಾರು
*************

ಯಾವ ಮಾತ್ರೆಗೂ
ಜ್ವರ ಬಿಡಿಸುವ
ಶಕ್ತಿ
ನಿನ್ನ ಮೆಣಸಿನ
ಸಾರಿನಷ್ಟು ಇಲ್ಲ.

ಶರಶಯ್ಯೆ
*******
ಡಯಾಲಿಸಿಸ್
ಮಾಡುವಾಗ
ನಿನ್ನ ಸ್ಥಿತ ಪ್ರಜ್ಞೆ
ಆ ಶರಶಯ್ಯೆ ಯ
ಭೀಷ್ಮ.

ಸಡ್ಡು
*****

ಸವಾಲುಗಳಿಗೆ
ಸಡ್ಡು
ಹೊಡೆಯುವುದನ್ನು
ಕಲಿಸಿದ್ದು
ನೀನೆ.

ಕ್ಲಿಯೋಪಾತ್ರ
***********
ನೀನು ಹೊಲಿಸಿದ್ಧ ಕೆಂಪು
‘ಕ್ಲಿಯೋಪಾತ್ರ’ ಬಟ್ಟೆಯಫ್ರಾಕು …
ಇಟ್ಟ ಕಣ್ಣು ಕಪ್ಪು..
ಹೃದಯದ ಡಾಲರ್
ಸರ…

ಹೇಳುತ್ತದೆ…

ಓ ದೇವರೆ
ಅಮ್ಮ ಇಲ್ಲದ
ಮಕ್ಕಳು
ಎಷ್ಟು
ನತದೃಷ್ಟ ರೆಂದು…

ಅಮ್ಮ
*****

ಇಲ್ಲದವರಿಗೆ
ಯಾರಾದರೂ
ಅಮ್ಮ
ಸಿಗಲಿ🙏


ಡಾII ರಜನಿ
ಅಮ್ಮನ ನೆನಪಲ್ಲಿ ….

“ಪ್ರೆಸ್ ಕ್ಲಬ್ ತುಮಕೂರು” ಗೌರವ ಸದಸ್ಯತ್ವ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

Publicstory


ತುಮಕೂರು: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗೌರವ ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಸದಸ್ಯತ್ವ ನೋಂದಣಿ ಅರ್ಜಿಗೆ ಸಹಿ ಮಾಡುವ ಮೂಲಕ ಗೃಹ ಸಚಿವರು ಗೌರವ ಸದಸ್ಯತ್ವ ಪಡೆದರು.

ಸಮಾರಂಭದಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ,
ಜನತಂತ್ರ ವ್ಯವಸ್ಥೆಯಲ್ಲಿ 4ನೇ ಸ್ತಂಭ ಪತ್ರಿಕಾ ರಂಗ, ಸಾರ್ವಜನಿಕರು ಮತ್ತು ಸರ್ಕಾರದ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಹಾಗೂ ಧ್ವನಿ ಇಲ್ಲದವರ ಧ್ವನಿಯಾಗಿ ಸದಾ ಕಾಲ ಮಾಧ್ಯಮ ಕೆಲಸ ಮಾಡುತ್ತಿದೆ ಎಂದರು.

ಭಾರತೀಯ ಮಾಧ್ಯಮ ಅತ್ಯಂತ ಪ್ರಬಲವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸಾಮಾನ್ಯ ಜನರಿಗಿಂತ ಮೇಲ್ಪಟ್ಟದಲ್ಲಿರುತ್ತಾರೆ. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುವ, ಸಲಹೆ ನೀಡುವ ಸ್ವಾತಂತ್ರ್ಯವನ್ನು ಪತ್ರಕರ್ತರು ಹೊಂದಿದ್ದಾರೆ ಎಂದು ಅವರು ಹೇಳಿದರು.
ಮೊದಲು ಸುದ್ದಿ ಕೊಡುವ ಹಪಹಪಿ ಸದ್ಯದ ಸ್ಪರ್ಧೆಯಾಗಿದೆ. ಸದಾ ಆರೋಗ್ಯಕರ ಸ್ಪರ್ಧೆ ಇರಲಿ. ವಾಸ್ತವತೆಯ ಸುದ್ದಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರ ಮನರಂಜನೆ, ಹಿತ ಕಾಯುವ ಸದುದ್ದೇಶದಿಂದ ಆರಂಭವಾಗಿರುವ ಪ್ರೆಸ್ ಕ್ಲಬ್ ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿ, ಮಾದರಿ ಪ್ರೆಸ್ ಕ್ಲಬ್ ಆಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ *ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪಕುಮಾರ್ ಅವರಿಗೂ ಕೂಡ ಪ್ರೆಸ್‌ಕ್ಲಬ್‌ನ ಗೌರವ ಸದಸ್ಯತ್ವ ಪಡೆದು*, ಪ್ರೆಸ್ ಕ್ಲಬ್ ತುಮಕೂರು ಉತ್ತಮವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು (ವಿಜಯಕರ್ನಾಟಕ), ಉಪಾಧ್ಯಕ್ಷರಾದ ಕರುಣಾಕರ್( ಸತ್ಯದರ್ಶಿನಿ), ಮಾರುತಿ ಗಂಗಹನುಮಯ್ಯ( ಅಮೃತವಾಣಿ), ಶ್ರೀನಿವಾಸ ರೆಡ್ಡಿ ( ಅಮೋಘ ವಾಹಿನಿ), ಪ್ರಧಾನ ಕಾರ್ಯದರ್ಶಿ ಯೋಗೇಶ್. ಎಲ್(ಸುವರ್ಣ ನ್ಯೂಸ್), ಸಹ ಕಾರ್ಯದರ್ಶಿ ಸತೀಶ್ (ಸಂಯುಕ್ತ ಕರ್ನಾಟಕ), ಸಂಘಟನಾ ಕಾರ್ಯದರ್ಶಿ ರಂಗನಾಥ ಕೆ ಮರಡಿ (ವಿಶ್ವವಾಣಿ) ಖಜಾಂಚಿ ಸಂಗಮೇಶ್ (ಪ್ರಜಾವಾಣಿ) ಹಾಗೂ ನಿರ್ದೇಶಕರುಗಳು, ಮತ್ತಿತರರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಕೊಲೆ ಯತ್ನ

0

Publicstory


ಕುಣಿಗಲ್ : ತಾಲ್ಲುಕು ಹುಲಿಯೂರುದುರ್ಗ ಹೋಬಳಿ ವ್ಯಾಪ್ತಿಯ ರಾಜಪ್ಪನ ದೋಡ್ಡಿ ಯಲ್ಲಿ ದಿ; 05—05-2022 ರಂದು ಸಂಜೆ 5-30 ಮನೆಗೆ ಹಿಂದಿರುಗುವಾಗ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ಅಲ್ಲದೆ ಅವರ ಬಳಿ ಇದ್ದ ಮೊಬೈಲ್ ಪೋನ್, ಕತ್ತಿನಲ್ಲಿ ಇದ್ದ ಚಿನ್ನದ ಸರ ಕಿತ್ತು – ಕೊಲೆಗೆ ಯತ್ನಸಿರುವ ಘಟನೆಯಲ್ಲಿ ಎಫ. ಐ. ಆರ್ ಸಮರ್ಪಕವಾಗಿ ದಾಖಲಿಸಿ ಅರೋಪಿಗಳನ್ನು ಬಂದಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ಒತ್ತಾಯಹಿಸಿದೆ.

ಈ ಸಂಬಂದ ಇಂದು ಸಂಜೆ 5-30 ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ರಾಹುಲ್ ಶಹಪುರ ಅವರನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ. ಕಮಲಾ, ಹಾಗು ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಗುಲ್ಜಾರ್ ಭಾನು ಅವರು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಪ್ರಕರಣ ದಾಖಲಾಗಿದೆ ಅದರು ಅರೋಪಿಗಳನ್ನು ಬಂಧಿಸಿರುವುದಿಲ್ಲ . ನಿರಂತರವಾಗಿ ಮಹಿಳೆ[ ಅಂಗನವಾಡಿ ನೌಕರರ] ಮೇಲೆ ಇತ್ತಿಚೆಗೆ ದೌರ್ಜನ್ಯಯದ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣದಲ್ಲಿ ಸಹ ಈ ಹಿಂದೆ ಆರೋಪಿಯ ಬಗ್ಗೆ ದೂರು ನಿಡಲಾಗಿತ್ತು , ಅಸಂದರ್ಭದಲ್ಲಿ ಪೋಲಿಸರು ಕಠಿಣ ಕ್ರಮ ವಹಿಸದೆ ಇದ್ದ ಕಾರಣ ಹೀಗೆ ಅಗಿದೆ ಎಂದು ಸಂಘವು ಅರೊಪಿಸಿದೆ
ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯ ಜೊತೆಗೆ ಪೋಲಿಸರು ಅಸಮಂಜಸವಾಗಿ ವರ್ತಿಸಿರುವ ಬಗ್ಗೆ ಸಹ ಸರಿಯಲ್ಲ. ಈ ಪ್ರಕರಣದಲ್ಲಿ ನೊಂದಿರುವ ಮಹಿಳೆಗೆ ಸೂಕ್ತ ರಕ್ಷಣೆಯನ್ನು ನಿಡುವಂತೆ ಸಂಘವು ಪೋಲಿಸ್ ಇಲಾಖೆಯಲ್ಲಿ ಕೋರಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ : ಜಾಗೃತಿ ಕಾರ್ಯಕ್ರಮ


ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 07/05/2022 ರಂದು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎನ್ನುವ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ರಾದ ನಂಜುಂಡಯ್ಯ ಎಚ್ ಬಿ ಯವರು ಮಾತನಾಡಿ ಸಾವಿರಾರು ವರ್ಷಗಳಿಂದ ಅನೇಕ ಹಿರಿಯರು ತ್ಯಾಗ ಪರಿಶ್ರಮದಿಂದ ದೇಶವನ್ನ ನಿರ್ಮಾಣ ಮಾಡಿದ್ದಾರೆ. ಹಿಂದಿನ ಹಿರಿಯರ ಋಣವನ್ನು ತೀರಿಸುವುದೇ ಇಂದಿನ ಯುವಕರ ಪಾತ್ರವಾಗಿದೆ ಎಂದು ಹೇಳಿದರು .

ಅಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕುಮಾರ ಕೂಡ ಸಮವಸ್ತ್ರ ಧರಿಸಿ ಸಾಮಾನ್ಯನಂತೆ ವಿದ್ಯೆ ಕಲಿಯಬೇಕಿತ್ತು. ಸಮಾನತೆಗಾಗಿ ಸಮವಸ್ತ್ರ ಮುಖ್ಯಎಂದು ಹೇಳಿದರು.
ಯುದ್ಧ ಬೇಕೇ ? ಬುದ್ದ ಬೇಕೇ? ಎಂದು ಪ್ರಶ್ನಿಸಿದ ಅವರು ನಮಗೆ ಸ್ವಾಭಿಮಾನ ಆತ್ಮ ರಕ್ಷಣೆಗಾಗಿ ಹೋರಾಟ ಬೇಕು ಉಳಿದಂತೆ ಶಾಂತಿ ಕಾಪಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮತ್ತೊರ್ವ ನಿವೃತ್ತ ಯೋಧ ರಾದ ಪಾಂಡುರಂಗಯ್ಯ ಅವರು ಮಾತನಾಡಿ ಭಾರತ ದೇಶದ ಸೈನಿಕ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ರಾದ ನಾಗರಾಜಯ್ಯ ವಿ ಬಿ ಮತ್ತು ನಟರಾಜು ಬಿ.ಎಚ್.ಎಂ ಅವರು ಶಿಸ್ತು ಯಶಸ್ಸಿನ ಮಾರ್ಗ ಎಂದರು.
ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ್ ಬಿ ವಿ. ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಿಜಾರ್ ಖಬ್ಬಾನಿ ಕವಿತೆಗಳ ಭಾವಾನುವಾದ

0

ಡಾ. ರಜನಿ ಎಂ


ದುರಂತವೆಂದರೆ

ಪ್ರಬುದ್ಧ ಮನಸ್ಸು …
ಪ್ರಣಯ ಭರಿತ
ಹೃದಯ
ಒಂದೇ ದೇಹದಲ್ಲಿರುವುದು.

ಹೆಣ್ಣಿಗೆ ಬೇಕಾಗಿದ್ದು


ಸುರ ಸುಂದರಾಂಗ,
ಕುಬೇರ,
ಅಲ್ಲ…
ಅವಳ ಕಣ್ಣಿನ ನೋವನ್ನು
ಹೇಳದೇ ಅರ್ಥ ಮಾಡಿಕೊಂಡು
ತನ್ನೆದೆಗೆ ಒರಗಿಸಿಕೊಂಡು
ಇಲ್ಲಿದೆ ನೋಡು
” ನಿನ್ನ ಮನೆ” ಎನ್ನುವ ಗಂಡು.

ಆಕಾಶ


ನನಗೂ ಆಕಾಶಕ್ಕೂ
ಏನು ವ್ಯತ್ಯಾಸ
ಕೇಳಿದಳು ನಲ್ಲೆ…
ನಾ ನುಡಿದೆ ….

ನಲ್ಲೆ ನೀನು ನಕ್ಕಾಗ
ನಾನು ಆಕಾಶವನ್ನೇ
ಮರೆವೆ .

‘ನಿಜಾರ್ ಖಬ್ಬಾನಿ’ ಕವಿತೆಗಳ
ಭಾವಾನುವಾದ.

ನಿಜಾರ್ ಖಬ್ಬಾನಿ (1923-1998)ಸಿರಿಯಾದ ರಾಷ್ಟೀಯ ಕವಿ ಎನಿಸಿಕೊಂಡುವರು. ಅವರು ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕೈ ಆಡಿಸಿದವರು. ಅವರ ಕವನಗಳು ಸರಳವಾಗಿದ್ದರೂ ಮಾರ್ಮಿಕವಾಗಿರುತ್ತವೆ. ಪ್ರೇಮ ಕವನಗಳೂ ಹಾಗೆಯೆ. ಅವರ ಕವನಗಳ ಭಾವಾನುವಾದದ ಪ್ರಯತ್ನ ಡಾ. ರಜನಿ ಅವರಿಂದ.

ಬೇಕೇ?

0
ಶಶಿಕುಮಾರ ವೈ ಬಿ

ಬೇಕೇ ನಿನಗೆ ಸವಲತ್ತು?

ಹೋಗಲಿ ನಿನ್ನತನ ಸತ್ತು,
ಮರ್ಯಾದೆ ಮರೆತು,
ವ್ಯಕ್ತಿತ್ವ ಕೊಳೆತು,
ಅಭಿರುಚಿಯು ಹುಳಿತು!

ಸಹಿಸೆನ್ನ ದೌಲತ್ತು,
ಶುಚಿಯಿರಲಿ ಕ್ಲಾತು,
ಮುಚ್ಚಿರಲಿ ಮೌತು,
ಜೊತೆ ಮಾಡು ಕಸರತ್ತು, ಮಸಲತ್ತೂ!

ನೀಡೆನಗೆ ಸಾಥು,
ಮೆರೆಸೆನ್ನ ತಲೆ ಮೇಲೆ ಹೊತ್ತು,
ನಿನಗಾಗದಿರಲು ಸುಸ್ತು,
ಹಾಕುವೆ ಎಂಜಲಂಟಿದ ಬಿಸ್ಕತ್ತು!

ಇದಕ್ಕಿಂತ ಬೇಕಿನ್ನೆಷ್ಟು?
ತಿರಸ್ಕರಿಸದಿರು ಈ ಗಿಫ್ಟು,
ಛಾಯ್ಸ್ ಈಸ್ ನಿಂಗೇ(ಗೆ) ಲೆಫ್ಟು,
ಬೇಡವೆಂದೆಯೋ, ನಿನ್ನ ಜೊತೆ ಟೂ! ಟೂ! ಟೂ!

ಈಜಾಡಲು ಹೋಗಿ ಸಾವು

0

Publicstory


ಮಧುಗಿರಿ : ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಿದ್ದಾಪುರ ಕೆರೆಯಲ್ಲಿ ಶುಕ್ರವಾರ ನಡೆದಿದೆ.

ತುಮಕೂರಿನ ಗುಬ್ಬಿ ಗೇಟ್ ನಿವಾಸಿ ಆಸೀಫ್ (21) ಮೃತಪಟ್ಟ ದುರ್ದೈವಿ. ತುಮಕೂರಿನಿಂದ ಮೂವರು ಸ್ನೇಹಿತರೊಂದಿಗೆ ಸಿದ್ದಾಪುರದ ದರ್ಗಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಿದ್ದಾಪುರ ಕೆರೆಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದಾರೆ. ಆಸೀಫ್ ಈಜಾಡುತ್ತಿದ್ದಾಗ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಆತನ ಸ್ನೇಹಿತರು ಚೀರಾಟದಿಂದ ಅಕ್ಕ – ಪಕ್ಕದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಧಾವಿಸಿ ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.ತಕ್ಷಣ ಕಾರ್ಯಪ್ರೌವೃತ್ತರಾದ ಅಗ್ನಿಶಾಮ ಠಾಣೆಯ ಸಿಬ್ಬಂಧಿಗಳು ಆಸೀಫ್ ಮೃತ ದೇಹವನ್ನು ಅರ್ಧ ತಾಸು ಹುಟುಕಾಟ ನಡೆಸಿದ ನಂತರ ದೇಹ ಪತ್ತೆಯಾಯಿತು. ಈ ವಿಷಯ ತಿಳಿದ ನೂರಾರು ಜನರು ಕೆರೆಯ ಸಮೀಪ ಜಮಾಯಿಸಿದರು.ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಿದ ಕ್ಯಾಂಟರ್,80 ಕ್ಕೂ ಹೆಚ್ಚು ಕುರಿಗಳ ಸಾವು,ಗಾಯಗೊಂಡ ಕುರಿಗಾಯಿ

Publicstory


ಕುಣಿಗಲ್:/ಕುರಿ ಮಂದೆ ಮೇಲೆ ಕ್ಯಾಂಟರ್ ಹರಿದು ಎಂಬತ್ತಕ್ಕು ಹೆಚ್ಚು ಕುರಿಗಳು ಮೃತ ಪಟ್ಟು,ಕುರಿಗಾಹಿ ಚಂದ್ರಪ್ಪ ತೀವ್ರ ಸ್ವರೂಪದ ಗಾಯಗೊಂಡ ಘಟನೆ ತಾಲ್ಲೂಕಿನ ಗವಿಮಠದ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಮಡಕಶಿರಾ ತಾಲ್ಲೂಕು ಜಂಬಲಬಂಡೆ ದೋಡ್ಡೀರಪ್ಪನವರಿಗೆ ಸೇರಿದ ಕುರಿ ಮಂದೆಯನ್ನು ಚಂದ್ರಪ್ಪ ಮೇಯಿಸಲು ಕರೆತಂದಿದ್ದು,ಸ್ವಗ್ರಾಮಕ್ಕೆ ಬರುತ್ತಿರುವಾಗ ,ಮದ್ದೂರು ಕಡೆಯಿಂದ ಬಂದ ಕ್ಯಾಂಟರ್ ಗುದ್ದಿ ಪರಾರಿಯಾಗಿದೆ.

ಗುದಿದ್ದ ರಭಸಕ್ಕೆ ಕುರಿಗಳು ಮೃತಪಟ್ಟಿವೆ,

ಸಾಮರಸ್ಯದ ಕಡೆಗೆ ರಂಜಾನ್ ನಡಿಗೆ

Publicstory


Tipturu: ರಂಜಾನ್ ಹಬ್ಬವನ್ನು ಎಲ್ಲ ದರ್ಮದ ಗೆಳೆಯರಿಗೆ ಸಿಹಿ ಹಂಚುವ ಮೂಲಕ ಅರ್ ವೈ ಟಿ ( ರಿಚಾರ್ಜ ಯುವರ್ ಟ್ಯಾಲೆಂಟ್‌) ನ ವತಿಯಿಂದ ಸಾಮರಸ್ಯದ ಕಡೆಗೆ ರಂಜಾನ್ ನಡಿಗೆ ಎಂಬ ಗಿಪ್ಟಿಂಗ್ ಸುನ್ನಾ ಎಂಬ ವಿನೂತನ ಕಾರ್ಯಕ್ರಮವನ್ನು 3 ದಿನಗಳ ಕಾಲ ಗೆಳೆಯರ ಮನೆ ಮನೆ ಗೆ ಬೇಟಿ ಮಾಡಿ ವಿನೂತನ ವಾಗಿ ಅಚರಿಸಲಾಯಿತು.

ಸೌಹಾರ್ದ ತಿಪಟೂರು ನ ಅಧ್ಯಕ್ಷರಾದ ಎಸ್ ಗಂಗಾಧರ್ ರವರು ಅವರ ಮನೆಗೆ ಬೇಟಿ ನೀಡಿದ್ದ ತಂಡದೊಂದಿಗೆ ಮಾತನಾಡುತ್ತ ರಂಜಾನ್ ಮತ್ತು ಬಸವ ಜಯಂತಿ ಒಂದೆ ದಿನ ಬಂದಿದ್ದು ಭಾವೈಕ್ಯತೆ ಸಮಾನತೆಯ ಸಂದೇಶವನ್ನು ಸಾರಿದೆ ಬಸವಣ್ಣನವರ ಆಶಯಗಳು ಕೂಡ ಇದೇ ಅಗಿತ್ತು ಎಂದು ಅಭಿಪ್ರಾಯ ಪಟ್ಟರು.

ಮುದ್ರ ಅಸ್ಪತ್ರೆಯ ವೈದ್ಯರಾದ ಡಾ. ಅನೀಲ್ ರವರ ಅಸ್ಪತ್ರೆಗೆ ಬೇಟಿ ನೀಡಿದಾಗ ಅವರು ಮಾತನಾಡಿ ತಿಪಟೂರು ಸೌಹಾರ್ದತೆಯ ತವರು ಇ‌ಂತಹ ಕಾರ್ಯಕ್ರಮಗಳು ನೂರಾರು ನಡೆಯಬೇಕು ಎಂದರು.

ನಿವೃತ್ತ ಉಪನ್ಯಾಸಕರಾದ ಎನ್ ಪಿ ನಾಗರಾಜ್ ರವರು ಅತ್ಮೀಯವಾಗಿ ಮನೆಗೆ ಬರಮಾಡಿಕೊಂಡು ನಿಮ್ಮ ಅನಿರೀಕ್ಷಿತ ಬೇಟಿ ನನಗೆ ಸಂತೋಷವನ್ನು ಉಂಟು ಮಾಡಿದೆ ನಾವೇಲ್ಲರು ಪರಸ್ಪರ ಬೇರೆಯ ಬೇಕು ಇಂದಿನ ವಿಷಮಯ ವಾತವರಣಕ್ಕೆ ನಿಮ್ಮ ಈ ನಡಿಗೆ ಉತ್ತರ ಎಂದರು.

ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಬಸವರಾಜು, ಕಾರ್ಯದರ್ಶಿ ಮಂಜಪ್ಪ, ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್ ,ಪತ್ರಕರ್ತರಾದ ತಿಪಟೂರು ಕೃಷ್ಣ,ಕಲ್ಪತರು ಮಹಿಳಾ ಸಂಘಟನೆಯ ಭಾಗ್ಯಮೂರ್ತಿ , ಹಿಂಡಸ್ಕೇರೆ ದೇವರಾಜ್ ,ಕೊಟ್ಡಿಗೆ ಹಳ್ಳಿ ಚರ್ಚನ ಪಾದ್ರಿಗಳಾದ ಜಾಯ್ ಜೇಕಬ್ ದಲಿತ ಹೋರಾಟಗಾರ ಸಂತೋಷ ಮತಿಘಟ್ಟ, ಪತ್ರಕರ್ತರಾದ ರಂಗಸ್ವಾಮಿ, ಉಜ್ಜಜ್ಜಿ ರಾಜಣ್ಣ, ರಂಗನಾಥ ಪಾರ್ಥಸಾರತಿ. ಭಾನುಪ್ರಕಾಶ್, ಕಿರಣ್, ಮಿಥುನ್, ಸುಪ್ರಿತ್ ಹೋರಾಟದ ಗೆಳೆಯರಾದ ಮನೋಹರ್ ಪಟೇಲ್ , ಶ್ರೀಕಾಂತ್ ಕೆಳಹಟ್ಟಿ, ಹರ್ಷ, ಮಂಜುನಾಯ್ಕ್ , ರೇಣುಕ್ ಪ್ರಸಾದ್ ,ವೈದ್ಯರಾದ ರಮೇಶಬಾಬು, ಚಿದಾನಂದ್ ಮೂರ್ತಿ, ಸೇರಿದಂತೆ ನಗರದ ದೇವಸ್ಥಾನಗಳಿಗೆ, ಪೌರಕಾರ್ಮಿಕರಿಗೆ ಅಟೋಚಾಲಕರಿಗೆ ಸೇರಿದಂತೆ ನೂರಾರು ಜನರಿಗೆ ಸಿಹಿ ನೀಡಿ ವಿನೂತನವಾಗಿ ಅಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅರ್ ವೈ ಟಿ ಯ ಅದ್ಯಕ್ಷರಾದ ತಾಸೀನ್ ಷರೀಪ್ (ಮೈಸೂರಿ) ಕಾರ್ಯದರ್ಶಿಗಳಾದ ಸೈಯದ್ ಸಾದತ್. ಸೌಹಾರ್ಧ ತಿಪಟೂರು ಕಾರ್ಯದರ್ಶಿ ಅಲ್ಲಾಬಕಾಶ್ ಸದಸ್ಯರಾದ , ಶಾಹೀದ್, ಜುನೇದ್ , ಕೈಪ್, ನೂರುಲ್ಲ, ಸೈಪುಲ್ಲ, ಟಿಪ್ಪು, ಫಾರೂಕ್ ಅಹಮ್ಮದ್,ಅಮನ್ , ಅಜೀಜ್ ಅಲಿಖಾನ್ , ಪರವೀಜ್ ಖಾನ್ ,ಸೈಯದ್ ಷಫಿ, ಭಾಬಾ ಸೇರಿದಂತೆ ಹಲವಾರು ಈ ಕಾರ್ಯಕ್ರಮಕ್ಕೆ ಜೊತೆಯಾದರು. ಈ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ಜನರನ್ನು ಬೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ರಂಜಾನ್ ಹಾಗೂ ಬಸವ ಜಯಂತಿಗೆ ಪರಸ್ಪರ ಶುಭ ಕೊರಲಾಯಿತು.ಇದೇ ಸಂದರ್ದಲ್ಲಿ ದೊಡ್ಡ ಪೇಟೆಯ ದೇವಸ್ಥಾನದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮಡಿಹಳ್ಳಿ ಮಠದ ಅಭಿನವ ಶ್ರಿಗಳಿಗೆ ಸನ್ಮಾನಿಸಲಾಯಿತು.